ಶ್ರೀ
ಲಂಕಾ ಕೃಷ್ಣಮುರ್ತಿ ಸ್ಮಾರಕ
ಸಂಸ್ಕೃತ ಭಾಷೆಯ ಪವಿತ್ರ ದ್ವನಿಗಳು – ಸರಣಿ ಒಂದು
ದಿನಕ್ಕೊಂದು ಶ್ಲೋಕ : ಶ್ರೀ ವಿಷ್ಣುಸಹಸ್ರನಾಮ
ಶ್ರೀ ಲಂಕಾ ಕೃಷ್ಣಮೂರ್ತಿ ಸ್ಮಾರಕದ, ಸ್ಪಷ್ಟವಾಗಿ ತಿಳಿಸಲ್ಪಟ್ಟ ವಚನ ಧ್ಯೇಯೋದ್ದೇಶಗಳಲ್ಲಿ ಸಂಸ್ಕೃತ ಭಾಷೆಯ ಅಧ್ಯಯನದ ಪ್ರಚಾರವೂ ಒಂದಾಗಿದೆ.
ಹಿಂದೂ ಧರ್ಮದ ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರದಲ್ಲಿ, ಸಂಸ್ಕೃತ ಭಾಷೆಯ ಪಾತ್ರದ ಮಹತ್ವವನ್ನು ಅರಿತುಕೊಂಡಿದ್ದ, ಶ್ರೀ ಲಂಕಾ ಕೃಷ್ಣಮೂರ್ತಿಯವರು, ಉಚಿತವಾಗಿ ಸಂಸ್ಕೃತ ಕಲಿಸುವ ಶಾಲೆಯನ್ನು ತಮ್ಮ ಮನೆಯಲ್ಲಿಯೇ ನಡೆಸುತ್ತಿದ್ದರು. ಮಹಾನ್ ಸಂಸ್ಕೃತಿ ಮರಂಪರೆಯನ್ನು ಅರಿಯಲು ಮತ್ತು ಅದರ ಪ್ರಯೋಜನ ಪಡೆದುಕೊಳ್ಳಲು, ಅವರು ಸಂಸ್ಕೃತ ಭಾಷೆಯ ಬಳಕೆಯ ಬಗ್ಗೆ ಜಾಗೃತಿ ಹಾಗೂ ಆಸಕ್ತಿಯನ್ನು ಉಂಟುಮಾಡಲು ಸಂಸ್ಕೃತದ ಕಲಿಕೆ, ಸಹಕಾರಿಯಾಗುತ್ತದೆಂದು ನಂಬಿದ್ದರು.
ಆಳವಾದ ಧ್ಯಾನಸ್ಥಿತಿಯಲ್ಲಿದ್ದ ಪ್ರಾಚೀನ ಋಷಿಮುನಿಗಳ ಶೋಧನೆಯಿಂದ, ಪರಮಾತ್ಮನ ಮುಖಾಮಠರ ಹುಟ್ಟಿದ ಸಂಸ್ಕೃತ ಭಾಷೆಯು ಸಂಪೂರ್ಣ ಹಿಂದೂ ಧಾರ್ಮಿಕ ಸಂಸ್ಕೃತಿಯನ್ನು ಒಟ್ಟುಗೂಡಿಸಿದೆ. ಸಂಸ್ಕೃತ ಭಾಷೆ ಮತ್ತು ಅದರಿಂದ ಆವರಿಸಲ್ಪಟ್ಟಿರುವ ಸಾಂಸ್ಕೃತಿಕ ಸಂಪ್ರದಾಯಗಳು, ಇವೆರಡೂ ಒಂದಕ್ಕೊಂದು ಪೂರಕವಾಗಿವೆ. ಏಕೆಂದರೆ ಇವೆರಡರ ಮೂಲವೂ ಒಂದೇ ಆಗಿದೆ. ಆ ಮೂಲ ಪರಮಾತ್ಮನೇ ಆಗಿದ್ದಾನೆ.
ಆಳವಾದ ಮತ್ತು ವಿಷಯ ವೈವಿಧ್ಯತೆಯುಳ್ಳ, ನಿರ್ದಿಷ್ಟವಾದ ಅವಲೋಕನವುಳ್ಳ, ಹಲವು ಆಯಾಮಗಳುಳ್ಳ ಜ್ಞಾನದ ಸೆಲೆಯಾಗಿರುವ ಸಂಸ್ಕೃತ ಭಾಷೆಯು ವಿಶಾಲ ಚೌಕಟ್ಟಿನಲ್ಲಿ ವಿಷಯವನ್ನು ಮಂಡಿಸಲು ಸಹಕಾರಿಯಾಗಿದೆ.
ಸತ್ಯಸ್ಥಿತಿಯಿಂದ ವಾಸ್ತವಿಕತೆಯು ಮೂಲಪ್ರಕೃತಿಯ ಕಂಪನಗಳಿಂದ ಉಂಟಾದುದೆಂದು, ಪ್ರಾಚೀನ ಋಷಿಗಳು ಮತ್ತು ವ್ಯಾಕರಣಕಾರರು ಧೃಢೀಕರಿಸಿದ್ದಾರೆ. ವಿಶ್ವದ ಎದೆಬಡಿತವೇ ಈ ಕಂಪನಗಳು. ಬ್ರಹ್ಮಾಂಡದ ನಾಡಿಬಡಿತದ ಪ್ರತಿಧ್ವನಿಯಿಂದ ಸಂಸ್ಕತ ಭಾಷೆಯ ಅಕ್ಷರಗಳು ರೂಪುಗೊಂಡಿದೆಯೆಂದು ಅವರ ಧೃಢ ನಿಶ್ಚಯ. ಸ್ವಯಂಭೂ ಆದ ಬ್ರಹ್ಮನಿಂದ ಹೊರಹೊಮ್ಮಿದ ‘ಒಂಕಾರ’ವು ಪ್ರಥಮ ಶಬ್ದವು. ಆ, ಉ ,ಮತ್ತು ಮ ಕಾರಗಳನ್ನೊಳಗೊಂಡಿರುವ ಓಂಕಾರದಿಂದ ಮಿಕ್ಕಲ್ಲಾ ಧ್ವನಿಗಳು ಉತ್ಪತ್ತಿಯಾದವು. ಅಜಾತವಾದ ಬಲಿಷ್ಠನಾದ ಬ್ರಹ್ಮದೇವನು, ಓಂಕಾರದಿಂದ ಹ್ರಸ್ವ ಮತ್ತು ದೀರ್ಘ ಸ್ವರಗಳಿಂದ ಅಳಿಯಲ್ಪಡುವ ಸ್ವರಗಳು, ಅಕ್ಷರಗಳು, ಊಷ್ಮಗಳು, ಅರ್ಧ ಸ್ವರಗಳು ಮತ್ತು ವ್ಯಂಜನಗಳು ಇತ್ಯಾದಿ ಇವುಗಳ ಸಮುಹವನ್ನು ಸೃಷ್ಟಿಸಿದನೆಂದು ಶ್ರೀಮದ್ ಭಾಗವತದಲ್ಲಿ(೧೨. ೬. ೪೩) ಹೇಳಿದೆ. “ಮಹಾಸ್ಫೋಟ” ಸಿದ್ಧಾಂತದ ಪ್ರಕಾರ “ಧ್ವನಿ” ಮತ್ತು “ಅರ್ಥ” ಎಂಬುದು ಮೂಲತತ್ವದ ಎರಡು ಮಜಲುಗಳಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ. ಸಂಸ್ಕೃತ ಭಾಷೆಯ ಧ್ವನಿಗಳು ಅಪರಿಮತ ಸಂಚಿತ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ.
ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಎಂಬ ಅಸ್ತಿತ್ವದ ವಿವಿಧ ಸ್ತರಗಳ ಮೇಲೆ, ಮಾತ್ರಗಳನ್ನು ಪಠಿಸುವಾಗ ಹೊರಹೊಮ್ಮುವ ಪವಿತ್ರ ಧ್ವನಿಗಳು ಗಣನೀಯ ಪರಿಣಾಮ ಬೀರುತ್ತವೆ. ಆ ಧ್ವನಿಗಳು ಈ ಸ್ತರಗಳ ಮೂಲಕ ಹಾಡು ಹೋಗಿ ಶುದ್ಧೀಕರಣ ಮತ್ತು ಜ್ಞಾನೋದಯವನ್ನುಂಟುಮಾಡುತ್ತವೆ.
ಸೈಮ್ಯಾಟಿಕ್ಸನ (ತರಂಗಗಳ ಅಧ್ಯಯನ) ಜನಕನಾದ ಹ್ಯಾನ್ಸ್ ಜೆನ್ನಿ (1904- 1972) ಎಂಬ ಪ್ರಖ್ಯಾತ ವಿಜ್ಞಾನಿ ನಡೆಸಿದ ಕೆಲವು ಪ್ರಯೋಗಗಳಿಂದ, ಈ ಪವಿತ್ರ ಧ್ವನಿಗಳು, ಬೆನ್ನು ಹುರಿಯಲ್ಲಿರುವ ಏಳು ಚಕ್ರಗಳು ಮತ್ತು ಸುಷುಮ್ನಾ, ಈಡಾ, ಪಿಂಗಳ ಎಂಬ ಮುರು ಪ್ರಾಣ ನಾಡಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಕಂಡುಕೊಂಡರು.
ಅಮೆರಿಕಾದ ಐಯೋವಾ ಎಂಬಲ್ಲಿರುವ ಮಹರ್ಷಿ ಯೂನಿವೆರ್ಸಿಟಿ ಆಫ್ ಮ್ಯಾನೇಜ್ಮೆಂಟ್ನಲ್ಲಿ ನಡೆಸಲಾದ ಪ್ರಯೋಗಗಳಿಂದ, ವೇದ ಗ್ರಂಥಗಳನ್ನು ಅವುಗಳ ಅರ್ಥ ತಿಳಿಯದಿದ್ದರೂ ಸಹ, ಸಂಸ್ಕೃತದಲ್ಲಿ ಓದಿದರೆ, ಆಳವಾದ ಧ್ಯಾನಸ್ಥಿತಿಯಲ್ಲಿರುವಾಗ ಉಂಟಾಗುವ ಕೆಲವು ಶಾರೀರಿಕ ಬದಲಾವಣೆಗಳಂತಹುದೇ ಮಾರ್ಪಾಡುಗಳು ಕಂಡುಬರುತ್ತವೆ ಎಂಬುದನ್ನು ಪರೀಕ್ಷಿಸಿ ಪ್ರಾಮಾಣಿಸಿದ್ದಾರೆ. ಇದರಿಂದ ತಿಳಿಯುವುದೇನೆಂದರೆ, ಧ್ಯಾನದ ಸಮಯದಲ್ಲಿ ಹೊಂದುವ ಮಾನಸಿಕ ಮತ್ತು ದೈಹಿಕ ಸಮತೋಲನ ಸ್ಥಿತಿಯನ್ನು, ಭಗವದ್ಗೀತೆ, ವಿಷ್ಣುಸಹಸ್ರನಾಮ ಮುಂತಾದ ಸಂಸ್ಕೃತ ಭಾಷೆಯಲ್ಲಿರುವ ವೇದಗ್ರಂಥಗಳನ್ನು ಓದಿ “ಪಾರಾಯಣ ” ಮಾಡಿದಾಗ ಉಂಟಾಗುವ ಸ್ಥಿತಿಯೊಂದಿಗೆ ಸಮೀಕರಿಸಬಹುದಾಗಿದೆ. ಈ ಪರೀಕ್ಷೆಯಿಂದ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಅದೇ ಪವಿತ್ರ ಗ್ರಂಥಗಳನ್ನು ಬೇರೆ ಯಾವುದಾದರೂ ಭಾಷೆಗೆ ತಾರ್ಜುಮೆ ಮಾಡಿ ಆ ಭಾಷೆಯಲ್ಲಿ “ಪಾರಾಯಣ” ಮಾಡಿದಾಗ, ಮೇಲಿನ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಸಹ ಪ್ರಮಾಣೀಕರಿಸಿದ್ದಾರೆ . ಇದರಿಂದ ನಮಗೆ ತಿಳಿದುಬರುವುದೇನೆಂದರೆ, ಸಂಸ್ಕೃತ ಭಾಷೆಯಲ್ಲಿ ಮಾಡುವ ಪಾರಾಯಣ ಮತ್ತು ಮಂತ್ರಜಪದ ಪ್ರಕ್ರಿಯೆಯಲ್ಲಿ ಹೊರಹೊಮ್ಮುವ ಪವಿತ್ರ ಧ್ವನಿಗಳು ನಮ್ಮನ್ನು ಆಳವಾದ ಧ್ಯಾನ ಸ್ಥಿತಿಗೆ ಕೊಂಡೊಯ್ಯುತ್ತವೆ. ಅಂತಹ ಸಮಾಧಿ ಸ್ಥಿತಿಯಲ್ಲಿಯೇ ನಮ್ಮ ಪುರಾತನ ಋಷಿಗಳು ಹಲವಾರು ಮಂತ್ರಗಳನ್ನು ಹಾಗೂ ಸತ್ಯವನ್ನೂ ಸಾಕ್ಷಾತ್ಕರಿಸಿಕೊಂಡಿರುವರೆಂಬುದು ಸರ್ವವಿದಿತ ಸಂಗತಿ.
ಶ್ರೀ ವಿಷ್ಣುಸಹಸ್ರನಾಮ
107 ಶ್ಲೋಕಗಳಲ್ಲಿ ಉಲ್ಲೇಖಿಸಲಾದ, ವಿಷ್ಣುವಿನ ಸಾವಿರ ನಾಮಗಳನ್ನು, ಪ್ರತಿಯೊಂದು ಹೆಸರಿನ ಜತೆಗೆ ಅದರ ಅರ್ಥ ಮತ್ತು ಪ್ರಾಮುಖ್ಯತೆಯನ್ನು, ಸಂಸ್ಕೃತ ಶಬ್ದಗಳ ಶಕ್ತಿ ಮತ್ತು ಅನುಭೂತಿಯನ್ನು, ನೀವು ಸಹ ಗಳಿಸಲು ಅನುವಾಗುವಂತೆಯೂ ಹಾಗೂ ನಿಮ್ಮ ಆಧ್ಯಾತ್ಮ ಉನ್ನತಿಗಾಗಿಯೂ ” ದಿನಕ್ಕೊಂದು ಶ್ಲೋಕ ” ಎಂಬ ಮಾಲಿಕೆಯಲ್ಲಿ ವಿಷ್ಣುಸಹಸ್ರನಾಮವನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ.
ಪ್ರತಿಯೊಂದು ನಾಮವನ್ನು ನೀವು ಓದುತ್ತಿದ್ದಂತೆಯೇ ಪುನರುಚ್ಛರಿಸಬೇಕು. ಹಾಗೆ ಮಾಡುವಾಗ, ಸಂಸ್ಕೃತ ಶಬ್ದಗಳ ಕಂಪನವನ್ನು ಗ್ರಹಿಸಿ ಅನುಭವಕ್ಕೆ ತಂದುಕೊಳ್ಳಬೇಕು.
ಎಲ್ಲ ಶ್ಲೋಕಗಳ ಧ್ವನಿಸುರಳಿ ಮುದ್ರಿಕೆಯನ್ನು
LANKA KRISHNA MURTI FOUNDATION
(https://www.facebook.com/lankakrishnamurtifoundation/)
Website (https://www.krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
ಎಂಬ ವೆಬ್ ಸೈಟ್ನಲ್ಲಿ ಪಡೆಯಬಹುದು.
ಕೆಲವು ಬದಲಾವಣೆಗಳೊಂದಿಗೆ ಪ್ರತಿಯೊಂದು ನಾಮವನ್ನು ಶಕ್ತಿಯುತ ಮಂತ್ರವನ್ನಾಗಿ ಮಾರ್ಪಡಿಸಬಹುದು.
ಪ್ರತಿಯೊಂದು ನಾಮವನ್ನೂ ಮಂತ್ರದಂತೆ ಪುನರುಚ್ಛರಿಸಿ, ಆ ಶಬ್ದದ ಕಂಪನಗಳನ್ನು ಅನುಭವಿಸಿ. ಹೀಗೆ ಮಾಡುವುದರಿಂದ ಆಯಾ ಮಂತ್ರದ ಶಕ್ತಿಯು ನಿಮ್ಮ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿ ಮುಕ್ತಿ ಅಥವಾ ಆತ್ಮ ಗ್ರಹಿಕೆಯನ್ನು ಸುಲಭವಾಗಿ ಹೊಂದಲು ಸಹಕಾರಿಯಾಗುತ್ತದೆ.
ಇಂಗ್ಲಿಷ್ ಮತ್ತು ಕನ್ನಡದಲ್ಲಿ ಈ ಕೆಳಗೆ ಕೊಟ್ಟಿರುವ ಸಾವಿರನಾಮಗಳ ಸಾರಾಂಶವು, ಪರಾಶರ ಭಟ್ಟಾರ್ಯರು ಸಂಸ್ಕೃತದಲ್ಲಿ ರಚಿಸಿದ “ಭಗವದ್ಗುಣದರ್ಪಣ” ಎಂಬ ವಿದ್ಯಾಸಂಪನ್ನ ಕೃತಿಯಲ್ಲಿ ಪ್ರಸ್ತುತಪಡಿಸಲಾದ ಪಾಂಡಿತ್ಯಪೂರ್ಣ ಭಾಷ್ಯ ಮತ್ತು ವ್ಯಾಖ್ಯಾನಕ್ಕೆ ಅನುಗುಣವಾಗಿದೆ. ಪರಾಶರಭಟ್ಟಾರ್ಯರು, ಶ್ರೀ ರಾಮಾನುಜರ ಸಮಕಾಲೀನರಾಗಿದ್ದವರು ಮತ್ತು ಅವರ ಯೋಗ್ಯ ಉತ್ತರಾಧಿಕಾರಿಯಾಗಿ ಶ್ರೀವೈಷ್ಣವ ಸಂಪ್ರದಾಯವನ್ನು ಮುಂಚೂಣಿಗೆ ತಂದವರು.
ಸಹಸ್ರನಾಮಗಳು ಯಾವ ಸನ್ನಿವೇಶದಲ್ಲಿ ಗೋಚರಕ್ಕೆ ಬಂತೆಂಬುದನ್ನು ಅರ್ಥಮಾಡಿಕೊಳ್ಳುವುದು ಬಲು ಮುಖ್ಯ.ಮಹಾಭಾರತದ ಯುದ್ಧವು ಮುಗಿದ ಮುಗಿದ ಮೇಲೆ, ಕೌರವ ಮತ್ತು ಪಾಂಡವರ ಎರಡೂ ಸೈನ್ಯಗಳ ಅಪಾರ ನಷ್ಟದಿಂದ ನೋಡ ಯುಧಿಷ್ಠರನು, ತಮ್ಮಂದಿರೊಡಗೂಡಿ ಪಿತಾಮಹ ಭೀಷ್ಮನನ್ನು ಕಂಡು ಹಲವಾರು ವಿಷಯಗಳ ಬಗ್ಗೆ ಅವನ ಹಿತೋಪದೇಶವನ್ನು ಪಡೆಯಲು ಮುಂದಾದನು.
ಭೀಷ್ಮನು, ಮಾನವನ ನಡುವಳಿಕೆ ಮತ್ತು ವರ್ತಶಗಳನ್ನು ದಾಟಿ ಮುಕ್ತಿಯನ್ನು ಪಡೆಯಬಹುದು.ನೆ ಇತ್ಯಾದಿ ಗಹನವಾದ ಧರ್ಮಸೂಕ್ಷ್ಮಗಳ ಬಗ್ಗೆ ವಿಷ ದವಾಗಿ ಧರ್ಮರಾಯನಿಗೆ ಬೋಧನೆ ಮಾಡಿದನು. ಕೊನೆಯಲ್ಲಿ ಯುಧಿಷ್ಠರನು ಭೀಷ್ಮನನ್ನು ಕೇಳುತ್ತಾನೆ:
” ನಿನ್ನ ಅಭಿಪ್ರಾಯದಲ್ಲಿ ಧರ್ಮಗಳಲ್ಲೆಲ್ಲಾ ಯಾವುದು ಅತ್ಯುತ್ತಮ ಮತ್ತು ಅಗ್ರಗಣ್ಯ ಧರ್ಮವಾಗಿದೆ? ಯಾವ ದೇವತೆಯ ಜಪಮಾಡುವುದರಿಂದ ಹುಳು ಮಾನವನು ಜನನ ಮತ್ತು ಮರಣವೆಮಬ ಸಂಸಾರ ಶೃಂಖಲೆಯಿಂದ ಬಿಡುಗಡೆ ಹೊಂದುತ್ತಾನೆ?. ದಯವಿಟ್ಟು ತಿಳಿಸು“
ಮೇಲಿನ ಎರಡು ಪ್ರಶ್ನೆಗಳಿಗೂ ಭೀಷ್ಮ ಕೊಟ್ಟ ಉತ್ತರ ಹೀಗಿದೆ:
” ಸಕಲ ಭೂತಗಳೊಡೆಯನೂ, ದೇವಾಧಿದೇವನೂ, ಅನಂತನೂ, ಪುರುಶೋತ್ತಮನೂ ಆದ ಆತನನ್ನು ಸಹಸ್ರನಾಮ ಸ್ತೋತ್ರಗಳಿಂದ, ಭಕ್ತಿಯಿಂದ ನಮಸ್ಕರಿಸುವುದರಿಂದ, ಅವಿರತವಾಗಿ ಆತನನ್ನು ಪೂಜಿಸುವುದರಿಂದ, ಆತನನ್ನು ಧ್ಯಾನಿಸುವುದರಿಂದ ಎಲ್ಲ ವಿಧದ ಕ್ಲೀಶೆಗಳನ್ನು ದಾಟಿ ಮುಕ್ತಿಯನ್ನು ಪಡೆಯಬಹುದು. ನನ್ನ ಅಭಿಮತದಲ್ಲಿ ಎಲ್ಲ ಧರ್ಮಗಳ ಪೈಕಿ ಇಡೀ ಅತ್ಯುತ್ತಮ ಮತ್ತು ಅಗ್ರಗಣ್ಯವಾದ ಧರ್ಮವಾಗಿದೆ.
ಭೀಷ್ಮನು ಯುಧಿಷ್ಠರನಿಗೆ ನಿರೂಪಿಸಿದ ಪ್ರಕಾರದಂತೆಯೇ ಸಹಸ್ರನಾಮ ಸ್ತೋತ್ರವು ಬೆಳಕಿಗೆ ಬಂತು..ಇದು “ಮಹಾಮಂತ್ರವೂ” ಹೌದು. ಯಾವುದೇ ಮಂತ್ರವನ್ನು ಪಠಿಸಿ ಜಪಮಾಡುವ ಮೊದಲು, ಈ ಕೆಳಗಿನವುಗಳನ್ನು ಪ್ರಸ್ತಾಪಿಸಬೇಕಾಗುತ್ತದೆ.
೧.ಮಂತ್ರವು ಸಾಕ್ಷಾತ್ಕಾರವಾದ ಋಷಿಯ ಹೆಸರು.
೨. ಮಂತ್ರವನ್ನು ರಚಿಸಲಾದ ಛಂದಸ್ಸಿನ ಹೆಸರು.
೩.ಮಂತ್ರದ ಅಧಿದೇವತೆಯ ಹೆಸರು.
ಪ್ರಸ್ತುತ ಇಲ್ಲಿ ಭಗವಾನ್ ವೇದವ್ಯಾಸರು ಋಷಿ;
ಅನುಷ್ಟುಪ್ ಎಂಬುದು ಛಂದಸ್ಸು; ಮತ್ತು ಶ್ರೀ ನಾರಾಯಣ ಇದರ ಅಧಿದೇವತೆ.
ಸಹಸ್ರನಾಮ ಸ್ತೋತ್ರವು ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಲಾದ ೧೦೭ ಶ್ಲೋಕಗಳನ್ನು ಒಳಗೊಂಡಿದೆ.. ಪ್ರತಿಯೊಂದು ಶ್ಲೋಕವೂ ಎಂಟು ಅಕ್ಷರಗಳುಳ್ಳ ನಾಲ್ಕು ಪಾದಗಳನ್ನು ಹೊಂದಿದೆ. ಈ ಶ್ಲೋಕಗಳ ಪಠಣನದಲ್ಲಿ ಪ್ರತಿಯೊಂದು ಪಾದದ ಕೊನೆಯಲ್ಲಿ ಅಲ್ಪ ವಿರಾಮವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ವಿಶ್ವಂ ವಿಷ್ಣುರ್ವಷಟ್ಕಾರೋ –
ಭೂತಭವ್ಯಭವತ್ಪ್ರಭುಃ –
ಭೂತಕೃದ್ –ಭೂತಭೃದ್ – ಭಾವೋ–
ಭೂತಾತ್ಮಾ ಭೂತಭಾವನಃ
ಪ್ರಸ್ತುತ “ ದಿನಕ್ಕೊಂದು ಶ್ಲೋಕ “ ಎಂಬ ಈ ಮಾಲಿಕೆಯು ಆ ಭಗವಂತನ ಕೃಪೆಯಿಂದ ಪ್ರೇರಿತವಾಗಿದೆ.
ಯೋ ಮಾಂ ನಾಮಸಹಸ್ರೇಣ ಸ್ತೋತುಮಿಚ್ಛತಿ ಪಾಂಡವ ।
ಸೋಹಽಮೇಕೇನ ಶ್ಲೋಕೇನ ಸ್ತುತ ಏವ ನ ಸಂಶಯಃ
“ಯಾರು ನನ್ನ ಸಹಸ್ರನಾಮವಗಳನ್ನು ಬಳಸಿ ನನ್ನನ್ನು ಸ್ತುತಿಸಲು ಇಚ್ಛೆಪಡುವರೋ, ಅವರು ಒಂದೇ ಒಂದು ಶ್ಲೋಕವನ್ನು ಪಠಿಸಿ ನನ್ನನ್ನು ಸ್ತುತಿಸಬಹುದಾಗಿದೆ. ಇದರಲ್ಲಿ ಸಂಶಯವೇ ಇಲ್ಲ.”
ದಿನಕ್ಕೊಂದು ಶ್ಲೋಕ…..
. ದಿನಕ್ಕೊಂದು ಶ್ಲೋಕ
. ನಿಮ್ಮನ್ನ ಶೋಕದಿಂದ ದೂರವಿರುಸತ್ತದೆ !
. ಪ್ರತಿಯೊಂದು ಶ್ಲೋಕದಲ್ಲಿನ ನಾಮಗಳನ್ನು ಓದಿರಿ,
. ಆ ನಾಮಗಳ ಅರ್ಥವನ್ನು ಗ್ರಹಿಸಿರಿ,
. ಆ ನಾಮಗಳನ್ನು ಕಂಠಪಾಠ ಮಾಡಿ.
. ಎಷ್ಟು ಸಲ ಸಾಧ್ಯವೋ ಅಷ್ಟು ಸಲ ಅದನ್ನು ಪುನರುಚ್ಚರಿಸಿ;
. ಮಂತ್ರಗಳನ್ನು ಗಟ್ಟಿಯಾಗಿ ಸ್ಪಷ್ಟವಾಗಿ ಪಡಿಸಿ.
. ನಿಮ್ಮ ಅಂತರಾಳದಲ್ಲಿ ಕಂಪನವನ್ನುಂಟುಮಾಡುವಂತೆ ಪಠಿಸಿ.
. ಆತನನ್ನು ಕೊಂಡಾಡಿ ಭಜಿಸಿ, ಆತನನ್ನು ಪೂಜಿಸಿ,
. ಮತ್ತು ಆತನಿಗೆ ಸಾಸ್ಟಾಂಗ ನಮಸ್ಕಾರವನ್ನು ಮಾಡಿ. ನಾಮಗಳನ್ನು
ಮತ್ತು ಮಂತ್ರಗಳನ್ನು ಧ್ಯಾನಿಸಿ,
. ಶೀಘ್ರ ಗ್ರಹಿಕೆಯನ್ನು ಹೊಂದಿರಿ,
. ಈರೀತಿ ದೈವಿಕ ಕೃಪೆಯೆಂಬ ಫಲವನ್ನು ಪಡೆಯಿರಿ;
. ನಿಮ್ಮ ಫಲಗಳನ್ನು ಆಯ್ದುಕೊಳ್ಳಲು ಇದು ಸಹಕಾರಿ,
. ಇದು ಒಂದು ನಿಶ್ಚಿತ ಮತ್ತು ಆನಂದದಾಯಕ ಪಯಣ,
. ಶಾಶ್ವತವಾದ ಆನಂದದೆಡೆಗೆ.
ಗ್ರಂಥಋಣ
1. ಪರಾಶರ ಭಟ್ಟಾರ್ಯ : ಭಗವದ್ಗುಣ ದರ್ಪಣ (ಸಂಸ್ಕೃತದಲ್ಲಿ)
2. ಶ್ರೀಮದ್ ಭಾಗವತಂ (12.6.43)
3. ರಾಜೀವ್ ಮಲ್ಹೋತ್ರ : ಬೀಯಿಂಗ್ ಡಿಫರೆಂಟ್ (2011) P . 419.
4. ಹ್ಯಾನ್ಸ್ ಜೆನ್ನಿ (1904-1972): ಫಾದರ್ ಆಫ್ ಸೈಮಾಟಿಕ್ಸ್, ದಿ ಸ್ಟಡಿ ಆಫ್ ವೇವ್ ಫಿನಾಮೆನಾ.
5. ಪ್ರೊ. ಪಿ. ಕ್ರಿಷ್ಣಮಾಚಾರ್ ಮತ್ತು ಡಾ!! ಎಲ್. ಆದಿನಾರಾಯಣ : ಮೀನಿಂಗ್ಸ್ ಆಫ್ ವಿಷ್ಣುಸಹಸ್ರನಾಮಾಸ್
(ಸಂಸ್ಕೃತ, ಇಂಗ್ಲಿಷ್ ಮತ್ತು ತೆಲುಗಿನಲ್ಲಿ)
A SLOKA A DAY
SRI VISHNU SAHASRANAMAM
PURVAPITHIKA
1.ಶುಕ್ಲಾಮ್ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ । ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾನ್ತಯೇ ॥
ಸರ್ವ ಸಂಕಷ್ಟಗಳಿಂದ ಪಾರಾಗಲು, ನಾಲ್ಕು ಕೈಗಳುಳ್ಳ, ಶ್ವೇತವಸ್ತ್ರಧಾರಿಯಾದ ಮತ್ತು ಚಂದ್ರನಂತೆ ಹೊಳೆಯುವ ಹಾಗೂ ನೋಡಲು ಪ್ರಸನ್ನವಾದ ಮುಖಾರವಿಂದವನ್ನುಳ್ಳ ಶ್ರೀ ಮಹಾವಿಷ್ಣುವನ್ನು ಮನದಲ್ಲಿ ಧ್ಯಾನಿಸುತ್ತೇನೆ.
2. ಯಸ್ಯ ದ್ವಿರದವಕ್ತ್ರಾದ್ಯಾಃ ಪಾರಿಷದ್ಯಾಃ ಪರಃ ಶತಮ್ । ವಿಘ್ನಂ ನಿಘ್ನನ್ತಿ ಸತತಂ ವಿಷ್ವಕ್ಸೇನಂ ತಮಾಶ್ರಯೇ ॥
ನಾನು ಎದುರಿಸುವ ಎಲ್ಲ ರೀತಿಯ ವಿಘ್ನಗಳನ್ನು ಸದಾ ನಿವಾರಿಸುವ ಗಜಮುಖನಾದ ತನ್ನ ಅಗಣಿತ ಗಣಗಳೊಂದಿಗೆ ಇರುವ ಶ್ರೇಷ್ಠನಾದ ವಿಶ್ವಕ್ಸೇನನಲ್ಲಿ ಆಶ್ರಯ ಕೊರುತ್ತೇನೆ.
3. ನಾರಾಯಣಂ ನಮಸ್ಕೃತ್ಯ ನರಂಚೈವ ನರೋತ್ತಮಮ್।ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್॥
ನರರಲ್ಲಿ ಉತ್ತಮರಾದ ಅರ್ಜುನ ಮತ್ತು ನಾರಾಯಣರಿಗೆ ವಂದನೆಗಳನ್ನು ಸಲ್ಲಿಸುತ್ತಾ ಮತ್ತು ದೇವಿ ಸರಸ್ವತಿ ಹಾಗೂ ಪರಮಪೂಜ್ಯ ಮುನಿಯಾದ ವ್ಯಾಸರಿಗೆ ನಮಸ್ಕರಿಸುತ್ತಾ, ಶ್ರೇಷ್ಠ ಕಾವ್ಯವಾದ ಮಹಾಭಾರತವನ್ನು ಪಠಿಸಲು ಪ್ರಾರಂಭಿಸುತ್ತೇನೆ.
4. ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ । ಪರಾಶರಾತ್ಮಜಂ ವನ್ದೇ ಶುಕತಾತಂ ತಪೋನಿಧಿಮ್ ॥
ವಸಿಷ್ಠಮಹರ್ಷಿಯ ಮರಿಮಗನಾದ, ಶಕ್ತಿಯ ಮೊಮ್ಮಗನಾದ, ಪರಾಶರಮುನಿಯ ಮಗನಾದ ಹಾಗೂ ಶುಕಮುನಿಯ ತಂದೆಯಾದ, ತಪೋನಿಧಿಯಾದ, ಕಳಂಕರಹಿತನಾದ, ಶ್ರೀ ವ್ಯಾಸಮಹರ್ಷಿಗೆ ನಾನು ಶಿರಬಾಗಿ ವಂದಿಸುತ್ತೇನೆ.
5. ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ । ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ॥
ವಿಷ್ಣುವಿನ ಅಂಶವಾದ ವ್ಯಾಸರಿಗೆ ಮತ್ತು ವ್ಯಾಸರ ರೂಪದಲ್ಲಿ ಅವತರಿಸಿದ ವಿಷ್ಣುವಿಗೆ ನನ್ನ ನಮನಗಳು. ವಿಷ್ಣು ಮತ್ತು ವ್ಯಾಸರಲ್ಲಿ ಪ್ರತಿಫಲಿಸುವ ಅಂಶವು ಒಂದೇ. ವೈದಿಕ ಜ್ಞಾನದ ಆಕರವಾಗಿರುವ ವ್ಯಾಸರು ಮಹರ್ಷಿವಸಿಷ್ಠನ ಕುಲೋದ್ಭವರು.
6. ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ । ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ ॥
ನಿತ್ಯನೂ, ಶುದ್ಧನೂ, ಪರಮಾತ್ಮನೂ, ಸದಾ ಏಕರೂಪವನ್ನು ಹೊಂದಿರುವವನೂ, ಸರ್ವವನ್ನೂ ಜಯಿಸಿರತಕ್ಕಂತಹವನು ಆದ ವಿಷ್ಣುವಿಗೆ ನಾನು ಶಿರಬಾಗಿ ವಂದಿಸುತ್ತೇನೆ.
7. ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬನ್ಧನಾತ್ ।ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ ॥ 6॥
ಸದಾ ಪ್ರಕಾಶಿಸುತ್ತಿರುವ ಪರಮಾತ್ಮನೇ, ಸ್ಮರಣ ಮಾತ್ರದಿಂದಲೇ ಸಂಸಾರದ, ಹುಟ್ಟು ಸಾವಿನ ಬಂಧದಿಂದ ಮುಕ್ತಿಯನ್ನು ದಯಪಾಲಿಸುವಂತಹ ವಿಷ್ಣುವಿಗೆ ನನ್ನ ಸಾಷ್ಟಾಂಗ ನಮನಗಳು.
8. ನಮಃ ಸಮಸ್ತ ಭೂತಾನಾಮಾದಿಭೂತಾಯ ಭೂಭೃತೇ l ಅನೇಕ ರೂಪ ರೂಪಾಯ ವಿಷ್ಣವೇ ಪ್ರಭವಿಷ್ಣವೇ
ಓಂ ನಮೋ ವಿಷ್ಣವೇ ಪ್ರಭವಿಷ್ಣವೇ ।
ಸಮಸ್ತ ಭೂತಗಳಲ್ಲಿ ಈತನೇ ಆದಿಯು ಮತ್ತು ಅಗ್ರಗಣ್ಯನು. ಎಲ್ಲಾ ಭೂತಗಣಗಳನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡಿರುವಾತನು. ಈತನ ಒಂದೇ ರೂಪವು ಹಲವಾರು ಪ್ರತಿಫಲನಗಳನ್ನುಂಟುಮಾಡತಕ್ಕಂತ ಕನ್ನಡಿಯು. ಹೀಗೆ ಸಮಸ್ತವನ್ನೂ ತನ್ನ ಅಧೀನದಲ್ಲಿರಿಸಿಕೊಂಡಿರುವ ಮಹಾವಿಷ್ಣುವಿಗೆ ನಾನು ನಮಸ್ಕರಿಸುತ್ತಿದ್ದೇನೆ. ಸಮಸ್ತ ಜಗತ್ತಿನ ಮೂಲಕಾರಣನಾದ ವಿಷ್ಣುವಿಗೆ ನನ್ನ ಪ್ರಣಾಮಗಳು.
9. ವೈಶಮ್ಪಾಯನ ಉವಾಚ
ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ । ಯುಧಿಷ್ಠಿರಃ ಶಾನ್ತನವಂ ಪುನರೇವಾಭ್ಯಭಾಷತ ॥ 7॥
ವೈಶಂಪಾಯನನು ಹೇಳಿದನು: ಉದಾತ್ತವಾದ ಪರಿಣಾಮವುಳ್ಳ ನಾನಾವಿಧದ ಧರ್ಮಸೂಕ್ಷ್ಮಗಳನ್ನು ಭೀಷ್ಮನ ಉಪದೇಶದ ಮುಖಾಂತರ ಕೇಳಿದ ಮೇಲೆ ಯುಧಿಷ್ಠಿರನು ಭೀಷ್ಮನನ್ನು ಮತ್ತೆ ಪ್ರಶ್ನಿಸುತ್ತಾನೆ.
10. ಯುಧಿಷ್ಠಿರ ಉವಾಚ —
ಕಿಮೇಕಂದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಮ್।ಸ್ತುವನ್ತಃ ಕಂ ಕಮರ್ಚನ್ತಃ ಪ್ರಾಪ್ನುಯುರ್ಮಾನವಾಃಶುಭಮ್॥
ಯುಧಿಷ್ಠಿರನು ಹೇಳಿದನು: ಸಕಲ ದೇವತೆಗಳಲ್ಲಿ ಯಾವ ದೇವತೆಯು ಪ್ರಧಾನವಾದ ದೇವರು? ಗುರಿಗಳಲ್ಲಿ ಯಾವ ಗುರಿಯನ್ನು ತಲುಪಬೇಕು? ಯಾವ ದೇವರನ್ನು ಪೂಜಿಸುವುದರಿಂದ ಮತ್ತು ಸ್ತುತಿಸುವುದರಿಂದ ಮಾನವರು ಶುಭವನ್ನೂ ಮತ್ತು ಮಂಗಳವನ್ನೂ ಹೊಂದುತ್ತಾರೆ?
11. ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ । ಕಿಂ ಜಪನ್ಮುಚ್ಯತೇ ಜನ್ತುರ್ಜನ್ಮಸಂಸಾರಬನ್ಧನಾತ್ ॥
ನಿನ್ನ ಅಭಿಪ್ರಾಯದಲ್ಲಿ ಧರ್ಮಗಳಲ್ಲೆಲ್ಲಾ ಯಾವ ಧರ್ಮವು ಶ್ರೇಷ್ಠ? ಯಾರ ಜಪವನ್ನು ಮಾಡುವುದರಿಂದ, ಮಾನವರು ಸಂಸಾರವೆಂದು ಕರೆಯಲ್ಪಡುವ ಈ ಜನನ ಮತ್ತು ಮರಣ ಚಕ್ರದಿಂದ ಬಿಡುಗಡೆಯನ್ನು ಹೊಂದುತ್ತಾರೆ?
12. ಭೀಷ್ಮ ಉವಾಚ —
ಜಗತ್ಪ್ರಭುಂ ದೇವದೇವಮನನ್ತಂ ಪುರುಷೋತ್ತಮಮ್ । ಸ್ತುವನ್ ನಾಮಸಹಸ್ರೇಣ ಪುರುಷಃ ಸತತೋತ್ಥಿತಃ ॥ 10॥
ಭೀಷ್ಮನು ಹೇಳಿದನು: ಏಕ ಚಿತ್ತದಿಂದ, ಸಹಸ್ರನಾಮಗಳ ಸಹಾಯದಿಂದ, ಯಾರು ವಿಶ್ವದ ಪರಮಾತ್ಮನಾದ, ದೇವಾನುದೇವತೆಗಳ ಪ್ರಭುವಾದ ಮತ್ತು ಅನಂತನೂ, ಪುರುಷೋತ್ತಮನೂ ಆದ ಬ್ರಹ್ಮನನ್ನು ಸ್ತುತಿಸುತ್ತಾರೂ ಅವರು ಸಂಸಾರ ಚಕ್ರದಿಂದ ಮುಕ್ತಿಯನ್ನು ಪಡೆಯುತ್ತಾರೆ.
13. ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ ।ಧ್ಯಾಯನ್ ಸ್ತುವನ್ ನಮಸ್ಯಂಶ್ಚ ಯಜಮಾನಸ್ತಮೇವ ಚ ॥
ಆತನನ್ನು ಸಂಪೂ್ರ್ಣ ಶ್ರದ್ಧಾಭಕ್ತಿಯಿಂದ ಪ್ರತಿದಿನವೂ ಪೂಜಿಸಬೇಕು. ಸನಾತನನಾದ ಆತನನ್ನು ಧ್ಯಾನಿಸಿ, ಸ್ತುತಿಸಿ, ನಮಸ್ಕರಿಸಿ ಯಜ್ಞಗಳನ್ನು ಮಾಡಬೇಕು. ಆತ ಜಗನ್ನಿಯಾಮಕ, ಜಗದ್ರಕ್ಷಕ.
14. ಅನಾದಿನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ । ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ ॥
ಆದಿ ಮತ್ತು ಅಂತ್ಯವಿಲ್ಲದ ಶಾಶ್ವತನು ಈತ. ಈತನೇ ಸ್ರವವ್ಯಾಪಕನಾದ ವಿಷ್ಣು. ಈತ ಸರ್ವಲೋಕಗಳ ಮಹೇಶ್ವರ. ಲೋಕಾಧ್ಯಕ್ಷನು. ಪ್ರತಿನಿತ್ಯ ಈತನನ್ನು ಸ್ತುತಿಸುದರಿಂದ ಸರ್ವದುಃಖಗಳನ್ನೂ ದಾಟಬಹುದು.
15. ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ ।ಲೋಕನಾಥಂ ಮಹದ್ಭೂತಂ ಸರ್ವಭೂತಭವೋದ್ಭವಮ್ ॥
ಈತನೇ ಪರಮಸತ್ಯ ಮತ್ತು ಸರ್ವಧರ್ಮಗಳನ್ನು ತಿಳಿದವನು. ತಾನು ನಿಯಂತ್ರಿಸುವ ಎಲ್ಲ ಲೋಕಗಳ ಕೀರ್ತಿಯನ್ನು ವರ್ಧಿಸುವವನು. ಈತನೇ ಲೋಕನಾಥ ಮತ್ತು ಸರ್ವಭೂತಗಳ ಸೃಷ್ಟಿಕರ್ತ. ಈತನನ್ನು ಸ್ತುತಿಸುವುದರಿಂದ ಸರ್ವ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದಾಗಿದೆ.
16. ಏಷ ಮೇ ಸರ್ವಧರ್ಮಾಣಾಂ ಧರ್ಮೋಽಧಿಕತಮೋ ಮತಃ । ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ ॥
ಕಮಲದ ಕಣ್ಣುಗಳುಳ್ಳ ಈ ಪ್ರಭುವನ್ನು, ಸಂಪೂರ್ಣ ಶ್ರದ್ಧಾಭಕ್ತಿಯಿಂದ ಪೂಜಿಸಿ, ಸದಾ ಸ್ತುತಿಸುತ್ತಿರುವುದೇ ಧರ್ಮಗಳಲ್ಲೆಲ್ಲಾ ಶ್ರೇಷ್ಠವಾದುದೆಂದು ನನ್ನ ಅಭಿಪ್ರಾಯ.
17. ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ । ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ ॥
ಈತನೇ ಪ್ರಜ್ಞೆಯ ಪರಮ ತೇಜಸ್ಸು. ಸಮಸ್ತ ಜಗತ್ತಿನ ಪರಮೊಚ್ಛ ನಿಯಂತ್ರಕ ಈತ. ಎಲ್ಲೆಲ್ಲೂ ವ್ಯಾಪಿಸಿರುವ ಪರಬ್ರಹ್ಮ ಈತ. ಈತನೇ ಅಂತಿಮ ಗಮ್ಯಸ್ಥಾನ.
18. ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್ ।ದೈವತಂ ದೈವತಾನಾಂ ಚ ಭೂತಾನಾಂ ಯೋಽವ್ಯಯಃ ಪಿತಾ ॥
ಈತನೇ ಅತ್ಯಂತ ಪವಿತ್ರನು ಮತ್ತು ಅತ್ಯಧಿಕ ಮಂಗಳಕಾರಕನು. ಈತನೇ ದೇವತೆಗಳ ದೇವನು. ಈತನೇ ಎಲ್ಲ ಜೀವಿಗಳ ತಂದೆಯಾದ ಶಾಶ್ವತನಾದ ವಿಷ್ಣು.
19. ಯತಃ ಸರ್ವಾಣಿ ಭೂತಾನಿ ಭವನ್ತ್ಯಾದಿಯುಗಾಗಮೇ । ಯಸ್ಮಿಂಶ್ಚ ಪ್ರಲಯಂ ಯಾನ್ತಿ ಪುನರೇವ ಯುಗಕ್ಷಯೇ ॥
ಯುಗದ ಆದಿಯಲ್ಲಿ, ಸೃಷ್ಟಿಕ್ರಯೆಯಲ್ಲಿ ಸರ್ವ ಭೂತಗಳೂ ಈತನಲ್ಲೇ ಉದ್ಭವಿಸುತ್ತವೆ ಮತ್ತು ಸೃಷ್ಟಿಯ ಅಂತ್ಯವಾದ ಪ್ರಳಯದ ಸಮಯದಲ್ಲಿ ಸಕಲವೂ ಈತನಲ್ಲೇ ಲೀನವಾಗುತ್ತವೆ.
20. ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ । ವಿಷ್ಣೋರ್ನಾಮಸಹಸ್ರಂ ಮೇ ಶೃಣು ಪಾಪಭಯಾಪಹಮ್ ॥
ಹೇ ಭೂಪತಿಯೇ, ಸಕಲ ಅಸ್ತತ್ವಗಳಿಗೆ ಒಡೆಯನಾದ, ಎಲ್ಲ ಲೋಕಗಳಿಗೆ ಅಧಿಪತಿಯಾದ ವಿಷ್ಣುವಿನ ಸಹಸ್ರನಾಮಗಳನ್ನು ನನ್ನಿಂದ ಕೇಳಿ ತಿಳಿದುಕೋ. ಆ ನಾಮಗಳ ಬಲವು ಯಾವುದೇ ವಿಧವಾದ ಪಾಪ ಅಥವಾ ಭಯದಿಂದ ನಿನ್ನನ್ನು ಉದ್ಧರಿಸುತ್ತದೆ.
21. ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ । ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ ॥
ಜೀವನದ ಧ್ಯೇಯೋದ್ದೇಶಗಳ ಸಫಲತೆಗೆ, ಪ್ರಸಿದ್ಧ ಋಷಿಮುನಿಗಳಿಂದ ಪುನಃ ಪುನಃ ಪಠಿಸಿ, ಸ್ತುತಿಸಲಾದ, ವಿಷ್ಣುವಿನ ಮಹೋನ್ನತ ಗುಣಗಳನ್ನು ವಿವರಿಸುವ ಸಹಸ್ರನಾಮಗಳನ್ನು ನಾನು ನಿನಗೆ ಕೇಳಿಸುತ್ತೇನೆ.
22. ಋಷಿರ್ನಾಮ್ನಾಂಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ ॥ಛನ್ದೋಽನುಷ್ಟುಪ್ ತಥಾ ದೇವೋ ಭಗವಾನ್ ದೇವಕೀಸುತಃ ॥
(ವಿಷ್ಣು ಸಹಸ್ರನಾಮವು ಮಹೋನ್ನತ ಸ್ತೋತ್ರವಷ್ಟೇ ಅಲ್ಲದೆ, ಆತನ ಗುಣಗಾನಮಾಡುವ ಹಾಡಷ್ಟೇ ಅಲ್ಲದೆ ಜಪವನ್ನು ಮಾಡಲು ಒಂದು ಶಕ್ತಿಯುತ ಮಂತ್ರವೂ ಸಹ ಆಗಿದೆ. ಜಪವನ್ನು ಮಾಡುವ ಮೊದಲು ಪಾಲಿಸಬೇಕಾದ ಪೂರ್ವತಯಾರಿಗಳನ್ನು ಈ ಕೆಳಗೆ ನೀಡಲಾಗಿದೆ. ಬಹಳಷ್ಟು ಸಂಸ್ಕೃತಪದಗಳಿಗೆ ತತ್ಸಮಾನವಾದ ಪದಗಳಿಲ್ಲದಿರುವುದರಿಂದ ಅವುಗಳನ್ನು ಸಂಸ್ಕೃತದಲ್ಲೇ ಪುನರುಚ್ಛರಿಸಬೇಕಾಗುತ್ತದೆ.) “ವಿಷ್ಣುವಿನ ಸಹಸ್ರನಾಮಗಳು” ಎಂಬ ಮಂತ್ರಕ್ಕೆ ಪ್ರಖ್ಯಾತ ಮುನಿ ವೇದವ್ಯಾಸ ಋಷಿಗಳು. ಇದು ಅನುಷ್ಟುಪ್ ಮಾತ್ರೆಯಲ್ಲಿದೆ ಮತ್ತು ದೇವಕಿಯ ಮಗನಾದ ಭಗವಾನನು ಈ ಮಂತ್ರದ ದೇವತೆ.
23. ಅಮೃತಾಂಶೂದ್ಭವೋ ಬೀಜಂ ಶಕ್ತಿರ್ದೇವಕಿನನ್ದನಃ । ತ್ರಿಸಾಮಾ ಹೃದಯಂ ತಸ್ಯ ಶಾನ್ತ್ಯರ್ಥೇ ವಿನಿಯೋಜ್ಯತೇ ॥
“ಅಂಮೃತಾಂಶೂದ್ಭವೊ” ಎಂಬುದು ಬೀಜವಾಗಿದೆ. “ದೇವಕಿನಂದನಃ” ಎಂಬುದು ಶಕ್ತಿಯಾಗಿದೆ. “ತ್ರಿಸಾಮಾ” ಎಂಬುದು ಹೃದಯವಾಗಿದೆ. ಶಾಂತಿ ಮತ್ತು ಒಳಿತಿಗಾಗಿ ಈ ಸಹಸ್ರನಾಮದ ಜಪವನ್ನು ಮಾಡಲಾಗುತ್ತದೆ.
24. ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಪ್ರಭವಿಷ್ಣುಂ ಮಹೇಶ್ವರಮ್ ॥ ಅನೇಕರೂಪ ದೈತ್ಯಾನ್ತಂ ನಮಾಮಿ ಪುರುಷೋತ್ತಮಂ ॥
ಸದಾ ಜಯಶಾಲಿಯಾಗಿರುವವನಿಗೆ, ಮಾಡುವ ಕಾರ್ಯಗಳಲ್ಲಿ ಪರಿಣತಿಯನ್ನು ಪಡೆದಿರುವವನಿಗೆ ಸರ್ವವ್ಯಾಪಿಗೆ ವಿವಿಧ ಅವತಾರಗಳನ್ನು ತಾಳಿ ರಾಕ್ಷಸರನ್ನು ನಾಶಮಾಡಿದ ಮಹೇಶ್ವರನಿಗೆ, ಮತ್ತು ಮಾನವರ ಅಧಿಪತಿಯಾದ ಪುರುಷೋತ್ತಮನಾದ ವಿಷ್ಣುವಿಗೆ ನನ್ನ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇನೆ. ಜಪವನ್ನು ಆಚರಿಸುವ ಪೂರ್ವಪೀಠಿಕೆಯಾಗಿ ಹೇಳುವ ಶ್ಲೋಕಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
25. ಅಸ್ಯ ಶ್ರೀವಿಷ್ಣೋರ್ದಿವ್ಯಸಹಸ್ರನಾಮಸ್ತೋತ್ರಮಹಾಮನ್ತ್ರಸ್ಯ ।
ಶ್ರೀ ವೇದವ್ಯಾಸೋ ಭಗವಾನ್ ಋಷಿಃ ।
ಅನುಷ್ಟುಪ್ ಛನ್ದಃ ।
ಶ್ರೀಮಹಾವಿಷ್ಣುಃ ಪರಮಾತ್ಮಾ ಶ್ರೀಮನ್ನಾರಾಯಣೋ ದೇವತಾ ।
ಅಮೃತಾಂಶೂದ್ಭವೋ ಭಾನುರಿತಿ ಬೀಜಮ್ ।
ದೇವಕೀನನ್ದನಃ ಸ್ರಷ್ಟೇತಿ ಶಕ್ತಿಃ ।
ಉದ್ಭವಃ ಕ್ಷೋಭಣೋ ದೇವ ಇತಿ ಪರಮೋ ಮನ್ತ್ರಃ ।
ಶಂಖಭೃನ್ನನ್ದಕೀ ಚಕ್ರೀತಿ ಕೀಲಕಮ್ ।
ಶಾರ್ಂಗಧನ್ವಾ ಗದಾಧರ ಇತ್ಯಸ್ತ್ರಮ್ ।
ರಥಾಂಗಪಾಣಿರಕ್ಷೋಭ್ಯ ಇತಿ ನೇತ್ರಮ್ ।
ತ್ರಿಸಾಮಾ ಸಾಮಗಃ ಸಾಮೇತಿ ಕವಚಮ್ ।
ಆನನ್ದಂ ಪರಬ್ರಹ್ಮೇತಿ ಯೋನಿಃ ।
ಋತುಃ ಸುದರ್ಶನಃ ಕಾಲ ಇತಿ ದಿಗ್ಬನ್ಧಃ ॥
ಶ್ರೀವಿಶ್ವರೂಪ ಇತಿ ಧ್ಯಾನಮ್ ।
ಶ್ರೀಮಹಾವಿಷ್ಣುಪ್ರೀತ್ಯರ್ಥೇ ಸಹಸ್ರನಾಮಸ್ತೋತ್ರಪಾಠೇ ವಿನಿಯೋಗಃ ॥
ಮೇಲಿನ ಈ ಮಂತ್ರೋಚ್ಛಾರದ ನಂತರ, ಜಪವನ್ನು ಮಾಡುವವರು ಧ್ಯಾನಸ್ಥಿತಿಯನ್ನು ಸೇರಿ, ತಮ್ಮ ಆಯ್ಕೆಯ ಮಂತ್ರಕ್ಕೆ ಅಧಿಪತಿಯಾದ ದೇವರನ್ನು ಮನದಲ್ಲಿಕಲ್ಪಿಸಿಕೊಂಡು ಧ್ಯಾನಿಸಬೇಕು. ಇಲ್ಲಿ ವಿಷ್ಣುವಿನ ಮೂರ್ತಿಯನ್ನು ಧ್ಯಾನಿಸಬೇಕು. ಈ ಕೆಳಗಿನ ಧ್ಯಾನಶ್ಲೋಕಗಳಲ್ಲಿ ವಿಷ್ಣುವಿನ ವಿವಿಧ ರೂಪಗಳನ್ನು, ಜಪವನ್ನು ಮಾಡುವವರಿಗೆ ಸಂಪೂರ್ಣವಾಗಿ, ವಿಸ್ತಾರವಾಗಿ, ಸ್ಫುಟವಾಗಿ, ಅಚ್ಚೊತ್ತಿದ ಹಾಗೆ ಮತ್ತು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಲಾಗಿದೆ.
26. ಧ್ಯಾನಮ್ ।
ಕ್ಷೀರೋದನ್ವತ್ಪ್ರದೇಶೇ ಶುಚಿಮಣಿವಿಲಸತ್ಸೈಕತೇರ್ಮೌಕ್ತಿಕಾನಾಂ
ಮಾಲಾಕೢಪ್ತಾಸನಸ್ಥಃ ಸ್ಫಟಿಕಮಣಿನಿಭೈರ್ಮೌಕ್ತಿಕೈರ್ಮಂಡಿತಾಂಗಃ ।
ಶುಭ್ರೈರಭ್ರೈರದಭ್ರೈರುಪರಿವಿರಚಿತೈರ್ಮುಕ್ತಪೀಯೂಷ ವರ್ಷೈಃ
ಆನನ್ದೀ ನಃ ಪುನೀಯಾದರಿನಲಿನಗದಾ ಶಂಖಪಾಣಿರ್ಮುಕುನ್ದಃ ॥
27. ಭೂಃ ಪಾದೌ ಯಸ್ಯ ನಾಭಿರ್ವಿಯದಸುರನಿಲಶ್ಚನ್ದ್ರ ಸೂರ್ಯೌ ಚ ನೇತ್ರೇ
ಕರ್ಣಾವಾಶಾಃ ಶಿರೋ ದ್ಯೌರ್ಮುಖಮಪಿ ದಹನೋ ಯಸ್ಯ ವಾಸ್ತೇಯಮಬ್ಧಿಃ ।
ಅನ್ತಃಸ್ಥಂ ಯಸ್ಯ ವಿಶ್ವಂ ಸುರನರಖಗಗೋಭೋಗಿಗನ್ಧರ್ವದೈತ್ಯೈಃ
ಚಿತ್ರಂ ರಂರಮ್ಯತೇ ತಂ ತ್ರಿಭುವನ ವಪುಷಂ ವಿಷ್ಣುಮೀಶಂ ನಮಾಮಿ
ಶುಭ್ರಶ್ವೇತವರ್ಣದ ಮೋಡಗಳ ಗುಚ್ಛದಿಂದ ಅಮೃತದ ಹನಿಗಳು ತೊಟ್ಟಿಕ್ಕುತ್ತಿರಲು ಮುತ್ತುರತ್ನಗಳಿಂದ ಹೊಳೆಯುವ ಮರಳದಂಡೆಗಳ ನಡುವೆ ಇರುವ ಕ್ಷೀರಸಾಗರದಲ್ಲಿ, ಕಣ್ಣುಕೋರೈಸುವ ರತ್ನಖಚಿತ ಸಿಂಹಾಸನದಮೇಲೆ ಆಸೀನನಾಗಿರುವ, ಸ್ಫಟಿಕ ಮಣಿಗಳ ಹಾರದಿಂದ ಅಲಂಕೃತನಾದ, ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ಕೈಯ್ಯಲ್ಲಿ ಹಿಡಿದಿರುವ, ಚೈತನ್ಯದ ಚಿಲುಮೆಯಾದ ಮುಕುಂದನ ರೂಪವನ್ನು ಕಣ್ಣಮುಂದೆ ಸಾಕ್ಷಾತ್ಕರಿಸಿಕೊಳ್ಳಬೇಕು. ಈತ ನಮ್ಮ ಬಾಳಿಗೆ ಪಾವಿತ್ರ್ಯತೆ ಮತ್ತು ಪರಿಶುದ್ಧತೆಯನ್ನು ನೀಡಲಿ ಎಂದು ಬೇಡಿಕೊಳ್ಳಬೇಕು.
ಗಾಳಿಯೇ ಈತನ ಉಸಿರಾಗಿ, ಸೂರ್ಯಚಂದ್ರರೇ ಈತನ ಕಣ್ಣುಗಳಾಗಿ, ದಿಕ್ಕುಗಳೇ ಈತನ ಕಿವಿಗಳಾಗಿ, ಆಕಾಶವೇ ಈತನ ಶಿರವಾಗಿ, ಅಗ್ನಿಯೇ ಈತನ ಮುಖನಾಗಿ, ಸಾಗರವೇ ಈತನ ಉಡುಪಾಗಿ, ಮತ್ತು ಮನುಷ್ಯರು, ರ್ರಾಣಿಗಳು, ಪಕ್ಷಿಗಳು, ಉರಗಗಳು, ದೇವತೆಗಳು, ಗಂಧರ್ವರು ಮತ್ತು ದೈತ್ಯರು ಈತನ ಸ್ವಂತ ಉದರದಲ್ಲಿ ಆಶ್ಚರ್ಯಕರವಾಗಿ ಸ್ಥಾಪಿಸಲ್ಪಟ್ಟು, ಭೂಮಿಯನ್ನು ಪಾದವಾಗಿ, ಆಕಾಶವನ್ನು ನಾಭಿಯಾಗಿ, ತ್ರಿಲೋಕಗಳಲ್ಲಿಯೂ ವ್ಯಾಪಿಸಿರುವ ವಿಶ್ವರೂಪಿಯಾದ, ಜಗದ ಅಧಿಪತಿಯಾದ ಆ ವಿಷ್ಣುವಿಗೆ ನಾನು ವಂದಿಸುತ್ತೇನೆ.
ಪರಮಾತ್ಮನಾದ ವಾಸುದೇವನಿಗೆ ನನ್ನ ನಮಸ್ಕಾರಗಳು.
28. ಶಾನ್ತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ ।
ಲಕ್ಷ್ಮೀಕಾನ್ತಂ ಕಮಲನಯನಂ ಯೋಗಿಹೃದ್ಧ್ಯಾನಗಮ್ಯಂ
ವನ್ದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್ ॥
ಸಕಲ ಲೋಕಗಳಲ್ಲಿಯೂ ಈತನೇ ಪರಮೇಶ್ವರನು. ಪ್ರಶಾಂತನಾಗಿರುವ, ಸ್ವಸ್ಥನಾಗಿರುವ, ನಾಭಿಯಲ್ಲಿ ಪದ್ಮವನ್ನು ಧರಿಸಿರುವ, ಈತನು ಸರ್ಪದ ಹಾಸಿಗೆಯ ಮೇಲೆ ಪವಡಿಸಿದ್ದಾನೆ. ದೇವತೆಗಳಲ್ಲೆಲ್ಲಾ ಪರಮಶ್ರೇಷ್ಟನು ಈತ. ಈತನ ಸ್ವರೂಪವು ಆ ಎಲ್ಲೆಡೆ ವ್ಯಾಪಿಸಿದೆ. ಈತನು ಗಗನ ಸದೃಶನು. ನೀಲ ಮೇಘವರ್ಣವನ್ನು ಹೊಂದಿರುವ, ಕಮಲದಂತಹ ಕಣ್ಣುಗಳುಳ್ಳ ಈತ ಲಕ್ಗ್ಮಿಯ ಕಂಠನು. ಧ್ಯಾನದ ಮುಖಾಂತರ ಯೋಗಿಗಳು ಈತನನ್ನು ತಮ್ಮ ಹೃದಯಗಳಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಗುರಿಯಿರಿಸಿಕೊಂಡಿದ್ದಾರೆ. ಭಾವದ ಭಯವನ್ನು ಪರಿಹರಿಸುವ ಈತನೇ ನನ್ನ ನಮಸ್ಕಾರಗಳನ್ನು ಸಲ್ಲಿಸುವೆ.
29. ಮೇಘಶ್ಯಾಮಂ ಪೀತಕೌಶೇಯವಾಸಂ ಶ್ರೀವತ್ಸಾಂಕಂ ಕೌಸ್ತುಭೋದ್ಭಾಸಿತಾಂಗಮ್ ।
ಪುಣ್ಯೋಪೇತಂ ಪುಂಡರೀಕಾಯತಾಕ್ಷಂ ವಿಷ್ಣುಂ ವನ್ದೇ ಸರ್ವಲೋಕೈಕನಾಥಮ್ ॥
ಈತನ ಶರೀರವು ನೀಲ ಮೇಘದ ವರ್ಣದ್ದಾಗಿದೆ.
ಈತನ ವಸ್ತ್ರಗಳು ಹಳದಿ ಬಣ್ಣದ ಛಾಯೆಯನ್ನು ಹೊಂದಿದೆ.
ಈತನ ಎದೆಯ ಮೇಲೆ ಶ್ರೀವತ್ಸ ಎಂಬ ಗುರುತಿದೆ.
ಈತನ ಅಂಗಗಳು ಕೌಸ್ತುಭವೆಂಬ ರತ್ನದಿಂದ ಹೊಳೆಯುತ್ತವೇ.
ಈತನೇ ಪುಣ್ಯದ ಪ್ರತಿರೂಪ .
ಈತನ ಕಣ್ಣುಗಳು ನಿಜವಾಗಿಯೂ ಕಮಲದ್ವಯಗಳು.
ಈತನೇ ಎಲ್ಲ ಲೋಕದೊಡೆಯ
ಈತನೇ ವಿಷ್ಣು.
ಈತನಿಗೆ ನನ್ನ ಶಿರಸಾಷ್ಟಾಂಗ ವಂದನೆಗಳು.
30. ನಮಃ ಸಮಸ್ತಭೂತಾನಾಮಾದಿಭೂತಾಯ ಭೂಭೃತೇ । ಅನೇಕರೂಪರೂಪಾಯ ವಿಷ್ಣವೇ ಪ್ರಭವಿಷ್ಣವೇ ॥
ಸಮಸ್ತ ಭುಉತಗಳ ಅಸ್ತಿತ್ವಕ್ಕೆ ಈತನೇ ಮುಕ್ಲ್ಯಾ ಕಾರಣ.
ಭೂಭಾರವನ್ನು ಈತ ಹೊತ್ತಿದ್ದಾನೆ. ಅನೇಕ ರೂಪಗಳಲ್ಲಿ ಈತನ ಚಹರೆಯು ಕಂಗೊಳಿಸುತ್ತದೆ. ಅನೀ ವಿಷ್ಣು. ಈತನಿಗೆ ನನ್ನ ನಮನಗಳು.
31. ಸಶಂಖಚಕ್ರಂ ಸಕಿರೀಟಕುಂಡಲಂ ಸಪೀತವಸ್ತ್ರಂ ಸರಸೀರುಹೇಕ್ಷಣಮ್ ।
ಸಹಾರವಕ್ಷಃ ಸ್ಥಲಶೋಭಿಕೌಸ್ತುಭಂ ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಮ್ ॥
ನಾಲ್ಕು ಕೈಗಳುಳ್ಳ ಈ ನಾನು ಶಿರಬಾಗಿ ನಮಿಸುತ್ತೇನೆ.
ತನ್ನೆರಡು ಕೈಗಳಲ್ಲಿ, ಶಂಖ ಮತ್ತು ಚಕ್ರವನ್ನು ಧರಿಸಿರುವನು.
ಕಿರೀಟ ಮತ್ತು ಕುಂಡಲಗಳಿಂದ ಅಲಂಕರಿಸಲ್ಪಟ್ಟಿರುವನು.
ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿರುವನು.
ಕಮಲದಂತಹ ಎರಡು ಕಣ್ಣುಗಳನ್ನುಳ್ಳವನು.
ಕೌಸ್ತುಭವೆಂಬ ರತ್ನದ ಹಾರದಿಂದ ಈತನ ವಾಕ್ಸಸ್ಥಳವು ಶೋಭಿಸುತ್ತಿದೆ. ಇಂತಹ ದೈವಿಕ ಸನ್ನಿಧಾನಕ್ಕೆ ನಾನು ತಲೆಬಾಗಿ ವಂದಿಸುತ್ತೇನೆ.
32.
ಛಾಯಾಯಾಂ ಪಾರಿಜಾತಸ್ಯ ಹೇಮಸಿಂಹಾಸನೋಪರಿl ಆಸೀನಮಮ್ಬುದಶ್ಯಾಮಮಾಯತಾಕ್ಷಮಲಂಕೃತಮ್ ।l
33. ಚನ್ದ್ರಾನನಂ ಚತುರ್ಬಾಹುಂ ಶ್ರೀವತ್ಸಾಂಕಿತ ವಕ್ಷಸಂ ರುಕ್ಮಿಣೀ ಸತ್ಯಭಾಮಾಭ್ಯಾಂ ಸಹಿತಂ ಕೃಷ್ಣಮಾಶ್ರಯೇ ॥
ನಾಲ್ಕು ಕೈಗಳುಳ್ಳ ಕೃಷ್ಣನಲ್ಲಿ ನಾನು ಶರಣಾಗತಿ ಬಯಸುತ್ತೇನೆ. ಪಾರಿಜಾತ ವೃಕ್ಷದ ನೆರಳಿನಲ್ಲಿರುವ ಬಂಗಾರದ ಸಿಂಹಾಸನದಲ್ಲಿ ಚೆನ್ನಾಗಿ ಅಲಂಕರಿಸಿಕೊಂಡಿರುವ ಈತ ವಿಶಾಲ ನೇತ್ರಗಳುಳ್ಳವನು. ಚಂದ್ರನ ಬೆಳದಿಂಗಳಿನ ತಂಪಿನಂತೆ ಈತನ ಮೊಗವು ಚೇತೋಹಾರಿಯಾಗಿದೆ. ಶ್ರೀವತ್ಸ ಎಂಬ ಸ್ಫೂಟವಾದ ಅಂಕಿತವು ಈತನ ವಕ್ಷಸ್ಥಲದಲ್ಲಿದೆ. ರುಕ್ಮಿಣಿ ತು ಸತ್ಯಭಾಮೆಯರು ಈತನೊಂದಿಗಿದ್ದಾರೆ. ಇಂತಹ ದಿವ್ಯ ಕೃಷ್ಣನ ಸನ್ನಿಧಾನದಲ್ಲಿ ನಾನು ಆಶ್ರಯ ಬಯಸುತ್ತೇನೆ.
———————————–
SRI VISHNUSAHASRANAMAM
1. ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ ।
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ ॥ 1॥
ಈತನೇ ವಿಶ್ವ, ಸಮಸ್ತ ಜಗತ್ತು.
ಈತನೇ ವಿಷ್ಣು, ಸೃಷ್ಟಿಕರ್ತ, ಜಗತ್ತಿನ ಎಲ್ಲೆಡೆ ವ್ಯಾಪಿಸಿ ತಾನೇ ಸ್ವಯಂಸೃಷ್ಟಿಯಾಗಿರುವಾತ.
ಈತನೇ ಸಮಸ್ತ ಜಗತ್ತನ್ನು ತನ್ನ ಅಧೀನದಲ್ಲಿರಿಸಿಕೊಂಡಿರುವಾತ.
ಈತನೇ ಸನಾತನ, ಶಾಶ್ವತನಾದ ಒಡೆಯ : ಕಾಲದ ಮಾಲೀಕ: ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಅಧಿಪತಿ
ಈತನೇ ಚರಾಚರಗಳ ಸೃಷ್ಟಿಕರ್ತ ಮತ್ತು ಅವುಗಳ ಆಧಾರಸ್ಥಂಭ.
ಈತನೇ ನಿಷ್ಕಳಂಕ ಅಸ್ತಿತ್ವ: ಭವ್ಯತೆಯ ಪರಮಶ್ರೇಷ್ಠ.
ಈತನೇ ಅಂತರ್ಯಾಮಿ : ಎಲ್ಲೆಡೆ ನೆಲೆಸಿರುವಾತ ಮತ್ತು ಸಕಲವೂ ಈತನಲ್ಲಿಯೇ ಅವಿರ್ಭವಿಸುತ್ತದೆ.
ಈತನನ್ನು ನಾನು ಸ್ತುತಿಸುತ್ತೇನೆ : ಈತನನ್ನು ಪೂಜಿಸುತ್ತೇನೆ; ಈತನನ್ನು ನಾನು ವಂದಿಸುತ್ತೇನೆ; ಈತನನ್ನು ನಾನು ಧ್ಯಾನಿಸುತ್ತೇನೆ.
2. ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ ।
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋಽಕ್ಷರ ಏವ ಚ ॥ 2॥
ಈತನೇ ಪರಮಾತ್ಮಾ, ಶ್ರೇಷ್ಠಾತ್ಮಾ, ಶುದ್ಧವಾದ ಮೂಲತತ್ವರೂಪಿ.
ಮೋಕ್ಷವನ್ನು ಬಯಸುವ ಆತ್ಮಗಳಿಗೆ ಈತನೇ ಪ್ರಧಾನ ಲಕ್ಷ್ಯವಾಗಿರುತ್ತಾನೆ.
ಈತನ ಸಾನ್ನಿಧ್ಯದಲ್ಲಿ ಅವರೆಲ್ಲರೂ ಶಾಶ್ವತ ಆಶ್ರಯವನ್ನು ಹೊಂದುತ್ತಾರೆ. ತನ್ನ ದೈವಿಕ ಸಮಕ್ಷಮದ ಅನುಭಾವವನ್ನು ಎಲ್ಲರೂ ಹೊಂದುವಂತೆ ಮಾಡುವಾತ ಈತ.
ಭಕ್ತರ ಉಪಾಸನೆಯಿಂದ ಪ್ರಭಾವಿತನಾಗಿ ತನ್ನ ಸಮ್ಮುಖದ ಆನಂದವನ್ನು ದಯಪಾಲಿಸುವವನು ಈತ.
ತನ್ನ ಭಕ್ತರನ್ನು ಹರಸಲು ಬೇಕಾದಂತಹ ಪ್ರತ್ಯೇಕ ಕ್ಷೇತ್ರವನ್ನು ಅರಿತಿರುವಾತ ಈತ
ಮತ್ತು ಈತನ ಅಪರಿಮಿತ ಭವ್ಯತೆಯು ಎಂದೆಂದಿಗೂ ಅಕ್ಷಯವಾಗಿರುತ್ತದೆ.
3. ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ ।
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ ॥ 3॥
ಈತನೇ ಯೋಗವು, ಅಂದರೆ ಈತನನ್ನು ಸೇರುವ ಸಾಧನವು ಈತನೇ.
ಯೋಗದಲ್ಲಿ ಸ್ಥಿರವಾದದ್ದು, ಭಗವಂತನನ್ನು ಹೊಂದುವ ಇಚ್ಛೆಯುಳ್ಳವರಿಗೆ ಮಾರ್ಗದರ್ಶಿಯಾಗಿರುವ ಸ್ವಾಮಿಯು ಈತನು,
ಪ್ರಕೃತಿ ಹಾಗೂ ಪ್ರಕೃತಿಯಿಂದಾವರಿಸಿರುವ ಎಲ್ಲ ಚರಾಚರಗಳ ಧಣಿ ಈತ.
ಸಂರಕ್ಷನಾಗಿರುವ ಈತನು, ಪ್ರಹ್ಲಾದನಂತಹ ಭಕ್ತರನ್ನು ರಕ್ಷಿಸಲು ನರಸಿಂಹ ಅವತಾರದಂತಹ ಹಲವು ರೂಪಗಳನ್ನು ಹೊಂದುವಾತನು.
ಮನೋಹರವಾದ ಕಪ್ಪು ವರ್ಣದ ಗುಂಗುರು ಕೂದಲಿನಿಂದ ಶೋಭಿಸುವ ಈತ ಸದಾ ಸುಂದರ ಹಾಗೂ ಆಕರ್ಷಕ.
ಈತನೇ ಸರ್ವೋತ್ತಮನು, ಮತ್ತು ಎಲ್ಲ ಜೀವಿಗಳಲ್ಲೂ ಉತ್ಕೃಷ್ಟನು.
4. ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ ।
ಸಮ್ಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ ॥ 4॥
ಜೀವಿಗಳ ಅಸ್ತಿತ್ವದ ಮೂಲ ಹಾಗೂ ಬದುಕಿನ ಅಧಾರಸ್ತಂಭವಾದ ಈತನೇ ಸರ್ವನು.
ಜೀವಿಗಳ ಅಸ್ತಿತ್ವವನ್ನು ಹಿಂಸಿಸುವ ದುಷ್ಟಶಕ್ತಿಗಳನ್ನು ನಿವಾರಿಸುವವನು ಈತನೇ.
ತನ್ನ ಭಕ್ತರ ಮೇಲೆ ಕೃಪೆಯನ್ನು ದಯಪಾಲಿಸಲು ಮತ್ತು ಶುಭವನ್ನು ಅನುಗ್ರಹಿಸಲು, ಸ್ಥಿರವಾಗಿ, ಧೃಢವಾಗಿ ನಿಲ್ಲುವವನು ಈತನೇ.
ಸರ್ವರಿಂದಲೂ ಅಪೇಕ್ಷಣೀಯವಾದ ಆನಂದದಾಯಕನು ಈತನೇ.
ಸತತವಾಗಿ ಆನಂದದಿಂದ ಅನುಭವಿಸಿದರೂ ಸಹ, ಈತನು ಕರಗದ ನಿಧಿಯಂತವನು.
ಈತನು ಘನತೆವೆತ್ತ ಅವತಾರಗಳು ಭವ್ಯತೆ ಮತ್ತು ಸದುದ್ದೇಶಗಳಿಂದ ಕೂಡಿದೆ.
ಈತನು ಸಮಸ್ತ ಜೀವಿಗಳಿಗಾಗಿ ಕರ್ಮಫಲಗಳನ್ನು ಅನುಭವಿಸಲು ಅನುವು ಮಾಡಿಕೊಡುತ್ತಾನೆ.
ಜಗತ್ತಿನ ಪ್ರಭುವಾದ ಈತನಿಗೆ ಆನಂದವನ್ನು ಮತ್ತು ಮೋಕ್ಷವನ್ನು ಕರುಣಿಸುವ ದೈವಿಕ ಶಕ್ತಿಯಿದೆ.
5. ಸ್ವಯಮ್ಭೂಃ ಶಮ್ಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ ।
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ ॥ 5॥
ಈತನು ಸ್ವಯಂಭೂ ಆಗಿರುತ್ತಾನೆ. ಅಂದರೆ ತನ್ನ ಇಚ್ಛಾಶಕ್ತಿಯಿಂದಲೇ
ಈ ಪ್ರಪಂಚದಲ್ಲಿ ಸಂಶಯಾತೀತವಾಗಿ ಸ್ವಯಂ ಅವತರಿಸುತ್ತಾನೆ.
ತನ್ನ ಮನೋಹರ ರೂಪದ ನೋಟದಿಂದ ಮತ್ತು ಉನ್ನತ ಗುಣಲಕ್ಷಣಗಳಿಂದ
ಈತನು ತನ್ನ ಭಕ್ತರಿಗೆ ಆನಂದವನ್ನು ದಯಪಾಲಿಸುತ್ತಾನೆ.
ಈತನು ಸೂರ್ಯನನ್ನೇ ತನ್ನ ಆವಾಸಸ್ಥಾನವನ್ನಾಗಿಸಿಕೊಂಡಿದ್ದಾನೆ.
ಈತನ ಕಮಲದಂತಹ ಕಣ್ಣುಗಳು ಈತನ ಸಾರ್ವಭೌಮತ್ವ ಮತ್ತು ಅಸಾಧಾರಣ ಸಂಪತ್ತಿನ ವೈಶಿಷ್ಯವಾಗಿದೆ.
ವೇದಪಠಣದ ಸಾರವನ್ನು ಬಿಂಬಿಸುವ ಮಹತ್ವದ ಓಂಕಾರವನ್ನು ಹೊಂದಿರುವಾತನು ಈತನು.
ಆದಿ ಮತ್ತು ಅಂತ್ಯವಿಲ್ಲದವನು ಈತ.
ಜೀವವಿಲ್ಲದ ಜಡಪ್ರಕೃತಿಯಲ್ಲಿ ತನ್ನನ್ನೇ ಸ್ಥಾಪಿಸಿಕೊಂಡು ಬ್ರಹ್ಮನ ಮುಖಾಂತರ ಸೃಷ್ಟಿಕಾರ್ಯ ನಡೆಸುವವನು ಈತ.
ತನ್ನ ಸೃಷ್ಟಿಗೇ ಅತೀತನಾದವನು ಈತ.
6. ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋಽಮರಪ್ರಭುಃ ।
ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠಃ ಸ್ಥವಿರೋ ಧ್ರುವಃ ॥ 6॥
ಈತನೇ ಅಪ್ರಮೇಯ. ಈತನ ಸ್ವರೂಪ, ಪರಮೋಚ್ಛ ಸಾಮರ್ಥ್ಯ ಮತ್ತು ಸತ್ಯಸಂಧತೆ, ಬ್ರಹ್ಮ ಮತ್ತಿತರ ಗ್ರಹಿಕೆಗೂ ಅತೀತವಾದದ್ದು.
ಹರ್ಷ, ಸಂತೋಷ, ಪರಮಾನಂದ ಮತ್ತು ಸಮೃದ್ಧಿ ಈತನ ದೈವಿಕ ಗುಣಗಳಾಗಿವೆ.
ಈತನು ನಾಭಿಯಲ್ಲಿ ಬ್ರಹ್ಮನಿಗೆ ಜನ್ಮಕೊಟ್ಟ ಕಮಲವುಳ್ಳವನಾಗಿದ್ದಾನೆ.
ಪ್ರತ್ಯಕ್ಷವಾಗಿಯಾಗಲೀ ಅಥವಾ ಬ್ರಹ್ಮ ಮತ್ತಿತರರ ಮುಖಾಂತರವಾಗಲೀ ಜಗತ್ತಿನ ಎಲ್ಲ ಆಗುಹೋಗುಗಳಲ್ಲಿ ಸತತವಾಗಿ ತನ್ನನ್ನು ತೊಡಗಿಸಿಕೊಂಡಿರುವಾತನೇ ಈತ.
ಈತನ ಅಭಿಲಾಷೆಯ ಕುರುಹಿನಿಂದಲೇ ಎಲ್ಲ ಕರ್ಮಗಳು ಫಲವನ್ನೀಯುತ್ತವೆ.
ಜಗತ್ತನ್ನು ಸೃಷ್ಟಿಸಿದ ಬಳಿಕ, ಅದನ್ನು ದೈವಿಕ, ಮಾನುಷ, ಮತ್ತಿತರ ವಿಭಾಗಗಳಾಗಿ ವಿಭಜಿಸಿ ಅವುಗಳನ್ನು ಉಜ್ವಲವಾಗಿರುವಾತನೇ ಈತ.
ಈತನು ಸನಾತನನು, ಕಾಲಾತೀತನು.
ಜಗತ್ತಿನಲ್ಲಾಗುವ ಅಪರಿಮಿತ ಬದಲಾವಣೆಗಳ ನಡುವೆಯೂ ಈತನು ಸ್ಥಿರನಾದವನು.
7. ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ ।
ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್ ॥ 7॥
ಈತನು ಅಗ್ರಾಹ್ಯನು ಅಂದರೆ ಯಾರ ಗ್ರಹಿಕೆಗೂ ಸಿಲುಕದವನು.
ಈತ ಜಗತ್ತನ್ನು ನಡೆಸಲು ಮತ್ತು ಸಂರಕ್ಷಿಸಲು ಸದಾ ಕಾರ್ಯತತ್ಪರನಾಗಿರುವನು.
ಈತನು ತನ್ನ ಲೀಲಾವಿನೋದದಿಂದ ಇತರರನ್ನು ಆಕರ್ಷಿಸಿ ಪರಮಾನಂದವನ್ನು ಕೊಡುವವನು.
ಈತನ ಕಣ್ಣುಗಳು ನೋಡಲು ಮನೋಹರವಾಗಿರುವ ಕೆಂದಾವರೆಯಂತಿರುತ್ತದೆ.
ಪ್ರಳಯಕಾಲದಲ್ಲಿ, ಇಡೀ ವಿಶ್ವವನ್ನು ತನ್ನೊಳಗೆ ಸೆಳೆದುಕೊಳ್ಳುವವನು ಈತ.
ಸನಾತನವಾದ ಶುಭಕಾರಕ ಗುಣಗಳಿಗೆ ಈತನೇ ಶಾಶ್ವತವಾದ ನಿವಾಸವಾಗಿದ್ದಾನೆ.
8. ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ ।
ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ ॥ 8॥
ಈತನೇ ಈಶಾನನು, ಚರಾಚರವಸ್ತುಗಳ ಒಡೆಯನು.(ಸ್ಥಾವರ ಜಂಗಮಗಳ ಒಡೆಯನು)
ಯಾರು ಆಧ್ಯಾತ್ಮಿಕ ಜ್ಞಾನವನ್ನು ಹೊಂದಿರುವರೋ ಅವರಿಗೆ ಶಕ್ತಿಯನ್ನು ದಯಪಾಲಿಸುವವನೇ ಈತ.
ಕರ್ತೃತ್ವ ಶಕ್ತಿ, ಜ್ಞಾನ ಮತ್ತು ಮನೋಬಲದ ಸಾಕಾರಮೂರ್ತಿಯೇ ಈತನು.
ತನ್ನ ಅಪರಿಮಿತ ಘನತೆ, ಭವ್ಯತೆ ಮತ್ತು ವೈಭವವನ್ನು ಸಾಕ್ಷಾತ್ಕರಿಸಲು ತನ್ನ ಭಕ್ತರಿಗೆ ನೆರವಾಗುವವನೇ ಈತನು.
ಅತ್ಯುನ್ನತ ಶ್ಲಾಘನೆಗೆ ಅರ್ಹನಾದ ವ್ಯಕ್ತಿ ಈತ.
ಯಾರು ಆಧ್ಯಾತ್ಮಿಕ ಜ್ಞಾನವನ್ನು ಹೊಂದಿರುವರೋ ಅವರ ಪ್ರಭುವೇ ಈತನು.
ಈತನು ಲಕ್ಷ್ಮಿಯ ಪತಿಯು ಮತ್ತು ಭೂಮಾತೆಯ ಆಶ್ರಯದಾತನು.
ಇಂದ್ರಿಯಗಳಿಂದ ಉಂಟಾಗುವ ಪ್ರತಿಬಂಧಕ ಶಕ್ತಿಯನ್ನು ನಿವಾರಿಸಿ ತನ್ನ ಭಕ್ತರ ಧ್ಯಾನಕಾರ್ಯವನ್ನು ಸುಗಮಗೊಳಿಸಲು ಸಹಾಯಕನಾಗುವವನು ಈತ.
DAY NINE
9. ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ ।
ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್ ॥ 9॥
ಈತನೇ ಈಶ್ವರ. ಪರಮಶ್ರೇಷ್ಠ ಪ್ರಭು.
ತನ್ನ ಸಕಲ್ಪ ಮಾತ್ರದಿಂದಲೇ ತನ್ನ ಶತ್ರುಗಳನ್ನು ದಮನಮಾಡುವವನು.
ಈತನೇ ಸಾರಂಗ ಎಂಬ ಧನುಸ್ಸನ್ನು ಉಳ್ಳವನು.
ಈತನೇ ಅನಂತ, ಸನಾತನ ಮತ್ತು ಅಕ್ಷಯವಾದ ಜ್ಞಾನದಿಂದ ಯುಕ್ತನಾಗಿರುವವನು.
ಈತನ ಅನಂತಾನಂತ ಕೀರ್ತಿ ಮತ್ತು ವೈಭವ ಸದಾ ಎಲ್ಲೆಡೆ ಪ್ರಸರಿಸುತ್ತಿರುದೆ.
ತಮ್ಮ ಕರ್ಮಗಳನುಸಾರವಾಗಿ ಸರಿಯಾದ ಪ್ರತಿಫಲವನ್ನು ತನ್ನ ಭಕ್ತರಿಗೆ ದಯಪಾಲಿಸುವನು ಈತ.
ಈತನ ಅನುಗ್ರಹ ಭಕ್ತರ ಸದ್ಗುಣಕ್ಕನುಗುಣವಾದ ಪ್ರತಿಫಲವಾಗಿರುತ್ತದೆ.
ಈತನಿಂದ ಉತ್ಪತ್ತಿಯಾಗಿ, ಅವರಿಗೆ ವಹಿಸಲಾದ ಕರ್ತವ್ಯಗಳನ್ನು ನೆರವೇರಿಸುವ ಆತ್ಮಗಳು ಸದಾ ಆತನಲ್ಲಿಯೇ ನೆಲೆಯಾಗಿರುತ್ತವೆ.
ಈತನು ಸದಾ ಪರಮಶ್ರೇಷ್ಠನಾಗಿರುತ್ತಾನೆ ಮತ್ತು ಅಭೇದ್ಯನಾಗಿರುತ್ತಾನೆ.
10. ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ ।
ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಃ ಸರ್ವದರ್ಶನಃ ॥ 10॥
ಈತನೇ ಸುರೇಶ, ಎಲ್ಲ ದೇವತೆಗಳ ಮಹಾದೇವ.
ಈತನೇ ಎಲ್ಲ ಜೀವಿಗಳ ಅನನ್ಯ ಆಶ್ರಯದಾತ.
ಈತನೇ ಪರಮಾನಂದ ಸ್ವರೂಪ.
ತನ್ನ ಅನುಸಂಧಾನವನ್ನು ಬಯಸುವ, ಧೀಶಕ್ತಿಯುಳ್ಳ ಜನತೆಗೆ ಸೃಷ್ಟಿಕರ್ತನಾದ ಈತ ಆಶ್ರಯದಾತ.
11. ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ ।
ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಃಸೃತಃ ॥ 11॥
ಈತ ಅಜ ಅಂದರೆ ತನ್ನ ಭಕ್ತರು ತನ್ನಲ್ಲಿ ಶರಣಾಗುವ ಹಾದಿಯಲ್ಲಿ ಉಂಟಾಗುವ ಅಡೆತಡೆಗಳನ್ನು ನಿವಾರಿಸುವವನು.
ಭಕ್ತರು ಶರಣಾಗತರಾದಾಗ, ಅತೀವ ಕಾಳಜಿ ವಹಿಸಿ ಸ್ವಯಂಪ್ರೇರಿತನಾಗಿ
ಸ್ಪಂದಿಸುವ ಈತ ಸರ್ವೇಶ್ವರನು.
ಜೀವನದ ಎಲ್ಲ ಮುಖ್ಯ ಧ್ಯೇಯೋದ್ದೇಶಗಳ ಮೂಲ ಈತನೇ.
ವರಾಹ ಅವತಾರದಲ್ಲಿ ತಾನೇ ಪರಮೇಶ್ವರನೆಂದು ಪ್ರಮಾಣೀಕರಿಸಿದವನು ಈತ.
ಈತನ ಪರಮಶ್ರೇಷ್ಠ ಸೃಷ್ಟಿಯು ಅತ್ಯಮೂಲ್ಯ ಕೊಡುಗೆ ಆಗಿದೆ.
ತನ್ನನ್ನು ಆಶ್ರಯಿಸಿದವರನ್ನು ಕೈ ಬಿಡದ ಆಶ್ರಯದಾತ ಈತ.
ಮತ್ತು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಹಾಗೂ ಅರಿಯಲು ಈತನೇ ಸ್ವಯಂ ಸಾಧನವಾಗಿದ್ದಾನೆ.
ಈತನ ಪರಮಪದವನ್ನು ಅರಿಯಲು ಯೋಗ ಮತ್ತು ಇತರ ಆಧ್ಯಾತ್ಮಿಕ ಆಚರಣೆಗಳು ಸಹಾಯಕವಾಗಿರುತ್ತದೆ.
12. ವಸುರ್ವಸುಮನಾಃ ಸತ್ಯಃ ಸಮಾತ್ಮಾಽಸಮ್ಮಿತಃ ಸಮಃ ।
ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ ॥ 12॥
ಈತನೇ ವಸು. ಭಕ್ತರ ಹೃದಯ ನಿವಾಸಿ.
ತನ್ನ ಭಕ್ತರೆಡೆಗೆ ಅತೀವ ಅನುಬಂಧವನ್ನು ತೋರಿಸುವಾತ ಈತ.
ಎಲ್ಲ ಅಸ್ತಿತ್ವವುಳ್ಳ ವಸ್ತುಗಳೆಡೆಗೆ ಈತನ ಸಮಚಿತ್ತ ಮತ್ತು ಮಧುರ ಅನುಭೂತಿ ಸಹಾ ಇರುತ್ತದೆ.
ಸರ್ವರನ್ನೂ ಸಮಭಾವದಿಂದ ಅನುಗ್ರಹಿಸುವಾತ ಈತ.
ತನ್ನ ಭಕ್ತರಿಗೆ ಸುಲಭವಾಗಿ ಪ್ರಾಪ್ತವಾಗುವ ದೇವರು ಈತ.
ಈತನ ಸ್ಪರ್ಶ ಮಾತ್ರದಿಂದಲೇ ಪುಣ್ಯಫಲಗಳುಂಟಾಗುತ್ತವೆ.
ಯಾರು ಈತನ ಪರಮಪದವನ್ನು ತಲುಪುವರೋ, ಅವರಿಗೆ ದರ್ಶನಪ್ರಾಪ್ತಿ ದಯಪಾಲಿಸುತ್ತಾನೆ.
ತಂಪಾದ ಜೇನಿನ ಮಳೆಯಂತಹ ಈತನ ಕೃಪಾಕಟಾಕ್ಷವು ಎಲ್ಲಾ ಮೂರು ಬಗೆಯ ಸಂಕಷ್ಟಗಳಾದ ತಾಪತ್ರಯಗಳಿಗೆ ಇತಿಶ್ರೀ ಹಾಡುತ್ತದೆ.
ಈತನ ಕಾರ್ಯಗಳು ಮತ್ತು ಕರ್ಮಗಳು ಸದಾ ಧರ್ಮಕ್ಕೆ ಒಗ್ಗುವಂತಿರುತ್ತವೆ.
ಮತ್ತು ಈತನೇ ಸ್ವಯಂ ಧರ್ಮವನ್ನೊಳಗೊಂಡಿರುವನು.
13. ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ ।
ಅಮೃತಃ ಶಾಶ್ವತಸ್ಥಾಣುರ್ವರಾರೋಹೋ ಮಹಾತಪಾಃ ॥ 13॥
ಈತನೇ ರುದ್ರ. ತನ್ನ ಪ್ರಕೃತಿಯ ಭವ್ಯತೆ ಮತ್ತು ಗಂಭೀರ ರೂಪದಿಂದ ಎಲ್ಲರನ್ನೂ ಆನಂದಾಶ್ರುಗಳಿಂದ ಪುಳಕಿತಗೊಳಿಸುವಾತ.
ತನ್ನ ಸಾವಿರಾರು ಕಿರೀಟ ಶೋಭಿತ ಶಿರಗಳ ಮೇಲೆ ಎಲ್ಲ ವಿಶ್ವಗಳ ಭಾರವನ್ನು ಹೊತ್ತವನು ಈತ.
ತನ್ನ ನಿಷ್ಕಳಂಕ ಮತ್ತು ಧರ್ಮಶ್ರದ್ಧೆಯುಳ್ಲ ಭಕ್ತರ ಪ್ರಾರ್ಥನೆಯನ್ನು ಆಲಿಸಿ, ಅವರನ್ನು ಹರಸುವಾತ ಈತ.
ತನ್ನ ಭಕ್ತರ ಮೇಲೆ ಅತಿಶಯವಾದ ಸುಖಪ್ರದ ಕರುಣೆಯನ್ನು ಹರಿಸಿ ಅವರ ಕಡೆಗಾಲದಲ್ಲಿ ಹಾಗೂ ಮರಣಕಾಲದಲ್ಲಿನ ಕಷ್ಟವನ್ನು ಪರಿಹರಿಸುವಾತ ಈತ.
ಬಂಧಮುಕ್ತ ಆತ್ಮಗಳನ್ನು ತನ್ನಲ್ಲಿ ವಿಲೀನಗೊಳಿಸುತ್ತಾನೆ ಈತ.
ಅಂತಹ ಆತ್ಮಗಳಿಗೆ ಈತ ಆನಂದದ ಆಕರವಾಗಿರುತ್ತಾನೆ.
ಈತನು ಸದಾ ಉತ್ಕೃಷ್ಟ ಸ್ಥಿತಿಯಲ್ಲಿರುತ್ತಾನೆ ಮತ್ತು ಈತನ ಜ್ಞಾನವು
ಉತ್ಕೃಷ್ಟ ಹಾಗೂ ಉದಾತ್ತವಾದುದು.
14. ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ ।
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿಃ ॥ 14॥
ಜ್ಞಾನ ಮತ್ತು ಸಾಮರ್ಥ್ಯವೆಂಬ ಎರಡು ದೈವಿಕ ಶಕ್ತಿಗಳೊಂದಿಗೆ, ಪ್ರತಿಯೊಂದು ಅಸ್ತಿತ್ವವುಳ್ಳ ವಸ್ತುವನ್ನು, ಪ್ರಳಯಕಾಲದಲ್ಲಿ ತನ್ನೊಳಗೆ ಸೆಳೆದುಕೊಳ್ಳುವವನು ಈತ.
ಹಾಗೆ ಪ್ರತಿಯೊಂದು ಜೀವಿಗೂ ಆತನನ್ನು ಹೊಂದಲು ಆಸ್ಪದಮಾಡಿಕೊಡುವವನು.
ನಂತರ ತನ್ನ ಸಾರ್ವಭೌಮತ್ವ ಮತ್ತು ಭವ್ಯತೆಯನ್ನು ಬಳಸಿ ವಿಶ್ವವನ್ನು ನಿರ್ಮಿಸಿ ಅದನ್ನು ಪಾಲಿಸುವವನು ಈತ.
ತನ್ನ ಪ್ರಭಾವ ಮತ್ತು ಪರಾಕ್ರಮದಿಂದ ಪ್ರತಿಯೊಬ್ಬರಿಗೂ ಪ್ರೀತಿಪಾತ್ರನಾಗುವನು ಈತ.
ಈತನೇ ವಿಶ್ವಕ್ಸೇನ, ಎಲ್ಲ ರೀತಿಯ ರಕ್ಷಣಾತ್ಮಕ ವ್ಯೂಹಗಳಲ್ಲಿ ಚೆನ್ನಗಿ ಪಳಗಿರುವ ಸೈನ್ಯಾಧಿಪತಿ ಈತ.
ಶತ್ರುಗಳಿಂದ ಭಯಭೀತರಾಗಿರುವ ತನ್ನ ಭಕ್ತವೃಂದಕ್ಕೆ, ಅವರು ಬೇಡಿಕೊಳ್ಳದಿದ್ದರೂ ಸಹ, ನೆರವಿನ ಹಸ್ತ ಚಾಚುವವನು ಈತ.
ಆತ್ಮ ಸಂಯಮವುಳ್ಳವರಿಗೆ ವೇದಜ್ಞಾನವನ್ನು ಅರುಹುವಾತನೇ ಈತ.
ಹಲವಾರು ಶಾಖೆಗಳುಳ್ಳ ಎಲ್ಲ ವೇದಗಳೂ, ಈತನ ಶರೀರದ ಅಂಗಾಂಗಗಳೇ ಆಗಿರುತ್ತವೆ.
ವೇದಪಠಣದಿಂದ, ಧರ್ಮದ ಅನುಷ್ಠಾನಕ್ಕೆ ಸಹಾಯಕವಾಗಲು ಉಪಕ್ರಮಿಸುವವನು ಈತ.
ವೇದಪಾಠದ ವಿದ್ಯಾರ್ಥಿಗಳಿಗೆ ವೇದಸಾರವನ್ನು ಸ್ಪಷ್ಟವಾಗಿ ಹಾಗೂ ಹಿತವಾಗಿ ಅರ್ಥೈಸಿಕೊಳ್ಳಲು ಸಹಾಯಕನಾಗುವ ಕವಿಯೇ ಈತ.
15. ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ ।
ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ ॥ 15॥
ಧರ್ಮದ ಆಚರಣೆಯ ಮೇಲ್ವಿಚಾರಕ ಈತ.
ಮಾನವರಿಂದ ಪೂಜಿಸಲ್ಪಡುವ ದೇವತೆಗಳ ಒಡೆಯ ಈತ.
ದೇವತೆಗಳನ್ನು ಪೂಜಿಸಲು ಬೇಕಾದ ಸಾಧನವಾದ ಧರ್ಮದ ಅಧಿಪತಿಯೂ ಈತನೇ.
ಈತನೇ ಕರ್ತ ಅಥವಾ ಪ್ರವರ್ತಕ. ಅಶಾಶ್ವತವಾದ, ಜಗತ್ತಿನ ಆಗುಹೋಗುಗಳಿಗೆ ಸಂಬಂಧಿಸಿದ ಕರ್ಮಗಳ ಫಲವನ್ನು ದಯಪಾಲಿಸುವವನೂ ಈತನೇ ಮತ್ತು ಇದು ಶಾಶ್ವತವಾದುದು.
ಸುವ್ಯವಸ್ಥಿತ ವಿಶ್ವವನ್ನು ನಡೆಸಲು ಬೇಕಾದ ನಾಲ್ಕು ರೂಪಗಳನ್ನು ಧರಿಸುವ ಈತನೇ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ.
ಜಾಗ್ರತೆ, ಸ್ವಪ್ನ, ಸುಷುಪ್ತಿ ಮತ್ತು ಇವೆಲ್ಲಕ್ಕಿಂತ ಆಚೆಯ ಸ್ಥಿತಿ ಎಂದು ಕರೆಯಲ್ಪಡುವ ತುರಿಯಾವಸ್ಥೆ ಎಂಬ ನಾಲ್ಕು ಹಂತಗಳಲ್ಲಿ ಮೇಲಿನ ಉದ್ದೇಶವನ್ನು ಸಾಧಿಸಲು ಸೂಕ್ತ ರೂಪದಲ್ಲಿ ವ್ಯಕ್ತಪಡಿಸುವ ನಾಲ್ಕು ವ್ಯೂಹ ಕೌಶಲ್ಯಗಳನ್ನು ನೀಡುವಾತ ಈತ.
ಉನ್ನತ ವ್ಯಕ್ತಿಯ ಅತಿಶಯವಾದ ನಾಲ್ಕು ವಿಶೇಷಗುಣಗಳನ್ನು ಸಾರುವ ನಾಲ್ಕುಕೋರೆಹಲ್ಲುಗಳುಳ್ಳ ಚತುರ್ದಂಷ್ಟ್ರನು ಈತ.
ಮತ್ತು ಶಂಖ, ಚಕ್ರ, ಗದೆ ಇತ್ಯಾದಿಗಯನ್ನು ಹಿಡಿದಿರುವ ನಾಲ್ಕು ಕೈಗಳನ್ನು ಹೊಂದಿರುವವನು ಈತ.
16. ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ ।
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ ॥ 16॥
ಈತ ಸ್ವಯಂ ಪ್ರಕಾಶಿಸುವವನು, ಭ್ರಾಜಿಷ್ಣು.
ಭಕ್ತರಿಂದ ನಿವೇದಿಸಲ್ಪಟ್ಟ ಕಾಣಿಕೆಗಳನ್ನು ಸ್ವೀಕರಿಸಿ ಅವರನ್ನು ತನ್ನ ಸಾನ್ನಿಧ್ಯದ ಸುಖದಿಂದ ವಂಚಿತರಾಗದಂತೆ ಹರಸುವವನು ಈತ.
ತನ್ನ ಭಕ್ತರಿಂದ ಉಂಟಾದ ಅಪಚಾರಗಳನ್ನು ಸಹಿಸಿಕೊಳ್ಳುವಂತಹ ಹೃದಯವೈಶಾಲ್ಯವುಳ್ಳವನು ಈತ.
ಈತನೇ ಬ್ರಹ್ಮಾಂಡದ ಸೃಷ್ಟಿಗೆ ಕಾರಣೀಭೂತ.
ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನಿಯಂತ್ರಿಸುವ ಶಕ್ತಿಯುಳ್ಳ ತ್ರಿಮೂರ್ತಿಗಳಲ್ಲಿ, ತನ್ನ ಅಪಾರವಾದ ಶಕ್ತಿಯಿಂದ ಪ್ರಮುಖವಾಗಿ ಹಾಗೂ ಮುಂಚೂಣಿಯಲ್ಲಿರುವಾತ ಈತ.
ತನ್ನ ಸಂಕಲ್ಪ ಮಾತ್ರದಿಂದಲೇ ಈ ಬ್ರಹ್ಮಾಂಡವನ್ನು ತನ್ನಿಷ್ಟದಂತೆ ನಡೆಸುವವನು ಈತ.
ಎಲ್ಲಾ ದೈಹಿಕ ಅಸ್ತಿತ್ವಗಳಲ್ಲಿ ಅಂತರಾತ್ಮನಾಗಿ ನೆಲಸಿರ್ವವನು ಈತ.
17. ಉಪೇನ್ದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ ।
ಅತೀನ್ದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ ॥ 17॥
ಅದಿತಿಯ ಮಗನಾಗಿ ಜನಿಸಿದ ವಾಮನ ಸ್ವರೂಪಿ ಈತ.
ಬಲಿಚಕ್ರವರ್ತಿಯ ಭೀತಿಯಿಂದ ಕಂಗೆಟ್ಟಿದ್ದ ಇಂದ್ರನನ್ನು ಅವನ ತಮ್ಮನ ರೂಪದಲ್ಲಿ ರಕ್ಷಿಸಿದವನು ಈತ.
ತನ್ನ ಅತೀತವಾದ ಶಕ್ತಿ ಮತ್ತು ಭವ್ಯತೆಯಿಂದ, ಇಂದ್ರ ಮತ್ತು ಬಲಿಚಕ್ರವರ್ತಿ, ಇವರಿಬ್ಬರ ಕೋರಿಕೆಯನ್ನು ಈಡೇರಿಸಿದಾತ.
ತನ್ನ ಕೃಪಾಕಟಾಕ್ಷದಲ್ಲಿ ತನ್ನ ಭಕ್ತರನ್ನು ಸುಭದ್ರವಾಗಿ ನೆಲೆಗೊಳಿಸಲು ಸಹಕರಿಸುವಾತನು ಈತ.
ಸಮಸ್ತ ದುಷ್ಟಶಕ್ತಿಗಳನ್ನು ಬಡಿದೋಡಿಸುವಾತನು ಈತ.
ಈ ರೀತಿ ಇಡೀ ವಿಶ್ವದಲ್ಲಿ ತನ್ನ ಹಿಡಿತವನ್ನು ಮತ್ತು ಸಾರ್ವಭೌಮತ್ವವನ್ನು ಈತ ಪ್ರಕಟಪಡಿಸುತ್ತಾನೆ.
18. ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ ।
ಅತೀನ್ದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ ॥ 18॥
ಈತನು ಇಂದ್ರಿಯಾತೀತನು.
ಆದರೂ ತನ್ನ ಭಕ್ತರಿಗೆ ತನ್ನನ್ನು ಅರಿಯಲು ಹಾಗೂ ಸಾಕ್ಷಾತ್ಕರಿಸಿಕೊಳ್ಳಲು, ಸಹಾಯ ಮಾಡುವವನು.
ಸಂಸಾರವೆಂಬ ವ್ಯಾಧಿಯಿಂದ ಗುಣಪಡಿಸಿಕೊಳ್ಳಲು, ತನ್ನ ಅಪರಿಮಿತ ಕರುಣೆಯನ್ನು ದಯಪಾಲಿಸುವವನು.
ವಿಶ್ವಾತ್ಮನಾಗಿ ಸದಾ ಜಾಗೃತನಾಗಿರುವವನು.
ಜ್ಞಾನಿಗಳಿಗೆ ಬ್ರಹ್ಮಜ್ಞಾನವನ್ನು ಮತ್ತು ತನ್ನ ಅಂತರಾತ್ಮದ ಅರಿವನ್ನು ದಯಪಾಲಿಸುವವನು.
ತನ್ನಲ್ಲಿ ಆಶ್ರಯ ಬಯಸದೇ ಇರುವುವರನ್ನು ಪಥಭ್ರಷ್ಟರನ್ನಾಗಿಸುವವನು.
ಸಮಸ್ತ ಸೃಷ್ಟಿಕ್ರಿಯೆಯನ್ನು ಯಾರ ಸಹಾಯವೂ ಇಲ್ಲದೆ ಕೈಗೊಂಡಿರುವ ಮಹಾಬಲ ಈತ.
19. ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ ।
ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ ॥ 19॥
ಶ್ರೇಷ್ಟ ಜ್ಞಾನದ ಸಾಕಾರ ಪುರುಷನಾದ ಮಹಾಬುದ್ಧಿ ಈತ.
ಅದರೊಂದಿಗೆ ಅಪರಿಮಿತ ಶೌರ್ಯ, ಪರಾಕ್ರಮ ಮತ್ತು ಪ್ರಚಂಡ ಶಕ್ತಿಯನ್ನು ಹೊಂದಿರುವಾತ ಈತ.
ಈತ ಮಹಾ ಪ್ರಕಾಶದಿಂದ ಸಂಪನ್ನನಾಗಿದ್ದಾನೆ. ಹೇಗೆಂದರೆ ಆ ಪ್ರಕಾಶದ ಸಣ್ಣ ಕಿರಣವೊಂದು ನಮ್ಮ ಒಳಗಿನ ಮತ್ತು ಹೊರಗಿನ ಅಂಧಕಾರವನ್ನು ಅಳಸಿಹಾಕಿಬಿಡುತ್ತದೆ.
ದೈವಿಕ ಆಭರಣಗಳ ಸಂಪತ್ತನ್ನುಳ್ಳ ಈತ ಶ್ರೀಮಾನ್ ಆಗಿದ್ದಾನೆ.
ಮಹಾ ಸಾಗರದಂತೆ ಈತ ಅಗಾಧಪ್ರಜ್ಞೆಯುಳ್ಳವನಾಗಿದ್ದಾನೆ.
ಸಮುದ್ರಮಥನದ ಸಮಯದಲ್ಲಿ ಅಗಾಧವಾದ ಮಂದರ ಪರ್ವತವನ್ನು ತನ್ನ ಬೆನ್ನಮೇಲೆ ಹೊತ್ತು ಈತನು ಆಧಾರಸ್ವರೂಪನಾಗಿದ್ದುದರಲ್ಲಿ ಯಾವ ಅಚ್ಚರಿಯೂ ಇಲ್ಲ.
20. ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಸ್ಸತಾಂಗತಿಃ
ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿಂದಾಂಪತಿಃ
ವೈರಿಗಳನ್ನು ನಿಗ್ರಹಿಸಲು, ಚಿತ್ತಾಕರ್ಷಕವಾದ ಬಿಲ್ಲನ್ನು ಕೈಯಲ್ಲಿ ಹಿಡಿದಿರುವಾತನು ಈತ.
ಸಂತೋಷದಿಂದ ಭೂಮಿಯನ್ನು ಮೇಲೆತ್ತಿ ಹಿಡಿದಿರುವಾತನು ಈತ.
ಲಕ್ಷ್ಮಿಯ ವಾಸಸ್ಥಾನ ಈತನ ವಕ್ಷಸ್ಥಳ.
ಈತನಲ್ಲಿ ಶರಣುಹೊಂದಿದವರು, ಈತನನ್ನು ಸುಲಭವಾಗಿ ಹೊಂದುವ ಮಾರ್ಗವನ್ನು ಕಂಡುಕೊಳ್ಳುವರು.
ಚೈತನ್ಯಯುಕ್ತ ಇಂದ್ರಿಯವ್ಯಾಪಾರವುಳ್ಳ ಪ್ರಪಂಚವನ್ನು ಸಚೇತನಗೊಳಿಸಲು ತನ್ನ ದೈವಿಕ ಚಟುವಟಿಕೆಯಲ್ಲಿ ಅನವರತ ತೊಡಗಿಕೊಂಡಿರುವವನು ಈತ.
ದೈವಿಕ ಅಸ್ತಿತ್ವವುಳ್ಳವರಿಗೆ ಈತ ಮಹಾ ಪೋಷಕನಾಗಿದ್ದಾನೆ.
ಕೃತಜ್ಞರಾಗಿರುವ ದೈವಿಕ ಜನರಿಂದ ಶ್ಲಾಘನೀಯ ಆರಾಧನೆಯನ್ನು ಸ್ವೀಕರಿಸುವವನು ಈತ.
ವೇದ ಪಠಣದಲ್ಲಿ ಪರಿಣಿತರಾದವರಿಂದ ನಿವೇದನೆಯನ್ನು ಸ್ವೀಕರಿಸುವಾತ ಈತ.
21. ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ ।
ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ ॥ 21॥
ಅಂಧಜೀವಿಗಳ ಕಣ್ಣುಗಳಲ್ಲಿಯೂ ಕಾಂತಿಯುಕ್ತ ಹೊಳಪನ್ನು ಮೂಡಿಸುವ ಬೆಳಕಿನ ಕಿರಣವಾದ ಮರೀಚಿ ಈತ.
ಸಂಸಾರವೆಂಬ ತಮಸ್ಸಿನಲ್ಲಿರುವವರಿಗೆ, ಬೇಗೆಯಲ್ಲಿರುವವರಿಗೆ ಈತನಿಂದ ಹೊರಹೊಮ್ಮುವ ದೈವಿಕಕಾಂತಿ ಬೆಳಕನ್ನಿತ್ತು ತಂಪನ್ನೆರೆಯುತ್ತದೆ.
ಈತನನ್ನು ಕರುಣಾಕಟಾಕ್ಷವುಳ್ಳ, ಮಂದಸ್ಮಿತ ಹಾಗೂ ಮೋಹಕ ನಡಿಗೆಯ ಮೂರ್ತಿಯಾಗಿ ಕಾಣುತ್ತೇವೆ.
ಸಂಸಾರವೆಂಬ ಸಾಗರವನ್ನು ದಾಟಲು ಈತನ ರೆಕ್ಕೆಗಳು ಸಹಾಯಕವಾಗಿವೆ.
ಸುರುಳಿಸುತ್ತಿಕೊಂಡಿರುವ ಆದಿಶೇಷನ ಮೇಲೆ ಒರಗುವ ವೈಭೋಗ ಈತನದಾಗಿದೆ.
ಪ್ರಕಾಂಡ ಪಾಂಡಿತ್ಯ ಮತ್ತು ದೈವಿಕ ಜ್ಞಾನವೇ ಮೂರ್ತಿವೆತ್ತಂತಿರುವವನು ಈತ.
ಬ್ರಹ್ಮನಿಂದ ಮೊದಲುಗೊಂಡು ಸಕಲ ಮೂಲಾಧಾರವಾದ, ಎಂಟು ದಳಗಳುಳ್ಳ ಕಮಲವು ಈತನ ಬಂಗಾರದ ನಾಭಿಯಿಂದ ಉದ್ಭವಿಸಿದೆ.
22. ಅಮೃತ್ಯುಃ ಸರ್ವದೃಕ್ ಸಿಂಹಃ ಸನ್ಧಾತಾ ಸನ್ಧಿಮಾನ್ ಸ್ಥಿರಃ ।
ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ ॥ 22॥
ಪ್ರಹ್ಲಾದನ ಮೇಲೆ ನಡೆಸಲಾದ ಬಗೆ ಬಗೆಯ ಹತ್ಯೆಯ ಸಂಚಿನ ರೂವಾರಿಯನ್ನು ನಾಶಮಾಡಲು, ಸಿಂಹದ ತಲೆ ಮತ್ತು ಮಾನವ ಶರೀರದಿಂದ ಅವತರಿಸಿದ ನರಸಿಂಹನು ಈತ.
ಎಲ್ಲರನ್ನೂ ತನ್ನ ವಶಕ್ಕೆ ತೆಗೆದುಕೊಳ್ಳುವವನು ಈತ.
ವೈರಿಗಳ ಗಜಮುಖಗಳಲ್ಲಿ ಭಯವನ್ನು ಹುಟ್ಟಿಸುವ ಸೈಂಹಮುಖಿ ಈತ.
ಹಾಗಿದ್ದರೂ ತನ್ನ ಪ್ರೀತಿಪಾತ್ರನಾದ ಪ್ರಹ್ಲಾದನಂತಹವರ ಮೇಲೆ ಕೋಮಲ ಕೃಪಾಕಟಾಕ್ಷವನ್ನು ಕರುಣಿಸುವವನು ಈತ.
ಪ್ರತಿಯೊಂದು ವಿಷಯಾಂಶದ ಮೇಲೂ ಸಂಪೂರ್ಣ ಹತೋಟಿ ಸಾಧಿಸುವವನು ಈತ.
ಹಿರಣ್ಯಕಶಿಪುವಿನ ಎದೆಯನ್ನು ಬಗೆದು ಸೀಳಿ ಎಲ್ಲರನ್ನೂ ನಿಬ್ಬೆರಗಾಗಿಸಿದವನು ಈತ.
23. ಗುರುರ್ಗುರುತಮೋ ಧಾಮ ಸತ್ಯಃ ಸತ್ಯಪರಾಕ್ರಮಃ ।
ನಿಮಿಷೋಽನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ ॥ 23॥
ಗುರುಗಳಲ್ಲೆಲ್ಲಾ ಪರಮೋತ್ತಮನಾದ ಗುರುತಮನು ಈತ.
ಪ್ರಳಯಕಾಲದಲ್ಲಿ, ಸಮಸ್ತ ಸೃಷ್ಟಿಯನ್ನೆಲ್ಲಾ ತನ್ನೊಳಗೆ ಸೆಳೆದುಕೊಳ್ಳುವಾಗ, ಎಲ್ಲ ಬಗೆಯ ಜೀವಿಗಳ ಮೂಲಬೀಜಗಳನ್ನು ನಾವೆಯೊಂದರಲ್ಲಿ ಸಂರಕ್ಷಿಸುವನು ಈತ.
ಮತ್ಸ್ಯಾವತಾರದಲ್ಲಿ ಮೀನಿನ ರೂಪ ತಳೆದವನು.
ಆ ಹಡಗಿಗೆ ಈತನೇ ಲಂಗರು ಮತ್ತು ಚುಕ್ಕಾಣಿ ಹಿಡಿದಾತ.
ಆಗ ಸೃಷ್ಟಿಕ್ರಿಯೆಯನ್ನು ಮನು ಪ್ರಾರಂಭಿಸುವನು.
ನಂತರ ಎಲ್ಲರನ್ನೂ ಆತ ಹರಸುತ್ತಾನೆ.
ರೆಪ್ಪೆ ಮಿಟುಕಿಸದ ಮೀನಿನಂತೆ, ಸಜ್ಜನರ ಮೇಲೆ ತನ್ನ ದಯಾಮಯ ದೃಷ್ಟಿಯನ್ನು ನಿಶ್ಚಲವಾಗಿ ಆತ ಹಾಯಿಸುತ್ತಿರುತ್ತಾನೆ.
ಉತ್ಕೃಷ್ಟತೆಯನ್ನು, ಔನ್ನತ್ಯವನ್ನು ಸಾರುವ “ವೈಜಯಂತಿ” ಎಂಬ ಮಾಲೆಯನ್ನು ಆತ ಸದಾ ಧರಿಸಿರುತ್ತಾನೆ.
ಮತ್ಸ್ಯ ಪುರಾಣದಲ್ಲಿ ಅಡಕವಾಗಿರುವ ವೇದ ಘೋಷಗಲ ಪ್ರಭುವೇ ಈತ.
ಸ್ವಭಾವ, ಈತನ ಸಕಲ ಜ್ಞಾನ ಭಂಡಾರದ ಸೂಚಕದಂತಿದೆ.
24. ಅಗ್ರಣೀರ್ಗ್ರಾಮಣೀಃ ಶ್ರೀಮಾನ್ ನ್ಯಾಯೋ ನೇತಾ ಸಮೀರಣಃ ।
ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ ॥ 24॥
ಧರ್ಮದ ಶ್ರದ್ಧಾಳುಗಳಿಗೆ ಆಸರೆ ನೀಡುವ ಈತ ಅವರನ್ನು ಮುಕ್ತಿಯೆಡೆಗೆ ಕೊಂಡೊಯ್ಯುತ್ತಾನೆ. ತನ್ನ ಪರಮಶ್ರೇಷ್ಠ ವಾಸಸ್ಥಾನವನ್ನು ಜ್ಞಾನಿಗಳು ಮತ್ತು ಸನಾತನಿಗಳಿಂದ ಮುನ್ನಡೆಸುತ್ತಾನೆ. ಕಮಲದ ಕಣ್ಣುಗಳುಳ್ಳ ಮೀನಿನಂತೆ ಕಂಗೊಳಿಸುವ ತನ್ನ ಪರಮೋಚ್ಛ ಸಾಮರ್ಥ್ಯವನ್ನು ಪ್ರಕಟಿಸುವ ಈತನೇ ಶ್ರೀಮಾನ್.
ಸದಾ ತನ್ನ ಭಕ್ತರ ಹಿತಕ್ಕಾಗಿ ಶ್ರಮಿಸುವ ಅಪರಿಮಿತಿ ಶಕ್ತಿಶಾಲಿ ನಾಯಕ ಈತ.
ಪರಮಜ್ಞಾನದ ಕಲಿಕೆಯ ಸಾಕಾರಮೂರ್ತಿಯಾದ ಈತನಿಗೆ ಸಾವಿರ ಶಿರಸ್ಸುಗಳಿವೆಯೆಂದು ಹೇಳಲಾಗುತ್ತದೆ.
ಸಮಸ್ತ ವಿಶ್ವವನ್ನು ವ್ಯಾಪಿಸುವ ಶಕ್ತಿಯುಳ್ಳ ಈತನನ್ನು ಅಂತರಾತ್ಮನೆಂದು ಹೇಳಲಾಗುತ್ತದೆ.
ಎಲ್ಲವನ್ನೂ ಸುತ್ತುವರಿದಿರುವ ನೋಟವುಳ್ಳ ಈತನನ್ನು ಸಾವಿರಕಣ್ಣಿನವನು ಎಂದು ಹೇಳಲಾಗುತ್ತದೆ.
ಈತನ ನಡೆಯ ಅಪರಿಮಿತ ಸಾಮರ್ಥ್ಯವನ್ನು ಸಾವಿರ ಪಾದಗಳುಳ್ಳವನು ಎಂಬಂತೆ ಬಿಂಬಿಸಲಾಗಿದೆ.
25. ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಮ್ಪ್ರಮರ್ದನಃ ।
ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ ॥ 25॥
ಈತನೇ ಆವರ್ತನ: ಕಾಲ ಚಕ್ರ, ಬ್ರಹ್ಮಾಂಡದ ಚಲನೆಯ ಚಕ್ರ. ಯುಗಚಕ್ರ, ಸಂಸಾರಚಕ್ರ ಇತ್ಯಾದಿ ಚಕ್ರಗಳನ್ನು ಚಾಲನೆಯಲ್ಲಿಡುವವನು.
ಈತನ ಅಲೌಕಿಕ ಭವ್ಯತೆಯ ಹಲವಾರು ರೂಪಗಳಲ್ಲಿ ಸ್ವಯಂ ಪ್ರಕಟಿತವಾಗುತ್ತದೆ.
ಈತನ ಕೀರ್ತಿ, ಭವ್ಯತೆಯ ಕಾಲುಭಾಗದಷ್ಟನ್ನೇ ಈ ರೂಪಗಳು ಬಿಂಬಿಸುತ್ತವೆ.
ಸಾಮಾನ್ಯ ಮಂದಬುದ್ಧಿಯವರಿಂದ ಈತನನ್ನು ಗ್ರಹಿಸಲು ಸಾಧ್ಯವೇ ಇಲ್ಲ.
ಆತನ ಪರಮ ಜ್ಞಾನದ ಗ್ರಹಿಕೆಯ ಸಹಾಯದಿಂದ ಮಾತ್ರ, ಅಜ್ಞಾನವು ಕ್ರಮವಾಗಿ ನಾಶಹೊಂದುತ್ತದೆ.
ವರಾಹ ಅವತಾರದಲ್ಲಿ ಭೂಮಿಯನ್ನು ಮೇಲೆತ್ತಿದಂತೆ, ಆತನು ಅಜ್ಞಾನದ ಸಂಕೋಲೆಯಿಂದ ಬಂಧಿತರಾದ ಆತ್ಮಗಳನ್ನು ಮೇಲೆತ್ತಿ ಉದ್ಧರಿಸುತ್ತಾನೆ.
26. ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ ।
ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ ॥ 26॥
ಈತನೇ ನಾರಾಯಣ. ಈ ಬ್ರಹ್ಮಾಂಡದ ಸೃಷ್ಟಿಕರ್ತ.
ಈತನ ಸ್ವರೂಪ ಎಲ್ಲೆಡೆಯೂ ಪ್ರವಹಿಸುತ್ತದೆ.
ವಿಶ್ವದ ಪ್ರತಿಯೊಂದು ಭಾಗವನ್ನೂ ಈತ ರಕ್ಷಿಸುತ್ತಾನೆ ಹಾಗೂ ಆ ಪ್ರತಿ ಭಾಗದಲ್ಲೂ ಈತನೇ ವ್ಯಾಪಿಸಿದ್ದಾನೆ.
ಈತ ತೇಜಸ್ವಿಯಾದ ಕರುಣಾಶಾಲಿ.
ಪ್ರೀತಿ ಮತ್ತು ದ್ವೇಷ ಇತ್ಯಾದಿ ದ್ವಂದ್ವಗಳಿಗೆ ಅತೀತನಾದವನು ಈತ.
ಸಾಧು, ಸಜ್ಜನರನ್ನು ಗೌರವಿಸಿ ಅವರ ಆರಾಧನೆಯನ್ನು ಸ್ವೀಕರಿಸುವವನು
ಈತ.
ಸಾಧು, ಸಜ್ಜನರನ್ನು ಗೌರವಿಸಿ ಅವರ ಆರಾಧನೆಯನ್ನು ಸ್ವೀಕರಿಸುವವನು ಈತ.
ಭಕ್ತ ಪರಾಧೀನನಾದ ಈತ ಅವರ ಧೂತನಾಗಿ, ಸಾರಥಿಯಾಗಿ, ಹೀಗೆ ಹಲವು ರೀತಿಯಲ್ಲಿ ಕೃಪೆತೋರಿ ಅವರ ಸೇವೆ ಮಾಡುತ್ತಾನೆ.
ಈತನ ಭಕ್ತರಲ್ಲದವರಿಗೆ ಈತನ ಔದಾರ್ಯ ಗೋಚರವಾಗುವುದಿಲ್ಲ.
ಈತನ ಭವ್ಯತೆಗೆ ಎಂದಿಗೂ ಕುಂದುಂಟಾಗುವುದಿಲ್ಲ.
27. ಅಸಂಖ್ಯೇಯೋಽಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ ।
ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ ॥ 27॥
ಚೇತನಯುಕ್ತ ಮತ್ತು ಜಡಯುಕ್ತ ಎಂಬ ಎರಡು ರೀತಿಯ ಅಸಂಖ್ಯಾತ ಅಸ್ತಿತ್ವವುಳ್ಳ ವಸ್ತುಗಳನ್ನು ತನ್ನ ಅಧೀನದಲ್ಲಿರಿಸಿಕೊಂಡಿರುವಾತ ಈತ.
ಪ್ರತಿಯೊಂದು ಅಸ್ತಿತ್ವವುಳ್ಳ ವಸ್ತುವಿನ ಒಳಗೂ ಹಾಗೂ ಹೊರಗೂ ಈತ ವ್ಯಾಪಿಸಿದ್ದಾನೆ.
ಅವುಗಳನ್ನು ತನ್ನ ಅಧೀನದಲ್ಲಿರಿಸಿಕೊಂಡಿದ್ದರೂ ಸಹ ಈತ ಅವುಗಳಿಂದ ಬೇರ್ಪಟ್ಟಿದ್ದಾನೆ.
ಅವುಗಳ ಯೋಗಕ್ಷೇಮಕ್ಕಾಗಿ ತನ್ನ ಅನುಗ್ರಹವನ್ನು ಸದಾ ದಯಪಾಲಿಸುತ್ತಾನೆ.
ಈತ ತನ್ನ ಭವ್ಯತೆ ಹಾಗೂ ವೈಭವಕ್ಕೆ ಎಂದಿಗೂ ಕುಂದುಬಾರದಂತಿರುತ್ತಾನೆ.
ತನ್ನ ಸಂಕಷ್ಟ ಮಾತ್ರದಿಂದಲೇ ಎಲ್ಲ ಕಾರ್ಯಗಳಲ್ಲೂ ಯಶಸ್ವಿಯಾಗುತ್ತಾನೆ.
ಈತನೇ ಸಿದ್ಧಿದಾಯ. ಈತನನ್ನು ಸೇವಿಸುವವರಿಗೆ, ಅಲೌಕಿಕ ಶಕ್ತಿಗಳ ಸಿದ್ಧಿಯನ್ನು ದಯಪಾಲಿಸುತ್ತಾನೆ.
ಧ್ಯಾನದ ಸತತ ಅಭ್ಯಾಸದಿಂದ ಪರಮಾನಂದ ಸಿದ್ಧಿಯನ್ನು ಯಾರು ಬೇಕಾದರೂ ಹೊಂದಬಹುದು.
28. ವೃಷಾಹೀ ವೃಷಭೋ ವಿಷ್ಣುಃ ವೃಷಪರ್ವಾ ವೃಷೋದರಃ
ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ
ಧರ್ಮದ ಅಪರಾವತಾರವೇ ಈತ.
ಭಕ್ತರು ಈತನೊಂದಿಗೆ ಸಂಯೋಗ ಹೊಂದುವಾಗ ಅದೊಂದು ಮಹತ್ತರ ಶುಭಕಾರಕ ಸಂದರ್ಭವಾಗಿರುತ್ತದೆ.
ಆಗ ಭಕ್ತರು ಅಮೃತ ಸಿಂಚನದಲ್ಲಿ ನೆನೆಯುತ್ತಾರೆ.
ಎಲ್ಲ ಧರ್ಮಗಳ ಸಾಕ್ಷಾತ್ಕಾರಕ್ಕೆ ಈತನು ಸೋಪಾನವಾಗುತ್ತಾನೆ.
ಯಾವಾಗ ಭಕ್ತರು ಈತನಲ್ಲಿ ಆಶ್ರಯ ಬಯಸುತ್ತಾರೆಯೋ, ಆಗ ಅವರನ್ನೆಲ್ಲಾ ತನ್ನ ಮಡಿಲಲ್ಲಿರಿಸುಕೊಂಡು ರಕ್ಷಿಸುತ್ತಾನೆ.
ಈ ರೀತಿ ಮಾಡುವಾಗ ಆತನ ಶಕ್ತಿಯು ಕಿಂಚಿತ್ತೂ ಕುಂದುವುದಿಲ್ಲ.
ಎಲ್ಲ ವೈದಿಕ ಹೊನಲುಗಳ ಪ್ರವಾಹಕ್ಕೆ ಅಂತಿಮ ಗುರಿಯಾದ ಸಾಗರದಂತೆ ಈತನಿದ್ದಾನೆ.
29. ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ
ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ
ಈತನಲ್ಲಿ ಆಶ್ರಯ ಕೋರಿದವರಿಗೆ ಸಂಪೂರ್ಣ ರಕ್ಷಣೆ ಕೊಡುವ ಸಲುವಾಗಿ ಇರುವ ಈತನ ಬಾಹುಗಳು ಅಮಿತ ಶಕ್ತಿಯಿಂದ ಕೂಡಿವೆ.
ಶತ್ರುಗಳಿಂದ ಮಾಡಲ್ಪಡುವ ಯಾವುದೇ ತರಹದ ಆಕ್ರಮಣವನ್ನು ಈತ ಬಹಳ ಸುಲಭವಾಗಿ ಹಿಮ್ಮೆಟ್ಟಿಸುತ್ತಾನೆ.
ಈತನ ಧ್ವನಿಯು ಅತ್ಯಂತ ಗಾಢವಾಗಿರುತ್ತದೆ. ಹಾಗೆಯೇ ಅತಿ ಮಧುರ ಮತ್ತು ಹಿತವಾಗಿರುತ್ತದೆ.
ಈತ ನಂಬಲಾರದಷ್ಟು ಅಪರಿಮಿತ ಶ್ರೀಮಂತ, ಮತ್ತು ಶ್ರೀಮಂತಿಕೆಯನ್ನು ಬಯಸುವವರಿಗೆ ಹೇರಳವಾದ ಸಂಪತ್ತನ್ನು ಕೊಡುವಾತ.
ಅಗಣಿತ ರೂಪಗಳನ್ನು ಧರಿಸುವ ಈತ ಸರ್ವವ್ಯಾಪಕ.
ತನ್ನ ವಿಶ್ವರೂಪ ದರ್ಶನದಿಂದ ಅರ್ಜುನನನ್ನು ಹರಿಸಿದಂತೆ ಈತನು ತನ್ನ ಭಕ್ತರಿಗೆ ಆಶೀರ್ವದಿಸುತ್ತಾನೆ.
30. ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ
ಋದ್ಧಃ ಸ್ಪಷ್ಟಾಕ್ಷರೋಮಂತ್ರಃ ಚಂದ್ರಾಂಶುರ್ಭಾಸ್ಕರದ್ಯುತಿಃ
ಪ್ರಾಣಶಕ್ತಿ ಹಾಗೂ ತೇಜಸ್ಸಿನಿಂದ ಪ್ರಕಾಶಿಸುವವನು ಈತ.
ಈತನ ಕಾಂತಿ ಕಣ್ಣುಕೋರೈಸುವಂತಹುದು ಮತ್ತು ಅಂಕೆಗೆ ನಿಲುಕದು.
ಹುಣ್ಣಿಮೆಯ ದಿನದ ಸಮುದ್ರದಂತೆ ಈತನ ಸಂಪತ್ತು ಸಂಮೃದ್ಧವಾಗಿ ಉಕ್ಕಿ ಹರಿಯುತ್ತಿದೆ.
ಈತನ ರೂಪಗಳು, ಈತನ ಪದವಿ ಮತ್ತು ಕಾರ್ಯಗಳು ವೇದಘೋಷಗಳಿಗೆ ಉತ್ತಮ ವಿವರಣೆಯನ್ನು, ವ್ಯಾಖ್ಯಾನವನ್ನು ನೀಡುತ್ತವೆ.
ಯಾರು ಇದನ್ನು ಅರಿತಿರುವರೋ ಮತ್ತು ಆತನಲ್ಲಿ ಭಕ್ತಿ ಹೊಂದಿರುವರೋ ಅವರಿಗೆ ಎಲ್ಲ ರೀತಿಯ ರಕ್ಷಣೆ ದೊರಕುತ್ತದೆ.
ಹುಣ್ಣಿಮೆಯ ಚಂದ್ರನಂತೆ, ಈತನ ಕಾಂತಿಯು, ಆನಂದ ಸಮಾಧಾನ ಮತ್ತು ಹರ್ಷವನ್ನು ಕೊಡುತ್ತದೆ.
ಸೂರ್ಯನಂತೆ ಕಣ್ಣುಕುಕ್ಕುವ ತೇಜಸ್ಸು ಎಲ್ಲ ವಿರೋಧಗಳನ್ನೂ ಕಳಂಕಿತರನ್ನಾಗಿಸುತ್ತದೆ.
31. ಅಮೃತಾಂಶೂಧ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ
ಔಷಧಂ ಜಗತಃ ಸೇತುಃ ಸತ್ಯ ಧರ್ಮ ಪರಾಕ್ರಮಃ
ಆತನ ಮನಸ್ಸಿನಲ್ಲಿ ತಂಪು ಹಾಗೂ ಆಹ್ಲಾದ ನೀಡುವ ಚಂದ್ರ ಉದಯಿಸಿದ್ದಾನೆ.
ಪ್ರಕಾಶ ಮತ್ತು ಪ್ರಖರತೆಯನ್ನು ಈತನಿಂದ ಸೂರ್ಯನು ಪಡೆದುಕೊಂಡಿದ್ದಾನೆ.
ತಮ್ಮ ನಡತೆಯಲ್ಲಿ ಕುಟಿಲತೆ ಮತ್ತು ದುಡುಕುತನ ಹೊಂದಿರುವವರನ್ನು ಈತ ಸುಮ್ಮನಾಗಿಸುತ್ತಾನೆ.
ನೀತಿ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗುವವರಿಗೆ ಈತ ಮಾರ್ಗರಕ್ಷಕನಾಗುತ್ತಾನೆ.
ಸಂಸಾರವೆಂಬ ಉಗ್ರ ಹಾಲಾಹಲಕ್ಕೆ ಈತ ಪ್ರತ್ಯೌಷಧವನ್ನು ಒದಗಿಸುತ್ತಾನೆ.
ಒಳಿತು ಮತ್ತು ಕೆಡಕು ಮಿಶ್ರವಾಗದಿರುವ ಕಟ್ಟೆಯಂತೆ, ಒಡ್ಡಿನಂತೆ,
ಅವುಗಳನ್ನಬೇರ್ಪಡಿಸುವವನುಈತ. ಈತನ ಪರಾಕ್ರಮ ಮತ್ತು ಧರ್ಮ ಶೀಲತೆಯ ಸಾಮರ್ಥ್ಯವನ್ನು ಒರೆಗೆ ಹಚ್ಚುವಂತಿರುತ್ತದೆ ಈತನ ಕಾರ್ಯಗಳು.
32. ಭೂತಭವ್ಯಭವನ್ನಾಥಃ ಪವನಃ ಪಾವನೋನಲಃ
ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ
ಭೂತ, ವರ್ತಮಾನ ಮತ್ತು ಭವಿಷ್ಯತ್ ಎಂಬ ಮೂರು ಕಾಲಗಳ ಒಡೆಯ ಈತ.
ಗಾಳಿಯಂತೆ ಎಲ್ಲೆಡೆಯೂ ಹರಡುವವನು ಈತ.
ಗಂಗೆಯ ನೀರಿನಿಂದ ಶುದ್ಧೀಕರಿಸುವಂತೆ, ಈತ ಸಕಲವನ್ನೂ ಪಾವನಗೊಳಿಸುತ್ತಾನೆ.
ಪ್ರಾಪಂಚಿಕ ದುಃಖವೆಂಬ ಅಗ್ನಿಯನ್ನು ಶಮನಗೊಳಿಸುವ ಉಪಾಸನೆಯೆಂಬ ಜಲದಿಂದ ತನ್ನ ಭಕ್ತಗಣವನ್ನು ಅನುಗ್ರಹಿಸುತ್ತಾನೆ.
ತನ್ನ ಭಕ್ತರಲ್ಲಿ ಐಹಿಕ ಸುಖಭೋಗಗಳ ಆಸೆಯನ್ನು ಇಂಗಿಸುತ್ತಾನೆ ಈತ. ಮತ್ತು ಅದರಬದಲಾಗಿ ಅವರಲ್ಲಿ ತನ್ನ ಚರಣಕಮಲಗಳನ್ನು ಹೊಂದುವ ಆಸೆಯನ್ನು ಚಿಗುರಿಸುತ್ತಾನೆ.
ತನ್ನ ಮನೋಹರ ವ್ಯಕ್ತಿತ್ವದಿಂದ, ಚಿತ್ತಾಕರ್ಷಕ ನೋಟದಿಂದ, ಔದಾರ್ಯದಿಂದ, ಅನುಕಂಪದಿಂದ, ಎಲ್ಲರ ಹೃದಯಗಳನ್ನು ಕದ್ದವನು ಈತ.
33. ಯುಗಾದಿಕೃದ್ ಯುಗಾವರ್ತೋ ನೈಕಮಾಯೋ ಮಹಾಶನಃ
ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದ್ ಅನಂತಜಿತ್
ಈತನ ಲೀಲೆಗಳು ಕೌತುಕ ಮತ್ತು ವಿಸ್ಮಯವನ್ನು ಉಂಟುಮಾಡುತ್ತವೆ.
ಯುಗಾಂತ್ಯವಾದಾಗಲೆಲ್ಲ, ನೂತನ ಯುಗದ ಆರಂಭದ ಸಂಕೇತವನ್ನು ಯುಗಪುರುಷನಾದ ಈತ ನೀಡುತ್ತಾನೆ. ವಿಶ್ವದ ಪ್ರಳಯಕಾಲದಲ್ಲಿ, ಈತನು ಮಗುವಿನ ರೂಪ ಧರಿಸಿ ಒಂದು ಆಲದ ಎಲೆಯ ಮೇಲೆ ಮಲಗಿ ತೇಲುತ್ತಿರುತ್ತಾನೆ ಎಂದು ಹೇಳಲಾಗುತ್ತದೆ.
ಅಷ್ಟಲ್ಲದೆ ಈತ ಸಕಲ ವಿಶ್ವವನ್ನೂ ತನ್ನ ಮಡಿಲಲ್ಲಿ ಜೋಪಾನವಾಗಿ ಇರಿಸಿಕೊಂಡಿರುತ್ತಾನೆಂದೂ ಸಹ ಹೇಳಲಾಗುತ್ತದೆ.ಈ ಕತೆಗಳು ನಮ್ಮ ತರ್ಕಕ್ಕೆ ನಿಲುಕುವುದಿಲ್ಲ ಹಾಗೂ ನಮ್ಮ ಮನದ ಪರಿಧಿಗೆ ಎಟುಕದಿರುವಂತಹವುಗಳು.
ಪ್ರಳಯ ಕಾಲದಲ್ಲಿ ಮಾರ್ಕಂಡೇಯನು ಕಷ್ಟ ಪಟ್ಟು ಸಮುದ್ರವನ್ನು ಹಾದುಹೋಗುತ್ತಿರುವಾಗ ಈತನು ತನ್ನ ದಿವ್ಯದರ್ಶನದ ಸಾನಿಧ್ಯವನ್ನು ಕರುಣಿಸಿದನೆಂದು ಹೇಳಲಾಗುತ್ತದೆ.
ಈತನ ಕೀರ್ತಿ, ಭವ್ಯತೆಯ ಬಗೆಗಿನ ಅದ್ಭುತವಾದ ಕತೆಗಳು ಅಸಂಖ್ಯವಾಗಿವೆ.
34 . ಇಷ್ಟೋಽವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ ।
ಕ್ರೋಧಹಾ ಕ್ರೋಧಕೃತ್ಕರ್ತಾ ವಿಶ್ವಬಾಹುರ್ಮಹೀಧರಃ ॥ 34॥
ಪ್ರಳಯಕಾಲದಲ್ಲಿ ಯಾರನ್ನೆಲ್ಲಾ ತನ್ನ ಮಡಿಲಲ್ಲಿರಿಸ್ಕೊಂಡು ರಕ್ಷಣೆ ನೀಡಿರುವನೋ, ಅವರೆಲ್ಲಾ ಆತನನ್ನು ತಮ್ಮ ತಾಯಿಯೆಂದು ಪ್ರೇಮದಿಂದ ಭಾವಿಸುತ್ತಾರೆ.
ಈತನೇ ತಮ್ಮ ಬದುಕಿನ ಅಂತಿಮ ಧ್ಯೇಯ ಹಾಗೂ ಅಂತಿಮ ಗುರಿ ಎಂದು ನಂಬಿರುವ ಮಾರ್ಕಂಡೇಯನಂತಹವರಿಂದ, ಈತನು ವಿಶೇಷವಾಗಿ ಆರಾಧಿಸಲ್ಪಡುತ್ತಾನೆ.
ತನ್ನ ಸಾರ್ವಭೌಮತ್ವವನ್ನು ಮತ್ತು ಪಾರಮ್ಯವನ್ನು ಸಾರುತ್ತಾ ಈತ ಉಜ್ವಲವಾಗಿ ನಿಲ್ಲುತ್ತಾನೆ.
ತನ್ನ ಭ್ರಾಮಕ ಶಕ್ತಿಯಿಂದ, ಎಲ್ಲ ಆತ್ಮಗಳನ್ನೂ ಈತ ಕಟ್ಟಿಹಾಕಿರುತ್ತಾನೆ. ಮಾರ್ಕಂಡೇಯನು ಬಸವಳಿದು ಸುಸ್ತಾಗಿದ್ದಾಗ, ತನ್ನ ಮಧುರ ಮಾತುಗಳಿಂದ ಹಾಗೂ ಅಮೃತಮಯ ಕಾಂತಿಯಿಂದ ಅವನನ್ನು ಸಂತೈಸಿದವನು ಈತ. ಪರಶುರಾಮನ ಅವತಾರದಲ್ಲಿ, ಕಶ್ಯಪನ ಆಣತಿಯಂತೆ, ಇಪ್ಪೊತ್ತೊಂದು ಬಾರಿ ಕ್ಷತ್ರಿಯರ ಮೇಲೆ ಆಕ್ರಮಣ ಮಾಡಿ ತನ್ನ ಕೋಪವನ್ನು ಶಮನ ಮಾಡಿಕೊಂಡವನು, ಈತ.
ಕಾರ್ತವೀರ್ಯನ ಅಳಿವಿಗೆ ಇದೇ ಕೋಪವೇ ಕಾರಣವಾಗಿತ್ತು.
ತನ್ನ ಬಲಶಾಲಿಯಾದ ಕೈಗಳಿಂದ ಭೂತಾಯಿಗೆ ಅಧಾರವಾಗಿ ಆಕೆಯ ಭಾರವನ್ನು ಇಳಿಸಿದಾತ ಈತ.
35. ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ
ಅಪಾಂ ನಿಧಿರಧಿಷ್ಠಾನಮ್ ಅಪ್ರಮತ್ತಃ ಪ್ರತಿಷ್ಠಿತಃ
ಈತನ ದೈವಿಕ ಧೀಶಕ್ತಿ ಹಾಗೂ ದೈವಿಕ ಸಾಮರ್ಥ್ಯಕ್ಕೆ ಕುಂದುಂಟಾಗುವುದಿಲ್ಲವಾದ್ದರಿಂದ ಈತನೇ ಅಚ್ಯುತ.
ಸಕಲ ಜೀವಾತ್ಮಗಳ ಜೀವ ಸೆಲೆ ಈತ. ಎಲ್ಲ ಆತ್ಮಗಳ ಪ್ರಾಣ ಈತ.
ಕೂರ್ಮಾವತಾರದಲ್ಲಿ, ಎಲ್ಲ ದೇವತೆಗಳಿಗೆ, ಸಮುದ್ರವನ್ನು ಮಥಿಸುವ ಶಕ್ತಿಯನ್ನು ದಯಪಾಲಿಸಿದವನು ಈತ.
ಆಮೆಯ ರೂಪದಲ್ಲಿ ಮಂದರ ಪರ್ವತವನ್ನು ತನ್ನ ಬೆನ್ನಮೇಲೆ ಹೊತ್ತು ಆಧಾರವನ್ನೊದಗಿಸಿದವನು ಈತ.
ಅಮೃತದ ಸಾರ್ಥಕ ಹಂಚಿಕೆಗಾಗಿ ಮೋಹಿನಿ ರೂಪವನ್ನು ತಾಳಿದವನು ಈತ.
ತನ್ನ ಶಕ್ತಿಯನ್ನು ಸಮರ್ಥವಾಗಿ ಸ್ಥಿರಪಡಿಸಿರುವಾತನು ಈತ.
36. ಸ್ಕಂದಃ ಸ್ಕಂದ ಧರೋ ಧುರ್ಯೋ ವರದೋ ವಾಯುವಾಹನಃ
ವಾಸುದೇವೋ ಬ್ರಹದ್ಭಾನುಃ ಆದಿದೇವಃ ಪುರಂದರಃ
ಅಸುರರು ತಮ್ಮ ಸಾಮರ್ಥ್ಯ ಮತ್ತು ಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಿದಾತನು ಈತ.
ಹಾಗೆಯೇ ದೇವತೆಗಳ ಮುಖ್ಯ ಅಧಿಪತಿಯಾದ ಸ್ಕಂದನಿಗೆ ನೆರವನ್ನೊದಗಿಸಿದಾತ ಈತ.
ಸಮಸ್ತ ಬ್ರಹ್ಮಾಂಡದ ಭಾರವನ್ನು ಹೊರುವ ಸಾಮರ್ಥ್ಯ ಮತ್ತು ಶಕ್ತಿಯಿರುವಾತ ಈತ.
ಜಗತ್ತಿನ ಆಗುಹೋಗುಗಳನ್ನು ನಿರ್ವಹಿಸುವ ದೇವತೆಗಳಿಗೆ ತನ್ನ ಶಕ್ತಿಯನ್ನು ದಯಪಾಲಿಸಿದಾತ ಈತ.
ಗಾಳಿಯ ಚಲನೆಗೆ ಈತನೇ ಕಾರಣಕರ್ತ.
ತಾಯಿಯಂತೆ ಬ್ರಹ್ಮಾಂಡವನ್ನು ತನ್ನ ಮಡಿಲಲ್ಲಿರಿಸಿಕೊಂಡು, ಪ್ರೀತಿಯಿಂದ ತನ್ನ ರೆಕ್ಕೆಗಳಿಂದ ಹೊದಿಸಿ, ಅಂತರ್ಜಾತನಾಗಿ ಇರುವವನು ಈತ.
ವಿಶ್ವಕ್ಕೇ ಬೆಳಕು ನೀಡಿದ್ದರಿಂದ ಈತನನ್ನು ಎಲ್ಲರೂ ಕೊಂಡಾಡುವರು.
ಸೃಷ್ಟಿಗೆ ಮೂಲ ಕಾರಣನು ಈತ.
ಅಸುರರಿಂದ, ಪಿಶಾಚಿಗಳಿಂದ, ಸಿಡಿಲಿನಿಂದ, ಆಕಾಶಕಾಯಗಳಿಂದ ಉಂಟಾಗುವ ಅಧಿದೈವಿಕ ಎಂಬ ಉಪಟಳಗಳಿಂದ ಜೀವಿಗಳನ್ನು ರಕ್ಷಿಸುವವನೇ ಈತ.
37. ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ
ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ
ಹಸಿವು, ಕ್ಲೇಷ, ಮೋಹ, ಭ್ರಾಂತಿ, ಎಂಬ “ಆಧ್ಯಾತ್ಮಿಕ” ಯಾತನೆಗಳಿಂದ ತನ್ನ ಭಕ್ತರನ್ನು ವಿಮುಕ್ತನಾಗಿಸುತ್ತಾನೆ, ಈತ.
ಕಾಯಿಲೆ, ವೇದನೆ, ವ್ಯಸನ, ಕಳ್ಳರು, ಶತ್ರುಗಳು ಇವುಗಳಿಂದ ಉಂಟಾಗುವ “ಆದಿಭೌತಿಕ” ಎಂಬ ಶೋಕಗಳಿಗೆ ಉಪಶಮನವನ್ನು ನೀಡುತ್ತಾನೆ ಈತ.
ಎಲ್ಲ ರೀತಿಯ ಪ್ರಾಪಂಚಿಕ ಭೀತಿಗಳನ್ನು ಹೋಗಲಾಡಿಸಲು ಈತ ಸಹಾಯ ಮಾಡುತ್ತಾನೆ.
ಈತ ಅತ್ಯಂತ ಯೋಗ್ಯ ಹಾಗೂ ಮಹಾನ್ ಜಯಶಾಲಿ.
ಭಕ್ತಿ, ಶ್ರದ್ಧೆ ಹಾಗೂ ಉಪಾಸನೆಯಿಂದ ಜನರು ಈತನನ್ನು ಸೇರಲು ಸಹಾಯ ಮಾಡುತ್ತಾನೆ.
ಸಾವಿರಾರು ಶಕ್ತಿಯುತ ಅಲೆಗಳಿಂದ ಪ್ರವಹಿಸುತ್ತಿರುವ ನದಿಯಂತೆ ಈತನ ಸಾಮರ್ಥ್ಯವು ಮಹಾ ವೈಭವದಿಂದ ಕೂಡಿದೆ.
ಕಮಲವನ್ನು ಕೈಯಲ್ಲಿ ಹಿಡಿದು ಮನೋಹರವಾಗಿ ಗೋಚರಿಸುತ್ತಾನೆ ಈತ.
ಈತನ ಕಮಲದ ಕಣ್ಣುಗಳಿಂದ ಹೊರಸೂಸುವ ಶೀತಲ ನೋಟ ಎಲ್ಲ ದಣಿವನ್ನೂ ನಿವಾರಿಸುತ್ತದೆ.
38. ಪದ್ಮನಾಭೋರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್l
ಮಹರ್ದ್ಧಿರ್ ಋದ್ಧೋ ವೃದ್ದಾತ್ಮಾ ಮಹಾಕ್ಷೋ ಗರುಡಧ್ವಜಃll
ಈತನ ನಾಭಿಯು ಕಮಲದಂತಿದೆ.
ಹಾಗೆಯೇ ಈತನ ಕಣ್ಣುಗಳೆರಡೂ ಸುಂದರವಾದ ಅರವಿಂದಗಳಂತಿವೆ.
ಭಕ್ತರ ಹೃದಯ ಕಮಲದಲ್ಲಿ ಈತ ವಿರಾಜಮಾನನಾಗಿದ್ದಾನೆ.
ತನ್ನ ಅಪರಿಮಿತ ಶಕ್ತಿಯಿಂದ ಭಕ್ತರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ ಈತ.
ಈತನ ದೇಹವು ಸಧೃಢವಾಗಿದೆ ಹಾಗೂ ಸಂಪೂರ್ಣವಾಗಿದೆ.
ತನ್ನ ಸ್ವಾಮಿಯನ್ನು ಹೊತ್ತೊಯ್ಯಲು, ಗಾಲಿಯ ಅಚ್ಚಿನಂತೆ ಸಧೃಢ ಹಾಗೂ ಸಶಕ್ತವಾಗಿರುವ ಗರುಡನು ಈತನ ವಾಹನವಾಗಿದ್ದಾನೆ.
ಇದೇ ಗರುಡನೇ ಈತನ ಧ್ವಜದ ಚಿನ್ಹೆಯಾಗಿ ಈತನಿಂದ ಉಪಯೋಗಿಸಲ್ಪಟ್ಟಿದ್ದಾನೆ.
39. ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿಃ l
ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ ll
ಶಕ್ತಿ ಮತ್ತು ಭವ್ಯತೆಯಲ್ಲಿ ಈತನಿಗೆ ಯಾರೂ ಸರಿಸಾಟಿಯಲ್ಲ.
ತಮ್ಮ ಪರಿಮಿತಿಯನ್ನು ಮೀರಿ ದಾಟುವವರಿಗೆ ಕಟ್ಟು ನಿಟ್ಟಿನ ಶಿಸ್ತನ್ನು ಹೇರಿ, ಅವರನ್ನು ಶಿಕ್ಷಿಸುತ್ತಾನೆ ಈತ.
ಅಗ್ನಿ, ವಾಯು ಮುಂತಾದ ದೇವತೆಗಳಿಗೆ ತಮ್ಮ ಎಲ್ಲೆಯನ್ನು ಮೀರದಂತೆ, ಅವರಲ್ಲಿ ಭಯ ಮತ್ತು ಕರ್ತವ್ಯಪ್ರಜ್ಞೆಯನ್ನು ಉಂಟುಮಾಡುತ್ತಾನೆ ಈತ.
ತನ್ನ ಭಕ್ತರು ಸಮರ್ಪಿಸಿದ ಕಾಣಿಕೆಗಳನ್ನು ಸ್ವೀಕರಿಸಿ, ಅವರಿಗೇನಾದರೂ ತೊಂದರೆಗಳಿದ್ದಲ್ಲಿ ಅದರ ನಿವಾರಣೆಗೆ ಮುಂದಾಗುತ್ತಾನೆ ಈತ.
ಆಹ್ಲಾದ ಮತ್ತು ಶುಭಕಾರಕ ಗುಣಗುಳುಳ್ಳ ಈತನ ಕರುಣಾಮೂರ್ತಿಯನ್ನು ನೋಡುವುದೇ ಒಂದು ಸೌಭಾಗ್ಯ.
ಸದಾಕಾಲವೂ ಲಕ್ಷ್ಮೀ ಸಮೇತನಾದ ಈತನು ತನ್ನ ಭಕ್ತರ ತೊಂದರೆಗಳನ್ನು ನಿವಾರಿಸುತ್ತಿರುತ್ತಾನೆ.
40. ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಃಸಹಃl
ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ ll
ಕಮಲ ಗರ್ಭದಂತೆ ಕೆಂಪಾಗಿರುವ ಈತನೇ ರೋಹಿತ.
ತನ್ನ ಭಕ್ತರೆಡೆಗಿನ ಈತನ ಪ್ರೀತಿ ಅಕ್ಷಯವಾದುದು.
ತಮ್ಮ ಅಭಿಲಾಷೆಗಳ ಈಡೇರಿಕೆಗಾಗಿ, ಧ್ಯಾನಸ್ಥರು ಸದಾ ಕೋರುವ ದೇವನು ಈತ.
ಅವರ ಇಷ್ಟಾರ್ಥಗಳ ಪೂರೈಕೆಗೆ ಕಾರಣಕರ್ತ ಈತ.
ಎಲ್ಲ ಪ್ರಪಂಚಗಳನ್ನು ತನ್ನ ಒಡಲಲ್ಲಿರಿಸಿಕೊಂಡಿರುವಂತಹ ಈತನೇ ದಾಮೋದರ. ತನ್ನ ಸೊಂಟದ ಸುತ್ತಲೂ ಹಗ್ಗವನ್ನು ಸುತ್ತಿಕೊಂಡಿರುವವನು ಈತ.
ಆ ಹಗ್ಗವನ್ನು ಕಟ್ಟಲು ಯಶೋದೆಗೆ ಅನುವುಮಾಡಿಕೊಟ್ಟಿರುವವನು, ಹಾಗೂ ಅವಳ ಎಲ್ಲ ಗದರಿಕೆಗಳನ್ನು ಸಹಿಸಿಕೊಂಡಿರುವವನು, ಈತ.
ಭೂಮಿಯ ಭಾರವನ್ನು ಹೊತ್ತು ಅದಕ್ಕೆ ಅಧಾರವಾಗಿರುವವನು ಈತ.
ಸಾವಿರಾರು ಕನ್ಯೆಯರು, ಗೋಪಿಕಾ ಸ್ತ್ರೀಯರು ಹಾಗೂ ರುಕ್ಮಿಣಿಯಿಂದ ಸುತ್ತುವರಿಯಲ್ಪಡುವ ಭಾಗ್ಯ ಈತನದು.
ಬಾಲಕನಾಗಿದ್ದಾಗ ಹಲವಾರು ವಿನೋದದ ಚಟುವಟಿಕೆಗಳಲ್ಲಿ ತನ್ನ ಶ್ರೇಷ್ಠತೆಯನ್ನು ಮೆರೆದಿದ್ದಾನೆ ಈತ.
ಗೋವರ್ಧನಗಿರಿಯನ್ನು ಎತ್ತುವ ಸಮಯದಲ್ಲಿ, ಗೋಪಾಲಕರಿಂದ ಇಂದ್ರನಿಗೆ ಮೀಸಲಿಟ್ಟ ಎಲ್ಲ ಸವಿಯಾದ ನೈವೇದ್ಯವನ್ನು, ತಾನೇ ಭುಂಜಿಸಿದವನು ಈತ.
41. ಉದ್ಭವಃ ಕ್ಷೋಭಣೋ ದೇವಃ ಶ್ರೀಗರ್ಭಃಪರಮೇಶ್ವರಃ l
ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ ll
ಯಶೋದೆಯು ಈತನನ್ನು ಹಗ್ಗದಿಂದ ಬಂಧಿಸಲು ಯತ್ನಿಸಿದಾಗ್ಯೂ, ಉದಾರ ಹೃದಯದ ಈತ ಅವಳನ್ನು ಸಂಸಾರವೆಂಬ ಬಂಧನದಿಂದ ಮುಕ್ತಿಗೊಳಿಸಿದನು.
ಪ್ರಕೃತಿ ಮತ್ತು ಬಂಧನಕ್ಕೊಳಗಾದ ಆತ್ಮಗಳು, ಇವೆರಡರ ನಿಯಂತ್ರಕ ಹಾಗೂ ಮೇಲ್ವಿಚಾರಕ ಈತ.
ಆತ್ಮಗಳನ್ನು ಭ್ರಮೆ ಅಥವ ಮಾಯೆಯಿಂದ ಬಂಧಿಯಾಗುವುದು ಈತನ ವಿನೋದದದ ಕಾಲಕ್ಷೇಪವಾಗಿದೆ.
ಇಂತಹ ಕ್ರೀಡಾವಿನೋದದಿಂದ ಈತನ ತೇಜಸ್ಸು ಬಹಳಷ್ಟು ಹೆಚ್ಚಿದೆ.
ಆತ್ಮಗಳು ಈತನನ್ನು ಸೇರಲು ಈತನೇ ಸಮರ್ಥ ಸಾಧನನಾಗಿದ್ದಾನೆ.
ಯಾರಿಂದ, ಯಾವಾಗ ಮತ್ತು ಹೇಗೆ, ಏನನ್ನು ಮಾಡಿಸಬೇಕೆಂಬುದು ಈತನಿಗೆ ಚನ್ನಾಗಿ ತಿಳಿದಿದೆ.
ಈತನು ಬಹಳ ಉಪಯುಕ್ತ ಹಾಗೂ ಕರುಣೆಯುಳ್ಳಾತ. ಆಪದ್ರಕ್ಷಕ ಹಾಗೂ ಉದ್ಧಾರಕನಾದ ಈತನೇ “ಗುಹ”.
42. ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ l
ಪರರ್ದ್ಧಿಃ ಪರಮಸ್ಪಷ್ಟಃ ತುಷ್ಟಃ ಪುಷ್ಟಃ ಶುಭೇಕ್ಷಣಃ ll
ನಕ್ಷತ್ರ ಚಕ್ರವನ್ನು ತನ್ನಲ್ಲೇ ಸ್ಥಿರವಾಗಿ ನೆಲೆಗೊಳಿಸಿರುವಾತ ಈತ.
ಸಮಯ ಮತ್ತು ಅದರ ಘಟಕಗಳನ್ನು ಚೆನ್ನಾಗಿ ಸ್ಪಷ್ಟೀಕರಿಸಿದವನು ಈತ.
ಸಕಲ ಚರಾಚರ ವಸ್ತುಗಳ ಮೂಲ, ಅಸ್ತಿತ್ವ ಹಗೂ ಅಳಿವು ಈತನಲ್ಲಿಯೇ ಅಡಕವಾಗಿದೆ.
ಅವಿನಾಶಿಯಾದ ಈತ ಧ್ರುವನಿಗೆ ಶಾಶ್ವತ ಸ್ಥಾನವನ್ನು ಅನುಗ್ರಹಿಸಿದ್ದಾನೆ.
ಪರಮ ಶ್ರೇಷ್ಠನಾದ ಈತನ ಸನ್ನಿಧಾನವು ರಾಮನ ಅವತಾರ ರೂಪದಲ್ಲಿ ಧರೆಗಿಳಿದು, ಹೆಚ್ಚಿನ ಶೌರ್ಯ ಮತ್ತು ಹರ್ಷದಿಂದ ಎಲ್ಲ ಜೀವಿಗಳನ್ನು ಪಾಲಿಸುವ ಅಧಿಕಾರವನ್ನು ನೀಡಿದೆ.
ತಂಪು ಮತ್ತು ನೀಳವಾದ ಕಾಂತಿಯನ್ನು ಹೊರಸೂಸುವ, ಅಗಲವಾದ ಕಮಲದಂತಹ ಕಣ್ಣುಗಳನ್ನುಳ್ಳ ಈತನ ವ್ಯಕ್ತಿತ್ವವು ಎಲ್ಲರನ್ನೂ ಆಕರ್ಷಿಸುವಂತಿದೆ.
ತನ್ನ ಶುಭಕರ ನೋಟದಿಂದ ಈತನು ಹೊಳೆಯುತ್ತಿದ್ದಾನೆ.
43. ರಾಮೋ ವಿರಾಮೋ ವಿರತೋ ಮಾರ್ಗೋ ನೇಯೋ ನಯೋನಯಃ
ವೀರಃ ಶಕ್ತಿಮತಾಂ ಶ್ರೇಷ್ಥೋ ಧರ್ಮೋ ಧರ್ಮವಿದುತ್ತಮಃ !43!
ಈತನ ರೂಪ ಮತ್ತು ಗುಣ ಲಕ್ಷಣಗಳು ಎಲ್ಲರನ್ನೂ ಮಂತ್ರಮುಗ್ಢರನ್ನಾಗಿಸುತ್ತದೆ.
ವರಗಳನ್ನು ನೀಡುವವರೂ, ವರಗಳನ್ನು ಪಡೆಯುವವರೂ ಮತ್ತು ಸ್ವಯಂ ವರಗಳೂ ಎಲ್ಲವೂ ಈತನಲ್ಲಿಯೇ ಕೊನೆಗಾಣುತ್ತವೆ.
ಪ್ರಕೃತಿಯಲ್ಲಿ ಆಸಕ್ತಿಯಿಲ್ಲದಿರುವನಾದುದರಿಂದ, ರಾಮಾವತಾರದಲ್ಲಿ ಈತನು ರಾಜ ಭೋಗ ಹಾಗೂ ರಾಜ್ಯದ ಅಧಿಪತ್ಯದೆಡೆಗೆತಟಸ್ತಭಾವವನ್ನುಹೊಂದಿದ್ದನು. ಯೋಗಿಗಳಿಗೆ ಹಾಗೂ ಮುನಿಗಳಿಗೆ ತನ್ನನ್ನು ಸೇರುವ ಪಥವನ್ನು ತೋರಿಸುವಾತ ಈತ. ಎಲ್ಲರಿಗೂ ಅಂತಿಮ ಆಶ್ರಯದಾತ ಈತ.
ಸಕಲದೇವತೆಗಳಲ್ಲೂ ಪ್ರಮುಖವಾದವನು ಈತ.
ಈತನೇ ಧರ್ಮ ಹಾಗೂ ಧರ್ಮದ ಪ್ರತಿರೂಪ.
ಹಾಗೂಧರ್ಮಜ್ಞಾನಿಗಳಲ್ಲಿಸರ್ವೋತ್ಕೃಷ್ಟನುಈತ.
44. ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ ।
ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ ॥ 44॥
ಈತನೇ ಪುರುಷ, ಸರ್ವ ಶ್ರೇಷ್ಠ ಜೀವಿ.
ಸಾಧಕರು ಎಲ್ಲ ಅಡೆತಡೆಗಳನ್ನೂ ಮೀರಿ ಬಂದಾಗ, ಈತನು ಅವರನ್ನು ತನ್ನೆಡೆಗೆ ಕೊಂಡೊಯ್ಯುತ್ತಾನೆ.
ಈತನನ್ನೇ ಧ್ಯಾನಿಸುವವರ ಹೃದಯದಲ್ಲಿ ಈತ ನೆಲಸುತ್ತಾನೆ.
ಅತ್ಯಗತ್ಯವಾದ ಶಕ್ತಿಯನ್ನು ನೀಡಿ, ಎಲ್ಲರನ್ನೂ ಸಂರಕ್ಷಿಸುವವನು ಈತ.
ಎಲ್ಲ ಸದ್ಗುಣಗಳ ಗಣಿ ಈತ.
ಇಂದ್ರಿಯ ಸುಖಗಳನ್ನು ಗೆಲ್ಲುವ ವಿವೇಚನಾ ಶಕ್ತಿಯನ್ನು ಭಕ್ತರಿಗೆ ನೀಡುತ್ತಾನೆ ಈತ.
ಈತನ ವಾತ್ಸಲ್ಯ ಮತ್ತು ಹೃದಯ ಕೋಮಲತೆ ಊಹೆಗೆ ನಿಲುಕದ್ದು.
ಕೆಲವೊಮ್ಮೆ ಭರದ್ವಾಜ, ಗುಹ ಮತ್ತು ಶಬರಿಯಂತಹ ಭಕ್ತರಿಗೆ ಈತನೇ ಶರಣಾಗಿ ಬಿಡುತ್ತಾನೆ.
ಅಕ್ಷಯವಾದ ಅಮೃತಮಯ ಸಾಗರದಂತಹವನು ಈತ.
45. ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ ।
ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ ॥ 45॥
ಈತನೇ ಸುದರ್ಶನ:- ಈತನ ದರ್ಶನ ಮಾತ್ರದಿಂದಲೇ ಪುಳಕಿತರಾಗುವ ಭಕ್ತ ವೃಂದಕ್ಕೆ ಆನಂದವನ್ನು ಕರುಣಿಸುವವನು ಈತ.
ಹಲವಾರು ಅವತಾರಗಳನ್ನು ತಾಳಿದ ನಂತರ ತನ್ನ ಪರಮೋಚ್ಚ ನಿವಾಸವಾದ ವೈಕುಂಟದಲ್ಲಿ ನೆಲಸುವಾತನು ಈತ.
ದುಷ್ಟ ಜನರಿಂದ ಪ್ರಪಂಚವನ್ನು ಕಾಪಾಡುವ ಸಲುವಾಗಿ ಹಲವಾರು ಅವತಾರಗಳನ್ನು ಧರಿಸಿದಾತ ಈತ.
ಆದರೆ ಅದನ್ನು ಆತ ಮನರಂಜನೆ ಅಥವಾ ವಿನೋದ ಎಂದು ಭಾವಿಸುತ್ತಾನೆ.
ಕಲಿಯುಗದ ಕೊನೆಯಲ್ಲಿ, ಎಲ್ಲ ದುಷ್ಟರನ್ನು ನಿರ್ನಾಮ ಮಾಡಲು ಆತ ಉಗ್ರ ರೂಪವನ್ನು ತಾಳುತ್ತಾನೆ.
ಯಾರು ಸಾತ್ವಿಕ ಜೀವನ ನಡೆಸುವರೋ ಅವರೆಡೆಗೆ ಈತ ಕರುಣಾಳುವಾಗಿರುತ್ತಾನೆ ಮತ್ತು ಅವರಿಗೆ ಬಿಡುಗಡೆಯನ್ನು ಕೊಡುತ್ತಾನೆ.
ಎಲ್ಲ ವಿನಾಶಕಾರಿ ಶಸ್ತ್ರಾಸ್ತ್ರಗಳೊಂದಿಗೆ, ಈತನು ಪಾತಾಳಲೋಕದಲ್ಲಿ ಅನಂತನೆಂಬ ಸರ್ಪದ ಮೇಲೆ ಪವಡಿಸಿರುತ್ತಾನೆ.
46. ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ ।
ಅರ್ಥೋಽನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ ॥ 46॥
ಈತನೇ ವಿಸ್ತಾರ: ಕಲಿಯುಗದ ಅಂತ್ಯದಲ್ಲಿ, ಕೃತಯುಗದಿಂದ ಮೊದಲಾಗುವ ಹೊಸ ಆವೃತ್ತಿಯನ್ನು ಪ್ರಾರಂಭಿಸಿ ಧರ್ಮದ ಸರಹದ್ದುಗಳನ್ನು ವಿಸ್ತರಿಸುತ್ತಾನೆ.
ಧರ್ಮವನ್ನು ಸಂಸ್ಥಾಪಿಸಿದ ಮೇಲೆ ಶಾಂತವಾಗುತ್ತಾನೆ ಹಾಗೂ ನಿಶ್ಚಿಂತನಾಗುತ್ತಾನೆ.
ಯಾವುದು ಧರ್ಮ ಮತ್ತು ಯಾವುದು ಅಧರ್ಮ ಎಂಬುದನ್ನು ಈತನೇ ನಿಷ್ಕರ್ಷಿಸುತ್ತಾನೆ.
ಧರ್ಮದ ಬೀಜವು ಮತ್ತೆ ಮತ್ತೆ ಅಂಕುರವಾಗಲು ಈತನು ಅನುವು ಮಾಡಿಕೊಡುತ್ತಾನೆ.
ಜ್ಞಾನಿಗಳಿಗೆ ಮೋಕ್ಷದ ಗುರಿ ಈತ.
ಶಂಕ , ಪದ್ಮ ಇತ್ಯಾದಿ ಬೆಲೆಬಾಳುವ ವಸ್ತುಗಳುಳ್ಳ ಖಜಾನೆಯನ್ನು ಈತ ಹೊಂದಿದ್ದಾನೆ.
ಎಲ್ಲ ರೀತಿಯ ಸಂತೋಷ ಹಾಗೂ ತೃಪ್ತ ಸ್ಥಿತಿಗೆ ಬೇಕಾದ ಇಷ್ಟಾರ್ಥಗಳನ್ನು ಈತ ಈಡೇರಿಸುತ್ತಾನೆ.
47. ಅನಿರ್ವಿಣ್ಣಃ ಸ್ಥವಿಷ್ಠೋಽಭೂರ್ಧರ್ಮಯೂಪೋ ಮಹಾಮಖಃ ।
ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ ಕ್ಷಾಮಃ ಸಮೀಹನಃ ॥ 47॥
ಈತನು ಅನಿರ್ವಿಣ್ನ: ಪ್ರಪಂಚದೊಂದಿಗಿನ ವ್ಯವಹಾರದಲ್ಲಿ ಈತನು ಸಹಾ ಜಾಗರೂಕನಾಗಿರುತ್ತಾನೆ.
ಈತನ ವಿಶ್ವರೂಪದಲ್ಲಿ ಧರ್ಮವು ಈತನ ಶಿರೋಭಾಗದಂತಿರುತ್ತದೆ.
ನಕ್ಷತ್ರಗಳಿಗಿಂತಲೂ ಸ್ಥಿರನಾಗಿರುತ್ತಾನೆ ಈತ.
ರಾಶಿ ಮಂಡಲ ಮತ್ತು ನಕ್ಷತ್ರ ಗೋಳಗಳನ್ನು ಈತ ಮುನ್ನಡೆಸುತ್ತಾನೆ.
ಇಡೀ ವಿಶ್ವದ ಭಾರವನ್ನು ಆಧರಿಸಿದ್ದಾನೆ ಈತ.
ಪ್ರಳಯಕಾಲದಲ್ಲಿ, ಈತನು ಆಕಾರದಲ್ಲಿ ಕೃಶನಾಗುತ್ತಾನೆ ಮತ್ತು ಕೆಲವೇ ನಕ್ಷತ್ರ ಪುಂಜಗಳು ಈತನ ಸಂಗಾತಿಗಳಾಗಿರುತ್ತವೆ.
ಸೃಷ್ಟಿಕ್ರಿಯೆಯ ಕಾರ್ಯ ಆರಂಭವಾದಾಗ ಈತನು ಎಲ್ಲರಿಗೂ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ವಹಿಸುತ್ತಾನೆ.
48. ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂ ಗತಿಃ ।
ಸರ್ವದರ್ಶೀ ನಿವೃತ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಮ್ ॥ 48॥
ಈತನೇ ಯಜ್ಞ: ಯಜ್ಞಕಾರ್ಯಕ್ಕೆ ಈತನೇ ಆಧಾರ. ಈತನೇ ಯಜ್ಞದ ಫಲಿತಾಂಶ, ಮತ್ತು ಈತನ ಸ್ವಯಂ ಯಜ್ಞ.
ಅತಿ ಒಳಗಿನ ಆತ್ಮನೇ ಈತ, ಎಲ್ಲರಿಂದಲೂ ಆರಾಧಿಸಲ್ಪಡುವವನು ಈತ.
ಈ ಆರಾಧನೆಗಳು ವಿವಿಧ ರೀತಿಯ ಯಜ್ಞಗಳ ರೂಪದಲ್ಲಿರುತ್ತವೆ.
ಮುಕ್ತಿಯನ್ನು ಸಾಧಿಸಲು ಪಣತೊಟ್ಟಿರುವವರ ಅಂತಿಮ ಗುರಿಯಾಗಿ ಈತನಿರುವನು.
ಜಗತ್ತಿನ ಕಾರ್ಯಗಳ ಮೇಲ್ವಿಚಾರಕನೂ ಈತನೇ ಆದರೆ ಈ ಕಾರ್ಯದಿಂದ ದೂರವಿರುವವನೂ ಈತನೇ. ಇದು ಈತನ ದ್ವಂದ್ವರೂಪೀ ವಿಷಯ.
ಉತ್ಕಟ ವೈರಾಗ್ಯವನ್ನು ಬೋಧಿಸಲು ಈತನು ನರ –ನಾರಾಯಣನ ಅವತಾರವನ್ನೆತ್ತಿದ್ದಾನೆ.
ಶ್ರೇಷ್ಠ ಜ್ಞಾನವನ್ನು ಈತನಿಂದ ಯಾರು ಬೇಕಾದರೂ ಸುಲಭವಾಗಿ ಪಡೆಯಬಹುದು.
49. ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ ।
ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ ॥ 49॥
ಈತನೇ ಸುವ್ರತ. ತನ್ನ ಭಕ್ತರಿಗೆ ಸಹಾಯ ಮಾಡುವುದಾಗಿ ಈತ ವ್ರತವನ್ನು ಕೈಗೊಂಡಿದ್ದಾನೆ.
ಒಳ್ಳೆಯ ನಡತೆ ಮತ್ತು ಚಿಂತನೆಯನ್ನು ಅಭ್ಯಾಸಮಾಡುವುದಕ್ಕೆ ಬದ್ಧರಾಗಿರುವವರಿಗೆ, ಮನೋಹರ ಮತ್ತು ಆಕರ್ಷಕ ಮುಖಾರವಿಂದವುಳ್ಳ ಈತನು ಸಂತೋಷ ಭಾಗ್ಯವನ್ನು ಅನುಗ್ರಹಿಸುತ್ತಾನೆ.
ಸಮುದ್ರವನ್ನು ಮಥಿಸಲು, ತನ್ನ ಸಹಸ್ರಾರು ಬಾಹುಗಳಿಂದ, ದೇವತೆಗಳೂ ಹಾಗೂ ರಕ್ಷಸರಿಗೆ ಸಹಾಯವನ್ನು ಮಾಡಿದವನು.
ಸಮುದ್ರ ಮಥನದ ಸಮಯದಲ್ಲಿ ಉಂಟಾದ ಶಬ್ದವು ಈತನಲ್ಲಿ ಅನುರಣಿಸುತ್ತದೆ.
ತನ್ನ ಮೋಹಿನಿ ಅವತಾರದಲ್ಲಿ, ರಾಕ್ಷಸರ ಹೃದಯವನ್ನು ಸೆರೆಹಿಡಿದು ಅವರನ್ನು ದಮನ ಮಾಡುತ್ತಾನೆ.
50. ಸ್ವಾಪನಃ ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್ ।
ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ ॥ 50॥
ತನ್ನ ಆಪ್ತರಾದವರನ್ನು, ತನ್ನ ಮಂದಸ್ಮಿತ ಮತ್ತು ಮನೋಹರ ನೋಟದಿಂದ, ಆಕರ್ಷಿಸುತ್ತಾನೆ.
ಈತನ ವಿಸ್ತರಣೆಯು, ಚರಾಚರ ವಸ್ತುಗಳಿಂದ ಕೂಡಿದ ಸಮಸ್ತ ವಿಶ್ವವನ್ನು ಆವರಿಸುತ್ತದೆ.
ಮಂದಾರ ಪರ್ವತ, ವಾಸುಕಿಯೆಂಬ ಸರ್ಪ, ರಾಕ್ಷಸರು ಹಾಗೂ ದೇವತೆಗಳಿಗೆ ಈತ ಚೈತನ್ಯವನ್ನು ತುಂಬುತ್ತಾನೆ.
ಆಮೆ, ಮೋಹಿನಿ ಮತ್ತು ಬ್ರಹ್ಮ ಮುಂತಾದ ವಿವಿಧ ರೂಪಗಳಲ್ಲಿ ಈತ ಅವತರಿಸುತ್ತಾನೆ.
ಸಮುದ್ರವನ್ನು ಮಥಿಸುವುದು, ಅಮೃತವನ್ನು ಹಂಚುವುದು ಇತ್ಯಾದಿ ಹಲವಾರು ಕಾರ್ಯಗಳಲ್ಲಿ ಈತನು ತೊಡಗಿಸಿಕೊಳ್ಳುತ್ತಾನೆ.
ಮಾನವ ಧರ್ಮದ ಉದ್ದೇಶಗಳನ್ನು ನೆಲೆಗೊಳಿಸಲು, ಧರ್ಮವನ್ನು ಕಾಪಾಡುವ ದೃಷ್ಟಿಯಿಂದ ಈತನು ಪ್ರತಿಯೊಂದು ಜೀವಿಯಲ್ಲೂ ಅಂತರ್ಜಾತನಾಗುತ್ತಾನೆ.
ಸಂಪತ್ತು ಹಾಗೂ ತೇಜಸ್ಸಿನ ಖಜಾನೆ ಈತ.
51. ಧರ್ಮಗುಬ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್ ।
ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣಃ ॥ 51॥
ಈತನೇ ಧರ್ಮ. ಈತನು ಧರ್ಮವನ್ನು ಒಂದು ಸಾಧನವಾಗಿ ಬಳಸುವನು.
ಅಭಿಲಾಷೆಗಳ ಪೂರೈಕೆ ಮತ್ತು ಐಶ್ವರ್ಯವನ್ನು ಈತ ದಯಪಾಲಿಸುತ್ತಾನೆ.
ಈತ ತನ್ನ ಆರಾಧಕರು ತಪ್ಪು ಮಾಡದಂತೆ ನೋಡಿಕೊಳ್ಳುತ್ತಾನೆ.
ಕುಕೃತ್ಯಗಳನ್ನು ಮಾಡುವವರನ್ನು ಈತ ದಂಡಿಸುತ್ತಾನೆ.
ಧಾರ್ಮಿಕ ಗುಣಗಳನ್ನು ಮತ್ತು ಒಳ್ಳೆಯ ಮನೋಧರ್ಮವನ್ನು, ಧರ್ಮದ ಚಿಂತನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವೈಶಿಷ್ಟ್ಯತೆಯನ್ನು ಗಳಿಸಿರುವಾತ ಈತ.
ಈತನಲ್ಲಿ ಶರಣಾಗತಿಯನ್ನು ಬಯಸುವವರು ಮಾಡಿದ ತಪ್ಪುಗಳನ್ನು ಈತ ಕ್ಷಮಿಸುತ್ತಾನೆ.
ಈತನ ಕೃಪೆಗೆ ಅರ್ಹರಾದವರನ್ನು, ಅವರಿಗಿಂತ ಕೀಳಾಗಿರುವವರ ಮಧ್ಯೆ ಸುಲಭವಾಗಿ ಗುರುತಿಸಬಹುದಾಗಿದೆ.
52. ಗಭಸ್ತಿನೇಮಿಃ ಸತ್ತ್ವಸ್ಥಃ ಸಿಂಹೋ ಭೂತಮಹೇಶ್ವರಃ ।
ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ ॥ 52॥
ನಕ್ಷತ್ರಗಳಿಂದ ಪೋಣಿಸಿದ ಚಕ್ರವನ್ನು ತನ್ನ ಕೈಲ್ಲಿರಿಸಿಕೊಂಡಿರುವಂತಹ ಈತನೇ ಜಗದ್ರಕ್ಷಕ.
ಈತನಲ್ಲಿ ಶರಣಾಗತಿಯನ್ನು ಬಯಸಿದವರ ಹೃದಯದಲ್ಲಿ ನೆಲೆಸಿರುವಾತ ಈತ.
ಮರಣದ ದೇವತೆಯಾದ ಯಮ, ಮತ್ತಿತರ ದೇವತೆಗಳ ಬಗೆಗಿನ ಭಯವನ್ನು ತೊಡೆದುಹಾಕುವವನು ಈತ.
ಪರಮಾತ್ಮನಾದ ಈತನೇ ಆದಿದೇವ.
ಬ್ರಹ್ಮ, ಯಮ, ಮತ್ತಿತರ ದೇವತೆಗಳ ಪ್ರಧಾನ ಒಡೆಯ ಈತ.
ಅವರವರ ಯೋಗ್ಯತೆಗನುಗುಣವಾಗಿ ಇತರ ದೇವತೆಗಳಿಗೆ ಅಧಿಕಾರ ದಯಪಾಲಿಸುವವನು ಈತ.
ವೇದಗಳಿಗನುಸಾರವಾಗಿ, ಅವರವರ ಕರ್ತವ್ಯ ಮತ್ತು ಜವಾಬ್ದಾರಿಯ ಬಗ್ಗೆ ಆದೇಶಗಳನ್ನುನೀಡಿ, ಅವರ ಗುರಿವಿನಂತೆ, ಅವರನ್ನು ಬೆಂಬಲಿಸುವವನು ಈತ.
53. ಉತ್ತರೋ ಗೋಪತಿರ್ಗೋಪ್ತಾ ಜ್ಞಾನಗಮ್ಯಃ ಪುರಾತನಃ ।
ಶರೀರಭೂತಭೃದ್ಭೋಕ್ತಾ ಕಪೀನ್ದ್ರೋ ಭೂರಿದಕ್ಷಿಣಃ ॥ 53॥
ಎಲ್ಲ ವೈದಿಕ ಮಂತ್ರಗಳ ಅಧಿಪತಿ ಈತ, ಈತನೇ ಗೋಪತಿ.
ಎಲ್ಲ ವಿಧದ ಕಲಿಕೆಯನ್ನು ಬೆಂಬಲಿಸಿ, ರಕ್ಷಿಸುತ್ತಾನೆ ಈತ.
ಧ್ಯಾನ ಮತ್ತು ಪರಮೋಚ್ಛ ಜ್ಞಾನದ ಮೂಲಕ ಮಾತ್ರವೇ ಈತನನ್ನು ಅರಿಯಬಹುದು.
ಈ ಸಮಸ್ತ ಬ್ರಹ್ಮಾಂಡದ ಆಧಾರಸ್ಥಂಬ ಮತ್ತು ಆಶ್ರಯದಾತ ಈತ.
ದೇವತೆಗಳಿಗೆ ಮತ್ತು ಪಿತೃಗಳಿಗೆ ಅರ್ಪಿಸಿದ ಹವಿಸ್ಸನ್ನು ಈತ ಹಯಗ್ರೀವನ ರೂಪದಲ್ಲಿ ಸ್ವೀಕರಿಸುತ್ತಾನೆ.
ಅಶ್ವಮೇಧ ಮತ್ತು ಇತರ ಯಜ್ಞಗಳಲ್ಲಿ ಅರ್ಪಿಸಿದ ಪ್ರಧಾನ ಬಲಿಯಿಂದ ಈತನನ್ನು ಆರಧಿಸಲಾಗುತ್ತದೆ.
ರಾಮಾವತಾರದಲ್ಲಿ, ದೇವತೆಗಳು ವಾನರ ರೂಪದಲ್ಲಿ ಅವತರಿಸಿದಾಗ, ಅವರ ಪ್ರಭುವಾಗಿ, ಒಡೆಯನಾಗಿ ಈತ ಸಂಬಂಧ ಬೆಳೆಸುತ್ತಾನೆ.
54. ಸೋಮಪೋಽಮೃತಪಃ ಸೋಮಃ ಪುರುಜಿತ್ಪುರುಸತ್ತಮಃ ।
ವಿನಯೋ ಜಯಃ ಸತ್ಯಸನ್ಧೋ ದಾಶಾರ್ಹಃ ಸಾತ್ವತಾಮ್ಪತಿಃ ॥ 54॥
ಯಜ್ಞಗಳಲ್ಲಿ ಹವಿಸ್ಸಾಗಿ ಅರ್ಪಿಸಲಾಗುವ ಸೋಮರಸವನ್ನು ಈತ ಸೇವಿಸುತ್ತಾನೆ.
ಆ ಸೋಮರಸವು ಅಮೃತವಾಗಿ ಮಾರ್ಪಡುತ್ತದೆ.
ಅಮೃತದ ಪರ್ಯಾಯವಾಗಿರುವ ಸೋಮ ಈತ.
ಎಲ್ಲರನ್ನೂ ಜಯಿಸಿದವನು ಈತ. ಬಡಜನರನ್ನು ಕೊಡುಗೆ ಕೊಟ್ಟು ಜಯಿಸುತ್ತಾನೆ.
ಹಿರಿಯರಿಗೆ ಸೇವೆಯನ್ನು ಮಾಡಿ ಜಯಿಸುತ್ತಾನೆ. ಶತ್ರುಗಳನ್ನು ಪರಾಕ್ರಮದಿಂದ ಜಯಿಸುತ್ತಾನೆ ಮತ್ತು ಸತ್ಯದಿಂದ ಎಲ್ಲರನ್ನೂ ಗೆಲ್ಲುತ್ತಾನೆ.
ಸತ್ಯವನ್ನು ಎತ್ತಿಹಿಡಿಯುವುದೇ, ಸತ್ಯಸಂಧನಾದ ಈತನ ಧ್ಯೇಯ.
ಯಾರು ಈತನಿಗೆ ಶರಣಾಗುತ್ತಾರೆಯೋ ಅವರು ಈತನಿಂದ ಜಯಿಸಲ್ಪಡುತ್ತಾರೆ.
ಈತನ ಮುಂದೆ ಎಲ್ಲರೂ ವಿಧೇಯರು ಮತ್ತು ವಿನೀತರಾಗಿರುತ್ತಾರೆ.
ಈತನೇ ಪರಮಾತ್ಮ.
55. ಜೀವೋ ವಿನಯಿತಾ ಸಾಕ್ಷೀ ಮುಕುನ್ದೋಽಮಿತವಿಕ್ರಮಃ ।
ಅಮ್ಭೋನಿಧಿರನನ್ತಾತ್ಮಾ ಮಹೋದಧಿಶಯೋಽನ್ತಕಃ II 55 II
ಭಕ್ತರನ್ನು ಬಲಪಡಿಸುವ, ವಿನಾಶದ ಹಾದಿಯನ್ನು ನಿವಾರಿಸುವ ಶಕ್ತಿಯನ್ನು ನೀಡುವ, ಮತ್ತು ಭಕ್ತರನ್ನು ಸಲಹುವ ಸಲುವಾಗಿ ಅವರನ್ನು ಸತತವಾಗಿ ಗಮನಿಸುವ ದೇವನಾದ ಈತನೇ ಜೀವ.
ತನ್ನ ಆರಾಧನೆ ಮಾಡಲು ಧ್ಯಾನ ಮಾಡಲು, ಮತ್ತು ಬ್ರಹ್ಮನ ನಿಜರೂಪದ ಬಗ್ಗೆ ತಿಳಿಯಳು, ಅವರಿಗೆ ಶಕ್ತಿ ತುಂಬುತ್ತಾನೆ.
ಭಕ್ತರ ಹೃದಯಪೂರಕವಾದ ಭಕ್ತಿಗೆ ಮೆಚ್ಚಿ ಅವರಿಗೆ ಮುಕ್ತಿಯನ್ನು ದಯಪಾಲಿಸುತ್ತಾನೆ.
ಆಮೆಯ ರೂಪವನ್ನು ತಳೆದು ಸಮುದ್ರದ ಆಳದಲ್ಲಿ ವಾಸಿಸುತ್ತಾನೆ ಈತ.
ಶೇಷವೆಂಬ ಸರ್ಪದ ಮಡಿಲಲ್ಲಿ, ಅದನ್ನು ಹಾಸಿಗೆಯನ್ನಾಗಿಸಿಕೊಂಡು ಒರಗುತ್ತಾನೆ ಈತ.
ಪ್ರಳಯಕಾಲದಲ್ಲಿ ತಾನು ಸೃಷ್ಟಿಸಿದ ಸಮಸ್ತ ವಿಶ್ವವನ್ನೂ ವಿಲೀನಗೊಳಿಸುತ್ತಾನೆ.
56. ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ ।
ಆನನ್ದೋ ನನ್ದನೋ ನನ್ದಃ ಸತ್ಯಧರ್ಮಾ ತ್ರಿವಿಕ್ರಮಃ ॥ 56॥
ಅಜಃ: ಪ್ರಳಯ ಕಾಲದಲ್ಲಿ, ಅಕಾರದಿಂದ ಆರಂಭವಾಗುವ ಅ,ಉ, ಮ, ಶಬ್ದಗಳ “ಓಂ” ಎಂಬ ಮೂಲ ಶಬ್ದಕ್ಕೆ ಹಿಂದಿರುಗುತ್ತಾನೆ ಈತ.
ಪ್ರಣವ ಮಂತ್ರದಲ್ಲಿನ ‘ಮ’ಕಾರ ಶಬ್ದವು ಆತ್ಮಗಳ ನಿವೇದನೆಯನ್ನು ಸೂಚಿಸುತ್ತದೆ.ಭಕ್ತರಲ್ಲಿರುವ ಅಹಂ, ಸ್ವಾರ್ಥ ಮುಂತಾದ ಶತ್ರುಗಳು ಹೊಡೆದೋಡಿಸುವ ಮೂಲಕ ಅವರ ಸಹಾಯಕ್ಕೆ ನಿಲ್ಲುತ್ತಾನೆ ಈತ.
ಹಾಗೂ ಅವರಿಗೆ ಅತ್ಯಾನಂದದ ಅನುಭೂತಿಯನ್ನು ಕೊಡುತ್ತಾನೆ. ವರ್ಣಿಸಲು ಬೇಕಾದ ಪದಗಳಿಗೆ ನಿಲುಕದ ಅತ್ಯಾನಂದವನ್ನು ಕರುಣಿಸುವ ಆನಂದ ಭಂಡಾರ ಈತ.
ಆತನನ್ನು ಸೇರುವ ಹಾದಿಯನ್ನು, ಮಾರ್ಗವನ್ನು ನಮಗೆ ತೋರಿಸಿದ್ದಾನೆ ಈತ. ತನ್ನದೇ ಆದ ಐಕ್ಯತೆ ಮತ್ತು ಸತ್ಯಸಂಧತೆಯನ್ನು ನೆಲೆಗೊಳಿಸಿದ್ದಾನೆ ಈತ.
ತನ್ನ ಕೀರ್ತಿ ಮತ್ತು ಶಕ್ತಿಯಿಂದ ಎಲ್ಲ ಮೂರು ವೇದಗಳಲ್ಲೂ ವ್ಯಾಪಿಸಿದ್ದಾನೆ ಈತ, ಆದರೂ ಅದರಿಂದ ಆಚೆ ಉಳಿದಿದ್ದಾನೆ.
57. ಮಹರ್ಷಿಃ ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿಃ ।
ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗಃ ಕೃತಾನ್ತಕೃತ್ ॥ 57॥
ಸಾಂಖ್ಯಯೋ ಗವನ್ನು ಪ್ರಚುರ ಪಡಿಸಿದ ಪ್ರಖ್ಯಾತ ಮಹರ್ಷಿ, ಕಪಿಲನ ಅವತಾರಪುರುಷ ಈತ.
ಬ್ರಹ್ಮ ಜ್ಞಾನವನ್ನು ಉಪದೇಶಿಸಿದ ಬೋಧಕ ಕಪಿಲ.
ಅ, ಉ, ಮ ಅಕ್ಷರಗಳನ್ನೊಳಗೊಂಡ ಓಂಕಾರದ ಹೇಳಿಕೆಗೆ ಆಧಾರನಾದವನು ಈತ.
ವರಾಹಅವತಾರದಲ್ಲಿ,ತನ್ನದಂತಗಳಿಂದಆಧಾರನೀಡಿಭೂಮಿಯನ್ನುರಕ್ಷಿಸಿದವನುಈತರಾಕ್ಷಸನಾದ ಹಿರಣ್ಯಾಕ್ಷನನ್ನು ಸಿಗಿದು ಹಾಕಿದವನು ಈತ.
58. ಮಹಾವರಾಹೋ ಗೋವಿನ್ದಃ ಸುಷೇಣಃ ಕನಕಾಂಗದೀ ।
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರಃ ॥ 58॥
ಭೂಮಿಯನ್ನು ಮೇಲೆತ್ತಿ ಆಧರಿಸಲು ಬೃಹತ್ತಾದ ವರಾಹ ಅವತಾರವನ್ನು ತಳೆದವನು ಈತ.
ಕಳೆದುಹೋಗಿದ್ದ ಭೂಮಿಯನ್ನು ಪುನಃ ಉದ್ಧರಿಸಿದವನು ಈತ.
ಶುದ್ಧ ಸತ್ಯ ಎಂಬ ಗುಣದಿಂದ ಈತ ಕಂಗೊಳಿಸುತ್ತಿದ್ದಾನೆ.
ಚಿನ್ನದಿಂದ ಮಾಡಿದ ಅಸಾಧಾರಣ ಒಡವೆಗಳಿಂದ ಜತೆಗೂಡಿ ಸದಾ ಕಂಗೊಳಿಸುತ್ತಿರುತ್ತಾನೆ ಈತ.
ಈತನು ಪರಮ ಗಂಭೀರನು, ಗ್ರಹಿಸಲು ಅಸಾಧ್ಯವಾದವನು.
ಈತನ ಹೆಗ್ಗಳಿಕೆಯ ಗುಟ್ಟನ್ನು ಶ್ರೇಷ್ಠ ಗುರುಗಳು ಮಾತ್ರ ಅರ್ಥಮಾಡಿಕೊಂಡಿರುವರು.
ಗದೆ ಮತ್ತು ಚಕ್ರಗಳೆಂಬ ಅಪಾರ ಶಕ್ತಿಯುಳ್ಳ ದೈವಿಕ ಆಯುಧಗಳನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡಿರುವವನು ಈತ.
59. ವೇಧಾಃ ಸ್ವಾಂಗೋಽಜಿತಃ ಕೃಷ್ಣೋ ದೃಢಃ ಸಂಕರ್ಷಣೋಽಚ್ಯುತಃ ।
ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ ॥ 59॥
ಈತನೇ ಕೃಷ್ಣ. ಶುದ್ಧ ಚೈತನ್ಯದಿಂದ ತುಂಬಿದ ರೂಪ ಈತನದು.
ಕರಿಮುಗಿಲನ್ನು ಹೋಲುವ ಸುಂದರ ನೀಲಿ ಬಣ್ಣದ ಛಾಯೆಯನ್ನುಳ್ಳ ನೀಲ ಮೇಘ ಶ್ಯಾಮನು ಈತ.
ಚಕ್ರ, ಚಾಮರ, ಇತ್ಯಾದಿ ಅಧಿಕಾರ ಲಾಂಛನಗಳಿಂದ ಈತನ ಸಾರ್ವಬೌಮತ್ವ ಮತ್ತು ವೈಭವ ಪ್ರಕಟವಾಗಿದೆ.
ಪ್ರಾಕೃತಿಕ ಬದಲಾವಣೆಗಳಾದ ಜನನ ಮತ್ತು ಮರಣಗಳಿಗೆ ಒಳಗಾಗದೆ ಈತನ ಸ್ಥಾನ ಶಾಶ್ವತವಾಗಿದೆ.
ಯಾರು ಈತನನ್ನು ತಮ್ಮ ಒಡೆಯ ಎಂದುಭಾವಿಸುವರೋ, ಈತನಲ್ಲಿ ಸಂಪೂರ್ಣ ಭರವಸೆಯನ್ನಿಟ್ಟಿರುವರೋ ಅವರಲ್ಲಿ ಈತ ಅಂತರ್ಗತನಾಗಿರುತ್ತಾನೆ.
ಪ್ರಳಯಕಾಲದಲ್ಲಿ ಎಲ್ಲ ಚರಾಚರ ವಸ್ತುಗಳನ್ನು ತನ್ನಲ್ಲಿಯೇ ಸೆಳೆದುಕೊಳ್ಳುತ್ತಾನೆ ಈತ.
60. ಭಗವಾನ್ ಭಗಹಾಽಽನನ್ದೀ ವನಮಾಲೀ ಹಲಾಯುಧಃ ।
ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ ॥ 60॥
ಈತನೇ ಭಗವಾನ್. ಈತನ ಆಕಾರವು ವಿವಿಧ ಮಂಗಳಕರ ಲಕ್ಷಣಗಳಿಂದ ಕೂಡಿದೆ.
ಅತ್ಯಂತ ಪೂಜ್ಯಭಾವನೆ ಹಾಗೂ ಭಕ್ತಿಭಾವನೆಯನ್ನು ಉಂಟುಮಾಡುವ ಸಾಕಾರಮೂರ್ತಿ ಈತ.
ಸಂಪತ್ತು, ಪರಾಕ್ರಮ, ಖ್ಯಾತಿ, ಸದ್ಗುಣಶೀಲತೆ, ಪವಿತ್ರತೆ, ಜ್ಞಾನ ಮತ್ತು ವೈರಾಗ್ಯ ಮುಂತಾದ ಸರ್ವೋತ್ಕೃಷ್ಟ ಗುಣಗಳು ಈತನಲ್ಲಿ ಅಡಕವಾಗಿವೆ.
ಸೃಷ್ಟಿಕ್ರಿಯೆಗಾಗಿ ಈತ ಸಂಕರ್ಷಣ ರೂಪವನ್ನು ಧರಿಸುತ್ತಾನೆ.
ಆದರೆ ಕೃಷ್ಣಾವತಾರದಲ್ಲಿ ನಂದನ ಮಗನಾಗಿ ಜನ್ಮ ತಾಳುತ್ತಾನೆ.
ಗೋಪಾಲ ಮತ್ತು ಗೋಪಿಕೆಯರ ಸೇವೆಯ ಆನಂದವನ್ನು ಈತ ಅನುಭವಿಸುತ್ತಾನೆ.
ಸದಾ ‘ವನಮಾಲ’ ಎಂಬ ಹಾರವನ್ನು ಧರಿಸಿರುತ್ತಾನೆ ಈತ.
ಧರ್ಮದ ಹಾದಿಯಲ್ಲಿ ಈತನೇ ಉತ್ತಮ ಮತ್ತು ಅನಂತ ನಂಬಲರ್ಹ ಮಾರ್ಗದರ್ಶಿ.
61. ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ ।
ದಿವಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ ॥ 61॥
ರಾಕ್ಷಸರನ್ನು ಸಂಹರಿಸಲು ಬಳಸಿದಂತಹ ಬಿಲ್ಲು ಮತ್ತು ಪರಶು ಎಂಬ ಶಕ್ತಿಯುತ ಆಯುಧಗಳು ಈತನ ಬಳಿ ಇವೆ.
ಎಲ್ಲ ಶಾಸ್ತ್ರಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ಎಲ್ಲರಿಗೂ ಕಂಠದಿಂದ ಹೊರಹೊಮ್ಮಿದ ವ್ಯಾಸವಾಣಿಯನ್ನು ಪಂಚಮವೇದದ ಆಯಾಮವೆಂದು ಕರೆಯಲಾಗುತ್ತದೆ.
62. ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ ।
ಸಂನ್ಯಾಸಕೃಚ್ಛಮಃ ಶಾನ್ತೋ ನಿಷ್ಠಾ ಶಾನ್ತಿಃ ಪರಾಯಣಮ್ ॥ 62॥
ಭಗವಂತನನ್ನು ವಿಶೇಷವಾಗಿ ಸ್ತುತಿಸುವ ಸಾಮವೇದದಲ್ಲಿನ ಗಾಯನಗಳ ಬಗ್ಗೆ ಪ್ರತ್ಯೇಕವಾಗಿ ಪ್ರೀತಿಯುಳ್ಳವನು ಈತ.
ಸ್ವಯಂ ತಾನೇ ಆ ಹಾಡುಗಳನ್ನು ಹಾಡಿ, ಅತಿಶಯ ಆನಂದವನ್ನು ಅನುಭವಿಸುತ್ತಾನೆ.
ಯಾರು ಆ ಹಾಡುಗಳ ಗಾಯನವನ್ನು ಮಾಡುತ್ತಾರೆಯೋ, ಅವರ ಪಾಪಗಳು ನಶಿಸಿಹೋಗುತ್ತವೆ.
ಅಂತಹವರಿಗೆ ಈತನು ಮುಕ್ತಿಯನ್ನು ಕರುಣಿಸುತ್ತಾನೆ.
ಪ್ರಾಪಂಚಿಕ ಜೀವನದ ವ್ಯಾಧಿಗಳನ್ನು ಗುಣಪಡಿಸಲು ಇರುವ ಔಷಧಗಳನ್ನು ತನ್ನ ಬಳಿ ಇರಿಸಿಕೊಂಡಿರುವ ವೈದ್ಯನಂತಹವನು ಈತ.
ಸಂಪೂರ್ಣ ವೈರಾಗ್ಯವೇ ಆ ಔಷಧವಾಗಿದೆ.
ಅದು ಶಾಂತಿ ಮತ್ತು ಶ್ರದ್ಧೆಯನ್ನು ದಯಪಾಲಿಸಿ ಸಮಾಧಿಯೆಡೆಗೆ ದಾರಿ ತೋರಿಸುತ್ತದೆ.
63. ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಶಪ್ರಿಯಃ
ನಿವರ್ತಕ ಧರ್ಮ ಮತ್ತು ಪ್ರವರ್ತಕ ಧರ್ಮ ಎಂಬುದಾಗಿ ಧರ್ಮದ ಎರಡು ಮಗ್ಗಲುಗಳನ್ನು ಈತ ವಿವರವಾಗಿ ತಿಳಿಸಿದ್ದಾನೆ.
ವ್ಯಕ್ತಿಗತ ಪ್ರವೃತ್ತಿಗೆ ಆಯ್ಕೆಯನ್ನು ನೀಡಲಾಗಿದೆ.
ಮುಕ್ತಿಯನ್ನು ಬಯಸುವಾವರು, ವೈರಾಗ್ಯ ಪಥವಾದ ನಿವರ್ತಕ ಧರ್ಮವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.
ಅವರಿಗಾಗಿ ಎಂಟು ಸ್ತರದ ಅಷ್ಟಾಂಗ ಯೋಗವನ್ನು ಈತ ಅನುಗ್ರಹಿಸಿದ್ದಾನೆ.
ಇದು ಯಮ ಮತ್ತು ನಿಯಮದಿಂದ ಮೊದಲಾಗಿ ಸಮಾಧಿ ಅಥವಾ ಐಕ್ಯತೆಯಲ್ಲಿ ಸಮಪ್ತಿಯಾಗುತ್ತದೆ.
ಪ್ರಾಕೃತಿಕ ನೆಲೆಗಟ್ಟಿನಲ್ಲಿ, ಜೀವನದ ಸುಖಾನುಭವವನ್ನು ಅನುಭವಿಸಲು ಇಷ್ಟಪಡುವವರಿಗೆ, ಪ್ರವರ್ತಕ ಧರ್ಮದ ಹಾದಿಯನ್ನು ತೋರಿದ್ದಾನೆ.
ಈತನು ಅಂತಹವರ ಹಿತೈಷಿಯೂ ಹೌದು.
ಅಂತಹವರು ಕರ್ಮ ಮತ್ತು ಅದರ ಫಲಗಳಿಂದ ಕೂಡಿದ ಸಂಸಾರ ಚಕ್ರದ ಮೂಲಕ ಹಾದುಹೋಗುತ್ತಾರೆ.
ತಮ್ಮ ಕರ್ಮ ಫಲದ ಅನುಸಾರ, ಅವರು ಅನುಭವಿಸಿದ ಆನಂದ ಮತ್ತು ಉಪಭೋಗಗಳ ಸ್ಥಳವಾದ ಸ್ವರ್ಗದ ಅಧಿಪತಿ ಈತ.
64. ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ
ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂ ವರಃ
ಕರ್ಮದೆಡೆಗೆ ಒಲವಿರುವವರು ಪ್ರವರ್ತಕರು.
ಪ್ರಾಪಂಚಿಕ ಜೀವನ ಚಕ್ರಕ್ಕೆ ಅವರು ಬಂಧಿಗಳಾಗಿರುತ್ತಾರೆ.
ಮುಕ್ತಿಯೆಡೆಗೆ ಒಲವಿರುವವರು ನಿವರ್ತಕರು.
ಅವರ ಅರ್ಹತೆಗೆ ತಕ್ಕಂತೆ ಬೇಕಾದ ಜ್ಞಾನವನ್ನು ಈತ ನೀಡುತ್ತಾನೆ.
ಎರಡೂ ವರ್ಗಗಳ ಜನರಿಗೆ ಈತ ಒಳ್ಳೇಯದನ್ನೇ ಮಾಡುತ್ತಾನೆ.
ಆತನ ವಕ್ಷಸ್ಥಳದಲ್ಲಿ ಶ್ರೀವತ್ಸ ಎಂಬ ಸಂಕೇತವಿದೆ.
ಈತನ್ ವಕ್ಷಸ್ಠಳದಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲಸಿರುತ್ತಾಳೆ.
ಶಾಶ್ವತ ಜೊತೆಗಾತಿಯಾಗಿ ಲಕ್ಷ್ಮಿ ಈತನೊಡನೆ ಸೇರಿಹೋಗಿದ್ದಾಳೆ.
ಆಕೆಯ ಒಲುಮೆಯ ನೋಟದಿಂದ ಈತನ ಸಾನ್ನಿಧ್ಯವು ಶಾಶ್ವತವಾಗಿ ಅನುಗ್ರಹಿಸಲ್ಪಟ್ಟಿದೆ.
65. ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೊಕತ್ರಯಾಶ್ರಯಃ
ಲಕ್ಷ್ಮಿಯನ್ನು ತನ್ನ ನವನವೀನ ಪ್ರೀತಿಯಿಂದ ಸಮೃದ್ಧಗೊಳಿಸುತ್ತಾನೆ ಈತ.
ಈತನೇ ಆಕೆಯ ಒಡೆಯ, ಆಕೆಯ ಪತಿ, ಆಕೆಯ ದೇವರು.
ಲಕ್ಷ್ಮಿಯ ಅಸ್ತಿತ್ವಕ್ಕೆ ಈತನೇ ಕಾರಣ.
ಸುಂದರ ಲತೆಗೆ ಆಧಾರನೀಡುವ ಕಲ್ಪತರುವಿನಂತೆ ಈತ ಲಕ್ಷ್ಮಿಗೆ ತನ್ನ ಪ್ರೀತಿಯ ಆಸರೆ ನೀಡುತ್ತಾನೆ.
ಒಡವೆಗಳ ಪೆಟ್ಟಿಗೆಯಲ್ಲಿರುವ ಅತ್ಯಮೂಲ್ಯ ರತ್ನದಂತೆ ಲಕ್ಷ್ಮಿಯು ಆತನಲ್ಲಿ ಹುದುಗಿರುವಳು.
ಲಕ್ಷ್ಮಿಯು ಈತನೊಡನೆ ಜೊತೆಗೂಡಿರುವುದರಿಂದ ಈತನಿಗೆ ಸರಿಸಾಟಿಯಿಲ್ಲದ ತೇಜಸ್ಸು, ಸಮೃದ್ಧಿ, ಭವ್ಯತೆ ಮತ್ತು ಕೀರ್ತಿ ಉಂಟಾಗಿದೆ.
ಅಮೃತದಲ್ಲಿನ ಸಿಹಿಯಂತೆ, ಚಂದ್ರನಲ್ಲಿನ ಬೆಳದಿಂಗಳಿನಂತೆ, ಹೂವಿನಲ್ಲಿನ ಸುಗಂಧದಂತೆ, ವಜ್ರದಲ್ಲಿನ ಹೊಳಪಿನಂತೆ ಈತನು ಶ್ರೀದೇವಿಯನ್ನು ಹೊಂದಿದ್ದಾನೆ.
ತನ್ನ ವಿವಿಧ ಅವತಾರಗಳಲ್ಲಿ ಶ್ರೀದೇವಿಯನ್ನು ಸಂಶಯರಹಿತನಾಗಿ ತನ್ನೊಡನೆ ಇರುವಂತೆ ನೋಡಿಕೊಳ್ಳುತ್ತಾನೆ.
ಮಾನವರ ಎಲ್ಲ ಧ್ಯೇಯೋದ್ದೇಶಗಳನ್ನೂ, ಎಲ್ಲ ಪುರುಷಾರ್ಥಗಳನ್ನೂ ಪೂರೈಸಲು ಈಕೆಯನ್ನು ಕೋರಿ ಪೂಜಿಸಲಾಗುತ್ತದೆ.
ಮಾತಾಪಿತೃಗಳಂತೆ ಇವರಿಬ್ಬರಿಗೂ ಎಲ್ಲರೂ ಆಶ್ರಯ ನೀಡುತ್ತಾರೆ.
66. ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ
ವಿಜಿತಾತ್ಮಾ ವಿಧೇಯಾತ್ಮಾ ಸತ್ಕೀರ್ತಿಶ್ಛಿನ್ನಸಂಶಯಃ
ಈತನು ಉತ್ಕೃಷ್ಟ ಜ್ಞಾನೇಂದ್ರಿಯಗಳನ್ನು ಹೊಂದಿದವನಾಗಿದ್ದಾನೆ. ವಿಶೇಷವಾಗಿ ಈತನ ಕಣ್ಣುಗಳು ಶ್ರೇಷ್ಠವಾಗಿವೆ.
ಅಮೃತದ ಸಾಗರದಂತಿರುವ ಲಕ್ಷ್ಮಿಯ ಸೌಂದರ್ಯದ ಆಳವನ್ನು ತನ್ನ ಕಣ್ಣುಗಳಿಂದ ಆತನು ಅಳೆಯಬಲ್ಲನು.
ಲಕ್ಷ್ಮಿಯಿಂದ ಸೋಕಿಸಿಕೊಳ್ಳಲು ಅರ್ಹನಾದ ಆತನ ಅವಯವಗಳು ಬಹಳ ಆಕರ್ಷಣೀಯವಾಗಿವೆ.
ತಮ್ಮ ಪರಸ್ಪರ ಪ್ರೀತಿಯಿಂದ ಉಂಟಾಗುವ ಶಾಶ್ವತ ಆನಂದವನ್ನು ಈತ ಆಸ್ವಾದಿಸುತ್ತಾನೆ.
ಆದಿಶೇಷನಂತಹ ಹಲವಾರು ಅನುಚರರ ಗುಂಪುಗಳನ್ನು ಈತ ಹೊಂದಿದ್ದಾನೆ. ಅವರು ಈತನ ವಾಹಕರಾಗಿಯೂ ಸೇವೆ ಸಲ್ಲಿಸುತ್ತಾರೆ.
ಯಾರು ತನ್ನನ್ನು ಸೋಲಿಸುವರೋ ಮತ್ತು ಯಾರು ತನ್ನನ್ನು ಸ್ತುತಿಸುವರೋ ಅವರ ಬಗ್ಗೆ ಈತನ ಮನಸ್ಸು ಆರ್ದತೆಯಿಂದ ಕೂಡಿರುತ್ತದೆ.
ಸನ್ನಡತೆಯೇ ಈತನ ವಿಶೇಷ ಗುಣಲಕ್ಷಣವಾಗಿದೆ.
ತನ್ನ ಭಕ್ತರಲ್ಲಿ ಇದ್ದಿರಬಹುದಾದ ಎಲ್ಲ ರೀತಿಯ ಸಂದೇಹಗಳನ್ನೂ ಈತ ನಿವಾರಿಸುತ್ತಾನೆ.
67. ಉದೀರ್ಣಃ ಸರ್ವತಶ್ಚಕ್ಷುರ್ ಅನೀಶಃ ಶಾಶ್ವತಸ್ಥಿರಃ
ಭೂಶಯೋ ಭೂಷಣೋ ಭೂತಿಃ ವಿಶೋಕಃ ಶೋಕನಾಶನಃ
ಉದಾರವಾಗಿ ತನ್ನನ್ನು ತಾನು ನಮ್ಮ ಬರಿಯ ಕಣ್ಣುಗಳಿಗೆ ಗೋಚರಿಸುವಂತೆ ಮಾಡುತ್ತಾನೆ.
ಏಕೆಂದರೆ ನಾವು ಆತನ ಆಕೃತಿಯ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಬಹುದು.
ಭಕ್ತಾದಿಗಳು ಸ್ನಾನ, ಪೂಜೆ ಮುಂತಾದ ಸೇವೆಗಳನ್ನು ಆಚರಿಸಿದಾಗ, ಆತನು ಸಂತುಷ್ಟನಾಗಿ, ಭಕ್ತರು ಹಾಗೆ ಮಾಡಲು ಉತ್ತೇಜಿಸುತ್ತಾನೆ.
ಭಕ್ತರು ಮನುಷ್ಯನ ಲಕ್ಷಣಗಳುಳ್ಳ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಿ ಅದನ್ನು ಪವಿತ್ರಗೊಳಿಸಿ ಈತನನ್ನು ಆವಾಹನೆ ಮಾಡುತ್ತಾರೆ.
ಈತನು ತನ್ನ ಭಕ್ತರನ್ನು ಅನುಗ್ರಹಿಸಲು ಆ ಪ್ರತಿಮೆಗಳಲ್ಲಿ ಆವಾಹಿತನಾಗಿ ನೆಲೆಸುತ್ತಾನೆ.
ಯಾರಿಗೆ ಐಹಿಕ ಸಂರಕ್ಷಣೆಯ ಅವಶ್ಯಕತೆಯಿದೆಯೋ, ಅವರಿಗೆ ಈತನು ಉದಾರವಾಗಿ ತನ್ನ ಸಹಾಯವನ್ನು ಒದಗಿಸುತ್ತಾನೆ.
ಈತ ಮಹಾದಾನಿ.
68. ಅರ್ಚಿಷ್ಮಾನ್ ಅರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ
ಅನಿರುದ್ಧೋಪ್ರತಿರಥಃ ಪ್ರದ್ಯುಮ್ನೋ ಮಿತವಿಕ್ರಮಃ
ಈತನ ಭಕ್ತರ ಒಳಗಣ್ಣು ಹಾಗೂ ಹೊರಗಣ್ಣನ್ನು ತೆರೆಸುವಂತಹ ದಿವ್ಯವಾದ ಕಾಂತಿ ಈತನಲ್ಲಿದೆ.
ವಿಗ್ರಹದಲ್ಲಿ ಗೋಚರಿಸಿ ಈತ ಕಂಗೊಳಿಸುತ್ತಾನೆ.
ಪುಣ್ಯಕ್ಷೇತ್ರಗಳಲ್ಲಿ ಮತ್ತು ತೀರ್ಥಯಾತ್ರೆಯ ಕೇಂದ್ರಗಳಲ್ಲಿಯೂ ಸಹ ಈತ ಗೋಚರಿಸುತ್ತಾನೆ.
ಪುಣ್ಯಕ್ಷೇತ್ರಗಳಲ್ಲಿ ದೇಹತ್ಯಾಗ ಮಾಡುವವರನ್ನು ಈತ ಪಾವನಗೊಳಿಸುತ್ತಾನೆ ಮತ್ತು ಅವರು ಈತನನ್ನು ಸೇರುವ ಅರ್ಹತೆಯನ್ನು ಒದಗಿಸುತ್ತಾನೆ.
ಅಂತಹ ಪವಿತ್ರ ಕ್ಷೇತ್ರಗಳಲ್ಲಿ, ತನ್ನ ಇರುವಿಕೆಯನ್ನು ಬಹಿರಂಗಪಡಿಸುತ್ತಾನೆ ಮತ್ತು ಮೋಕ್ಷವನ್ನು ಹೊಂದುವ ಸರಿಮಾರ್ಗವನ್ನು ತೋರುತ್ತಾನೆ.
69. ಕಾಲನೇಮಿನಿಹಾ ಶೌರಿಃ ಶೂರಃ ಶೂರಜನೇಶ್ವರಃ
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ
ಎಲ್ಲ ಪುಣ್ಯಕ್ಷೇತ್ರಗಳಲ್ಲಿಯೂ ತನ್ನ ಸಮಕ್ಷಮವನ್ನು ಇರಿಸಿ, ಕಲಿಯುಗದ ಪ್ರಭಾವಗಳಾದ ಅಜ್ಞಾನ ಮತ್ತು ಕೆಡುಕನ್ನು ಹೊಡೆದೋಡಿಸಲು ಸಹಾಯ ಮಾಡುತ್ತಾನೆ.
ಶೂರನ ಮಗನಾದ ಶೌರಿ ಈತ. ಇದು ವಾಸುದೇವನ ಮತ್ತೊಂದು ಹೆಸರು.
ರಾಕ್ಷಸರನ್ನು ಸಂಹರಿಸಲು, ಚಿತ್ರಕೂಟ ಪರ್ವತದ ಮೇಲೆ ನೆಲಸಿರುವ, ಕಮಲದ ಕಣ್ಣುಗಳುಳ್ಳ, ಈತನೇ ಶೂರ ರಾಮ.
ಪರಾಕ್ರಮ ಮನೋಭಾವವುಳ್ಳ ಸುಗ್ರೀವ ಮತ್ತು ಹನುಮರಿಗೆ ಪ್ರಭುವಾದ ಈತ ಅದೇ ರಾಮ.
ಮಗಧ ದೇಶದಲ್ಲಿ, ಮಹಾಬೋಧವೆಂಬ ಪವಿತ್ರ ಸ್ಥಳದಲ್ಲಿ “ಲೋಕನಾಥ”ನಾಗಿ ಅವತರಿಸಿದವನು ಈತ.
ತನ್ನ ಭಕ್ತರನ್ನು ಹರಸಲು ಎಲ್ಲ ತ್ರಿಲೋಕಗಳಲ್ಲೂ ಸಂಚರಿಸುವವನು ಈತ.
ಮಧುರಾ ಮತ್ತು ವಾರಣಾಸಿಯಲ್ಲಿ ಕೇಶವನಾಗಿ ಈತ ನೆಲಸಿದ್ದಾನೆ.
ಗೋವರ್ಧನಗಿರಿಯಲ್ಲಿ ಈತನನ್ನು ‘ಹರಿ’ ಎಂದು ಪೂಜಿಸುತ್ತಾರೆ. ಕಂಗೊಳಿಸುವ ಹರಿದ್ರ ವರ್ಣ( ಹಸಿರುಯುಕ್ತ ಹಳದಿ) ದಲ್ಲಿ ಈತನ ಮೈಬಣ್ಣ ಗೋಚರಿಸುತ್ತಿರುತ್ತದೆ.
70. ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ
ಅನಿರ್ದೇಶ್ಯವಪುರ್ವಿಷ್ಣುಃ ವೀರೋನಂತೋ ಧನಂಜಯಃ
ಪವಿತ್ರಾತ್ಮಗಳ ಅನುಕೂಲಕ್ಕಾಗಿ, ಶಾಸ್ತ್ರಗಳ ವಿಜ್ಞಾನವಾದ ಆಗಮಗಳನ್ನು ಈತ ಸೃಷ್ಟಿಸಿದ್ದಾನೆ.
ಆಯಾ ಕಾಲದ ಅವಶ್ಯಕತೆಗೆ ತಕ್ಕಂತೆ ಈತ ವಿವಿಧ ರೂಪಗಳನ್ನು ತಳೆಯುವುದರಿಂದ, ಈತನ ಸ್ವರೂಪವನ್ನು ಕರಾರುವಕ್ಕಾಗಿ ಇದೇ ಎಂದು ವರ್ಣಿಸಲು ಸಾಧ್ಯವಿಲ್ಲ.
ಪ್ರತಿಯೊಂದು ಅಪೇಕ್ಷೆಯನ್ನು ಈಡೇರಿಸುವ ಸಲುವಾಗಿ ಈತನು ಕಾಮದೇವನ ರೂಪದಲ್ಲಿರುವ ಪರಮೇಶ್ವರ.
ಈತನೇ ವಿಷ್ಣು. ತನ್ನ ಇರುವಿಕೆಯನ್ನು ವಿಶ್ವದಾತ್ಯಂತ ವಿಸ್ತಾರಗೊಳಿಸಿದ್ದಾನೆ.
ಶಿಷ್ಟ ಜನರಿಗೆ ತೊಂದರೆಯುನ್ನುಂಟುಮಾಡುವ ದುಷ್ಟಜನರನ್ನು ಶಿಕ್ಷಿಸಲು ಬಳಸುವ ಗದೆ ಮತ್ತು ಚಕ್ರ ಇತ್ಯಾದಿ ಶಕ್ತಿಶಾಲಿ ಆಯುಧಗಳನ್ನು ಈತ ಹೊಂದಿದ್ದಾನೆ.
ಈತನೇ ಧನಂಜಯ. ತನ್ನ ಭಕ್ತರ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಈತ ಭಾರಿ ಸಂಪತ್ತನ್ನು ಸಂಗ್ರಹಿಸಿದ್ದಾನೆ.
71. ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ
ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ
ವೈಯಕ್ತಿಕವಾದ ಒಂದು ಆತ್ಮವನ್ನು ‘ಜೀವ’ ಎಂದು ಕರೆಯುತ್ತಾರೆ.
ಈತನು ಎರಡು ವಿಧಗಳಲ್ಲಿ ಆನಂದಪರನು. ತನ್ನ ಕರ್ಮಫಲಗಳನ್ನು ಅನುಭೋಗಿಸುತ್ತಾನೆ ಮತ್ತು ಜ್ಞಾನದಿಂದ ಬರುವ ಮುಕ್ತಿಯ ಲಾಭವನ್ನು ಆಸ್ವಾದಿಸುತ್ತಾನೆ.
ಆನಂದಪಡುವ ಜೀವನವನ್ನು ‘ಬ್ರಹ್ಮ’ ಎನ್ನುತ್ತಾರೆ.
ಅನುಭೋಗದ ವಸ್ತುಗಳನ್ನೂ ಸಹ ‘ಬ್ರಹ್ಮ’ ಎನ್ನುತ್ತಾರೆ.
ಆನಂದದ ಅನುಭವವನ್ನೂ ಸಹ ‘ಬ್ರಹ್ಮ’ ಎನ್ನುತ್ತಾರೆ.
ಹಾಗಾಗಿ ಅನುಭೋಗಿ, ಅನುಭೋಗದ ವಸ್ತುಗಳು ಮತ್ತು ಆನಂದದ ಅನುಭವ ಹೀಗೆ ಎಲ್ಲ ಮೂರು ಮಗ್ಗಲುಗಳನ್ನು ‘ಬ್ರಹ್ಮ’ ಎನ್ನಲಾಗುತ್ತದೆ.
ಮೇಲೆ ಹೇಳಿದ ಎಲ್ಲ ಮೂರು ಮಗ್ಗಲುಗಳನ್ನು ಒಳಗೊಂಡ ಸೃಷ್ಟಿಕ್ರಿಯೆಗೆ ಚತುರ್ಮುಖ ಬ್ರಹ್ಮನನ್ನು ಈತ ನೇಮಿಸಿದ್ದಾನೆ.
ಸೃಷ್ಟಿಕ್ರಿಯೆಯ ನಿರ್ವಹಣೆಗೆ ಬೇಕಾದ ತಪಸ್ಸು ಮತ್ತು ಧರ್ಮಗಳ ಅಭಿವೃದ್ಧಿಗೆ ಈತ ಕಾರಣೀಭೂತನಾಗಿದ್ದಾನೆ.
ಈತನೇ ಪರಬ್ರಹ್ಮ, ವೇದಗಳ ಸಹಾಯದಿಂದ ಮಾತ್ರ ನಿಲುಕಬಹುದಾದಂಥ ಪರಮಾತ್ಮ.
ವೇದಗಳು ಈತನ ಲಕ್ಷಣಗಳನ್ನು ಸ್ಪಷ್ಟವಾಗಿ ಹಾಗೂ ನಿರ್ವಿವಾದವಾಗಿ ಮಂಡಿಸಿದೆ.
ಆ ಲಕ್ಷಣಗಳನ್ನು ನಿರೂಪಿಸಲು ಈತ ಬ್ರಾಹ್ಮಣನ ಮೂಲಕ ಸ್ಪಷ್ಟಪಡಿಸಿದ್ದಾನೆ.
ವೇದಗಳನ್ನು ಅರ್ಥಮಾಡಿಕೊಂಡು ಬ್ರಾಹ್ಮಣನು ಈತನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.
ಈತ ಬ್ರಾಹ್ಮಣಪ್ರಿಯ. ವೇದಗಳ ಪಠಣ, ಮನನ ಮತ್ತು ಜ್ಞಾನ ಪ್ರಸಾರಕ್ಕೆ ಮುಡಿಪಾಗಿರುವ ಬ್ರಾಹ್ಮಣರ ಬಗ್ಗೆ ಈತನಿಗೆ ವಿಶೇಷ ಒಲವು.
72. ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ
ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿಃ
ಆತ್ಮಗಳನ್ನು ಕೆಳಸ್ತರಗಳಿಂದ, ಆತನ ಪರಂಧಾಮವಾದ ಉನ್ನತ ಸ್ತರಕ್ಕೆ ಎತ್ತರಿಸಲು ಸಹಾಯ ಮಾಡುವವನು ಈತ.
ಈತನ ಬಳಿ ಆ ಸೋಪಾನವುಂಟು.
ದೇವರಲ್ಲಿ ನಂಬಿಕೆ, ಧಾರ್ಮಿಕ ಕಾರ್ಯ, ರಾಗದ್ವೇಷಗಳಿಲ್ಲದಿರುವಿಕೆ, ಇತ್ಯಾದಿಯಾದ ಮೇಲಿರುವ ಮೆಟ್ಟಿಲುಗಳನ್ನು ಆ ಸೋಪಾನವು ಹೊಂದಿರುತ್ತದೆ.
ಆತನೊಡನೆ ಐಕ್ಯವಾಗುವ ಅನುಭವವನ್ನು ಹೊಂದಲು ಕೊನೆಯ ಮೆಟ್ಟಿಲು ಸಹಾಯ ಮಾಡುತ್ತದೆ.
ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ಆತನ ಉಜ್ವಲವಾದ ಪ್ರಭೆ ಸಹಕರಿಸುತ್ತದೆ.
ಸ್ವಾಗತ, ನಿವೇದನೆ, ಸಾಷ್ಟಾಂಗ ನಮಸ್ಕಾರ ಇತ್ಯಾದಿ ಹಲವಾರು ಉಪಚಾರಗಳ ರೂಪದಲ್ಲಿ ಈತ ನಮ್ಮ ಪೂಜೆಯನ್ನು ಸ್ವೀಕರಿಸುತ್ತಾನೆ.
ಸಾತ್ವಿಕ ಮತ್ತು ಅಹಿಂಸಾರೂಪದ ಮಹಾನೈವೇದ್ಯವನ್ನು ಈತ ಸ್ವೀಕರಿಸುತ್ತಾನೆ.
73. ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ
ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ
ಈತನು ಉನ್ನತ ಸಾಧನೆಗೆ ಅರ್ಹನು.
ಸ್ತೋತ್ರಗಳನ್ನು ಹಾಡಿದಾಗ ಈತನು ಅತ್ಯಂತ ಆನಂದತುಂದಿಲನಾಗುತ್ತಾನೆ.
ಶೇಷ, ಗರುಡ ಮತ್ತು ಬ್ರಹ್ಮ ಇತ್ಯಾದಿ ಮಹಾತ್ಮರಿಂದ ಸತತವಾಗಿ ಸ್ತುತಿಸಲ್ಪಡುತ್ತಾನೆ ಈತ.
ಪ್ರಾರ್ಥನೆ ಮತ್ತು ಆರಾಧನೆ ಮಾತ್ರದಿಂದಲೇ ಈತನನ್ನು ಹೊಂದಬಹುದಾಗಿದೆ ಹಗೂ ಎಲ್ಲ ಅಭೀಷ್ಟಗಳು ಸಿದ್ಧಿಯಾಗುತ್ತವೆ.
ಪಾಪಿಗಳನ್ನೂ ಸಹ ಪಾವನಗೊಳಿಸಿ ಅವರನ್ನು ತನ್ನ ಪ್ರಾರ್ಥನೆಗೆ ಅರ್ಹರನ್ನಾಗಿಸುತ್ತಾನೆ ಈತ.
ಸಂಸಾರವವೆಂಬ ವ್ಯಾಧಿಗೆ ಪ್ರತ್ಯೌಷಧವು ಈತ.
74. ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ
ಮನೋವೇಗಕ್ಕೆ ಸಮನಾದ ವೇಗದಲ್ಲಿ ಈತನು ಕಾರ್ಯಪ್ರವೃತ್ತನಾಗುತ್ತಾನೆ.
ಪಾವನಗೊಳಿಸುವ ಮಹತ್ತರ ಶಕ್ತಿಯುಳ್ಳ ಗಂಗೆ ಮತ್ತು ಇತರ ಪುಣ್ಯಕ್ಷೇತ್ರಗಳ ಮೂಲ ಈತನು.
ದೇವಕಿ ಮತ್ತು ವಸುದೇವರ ಪುತ್ರನಾಗಿ ಅವತರಿಸಲು ಕಾರಣವಾದ ಮೂಲ ಬೀಜ ಈತನು.
ಜಗದೊಡೆಯನ ಪಾಲಕರಾಗುವ ಸೌಭಾಗ್ಯವನ್ನು ಅವರಿಗೆ ಕರುಣಿಸಿದಾತ ಈತ.
ಕ್ಷೀರಸಾಗರವನ್ನು ತನ್ನ ವಾಸಸ್ಥಾನವನ್ನಾಗಿಸಿಕೊಂಡವನು ಈತ.
ಆದರೂಪ್ರೀತಿಯಿಂದವಸುದೇವನೊಡನೆತನ್ನಒಡನಾಟವನ್ನಿರಿಸಿಕೊಂಡವನುಈತ. ಕಂಸನಿಂದ ಮರೆಮಚಲು ಮಮತೆಯೇ ಮೂರ್ತಿವೆತ್ತಿಂತಿರುವ ನಂದ ಮತ್ತು ಯಶೋದೆಯರಿಗೆಈತನನ್ನು ಒಪ್ಪಿಸಲಾಯಿತು.
75. ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ
ಶಿಷ್ಟಜನರು ರಾಕ್ಷಸರಿಂದ ರಕ್ಷಣೆ ಪಡೆಯಲು ಈತನಲ್ಲಿ ಆಶ್ರಯ ಪಡೆಯುವರು.
ಸಂಸಾರಬಂಧನದ ಬಿಡುಗಡೆಗೆ ಸಹಾಯವಾಗುವ ಹಲವಾರು ಬಾಲ್ಯಲೀಲೆಗಳನ್ನು ಈತನು ನಮಗೆ ತೋರಿಸಿದ್ದಾನೆ.
ಸದಾಚಾರಿಗಳಿಗೆ ಗೆಳೆಯನಾಗಿ, ದೂತನಾಗಿ, ಹೀಗೆ ಹಲವು ವಿಧದಿಂದ ಅವರೊಂದಿಗೆ ತನ್ನ ಸಂಬಂಧವನ್ನು ಬೆಳೆಸಿದ್ದಾನೆ.
ಭೂಭಾರವನ್ನು ಇಳಿಸಲು ಯಾದವರು ಮತ್ತು ಪಾಂಡವರ ಸಹಾಯವನ್ನು ಈತ ಪಡೆದಿದ್ದಾನೆ.
ಯಾದವರಲ್ಲೇ ಪರಮ ಪೂಜನೀಯನು ಈತ.
ಸನಕ ಮತ್ತು ಸನಂದನರೆಂಬ ಶ್ರೇಷ್ಠ ಮುನಿವರರಿಗೆ ಈತನ ಸ್ನ್ನಿಧಾನವು ತಂಪನ್ನೆರೆಯುವ, ವಿಶ್ರಮಿಸುವ ಸ್ಥಳವಾಗಿದೆ.
ಮಹಾ ರಾಸನೃತ್ಯ, ಜಲಕ್ರೀಡೆಗಳಂತಹ ಹಲವಾರು ಮನೋಹರ ಮತ್ತು ಚಿತ್ತಾಕರ್ಷಕ ಲೀಲೆಗಳನ್ನು ಯಮುನಾ ನದಿಯ ಒಡನಾಟದಲ್ಲಿ ಈತ ಪ್ರದರ್ಶಿಸಿದ್ದಾನೆ.
76. ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋನಲಃ
ದರ್ಪಹಾ ದರ್ಪದೋ ದೃಪ್ತೋ ದುರ್ಧರೋಥಾಪರಾಜಿತಃ
ಕೃಷ್ಣಾವತಾರದಲ್ಲಿ ಜೀವನದ ಸಮಸ್ತ ಅಸ್ತಿತ್ವವುಳ್ಳ ವಸ್ತುಗಳನ್ನು ತನ್ನಲ್ಲಿಯೇ ಇರಿಸಿಕೊಂಡು ಕಾಪಾಡಿದ್ದನು.
ಮಾಯೆಯ ಪ್ರಭಾವದಿಂದ, ಇತರರಿಂದ ಈತ ಬೇರೆಯವನು ಎಂದು ಭಾವಿಸಲಾಗಿತ್ತು.
ಗೋವರ್ಧನಗಿರಿಯನ್ನು ಎತ್ತುವುದರ ಮೂಲಕ, ಇಂದ್ರ ಮತ್ತು ಇತರ ದೇವತೆಗಳ ಸೊಕ್ಕನ್ನು ಮುರಿದವನು ಈತ.
ಪಾರಿಜಾತ ಪುಷ್ಪದ ಅಪಹರಣ ಪರಿಸ್ಥಿತಿಯಲ್ಲಿ ಇದೇ ಆಯಿತು.
ದ್ವಾರಕೆಯೆಂಬ ಅಜೇಯ ನಗರವನ್ನು ನಿರ್ಮಿಸುವುದರ ಮೂಲಕ, ಯಾದವರ ಹಿರಿಮೆಯನ್ನು ವರ್ಧಿಸಲು ಸಹಾಯ ಮಾಡಿದವನು ಈತ.
ನಂದ ಮತ್ತು ಯಶೋದೆಯರಿಂದ ಲಾಲನೆ ಪಾಲನೆ ಮಾಡಿಸಿಕೊಂಡಿದ್ದಕ್ಕಾಗಿ ಹೆಮ್ಮೆ ಪಡುವಾತನು ಈತ.
ತನ್ನ ತುಂಟಾಟದಿಂದ ಮತ್ತು ಚೇಷ್ಟೆಗಳಿಂದ, ತೊದಲ್ನುಡಿಗಳಿಂದ, ನಂದ ಮತ್ತು ಯಶೋದೆಯರಿಗೆ ತನ್ನ ಮೇಲೆ ಹಿಡಿತ ಸಿಗದಂತೆ ಮಾಡಿದವನು ಈತ.
77. ವಿಶ್ವಮೂರ್ತಿರ್ಮಹಾಮೂರ್ತಿಃ ದೀಪ್ತಮೂರ್ತಿರಮೂರ್ತಿಮಾನ್
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ
ಇಡೀ ಜಗತ್ತನ್ನೇ ತನ್ನ ದೇಹವನ್ನಾಗಿ ಮಾಡಿಕೊಂಡವನು ಈತ.
ಇಡೀ ವಿಶ್ವವೇ ಈತನ ದೇಹದಲ್ಲಿ ಆಶ್ರಯಪಡೆದು, ಭವ್ಯ ನೋಟವನ್ನು ಪಡೆದಂತಿತ್ತು.
ಕೃಷ್ಣನಾಗಿ ಅವತಾರ ತಳೆದ ಮೇಲೂ ಸಹ, ವಾಸುದೇವ, ಪ್ರದ್ಯುಮ್ನ,ಅನಿರುದ್ಧ ಇತ್ಯಾದಿ ತನ್ನ ಹಿಂದಿನ ರೂಪಗಳನ್ನು ಬಿಡಲಿಲ್ಲ ಈತ.
ಬಹಳಷ್ಟು ಮಾನವ ರೂಪಗಳ ಹಿಂದೆ ಅಡಗಿಕೊಂಡಿದ್ದರೂ ಸಹ, ಅರ್ಜುನನೊಬ್ಬನನ್ನು ಬಿಟ್ಟು ಮತ್ಯಾರಿಗೂ ತನ್ನ ‘ನಿಜ ರೂಪ’ ವನ್ನು ಬಹಿರಂಗ ಪಡಿಸಲಿಲ್ಲ ಈತ.
ಅದೇ ಅಸಂಖ್ಯಾತ ಮುಖಗಳುಳ್ಳ ಈತನ “ವಿಶ್ವರೂಪ”.
78. ಏಕೋ ನೈಕಃ ಸವಃ ಕಃ ಕಿಂ ಯತ್ತತ್ಪದಮನುತ್ತಮಮ್
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ
ಈತನೇ ಏಕ. ಏಕಮೇವಾದ್ವಿತೀಯ.
ಈತನು ಸಕಾಲದಲ್ಲಿ ಅಂತರ್ಜಾತನಾಗಿರುವುದರಿಂದ “ವ” ಅಕ್ಷರದಿಂದ ಈತ ವ್ಯಕ್ತನಾಗುತ್ತಾನೆ.
ತನ್ನ ಭಕ್ತರ ಮೇಲೆ ಜ್ಞಾನ ಮತ್ತು ಧರ್ಮನಿಷ್ಠೆಯನ್ನು ದಯಪಾಲಿಸಿ, ಅದರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾನೆ ಈತ.
ಭಕ್ತರು ಹೊಂದಬಹುದಾದ ಅತ್ಯುನ್ನತ ಸ್ಥಿತಿಯೇ ಈತ.
‘ಮಾ’ ಅಂದರೆ ಲಕ್ಷ್ಮಿಯೊಂದಿಗೆ ಕೂಡಿ ವಿಶ್ವಪಾಲಕನೆಂಬ ಅಸಾಧಾರಣ ಬಂಧುತ್ವವನ್ನು ಸ್ಥಾಪಿಸಿದ್ದಾನೆ ಈತ.
ತನ್ನೆಲ್ಲ ಭಕ್ತರೊಂದಿಗೆ ಪ್ರೀತಿಯಿಂದ, ವಾತ್ಸಲ್ಯದಿಂದ ಬಂಧಿತನಾಗಿದ್ದಾನೆ ಈತ.
79. ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ
ಈತನ ಉಜ್ವಲ ಸ್ವರೂಪವು ಅಚ್ಚ ಬಂಗಾರದ ಲಕ್ಷಣವ್ಳ್ಳದ್ದಾಗಿದೆ.
ಈತನ ಶರೀರವು ದೈವಿಕವಾದ ಸತ್ವಗುಣದಿಂದ ತುಂಬಿದೆ.
ದೈವಿಕ ಚಿಹ್ನೆಗಳಿಂದೊಡಗೂಡಿದ ಈತನ ಶರೀರವು ದೇವಕಿಗೆ ದೊರೆತ ವರವಾಗಿದೆ.
ಆಕೆಯ ಮುದ್ದಿನ ಕೂಸು ಈತ.
ಭಕ್ತರಿಗೆ ಈತನ ದರ್ಶನವು ಆನಂದಕಾರಕವು, ಆದರೆ ಈತನ ಶತ್ರುಗಳಿಗೆ ಭಯಕಾರಕವು.
ಗೋಪಾಲಕರ ಮನೆಗಳಲ್ಲಿ ದೊರೆಯುವ ಬೆಣ್ಣೆ, ಮೊಸರನ್ನು ತಿನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಾನೆ ಈತ.
ಮಹಾಭಾರತ ಯುದ್ಧದಲ್ಲಿ ತಾನು ಯಾವುದೇ ಆಯುಧಗಳನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದರೂ ಸಹ, ಪಾಂಡವರಿಗಾಗಿ, ಅವರ ಗೆಲುವಿಗಾಗಿ ತನ್ನ ಮಾತಿನಿಂದ ಹಿಂದೆ ಸರಿಯುತ್ತಾನೆ ಈತ.
80. ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃತ್
ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ
ತನ್ನ ಭಕ್ತರಿಗೆ ಸಹಾಯಮಾಡಲು ಸ್ವಪ್ರತಿಷ್ಠೆಯಾಗಲೀ, ಗರ್ವವಾಗಲೀ ತೋರುವುದಿಲ್ಲ ಈತ.
ಅರ್ಜುನನ ಸಾರಥಿಯಾಗಿ, ಆವನಿಗೆ ಸಕಲ ಮರ್ಯಾದೆಗಳನ್ನುತೋರಿದವನು ಈತ.
ಮೂರು ಲೋಕಗಳ ಒಡೆಯನಾಗಿ, ಆ ಲೋಕಗಳ ಆಧಾರಸ್ತಂಭ ಮತ್ತು ಬೆನ್ನೆಲುಬಾಗಿರುವಾವನು ಈತ.
ಈತನನ್ನು ಮಗನಾಗಿ ಪಡೆಯಲು ಬಯಸಿ ದೇವಕಿಯು ವ್ರತವನ್ನಚರಿಸಿದಳು.
ವ್ರತವನ್ನು ಯಜ್ಞವೆಂದು ಭಾವಿಸುವುದಾದರೆ, ಈತನ ಜನನವು ಯಜ್ಞಫಲವೇ ಸರಿ.
ಯಾದವರ ಬಗ್ಗೆ ನಿಜವಾದ ವಾತ್ಸಲ್ಯ ಹೊಂದಿರುವ ಈತ ಗೋವರ್ಧನಗಿರಿಯನ್ನು ಮೇಲೆತ್ತಿ ತನ್ನ ಬೆರಳಿನಿಂದ ಆಧರಿಸಿ ಹಿಡಿದನು.
81. ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂ ವರಃ
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ
ಸಜ್ಜನರ ಮೇಲೆ ಸದಾ ತನ್ನ ಕೃಪಾಕಟಾಕ್ಷವನ್ನು ಹರಿಸುತ್ತಾನೆ ಈತ.
ಚಿಕ್ಕವನಾಗಿದ್ದಾಗಲೇ, ಇಂದ್ರನ ತೇಜೋವಧೆ ಮಾಡುವಂತಿತ್ತು ಈತನ ತೇಜಸ್ಸು.
ನರಕಾಸುರ ಮತ್ತು ಜರಾಸಂಧರ ವಿರುದ್ಧ ನಡೆಸಿದ ಯುದ್ಧದಲ್ಲಿ ಈತ ಹಲವಾರು ಬಗೆಯ ಅಸ್ತ್ರಗಳನ್ನು ಪ್ರಯೋಗಿಸಿದ್ದನು.
ಸಾರಥಿಯಾಗಿ, ಅರ್ಜುನನ್ನು ತನ್ನ ಹತೋಟಿಗೆ ತೆಗೆದುಕೊಂಡು ಆತನನ್ನು ಯೋಗದೆಡೆಗೆ ಮುನ್ನಡೆಸಿದನು, ಈತ.
ಸಾರ್ಥಿಯಾಗಿ ತನ್ನ ಅಪೂರ್ವ ಪ್ರಾವೀಣ್ಯತೆ, ಚಾಕಚಕ್ಯತೆಯನ್ನು ಪ್ರದರ್ಶಿಸಿ ಶತೃಗಳಿಗೆ ಅಪಾರ ಘಾಸಿಯನ್ನುಂಟುಮಾಡಿ ಶಿಕ್ಷೆ ವಿಧಿಸಿದನು.
ಈತ ಗದಾಗ್ರಜ. ವಸುದೇವನಿಗೆ, ಸುನಾಮ ಎಂಬ ಪತ್ನಿಯಿಂದ ಜನಿಸಿದ ಗದ ಎಂಬ ಮಗನಿಗೆ ವರಸೆಯಲ್ಲಿ ಅಣ್ಣನಾಗಿದ್ದಾನೆ ಈತ.
82. ಚತುರ್ಮೂರ್ತಿಶ್ಚತುರ್ಬಾಹುಃ ಚತುರ್ವ್ಯೂಹಶ್ಚತುರ್ಗತಿಃ
ಚತುರಾತ್ಮಾಚತುರ್ಭಾವಃ ಚತುರ್ವೇದವಿದೇಕಪಾತ್
ತನ್ನ ಪರಂಧಾಮದಲ್ಲಿ, ಜಗತ್ತನ್ನು ಮುನ್ನಡೆಸಲು, ನಾಲ್ಕು ವಿಧದ ವ್ಯೂಹಗಳನ್ನು ಬಳಸುತ್ತಾನೆ ಈತ. ಚತುರ್ವ್ಯೂಹ ಎಂದು ಇದನ್ನು ಕರೆಯಲಾಗುತ್ತದೆ.
ಈ ವ್ಯೂಹವನ್ನು ಬಳಸಲು ಜ್ಞಾನ, ಶಕ್ತಿ, ಬಲ,ಐಶ್ವರ್ಯ, ವೀರ್ಯ, ಮತ್ತು ತೇಜಸ್ಸು ಎಂಬ ಆರು ಮಹಾನ್ ಸಾಮರ್ಥ್ಯಗಳನ್ನು ಈತ ಹೊಂದಿದ್ದಾನೆ.
ಕೃಷ್ಣನಾಗಿ ಮಾನವರೂಪದಲ್ಲಿ ಅವತಾರವೆತ್ತಿದಾಗ, ಬಲಭದ್ರ, ವಾಸುದೇವ, ಪ್ರದ್ಯುಮ್ನ ಮತ್ತು ಅನಿರುದ್ಧ ಎಂಬ ವ್ಯಕ್ತಿಗಳ ರೂಪದಲ್ಲಿ ಆ ನಾಲ್ಕು ವ್ಯೂಹಗಳ ವಿಷಯಾಂಶವನ್ನು ಪ್ರಕಟಿಸಿದ್ದಾನೆ.
ಅವರವರ ಸಾಮರ್ಥ್ಯಕ್ಕನುಗುಣವಾಗಿ, ಯೋಗಿಗಳು ಆತನನ್ನು ಹೊಂದಲು ಈತನ ರೂಪ ನಾಲ್ಕು ಸ್ತರಗಳದ್ದಾಗಿದೆ.
ಯಾರು ವೇದಗಳ ಮೇಲೆ ಪ್ರಭುತ್ವ ಹೊಂದಿರುವರೋ, ಅವರು ಈತನ ಮಹಾಶಕ್ತಿಯ ಇಣುಕು ನೋಟವನ್ನು ಮಾತ್ರ ಕಾಣಬಲ್ಲರು.
83. ಸಮಾವರ್ತೋ ನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ
ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ
ಇಡೀ ಬ್ರಹ್ಮಾಂಡವನ್ನು ಹರಡಿಕೊಳ್ಳುವ ಸಲುವಾಗಿ ಈತ ತನ್ನ ದಿವ್ಯ ತೇಜಸ್ಸನ್ನು ಪಸರಿಸುತ್ತಾನೆ.
ಮನುಷ್ಯರ ಬಲದಿಂದಾಗಲೀ,ಅಥವಾ ದೇವತೆಗಳ ಶಕ್ತಿಯಿಂದಾಗಲೀ, ಈತನನ್ನು ಸ್ವಧೀನಪಡಿಸಿಕೊಳ್ಳಲು ಆಗುವುದಿಲ್ಲ.
ಈತನು ಅತಿಕ್ರಮಿಸಲಾಗದವನು. ಈತನ ಪಾದಗಳಿಗೆ ಶರಣಾಗದೆ ಗತ್ಯಂತರವಿಲ್ಲ.
ತಮ್ಮ ಮನಸ್ಸು ಮತ್ತು ಇಂದ್ರಿಯಗಳ ಮೇಲೆ ನಿಯಂತ್ರಣವಿಲ್ಲದವರಿಂದ ಈತನನ್ನು ಸಾಕ್ಷಾತ್ಕರಿಸಿಕೊಳ್ಳಲು ಆಗುವುದಿಲ್ಲ.
ಅಜ್ಞಾನದ ಪದರಗಳು ಸುತ್ತುವರಿದಿರುವುದರಿಂದ, ಈತನನ್ನು ತಲುಪುವುದು ಸುಲಭವಲ್ಲ.
ಈತನು ಬುದ್ಧನಾಗಿ ಅವತರಿಸಿ, ದುಷ್ಟ ಬುದ್ಧಿಯುಳ್ಳ ಮನುಷ್ಯರನ್ನು ನಾಶಮಾಡುತ್ತಾನೆ.
84. ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ
ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ
ಅತ್ಯಂತ ಚಿತ್ತಾಕರ್ಷಕ ರೂಪವನ್ನು ಹೊಂದಿರುವಾತ ಈತ.
ಮೋಕ್ಷವನ್ನೊಳಗೊಂಡ ಪುರುಷಾರ್ಥಗಳನ್ನು ಸಿದ್ಧಿಸಿಕೊಳ್ಳಲು ಬೇಕಾದ ನ್ಯಾಯಸಮ್ಮತ ಹಾದಿಯನ್ನು ಅನುಸರಿಸುವುದೇ ಜೀವನದ ಸಾರಾಂಶ ಎಂಬುದಾಗಿ ಈತ ತಿಳಿಹೇಳುತ್ತಾನೆ.
ಸಂಸಾರವೆಂಬ ಮೋಹಜಾಲದಿಂದ ಹೊರಬಂದು ಈತನಲ್ಲಿ ಆಶ್ರಯ ಪಡೆಯಬಯಸುವವರನ್ನು ಈತ ರಕ್ಷಿಸುತ್ತಾನೆ.
ಧರ್ಮಶಾಸ್ತ್ರದ ಹಾದಿಯಿಂದ ಅತ್ತಿತ್ತ ಸರಿಯದೆ ಇರುವ ಈತ ಅತ್ಯಂತ ದಯಾಮಯಿ.
ಒಳ್ಳೆಯ ನಡತೆ, ಸಚ್ಚಾರಿತ್ಯದ ಬಗೆಗೆ ಈತನ ಬೋಧನೆಗಳು ಒತ್ತು ನೀಡುತ್ತವೆ.
85. ಉಧ್ಭವಃ ಸುಂದರಃ ಸುಂದೋ ರತ್ನನಾಭಸ್ಸುಲೋಚನಃ
ಅರ್ಕೋ ವಾಜಸನಃ ಶ್ರುಂಗೀ ಜಯಂತಃ ಸರ್ವವಿಜ್ಜಯೀ
ತನ್ನ ಉಪದೇಶಗಳಿಂದ, ಬೋಧನೆಗಳಿಂದ, ಪ್ರಾಪಂಚಿಕ ಜೀವನದ ಬಲೆಯಿಂದಾಚೆಗೆ ಬಲುದೂರ ನಿಲ್ಲುತ್ತಾನೆ ಈತ.
ತನ್ನ ಅತ್ಯಂತ ಮನಮೋಹಕ ದೃಗ್ಗೋಚರ ನಿಲುವಿನಿಂದ ತನ್ನ ಎದುರಾಳಿಗಳ ಹೃದಯವನ್ನು ಮೃದುವಾಗಿಸುತ್ತಾನೆ.
ವಿದ್ವತ್ತಿನಿಂದ ಕೂಡಿದ ಈತನ ನಾಭಿಯು, ಈತನ ಉದರಪ್ರದೇಶದಲ್ಲಿ ರತ್ನದಂತೆ ಹೊಳೆಯುತ್ತದೆ.
ಈತನ ಹೊಳೆಯುವ ಕಣ್ಣುಗಳು, ಸದ್ಗುಣಶೀಲರ ಹೃದಯವನ್ನು ಸೆರೆಹಿಡಿಯುತ್ತವೆ.
ಧರ್ಮದ ಹಾದಿಗೆ ಬದ್ಧನಾಗಿರುವುದಕ್ಕಾಗಿ ಈತನನ್ನು ಬಹಳವಾಗಿ ಶ್ಲಾಘಿಸಲಾಗುತ್ತದೆ.
ಅಹಿಂಸೆಯ ಸಿದ್ಧ್ಹಂತವನ್ನು ಸಂಕೇತಿಸುವ ಸಲುವಾಗಿ ಗರಿಗಳ ಗುಚ್ಛವನ್ನು ಈತ ಕೈಯಲ್ಲಿ ಹಿಡಿದಿರುತ್ತಾನೆ.
ಮುಕ್ತಿಯನ್ನು ಪಡೆಯಲು ಸಹಾಯಕವಾದ ಉತ್ತಮ ನಡೆತೆಯ ಬಗ್ಗೆ ಈತನು ಒತ್ತಿ ಹೇಳುತ್ತಾನೆ.
ಉನ್ನತ ವಿದ್ವಾಂಸರೊಡನೆ ವಗ್ವಾದ ಮಾಡಿ ಅವರನ್ನು ಸುಲಭವಾಗಿ ಜಯಿಸುತ್ತಾನೆ ಈತ.
86. ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ
ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ
ಇತರರಿಗೆ ಮನದಟ್ಟು ಮಾಡಿಸಲು, ಬಲು ಮನಮೋಹಕ ಮತ್ತು ಚತುರತೆಯಿಂದ ಕೂಡಿದ ಪದಜ್ಞಾನವನ್ನು ಈತ ಉಪಯೋಗಿಸುತ್ತಾನೆ. ಏಕೆಂದರೆ ಈತ ಸರ್ವಶಕ್ತ.
ತನ್ನ ವಿಚಾರಧಾರೆಗಳಲ್ಲಿ, ತನ್ನ ದೃಷ್ಟಿಕೋನದಲ್ಲಿ ಈತ ಅಚಲನಾಗಿರುತ್ತಾನೆ ಹಾಗೂ ಧೃಢವಾಗಿರುತ್ತಾನೆ.
ತನ್ನ ಮಾತಿನ ಸಾಮರ್ಥ್ಯದಿಂದ, ವಾದ ಕೌಶಲದಿಂದ, ಮಹಾನ್ ವಾಗ್ಗೇಯಕಾರನಾದ ಬ್ರಹ್ಮನಂತಹವರ ಮೇಲೆ ಪ್ರಭುತ್ವ ಸಾಧಿಸುತ್ತಾನೆ.
ಈತ ಆಳವಾದ ಸರೋವರದಂತೆ. ಸಜ್ಜನರು, ಜ್ಞಾನಿಗಳು ಈ ಸರೋವರದಲ್ಲಿ ಒಂದು ಮುಳುಗು ಹಾಕಿದರೆ, ಅವರಿಗೆ ತೃಪ್ತಿ ದೊರಕುತ್ತದೆ.
ಈತ ದುಷ್ಟಜನರನ್ನು ಆಳವಾದ ಭಯಂಕರ ನರಕಕ್ಕೆ ತಳ್ಳುತ್ತಾನೆ.
ಆದರೆ ಯಾರು ಈತನ ಅನುಭೂತಿಯನ್ನು ಹೊಂದುತ್ತಾರೆಯೋ, ಅವರು ಈತನ ಕೃಪೆಗೆ ಪಾತ್ರರಾಗಿ, ಅಮೂಲ್ಯ ಸಂಪತ್ತಿನಂತೆ ಈತನಿಂದ ಆದರಿಸಲ್ಪಡುತ್ತಾರೆ.
87. ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋನಿಲಃ
ಅಮೃತಾಂಶೋಮೃತವಪುಃ ಸರ್ವಜ್ಞಃ ಸರ್ವತೋಮುಖಃ
ಪ್ರಕೃತಿಯ ಮಡಿಲಲ್ಲಿ, ಸಾಧುಜನರ ಸಂಗದಲ್ಲಿ ಈತ ಅತ್ಯಾನಂದವನ್ನು ಪ
ಡೆಯುತ್ತಾನೆ.
ಜ್ಞಾನ ಮತ್ತು ನಿರ್ವಿಕಾರತೆಯನು ಪಡೆಯುವಲ್ಲಿ ಸಫಲತೆಯನ್ನು ಸಾಧಿಸಿದವರನ್ನು, ಮಲ್ಲಿಗೆ ಹೂವಿನಂತಹ ಪರಿಶುದ್ಧನಾದ ಈತನು ಹರಸುತ್ತಾನೆ. ಆಧ್ಯಾತ್ಮಿಕ, ಅಧಿದೈವಿಕ ಮತ್ತು ಅಧಿಭೌಧಿಕ ಎಂಬ ಮೂರುವಿಧದ ವಿಪತ್ತುಗಳಿಂದಾದ “ತಾಪತ್ರಯ” ಎನ್ನುವ ಮುಮ್ಮಡಿ ತಾಪವನ್ನು ತಣಿಸುವವನು ಈತ. ಅಮೃತವೇ ಮೂರ್ತಿವೆತ್ತಂತಿರುವ ಈತನು ತನ್ನ ಭಕ್ತರು ತನ್ನ ಸುಶೀಲ ಸ್ವಭಾವದ ಅಮೃತವನ್ನು ಅನುಭವಿಸಿ, ಆನಂದವನ್ನು ಪಡೆಯುವಂತೆ ಮಾಡುವನು.
ತನ್ನ ಭಕ್ತರು ಅವರಿಂದಾಗುವ ಯಾವುದೇ ಮಾರ್ಗದಿಂದಾಗಲೀ, ಪಢದಿಂದಾಗಲೀ ತನ್ನನ್ನು ಸೇರಲು ಬೇಕಾದ ಸುಲಭ ಸಾಧನವನ್ನು ಈತ ದಯಪಾಲಿಸುತ್ತಾನೆ.
88. ಸುಲಭಃ ಸುವೃತಃ ಸಿದ್ಧಃ ಶತ್ರುಜಿಚ್ ಛತ್ರುತಾಪನಃ
ನ್ಯಗ್ರೋಧೋದುಂಬರೋಶ್ವತ್ಥಃ ಚಾಣೂರಾಂಧ್ರನಿಷೂದನಃ
ಚಂದನಾದಿಗಳನ್ನು ಅರ್ಪಿಸಿ, ಉತ್ತರೀಯವನ್ನು ಹಿಡಿದು ತನ್ನ ಮನೆಗೆ ಬರುವಂತೆ ಆತನನ್ನು ಎಳೆದೊಯ್ದು ಕುಬ್ಜಳಿಗೆ ಒಲಿದಂತೆ, ಸಣ್ಣ ಪುಟ್ಟ ಕಾಣಿಕೆಗಳ ಅರ್ಪಣೆಗೆ, ಭಕ್ತರು ಈತನನ್ನು ಸುಲಭವಾಗಿ ಭಕ್ತಿಯಿಂದ ಒಲಿಸಿಕೊಳ್ಳಬಹುದಾಗಿದೆ.
ಈತನ ಪರಂಧಾಮದ ನಿಜವನ್ನು ಅರಿತವರಿಗೆ, ಸುಲಭವಾಗಿ ಈತನನ್ನು ಹೊಂದಬಹುದಾಗಿದೆ.
ಒಮ್ಮೊಮ್ಮೆ ತನ್ನ ಭಕ್ತರಲ್ಲಿ ಈತನ ದಿವ್ಯ ಪ್ರಭೆಯನ್ನು ತುಂಬಿ, ಅವರ ಮೂಲಕ, ದೈವಿಕ ಕಾರ್ಯಗಳಿಗೆ ವಿಘ್ನ ಉಂಟುಮಾಡುವವರನ್ನು ಶಿಕ್ಷಿಸುತ್ತಾನೆ.
ನ್ಯಗ್ರೋಧ(ಆಲ) ಮತ್ತು ಔದುಂಬರ(ಅತ್ತಿ) ಇವು ಎರಡು ಬಗೆಯ ವೃಕ್ಷಗಳು. ಅವುಗಳನ್ನು ಸಂಕೇತಗಳಾಗಿ ಉಪಯೋಗಿಸಲಾಗುತ್ತದೆ. ಆಲದ ಮರವು ಭಗವಂತನ ಕೃಪೆ ಮತ್ತು ಪ್ರಸಾದಕ್ಕೆ ಸಂಕೇತ. ಅತ್ತಿಯ ಮರವು ಲಕ್ಷ್ಮಿಯ ಜತೆಯಲ್ಲಿರುವ ಈತನ ಪರಂಧಾಮದ ಸಂಕೇತ.
ಅಶ್ವತ್ಥ(ಅರಳಿ) ಎಂಬುದು ಮತ್ತೊಂದು ಮರ. ಇಂದಿಗೆ ಇರುವುದು ಆದರೆ ನಾಳೆಗೆ ಇರದಿರುವುದು ಎಂದು ಇದರರ್ಥಽಅತನನ್ನು ಬಿಟ್ಟು ಉಳಿದೆಲ್ಲವೂ ಅಶಾಶ್ವತ ಎಂಬುದರ ಸಂಕೇತವಾಗಿದೆ, ಅರಳಿಮರ.
ಶ್ರೀ ಕೃಷ್ಣನನ್ನು ಕೊಲ್ಲಲು ಕಂಸನು ಕಳುಹಿಸಿದ ಮಲ್ಲ ಮತ್ತು ಚಾಣೂರರೆಂಬ ಇಬ್ಬರು ಕುಸ್ತಿಪಟುಗಳನ್ನು ಈತ ಸಂಹರಿಸಿದನು.
89. ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ
ಅಮೂರ್ತಿರನಘೋಚಿಂತ್ಯೋ ಭಯಕೃದ್ಭಯನಾಶನಃ
ಸುಡುವುದು, ಕುದಿಸುವುದು ಒಣಗಿಸುವುದು, ಬೆಳಕು ನೀಡುವುದು ಇತ್ಯಾದಿ ಉಪಯುಕ್ತಕರ ಗುಣಗಳನ್ನು ಈತನು ಸೂರ್ಯನಿಗೆ ದಯಪಾಲಿಸಿದ್ದಾನೆ.
ತನ್ನ ಏಳು ನಾಲಿಗೆಗಳ ಮೂಲಕ ಹವಿಸ್ಸನ್ನು, ಹೋಮವನ್ನೂ ಸ್ವೀಕರಿಸಿ, ಅದನ್ನು ಆಯಾ ದೇವತೆಗಳಿಗೆ ತಲುಪಿಸುವ ಅಗ್ನಿದೇವ ಈತ.
ಏಳು ವಿಧದ ಯಜ್ಞಗಳು ಜ್ವಲಿಸಲು ಬೇಕಾದ ಏಳು ಪ್ರಕಾರದ ಸಮಿಧೆಗಳನ್ನು ಹೊಂದಿದ್ದಾನೆ ಈತ.
ಸೂರ್ಯನ ರಥವನ್ನೆಳೆಯಲು ಬೇಕಾದ ಏಳು ಅಶ್ವಗಳನ್ನು ಹೊಂದಿದ್ದಾನೆ ಈತ.
ತನ್ನ ಕರ್ಮಗಳಿಂದ ಈತನು ಪ್ರಭಾವಿತನಾಗಿಲ್ಲ. ಆದ್ದರಿಂದ ಯಾವುದೇ ಪಾಪಗಳು ಈತನನ್ನು ಸೋಕಲಾರದು.
ಕಲ್ಪನಾ ಶಕ್ತಿಗೆ ಅತೀತನಾದವನು ಈತ.
ಈತನ ಆದೇಶಗಳನ್ನು ಪಾಲಿಸದವರಲ್ಲಿ, ಈತ ಭೀತಿಯನ್ನು ಹುಟ್ಟಿಸುತ್ತಾನೆ.
ಯಾರು ಈತನ ಆದೇಶಗಳನ್ನು ಪಾಲಿಸುವರೋ, ಅವರು ಯಾವುದೇ ರೀತಿಯ ಭಯದಿಂದ ಮುಕ್ತರಾಗಿರುತ್ತಾರೆ.
90. ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್
ಅಧೃತಸ್ವಧೃತಸ್ವಾಸ್ಯಃ ಪ್ರಾಗ್ವಾಮ್ಷೋ ವಂಶವರ್ಧನಃ
ಈತನು ಎಷ್ಟು ಸೂಕ್ಷ್ಮರೂಪಿಯೆಂದರೆ, ಅಣುವಿನೊಳಗೆ ಹುದುಗಬಲ್ಲನು.
ಹಾಗೆಯೇ ದೈತ್ಯರಲ್ಲಿಯೇ ದೈತ್ಯ ಈತ.
ಯಾವುದೇ ಅಡೆತಡೆಯಿಲ್ಲದೆ ಈತನು ಎಲ್ಲಿ ಬೇಕಾದರೂ ಸಂಚರಿಸಬಲ್ಲನು.
ಒಂದೇ ಸ್ಥಳದಲ್ಲಿ ಸ್ಥಿರವಾಗಿದ್ದುಕೊಂಡು, ಈತನು ಯಾವುದನ್ನು ಬೇಕಾದರೂ ಸಂಪರ್ಕಿಸಬಲ್ಲನು.
ಈತನ ಶಕ್ತಿಯ ಪ್ರಾಬಲ್ಯ ಎಷ್ಟಿದೆಯೆಂದರೆ, ಬರಿಯ ಸಂಕಲ್ಪ ಮಾತ್ರದಿಂದಲೇ, ತನ್ನ ಗುಣಲಕ್ಷಣವನ್ನು ತನಗೆ ಬೇಕಾದ ಎಡೆಯಲ್ಲಿ ತೊಡಗಿಸಿ ಅದನ್ನು ಸಂರಕ್ಷಿಸಬಲ್ಲನು.
ಈತನು ಮನಸ್ಸುಗಳೊಳಗೆ ಪ್ರವೇಷಿಸಿ ಅವುಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಲ್ಲನು.
ಈತನಿಗೆ ಅದ್ಭುತ ಶಕ್ತಿಯಿದೆ.
ಈತನನ್ನು ಯಾರೂ ನಿಗ್ರಹಿಸಲಾಗುವುದಿಲ್ಲ ಹಾಗೂ ನಿರ್ಬಂಧಿಸುದಕ್ಕಾಗುವುದಿಲ್ಲ.
ಮುಕ್ತಿಯನ್ನು ಹೊಂದಿದ ಆತ್ಮಗಳನ್ನು ಉನ್ನ್ತ ಸ್ಥಾನದಲ್ಲಿರಿಸಿ, ಅವುಗಳನ್ನು ತನ್ನ ಸ್ವಂತ ಮಕ್ಕಳಂತೆ ಆದರಿಸುತ್ತಾನೆ.
91. ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವ ಕಾಮದಃ
ಆಶ್ರಮಃ ಶ್ರಮಣಃ ಕ್ಷಾಮಃ ಸುಪರ್ಣೋ ವಾಯುವಾಹನಃ
ಮುಕ್ತಿಹೊಂದಿದ ಆತ್ಮಗಳನ್ನು ತನ್ನ ವಾಸಸ್ಥಾನಕ್ಕೆ ಕರೆದೊಯ್ಯುವ ಸಂಪೂರ್ಣ ಜವಾಬ್ದಾರಿಯನ್ನು ಈತ ಹೊತ್ತಿರುತ್ತಾನೆ.
ಶಾಸ್ತ್ರಗಳಲ್ಲಿ ಈತನ ಈ ಕಾಯಕಕ್ಕೆ ಉತ್ತಮ ಶ್ಲಾಘನೆ ಇದೆ.
ಸಂಭಾವ್ಯವೇ ಇಲ್ಲದ ವಸ್ತುವನ್ನು, ಸಂಭವಗೊಳಿಸುವುದು ಈತನ ಅತಿಶಯವಾಗಿದೆ.
ಸನಕ ಮತ್ತು ಸನಂದನರಂತಹ ಯೋಗಿಗಳ ಮಾರ್ಗದರ್ಶಿ ಈತ.
ತಮ್ಮ ಯೋಗಾಭ್ಯಾಸದಿಂದ ಹೊರಬಿದ್ದಂಥ ಭಕ್ತರಿಗೆ ಸಹಾಯ ಮಾಡುತ್ತಾನೆ ಈತ ಮತ್ತು ಅವರ ಕೋರಿಕೆಗಳನ್ನು ನೆರವೇರಿಸುತ್ತಾನೆ.
ಅಂಥವರಿಗೆ ವೈಷ್ಣವ ನಿವಾಸಗಳಲ್ಲಿ ಸ್ಥಳ ದೊರಕಿಸಿಕೊಟ್ಟು, ಅವರ ಯೋಗಾಭ್ಯಾಸವನ್ನು ಪುನರ್ ಪ್ರಾರಂಭಿಸಲು ಸಹಾಯ ಮಾಡುತ್ತಾನೆ ಈತ.
ಅವರಿಗೆ ಸಮಾಧಿ ಸ್ಥಿತಿಯಲ್ಲಿನ ಅನುಭವ ದೊರೆತು, ಅದರಲ್ಲಿ ಆಸಕ್ತಿ ಬೆಳೆದ ನಂತರ, ಅವರನ್ನು ಅಜ್ಞಾನದ ಅಂಧಕಾರದ ಆಚೆಗಿನ ಇನ್ನೊಂದು ಬದಿಗೆ ಸೇರಿಸುವಂತೆ ಗರುಡನಿಗೆ ಆದೇಶ ನೀಡುತ್ತಾನೆ ಈತ.
92. ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ
ಅಪರಾಜಿತಸರ್ವಸಹೋ ನಿಯಂತಾ ನಿಯಮೋ ಯಮಃ
ಈತ ಒಂದು ಬಿಲ್ಲನ್ನು ಹೊಂದಿದ್ದು, ಅದರ ಸಹಾಯದಿಂದ, ತನ್ನ ಭಕ್ತರನ್ನು ವಿಧವಿಧದ ತೊಂದರೆ, ಸಂಕಷ್ಟಗಳಿಂದ ರಕ್ಷಿಸುತ್ತಾನೆ.
ಧನುರ್ವೇದದ ವ್ಯಾಖ್ಯಾನಕಾರ ಈತ.
ರಾವಣ ಮುಂತಾದ ರಾಕ್ಷಸರನ್ನು ಶಿಕ್ಷಿಸಲು, ಈತ ಧರ್ಮದ ದಂಡಸಂಹಿತೆಯನ್ನು ಅಮಲುಗೊಳಿಸುತ್ತಾನೆ.
ತನ್ನ ಆಡಳಿತದಲ್ಲಿ, ವಿವಿಧ ದೇವತೆಗಳನ್ನು, ನಿರ್ದಿಷ್ಟ ಅಧಿಕಾರದೊಂದಿಗೆ, ಭಕ್ತರ ಅಭಿಲಾಷೆಗಳನ್ನು ಈಡೇರಿಸಲು ನಿಯಮಿಸಿದ್ದಾನೆ.
ಯಮ ಮತ್ತು ಇತರ ದೇವತೆಗಳನ್ನು ತನ್ನ ಸ್ವಧೀನದಲ್ಲಿ ಇರಿಸಿಕೊಂಡಿದ್ದಾನೆ ಈತ.
93. ಸತ್ತ್ವವಾನ್ ಸಾತ್ವಿಕಃ ಸತ್ಯಃ ಸತ್ಯ ಧರ್ಮಪರಾಯಣಃ
ಅಭಿಪ್ರಾಯಃ ಪ್ರಿಯಾರ್ಹೋರ್ಹಃ ಪ್ರಿಯಕೃತ್ ಪ್ರೀತಿವರ್ಧನಃ
ತೇಜಸ್ಸು, ಕ್ರಿಯಾಸೂಕರ್ಯ, ಸಂತೋಷ ಮತ್ತು ಸಮೃದ್ಧಿ ಇತ್ಯಾದಿ ಗುಣಗಳುಳ್ಳ “ ಸತ್ವ”ವನ್ನು ನಿಯಂತ್ರಿಸಿ, ಕೊನೆಗೆ ಮೋಕ್ಷಕ್ಕೆ ದಾರಿ ತೋರಿಸುವಾತ ಈತ.
“ಸತ್ವ”ವು ಈತನಲ್ಲಿ ಮನೆಮಾಡಿದೆ ಹಾಗೂ ಈತನಿಂದ ಹೊರಸೂಸುತ್ತಿದೆ.
ಸಾತ್ವಿಕ ವಿಜ್ಞಾನದ ಪ್ರಕಾರ, ಸತ್ಯವು ಈತನಲ್ಲಿ ನೆಲೆಯಾಗಿದೆ ಮತ್ತು ಸತ್ಯದಲ್ಲಿ ನೆಲೆಗೊಂಡಿದ್ದಾನೆ.
ಈತನೇ ಸತ್ಯವಾಗಿದ್ದಾನೆ ಹಾಗೆಯೇ ಈತನೇ ಧರ್ಮವಾಗಿದ್ದಾನೆ.
ಧರ್ಮಮತ್ತುಸತ್ಯಕ್ಕೆಅಂಟಿಕೊಂಡಿರುವುದರಿಂದಈತನುಧ್ಯಾನಿಸಲ್ಪಡುತ್ತಾನೆ.
ಅಂತಹ ಜನರು ಈತನಿಗೆ ಅತ್ಯಂತ ಪ್ರಿಯರು.
ಬೇರೆ ಬೇರೆ ಇಷ್ಟಾರ್ಥಗಳ ಪೂರೈಕೆಗಾಗಿ ಪ್ರಾರ್ಥಿಸುವವರನ್ನೂ ಸಹ ಈತ ಅನುಗ್ರಹಿಸುತ್ತಾನೆ.
ತದನಂತರ ಈತ ಅವರ ಮನಗಳಿಗೆ ಕವಿದಿರುವ ಮಾಯೆಯ ಮುಸುಕನ್ನು ಸರಿಸಿ, ತನ್ನ ನಿಜರೂಪವನ್ನು ಪ್ರಕಟಿಸುತ್ತಾನೆ.
94. ವಿಹಾಯಸಗತಿರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ
ಧ್ಯಾನಿಗಳೂ, ಚಿಂತಕರೂ, ಉಪಾಸನೆಯಲ್ಲಿ ಪರಾಕಾಷ್ಠೆಯನ್ನು ಹೊಂದಿದ ಮೇಲೆ ಅವರನ್ನು ತನ್ನ ಪರಂಧಾಮಕ್ಕೆ ಕರೆದೊಯ್ಯುತ್ತಾನೆ ಈತ.
ಈತನೇಅರ್ಚಿ;ಈತನ ಧಾಮದವರೆಗೂವಿಸ್ತರಿಸಿದ ಏಣಿಯ ಮೊದಲ ಮೆಟ್ಟಿಲು.
ತನ್ನ ಭಕ್ತರ ಹಾದಿಯ ಮೇಲೆ, ಸೂರ್ಯನ ಪ್ರಕಾಶಮಾನವಾದ ಕಾಂತಿಯನ್ನು ಪಸರಿಸುತ್ತಾನೆ. ನೈವೇದ್ಯದಿಂದ ದೊರಕಿದ ಅಮೃತವನ್ನು ಸ್ವೀಕರಿಸಿ, ತಿಂಗಳ ಶುಕ್ಲಪಕ್ಷದ ವರ್ಧಿಸುತ್ತಿರುವ ಚಂದ್ರನ ಬೆಳದಿಂಗಳಿನಂತೆ ಇರುವವನು ಈತ. ಆತ್ಮಗಳು ಉನ್ನತಿಗೇರುವ ಕಾಲವಾದ ಉತ್ತರಾಯಣ ಈತ.
ಆರು ತಿಂಗಳ ಕಾಲಮಾನದ, ಎರಡು ಆಯನಗಳನ್ನು ಹೊಂದಿದ ಸಂವತ್ಸರ ಈತ.
ನಿರಂತರವಾಗಿ ಗಾಳಿ ಬೀಸುವ ವಾಯುಲೋಕ ಈತ.
ಗಿಡ, ಮರ, ಬಳ್ಳಿ ಮತ್ತು ಇತರೆ ಜೀವ ಸಂಕುಲಗಳು ಅಭಿವೃದ್ಧಿ ಹೊಂದಲು ಸಹಾಯಕವಾದ ಮಳೆಯನ್ನು, ಸೂರ್ಯನ ಮುಖಾಂತರ ಈತ ಸೃಷ್ಟಿಸುತ್ತಾನೆ.
ಅದೇ ಸೂರ್ಯನ ಬೆಳಕಿನಿಂದ, ಇತರೆ ಗ್ರಹಗಳು ಪ್ರಕಾಶಿಸುವಂತೆ ಈತ ಮಾಡುತ್ತಾನೆ.
95. ಅನಂತ ಹುತಭುಗ್ಭೋಕ್ತಾ ಸುಖದೋ ನೈಕದೋಗ್ರಜಃ
ಅನಿರ್ವಿಣ್ಣಃ ಸದಾಮರ್ಷೀ ಲೋಕಾಧಿಷ್ಠಾನಮದ್ಭುತಃ
ಸಜ್ಜನರಿಂದ ಹವಿಸ್ಸನ್ನು ಸ್ವೀಕರಿಸುವ ಇಂದ್ರನು ಈತನೊಂದಿಗೆ ಇರುವನು. ಹಾಗೆಯೇ ಸರ್ವರಿಗೂ ಆಹಾರವನ್ನು ಕೊಟ್ಟು, ಅವರೆಲ್ಲರ ಯೋಗಕ್ಷೇಮ ನೋಡಿಕೊಳ್ಳೂವ ಪ್ರಜಾಪತಿಯೂ ಈತನೊಂದಿಗಿದ್ದಾನೆ.
ತನ್ನ ದೈವಿಕ ಸ್ಪರ್ಶದಿಂದಲೇ, ಪ್ರಾಪಂಚಿಕ ಜೀವನದ ವಾಸನೆಗಳನ್ನು ಈತ ನಿವಾರಿಸುತ್ತಾನೆ.
ಮುಕ್ತಿಹೊಂದಿದ ಜೀವಾತ್ಮಗಳನ್ನು ಹಾರಹಾಕಿ ಸ್ವಾಗತಿಸುವ ಅಸಂಖ್ಯಾತ ಅಪ್ಸರೆಯರು ಈತನೊಂದಿಗಿದ್ದರೆ.
ಅಂತಹ ಜೀವಾತ್ಮರಿಗೆ ಲಕ್ಷ್ಮಿಯೊಂದಿಗೆ ಇರುವ ತನ್ನ ದೈವಿಕ ಸಾನಿಧ್ಯವನ್ನು ಕರುಣಿಸಿ ಅವರನ್ನು ಸದಾ ಅತ್ಯಾನಂದದಸ್ಥಿತಿಯಲ್ಲಿರುಸುತ್ತಾನೆ ಈತ.
ಹಾಗೆಯೇ ಅವರ ಅನುಭವಕ್ಕೆಂದೇ ಇರುವ ಮತ್ತಷ್ಟು ಲೋಕಗಳು ಈತನಲ್ಲಿಯೇ ಇವೆ.
ಈತನ ಸಮಕ್ಷಮವು ನಿತ್ಯನೂತನ. ಮುಕ್ತಿ ಹೊಂದಿದ ಆತ್ಮಗಳು ಈತನ ಸಮಕ್ಷಮದ ಮಧುರ ಅನುಭವವನ್ನು ಸತತವಾಗಿ ಹೊಂದುತ್ತಿದ್ದರೂ ಸಹ ಅದು ಎಂದಿಗೂ ಕ್ಷಯವಾಗುವುದಿಲ್ಲ.
96. ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ
ಸ್ವಸ್ತಿದ: ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ
ಅನುಗಾಲವೂ ಈತನು ಪ್ರಶಂಸೆಗಳನ್ನೂ, ಪೂಜೆಗಯನ್ನೂ ಸ್ವೀಕರಿಸುತ್ತಲೇ ಇರುತ್ತಾನೆ.
ಪುರಾತನವಾದರೂ, ಈತನು ಸನಾತನನು, ನವನವೀನ ನೂತನನು.
ನೀಲ ಮೇಘದ ಮಧ್ಯಭಾಗದಲ್ಲಿ ಮಿಂಚಿನಿಂದ ಉಂಟಾದ ತೇಜಸ್ಸಿನೊಂದಿಗಿನ ಸಂಯೋಜನೆಯಂತೆ ಈತನ ಮೈ ಬಣ್ಣದ ಕಾಂತಿಯಿದೆ,
ತನ್ನ ಭಕ್ತಗಣಕ್ಕೆ ಅಪರಿಮಿತ ಮಂಗಳವನ್ನೂ, ಶುಭವನ್ನೂ ಹಾಗೂ ಅನುಗ್ರಹವನ್ನೂ ದಯಪಾಲಿಸುತ್ತಾನೆ.
ಅನುಗ್ರಹವೇ ಮೂರ್ತಿವೆತ್ತಂತಿರುವನು ಈತ.
ತನ್ನ ಭಕ್ತಗಣವು ಈ ಅನುಗ್ರಹವನ್ನು ಹೊಂದಲು ಈತನೇ ಕಾರಣಕರ್ತನು.
ಸತತವಾಗಿ ಮುಂದುವರಿಸಿ ಆತ್ಮಯಜ್ಞವನ್ನು ಆಚರಿಸುವವರಿಗೆ ವಿವಿಧ ದೈವಿಕ ರೂಪಗಳಿಂದ, ದೈವಿಕ ಶಕ್ತಿಗಳಿಂದ ಮತ್ತು ಮಂಗಳಕರ ಗುಣಗಳಿಂದ ಅವರಿಗೆ ಸಂಪೂರ್ಣ ಪ್ರತಿಫಲವನ್ನು ಕೊಡುವಾತ ಈತ.
97. ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ
ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ
ತನ್ನ ಅಭೂತಪೂರ್ವ, ಅಸಮಾನ್ಯ ಸಾಮರ್ಥ್ಯದ ಹೊರತಾಗಿಯೂ, ಈತನು ಶಾಂತಚಿತ್ತನಾಗಿ ಮತ್ತು ಅತ್ಯಂತ ಸಮಾಧಾನದ ಸ್ಥಿತಿಯಲ್ಲಿರುತ್ತಾನೆ. ಈತನ ಕಿವಿಗಳಲ್ಲಿ ಹೊಳೆಯುವ ಕರ್ಣಕುಂಡಲಗಳಿವೆ.
ಪ್ರಮುಖವಾಗಿ ಚಕ್ರವನ್ನು ಧರಿಸಿರುವ ದೈವಿಕವಾದ ಬಾಹುಗಳ ಪಂಕ್ತಿಯನ್ನು ಈತ ಹೊಂದಿದ್ದಾನೆ.
ಈತನ ಆದೇಶವನ್ನು ಬ್ರಹ್ಮ, ಇಂದ್ರಾದಿಗಳನ್ನು ಮೊದಲುಗೊಂಡು ಯಾರೂ ಉಲ್ಲಘಿಸಲಾರರು.
ಈತನ ಅಲೌಕಿಕ ಶಕ್ತಿ ಮತ್ತು ಸಾಮರ್ಥ್ಯವು, ಸಾವಿರ ನಾಲಿಗೆಯುಳ್ಳ ಅನಂತನಿಗಾಗಲೀ, ಸಹಸ್ರ ಶಾಖೆಗಳುಳ್ಳ ವೇದಗಳಿಗಾಗಲೀ ಮತ್ತು ವಾಗ್ದೇವಿಯಾದ ಸರಸ್ವತಿಗಾಗಲೀ ಎಟುಕಲಾರದಷ್ಟು ದೊಡ್ಡದಾಗಿದೆ.
ಸಂಕಷ್ಟದ ಯಾತನೆಯ ಸ್ಥಿತಿಯಲ್ಲಿ, ಗಜೇಂದ್ರನಂತಹ ಪ್ರಾಣಿಗಳು ಹೊರಡಿಸುವ ಆರ್ತನಾದವನ್ನು ಈತ ಸಹನೆಯಿಂದ ಮತ್ತು ಜಾಗ್ರತೆಯಿಂದ, ಗಮನವಿಟ್ಟು ಕೇಳಿಸಿಕೊಳ್ಳುತ್ತಾನೆ.
ತನ್ನ ಪಂಚ ಮಹಾಯುಧಗಳನ್ನು ಧರಿಸಿ, ಗಜೇಂದ್ರನನ್ನು ಉಳಿಸಲು ಈತ ಧಾವಿಸಿ ಬರುತ್ತಾನೆ.
98. ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ ಕ್ಷಮಿಣಾಂ ವರಃ
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ
ಈತನೇ ಅಕ್ರೂರ. ಈತನ ಬಳಿ ತೀಕ್ಷ್ಣ ಆಯುಧಗಳಿದ್ದರೂ ಸಹ, ಮೊಸಳೆಯನ್ನು ತಕ್ಷಣವೇ ಈತ ಕೊಳ್ಳಲಿಲ್ಲ.
ಗಜೇಂದ್ರನ ಅಸಹಾಯಕ ಮೊರೆಯನ್ನು ಕೇಳುತ್ತಿದ್ದಂತಯೇ, ತನ್ನ ಅವ್ಯವಸ್ಥಿತವಾದ ವಸ್ತ್ರಾಭರಣಗಳ ಪರಿವೆಯೇ ಇಲ್ಲದೆ ತಕ್ಷಣವೇ ಈತ ಧಾವಿಸುತ್ತಾನೆ.
ಬಂದ ಕೂಡಲೇ ಗಜೇಂದ್ರನನ್ನು ಸಂತೈಸುತ್ತಾನೆ, ತನ್ನ ಕೋಮಲ ಕೈಗಳಿಂದ ಆತನನ್ನು ಸ್ಪರ್ಶಿಸುತ್ತಾನೆ ಮತ್ತು ತನ್ನ ಅಭಯದಿಂದ ಗಜೇಂದ್ರನಮನದಲ್ಲಿದ್ದ ಭಯವನ್ನು ದೂರಮಾಡುತ್ತಾನೆ, ಈತ.
ಹಾಡಿನ ಮೂಲಕ ಕೊಂಡಾಡುವ ಗಜೇಂದ್ರ ಮೋಕ್ಷದ ಕತೆ, ಕೇಳುಗರನ್ನು ಪುನೀತರನ್ನಾಗಿಸುತ್ತದೆ.
99. ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ
ವೀರಹಾ ರಕ್ಷಣಸ್ಸಂತೋ ಜೀವನಃ ಪರ್ಯವಸ್ಥಿತಃ
ಪಿತೃ ವಾತ್ಸಲ್ಯ ಮತ್ತು ಮಮತೆಯಿಂದ ಗಜೇಂದ್ರನ ಪರವಾಗಿ ನಿಲ್ಲುತ್ತಾನೆ ಈತ.
ತನ್ನ ಭಕ್ತನಾದ ಗಜೇಂದ್ರನಿಗೆ ಹಿಂಸೆ ನೀಡಿದ ಮೊಸಳೆಯನ್ನು ಶಿಕ್ಷಿಸಿದ್ದಾನೆ ಈತ.
ತನ್ನ ಭಕ್ತನನ್ನು ಪೀಡಿಸಿದಂತಹ ಮೊಸಳೆಯನ್ನು ಸಂಹರಿಸಿದ್ದಾನೆ ಈತ.
ಗಜೇಂದ್ರ ಮತ್ತು ಮೊಸಳೆ ಇಬ್ಬರನ್ನೂ ಆ ಸರೋವರದಿಂದ ರಕ್ಷಿಸಿದ್ದಾನೆ ಈತ.
ಆದರೆ ಈತನೆಷ್ಟು ಕರುಣಾಮಯಿ ಎಂದರೆ, ಆ ಮೊಸಳೆಗೆ ಗಂಧರ್ವನ ಜನ್ಮವನ್ನು ಕೊಟ್ಟು ಹರಸಿದ್ದಾನೆ.
ಸರ್ವರನ್ನೂ ಪಾವನಗೊಳಿಸುವನೆಂಬ ಖ್ಯಾತಿ ಹೊಂದಿದವನು ಈತ.
ಗಜೇಂದ್ರನಿಗೆ ಈತ ಸಹಾಯ ಮಾಡಿರುವ ವಿಷಯವನ್ನು ಯಾರು ನೆನಪಿನಲ್ಲಿರಿಸಿಕೊಂಡು ಮರೆಯುವುದಿಲ್ಲವೂ ಅವರು, ಯಾವುದೇ ಹಿತಕರವಲ್ಲದ ಘಟನೆಗಳ ಬಗ್ಗೆ ಬೀಳುವ ಕೆಟ್ಟ ಕನಸುಗಳ ಭಯದಿಂದ ಮುಕ್ತರಾಗುತ್ತಾರೆ.
100. ಅನಂತರೂಪೋನಂತಶ್ರೀಃ ಜಿತಮನ್ಯುರ್ಭಯಾಪಃ
ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ
ತನ್ನ ಭಕ್ತರನ್ನು ರಕ್ಷಿಸುವ ಸಲುವಾಗಿ, ಅವರನ್ನು ತಲುಪಲು ಹಲವಾರು ಅವತಾರಗಳನ್ನು ಎತ್ತುತ್ತಾನೆ ಈತ.
ಯಾರು ಈತನಲ್ಲಿ ಆಶ್ರಯ ಕೋರುತ್ತಾರೆಯೋ, ಅವರು ಹಲವಾರು ಅನುಗ್ರಹಗಳನ್ನು ಮತ್ತು ಭಾಗ್ಯಗಳನ್ನು ಈತನಿಂದ ಪಡೆಯುತ್ತಾರೆ.
ತನ್ನ ಭಕ್ತನಾದ ಗಜೇಂದ್ರನಿಗೆ ಉಪಟಳ ನೀಡಿದ ಮೊಸಳೆಯನ್ನು ಸೋಲಿಸಿ ತನ್ನ ಕೋಪವನ್ನು ತೀರಿಸಿಕೊಳ್ಳುತ್ತಾನೆ ಈತ.
ರಕ್ಷಣೆಯನ್ನು ಬಯಸುವ ನಮ್ಮ ಕರೆಗೆ, ವಾತ್ಸಲ್ಯದಿಂದ ಓಗೊಡುವ ಈತನ ಮೇಲೆ ನಾವು ಭರವಸೆಯನ್ನಿಡಬೇಕಾಗುತ್ತದೆ.
ಈತನು ಸದಾ ಸಮತೋಲನ ಮತ್ತು ಶಾಂತ ಚಿತ್ತದಿಂದ ಕೂಡಿದವನಾಗಿರುತ್ತಾನೆ.
ತಮಗೊಪ್ಪಿಸಿದ ಕರ್ತವ್ಯವನ್ನು ನಿರ್ವಹಿಸಲು ಅವರು ಈತನಿಂದ ಆದೇಶವನ್ನು ಪಡೆಯುತ್ತಾರೆ.
ಆದರೆ ತನ್ನ ಮೇಲೆ ಸಂಶಯಾತೀತವಾದ ವಿಶ್ವಾಸ, ನಂಬಿಕೆಯಿಂದ, ತಾನೇ ಏಕೈಕ ಆಪದ್ರಕ್ಷಕನೆಂದು ಶರಣಾಗತಿ ಹೊಂದಿದ ಗಜೇಂದ್ರನಂತಹ ಭಕ್ತರ ವಿಚಾರದಲ್ಲಿ ಇದು ಭಿನ್ನವಾಗಿರುತ್ತದೆ.
101. ಅನಾದಿರ್ ಭೂರ್ಭುವೋ ಲಕ್ಷ್ಮೀಃ ಸುವೀರೋರುಚಿರಾಂಗದಃ
ಜನನೋ ಜನಾಜನ್ಮಾದಿಃ ಭೀಮೋ ಭೀಮ ಪರಾಕ್ರಮಃ
ತನ್ನ ಭಕ್ತರ, ಅದು ಪ್ರಾಣಿಯೇ ಆಗಿರಬಹುದು, ಭಕ್ತಿಗೆ ಅತ್ಯಂತಸಂಪ್ರೀತನಾಗಿ, ಅವರಿಗೆ ತನ್ನ ಲೋಕವನ್ನು ಪ್ರವೇಶಿಸಲು ಅನುವು ಮಾಡಿಕೊಡುವಾತ ಈತ.
ಆದರೆ ಬ್ರಹ್ಮ ಮತ್ತಿತರರಿಗೆ ಕಡಿಮೆ ಪರಿಮಾಣದ ಪ್ರತಿಫಲಗಳನ್ನು ಅಥವಾ ಸ್ಥಾನಮಾನವನ್ನು ಕರುಣಿಸುತ್ತಾನೆ ಏಕೆಂದರೆ ಅವರ ಹಿತಾಸಕ್ತಿಗಳು ಬೇರೆಯೇ ಆಗಿರುತ್ತದೆ.
ಶ್ರದ್ಧೆ, ಭಕ್ತಿಯಿಂದ ಮಾತ್ರವೇ ಪರಮಜ್ಞಾನವನ್ನು ಹೊಂದಲು ಸಾಧ್ಯ. ಹಾಗಾಗಿ ಭಗವಂತನನ್ನು ಅಂತಹ ಜ್ಞಾನದಿಂದ ಸೇವಿಸಿದರೆ ಅವರು ಆತನ ಸಾನಿಧ್ಯವನ್ನು ಪಡೆಯುತ್ತಾರೆ .
ಅಂತಹವರ ಸಫಲತೆ ಮತ್ತು ಸಂಪತ್ತು ಈತ.
ಆತನ ಅನುಭವ ಜ್ಞಾನವನ್ನು ಪಡೆಯುವ ಸಲುವಾಗಿ ಅಂತಹವರಿಗೆ ತನ್ನ ದೈವಿಕ ಮನೋಹರ ರೂಪವನ್ನು ತೋರುತ್ತಾನೆ.
ಹಾಗೆಯೇ ಆತನ ಮಹತ್ವದ ಅನುಗ್ರಹವನ್ನು ಪಡೆಯಲು ಅರ್ಹರಲ್ಲದವರಿಗೆ, ತೀವ್ರವಾದ ಯಾತನೆಗಳ ಶಿಕ್ಷೆಯನ್ನು ವಿಧಿಸುತ್ತಾನೆ.
ಹಿರಣ್ಯಾಕ್ಷನಂತಹವರಿಗೆ, ತನ್ನ ಭಯಾನಕ ಶಕ್ತಿಯನ್ನು ಪ್ರದರ್ಶಿಸುತ್ತಾನೆ ಈತ.
102. ಆಧಾರನಿಲಯೋ ಧಾತಾ ಪುಷ್ಪಹಾಸಃ ಪ್ರಜಾಗರಃ
ಊರ್ಧ್ವಗಃ ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ
ಧರ್ಮಜ್ಞಾನಿಯದ ಈತ ಸಕಲ ಸಂರಕ್ಷಕ.
ಪ್ರಹ್ಲಾದ, ವಿಭೀಷಣ ಮತ್ತು ಪಾಂಡವರಂತೆ, ಧರ್ಮಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹವರನ್ನು ಈತ ಸದಾ ಕಾಯುತ್ತಾನೆ.
ಈತನ ಅನುಭಾವವನ್ನು ಹೊಂದುವ ಸಾಮರ್ಥ್ಯವನ್ನು ಅವರು ಗಳಿಸಿದಾಗ, ಈತ ಅವರ ಆತ್ಮಾನಂದವಾಗುತ್ತಾನೆ.
ಹಗಲು ರಾತ್ರಿಯೆನ್ನದೆ ಈತ ಅವರನ್ನು ಜಾಗರೂಕತೆಯಿಂದ ಪಾಲಿಸುತ್ತಾನೆ.
ಋಜುಮಾರ್ಗದ ಅನುಸರಣೆ, ಸಾತ್ವಿಕ ಸ್ವಭಾವದ ವಿಕಸನ ಮತ್ತು ಭಗವಂತನಿಗೆ ಭಕ್ತಿಯ ಸೇವೆ, ಇದನ್ನು ಸದಾಚಾರ ಎಂದು ಕರೆಯಲಾಗುತ್ತದೆ.
ಈತನ ಔದಾರ್ಯವೇ ಸದಾಚಾರ ಪಾಲನೆಗೆ ದೊರಕುವ ಬಹುಮಾನ.
ಸದಾಚಾರಿಗಳನ್ನು ವಿಧೇಯರನ್ನಾಗಿಸಿ, ತನ್ನ ಪಾದಗಳಿಗೆ ಅಡ್ಡಬೀಳುವಂತೆ ಮಾಡುತ್ತಾನೆ ಈತ.
103. ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ
ವೇದಗಳಲ್ಲಿರುವ ಆಧ್ಯಾತ್ಮಿಕ ರೂಪಾರ್ಥವುಳ್ಳ ಸತ್ಯಗಳ ಮೇಲೆ ಪ್ರಭುತ್ವ ಉಳ್ಳವನು ಈತ.
ಪಕ್ಷಿಗಳಿಗೆ ಗೂಡಿದ್ದಂತೆ, ಸಮಸ್ತ ಜೀವಸಂಕುಲಕ್ಕೆ ಬೀಡು ಈತ.
ಅವರನ್ನು ತಾಯಿಯಂತೆ ಲಾಲಿಸಿ, ಪೋಷಿಸಿ, ಬಲತುಂಬಿಸಿ, ಅವರಿಗೆ ಆಧಾರಸ್ತಂಭವಾಗಿದ್ದಾನೆ ಈತ.
ಈ ಅನಂತ ವಿಶ್ವದಲ್ಲಿ ಈತನೊಬ್ಬನೇ ಪರಮಸತ್ಯ.
ಎಲ್ಲ ಚರಾಚರ ವಸ್ತುಗಳ ಯಜಮಾನ ಮತ್ತು ಅವುಗಳನ್ನು ಅನುಭವಿಸಿ ಆನಂದಿಸುವ ಹಕ್ಕುಳ್ಳ ಏಕೈಕ ಒಡೆಯ ಈತ.
ಸಮಸ್ತ ವಸ್ತುಗಳ ಹುಟ್ಟು, ಮುದಿತನ, ಮತ್ತು ಸಾವು ಎಂಬ ಗುಣಲಕ್ಷಣಗಳನ್ನು ಮೀರಿ, ಈತ ಉನ್ನತ ಮಟ್ಟದಲ್ಲಿ ಅತಿಶಯನಾಗಿರುತ್ತಾನೆ.
104. ಭೂರ್ಭುವಃಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಃ
ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನಃ
ಮೂರು ಲೋಕಗಳಲ್ಲಿರುವ ಜೀವಿಗಳಿಗೆ ನೆರಳು ಕೊಡುವ ಮತ್ತು ಅವರ ಅಭಿಲಾಷೆಗಳನ್ನು ಈಡೇರಿಸುವ ಪಾರಿಜಾತವೆಂಬ ಕಲ್ಪತರು ಈತ.
ಸಂಸಾರ ಸಾಗರವನ್ನು ದಾಟಲು ಅವರಿಗೆ ಈತ ಸಹಾಯ ಮಾಡುತ್ತಾನೆ.
ಬ್ರಹ್ಮನ ತಂದೆಯಾದ ಈತ ನಮ್ಮೆಲ್ಲರಿಗೂ ಪಿತಾಮಹನ ತಂದೆಯೇ ಸರಿ.
ಯಜ್ಞವನ್ನು ಎಲ್ಲ ವಿಧದಿಂದಲೂ ಈತ ಸಂಕೇತಿಸುತ್ತಾನೆ.
ಯಾರು ಯಜ್ಞದ ಮುಖಾಂತರ ಈತನನ್ನು ಅರಿಯಲು ಇಚ್ಛಿಸುತ್ತಾರೋ ಅವರಿಗೆ, ಯಜ್ಞದ ಆಚರಣೆಯ ವಿಧಾನವನ್ನು ತಿಳಿಸಿಕೊಡುತ್ತಾನೆ ಈತ.
ಯಜ್ಞದ ಆಚರಣೆಯ ಫಲವನ್ನು ಅವರಿಗೆ ಕರುಣಿಸುತ್ತಾನೆ.
ಯಾರು ಯಜ್ಞವನ್ನು ಆಚರಿಸಲು ಅಸಮರ್ಥರೋ ಅಥವಾ ಅಶಕ್ತರೂ, ಈತನು ಸ್ವಯಂ ತಾನೇ ಅವರಿಗಾಗಿ ಯಜ್ಞವನ್ನು ಆಚರಿಸುತ್ತಾನೆ.
ಯೋಗ್ಯರಿಂದ ಆಚರಿಸಲ್ಪಡುವ ಯಜ್ಞಕ್ಕೆ ಈತ ಸಹಭಾಗಿಯಾಗುತ್ತಾನೆ.
ಯಾರು ಯಜ್ಞವನ್ನು ಸರಿಯಾದ ರೀತಿಯಲ್ಲಿ ಶಾಸ್ತ್ರೋಕ್ತವಾಗಿ ಆಚರಿಸುವರೋ ಅವರಿಗೆ ಬೇಕಾದ ಶಕ್ತಿ, ಶ್ರದ್ಧೆ ಮತ್ತು ಅಧಿಕಾರವನ್ನು ಕೊಟ್ಟು ಸಹಕರಿಸುತ್ತಾನೆ ಈತ.
105. ಯಜ್ಞಭೃದ್ ಯಜ್ಞಕೃದ್ ಯಜ್ಞೀ ಯಜ್ಞಭುಗ್ ಯಜ್ಞಸಾಧನಃ
ಯಜ್ಞಾಂತಕೃದ್ ಯಜ್ಞಗುಹ್ಯಮ್ ಅನ್ನಮನ್ನಾದ ಏವ ಚ
ಸಮಸ್ತ ಜಗತ್ತಿನ ಕಲ್ಯಾಣಕ್ಕಾಗಿ, ಯಜ್ಞದ ಆಚರಣೆಯನ್ನು ಸಂಸ್ಥಾಪಿಸಿದವನು ಈತ.
ಎಲ್ಲ ಬಗೆಯ ಯಜ್ಞಗಳ ಒಡೆಯ ಈತ.
ಯಜ್ಞದ ಆಚರಣೆಯಲ್ಲಿ ಅಲ್ಪ ಸ್ವಲ್ಪ ಕುಂದುಕೊರತೆಗಳು ಅಲ್ಲಲ್ಲಿ ಕಂಡುಬಂದರೂ ಸಹ, ಪೂರ್ಣಾಹುತಿಯನ್ನು ಸಮರ್ಪಿಸಿದ ಮೇಲೆ, ಯಜ್ಞವು ಸಂಪೂರ್ಣವಾಗಿರುವುದಾಗಿ ನಿಶ್ಚಯಿಸುತ್ತಾನೆ ಈತ.
ಆ ಯಜ್ಞದ ಕರ್ತೃವಿಗೆ ಯಜ್ಞಫಲವನ್ನು ಅನುಭವಿಸುವ ಅಧಿಕಾರ ಕೊಡುತ್ತಾನೆ.
ಈ ಯಜ್ಞಗಳೊಂದಿಗೆ ಜ್ಞಾನವೂ ಸಹ ಈತನನ್ನು ಸೇರುವ ಸಾಧನವಾಗಿದೆ.
ಯಜ್ಞದ ಪೂರ್ಣಾಹುತಿಯನ್ನು ಸೇವಿಸುವ ಇಚ್ಛೆ ಇಲ್ಲದಿದ್ದರೂ ಸಹ ಯಜ್ಞ ಕರ್ತೃವಿನ ತೃಪ್ತಿಗಾಗಿ, ಹವಿಸ್ಸನ್ನು ಸೇವಿಸುವವನಂತೆ ತೋರ್ಪಡಿಸಿಕೊಳ್ಳುತ್ತಾನೆ.
ಈ ವಿಚಾರವು, ಈ ಸತ್ಯವು ಯಾರಿಗೆ ಯಜ್ಞಗಳ ಬಗ್ಗೆ ಸಂಪೂರ್ಣ ಜ್ಞಾನವಿರುವುದೋ ಅವರಿಗೆ ಮಾತ್ರ ತಿಳಿದ ರಹಸ್ಯವಾಗಿದೆ.
ಯಾರಿಗೆ ಧ್ಯಾನ ಮಾಡುವ ಯೋಗ್ಯತೆ ಹಾಗೂ ಸಾಮರ್ಥ್ಯ ಇರುತ್ತದೆಯೋ, ಯಾರಿಗೆ ಅದರ ಅನುಭವ ಜ್ಞಾನ ಇರುತ್ತದೆಯೋ, ಅಂತಹವರು ಸಮರ್ಪಿಸಿದ ಅನ್ನದ ರೂಪದ ಹವಿಸ್ಸು ಈತನೇ ಆಗಿರುತ್ತಾನೆ.
ಈ ಮೇಲೆ ತಿಳಿಸಿದ ಎಲ್ಲಾ ವಿಚಾರಗಳನ್ನು ಮಾಡತಕ್ಕಂತಥವನು ಈತನೊಬ್ಬನೇ ಆಗಿದ್ದಾನೆ. ಮತ್ಯಾರು ಮಾಡಲು ಸಾಧ್ಯ.
106. ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ
ದೇವಕೀ ನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ
ಸಕ್ಕರೆಯು ಹಾಲಿನೊಂದಿಗೆ ಕರಗಿದಂತೆ, ತನ್ನ ಭಕ್ತರನ್ನು ತನ್ನೊಳಗೆ ಲೀನವಾಗಿಸಿಕೊಳ್ಳುತ್ತಾನೆ ಈತ.
ಯಾರಿಂದಲೂ ಪ್ರಾರ್ಥನಾರೂಪದ ಬಿನ್ನಹಗಳನ್ನು ನಿರೀಕ್ಸಿಸದೆಯೇ ಈತ ತನ್ನಷ್ಟಕ್ಕೆ ತಾನೇ ವಿವಿಧ ರೂಪದ ಅವತಾರಗಳನ್ನು ತಾಳುತ್ತಾನೆ .
ಅವತಾರವೆತ್ತಿದ ನಂತರ, ಜಗತ್ತು ಎದುರಿಸುತ್ತಿರುವ, ಕಷ್ಟ ಕೋಟಲೆಗಳನ್ನು ನಿವಾರಿಸುತ್ತಾನೆ .
ಮುಕ್ತಿಹೊಂದಿದ ಆತ್ಮಗಳ ಒಡನಾಟದಲ್ಲಿ, ಅವರ ಆನಂದದಲ್ಲಿ ಭಾಗಿಯಾಗುತ್ತಾ, ಸಾಮವೇದದಲ್ಲಿನ ಹಾಡುಗಳನ್ನು ಹಾಡುತ್ತಾನೆ ಈತ .
ಈತನು ಈತನ ಪರಂಧಾಮದಲ್ಲಿ ಮಾತ್ರ ಇರುವುದಲ್ಲದೇ, ದೇವಕಿಯ ಮಗ ಕೃಷ್ಣನಾಗಿ ಅವತರಿಸಿದಾಗ ನಮ್ಮೆಲ್ಲರ ನಡುವೆಯೂ ಸಹ ಇದ್ದವನು.
ಮಹಾಕಷ್ಟಗಳು ತಲೆದೋರಿದಾಗ, ಎದೆಗುಂದಿದ ಭೂದೇವಿಯನ್ನು, ಈತನು ತನ್ನ ಪ್ರೀತಿಯ ಸಂಗಾತಿಯಾಗಿಸಿಕೊಂಡು ಸಂತೈಸುತ್ತಾನೆ.
ಬೆಣ್ಣೆ ಕದ್ದಿದ್ದು, ರಾಸಲೀಲೆಯಾಡಿದ್ದು ಮುಂತಾದ ಅಮೃತ ಸಮಾನವಾದ ಈತನ ದೈವಲೀಲೆಯನ್ನು ಸಾರುವ ಕತೆಗಳನ್ನು ಕೇಳುವವರ ಪಾಪಗಳನ್ನು ಈತ ಹೋಗಲಾಡಿಸುತ್ತಾನೆ.
107. ಶಂಖಭೃನ್ನಂದಕೀ ಚಕ್ರೀ ಶಾರ್ಘಧನ್ವಾಗದಾಧರಃ
ರಥಾಂಗ ಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ
ಸರ್ವಪ್ರಹರಣಾಯುಧಾಯ ಓಂ ನಮ ಇತಿ
ತನಗಾಗಿ ಸಮರ್ಪಿಸಿಕೊಂಡ ಭಕ್ತರು, ಎದುರಿಸಬಹುದಾದ ಯಾವುದೇ ವಿಧದ ಕಷ್ಟವನ್ನು ನಿವಾರಿಸುವ ಸಲುವಾಗಿ ಉಪಯೋಗಿಸಲ್ಪಡುವ, ಅಸಂಖ್ಯ ಆಯುಧಗಳು ಈತನ ದೈವಿಕ ಆಭರಣಗಳಾಗಿವೆ.
ಯಾವುದೇ ಸಮಯದಲ್ಲಾಗಲೀ, ಯಾವದೇ ಸ್ಥಳದಲ್ಲಿಯಾಗಲೀ, ಯಾವ ಜೀವಿಯೇ ಆಗಾಳೀ ತನ್ನನ್ನು ಕಾಪಾಡೆಂದು ಮೊರೆಯಿಡುವವರನ್ನು ರಕ್ಷಿಸಲೆಂದು ಈತನು ಮಾಡುವ ಹೃದಯಪೂರ್ವಕ ಶಪಥವನ್ನು ಈ ಆಯುಧಗಳೆಂಬ ಆಭರಣಗಳು ಪೂರೈಸುತ್ತವೆ
*ಪಾಂಚಜನ್ಯವೆಂಬ ಶಂಖ .
* ನಂದಕಿಯೆಂಬ ಖಡ್ಗ .
* ರಾಕ್ಷಸರ ರಕ್ತದಿಂದ ಮಲಿನವಾಗಿರುವ ಹೊಳೆಯುವ ಅಂಚುಗಳಿರುವ, ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಲು ಉಪಯೋಗಿಸಿರುವ ಸದಾ ಮನೋಹರವಾಗಿ ಕಾಣುವ ಚಕ್ರ.
ಶಾರ್ಙ್ಗ ವೆಂಬ ಧನುಸ್ಸನ್ನು ಈತ ಹೊಂದಿದ್ದಾನೆ .
ಈ ಬಿಲ್ಲಿನ ಹುರಿಯನ್ನು ಮೀಟಿದಾಗ ಜೇಂಕಾರವನ್ನ ಹೊರಡಿಸಿ, ರಾಕ್ಷಸರೆಡೆಗೆ ಗುರಿಯಿಟ್ಟು ಪ್ರಯೋಗಿಸಿದಾಗ, ಅವರ ಮೇಲೆ ಬಾಣಗಳ ಮಳೆಗೆರೆಯುತ್ತದೆ ಇದು.
ಅದಲ್ಲದೆ ಕೌಮೋದಕಿ ಎಂಬ ಗದೆಯೂ ಸಹ ಈತನ ಬಳಿಯಿದೆ. ಪ್ರಳಯದ ಕಾಲದಲ್ಲಿ ಹೊರಹೊಮ್ಮುವ ಬೆಂಕಿಯ ಕಿಡಿಗಳಂತೆ, ಆ ಗದೆಯು ಘರ್ಷಿಸುತ್ತದೆ.
ಮೇಲೆ ತಿಳಿಸಿದ ಈ ಎಲ್ಲ ರಕ್ಷಣಾತ್ಮಕ ಆಯುಧಗಳಲ್ಲಿ ಅತ್ಯಂತ ಪ್ರಮುಖವಾದುದೆಂದರೆ ಸುದರ್ಶನ ಎಂದು ಕರೆಯಲ್ಪಡುವ ಚಕ್ರವು .
ಹರಿ ಓಂ ತತ್ಸತ್
108. ವನಮಾಲೀ ಗದೀ ಶಾರ್ಙ್ಗೀ ಶಂಖೀ ಚಕ್ರೀ ಚ ನಂದಕೀ
ಶ್ರೀಮಾನ್ ನಾರಾಯಣೋವಿಷ್ಣುಃ ವಾಸುದೇವೋಭಿರಕ್ಷತು
ಈತನೇ ವನಮಾಲಿ. ಕಾಡಿನಲ್ಲಿರುವ ಹೂವುಗಳಿಂದ ತಯಾರಿಸಿದ ಹಾರವನ್ನು ಈತ ಧರಿಸುತ್ತಾನೆ.
ಕೌಮೋದಕಿ ಎಂಬ ಗಾದೆಯನ್ನೂ ಮತ್ತು ಶಾರ್ಙ್ಗ ಎಂಬ ಬಿಲ್ಲನ್ನೂ ಈತ ಕೈಗಳಲ್ಲಿ ಹಿಡಿದಿರುತ್ತಾನೆ.
ಇವುಗೊಳೊಂದಿಗೆ, ಶಂಖ ಮತ್ತು ಚಕ್ರಗಳನ್ನೂ ಕೈಯಲ್ಲಿ ಹಿಡಿದಿರುತ್ತಾನೆ.
ಸದಾ ಶ್ರೀ ಲಕ್ಶ್ಮಿಯನ್ನು ಸಂಗಾತಿಯಾಗಿ ಹೊಂದಿರುವ ನಾರಾಯಣ ಈತ.
ಈತನನ್ನು ವಿಷ್ಣು ಮತ್ತು ವಾಸುದೇವ ಎಂದೂ ಸಹ ಕರೆಯುವರು.
ಈತ ನಮ್ಮನ್ನು ಆಶೀರ್ವದಿಸಿ ಸದಾ ರಕ್ಷಿಸುತ್ತಿರಲಿ.
——————————–
Uttara PIThika
(phalazrti)
1. ಭೀಷ್ಮ ಉವಾಚ —
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ ।
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್ ॥ 1॥
ಮಹಾತ್ಮನಾದ ಕೇಶವನನ್ನು ಸ್ತುತಿಸಲಾದ ಒಂದು ಸಾವಿರ ದಿವ್ಯ ನಾಮಾವಳಿಗಳು ಇವು. ಈ ಹೆಸರುಗಳು ಭಕ್ತಾದಿಗಳಿಂದ ಅನಾವರತವು ಭಜಿಸಲ್ಪಟ್ಟಿದೆ.
2. ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ ।
ನಾಶುಭಂ ಪ್ರಾಪ್ನುಯಾತ್ಕಿಂಚಿತ್ಸೋಽಮುತ್ರೇಹ ಚ ಮಾನವಃ ॥ 2॥
ಯಾರು ಈ ಸಹಸ್ರನಾಮಗಳನ್ನು ಪ್ರತಿದಿನವೂ ಕೀಳುತ್ತಾರೆಯೋ ಅಥವಾ ಅವುಗಳನ್ನು ಭಕ್ತಿಪೂರ್ವಕವಾಗಿ ಪಠಿಸುತ್ತಾರೆಯೋ, ಅವರು ಯಾವುದೇ ವಿಧದ ಅಮಂಗಳವನ್ನು ಇಹದಲ್ಲಾಗಲೀ ಅಥವಾ ಪರದಲ್ಲಾಗಲೀ ಹೊಂದುವುದಿಲ್ಲ.
3. ವೇದಾನ್ತಗೋ ಬ್ರಾಹ್ಮಣಃ ಸ್ಯಾತ್ಕ್ಷತ್ರಿಯೋ ವಿಜಯೀ ಭವೇತ್ ।
ವೈಶ್ಯೋ ಧನಸಮೃದ್ಧಃ ಸ್ಯಾಚ್ಛೂದ್ರಃ ಸುಖಮವಾಪ್ನುಯಾತ್ ॥ 3॥
ಈ ಪವಿತ್ರ ನಾಮಗಳ ಪಠಣದಿಂದ ಹಲವಾರು ಲಾಭಗಳಿವೆ. ಬ್ರಾಹ್ಮಣರು ತಮ್ಮ ವೇದಜ್ಞಾನವನ್ನು ವೃದ್ಧಿಸಿಕೊಳ್ಳುವರು. ಕ್ಷತ್ರಿಯರು ವಿಜಯಿಗಳಾಗುವರು. ವೈಶ್ಯರು ಧನಸಮೃದ್ಧಿಯನ್ನು ಹೊಂದುವರು, ಮತ್ತು ಶೂದ್ರರು ಸುಖಿಗಳಾಗುವರು.
4. ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಮರ್ಥಾರ್ಥೀ ಚಾರ್ಥಮಾಪ್ನುಯಾತ್ ।
ಕಾಮಾನವಾಪ್ನುಯಾತ್ಕಾಮೀ ಪ್ರಜಾರ್ಥೀ ಪ್ರಾಪ್ನುಯಾತ್ಪ್ರಜಾಮ್ ॥ 4॥
ಧರ್ಮವನ್ನು ಬಯಸುವವರು, ಧರ್ಮವನ್ನು ಪಡೆಯುತ್ತಾರೆ. ಅರ್ಥ ಅಂದರೆ ಸಂಪತ್ತನ್ನು ಬಯಸುವವರು ಸಂಪತ್ತನ್ನು ಗಳಿಸುತ್ತಾರೆ. ಸಂತಾನವನ್ನು ಬೆಸುವವರು ಅದನ್ನು ಹೊಂದುತ್ತಾರೆ. ಇತರರಿಗೆ ಅವರವರ ಕಾಮನೆಗಳು ಫಲಿಸುತ್ತವೆ.
5. ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ ।
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ಪ್ರಕೀರ್ತಯೇತ್ ॥ 5॥
ಭಕ್ತಿಯುಳ್ಳ ಯಾವ ವ್ಯಕ್ತಿಯು, ಬೆಳಗ್ಗೆ ಬೇಗ ಎದ್ದು, ತನ್ನನ್ನು ಶುದ್ಧಿಯಿಕರಿಸಿಕೊಂಡು, ವಾಸುದೇವನ ಕೊಂಡಾಡುವ ಸ್ತೋತ್ರಗಳನ್ನು ಪಠಿಸುತ್ತಾನೆಯೋ, ಆ ವ್ಯಕ್ತಿಗೆ ವಿಧವಿಧದ ಲಾಭಗಳುಂಟಾಗತ್ತವೆ.
6. ಯಶಃ ಪ್ರಾಪ್ನೋತಿ ವಿಪುಲಂ ಜ್ಞಾತಿಪ್ರಾಧಾನ್ಯಮೇವ ಚ ।
ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್ ॥ 6॥
ಸಹಸ್ರನಾಮದ ಪಾರಾಯಣದಿಂದ ಉಂಟಾಗುವ ಲಾಭಗಳೆಂದರೆ, ಯಶಸ್ಸು, ಶ್ರೇಯಸ್ಸು, ಸಂಗಡಿಗರ ಮುಂದಾಳತ್ವ, ನಿರೀಕ್ಷಿಸಿದಷ್ಟು ಸಂಪತ್ತು ಮತ್ತು ಪರಮಕಲ್ಯಾಣ.
7. ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿನ್ದತಿ ।
ಭವತ್ಯರೋಗೋ ದ್ಯುತಿಮಾನ್ಬಲರೂಪಗುಣಾನ್ವಿತಃ ॥ 7॥
ಯಾರು ಸಹಸ್ರನಾಮ ಪಾರಾಯಣ ಮಾಡುತ್ತಾರೆಯೋ ಅವರು ಎಲ್ಲ ವಿಧದ ಭಯದಿಂದ ಮುಕ್ತಿ ಪಡೆಯುತ್ತಾರೆ. ಅವರಿಗೆ ಅಪಾರ ಶಕ್ತಿ ಮತ್ತು ಧೈರ್ಯ ಬರುತ್ತದೆ. ಎಲ್ಲ ವಿಧದ ವ್ಯಾಧಿಗಳಿಂದ ಮುಕ್ತಿ ಹೊಂದುತ್ತಾರೆ.ಸದೃಢ ದೇಹ ಮತ್ತು ಮನಸ್ಸಿನ ಜತೆ ಸುಂದರ ವ್ಯಕ್ತಿತ್ವವನ್ನು ಹೊಂದಿ, ಸದಾಚಾರಶೀಲ ಸದ್ಗುಣಿಗಳಾಗುತ್ತಾರೆ.
8. ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬನ್ಧನಾತ್ ।
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ ॥ 8॥
ಯಾವ ಭಕ್ತರು ಸಹಸ್ರನಾಮಗಳನ್ನು ನಿತ್ಯವೂ ಪಠಿಸುತ್ತಾರೆಯೋ, ಅವರು ಯಾವುದೇ ವಿಧದ ವ್ಯಾಧಿ, ಬಂಧ, ಭಯ ಮತ್ತು ವೇದನೆಗಳಿಂದ ಮಕ್ತರಾಗುತ್ತಾರೆ.
9. ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ ।
ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ ॥ 9॥
ಸಹಸ್ರನಾಮದ ರೂಪದಲ್ಲಿ ಪುರುಷೋತ್ತಮನನ್ನು ಸ್ತುತಿಸುವ ಹಾಡುಗಳನ್ನು ಯಾರು ಭಕ್ತಿಯಿಂದ ಹಾಡುತ್ತಾರೆಯೋ ಅವರು ಎಲ್ಲ ರೀತಿಯ ಕ್ಲೇಶೆಗಳಿಂದ ಸುಲಭವಾಗಿ ಹೊರಬರುತ್ತಾರೆ.
10. ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ ।
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್ ॥ 10॥
ಯಾರು ವಾಸುದೇವನಲ್ಲಿ ಶರಣಾಗತಿಯನ್ನು ಹೊಂದಿ, ಸದಾ ಆತನ ಭಕ್ತರಾಗಿರುವರೋ, ಅವರು ತಮ್ಮ ಎಲ್ಲ ಪಾಪಗಳಿಂದ ವಿಮುಕ್ತಿ ಹೊಂದಿ ಪರಿಶುದ್ಧರಾಗಿ ಪರಬ್ರಹ್ಮನ ಸಾನಿಧ್ಯವನ್ನು ಪಡೆಯುವರು.
11. ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ ।
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ ॥ 11॥
ಯಾರು ವಾಸುದೇವನ ಭಕ್ತರಾಗಿರವರೋ ಅವರು ಎಂದಿಗೂ ಅಮಂಗಳಕರವಾದುದಾಗಲೀ, ಅಶುಭವನ್ನಾಗಲಿ ಪಡೆಯರು, ಮತ್ತು ಅವರಿಗೆ ಕಾಯಿಲೆ, ಮುಪ್ಪು, ಜನನ ಮತ್ತು ಮರಣ ಚಕ್ರದ ಭೀತಿಯಿರುವುದಿಲ್ಲ.
12. ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ ।
ಯುಜ್ಯೇತಾತ್ಮಸುಖಕ್ಷಾನ್ತಿಶ್ರೀಧೃತಿಸ್ಮೃತಿಕೀರ್ತಿಭಿಃ ॥ 12॥
ಯಾರು ಈ ದೇವನ ಸ್ತೋತ್ರವನ್ನು ಸಂಪೂರ್ಣ ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಪಠಿಸುವರೋ ಅವರು ಮಾನಸಿಕ ನೆಮ್ಮದಿ, ತಾಳ್ಮೆ, ಯಶಸ್ಸು, ಕೀರ್ತಿ ಮತ್ತು ಅಭಿವೃದ್ಧಿಯನ್ನು ಪಡೆಯುವರು.
13. ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ ।
ಭವನ್ತಿ ಕೃತ ಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ ॥ 13॥
ಯಾರು ಪುರುಷೋತ್ತಮನಿಗೆ ಧೃಢನಿಷ್ಠೆಯುಳ್ಳವರಾಗಿ ಪುಣ್ಯವನ್ನು ಸಂಪಾದಿಸಿದವರಾಗಿರುತ್ತಾರೂ, ಅವರಿಗೆ ಯಾವುದೇ ಕೋಪತಾಪಗಳು, ಅಸೂಯೆ ಮತ್ತು ಮಾತ್ಸರ್ಯಗಳು, ಲೋಭ ಅಥವಾ ಅಮಂಗಳಕರವಾದ ನಡತೆ ಇರುವುದಿಲ್ಲ.
14. ದ್ಯೌಃ ಸಚನ್ದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ ।
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ ॥ 14॥
ಸ್ವರ್ಗ, ಸೂರ್ಯನಿರುವ ಆಕಾಶ, ಚಂದ್ರ ಮತ್ತು ನಕ್ಷತ್ರಗಳು, ದಿಕ್ಕುಗಳು, ಭೂಮಿ, ಮಹಾಸಮುದ್ರಗಳು, ಇವೆಲ್ಲವೂ ಮಹನುಭಾವನಾದ ವಾಸುದೇವನ ಶಕ್ತಿ ಮತ್ತು ಸಾಮರ್ಥ್ಯಗಳಿಂದ, ಒಂದಾಗಿ ಬಂಧಿಸಲ್ಪಟ್ಟು ಆಧಾರವನ್ನು ಹೊಂದಿವೆ.
15. ಸಸುರಾಸುರಗನ್ಧರ್ವಂ ಸಯಕ್ಷೋರಗರಾಕ್ಷಸಮ್ ।
ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್ ॥ 15॥
ದೇವತೆಗಳು, ಅಸುರರು, ಗಂಧರ್ವರು, ಯಕ್ಷರು, ಉರಗಗಳು ಮತ್ತು ರಾಕ್ಷಸರಿಂದೊಡಗೂಡಿದ, ಚರಾಚರ ವಸ್ತುಗಳಿಂದಾದ ಸಮಗ್ರ ಜಗತ್ತು, ಜಗದೊಡೆಯ ಕೃಷ್ಣನ ವಶದಲ್ಲಿದೆ.
16. ಇನ್ದ್ರಿಯಾಣಿ ಮನೋ ಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ ।
ವಾಸುದೇವಾತ್ಮಕಾನ್ಯಾಹುಃ ಕ್ಷೇತ್ರಂ ಕ್ಷೇತ್ರಜ್ಞ ಏವ ಚ ॥ 16॥
ಇಂದ್ರಿಯಗಳು, ಮನಸ್ಸು,ಬುದ್ಧಿ,ಸತ್ಯ,ತೇಜಸ್ಸು, ಬಲ ಮತ್ತು ಸಾಮರ್ಥ್ಯ ಇವುಗಳನ್ನೊಳಗೊಂಡ ದೇಹವನ್ನು ಕ್ಷೇತ್ರ ಎಂದು ಕರೆಯುವರು. ಈ ಕ್ಷೇತ್ರದಲ್ಲಿರುವ ಜ್ಞಾನವುಳ್ಳ ಆತ್ಮವನ್ನು ಕ್ಷೇತ್ರಜ್ಞ ಎನ್ನುವರು. ಕ್ಷೇತ್ರ ಮತ್ತು ಕ್ಷೇತ್ರಜ್ಞ ಇವೆರಡರ ಆತ್ಮ ಮತ್ತು ಮುಲತತ್ವಸಾರವು ವಾಸುದೇವನಾಗಿದ್ದಾನೆ.
17. ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಪ್ಯತೇ ।
ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ ॥ 17॥
ಎಲ್ಲ ಧರ್ಮಶಾಸ್ತ್ರಗಳೂ ಉತ್ತಮ ಚಾರಿತ್ರ್ಯವನ್ನು ಪ್ರಮುಖ ಅವಶ್ಯಕತೆ ಎಂಬುದಾಗಿ ಪರಿಗಣಿಸುತ್ತವೆ. ಈ ಉತ್ತಮ ನಡತೆಗೆ ಧರ್ಮವೇ ತಳಹದಿ, ಮತ್ತು ಅಚ್ಯುತನೇ ಈ ಧರ್ಮದ ಅಧಿಪತಿ.
18. ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ ।
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ ॥ 18॥
ಋಷಿಗಳು, ಪಿತೃಗಳು, ದೇವತೆಗಳು, ಮಹಾಭೂತಗಳು, ಧಾತುಗಳು, ಸ್ಥಾವರ ಮತ್ತು ಜಂಗಮ ವಸ್ತುಗಳಿಂದ ಒಳಗೊಂಡಿರುವ ಈ ಬ್ರಹ್ಮಾಂಡವು ನಾರಾಯಣನಿಂದ ಉದ್ಭವವಾಗಿದೆ.
19. ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿ ಕರ್ಮ ಚ ।
ವೇದಾಃ ಶಾಸ್ತ್ರಾಣಿ ವಿಜ್ಞಾನಮೇತತ್ಸರ್ವಂ ಜನಾರ್ದನಾತ್ ॥ 19॥
ಯೋಗ, ಜ್ಞಾನ,ಸಾಂಖ್ಯ,ಕಲೆ ಮತ್ತು ವಿಜ್ಞಾನ, ವೇದಗಳಿಂದೊಡಗೂಡಿದ ಎಲ್ಲ ಚಟುವಟಿಕೆಗಳು, ಶಾಸ್ತ್ರಗಳು ಮತ್ತು ಆಧ್ಯಾತ್ಮಿಕ ಪ್ರಕಾಶ,ಇವೆಲ್ಲವೂ ಜನಾರ್ಧನನಿಂದ ಉತ್ಪತ್ತಿಯಾಗಿದೆ.
20. ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ ।
ತ್ರೀಂಲ್ಲೋಕಾನ್ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ ॥ 20॥
ಎಲ್ಲವನ್ನೂ ಗ್ರಹಿಸಬಲ್ಲ ಒಬ್ಬ ವಿಷ್ಣುವು, ವಿವಿಧ ರೂಪಗಳಲ್ಲಿ ಗೋಚರಿಸುತ್ತಾನೆ. ಸಕಲ ಜೀವಿಗಳ ಮುಲತತ್ವ ಈತ. ಸಕಲ ಲೋಕಗಳ ಗ್ರಾಹಕ ಈತ. ವಿಶ್ವದಾದ್ಯಂತ ಹಬ್ಬಿರುವ ಈತ ಅವಿನಾಶಿ ಪರಮಾತ್ಮ. ಸಂಪೂರ್ಣ ಜಗತ್ತಿನಲ್ಲಿರುವ ಎಲ್ಲ ವಸ್ತುಗಳನ್ನು ಆಸ್ವಾದಿಸುವವನು ಈತ.
21. ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ ।
ಪಠೇದ್ಯ ಇಚ್ಛೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ ॥ 21॥
ಅಭ್ಯುದಯ ಮತ್ತು ಆನಂದವನ್ನು ಬಯಸುವವರು ವ್ಯಾಸರಿಂದ ರಚಿಸಲ್ಪಟ್ಟ ವಿಷ್ಣುವಿನ ಸಹಸ್ರನಾಮಗಳುಳ್ಳ ಈ ದೇವರ ಸ್ತೋತ್ರವನ್ನು, ಭಕ್ತಿಯಿಂದ ಪಠಿಸಬೇಕು.
22. ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭುಮವ್ಯಯಮ್ ।
ಭಜನ್ತಿ ಯೇ ಪುಷ್ಕರಾಕ್ಷಂ ನ ತೇ ಯಾನ್ತಿ ಪರಾಭವಮ್ ॥ 22॥
ನ ತೇ ಯಾನ್ತಿ ಪರಾಭವಮ್ ಓಂ ನಮ ಇತಿ ।
ಯಾರಿಂದ ಈ ಜಗತ್ತು ಸೃಷ್ಟಿಯಾಗಿದೆಯೋ, ಯಾರು ಹುಟ್ಟುಸಾವುಗಳಿಲ್ಲದವನೋ, ಮತ್ತು ಯಾರು ಈ ಸಕಲ ಜಗತ್ತಿಗೆ ಪ್ರಭುವೋ, ಅಂತಹ ಕಮಲನೇತ್ರನನ್ನು ಯಾರು ಭಕ್ತಿಯಿಂದ ಸ್ತುತಿಸುತ್ತಾರೋ ಅವರು ಪರಾಭವವನ್ನು ಹೊಂದುವುದಿಲ್ಲ. ಓಂ ನಮ ಇತಿ.
23. ಅರ್ಜುನ ಉವಾಚ —
ಪದ್ಮಪತ್ರವಿಶಾಲಾಕ್ಷ ಪದ್ಮನಾಭ ಸುರೋತ್ತಮ ।
ಭಕ್ತಾನಾಮನುರಕ್ತಾನಾಂ ತ್ರಾತಾ ಭವ ಜನಾರ್ದನ ॥ 23॥
ಅರ್ಜುನ ಹೇಳಿದನು:- ಓ ಜನಾರ್ದನನೇ, ತಾವರೆ ಎಲೆಯಂತೆ ವಿಶಾಲವಾದ ಕಣ್ಣುಗಳುಳ್ಳವನೇ, ನಾಭಿಯಲ್ಲಿ ಪದ್ಮವನ್ನು ಧರಿಸಿರುವವನೇ, ದೇವೋತ್ತಮನೇ, ಆಶ್ರಯ ಮತ್ತು ರಕ್ಷಣೆ ನೀಡಿ ನಮ್ಮನ್ನು ಹರಸು.
24. ಶ್ರೀಭಗವಾನುವಾಚ —
ಯೋ ಮಾಂ ನಾಮಸಹಸ್ರೇಣ ಸ್ತೋತುಮಿಚ್ಛತಿ ಪಾಂಡವ ।
ಸೋಹಽಮೇಕೇನ ಶ್ಲೋಕೇನ ಸ್ತುತ ಏವ ನ ಸಂಶಯಃ ॥ 24॥
ಶ್ರೀ ಭಗವಂತನು ಹೇಳಿದನು:-
ನನ್ನ ನಾಮಗಳನ್ನು ಸಾವಿರಬಾರಿ ಹೇಳಿ ನನ್ನನ್ನು ಸ್ತುತಿಸಿ ಹಾಡಲು ಯಾರು ಇಚ್ಚಿಸುವರೋ ಅವರು ಹಾಗೆಯೇ ಮಾಡಲಿ. ಅದೇ ರೀತಿ ಒಂದು ಶ್ಲೋಕವನ್ನು ಪಠಿಸಿ ಸ್ತುತಿಸುವವರೂ ಹಾಗೆಯೇ ಮಾಡಲಿ . ಇದರಲ್ಲಿ ಸಂಶಯ ಬೇಡ.
25. ವ್ಯಾಸ ಉವಾಚ —
ವಾಸನಾದ್ವಾಸುದೇವಸ್ಯ ವಾಸಿತಂ ಭುವನತ್ರಯಮ್ ।
ಸರ್ವಭೂತನಿವಾಸೋಽಸಿ ವಾಸುದೇವ ನಮೋಽಸ್ತು ತೇ ॥ 25॥
ಶ್ರೀ ವಾಸುದೇವ ನಮೋಽಸ್ತುತ ಓಂ ನಮ ಇತಿ ।
ವ್ಯಾಸ ಹೇಳಿದನು :-
ಸಕಲ ವಿಶ್ವಗಳನ್ನು ತನ್ನ ವಾಸಕ್ಕಾಗಿ ನಿವಾಸಸ್ಥಾನ ಮಾಡಿಕೊಂಡಿರುವ ಆ ಶ್ರೀ ವಾಸುದೇವನಿಗೆ ನನ್ನ ನಮಸ್ಕಾರಗಳು. ಆ ವಿಶ್ವಗಳೆಲ್ಲವೂ ಸರ್ವ ಭೂತಗಳಿಗೆ ಬಾಳಲು ವಾಸಸ್ಥಾನವಾಗಿವೆ, ಮತ್ತು ಎಲ್ಲ ಭೂತಗಳಲ್ಲಿಯೂ ಆತನು ತಮ್ಮ ಆತ್ಮವಾಗಿ ನೆಲಸಲು ಸ್ಥಳವಿದೆ.
ಶ್ರೀ ವಾಸುದೇವನಿಗೆ ನನ್ನ ನಮಸ್ಕಾರಗಳು.
26. ಪಾರ್ವತ್ಯುವಾಚ —
ಕೇನೋಪಾಯೇನ ಲಘುನಾ ವಿಷ್ಣೋರ್ನಾಮಸಹಸ್ರಕಮ್ ।
ಪಠ್ಯತೇ ಪಂಡಿತೈರ್ನಿತ್ಯಂ ಶ್ರೋತುಮಿಚ್ಛಾಮ್ಯಹಂ ಪ್ರಭೋ ॥ 26॥
ಪಾರ್ವತಿ ಹೇಳಿದಳು :-
ಹೇ ಪ್ರಭುವಾದ ಶಿವನೇ! ಪ್ರತಿನಿತ್ಯವೂ ವಿಷ್ಣುವಿನ ಸಹಸ್ರನಾಮಗಳನ್ನು ಪಠಿಸಲು ಪಂಡಿತರಾದವರಿಗೆ ಇರುವ ಸರಳ ಮತ್ತು ಸುಲಭ ಮಾರ್ಗವು ಯಾವುದೆಂದು ತಿಳಿಸಲು ನಾನು ಇಚ್ಛೆಪಡುತ್ತೇನೆ.
27. ಈಶ್ವರ ಉವಾಚ —
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ।
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ॥ 27॥
ಈಶ್ವರ ಹೇಳಿದನು:-
ಓ ಮನೋರಮೆಯೇ, ಸುಂದರ ಮತ್ತು ರಮಣೀಯವಾಗಿರುವಳೇ, ಆಕರ್ಷಕ ವಾದನವನ್ನು ಹೊಂದಿರುವ ಪಾರ್ವತಿಯೇ, ಶ್ರೀರಾಮನಾಮವನ್ನು ಮೂರು ಬಾರಿ – ಶ್ರೀ ರಾಮ, ರಾಮ, ರಾಮ, – ಎಂದು ಪಠಿಸಿದರೆ ಸಾಕು, ಅದು ವಿಷ್ಣುವಿನ ಸಹಸ್ರನಾಮಗಳನ್ನು ಪಠಿಸಿದ್ದಕ್ಕೆ ಸಮನಾಗುತ್ತದೆ. ನನ್ನ ಅಕ್ಕರೆಯ ದೇವಿ, ವಾಸ್ತವವಾಗಿ ರಾಮನ ನಾಮವನ್ನು ಮುರು ಸಲ ಪಠಿಸಿದರೆ ಸಾಕಾಗುತ್ತದೆ.
28. ಬ್ರಹ್ಮೋವಾಚ —
ನಮೋಽಸ್ತ್ವನನ್ತಾಯ ಸಹಸ್ರಮೂರ್ತಯೇ
ಸಹಸ್ರಪಾದಾಕ್ಷಿಶಿರೋರುಬಾಹವೇ ।
ಸಹಸ್ರನಾಮ್ನೇ ಪುರುಷಾಯ ಶಾಶ್ವತೇ
ಸಹಸ್ರಕೋಟಿಯುಗಧಾರಿಣೇ ನಮಃ ॥ 28॥
ಬ್ರಹ್ಮ ಹೇಳಿದನು:-
ಅನಂತನೇ ನಿನಗೆ ನನ್ನ ನಮಸ್ಕಾರಗಳು.
ಸಹಸ್ರ ರೂಪಗಳುಳ್ಳವನೇ, ಸಹಸ್ರನಾಮಗಳನ್ನು ಹೊಂದಿದವನೇ,
ಸಹಸ್ರ ಪಾದಗಳನ್ನು, ಸಹಸ್ರ ಕಣ್ಣುಗಳನ್ನೂ, ಸಹಸ್ರ ಶಿರಗಳನ್ನೂ,
ಸಹಸ್ರ ಬಾಹುಗಳನ್ನೂ ಉಳ್ಳ ನೀನು ಶಾಶ್ವತನಾದ ಪುರುಷ,
ಸಹಸ್ರ ಕೋಟಿ ಯುಗಗಳಷ್ಟು ಅಗಣಿತ ಕಾಲವನ್ನು ಧರಿಸಿರುವವನು ನೀನು. ಇಗೋ ನಿನಗೆ ನನ್ನ ನಮಸ್ಕಾರಗಳು. ಓಂ ನಮಃ.
29. ಸಂಜಯ ಉವಾಚ —
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ॥ 29॥
ಸಂಜಯ ಹೇಳಿದನು:-
ಯೋಗೇಶ್ವರನಾದ ಶ್ರೀಕೃಷ್ಣನು ಎಲ್ಲಿರುವನೋ, ಮತ್ತು ಧನುಸ್ಸನ್ನು ಧರಿಸಿರುವ ಪಾರ್ಥನು ಎಲ್ಲಿರುವನೋ, ಅಲ್ಲಿ ಖಂಡಿತವಾಗಿಯೂ ವಿಜಯ, ಸೌಭಾಗ್ಯ ಮತ್ತು ಅಭ್ಯುದಯ ಇರುತ್ತದೆ. ಇದು ನನ್ನ ಧೃಢ ನಿಶ್ಚಯ.
30. ಶ್ರೀಭಗವಾನುವಾಚ —
ಅನನ್ಯಾಶ್ಚಿನ್ತಯನ್ತೋ ಮಾಂ ಯೇ ಜನಾಃ ಪರ್ಯುಪಾಸತೇ ।
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ॥ 30॥
ಶ್ರೀ ಭಗವಂತನು ಹೇಳಿದನು :-
ಯಾರು ನನ್ನನ್ನು ಹೊರತುಪಡಿಸಿ ಬೇರೆ ಏನನ್ನೂ ಚಿಂತಿಸುವುದಿಲ್ಲವೋ ಮತ್ತು ಧ್ಯಾನದ ಮುಖಾಂತರ ನನ್ನನ್ನು ಸತತವಾಗಿ ಉಪಾಸಿಸುವರೋ, ಅವರ ಯೋಗಕ್ಷೇಮದ ಉಸ್ತುವಾರಿಯನ್ನು ನಾನು ನೋಡಿಕೊಳ್ಳುತ್ತೇನೆ.
31. ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಮ್ಭವಾಮಿ ಯುಗೇ ಯುಗೇ ॥ 31॥
ಸಾಧುಜನರ ರಕ್ಷಣೆಗಾಗಿ, ದುಷ್ಕೃತ್ಯಗಳನ್ನು ಮಾಡುವ ದುಷ್ಟರ ವಿನಾಶಕ್ಕಾಗಿ, ಮತ್ತು ಧರ್ಮದ ಸಂಸ್ಥಾಪನೆಗಾಗಿ, ಯುಗಯುಗಗಳಲ್ಲಿಯೂ ನಾನು ಸ್ವಯಂ ಅವತರಿಸುತ್ತೇನೆ.
32. ಆರ್ತಾಃ ವಿಷಣ್ಣಾಃ ಶಿಥಿಲಾಶ್ಚ ಭೀತಾಃ ಘೋರೇಷು ಚ ವ್ಯಾಧಿಷು ವರ್ತಮಾನಾಃ ।
ಸಂಕೀರ್ತ್ಯ ನಾರಾಯಣಶಬ್ದಮಾತ್ರಂ ವಿಮುಕ್ತದುಃಖಾಃ ಸುಖಿನೋ ಭವನ್ತಿ ॥ 32॥
ಆರ್ತರಾಗಿರುವವರೂ, ವಿಷಣ್ಣರಾಗಿರುವವರೂ, ಶಿಥಿಲವಾಗಿರುವವರೂ, ಭೀತರಾಗಿರುವವರೂ, ಘೋರವಾದ ವ್ಯಾಧಿಗಳಿಂದ ಬಳಲುವವರೂ,ಶ್ರೀಮನ್ನಾರಾಯಣನ ನಾಮಗಳ ಸಂಕೀರ್ತನೆ ಮಾಡಿದಾಗ ಅವರು ದುಃಖಗಳಿಂದ ವಿಮುಕ್ತರಾಗಿ ಸುಖವನ್ನು ಹೊಂದುತ್ತಾರೆ.
33. ಕಾಯೇನ ವಾಚಾ ಮನಸೇನ್ದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಸ್ವಭಾವಾತ್ ।
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ॥ 33॥
ನನ್ನ ಕಾಯದಿಂದ, ಮಾತಿನಿಂದ, ಮನಸ್ಸಿನಿಂದ, ಇಂದ್ರಿಯಗಳಿಂದ, ಬುದ್ಧಿಯಿಂದ ಮತ್ತು ಸ್ವಭಾವದಿಂದ ಮಾಡಿದ ಎಲ್ಲ ಕಾರ್ಯಗಳನ್ನು ಪರಮಾತ್ಮನಾದ ಶ್ರೀ ನಾರಾಯಣನಿಗೆ ಸಮರ್ಪಿಸುತ್ತೇನೆ.
34 ಇತಿ ಶ್ರೀ ಮಹಾಭಾರತೇ ಶತಸಾಹಸ್ರಿಕಾಯಾಮ್ ಸಂಹಿತಾಯಾಂ
ವೈಯಾಸಿಕ್ಯಾಂ ಆನುಶಾಸನಿಕ ಪರ್ವಣಿ ಶ್ರೀ ಭೀಷ್ಮ ಯುಧಿಷ್ಠರ ಸಂವಾದೇ
ಶ್ರೀ ವಿಷ್ಣುಸಹಸ್ರನಾಮಸ್ತೋತ್ರಂ ಸಂಪೂರ್ಣಂ
ಓಂ ತತ್ಸತ್
ಈ ಪ್ರಕಾರ ವ್ಯಾಸರಿಂದ ರಚಿತವಾದ ನೂರು ಸಾವಿರ ಶ್ಲೋಕಗಳುಳ್ಳ ಮಹಾಕಾವ್ಯವಾದ ಶ್ರೀ ಮಹಾಭಾರತದಲ್ಲಿನ ಅನುಶಾಸನ ಪರ್ವದಲ್ಲಿನ ಭೀಷ್ಮ ಮತ್ತು ಯುಧಿಷ್ಠಿರರ ನಡುವೆ ನಡೆದ ಸಂವಾದದಲ್ಲಿ ಬರುವ ಭೀಷ್ಮನಿಂದ ಹೇಳಲ್ಪಟ್ಟ ಶ್ರೀವಿಷ್ಣುಸಹಸ್ರನಾಮವೆಂಬ ಸ್ತೋತ್ರವು ಸಂಪೂರ್ಣವು. ಓಂತತ್ಸತ್.
************************