A SUBHASHITA A DAY
AN INTRODUCTION
INITIATIVE TWO : A SUBHASHITA A DAY
(FROM THE SACRED SOUNDS OF SANSKRIT)
On behalf of the LANKA KRISHNAMURTI FOUNDATION we wish to place on record our appreciation of the encouragement we got for the just concluded programme
A SLOKA A DAY.
We would like to explore another aspect of the initiative for promoting Sanskrit studies. There is a kind of poetic composition in Sanskrit known as Subhashita. It is usually a four-line of two-line stanza. It is used to convey a message or give advice in language that is precise, sharp and direct. Su- means ‘well’ and –bhashita means ‘spoken’. It is an expression that is elegantly styled and easy to memorize.
What is ‘well spoken of’ or the content of the Shubhashita is very important. It reflects, in general, the ethos of our culture which has its own characteristic values. Of them, the ethical values are the essential ones and form an integral part of our culture. The Subhashitas are known for their moral advice, instructions in worldly wisdom and guidance in doing righteous deeds. The Subhashitas deal with various subjects including topics of day to day experiences that everyone can easily relate to. There are thousands of Subhashitas in Sanskrit literature.
Though the authors of most of them are unknown, some of them have been contributed by highly reputed authors like Bhartrhari, Chanakya, Kalidasa and Bhavabhuti. In addition, there are several collections of Subhashitas containing the wise sayings of the famous writers. From such rich fund of Subhashitas, we have selected some valuable ones and will introduce each of them, under the caption A SUBHASHITA A DAY.
ಸುಭಾಷಿತ ಅಂದರೆ ಒಳ್ಳೆಯ ಮಾತು. ಸುಭಾಷಿತಗಳನ್ನು ಓದುವುದರಿಂದ ನಮ್ಮ ಜ್ಞಾನವು ಹೆಚ್ಚುತ್ತದೆ. ಸುಭಾಷಿತಗಳು ನಮಗೆ ನೀತಿಯನ್ನು ಬೋಧಿಸುತ್ತವೆ ಹಾಗೂ ತತ್ವವನ್ನು ಉಪದೇಶ ಮಾಡುತ್ತವೆ. ಸುಭಾಷಿತಗಳು ಮಾರ್ಗದ ದೀಪಗಳಂತೆ ನಮಗೆ ಮಾರ್ಗದರ್ಶನವನ್ನು ಮಾಡುತ್ತವೆ.
- संसार विषवृक्षस्य द्वेफले ह्य्मृउतोपमे
सुभाषित रसास्वादः संगतिः सुजनै सह
ಸಂಸಾರ ವಿಶ ವೃಕ್ಷಸ್ಯ ದ್ವೇಫಲೇ ಹ್ಯಮೃತೋಪಮೆ
ಸುಭಾಶಿತ ರಸಾಸ್ವಾದಃ ಸಂಗತಿಃ ಸುಜನೈಸಹ
On the poisonous tree of Samsara, there are two fruits as tasty indeed as Amruta. One is the sweetness of the sentiment expressed in the Shubhashita and the other is the joy found in the company of virteous people.
ಈ ಪ್ರಪಂಚದಲ್ಲಿರುವ ಸಂಸಾರವೆಂಬ ವಿಷವೃಕ್ಷದಲ್ಲಿ ಅಮೃತಕ್ಕೆ ಸಮಾನವಾದ ಎರಡು ಹಣ್ಣುಗಳಿವೆ. ಅವು ಯಾವುವೆಂದರೆ ಸುಭಾಷಿತಗಳಲ್ಲಿನ ರಸಾಸ್ವಾದವು ಮತ್ತು ಸತ್ಪುರುಷರ ಸಹವಾಸದಿಂದ ಉಂಟಾದ ಆನಂದವು.
2.पुण्यस्य फलमिच्चन्ति पुण्यंनेच्चन्ति मानवाः
नपापाफलमिच्चन्ति पापं कुर्वन्ति यत्नतः
ಪುಣ್ಯಸ್ಯ ಫಲಂ ಇಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ
ನ ಪಾಪ ಫಲಂ ಇಚ್ಛಂತಿ ಪಾಪಂ ಕುರ್ವಂಟತಿ ಯತ್ನತಃ
People in general desire for the benefits coming from punya without performing acts of punya. They don’t want to get the effects of doing papa, while deliberately doing acts of papa.
ಮಾನವರು ಪುಣ್ಯದ ಫಲವನ್ನು ಬಯಸುತ್ತಾರೆ. ಆದರೆ ಪುಣ್ಯದ ಕೆಲಸವನ್ನು ಮಾಡುವುದಿಲ್ಲ. ಪಾಪದ ಫಲವನ್ನು ಬಯಸುವುದಿಲ್ಲ. ಆದರೆ ಪ್ರಯತ್ನ ಪಟ್ಟಾದರೂ ಪಾಪದ ಕೆಲಸವನ್ನು ಮಾಡುತ್ತಾರೆ.
- प्रियवाक्यप्रदानॆन सर्वॆ तुशन्ति जन्तवः
तस्मात् प्रियंति वक्तय्यम् वचनऎ क दरिद्रता
ಪ್ರಿಯವಾಕ್ಯಪ್ರದಾನೇನ ಸರ್ವೇ ತುಶ್ಯಂತಿ ಜಂತವಃ
ತಸ್ಮಾತ್ ಪ್ರಿಯಂತಿ ವಕ್ತಯಮ್ ವಚನೇ ಕ ದರಿದ್ರತಾ
Everyone will be greatly pleased when spoken to in a kind and agreeable manner. Therefore, let everyone be generous in pleasing others by making agreeable speech. Why poverty in speech?
ಪ್ರೀತಿಯ ಮಾತನ್ನು ನುಡಿಯುವುದರಿಂದ ಎಲ್ಲಾ
ಪ್ರಾಣಿಗಳೂ ಸಂತೋಷವನ್ನು ಹೊಂದುತ್ತವೆ. ಆದ್ದರಿಂದ ನಾವು ಪ್ರೀತಿಯ ಮಾತನ್ನೇ ನುಡಿಯಬೇಕು. ಮಾತಿನಲ್ಲೇಕೆ ಬಡತನ.
- दानं भोगो नाशः तिस्रो गतयो भवन्ति वित्तस्य
यो न ददाति न भुङ्ग्ते तस्या तृतीया गतिर्भवति
ದಾನಂ ಭೊಗೋ ನಾಶಃ ತಿಸ್ರೊ ಗತಯೊ ಭವಂತಿ ವಿತ್ತಸ್ಯ
ಯೊ ನ ದದಾತಿ ನ ಭುಂಗ್ತೆ ತಸ್ಯ ತೃತಿಯಾ ಗತಿರ್ಭವತಿ
Money operates in three ways: it helps one to make a gift or it brings enjoyment; otherwise, it causes ruin. One who uses it neither to share with others nor to buy his own enjoyment will surely get ruined.
ಹಣಕ್ಕೆ ದಾನ ಮಾಡುವುದು, ಅನುಭವಿಸುವುದು, ನಾಶವಾಗುವುದು ಎಂಬ ಮೂರು ಗತಿಗಳಿವೆ. ಯಾರು ತಮ್ಮಲ್ಲಿರುವ ಹಣವನ್ನು ದಾನ ಮಾಡುವುದಿಲ್ಲವೋ, ಅನುಭವಿಸುವುದಿಲ್ಲವೋ ಅವರ ಹಣಕ್ಕೆ ನಾಶವೇ ಗತಿ.
5.लालयेत् पन्च वर्षाणि दश वर्षाणि ताडयेत्
प्राप्थे तु षॊडशे वर्षे पुथ्रं मित्रवदाचरेत्
ಲಾಲಯೇತ್ ಪಂಚ ವರ್ಷಾಣಿ ದಶವರ್ಷಾಣಿ ತಾಡಯೇತ್
ಪ್ರಾಪ್ತೇ ತು ಷೋಡಶೇ ವರ್ಶೇ ಪುತ್ರಂ ಮಿತ್ರವದ್ ಆಚರೇತ್
The child needs to be fondled till the fifth year; thereafter till the tenth year,he deserves to be punished for wrong doing; but when he crosses the sixteenth year, the son requires to be treated like a friend.
ನಾವು ಮಕ್ಕಳನ್ನು ಐದು ವರ್ಷದ ತನಕ ಪ್ರೀತಿಸಬೇಕು. ಐದು ವರ್ಷ ಆದ ಮೇಲೆ ಹದಿನೈದು ವರ್ಷದ ತನಕ ಚೆನ್ನಾಗಿ ಅವರನ್ನು ಶಿಕ್ಷಿಸಬೇಕು. ಹದಿನೈದು ವರ್ಷಗಳು ಆದ ಮೇಲೆ ಮಕ್ಕಳನ್ನು ನಾವು ಮಿತ್ರರಂತೆ ನೋಡಿಕೊಳ್ಳಬೇಕು.
6.काका आह्वय्ते काकान् याचको नतु याचकान्
काका याचकोय्र्मध्ये वरं काको नातु याचकः
ಕಾಕ ಆಹ್ವಯತೆ ಕಾಕಾನ್ ಯಾಚಕೋ ನತು ಯಾಚಕಾನ್
ಕಾಕ ಯಾಚಕಯೋರ್ಮಧ್ಯೇ ವರಂ ಕಾಕೋ ನ ಯಾಚಕಃ
When some food is available, a crow invites other crows to share it with them. A beggar on the other hand does’nt allow other beggars to share with him. Between a crow and a beggar, the crow gets preference over the beggar.
ಕಾಗೆಯು ತನಗೆ ಆಹಾರ ಸಿಕ್ಕಿದಾಗ ಎಲ್ಲಾ ಕಾಗೆಗಳನ್ನು ಕೂಗಿ ಕೂಗಿ ಹಂಚಿಕೊಂಡು ತಿನ್ನುತ್ತದೆ. ಆದರೆ ಭಿಕ್ಷುಕನು ತನಗೆ ಆಹಾರ ಸಿಕ್ಕಿದರೆ ಯಾರನ್ನೂ ಕರೆಯುವುದಿಲ್ಲ. ಕಾಗೆ ಮತ್ತು ಯಾಚಕರ ಮಧ್ಯದಲ್ಲಿ ಕಾಗೆಯೇ ಶ್ರೇಷ್ಥ. ಭಿಕ್ಷುಕನಲ್ಲ.
- विद्या ददाति विनयं विनयाद्याति पात्रतां
पात्रित्वात् धनमाप्नॊति धनाद्धर्मं ततः सुखं
ವಿದ್ಯಾ ದದಾತಿ ವಿನಯಮ್ ವಿನಯಾದ್ಯಾತಿ ಪಾತ್ರತಾಂ
ಪಾತ್ರತ್ವಾತ್ ಧನಮಾಪ್ನೋತಿ ಧನಾದ್ಧರ್ರ್ಮಂ ತತಃ ಸುಖಂ
Sound knowledge ensures modesty in disposition; Sound disposition shapes one’s character; Sound character helps one to acquire wealth; With wealth one develops a dharmic attitude; And dharma keeps one in a state of happiness.
ವಿದ್ಯೆಯು ಹೃದಯ ಸಂಸ್ಕಾರವೆಂಬ ವಿನಯವನ್ನು ಕೊಡುತ್ತದೆ. ಆ ವಿನಯದಿಂದ ಮನುಷ್ಯನು ಗೌರವವನ್ನು ಹೊಂದುತ್ತಾನೆ. ಗೌರವದಿಂದ ಹಣವನ್ನು ಪಡೆದು, ಹಣದಿಂದ ಧರ್ಮದ ಕೆಲಸವನ್ನು ಮಾಡಿ, ಅದರಿಂದ ಶಾಂತಿಯನ್ನು ಹೊಂದುತ್ತಾನೆ.
- यथा खनन् खनित्रेण नरो वार्यधिगच्छति
यॆवं गुरुगताम् विद्य़ां शुश्रुषुरधिगच्छति
ಯಥಾ ಖನನ್ ಖನಿತ್ರೇಣ ನರೋವಾರ್ಯ್ಯಥಿ ಗಚ್ಚತಿ
ಏವಂ ಗುರುಗತಾಂ ವಿದ್ಯಾಂ ಶುಶ್ರೂಷುರಥಿ ಗಚ್ಚತಿ
Just as one gets to find water by digging deep into the earth with the help of a spade, so does one desirous of learning goes seeking it from a well-informed guru.
ಹೇಗೆ ಮಾನವನು ಪಿಕಾಸಿಯಿಂದ ಭೂಮಿಯನ್ನು ಅಗೆದು ನೀರನ್ನು ಹೊಂದುತ್ತಿದ್ದಾನೆಯೋ ಹಾಗೆಯೇ ವಿದ್ಯೆಯನ್ನು ಹಂಬಲಿಸುವ ವಿದ್ಯಾರ್ಥಿಯು ಗುರುವಿನ ಸೇವೆಯನ್ನು ಮಾಡಿ ಅವರ ಬಳಿ ಇರುವ ವಿದ್ಯೆಯನ್ನು ಹೊಂದುತ್ತಾನೆ.
9.आलस्यं हि मनुष्याणां नास्त्युद्यमसमो बन्धुः
शरीरस्थो महान् रिपुः कुर्वाणो नावसीदति
ಆಲಸ್ಯಂಹಿ ಮನುಷ್ಯಾಣಾಂ ನಾಸ್ತುಧ್ಯೇಮ ಸಮೋ ಬಂಧುಃ
ಶರೀರಸ್ಥೋ ಮಹಾನ್ರಿಪುಃ ಕುರ್ವಾಣೋ ನಾವಸೀದತಿ
Indolence or laziness is the greatest enemy within us. There is no relative better than industry or hard work. Those who put in hard work will never face ruin.
ಸೋಮಾರಿತನವೆಂಬುದು ಮನುಷ್ಯನ ಶರೀರದಲ್ಲಿರುವ ದೊಡ್ಡ ಶತ್ರು. ಪ್ರಯತ್ನಕ್ಕೆ ಸಮನಾದ ಬಂಧುವಿಲ್ಲ. ಪ್ರಯತ್ನ ಮಾಡುವವನು ಎಂದಿಗೂ ನಾಶವಾಗುವುದಿಲ್ಲ.
10.जिह्वे प्रमाणं जानीहि भाषणे भोजनेऽपि च
अत्युक्तिरतिभुक्तिश्च सत्यं प्राणापहारिणी
ಜಿಹ್ವೇ ಪ್ರಮಾಣಂ ಜಾನೀಹಿ ಭಾಷಣೆ ಭೋಜನೇಪಿಚ
ಅತ್ಯುಕ್ತಿ ರತಿಭುಕ್ತಿಸ್ವ ಸದ್ಯಃ ಪ್ರಾಣಾಪಹಾರಿಣಿ
O tongue, know for sure that in respect of
speaking and eating, excess of talking as
well as excess of eating takes away one’s
own life.
ಎಲೆ ನಾಲಿಗೆಯೇ ಮಾತನಾಡುವುದರಲ್ಲಿ ಮತ್ತು ಊಟ
ಮಾಡುವುದರಲ್ಲಿ ಮಿತವನ್ನು ತಿಳಿ. ಏಕೆಂದರೆ ಹೆಚ್ಚು
ಮಾತನಾಡುವುದು ಮತ್ತು ಹೆಚ್ಚು ತಿನ್ನುವುದು ಪ್ರಾಣಕ್ಕೆ ಅಪಾಯ.
11.उद्यमेन हि सिध्यन्ति कार्याणि न मनोरथैः
न हि सुप्तस्य सिंहस्य प्रविशन्ति मुखे मृगाः
ಉದ್ಯಾಮೇನಹಿ ಸಿಧ್ಯಂತಿ ಕಾರ್ಯಾಣಿ ನ ಮನೋರಥೈಃ
ನಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ
It is only by industry or hard work that work
of any kind gets accomplished, not by
mere wishing. Will animals enter the mouth
of a sleeping lion?
ಕೆಲಸಗಳು ಪ್ರಯತ್ನದಿಂದಲೇ ಫಲಿಸುತ್ತವೇ ಹೊರತು
ಬಯಕೆಗಳಿಂದ ಅಲ್ಲ. ಮಲಗಿರುವ ಸಿಂಹದ ಬಾಯಿ ಒಳಗೆ
ಯಾವ ಪ್ರಾಣಿಗಳೂ ಪ್ರವೇಶಿಸುವುದಿಲ್ಲ.
- पुस्तकस्था तु या विद्या परहस्तगतं धनम्
कार्यकाले समुत्पन्ने न सा विद्या न तद्धनम्
ಪುಸ್ತಕಸ್ಥಾ ತು ಯಾ ವಿದ್ಯಾ ಪರಹಸ್ತ ಗತಂ ಧನಂ
ಕಾರ್ಯಕಾಲೇ ಸಮುತ್ಪನ್ನೇ ನಸಾ ವಿದ್ಯಾ ನತತ್ ಧನಂ
If knowledge is confined to books and if
wealth is in the hands of someone else,
when the hour of need comes, they cease to
be knowledge and wealth.
ಯಾರ ವಿದ್ಯೆಯು ಪುಸ್ತಕಕ್ಕೆ ಸೀಮಿತವಾಗಿರುತ್ತದೆಯೋ,
ಯಾರ ಹಣವು ಬೇರೆಯವರ ಕೈಸೇರಿರುತ್ತದೆಯೋ
ದರ ಉಪಯೋಗದ ಸಮಯವು ಬಂದಾಗ ಅದು
ವಿದ್ಯೆಯಾಗಿ ಮತ್ತು ಹಣವಾಗಿ ಉಳಿಯುವುದಿಲ್ಲ.
13.नास्ति विद्या समं चक्षुः नास्ति सत्य समं तपः
नास्ति राग समं दु:खं नास्ति त्याग समं सुखं
ನಾಸ್ತಿ ವಿದ್ಯಾ ಸಮಂ ಚಕ್ಷುಃ ನಾಸ್ತಿ ಸತ್ಯ ಸಮಂ ತಪಃ
ನಾಸ್ತಿ ರಾಗಸಮಂ ದುಖಂ ನಾಸ್ತಿ ತ್ಯಾಗ ಸಮಂ ಸುಖಂ
ವಿದ್ಯಕ್ಕೆ ಸಮಾನವಾದ ಕಣ್ಣಿಲ್ಲ ಸತ್ಯಕ್ಕೆ ಸಮಾನವಾದ ತಪಸ್ಸಿಲ್ಲಾ
ಆಸೆಗೆ ಸಮಾನವಾದ ದುಃಖವಿಲ್ಲ ತ್ಯಾಗಕ್ಕೆ ಸಮಾನವಾದ ಸುಖವಿಲ್ಲ
There is no vision equal to the one given by Knowledge;
No tapas is equal to truth; No sorrow equals the one caused by desire;
and No happiness is better than thyaga or sacrifice.
- ददाति प्रतिगृह्णाति गृह्यामाख्याति पृच्छति
भ्ंघ्तॆ भोजयते नित्यं षदविधं प्रीतिलक्षणं
ದದಾತಿ ಪ್ರತಿಗೃಹ್ಣಾತಿ ಗುಹ್ಯಮಾಖ್ಯಾತಿ ಪೃಚ್ಛತಿ
ಭುಂಘ್ತೇ ಭೋಜಯತೆ ನಿತ್ಯಂ ಷಡ್ವಿಧಂ ಪ್ರೀತಿಲಕ್ಷಣಂ
Affection finds expression in six different ways:
offering gifts to others and acceptingsuch things from others;
revealing one’s mind secretly and enquiring from others confidentially; and eating food and offering it to others.
ಕೊಡುವುದು,ಸ್ವೀಕರಿಸುವುದು, ರಹಸ್ಯವನ್ನುಹೇಳುವುದು
ಕೇಳುವುದು,ಊಟ ಮಾಡುವುದು,ಊಟ ಮಾಡಿಸುವುದು, ಈ
ಆರೂ ಪ್ರತಿ ದಿನವೂ ಮಾಡುವ ಪ್ರೀತಿಯ ಲಕ್ಷಣ.
- यास्तु संचरते देशान् स्तु सेवॆत पंडितान्
तस्य विस्तारिता बुद्धिः तैल बिंदु रिवांभासा
ಯಸ್ತು ಸಂಚರತೇ ದೇಶಾನ್ ಯಸ್ತು ಸೇವೇತ ಪಂಡಿತಾನ್
ತಸ್ಯ ವಿಸ್ತಾರಿತಾ ಬುದ್ಧಿಃ ತೈಲ ಬಿಂದು ರಿವಾಂಭಸಾ
He who has the experience of visiting
several countries and serving under eminent
scholars has an intellect that spreads like
the drop of oil on a sheet of water.
ಯಾವ ಮನುಷ್ಯನು ದೇಶ ವಿದೇಶಗಳನ್ನು ಸುತ್ತಿ ಅರಿಯುವನೋ, ಯಾರು ಹಿರಿಯರ ಸೇವೆಯನ್ನು ಮಾಡುವನೋ, ಅವನ ಬುದ್ಧಿಯು ನೀರಿನ ಜೊತೆ ಗೂಡಿದ ಎಣ್ಣೆಯ ಬೊಟ್ಟಿನಂತೆ
ವಿಸ್ತಾರಗೊಳ್ಳುತ್ತದೆ.
- ज्झातिभिर्वंट्यतॆ नैव चॊरॆणापि न नीयते
दानॆनैव क्षयं याति विद्यार्अत्नं महाधन्ं
ಜ್ಝಾತಿಭಿರ್ವಂಟ್ಯತೇ ನೈವ ಚೋರೇಣಾಪಿ ನ ನೀಯತೆ
ದಾನೇನೈವ ಕ್ಷಯಂ ಯಾತಿ ವಿದ್ಯಾರತ್ನಂ ಮಹಾಧನಂ
Knowledge is like a treasure-house of precious
diamonds which remains intact: relatives
cannot claim to divide it; thieves cannot carry it
away; and it will not be reduced by any kind of gifting.
ವಿದ್ಯೆಯೆಂಬ ಹಣವು ದಾಯಾದಿಗಳಿಂದ ವಿಭಜಿಸಲ್ಪಡುವುದಿಲ್ಲ.
ಕಳ್ಳರಿಂದಲು ಕೂಡಾ ಅಪಹರಿಸಲ್ಪಡುವುದಿಲ್ಲ. ದಾನ ಮಾಡಿದರಷ್ಟೂ
ನಾಶವಾಗುವುದಿಲ್ಲ. ಆದ್ದರಿಂದ ವಿದ್ಯೆಯೆಂಬ ಹಣವು ಶ್ರೇಷ್ಠವಾದುದು.
- गोउरवं प्राप्यतॆ दानात् न तु वित्तस्य संचयाथ्
स्थितिरुच्चैः पयॊदानां पयॊधीनां मदस्तितिः
ಗೌರವಂ ಪ್ರಾಪ್ಯತೇ ದಾನಾತ್ ನ ತು ವಿತ್ತಸ್ಯ ಸಂಚಯಾತ್
ಸ್ಥಿತಿರುಚ್ಚೈಃ ಪಯೋದಾನಾಂ ಪಯೋಧೀನಾಂ ಮಧಸ್ಥಿತಿಃ
People attain distinction by giving, by
making daana, but not through amassing
wealth. Rain-giving clouds stand high above
and the ocean filled with water always takes
a lower position.
ಹಣವನ್ನು ದಾನ ಮಾಡುವುದರಿಂದ ಗೌರವವು
ದೊರೆಯಲ್ಪಡುತ್ತದೇ ಹೊರತು ಹಣವನ್ನು
ಸಂಗ್ರಹಮಾಡುವುದರಿಂದ ಅಲ್ಲ. ಇದಕ್ಕೆ ಉದಾಹರಣೆ
ಮೋಡಗಳ ಸ್ಥಿತಿಯು ಮೇಲಿದೆ, ಸಮುದ್ರಗಳ ಸ್ಥಿತಿಯು ಕೆಳಗಿದೆ.
18.सत्यं ब्रूयत् प्रियं ब्रूयत् नब्रूयत् सत्यमप्रियं
अप्रियस्यच पथ्यस्य वक्ता श्रोताच दुर्लभः
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಬ್ರೂಯಾತ್ ಸತ್ಯಮಪ್ರಿಯಂ
ಅಪ್ರಿಯಸ್ಯಚ ಪಥ್ಯಸ್ಯ ವಕ್ತಾ ಶ್ರೊತಾಚ ದುರ್ಲಭಃ
Say what is true; say what is sweet; but do
not say what is true if it is unpleasant. Rarely
do we come across a person who says, or
listens to, what is beneficial but unpleasant.
ಸತ್ಯವನ್ನು ನುಡಿಯಬೇಕು. ಪ್ರೀತಿಯ ಮಾತನ್ನು ನುಡಿಯಬೇಕು .
ಕಟುವಾದ ಅಪ್ರಿಯವಾದ ಸತ್ಯವನ್ನು ನುಡಿಯಬಾರದು.
ಅಪ್ರಿಯವಾದ ಸತ್ಯವನ್ನು ಹೇಳುವವನೂ ದುರ್ಲಭ ,
ಕೇಳುವವನೂ ದುರ್ಲಭ.
- काकः कृष्णः पिकः कृष्णः कॊ भॆदः पिककाकयॊः
वसंत समयॆ प्रप्ते काकः काकः पिकः पिकः
ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೊ ಭೇದಃ ಪಿಕಕಾಕಯೋಃ
ವಸಂತ ಸಮಯೇ ಪ್ರಾಪ್ತೆ ಕಾಕಃ ಕಾಕಃ ಪಿಕಃ ಪಿಕಃ
The crow and the cuckoo both look alike
being black in colour. How do we
differentiate one from the other? It is when
the Spring season comes that we will know
which is the crow and which is the cuckoo.
ಕಾಗೆಯು ಕಪ್ಪು, ಕೋಗಿಲೆಯೂ ಕಪ್ಪು.ಕಾಗೆ ಮತ್ತು ಕೋಗಿಲೆಗೆ
ಭೇದವೇನಿದೆ . ವಸಂತ ಸಮಯವು ಬಂದಾಗ ಕಾಗೆ ಕಾಗೆಯೇ,
ಕೋಗಿಲೆ ಕೋಗಿಲೆಯೇ. ಎಂಬುದು ಗೊತ್ತಾಗುತ್ತದೆ.
20.रूप यव्वन संपन्नाः विशालकुलस्ंभवाः
विद्याहीना न शॊभंते निर्गंधा इव किंशुकाः
ರೂಪ ಯವ್ವನ ಸಂಪನ್ನಾಃ ವಿಶಾಲಕುಲಸಂಭವಾಃ
ವಿದ್ಯಾಹೀನಾ ನ ಶೋಭಂತೇ ನಿರ್ಗಂಧಾ ಇವ ಕಿಂಶುಕಾಃ
Though endowed with good looks as well as
youth and though descended from a
distinguished family, persons devoid of
education do not shine forth like the
odourless Kimsuka flowers!
ಒಳ್ಳೆಯ ರೂಪವನ್ನು ಹೊಂದಿದರೂ ಯವ್ವನವನ್ನು ಹೊಂದಿದರೂ
ವಿಶಾಲವಾದ ಶ್ರೇಷ್ಠವಾದ ವಂಶದಲ್ಲಿ ಹುಟ್ಟಿದರೂ
ವಿದ್ಯೆಇಲ್ಲದವರು ವಾಸನೆ ಇಲ್ಲದ ಮುತ್ತುಗದ ಹೂವುಗಳಂತೆ
ವಿರಾಜಿಸುವುದಿಲ್ಲ.
- आचार्यात् पादमादत्तॆ पादं शिष्यः समॆधया
पादं सब्रह्मचारिभ्यः पादं कालक्रमॆणच
ಆಚಾರ್ಯಾತ್ ಪಾದಮಾದತ್ತೇ ಪಾದಂ ಶಿಷ್ಯಃ ಸಮೇಧಯಾ
ಪಾದಂ ಸಬ್ರಹ್ಮಚಾರಿಭ್ಯಃ ಪಾದಂ ಕಾಲಕ್ರಮೇಣಚ
A student’s acquisition of knowledge takes
place in the following manner: a quarter of it
he gets from his guru; another quarter with
the help of his own Intelligence; the third
quarter he gets from his fellow-students;
and the rest with the passage of time.
ಶಿಷ್ಯನಾಗಿರುವವನು ವಸ್ತುವಿನ ಜ್ಞಾನವನ್ನು, ಗುರುವಿನಿಂದ
ಕಾಲುಭಾಗವನ್ನೂ, ತನ್ನ ಬುದ್ಧಿವಂತಿಕೆಯಿಂದ ಕಾಲುಭಾಗವನ್ನೂ,
ಸಹಪಾಠಿಗಳಿಂದ ಕಾಲುಭಾಗವನ್ನೂ, ಹಾಗೆಯೇ ಕಾಲ
ಕಳೆದಹಾಗೆ ಉಳಿದ ಕಾಲುಭಾಗವನ್ನೂ ತಿಳಿಯುತ್ತಾನೆ .
22.पादपानां भयं वातः पद्मानां शिशिरॊभयं
पर्वताना भयं वज्र्ः साधूनां दुर्जनॊभयं
ಪಾದಪಾನಾಂ ಭಯಂ ವಾತಃ ಪದ್ಮಾನಾಂ ಶಿಶಿರೋಭಯಂ
ಪರ್ವತಾನಾಂ ಭಯಂ ವಜ್ರಃ ಸಾಧುನಾಂ ದುರ್ಜನೋಭಯಂ
The Wind causes fear in the trees; the Dew
frightens the lotus flowers; the Thunderbolt
is dreaded by the mountains; and the Evil
persons pose a threat to the good and
innocent persons!
ಮರಗಳಿಗೆ ಗಾಳಿಯಿಂದ ಭಯ. ಕಮಲಗಳಿಗೆ ಮಂಜಿನಿಂದ
ಭಯ. ಪರ್ವತಗಳಿಗೆ ವಜ್ರದಿಂದ ಭಯ. ಸಾಧು ಸತ್ಪುರಷರಿಗೆ
ದುರ್ಜನರಿಂದ ಭಯ.
23.कीटॊपि सुमनस्स्ंगात् आरॊहति सतां शिरः
अश्मापि याति दॆवत्वं महद्भिः सुप्रतिष्ठ्तः
ಕೀಟೋಪಿ ಸುಮನಸ್ಸಂಗಾತ್ ಆರೋಹತಿ ಸತಾಂ ಶಿರಃ
ಅಶ್ಮಾಪಿ ಯಾತಿ ದೇವತ್ವಂ ಮಹದ್ಭಿಃ ಸುಪ್ರತಿಷ್ಠಿತಃ
Even an insect, in the company of a flower,
will be able to climb up the head of a
virtuous person; likewise, even a stone
attains a state of divinity when it is
consecrated by worthy persons.
ಕ್ರಿಮಿಯು ಕೂಡಾ ಹೂವಿನ ಸಹವಾಸದಿಂದ ಎಲ್ಲರ
ತಲೆಯಲ್ಲಿಯೂ ಮುಡಿಯಲ್ಪಡುತ್ತದೆ. ಹಾಗೆಯೇ ಕಲ್ಲು ಕೂಡಾ
ಮಹಾಪುರುಷರಿಂದ ಪ್ರತಿಷ್ಠಿಸಲ್ಪಟ್ಟು ದೇವ ತ್ವವನ್ನು ಹೊಂದುತ್ತದೆ.
24.निर्वनो वध्यतॆ व्याघ्रः निर्याघ्रं चिद्यतॆ वनं
तस्मात् व्याघ्रॊ वनं रक्षॆत् वनं व्याघ्रं च पालयॆत्
ನಿರ್ವನೊ ವಧ್ಯತೇ ವ್ಯಾಘ್ರಃ ನಿರ್ವ ಚಿದ್ಯತೇ ವನಂ
ತಸ್ಮಾತ್ ವ್ಯಾಘ್ರೋ ವನಂ ರಕ್ಷೇತ್ ವನಂ ವ್ಯಾಘ್ರಂ ಚ ಪಾಲಯೇತ್
The tiger will not survive without the forest;
without the tiger, the forest will not remain
intact — it will be ripped off; therefore, the
tiger should protect the forest and the forest
should take care of the tiger!
ಕಾಡು ಇಲ್ಲದಿದ್ದರೆ ಹುಲಿಯು ಸಾಯಿಸಲ್ಪಡುತ್ತದೆ. ಹುಲಿಯು
ಇಲ್ಲದಿದ್ದರೆ ಕಾಡು ಕಡೆಯಲ್ಪಡುತ್ತದೆ. ಆದ್ದರಿಂದ ಹುಲಿಯು
ಕಾಡನ್ನು ರಕ್ಷಿಸಬೇಕು. ಕಾಡು ಹುಲಿಯನ್ನು ಪೋಷಿಸಬೇಕು .
- अपि स्वर्णमयी लंका नमे लक्ष्मण रोचते
जननी जन्मभूमिश्च स्वर्गादपि गरीयसि
ಅಪಿ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೆ
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ
O Lakshmana, I am not fascinated by this golden
city of Lanka. I consider one’s mother and one’s
own motherland to be more precious than
Heaven even.
ಓ ಲಕ್ಷ್ಮಣ ಲಂಕಾ ನಗರವು ಸ್ವರ್ಣ ಮಯವಾದರೂ ನನಗೆ
ಇಷ್ಟವಾಗುವುದಿಲ್ಲ. ಏಕೆಂದರೆ ತಾಯಿ ಮತ್ತು ತಾಯಿನಾಡು
ಸ್ವರ್ಗಕ್ಕಿಂತಲೂ ಮಿಗಿಲಾದುವು.
26 अभिवादन शीलस्य नित्यं व्रुद्धोपसेविनः
चत्वारि तस्य वर्धन्ते आयुर्विद्यायशोबलं
ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪ ಸೇವಿನಃ
ಚತ್ವಾರಿ ತಸ್ಯ ವರ್ಧನ್ತೇ ಆಯುರ್ವಿದ್ಯಾಯಶೋಬಲಂ
One who has cultivated the habit of greeting
people and of attending to the needs of the
elders will earn a four-fold blessing of
longevity, good education, reputation and
strength.
ಪ್ರತಿದಿನವೂ ಎಲ್ಲರಿಗೂ ನಮಸ್ಕಾರ ಮಾಡುವ ಸ್ವಭಾವ
ಉಳ್ಳವನಿಗೆ ಮತ್ತು ಹಿರಿಯರನ್ನು ಉಪಚರಿಸುವವನಿಗೆ
ಆಯಸ್ಸು, ವಿದ್ಯೆ, ಕೀರ್ತಿ ಮತ್ತು ಶಕ್ತಿ ಈ ನಾಲಕ್ಕೂ ಹೆಚ್ಚುತ್ತವೆ.
- परॊपकार शून्यस्य धिक् मनुष्यस्य जीवितम्
जीवंतु पशवॊ ऎशां चर्मा ह्युप करिष्यति
ಪರೋಪಕಾರ ಶೂನ್ಯಸ್ಯ ಧಿಕ್ ಮನುಷ್ಯಸ್ಯ ಜೀವಿತಮ್
ಜೀವಂತು ಪಶವೋ ಏಷಾಂ ಚರ್ಮಾ ಹ್ಯುಪ ಕರಿಷ್ಯತಿ
Shame on the life of a person who has never
done any benevolent deed. His life is wasted.
On the other hand, the animals are blessed
as their skin will be used as leather even
after their death.
ಪರೋಪಕಾರ ಮಾಡದೇ ಇರುವವನ ಜನ್ಮವು ವ್ಯರ್ಥ. ಯಾರ
ಚರ್ಮವು ಸಹ ಉಪಕಾರಕ್ಕೆ ಬರುತ್ತದೆಯೋ ಅಂತಹ ಪಶುಗಳು
ಜೀವಿಸಲಿ.
- असहायः पुमान् ऎकः कार्यांतं नाधि गच्चति
तुषॆणापि विनिर्मुक्तः तंडुळॊ नप्रह्ररॊहति
ಅಸಹಾಯಃ ಪುಮಾನ್ ಏಕಃ ಕಾರ್ಯಾಂತಂ ನಾಧಿ ಗಚ್ಛತಿ
ತುಷೇಣಾಪಿ ವಿನಿರ್ಮುಕ್ತಃ ತಂಡುಳೋ ನಪ್ರರೋಹತಿ
An individual alone without any assistance
from others will not accomplish anything,
just as, with the husk removed, seeds of rice
will not germinate.
ಮಾನವನು ಸಹಾಯವಿಲ್ಲದೇ ಯಾವ ಕಾರ್ಯದ ಫಲವನ್ನು
ಹೊಂದುವುದಕ್ಕೆ ಸಾಧ್ಯವಿಲ್ಲ. ಬತ್ತದ ಹೊಟ್ಟನ್ನು ಬೇರ್ಪಡಿಸಿದರೂ
ಅದು ಬೆಳೆಯುವುದಿಲ್ಲ.
- क्ष्ण्श्ः कणशश्चैव विद्यामर्थं च साधयॆत्
क्षणत्यागॆ कुतॊ विद्या कणत्यागॆ कुतॊ धनं
ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್
ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಂ
Every single moment matters in the
acquisition of knowledge. So also, every
single bit of money matters in the
acquisition of wealth. Make each moment
and each bit count or you will fail to earn
knowledge and wealth.
ನಾವು ವಿದ್ಯೆಯನ್ನು ಕ್ಷಣ ಕ್ಷಣದಲ್ಲಿಯೂ, ಹಣವನ್ನು ಕಾಳು
ಕಾಳಿನಲ್ಲಿಯೂ ಗಳಿಸಬೇಕು. ಒಂದು ಕ್ಷಣ ನಾಶವಾದರೆ ವಿದ್ಯೆಯು
ಎಲ್ಲಿಂದ ಬರುತ್ತದೆ. ಒಂದು ಕಾಳು ನಾಶವಾದರೆ ಹಣವು ಎಲ್ಲಿಂದ
ಬರುತ್ತದೆ.
- गंगा पापं शशीतापं न्यं कल्पतरुस्तथा
पापं तापं च दैन्यं च घ्नण्ति सन्तॊ महायशाः
ಗಂಗಾ ಪಾಪಂ ಶಶೀತಾಪಂ ದೈನ್ಯಂ ಕಲ್ಪತರುಸ್ತಥಾ
ಪಾಪಂ ತಾಪಂ ಚ ದೈನ್ಯಂ ಚ ಘ್ನಣ್ತಿ ಸನ್ತೋ ಮಹಾಯಶಾಃ
Sin is washed out by the River Ganga. Heat is cooled by the Moon. Poverty is removed by the Kalpataru, the Wish-Fulfilling Tree. But all the three,– sin, heat and poverty – get nullified in the company of great people.
ಗಂಗೆ ಪಾಪವನ್ನು, ಚಂದ್ರನು ತಾಪವನ್ನು,ಕಲ್ಪವೃಕ್ಷವು ದೈನ್ಯವನ್ನು ನಿವಾರಿಸಿದರೆ, ಹೆಚ್ಚು ಕೀರ್ತಿ ಉಳ್ಳ ಸತ್ಪುರುಷರು ಪಾಪವನ್ನು, ತಾಪವನ್ನು ಮತ್ತು ದೈನ್ಯವನ್ನು ನಿವಾರಿಸುತ್ತಾರೆ.
31.अयं निजः परॊ वॆति गणना लघु चॆतसां
उदार्चरितानां तु वसुधैव कुटुंबकं
ಅಯಂ ನಿಜಃ ಪರೋ ವೇತಿ ಗಣನಾ ಲಘು ಚೇತಸಾಂ
ಉದಾರಚರಿತಾನಾಂ ತು ವಸುಧೈವ ಕುಟುಂಬಕಂ
Petty-minded people differentiate between ‘ours’ and ‘theirs’. But for the broad-minded people
the whole world is one big family. Petty-minded people differentiate between ‘ours’ and ‘theirs’. But for the broad-minded people the whole world is one big family.
ಇವನು ನಮ್ಮವನು ಇವನು ಬೇರೆಯವನು ಎನ್ನುವುದು ಸಂಕುಚಿತ ಮನಸ್ಸು ಉಳ್ಳವರ ಲೆಕ್ಕವಾಗಿರುತ್ತದೆ. ಆದರೆ ಉದಾರವಾದ ಮನಸ್ಸು ಉಳ್ಳವರಿಗೆ ಪ್ರಪಂಚವೆಲ್ಲವೂ ತನ್ನ ಕುಟುಂಬವಾಗುತ್ತದೆ.
- उदयॆ सविता रक्तॊ रक्तश्चास्तमयॆ तथा
संत्तौ च विपत्तौ च महतामॆकरूपता
ಉದಯೇ ಸವಿತಾ ರಕ್ತೋ ರಕ್ತಸ್ಚಾಸ್ತಮಯೇ ತಥಾ
ಸಂಪತ್ತೌ ಚ ವಿಪತ್ತೌ ಚ ಮಹತಾಮೇಕರೂಪತಾ
The sun shines brightly red both at the dawn and the
dusk. Similarly, great people remain even-minded
both in prosperity and adversity.
ಸೂರ್ಯನು ಉದಯಿಸುವಾಗ ರಕ್ತದ ವರ್ಣವುಳ್ಳವನಾಗಿರುತ್ತಾನೆ. ಹಾಗೆಯೇ ಮುಳುಗುವ ಸಮಯದಲ್ಲಿಯೂ ರಕ್ತದ ವರ್ಣವುಳ್ಳವನಾಗಿರುತ್ತಾನೆ. ಹಾಗೆಯೇ ಸತ್ಪುಷರು ಸುಖದಲ್ಲಿಯೂ ಮತ್ತು ಕಷ್ಟದಲ್ಲಿಯೂ ಒಂದೇ ರೀತಿಯಾಗಿರುತ್ತಾರೆ.
- यथा दॆशस्तथा भाषा यथा बीजं तथांकुरः
यथा भूमिस्तथा तॊयं यथा राजा तथा प्रजाः
ಯಥಾ ದೇಶಸ್ತಥಾ ಭಾಷಾ ಯಥಾ ಬೀಜಂ ತಥಾಂಕುರಃ
ಯಥಾ ಭೂಮಿಸ್ತಥಾ ತೋಯಂ ಯಥಾ ರಾಜಾ ತಥಾ ಪ್ರಜಾಃ
As the country so the language spoken there;
As the seed so the sapling germinating from it;
As the quality of soil so the water available there;
As the King so the people under his rule.
ದೇಶವು ಹೇಗಿರುತ್ತದೆಯೋ ಭಾಷೆ ಹಾಗಿರುತ್ತದೆ. ಬೀಜ ಹೇಗಿರುತ್ತದೆಯೋ ಸಸಿಯು ಸಹಾ ಹಾಗಿರುತ್ತದೆ. ಭೂಮಿಯು ಹೇಗಿರುತ್ತದೆಯೋ ನೀರು ಹಾಗಿರುತ್ತದೆ. ರಾಜನು ಹೇಗಿರುತ್ತಾನೆಯೋ ಹಾಗೆಯೇ ಪ್ರಜೆಗಳು ಇರುತ್ತಾರೆ.
- न च विद्या समॊ बंधुः न च व्याधि समॊ रिपुः
न चापत्य समः स्नॆहः न च दॆवात् परं
ನ ಚ ವಿದ್ಯಾ ಸಮೋ ಬಂಧುಃ ನ ಚ ವ್ಯಾಧಿ ಸಮೋರಿಪುಃ
ನ ಚಾಪತ್ಯ ಸಮಃ ಸ್ನೇಹಃ ನ ಚ ದೇವಾತ್ ಪರಂ ಬಲಂ
No relative is equal to learning;
No enemy equals a disease;
No friend is equal to a worthy son;
And there is no strength mightier than god.
ವಿದ್ಯೆಗೆ ಸಮನಾದ ಬಂಧುವಿಲ್ಲ.
ರೋಗಕ್ಕೆ ಸಮನಾದ ಶತ್ರುವಿಲ್ಲ.
ಸಂತಾನಕ್ಕೆ ಸಮನಾದ ಸ್ನೇಹವಿಲ್ಲ.
ದೇವನಿಗೆ ಸಮನಾದ ಬಲವಿಲ್ಲ.
35.यस्य मित्रॆण संभाषा यस्य मितरॆण संस्थितिः
मित्रॆण सह यॊ भुंघ्तॆ ततॊ नास्तीह पुण्यवान्
ಯಸ್ಯ ಮಿತ್ರೇಣ ಸಂಭಾಷಾ ಯಸ್ಯ ಮಿತ್ರೇಣ ಸಂಸ್ಥಿತಿಃ
ಮಿತ್ರೇಣ ಸಹ ಯೋ ಭುಂಘ್ತೇ ತತೋ ನಾಸ್ತೀಹ ಪುಣ್ಯವಾನ್
There is none more fortunate than one who spends time in conversing with friends, than one who spends time in the company of friends, and than one who shares food with his friends.
ಯಾರು ಸ್ನೇಹಿತನ ಜೊತೆಯಲ್ಲಿ ಮಾತನಾಡುತ್ತಾನೆಯೋ, ಯಾರು ಸ್ನೇಹಿತನ ಜೊತೆಯಲ್ಲಿ ಇರುತ್ತಾನೆಯೋ, ಯಾರು ಸ್ನೇಹಿತನ ಜೊತೆಯಲ್ಲಿ ಊಟ ಮಾಡುತ್ತಾನೆಯೋ,ಅವನಂತಹಾ ಪುಣ್ಯಶಾಲಿಯು ಬೇರೆಯವರಿಲ್ಲ.
36.वृत्तं यत्नॆन संरक्षेत् वित्तमायाति याति च
अक्षीणॊ वित्ततः क्षीणॊ वृत्ततस्तु हतॊ हतः
ವೃತ್ತಂ ಯತ್ನೇನ ಸಂರಕ್ಷೇತ್ ವಿತ್ತಮಾಯಾತಿ ಯಾತಿ ಚ
ಅಕ್ಷೀಣೋ ವಿತ್ತತಃ ಕ್ಷೀಣೋ ವೃತ್ತತಸ್ತು ಹತೋ ಹತಃ
One should preserve and protect good conduct. Wealth disappears as it comes. One does not deteriorate by merely losing money. But one who loses character is as good as dead.
ಒಳ್ಳೆಯ ನಡವಳಿಕೆಯನ್ನು ಪ್ರಯತ್ನಪಟ್ಟಾದರೂ ರಕ್ಷಿಸಬೇಕು. ದುಡ್ಡು ಬರುತ್ತದೆ ಮತ್ತು ಹೋಗುತ್ತದೆ. ಹಣವಿಲ್ಲದವನು ಕ್ಸೀಣಿಸುವುದಿಲ್ಲ. ಆದರೆ ಒಳ್ಳೆಯ ನಡವಳಿಕೆ ಇಲ್ಲದವನು ಮರಣಿಸಿದವನಂತೆ.
- जीवितॆ यस्य जीवंति लोकॆ मित्राणि बांधवाः
सफलं जीवितं तस्य कॊनस्वार्थाय जीवति
ಜೀವಿತೇ ಯಸ್ಯ ಜೀವಂತಿ ಲೊಕೇ ಮಿತ್ರಾಣಿ ಬಾಂಧವಾಃ
ಸಫಲಂ ಜೀವಿತಂ ತಸ್ಯ ಕೋನಸ್ವಾರ್ತಾಯ ಜೀವತಿ
He is said to live a self-less, meaningful and fruitful life who strives for the welfare of friends and relatives.
ಪ್ರಪಂಚದಲ್ಲಿ ಯಾರ ಜೀವನದಿಂದ ಮಿತ್ರರು ಮತ್ತು ಬಂಧುಗಳು ಜೀವಿಸುತ್ತಿದ್ದಾರೆಯೋ ಅವನ ಜನ್ಮಸಾರ್ಥಕವಾದುದು.ಯಾರೂ
ತನ್ನ ಸ್ವಾರ್ಥಕ್ಕಾಗಿ ಜೀವಿಸುವುದಿಲ್ಲ.
- प्रदॊषॆ दीपकश्चन्द्रः प्रभातॆ दीपकॊ रविः
त्रैलॊक्यॆ दीपकॊ धर्मः सुपुत्रः कुलदीपकः
ಪ್ರದೋಷೇ ದೀಪಕಶ್ಚಂದ್ರಃ ಪ್ರಭಾತೇ ದೀಪಕೋ ರವಿಃ
ತ್ರೈಲೋಕ್ಯೇ ದೀಪಕೋ ಧರ್ಮಃ ಸುಪುತ್ರಃ ಕುಲದೀಪಕಃ
The Moon brightens the night; the Sun dazzles the day-time; Dharma illumines all the three worlds; but good offspring brings luster to the entire family.
ರಾತ್ರಿಯ ಸಮಯದಲ್ಲಿ ಚಂದ್ರನು ಬೆಳಕನ್ನು ಕೊಡುವವನಾಗಿರುತ್ತಾನೆ. ಬೆಳಗಿನ ಸಮಯದಲ್ಲಿ ಸೂರ್ಯನು ಬೆಳಕನ್ನು ಕೊಡುವವನಾಗಿರುತ್ತಾನೆ. ಮೂರು ಲೋಕದಲ್ಲಿಯೂ ಬೆಳಕನ್ನು ಕೊಡುವುದು ಧರ್ಮ. ಹಾಗೆಯೇ ಸುಪುತ್ರನು ವಂಶವನ್ನು ಉದ್ಧಾರ ಮಾಡುವವನಾಗಿರುತ್ತಾನೆ.
- 39. कुटुंबिनॆ दरिद्राय श्रॊत्रियाय तपस्विनॆ
यद्दानं दीयतॆ तस्मै तद्दानं स्वर्गसाधनं
ಕುಟುಂಬಿನೇ ದರಿದ್ರಾಯ ಶ್ರೋತ್ರಿಯಾಯ ತಪಸ್ವಿನೇ
ಯದ್ದಾನಂ ದೀಯತೇ ತಸ್ಮೈ ತದ್ದಾನಂ ಸ್ವರ್ಗಸಾಧನಂ
The dana that is given to a person having a family, or a person who is in poverty, or to a person well-versed in the Vedas, or to one who is an ascetic is verily the means to attain Heaven.
ಸಂಸಾರವುಳ್ಳ ಮನುಷ್ಯನಿಗೆ, ಬಡವನಿಗೆ, ವೇದಗಳನ್ನು ಬಲ್ಲವನಿಗೆ ಮತ್ತು ತಪಸ್ವಿಗೆ ಇವರಿಗೆ ಯಾವ ದಾನವು ಕೊಡಲ್ಪಡುತ್ತದೆಯೋ ಅದು ಸ್ವರ್ಗಕ್ಕೆ ಸಮಾನವಾದುದು.
40.नरस्य आभरणं रूपं रूपस्य आभरणं गुणः
गुणस्य आभरणं ज्ञानं ज्ञानस्य आभरण्ं क्षमा
ನರಸ್ಯ ಆಭರಣಂ ರೂಪಂ ರೂಪಸ್ಯ ಆಭರಣಂ ಗುಣಃ
ಗುಣಸ್ಯ ಆಭರಣಂ ಜ್ಞಾನಂ ಜ್ಞಾನಸ್ಯ ಆಭರಣಂ ಕ್ಷಮಾ
Form or appearance is the adornment of an individual;
Virtue is the adornment of appearance;
Knowledge is the adornment of virtue; and
Forgiveness is the adornment of knowledge.
ಮನುಷ್ಯನ ಆಭರಣವು ರೂಪ. ರೂಪಕ್ಕೆ ಆಭರಣವು ಗುಣ. ಗುಣಕ್ಕೆ ಆಭರಣವು ಜ್ಞಾನ. ಜ್ಞಾನಕ್ಕೆ ಆಭರಣವು ಕ್ಷಮೆ.
- नास्ति वॆदात्परं शास्त्रं नास्ति मातुस्समॊगुरुः
नास्ति दानात् परं इहलॊकॆ परत्रच
ನಾಸ್ತಿ ವೇದಾತ್ಪರಂ ಶಾಸ್ತ್ರಂ ನಾಸ್ತಿ ಮಾತುಸ್ಸಮೋಗುರುಃ
ನಾಸ್ತಿ ದಾನಾತ್ ಪರಂಮಿತ್ರಂ ಇಹಲೋಕೇ ಪರತ್ರಚ
There is no sastra superior to the Veda;
There is no guru equal to one’s mother;
There is no friend better than dana
In this world as well as in the next.
ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ವೇದಕ್ಕೆ ಸಮನಾದ ಶಾಸ್ತ್ರವಿಲ್ಲ. ತಾಯಿಗೆ ಸಮನಾದ ಗುರುವಿಲ್ಲ. ದಾನಕ್ಕೆ ಸಮಾನನಾದ ಸ್ನೇಹಿತನಿಲ್ಲ.
42.अर्थनाशं मनस्तापं गृहॆ दुश्च्श्रितानिच
वंचनं चापमानं च मतिमान् नप्रकाशयॆत्
ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿಚ
ವಂಚನಂ ಚಾಪಮಾನಂ ಚ ಮತಿಮಾನ್ ನಪ್ರಕಾಶಯೇತ್
A learned person does not express openly about incidents like loss of money,
mental suffering, bad occurrences at home, acts of betrayal and disrespectful behavior.
ಬುದ್ಧಿವಂತನಾದ ಮನುಷ್ಯನು ದುಡ್ಡು ಕಳೆದುಹೋಗಿರುವುದನ್ನು, ಮಾನಸಿಕ ದುಖಃವನ್ನು,ಮನೆಯಲ್ಲಿ ನಡೆದ ದುರ್ಘಟನೆಗಳನ್ನು, ಮೋಸವನ್ನು ಮತ್ತು ಅವಮಾನವನ್ನುಬಹಿರಂಗಪಡಿಸುವುದಿಲ್ಲ.
- प्रुथिव्यां त्रीणि रत्नानि जलमन्नं सुभाषितं
मूढैः पाषाण खन्डेषु रत्न संज्ञा विधीयते
ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ
ಮೂಢೈಃ ಪಾಷಾಣ ಖಂಡೇಷು ರತ್ನ ಸಂಜ್ಝಾ ವಿಧೀಯತೆ
There are three precious things on this earth: water, food and subhashita. But the fools consider some pieces of stone to be the precious things like the jewels.
ಭೂಮಿಯಲ್ಲಿ ನೀರು, ಆಹಾರ, ಸುಭಾಷಿತಗಳೆಂಬ ಮೂರು ರತ್ನಗಳಿವೆ. ಆದರೆ ಮೂರ್ಖರು ಕಲ್ಲಿನ ತುಂಡುಗಳನ್ನು ರತ್ನವೆಂದು ಭಾವಿಸುತ್ತಾರೆ.
- यथा धेनुसहश्रेषु वत्सो विन्दति मातरं
एवं पुराक्रुतं कर्म कर्तारमनुगच्छति
ಯಥಾ ಧೇನುಸಹಶ್ರೇಷು ವತ್ಸೋ ವಿನ್ದತಿ ಮಾತರಂ
ಏವಂ ಪುರಾಕೃತಂ ಕರ್ಮ ಕರ್ತಾರಮನುಗಚ್ಛತಿ
Among thousands of cows, the calf would identify and follow its own mother. In the same way, the karma that is done in the earlier lives would follow the doer of that karma alone.
ಸಾವಿರಾರು ಹಸುಗಳ ಮಧ್ಯೆ ಕರು ತನ್ನ ತಾಯಿಯನ್ನು ಹೇಗೆ ಹೊಂದುತ್ತಿದೆಯೋ ಹಾಗೆಯೇ ಹಿಂದಿನ ಜನ್ಮದಲ್ಲಿ ಮಾಡಲ್ಪಟ್ಟ ಕರ್ಮವು ಕರ್ತನನ್ನು ಅನುಸರಿಸಿಕೊಂಡು ಬರುತ್ತದೆ.
- स्वग्रुहे पूज्यते मूर्खः स्वग्रामे पूज्यते प्रभुः
स्वदेशे पूज्यते राजा विद्वान् सर्वत्र पूज्यते
ಸ್ವಗೃಹೆ ಪುಜ್ಯತೆ ಮೂರ್ಖಃ ಸ್ವಗ್ರಾಮ ಪೂಜ್ಯತೆ ಪ್ರಭುಃ/
ಸ್ವದೇಷೆ ಪೂಜ್ಯತೆ ರಾಜ ವಿದ್ವಾನ್ ಸವತ್ರ ಪೂಜ್ಯತೆ/
ಮೂರ್ಖನು ತನ್ನ ಮನೆಯಲ್ಲೇ ಪೂಜಿಸಲ್ಪಡುತ್ತಾನೆ. ಗ್ರಾಮಾಧಿಕಾರಿಯು ತನ್ನ ಗ್ರಾಮದಲ್ಲೇ ಪೂಜಿಸಲ್ಪಡುತ್ತಾನೆ. ರಾಜನು ತನ್ನ ದೇಶದಲ್ಲಿ ಪೂಜಿಸಲ್ಪಟ್ಟರೆ ವಿದ್ಯಾವಂತನು ಎಲ್ಲೆಡೆಯಲ್ಲಿಯೂ ಗೌರವವನ್ನು ಹೊಂದುತ್ತಾನೆ.
The respect a dullard or simpleton receives is confined to his house only;
in the case of the village Head, it is confined to his own village;
in the case of the King, it is confined to his own kingdom;
but in the case of a learned person, he is respected wherever he goes.
46.अहिंस ऐव भूतानां ऐवा कार्यं श्रेयो2नुशासनं
वाक् चैव मधुरा श्लक्ष्णा प्योज्या धर्ममिच्छता
ಅಹಿಂಸ ಐವಾ ಭೂತಾನಾಂ ಕಾರ್ಯಂ ಶ್ರೇಯೋನುಶಾಸನಂ
ವಾಕ್ ಚೈವ ಮಧುರಾಶ್ಲಷ್ಣಾ ಪ್ರಯೋಜ್ಯಾ ಧರ್ಮಮಿಚ್ಛತಾ
It is most desirable to give instructions to others without causing any harm to them.
While wishing to follow dharma, we should use speech that is sweet, pleasing and gentle.
ಪ್ರಾಣಿಗಳಿಗೆ ಹಿಂಸೆ ಇಲ್ಲದೇನೇ ಆಜ್ಞೆ ಮಾಡುವುದು ಉತ್ತಮ. ಮಧುರವಾದ ಪ್ರೀತಿಕರವಾದ ಮಾತನ್ನು ಧರ್ಮವನ್ನು ಇಚ್ಚಿಸುವವನು
ಪ್ರಯೋಗಿಸಬೇಕು.
47.अधमाः धनमिच्छन्ति धनमानौ तु मध्यमाः
उत्तमाः मानमिच्छन्ति मानोहि महतां धनं
ಅಧಮಾಃ ಧನಮಿಚ್ಛಂತಿ ಧನಮಾನೌತು ಮಧ್ಯಮಾಃ
ಉತ್ತಮಾಃ ಮಾನಮಿಚ್ಛಂತಿ ಮಾನೋಹಿ ಮಹತಾಂ ಧನಂ
People at the lowest level crave for money; people in the middle, prefer both money and honour; but people of highest merit give importance to honour alone as honour itself is riches for them.
ಅಧಮರು ಧನವನ್ನು ಇಚ್ಚಿಸುತ್ತಾರೆ. ಮಧ್ಯಮರು ಧನ ಮತ್ತು ಮಾನವನ್ನು ಇಚ್ಚಿಸುತ್ತಾರೆ. ಉತ್ತಮರು ಮಾನವನ್ನು ಇಚ್ಚಿಸುತ್ತಾರೆ. ಏಕೆಂದರೆ ಉತ್ತಮರಿಗೆ ಮಾನವೇ ಹಣ.
- दुर्जनः परिहर्तव्यो विद्ययालन्क्रुतोपि सन्
मणिना भूषितः सर्पः किमसौ न भयङ्करः
ದುರ್ಜನಃ ಪರಿಹರ್ತವ್ಯೋ ವಿದ್ಯಯಾಲಂಕೃತೋಪಿ ಸನ್ನ್
ಮಣಿನಾ ಭೂಷಿತಃ ಸರ್ಪಃ ಕಿಮಸೌ ನ ಭಯಂಕರಃ
A wicked person though well-educated deserves to be rejected: will not a serpent look dreadful though adorned by a diamond?
ವಿದ್ಯೆಯಿಂದ ಅಲಂಕರಿಸಲ್ಪಟ್ಟಿರುವ ದುರ್ಜನನು ತ್ಯಜಿಸತಕ್ಕವನು. ಮಣಿಯಿಂದ ಭೂಷಿಸಲ್ಪಟ್ಟ ಹಾವು ಭಯಂಕರವಲ್ಲವೆ.
49.यं मातापितरौ क्लेशं सहेते संभवे न्रुणां
तस्य निष्क्रुतिः न शक्या कर्तुं वर्षशतैरपि
ಯಂ ಮಾತಾಪಿತರೌ ಕ್ಲೇಶಂ ಸಹೇತೇ ಸಂಭವೇ ನೃಣಾಂ
ತಸ್ಯ ನಿಷ್ಕೃತಿಃ ನ ಶಕ್ಯಾ ಕರ್ತುಂ ವರ್ಷಶತೈರಪಿ
The suffering that the parents experience at the time of giving birth to a child cannot be cured or compensated over a period of a hundred years even!
ಮಾನವರು ಜನಿಸುವ ಸಂಧರ್ಭದಲ್ಲಿ ತಂದೆ ತಾಯಿಗಳು ಯಾವ ಕ್ಲೇಶವನ್ನು ಸಹಿಸುತ್ತಾರೆಯೋ ಅದನ್ನು ತೀರಿಸಲು ನೂರಾರು ವರ್ಷಗಳಿಂದಲೂ ಸಹ ಸಾಧ್ಯವಾಗುವುದಿಲ್ಲ.
50.सर्वदा व्यवहारे स्यात् औदार्यं सत्यता तथा
म्रुदुता ऋजुता चापि कौटिल्यं न कदाचन
ಸರ್ವದಾ ವ್ಯವಹಾರೇ ಸ್ಯಾತ್ ಔದಾರ್ಯಂ ಸತ್ಯತಾ ತಥಾ
ಮೃದುತಾ ಋಜುತಾ ಚಾಪಿ ಕೌಟಿಲ್ಯಂ ನ ಕದಾಚನ
In our dealings with others, we should always be generous, truthful, soft-spoken and straight forward but never should we be crooked or fraudulent.
ಎಂದಿಗೂ ವ್ಯವಹಾರದಲ್ಲಿ ಉದಾರತೆ, ಸತ್ಯತೆ, ಮೃದುತ್ವ, ಋಜುತ್ವ ಇರಬೇಕು. ಎಂದಿಗೂ ವಂಚನೆ ಇರಬಾರದು.
51.अविश्रामं वहेद्भारं शीतोष्णं च न विन्दति
ससन्तोषस्तथा नित्यं त्रीणि शिक्षेत गर्दभात्
ಅವಿಶ್ರಾಮಂ ವಹೇದ್ಭಾರಂ ಶೀತೋಷ್ಣಂ ಚ ನ ವಿಂದತಿ
ಸಸಂತೋಷಸ್ತಥಾ ನಿತ್ಯಂ ತ್ರೀಣಿ ಶಿಕ್ಷೇತ ಗರ್ದಭಾತ್
He carries loads without rest. He is not discouraged by heat or cold. He remains always content. It is the donkey that possesses all the three qualities and he teaches us a lesson!
ವಿಶ್ರಾಂತಿ ಇಲ್ಲದೇ ಭಾರವನ್ನು ಹೊರುತ್ತದೆ. ಚಳಿಯನ್ನು ಮತ್ತು ತಾಪವನ್ನು ಹೊಂದುವುದಿಲ್ಲ. ಅದು ಎಂದಿಗೂ ಸಂತೋಷದಿಂದುರುತ್ತದೆ. ಈ ಮೂರೂ ನಾವು ಕತ್ತೆಯಿಂದ ಕಲಿಯತಕ್ಕದ್ದು.
- न चोरहार्यं न च राजहार्यं न भ्रातृभाज्यम् न च भारकारी
व्यये कृते वर्धत एव नित्यं विद्याधनं सर्वधनप्रधानम्
ನ ಚೋರಹಾರ್ಯಂ ನ ಚ ರಾಜಹಾರ್ಯಂ ನ ಭ್ರಾತೃಭಾಜ್ಯಮ್ ನ ಚ ಭಾರಕಾರೀ
ವ್ಯಯೇ ಕೃತೇ ವರ್ಧತ ಏವ ನಿತ್ಯಂ ವಿದ್ಯಾಧನಂ ಸರ್ವಧನಪ್ರಧಾನಮ್ ॥
Among all kinds of wealth, the best one is the possession of Knowledge as it cannot be stolen by thieves nor can it be confiscated by the King; brothers cannot lay claim for a share in it nor is it heavy to carry. In fact, the more it is distributed the more it gets increased!
ಕಳ್ಳರಿಂದ ಅಪಹರಿಸಲ್ಪಡುವುದಿಲ್ಲ. ರಾಜರಿಂದಲೂ ಅಪಹರಿಸಲ್ಪಡುವುದಿಲ್ಲ. ಸೋದರರಿಂದ ವಿಭಜಿಸಲ್ಪಡುವುದಿಲ್ಲ. ಭಾರವನ್ನು ಉಂಟು ಮಾಡುವುದಿಲ್ಲ. ನಿತ್ಯವೂ ವ್ಯಯ ಮಾಡಿದಂತೆ ಹೆಚ್ಚುತ್ತದೆ. ಈ ವಿದ್ಯೆಯೆಂಬ ಹಣವು ಎಲ್ಲ ಹಣಕ್ಕಿಂತಲೂ ಶ್ರೇಷ್ಠವಾದುದು.
53.अजरामरवत्प्राज्ञो विद्यामर्थं च साधयेत्
गृहीत इव केशेषु मृत्युना धर्ममाचरेत्
ಅಜರಾಮರವತ್ಪ್ರಾಜ್ಞೋ ವಿದ್ಯಾಮರ್ಥಂ ಚ ಸಾಧಯೇತ್
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್
A wise man goes on acquiring Knowledge and Wealth as if he is ageless and immortal.
One should stick to practicing dharma, as though his tuft of hair is held in tight grip by Death!
ಮುಪ್ಪು ಇಲ್ಲದಂತೆ, ಮರಣವಿಲ್ಲದಂತೆ ವಿದ್ಯೆಯನ್ನು ಮತ್ತು ಹಣವನ್ನು ಸಾಧಿಸಬೇಕು. ಮೃತ್ಯುವಿನಿಂದ ಕೇಶರಾಶಿಯು ಹಿಡಿಯಲ್ಪಟ್ಟಿರುವಂತೆ ಧರ್ಮವನ್ನು ಆಚರಿಸಬೇಕು.
54.आकाशात् पतितं तोयं यथा गच्छति सागरम् ।
सर्वदेवनमस्कारः केशवं प्रतिगच्छति ॥
ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ ।
ಸರ್ವದೇವನಮಸ್ಕಾರಃ ಕೇಶವಂ ಪ್ರತಿಗಚ್ಛತಿ ॥
Just as all the water falling from the sky goes direct to the ocean, so all the salutations made to several different gods finally reach Lord Kesava.
ಆಕಾಶದಿಂದ ಬಿದ್ದ ನೀರು ಹೇಗೆ ಸಮುದ್ರವನ್ನು ಸೇರುತ್ತಿದೆಯೋ
ಹಾಗೆಯೇ ಎಲ್ಲ ದೇವರ ನಮಸ್ಕಾರವು ವಿಷ್ಣುವನ್ನು ಸೇರುತ್ತದೆ.
55.चिन्तनीया हि विपदाम् आदावेव प्रतिक्रिया ।
न कूपखनन्ं युक्तं प्रदीप्ते वह्निना गृहे ॥
ಚಿಂತನೀಯಾ ಹಿ ವಿಪದಾಮಾದಾವೇವ ಪ್ರತಿಕ್ರಿಯಾ ।
ನ ಕೂಪಖನನ್ಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ॥
When a dangerous situation arises, suitable action to bring remedy should be initiated immediately. When a house is engulfed in flames, what is the point in starting digging a well for water to put out the flames?
ಆಪತ್ತುಗಳು ಬಂದಾಗ ಅದರ ಪ್ರಾರಂಭದಲ್ಲಿಯೇ ಪರಿಹಾರವನ್ನು ಯೋಚಿಸತಕ್ಕದ್ದು. ಬೆಂಕಿಯಿಂದ ಮನೆಯು ಸುಟ್ಟುಹೋದ ನಂತರ ಬಾವಿಯನ್ನು ತೋಡುವುದು ಯುಕ್ತವಲ್ಲ.
56.क्षमा शस्त्रं करे यस्य दुर्जनः किं करिष्यति
अतृणे पतितो वह्निः स्वयमेवोपशाम्यति
ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ
ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ
What can an evil-doer do to a person who has with him the weapon of forgiveness? Doesn’t a spark of fire falling where there is no straw burn itself out?
ತಾಳ್ಮೆಯೆಂಬ ಶಸ್ತ್ರವು ಯಾರ ಕೈಯಲ್ಲಿರುತ್ತದೆಯೋ ಅವನಿಗೆ
ದುರ್ಜನನು ಏನು ಮಾಡಬಲ್ಲ. ಹುಲ್ಲು ಇಲ್ಲದಂತಹ ಜಾಗದಲ್ಲಿ ಬಿದ್ದ ಬೆಂಕಿಯು ತಾನೇ ಆರಿಹೋಗುತ್ತದೆ.
57.कराग्रे वसते लक्ष्मीः करमध्ये सरस्वती
करमूले तु गोविन्दः प्रभाते करदर्शनम्
ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಮ್
As I wake up in the morning, I hold the palm of my hand facing me and visualize Goddess Lakshimi at the top, Goddess Saraswati in the middle and Lord Govinda at the base of my palm.
ಕೈಯ ಅಗ್ರಭಾಗದಲ್ಲಿ ಲಕ್ಷ್ಮಿಯು ವಾಸಿಸುತ್ತಾಳೆ. ಕೈಯ ಮಧ್ಯ ಭಾಗದಲ್ಲಿ ಸರಸ್ವತಿಯು, ಕೈಯ ಕೊನೆಯ ಭಾಗದಲ್ಲಿ ಗೋವಿಂದನು ಇರುತ್ತಾನೆ. ಆದ್ದರಿಂದ ಪ್ರಾತಃಕಾಲದಲ್ಲಿ ಕೈಯ ದರ್ಶನವು ಒಳ್ಳೆಯದು.
58.सज्जनस्य हृदयं नवनीतं यद्वदन्ति कवयस्तदलीकम्
अन्यदेहविलसत्परितापात् सज्जनो द्रवति, नो नवनीतम्
ಸಜ್ಜನಸ್ಯ ಹೃದಯಂ ನವನೀತಂ ಯದ್ವದಂತಿ ಕವಯಸ್ತದಲೀಕಮ್
ಅನ್ಯದೇಹವಿಲಸತ್ಪರಿತಾಪಾತ್ ಸಜ್ಜನೋ ದ್ರವತಿ, ನೋ ನವನೀತಮ್
The statement made by the poets that the heart of a virtuous person is like butter – is false, because even by merely seeing the pain in others, his heart would melt. (For butter to melt it should come into direct contact with heat)
ಸತ್ಪುರುಷರ ಹೃದಯವು ಬೆಣ್ಣೆಯೆಂದು ಯಾವ ಕವಿಗಳು
ಹೇಳುತ್ತಾರೆಯೋ ಅದು ಸುಳ್ಳು ಮಾತು. ಬೇರೆಯವರ
ದೇಹದಲ್ಲಿರುವ ಪರಿತಾಪದಿಂದ ಸಜ್ಜನನು ಕರಗುತ್ತಾನೆ.
ಬೆಣ್ಣೆಯಲ್ಲ.
59.स्वयं महेशः शव्शुरो नगेशः सखा धनेशश्च सुतो गणेशः
तथापि भिक्षाटनमेव शम्भोः बलीयसी केवलमीश्वरेच्छा
ಸ್ವಯಂ ಮಹೇಶಃ ಶವ್ಶುರೋ ನಗೇಶಃ
ಸಖಾ ಧನೇಶಶ್ಚ ಸುತೋ ಗಣೇಶಃ
ತಥಾಪಿ ಭಿಕ್ಷಾಟನಮೇವ ಶಂಭೋಃ
ಬಲೀಯಸೀ ಕೇವಲಮೀಶ್ವರೇಚ್ಛಾ
Shambu is himself the Great Lord. The Lord of Mountains is his father-in-law; the Lord of Wealth, Kubera, is his friend; and the Lord of Ganas, semi-divine Beings, is his own son Ganesa; yet Shambhu is destined to beg for his food with a bowl in his hand. Lo, the Will of the Supreme Power rides high indeed!
ತಾನು ಮಹೇಶನು. ಮಾವ ನಗೇಶನು. ಸ್ನೇಹಿತನು
ಧನೇಶನು. ಮಗನು ಗಣೇಶನು. ಆದರೂ ಈಶ್ವರನಿಗೆ
ಭಿಕ್ಷಾಟನೆಯೇ ಆಗಿದೆ. ಈಶ್ವರ ಇಚ್ಛೆ ತುಂಬಾ
ಬಲವತ್ತರವಾದುದು.
60.गर्जसि मेघ न यच्छसि तोयं चातकपक्षी व्याकुलितोऽहम्
दैवादिह यदि दक्षिणवातः क्व त्वं क्वाहं क्व च जलपातः
ಗರ್ಜಸಿ ಮೇಘ ನ ಯಚ್ಛಸಿ ತೋಯಂ ಚಾತಕಪಕ್ಷೀ ವ್ಯಾಕುಲಿತೋಽಹಮ್
ದೈವಾದಿಹ ಯದಿ ದಕ್ಷಿಣವಾತಃ ಕ್ವ ತ್ವಂ ಕ್ವಾಹಂ ಕ್ವ ಚ ಜಲಪಾತಃ
O Cloud, you roar but do not pour down. I, the
Chataka bird, am thirsty. If fatefully the Southern
Winds blow here, where will you be? where shall
I be? and where will be the rainfall?
ಎಲೈ ಮೋಡವೇ ನೀನು ಗರ್ಜಿಸುತ್ತಿರುವೆಯೇ ಹೊರತು ನೀರನ್ನು ಕೊಡುತ್ತಿಲ್ಲ. ಚಾತಕ ಪಕ್ಷಿಯಾದ ನಾನು ದುಖಃದಿಂದಿದ್ದೇನೆ. ದೈವದಿಂದಈಗ ಜಂಝಾವಾತವು ಬಂದರೆ ನೀನು ಯಾರು. ನಾನು ಯಾರು. ಜಲಪಾತವು ಎಲ್ಲಿ.
61.न हि कश्चित् विजानाति किं कस्य श्वो भविष्यति
अतः श्वः करणीयानि कुर्यादद्यैव बुद्धिमान्
ನ ಹಿ ಕಶ್ಚಿತ್ ವಿಜಾನಾತಿ ಕಿಂ ಕಸ್ಯ ಶ್ವೋ ಭವಿಷ್ಯತಿ
ಅತಃ ಶ್ವಃ ಕರಣೀಯಾನಿ ಕುರ್ಯಾದದ್ಯೈವ ಬುದ್ಧಿಮಾನ್
What needs to be done tomorrow should be accomplished today itself, for nobody knows what is going to happen tomorrow and to whom. This is the way an intelligent person acts.
ನಾಳೆ ಯಾರಿಗೆ ಏನು ಆಗುವುದೋ ಅದನ್ನು ಯಾರೂ ತಿಳಿದಿರುವುದಿಲ್ಲ. ಆದ್ದರಿಂದ ನಾಳೆ ಮಾಡಬೇಕಾದ ಕೆಲಸಗಳನ್ನು ಬುದ್ಧಿವಂತನಾದವನು ಇಂದೇ ಮಾಡಬೇಕು.
62.यथा काष्ठं च काष्ठं च समेयातां महोदधौ
समेत्य च व्यपेयातां तद्वत् भूतसमागमः
ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹೋದಧೌ
ಸಮೇತ್ಯ ಚ ವ್ಯಪೇಯಾತಾಂ ತದ್ವತ್ ಭೂತಸಮಾಗಮಃ
As two logs of wood floating in the ocean come together for a while and drift apart, so do human beings come together for a brief while and depart from this world.
ಹೇಗೆ ದೊಡ್ಡ ಸಮುದ್ರದಲ್ಲಿ ಕಟ್ಟಿಗೆಗಳು ಒಂದಕ್ಕೊಂದು ಸೇರುತ್ತವೆಯೋ, ಹಾಗೆಯೇ ಸೇರಿ ಹೊರಟು ಹೋಗುತ್ತವೆಯೋ ಅಂತೆಯೇ ಮನುಷ್ಯರ ಸಮಾಗಮವೂ ಸಹ.
63.साहित्य संगीत कला विहीनः साक्षात् पशुः पुछ विषाण हीनः ।
तृणं न खादन्नपि जीवमानः तद् भागधेयं परमं पषूणाम् ॥
ಸಾಹಿತ್ಯ ಸಂಗೀತ ಕಲಾ ವಿಹೀನಃ ಸಾಕ್ಷಾತ್ ಪಶುಃ ಪುಛ ವಿಷಾಣ ಹೀನಃ
ತೃಣಂ ನ ಖಾದನ್ನಪಿ ಜೀವಮಾನಃ ತದ್ ಭಾಗಧೇಯಂ ಪರಮಂ ಪಷೂಣಾಮ್
One who has no love for literature, music or fine arts is indeed an animal without a tail or horns. That he survives even without eating grass is a matter of great luck for the other animals.
ಸಾಹಿತ್ಯ ಸಂಗೀತ ಕಲೆಗಳು ಇಲ್ಲದವನು ಸಾಕ್ಷಾತ್ ಕೊಂಬು ಇಲ್ಲದಂತಹ ಪಶು ತೃಣವನ್ನು ತಿನ್ನದಿದ್ದರೂ ಜೀವಿಸುತ್ತಿರುವ ಪಶು. ಆ ಹುಲ್ಲನ್ನು ತಿನ್ನದಿರುವುದು ಪಶುಗಳ ಅದೃಷ್ಟವಾಗಿದೆ.
64.अधिगत्य गुरोः ज्ञानं छात्रेभ्यो वितरन्ति ये
विद्या वात्सल्य निधयः शिक्षका मम दैवतम्
ಅಧಿಗತ್ಯ ಗುರೋಃ ಜ್ಞಾನಂ ಛಾತ್ರೇಭ್ಯೋ ವಿತರಂತಿ ಯೇ
ವಿದ್ಯಾ ವಾತ್ಸಲ್ಯ ನಿಧಯಃ ಶಿಕ್ಷಕಾ ಮಮ ದೈವತಮ್
Having acquired their knowledge from their gurus, my teachers distribute it among their disciples. They are the storehouse and knowledge and love. I revere them as my God.
ಗುರುವಿನ ಬಳಿ ಜ್ಞಾನವನ್ನು ಪಡೆದು ಯಾರು ವಿದ್ಯಾರ್ಥಿಗಳಿಗೆ ಆ ಜ್ಞಾನವನ್ನು ವಿತರಿಸುತ್ತಾರೆಯೋ ಅಂತಹ ವಿದ್ಯಾ ವಾತ್ಸಲ್ಯ ನಿಧಿಗಳಾದ ಶಿಕ್ಷಕರೇ ನನ್ನ ದೈವ.
65.अश्वस्य भूषणं वेगो मत्तं स्याद् गजभूषणम्
चातुर्यं भूषणं नार्या उद्योगो नरभूषणम्
ಅಶ್ವಸ್ಯ ಭೂಷಣಂ ವೇಗೋ ಮತ್ತಂ ಸ್ಯಾದ್ ಗಜಭೂಷಣಮ್
ಚಾತುರ್ಯಂ ಭೂಷಣಂ ನಾರ್ಯಾ ಉದ್ಯೋಗೋ ನರಭೂಷಣಮ್
Speed is ornament to a horse; an intoxicated state adds attraction to an elephant; cleverness adds beauty to a woman and industriousness makes a man more impressive.
ಕುದುರೆಗೆ ಭೂಷಣವು ವೇಗ. ಆನೆಯ ಭೂಷಣವು ಅಹಂಕಾರ. ನಾರಿಯ ಭೂಷಣವು ಚಾತುರ್ಯ. ಪುರುಷನ ಭೂಷಣವು ಉದ್ಯೋಗ.
66 उत्तमो नातिवक्ता स्यात् अधमो बहुभाषते
न काञ्चने ध्वनिस्तादृक् यादृक् कांस्ये प्रजायते
ಉತ್ತಮೋ ನಾತಿವಕ್ತಾ ಸ್ಯಾತ್ ಅಧಮೋ ಬಹುಭಾಷತೇ
ನ ಕಾಂಚನೇ ಧ್ವನಿಸ್ತಾದೃಕ್ ಯಾದೃಕ್ ಕಾಂಸ್ಯೇ ಪ್ರಜಾಯತೇ
While the best among speakers are gentle and soft-spoken, the worst are talkative and loud-mouthed. After all gold does not sound as loud as bronze!
ಉತ್ತಮನಾಗಿರುವವನು ಹೆಚ್ಚಾಗಿ ಮಾತನಾಡುವುದಿಲ್ಲ. ಅಧಮನು ಹೆಚ್ಚಾಗಿ ಮಾತನಾಡುತ್ತಾನೆ. ಕಂಚಿನಲ್ಲಿ ಉಂಟಾದ ಶಬ್ದವು ಬಂಗಾರದಲ್ಲಿ ಉಂಟಾಗುವುದಿಲ್ಲ.
- चिन्तायास्तु चितायास्तु बिन्दु मात्रम् विशेशतः
चिता दहति निर्जीवम्, चिन्ता दहति जीवितम्
ಚಿಂತಾಯಾಸ್ತು ಚಿತಾಯಾಸ್ತು ಬಿಂದು ಮಾತ್ರಮ್ ವಿಶೇಶತಃ
ಚಿತಾ ದಹತಿ ನಿರ್ಜೀವಮ್, ಚಿಂತಾ ದಹತಿ ಜೀವಿತಮ್
While a simple dot ( . ) differentiates the two words chita and chinta, there is a wide difference in their meanings: chitarefers to the burning of a lifeless body, whereas chinta is that which consumes a living being.
ಚಿಂತೆಗೂ ಚಿತೆಗೂ ಒಂದು ಅನುಸ್ವಾರವು ಮಾತ್ರ ವಿಶೇಷವಾಗಿದೆ. ಚಿತೆಯು ನಿರ್ಜೀವವನ್ನು ಸುಡುತ್ತದೆ. ಚಿಂತೆಯು ಜೀವನವನ್ನೇ ಸುಡುತ್ತದೆ.
68.उत्तमा आत्मना ख्याताः पितुः ख्याताश्च मध्यमाः ।
अधंआ मातुलत् ख्याताः श्वशुराछाधमाधमाः ॥
ಉತ್ತಮಾ ಆತ್ಮನಾ ಖ್ಯಾತಾಃ ಪಿತುಃ ಖ್ಯಾತಾಶ್ಚ ಮಧ್ಯಮಾಃ ।
ಅಧಂಆ ಮಾತುಲತ್ ಖ್ಯಾತಾಃ ಶ್ವಶುರಾಛಾಧಮಾಧಮಾಃ ॥
People at the top are those that achieve distinction by self-effort; at the average level are those whose fame is because of their fathers; the inferior ones are those who claim fame in the name of their maternal uncles; and the worst ones receive some recognition because of their fathers-in-law.
ಉತ್ತಮರು ತನ್ನಿಂದ ಕೀರ್ತಿಸಲ್ಪಡುತ್ತಾರೆ. ಮಧ್ಯಮರು ತಂದೆಯಿಂದ ಕೀರ್ತಿಸಲ್ಪಡುತ್ತಾರೆ. ಅಧಮರು ಸೋದರ ಮಾವನಿಂದ ಕೀರ್ತಿಸಲ್ಪಡುತ್ತಾರೆ. ಅಧಮಾಧಮರು ಹೆಣ್ಣು ಕೊಟ್ಟ ಮಾವನಿಂದ ಕೀರ್ತಿಸಲ್ಪಡುತ್ತಾರೆ.
- उपकारो हि नीचानां अपकरो हि जायते
पयःपानं भुजंगाणां केवलं विषवर्धनम्
ಉಪಕಾರೋ ಹಿ ನೀಚಾನಾಂ ಅಪಕರೋ ಹಿ ಜಾಯತೇ
ಪಯಃಪಾನಂ ಭುಜಂಗಾಣಾಂ ಕೇವಲಂ ವಿಷವರ್ಧನಮ್
A helpful gesture made to a bad person comes back with a harmful force, just as milk that is fed to a serpent converts into poison.
ನೀಚರಿಗೆ ಉಪಕಾರ ಮಾಡುವುದು ಅಪಕಾರವಾಗುತ್ತದೆ. ಹಾವುಗಳಿಗೆ ಹಾಲನ್ನು ಕೊಡುವುದು ವಿಷವರ್ಧನವಾಗುತ್ತದೆ.
70.उद्यमस्साहसं धैर्यं बुद्धिश्यक्तिः पराक्रमः
षडेते यत्र वर्तन्ते तत्र देवः सहायकृत्
ಉದ್ಯಮಸ್ಸಾಹಸಂ ಧೈರ್ಯಂ ಬುದ್ಧಿಶ್ಯಕ್ತಿಃ ಪರಾಕ್ರಮಃ
ಷಡೇತೇ ಯತ್ರ ವರ್ತಂತೇ ತತ್ರ ದೇವಃ ಸಹಾಯಕೃತ್
The person who is endowed with the six qualities of effort, spirit of adventure, courage, intelligence, strength, and heroic temperament receives the favour of god’s blessings.
ಪ್ರಯತ್ನವು, ಸಾಹಸವು, ಧೈರ್ಯ, ಬುದ್ಧಿ ಶಕ್ತಿ ಮತ್ತು ಪರಾಕ್ರಮ
ಈ ಆರು ಎಲ್ಲಿ ಇರುತ್ತವೆಯೋ ಅಲ್ಲಿ ದೇವರು ಸಹಾಯ ಮಾಡುವನಾಗುತ್ತಾನೆ.
- परोपकाराय फलन्ति वृक्षाः परोपकाराय वहन्ति नद्यः
परोपकाराय दुहन्ति गावः परोपकारार्थमिदं शरीरम्
ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಮ್
Trees bear fruits for the benefit of others,
Rivers carry waters for the benefit of others;
Cows offer their milk for the benefit of others; and
man should realize that he has his body for the
benefit of others.
ಪರೋಪಕಾರಕ್ಕಾಗಿ ಮರಗಳು ಫಲಿಸುತ್ತಿವೆ. ಪರೋಪಕಾರಕ್ಕಾಗಿ
ನದಿಗಳು ಹರಿಯುತ್ತಿವೆ. ಪರೋಪಕಾರಕ್ಕಾಗಿ ಹಸುಗಳು ಹಾಲನ್ನು
ಕೊಡುತ್ತಿವೆ. ಈ ಶರೀರವು ಪರೋಪಕಾರಕ್ಕಾಗಿಯೇ..
- ಮಧುಸಿಕ್ತೋ ನಿಂಬಖಂಡಃ ದುಗ್ಧಪುಷ್ಟೋ ಭುಜಂಗಮಃ
ಗಂಗಾಸ್ನಾತೋಪಿ ದುರ್ಜನಃ ಸ್ವಭಾವಂ ನೈವ ಮುನ್ಚತಿ ॥
मधुसिक्तो निम्बखण्डः दुग्धपुष्टो भुजंगमः
गंगास्नातोपि दुर्जनः स्वभावं नैव मुन्चति
ಮಧುಸಿಕ್ತೋ ನಿಂಬಖಂಡಃ ದುಗ್ಧಪುಷ್ಟೋ ಭುಜಂಗಮಃ
ಗಂಗಾಸ್ನಾತೋಪಿ ದುರ್ಜನಃ ಸ್ವಭಾವಂ ನೈವ ಮುನ್ಚತಿ
A bad person will not discard his innate nature by
merely taking a dip in the River Ganga, just as a
honey-coated neem twig does not lose its
bitterness or a milk-fed serpent does not forego
its poison.
ಜೇನು ತುಪ್ಪದಿಂದ ಸಿಕ್ತವಾದ ಬೇವಿನ ಕಾಂಡವು, ಹಾಲಿನಿಂದ
ಪುಷ್ಠವಾದ ಹಾವು, ಗಂಗಾ ನೀರಿನಿಂದ ಸ್ನಾತನಾದ ದುರ್ಜನನು
ಸ್ವಭಾವವನ್ನು ಬಿಡುವುದಿಲ್ಲ.
73.चलत्येकेन पादेन तिष्ठत्येकेन पण्डितः ।
न समीक्ष्यापरं स्थानं पूर्वमायातनं त्यजेत्
ಚಲತ್ಯೇಕೇನ ಪಾದೇನ ತಿಷ್ಠತ್ಯೇಕೇನ ಪಂಡಿತಃ
ನ ಸಮೀಕ್ಷ್ಯಾಪರಂ ಸ್ಥಾನಂ ಪೂರ್ವಮಾಯಾತನಂ ತ್ಯಜೇತ್
While walking, a learned person keeps one foot
fixed and moves the other foot forward only after
examining where he is going to step on.
ಪಂಡಿತನಾಗಿರುವವನು ಒಂದೇ ಪಾದದಿಂದ ಚಲಿಸುತ್ತಾನೆ.
ಒಂದೇ ಪಾದದಿಂದ ನಿಲ್ಲುತ್ತಾನೆ. ಬೇರೆ ಸ್ಥಾನವನ್ನು ನೋಡಿ
ಹಿಂದಿನ ಸ್ಥಾನವನ್ನು ಬಿಡುವುದಿಲ್ಲ.
- कल्पद्रुमः कल्पितमेव सूत् सा कामधुक् कामितमेव दोग्धि
चिन्तामणिश्चिन्तितमेव दत्ते सतां तु संगः सकलम् प्रसूते
ಕಲ್ಪದ್ರುಮಃ ಕಲ್ಪಿತಮೇವ ಸೂತ್ ಸಾ ಕಾಮಧುಕ್ ಕಾಮಿತಮೇವ ದೋಗ್ಧಿ
ಚಿಂತಾಮಣಿಶ್ಚಿಂತಿತಮೇವ ದತ್ತೇ ಸತಾಂ ತು ಸಂಗಃ ಸಕಲಮ್ ಪ್ರಸೂತೇ
The Kalpa Vruksha produces only what you have
imagined to be realized;
The Kama Dhenu gives milk only that you have
asked for;
The Chintamani delivers only what you have
wanted from it;
But the company of virtuous people provides
anything and everything for you!
ಕಲ್ಪವೃಕ್ಷವು ಬಯಸಿದ್ದನ್ನು ಕೊಡುತ್ತದೆ. ಕಾಮಧೇನು
ಬಯಸಿದ್ದನ್ನು ಕೊಡುತ್ತದೆ. ಚಿಂತಾಮಣಿ ಚಿಂತಿಸಿದ್ದನ್ನು
ಕೊಡುತ್ತದೆ. ಆದರೆ ಸತ್ಪುರುಷರ ಸಂಗವು ಎಲ್ಲವನ್ನೂ
ಕೊಡುತ್ತದೆ.
- नारिकेलसमाकारा दृश्यन्तेऽपि हि सज्जनाः
अन्ये बदरिकाकारा बहिरेव मनोहराः
ನಾರಿಕೇಲಸಮಾಕಾರಾ ದೃಶ್ಯಂತೇಽಪಿ ಹಿ ಸಜ್ಜನಾಃ
ಅನ್ಯೇ ಬದರಿಕಾಕಾರಾ ಬಹಿರೇವ ಮನೋಹರಾಃ
The appearance of virtuous people resembles that
of a coconut, whereas the appearance of others
may look attractive only outwardly like the
badarika or jujube fruit.
ಸತ್ಪುರುಷರು ತೆಂಗಿನ ಕಾಯಿಯಂತೆ ಸಮವಾದ ಆಕಾರ
ಉಳ್ಳವರಾಗಿ ಕಾಣಿಸಲ್ಪಡುತ್ತಾರೆ. ಆದರೆ ಬೇರೆಯವರೆಲ್ಲರೂ
ಎಲ್ಚಿ ಹಣ್ಣಿನಂತೆ ಮನೋಹರವಾಗಿರುತ್ತಾರೆ.
- अहं नमामि वरदां ज्ञानदां त्वां सरस्वतीम्
प्रयच्छ विमलां बुद्धीं प्रसन्ना भव सर्वदा ॥
ಅಹಂ ನಮಾಮಿ ವರದಾಂ ಜ್ಞಾನದಾಂ ತ್ವಾಂ ಸರಸ್ವತೀಮ್
ಪ್ರಯಚ್ಛ ವಿಮಲಾಂ ಬುದ್ಧೀಂ ಪ್ರಸನ್ನಾ ಭವ ಸರ್ವದಾ
I bow my head before you, Goddess
Saraswati, the giver of boons and
knowledge. Bless me with untainted wisdom
and be always kindly disposed towards me.
ವರಗಳನ್ನು ನೀಡುವ ಜ್ಞಾನವನ್ನು ನೀಡುವ ಆ ಸರಸ್ವತಿಯನ್ನು
ನಾನು ನಮಸ್ಕರಿಸುತ್ತೇನೆ. ನನಗೆ ನಿರ್ಮಲವಾದ ಬುದ್ಧಿಯನ್ನು
ನೀಡು. ಎಂದಿಗೂ ಪ್ರಸನ್ನಳಾಗಿರು.
- स्थान भ्रष्टा न शॊभन्तॆ दंताः कॆशा नखा नराः
इति विज्ञाय मतिमान् स्वस्थानं न परित्यजॆत्
ಸ್ಥಾನ ಭ್ರಷ್ಟಾ ನ ಶೋಭಂತೇ ದಂತಾಃ ಕೇಶಾ ನಖಾ ನರಾಃ
ಇತಿ ವಿಜ್ಞಾಯ ಮತಿಮಾನ್ ಸ್ವಸ್ಥಾನಂ ನ ಪರಿತ್ಯಜೇತ್
An intelligent person understands that teeth, hair, nails and humans will lose their value if they are dislodged and so they make it a point to confine them to their own places.
ಸ್ಥಾನ ಭ್ರಷ್ಟವಾಗಿರುವ ಹಲ್ಲುಗಳು, ಕೂದಲುಗಳು ಮತ್ತು ಮನುಷ್ಯರು ಪ್ರಕಾಶಿಸುವುದಿಲ್ಲ ಎಂದು ತಿಳಿದ ಬುದ್ಧಿವಂತನಾದ ಮನುಷ್ಯನು ತನ್ನ ಸ್ಥಾನವನ್ನು ಬಿಡುವುದಿಲ್ಲ.
- न धैर्यॆन विना लक्ष्मी न शौर्यॆन विना जयः
न दानॆन विना मॊक्षॊ न ज्ञानॆन विना यशः
ನ ಧೈರ್ಯೇನ ವಿನಾ ಲಕ್ಷ್ಮೀ ನ ಶೌರ್ಯೇನ ವಿನಾ ಜಯಃ
ನ ದಾನೇನ ವಿನಾ ಮೋಕ್ಷೋ ನ ಜ್ಞಾನೇನ ವಿನಾ ಯಶಃ
ಧೈರ್ಯವಿಲ್ಲದೇ ಲಕ್ಷ್ಮಿಯಿಲ್ಲ. ಶೌರ್ಯವಿಲ್ಲದೇ ಜಯವಿಲ್ಲ. ದಾನವಿಲ್ಲದೇ ಮೋಕ್ಷವಿಲ್ಲ. ಜ್ಞಾನವಿಲ್ಲದೇ ಕೀರ್ತಿಯಿಲ್ಲ.
One cannot win a fortune without prowess or
Dhairya,
Victory without bravery,
Liberation or moksha without daana, and
Fame without wisdom.
79.पठतॊ नास्ति मूर्खत्वं जपतॊ नास्ति पातकं
मौनिनः कलहॊ नास्ति न भयं चास्ति जाग्रतः
ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಂ
ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ
As one acquires Knowledge, foolishness
starts leaving him;
As one continues doing japa, sin will vanish;
No one will be able to quarrel with an ascetic
who keeps silent and calm; and
As one keeps vigilant, he will have no fear.
ಓದುವವನಿಗೆ ಮೂರ್ಖತನವಿರುವುದಿಲ್ಲ. ಜಪ ಮಾಡುವವನಿಗೆ
ಪಾಪವಿರುವುದಿಲ್ಲ. ಮೌನವಾಗಿರುವವನಿಗೆ ಜಗಳವಿರುವುದಿಲ್ಲ.
ಜಾಗ್ರತೆಯಿಂದ ಇರುವವನಿಗೆ ಭಯವಿರುವುದಿಲ್ಲ.
80.अपूर्वः कॊपि कॊशॊयं विद्यतॆ तव भारति
व्ययतॊ वृद्धिम् आयाति क्षयं आयाति संचयात्
ಅಪೂರ್ವಃ ಕೋಪಿ ಕೋಶೋಯಂ ವಿದ್ಯತೇ ತವ ಭಾರತಿ
ವ್ಯಯತೋ ವೃದ್ಧಿಂ ಆಯಾತಿ ಕ್ಷಯಂ ಆಯಾತಿ ಸಂಚಯಾತ್
O Bharati, Goddess of Wisdom, you have with you a rare treasure shining, which increases by spending but gets depleted when not put to use.
ಸರಸ್ವತಿಯೇ ನಿನ್ನ ಬಳಿ ಅಪೂರ್ವವಾದ ಒಂದು ಧನಾಗಾರವಿದೆ. ಅದು ಖರ್ಚು ಮಾಡಿದಷ್ಟು ಹೆಚ್ಚುತ್ತದೆ. ಸಂಚಯ ಮಾಡಿದಷ್ಟೂ ನಾಶವನ್ನು ಹೊಂದುತ್ತದೆ.
- वस्त्रॆण वपुशा वाचा विद्यया विनयॆन च
वकारैः पंचभिर्युक्तः नरॊ भवति पूजितः
ವಸ್ತ್ರೇಣ ವಪುಶಾ ವಾಚಾ ವಿದ್ಯಯಾ ವಿನಯೇನ ಚ
ವಕಾರೈಃ ಪಂಚಭಿರ್ಯುಕ್ತಃ ನರೋ ಭವತಿ ಪೂಜಿತಃ
Each of these five words begins with the sound va:
Vastra (cloth), vapuh (body), vaacha (sppech),
vidya (knowledge), and vinaya (modesty).
One who possesses these five vakaaras will be
well-respected.
ವಸ್ತ್ರದಿಂದ, ಶರೀರದಿಂದ, ಮಾತಿನಿಂದ, ವಿದ್ಯೆಯಿಂದ, ವಿನಯದಿಂದ ಈ ಐದು ವ ಕಾರಗಳಿಂದ ಕೂಡಿರುವಂತಹ ಮನುಷ್ಯನು ಎಲ್ಲರಿಂದಲೂ ಪೂಜಿಸಲ್ಪಡುತ್ತಾನೆ.
82.आयुशः क्षण एकोऽपि सर्वरत्नैर्न लभ्यते
नीयते स वृथा येन प्रमादः सुमहानहो
ಆಯುಶಃ ಕ್ಷಣ ಏಕೋಽಪಿ ಸರ್ವರತ್ನೈರ್ನ ಲಭ್ಯತೇ
ನೀಯತೇ ಸ ವೃಥಾ ಯೇನ ಪ್ರಮಾದಃ ಸುಮಹಾನಹೋ
Not all the rathnas, the precious gems,
can buy even a single moment of one’s
life-time. It is therefore dangerous for
anyone to wastefully spend even a single
moment.
ಆಯುಸ್ಸಿನ ಒಂದು ಕ್ಷಣವು ಕೂಡಾ ಎಲ್ಲಾ ರತ್ನಗಳಿಂದ
ದೊರೆಯಲ್ಪಡುವುದಿಲ್ಲ. ಅಂತಹ ಆಯುಸ್ಸಿನ ಕ್ಷಣವು ವ್ಯರ್ಥವಾಗಿ
ಕಳೆಯಲ್ಪಡುತ್ತಿದೆ. ಅದರಿಂದ ತುಂಬಾ ಪ್ರಮಾದ.
83.शतॆषु जायतॆ शूरः सहस्रॆषु च पंडितः
वक्ता दस सहस्रॆशु दाता भवति वा न वा
ಶತೇಷು ಜಾಯತೇ ಶೂರಃ ಸಹಸ್ರೇಷು ಚ ಪಂಡಿತಃ
ವಕ್ತಾ ದಸ ಸಹಸ್ರೇಷು ದಾತಾ ಭವತಿ ವಾ ನ ವಾ
We may find a hero emerging out of a
hundred persons;
A scholar can be expected to be among a
thousand persons;
A good speaker may be seen as one among
ten thousand persons;
But it is difficult to say whether or not there
is a person who is magnanimous.
ನೂರರಲ್ಲಿ ಶೂರನು ಹುಟ್ಟುತ್ತಾನೆ.
ಸಾವಿರದಲ್ಲಿ ಪಂಡಿತನು ಹುಟ್ಟುತ್ತಾನೆ.
ಹತ್ತು ಸಾವಿರದಲ್ಲಿ ಮಾತನಾಡುವವನು ಹುಟ್ಟುತ್ತಾನೆ.
ಆದರೆ ದಾನ ಮಾಡುವವನು ಇರುತ್ತಾನೆಯೋ ಇಲ್ಲವೋ
- अमंत्रं अक्षरं नास्ति नास्ति मूलमनौषधं
अयॊग्यः पुरुषॊ नास्ति यॊजकस्तत्र दुर्लभः
ಆಮಂತ್ರಂ ಅಕ್ಷರಂ ನಾಸ್ತಿ ನಾಸ್ತಿ ಮೂಲಮನೌಷಧಂ
ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ
There is no letter or syllable that cannot be
made into a mantra;
There is no root or herb that cannot be used
as medicine;
There is no person who is completely
useless;
But it is difficult to come across a person
who knows how to make use of them.
ಮಂತ್ರವಿಲ್ಲದಂತಹ ಅಕ್ಷರವು ಇರುವುದಿಲ್ಲ. ಔಷದವಿಲ್ಲದಂತಹ ಮೂಲ ಎಂದರೆ ವೃಕ್ಷವಿರುವುದಿಲ್ಲ. ಅಯೋಗ್ಯನಾದ ಪುರುಷನಿರುವುದಿಲ್ಲ. ಪ್ರೇರೇಪಕನು ಅಲ್ಲಿ ದುರ್ಲಭನು.
85.शांति तुल्यं तपॊ नास्ति तॊशान्न परमं सुखं
नास्ति तृश्नापरॊ व्याधिः न च धर्मॊ दयापरः
ಶಾಂತಿ ತುಲ್ಯಂ ತಪೋ ನಾಸ್ತಿ ತೋಶಾನ್ನ ಪರಮಂ ಸುಖಂ
ನಾಸ್ತಿ ತೃಶ್ನಾಪರೋ ವ್ಯಾಧಿಃ ನ ಚ ಧರ್ಮೋ ದಯಾಪರಃ
There is no tapas equal to shanti or peace of mind;
There is no happiness greater than satisfaction;
There is no disease more serious than craving for things; and
There is no dharma greater than daya or compassion.
ಶಾಂತಿಗೆ ಸಮನಾದ ತಪಸ್ಸು ಇಲ್ಲ. ಸಂತೋಷಕ್ಕೆ ಮಿಗಿಲಾದ ಸುಖವಿಲ್ಲ. ಆಸೆಗೆ ಮಿಗಿಲಾದ ರೋಗವಿಲ್ಲ. ದಯೆಗೆ ಮಿಗಿಲಾದ ಧರ್ಮವಿಲ್ಲ.
- उपार्जियानां वित्तानां त्याग ऎव हि रक्षणं
तडागॊदर संस्थानां परिवाः इवां भसां
ಉಪಾರ್ಜಿತಾನಾಂ ವಿತ್ತಾನಾಂ ತ್ಯಾಗ ಏವ ಹಿ ರಕ್ಷಣಂ
ತಡಾಗೋದರ ಸಂಸ್ಥಾನಾಂ ಪರಿವಾಃ ಇವಾಂ ಭಸಾಂ
The only way to save the wealth that is accumulated in excess is by making donations, just as the only way to save a lake overflowing with water is to open the sluices in its belly, as it were.
ಕೆರೆಯ ಮೇಲೆ ಇರುವ ನೀರಿಗೆ ಜಾರುವಿಕೆಯಂತೆ, ಸಂಪಾದಿಸಿದ ಹಣಗಳಿಗೆ ತ್ಯಾಗವೇ ಲಕ್ಷಣ.
87.ऎकं विश रसं हंति शस्त्रॆनॆकश्च्य वध्यतॆ
सराष्ट्रं सप्रजं हंति राजानां मंत्र विप्लवः
ಏಕಂ ವಿಷರಸಂ ಹಂತಿ ಶಸ್ತೇನೇಕಸ್ಚ್ಯ ವಧ್ಯತೇ
ಸರಾಷ್ಟ್ರಂ ಸಪ್ರಜಂ ಹಂತಿ ರಾಜಾನಾಂ ಮಂತ್ರ ವಿಪ್ಲವಃ
When poison is given, only one person dies; When attacked by a weapon, only one person dies; but All the people in the country along with the King will be destroyed when he makes incorrect decisions.
ಒಂದು ವಿಷವು ರಸವನ್ನು ನಾಶಮಾಡುತ್ತದೆ. ಒಂದು ಬಾಣದಿಂದ ಒಬ್ಬನು ಬಂಧಿಸಲ್ಪಡುತ್ತಾನೆ. ಆದರೆ ಬೇರೆ ರಾಜರ ಮಂತ್ರ ಉಪದ್ರವಗಳು ರಾಷ್ಟ್ರವನ್ನು ಮತ್ತು ಪ್ರಜೆಗಳನ್ನು ಕೂಡ ನಾಶಮಾಡುತ್ತವೆ.
88.यथा हि ऎक चक्रॆण न रथस्य गतिर्भवॆत्
ऎवं पुरुषकारॆण विना दैवं न सिध्यति
ಯಥಾ ಹಿ ಏಕ ಚಕ್ರೇಣ ನ ರಥಸ್ಯ ಗತಿರ್ಭವೇತ್
ಏವಂ ಪುರುಷಕಾರೇಣ ವಿನಾ ದೈವಂ ನ ಸಿಧ್ಯತಿ
A chariot cannot run on a single wheel; in the same way, mere human effort will not succeed without the favour of Destiny.
ಹೇಗೆ ಒಂದು ರಥದ ಚಕ್ರದಿಂದ ರಥದ ಗಮನವು ಇರುವುದಿಲ್ಲವೋ ಹಾಗೆಯೇ ಪುರುಷ ಕಾರಣವಿಲ್ಲದೇ ದೇವರು ಸಿದ್ಧಿಸುವುದಿಲ್ಲ.
89.दिवसॆनैव तत्कुर्यात् यॆन रात्रौ सुखं वसॆत्
यावज्जीवं च तत्कुर्यात् यॆन प्रॆत्य सुखं वसॆत्
ದಿವಸೇನೈವ ತತ್ಕುರ್ಯಾತ್ ಯೇನ ರಾತ್ರೌ ಸುಖಂ ವಸೇತ್
ಯಾವಜ್ಜೀವಂ ಚ ತತ್ಕುರ್ಯಾತ್ ಯೇನ ಪ್ರೇತ್ಯ ಸುಖಂ ವಸೇತ್
Do such work throughout the day as will make you spend the night happily;
Do such activities in your entire life time as will ensure your happiness in the next life.
ದಿವಸದ ಪೂರ್ತಿ ಯಾವ ಒಳ್ಳೆಯ ಕೆಲಸವನ್ನು ಮಾಡುವುದರಿಂದ ರಾತ್ರಿ ಸುಖವಾಗಿರುತ್ತೇವೆಯೋ ಜೀವನ ಪರ್ಯಂತವೂ ಅಂತಹ ಒಳ್ಳೆಯ ಕೆಲಸವನ್ನು ಮಾಡುವದರಿಂದ ಮರಣಾನಂತರವೂ ಸುಖವಾಗಿರಬಹುದು.
- सर्वलक्षण हीनोपि यः सदाचारवान् नरः
श्रद्धदानो ‘ नसूयश्च शतं वर्षाणि जीवति
ಸರ್ವಲಕ್ಷಣ ಹೀನೋಪಿ ಯಃ ಸಾದಾಚಾರವಾನ್ ನರಃ
ಶ್ರದ್ಧದಾನೋ ನಸೂಯಶ್ಚ ಶತಂ ವರ್ಷಾಣೀ ಜೀವತಿ
Though devoid of all qualities, a person who sticks to good conduct, who has good faith, and who is free from jealousy will live a long life for a hundred years.
ಯಾವ ಮನುಷ್ಯನು ಎಲ್ಲಾ ಲಕ್ಷಣಗಳಿಂದ ಹೀನನಾಗಿದ್ದರೂ ಒಳ್ಳೆಯ ನಡವಳಿಕೆಯನ್ನು ಹೊಂದಿರುತ್ತಾನೆಯೋ, ಶ್ರದ್ಧೆಯನ್ನು ಹೊಂದಿರುತ್ತಾನೆಯೋ, ಅಸೂಯೆ ಇಲ್ಲದವನಾಗಿರುತ್ತಾನೆಯೋ ಅವನು ನೂರು ವರ್ಷಗಳನ್ನು ಬಾಳುತ್ತಾನೆ.
91.पन्चैव पूजयेत् लोके यशः प्राप्नोति केवलं
देवान् पित्रून् मनुष्यांश्च भिक्षूनतिथि पन्चमान्
ಪಂಚೈವ ಪೂಜಯೇತ್ ಲೊಕೇ ಯಶಃ ಪ್ರಾಪ್ನೋತಿ ಕೇವಲಂ
ದೇವಾನ್ ಪಿತ್ರೂನ್ ಮನುಷ್ಯಾಂಚ ಭಿಕ್ಷೂನತಿಥಿ ಪಂಚಮಾನ್
It is just by worshipping these five kinds of persons, namely gods, one’s parents, fellow-human beings, those who come asking for food, and the guests, that one will earn great name and fame.
ಯಾವ ಮನುಷ್ಯನು ಪ್ರಪಂಚದಲ್ಲಿ ದೇವರನ್ನು, ತಂದೆ ತಾಯಿಗಳನ್ನು, ಮನುಷ್ಯರನ್ನು, ಸಾಧುಗಳನ್ನು, ಅತಿಥಿಗಳನ್ನು ಈ ಐದು ಜನರನ್ನು ಪೂಜಿಸುತ್ತನೆಯೋ ಅವನು ಕೀರ್ತಿಯನ್ನು ಹೊಂದುತ್ತಾನೆ.
- यत्र नार्यस्तु पूज्यन्ते रमन्ते तत्र देवताः
यत्रैतास्तु न पूज्यन्ते सर्वास्तत्राफलाः क्रियाः
ಯತ್ರ ನಾರ್ಯಸ್ತು ಪೂಜ್ಯಂತೇ ರಮನ್ತೇ ತತ್ರ ದೇವತಾಃ
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ
Where women are worshipfully treated, there all the gods will rejoice;
Where they are not shown respect, there no effort will bear fruit.
ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೆಯೋ ಅಲ್ಲಿ ದೇವತೆಗಳು ಸಂತೋಷದಿಂದಿರುತ್ತಾರೆ. ಎಲ್ಲಿ ಇವರು ಪೂಜಿಸಲ್ಪಡುವುದಿಲ್ಲವೋ ಅಲ್ಲಿ ಎಲ್ಲಾ ಕೆಲಸಗಳು ವಿಫಲವಾಗುತ್ತವೆ.
- अहिंसा परमोधर्मः अहिंसा परमो दमः
अहिंसा परमं दानं अहिंसा परमं तपः
ಅಹಿಂಸಾಪರಮೋ ಧರ್ಮಃ ಅಹಿಂಸಾ ಪರಮೋ ದಮಃ
ಅಹಿಂಸಾ ಪರಮಂ ದಾನಂ ಅಹಿಂಸಾ ಪರಮಂ ತಪಃ
Ahimsa or Non-violence is the supreme dharma;
Ahimsa is supreme self-restraint;
Ahimsa is supreme daana; and
Ahimsa is supreme austerity or tapas.
ಅಹಿಂಸೆಯೇ ಶ್ರೇಷ್ಠವಾದ ಧರ್ಮ
ಅಹಿಂಸೆಯೇ ಶ್ರೇಷ್ಠವಾದ ಇಂದ್ರಿಯ ನಿಗ್ರಹ
ಅಹಿಂಸೆಯೇ ಶ್ರೇಷ್ಠವಾದ ದಾನ
ಅಹಿಂಸೆಯೇ ಶ್ರೇಷ್ಠವಾದ ತಪಸ್ಸು
- श्रोत्रं श्रुतेनैव न कुन्डलेन दानेन पाणिर्नतु कङ्कणेन
विभाति कायः करुणापराणां परोपकारेण न चन्दनेन.
ಶ್ರೋತ್ರಂ ಶ್ರುತೇನೈವ ನ ಕುಂಡಲೇನ ದಾನೇನ ಪಾಣಿರ್ನತು ಕಂಕಣೇನ
ವಿಭಾತಿ ಕಾಯಃ ಕರುಣಾಪರಾಣಾಂ ಪರೋಪಕಾರೇಣ ನ ಚಂದನೇನ
It is good hearing that adds beauty to the ear, not an ear-ring;
It is the act of giving daana that keeps the hand shining, not a bracelet; and
It is compassion and charitable nature that add luster to the body, not the sandal paste.
ಕಿವಿಯು ಒಳ್ಳೆಯದನ್ನು ಕೇಳುವುದರಿಂದ ಭಾಸಿಸುತ್ತದೆಯೆ ಹೊರತು ಕುಂಡಲದಿಂದ ಅಲ್ಲ. ಕೈ ದಾನ ಮಾಡುವುದರಿಂದ ಭಾಸಿಸುತ್ತದೆಯೆ ಹೊರತು ಕಂಕಣದಿಂದ ಅಲ್ಲ. ಶರೀರವು ದುಖಃದಿಂದ ಕೂಡಿರುವವರಿಗೆ ಪರೋಪಕಾರ ಮಾಡುವುದರಿಂದ ಭಾಸಿಸುತ್ತದೆಯೆ ಹೊರತು ಚಂದನದಿಂದ ಅಲ್ಲ.
- यस्य नास्ति स्वयं प्रज्ञा शास्त्रं तस्य करोति किं ?
लोचनाभ्यां विहीनस्य दर्पणः किं करोति?
ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ?
ಲೋಚನಾಭ್ಯಾಂ ವಿಹೀನಸ್ಯ ದರ್ಪಣಃ ಕಿಂ ಕರೋತಿ?
Of what use is the Sastra or Scriptural text to a person without intelligence?
In the same way, what use is a pair of spectacles to a person whose eyes cannot see?
ಯಾರಿಗೆ ಸ್ವಂತವಾದ ಬುದ್ಧಿ ಇರುವುದಿಲ್ಲವೋ ಅವನಿಗೆ ಶಾಸ್ತ್ರವು ಏನು ಮಾಡುವುದಕ್ಕಾಗುತ್ತದೆ. ಕಣ್ಣು ಇಲ್ಲದವನಿಗೆ ಕನ್ನಡಿ ಏನು ಮಾಡಬಹುದು.
96.एषां न विद्या न तपो न दानं ञानं न शीलं न गुणो न धर्मः
ते मर्त्यलोके भुविभार भूताः मनुष्य रूपेण मृगश्चरन्ति
ಈಷಾಂ ನ ವಿದ್ಯಾ ನ ತಪೋ ನ ದಾನಂ ಜ್ಞಾನಂ ನ ಶೀಲಂ ನ ಗುಣೋ ನ ಧರ್ಮಃ
ತೇ ಮರ್ತ್ಯಲೋಕೇ ಭುವಿಭಾರ ಭೂತಾಃ ಮನುಷ್ಯ ರೂಪೇಣ ಮೃಗಶ್ಚರನ್ತಿ
Those who do not possess learning, tapas or austerity, charity, wisdom, character, virtuous qualities and dharma are a burden to the earth. They are no better than animals in human form roaming about in the world!
ಯಾರಿಗೆ ವಿದ್ಯೆ, ತಪಸ್ಸು, ದಾನ, ಜ್ಞಾನ, ಶೀಲ, ಗುಣ ಮತ್ತು ಧರ್ಮವಿರುವುದಿಲ್ಲವೋ ಅವರು ಭೂಲೋಕದಲ್ಲಿ ಭೂಮಿಗೆ ಭಾರವಾಗಿ ಮನುಷ್ಯ ರೂಪದಲ್ಲಿ ಮೃಗಗಳಂತೆ ಚಲಿಸುತ್ತಾರೆ.
- काकचेष्टा बकोध्यानं श्वान निद्रा अल्पाहारी
मितभाषीचैव विद्यार्थिनः पञ्च लक्षणम्
ಕಾಕಚೇಷ್ಟಾ ಬಕೋಧ್ಯಾನಂ ಶ್ವಾನ ನಿದ್ರಾ ಅಲ್ಪಾಹಾರೀ
ಮಿತಭಾಷೀಚೈವ ವಿದ್ಯಾರ್ಥಿನಃ ಪಂಚ ಲಕ್ಷಣಂ
The following five qualities define a student:
- Actively moving about like a cock;
- Going into a meditative state like a crane;
- Sleeping like a dog;
- Eating lightly; and
- Talking sparingly.
ಕಾಗೆಯಂತೆ ಚೇಷ್ಟೆ ಮಾಡುವುದು, ಕೊಕ್ಕರೆಯಂತೆ ಧ್ಯಾನ ಮಾಡುವುದು, ನಾಯಿಯಂತೆ ನಿದ್ರೆ ಮಾಡುವುದು, ಮಿತವಾಗಿ ಊಟ ಮಾಡುವುದು, ಮಿತವಾಗಿ ಮಾತನಾಡುವುದು, ಈ ಐದೂ ವಿದ್ಯಾರ್ಥಿಗಳ ಪಂಚ ಲಕ್ಷಣವಾಗಿದೆ.
98.परोक्षे कार्यहन्तारं प्रत्यक्षे प्रियवादिनम्
वर्जयेत्ताद्रुशं मित्रं विषकुंभं पयोमुखम्
ಪರೋಕ್ಷೇ ಕಾರ್ಯಹನ್ತಾರಂ ಪ್ರತ್ಯಕ್ಷೇ ಪ್ರಿಯವಾದಿನಮ್
ವರ್ಜಯೇತ್ ಸಾದ್ರುಶಂ ಮಿತ್ರಂ ವಿಷಕುಂಭಂ ಪಯೋಮುಖಮ್
If you suspect that your friend is working against you in your absence, though he speaks pleasingly in your presence, you should dismiss him as unacceptable, just as we throw out a pot filled with poison though covered with a layer of milk.
ನಮ್ಮಹಿಂದೆ ನಮ್ಮ ಕೆಲಸಗಳನ್ನು ಹಾಳುಮಾಡುವ, ನಮ್ಮ ಮುಂದೆ ಪ್ರೀತಿಯ ಮಾತನ್ನು ನುಡಿಯುವಂತಹ, ಮಡಕೆಯ ತುಂಬಾ ವಿಷವಿದ್ದು ಮೇಲ್ಭಾಗದಲ್ಲಿ ಹಾಲು ಉಳ್ಳಂತಹಾ ಸ್ನೇಹಿತನನ್ನು ತ್ಯಜಿಸಬೇಕು.
- निद्रा तन्द्रा भयं क्रोधः आलस्यं दीर्घसूत्रता
षट् दोषाः पुरुषेणेह त्यक्तव्याः भूतिमिच्चता
ನಿದ್ರಾ ತನ್ದ್ರಾ ಭಯಂ ಕ್ರೋಧಃ ಆಲಸ್ಯಂ ದೀರ್ಘಸೂತ್ರತಾ
ಷಟ್ ದೋಷಾಃ ಪುರುಷೇಣೇಹ ತ್ಯಕ್ತವ್ಯಾಃ ಭೂತಿಮಿಚ್ಚತಾ
He who wishes to acquire wealth in this world should overcome the following six faults: slumber, drowsiness, fear, anger, laziness, lethargy and sluggishness.
ಈ ಭೂಲೋಕದಲ್ಲಿ ಯಾವ ಮನುಷ್ಯನು ಐಶ್ವರ್ಯವನ್ನು ಇಚ್ಚಿಸುತ್ತಾನೆಯೋ ಅಂತಹ ಮನುಷ್ಯನು ನಿದ್ರೆ, ತೂಗುವಿಕೆ, ಭಯ, ಕೋಪ, ಸೋಮಾರಿತನ ಮತ್ತು ನಿಧಾನವಾಗಿ ಕೆಲಸ ಮಾಡುವುದು ಈ ಆರು ದೋಷಗಳನ್ನು ತ್ಯಜಿಸಬೇಕು.
100.मूर्खा यत्र न पूज्यन्ते धान्यं यत्र सुसन्चितं
दंपत्योः कलहो नास्ति तत्र श्रीः स्वयमागता
ಮೂರ್ಖಾ ಯತ್ರ ನ ಪೂಜ್ಯನ್ತೇ ಧಾನ್ಯಂ ಯತ್ರ ಸುಸಂಚಿತಂ
ದಂಪತ್ಯೋಃ ಕಲಹೋ ನಾಸ್ತಿ ತತ್ರ ಶ್ರೀಃ ಸ್ವಯಮಾಗತಾ
Where foolishness is not respected,
Where food grains are well stocked, and
Where there is no quarrelling between husband and wife,
There Goddess Lashmi offers herself readily to dwell.
ಮೂರ್ಖರು ಎಲ್ಲಿ ಪೂಜಿಸಲ್ಪಡುವುದಿಲ್ಲವೋ, ಧಾನ್ಯವು ಎಲ್ಲಿ ಸುಸಂಗ್ರಹವಾಗಿರುತ್ತದೆಯೋ, ಎಲ್ಲಿ ದಂಪತಿಗಳ ಮಧ್ಯದಲ್ಲಿ ಜಗಳವಿರುವುದಿಲ್ಲವೋ ಅಲ್ಲಿ ಲಕ್ಷ್ಮಿಯು ತಾನಾಗಿಯೇ ಬರುತ್ತಾಳೆ.
- सुखं शॆतॆ सत्यवक्ता सुखं शॆतॆ मितव्ययी
हितभुक् मितभुक् चैव तथैव विजितॆन्द्र्यः
ಸುಖಂ ಶೇತೇ ಸತ್ಯವಕ್ತಾ ಸುಖಂ ಶೇತೇ ಮಿತವ್ಯಯೀ
ಹಿತಭುಕ್ ಮಿತಭುಕ್ ಚೈವ ತಥೈವ ವಿಜಿತೇನ್ದ್ರಿಯಃ
One who speaks Truth will sleep peacefully,
One who spends moderately will speak peacefully,
One who eats wholesome food moderately will sleep peacefully, and
One who has control over his senses will also sleep peacefully.
ಸತ್ಯವನ್ನು ನುಡಿಯುವವನು ಸುಖವಾಗಿ ಮಲಗುತ್ತಾನೆ. ಮಿತವಾಗಿ ವ್ಯಯ ಮಾಡುವವನು ಸುಖವಾಗಿ ಮಲಗುತ್ತಾನೆ. ಹಾಗೆಯೇ ಹಿತವಾದದ್ದನ್ನು ಉಣ್ಣುವವನು ಮಿತವಾಗಿ ಉಣ್ಣುವವನು, ಹಾಗೆಯೇ ಜಿತೇಂದ್ರಿಯನು ಸುಖವಾಗಿ ಮಲಗುತ್ತಾನೆ.
- दानॆन तुल्यॊ निधिरस्ति नान्यॊ लॊभॆन नान्यॊस्ति रिपुः पृथिव्यां
विभूषणं शीलसम्ं च नान्यतु संतॊषतुल्यं धनमस्ति नान्यत्
ದಾನೇನ ತುಲ್ಯೋ ನಿಧಿರಸ್ತಿ ನಾನ್ಯೋ
ಲೋಭೇಣ ನಾನ್ಯೋಸ್ತಿ ರಿಪುಃ ಪೃಥಿವ್ಯಾಂ
ವಿಭೂಷಣಂ ಶೀಲಸಮಂ ಚ ನಾನ್ಯತು
ಸಂತೋಷತುಲ್ಯಂ ಧನಮಸ್ತಿ ನಾನ್ಯತ್
There is no treasure that is equal to daana,
there is no enemy that is equal to miserliness,
there is no ornament that is equal to good character, and
there is no wealth that is equal to a sense of happiness.
ದಾನಕ್ಕೆ ಸಮಾನವಾದ ನಿಧಿಯು ಇಲ್ಲ. ಆಸೆಗೆ ಸಮನಾದ ಶತ್ರುವಿಲ್ಲ. ಭೂಮಿಯಲ್ಲಿ ಶೀಲಕ್ಕೆ ಸಮಾನವಾದ ಆಭರಣವಿಲ್ಲ. ಸಂತೋಷಕ್ಕೆ ಸಮಾನವಾದ ಹಣವಿಲ್ಲ.
- अद्भिः गात्राणि शुध्यंति मनः सत्यॆन शुध्यति
विद्या तपॊभ्यां भूतात्मा बुद्धिर् ज्ञानॆन शुद्ध्यति
ಅದ್ಭಿಃ ಗಾತ್ರಾಣಿ ಶುಧ್ಯಂತಿ ಮನಃ ಸತ್ಯೇನ ಶುಧ್ಯತಿ
ವಿದ್ಯಾ ತಪೋಭ್ಯಾಂ ಭೂತಾತ್ಮಾ ಬುದ್ಧಿರ್ ಜ್ಞಾನೇನ ಶುಧ್ಯತಿ
The body parts get purified when washed with water,
the mind gets purified by truth,
the soul gets purified by learning and tapas, and
the intellect gets purified by Jnaana or Wisdom.
ನೀರಿನಿಂದ ಪಾತ್ರೆಗಳು ಶುದ್ಧಿಸಲ್ಪಡುತ್ತವೆ. ಮನಸ್ಸು ಸತ್ಯದಿಂದ ಶುದ್ಧಿಸಲ್ಪಡುತ್ತದೆ. ಮಾನವನು ವಿದ್ಯೆ ಮತ್ತು ತಪಸ್ಸುಗಳಿಂದ ಶುದ್ಧಿಸಲ್ಪಡುತ್ತಾನೆ. ಬುದ್ಧಿ ಜ್ಞಾನದಿಂದ ಶುದ್ಧಿಸಲ್ಪಡುತ್ತದೆ.
104.सर्वॆषामॆव शौचानाम् अर्थशौच्ं विशिष्यतॆ
यॊर्थॆ शुचिः स शुचिः न मृद्वारिशुचिः शुचिः
ಸರ್ವೇಷಾಮೇವ ಶೌಚಾನಾಮ್ ಅರ್ಥಶೌಚಂ ವಿಶಿಷ್ಯತೇ
ಯೋರ್ಥೇ ಶುಚಿಃ ಸ ಶುಚಿಃ ನ ಮೃದವಾರಿಶುಚಿಃ ಶುಚಿಃ
Among all the practices of saucha or purity,
Maintaining purity in financial dealings is the
supreme one. One is said to have attained
Purity only when his finances are kept pure
and clean, not when he gets cleaned by mere
mud and water.
ಎಲ್ಲಾ ಶೌಚಗಳಿಗಿಂತಲೂ ಅರ್ಥಶೌಚ ವಿಶಿಷ್ಥವಾಗಿದೆ. ಹಣದಲ್ಲಿ ಯಾವ ಶುಚಿಯಿದೆಯೋ ಅದೇ ಶುದ್ಧವಾದುದು. ಮಣ್ಣಿನಿಂದ ನೀರಿನಿಂದ ಶುದ್ಧವಾಗಿರುವುದು ಶುಚಿಯಲ್ಲ.
- धृतिः क्षमा दमॊस्तॆयं शौचमिंद्रिय्य निग्रह्ः
धीर्विद्या सत्यमक्रॊधॊ दशकं धर्म लक्षण्ं
ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯ ನಿಗ್ರಹಃ
ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮ ಲಕ್ಷಣಂ
The following ten qualities characterize Dharma::
Courage, Forgiveness, Self-control, Non-stealing,
Purity,
Control over senses, Good Intellect, Learning,
Truthfulness and
Freedom from Anger.
ಧೈರ್ಯ, ತಾಳ್ಮೆ, ದಮ, ಕಳ್ಳತನವಿಲ್ಲದಿರುವುದು, ಶುಚಿಯು, ಇಂದ್ರಿಯ ನಿಗ್ರಹ, ಬುದ್ಧಿ, ವಿದ್ಯೆ, ಸತ್ಯವು ಮತ್ತು ಕೋಪವಿಲ್ಲದಿರುವುದು ಈ ಹತ್ತೂ ಧರ್ಮ ಲಕ್ಷಣವಾಗಿವೆ.
- व्यायामात् लभते स्वास्थ्यं दीर्घायुष्यं बलं सुखम्
आरोग्यं परमं भाग्यं स्वास्थ्यं सर्वार्थ साधनम्
ವ್ಯಾಯಾಮಾತ್ ಲಭತೇ ಸ್ವಾಸ್ಥ್ಯಂ ದೀರ್ಘಾಯುಷ್ಯಂ ಬಲಂ ಸುಖಂ
ಅರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಂ
By doing physical exercise, one can get good health, strength, long life and happiness. Good health is indeed the greatest blessing and it is the means of attaining everything in life.
ವ್ಯಾಯಾಮದಿಂದ ಆರೋಗ್ಯ, ದೀರ್ಘವಾದ ಆಯುಸ್ಸು, ಶಕ್ತಿ ಮತ್ತು ಸುಖವು ದೊರೆಯುತ್ತದೆ . ಆರೋಗ್ಯವೇ ಶ್ರೇಷ್ಠವಾದ ಭಾಗ್ಯ. ಆರೋಗ್ಯವೇ ಪುರುಷಾರ್ಥಗಳ ಸಾಧನ.
- प्रत्यहं प्रत्यवेक्षेत नरश्चरितमात्मनः
किन्नु मे पशुभिस्तुल्यं किन्नु सत्पुरुषैरिति
ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನಃ
ಕಿನ್ನು ಮೇ ಪಶುಭಿಸ್ತುಲ್ಯಂ ಕಿನ್ನು ಸತ್ಪುರುಷೈರಿತಿ
One should introspect about one’s own actions to find out whether they were similar to those of animals or to those of virtuous people.
ಪ್ರತಿ ದಿನವೂ ಮನುಷ್ಯನು ತನ್ನ ಚರಿತ್ರೆಯನ್ನು ಪರೀಕ್ಷಿಸಬೇಕು. ನಾನು ಪಶುಗಳಿಗೆ ಸಮಾನನೋ ಅಥವಾ ಸತ್ಪುಷರಿಗೆ ಸಮಾನನೋ ಎಂಬುದಾಗಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು..
- याद्रुशैः सन्निविशते याद्रुशांश्चोपसेवते
याद्रुगिच्छेच्च भवितुं ताद्रुग्भवति पूरुषः
ಯಾದೃಶೈಃ ಸನ್ನಿವಿಶತೇ ಯಾದೃಶಾಂಶ್ಚೋಪಸೇವತೇ
ಯಾದೃಗಿಚ್ಛೇಚ್ಚ ಭವಿತುಂ ತಾದೃಗ್ಭವತಿ ಪೂರುಷಃ
A person becomes very much like the people in whose company he lives;
A person becomes like the people whom he serves; or
He becomes exactly like the person he wants to be.
ಯಾರ ಜೊತೆಯಲ್ಲಿ ಮನುಷ್ಯನು ನಿವಾಸ ಮಾಡುತ್ತಾನೆಯೋ, ಯಾರನ್ನು ಉಪಚರಿಸುತ್ತಾನೆಯೋ, ಹೇಗೆ ಆಗಬೇಕೆಂದು ಬಯಸುತ್ತಾನೆಯೋ, ಮನುಷ್ಯನು ಹಾಗೆಯೇ ಆಗುತ್ತಾನೆ.
- अज्ञेभ्यो ग्रन्थिनः श्रेष्ठाः ग्रन्थिभ्यो धारिणो वराः
धारिभ्यो ज्ञानिनः श्रेष्ठाः ज्ञानिभ्यो व्यवसायिनः
ಅಜ್ಞೇಭ್ಯೋ ಗ್ರನ್ಥಿನಃ ಶ್ರೇಷ್ಠಃ ಗ್ರನ್ಥಿಭ್ಯೋ ಧಾರಿಣೋ ವರಾಃ
ಧಾರಿಭ್ಯೋ ಜ್ಞಾನಿನಃಶ್ರೇಷ್ಠಾಃ ಜ್ಞಾನಿಭ್ಯೋ ವ್ಯವಸಾಯಿನಃ
A reader of books is superior to an illiterate person;
One who memorizes is superior to a mere reader;
A learned person is superior to a mere memorizer; and
One who is industrious is superior to a mere learned person.
ಅಜ್ಞಾನಿಗಳಿಗಿಂತಲೂ ಗ್ರಂಥಗಳನ್ನು ಓದುವವರು ಶ್ರೇಷ್ಠರು. ಗ್ರಂಥಗಳನ್ನು ಓದುವವರಿಗಿಂತಲೂ ಧಾರಣೆ ಮಾಡುವವರು ಶ್ರೇಷ್ಠರು. ಧಾರಣೆ ಮಾಡುವವರಿಗಿಂತಲೂ ಜ್ಞಾನಿಗಳು ಶ್ರೇಷ್ಠರು. ಜ್ಞಾನಿಗಳಿಗಿಂತಲೂ ಪ್ರಯತ್ನ ಪಡುವವರು ಶ್ರೇಷ್ಠರು.
- शान्तितुल्यं तपोनास्ति सन्तोषान्न परमं सुखम्
नास्ति त्रुष्णापरो व्याधिः न च धर्मो दयापरः
ಶಾಂತಿತುಲ್ಯಂ ತಪೋನಾಸ್ತಿ ಸಂತೋಷಾನ್ನ ಪರಮಂ ಸುಖಂ
ನಾಸ್ತಿ ತೃಷ್ಣಾಪರೋ ವ್ಯಾಧಿಃ ನ ಚ ಧರ್ಮೋ ದಯಾಪರಃ
There is no tapas or austerity equal to Peace;
There is no happiness equal to contentment;
There is no disease equal to craving; and
There is no dharma equal to daana.
ಶಾಂತಿಗೆ ಸಮನಾದ ತಪಸ್ಸು ಇಲ್ಲ. ಸಂತೋಷಕ್ಕೆ ಮಿಗಿಲಾದ ಸುಖವಿಲ್ಲ. ಆಸೆಗೆ ಸಮನಾದ ರೋಗವಿಲ್ಲ. ದಯೆಗೆ ಮಿಗಿಲಾದ ಧರ್ಮವಿಲ್ಲ.
- एक वर्णं यथा दुग्धं भिन्न वर्णासु धेनुषु
तथैव धर्म वैचित्र्यं तत्वमेकं परं स्म्रुतम्
ಏಕ ವರ್ಣಂ ಯಥಾ ದುಗ್ಧಂ ಭಿನ್ನ ವರ್ಣಾಸು ಧೇನುಷು
ತಥೈವ ಧರ್ಮ ವೈಚಿತ್ರ್ಯಂ ತತ್ವಮೇಕಂ ಪರಂ ಸ್ಮೃತಂ
Though cows are of different colours and types, the milk given by them is of one and the same colour. Similarly, amidst a variety of dharmic practices, there is only one Supreme Reality or Truth. It should be remembered so.
ಹಸುಗಳಲ್ಲಿ ಬೇರೆ ಬೇರೆ ಬಣ್ಣಗಳಿದ್ದರೂ ಹಾಲು ಮಾತ್ರ ಒಂದೇ ಬಣ್ಣವನ್ನು ಹೊಂದಿರುತ್ತದೆ. ಹಾಗೆಯೇ ಧರ್ಮಗಳಲ್ಲಿ ವಿಚಿತ್ರವಿದ್ದರೂ ತತ್ವವು ಮಾತ್ರ ಒಂದೇ ಇರುತ್ತದೆ.
- मूर्खो न हि ददात्यर्थं नरो दारिद्र्य शन्कया
प्राज्ञस्तु वितरत्यर्थं नरो दारिद्र्य शञ्कया
ಮೂರ್ಖೋ ನಹಿ ದದಾತ್ಯರ್ಥಂ ನರೋ ದಾರಿದ್ರ್ಯಶಂಕಯಾ
ಪ್ರಾಜ್ಞಸ್ತು ವಿತರತ್ಯರ್ಥಂ ನರೋ ದಾರಿದ್ರ್ಯ ಶಂಕಯಾ
A fool does not give charity for the fear of himself becoming poor;
A wise man does give charity exactly for the same fear that he might become poor if he did not give charity now.
ಮೂರ್ಖನಾದ ಮನುಷ್ಯನು ತನಗೆ ಬಡತನ ಬರುತ್ತದೆಯೆಂಬ ಶಂಕೆಯಿಂದ ಬೇರೆಯವರಿಗೆ ಹಣವನ್ನು ಕೊಡುವುದಿಲ್ಲ. ಬುದ್ಧಿವಂತನಾದ ಮನುಷ್ಯನು ಬೇರೆಯವರ ಬಡತನವನ್ನು ಶಂಕಿಸಿ ಹಣವನ್ನು ದಾನ ಮಾಡುತ್ತಾನೆ.
- लोभमूलानि पापानि रस मूलानि व्याधयः
इष्ट मूलानि शोकानि त्रीणि त्यक्त्वा सुखी भव
ಲೋಭಮೂಲಾನಿ ಪಾಪಾನಿ ರಸಮೂಲಾನಿ ವ್ಯಾಧಯಃ
ಇಷ್ಟ ಮೂಲಾನಿ ಶೋಕಾನಿ ತ್ರೀಣಿತ್ಯಕ್ತ್ವ ಸುಖೀಭವ
Sins have their origin in greed;
Taste is the root cause of diseases;
Desire is the source of all sorrows –
Abandon these three — greed, taste and desire — and attain happiness.
ಆಸೆಯೇ ಪಾಪಗಳ ಮೂಲ. ರುಚಿಯೇ ವ್ಯಾಧಿಗಳ ಮೂಲ. ಬಯಕೆಯೇ ಕಷ್ಟಗಳ ಮೂಲ. ಈ ಮೂರನ್ನು ಬಿಟ್ಟು ಸುಖವಂತನಾಗು.
- देहेन्द्रियमनोबुद्धि जीवात्मपरमात्मनाम्
अन्योन्यस्याविरोधेन घटते ज्ञ्नानमुत्तमम्
ದೇಹೇಂದ್ರಿಯಮನೋಬುದ್ಧಿ ಜೀವಾತ್ಮಪರಮಾತ್ಮನಾಮ್
ಅನ್ಯೋನ್ಯಸ್ಯಾವಿರೋಧೇನ ಘಟತೇ ಜ್ಞಾನಮುತ್ತಮಂ
All the components of a human being, namely the body, the organs of action and perception, the mind, the intellect, the Jivatma and the Paramatma – all of them should function in proper coordination without any conflict. Then Superior Knowledge happens.
ಶರೀರ, ಇಂದ್ರಿಯ, ಮನಸ್ಸು, ಬುದ್ಧಿ, ಜೀವಾತ್ಮ ಮತ್ತು ಪರಮಾತ್ಮ ಇವುಗಳ ಪರಸ್ಪರ ಅವಿರೋಧದಿಂದ ಉತ್ತಮವಾದ ಜ್ಞಾನವು ಉಂಟಾಗುತ್ತದೆ.
115 यथाग्निर्दारु मध्यस्थो नो2त्तिष्टेत् मथनं विना
विना चाभ्यासयोगेन ज्ञानदीपः तथा न हि
ಯಥಾಗ್ನಿರ್ದಾರು ಮಧ್ಯಸ್ಥೋ ನೋತ್ತಿಷ್ಟೇತ್ ಮಥನಂ ವಿನಾ
ವಿನಾ ಚಾಭ್ಯಾಸಯೊಗೇನ ಜ್ಞಾನದೀಪಃ ತಥಾ ನ ಹಿ
The fire lying dormant in a piece of wood will not arise without friction.
Similarly, without constant practice, the lamp of Knowledge will not light up.
ಹೇಗೆ ಕಟ್ಟಿಗೆಗಳ ಮಧ್ಯದಲ್ಲಿರುವ ಬೆಂಕಿಯು ಮಥನವಿಲ್ಲದೆ ಮೇಲಕ್ಕೆ ಬರುವುದಿಲ್ಲವೋ ಅಂದರೆ ಪ್ರಜ್ವಲಿಸುವುದಿಲ್ಲವೋ ಹಾಗೆಯೇ ಅಭ್ಯಾಸ ಯೋಗವಿಲ್ಲದೇ ಜ್ಞಾನದೀಪವು ಪ್ರಜ್ವಲಿಸುವುದಿಲ್ಲ.
- 116. पात्रे त्यागी गुणे रागी सविभागीच बन्धुषु
शास्त्रे बोध्या रणे योध्या स वै पुरुष उच्यते
ಪಾತ್ರೇ ತ್ಯಾಗೀ ಗುಣೇ ರಾಗೀ ಸವಿಭಾಗೀಚ ಬಂಧುಷು
ಶಾಸ್ತ್ರೇ ಬೋಧ್ಯಾ ರಣೇ ಯೋಧ್ಯಾ ಸ ವೈ ಪುರುಷ ಉಚ್ಯತೇ
A true ‘man’ or purusha is one who gives donation to a deserving person,
appreciates the good qualities in others, shares joys and sorrows with relatives,
is well-informed in Shastras or scriptural texts, and also
proves an excellent warrior on the battlefield.
ಸತ್ಪಾತ್ರರಿಗೆ ದಾನ ಮಾಡುವವನು, ಗುಣಗಳನ್ನು ಇಚ್ಚಿಸುವವನು, ಬಂಧುಗಳ ಕಷ್ಠ ಸುಖಗಳಲ್ಲಿ ಭಾಗಿಯಾಗಿರುವವನು, ಶಾಸ್ತ್ರಗಳನ್ನು ಬೋಧಿಸುವವನು, ಯುದ್ಧದಲ್ಲಿ ಯೋಧ ಯುದ್ಧ ಮಾಡುವವನು, ಅವನೇ ಪುರುಷನೆಂದು ಹೇಳಲ್ಪಡುತ್ತದೆ.
- दुर्लभं त्रयमैवेतत् दैवानुग्रह हेतुकम्
मनुष्यत्वं मुमुक्षुत्वं मह!पुरुषसंश्रयः
ದುರ್ಲಭಂ ತ್ರಯಮೈವೇತತ್ ದೈವಾನುಗ್ರಹ ಹೇತುಕಂ
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ
The following three things are difficult to get and can be got only by divine grace:
human birth, desire for Moksha and the company of virtuous people.
ದೈವಾನುಗ್ರಹಕ್ಕೆ ಕಾರಣವಾಗಿರುವ ಈ ಮೂರೂ ದೊರೆಯುವುದು ಕಷ್ಟ. ಅವು ಯಾವುವೆಂದರೆ ಮನುಷ್ಯತ್ವ, ಮೋಕ್ಷವನ್ನು ಇಚ್ಛಿಸುವುದು, ಮಹಾ ಪುರುಷರ ಸಹವಾಸ.
- उभाभ्यामेव पक्षाभ्यां यथा खे पक्षिणां गतिः
तथैव ञ्नान कर्माभ्यां जायते परमं पदम्
ಉಭಾಭ್ಯಾಮೇವ ಪಕ್ಷಾಭ್ಯಾಂ ಯಥಾ ಖೇ ಪಕ್ಷಿಣಾಂ ಗತಿಃ
ತಥೈವ ಜ್ಞಾನ ಕರ್ಮಾಭ್ಯಾಂ ಜಾಯತೇ ಪರಮಂ ಪದಂ
Just as birds need both their wings to fly in the sky, an individual requires both
Jnana and Karma, that is, Knowledge and Action, to attain the highest goal.
ಹೇಗೆ ಪಕ್ಷಿಗಳಿಗೆ ಎರಡು ರೆಕ್ಕೆಗಳಿಂದ ಆಕಾಶದಲ್ಲಿ ಗಮನವಿದೆಯೋ ಹಾಗೆಯೇ ಜ್ಞಾನ ಮತ್ತು ಕರ್ಮಗಳಿಂದ ಉತ್ತಮವಾದ ಸ್ಥಾನವು ದೊರೆಯಲ್ಪಡುತ್ತದೆ.
- यस्य चित्तं निर्विषयं ह्रुदयं यस्य शीतलम्
तस्य मित्रं जगत्सर्वं तस्य मुक्तिः करस्थिता
ಯಸ್ಯ ಚಿತ್ತಂ ನಿರ್ವಿಷಯಂ ಹೃದಯಂ ಯಸ್ಯ ಶೀತಲಂ
ತಸ್ಯ ಮಿತ್ರಂ ಜಗತ್ಸರ್ವಂ ತಸ್ಯ ಮುಕ್ತಿಃ ಕರಸ್ಥಿತಾ
He whose mind is not attached to sense objects and whose heart is filled with a cool disposition, the whole world remains friendly towards him and Mukti or Liberation is within his grasp.
ಯಾರ ಮನಸ್ಸು ನಿರ್ವಿಷಯವಾಗಿರುತ್ತದೆಯೋ, ಯಾರ ಹೃದಯವು ಶಾಂತವಾಗಿರುತ್ತದೆಯೋ ಅವನಿಗೆ ಪ್ರಪಂಚವೆಲ್ಲವೂ ಸ್ನೇಹಮಯವಾಗಿರುತ್ತದೆ. ಅವನ ಕೈಯಲ್ಲಿಯೇ ಮುಕ್ತಿ ಇರುತ್ತದೆ.
- परिवर्तिनि संसारे म्रुतः को वा न जायते
स जातो येन जातेन याति देशः समुन्नतिम्
ಪರಿವರ್ತಿನಿ ಸಂಸಾರೇ ಮೃತಃ ಕೊ ವಾ ನ ಜಾಯತೇ
ಸ ಜಾತೋ ಯೇನಾ ಜಾತೇನ ಯಾತಿ ದೇಶಃ ಸಮುನ್ನತಿಮ್
In this ever-changing world, is there anyone who does not take birth again after death?
Really speaking, he alone is born by whose birth his country attains eminence.
ಜನನ ಮರಣಗಳನ್ನು ಹೊಂದಿರುವ ಈ ಪ್ರಪಂಚದಲ್ಲಿ ಮರಣಿಸಿದವನು ಯಾರು ಹುಟ್ಟುವುದಿಲ್ಲ? ಯಾರ ಜನ್ಮದಿಂದ ದೇಶವು ಉನ್ನತಿಯನ್ನು ಹೊಂದುತ್ತಿದೆಯೋ ಅವನ ಜನ್ಮವೇ ಸಾರ್ಥಕವಾದುದು.
- भाषासु मुख्या मधुरा दिव्या गीर्वाण भारती
तस्माद्धि काव्यं मधुरं तस्मादपि सुभाषितम्
ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣ ಭಾರತೀ
ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಂ
Among the languages, Sanskrit language is both important and divine in nature.
In Sanskrit language, Poetry is sweet and more so are the Subhashitas.
ಭಾಷೆಗಳಲ್ಲಿ ಮುಖ್ಯವಾದದ್ದು, ಮಧುರವಾದದ್ದು, ಶ್ರೇಷ್ಠವಾದದ್ದು ಸಂಸ್ಕೃತ ಭಾಷೆ. ಅದಕ್ಕಿಂತಲೂ ಮಧುರವಾಗಿರುವುದು ಕಾವ್ಯ. ಅದಕ್ಕಿಂತಲೂ ಕೂಡಾ ಸುಭಾಷಿತವು ಮಧುರ.
- शैले शैले न माणिक्यं मौक्तिकम् न गजे गजे
सज्जनाः नहि सर्वत्र चन्दनं न वने वने
ಶೈಲೇ ಶೈಲೇ ನ ಮಾಣಿಕ್ಯಂ ಮೌಕ್ತಿಕಮ್ ನ ಗಜೇ ಗಜೇ
ಸಜ್ಜನಾಃ ನಹಿ ಸರ್ವತ್ರ ಚಂದನಂ ನ ವನೇ ವನೇ
Not all the mountains contain gems;
Not all the elephants possess pearls;
Noble people are not found everywhere,
Nor is sandalwood found in every forest.
ಎಲ್ಲಾ ಪರ್ವತಗಳಲ್ಲಿಯೂ ಮಾಣಿಕ್ಯವಿರುವುದಿಲ್ಲ. ಎಲ್ಲಾ ಆನೆಗಳಲ್ಲಿಯೂ ಮುತ್ತು ಇರುವುದಿಲ್ಲ. ಎಲ್ಲಾ ಕಡೇನೂ ಸತ್ಪುರುಷರಿರುವುದಿಲ್ಲ. ಎಲ್ಲಾ ಕಾಡುಗಳಲ್ಲಿಯೂ ಚಂದನ ವೃಕ್ಷವು ಇರುವುದಿಲ್ಲ.
- यव्वनं धनसम्पत्तिः प्रभुत्वं अविवेकिता
एकैकमप्यनर्थाय किमु यत्र चतुष्तयम्
ಯವ್ವನಂ ಧನಸಂಪತ್ತಿಃ ಪ್ರಭುತ್ವಂ ಅವಿವೇಕಿತಾ
ಏಕೈಕಮಪ್ಯನರ್ಥಾಯ ಕಿಮು ಯತ್ರ ಚತುಷ್ಟಯಂ
Youth, Wealth, Athority and Lack of Judgement –
each one of them is capable of causing disaster:
what to speak of when all the four are present!
ಯವ್ವನವು, ಹಣದ ಸಂಪತ್ತ್ತು, ಅಧಿಕಾರ, ವಿವೇಕವಿಲ್ಲದಿರುವುದು, ಇದರಲ್ಲಿ ಒಂದೊಂದು ಕೂಡಾ ಅನರ್ಥಗಳಿಗೆ ಕಾರಣ. ನಾಲಕ್ಕೂ ಇದ್ದ ಪಕ್ಷದಲ್ಲಿ ಹೇಳಬೇಕಾದುದು ಏನು?
- अन्नदानं परं दानं विद्यादानमतः परम्
अन्नेन क्षणिका त्रुप्तिः यावज्जीवं च विद्यया
ಅನ್ನದಾನಂ ಪರಂ ದಾನಂ ವಿದ್ಯಾದಾನಮತಃ ಪರಂ
ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂ ಚ ವಿದ್ಯಯಾ
Offering food as daana is no doubt a noble thing.
But nobler than that is giving education to a person freely.
The satisfaction given by food is but momentary,
whereas education gives life-long benefit.
ಅನ್ನದಾನವು ಶ್ರೇಷ್ಠವಾದ ದಾನ. ಅದಕ್ಕಿಂತಲೂ ವಿದ್ಯಾದಾನ ಶ್ರೇಷ್ಠವಾದುದು. ಅನ್ನದಿಂದ ಕ್ಷಣಿಕವಾದ ತೃಪ್ತಿ ಸಿಗುತ್ತದೆ. ವಿದ್ಯೆಯಿಂದ ಜೀವನಪರ್ಯಂತರವೂ ತೃಪ್ತಿ ಸಿಗುತ್ತದೆ.
- सुन्दरोपि सुशीलोपि कुलीनोपि महाधनः
शोभते न विना विद्यां विद्या सर्वस्य भूषण्म्
ಸುಂದರೋಪಿ ಸುಶೀಲೋಪಿ ಕುಲೀನೋಪಿ ಮಹಾಧನಃ
ಶೋಭತೇ ನ ವಿನಾ ವಿದ್ಯಾಂ ವಿದ್ಯಾ ಸವಸ್ಯ ಭೂಷಣಂ
One may be handsome, with good education, born into a noble family and endowed with wealth —
Yet he will not shine forth without good education. Education is the ornament for one and all.
ಸುಂದರನಾಗಿದ್ದರೂ, ಶೀಲವಂತನಾಗಿದ್ದರೂ, ಒಳ್ಳೆಯ ವಂಶದಲ್ಲಿ ಜನಿಸಿದವನಾಗಿದ್ದರೂ, ಧನಿಕನಾಗಿದ್ದರೂ ವಿದ್ಯೆ ಇಲ್ಲದೇನೇ ಪ್ರಕಾಶಿಸುವುದಿಲ್ಲ. ವಿದ್ಯೆಯೇ ಎಲ್ಲರಿಗೂ ಭೂಷಣ.
- एकोपि गुणवान् पुत्रः निर्गुणैः किं शतैरपि
एकश्चन्द्रः तमो हन्ति नक्षत्रैः किं प्रयोजनम्
ಎಕೋಪಿ ಗುಣವಾನ್ ಪುತ್ರಃ ನಿರ್ಗುಣೈಃ ಕಿಂ ಶತೈರಪಿ
ಏಕಶ್ಚನ್ದ್ರಃ ತಮೋ ಹನ್ತಿ ನಕ್ಷತ್ರೈಃ ಕಿಂ ಪ್ರಯೋಜನಮ್
It is better to have a single son who is endowed with good qualities instead of a hundred worthless sons. When the Moon all alone can take away all the darkness, what is the use of innumerable stars?
ಗುಣವಂತನಾದ ಪುತ್ರನು ಒಬ್ಬನಿದ್ದರೂ ಸಾಕು. ಗುಣಹೀನರಾದ ನೂರಾರು ಮಕ್ಕಳಿಂದ ಪ್ರಯೋಜನವಿಲ್ಲ. ಚಂದ್ರನೊಬ್ಬನಾದರೂ ಕತ್ತಲನ್ನು ಹೋಗಲಾಡಿಸುತ್ತಾನೆ. ಸಾವಿರಾರು ನಕ್ಷತ್ರಗಳಿದ್ದರೂ ಪ್ರಯೋಜನವಿಲ್ಲ.
- तक्षकस्य विषं दन्ते मक्षिकायाश्च मस्तके
व्रुश्चिकस्य विषं पुच्च्हे सर्वाङ्गे दुर्जनस्य च
ತಕ್ಷಕಸ್ಯ ವಿಷಂ ದನ್ತೇ ಮಕ್ಷಿಕಾಯಾಶ್ಚ ಮಸ್ತಕೇ
ವೃಶ್ಚಿಕಸ್ಯ ವಿಷಂ ಪುಚ್ಛೇ ಸರ್ವಾಂಗೇ ದುರ್ಜನಸ್ಯಚ
A serpent has poison in its fangs;
A bee has it in its head;
The scorpion has it in its tail; and
A wicked person has all his limbs filled with poison.
ಹಾವಿಗೆ ವಿಷವು ಹಲ್ಲಿನಲ್ಲಿರುತ್ತದೆ. ನೊಣಕ್ಕೆ ವಿಷವು ತಲೆಯಲ್ಲಿ ಇರುತ್ತದೆ. ಚೇಳಿಗೆ ವಿಷವು ಬಾಲದಲ್ಲಿರುತ್ತದೆ. ದುರ್ಜನನಿಗೆ ಎಲ್ಲಾ ಅಂಗಗಳಲ್ಲಿಯೂ ವಿಷವಿರುತ್ತದೆ.
- व्रुथा व्रुष्टिः समुद्रेषु व्रुथा त्रुप्तस्य भोजनम्
व्रुथा दानं समर्थस्य व्रुथा दीपो दिवापि च
ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಮ್
ವೃಥಾ ದಾನಂ ಸಮರ್ಥಸ್ಯ ವೃಥಾ ದೀಪೋ ದಿವಾಪಿ ಚ
Rainfall over the ocean is quite useless;
It is useless to offer food to a person whose stomach is full;
Offering donation to a rich person is equally useless;
And so also lighting a lamp in the bright day light.
ಸಮುದ್ರಗಳಲ್ಲಿ ಮಳೆಯು ವ್ಯರ್ಥವಾಗುತ್ತದೆ. ತೃಪ್ತನಿಗೆ ಭೋಜನವು ವ್ಯರ್ಥವಾಗುತ್ತದೆ. ಸಮರ್ಥನಿಗೆ ದಾನವು ವ್ಯರ್ಥವಾಗುತ್ತದೆ. ಹಗಲಿನಲ್ಲಿ ದೀಪವು ವ್ಯರ್ಥವಾಗುತ್ತದೆ.
- यदि सत्सन्ङ्ति रतो भविष्यसि भविष्यसि
अथ दुर्जन् संसर्गे पतिष्यसि पतिष्यसि
ಯದಿ ಸತ್ಸಂಗತಿ ರತೋ ಭವಿಷ್ಯಸಿ ಭವಿಷ್ಯಸಿ
ಅಥ ದುರ್ಜನ ಸಂಸರ್ಗೇ ಪತಿಷ್ಯಸಿ ಪತಿಷ್ಯಸಿ
You will make your future brighter and brighter if you are inclined to be
in the company of virtuous people;
in case you prefer the company of wicked people, you will cause your own downfall.
ಸತ್ಪುರುಷರ ಸಹವಾಸದಲ್ಲಿ ಆಸಕ್ತಿ ಉಳ್ಳವನಾದರೆ ಮುಂದುವರಿಯುತ್ತೀಯ ಮುಂದುವರಿಯುತ್ತೀಯ. ದುರ್ಜನರ ಸಹವಾಸದಲ್ಲಿ ಆಸಕ್ತಿ ಉಳ್ಳವನಾದರೆ ನಾಶವಾಗುತ್ತೀಯ ನಾಶವಾಗುತ್ತೀಯ.
- गच्छन् पिपीलिकोयाति योजनानां शतान्यपि
अगच्छन् वैनतेयो2पि पदमेकं नगच्छति
ಗಚ್ಛನ್ ಪಿಪೀಲಿಕೋಯಾತಿ ಯೋಜನಾನಾಂ ಶತಾನ್ಯಪಿ
ಅಗಚ್ಛನ್ ವೈನತೇಯೋಪಿ ಪದಮೇಕಂ ನಗಚ್ಛತಿ
If you keep going, you may cover long distances like the ant.
But if you stay put, and in the absence of any effort, there will be no progress, even in the case of Vainateya or Garuda, known for his speed and strength.
ಹೋಗುತ್ತಿರುವ ಇರುವೆಯು ನೂರಾರು ಯೋಜನಗಳನ್ನು ಸಹಾ ದಾಟುತ್ತದೆ. ಹೋಗದೇ ಇರುವ ವೈನತೇಯನು ಒಂದು ಪದವನ್ನೂ ದಾಟುವುದಕ್ಕೆ ಸಾಧ್ಯವಿಲ್ಲ. ಇದರಿಂದ ಪ್ರಯತ್ನ ಪಟ್ಟರೆ ಏನನ್ನಾದರು ಸಾಧಿಸಬಹುದು ಪ್ರಯತ್ನವಿಲ್ಲದಿದ್ದರೆ ಏನನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲವೆಂದು ಗೋಚರವಾಗುತ್ತದೆ.
- शोको नाशयते धैर्यं शोको नाशयते श्रुतम्
शोको नाशयते सर्वं नास्ति शोकतमो रिपुः
ಶೋಕೋ ನಾಶಯತೇ ಧೈರ್ಯಂ ಶೋಕೋ ನಾಶಯತೇ ಶೃತಂ
ಶೋಕೋ ನಾಶಯತೇ ಸರ್ವಂ ನಾಸ್ತಿ ಶೋಕತಮೋ ರಿಪುಃ
Sorrow shatters courage;
Sorrow destroys whatever good counsel one has received;
Sorrow ruins everything.
There is no enemy equal to sorrow.
ಶೋಕವು ಧೈರ್ಯವನ್ನು ನಾಶಮಾಡುತ್ತದೆ. ಶೋಕವು ಒಳ್ಳೆಯ ಉಪದೇಶವನ್ನು ನಾಶಮಾಡುತ್ತದೆ. ಶೋಕವು ಎಲ್ಲವನ್ನೂ ನಾಶಮಾಡುತ್ತದೆ. ಶೋಕಕ್ಕೆ ಸಮನಾದ ಶತ್ರುವಿಲ್ಲ.
- सद्भिस्तु लीलय! प्रोक्तं शिलालिखितमक्षरम्
असद्भिः शपथेनापि जले लिखितमक्षरम्
ಸದ್ಭಿಸ್ತು ಲೀಲಯಾ ಪ್ರೋಕ್ತಂ ಶಿಲಾಲಿಖಿತಮಕ್ಷರಮ್
ಅಸದ್ಭಿಃ ಶಪಥೇನಾಪಿ ಜಲೇ ಲಿಖಿತಮಕ್ಷರಮ್
Even the casual utterances of virtuous people remain permanent like the letters carved on a stone slab;
But the utterances made by wicked people, even under oath, will only be like letters written on water.
ಸತ್ಪುರುಷರಿಂದ ಲೀಲಾಜಾಲವಾಗಿ ಹೇಳಲ್ಪಟ್ಟಿರುವ ಮಾತು ಕಲ್ಲಿನಲ್ಲಿ ಕೆತ್ತಿದ ಅಕ್ಷರದಂತೆ ಶಾಶ್ವತವಾಗಿರುತ್ತದೆ. ದುರ್ಜನರಿಂದ ಪ್ರಮಾಣಪೂರ್ವಕವಾಗಿ ಹೇಳಲ್ಪಟ್ಟಿರುವ ಮಾತು ನೀರಿನಲ್ಲಿ ಬರೆದ ಅಕ್ಷರದಂತಿರುತ್ತದೆ.
- अनेक संशयोच्छेदि परोक्षार्थस्य दर्शकम्
सर्वस्य लोचनं शास्त्रं यस्य नास्त्यन्धएव सः
ಅನೇಕ ಸಂಶಯೋಛೇದಿ ಪರೋಕ್ಷಾರ್ಥಸ್ಯ ದರ್ಶಕಮ್
ಸರ್ವಸ್ಯ ಲೋಚನಂ ಶಾಸ್ತ್ರಂ ಯಸ್ಯ ನಾಸ್ತ್ಯನ್ಧಏವ ಸಃ
Shastra or the Scripture is the Eye of Enlightenment as it clears various doubts and reveals many hidden things. Therefore one who lacks the knowledge of Shastras is as good as blind.
ಅನೇಕ ಸಂಶಯಗಳನ್ನು ಹೋಗಲಾಡಿಸುವಂಥದ್ದು, ಪರೋಕ್ಷಾರ್ಥವನ್ನು ತೋರಿಸುವಂಥದ್ದು, ಎಲ್ಲರಿಗೂ ಕಣ್ಣಿನಂತಿರುವುದು ಶಾಸ್ತ್ರ. ಯಾರು ಶಾಸ್ತ್ರವನ್ನು ಅರಿಯುವುದಿಲ್ಲವೋ ಅವನು ಕುರುಡ.
- माता शत्रुः पिता वैरी एन बालो नपाठितः
न शोभते सभामध्ये हंसमध्ये बको यथ्!
ಮಾತಾ ಶತ್ರುಃ ಪಿತಾ ವೈರೀ ಏನ ಬಾಲೋ ನಪಾಠಿತಃ
ನ ಶೋಭತೇ ಸಭಾಮಧ್ಯೇ ಹಂಸಮಧ್ಯೇ ಬಕೋ ಯಥಾ
The mother becomes an enemy and the father an opponent when they fail to educate their child properly. In the midst of learned persons, such a child will be like a crane among swans.
ತನ್ನ ಮಗನಿಗೆ ಉತ್ತಮವಾದ ಶಿಕ್ಷಣವನ್ನು ಯಾವ ತಂದೆ ತಾಯಿಗಳು ಕೊಡುವುದಿಲ್ಲವೋ ಅವರು ಬಾಲಕನಿಗೆ ವೈರಿಗಳಿಗೆ ಸಮಾನ. ಆ ಹುಡುಗನು ಹಂಸಗಳ ಮಧ್ಯದಲ್ಲಿ ಕೊಕ್ಕರೆಯಂತೆ ಸಭೆಯ ಮಧ್ಯದಲ್ಲಿ ಪ್ರಕಾಶಿಸುವುದಿಲ್ಲ.
- परो2पि हितवान् बन्धुः बन्धुरप्यहितः परः
अहितो देहजो व्याधिः हितमारण्यमौषधम्
ಪರೋಪಿ ಹಿತವಾನ್ ಬನ್ಧುಃ ಬನ್ಧುರಪ್ಯಹಿತಃ ಪರಃ
ಅಹಿತೋ ದೇಹಜೋ ವ್ಯಾಧಿಃ ಹಿತಮಾರಣ್ಯಮೌಷಧಮ್
A well-wisher, though an outsider, is as good as a relative.
A relative who is not a well wisher is an outsider.
A disease though originates in the body is not a beneficiary;
But medicine in the form of herbs, though obtained from a far off forest, is near and useful to us.
ನಮಗೆ ಒಳ್ಳೆಯದನ್ನು ಬಯಸುವವನು ಶತ್ರುವಾದರೂ ಬಂಧುವೇ. ನಮಗೆ ಕೆಟ್ಟದ್ದನ್ನು ಬಯಸುವವನು ಬಂಧುವಾದರೂ ಶತ್ರುವೇ. ರೋಗವು ನಮ್ಮ ದೇಹದಲ್ಲಿ ಉಂಟಾದರೂ ಅದು ಹಿತವಾದುದ್ದಲ್ಲ. ಔಷಧವು ಕಾಡಿನಲ್ಲಿ ಉಂಟಾದರೂ ಅದು ಹಿತವು.
- खलः सर्षप मात्राणि परच्छिद्राणि पश्यति
आत्मनो बिलमात्राणि पश्यन्नपि न पश्यति
ಖಲಃ ಸರ್ಷಪ ಮಾತ್ರಾಣಿ ಪರಚ್ಛಿದ್ರಾಣಿ ಪಶ್ಯತಿ
ಆತ್ಮನೋ ಬಿಲಮಾತ್ರಾಣಿ ಪಶ್ಯನ್ನಪಿ ನ ಪಶ್ಯತಿ
A wicked person notices defects in others though they are as minute as mustard seeds;
But he ignores his own defects though they are glaring like a big hole!
ದುರ್ಜನನು ಬೇರೆಯವರ ಲೋಪಗಳನ್ನು ಸಾಸಿವೆ ಕಾಳಿನಷ್ಟಿದ್ದರೂ ಕಾಣುತ್ತಾನೆ. ತನ್ನಲ್ಲಿರುವ ಲೋಪಗಳನ್ನು ದೊಡ್ಡ ಗಾತ್ರವಾಗಿದ್ದರೂ ಕೂಡಾ ನೋಡಿದರೂ ನೋಡದವನಂತೆ ಇರುತ್ತಾನೆ.
- अनाहूतः प्रविशति अप्रुष्टे बहुभाषते
अविश्वस्ते विश्वसिति मूढचेता नराधमः
ಅನಾಹೂತಃ ಪ್ರವಿಶತಿ ಅಪೃಷ್ಟೇ ಬಹುಭಾಷತೆ
ಅವಿಶ್ವಸ್ತೇ ವಿಶ್ವಸಿತಿ ಮೂಢಚೇತಾ ನರಾಧಮಃ
One who enters without being invited;
One who talks profusely without being asked;
One who trusts the untrustworthy,–
He is indeed a foolish person of the meanest kind.
ಮೂಢಬುದ್ಧಿಯುಳ್ಳ ಅಧಮನಾದ ಮನುಷ್ಯನು ಕರೆಯಲ್ಪಡದೇನೇ ಪ್ರವೇಶಿಸುತ್ತಾನೆ. ಕೇಳಲ್ಪಡದೇನೇ ಹೆಚ್ಚಾಗಿ ಮಾತನಾಡುತ್ತಾನೆ. ವಿಶ್ವಾಸವುಳ್ಳ ಮನುಷ್ಯನಲ್ಲಿ ವಿಶ್ವಾಸವನ್ನು ತೋರುವುದಿಲ್ಲ.
- अक्रोधेन जयेत् क्रोधम् असाधुं साधुना जयेत्
जयेत् कदर्यं दानेन जयेत् सत्येन चान्रुतम्
ಅಕ್ರೋಧೇನ ಜಯೇತ್ ಕ್ರೋಧಮ್ ಅಸಾಧುಂ ಸಾಧುನಾ ಜಯೇತ್
ಜಯೇತ್ ಕದರ್ಯಮ್ ದಾನೇನ ಜಯೇತ್ ಸತ್ಯೇನ ಚಾನೃತಮ್
Anger should be conquered by non-anger;
Wickedness should be defeated by kindness;
Miserliness should be won over by daana; and
Truth should triumph over falsehood.
ಕೋಪವನ್ನು ಕೋಪವಿಲ್ಲದೇನೇ ಜಯಿಸಬಹುದು. ಕೆಟ್ಟದ್ದನ್ನು ಒಳ್ಳೆಯದ್ದರಿಂದ ಜಯಿಸಬಹುದು. ಜಿಪುಣತನವನ್ನು ದಾನದಿಂದ ಜಯಿಸಬಹುದು. ಸುಳ್ಳನ್ನು ಸತ್ಯದಿಂದ ಜಯಿಸಬಹುದು.
- चन्दनं शीतलं लोके चन्दनादपि चन्द्रमाः
चन्द्रचन्दनयोर्मध्ये शीतला साधुसङ्गतिः
ಚನ್ದನಂ ಶೀತಲಂ ಲೊಕೇ ಚನ್ದನಾದಪಿ ಚನ್ದ್ರಮಾಃ
ಚನ್ದ್ರಚನ್ದನಯೋರ್ಮಧ್ಯೇ ಶೀತಲಾ ಸಾಧುಸಂಗತಿಃ
Sandalwood paste is no doubt very pleasant and cool;
And more pleasant is the Moonlight;
But the company of virtuous people is the most pleasant one, compared to
Sandalwood paste and the Moonlight.
ಪ್ರಪಂಚದಲ್ಲಿ ಚಂದನವು ಶೀತಲವಾಗಿರುತ್ತದೆ. ಚಂದನಕ್ಕಿಂತಲೂ ಚಂದ್ರನು ಶೀತಲವಾಗಿರುತ್ತಾನೆ. ಚಂದ್ರ ಮತ್ತು ಚಂದನಗಳ ಮಧ್ಯದಲ್ಲಿ ಸತ್ಪುರುಷರ ಸಹವಾಸವು ಶೀತಲವಾಗಿರುತ್ತದೆ,
- अष्टादश पुराणेषु व्यासस्य वचनद्वयम्
परोपकारः पुण्याय पापाय परपीडनम्
ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಮ್
ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್
The essence of Vyasa’s eighteen puranas can be summed up in two statements:
Doing favour to others is punya and causing trouble to others is paapa.
ಹದಿನೆಂಟು ಪುರಾಣಗಳಲ್ಲಿ ವ್ಯಾಸ ಮಹರ್ಷಿಯ ಎರಡು ಮಾತುಗಳು ಮುಖ್ಯವಾಗಿವೆ. ಅವು ಯಾವುವೆಂದರೆ ಪರೋಪಕಾರ ಮಾಡುವುದು ಪುಣ್ಯಕ್ಕಾಗಿ. ಬೇರೆಯವರನ್ನು ಪೀಡಿಸುವುದು ಪಾಪಕ್ಕಾಗಿ.
- अलसस्य कुतो विद्या अविद्यस्य कुतोधनम्
अधनस्य कुतो मित्रम् अमित्रस्य कुतः सुखम्
ಅಲಸಸ್ಯ ಕುತೋ ವಿದ್ಯಾ ಅವಿದ್ಯಸ್ಯ ಕುತೋಧನಮ್
ಅಧನಸ್ಯ ಕುತೋ ಮಿತ್ರಮ್ ಅಮಿತ್ರಸ್ಯ ಕುತಃ ಸುಖಮ್
Where is knowledge for a lazy person?
Where is money for the ignorant one?
One without money cannot earn a friend.
Where is happiness for one without a friend?
ಸೋಮಾರಿಗೆ ವಿದ್ಯೆಯು ಎಲ್ಲಿಂದ ಬರುತ್ತದೆ. ವಿದ್ಯೆ ಇಲ್ಲದವನಿಗೆ ಹಣವು ಎಲ್ಲಿಂದ ಬರುತ್ತದೆ. ಹಣವಿಲ್ಲದವನಿಗೆ ಸ್ನೇಹಿತನು ಎಲ್ಲಿಂದ ಬರುತ್ತಾನೆ. ಸ್ನೇಹಿತನು ಇಲ್ಲದವನಿಗೆ ಸುಖವು ಎಲ್ಲಿಂದ ಬರುತ್ತದೆ.
- उल्काहस्तो यथा कश्चिन् द्रव्यमालोक्य तां त्यजेत्
ङा!नेन ङेयमालोक्य पश्चात् ङा!नं परित्यजेत्
ಉಲ್ಕಾಹಸ್ತೋ ಯಥಾ ಕಶ್ಚಿನ್ ದ್ರವ್ಯಮಾಲೋಕ್ಯ ತಾಂ ತ್ಯಜೇತ್
ಜ್ಞಾನೇನ ಜ್ಞೇಯಮಾಲೋಕ್ಯ ಪಶ್ಚಾತ್ ಜ್ಞಾನಂ ಪರಿತ್ಯಜೇತ್
A person holding a torch in his hand goes searching for wealth.
As soon as he finds it, he throws away the torch.
Similarly, one should discard jnaana when the jneyam is realized.
There are three things: jneyam, jnata and jnanam.
Jneyam is the object of knowledge;
Jnata is the knower; and
Jnana is the process of knowing.
ಹೇಗೆ ಒಬ್ಬ ಮನುಷ್ಯನು ಕೈಯಲ್ಲಿ ದೀಪ ಉಳ್ಳವನಾಗಿ ಹಣವನ್ನು ಕಂಡು ನಂತರ ಆ ದೀಪವನ್ನು ಬಿಡುತ್ತಾನೆಯೋ ಹಾಗೆಯೇ ಜ್ಞಾನದಿಂದ ಜ್ಞೇಯವನ್ನು ಅರಿತು ನಂತರ ಜ್ಞಾನವನ್ನು ಬಿಡಬೇಕು.
- वरं प्राणपरित्यगो मानभन्गेन जीवनात्
प्राणत्यागे क्षणं दुःखं मानभन्गे दिनेदिने
ವರಂ ಪ್ರಾಣಪರಿತ್ಯಾಗೋ ಮಾನಭಂಗೇನ ಜೀವನಾತ್
ಪ್ರಾಣತ್ಯಾಗೇ ಕ್ಷಣಂ ದುಖಂ ಮಾನಭಂಗೇ ದಿನೇದಿನೇ
It is better to give up one’s life than live a life of humiliation.
Dying lasts but a moment but the pain of dishonor lives day by day.
ಅಭಿಮಾನಕ್ಕೆ ಧಕ್ಕೆಯಾದಾಗ ಜೀವಿಸುವುದಕ್ಕಿಂತಲೂ ಪ್ರಾಣವನ್ನು ತ್ಯಜಿಸುವುದೇ ಲೇಸು. ಪ್ರಾಣವನ್ನು ತ್ಯಜಿಸಿದಾಗ ಕ್ಷಣಕಾಲವು ದುಖಃವಿರುತ್ತದೆ. ಮಾನಹೋದಾಗ ಪ್ರತಿ ದಿನವೂ ದುಖಃವಿರುತ್ತದೆ.
- दूरस्थोपि न दूरस्थो यो यस्य मनसि स्थितः
यो यस्य ह्रुदये नास्ति समीपस्थो2पि दूरतः
ದೂರಸ್ಥೋಪಿ ನ ದೂರಸ್ಥೋ ಯೋ ಯಸ್ಯ ಮನಸಿ ಸ್ಥಿತಃ
ಯೋ ಯಸ್ಯ ಹೃದಯೇ ನಾಸ್ತಿ ಸಮೀಪಸ್ಥೋಪಿ ದೂರತಃ
If one resides in your mind, he will be near you, though physically away from you.
If one has no place in your heart, he is far away from you, though physically near.
ಯಾವ ಮನುಷ್ಯನು ಬೇರೆಯವರ ಮನಸ್ಸಿನಲ್ಲಿ ಇರುತ್ತಾನೆಯೋ ಅವನು ದೂರದಲ್ಲಿ ಇದ್ದರೂ ಹತ್ತಿರದಲ್ಲಿ ಇರುವಂತೆ. ಯಾವ ಮನುಷ್ಯನು ಬೇರೆಯವರ ಮನಸ್ಸಿನಲ್ಲಿ ಇರುವುದಿಲ್ಲವೋ ಅವನು ಹತ್ತಿರದಲ್ಲಿದ್ದವನಾದರೂ ದೂರದಲ್ಲಿ ಇದ್ದವನಂತೆ.
- 145. गते शोको न कर्तव्यो भविष्यं नैव चिन्तयेत्
वर्तमानेन कालेन प्रवर्तन्ते विचक्षणाः
ಗತೇ ಶೋಕೋ ನ ಕರ್ತವ್ಯೋ ಭವಿಷ್ಯಂ ನೈವ ಚಿನ್ತಯೇತ್
ವರ್ತಮಾನೇನ ಕಾಲೇನ ಪ್ರವರ್ತನ್ತೇ ವಿಚಕ್ಷಣಾಃ
Without worrying about the past and without getting disturbed by the future, the intelligent people always place themselves in the present.ಯಾವ ಸಮಯವು ಕಳೆದು ಹೋಗಿರುತ್ತದೆಯೋ ಅದನ್ನು ಕುರಿತು ಚಿಂತಿಸಬಾರದು. ಯಾವ ಸಮಯವು ಮುಂದೆ ಬರುತ್ತದೆಯೋ ಅದನ್ನು ಕುರಿತೂ ಚಿಂತಿಸಬಾರದು. ವಿದ್ವಾಂಸರಾದ ಜನರು ಕೇವಲ ವರ್ತಮಾನ ಕಾಲವನ್ನು ಕುರಿತು ಏಕಾಗ್ರತೆಯಿಂದ ಆ ಕಾಲದಲ್ಲಿಯೇ ಕೆಲಸವನ್ನು ಮಾಡುತ್ತಾರೆ.
- पुष्पे गन्धं तिले तैलं काष्टे2ग्निं पयसि घ्रुतम्
इक्षौ गुडं तथा देहे पश्यात्मानं विवेकतः
ಪುಷ್ಪೇ ಗನ್ಧಂ ತಿಲೇ ತೈಲಂ ಕಾಷ್ಟೇಗ್ನಿಂ ಪಯಸಿ ಘೃತಮ್
ಇಕ್ಷೌ ಗುಡಂ ತಥಾ ದೇಹೇ ಪಶ್ಯಾತ್ಮಾನಮ್ ವಿವೇಕತಃ
Fragrance in flowers, oil in seeds, fire in wood, ghee in milk, sugar in sugarcane and soul in the body – use discrimination to find them.
ಹೇಗೆ ಹೂವಿನಲ್ಲಿ ಗಂಧವು, ಎಳ್ಳಿನಲ್ಲಿ ತೈಲವು, ಕಟ್ಟಿಗೆಯಲ್ಲಿ ಬೆಂಕಿಯು, ಹಾಲಿನಲ್ಲಿ ತುಪ್ಪ, ಕಬ್ಬಿನಲ್ಲಿ ಬೆಲ್ಲವು ಇರುತ್ತದೆಯೋ ಹಾಗೆಯೇ ಶರೀರದಲ್ಲಿ ವಿವೇಕದಿಂದ ಆತ್ಮನನ್ನು ಕಾಣಬೇಕು.
- तावत् भयेषु भेतव्यं यावद्भयमनागतं
आगतन्तु भयं द्रुष्ट्वा प्रहर्तव्यमशन्कया
ತಾವತ್ ಭಯೇಷು ಭೇತವ್ಯಂ ಯಾವದ್ಭಯಮ್ ಅನಾಗತಂ
ಆಗತನ್ತು ಭಯಂ ದೃಷ್ಟ್ವಾ ಪ್ರಹರ್ತವ್ಯಮ್ ಅಶಂಕಯಾ
A thing may be dreaded as long as it has not overtaken you.
But once it has come upon you, try to get rid of it without hesitation.
ಎಷ್ಟು ಕಾಲದವರೆಗೂ ಭಯವು ಉಂಟಾಗುವುದಿಲ್ಲವೋ ಅಷ್ಟು ಕಾಲದವರೆಗೂ ಭಯದಲ್ಲಿ ಭೀತಿಯನ್ನು ಹೊಂದಿರಬೇಕು. ಭಯವು ಉಂಟಾದಾಗ ಅದನ್ನು ಶಂಕೆಯಿಲ್ಲದೇ ಪರಿಹರಿಸಬೇಕು.
- कामधेनु गुणा विद्या ह्यकाले फलदायिनी
प्रवासे मात्रुसद्रुशी विद्या गुप्तं धनं स्म्रुतम्
ಕಾಮಧೇನು ಗುಣಾ ವಿದ್ಯಾ ಹ್ಯಕಾಲೇ ಫಲದಾಯಿನೀ
ಪ್ರವಾಸೇ ಮಾತೃಸದೃಶೀ ವಿದ್ಯಾ ಗುಪ್ತಂ ಧನಂ ಸ್ಮೃತಂ
Like the Kamadhenu, knowledge yields fruits whenever desired.
While in travel, it takes care of you like a mother.
Knowledge is considered to be the Hidden Wealth.
ಕಲ್ಪವೃಕ್ಷದ ಗುಣವನ್ನು ಹೊಂದಿರುವುದು ವಿದ್ಯೆ. ಈ ವಿದ್ಯೆಯು ಅಕಾಲದಲ್ಲಿಯೂ ಫಲವನ್ನು ಕೊಡುತ್ತದೆ. ಪ್ರವಾಸದಲ್ಲಿರುವಾಗ ತಾಯಿಗೆ ಸಮಾನವಾಗಿರುತ್ತದೆ. ವಿದ್ಯೆಯು ಗುಪ್ತವಾದ ಧನವೆಂದು ಹೇಳಲ್ಪಟ್ಟಿದೆ.
- उद्योगे नास्ति दारिद्र्यं जपतो नास्ति पातकम्
मौनेच कलहो नास्ति नास्ति जागरिते भयम्
ಉದ್ಯೋಗೇ ನಾಸ್ತಿ ದಾರಿದ್ರ್ಯಂ ಜಪತೋ ನಾಸ್ತಿ ಪಾತಕಮ್
ಮೌನೇಚ ಕಲಹೋ ನಾಸ್ತಿ ನಾಸ್ತಿ ಜಾಗರಿತೇ ಭಯಮ್
When one puts in effort, there will be no poverty;
When one performs japa, there will be no sin;
When one is silent, there is no scope for a quarrel; and
When one is vigilant, there is no place for fear.
ಪ್ರಯತ್ನದಲ್ಲಿ ದಾರಿದ್ರ್ಯವಿರುವುದಿಲ್ಲ. ಜಪ ಮಾಡುವುದರಲ್ಲಿ ಪಾತಕವಿರುವುದಿಲ್ಲ. ಮೌನದಲ್ಲಿ ಜಗಳವಿರುವುದಿಲ್ಲ. ಜಾಗೃತೆಯಿಂದ ಇರುವಾಗ ಭಯವಿರುವುದಿಲ್ಲ.
- मनसा चिन्तितं कार्यं वाचानैव प्रकाशयेत्
मन्त्रेण रक्षयेत् गूढं कार्येचापि नियोजयेत्
ಮನಸಾ ಚಿನ್ತಿತಮ್ ಕಾರ್ಯಂ ವಾಚಾನೈವ ಪ್ರಕಾಶಯೇತ್
ಮನ್ತ್ರೇಣ ರಕ್ಷಯೇತ್ ಗೂಢಮ್ಕಾರ್ಯೇಚಾಪಿ ನಿಯೋಜಯೇತ್
What you have thought of in your mind, do not give expression to it;
Keep it secret like a mantra and reveal it as translated into action.
ಮನಸ್ಸಿನಿಂದ ಚಿಂತಿಸಿದಂತಹ ಕಾರ್ಯವನ್ನು ಮಾತಿನಿಂದ ಪ್ರಕಟಿಸಬಾರದು. ರಹಸ್ಯವಾಗಿರುವುದನ್ನು ಮಂತ್ರದಿಂದ ರಕ್ಷಿಸಬೇಕು. ಕಾರ್ಯದಲ್ಲಿ ಅದನ್ನು ನಿಯೋಜಿಸಬೇಕು.
- श्रूयताम् धर्मसर्वस्वम् श्रुत्वाचैव विचार्यताम्
आत्मनः प्रतिकूलानि परेषान्न समाचरेत्
ಶ್ರೂಯತಾಮ್ ಧರ್ಮಸರ್ವಸ್ವಮ್ ಶ್ರುತ್ವಾಚೈವ ವಿಚಾರ್ಯತಾಮ್
ಅತ್ಮನಃ ಪ್ರತಿಕೂಲಾನಿ ಪರೇಷಾನ್ನ ಸಮಾಚರೇತ್
Listen to the whole concept of dharma and contemplate on it. Don’t do to others whatever you consider to be unfavorable or disagreeable to yourself.
ಧರ್ಮದ ಸ್ವಾರಸ್ಯವೆಲ್ಲವನ್ನೂ ಕೇಳಬೇಕು. ಕೇಳಿದ ನಂತರ ಅದನ್ನು ವಿಚಾರಿಸತಕ್ಕದ್ದು. ತನಗೆ ಪ್ರತಿಕೂಲವಾಗಿರುವುದನ್ನು ಬೇರೆಯವರಿಗೆ ಆಚರಿಸಬಾರದು.
- अवश्यमनुभोक्तव्यम् क्रुतं कर्म शुभाशुभम्
नाभुक्तम् क्षीयते कर्म कल्पकोटिशतैरपि
ಅವಶ್ಯಮನುಭೋಕ್ತವ್ಯಮ್ ಕೃತಂ ಕರ್ಮ ಶುಭಾಶುಭಮ್
ನಾಭುಕ್ತಮ್ ಕ್ಷೀಯತೇ ಕರ್ಮ ಕಲ್ಪಕೋಟಿ ಶತೈರಪಿ
One has to experience the consequences of the actions one has performed, whether good or bad. Unless one experiences the consequences of one’s own karma, it will not get diminished even after millions of kalpas. (a Kalpa is equal to a day of Brahma or it is more than 400 million human years.)
ಮಾನವನು ತಾನು ಮಾಡಿರುವ ಒಳ್ಳೆಯದಾಗಲೀ ಕೆಟ್ಟದಾಗಲಿ ಕರ್ಮವನ್ನು ಅವಶ್ಯವಾಗಿ ಅನುಭವಿಸತಕ್ಕದ್ದು. ಆ ಕರ್ಮದ ಫಲವು ಅನುಭವಿಸದೇ ಇದ್ದ ಪಕ್ಷದಲ್ಲಿ ಅದು ಕೋಟಿ ಕಲ್ಪಗಳಿದ್ದರು ಕೂಡಾ ಕ್ಷೀಣಿಸುವುದಿಲ್ಲ.
- अर्थानामार्जने दुःखं आर्जितानां तु रक्षणे
आये दुःखं व्यये दुःखं अर्थः किं दुःखभाजनम
ಅರ್ಥಾನಾಮಾರ್ಜನೇ ದುಃಖಂ ಆರ್ಜಿತಾನಾಂ ತು ರಕ್ಷಣೇ
ಆಯೇ ದುಖಂ ವ್ಯಯೇ ದುಃಖಂ ಅರ್ಥಃ ಕಿಂ ದುಃಖಭಾಜನಮ್
There is suffering involved in earning wealth. There is suffering involved in protecting the wealth that is earned. Again, there is suffering involved in spending it. Why should one go after wealth when it involves so much suffering?
ಹಣವನ್ನು ಸಂಪಾದಿಸುವುದು ಕಷ್ಟ. ಸಂಪಾದಿಸಿದ ಹಣವನ್ನು ರಕ್ಷಿಸುವುದು ಕಷ್ಟ. ಆದಾಯದಲ್ಲಿಯೂ ಕಷ್ಟ. ವ್ಯಯ ಮಾಡುವುದರಲ್ಲಿಯೂ ಕಷ್ಟ. ಹಣವು ದುಖಃಕ್ಕೆ ಕಾರಣವಲ್ಲವೇ.
- विद्वानेव विजानाति विद्वज्जन परिश्रमम्
न हि वन्ध्या विजानाति गुर्वीं प्रसववेदनाम्
ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಮ್
ನ ಹಿ ವನ್ಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಮ್
Only a learned person knows the effort and difficulty involved in acquiring scholarship. A barren woman cannot understand the great pain and suffering that a pregnant woman faces.
ಪಂಡಿತನ ಪರಿಶ್ರಮವನ್ನು ಪಂಡಿತನಾದವನು ಮಾತ್ರ ತಿಳಿಯುತ್ತಾನೆ. ಹಾಗೆಯೇ ದೊಡ್ಡದಾದ ಪ್ರಸವವೇದನೆಯನ್ನು ಬಂಜೆಯಾದ ಮಹಿಳೆಯು ತಿಳಿಯುವುದಕ್ಕೆ ಸಾಧ್ಯವಿಲ್ಲ.
- श्रुतमिच्छन्ति पितरो धनमिच्छन्ति मातरः
बान्धवाः कुलमिच्छन्ति रूपमिच्छन्ति कन्यकाः
ಶೃತಮಿಚ್ಛನ್ತಿ ಪಿತರೋ ಧನಮಿಚ್ಛನ್ತಿ ಮಾತರಃ
ಬಾನ್ಧವಾಃ ಕುಲಮಿಚ್ಛನ್ತಿ ರೂಪಮಿಚ್ಛನ್ತಿ ಕನ್ಯಕಾಃ
When girls are to be married, fathers seek a well-informed bridegroom, whereas mothers look for a wealthy person. The relatives prefer to get one coming from a reputed family. Left to themselves, the girls would give preference to good looks!
ಹುಡುಗಿಯನ್ನು ಮದುವೆ ಮಾಡಿಕೊಡಬೇಕಾದರೆ ತಂದೆಯಾಗಿರುವವನು ಹುಡುಗನ ವಿದ್ಯಾಭ್ಯಾಸವನ್ನು ಇಚ್ಛಿಸುತ್ತಾನೆ. ತಾಯಿಯು ಹುಡುಗನ ಹಣವನ್ನು ಇಚ್ಛಿಸುತ್ತಾಳೆ. ಬಂಧುಗಳು ಹುಡುಗನ ಮನೆತನವನ್ನು ಇಚ್ಛಿಸುತ್ತಾರೆ. ಹುಡುಗಿಯರು ಹುಡುಗನ ರೂಪವನ್ನು ಇಚ್ಛಿಸುತ್ತಾರೆ.
- पक्षीणां बलमाकाशं मत्स्यानामुदकं बलम्
दुर्बलस्य बलं राजा बालानां रोदनं बलम्
ಪಕ್ಷೀಣಾಂ ಬಲಮಾಕಾಶಂ ಮತ್ಸ್ಯಾನಾಮುದಕಂ ಬಲಮ್
ದುರ್ಬಲಸ್ಯ ಬಲಂ ರಾಜಾ ಬಾಲಾನಾಂ ರೋದನ್ಂ ಬಲಮ್
Birds get their strength from the sky;
Fish receive their strength from water;
Weak people derive strength from the ruler;
And children show their strength in crying.
ಪಕ್ಷಿಗಳಿಗೆ ಬಲವು ಆಕಾಶ. ಮೀನುಗಳಿಗೆ ಬಲವು ನೀರು. ಬಲಹೀನನಿಗೆ ಬಲವು ರಾಜನು. ಹಾಗೆಯೇ ಮಕ್ಕಳಿಗೆ ಅಳುವುದೇ ಬಲ.
- अश्वप्लवं चाम्बुद गर्जनझ्च स्त्रीणाझ्च चित्तं पुरुषस्य भाग्यम्
अवर्षणश्चाप्यतिवर्षणश्चदेवो न जानाति कुतो मनुष्यः
ಅಶ್ವಪ್ಲವಂ ಚಾಮ್ಬುದ ಗರ್ಜನಝ್ಚ ಸ್ತ್ರೀಣಾಝ್ಚ ಚಿತ್ತಂ ಪುರುಷಸ್ಯ ಭಾಗ್ಯಮ್
ಅವರ್ಷಣಶ್ಚಾಪ್ಯತಿವರ್ಷಣಶ್ಚ ದೇವೋ ನ ಜಾನಾತಿ ಕುತೋ ಮನುಷ್ಯಃ
Even God does not know about the leaping of a horse, or
The roaring of a cloud, or
The mind of a woman, or
The fate of a man, or
The deficiency of rain or its surplus.
Then what to speak of man?
ಕುದುರೆ ಹಾರುವುದನ್ನು, ಮೇಘದ ಗರ್ಜನೆಯನ್ನು, ಹೆಂಗಸರ ಚಿತ್ತವನ್ನು, ಪುರುಷನ ಭಾಗ್ಯವನ್ನು, ಅನಾವೃಷ್ಟಿಯನ್ನು ಮತ್ತು ಅತಿವೃಷ್ಟಿಯನ್ನು ದೇವನು ಸಹಾ ತಿಳಿಯುವುದಕ್ಕೆ ಸಾಧ್ಯವಿಲ್ಲ. ಮನುಷ್ಯನು ಹೇಗೆ ತಿಳಿಯುತ್ತಾನೆ.
- सत्येन लोकं जयति दानेर्जयति दीनताम्
गुरून् शुश्रूषया जीयाद् धनुषा एवशात्रवान्
ಸತ್ಯೇನ ಲೋಕಂ ಜಯತಿ ದಾನೇರ್ಜಯತಿ ದೀನತಾಮ್
ಗುರೂನ್ ಶುಶ್ರೂಷಯಾ ಜೀಯಾದ್ ಧನುಷಾ ಏವಶಾತ್ರವಾನ್
Conquer the world by truth;
Defeat poverty by making daana;
Win over the guru by serving him; and
Vanquish the enemies with the help of bow and arrows.
ಸತ್ಯದಿಂದ ಲೋಕವನ್ನು ಜಯಿಸಬಹುದು. ದಾನದಿಂದ ದೈನ್ಯತೆಯನ್ನು ಜಯಿಸಬಹುದು. ಸೇವೆಯಿಂದ ಗುರುಗಳನ್ನು ಜಯಿಸಬಹುದು. ಬಿಲ್ಲಿನಿಂದ ಶತ್ರುಗಳನ್ನು ಜಯಿಸಬಹುದು.
- 159. पुष्पेषु जाती पुरुषेषु विष्णुः नारीषु रम्भा नगरीषु काझ्ची
नदीषु गंगा नरपेषु रामः काव्येषु माघः कवि कालिदासः
ಪುಷ್ಪೇಷು ಜಾತೀ ಪುರುಷೇಷು ವಿಷ್ಣುಃ ನಾರೀಷು ರಂಭಾ ನಗರೀಷು ಕಾಂಚೀ
ನದೀಷು ಗಂಗಾ ನರಪೇಷು ರಾಮಃ ಕಾವ್ಯೇಷು ಮಾಘಃ ಕವಿ ಕಾಳಿದಾಸಃ
Jasmine is the choicest among flowers;
Vishnu is the greatest among men;
Rambha is the most beautiful among women;
Kanchi is the most renowned among cities;
Ganga is the most sacred among rivers;
Rama is the most celebrated among kings;
Magha or Sisupalavadha is the most famous poetic composition; and
Kalidasa is the most famous among poets.
ಹೂವುಗಳಲ್ಲಿ ಜಾಜಿ ಹೂವು, ಪುರುಷರಲ್ಲಿ ವಿಷ್ಣು, ಹೆಂಗಸರಲ್ಲಿ ರಂಭೆ, ನಗರಗಳಲ್ಲಿ ಕಾಂಚೀ, ನದಿಗಳಲ್ಲಿ ಗಂಗೆ, ರಾಜರಲ್ಲಿ ರಾಮನು, ಕಾವ್ಯಗಳಲ್ಲಿ ಮಾಘನು ಬರೆದಿರುವ ಶಿಶುಪಾಲ ವಧೆ ಮತ್ತು ಕವಿಗಳಲ್ಲಿ ಕಾಳಿದಾಸನೇ ಶ್ರೇಷ್ಠರು.
- जनिता चोपनेता च यस्तु विद्यां प्रयच्छति
अन्नदाता भयत्राता पझ्चैते पितरस्म्रुताः
ಜನಿತಾ ಚೋಪನೇತಾ ಚ ಯಸ್ತು ವಿದ್ಯಾಂ ಪ್ರಯಚ್ಛತಿ
ಅನ್ನದಾತಾ ಭಯತ್ರಾತಾ ಪಝ್ಚೈತೇ ಪಿತರಸ್ಮೃತಾಃ
One who begets a child;
One who shows the way to the guru;
One who imparts knowledge;
One who provides food; and
One who protects from harm —
All these five are to be treated alike as father.
ಜನ್ಮವನ್ನು ಕೊಟ್ಟಿರುವವನು, ಉಪನಯನ ಮಾಡಿರುವವನು, ವಿದ್ಯೆಯನ್ನು ಕೊಟ್ಟಿರುವವನು, ಅನ್ನವನ್ನು ಕೊಟ್ಟಿರುವವನು ಮತ್ತು ಭಯದಿಂದ ರಕ್ಷಿಸಿರುವವನು ಈ ಐದು ಜನರೂ ತಂದೆಗೆ ಸಮಾನರು.
- गुरुपत्नी राजपत्नी ज्येष्ठपत्नी तथैव च
पत्नीमाता स्वमाता च पझ्चैते मातरस्म्रुताः
ಗುರುಪತ್ನೀ ರಾಜಪತ್ನೀ ಜ್ಯೇಷ್ಠಪತ್ನೀ ತಥೈವ ಚ
ಪತ್ನೀಮಾತಾ ಸ್ವಮಾತಾ ಚ ಪಝ್ಚೈತೇ ಮಾತರಸ್ಮೃತಾಃ
The wife of the guru, the king’s wife, the wife of the elder brother, one’s mother-in-law and one’s own mother – all these five are to be treated alike as mother.
ಗುರುಪತ್ನೀ, ರಾಜನ ಹೆಂಡತಿ, ಅಣ್ಣನ ಹೆಂಡತಿ, ಹಾಗೆಯೇ ಹೆಂಡತಿಯ ತಾಯಿ ಮತ್ತು ತನ್ನ ತಾಯಿ ಈ ಐದು ಜನರು ತಾಯಿಗೆ ಸಮಾನರು.
- सर्पः क्रूरः खलः क्रूरः सर्पात्क्रूरतरः खलः
मन्त्रौषधवशः सर्पः किमु दुष्टो भयघ्करः
ಸರ್ಪಃ ಕ್ರೂರಃ ಖಲಃ ಕ್ರೂರಃ ಸರ್ಪಾತ್ಕ್ರೂರತರಃ ಖಲಃ
ಮನ್ತ್ರೌಷಧವಶಃ ಸರ್ಪಃ ಕಿಮು ದುಷ್ಟೋ ಭಯಘ್ಕರಃ
A snake is dangerous, so also a wicked person. In fact, the wicked person is more dangerous than the snake, because the snake can be brought under control by using mantra and proper medicine; but it is not so in the case of a wicked person.
ಹಾವು ಕ್ರೂರವಾದುದು. ದುಷ್ಟನೂ ಕ್ರೂರನು. ಹಾವಿಗಿಂತಲೂ ದುಷ್ಟನು ಎರಡರಷ್ಟು ಕ್ರೂರನು. ಹಾವು ಮಂತ್ರಗಳ ಔಷಧದಿಂದ ವಶವಾಗುತ್ತದೆ. ಆದರೆ ದುಷ್ಟನು ಮಂತ್ರಗಳಿಂದಲೂ ಔಷಧದಿಂದಲೂ ವಶವಾಗುವುದಿಲ್ಲ.
- आयुः कर्म च वित्तं च विद्या निधनमेव च
पघ्चैते ननु कल्प्यन्ते गर्भगत्वेन देहिनाम्
ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ
ಪಘ್ಚೈತೇ ನನು ಕಲ್ಪ್ಯನ್ತೇ ಗರ್ಭಗತ್ವೇನ ದೇಹಿನಾಮ್
One’s longevity, action, wealth, education and death – all these get determined while one is still in the mother’s womb.
ಮನುಷ್ಯರಿಗೆ ಅವರು ಗರ್ಭದಲ್ಲಿರುವಾಗಲೇ ಆಯಸ್ಸು, ಕೆಲಸ, ಹಣ, ವಿದ್ಯೆ ಮತ್ತು ಮರಣವು ಈ ಐದೂ ಬ್ರಹ್ಮನಿಂದ ಕಲ್ಪಿಸಲ್ಪಡುತ್ತವೆ.
- न विषं विषमित्याहुः ब्रह्मास्वं विषमुच्यते
विषमेकाकिनं हन्ति ब्रह्म!स्वं पुत्रपौत्रकम्
ನವಿಷಂ ವಿಷಮಿತ್ಯಾಹುಃ ಬ್ರಹ್ಮಾಸ್ವಂ ವಿಷಮುಚ್ಯತೇ
ವಿಷಮೇಕಾಕಿನಂ ಹನ್ತಿ ಬ್ರಹ್ಮಾಸ್ವಂ ಪುತ್ರಪೌತ್ರಕಮ್
Poison loses its significance when compared to the sin of confiscating a brahmin’s property. Poison may kill one person at a time, but the sin mentioned above destroys oneself, one’s children and one’s grandchildren.
ವಿಷವನ್ನು ವಿಷವೆಂದು ಹೇಳುತ್ತಾರೆ. ಆದರೆ ಬ್ರಾಹ್ಮಣನ ಸ್ವತ್ತು ವಿಷವಾಗುತ್ತದೆ. ವಿಷವು ಒಬ್ಬನನ್ನು ಸಾಯಿಸಿದರೆ ಬ್ರಾಹ್ಮಣನ ಸ್ವತ್ತು ಮಕ್ಕಳು ಮೊಮ್ಮಕ್ಕಳನ್ನು ಸಾಯಿಸುತ್ತದೆ.
- पान्डिते च गुणाः सर्वे मूर्खे दोषा हि केवलम्
तस्मान्मूर्खसहस्रेषु प्राझ्नो एको विशिष्यते
ಪಂಡಿತೇ ಚ ಗುಣಾಃ ಸರ್ವೇ ಮೂರ್ಖೇ ದೋಷಾ ಹಿ ಕೇವಲಮ್
ತಸ್ಮಾನ್ಮೂರ್ಖಸಹಸ್ರೇಷು ಪ್ರಾಝ್ನೋ ಎಕೋ ವಿಶಿಷ್ಯತೇ
A learned person is always endowed with good qualities whereas a foolish person is filled with bad qualities. So a single scholar distinguishes himself among a thousand fools.
ಪಂಡಿತನಲ್ಲಿ ಎಲ್ಲಾ ಸದ್ಗುಣಗಳಿರುತ್ತವೆ. ಮೂರ್ಖನಲ್ಲಿ ಬರೀ ದೋಷಗಳು ಮಾತ್ರ ಇರುತ್ತವೆ. ಆದ್ದರಿಂದ ಸಾವಿರ ಮೂರ್ಖರ ಜತೆಯಿದ್ದರೂ ಒಬ್ಬನಾದ ಪಂಡಿತನು ಶ್ರೇಷ್ಠನಾಗುತ್ತಾನೆ.
- चला लक्ष्मीश्चलाः प्राणाः चलं जीवित यौवनम्
चलाचले च संसारे धर्म एको हि निश्चलः
ಚಲಾ ಲಕ್ಷ್ಮೀಃ ಚಲಾಃ ಪ್ರಾಣಾಃ ಚಲಂ ಜೀವಿತ ಯೌವನಮ್
ಚಲಾಚಲೇ ಚ ಸಂಸಾರೇ ಧರ್ಮ ಏಕೋ ಹಿ ನಿಶ್ಚಲಃ
Wealth goes, life forces leave and youth too departs. In this world of samsara where everything comes and goes, dharma alone stands firm and stable.
ಹಣವು ಚಂಚಲವಾದುದು. ಪ್ರಾಣಗಳೂ ಚಂಚಲವಾದುವು. ಹಾಗೆಯೇ ಜೀವನವೂ ಮತ್ತು ಯವ್ವನವೂ ಚಂಚಲವಾದುದು. ಚಂಚಲವಾಗಿರುವ ಮತ್ತು ಚಂಚಲವಾಗದೇ ಇರುವ ಈ ಪ್ರಪಚದಲ್ಲಿ ಧರ್ಮವೊಂದೇ ಶಾಶ್ವತವಾದುದು.
- दूरतः शोभते मूर्खो लम्बशाटपटाव्रुतः
तावच्च शोभते मूर्खो यावत्किन्चिन्न भाषते
ದೂರತಃ ಶೋಭತೇ ಮೂರ್ಖೋ ಲಮ್ಬಶಾಟಪಟಾವೃತಃ
ತಾವಚ್ಚ ಶೋಭತೇಮೂರ್ಖೋ ಯಾವತ್ಕಿಂಚಿನ್ನ ಭಾಷತೆ
A fool, wearing an expensive dress, appears from a distance to be a scholar as long as he does not open his mouth.
ಮೂರ್ಖನು ಒಳ್ಳೆಯ ರೇಶ್ಮೆ ವಸ್ತ್ರಗಳನ್ನು ಧರಿಸಿದಂತಹವನಾಗಿ ದೂರದಿಂದಲೇ ಗೌರವಿಸಲ್ಪಡುತ್ತಾನೆ. ಅದು ಎಷ್ಟುತನಕ ಅವನು ಮಾತನಾಡುವುದಿಲ್ಲವೋ ಅಷ್ಟು ತನಕ ಅವನಿಗೆ ಗೌರವವು ಸಿಗುತ್ತದೆ.
- उत्सवे व्यसने चैव दुर्भिक्षे राष्ट्रविप्लवे
राजद्वारे श्मशानेच यः तिष्ठति स बान्धवः
ಉತ್ಸವೇ ವ್ಯಸನೇ ಚೈವ ದುರ್ಭಿಕ್ಷೇ ರಾಷ್ಟ್ರವಿಪ್ಲವೇ
ರಾಜದ್ವಾರೇ ಶ್ಮಶಾನೇಚ ಯಃ ತಿಷ್ಠತಿ ಸ ಬಾಂಧವಃ
He is the real friend who stands by us in happy times as well as in bad times; during periods of war and famine; keeps company in royal assemblies; and, finally, stays with us while mourning in the burial ground.
ಹಬ್ಬಗಳಲ್ಲಿ ಮತ್ತು ಕಷ್ಟಗಳಲ್ಲಿ ಮತ್ತು ಕ್ಷಾಮದ ಸಮಯದಲ್ಲಿ ಮತ್ತು ರಾಷ್ಟ್ರಕ್ಕೆ ಯುದ್ಧವು ಸಂಭವಿಸಿದಾಗ ಮತ್ತು ರಾಜದ್ವಾರದಲ್ಲಿ, ಸ್ಮಶಾನದಲ್ಲಿ ಯಾರು ಸಹಾಯಕನಾಗಿರುತ್ತಾನೆಯೋ ಅವನೇ ಬಂಧು.
- जानीयात् प्रेषणे भ्रुत्यान् बान्धवान् व्यसनागमे
मित्रं चापदि काले च भार्या च विभवक्षये
ಜಾನೀಯಾತ್ ಪ್ರೇಷಣೇ ಭೃತ್ಯಾನ್ ಬಾಂಧವಾನ್ ವ್ಯಸನಾಗಮೆ
ಮಿತ್ರಂ ಚಾಪದಿ ಕಾಲೇ ಚ ಭಾರ್ಯಾ ಚ ವಿಭವಕ್ಷಯೆ
The true nature gets revealed — when a servant is assigned some work; the way a relative responds in a difficult situation; the way a friend behaves when we are in danger; and the way a wife reacts when wealth gets lost.
ಸೇವಕನನ್ನು ಎಲ್ಲಿಗಾದರು ಕಳುಹಿಸಬೇಕಾದ ಸಮಯದಲ್ಲಿ ಅವರ ಸ್ವಭಾವವನ್ನು ತಿಳಿಯಲಾಗುತ್ತದೆ. ಹಾಗೆಯೇ ಕಷ್ಟಗಳು ಬಂದಾಗ ಬಂಧುಗಳ ಸ್ವಭಾವವನ್ನು ತಿಳಿಯಬಹುದಾಗುತ್ತದೆ. ಹಾಗೇ ಆಪತ್ಕಾಲದಲ್ಲಿ ಮಿತ್ರನ ಸ್ವಭಾವವನ್ನು ತಿಳಿಯಬಹುದಾಗುತ್ತದೆ. ಹಾಗೆಯೇ ಹಣವು ನಾಶವಾದಾಗ, ಕ್ಷೀಣಿಸಿದಾಗ ಹೆಂಡತಿಯ ಸ್ವಭಾವವನ್ನು ತಿಳಿಯಬಹುದು.
- दुर्जनः प्रियावादी च नैव विश्वास कारणम्
मधु तिष्ठति जिह्वाग्रे ह्रुदयेतु हलाहलम्
ದುರ್ಜನಃ ಪ್ರಿಯಾವಾದೀ ಚ ನೈವ ವಿಶ್ವಾಸ ಕಾರಣಮ್
ಮಧು ತಿಷ್ಠತಿ ಜಿಹ್ವಾಗ್ರೇ ಹೃದಯೇತು ಹಲಾಹಲಮ್
A wicked person should never be trusted when he talks pleasingly because the sweetness rests on the tip of his tongue only, whereas his heart is filled with poison.
ದುರ್ಜನನು ಪ್ರೀತಿಯ ಮಾತನ್ನು ನುಡಿಯುವನಾದರೂ ಅವನು ನಂಬಿಕೆಗೆ ಯೋಗ್ಯನಲ್ಲ. ಏಕೆಂದರೆ ಅವನ ನಾಲಿಗೆಯ ಅಗ್ರಭಾಗದಲ್ಲಿ ಜೇನು ಇರುತ್ತದೆ. ಆದರೆ ಹೃದಯದಲ್ಲಿ ವಿಷವಿರುತ್ತದೆ.
- अधनाः धनमिच्छन्ति वाचं चैव चतुष्पदाः
मानवाः स्वर्गमिच्छन्ति मोक्षमिच्छन्ति देवताः
ಅಧನಾಃ ಧನಮಿಚ್ಛನ್ತಿ ವಾಚಂ ಚೈವ ಚತುಷ್ಪದಾಃ
ಮಾನವಾಃ ಸ್ವರ್ಗಮಿಚ್ಛನ್ತಿ ಮೋಕ್ಷಮಿಚ್ಛನ್ತಿ ದೇವತಾಃ
Poor people feel desire for wealth;
The four-legged animals desire the human power of speech;
Human beings long for heaven; and
The deities in heaven hope for Liberation.
ಅಧಮರು ಹಣವನ್ನು ಇಚ್ಛಿಸುತ್ತಾರೆ. ಪ್ರಾಣಿಗಳು ಪ್ರೀತಿಯ ಮಾತನ್ನು ಇಚ್ಛಿಸುತ್ತವೆ. ಮಾನವರು ಸ್ವರ್ಗವನ್ನು ಇಚ್ಛಿಸುತ್ತಾರೆ. ದೇವರು ಮೋಕ್ಷವನ್ನು ಇಚ್ಛಿಸುತ್ತಾರೆ.
- धनिकः श्रोत्रियो राजा नदी वैद्यस्तु पझ्चमः
पझ्च यत्र नविद्यन्ते तत्र वासं न कारयेत्
ಧನಿಕಃ ಶ್ರೋತ್ರಿಯೋ ರಾಜಾ ನದೀ ವೈದ್ಯಸ್ತು ಪಝ್ಚಮಃ
ಪಝ್ಚ ಯತ್ರ ನವಿದ್ಯನ್ತೆ ತತ್ರ ವಾಸಂ ನ ಕಾರಯೇತ್
One should not choose to reside in a place that is not inhabited by the following five: a wealthy person, a learned person, a king, a river and a doctor.
ಹಣವಂತನು, ವೇದಗಳನ್ನು ಬಲ್ಲ ಪಂಡಿತನು, ರಾಜನು, ನದಿ ಮತ್ತು ಐದನೆಯವನಾದ ವೈದ್ಯನು, ಈ ಐದು ಜನರು ಎಲ್ಲಿ ಇರುವುದಿಲ್ಲವೋ ಅಲ್ಲಿ ವಾಸ ಮಾಡಬಾರದು.
- यस्मिन् देशे न सम्मानं न प्रीतिर्न च बान्धवाः
न च विद्यागमः कश्चित् तं देशं परिवर्जयेत्
ಯಸ್ಮಿನ್ ದೇಶೇ ನ ಸಮ್ಮಾನಂ ನ ಪ್ರೀತಿರ್ನ ಚ ಬಾನ್ಧವಾಃ
ನ ಚ ವಿದ್ಯಾಗಮಃ ಕಶ್ಚಿತ್ ತಂ ದೇಶಂ ಪರಿವರ್ಜಯೇತ್
One should abandon such a country where one does not get any respect, where there are no friends and relatives, and where there are no learned persons.
ಯಾವ ದೇಶದಲ್ಲಿ ಗೌರವವು ಇರುವುದಿಲ್ಲವೋ, ಪ್ರೀತಿ ಇರುವುದಿಲ್ಲವೋ, ಬಂಧುಗಳು ಇರುವುದಿಲ್ಲವೋ, ಪಂಡಿತರು ಇರುವುದಿಲ್ಲವೋ, ಅಂತಹ ದೇಶವನ್ನು ತ್ಯಜಿಸಬೇಕು.
- ऋणशेषश्चाग्निशेषो व्याधिशेषस्तथैव च
पुनश्च वर्धतेयस्मात् तस्माच्चेषं न रक्षयेत्
ಋಣಶೇಷಶ್ಚಾಗ್ನಿಶೇಷೋ ವ್ಯಾಧಿಶೇಷಸ್ತಥೈವ ಚ
ಪುನಶ್ಚ ವರ್ಧತೇಯಸ್ಮಾತ್ ತಸ್ಮಾಚ್ಚೇಷಂ ನ ರಕ್ಷಯೇತ್
When a loan is not completely paid back, when fire is not fully extinguished, and when disease is not completely cured, they will grow up again. So they should be totally eradicated without leaving any trace.
ಋಣದ ಶೇಷವನ್ನು, ಅಗ್ನಿ ಶೇಷವನ್ನು, ರೋಗದ ಶೇಷವನ್ನು ಇಟ್ಟುಕೊಳ್ಳಬಾರದು. ಏಕೆಂದರೆ ಅದು ಹಂತ ಹಂತವಾಗಿ ವೃದ್ಧಿಯಾಗುತ್ತದೆ.
- दुष्टा भार्या शठं मित्रं भ्रुत्यश्चोत्तरदायकः
ससर्पे च ग्रुहे वासे म्रुत्युरेव न संशयः
ದೃಷ್ಟಾ ಭಾರ್ಯಾ ಶಠಂ ಮಿತ್ರಂ ಭೃತ್ಯಶ್ಚೋತ್ತರದಾಯಕಃ
ಸಸರ್ಪೇ ಚ ಗೃಹೇ ವಾಸೇ ಮೃತ್ಯುರೇವ ನ ಸಂಶಯಃ
A person is as good as dead if he has a bad wife,
an ungrateful friend, a servant who retorts, and
the presence of a serpent in his house. No doubt
about it.
ಯಾರ ಮನೆಯಲ್ಲಿ ದುರ್ಜನಳಾದ ಹೆಂಡತಿಯು, ಮೋಸ ಮಾಡುವಂತಹ ಸ್ನೇಹಿತನು, ಎದುರು ಮಾತನ್ನು ಆಡುವ ಸೇವಕನು, ಹಾವು ಇರುತ್ತದೆಯೋ ಅಂತಹ ಮನೆಯಲ್ಲಿ ವಾಸ ಮೃತ್ಯುವಿಗೆ ಸಮಾನ. ಇದರಲ್ಲಿ ಸಂಶಯವಿಲ್ಲ.
- विद्या मित्रं प्रवासेषु भार्यामित्रं ग्रुहेषु च
व्याधितस्यौषधं मित्रं धर्मो मित्रं म्रुतस्य च
ವಿದ್ಯಾ ಮಿತ್ರಂ ಪ್ರವಾಸೇಷು ಭಾರ್ಯಾಮಿತ್ರಂ ಗೃಹೇಷು ಚ
ವ್ಯಾಧಿತಸ್ಯೌಷಧಂ ಮಿತ್ರಂ ಧರ್ಮೋ ಮಿತ್ರಂ ಮೃತಸ್ಯ ಛ
When in a foreign country, knowledge helps like a friend;
At home, the wife is like a fiend;
In a state of sickness, medicine acts like a friend; and
For the one who dies, dharma is the only friend.
ವಿದೇಶಗಳಲ್ಲಿ ವಿದ್ಯೆಯೇ ಸ್ನೇಹಿತನು. ಮನೆಗಳಲ್ಲಿ ಹೆಂಡತಿಯೇ ಸ್ನೇಹಿತಳು. ರೋಗ ಬಂದಿರುವವರಿಗೆ ಔಷಧವೇ ಸ್ನೇಹಿತನು. ಮರಣಿಸಿದವನಿಗೆ ಧರ್ಮವೇ ಸ್ನೇಹಿತನು.
177.दुर्लभं प्राक्रुतं वाक्यं दुर्लभः क्षेमक्रुत् सुतः
दुर्लभा साद्रुशी भार्या दुर्लभः स्वजनः प्रियः
ದುರ್ಲಭಂ ಪ್ರಾಕೃತಂ ವಾಕ್ಯಂ ದುರ್ಲಭಃ ಕ್ಷೇಮಕೃತ್ ಸುತಃ
ದುರ್ಲಭಾ ಸಾದೃಶೀ ಭಾರ್ಯಾ ದುರ್ಲಭಃ ಸ್ವಜನಃ ಪ್ರಿಯಃ
It is rare to find speech that is made naturally;
It is rare to get a son who is respectful and beneficial;
It is rare to find a wife who is of the same mind; and
It is difficult to have a best-wishing relative.
ಪ್ರಿಯವಾದ ಮಾತು ದೊರೆಯುವುದು ಕಷ್ಟ. ಕ್ಷೇಮವನ್ನು ಉಂಟುಮಾಡುವ ಮಗನು ಸಿಗುವುದು ಕಷ್ಟ. ತನಗೆ ಸಮಾನಳಾದ ಹೆಂಡತಿಯು ಸಿಗುವುದು ಕಷ್ಟ. ತನಗೆ ಪ್ರೀತಿಯನ್ನು ಮಾಡುವ ಜನರು ಸಿಗುವುದು ಕಷ್ಟ.
- न च विद्या समो बन्धुः न च व्याधि समो रिपुः
न चापत्यसमः स्नेहो न च दैवात्परं बलम्
ನ ಚ ವಿದ್ಯಾ ಸಮೋ ಬನ್ಧುಃ ನ ಚ ವ್ಯಾಧಿ ಸಮೋ ರಿಪುಃ
ನ ಚಾಪತ್ಯಸಮಃ ಸ್ನೇಹೋ ನ ಚ ದೈವಾತ್ಪರಂ ಬಲಮ್
There is no friend equal to knowledge;
There is no enemy equal to disease;
There is no friend equal to one’s own son; and
There is no power equal to that of a divine being.
ವಿದ್ಯೆಗೆ ಸಮಾನವಾದ ಬಂಧುವಿಲ್ಲ. ರೋಗಕ್ಕೆ ಸಮಾನವಾದ ಶತ್ರುವಿಲ್ಲ. ಸಂತಾನಕ್ಕೆ ಸಮಾನವಾದ ಸ್ನೇಹವಿಲ್ಲ. ದೈವಕ್ಕೆ ಮಿಗಿಲಾದ ಬಲವಿಲ್ಲ.
179.अभ्यासाद्धार्यते विद्या कुलं शीलेन धार्यते
गुणेन झायते त्वार्यः कोपो नेत्रेण गम्यते
ಅಭ್ಯಾಸಾದ್ಧಾರ್ಯತೇ ವಿದ್ಯಾ ಕುಲಂ ಶೀಲೇನ ಧಾರ್ಯತೇ
ಗುಣೇನ ಜ್ಞಾಯತೇ ತ್ವಾರ್ಯಃ ಕೋಪೋ ನೇತ್ರೇನ ಗಮ್ಯತೇ
It is with practice that one acquires knowledge;
The family’s prestige is enhanced by good conduct;
A noble person is recognized by his good qualities; and
Anger gets betrayed by the eyes!
ಅಭ್ಯಾಸ ಮಾಡುವುದರಿಂದ ವಿದ್ಯೆಯು ಹೆಚ್ಚುತ್ತದೆ. ಹಾಗೆಯೇ ಒಳ್ಳೆಯ ನಡವಳಿಕೆಯಿಂದ ಕುಲವು ವೃದ್ಧಿಯನ್ನು ಹೊಂದುತ್ತದೆ. ಒಳ್ಳೆಯ ಗುಣಗಳಿಂದ ಪಂಡಿತನು ತಿಳಿಯಲ್ಪಡುತ್ತಾನೆ. ಹಾಗೆಯೇ ಕೋಪವು ಕಣ್ಣುಗಳಿಂದ ತಿಳಿಯಲ್ಪಡುತ್ತದೆ.
- राजा राष्त्रक्रुतं भुघ्क्ते राझः पापं पुरोहितः
भर्ता च स्त्रीक्रुतं पापं शिष्यपापं गुरुस्तथा
ರಾಜಾ ರಾಷ್ಟ್ರಕೃತಂ ಭುಘ್ತೇ ರಾಜ್ಞಃ ಪಾಪಂ ಪುರೋಹಿತಃ
ಭರ್ತಾ ಚ ಸ್ತ್ರೀಕೃತಂ ಪಾಪಂ ಶಿಷ್ಯಪಾಪಂ ಗುರುಸ್ತಥಾ
The king suffers for the wrong-doings of his subjects;
The king’s priest suffers for the wrong-doing of the king;
The husband suffers the sins committed by the wife; and
The guru suffers because of the sins committed by his students!
ರಾಜ್ಯದಲ್ಲಿ ಉಂಟಾದ ಪಾಪವನ್ನು ರಾಜನು ಅನುಭವಿಸುತ್ತಾನೆ. ರಾಜನ ಪಾಪವನ್ನು ಪುರೋಹಿತನು ಅನುಭವಿಸುತ್ತಾನೆ. ಹೆಂಡತಿಯ ಪಾಪವನ್ನು ಪತಿಯು ಅನುಭವಿಸುತ್ತಾನೆ. ಶಿಷ್ಯನ ಪಾಪವನ್ನು ಗುರು ಅನುಭವಿಸುತ್ತಾನೆ.
- न पश्यति च जन्मान्धः कामान्धो नैव पश्यति
न पश्यति मदोन्मत्तो ह्यर्थी दोषात् नपश्यति
ನ ಪಶ್ಯತಿ ಚ ಜನ್ಮಾನ್ಧಃ ಕಾಮಾನ್ಧೋ ನೈವ ಪಶ್ಯತಿ
ನ ಪಶ್ಯತಿ ಮದೋನ್ಮತ್ತೋ ಹ್ಯರ್ಥೀ ದೋಷಾತ್ ನಪಶ್ಯತಿ
A person blind by birth cannot see;
A person blinded by lust cannot see;
A person filled with arrogance cannot see; and
A person blinded by wealth also cannot see.
ಜನ್ಮದಿಂದ ಕುರುಡನಾಗಿರುವವನು ಕಾಣುವುದಕ್ಕೆ ಸಾಧ್ಯವಿಲ್ಲ. ಕಾಮಾಂಧನಿಗೆ ಕೂಡ ಕಣ್ಣು ಕಾಣುವುದಿಲ್ಲ. ಹಾಗೆಯೇ ಅಹಂಕಾರಿಯಾಗಿರುವವನು, ಹಣವಂತನು ತನ್ನ ದೋಷಗಳನ್ನು ಕಾಣುವುದಿಲ್ಲ.
- विद्यार्थी सेवकः पान्थः क्षुदार्थो भयकातरः
भान्डी च प्रतिहारी च सप्तसुप्तान् प्रबोधयेत्
ವಿದ್ಯಾರ್ಥೀ ಸೇವಕಃ ಪಾನ್ಥಃ ಕ್ಷುದಾರ್ಥೋ ಭಯಕಾತರಃ
ಭಾಂಡೀ ಚ ಪ್ರತಿಹಾರೀ ಚ ಸಪ್ತಸುಪ್ತಾನ್ ಪ್ರಬೋಧಯೇತ್
The following seven persons need to be woken up from sleep:
A student, a servant, a traveler, a hungry person, a person struck by fear, a porter and a watchman.
ವಿದ್ಯಾರ್ಥಿಯನ್ನು, ಸೇವಕನನ್ನು, ದಾರಿಹೋಕನನ್ನು, ಹಸಿವಿನಿಂದ ಕೂಡಿರುವವನನ್ನು,ಭಯದಿಂದ ಕೂಡಿರುವವನನ್ನು, ಸಾಮಾನುಗಳನ್ನು ಹೊರುವವನನ್ನು ಮತ್ತು ದ್ವಾರಪಾಲಕನನ್ನು ಈ ಏಳು ಜನರನ್ನು ನಿದ್ದೆಯಿಂದ ಎಚ್ಚರಗೊಳಿಸಬೇಕು.
- अगुणस्य हतं रूपं दुःशीलस्य हतं कुलम्
असिद्धस्य हतं विद्या अभोगेन हतं धनम्
ಅಗುಣಸ್ಯ ಹತಂ ರೂಪಂ ದುಃಶೀಲಸ್ಯ ಹತಂ ಕುಲಮ್
ಅಸಿದ್ಧಸ್ಯ ಹತಂ ವಿದ್ಯಾ ಅಭೋಗೇನ ಹತಂ ಧನಮ್
Beauty of form is of no value for one without any virtuous qualities;
Family reputation is of no value for one without character;
Knowledge that does not produce success is of no value; and
Wealth is of no worth if it is not used for enjoyment.
ಗುಣವಿಲ್ಲದಿದ್ದರೆ ರೂಪವು ನಾಶವಾದಂತೆ. ನಡವಳಕೆ ಇಲ್ಲದಿದ್ದರೆ ವಂಶವು ನಾಶವಾದಂತೆ. ಸಿದ್ಧಿ ಇಲ್ಲದಿದ್ದರೆ ವಿದ್ಯೆಯು ನಾಶವಾದಂತೆ. ಅನುಭೋಗವಿಲ್ಲದಿದ್ದರೆ ಹಣವು ನಾಶವಾದಂತೆ.
- गुणो भूषयते रूपं शीलं भूषयते कुलम्
सिद्धिर्भूषयते विद्यां भोगो भूषयते धनम्
ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಂ
ಸಿದ್ದಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಂ
Virtue adds charm to one’s appearance;
Character adorns one’s family;
Success adorns one’s knowledge; and
The beauty of wealth is in its enjoyment.
ಗುಣವು ರೂಪವನ್ನು ಅಲಂಕರಿಸುತ್ತದೆ. ನಡವಳಿಕೆಯು ವಂಶವನ್ನು ಅಲಂಕರಿಸುತ್ತದೆ. ಸಿದ್ಧಿಯು ವಿದ್ಯೆಯನ್ನು ಅಲಂಕರಿಸುತ್ತದೆ. ಅನುಭೋಗವು ಹಣವನ್ನು ಅಲಂಕರಿಸುತ್ತದೆ.
- क्रोधो वैवस्वतो राजा त्रुष्णा वैतरणी नदी
विद्या कामदुधा धेनुः सन्तोषं नन्दनं वनम्
ಕ್ರೋಧೋ ವೈವಸ್ವತೋ ರಾಜಾ ತೃಷ್ಣಾ ವೈತರಣೀ ನದೀ
ವಿದ್ಯಾ ಕಾಮದುಧಾ ಧೇನುಃ ಸನ್ತೋಷಂ ನನ್ದನಂ ವನಮ್
If anger is very much like the terrible God of Death, greed can be compared to the dreadful River in his kingdom called Vaitarani.
If knowledge is compared to the famous Kamadhenu, the Wish-fulfilling Cow, contentment is indeed like Nandanavanam, the Pleasure-garden in Heaven.
ಕೋಪವೇ ಯಮರಾಜನು. ಆಸೆಯೇ ವೈತರಣೀ ನದಿ. ವಿದ್ಯೆಯೇ ಕಾಮಧೇನು. ಸಂತೋಷವೇ ನಂದನವನ.
186 को2तिभारः समर्थानां किं दूरं व्यवसायिनाम्
को विदेशस्तु विदुषां कः परः प्रियवादिनाम्
ಕೋತಿಭಾರಃ ಸಮರ್ಥಾನಾಂ ಕಿಂ ದೂರಂ ವ್ಯವಸಾಯಿನಾಂ
ಕೋ ವಿದೇಶಸ್ತು ವಿದುಷಾಂ ಕಃ ಪರಃ ಪ್ರಿಯವಾದಿನಾಮ್
What is not possible for competent persons to achieve?
What does distance matter to those who are energetic?
Will there be a place foreign to the learned persons?
Will anyone remain a stranger in the company of those who speak sweetly?
ಕೆಲಸ ಮಾಡುವುದಲ್ಲಿ ಸಮರ್ಥರಾದವರಿಗೆ ಭಾರವು ಏನಿದೆ? ಪ್ರಯತ್ನವುಳ್ಳವರಿಗೆ ದೂರವೇನಿದೆ? ಪಂಡಿತರಿಗೆ ವಿದೇಶವೇನಿದೆ? ಪ್ರೀತಿಯ ಮಾತನ್ನು ನುಡಿಯುವವರಿಗೆ ಶತ್ರು ಯಾರು?
- एक भार्या त्रयः पुत्राः द्वे हले दशधेनवः
मध्य राष्ट्रे ग्रुहं एषामत्यन्त सुक्रुताश्च ते
ಏಕ ಭಾರ್ಯಾ ತ್ರಯಃ ಪುತ್ರಾಃ ದ್ವೇ ಹಲೇ ದಶಧೇನವಃ
ಮಧ್ಯ ರಾಷ್ಟ್ರೇ ಗೃಹಂ ಏಷಾಮತ್ಯನ್ತ ಸುಕೃತಾಶ್ಚ ತೆ
Those who have each a single wife, three sons, two ploughs, ten cows and a house situated in the middle of the country are immensely fortunate.
ಯಾರಿಗೆ ಒಬ್ಬ ಹೆಂಡತಿಯು, ಮೂರು ಜನ ಗಂಡು ಮಕ್ಕಳು, ಎರಡು ನೇಗಿಲುಗಳು ಮತ್ತು ಧೇನುಗಳು ಮತ್ತು ರಾಜ್ಯದ ಮಧ್ಯದಲ್ಲಿ ಮನೆಯು ಇರುತ್ತದೆಯೋ ಅವರೇ ತುಂಬಾ ಪುಣ್ಯವಂತರು.
- वाल्मीकं मधुहारश्च पूर्वपक्षे तु चन्द्रमा
राजद्रव्यश्च भैक्षश्च स्तोक स्तोकेन वर्धते
ವಾಲ್ಮೀಕಂ ಮಧುಹಾರಶ್ಚ ಪೂರ್ವಪಕ್ಷೇ ತು ಚನ್ದ್ರಮಾ
ರಾಜದ್ರವ್ಯಶ್ಚ ಭೈಕ್ಷಶ್ಚ ಸ್ತೋಕ ಸ್ತೋಕೇನ ವರ್ಧತೇ
The anthill, honey in the honey-comb, the moon in the bright half of the month, the money with the king and the food received by begging – all of them grow little by little.
ಹುತ್ತ, ಜೇನುಗೂಡು, ಪೂರ್ವಪಕ್ಷದಲ್ಲಿ ಚಂದ್ರನು, ರಾಜನ ಹಣವು ಮತ್ತು ಭಿಕ್ಷಾಟನೆಯು ಹಂತ ಹಂತವಾಗಿ ಹೆಚ್ಚುತ್ತದೆ.
- सत्यम् माता पिता ञ्नानं धर्मो भ्राता दया सखी
शान्तिः पत्नीः क्षमा पुत्रः षडमी मम बान्धवाः
ಸತ್ಯಮ್ ಮಾತಾ ಪಿತಾ ಜ್ಞಾನಂ ಧರ್ಮೋ ಭ್ರಾತಾ ದಯಾ ಸಖೀ
ಶಾನ್ತಿಃ ಪತ್ನೀಃ ಕ್ಷಮಾ ಪುತ್ರಃ ಷಡಮೀ ಮಮ ಬಾನ್ಧವಾಃ
Truth is my mother, Knowledge is my father, Dharma is my brother, Compassion is my friend, Peace is my wife and Patience is my son. All these six – Truth, Knowledge, Dharma, Compassion, Peace and Patience – are my relatives.
ಸತ್ಯವೇ ತಾಯಿ. ಜ್ಞಾನವೇ ತಂದೆ. ಧರ್ಮವೇ ಸೋದರ. ದಯಯೇ ಸ್ನೇಹಿತ಼. ಶಾಂತಿಯೇ ಹೆಂಡತಿ. ಕ್ಷಮೆಯೇ ಪುತ್ರನು. ಈ ಆರು ಜನರು ನನ್ನ ಬಂಧುಗಳು.
- धर्मो जयति नाधर्मः सत्यं जयति नान्रुतम्
क्षमा जयति न क्रोधो विष्णुर्जयति नासुरः
ಧರ್ಮೋ ಜಯತಿ ನಾಧರ್ಮಃ ಸತ್ಯಂ ಜಯತಿ ನಾನೃತಮ್
ಕ್ಷಮಾ ಜಯತಿ ನ ಕ್ರೋಧೋ ವಿಷ್ಣುರ್ಜಯತಿ ನಾಸುರಃ
Dharma wins over Adharma;
Truth prevails over Untruth;
Patience conquers Anger; and
It is Lord Vishnu who wins but not the demons.
ಧರ್ಮವೇ ಗೆಲ್ಲುತ್ತದೆ, ಅಧರ್ಮವಲ್ಲ. ಸತ್ಯವೇ ಗೆಲ್ಲುತ್ತದೆ, ಸುಳ್ಳು ಗೆಲ್ಲುವುದಿಲ್ಲ. ತಾಳ್ಮೆಯೇ ಗೆಲ್ಲುತ್ತದೆ, ಕೋಪವು ಗೆಲ್ಲುವುದಿಲ್ಲ. ಹಾಗೆಯೇ ನಾರಾಯಣನೇ ಗೆಲ್ಲುತ್ತಾನೆ ರಾಕ್ಷಸನಲ್ಲ.
191 रविसन्निधिमात्रेण सूर्यकान्तं प्रकाशयेत्
गुरुसन्निधिमात्रेण शिष्यञानं प्रकाशयेत्
ರವಿಸನ್ನಿಧಿಮಾತ್ರೇಣ ಸೂರ್ಯಕಾನ್ತಂ ಪ್ರಕಾಶಯೇತ್
ಗುರುಸನ್ನಿಧಿಮಾತ್ರೇಣ ಶಿಷ್ಯಜ್ಞಾನಂ ಪ್ರಕಾಶಯೇತ್
By the mere presence of the sun, the suryakanta mani begins to shine. Similarly, by the mere presence of the guru, knowledge begins to shine in the sishya or disciple.
ಸೂರ್ಯನ ಕಿರಣಗಳಿಂದ ಸೂರ್ಯಕಾಂತ ಪುಷ್ಪವು ಅರಳುತ್ತದೆ. ಹಾಗೆಯೇ ಗುರುವಿನ ಸಾನ್ನಿಧ್ಯದಿಂದ ಶಿಷ್ಯನ ಜ್ಞಾನವು ಪ್ರಕಾಶಿಸುತ್ತದೆ.
192 न देवेभ्यो न विप्रेभ्यो न बन्धुभ्यो नचात्मने
जलारिन्रुपचोरेभ्यो निश्चयं धननाशनम्
ನ ದೇವೇಭ್ಯೋ ನ ವಿಪ್ರೇಭ್ಯೋ ನ ಬನ್ಧುಭ್ಯೋ ನಚಾತ್ಮನೇ
ಜಲಾರಿನೃಪಚೋರೇಭ್ಯೋ ನಿಶ್ಚಿತಂ ಧನನಾಶನಮ್
The wealth that is not used for worshipping gods, or honoring wise men, or helping the relatives, or for enjoying oneself will surely get destroyed by water, or enemy or the king or thieves.
ಯಾರ ಹಣವು ದೇವರಿಗಾಗಲೀ, ಬ್ರಾಹ್ಮಣರಿಗಾಗಲೀ, ಬಂಧುಗಳಿಗಾಗಲೀ, ತನಗಾಗಲೀ ವಿನಿಯೋಗಿಸಲ್ಪಡುವುದಿಲ್ಲವೋ ಅಂತಹ ಹಣವು ನೀರಿನ ಪಾಲಾಗುತ್ತದೆ, ಶತೃಗಳ ಪಾಲಾಗುತ್ತದೆ, ರಾಜನ ಪಾಲಾಗುತ್ತದೆ, ಕಳ್ಳರ ಪಾಲಾಗುತ್ತದೆ. ಇದು ನಿಶ್ಚಯ.
193 वस्त्रदानफलं राज्यं पादुकाभ्यां च वाहनम्
ताम्बूलात्भोगमाप्नोति अन्नदानात्फलत्रयम्
ವಸ್ತ್ರದಾನಫಲಂ ರಾಜ್ಯಂ ಪಾದುಕಾಭ್ಯಾಂ ಚ ವಾಹನಂ
ತಾಮ್ಬೂಲಾತ್ಭೋಗಮಾಪ್ನೋತಿ ಅನ್ನದಾನಾತ್ಫಲತ್ರಯಮ್
Making donations in the form of clothes results in the attainment of kingship.
Giving daana in the form of footwear results in the acquisition of vehicle.
Making daana in the form of tamboola results in the enjoyment of pleasures.
But by making annadana, one will be favored by all the three mentioned above.
ವಸ್ತ್ರವನ್ನು ದಾನ ಮಾಡುವುದರಿಂದ ರಾಜ್ಯವು, ಪಾದುಕೆಗಳನ್ನು ದಾನ ಮಾಡುವುದರಿಂದ ವಾಹನವು, ತಾಂಬೂಲವನ್ನು ದಾನ ಮಾಡುವುದರಿಂದ ಸುಖವು ದೊರೆತರೆ ಅನ್ನ ದಾನ ಮಾಡುವುದರಿಂದ ಈ ಮೂರೂ ದೊರೆಯುತ್ತದೆ.
- मुखं पद्मदलाकारं वचश्चन्दनशीतलम्
ह्रुदयं वह्निसन्तप्तं त्रिविधं दुष्टलक्षनम्
ಮುಖಂ ಪದ್ಮದಳಾಕಾರಂ ವಚಶ್ಚನ್ದನಶೀತಲಮ್
ಹೃದಯಂ ವಹ್ನಿಸನ್ತಪ್ತಂ ತ್ರಿವಿಧಂ ದುಷ್ಟಲಕ್ಷಣಮ್
The characteristics of a wicked person are expressed by a face that shines like the lotus, by speech as cool as sandal paste and by a heart burning with evil thoughts.
ಮುಖವು ತಾವರೆಯಂತೆ ಅಲಂಕಾರವಾಗಿರುತ್ತದೆ. ಮಾತು ಚಂದನದಂತೆ ಶೀತಲವಾಗಿರುತ್ತದೆ. ಹೃದಯವು ಬೆಂಕಿಯಂತೆ ಸಂತಪ್ತವಾಗಿರುತ್ತದೆ. ಈ ಮೂರೂ ದುಷ್ಟರ ಲಕ್ಷಣ.
- अक्षरं विप्रहस्तेन मात्रुहस्तेन भोजनम्
भार्याहस्तेन ताम्बूलं राजहस्तेन कञ्कणम्
ಅಕ್ಷರಂ ವಿಪ್ರಹಸ್ತೇನ ಮಾತೃಹಸ್ತೇನ ಭೋಜನಮ್
ಭಾರ್ಯಾಹಸ್ತೇನ ತಾಮ್ಬೂಲಂ ರಾಜಹಸ್ತೇನ ಕಝ್ಕಣಮ್
One should receive knowledge from a brahmana or learner person;
Food at the hands of mother; tamboolam from one’s own wife; and
kankanam or the bracelet of recognition from the king.
ಬ್ರಾಹ್ಮಣನ ಹಸ್ತದಿಂದ ಜ್ಞಾನವನ್ನು, ತಾಯಿಯ ಹಸ್ತದಿಂದ ಊಟವನ್ನು, ಹೆಂಡತಿಯ ಹಸ್ತದಿಂದ ತಾಂಬೂಲವನ್ನು, ರಾಜನ ಹಸ್ತದಿಂದ ಕಡಗವನ್ನು ಪಡೆಯಬೇಕು.
- वस्त्रमुख्यमलंकारं घ्रुतमुख्यन्तु भोजनम्
गुण मुख्यन्तु नारीणां विद्या मुख्यस्तु पण्दितः
ವಸ್ತ್ರಮುಖ್ಯಮಲಂಕಾರಂ ಘೃತಮುಖ್ಯನ್ತು ಭೋಜನಮ್
ಗುಣ ಮುಖ್ಯನ್ತು ನಾರೀಣಾಂ ವಿದ್ಯಾ ಮುಖ್ಯಸ್ತು ಪಂಡಿತಹ
Clothing is prime requisite for decoration;
Ghee is essential part of food served for eating;
Virtue is the foremost requisite for women; and
Knowledge is the essential requirement for scholars.
ಅಲಂಕಾರಕ್ಕೆ ವಸ್ತ್ರವೇ ಮುಖ್ಯವಾದುದು. ಊಟಕ್ಕೆ ತುಪ್ಪವು ಮುಖ್ಯವಾದುದು. ಹೆಂಗಸರಿಗೆ ಗುಣವು ಮುಖ್ಯವಾದುದು. ಪಂಡಿತನಿಗೆ ವಿದ್ಯೆಯೇ ಮುಖ್ಯವಾದುದು.
197 अर्थाः ग्रुहे निवर्तन्ते श्मशाने पुत्रबान्धवाः
सुक्रुतं दुष्क्रुतश्चैव गच्छन्तमनुगच्छति
ಅರ್ಥಾಃ ಗ್ರುಹೇ ನಿವರ್ತನ್ತೇ ಶ್ಮಶಾನೇಪುತ್ರಬಾನ್ಧವಾಃ
ಸುಕೃತಂ ದುಷ್ಕೃತಶ್ಚೈವ ಗಚ್ಚನ್ತಮನುಗಚ್ಛತಿ
One’s wealth and other assets keep back at one’s residence;
One’s sons and relatives stay back at the cremation ground;
It is only one’s actions, good and bad, that accompany him when he leaves this world.
ಹಣವು ಮನೆಯಲ್ಲಿಯೇ ಬಿಟ್ಟುಹೋಗಲ್ಪಡುತ್ತದೆ. ಮಕ್ಕಳು ಮತ್ತು ಬಂಧುಗಳು ಸ್ಮಶಾನದಲ್ಲಿ ಬಿಟ್ಟು ಹೋಗುತ್ತಾರೆ. ಆದರೆ ತಾನು ಮಾಡಿದ ಪುಣ್ಯ ಮತ್ತು ಪಾಪ ಮರಣಾನಂತರವೂ ವ್ಯಕ್ತಿಯನ್ನು ಅನುಸರಿಸುತ್ತದೆ.
- मूर्खशिष्योपदेशेन दुष्टस्त्री संगमेन च
द्विषतां संप्रयोगेन पन्डितो2पि विनश्यति
ಮೂರ್ಖಶಿಷ್ಯೋಪದೇಶೇನ ದುಷ್ಟಸ್ತ್ರೀ ಸಂಗಮೇನ ಚ
ದ್ವಿಷತಾಂ ಸಂಪ್ರಯೋಗೇನ ಪಂಡಿತೋಪಿ ವಿನಶ್ಯತಿ
Even a learned person gets perished when he undertakes to teach a fool, or gets into union with evil women, or comes into contact with wicked people.
ಮೂರ್ಖ ಶಿಷ್ಯನಿಗೆ ಉಪದೇಶ ಮಾಡುವುದರಿಂದ, ದುಷ್ಟ ಹೆಂಗಸರ ಸಹವಾಸದಿಂದ, ಶತ್ರುಗಳ ಸಹವಾಸದಿಂದ, ಪಂಡಿತನು ಕೂಡಾ ನಾಶವನ್ನು ಹೊಂದುತ್ತಾನೆ.
- अनित्यानि शरीराणि वैभवं नैव शाश्वतम्
नित्यः सन्निहितो म्रुत्युः कर्तव्यो धर्मसंग्रहः
ಅನಿತ್ಯಾನಿ ಶರೀರಾಣಿ ವೈಭವಂ ನೈವ ಶಾಶ್ವತಮ್
ನಿತ್ಯಃ ಸನ್ನಿಹಿತೋ ಮೃತ್ಯುಃ ಕರ್ತವ್ಯೋ ಧರ್ಮಸಂಗ್ರಹಃ
Physical bodies are altogether temporary;
Power and greatness are wholly impermanent;
Death is always at hand; —
Realizing this, one is required to earn dharma alone.
ಈ ಶರೀರವು ಶಾಶ್ವತವಾದುದಲ್ಲ. ಹಾಗೆಯೇ ಸಂಪತ್ತೂ ಶಾಶ್ವತವಾದುದಲ್ಲ. ನಮಗೆ ನಿತ್ಯವೂ ಮೃತ್ಯುವು ಸನ್ನಿಹಿತವಾಗಿರುತ್ತದೆ. ಆದ್ದರಿಂದ ಧರ್ಮದ ಕೆಲಸವನ್ನು ಮಾಡಬೇಕು.
- अलिरनुसरति परिमलं लक्ष्मिरनुसरति नयनिपुनम्
निम्नमनुसरति सलिलं विधिलिखितं बुद्धिरनुसरति
ಅಳಿರನುಸರತಿ ಪರಿಮಳಂ ಲಕ್ಷ್ಮಿರನುಸರತಿ ನಯನಿಪುಣಮ್
ನಿಮ್ನಮನುಸರಸತಿ ಸಲಿಲಂ ವಿಧಿಲಿಖಿತಂ ಬುದ್ಧಿರನುಸರತಿ
As surely as a bee goes after fragrance;
Or Lakshmi, the Goddess of Wealth, favors a shrewd person;
Or water flows down to a lower plane;
So does the intellect follow the writ of Destiny!
ಜೇನು ಹುಳ ಪರಿಮಳವನ್ನು ಅನುಸರಿಸುತ್ತದೆ. ಲಕ್ಷ್ಮಿಯು ವಿನಯವಂತನನ್ನು ಅನುಸರಿಸುತ್ತಾಳೆ. ನೀರು ತಗ್ಗು ಪ್ರದೇಶವನ್ನು ಅನುಸರಿಸುತ್ತದೆ. ಬುದ್ದಿಯು ವಿಧಿ ಬರಹವನ್ನು ಅನುಸರಿಸುತ್ತದೆ.
अनित्यानि शरीराणि वैभवं नैव शाश्वतम्
नित्यः सन्निहितो म्रुत्युः कर्तव्यो धर्मसंग्रहः
ಅನಿತ್ಯಾನಿ ಶರೀರಾಣಿ
ವೈಭವಂ ನೈವ ಶಾಶ್ವತಮ್
ನಿತ್ಯಃ ಸನ್ನಿಹಿತೋ ಮೃತ್ಯುಃ
ಕರ್ತವ್ಯೋ ಧರ್ಮಸಂಗ್ರಹಃ
Physical bodies are altogether temporary;
Power and greatness are wholly impermanent;
Death is always at hand; —
Realizing this, one is required to earn dharma alone.
ಈ ಶರೀರವು ಶಾಶ್ವತವಾದುದಲ್ಲ. ಹಾಗೆಯೇ ಸಂಪತ್ತೂ ಶಾಶ್ವತವಾದುದಲ್ಲ. ನಮಗೆ ನಿತ್ಯವೂ ಮೃತ್ಯುವು ಸನ್ನಿಹಿತವಾಗಿರುತ್ತದೆ. ಆದ್ದರಿಂದ ಧರ್ಮದ ಕೆಲಸವನ್ನು ಮಾಡಬೇಕು.
- अलिरनुसरति परिमलं लक्ष्मिरनुसरति नयनिपुनम्
निम्नमनुसरति सलिलं विधिलिखितं बुद्धिरनुसरति
ಅಳಿರನುಸರತಿ ಪರಿಮಳಂ ಲಕ್ಷ್ಮಿರನುಸರತಿ ನಯನಿಪುಣಮ್
ನಿಮ್ನಮನುಸರಸತಿ ಸಲಿಲಂ ವಿಧಿಲಿಖಿತಂ ಬುದ್ಧಿರನುಸರತಿ
As surely as a bee goes after fragrance;
Or Lakshmi, the Goddess of Wealth, favors a shrewd person;
Or water flows down to a lower plane;
So does the intellect follow the writ of Destiny!
ಜೇನು ಹುಳ ಪರಿಮಳವನ್ನು ಅನುಸರಿಸುತ್ತದೆ. ಲಕ್ಷ್ಮಿಯು ವಿನಯವಂತನನ್ನು ಅನುಸರಿಸುತ್ತಾಳೆ. ನೀರು ತಗ್ಗು ಪ್ರದೇಶವನ್ನುಅನುಸರಿಸುತ್ತದೆ. ಬುದ್ಧಿಯು ವಿಧಿ ಬರಹವನ್ನು ಅನುಸರಿಸುತ್ತದೆ.
We would like to introduce the great Sanskrit poet Bhartruhari along with
a few select Subhashitas from his Neeti Shatakam.
Bhartrhari: Niti Shatakam भर्त्रुहरि: नीति शतकं
Introduction
Bhartruhari is a great philosopher poet who is believed to have lived sometime between 1st century B.C. and 5th century A.D. There are several legends associated with his life. With its rich and varied experiences, his life presents a living account of transformation from a pleasure-loving king to an ascetic. He has authored three Shatakas: Sringara, Neeti and Vairagya, each consisting of a hundred slokas. They relate to the three major life-styles of Lover, Moralist and Ascetic. In them he has touched upon almost every kind of human experience and given it a beautiful poetic expression.
As with many Sanskrit words, the word NEETI has several meanings: a) morality and ethics;b) guidance, course of action; c) policy.
According to Hindu view of life, human existence has four-fold objectives: dharma, artha, kama and moksha. They provide structure and meaning to human life and give us a reason to live with a sense of duty, moral obligation and responsibility. It is to lead such a structured and meaningful life that the Scriptures and the ancient writers have laid emphasis on right action based on morals and ethics.
It is important to have a clear idea of what action or karma means. Karma, in Sanskrit, means an act that is mental or physical. It includes thinking, speaking and doing physical acts.
The word karma also refers to the consequence of the act that we call ‘fate’ or ‘destiny: the sum of the consequences of our past actions in this and previous lives.
That big sum of consequences of all the actions performed in all the previous lives is called sanchita karma.
That portion of Sanchita that gets allotted to the present life for working out is called prarabhda karma.
We carry this load and go on adding to it in the course of the present life, building up a stock of karma for the future called Agami karma.
As we perform actions, we create simultaneously our fate or destiny. Therefore, we create our own fate and we are responsible for it.
The idea of karma helps us to accept a sense of personal responsibility for any action that we perform.
How do we build up karma? How does the karmic recorder work? Here is a passage from the Brihadaranyaka Upanishad:
You are what your deep, driving desire is;
As your desire is, so is your will;
As your will is, so is your deed;
As your deed is, so is your destiny. 4.4.5
Desire – action – destiny
So desire is the root of trans-migratory existence.
How is desire caused?
It is caused by the vasanas. Vasanas are the impressions unconsciously left on the mind by past actions, good or bad.
Karma grows and accumulates when actions are performed for self-gratification and with self- importance. When we act exercising volition, when actions are completely self-motivated, we go on adding layer after layer of karma and thus get bound to the cycle of worldly existence.
The simplest way of turning off the karmic recorder is by doing the activity as an offering, without identifying with it. When new karma is not added, old layers of karma will start falling off. The old layers will stick to us only when we go on adding new layers of karma. If nothing is added, the old stock will begin to disintegrate. That is when divine Grace becomes available. This exercise requires us to keep a little distance from the body as well as the mind.
This idea of karma should help us to accept a sense of personal responsibility for every action that we perform. Accordingly, it should shape our attitude, control our behavior, and strengthen our character. The choice is ours to do such actions that bring the kind of result we want: good actions bear fruit in punya; bad actions result in papa and unattached actions pave the way for mukti or liberation.
Coming to the Neeti Shatakam of Bhartruhari, it consists of a hundred slokas arranged under ten heads. Bhartruhari uses the term paddhati to refer to each section. Paddhati in Sanskrit means ‘the way someone behaves or the way something happens’. Bhartruhari provides great insights into human nature. He is concerned with moral action: what is good and what is bad; and what is right and what is not; the importance of making right choices and taking right decisions to attain the goal of worldly existence, namely peace, contentment and happiness.
ಭರ್ತೃಹರಿ ನೀತಿಶತಕಂ
ಪ್ರಸ್ತಾವನೆ
ನಮ್ಮ “ದಿನಕ್ಕೊಂದು ಸುಭಾಷಿತ” ಮಾಲಿಕೆಯಲ್ಲಿ ಪ್ರಖ್ಯಾತ ಸಂಸ್ಕೃತ ಕವಿ ಭರ್ತೃಹರಿಯ ನೀತಿ ಶತಕದಿಂದ ಕೆಲ ಆಯ್ದ ಸುಭಾಷಿತಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದೇವೆ.
ಕ್ರಿಸ್ತಪೂರ್ವ ಒಂದನೆಯ ಶತಮಾನದಿಂದ ಕ್ರಿಸ್ತಶಕ ಐದನೆಯ ಶತಮಾನದ ಕಾಲೈತಿಹ್ಯದಲ್ಲಿ ಜೀವಿಸಿದ್ದನೆನ್ನಲ್ಲಾಗುವ ಭರ್ತೃಹರಿ ಒಬ್ಬ ಮಹಾನ್ ವಿರಕ್ತ ಯೋಗಿಯಾದ ಶ್ರೇಷ್ಠ ಸಂಸ್ಕೃತ ಕವಿ. ಭರ್ತೃಹರಿ ಮೊದಲು ರಾಜನಾಗಿದ್ದ. ಆತನ ಕಾಲಮಾನದ ಅನೇಕ ಮಹನೀಯರ ಸತ್ಸಂಗದ ಫಲವಾಗಿ ಸದಾ ಭೋಗಿಯಾಗಿದ್ದ ಈತ ವಿರಕ್ತನಾಗಿ ಯೋಗಿಯಾದ. ಮಾನವ ಜನಾಂಗಕ್ಕೆ ಉಪಕಾರವಾಗಬೇಕೆಂದು ಸುಪ್ರಸಿದ್ದ ಶತಕತ್ರಯಗಳಾದ ನೀತಿ ಶತಕ, ಶೃಂಗಾರ ಶತಕ ಹಾಗೂ ವೈರಾಗ್ಯ ಶತಕಗಳನ್ನು ರಚಿಸಿದ. ಪ್ರತಿಯೊಂದು ಶತಕದಲ್ಲೂ ನೂರು ಶ್ಲೋಕಗಳಿವೆ. ಈ ಕೃತಿಯ ಮೂಲಕ ಎಲ್ಲ ರೀತಿಯ ಮಾನವೀಯ ಅನುಭಾವಗಳನ್ನು ಸುಂದರ ಕಾವ್ಯಾನುಭೂತಿಯೊಂದಿಗೆ ಪ್ರಸ್ತುತ ಪಡಿಸಿದ್ದಾನೆ.
ಸಂಸ್ಕೃತ ಭಾಷೆಯ ವಿಶೇಷತೆಯೆಂದರೆ ಪ್ರತಿಯೊಂದು ಪದಕ್ಕೂ ಒಂದಕ್ಕಿಂತಲೂ ಹೆಚ್ಚು ಅರ್ಥಗಳಿರುತ್ತವೆ. ಹಾಗಾಗಿ ನೀತಿ ಎಂಬ ಪದಕ್ಕಿರುವ ಅರ್ಥಗಳೆಂದರೆ (೧) ಮೌಲ್ಯಗಳು (೨) ಮಾರ್ಗದರ್ಶಕ (೩) ನಡತೆ (೪) ಶಾಸ್ತ್ರ ಇತ್ಯಾದಿ.
ನಮ್ಮ ಹಿಂದೂ ಧರ್ಮ ಶಾಸ್ತ್ರದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಿವೆ. ಸಂಘ ಜೀವಿಯಾದ ಮಾನವನಿಗೆ ಸಮಾಜದಲ್ಲಿ ಸೌಹಾರ್ದಯುತವಾಗಿ ಜೀವಿಸಲು ಬೇಕಾದಂತಹ ಜವಾಬ್ದಾರಿ, ಕರ್ತವ್ಯ ಹಾಗೂ ನೈತಿಕತೆಯ ಮಾರ್ಗದರ್ಶಕತೆಗೆ ಪೂರಕವಾಗಿ, ಒಂದು ಚೌಕಟ್ಟಿನಲ್ಲಿ ಅರ್ಥಪೂರ್ಣ ಬಾಳ್ವೆಗೆ, ಈ ಪುರುಷಾರ್ಥಗಳು ಸಹಕಾರಿಯಾಗುತ್ತವೆ.
ಮೊದಲಿಗೆ ಕರ್ಮದ ಬಗ್ಗೆ ಸ್ಪಷ್ಟತೆಯನ್ನು ಪಡೆದುಕೊಳ್ಳೋಣ. ಕರ್ಮವೆಂದರೆ ಮನನ, ಮಂಥನ, ಮಂಡನೆ ಹಾಗೂ ಆಚರಣೆಯನ್ನೊಳಗೊಂಡ ಮಾನಸಿಕ ಹಾಗೂ ದೈಹಿಕ ಕಾರ್ಯ.
ಹಾಗೆಯೇ ವಿಧಿ ಅಥವಾ ನಿಯತಿ ಎಂಬುದು ಕೂಡ ಕರ್ಮದ ಅರ್ಥವಾಗಿದೆ. ಪೂರ್ವ ಜನ್ಮಗಳ ಹಾಗೂ ಈ ಜನ್ಮದಲ್ಲಿ ಆಚರಿಸುವ ಕಾರ್ಯಗಳ ಒಟ್ಟು ತಾತ್ಪರ್ಯವೇ ಕರ್ಮವಾಗಿರುತ್ತದೆ.
ಜನ್ಮಾಂತರಗಳಲ್ಲಿ ನಾವು ಮಾಡಿದ ಪುಣ್ಯ ಮತ್ತು ಪಾಪಕಾರ್ಯಗಳ ಮೊತ್ತವನ್ನು ಸಂಚಿತ ಕರ್ಮವೆನ್ನುವರು.
ಸಂಚಿತ ಕರ್ಮದ ಭಾಗವನ್ನು ಈ ಜನ್ಮದಲ್ಲಿ ತೀರಿಸುವ ಹೊಣೆಯನ್ನು ಪ್ರಾರಬ್ಧ ಕರ್ಮವೆನ್ನುತ್ತಾರೆ.
ಹೀಗೆ ಪ್ರಸ್ತುತ ಜನ್ಮದಲ್ಲಿನ ಕರ್ಮಫಲದ ಸಂಚಯನವನ್ನು ಮುಂದಿನ ಜನ್ಮಕ್ಕೆ ಸ್ಥಿತ್ಯಂತರವಾಗುವುದನ್ನು ಆಗಾಮಿ ಕರ್ಮವೆನ್ನುತ್ತಾರೆ.
ಹೀಗಾಗಿ ಪ್ರತಿಜನ್ಮದಲ್ಲಿನ ಕರ್ಮಫಲದ ಆಧಾರದ ಮೇಲೆ ನಮ್ಮ ವಿಧಿಯು ನಿರ್ಣಯವಾಗುತ್ತದೆ. ಅಂದರೆ ನಮ್ಮ ಕರ್ಮಫಲಕ್ಕೆ ನಾವೇ ಹೊಣೆಗಾರರು.
ಕರ್ಮವೆನ್ನುವ ಸಿದ್ಧಾಂತವು ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ನಮ್ಮನ್ನು ಹೊಣೆಗಾರರನ್ನಾಗಿಸುತ್ತದೆ.
ಬೃಹದಾರಣ್ಯಕ ಉಪನಿಷತ್ತಿನ ಶ್ಲೋಕವೊಂದು ಮನುಷ್ಯನ ಕರ್ಮದ ಬಗ್ಗೆ ಮಾರ್ಮಿಕವಾಗಿ ವಿವರಿಸಿದೆ.
ನಿನ್ನ ಅಪೇಕ್ಷೆಯಂತೆ ನೀನು ರೂಪಿಸಲ್ಪಡುತ್ತೀಯೆ.
ನಿನ್ನ ಬಯಕೆಯಂತೆ ನಿನ್ನ ಸಂಕಲ್ಪ ರೂಪುಗೊಳ್ಳುತ್ತದೆ.
ನಿನ್ನ ಸಂಕಲ್ಪದಂತೆ ನಿನ್ನ ಕಾರ್ಯಸಿದ್ಧಿಯಾಗುತ್ತದೆ.
ನಿನ್ನ ಕಾರ್ಯ ರೀತಿಯು ನಿನ್ನ ವಿಧಿಯಾಗುತ್ತದೆ.
ಹಾಗಾಗಿ ಮನುಜನ ಅಪೇಕ್ಷೆಗಳು ಅವನ ಅಸ್ತಿತ್ವವನ್ನು ನಿರ್ಧರಿಸುತ್ತವೆ. ಅಪೇಕ್ಷೆ ಅಥವ ಬಯಕೆಗಳು ವಾಸನೆಯಿಂದ ಉಂಟಾಗುತ್ತವೆ. ಅಂದರೆ ನಮ್ಮ ಹಿಂದಿನ ಒಳ್ಳೆಯ ಅಥವಾ ಕೆಟ್ಟ ಕಾರ್ಯಗಳ ಪ್ರಭಾವದಿಂದ ಆಯಾಚಿತವಾಗಿ ನಮ್ಮ ಮನಸ್ಸಿನಲ್ಲಿ ಮುದ್ರಿತವಾಗುವ ಕ್ರಿಯೆಯನ್ನು ವಾಸನೆ ಎನ್ನುತ್ತಾರೆ.
ಯಾವಾಗ ನಾನು ಮತ್ತು ನನ್ನದು ಎಂಬ ಅಹಂಭಾವವು ನಮ್ಮನ್ನು ಆವರಿಸುತ್ತದೆಯೋ ಆಗ ಕರ್ಮವು ಪದರ ಪದರವಾಗಿ ನಮ್ಮನ್ನು ಸುತ್ತಿಕೊಳ್ಳಲು ಪ್ರಾರಂಭವಾಗುತ್ತದೆ. ಇದನ್ನು ಬಿಡಿಸಿಕೊಳ್ಳುವ ಸುಲಭ ಮಾರ್ಗವೆಂದರೆ ನಾವು ಯಾವುದೇ ಕೆಲಸವನ್ನು ಸಮರ್ಪಣಾಭಾವದಿಂದ ನಿರ್ಲಿಪ್ತರಾಗಿ ಮಾಡಿದಾಗ ಹೊಸ ಕರ್ಮಗಳ ಸಂಚಯವಾಗುವುದಿಲ್ಲ. ಹಾಗಾಗಿ ನಮ್ಮನ್ನು ಆವರಿಸಿದ್ದ ಕರ್ಮಪದರಗಳು ಕಳಚಿಕೊಳ್ಳಲಾರಂಭಿಸುತ್ತವೆ. ಆಗ ದೈವಿಕ ಶಕ್ತಿಯ ಅನುಗ್ರಹವಾಗುತ್ತದೆ. ಇದರ ತಾತ್ಪರ್ಯವೇನೆಂದರೆ- ಸತ್ಕಾರ್ಯಗಳಿಂದ ಪುಣ್ಯ ಲಭಿಸುತ್ತದೆ ಹಾಗೂ ದುಷ್ಕಾರ್ಯಗಳಿಂದ ಪಾಪ ಸಂಚಯವಾಗುತ್ತದೆ. ಯಾವಾಗ ನಾವು ದೇಹ ಮತ್ತು ಮನಸ್ಸಿನಿಂದ ದೂರ ಸರಿದು ನಿರ್ಲಿಪ್ತತೆ ಹಾಗೂ ನಿರ್ಮೋಹದಿಂದ ಕಾರ್ಯಸಿದ್ಧಿ ಮಾಡುತ್ತೇವೆಯೋ ಆಗ ಅದು ನಮ್ಮನ್ನು ಮೋಕ್ಷ ಅಥವಾ ಮುಕ್ತಿಯೆಡೆಗೆ ಕೊಂಡೊಯ್ಯುತ್ತದೆ.
ಭರ್ತೃಹರಿಯ ನೀತಿ ಶತಕದಲ್ಲಿ ಹತ್ತು ತಲೆಬರಹಗಳ ಅಡಿಯಲ್ಲಿ ನೂರು ಶ್ಲೋಕಗಳಿವೆ. ಪ್ರತಿಯೊಂದು ಶಾಖೆಯನ್ನು ಪ್ರತಿನಿಧಿಸಲು ಆತನು ‘ ಪದ್ಧತಿ’ ಎಂಬ ವ್ಯಾಖ್ಯೆಯನ್ನು ಬಳಸುತ್ತಾನೆ. ಮನುಷ್ಯನ ನಡವಳಿಕೆ ಅಥವಾ ಆಚಾರವನ್ನು ‘ ಪದ್ಧತಿ’ ಎಂದು ಸಂಸ್ಕೃತದಲ್ಲಿ ಅರ್ಥೈಸಲಾಗುತ್ತದೆ. ಮಾನವನ ಸ್ವಭಾವದ ಮೇಲೆ ಭರ್ತೃಹರಿ ಬೆಳಕನ್ನು ಚೆಲ್ಲಿದ್ದಾನೆ. ಅಂದರೆ ನಮಗೆ ಯಾವುದು ಸರಿ ಯಾವುದು ತಪ್ಪು , ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ತನ್ನ ಶ್ಲೋಕಗಳ ಮೂಲಕ ಬಿಂಬಿಸಿದ್ದಾನೆ. ಒಟ್ಟಿನಲ್ಲಿ ಶಾಂತಿ, ಸಂತೋಷ ಹಾಗೂ ನೆಮ್ಮದಿಯಿಂದ ಜೀವನ ನಡೆಸಲು ಬೇಕಾದಂತಹ ಮಾರ್ಗದರ್ಶನವನ್ನು ಈ ಶತಕತದಲ್ಲಿ ನಾವು ಕಾಣಬಹುದು.
- Selections from the Neeti Shatakam:
mUrkha paddhati: The Way a Foolish Person Behaves
- It is important to know the difference between a mUdha and a mUrkha. A mudha is one who is completely ignorant, whereas a mUrkha is equipped with half-knowledge and this makes him feel proud and arrogant.
अज्ञः सुख माराध्यः सुखतरमाराध्यते विशेषज्ञः
ज्ञानलव दुर्विदग्धं ब्रह्मापि नरं नरन्जयति
ಮೂರ್ಖ ಪದ್ಧತಿ
ಅಜ್ಝಃ ಸುಖಮಾರಾಧ್ಯಃ ಸುಖತರಮಾರಾಧ್ಯತೇ ವಿಶೇಷಜ್ಝಃ
ಜ್ಝಾನಲವ ದುರ್ವಿದಗ್ಧಂ ಬ್ರಹ್ಮಾಪಿ ನರಂ ನರಂಜಯತಿ
It is easy to educate a dullard;
Easier still to enlighten a well-informed person;
But, no one, not even Brahma, will be able to teach a silly person puffed-up with half-knowledge.
ಮೂರ್ಖ ಪದ್ಧತಿ : ಮೂರ್ಖರ ನಡವಳಿಕೆಯ ಬಗ್ಗೆ ಈ ಕೆಳಗಿನ ಶ್ಲೋಕಗಳು ರಚಿಸಲ್ಪಟ್ಟಿವೆ
ಏನನ್ನೂಅರಿತಿಲ್ಲದಿದ್ದವನಿಗೆ ಸುಲಭವಾಗಿ ವಿಷಯವನ್ನು ತಿಳಿಸಬಹುದು. ಹಲವಾರು ವಿಷಯಗಳನ್ನು ಚೆನ್ನಾಗಿ ಅರಿತಿರುವವನಿಗೆ ಯಾವ ಶ್ರಮವೂ ಇಲ್ಲದೆ ತಿಳಿಸಿಕೊಡಬಹುದು. ಆದರೆ ಶಾಸ್ತ್ರಜ್ಞಾನವನ್ನು ಅಲ್ಪ ಸ್ವಲ್ಪವಾಗಿ ಪಡೆದು ತಾನೊಬ್ಬ ಪಂಡಿತನೆಂದು ಮೋಹಗೊಂಡಿರುವ ಮೂರ್ಖನನ್ನು, ಚತುರ್ಮುಖ ಬ್ರಹ್ಮನೂ ಸಂತೋಷಪಡಿಸಲಾರ.
- यदा किन्चित् ज्ञो’हं गज इव मदान्धः समभवं तदा सर्वज्ञो’स्मीत्यभवदवलिप्तं मम मनः
यदा किन्चिद् किन्चिद् बुधजन सकाशादवगतः तदा मूर्खो’स्मीति ज्वर इव मदो मे व्यपगतः
ಯದಾ ಕಿಂಚಿತ್ ಜ್ಝೋಹಂ ಗಜ ಇವ ಮದಾನ್ಧಃ ಸಮಭವಂ ತದಾ ಸರ್ವಜ್ಝೋಸ್ಮೀತ್ಯಭವದವಲಿಪ್ತಂ ಮಮ ಮನಃ
ಯದಾ ಕಿಂಚಿದ್ ಕಿಂಚಿದ್ ಬುಧಜನ ಸಕಾಶಾದವಗತಃ ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ
- It is by getting in touch with wise and learned persons that a foolish person can start transforming himself into a humble person and thus become eligible to acquire wisdom.
Earlier, though I was equipped with only half-knowledge, I presumed arrogantly, like a mad elephant, that I knew everything. After I started acquiring true knowledge from the well-informed elders, I now realize that I know very little. All my pride, like a fever, has left me.
ಜ್ಞಾನಿಗಳು ಮತ್ತು ವಿದ್ಯಾವಂತರ ಸಹವಾಸದಿಂದ ಮೂರ್ಖನೂ ಸಹ ವಿನೀತನಾಗಿ ಮಾರ್ಪಟ್ಟು ಜ್ಞಾನ ಮತ್ತು ವಿವೇಕವನ್ನು ಹೊಂದುವ ಬಗೆ:
ಅಲ್ಪ ಸ್ವಲ್ಪ ತಿಳಿವಳಿಕೆ ಪಡೆದಿದ್ದಾಗ ನಾನು ಆನೆಯಂತೆ ಮದಾಂಧನಾಗಿದ್ದೆ. ನಾನು ಸರ್ವಜ್ಞ ಎಂದು ನನ್ನ ಮನಸ್ಸು ಆಗ ಗರ್ವ ಹೊಂದಿತ್ತು. ಆದರೆ ಕಾಲಾಂತರದಲ್ಲಿ ವಿದ್ವಾಂಸರ ಸಂಪರ್ಕದಿಂದ ಸ್ವಲ್ಪ ಸ್ವಲ್ಪವಾಗಿ ತಿಳುವಳಿಕೆ ನನ್ನಲ್ಲಿ ಮೂಡಿದಾಗ ಓಹೋ ನಾನು ಏನೂ ಅರಿಯದ ಮೂರ್ಖನಲ್ಲವೆ ಎಂಬ ಭಾವನೆ ಹುಟ್ಟಿ, ಜ್ವರ ಇಳಿದುಹೋದಂತೆ ನನ್ನ ಮದವು ಕಳೆದು ಹೋಯಿತು.
Vidvatpaddhati: The Way a Learned Person Looks.
ಭರ್ತಹರಿ ನೀತಿ ಶತಕಂ
मूर्ख पद्धति-ಮೂರ್ಖ ಪದ್ಧತಿ
- विद्या नाम नरस्य रूपमधिकं प्रच्छन्न गुप्तं धनं विद्या भोगकरी यशस्सुख करी विद्या गुरूणां गुरुः
विद्या बन्धुजनो विदेशगमने विद्या परा देवता विद्या राजसु पूज्यते नहि धनं विद्या विहीनः पशुः
ವಿದ್ಯಾ ನಾಮ ನರಸ್ಯ ರೂಪಮಧಿಕಂ ಪ್ರಚ್ಚನ್ನ ಗುಪ್ತಂ ಧನಂ ವಿದ್ಯಾಭೋಗಕರೀ ಯಶಸ್ಸುಖ ಕರೀ ವಿದ್ಯಾ ಗುರೂಣಾಂ ಗುರುಃ
ವಿದ್ಯಾ ಬನ್ಧುಜನೋ ವಿದೇಶಗಮನೇ ವಿದ್ಯಾ ಪರಾ ದೇವತಾ ವಿದ್ಯಾ ರಾಜಸು ಪೂಜ್ಯತೇ ನಹಿ ಧನಂ ವಿದ್ಯಾ ವಿಹೀನಃ ಪಶುಃ
Vidvatpaddhati: The Way a Learned Person Looks.
Learning brings certain glow into one’s appearance;
It is a treasure secretly stored;
It brings pleasure through enjoyment, happiness and fame;
Like a great Guru, it brings enlightenment;
When in a foreign country, it acts like a friend, lending support and help;
It is indeed the Supreme Deity;
It is Learning, not money, that brings recognition in a Royal Assembly;
He who is deprived of learning is no better than a beast.
ವಿದ್ವತ್ ಪದ್ಧತಿ – ವಿದ್ವಾಂಸರು ಕಾಣುವ ಬಗೆ
ವಿದ್ಯೆಯೆಂಬುದು ಮನುಷ್ಯನಿಗೆ ಒಂದು ವಿಶೇಷವಾದ ರೂಪ. ವಿದ್ಯೆ ಮನುಷ್ಯನಲ್ಲಿ ಮರೆಯಾಗಿ ಬಚ್ಚಿಟ್ಟಲ್ಪಟ್ಟಿರುವ ಹಣ. ಅದನ್ನು ಯಾರೂ ಕದಿಯಲಾರರು. ವಿದ್ಯೆಯಿಂದ ಭೋಗ, ಕೀರ್ತಿ, ಸೌಖ್ಯ ದೊರೆಯುವವು. ಗುರುವಿಗೂ ವಿದ್ಯೆ ಗೌರವಾಸ್ಪದವಾಗಿರುವುದರಿಂದ, ಅದು ಗುರುಗಳಿಗೂ ಗುರುಶ್ರೇಷ್ಥ. ಪರದೇಶಗಳಲ್ಲಿ ಸಂಚಾರ ಮಾಡುತ್ತಿರುವವರಿಗೆ ವಿದ್ಯೆಯಿಂದ ಹಣ ಗೌರವಗಳು ಪ್ರಾಪ್ತವಾಗಿ ಕಷ್ಟಗಳು ನಿವಾರಿತವಾಗುವುದರಿಂದ ಅದು ಅವನಿಗೆ ನೆಂಟನಿದ್ದಂತೆ. ಇಹ ಪರ ಸೌಖ್ಯವನ್ನು ಕಲ್ಪಿಸಿಕೊಡುವುದರಿಂದ ವಿದ್ಯೆಯೇ ಪರ ದೇವತೆ. ರಾಜರ ಬಳಿಯಲ್ಲಿ ವಿದ್ಯೆಗೇ ಹೆಚ್ಚು ಮನ್ನಣೆ ಇರುವುದಲ್ಲದೆ ಬರೀ ಹಣಕ್ಕಲ್ಲ. ಒಟ್ಟಿನಲ್ಲಿ ವಿದ್ಯೆ ಪಡೆಯದವನು ಪಶುವಿಗೆ ಸಮಾನ.
- दाक्षिण्यं स्वजने दया परिजने शाठ्यं सदा दुर्जने प्रीतिः साधुजने नयो न्रुपजने विद्वज्जने चार्जवं
शौर्यं शत्रुजने क्षमा गुरुजने कान्ताजने ध्रुष्टता ए चैवं पुरुषाः कलासु कुशला स्तेष्वेव लोकस्थितिः
ದಾಕ್ಷಿಣ್ಯಂ ಸ್ವಜನೇ ದಯಾ ಪರಿಜನೇ ಶಾಟ್ಯಂ ಸದಾ ದುರ್ಜನೇ ಪ್ರೀತಿಃ ಸಾಧುಜನೇ ನಯೋ ನೃಪಜನೇ ವಿದ್ವಜ್ಜನೇ ಚಾರ್ಜವಂ
ಶೌರ್ಯಂ ಶತೃಜನೇ ಕ್ಷಮಾ ಗುರುಜನೇ ಕಾನ್ತಾಜನೇ ಧೃಷ್ಟತಾ ಏಚೈವಂ ಪುರುಷಾಃ ಕಲಾಸು ಕುಶಲಾ ಸ್ತೇಷ್ವೇವ ಲೋಕಸ್ಥಿತಿಃ
ಸ್ವಾಸ್ಥ್ಯ ಸಮಾಜಕ್ಕೆ ಹಾಗೂ ಮೌಲ್ಯಯುತ ಜೀವನಕ್ಕೆ ಜ್ಞಾನಿಗಳ ಕೊಡಿಗೆ
Learned men well-versed in various arts possess certain admirable qualities:
They treat relatives with politeness and servants with kindness;
They remain stern in dealing with wicked people;
They have affection for virtuous people;
They show diplomacy in dealing with the rulers;
They treat the scholars with great respect;
They show valour towards the enemies;
They have high regard for the elders; and
They remain unyielding to the feminine charm;
It is the learned people with such eminent qualities that ensure a stable society.
ತನ್ನವರ ವಿಷಯದಲ್ಲಿ ಅವರ ಅಭಿಲಾಶೆಗಳನ್ನು ಅರಿತು ಯುಕ್ತ ರೀತಿಯಲ್ಲಿ ನಡೆದುಕೊಳ್ಳುವ ಜಾಣ್ಮೆ, ತಮ್ಮ ಬಂಧುಗಳಲ್ಲದ ಇತರರ ವಿಷಯದಲ್ಲಿ ಅನುಕಂಪ, ಮೋಸ ಮಾಡುವ ದುರ್ಜನರ ವಿಷಯದಲ್ಲಿ ಯಾವಾಗಲೂ ಅವರಿಗೆ ಅನುಗುಣವಾದ ದೋಷದ ರೀತಿ, ಸಜ್ಜನರ ವಿಷಯದಲ್ಲಿ ಪ್ರೀತಿ, ರಾಜರಲ್ಲಿ ಅವರನ್ನು ಅನುಸರಿಸಿ ನಡೆಯುವ ರೀತಿ, ವಿದ್ವಾಂಸರಲ್ಲಿ ಮುಚ್ಚು ಮರೆಯಿಲ್ಲದ ಸರಳ ವರ್ತನೆ, ಶತೃಗಳ ವಿಷಯದಲ್ಲಿ ಪರಾಕ್ರಮ, ಗುರುಹಿರಿಯರ ವಿಷಯದಲ್ಲಿ ತಾಳ್ಮೆ ಅಂದರೆ ಅವರ ಹಿತೋಕ್ತಿಗಳನ್ನು ಅರ್ಥಮಾಡಿಕೊಳ್ಳದೆ ಸಹನೆ ತಪ್ಪಿ ಎದುರಾಡದಿರುವುದು, ಸ್ತ್ರೀಯರ ವಿಷಯದಲ್ಲಿ ದಿಟ್ಟತನ ಹೀಗೆ ಅನೇಕ ಕಲೆಗಳಲ್ಲಿ ಕುಶಲರಾದ ಪುರುಷರು ಯಾರು ಇರುವರೋ ಅವರಿಂದಲೇ ಲೋಕದ ನಡವಳಿಕೆ ಸ್ಥಿರವಾಗಿ ಉಳಿಯುವುದು.
205 artha paddhati The Way a Wealthy Person Stands
mAna zaurya paddhati
ಮಾನ ಶೌರ್ಯ ಪದ್ಧತಿ
परिवर्तिनि संसारे म्रुतः कोवा नजायते
स जातो एन जातेन याति वंश स्समुन्नतिं
ಪರಿವರ್ತಿನಿ ಸಂಸಾರೆ ಮೃತಃ ಕೋವಾ ನಜಾಯತೇ
ಸಜಾತೋ ಏನ ಜಾತೇನ ಯಾತಿ ವಂಶ ಸ್ಸಮುನ್ನತಿಂ
mAna zaurya paddhati: The Way to Build up and Maintain Self-Respect and Bravery
On the ever-rotating wheel of samsara, is there anyone who after death will not take birth again?
It is only he who earns honour and reputation to his family that is said to have taken a worthy birth.
ಮಾನ ಶೌರ್ಯ ಪದ್ಧತಿ: ಆತ್ಮ ಸಮ್ಮಾನ ಮತ್ತು ಶೌರ್ಯವನ್ನು ಸಾಧಿಸುವ ಹಾದಿ
ಚಕ್ರದಂತೆ ಸುತ್ತುತ್ತಿರುವ ಜನನ ಮರಣ ಪ್ರವಾಹ ರೂಪದ ಸಂಸಾರದಲ್ಲಿ ಸತ್ತವರು ಯಾರು ತಾನೆ ಮತ್ತೆ ಹುಟ್ಟುವುದಿಲ್ಲ? ಎಲ್ಲರೂ ಪುನರ್ಜನ್ಮ ತಾಳುವರು. ಆದರೆ ಯಾರ ಹುಟ್ಟಿನಿಂದ ಅವನ ವಂಶ ಉನ್ನತಿ ಪಡೆಯುವುದೋ ಅವನ ಹುಟ್ಟು ಮಾತ್ರ ಸಾರ್ಥಕವಾಗುತ್ತದೆ.
- कुसुमस्तबकस्येव द्वयीव्रुत्तिर्मनस्विनः
मूर्ध्नि वा सर्वलोकस्य शीर्यते वन एव वा
ಕುಸುಮಸ್ತಬಕಸ್ಯೇವ ದ್ವಯೀವೃತ್ತಿರ್ಮನಸ್ವಿನಃ
ಮೂರ್ಧ್ನಿ ವಾ ಸರ್ವಲೋಕಸ್ಯ ಶೀರ್ಯತೇ ವನ ಏವ ವಾ
- Persons of high self-respect deserve to be held in high esteem.
In the case of freshly gathered flowers, either they are made into a garland
to adorn some head or allowed to wither on the branches in the garden.
Similarly, persons who value self-respect and honour prefer either to be
held in high esteem in the society or to fade into a solitary life in a forest.
ಆತ್ಮಾಭಿಮಾನವನ್ನು ಹೊಂದಿದ ವ್ಯಕ್ತಿಗಳ ಔನ್ನತ್ಯದ ಬಗ್ಗೆ
ಹೂಗೊಂಚಲಿಗಿರುವಂತೆ, ಧೀರ ಪುರುಷನಿಗೂ ಎರಡೇ ವೃತ್ತಿಗಳು. ಆತ ಎಲ್ಲ ಪ್ರಾಣಿಗಳ ತಲೆಗಳಮೇಲೆ ವಿರಾಜಿಸಬಹುದು ಅಂದರೆ ಸರ್ವೋತ್ತಮನಾಗಬಹುದು. ಇಲ್ಲವೇ ಅರಣ್ಯದಲ್ಲಿಯೇ ಯಾರ ಕಣ್ಣಿಗೂ ಬೀಳದೆಯೇ ಇದ್ದು ನಾಶಹೊಂದಬಹುದು. ಅಂದರೆ ರಾಜ ಅಥವಾ ಪ್ರಜೆಗಳ ಮನ್ನಣೆ ಪಡೆಯದೇ ಹೋಗಬಹುದು.
207
artha paddhati
ಅರ್ಥ ಪದ್ಧತಿ
यस्यास्ति वित्तं स नरः कुलीनः स पन्डित स्स श्रुतवान् गुणज्ञः
स एव वक्ता स च दर्शनीयः सर्वे गुणाः कान्चनमाश्रयन्ति
ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ ಸ ಪಂಡಿತಃ ಸ್ಸ ಶೃತವಾನ್ ಗುಣಜ್ಝಃ
ಸ ಏವ ವಕ್ತಾ ಸ ಚ ದರ್ಶನೀಯಃ ಸರ್ವೇ ಗುಣಾಃ ಕಾಂಚನಮಾಶ್ರಯನ್ತಿ
artha paddhati The Way a Wealthy Person Stands
A moneyed person is considered to belong to a respectable family.
He is taken to be a scholar. People respect him and listen to him.
He looks well-informed, with a handsome personality. It is as though
all the virtuous qualities have found home in a person’ wealth.
ಅರ್ಥ ಪದ್ಧತಿ: ಐಶ್ವರ್ಯವಂತರ ಹಾದಿಯ ನಿಲುವು
ಯಾರ ಬಳಿಯಲ್ಲಿ ಹಣವಿರುವುದೋ ಅವನೇ ಸತ್ಕುಲ ಪ್ರಸೂತನೆನಿಸಿಕೊಳ್ಳುವವನು. ಅವನೇ ಪಂಡಿತ, ಅವನೇ ಅಧ್ಯಯನ ಮಾಡಿದವನು, ಅವನೇ ಗುಣಜ್ಞ, ಅವನೇ ಮಾತು ಬಲ್ಲವ, ಅವನೇ ರೂಪ ಸಂಪನ್ನ. ಹೀಗೆ ಎಲ್ಲ ಗುಣಗಳೂ ಸುವರ್ಣವನ್ನೇ ಆಶ್ರಯಿಸುತ್ತವೆ.
- 208. यद्धात्रा निजफालपट्टलिखितं स्तोकं महद्वा धनं तत्प्राप्नोति मरुस्थले’पि नितरां मेरोउ च नातो’धिकं
तधीरो भव वित्तवत्सु क्र्पणां व्र्त्तिं व्र्था माक्र्थाः कूपे पश्य पयोनिधावपि घतो ग्र्ह्णाति तुल्यं जलं
ಯದ್ಧಾತ್ರಾ ನಿಜಫಾಲಪಟ್ಟಲಿಖಿತಂ ಸ್ತೋಕಂ ಮಹದ್ವಾಧನಂ ತತ್ಪ್ರಾಪ್ನೋತಿ ಮರುಸ್ಥಲೇಪಿ ನಿತರಾಂ ಮೇರೌ ಚ ನಾತೋಧಿಕಂ
ತಧೀರೋ ಭವ ವಿತ್ತವತ್ಸು ಕೃಪಣಾಂ ವೃತ್ತಿಂ ವೃಥಾ ಮಾಕೃಥಾಃ ಕೂಪೇ ಪಶ್ಯ ಪಯೋನಿಧಾವಪಿ ಘಟೋ ಗೃಹ್ಣಾತಿ ತುಲ್ಯಂ ಜಲಂ
- One gets only what he deserves
Whatever Brahma has scripted on the forehead of a person, that alone will he get, in a small or a big measure. He may be in the midst of a desert
or on the top of Mount Meru, he will not get anything more than what he is destined to get. Be steady and constant in your mind. Do not be miserable
through jealousy of the rich people. If you dip a pot in water, it will bring the same measure of water whether it is from a well or from an ocean.
ಯಾರಿಗೆ ಏನು ಲಭ್ಯವೋ ಅವರಿಗೆ ಅದೇ ದೊರಕುತ್ತದೆ
ಬ್ರಹ್ಮನು ತನ್ನ ಹಣೆಯ ಮೇಲೆ ಬರೆದದ್ದು ಅಲ್ಪವೇ ಅಗಲಿ, ಹೆಚ್ಚಿನದೇ ಆಗಲಿ, ಅದನ್ನೇ ಮರುಭೂಮಿಯಲ್ಲಾದರೂ ಮಾನವ ಪಡೆದೇ ಪಡೆಯುತ್ತಾನೆ. ಮೇರು ಪ್ರದೇಶಕ್ಕೆ ಹೋದರೂ ಅದಕ್ಕಿಂತ ಹೆಚ್ಚಿನದನ್ನು ಪಡೆಯಲಾರ. ಆದುದರಿಂದ ಧೈರ್ಯವನ್ನು ತಳೆ. ಧನಿಕರಲ್ಲಿ ದೀನನಂತೆ ನಡೆದುಕೊಳ್ಳಬೇಡ. ನೋಡು! ಬಾವಿಯಲ್ಲಿಯೇ ಆಗಲಿ, ಸಮುದ್ರದಲ್ಲಿಯೇ ಆಗಲಿ, ತನ್ನ ಅಳತೆಗೆ ಸಮನಾದಷ್ಟೇ ನೀರನ್ನು ಗಡಿಗೆ ತುಂಬಿಕೊಳ್ಳಬಹುದು.
209 durjana paddhati
ದುರ್ಜನ ಪದ್ಧತಿ
अकरुणत्व मकारण विग्रहः परधने परयोषिति च स्प्रुहा
सुजनबन्धुजनेष्वसहिष्णुता प्रक्रुतिसिद्धमिदं हि दुरात्मनां
ಅಕರುಣತ್ವ ಮಕಾರಣ ವಿಗ್ರಹಃ ಪರಧನೇ ಪರಯೋಷಿತಿ ಚಸ್ಪೃಹಾ
ಸುಜನಬನ್ಧುಜನೇಷ್ವಸ್ವಹಿಷ್ಣುತಾ ಪ್ರಕೃತಿಸಿದ್ಧಮಿದಂ ಹಿ ದುರಾತ್ಮನಾಂ
durjana paddhati: The Way One Turns Wicked
Lacking in compassion,
Picking up quarrels with others, for no reason;
Desiring for wealth and women belonging to others;
Intolerant towards virtuous people and relatives –
Wicked people are naturally inclined to be so.
ದುರ್ಜನ ಪದ್ಧತಿ: ದುರ್ಜನರ ಸ್ವರೂಪ
ನಿರ್ದಯತೆ, ಕಾರಣವಿಲ್ಲದೆ ಜಗಳ, ಪರಸ್ವತ್ತಿನಲ್ಲಿಯೂ ಪರಸ್ತ್ರೀಯರಲ್ಲಿಯೂ ಆಸೆ, ಸಜ್ಜನರೂ ಮತ್ತು ಬಂಧುಗಳ ವಿಷಯದಲ್ಲಿ ಅಸಹನೆ ಇವು ದುಷ್ಟ ಸ್ವಭಾವವುಳ್ಳ ಜನರಿಗೆ ಸ್ವಾಭಾವಿಕವಾಗಿಯೇ ಇರುತ್ತದೆ.
- दुर्जनः परिहर्तव्यो विद्यया’लन्क्रुतो’पि सन्
मणिना भूषित स्सर्पः किमसौ न भयन्करः
ದುರ್ಜನಃ ಪರಿಹರ್ತವ್ಯೋ ವಿದ್ಯಯಯಾಲಂಕೃತೋಪಿ ಸನ್
ಮಣಿನಾ ಭೂಷಿತ ಸ್ಸರ್ಪಃ ಕಿಮಸೌ ನ ಭಯಂಕರಃ
- A Wicked Person Should be Kept at a Distance.
The wicked person should be avoided even if he is well-educated.
Will not the sight of a serpent frighten in spite of the precious stone decorating its hood.
ದುರ್ಜನರನ್ನು ದೂರವಿಡಬೇಕು
ವೇದವೇದಾಂಗಾದಿ ವಿದ್ಯೆಗಳನ್ನು ಕಲಿತು ಮಾನ್ಯನಾದರೂ, ದುಷ್ಟನು ಸಹವಾಸಕ್ಕೆ ಅನರ್ಹನು. ಹಾವಿನ ಹೆಡೆಯಲ್ಲಿ ಅಮೂಲ್ಯವಾದ ರತ್ನವಿದ್ದರೂ ಅದರ ದರ್ಶನವೇ ಭಯಂಕರವಲ್ಲವೇ?
211 sujana paddhati: The Way of Transforming into Virtuous Persons.
ಸುಜನ ಪದ್ಧತಿ: ಗುಣವಂತರಾಗುವ ಬಗೆ
ಸಜ್ಜನರನ್ನು ರೂಪಿಸುವಂತಹ ಸದ್ಗುಣಗಳು
वाञ्छा सज्जन सन्गतौ परगुणे प्रीति र्गुरौ नम्रता विद्यायां व्यसनं स्वयोषिति रति र्लोकापवदाद्भयं
भक्तिः शूलिनि शक्तिरात्मदमने संसर्गमुक्तिः खलै रेते येषु वसन्ति निर्मलगुणा स्तेभ्यो नमः कुर्महे
ವಾಜ್ಛಾ ಸಜ್ಜನ ಸಂಗತೌ ಪರಗುಣೇ ಪ್ರೀತಿರ್ಗುರೌ ನಮ್ರತಾ
ವಿದ್ಯಾಯಾಂ ವ್ಯಸನಂ ಸ್ವಯೋಷಿತಿ ರತಿರ್ಲೋಕಾಪವದಾದ್ಭಯಂ
ಭಕ್ತಿಃ ಶೂಲಿನಿ ಶಕ್ತಿರಾತ್ಮದಮನೇ ಸಂಸರ್ಗಮುಕ್ತಿಃ ಖಲೈಃ
ಯೇತೇ ಯೇಷು ವಸನ್ತಿ ನಿರ್ಮಲಗುಣಾ ಸ್ತೇಭ್ಯೋ ನಮಃ ಕುರ್ಮಹೇ
Love for the virtues in others;
Respect for the gurus;
Showing interest in acquiring wisdom;
Love for one’s own wife;
Fear of getting blamed by others;
Devotion to Lord Shiva;
Self-restraint;
Keeping evil men at a distance; —-
I salute those Great Persons who are endowed with the above virtues.
ಸಜ್ಜನರೊಡನೆಯ ಸಹವಾಸದಲ್ಲಿ ಅಪೇಕ್ಷೆ, ಇತರರ ಗುಣಗಳಲ್ಲಿ ಪ್ರೀತಿ, ಗುರುವಿನಲ್ಲಿ ವಿನಯ, ವಿದ್ಯೆಯಲ್ಲಿ ಆಸಕ್ತಿ, ತನ್ನ ಪತ್ನಿಯಲ್ಲಿಯೇ ಅನುರಕ್ತಿ, ಲೋಕಾಪವಾದದ ಭಯ, ಪರಮೇಶ್ವರನಲ್ಲಿ ಭಕ್ತಿ, ತನ್ನನ್ನೇ ನಿಗ್ರಹಿಸಿಕೊಳ್ಳುವ ಸಂಯಮ, ದುಷ್ಟರ ಸಹವಾಸದಿಂದ ಬಿಡುಗಡೆ, ಈ ನಿರ್ಮಲ ಗುಣಗಳು ಯಾರಲ್ಲಿರುವುವೋ ಅಂತಹ ಮಹಾತ್ಮರಿಗೆ ನಮಸ್ಕಾರ.
212· विपदि धैर्य मथाभ्युदये क्षमा सदसि वाक्पटुता युधि विक्रमः
यशसि चाभिरति र्व्यसनं श्रुतौ प्रक्रुतिसिद्धमिदं हि महात्मनां
ವಿಪದಿ ಧೈರ್ಯ ಮಥಾಭ್ಯುದಯೇ ಕ್ಷಮಾ ಸದಸಿ ವಾಕ್ಪಟುತಾ ಯುಧಿ ವಿಕ್ರಮಃ
ಯಶಸಿ ಚಾಭಿರತಿ ರ್ವ್ಯಸನಂ ಶೃತೌ ಪ್ರಕೃತಿಸಿದ್ಧಮಿದಂ ಹಿ ಮಹಾತ್ಮನಾಂ
ಸಜ್ಜನರನ್ನು ರೂಪಿಸುವಂತಹ ಸದ್ಗುಣಗಳು
- Qualities that characterize the Virtuous People
The virtuous people have the following qualities which are natural to them:
Courage in facing adversity;
Restraint in a state of prosperity;
Eloquence in the company of learned people;
Boldness in fighting;
Desire for glory; and
Interest in the study of scriptures like the Vedas and the Sastras;
ಕಷ್ಟಕಾಲದಲ್ಲಿ ಧೈರ್ಯ, ಸಂಪತ್ತು ಒದಗಿದಾಗ ಸಂಯಮ, ಸಭೆಯಲ್ಲಿ ಮಾತಿನ ಜಾಣ್ಮೆ, ಯುದ್ಧದಲ್ಲಿ ಪರಾಕ್ರಮ, ಕೀರ್ತಿಗಳಿಸುವಲ್ಲಿ ಆಸಕ್ತಿ, ವೇದಾಧ್ಯಯನ ಮೊದಲಾದ ವಿದ್ಯಾಭ್ಯಾಸದಲ್ಲಿ ಆಸಕ್ತಿ, ಇವು ಮಹಾತ್ಮರಿಗೆ ಸಿದ್ಧವಾದ ಗುಣಗಳು.
- paropakAra paddhati
पद्माकरं दिनकरो विकचं करोति चन्द्रो विकासयति कैरवचक्रवालं
नाभ्यर्थितो जलधरो’पि जलं ददाति सन्तः स्वयं परहिते विहिताभियोगाः
ಪರೋಪಕಾರ ಪದ್ಧತಿ
ಪದ್ಮಾಕರಂ ದಿನಕರೋ ವಿಕಚಂ ಕರೋತಿ ಚನ್ದ್ರೋ ವಿಕಾಸಯತಿ ಕೈರವಚಕ್ರವಾಲಂ
ನಾಭ್ಯರ್ಥಿತೋ ಜಲಧರೋಪಿ ಜಲಂ ದದಾತಿ ಸನ್ತಃ ಸ್ವಯಂ ಪರಹಿತೇ ವಿಹಿತಾಭಿಯೋಗಾಃ
paropakAra paddhati: The Way of Becoming Helpful to Others
Without being asked, the sun helps the lotuses to blossom;
The moon unasked causes delight to the bed of water-lilies;
The cloud pours forth its water unsolicited;
So do the liberal minded people, of their own accord, bring benefits to others.
ಇತರರಿಗೆ ಸಹಾಯಮಾಡುವ ಬಗೆ
ತನ್ನ ಸ್ವಭಾವಕ್ಕೆ ಅನುಗುಣವಾಗಿ ಸೂರ್ಯನು ಕಮಲವನ್ನು ಅರಳಿಸುತ್ತಾನೆ. ತನ್ನ ಉದಯದಿಂದ ಚಂದ್ರನು ಕುಮುದಿನೀ ಸಮೂಹವನ್ನೇ ಅರಳಿಸುತ್ತಾನೆ. ಯಾರೂ ಬೇಡದಿದ್ದರೂ, ಮೋಡ ತಾನಾಗಿ ಮಳೆಗರೆದು ನೀರನ್ನು ಕೊಡುವುದು. ಸಜ್ಜನರು ತಾವಾಗಿಯೇ ಇತರರಿಗೆ ಹಿತವನ್ನು ಉಂಟುಮಾಡುವುದರಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ.
- मनसि वचसि काये पुण्यपीयूष पूर्णा स्त्रिभुवन मुपकारश्रेणिभिः प्रीणयन्तः
परगुणपरमाणून् पर्वतीक्रुत्य नित्यं निजह्रुदि विकसन्तः सन्ति सन्तः कियन्तः
ಮನಸಿ ವಚಸಿ ಕಾಯೇ ಪುಣ್ಯಪೀಯೂಷ ಪೂರ್ಣಾಃ
ತ್ರಿಭುವನಮುಪಕಾರಶ್ರೇಣಿಭಿಃ ಪ್ರೀಣಯನ್ತಃ
ಪರಗುಣ ಪರಮಾಣೂನ್ ಪರ್ವತೀಕೃತ್ಯ ನಿತ್ಯಂ
ನಿಜಹೃದಿ ವಿಕಸನ್ತಃ ಸನ್ತಿ ಸನ್ತಃ ಕಿಯನ್ತಃ
- Values that characterise Noble Souls
Their thoughts, speech and actions are filled with the nectar (amrta) of virtuous and auspicious acts;
By their benevolent deeds, they please others in all the three worlds;
They appreciate by magnifying even minute good qualities in others;
And they rejoice in the expansion of their own hearts. –
Very few are indeed such noble souls!
ಉದಾತ್ತ ಜೀವಿಗಳ ಮೌಲ್ಯಗಳು
ಮನೋವಾಕ್ಕಾಯಗಳಲ್ಲಿ ಪುಣ್ಯವೆಂಬ ಅಮೃತದಿಂದ ತುಂಬಿರುವವರೂ, ಮೂರು ಲೋಕಗಳನ್ನೂ ತಮ್ಮ ಉಪಕಾರ ಪರಂಪರೆಯಿಂದ ಸಂತೋಷಗೊಳಿಸುವವರೂ, ಇತರರ ಗುಣಗಳೆಂಬ ಪರಮಾಣುಗಳನ್ನೂ ಅಂದರೆ ಅಲ್ಪ ಭಾಗಗಳನ್ನೂ ಪರ್ವತದಂತೆ ಭಾವಿಸಿ, ಯಾವಾಗಲೂ ಹೊಗಳುತ್ತಾ ತಮ್ಮ ಅಂತಃಕರಣದಲ್ಲಿ ಸಂತೋಷದಿಂದ ತುಂಬಿರುವವರೂ ಆದ ಸಜ್ಜನರು ಬೆರೆಳೆಣಿಕೆಯಷ್ಟು ಮಾತ್ರ ಇದ್ದಾರೆ.
- dhairya paddhati
ಧೈರ್ಯ ಪದ್ಧತಿ
रत्नैर्महाब्धे स्तुतुषुर्न देवा न भेजिरे भीमविषेण भीतिं
सुधां विना न प्रययु र्विरामं न निश्चितार्थाद्विरमन्ति धीरा:
ರತ್ನೈರ್ಮಹಾಬ್ಧೇ ಸ್ತುತುಷುರ್ನ ದೇವಾ ನ ಭೇಜಿರೇ ಭೀಮವಿಷೇಣ ಭೀತಿಂ
ಸುಧಾಂ ವಿನಾ ನ ಪ್ರಯಯುರ್ವಿರಾಮಂ ನ ನಿಶ್ಚಿತಾರ್ಥಾದ್ವಿರಮನ್ತಿ ಧೀರಾಃ
dhairya paddhati : The Way of Being Bold
At the time of churning the Milky Ocean, the gods did not rest until they
gained possession of Amrta.
They were not distracted by the precious stones nor were they frightened
by the terrible poison.
People with a constant mind and firm determination do not rest until their
Objective is completely accomplished.
ಧೈರ್ಯ ಪದ್ಧತಿ:- ನಿರ್ಭೀತಿಯಿಂದ ಇರುವ ಬಗೆ
ಸಮುದ್ರಮಥನದ ಸಮಯದಲ್ಲಿ ದೊರೆತ ಬೆಲೆಯುಳ್ಳ ರತ್ನಗಳಿಂದ
ದೇವತೆಗಳು ತೃಪ್ತರಾಗಲಿಲ್ಲ. ಹಾಗೆಯೇ ಭಯಂಕರವಾದ ವಿಷವನ್ನು ಕಂಡು ಬೆದರಲಿಲ್ಲ. ಅಮೃತವನ್ನು ಪಡೆಯುವವರೆಗೆ ಅವರು ತಮ್ಮ ಕೆಲಸವನ್ನು ನಿಲ್ಲಿಸಲಿಲ್ಲ. ಹೀಗೆ ಮಾನಧನರಾದ ಧೀರರು ತಮ್ಮ ಗುರಿಯನ್ನು ಮುಟ್ಟುವವರೆಗೆ ವಿಶ್ರಮಿಸುವುದಿಲ್ಲ.
- dhairya paddhati
ಧೈರ್ಯ ಪದ್ಧತಿ
क्वचित् प्रुथ्वी शय्यः क्वचिदपिच पर्यञ्क शयनः क्वचिच्छाकाहारः क्वचिदपिच शाल्योदनरुचिः
क्वचित्कन्धाधारी क्वचिदपिच दिव्यांबरधरो मनस्वी कार्यार्थी न गणयति दुःखं न च सुखं
ಕ್ವಚಿತ್ ಪೃಥ್ವೀ ಶಯ್ಯಃ ಕ್ವಚಿದಪಿಚ ಪರ್ಯಂಕ ಶಯನಃ ಕ್ವಚಿಚ್ಚಾಕಾಹಾರಃ ಕ್ವಚಿದಪಿಚ ಶಾಲ್ಯೋದನರುಚಿಃ
ಕ್ವಚಿತ್ಕನ್ಧಾಧಾರೀ ಕ್ವಚಿದಪಿಚ ದಿವ್ಯಾಂಬರಧರೋ ಮನಸ್ವೀ ಕಾರ್ಯಾರ್ಥೀ ನ ಗಣಯತಿ ದುಃಖಂ ನ ಚ ಸುಖಂ
The brave ones are bent on achieving their goals, come what may.
At one time he may lie on bare ground, at another he may sleep on a bed;
At one time he may just live on herbs, at another he may enjoy eating well-cooked food;
At one time he may wear rags, at another a magnificent dress;–
For those steady persons who are bent on achieving their purpose,
it does not matter whichever state they are in – whether in pain or pleasure.
ಏನೇ ಅಡೆತಡೆಗಳು ಬಂದರೂ ಸಹ ಧೀರರು ತಮ್ಮ ಧ್ಯೇಯವನ್ನು ಸಾಧಿಸುವ ಬಗೆ ಧೀರನಾದ ಕಾರ್ಯಾರ್ಥಿಯು ಕೆಲವೆಡೆ ನೆಲದ ಮೇಲೆಯೇ
ಮಲಗಬೇಕಾಗಬಹುದು ಮತ್ತು ಕೆಲವು ಸ್ಥಳಗಳಲ್ಲಿ ಉತ್ತಮವಾದ
ಮಂಚ, ಹಾಸಿಗೆಗಳ ಮೇಲೆ ಮಲಗಲು ಅವನಿಗೆ ಅವಕಾಶ
ಸಿಗಬಹುದು. ಅವನಿಗೆ ಕೆಲವು ಪ್ರದೇಶಗಳಲ್ಲಿ ನೀರಸವಾದ
ಶಾಕಾಹಾರವೇ ದೊರೆಯಬಹುದು, ಮತ್ತು ಕೆಲವೆಡೆ ಮೃಷ್ಟಾನ್ನ ಸಿಗಬಹುದು. ಅವನು ಕೆಲವೆಡೆಗಳಲ್ಲಿ ಕೊಳಕು ವಸ್ತ್ರ ಧರಿಸಿ ತಿರುಗಿದರೆ, ಇತರ ಕಡೆಗಳಲ್ಲಿ ಉತ್ತಮ ವಸ್ತ್ರಗಳನ್ನು ಧರಿಸಬಹುದು. ಹೀಗೆ ಕರ್ತವ್ಯ ತತ್ಪರನಾಗಿ ಅವನು ದುಃಖವನ್ನಾಗಲಿ, ಸುಖವನ್ನಾಗಲಿ ಲೆಕ್ಕಿಸುವುದಿಲ್ಲ.
- deiva paddhatAAi
ದೈವ ಪದ್ಧತಿ
गजभुजङ्ग् विहङ्गमबन्धनं शशिदिवाकरयो र्ग्रहपीडनं
मतिमतां च विलोक्य दरिद्रतां विधि रहो बलवानिति मे मतिः
ಗಜಭುಜಂಗ ವಿಹಂಗಮಬಂಧನಂ ಶಶಿದಿವಾಕರಯೋರ್ಗಹಪೀಡನಂ
ಮತಿಮತಾಂ ಚ ವಿಲೋಕ್ಯ ದರಿದ್ರತಾಂ ವಿಧಿ ರಹೋ ಬಲವಾನಿತಿ ಮೇ ಮತಿಃ
deiva paddhatAAi The Way of Fate or Destiny
When I see how the elephants, the serpents and the birds, though
they are strong, get caught;
when I observe the sun and the moon being tormented by Rahu and Ketu;
and when I watch the knowledgeable persons also facing poverty;
it strikes me “How mighty is the power of Fate.”
ದೈವ ಪದ್ಧತಿ:- ವಿಧಿ ಅಥವಾ ಹಣೆ ಬರಹದ ಕುರಿತು
ಸುಲಭವಾಗಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲದ ಆನೆ, ಹಾವು, ಪಕ್ಷಿಗಳನ್ನು ಹಿಡಿಯಲ್ಪಡುವುದನ್ನು, ಅತೀ ದೂರದಿಲ್ಲಿರುವ ಚಂದ್ರ ಸೂರ್ಯರು ಗ್ರಹಣದಿಂದ ಪೀಡಿಸಲ್ಪಟ್ಟಿರುವುದನ್ನು, ಸಾಮಾನ್ಯವಾಗಿ ಬುದ್ಧಿವಂತರು ಬಡವರಾಗಿಯೇ ಬದುಕಿ ಬಾಳುವುದನ್ನು ನೋಡಿದ ಮೇಲೆ ದೈವವೇ ಎಲ್ಲಕ್ಕಿಂತ ಬಲಿಷ್ಟವೆಂದು ನನ್ನ ಅಭಿಮತ.
218.deiva paddhatAAi
ದೈವ ಪದ್ಧತಿ
दैवेन प्रभुणा स्वयं जगति यद्यस्य प्रमाणीक्रुतं तत्तस्योपनमे न्मना गपि महान्नैवाश्रयः कारणं
सर्वाशापरिपूरके जलधरे वर्षत्यपि प्रत्यहं सूक्ष्मा एव पतन्ति चातकमुखे द्वित्राः पयोबिन्दवः
ದೈವೇನ ಪ್ರಭುಣಾ ಸ್ವಯಂ ಜಗತಿ ಯದ್ಯಸ್ಯ ಪ್ರಮಾಣೀಕೃತಂ ತತ್ತಸ್ಯೋಪನಮೇ ನ್ಮನಾಗಪಿ ಮಹಾನ್ನೈವಾಶ್ರಯಃ ಕಾರಣಂ
ಸರ್ವಾಶಾಪರಿಪೂರಕೇ ಜಲಧರೇ ವರ್ಷತ್ಯಪಿ ಪ್ರತ್ಯಹಂ ಸೂಕ್ಷ್ಮಾ ಏವ ಪತಂತಿಚಾತಕಮುಖೇ ದ್ವಿತ್ರಾಃ ಪಯೋಬಿಂದವಃ
One should be content with what destiny brings.
Whatever has been appointed by Fate to each person, that alone
will he obtain. One need not approach great people for their
favours. The rain-bearing cloud can fulfill great expatiations, but
only a few drops fall into the mouth of the chataka
ಪ್ರಾಪ್ತಿ ಇದ್ದಷ್ಟೇ ಬದುಕು ಎಂಬ ನೀತಿ:
ಜಗತ್ತಿನಲ್ಲಿ ಸರ್ವಸಮರ್ಥನಾದ ವಿಧಿ ಯಾರಿಗೆ ಏನನ್ನು ನೀಡುತ್ತದೆಯೋ ಅದು ಅವರಿಗೇ ಸಲ್ಲುತ್ತದೆ. ಅದರ ನಿವಾರಣೆಗೆ ಅವನು ಯಾವುದೇ ಮಹಾತ್ಮರನ್ನು ಆಶ್ರಯಿಸಿದರೂ ಫಲವಿಲ್ಲ. ಎಲ್ಲ ದಿಕ್ಕುಗಳಲ್ಲಿಯೂ ಹರಡಿಕೊಂಡು ಮೋಡ ಮಳೆಗರೆಯುತ್ತಿದ್ದರೂ, ಚಾತಕ ಪಕ್ಷಿಯ ಬಾಯಲ್ಲಿ ಕೆಲವೇ ಹನಿಗಳು ಬೀಳುವುದು ಅದರ ಹಣೆಯ ಬರಹ. ಹಣವಿದ್ದ ಗಂಡನನ್ನು ಪಡೆದರೂ ಋಣವಿದ್ದಷ್ಟೇ ಸುಖ, ಎಂಬ ಗಾದೆಯ ಮಾತಿನಂತೆ.
219.karma paddhati
ಕರ್ಮ ಪದ್ಧತಿ
या साधूंश्च खलान् करोति विदुषो मूर्खान् हितान् द्वेषिणः प्रत्यक्षं कुरुते परोक्ष मम्रुतं हालाहलं तत्क्षणात्
तामाराधय सत्क्रियां भगवतीं भोक्तुं फलं वान्छितं हे साधो व्यसनै र्गुणेषु विपुलेष्वास्थां व्रुथा माक्रुथाः
ಯಾ ಸಾಧೂಂಶ್ಚ ಖಲಾನ್ ಕರೋತಿ ವಿದುಷೋ ಮೂರ್ಖಾನ್ ಹಿತಾನ್ ದ್ವೇಷಿಣಃ ಪ್ರತ್ಯಕ್ಷಂ ಕುರುತೇ ಪರೋಕ್ಷ ಮಮೃತಂ ಹಾಲಾಹಲಂ ತಕ್ಷಣಾತ್
ತಾಮಾರಾಧಯ ಸತ್ಕ್ರಿಯಾಂ ಭಗವತೀಂ ಭೋಕ್ತುಂ ಫಲಂ ವಾಂಛಿತಂ ಹೇ ಸಾಧೋ ವ್ಯಸನೈರ್ಗುಣೇಷು ವಿಪುಲೇಷ್ವಾಸ್ಥಾಂ ವೃಥಾ ಮಾಕೃಥಾಃ
karma paddhati:- The Way of performing Virtuous
Deeds
O wise man! Cultivate the habit of performing virtuous actions, for that will
make evil men good, the foolish wise, the enemies well-disposed, and the invisible
visible. It will also turn the poison immediately into amrta. It will give you
the desired fruit of your actions. Don’t waste your time and energy on acquiring great
results with great pain but perform virtuous deeds alone.
ಕರ್ಮ ಪದ್ಧತಿ:- ಪುಣ್ಯಪ್ರದ ಕಾರ್ಯ ಮಾಡುವ ಬಗೆ
ಯಾರು ತನ್ನ ಸತ್ಪ್ರಭಾವದಿಂದ ದುಷ್ಟರನ್ನು ಸಾಧುಗಳನ್ನಾಗಿಯೂ, ಮೂರ್ಖರನ್ನು ವಿದ್ವಾಂಸರನ್ನಾಗಿಯೂ, ದ್ವೇಷಿಗಳನ್ನು ಹಿತೈಷಿಗಳನ್ನಾಗಿಯೂ, ಪರೋಕ್ಷವನ್ನು ಪ್ರತ್ಯಕ್ಷವಾಗಿಯೂ, ವಿಷವನ್ನು ಕೂಡಲೇ ಅಮೃತವನ್ನಾಗಿಯೂ ಮಾಡುವಳೋ ಅಂತಹ “ಸತ್ಕರ್ಮ”ವೆಂಬ ದೇವತೆಯನ್ನು, ನಿನಗೆ ಇಷ್ಟವಾದ ಫಲವನ್ನು ಅನುಭವಿಸುವುದಕ್ಕಾಗಿ ಸೇವೆ ಮಾಡು. ಅಂದರೆ ಸದಾ ಸತ್ಕರ್ಮವನ್ನೇ ಮಾಡುತ್ತಿರು. ಎಲೈ ಸಜ್ಜನನೇ! ಅನೇಕ ವ್ಯಸನಗಳಿಂದ ತುಂಬಿರುವ ಸತ್ವ, ರಜಸ್ ತಮೋಗುಣಗಳಲ್ಲಿ ವ್ಯರ್ಥವಾಗಿ ಆಸಕ್ತಿ ತೋರಬೇಡ. ವಿಷಯ ಲಂಪಟತೆಯನ್ನು ಬಿಡು.
- karma paddhati
ಕರ್ಮ ಪದ್ಧತಿ
नैवाक्रुतिः फलति नैव कुलं न शीलं विद्यापि नैव नच यत्नक्रुता’पि सेवा
भाग्यानि पूर्वतपसा खलु सन्चितानि काले फलन्ति पुरुषस्य यथैव व्रुक्षाः
ನೈವಾಕೃತಿಃ ಫಲತಿ ನೈವ ಕುಲಂ ನ ಶೀಲಂ ವಿದ್ಯಾಪಿ ನೈವ ನಚ ಯತ್ನಕೃತಾಪಿ ಸೇವಾ
ಭಾಗ್ಯಾನಿ ಪೂರ್ವತಪಸಾ ಖಲು ಸಂಚಿತಾನಿ ಕಾಲೇ ಫಲನ್ತಿ ಪುರುಷಸ್ಯ ಯಥೈವ ವೃಕ್ಷಾಃ
The Merit of past virtuous actions alone bears
fruit in the present. Nothing else matters.
Neither beauty, nor greatness of family, nor force of character, nor learning,
nor service, though performed with great care, will bring forth fruit to a man.
It is only the merit acquired through virtuous action in the past that bears
fruit, as the tree bears fruit, when the right time comes.
ನಾವು ಹಿಂದೆ ಮಾಡಿದ ಸತ್ಕಾರ್ಯಗಳಿಂದಲೇ ನಮ್ಮ ಇಂದಿನ ಬದುಕು ಫಲಪ್ರದವಾಗಿರುತ್ತದೆ ಪುರುಷನ ಸುಂದರ ಆಕಾರ, ಉತ್ತಮ ಕುಲ, ನಿರ್ದಿಷ್ಟ ಶೀಲ, ಹೆಚ್ಚಿನ ವಿದ್ಯೆ ಅಥವಾ ಪ್ರಯತ್ನಪೂರ್ವಕವಾಗಿ ಮಾಡಿದ ಶ್ರೀಮಂತರ ಸೇವೆ, ಇವು ಯಾವುವೂ ಫಲಕಾರಿಯಾಗುವುದಿಲ್ಲ. ಉತ್ತು ಬಿತ್ತು ಪೋಷಣೆ ಮಾಡಿ ಬೆಳೆಸಿದ ವೃಕ್ಷಗಳು ಕಾಲಾಂತರದಲ್ಲಿ ಫಲ ಕೊಡುವಂತೆ ಹಿಂದೆ ಮಾಡಿದ ಕರ್ಮಗಳಿಂದ ಕೂಡಿಕೊಂಡು ಬಂದ ಭಾಗ್ಯವೇ ಸಕಾಲದಲ್ಲಿ ಫಲಪ್ರದವಾಗುವುದು.
MAHABHARATA A SUBHASHITA A DAY
THE MAHABHARATA
SUBHASHITAS
INTRODUCTION
Next to Bhartruhari, we would like to introduce some select slokas that serve as Subhashitas from the great epic poem, the Mahabharata, composed by the great Vyasa Maharshi.
Veda Vyasa is a central figure in our culture. Like a lifeline, he has enriched the entire civilization with his creativity and brilliant intellect. He classified the three-fold Veda into four segments called Rig, Sama, Adharvana and Yajur Vedas. He also crystallized the Vedas into a set of Sutras called Brahma Sutra, defining the Vedic concept of the Supreme Reality.
Then he composed the epic, the Mahabharata, the longest poem ever written. He also played a very important role in it. It is an eternal story that remains relevant to people for ever. It is indeed the Fifth Veda. He first narrated it to Ganapati who wrote it down. Then he narrated it to his own disciple Vaisampayana.
Using the The Mahabharata as oil, Vyasa has lit the Lamp of Jnana for the benefit of everyone. We have gathered a few sparks of wisdom from this Lamp for the benefit of our viewers.
नमोस्तुते व्यास विशाल बुद्धे फुल्लारविन्दायत पत्रनेत्र
एन त्वया भारततैलपूर्णः प्रज्वालितो ञानमय प्रदीपः
ಮಹಾಭಾರತದ ಸುಭಾಷಿತಗಳು
ಪೀಠಿಕೆ
ಭರ್ತೃಹರಿ ಶತಕದಿಂದ ಆಯ್ದ ಕೆಲವು ಸುಭಾಷಿತಗಳ ಪ್ರಸರಣದ ನಂತರ ನಾವು ಜಗತ್ತಿನ ಮಹಾಕಾವ್ಯವೆಂದೇ ಬಣ್ಣಿಸಲಾದ ಮಹಾಕವಿ ವೇದವ್ಯಾಸರ ವಿರಚಿತ ಮಹಾಭಾರತದಿಂದ, ಸುಭಾಷಿತಗಳೆಂದೇ ಪರಿಗಣಿಸಲ್ಪಡುವ ಆಯ್ದ ಕೆಲವು ಶ್ಲೋಕಗಳನ್ನು ಈ ಮಾಲಿಕೆಯಲ್ಲಿ ಪರಿಚಯಿಸುತ್ತಿದ್ದೇವೆ.
ನಮ್ಮ ಸಂಸೃತಿಯ ಕೇಂದ್ರ ಬಿಂದು ಮಹರ್ಷಿ ವೇದವ್ಯಾಸರು. ತಮ್ಮ ಅಗಾಧ ಬುದ್ಧಿಶಕ್ತಿ ಹಾಗೂ ಕರ್ತೃತ್ವ ಕೌಶಲ್ಯದಿಂದ ಜೀವನಾಡಿಯಾದ ವೇದವ್ಯಾಸರು ನಮ್ಮ ಇಡೀ ಸಂಸ್ಕೃತಿ ಹಾಗೂ ನಾಗರಿಕತೆಯನ್ನು ಬಲಪಡಿಸಿದ್ದಾರೆ. ಅವರು ಮೂರು ಭಾಗಗಳನ್ನೊಳಗೊಂಡಿದ್ದ ವೇದಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ ಎಂಬುದಾಗಿ ನಾಲ್ಕು ಭಾಗಗಳಾಗಿ ವಿಭಜಿಸಿದ್ದಾರೆ. ಅಲ್ಲದೆ ವೇದಗಳಲ್ಲಿನ ಮೂಲ ತತ್ವವನ್ನು ನಿರ್ಧರಿಸಲು ಪರತತ್ವ ಸೂತ್ರಗಳಾದ ಬ್ರಹ್ಮಸೂತ್ರವೆಂಬ ಗ್ರಂಥವನ್ನು ಸಂಪಾದಿಸಿದ್ದಾರೆ.
ನಂತರ ಅವರು ಪ್ರಪಂಚದಲ್ಲಿ ಲಭ್ಯವಿರುವ ಕೃತಿಗಳಲ್ಲೆಲ್ಲಾ ಬಹಳ ದೀರ್ಘ ಕಾವ್ಯವಾದ ಲಕ್ಷ ಶ್ಲೋಕಗಳುಳ್ಳ ಮಹಾಭಾರತವನ್ನು ರಚಿಸಿದ್ದಾರೆ. ಅದಲ್ಲದೇ ಆ ಕಾವ್ಯ ಕಥನದಲ್ಲಿ ಬಹಳ ಮುಖ್ಯ ಪಾತ್ರವನ್ನೂ ವಹಿಸಿರುತ್ತಾರೆ. ಆ ಕಾವ್ಯವು ಎಲ್ಲ ಕಾಲಮಾನಗಳಿಗೂ ಶಾಶ್ವತವಾಗಿ ಮಾನವ ಕುಲಕ್ಕೆ ಸುಸಂಗತವಾಗಿ ಉಳಿದಿದೆ. ಮಹಾಭಾರತವು ಪಂಚಮ ವೇದವೇ ಸರಿ. ವ್ಯಾಸರು ಪ್ರಥಮವಾಗಿ ಈ ಕಾವ್ಯವನ್ನು ಗಣಪತಿಗೆ ನಿರೂಪಿಸಿದರು ಹಾಗೂ ಅದನ್ನು ಗಣಪತಿಯು ಬರವಣಿಗೆ ಮೂಲಕ ದಾಖಲಿಸಿದನು. ನಂತರ ತನ್ನ ಶಿಷ್ಯನಾದ ವೈಶಂಪಾಯನನಿಗೆ ಈ ಕಾವ್ಯವನ್ನು ಬೋಧಿಸಿದ್ದಾರೆ.
ವ್ಯಾಸ ಮಹರ್ಷಿಗಳು ಮಹಾಭಾರತವೆಂಬ ತೈಲದಿಂದ, ಜ್ಞಾನವೆಂಬ ದೀಪವನ್ನು ಮಾನವ ಕುಲದ ಒಳಿತಿಗಾಗಿ ಬೆಳಗಿಸಿದ್ದಾರೆ. ಆ ದೀಪದಿಂದ ವಿವೇಕವೆಂಬ ಕೆಲವು ಕಿಡಿಗಳನ್ನು ನಮ್ಮ ಶ್ರೋತೃ ಸಮುದಾಯಕ್ಕೆ ನಾವು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.
ನಮೋಸ್ತುತೇ ವ್ಯಾಸ ವಿಶಾಲ ಬುದ್ಧೇ ಫುಲ್ಲಾರವಿಂದಯಾತ ಪತ್ರ ನೇತ್ರ
ಏನತ್ವಯಾ ಭಾರತತೈಲ ಪೂರ್ಣಃ ಪ್ರಜ್ವಾಲಿತೋ ಜ್ಞಾನಮಯ ಪ್ರದೀಪಃ
ಈ ಸುಭಾಷಿತಗಳನ್ನು ಪ್ರಸ್ತುತ ಪಡಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನವತಿಯಿಂದ ಪ್ರಕಟವಾದ “ಸುಭಾಷಿತ ಮಂಜರಿ” ಎಂಬ ಸಂಪಾದಿತ ಕೃತಿಯಲ್ಲಿನ ಸಂಸ್ಕೃತ ಶ್ಲೋಕಗಳ ಕನ್ನಡ ಅನುವಾದದ ನೆರವನ್ನು ಪಡೆಯಲಾಗಿದೆ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ನಾವು ಆಭಾರಿಯಾಗಿದ್ದೇವೆ.
- स्नेहमूलानि दुःखानि स्नेहजानि भयानि च
शोकहर्षौ तथा2यासः सर्वं स्नेहात् प्रवर्तते
ಸ್ನೇಹಮೂಲಾನಿ ದುಃಖಾನಿ ಸ್ನೇಹಜಾನಿ ಭಯಾನಿ ಚ
ಶೋಕಹರ್ಷೌ ತಥಾಯಾಸಃ ಸರ್ವಂ ಸ್ನೇಹಾತ್ ಪ್ರವರ್ತತೇ
Sorrow, joy and exhaustion – all these are caused because
of our continued attachment to things.
ದುಃಖ, ಭಯ ವ್ಯಥೆ, ಹರ್ಷ, ಆಯಾಸ- ಇವೆಲ್ಲವೂ ಆಯಾ
ವಸ್ತುವಿನಲ್ಲಿ ಇಟ್ಟಿರುವ ವ್ಯಾಮೋಹದಿಂದ ಸಂಭವಿಸುತ್ತದೆ.
ಮಾನಸವಿಕಾರವೆಲ್ಲವೂ ವ್ಯಾಮೋಹದಿಂದ ಹುಟ್ಟುತ್ತವೆ.
222.मानसेनहि दुःखेन शरीरमुपतप्यते
अयः पिन्डेन तप्तेन कुम्भसंस्थमिवोदकम्
ಮಾನಸೇನ ಹಿ ದುಃಖೇನ ಶರೀರಮುಪತಪ್ಯತೇ
ಆಯಃಪಿಂಡೇನ ತಪ್ತೇನ ಕುಂಭಸಂಸ್ಥಮಿವೋದಕಮ್
Any distress in the mind causes suffering to
the body. Just as when the vessel made of
iron is heated up, the water in it begins to boil.
ಮನಸ್ಸಿನ ದುಃಖದಿಂದ ಶರೀರಕ್ಕೆ ಪೀಡೆಯಾಗುತ್ತದೆ- ಹೇಗೆಂದರೆ
ಕಬ್ಬಿಣವು ಕಾದರೆ ಆ ಪಾತ್ರೆಯಲ್ಲಿರುವ ನೀರು ಬಿಸಿಯಾದಂತೆ.
- प्रायेण श्रीमतां लोके भोक्तुं शक्तिर्नविद्यते
काष्टान्यपिहि जीर्यन्ति दरिद्राणां च सर्वशः
ಪ್ರಾಯೇಣ ಶ್ರೀಮತಾಂ ಲೋಕೇ ಭೋಕ್ತುಂ ಶಕ್ತಿರ್ನವಿದ್ಯತೇ
ಕಾಷ್ಠಾನ್ಯಪಿ ಹಿ ಜೀರ್ಯಂತಿ ದರಿದ್ರಾಣಾಂ ಚ ಸರ್ವಶಃ
Usually wealthy people do not have the Capacity to digest what they eat, whereas the poor can always consume even twigs and digest them.
ಸಾಮಾನ್ಯವಾಗಿ ಶ್ರೀಮಂತರಿಗೆ ಊಟ ಮಾಡಿ ಜೀರ್ಣಿಸಿಕೊಳ್ಳುವ
ಶಕ್ತಿ ಇರುವುದಿಲ್ಲ. ಆದರೆ ಬಡವರು ಕಟ್ಟಿಗೆಯನ್ನಾದರೂ ತಿಂದು
ಜೀರ್ಣಿಸಿಕೊಳ್ಳಬಲ್ಲರು.
- यस्यार्थास्तस्य मित्राणि यस्यर्थास्तस्य बान्धवाः
यस्यार्थाः स पुमान् लोके यस्यार्थाः स च पन्डितः
ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ
ಯಸ್ಯಾರ್ಥಾಃ ಸ ಪುಮಾನ್ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ
He who is a man of means will gather several friends and relatives; he will be viewed as a manly person; and he will be taken to be well-informed even!
ಯಾರ ಬಳಿ ಹಣವಿದೆಯೋ ಅವನಿಗೆ ಬಂಧುಗಳಿರುತ್ತಾರೆ. ಅವನಿಗೆ ಮಿತ್ರರೂ ಒದಗುತ್ತಾರೆ. ಹಣವುಳ್ಳವನೇ ಈ ಲೋಕದಲ್ಲಿ ಗಂಡಸು. ಅವನನ್ನೇ ಪಂಡಿತನೆನ್ನುತ್ತದೆ ಈ ಲೋಕ.
- एकः पापानि कुरुते फलं भुञ्क्ते महाजनः
भोक्तारो विप्रमुच्यन्ते कर्ता दोषेण लिप्यते
ಏಕಃ ಪಾಪಾನಿ ಕುರುತೇ ಫಲಂ ಭುಂಕ್ತೇ ಮಹಾಜನಃ
ಭೋಕ್ತಾರೋ ವಿಪ್ರಮುಚ್ಯಂತೇ ಕರ್ತಾ ದೋಷೇಣ ಲಿಪ್ಯತೇ
When a single person commits some sins, the results of which are experienced by many people. While the people at large escape punishment, the sinner gets tainted by the sins.
ಯಾರೋ ಒಬ್ಬನು ಪಾಪಕಾರ್ಯಗಳನ್ನು ಮಾಡುತ್ತಾನೆ. ಮಹಾಜನರು ಅದರ ಫಲವನ್ನು ಅನುಭವಿಸುತ್ತಾರೆ. ಆದರೆ ಫಲಭಾಗಿಗಳು ತಪ್ಪಿಸಿಕೊಳ್ಳುತ್ತಾರೆ. ಪಾಪ ಮಾಡಿದವನು ಅಪರಾಧಿಯಾಗಿಯೇ ಉಳಿಯುತ್ತಾನೆ.
- केनचिद्याचितव्यः कश्चित् किन्चिदनापदि
इति व्यवस्था भूतानां पुरस्ताद्मनुनाक्रुता
ಕೇನಚಿತ್ ಯಾಚಿತವ್ಯಃ ಕಶ್ಚಿತ್ ಕಿಂಚಿದ್ ಅನಾಪದಿ
ಇತಿ ವ್ಯವಸ್ಥಾ ಭೂತಾನಾಂ ಪುರಸ್ತಾದ್ ಮನುನಾ ಕೃತಾ
No one should, at any time, seek help from others unless one is in dire need – this principle Manu set for humans to follow a long time ago.
ಆಪತ್ತು ಬಾರದಿದ್ದಾಗ ಯಾವನೂ ಯಾರನ್ನೂ ಯಾಚಿಸಬಾರದು. ಇದು ಮಹರ್ಷಿ ಮನು ಬಹಳ ಹಿಂದೆ ಮಾಡಿರುವ ವ್ಯವಸ್ಥೆ.
- न ग्रुहं ग्रुहमित्याहुः र्ग्रुहिणी ग्रुहमुच्यते
ग्रुहन्तु ग्रुहिणीहीनम् अरण्य सद्रुशं भवेत्
ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ
ಗೃಹನ್ತು ಗೃಹಿಣೀಹೀನಂ ಅರಣ್ಯ ಸದೃಶಂ ಭವೇತ್
A mere building is not considered a home or gruha. It is the gruhini or the housewife that makes it a gruha. Without the gruhini, it is no better than a wilderness.
ಒಂದು ಕಟ್ಟಡವನ್ನು ಗೃಹವೆಂದು ಬಲ್ಲವರು ಹೇಳುವುದಿಲ್ಲ. ಗೃಹಿಣಿಯು ಗೃಹವೆನಿಸುತ್ತಾಳೆ. ಗೃಹಿಣಿಯಿಲ್ಲದ ಮನೆ ಅರಣ್ಯಕ್ಕೆ ಸದೃಶವಾದದ್ದು.
- मानसं शमयेत्तस्मात् ज्ञानेनाग्निमिवाम्बुना
प्रशान्ते मानसे ह्यस्य शरीरमुपशाम्यति
ಮಾನಸಂ ಶಮಯೇತ್ತಸ್ಮಾತ್ ಜ್ಞಾನೇನಾಗ್ನಿಮಿವಾಂಬುನಾ
ಪ್ರಶಾಂತೇ ಮನಸೇ ಹ್ಯಸ್ಯ ಶರೀರಮುಪಶಾಮ್ಯತಿ
Just as fire is put out by water, the suffering mind should be brought to calmness with the help of knowledge. When the mind calms down, the body will be at ease.
ನೀರಿನಿಂದ ಬೆಂಕಿಯನ್ನು ಆರಿಸುವಂತೆ, ಜ್ಞಾನದಿಂದ ಮನದ ದುಃಖವನ್ನು ಶಾಂತಗೊಳಿಸಬೇಕು. ಮನಸ್ಸಿನ ದುಃಖವು ಶಾಂತವಾದರೆ, ದೇಹವೂ ಸ್ವಸ್ಥವಾಗುವುದು.
- यस्य भार्या ग्रुहेनास्ति साध्वी च प्रियवादिनी
अरण्यं तेन गन्तव्यं यथारण्यं तथा ग्रुहम्
ಯಸ್ಯ ಭಾರ್ಯಾ ಗೃಹೇ ನಾಸ್ತಿ ಸಾಧ್ವೀ ಚ ಪ್ರಿಯವಾದಿನೀ
ಅರಣ್ಯಂ ತೇನ ಗಂತವ್ಯಂ ಯಥಾರಣ್ಯಂ ತಥಾಗೃಹಮ್
If one’s wife is not virtuous and sweet-tempered. he had better go to a forest because his home ceases to be home.
ಸಾಧ್ವಿಯೂ ಪ್ರಿಯವಾದಿನಿಯೂ ಆದ ಮಡದಿ ಯಾರಿಗಿಲ್ಲವೋ ಅವನು ಕಾಡಿಗೆ ಹೋಗುವುದೇ ಲೇಸು. ಏಕೆಂದರೆ ಅವನಿಗೆ ಮನೆ ಮತ್ತು ಕಾಡು ಎರಡೂ ಒಂದೇ.
- शोकस्थान सहस्राणि हर्षस्थान शतानि च
दिवसे दिवसे मूढम् आविशन्ति न पन्डितम्
ಶೋಕಸ್ಥಾನಸಹಸ್ರಾಣಿ ಹರ್ಷ ಸ್ಥಾನಶತಾನಿ ಚ
ದಿವಸೇ ದಿವಸೇ ಮೂಢಮ್ ಆವಿಶಂತಿ ನ ಪಂಡಿತಮ್
It is only a dullard who is daily visited by thousands
of sorrows and hundreds of joys. It is not so in the case a learned person.
ಪ್ರತಿದಿನವೂ ಸಾವಿರಾರು ದುಃಖಗಳೂ, ನೂರಾರು ಸಂತೋಷಗಳೂ ಮೂರ್ಖನಿಗೆ ಮಾತ್ರ ಬರುತ್ತವೆ, ಪಂಡಿತನಿಗಲ್ಲ. ಅಂದರೆ ಸಮಚಿತ್ತವುಳ್ಳವರಿಗೆ ಸುಖ ದುಃಖಗಳು ಬಾಧಿಸುವುದಿಲ್ಲ.
- त्रुणानि भूमिरुदकं वाक्चतुर्थी च सून्रुता
एतान्यपि सतां गेहे नोच्छिद्यन्ते कदाचन
ತೃಣಾನಿ ಭೂಮಿರುದಕಂ ವಾಕ್ಚತುರ್ಥೀ ಚ ಸೂನ್ಯತಾ
ಏತಾನ್ಯಪಿ ಸತಾಂ ಗೇಹೇ ನೋಚ್ಛಿದ್ಯಂತೇ ಕದಾಚನ
Grass, land, water and pleasant talk – these four will never be absent from the homes of virtuous people.
ಸಜ್ಜನರ ಮನೆಗಳಲ್ಲಿ ಹುಲ್ಲು, ನೆಲ, ನೀರು ಮತ್ತು ಒಳ್ಳೆಯ
ಮಾತು – ಇವು ಎಂದಿಗೂ ಇಲ್ಲದೇ ಇರುವುದಿಲ್ಲ.
- मूर्खाणां पन्डिता द्वेष्या दरिद्राणां महाधनाः
अधार्मिकानां धर्मिष्ठाः विरूपाणां सुरूपिणः
ಮೂರ್ಖಾಣಾಂ ಪಂಡಿತಾ ದ್ವೇಷ್ಯಾ ದರಿದ್ರಾಣಾಂ ಮಹಾಧನಾಃ
ಅಧರ್ಮಿಕಾಣಾಂ ಧರ್ಮಿಷ್ಠಾ ವಿರೂಪಾಣಾಂ ಸುರೀಪಣಃ
Foolish people are enemies to the wise people;
Poor persons are enemies to the rich;
For the wicked people, the virtuous ones are enemies; and
For the deformed persons, the handsome ones are enemies.
ಮೂರ್ಖರಿಗೆ ಪಂಡಿತರು ಶತ್ರುಗಳು. ದರಿದ್ರರಿಗೆ ಧನಿಕರು
ಶತ್ರುಗಳು. ಪಾಪಿಗಳಿಗೆ ಧಾರ್ಮಿಕರೂ ಮತ್ತು ಕುರೂಪಿಗಳಿಗೆ
ಸುರೂಪಿಗಳು ಶತ್ರುಗಳು.
- एच मूढतमा लोके ए च बुद्धेः परं गताः
त एव सुखमेधन्ते मध्यमः क्लिश्यते जनः
ಯೇ ಚ ಮೂಢತಮಾ ಲೋಕೇ ಯೇ ಚ ಬುದ್ಧೇ ಪರಂ ಗತಾಃ
ತ ಏವಉಖಮೇಧಂತೇ ಮದ್ಯಮಃ ಕ್ಲಿಶ್ಯತೇ ಜನಃ
Those who are extremely ignorant and those who are highly Intelligent will alone remain always happy. But those caught In between will keep struggling.
ಯಾರು ಈ ಲೋಕದಲ್ಲಿ ಅತ್ಯಂತ ಮೂಢರೋ, ಯಾರು ಅತ್ಯಂತ ಬುದ್ಧಿಶಾಲಿಗಳೋ ಅವರು ಸುಖವಾಗಿರುತ್ತಾರೆ: ಮಧ್ಯಮದರ್ಜೆಯವನು ಕಷ್ಟಪಡುತ್ತಾನೆ.
- स्मरन्ति सुक्रुतान्येव न वैराणि क्रुतान्यपि
सन्तः परार्थं कुर्वाणाः नावेक्षन्ते प्रतिक्रियाम्
ಸ್ಮರಂತಿ ಸುಕೃತಾನ್ಯೇವ ನ ವೈರಾಣಿ ಕೃತಾನ್ಯಪಿ
ಸಂತಃ ಪರಾರ್ಥಂ ಕುರ್ವಾಣಾಃ ನಾವೇಕ್ಷಂತೇ ಪ್ರತಿಕ್ರಿಯಾಂ
Virtuous people always remember good actions
only, not the bad things done. They always act
for the benefit of others, not expecting any favour in return.
ಸಜ್ಜನರು ಒಳ್ಳೆಯದನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಕೆಟ್ಟದ್ದನ್ನು ಮಾಡಿದ್ದರೂ ನೆನಪಿಗೆ ತಂದುಕೊಳ್ಳುವುದಿಲ್ಲ. ಅವರು ಪರೋಪಕಾರಕ್ಕಾಗಿ ಕೆಲಸ ಮಾಡುವರೇಹೊರತು, ಪ್ರತ್ಯಪಕಾರವನ್ನು ಬಯಸುವುದಿಲ್ಲ.
- ययोरेव समं वित्तं ययोरेव समं श्रुतं
तयोर्विवाहः सख्यं च न तु पुष्ट विपुष्टयोः
ಯಯೋರೇವ ಸಮಂ ವಿತ್ತಂ ಯಯೋರೇವ ಸಮಂ ಶ್ರುತಂ
ತಯೋರ್ವಿವಾಹಃ ಸಖ್ಯಂ ಚ ನ ತು ಪುಷ್ಟವಿಪುಷ್ಟ್ಯೋ
It is best for people who are equal in their
status of wealth and learning to go in for
friendship and marriage, but not so for
those who are unequal in their status.
ಯಾರಿಗೆ ಹಣ ಮತ್ತು ವಿದ್ಯೆ ಸಮಾನವಾಗಿರುತ್ತದೆಯೋ ಅವರ ನಡುವೆ ಮಾತ್ರ ಮದುವೆಯೂ ಸ್ನೇಹವೂ ಪ್ರಶಸ್ತ. ಹೆಚ್ಚು ಕಡಿಮೆ ಇರುವವರಲ್ಲಿ ಅದು ಪ್ರಶಸ್ತವಲ್ಲ.
- सार्थः प्रवसतो मित्रं भार्या मित्रं ग्रुहे सतः
आतुरस्य भिषङ्मित्रं दानं मित्रं मरिष्यतः
ಸಾರ್ಥಃ ಪ್ರವಸತೋ ಮಿತ್ರಂ ಭಾರ್ಯಾ ಮಿತ್ರಂ ಗೃಹೇ ಸತಃ
ಆತುರಸ್ಯ ಭಿಷಂಗ್ಮಿತ್ರಂ ದಾನಂ ಮಿತ್ರಂ ಮರಿಷ್ಯತಃ
For a traveler, his companion is his
friend; For a home-bound person, the
wife is the friend; For a sick one, the
doctor is the friend; and For the one who
is dying, daana is the only friend.
ಪ್ರಯಾಣಿಕನಿಗೆ ಜೊತೆಯಲ್ಲಿ ಇರತಕ್ಕವನು ಮಿತ್ರ. ಮನೆಯಲ್ಲಿ ಇರುವವನಿಗೆ ಮಡದಿ ಮಿತ್ರಳು. ರೋಗಿಗೆ ವೈದ್ಯನು ಮಿತ್ರ. ಆದರೆ ಸಾಯುವವನಿಗೆ ದಾನವು ಮಾತ್ರ ಮಿತ್ರ.
- हरणं च परस्वानां परदाराभिमर्शनं
सुह्रुदश्च परित्यागः त्रयॊदोषाः क्षयावहाः
ಹರಣಂ ಚ ಪರಸ್ವಾನಾಂ ಪರದಾರಾಭಿಮರ್ಶನಂ
ಸುಹೃದಶ್ಚ ಪರಿತ್ಯಾಗಃ ತ್ರಯೋದೋಷಾಃ ಕ್ಷಯಾವಹಾಃ
Robbing the property of others,
having sexual contact with other women,
and discarding one’s own friends, — these three faults lead one to complete ruin.
ಅನ್ಯರ ಆಸ್ತಿಯನ್ನು ಅಪಹರಿಸುವುದು, ಪರಸ್ತ್ರೀಯರನ್ನು ಕೆಣಕುವುದು, ಸ್ನೇಹಿತರನ್ನು ತ್ಯಜಿಸುವುದು- ಇವು ಮೂರು ಸರ್ವನಾಶಮಾಡತಕ್ಕಂತಹ ದೋಷಗಳು.
- अचेष्टमानमासीनं श्रीः कन्चिदुपतिष्ठति
कर्मी कर्मा2पि क्रुत्या2न्यः न प्राश्य मधिगच्छति
ಅಚೇಷ್ಟಮಾನಮಾಸೀನಂ ಶ್ರೀಃ ಕಂಚಿದುಪತಿಷ್ಠತಿ
ಕರ್ಮೀ ಕರ್ಮಾಪಿ ಕೃತ್ಯಾನ್ಯಃ ನ ಪ್ರಾಶ್ಯಮಧಿಗಚ್ಛತಿ
Someone who keeps without doing any work is likely to amass huge wealth. But some others even by putting hard work may not get water to drink even.
ಏನೂ ಕೆಲಸ ಮಾಡದೆ ಇರುವ ಯಾರೋ ಒಬ್ಬನಿಗೆ ಬೇಕಾದಷ್ಟು ಹಣ ಸಿಗುವುದುಂಟು. ಆದರೆ ಕಷ್ಟಪಟ್ಟು ಕೆಲಸ ಮಾಡಿದರೂ ಕೆಲವರಿಗೆ ಕುಡಿಯಲು ನೀರೂ ಸಹ ಸಿಗುವುದಿಲ್ಲ.
239.अचोद्यमानानि यथा पुष्पाणि च फलानि च
स्वं कालं नातिवर्तन्ते तथा कर्म पुराक्रुतम्
ಅಚೋದ್ಯಮಾನಾನಿ ಯಥಾ ಪುಷ್ಪಾಣಿ ಚ ಫಲಾನಿ ಚ
ಸ್ವಂ ಕಾಲಂ ನಾತಿವರ್ತಂತೇ ತಥಾ ಕರ್ಮ ಪುರಾ ಕೃತಮ್
Flowers and fruits, without being prompted, do not fail to blossom and ripen at the right time. Similarly, actions done in the past come to fruition at the appropriate time.
ಹೂಗಳೂ ಹಣ್ಣುಗಳೂ ಯಾರ ಪ್ರೇರಣೆಯೂ ಇಲ್ಲದೆ ತಮ್ಮ ತಮ್ಮ ಕಾಲಾನುಸಾರ ಫಲಿಸುತ್ತವೆ. ಹಾಗೆಯೇ ಪುರಾಕೃತವಾದ ಕರ್ಮವೂ ಸಹ ತನ್ನ ಕಾಲ ಬಂದಾಗ ಫಲಿಸುತ್ತದೆ.
- दाने तपसि सत्ये च यस्य नोच्चरितं यशः
विद्यायामर्थलाभेवा मातुरुच्चार एव सः
ದಾನೇ ತಪಸಿ ಸತ್ಯೇ ಚ ಯಸ್ಯ ನೋಚ್ಚರಿತಂ ಯಶಃ
ವಿದ್ಯಾಯಾಮರ್ಥಲಾಭೇ ವಾ ಮಾತುರುಚ್ಚಾರ ಏವ ಸಃ
He who has failed to earn name and fame in making daana, doing tapas, speaking truth, acquiring Knowledge and earning wealth is no better than mother’s excrement.
ದಾನ, ತಪಸ್ಸು, ಸತ್ಯ, ವಿದ್ಯೆ ಅಥವಾ ಧನಸಂಪಾದನೆ- ಇವುಗಳಲ್ಲಿ ಯಾವನ ಕೀರ್ತಿ ಹರಡಿಲ್ಲವೋ ಆತನು ತಾಯಿಯ ಮಲವೇ ಸರಿ.
- न कालो दन्डमुद्यम्य शिरः क्रुन्तति कस्यचित्
कालस्य बलमेतावद् विपरीतार्थ दर्शनम्
ನ ಕಾಲೋ ದಂಡಮುದ್ಯಮ್ಯ ಶಿರಃ ಕೃಂತತಿ ಕಸ್ಯಚಿತ್
ಕಾಲಸ್ಯ ಬಲಮೇತಾವದ್ ವಿಪರೀತಾರ್ಥದರ್ಶನಮ್
Yama does not use his weapon to chop off the head by way of punishment. His strength lies in making the person look at things from a wrong perspective.
ಯಮನು ದಂಡಾಯುಧವನ್ನೆತ್ತಿ ಯಾರ ತಲೆಯನ್ನೂ ಕತ್ತರಿಸುವುದಿಲ್ಲ. ಅವನ ಬಲ ಇಷ್ಟೇ-ವಿಷಯವನ್ನು ವಿರುದ್ಧವಾಗಿ ತಿಳಿದುಕೊಳ್ಳುವಂತೆ ಮಾಡುವುದು.
- न कालस्य प्रियः कश्चिन् न द्वॆष्यः कुरुसत्तम
न मध्यस्थः क्वचित् कालः सर्वं कालः प्रकर्षति
ನ ಕಾಲಸ್ಯ ಪ್ರಿಯಃ ಕಶ್ಚಿನ್ ದ್ವೇಷ್ಯಃ ಕುರುಸತ್ತಮ
ನ ಮಧ್ಯಸ್ಥಃ ಕ್ವಚಿತ್ ಕಾಲಃ ಸರ್ವಂ ಕಾಲಃ ಪ್ರಕರ್ಷತಿ
ಯುಧಿಷ್ಠಿರ, ಕಾಲನಿಗೆ ಪ್ರಿಯನೂ ಇಲ್ಲ; ವೈರಿಯೂ ಇಲ್ಲ. ಅವನು ಎಂದಿಗೂ ಮಧ್ಯಸ್ಥನೂ ಅಲ್ಲ. ಕಾಲನು ಸರ್ವರನ್ನೂ ಎಳೆದುಕೊಂಡು ಹೋಗುತ್ತಾನೆ.
O Udhishthira, Time neither endears nor antagonizes anyone. Nor is it neutral. It just drags everyone along with it.
- यथा बीजं विनाक्षेत्र मुप्तं भवति निष्फलः
तथा पुरुष कारेण विना दैवं न सिद्ध्यति
ಯಥಾ ಬೀಜಂ ವಿನಾ ಕ್ಷೇತ್ರ ಮುಪ್ತಂ ಭವತಿ ನಿಷ್ಫಲಂ
ತಥಾ ಪುರುಷಕಾರೇಣ ವಿನಾ ದೈವಂ ನ ಸಿದ್ಧ್ಯತಿ
Just as it is useless to cultivate the land without sowing seeds, so without putting in human effort, one cannot expect favour from the Divine Power.
ಬೀಜವು ಇಲ್ಲದೆ ಹೊಲವನ್ನು ಉತ್ತಿದರೆ ಅದು ನಿಷ್ಫಲವಾಗುತ್ತದೆ. ಹಾಗೆಯೇ ಪುರುಷ ಪ್ರಯತ್ನವಿಲ್ಲದಿದ್ದರೆ, ದೈವವು ಫಲವನ್ನೀಯುವುದಿಲ್ಲ.
- यश्च दिष्टपरोलोके यश्चापि हठवादिकः
उभावपि शरावेतौ कर्म बुद्धिः प्रशस्यते
ಯಶ್ಚ ದಿಷ್ಟಪರೋ ಲೊಕೇ ಯಶ್ಚಾಪಿ ಹಠವಾದಿಕಃ
ಉಭಾವಪಿ ಶಠಾವೇತೌ ಕರ್ಮಬುದ್ಧಿಃ ಪ್ರಶಸ್ಯತೇ
He who believes that everything happens according to the will of Fate and he who arrogantly believes that human effort alone will produce results – both are foolish to think so. It is only he who gets involved in doing things with a sense of duty deserves all praise.
ಲೋಕದಲ್ಲಿ ಯಾರು ದೈವವನ್ನೇ ನಂಬಿರುವನೋ, ಯಾರು ಪೌರುಷವನ್ನೇ ನಂಬಿ ಹಠವಾದಿಯಾಗಿರುವನೋ ಅವರಿಬ್ಬರೂ ಮೂರ್ಖರೇ ಸರಿ. ಇದು ಕರ್ತವ್ಯವೆಂದು ಕಾರ್ಯತತ್ಪರನಾದವನು ಮಾತ್ರ ಪ್ರಶಂಸಾರ್ಹ.
- विधातृ विहितं मार्गं न कश्चिदतिवर्तते
कालमूलमिदं सर्वं भावाभावौ सुखासुखे
ವಿಧಾತೃ ವಿಹಿತಂ ಮಾರ್ಗಂ ನ ಕಶ್ಚಿದ್ ಅತಿವರ್ತತೇ
ಕಾಲಮೂಲಮಿದಂ ಸರ್ವಂ ಭಾವಾಭಾವೌ ಸುಖಾಸುಖೇ
No one can avoid the path determined by Fate:
Wealth, poverty, happiness and sorrow – everything
is dependent on Time.
ದೈವವು ತೋರಿಸಿದ ದಾರಿಯನ್ನು ಯಾರೂ ಉಲ್ಲಘಿಂಸಲಾರರು. ಸಂಪತ್ತು, ಅದರ ನಾಶ, ಸುಖ, ದುಖಃ ಎಲ್ಲವೂ ಕಾಲಕ್ಕೆ ಅಧೀನವಾಗಿದೆ.
- शुभेन कर्मणा सौख्यं दुःखं पापेन् कर्मणा
कृतं भवति सर्वत्र नाकृतं विद्यते क्वचित्
ಶುಭೇನ ಕರ್ಮಣಾ ಸೌಖ್ಯಂ ದುಃಖಂ ಪಾಪೇನ ಕರ್ಮಣಾ
ಕೃತಂ ಭವತಿ ಸರ್ವತ್ರ ನಾಕೃತಂ ವಿದ್ಯತೇ ಕ್ವಚಿತ್
Good karma yields happiness and bad karma
produces sorrow. Everything is the result of some
karma. Nothing happens without the performance
of karma.
ಪುಣ್ಯಕರ್ಮದಿಂದ ಸೌಖ್ಯವುಂಟಾಗುತ್ತದೆ. ಪಾಪಕರ್ಮದಿಂದ
ದುಖಃವುಂಟಾಗುತ್ತದೆ. ಎಲ್ಲವೂ ಕರ್ಮದ ಫಲ. ಕರ್ಮ ಮಾಡದೆ ಯಾವುದೂ ಘಟಿಸುವುದಿಲ್ಲ
- सुवर्ण पुष्पां प्रुथिवीं चिन्वन्ति पुरुषास्त्रयः
शूरश्च क्रुतविद्यश्च यश्च जानाति सेवितुम्
ಸುವರ್ಣಪುಷ್ಪಾಂ ಪೃಥಿವೀಂ ಚಿನ್ವಂತಿ ಪುರುಷಾಸ್ತ್ರಯಃ
ಶೂರಸ್ಚ ಕೃತವಿದ್ಯಶ್ಚ ಯಶ್ಚ ಜಾನಾತಿ ಸೇವಿತುಂ
The brave, the learned and the adept at
doing service – these three collect flowers of gold from the creeper called the earth.
ಶೂರ, ವಿದ್ಯಾವಂತ ಮತ್ತು ಸೇವಾಕಾರ್ಯದಲ್ಲಿ ದಕ್ಷನಾದವನು – ಈ ಮೂವರು ಭೂಮಿಯೆಂಬ ಲತೆಯಿಂದ ಚಿನ್ನದ ಹೂಗಳನ್ನು ಬಿಡಿಸಿಕೊಳ್ಳುತ್ತಾರೆ.
- अनित्यं यव्वनं रूपं जीवितं द्रव्य सन्चयः
आरोग्यं प्रिय संवासो गृध्येदेषु न पन्डितः
ಅನಿತ್ಯಂ ಯೌವನಂ ರೂಪಂ ಜೀವಿತಂ ದ್ರವ್ಯಸಂಚಯಃ
ಆರೋಗ್ಯಂ ಪ್ರಿಯಸಂವಾಸೋ ಗೃಧ್ಯೇದೇಷು ನ ಪಂಡಿತಃ
Youthfulness, attractive appearance, existence, acquisition of wealth, health and the company of virtuous people — all these are transient. A wise person will not crave for them.
ಯೌವನ, ರೂಪ, ಜೀವಿತ, ಧನಸಂಗ್ರಹ, ಆರೋಗ್ಯ, ಪ್ರಿಯಜನಸಹವಾಸ- ಇವೆಲ್ಲವೂ ಅನಿತ್ಯ. ಪಂಡಿತನು ಇವುಗಳಿಗಾಗಿ ಆಸೆ ಪಡುವುದಿಲ್ಲ.
- नित्यं क्रोधात्तपो रक्षेत् धर्मं रक्षेच्च मत्सरात्
विद्यां मानापमानभ्याम् आत्मानं तु प्रमादतः
ನಿತ್ಯಂ ಕ್ರೋಧಾತ್ತಪೋ ರಕ್ಷೇತ್ ಧರ್ಮಂ ರಕ್ಷೇಚ್ಚ ಮತ್ಸರಾತ್
ವಿದ್ಯಾಂ ಮಾನಾಪಮಾನಾಭ್ಯಾಮ್ ಆತ್ಮಾನಂ ತು ಪ್ರಮಾದತಃ
Protect your tapas from anger. Protect dharma
from jealousy. Acquire and preserve knowledge
Without yielding to praise or condemnation and protect yourself from going astray.
ಕ್ರೋಧ ಬರದಂತೆ ತಪಸ್ಸನ್ನೂ, ಹೊಟ್ಟೆಕಿಚ್ಚು ಪಡದೆ ಧರ್ಮವನ್ನೂ ರಕ್ಷಿಸಿಕೊಳ್ಳಬೇಕು. ಮಾನ – ಅಪಮಾನಗಳಿಗೆ ಜಗ್ಗದೆ ವಿದ್ಯೆಯನ್ನು ಸಂಗ್ರಹಿಸಿ ಉಳಿಸಿಕೊಳ್ಳಬೇಕು. ತಪ್ಪುದಾರಿ ತುಳಿಯದಂತೆ ತನ್ನ ಆತ್ಮವನ್ನು ಕಾಪಾಡಿಕೊಳ್ಳಬೇಕು.
- यच्च कामसुखं लोके यच्च दिव्यं महत् सुखं
तृष्णाक्षय सुखस्यैते नार्हतः षोडशीं कलाम्
ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ ಸುಖಂ
ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್
The pleasure derived from the gratification of lust in this world and the great pleasure obtaining in heaven – these two do not come near even one-sixteenth part of the joy that comes by renouncing desire.
ಲೋಕದಲ್ಲಿ ಕಾಮಸುಖವೆಂಬುದೇನುಂಟೋ, ದೇವಲೋಕದ ಮಹಾಸುಖವೆಂಬುದೇನುಂಟೋ- ಇವೆರಡೂ, ಆಸೆಯನ್ನು ಬಿಡುವುದರಿಂದಾಗುವ ಸುಖದ ಹದಿನಾರನೆಯ ಒಂದಂಶವೂ ಅಲ್ಲ.
251.अक्रोधेन जयेत् क्रोधम् असाधुं साधुना जयेत्
जयेत् कदर्यं दानेन जयेत् सत्येन चानृतम्
ಅಕ್ರೋಧೇನ ಜಯೇತ್ ಕ್ರೋಧಮ್ ಅಸಾಧುಂ ಸಾಧುನಾ ಜಯೇತ್
ಜಯೇತ್ ಕದರ್ಯಂ ದಾನೇನ ಜಯೇತ್ ಸತ್ಯೇನ ಚಾನೃತಮ್
Anger should be conquered by patience;
the evil by good; so also, the miser should be won over by daana; and falsehood by truth.
ತಾಳ್ಮೆಯಿಂದ ಕೋಪವನ್ನೂ, ಒಳ್ಳೆಯದರಿಂದ ಕೆಟ್ಟದ್ದನ್ನೂ ಜಯಿಸಬೇಕು. ಜಿಪುಣನನ್ನು ದಾನದಿಂದಲೂ, ಸುಳ್ಳನ್ನು ಸತ್ಯದಿಂದಲೂ ಜಯಿಸಬೇಕು.
- धारणाद्धर्म इत्याहुः र्धर्मो धारयते प्रजाः
यत् स्याद्धारण संयुक्तं स धर्म इति निश्चयः
ಧಾರಣಾದ್ಧರ್ಮ ಇತ್ಯಾಹುಃ ಧರ್ಮೋ ಧಾರಯತೇ ಪ್ರಜಾಃ
ಯತ್ ಸ್ಯಾದ್ಧಾರಣಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ
That which supports or holds together is called dharma. It supports and protects people.
That which is associated with the idea of protection and support surely signifies dharma.
ಧಾರಣ ಎಂದರೆ ಮನಸನ್ನು ಹಿಡಿದು ನಿಲ್ಲಿಸುವುದು ಮತ್ತು ಧರ್ಮಪಾಲನೆ ಎಂದು ಅರ್ಥ. ಹಾಗಾಗಿ ಧಾರಣೆ ಮಾಡುವುದರಿಂದ ‘ಧರ್ಮ’ ಎನ್ನುತ್ತಾರೆ. ಧರ್ಮವು ಪ್ರಜೆಗಳನ್ನು ಧರಿಸುತ್ತದೆ. ಯಾವುದರಲ್ಲಿ ಧಾರಣೆಯುಂಟೋ ಅದು ಧರ್ಮವೆಂದು ನಿಶ್ಚಯ.
- नाधर्मश्चरितो राजन् सद्यः फलति गौरिव
शनैरावर्त्यमानो हि कर्तुर्मूलानि कृन्तति
ನಾಧರ್ಮಶ್ಚರಿತೋ ರಾಜನ್ ಸದ್ಯಃ ಫಲತಿ ಗೌರಿವ
ಶನೈರಾವರ್ತ್ಯಮಾನೋ ಹಿ ಕರ್ತುರ್ಮೂಲಾನಿ ಕೃಂತತಿ
O Rajan,
When a person performs adharma, it does not produce the result immediately, like the cow; but slowly it recoils and strikes at the very base of the performer of adharma.
ಓ ರಾಜನೇ ಯಾರಾದರೂ ಅಧರ್ಮವನ್ನಾಚರಿಸಿದರೆ ಅದು ಹಸುವಿನಂತೆ ಕೂಡಲೆ ಫಲವನ್ನೀಯುವುದಿಲ್ಲ. ಆದರೆ ಅದು ಮೆಲ್ಲನೆ ತಿರುಗಿ, ಅಧರ್ಮಿಯ ಬುಡವನ್ನೇ ಕಡಿದುಹಾಕುತ್ತದೆ.
- नहीदृशं संवननं त्रिषुलोकेषु विद्यते
दयामैत्री च भूतेषु दानं च मधुरा च वाक्
ನ ಹೀದೃಶಂ ಸಂವನನಂ ತ್ರಿಷುಲೋಕೇಷು ವಿದ್ಯತೇ
ದಯಾ ಮೈತ್ರೀ ಚ ಭೂತೇಷು ದಾನಂ ಚ ಮಧುರಾ ಚ ವಾಕ್
Showing compassion and friendliness towards all beings, giving daana and making agreeable speech – they constitute such a pleasing and noble quality that is not to be found in all the three worlds.
ಪ್ರಾಣಿಗಳಲ್ಲಿ ದಯೆ, ಸ್ನೇಹ, ದಾನ, ಪ್ರಿಯವಾದ ಮಾತು – ಇಂತಹ ಪ್ರೀತಿಜನಕವಾದ ಉತ್ತಮ ಗುಣವು ಮೂರು ಲೋಕಗಳಲ್ಲಿ ಮತ್ತೊಂದಿಲ್ಲ.
- मृषावादं परिहरेत् कुर्यात् प्रियमयाचितः
नच कामान्न संरंभात् नद्वेषाद् धर्म मुत्सृजेत्
ಮೃಷಾವಾದಂ ಪರಿಹರೇತ್ ಕುರ್ಯಾತ್ ಪ್ರಿಯಮಯಾಜಿತಃ
ನ ಚ ಕಾಮಾನ್ನ ಸಂರಂಭಾತ್ ನದ್ವೇಷಾದ್ ಧರ್ಮಮುತ್ಸೃಜೇತ್
One should not pick up an argument for no reason. One should do good things though unsolicited. In the name of desire, pride and enmity, one should not give up dharma.
ವ್ಯರ್ಥವಾಗಿ ವಾದಕ್ಕಿಳಿಯಬಾರದು. ಅಪ್ರಾರ್ಥಿತನಾಗಿ ಒಳ್ಳೆಯದನ್ನು ಮಾಡಬೇಕು. ಕಾಮ, ದುಡುಕು, ದ್ವೇಷಗಳಿಂದ ಧರ್ಮವನ್ನೆಂದಿಗೂ ತ್ಯಜಿಸಬಾರದು.
- यत् स्यादहिंसा संयुक्तं स धर्म इति निश्चयः
अहिंसार्थाय भूतानां धर्म प्रवचनं कृतम्
ಯತ್ ಸ್ಯಾದಹಿಂಸಾಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ
ಅಹಿಂಸಾರ್ಥಾಯ ಭೂತಾನಾಂ ಧರ್ಮ ಪ್ರವಚನಂ ಕೃತಮ್
That which is associated with ahimasa is dharma for sure; discourse on dharma is intended to promote ahimsa towards all beings.
ಯಾವುದರಲ್ಲಿ ಹಿಂಸೆ ಇಲ್ಲವೋ ಅದು ಧರ್ಮವೆಂಬುದು ನಿಶ್ಚಿತ. ಪ್ರಾಣಿಗಳಿಗೆ ಹಿಂಸೆಯಾಗಬಾರದೆಂದೇ ಧರ್ಮಪ್ರವಚನ ನಡೆದಿದೆ.
- यस्य कृत्यं न विघ्नन्ति शीतमुष्णं भयं रतिः
समृद्धि रसमृद्धिर्वा स वै पन्डित उच्यते
ಯಸ್ಯ ಕೃಂತ್ಯಂ ನ ವಿಘ್ನಂತಿ ಶೀತಮುಷ್ಣಂ ಭಯಂ ರತಿಃ
ಸಮೃದ್ಧಿ ರಸಮೃದ್ಧಿರ್ವಾ ಸ ವೈ ಪಂಡಿತ ಉಚ್ಯತೇ
Cold, heat, fear, love, wealth and poverty – none of them will cause any obstruction to the work undertaken by that person who goes by the name pandita.
ಯಾರ ಕೆಲಸಕ್ಕೆ ಚಳಿ, ಸೆಕೆ, ಭಯ, ಪ್ರೀತಿ, ಸಂಪತ್ತು ಮತ್ತು ಬಡತನ ಇವು ಯಾವುವೂ ಅಡ್ದಿಯಾಗುವುದಿಲ್ಲವೋ ಅವನನ್ನು ಪಂಡಿತನೆನ್ನುತ್ತಾರೆ.
- यस्य नास्ति स्वयं प्रञ्जा केवलं तु बहुश्रुतः
न स जानाति शस्त्रार्थं दर्वी सूपरसानि
ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಕೇವಲಂ ತು ಬಹುಶ್ರುತಃ
ನ ಸ ಜಾನಾತಿ ಶಾಸ್ತ್ರಾರ್ಥಂ ದರ್ವೀ ಸೂಪರಸಾನಿವ
He who has no spirit of enquiry but has merely gathered a lot of information does not understand the secret of sastras; he is like the spoon that does not know the taste of food that it serves.
ಯಾರು ಸ್ವಯಂ ವಿಚಾರಶಕ್ತಿ ಇಲ್ಲದೆ ಬರಿಯ ಪಂಡಿತನು ಮಾತ್ರ ಆಗಿರುವನೋ, ಅವನಿಗೆ ಶಾಸ್ತ್ರದ ರಹಸ್ಯಾರ್ಥವು ತಿಳಿಯುವುದಿಲ್ಲ. ಹೇಗೆಂದರೆ ಸೌಟಿಗೆ ಅಡಿಗೆಯ ರುಚಿ ತಿಳಿಯದಿರುವಂತೆ.
- यद्भूतहितमत्यन्तं तत्सत्यमितिधारणा
विपर्ययकृतोधर्मः पश्यधर्मस्य सूक्ष्मताम्
ಯದ್ ಭೂತಹಿತಮತ್ಯಂತಂ ತತ್ಸತ್ಯಮಿತಿ ಧಾರಣಾ
ವಿಪರ್ಯಯಕೃತೋಧರ್ಮಃ ಪಶ್ಯಧರ್ಮಸ್ಯ ಸೂಕ್ಷ್ಮತಾಮ್
It is well established that that which is highly beneficial to every being is to be known as the Truth. What is contrary to this, that is what is not helpful to the beings, is Adharma.
See the subtle nature of Dharma.
ಯಾವುದು ಪರಮಾರ್ಥದಲ್ಲಿ ಪ್ರಾಣಿಗಳಿಗೆ ಹಿತಕಾರಿಯೋ ಅದೇ ಸತ್ಯವೆಂದು ನಿಶ್ಚಿತ. ಇದಕ್ಕೆ ವಿರುದ್ಧವಾದದ್ದು ಅಂದರೆ ಪ್ರಾಣಿಗಳಿಗೆ ಅಹಿತಕಾರಿಯಾದದ್ದು ಅಧರ್ಮ. ಧರ್ಮವು ಎಷ್ಟು ಸೂಕ್ಷ್ಮವೆಂಬುದನ್ನು ನೋಡಿ.
- नाप्राप्यमभिवान्छन्ति नष्टं नेच्छन्ति शोचितुम्
आपत्सु च न मुह्यन्ति नराः पन्डितबुद्धयः
ನಾಪ್ರಾಪ್ಯಮಭಿವಾಂಛಂತಿ ನಷ್ಟಂ ನೇಚ್ಛಂತಿ ಶೋಚಿತುಂ
ಆಪತ್ಸು ಚ ನ ಮುಹ್ಯಂತಿ ನರಾಃ ಪಂಡಿತಬುದ್ಧಯಃ
Wise people with discriminating power do not crave for things not within reach, do not regret for the things lost and do not get perplexed when calamity strikes.
See the subtle nature of Dharma.
ವಿವೇಕಶಾಲಿಗಳಾದ ವಿದ್ವಾಂಸರು ಅಲಭ್ಯವಾದುದನ್ನು ಬಯಸುವುದಿಲ್ಲ. ನಷ್ಟವಾದದ್ದಕ್ಕೆ ವ್ಯಥೆಪಡುವುದಿಲ್ಲ. ಆಪತ್ಕಾಲದಲ್ಲಿ ಮೋಹಗೊಳ್ಳುವುದೂ ಇಲ್ಲ.
- प्रञया मानसं दुःखं हन्याच्छारीरमौषधैः
एतद्विञानसामर्थ्यं न बालैः समतामियात्
ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಛಾರೀರಮೌಷಧೈಃ
ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್
Suffering in the mind should be got over by
proper understanding and pain in the body by proper
medicine. This is the capacity one acquires with wisdom.
One should grow up from the state of childhood immaturity.
ಪ್ರಜ್ಞಾಶಕ್ತಿಯಿಂದ ಮಾನಸ ದುಃಖವನ್ನು ಔಷಧಗಳಿಂದ ಶರೀರ ದುಃಖವನ್ನು ಹೋಗಲಾಡಿಸಿಕೊಳ್ಳಬೇಕು. . ಜ್ಞಾನದ ಸಾಮರ್ಥ್ಯವೆಂದರೆ ಇದೇ. ಅದನ್ನು ಬಿಟ್ಟು ಮಕ್ಕಳಂತೆ ಇರಬಾರದು.
- यत् शृतं न विरागाय न धर्माय न शान्तये
सुबद्धमपि शब्देन काकवाशितमेव तत्
ಯತ್ ಶ್ರುತಂ ನ ವಿರಾಗಾಯ ನ ಧರ್ಮಾಯ ನ ಶಾಂತಯೇ
ಸುಬದ್ಧಮಪಿ ಶಬ್ದೇನ ಕಾಕವಾಶಿತಮೇವ ತತ್
Any discourse that does not highlight vairagya,
Dharma and Shanti, however much verbal beauty it may have, is no better than the harsh sounds made by the crow.
ವೈರಾಗ್ಯ, ಧರ್ಮ ಅಥವ ಶಾಂತಿಗೆ ಉಪಯುಕ್ತವಾಗದ ವಿಚಾರವು ಎಷ್ಟೇ ಶಬ್ದ ಜಾಲದಿಂದ ರಚಿತವಾಗಿದ್ದರೂ ಅದು ಕಾಗೆಯ ಕೂಗೇ ಸರಿ.
263.सुखार्थिनः कुतो विद्या नास्ति विद्यार्थिनः सुखं
सुखार्थी वा त्यजेद्विद्यां विद्यार्थी वा त्यजेत् सुखम्
ಸುಖಾರ್ಥಿನಃ ಕುತೋ ವಿದ್ಯಾ ನಾಸ್ತಿ ವಿದ್ಯಾರ್ಥಿನಃ ಸುಖಂ
ಸುಖಾರ್ಥೀ ವಾ ತ್ಯಜೇದ್ವಿದ್ಯಾಂ ವಿದ್ಯಾರ್ಥೀ ವಾ ತ್ಯಜೇತ್ ಸುಖಮ್
How can one acquire knowledge when his interest is in seeking pleasure? How can one enjoy pleasures if his aim is to acquire knowledge?
So one should give up knowledge if he wants pleasure. Similarly, one should give up pleasures to acquire knowledge.
ಸುಖಾಪೇಕ್ಷಿಗೆ ವಿದ್ಯೆ ಹೇಗೆ ಬಂದೀತು? ವಿದ್ಯಾಪೇಕ್ಷಿಗೆ ಸುಖ ಇರುವುದಿಲ್ಲ. ಆದ್ದರಿಂದ ಸುಖ ಬೇಕಾದರೆ ವಿದ್ಯೆಯನ್ನೂ ವಿದ್ಯೆ ಬೇಕಾದರೆ ಸುಖವನ್ನೂ ತ್ಯಜಿಸಬೇಕು.
- अहन्यहनि भूतानि गच्छन्तीह यमालयं
शेषाः स्तावरमिच्छन्ति किमाश्चर्यमतःपरम्
ಅಹನ್ಯಹನಿ ಭೂತಾನಿ ಗಚ್ಛಂತೀಹ ಯಮಾಲಯಂ
ಶೇಷಾಃ ಸ್ಥಾವರಮಿಚ್ಛಂತಿ ಕಿಮಾಶ್ಚರ್ಯಮತಃಪರಮ್
Everyday the beings are heading towards yama’s home. Yet, the survivors hope to stay alive for ever. What is more surprising than this?
ಪ್ರತಿದಿನವೂ ಜೀವಿಗಳು ಯಮನ ಮನೆಗೆ ಹೋಗುತ್ತಲೇ ಇದ್ದಾರೆ. ಆದರೂ ಉಳಿದವರು ಶಾಶ್ವತವಾಗಿರಲು ಬಯಸುತ್ತಾರೆ. ಇದಕ್ಕಿಂತ ಹೆಚ್ಚಿನ ಆಶ್ಚರ್ಯ ಯಾವುದು?
- धर्मार्थं यस्य वित्तेहा वरं तस्य निरीहता
प्रक्षालनाद्दि पन्कस्य श्रेयो न स्पर्शनं नृणाम्
ಧರ್ಮಾರ್ಥಂ ಯಸ್ಯ ವಿತ್ತೇಹಾ ವರಂ ತಸ್ಯ ನಿರೀಹತಾ
ಪ್ರಕ್ಷಾಲನಾದ್ಧಿ ಪಂಕಸ್ಯ ಶ್ರೇಯೋ ನ ಸ್ಪರ್ಶನಂ ನೃಣಾಮ್
If a person desires to make money for the sake of dharmic activity, it is better he gives up that desire. Instead of trying to wash off the sticking mud, it is better not to touch it at all.
ಧರ್ಮಕಾರ್ಯವನ್ನು ಮಾಡುವುದಕ್ಕಾಗಿ ಯಾರಿಗೆ ಹಣದ ಆಸೆಯುಂಟೋ, ಅವರು ಆ ಆಸೆಯನ್ನು ತ್ಯಜಿಸುವುದೇ ಒಳ್ಳೆಯದು. ಏಕೆಂದರೆ, ಕೆಸರನ್ನು ತೊಳೆದುಕೊಳ್ಳುವುದಕ್ಕಿಂತ ಅದನ್ನು ಮುಟ್ಟದಿರುವುದೇ ಒಳ್ಳೆಯದು.
- न जातु कामः कामानाम् उपभॊगॆन शाम्यति
हविषा कृष्णवर्त्मैव भूय एवाभिवर्धते
ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ
ಹವಿಷಾ ಕೃಷ್ಣವರ್ತ್ಮೈವ ಭೂಯ ಏವಾಭಿವರ್ಧತೇ
Desire will not subside with the enjoyment of
its objects. When ghee is offered as oblation
into fire, the fire gets intensified.
ಕಾಮವು ವಿಷಯೋಪಭೋಗದಿಂದ ಎಂದಿಗೂ ಶಾಂತವಾಗುವುದಿಲ್ಲ. ತುಪ್ಪದ ಹವಿಸ್ಸಿನಿಂದ ಬೆಂಕಿಯು ಹೆಚ್ಚುವಂತೆ, ಅದು ಇನ್ನೂ ಪ್ರಬಲವಾಗುತ್ತದೆ.
- नाभिनन्देत मरणं नाभिनन्देत जीवितं
कालमेव प्रतीक्षेत निदेशं भृतको यथा
ನಾಭಿನಂದೇತ ಮರಣಂ ನಾಭಿನಂದೇತ ಜೀವಿತಮ್
ಕಾಲಮೇವ ಪ್ರತೀಕ್ಷೇತ ನಿದೇಶಂ ಭೃತಕೋ ಯಥಾ
Without applauding either death or life, we should wait, anticipating Time, like a servant waiting to carry out the command from his master.
ಸಾವನ್ನಾಗಲಿ, ಬದುಕನ್ನಾಗಲೀ, ಅಭಿನಂದಿಸಬಾರದು. ಹೇಗೆ ಸೇವಕನು ಆಜ್ಞೆಯನ್ನು ಪಾಲಿಸುತ್ತಾನೋ ಹಾಗೆ ಕಾಲವನ್ನೇ ಎದುರುನೋಡುತ್ತಿರಬೇಕು.
- कर्मण्येवाधिकारस्ते माफलेषु कदाचन
माकर्म फल हेतुर्भू मा तॆ सङ्गो2स्त्वकर्मणि
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋಸ್ತ್ವಕರ್ಮಣಿ
You have the right to work alone. You have no
claim on its results. The results of actions
should not motivate you to act. At the same
time, do not get attached to inaction.
ಕರ್ಮ ಮಾಡುವುದರಲ್ಲಿಯೇ ನಿನಗೆ ಅಧಿಕಾರ. ಕರ್ಮಫಲದಲ್ಲಿ ಆಸಕ್ತಿ ಯಾವಾಗಲೂ ಬೇಡ. ಸಕಾಮಭಾವದಿಂದ ಕರ್ಮವನ್ನು ಮಾಡಬೇಡ. ಕರ್ಮಗಳನ್ನು ಬಿಟ್ಟುಬಿಡಬೇಕೆಂಬ ಆಗ್ರಹವೂ ನಿನಗೆ ಬೇಡ.
- सर्वागमानामाचारः प्रथमं परिकल्पते
आचार प्रभवो धर्मः धर्मस्य प्रभुरच्युतः
ಸರ್ವಾಗಮಾನಾಮಚಾರಃ ಪ್ರಥಮಂ ಪರಿಕಲ್ಪತೇ
ಆಚಾರ ಪ್ರಭುವೋ ಧರ್ಮಃ ಧರ್ಮಸ್ಯ ಪ್ರಭುರಚ್ಯುತಃ
All scriptures consider right conduct as the
foremost requisite. Dharma is based upon
right conduct, and of Dharma, Achyuta is the master.
ಎಲ್ಲಾ ಶಾಸ್ತ್ರಗಳೂ ಉತ್ತಮ ನಡತೆಯನ್ನು ಪ್ರಮುಖವನ್ನಾಗಿಸಿದೆ. ಉತ್ತಮ ನಡತೆಯ ಮೇಲೆಯೇ ಧರ್ಮವು ನಿಂತಿದೆ ಮತ್ತು ಅಚ್ಯುತನೇ ಧರ್ಮದ ಒಡೆಯ.
- यदा यदा हि धर्मस्य् ग्लानिर्भवति भारत
अभ्युत्थानमधर्मस्य तदात्मानं सृजाम्यहम्
ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್
O descendent of Bharata, whenever dharma declines
and adharma prevails, I manifest myself.
ಹೇ ಭರತ ಕುಲೋಧ್ಭವ ಧರ್ಮವು ನಷ್ಟವಾಗಿ ಅಧರ್ಮವು ಅಭಿವೃದ್ಧಿಯಾದಾಗ ನಾನು ಜನ್ಮವನ್ನು ಎತ್ತುತ್ತೇನೆ.
THE RAMAYANA
Subhashitas
Introduction
Veda Vyasa, according to the Skanda Purana, approached Sanat Kumara to find out who Valmiki was and how he became a Maharshi. Before his transformation, Valmiki was known by the name Agni Sharma, born to a Brahmin couple, Sumati and Kaushiki. As a boy, Agni Sharma was initiated to Vedic studies. But he did not show interest in learning Vedas. A severe famine forced the family to move to a forest where they put up a hut and survived on whatever they were able to gather in the forest. Agni Sarma slowly got acquainted with some thieves and started way- laying the passers- by. Once, a group of rishis were passing by. As usual, Agni Sharma stopped and demanded them to hand over their belongings. They brought about a transformation by making him realize the enormous sin he was committing and nobody was willing to share the burden of his sin. Then the rishis advised him to go spiritual, turn inward and do tapas. Accordingly he started doing tapas. In course of time, he was enveloped by a huge ant hill.
After many years, the same rishis who had transformed him came to that place and were surprised to find a big ant hill, from which some sounds were heard and a strange glow was emanating. They called him out and named him Valmiki because he came out of a VALMIKA or ant hill. Then they advised him to go northward and continue his tapas. This is one of the several versions of the story of Valmiki prevalent all over India.
Valmiki chose a convenient place near the River Ganga and set up his ashram. In course of time his tapas began to show results. One day he was delighted to find Narada Maharshi approaching his ashram. Inviting him cordially, Valmiki wanted to know if there was any person, existing then, possessing the sixteen qualities that define the character of an exemplary person – a man of high excellence. Narada replied that there was one by name Rama belonging to Iksvaku dynasty who met all the requirements stated by Valmiki. Then Narada gave a brief outline of the story of Rama and left that place.
Valmiki was quite excited by the story of Rama. Soon he proceeded to the nearby River Tamasa along with his disciple Bharadvaja. He enjoyed the sight of the clear water of the river. He was attracted by the sight of a pair of Krouncha birds, a male and a female, enjoying their union. Suddenly, a hunter’s arrow hit the male bird and killed it. The female bird was filled with pain, looking at the blood-soaked male bird lying on the ground. Valmiki was moved by the wailing female bird. Sorrow, compassion and anger welled up in his heart. He cursed the hunter in words that formed into a sloka of Anushtup meter. This is the birth of the poet in Valmiki and the first sloka (metrical poetic composition) in Sanskrit literature. This is the verse form used by the Adi Kavi Vamiki to compose the Adi Kavya based on the storyline given by Narada Maharshi. Then Brahma appeared before Valmiki and blessed him to go ahead with the composition of the Ramayana.
Keeping Dharma and Satya as his guiding principles, Rama approached every situation in his life with dignity and equanimity. His life became a series of disasters. Yet never did he waver from truthfulness and dharma. What makes him lovable, noble and adorable is the gracefulness with which he conducted himself with utmost balance. It is for these qualities that Rama is worshipped all over India.
We are indebted to Valmiki Maarshi for giving us the Ramayana, which stands as the Crowning Jewel of our culture. A few slokas from this great poem are being presented as Subhashitas, after making salutations to Valmiki Maharshi who, like a kokila perched on the branch of poetry, goes on singing the sweet name of Rama.
कूजन्तं रामरामेति मधुरं मधुराक्षरं
आरुह्य कविता शाखां वन्दे वाल्मीकि कोकिलम्
ರಾಮಾಯಣ
ಸುಭಾಷಿತಗಳು
ಪರಿಚಯ
ಸ್ಕಾಂದ ಪುರಾಣದ ಪ್ರಕಾರ, ವೇದವ್ಯಾಸರು ವಾಲ್ಮೀಕಿಯ ಪೂರ್ವಾಪರದ ಬಗ್ಗೆ ಹಾಗೂ ಆತನು ಮಹರ್ಷಿಯಾದ ಬಗ್ಗೆ ತಿಳಿಯಲು ಸನತ್ಕುಮಾರರನ್ನು ಸಂದರ್ಶಿಸುತ್ತಾರೆ. ವಾಲ್ಮೀಕಿ ಮಹರ್ಷಿಯಾಗಿ ರೂಪಾಂತರ ಹೊಂದುವ ಪೂರ್ವದಲ್ಲಿ ಸುಮತಿ ಮತ್ತು ಕೌಶಿಕ ಎಂಬ ಬ್ರಾಹ್ಮಣ ದಂಪತಿಗಳಿಗೆ ಜನಿಸಿ ಅಗ್ನಿಶರ್ಮನೆಂಬ ಹೆಸರನ್ನು ಹೊಂದಿದ್ದನು. ಅಗ್ನಿಶರ್ಮನಿಗೆ ಚಿಕ್ಕ ವಯಸ್ಸಿನಲ್ಲೇ ವೇದಪಾಠವನ್ನು ಬೋಧಿಸಲಾಗುತ್ತಿತ್ತು. ಆದರೆ ಆತನು ವೇದ ಕಲಿಯಲು ಇಷ್ಟಪಡಲೇ ಇಲ್ಲ. ಆ ಸಮಯದಲ್ಲಿ ಸಂಭವಿಸಿದ ಭೀಕರ ಕ್ಷಾಮದ ಫಲವಾಗಿ ಆತನ ಕುಟುಂಬದವರು ಕಾಡಿಗೆ ತೆರಳಿ ಅಲ್ಲಿಯೇ ಕುಟೀರವೊಂದನ್ನು ನಿರ್ಮಿಸಿ ಕಾಡಿನಲ್ಲಿ ದೊರೆಯುವ ಗೆಡ್ದೆ ಗೆಣಸುಗಳನ್ನು ಸೇವಿಸುತ್ತಾ ಜೀವನವನ್ನು ಸವೆಸುತ್ತಿದ್ದರು. ಆಗ ಕಾಡಿನಲ್ಲಿದ್ದ ಕೆಲವು ಕಳ್ಳಕಾಕರ ಸಂಗ ಬೆಳೆಸಿದ ಅಗ್ನಿಶರ್ಮನು ದಾರಿಹೋಕರನ್ನು ದೋಚುವ ಕಾರ್ಯಕ್ಕಿಳಿದನು. ಒಮ್ಮೆ ಆ ಕಾಡಿನ ಮೂಲಕ ಋಷಿಮುನಿಗಳ ಗುಂಪೊಂದು ಹಾದು ಹೋಗುತ್ತಿತ್ತು. ಯಥಾಪ್ರಕಾರ ಅಗ್ನಿಶರ್ಮನು ಅವರನ್ನು ಅಡ್ದಗಟ್ಟಿ ಅವರ ವಸ್ತುಗಳನ್ನು ದೋಚಲು ಯತ್ನಿಸಿದನು. ಆಗ ಆ ಮುನಿವರರು ಕಳ್ಳತನ, ದರೋಡೆಯಿಂದ ಅವನು ಗಳಿಸುವ ಘೋರ ಪಾಪದ ಹೊರೆಯನ್ನು ಅವನಲ್ಲದೆ ಬೇರಾರೂ ಹೊರಲಾರರೆಂಬ ಅರಿವನ್ನು ಅವನಿಗೆ ಮೂಡಿಸಿದರು. ನಂತರ ಅಗ್ನಿಶರ್ಮನಿಗೆ ಆಧ್ಯಾತ್ಮದ ಬಗ್ಗೆ ಅರಿವು ಮೂಡಿಸಿ, ಅಂತರ್ಮುಖಿಯಾಗಿ ತಪಸ್ಸನ್ನು ಮಾಡಿ ತನ್ನ ಪಾಪವನ್ನು ಕಳೆದುಕೊಳ್ಳಲು ಸಲಹೆ ನೀಡಿದರು. ಅಂತಯೇ ಅವನು ತಪಸ್ಸನ್ನು ಆಚರಿಸಲು ತೊಡಗಿದನು. ಕಾಲಾಂತರದಲ್ಲಿ ಅವನ ಸುತ್ತಲೂ ಭಾರೀ ಹುತ್ತವೊಂದು ಆವರಿಸಿಕೊಂಡಿತು.
ಬಹಳ ವರ್ಷಗಳ ನಂತರ, ಅಗ್ನಿಶರ್ಮನಿಗೆ ಜ್ಞಾನೋಪದೇಶ ಮಾಡಿದ್ದ ಆ ಋಷಿಗಳು ಅದೇ ಪ್ರದೇಶಕ್ಕೆ ಬಂದಾಗ ಅವನನ್ನು ಸುತ್ತುವರೆದಿದ್ದ ಬೃಹತ್ ಹುತ್ತದಿಂದ ಹೊರಹೊಮ್ಮುತ್ತಿದ್ದ ಧ್ವನಿತರಂಗಗಳು ಮತ್ತು ವಿಸ್ಮಯಕರ ಪ್ರಭೆಯನ್ನು ಕಂಡು ಚಕಿತರಾದರು. ಅವರು ಕೂಡಲೇ ಅವನನ್ನು ಹುತ್ತದಿಂದ ಹೊರಬರಲು ಹೇಳಿ ಅವನಿಗೆ “ವಾಲ್ಮೀಕಿ” ಎಂಬ ನಾಮಕರಣ ಮಾಡಿದರು. ಸಂಸ್ಕೃತದಲ್ಲಿ “ವಲ್ಮೀಕ” ಎಂದರೆ ಹುತ್ತ ಎಂದರ್ಥ. ಹುತ್ತದಿಂದ ಹೊರಬಂದವನಾದ್ದರಿಂದ ಅವನನ್ನು ವಾಲ್ಮೀಕಿ ಎಂದು ಕರೆದರು. ನಂತರ ಉತ್ತರ ದಿಕ್ಕಿಗೆ ಹೋಗಿ ತನ್ನ ತಪಸ್ಸನ್ನು ಮುಂದುವರಿಸುವಂತೆ ಅವನಿಗೆ ಉಪದೇಶಿಸಿದರು. ಭಾರತದಲ್ಲಿ ಪ್ರಚಲಿತವಿರುವ ವಾಲ್ಮೀಕಿಯ ಹಲವಾರು ಕತೆಗಳಲ್ಲಿ ಮೇಲೆ ಹೇಳಿದ ಕತೆಯೂ ಒಂದು.
ಉತ್ತರ ದಿಕ್ಕಿಗೆ ಪಯಣಿಸಿದ ವಾಲ್ಮೀಕಿಯು ಗಂಗಾನದಿಯ ದಡದಲ್ಲಿ ಪ್ರಶಸ್ತವಾದ ಸ್ಥಳವೊಂದರಲ್ಲಿ ತನ್ನ ಆಶ್ರಮವನ್ನು ಸ್ಥಾಪಿಸಿದನು. ಕಾಲಾಂತರದಲ್ಲಿ ಆತನ ತಪಸ್ಸು ಫಲಿಸಿತು. ಒಮ್ಮೆ ನಾರದ ಮಹರ್ಷಿಯು ಆತನ ಆಶ್ರಮದತ್ತ ಬರುತ್ತಿರುವುದನ್ನು ಕಂಡು ಪುಳಕಿತನಾದನು. ನಾರದನನ್ನು ಆಶ್ರಮಕ್ಕೆ ಬರಮಾಡಿಕೊಂಡು ಅವನನ್ನು ಸತ್ಕರಿಸಿದನು. ಕುಶಲೋಪರಿಯ ನಂತರ, ಈ ಭೂಮಿಯಲ್ಲಿ ಎಲ್ಲಾ ಹದಿನಾರು ಗುಣಗಳನ್ನೂ ಒಳಗೊಂಡ ಶ್ರೇಷ್ಠ ಪುರುಷನ ಇರುವಿಕೆಯ ಬಗ್ಗೆ ಪ್ರಶ್ನಿಸಿದನು. ಅದಕ್ಕೆ ನಾರದನು, ಇಕ್ಷ್ವಾಕು ವಂಶಸ್ಥನಾದ ಶ್ರೀರಾಮನೆಂಬ ನಾಮಧೇಯವುಳ್ಳ ರಾಜನು ಎಲ್ಲಾ ಸದ್ಗುಣಗಳನ್ನು ಹೊಂದಿರುವ ಉತ್ಕೃಷ್ಟ ವ್ಯಕ್ತಿಯಾಗಿದ್ದಾನೆ ಎಂದನು. ನಂತರ ರಾಮನ ಕತೆಯನ್ನು ಸಂಕ್ಷಿಪ್ತವಾಗಿ ಹೇಳಿ ಅಲ್ಲಿಂದ ತೆರಳಿದನು.
ರಾಮ ಕತೆಯನ್ನು ಕೇಳಿ ವಾಲ್ಮೀಕಿ ಪುಳಕಿತನಾದನು. ಶೀಘ್ರದಲ್ಲಿ ಆತನು ತನ್ನ ಶಿಷ್ಯನಾದ ಭರದ್ವಾಜನೊಡನೆ ಸಮೀಪದಲ್ಲಿದ್ದ ತಮಸಾ ನದಿಯತ್ತ ಹೊರಟನು. ತಿಳಿಯಾದ, ನಿರ್ಮಲವಾದ ನದಿನೀರನ್ನು ಕಂಡು ಹರ್ಷಿತನಾದನು. ಹಾಗೆಯೇ ಸುತ್ತಲೂ ಕಣ್ಣು ಹಾಯಿಸುತ್ತಿದ್ದಾಗ, ಗಂಡು ಮತ್ತು ಹೆಣ್ಣು ಕ್ರೌಂಚಪಕ್ಷಿಗಳ ಒಂದು ಜೋಡಿಯ ಮಿಲನದ ದೃಶ್ಯ ಕಂಡನು. ಆಗ ಇದ್ದಕ್ಕಿದ್ದಂತೆ ಬಂದ ಬೇಡನ ಬಾಣದ ಘಾತದಿಂದ ಗಂಡುಹಕ್ಕಿ ಕೂಡಲೇ ಮರಣ ಹೊಂದಿತು. ನೆಲದ ಮೇಲೆ ಬಿದ್ದ ರಕ್ತಸಿಕ್ತವಾಗಿದ್ದ ಗಂಡು ಪಕ್ಷಿಯನ್ನು ಕಂಡು ಹೆಣ್ಣು ಪಕ್ಷಿಯು ಅತೀವ ದುಃಖದಿಂದ ಆಕ್ರಂದನಗೈದಿತು. ಅದನ್ನು ಕಂಡ ವಾಲ್ಮೀಕಿಯ ಹೃದಯದಲ್ಲಿ ದುಃಖ, ಅನುಕಂಪ ಮತ್ತು ಕೋಪ ಮಡುಗಟ್ಟಿತು. ತಕ್ಷಣವೇ ಅವನು ಬೇಡನನ್ನು ಶಪಿಸಿದನು. ಆಗ ಹೊರಹೊಮ್ಮಿದ ಅನುಷ್ಟುಪ್ ಛಂದಸ್ಸಿನ ಶಾಪರೂಪದ ಶ್ಲೋಕ, ವಾಲ್ಮೀಕಿಯಲ್ಲಿನ ಕವಿಗೆ ಜನ್ಮ ನೀಡಿತು, ಮತ್ತು ಇದೇ ಸಂಸ್ಕೃತ ಭಾಷೆಯಲ್ಲಿನ ಪ್ರಥಮ ಛಂದೋಬದ್ಧ ಕಾವ್ಯರೂಪದ ಶ್ಲೋಕವಾಯಿತು. ಹಾಗಾಗಿ ನಾರದನು ಹೇಳಿದ ರಾಮಕತೆಯ ಎಳೆಯೊಂದು ಆದಿಕಾವ್ಯವಾಗಿ ರೂಪುಗೊಳ್ಳಲು ವಾಲ್ಮೀಕಿ ಈ ಸಂಧರ್ಭದಲ್ಲಿ ರಚಿಸಿದ ಶ್ಲೋಕವು ನಾಂದಿಯಾಯಿತು. ಆಗ ಬ್ರಹ್ಮನು ಪ್ರತ್ಯಕ್ಷನಾಗಿ ರಾಮಾಯಣ ಕಾವ್ಯರಚನೆಯನ್ನು ಮಾಡುವಂತೆ ವಾಲ್ಮೀಕಿಗೆ ನಿರ್ದೇಶಿಸಿ ಹರಸಿದನು.
ಸತ್ಯ ಮತ್ತು ಧರ್ಮಗಳನ್ನು ಧ್ಯೇಯವನ್ನಾಗಿಸಿಕೊಂಡು ಶ್ರೀರಾಮನು ತನ್ನ ಜೀವನದ ಪ್ರತಿಯೊಂದು ಘಟ್ಟದಲ್ಲೂ ಹಿರಿಮೆ, ಯೋಗ್ಯತೆ ಮತ್ತು ಸಮಾನತೆಯನ್ನು ಮೆರೆದಿದ್ದಾನೆ. ರಾಮನ ಜೀವನದಲ್ಲಿ ದುರಂತಗಳ ಸರಣಿಯೇ ಸಂಭವಿಸಿತು. ಹಾಗಿದ್ದರೂ ಆತನು ಸತ್ಯಸಂಧತೆ ಮತ್ತು ಧರ್ಮಪರಿಪಾಲನೆಯಿಂದ ವಿಚಿತಲನಾಗಲಿಲ್ಲ. ರಾಮನ ಗಾಂಭೀರ್ಯ ಮತ್ತು ಸಮಚಿತ್ತತೆ ಆತನನ್ನು ಪ್ರೀತಿಯೋಗ್ಯನನ್ನಾಗಿ, ಉದಾತ್ತ ಪುರುಷನನ್ನಾಗಿ ಹಾಗೂ ಆರಾಧನಾ ಮೂರ್ತಿಯಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಸಿದೆ. ಆತನ ಈ ಗುಣಗಳೇ ಭಾರತದಾದ್ಯಂತ ರಾಮನನ್ನು ಪೂಜಾರ್ಹನನ್ನಾಗಿಸಿದೆ.
ನಮ್ಮ ಸಂಸ್ಕೃತಿಯ ಮಕುಟಮಣಿಯಾಗಿ ವಿಜೃಂಭಿಸುತ್ತಿರುವ ರಾಮಾಯಣವನ್ನು ನಮಗೆ ನೀಡಿದ ವಾಲ್ಮೀಕಿ ಮಹರ್ಷಿಗೆ ನಾವು ಸದಾ ಚಿರಋಣಿಗಳಾಗಿರಬೇಕು. ಕಾವ್ಯವೆಂಬ ರೆಂಬೆಯಮೇಲೆ ಕುಳಿತು, ರಾಮನ ಸವಿನಾಮದಿಂದ ಮಿಂದ ಕೋಗಿಲೆಯೊಂದು ಸುಶ್ರಾವ್ಯವಾಗಿ ಹಾಡುತ್ತಿರುವಂತಿರುವ ವಾಲ್ಮೀಕಿ ಮಹರ್ಷಿಗೆ ನಮಿಸುತ್ತಾ, ಈ ಮಹಾನ್ ಕಾವ್ಯದಿಂದ ಆಯ್ದ ಕೆಲವು ಶ್ಲೋಕಗಳನ್ನು ಸುಭಾಷಿತ ರೂಪದಲ್ಲಿ ನಾವು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.
“ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ.
ಆರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ”
ಈ ಸುಭಾಷಿತಗಳನ್ನು ಪ್ರಸ್ತುತ ಪಡಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನವತಿಯಿಂದ ಪ್ರಕಟವಾದ “ಸುಭಾಷಿತ ಮಂಜರಿ” ಎಂಬ ಸಂಪಾದಿತ ಕೃತಿಯಲ್ಲಿನ ಸಂಸ್ಕೃತ ಶ್ಲೋಕಗಳ ಕನ್ನಡ ಅನುವಾದದ ನೆರವನ್ನು ಪಡೆಯಲಾಗಿದೆ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ನಾವು ಆಭಾರಿಯಾಗಿದ್ದೇವೆ.
- सर्वदा सुकरं मित्रं दुष्करं परिपालनं
अनित्यत्त्वात्तु चित्तानां मतिरल्पेपि भिद्यते
ಸರ್ವದಾ ಸುಕರಂ ಮಿತ್ರಂ ದುಷ್ಕರಂ ಪರಿಪಾಲನಂ
ಅನಿತ್ಯತ್ವಾತ್ತು ಚಿತ್ತಾನಾಂ ಮತಿರಲ್ಪೇಪಿ ಭಿದ್ಯತೇ
It is easy to earn a friend but difficult to
sustain the friendship. The mind being
fickle, friendship gets broken
for silly reasons.
ಮಿತ್ರನನ್ನು ಸಂಪಾದಿಸುವುದು ಸುಲಭ. ಹಾಗೆಯೇ ಉಳಿಸಿಕೊಳ್ಳುವುದು ಮಾತ್ರ ಕಷ್ಟ. ಮನಸ್ಸು ಚಂಚಲವಾದದ್ದರಿಂದ ಅಲ್ಪಕಾರಣಕ್ಕಾಗಿ ಸ್ನೇಹವು ಕೆಟ್ಟುಹೋಗುತ್ತದೆ.
- अनागत विधानं तु कर्तव्यं शुभमिच्छता
आपदाशन्कमानेन पुरुषेन विपश्चिता
ಅನಾಗತ ವಿಧಾನಂತು ಕರ್ತವ್ಯಂ ಶುಭಮಿಚ್ಛತಾ
ಆಪದಾಶಂಕಮಾನೇನ ಪುರುಷೇಣ ವಿಪಶ್ಚಿತಾ
When he suspects that some calamity may occur in future, a discriminating person, who hopes for some good to happen, should start preparing to avert the calamity in future.
ಮುಂದೆ ಅನರ್ಥವು ಸಂಭವಿಸೀತೆಂಬ ಶಂಕೆ ಇದ್ದಾಗ ಶುಭವನ್ನು ಬಯಸುವ ವಿವೇಕಿಯು ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಚಿಂತಿಸಬೇಕು.
- न कालः कालमित्येति न कालः परिहीयते
स्वभावंच समासाद्य नकश्चिदतिवर्तते
ನ ಕಾಲಃ ಕಾಲ ಮತ್ಯೇತಿ ನ ಕಾಲಃ ಪರಿಹೀಯತೇ
ಸ್ವಭಾವಂ ಚ ಸಮಾಸಾದ್ಯ ನ ಕಶ್ಚಿದ್ ಅತಿವರ್ತತೇ
Time will not deviate from its schedule;
nor will it cause harm to anyone. None
can overcome the force of prarabhda
Karma.
ಕಾಲವು ತನ್ನ ವ್ಯವಸ್ಥೆಯನ್ನು ಎಂದಿಗೂ ಉಲ್ಲಂಘಿಸುವುದಿಲ್ಲ.
ಕಾಲಕ್ಕೆ ಹಾನಿಯೆಂಬುವುದಿಲ್ಲ. ಯಾರೂ ತನ್ನ
ಪ್ರಾರಬ್ಧಕರ್ಮವನ್ನು ಮೀರಿಹೋಗಲಾರರು.
- भाग्य वैषम्य दोषेन पुरा दुश्चरितेन च
मय्येतत् प्राप्यते सर्वं स्वक्रुतं ह्युपभुज्यते
ಭಾಗ್ಯ ವೈಷಮ್ಯ ದೋಷೇಣ ಪುರಾ ದುಶ್ಚರಿತೇನ ಚ
ಮಯ್ಯೆತತ್ ಪ್ರಾಪ್ಯತೇ ಸರ್ವಂ ಸ್ವಕೃತಂ ಹ್ಯುಪಭುಜ್ಯತೇ
“it is my misfortune that I am being visited
by all these difficulties because of the
wrong deeds done by me earlier. After all,
one has to enjoy the effects of one’s own
actions,” says Seetha.
ನನ್ನ ದುರ್ಭಾಗ್ಯದಿಂದ, ಹಿಂದಿನ ದುಷ್ಕರ್ಮದಿಂದ ನನಗೆ ಈ ಎಲ್ಲ ಕಷ್ಟವು ಪ್ರಾಪ್ತಿಯಾಯಿತು. ತಾನು ಮಾಡಿದ್ದನ್ನು ತಾನು ಉಣ್ಣಲೇಬೇಕಲ್ಲವೆ? ಇದು ಸೀತೆಯ ಮಾತು.
275.यथा फलानं पक्वानां नान्यत्र पतनाद्भयं
एवं नरस्य जातस्य नान्यत्र मरणाद्भयम्
ಯಥಾ ಫಲಾನಾಂ ಪಕ್ವಾನಾಂ ನಾನ್ಯತ್ರ ಪತನಾದ್ಭಯಂ
ಏವಂ ನರಸ್ಯ ಜಾತಸ್ಯ ನಾನ್ಯತ್ರ ಮರಣಾದ್ಭಯಂ
Fruits that begin to ripen will have the fear of falling down. In the same way, everyone who takes birth will have the fear of death coming to him some time or the other.
ಮಾಗಿದ ಹಣ್ಣುಗಳಿಗೆ ಕೆಳಕ್ಕೆ ಬೀಳುವ ಭಯ ಇದ್ದೇ ಇರುತ್ತದೆ. ಹಾಗೆಯೇ ಹುಟ್ಟಿದ ಮನುಷ್ಯನಿಗೆ ಸಾಯುವ ಭಯ ಇದ್ದೇ
ಇರುತ್ತದೆ.
- विनाशे बहवो दोषा जीवन् भद्राणि पश्यति
तस्मात् प्राणां धरिष्यामि ध्रुवोजीवति संगमः
ವಿನಾಷೇ ಬಹವೋ ದೋಷಾ ಜೀವನ್ ಭದ್ರಾಣಿ ಪಷ್ಯತಿ
ತಸ್ಮಾತ್ ಪ್ರಾಣಾಂ ಧರಿಷ್ಯಾಮಿ ಧ್ರುವೋ ಜೀವತಿ ಸಂಗಮಃ
Many faults or doshas are involved in committing suicide. Being alive, one can hope to see many good things. Therefore, I shall not take away my life. I am confident that many good things are in store for me if I am alive. — said by Hanuman helplessly, unable to trace the whereabouts of Sita.
ಆತ್ಮಹತ್ಯೆಯಲ್ಲಿ ಬಹಳ ದೋಷಗುಳುಂಟು. ಬದುಕಿದ್ದರೆ ಒಳ್ಳೆಯದನ್ನು ಕಾಣಬಹುದು. ಆದ್ದರಿಂದ ಆತ್ಮಹತ್ಯೆ ಮಾಡಿಕೋಳ್ಳದೇ ಬದುಕಿರುತ್ತೇನೆ. ಬದುಕಿದ್ದರೆ ಶ್ರೇಯಃಪ್ರಾಪ್ತಿ ನಿಶ್ಚಿತ.( ಇದು ಸೀತೆಯನ್ನು ಕಾಣದೆ ವಿಷಣ್ಣನಾದ ಹನುಮಂತನ ಆಲೋಚನೆ).
- सम्प्राप्तमवम!नं यः तॆजसा न प्रमार्जति
कस्तस्य पुरुषार्थोस्ति पुरुषस्या अल्पतेजसः
ಸಂಪ್ರಾಪ್ತಮವಮಾನಂ ಯಃ ತೇಜಸಾ ನ ಪ್ರಮಾರ್ಜತಿ
ಕಸ್ತಸ್ಯ ಪುರುಷಾರ್ಥೋಸ್ತಿ ಪುರುಷಸ್ಯ ಅಲ್ಪತೇಜಸಃ
If one has no power or spirit to wipe off the disrespect shown to him, to such a powerless person the benefits of the purusharthas, namely dharma, artha, kama and moksha, will not accrue.
ಪ್ರಾಪ್ತವಾದ ಅವಮಾನವನ್ನು ಯಾರು ತನ್ನ ತೇಜಸ್ಸಿನಿಂದ ಅಳಿಸಿಹಾಕಲಾರರೋ, ಅಂತಹಾ ತೇಜೋಹೀನರಿಗೆ ಯಾವ ಪುರುಷಾರ್ಥವು ತಾನೇ ಕೈಗೂಡೀತು.?
- गुरुलाघवमर्थानाम् आरम्भे कर्मणां फलं
दोषं वा यो नजानाति स बाल इति होच्यते
ಗುರುಲಾಘವಮರ್ಥಾನಾಮ್ ಆರಂಭೇ ಕರ್ಮಣಾಂ ಫಲಂ
ದೋಷಂ ವಾ ಯೋ ನ ಜಾನಾತಿ ಸ ಬಾಲ ಇತಿ ಹ್ಯೋಚ್ಯತೇ
When some work is undertaken, one
should, in the beginning itself, estimate
the pros and cons and the ups
and downs involved in it. One who fails
to do so deserves to be called stupid.
ಕಾರ್ಯವನ್ನು ಆರಂಭಿಸುವಾಗ ಫಲದ ಹೆಚ್ಚುಕಡಿಮೆಗಳನ್ನೂ
ಗುಣದೋಷಗಳನ್ನೂ ಯಾವನು ವಿಮರ್ಶಿಸುವುದಿಲ್ಲವೋ ಅವನು
ಮೂಢನೆನಿಸುತ್ತಾನೆ.
- अधर्मस्तु महांस्तात भवेत्तस्य महीपतेः
यो हरेद् बलिषद्भागं न च रक्षति पुत्रवत्
ಅಧರ್ಮಸ್ತು ಮಹಾಂಸ್ತಾತ ಭವೇತ್ತಸ್ಯ ಮಹೀಪತೇಃ
ಯೋ ಹರೇದ್ ಬಲಿಷಡ್ಭಾಗಂ ನ ಚ ರಕ್ಷತಿ ಪುತ್ರವತ್
O Rama, the king collects as tax one-sixth of the income earned by the people. Therefore, he should protect the people as his own children. Otherwise, great adharma will befall him.
ಓ ರಾಮ, ರಾಜನು ಪ್ರಜೆಗಳ ಸಂಪಾದನೆಯಲ್ಲಿ ಆರನೆಯ ಒಂದು ಭಾಗವನ್ನು ತೆರಿಗೆಯಾಗಿ ತೆಗೆದುಕೊಳ್ಳುವುನಾದ್ದರಿಂದ, ಅವನು ಪ್ರಜೆಗಳನ್ನು ಮಕ್ಕಳಂತೆ ಪಾಲಿಸಬೇಕು. ಇಲ್ಲದಿದ್ದರೆ ಮಹತ್ತರವಾದ ಅಧರ್ಮವು ಅವನಿಗೆ ಗಂಟುಬೀಳುತ್ತದೆ.
- कर्म लोक विरुद्धंतु कुर्वाणां क्षणदाचर
तीक्ष्णं सर्व जनो हन्ति सर्पं दुष्टमिवागतम्
ಕರ್ಮ ಲೋಕ ವಿರುದ್ಧಂತು ಕುರ್ವಾಣಾಂ ಕ್ಷಣದಾಚರ
ತೀಕ್ಷ್ಣಂ ಸರ್ವಜನೋ ಹಂತಿ ಸರ್ಪಂ ದುಷ್ಟಮಿವಾಗತಮ್
(addressing a rakshasa)
If a person of violent nature acts against the interests of the people, they will beat him to death as they do when a dangerous snake is found in the house.
ಎಲೈ ರಾಕ್ಷಸ, ಪ್ರಜಾವಿರೋಧಿಯಾದ ಕಾರ್ಯವನ್ನು ಮಾಡುವ ಉಗ್ರಸ್ವಭಾವದವನನ್ನು, ಮನೆಯಲ್ಲಿ ಸೇರಿದ ಕೆಟ್ಟಹಾವನ್ನು ಹೊಡೆಯುವಂತೆ ಪ್ರಜೆಗಳು ಹೊಡೆದು ಕೊಲ್ಲುತ್ತಾರೆ.
- नयनाभ्यां प्रसुप्तोपि जागर्ति नयचक्षुसा
व्यक्त क्रोध प्रसादश्च सराजा पूज्यते जनैः
ನಯನಾಭ್ಯಾಂ ಪ್ರಸುಪ್ತೋಪಿ ಜಾಗರ್ತಿ ನಯಚಕ್ಷುಸಾ
ವ್ಯಕ್ತ ಕ್ರೋಧ ಪ್ರಸಾದಸ್ಚ ಸರಾಜಾ ಪೂಜ್ಯತೇ ಜನೈಃ
A king who keeps his eye of Raja
Neeti open and vigilant,
though his physical eyes are shut,
acts in a definitive way to
produce results. He may be angry or
favourably disposed while doing so.
Such a king is greatly favoured
and admired by people.
ಕಣ್ಣುಗಳನ್ನು ಮುಚ್ಚಿದರೂ ಯಾರು ಯಾವ ರಾಜನೀತಿಯೆಂಬ ಕಣ್ಣನ್ನು ತೆರೆದು ಸದಾ ಎಚ್ಚರದಲ್ಲಿರುವರೋ, ಯಾರು ಕ್ರೋಧವಾಗಲಿ,
ಪ್ರಸಾದವಾಗಲಿ ಸ್ಫುಟವಾದ ಫಲವನ್ನು ಕೊಡುತ್ತದೆಯೋ
ಅಂತಹಾ ರಾಜನನ್ನು ಪ್ರಜೆಗಳು ಆದರಿಸುತ್ತಾರೆ.
- नृशंसमनृशं वा प्रजारक्षण कारणात्
पातकं वा सदोषं वा कर्तव्यं रक्षता सता
ನೃಶಂಸಮನೃಶಂಸಂ ವಾ ಪ್ರಜಾರಕ್ಷಣಕಾರಣಾತ್
ಪಾತಕಂ ವಾ ಸದೋಷಂ ವಾ ಕರ್ತವ್ಯಂ ರಕ್ಷತಾ ಸತಾ
One who assumes the duty of protecting people should always act accordingly, whether the action is cruel or otherwise and whether it is sinful or erroneous.
ಪ್ರಜಾರಕ್ಷಣೆಗಾಗಿ ಮಾಡುವ ಕಾರ್ಯವು ಕ್ರೂರವಾಗಿರಲಿ ಇಲ್ಲದಿರಲಿ, ಪಾಪಹೇತುವಾಗಿರಲಿ ದೋಷಯುಕ್ತವಾಗಿರಲಿ, ಪ್ರಜಾಪಾಲನೆಯ ಹೊಣೆ ಹೊತ್ತವನು ಅದನ್ನು ಮಾಡಲೇಬೇಕು.
- मूलमर्थस्य संरक्ष्यं ऎष कार्यविदां नयः
मूलेहि सति सिध्यन्ति गुणाः पुष्पफलोद्गमाः
ಮೂಲಮರ್ಥಸ್ಯ ಸಂರಕ್ಷ್ಯಂ ಏಷ ಕಾರ್ಯವಿದಾಂ ನಯಃ
ಮೂಲೇ ಹಿ ಸತಿ ಸಿಧ್ಯಂತಿ ಗುಣಾಃ ಪುಷ್ಪಫಲೋದ್ಗಮಾಃ
A dutiful executive makes it his policy to protect the fundamentals of his objective. It is only when the base of a tree is properly taken care of that it yields good flowers and fruits.
ಸಮಸ್ತಕಾರ್ಯದಲ್ಲಿಯೂ ಮೂಲಭೂತವಾದ್ದನ್ನು ಉಳಿಸಿಕೊಳ್ಳಬೇಕೆಂಬುದು ಕಾರ್ಯಜ್ಞರ ನೀತಿ. ವೃಕ್ಷದ ಮೂಲವನ್ನು ಸರಿಯಾಗಿ ನೋಡಿಕೊಂಡರೆ ತಾನೆ ಪುಷ್ಪಫಲಾದಿ ಪ್ರಯೋಜನಗಳು ದೊರಕುತ್ತವೆ?
284.धर्मो हि परमो लोके धर्मे सत्यं प्रतिष्ठितं
धर्म संश्रितमेतच्च पितुर्वचमुत्तमम्
ಧರ್ಮೋಹಿ ಪರಮೋ ಲೊಕೇ ಧರ್ಮೇ ಸತ್ಯಂ ಪ್ರತಿಷ್ಠಿತಂ
ಧರ್ಮ ಸಂಶ್ರಿತಮೇತಚ್ಚ ಪಿತುರ್ವಚನಮುತ್ತಮಮ್
In this world, dharma is supreme and preeminent. Truth is well established in dharma. Acting according to the wish of one’s parent is in accordance with dharma.
ಲೋಕದಲ್ಲಿ ಧರ್ಮವೇ ಶ್ರೇಷ್ಠವಾದದ್ದು. ಧರ್ಮದಲ್ಲಿ ಸತ್ಯವು ನೆಲೆಸಿದೆ. ಪಿತೃವಾಕ್ಯ ಪರಿಪಾಲನವು ಧರ್ಮವನ್ನು ಆಶ್ರಯಿಸಿದೆ.
- न हि धर्मार्थ सिध्यर्थं पानमेनं प्रशस्यते
पानादर्थश्च धर्मश्च कामश्च परिहीयते
ನ ಹಿ ಧರ್ಮಾರ್ಥ ಸಿದ್ಧ್ಯರ್ಥಂ ಪಾನಮೇವಂ ಪ್ರಶಸ್ಯತೇ
ಪಾನಾದರ್ಥಶ್ಚ ಧರ್ಮಶ್ಚ ಕಾಮಶ್ಚ ಪರಿಹೀಯತೇ
To those who wish to achieve the
three-fold objectives of dharma,
artha and kama taking liquor is
unbecoming. Liquor has debilitating
effect on those three qualities.
ಧರ್ಮಾರ್ಥಗಳನ್ನು ಸಾಧಿಸತಕ್ಕವರಿಗೆ ಮದ್ಯಪಾನವು
ಯೋಗ್ಯವಲ್ಲ. ಧರ್ಮ, ಅರ್ಥ, ಕಾಮ – ಈ ಮೂರು
ಮದ್ಯಪಾನದಿಂದ ಕ್ಷೀಣಿಸುತ್ತವೆ.
- यत् कृत्वा न भवेद् धर्मो न कीर्तिर्नयशो भुवि
शरीरस्य भवेद् खेदः कस्तत् कर्म समाचरेत्
ಯತ್ ಕೃತ್ವಾ ನ ಭವೇದ್ಧರ್ಮೋ ನ ಕೀರ್ತಿರ್ನನಯಶೋ ಭುವಿ
ಶರೀರಸ್ಯ ಭವೇತ್ ಖೇದಃ ಕಸ್ತತ್ ಕರ್ಮ ಸಮಾಚರೇತ್
Such actions which do not promote dharma and enhance fame and good name, but result only in bodily exhaustion – why should anyone undertake them at all?
ಯಾವುದನ್ನು ಆಚರಿಸಿದರೆ ಧರ್ಮವಿಲ್ಲವೋ ಕೀರ್ತಿಯಿಲ್ಲವೋ ಒಳ್ಳೆಯ ಹೆಸರಿಲ್ಲವೋ, ದೇಹಕ್ಕೆ ಆಯಾಸ ಮಾತ್ರ ಆಗುವುದೋ ಅಂಥ ಕಾರ್ಯವನ್ನು ಯಾವನು ಮಾಡಿಯಾನು?
287.कश्चित् सहस्रान्मूर्खाणाम् ऎक मिच्छसि पण्डितं
पण्डितोह्यर्थ कृच्छेषु कुर्यान्निश्रेयसं महत्
ಕಚ್ಚಿತ್ ಸಹಸ್ರಾನ್ಮೂರ್ಖಾಣಾಂ ಏಕ ಮಿಚ್ಛಸಿ ಪಂಡಿತಂ
ಪಂಡಿತೋಹ್ಯರ್ಥ ಕೃಚ್ಛೇಷು ಕುರ್ಯಾನ್ನಿಶ್ರೇಯಸಂಮಹತ್
A learned person is favoured in preference to a thousand dullards. It is because, in times of distress, a learned person alone will be able to take proper decision and implement it.
ಸಾವಿರ ಮೂರ್ಖರಿಗಿಂತಲೂ ಒಬ್ಬ ವಿದ್ವಾಂಸನೇ ಲೇಸೆಂದು ಅವನನ್ನು ಆದರಿಸುವರು. ಏಕೆಂದರೆ, ಕಷ್ಟಕಾಲದಲ್ಲಿ ವಿದ್ವಾಂಸನೊಬ್ಬನೇ ಸರಿಯಾದ ಉಪಾಯವನ್ನು ಬೋಧಿಸಿ ಕಾರ್ಯವನ್ನು ನಿರ್ವಹಿಸಬಲ್ಲ.
- अधृवे हि शरीरे यो न करोति तपो2र्जनं
स पश्त्चात्ताप्यते मूढो मृतो दृष्त्वात्मनो गतिः
ಅಧ್ರುವೇ ಹಿ ಶರೀರೇಯೋ ನ ಕರೋತಿ ತಪೋರ್ಜನಂ
ಸ ಪಶ್ಚಾತ್ತಾಪ್ಯತೇ ಮೂಢೋ ಮೃತೋ ದೃಷ್ಟ್ವಾತ್ಮನೋ ಗತಿಮ್
Realizing that the body is impermanent, if one does not earn spiritual strength by performing tapas, he will be a fool and he will have to repent for his pitiable state after death.
ಶರೀರವು ಅಸ್ಥಿರವೆಂದು ಅರಿತು ಯಾವನು ತಪೋನಿಷ್ಠೆಯಿಂದ ಶ್ರೇಯಸ್ಸನ್ನು ಸಂಪಾದಿಸಿಕೊಳ್ಳುವುದಿಲ್ಲವೋ ಆ ಮೂಢನು ಮೃತನಾದ ಮೇಲೆ ತನ್ನ ದುಃಸ್ಥಿತಿಗೆ ತಾನೇ ಮರುಗಬೇಕಾಗುತ್ತದೆ.
- अहोरात्राणि गच्छन्ति सर्वेषां प्राणिनामिह
आयूंषि क्षपयन्त्याशु ग्रीष्मे जल मिवांशवः
ಅಹೋರಾತ್ರಾಣಿ ಗಚ್ಚಂತಿ ಸರ್ವೇಷಾಂ ಪ್ರಾಣಿನಾಮಿಹ
ಆಯೂಂಷಿ ಕ್ಷಪಯಂತ್ಯಾಶು ಗ್ರೀಷ್ಮೇ ಜಲವಿವಾಂಶವಃ
All the living entities are getting dissipated day and night.
Life is running out just as water in summer gets dried out by the sun’s rays.
ಸಕಲ ಪ್ರಾಣಿಗಳಿಗೂ ಹಗಲು ರಾತ್ರಿಗಳು ಕಳೆಯುತ್ತಲೇ ಇವೆ. ಬೇಸಿಗೆಯಲ್ಲಿ ಸೂರ್ಯಕಿರಣಗಳು ನೀರನ್ನು ಹೀರುವಂತೆ, ಇವು ಆಯಸ್ಸನ್ನು ಒಂದೇ ಸಮನಾಗಿ ಹೀರುತ್ತವೆ.
- इन्द्रियाणि पुरा जित्वा जितं त्रिभुवनं त्वया
स्मरद्भिरिव तद्वैरं इन्द्रियैरेव निर्जितः
ಇಂದ್ರಿಯಾಣಿ ಪುರಾ ಜಿತ್ವಾ ಜಿತಂ ತ್ರಿಭುವನಂ ತ್ವಯಾ
ಸ್ಮರದ್ಧಿರಿವ ತದ್ವೈರಂ ಇಂದ್ರಿಯೈರೇವ ನಿರ್ಜಿತಃ
“Earlier, having exercised control over your sense organs, you were able to conquer all the three worlds. The same sense organs, remembering as it were their enmity towards you, have now left you completely defeated,“ wails Mandodari over the dead body of Ravana.
ಹಿಂದೆ ನೀನು ಇಂದ್ರಿಯಗಳನ್ನು ಗೆದ್ದು ಮೂರು ಲೋಕಗಳನ್ನೂ ಜಯಿಸಿದೆ. ಪೂರ್ವವೈರವನ್ನು ಸ್ಮರಿಸಿಕೊಂಡವೋ ಎಂಬಂತೆ ಆ ಇಂದ್ರಿಯಗಳೇ ನಿನ್ನನ್ನೀಗ ಜಯಿಸಿ ಬಿಟ್ಟವು! (ಹೀಗೆಂದು ಹತನಾದ ರಾವಣನನ್ನು ನೋಡಿ ಮಂಡೋದರಿಯು ವಿಲಪಿಸಿದಳು.)
- कृद्धः पापं न कुर्यात् कः कृद्धो हन्याद्गुरूनपि
कृद्धः परुषया वाचा नरः साधूनधिक्षिपेत्en
ಕ್ರುದ್ಧಃ ಪಾಪಂ ನ ಕುರ್ಯಾತ್ ಕಃ ಕ್ರುದ್ಧೋ ಹನ್ಯಾದ್ಗುರೂನಪಿ
ಕ್ರುದ್ಧಃ ಪರುಷಯಾ ವಾಚಾ ನರಃ ಸಾಧೂನ್ ಅಧಿಕ್ಷಿಪೇತ್
When did a person driven by anger not commit sins?
The angry person takes away the lives of the elders and gurus. Nay, by using abusive language, he insults virtuous persons too.
ಕೋಪಬಂದಾಗ ಪಾಪಕೃತ್ಯವನ್ನು ಮಾಡದವರು ಯಾರು? ಕೋಪಬಂದವನು ಹಿರಿಯರನ್ನೂ ಕೊಂದಾನು. ಸಜ್ಜನರನ್ನೂ ಸಹ ಕೆಟ್ಟ ಮಾತುಗಳಿಂದ ನಿಂದಿಸಿಯಾನು.
- नन्दत्युदित आदित्ये नन्दन्तस्तमिते रवौ
आत्मनो नावबुद्ध्यन्ते मनुष्या जीवित क्षयम्
ನಂದಂತ್ಯುದಿತ ಆದಿತ್ಯೇ ನಂದಂತ್ಯಸ್ತಮಿತೇ ರವೌ
ಆತ್ಮನೋ ನಾವಬುಧ್ಯಂತೇ ಮನುಷ್ಯಾ ಜೀವಿತಕ್ಷಯಮ್
People enjoy the sight of the rising of the sun; they equally enjoy the setting of the sun; but they do not observe their own life-span gradually decreasing.
ಸೂರ್ಯನು ಉದಯಿಸಿದನೆಂದು ಜನರು ಆನಂದಿಸುತ್ತಾರೆ. ಅಸ್ತಮಿಸಿದನೆಂದೂ ಆನಂದಿಸುತ್ತಾರೆ. ತಮ್ಮ ಆಯುಸ್ಸು ಕ್ಷಯಿಸಿಹೋಗುತ್ತದೆಯೆಂಬುದನ್ನು ಮಾತ್ರ ಅವರು ಗಮನಿಸುವುದಿಲ್ಲ.
- मनोहि हेतुः सर्वेषाम् इन्द्रियाणां प्रवर्तने
शुभाशुभास्ववस्थासु तच्च मे सुव्यवस्थितम्
ಮನೋಹಿ ಹೇತುಃ ಸರ್ವೇಷಾಮ್ ಇಂದ್ರಿಯಾಣಾಂ ಪ್ರವರ್ತನೇ
ಶುಭಾಶುಭಾಸ್ವವಸ್ಥಾಸು ತಚ್ಚ ಮೇ ಸ್ಯುವಸ್ಥಿತಮ್
It is the mind that has control over the functioning of all the sense organs. It is the mind that is responsible for all actions both good and bad. When I gain complete control over the mind, the question of committing sin does not arise.
ಇಂದ್ರಿಯಗಳ ಪ್ರವೃತ್ತಿಗೆ ಮನಸ್ಸೇ ಮೂಲ ಕಾರಣ. ಪಾಪಪುಣ್ಯಗಳಿಗೆ ಅದೇ ನಿಮಿತ್ತ. ಈ ಮನಸ್ಸು ಪೂರ್ಣವಾಗಿ ನನ್ನ ಸ್ವಾಧೀನದಲ್ಲಿರುವಾಗ ಪಾಪವು ಏಕೆ ಬರುತ್ತದೆ?
- वाच्यावाच्यं प्रकुपितो न विजानाति कर्हिचित्
नाकार्यमस्ति कृद्धस्य नावाच्यं विद्यते क्वचित्
ವಾಚ್ಯಾವಾಚ್ಯಂ ಪ್ರಕುಪಿತೋ ನ ವಿಜಾನಾತಿ ಕರ್ಹಿಚಿತ್
ನಾಕಾರ್ಯಮಸ್ತಿ ಕ್ರುದ್ಧಸ್ಯ ನಾವಾಚ್ಯಂ ವಿದ್ಯತೇ ಕ್ವಚಿತ್
A person possessed by anger will not know what is to be spoken and what is not to be spoken. He does all sorts of things and speaks whatever comes into his mind.
ಕೋಪಗೊಂಡವನಿಗೆ ಇದು ಹೇಳತಕ್ಕದ್ದು. ಇದು ಹೇಳಬಾರದ್ದು – ಎಂಬ ಅರಿವೇ ಇರುವುದಿಲ್ಲ. ಅವನು ಮಾಡದಿರುವ ಕೆಲಸವಿಲ್ಲ.; ಆಡದಿರುವ ಮಾತಿಲ್ಲ.
- अत्येति रजनी यातु सा न प्रतिनिवर्तते
यात्येव यमुना पूर्णा समुद्रं लवणार्णवम्
ಅತ್ಯೇತಿ ರಜನೀ ಯಾತು ಸಾ ನ ಪ್ರತಿನಿವರ್ತತೇ
ಯಾತ್ಯೇವ ಯಮುನಾ ಪೂರ್ಣಾ ಸಮುದ್ರಂ ಲವಣಾರ್ಣವಮ್
As the night departs, it will not return again. As the River Yamuna in full flow goes towards the salty ocean, it will not turn backwards.
ಕಳೆದುಹೋದ ರಾತ್ರಿ ಪುನಃ ಬರುವುದಿಲ್ಲ. ತುಂಬಿ ಹರಿಯುವ ಯಮುನೆ ಸಮುದ್ರವನ್ನು ಸೇರುವುದೇ ಹೊರತು ಪುನಃ ಹಿಂದಿರುಗುವುದಿಲ್ಲ.
- अयशस्यमनायुष्यं परदाराभिमर्शनं
अर्थक्षयकरं घोरं पापस्य च पुनर्भवम्
ಅಯಶಸ್ಯಮನಾಯುಷ್ಯಂ ಪರದಾರಾಭಿಮರ್ಶನಂ
ಅರ್ಥಕ್ಷಯಕರಂ ಘೋರಂ ಪಾಪಸ್ಯ ಚ ಪುನರ್ಭವಂ
Making physical contact with a woman belonging to others paves the way for dishonor. It shortens one’s longevity and decreases one’s fortune. It is another name for terrible sin.
ಪರಸ್ತ್ರೀಯನ್ನು ಮುಟ್ಟುವುದು ಅಪಕೀರ್ತಿಗೆ ದಾರಿ. ಅದರಿಂದ ಆಯಸ್ಸು ಕ್ಷೀಣಿಸುವುದು. ಭಾಗ್ಯ ಹಾನಿಯಾಗುವುದು. ಪರಸ್ತ್ರೀಸ್ಪರ್ಶವು ಘೋರ ಪಾಪದ ಇನ್ನೊಂದು ರೂಪ.
- आकारश्छाद्यमानो2पि नशक्यो विनिगूहितुं
बलाद्धि विवृणोत्येव भावमन्तर्गतं नृणाम्
ಆಕಾರಶ್ಛಾದ್ಯಮಾನೋಪಿ ನ ಶಕ್ಯೋ ವಿನಿಗೂಹಿತುಂ
ಬಲಾದ್ಧಿ ವಿವೃಣೋತ್ಯೇವ ಭಾವಮಂತರ್ಗತಂ ನೃಣಾಂ
It is difficult to prevent the facial expression from revealing the inherent feelings. However much we try to suppress, the outward appearance somehow betrays the inner feelings.
ಮುಚ್ಚಲು ಯತ್ನಿಸಿದರೂ ಮುಖಾಕೃತಿಯನ್ನು ಅಡಗಿಸಲು ಸಾಧ್ಯವಾಗದು. ಮನುಷ್ಯರ ಅಂತರಂಗದ ಭಾವವನ್ನು ಅದು ಹೇಗಾದರೂ ಬಯಲಿಗೆ ಎಳೆಯುತ್ತದೆ.
- आम्रं भित्वा कुठारेण निम्बं परिचरेत्तु यः
यश्चैवं पयसासिंचॆत् नैवास्य मधुरो भवेत्
ಆಮ್ರಂ ಛಿತ್ವಾ ಕುಠಾರೇಣ ನಿಂಬಂ ಪರಿಚರೇತ್ತು ಯಃ
ಯಶ್ಚೈವಂ ಪಯಸಾ ಸಿಂಚೇತ್ ನೈವಾಸ್ಯ ಮಧುರೋ ಭವೇತ್
Plucking a mango plant, if one uses it to serve and honour a neem tree by making an offering of milk to it, the neem fruit will not taste sweet.
ಮಾವಿನ ಗಿಡವನ್ನು ಕೊಡಲಿಯಿಂದ ಕಡಿದು ಬೇವಿನ ಗಿಡಕ್ಕೆ ಹಾಲೆರದು ಉಪಚಾರ ಮಾಡಿದರೆ, ಅದರ ಹಣ್ಣು ಎಂದಿಗೂ ಸಿಹಿಯಾಗಲಾರದು.
- कल्याणी बत गाधेयं लौकिकी प्रतिभातिमे
एति जीवन्तमानन्दो नरं वर्षा शतादपि
ಕಲ್ಯಾಣೀ ಬತ ಗಾಧೇಯಂ ಲೌಕಿಕೀ ಪ್ರತಿಭಾತಿ ಮೇ
ಏತಿ ಜೀವಂತಮಾನಂದೋ ನರಂ ವರ್ಷಾಶತಾದಪಿ
‘Better and happy times will certainly come, a hundred years after even, if one keeps alive’ – this popular saying is very true, feels Seetha, when Hanuman brings news of Rama.
“ಮನುಷ್ಯನು ಬದುಕಿದ್ದರೆ ನೂರು ವರ್ಷಗಳ ಮೇಲಾದರೂ ಸುಖದ ದಿನವನ್ನು ಕಾಣುತ್ತಾನೆ” ಎಂಬ ಲೋಕದ ಹೇಳಿಕೆ ಸತ್ಯವಾಗಿ ತೋರುತ್ತದೆ. ಇದು ಹನುಮಂತನಿಂದ ಶ್ರೀರಾಮನ ಸುದ್ದಿಯನ್ನರಿತ ಸೀತೆ ಹೇಳಿಕೊಂಡಿದ್ದು.
- न परः पापमादत्ते परेषां पापकर्मणां
समयो रक्षितव्यस्तु सन्तश्चारित्र भूषणाः
ನ ಪರಃ ಪಾಪಮಾದತ್ತೇ ಪರೇಷಾಂ ಪಾಪಕರ್ಮಣಾಂ
ಸಮಯೋ ರಕ್ಷಿತವ್ಯಸ್ತು ಸಂತಶ್ಚಾರಿತ್ರ ಭೂಷಣಾಃ
A learned man will not pay back if any harm is done to him. Everyone should observe this principle of right conduct.
Good conduct, like an ornament, adorns virtuous people.
ತನಗೆ ಅಪಕಾರವನ್ನು ಮಾಡಿದವನಿಗೆ ಪ್ರಾಜ್ಞನಾದವನು ತಿರುಗಿ ಅಪಕಾರವನ್ನು ಮಾಡುವುದಿಲ್ಲ. ಸದಾಚಾರವನ್ನು ಅವಶ್ಯವಾಗಿ ಪಾಲಿಸಬೇಕು. ಸಜ್ಜನರಿಗೆ ಒಳ್ಳೆಯ ನಡತೆಯೇ ಭೂಷಣ.
PUBLISHED BY LANKA KRISHNA MURTI FOUNDATION
https://www.facebook.com/lankakrishnamurtifoundation/
WEBSITE
https://www.krishnamurtifoundation.com/lanka/
LKM FOUNDATION-YOUTUBE