अथ राजविद्याराजगुह्ययोगो नाम नवमोऽध्यायः ಅಥ ರಾಜವಿದ್ಯಾರಾಜಗುಹ್ಯಯೋಗೋ ನಾಮ ನವಮೋಽಧ್ಯಾಯಃ । श्रीभगवानुवाच : इदं तु ते गुह्यतमं प्रवक्ष्याम्यनसूयवे। ज्ञानं विज्ञानसहितं यज्ज्ञात्वा मोक्ष्यसेऽशुभात्॥९.१॥ ಶ್ರೀಭಗವಾನುವಾಚ । ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ । ಜ್ಞಾನಂ ವಿಜ್ಞಾನಸಹಿತಂ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್ ॥ 9-1॥ इदं तु ते गुह्यतमं प्रवक्ष्याम्यनसूयवे। ज्ञानं विज्ञानसहितं यज्ज्ञात्वा मोक्ष्यसेऽशुभात्॥९.१॥ ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ । ಜ್ಞಾನಂ ವಿಜ್ಞಾನಸಹಿತಂ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್ ॥ 9-1॥ Sri Bhagavan said: 1. Profound and most confidential Is this Knowledge of Brahman Along with its Realisation Through Practice, By knowing and practicing which You will be liberated from all evil. Arjuna, this Royal Secret I shall reveal to you As you are not disposed to fault-finding. ಶ್ರೀ ಭಗವಂತನು ಹೇಳಿದನು: ಸತತ ಅಭ್ಯಾಸದಿಂದ ಸಾಕ್ಷತ್ಕಾರವಾಗುವ ಅಗಾಧ ಪ್ರಜ್ಞೆಯ ಮತ್ತು ಅತಿ ಗೌಪ್ಯವಾದ ಈ ಬ್ರಹ್ಮಜ್ಞಾನವನ್ನು ನೀನು ಅರಿತು ಆಚರಿಸುವುದರಿಂದ ಐಹಿಕ ಬದುಕಿನ ಸಂಕಷ್ಟದಿಂದ ಮುಕ್ತನಾಗುವೆ. ಅರ್ಜುನ! ನೀನು ಅಸೂಯಾರಹಿತನಾಗಿರುವುದರಿಂದ ನಿನಗೆ ಈ ಗುಹ್ಯತಮ, ವಿಜ್ಞಾನ ಸಹಿತ ಜ್ಞಾನವನ್ನು ನಾನು ತಿಳಿಸಿಕೊಡುತ್ತೇನೆ, ಕೇಳು. राजविद्या राजगुह्यं पवित्रमिदमुत्तमम्। प्रत्यक्षावगमं धर्म्यं सुसुखं कर्तुमव्ययम्॥९.२॥ ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ । ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ॥ 9-2॥ राजविद्या राजगुह्यं पवित्रमिदमुत्तमम्। प्रत्यक्षावगमं धर्म्यं सुसुखं कर्तुमव्ययम्॥९.२॥ ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ । ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ॥ 9-2॥ 2. This Brahma Vidya Is the choicest among all the sciences And most confidential at the same time. It is supreme and purifying, Virtuous, directly experienced, Imperishable and, above all, Very easy to access. ಈ ಬ್ರಹ್ಮವಿದ್ಯೆಯು, ಎಲ್ಲ ವಿಜ್ಞಾನಗಳಲ್ಲಿಯೂ ವಿವೇಚನಾಯುಕ್ತವಾದದ್ದು ಮತ್ತು ಅತ್ಯಂತ ರಹಸ್ಯವಾದದ್ದು. ಇದು ಅತ್ಯಂತ ಪರಿಶುದ್ಧ ಜ್ಞಾನ. ಎಲ್ಲದಕ್ಕಿಂತಲೂ ಉತ್ತಮವಾದದ್ದು. ಈ ಜ್ಞಾನ ಧರ್ಮದಿಂದ ಕೂಡಿರತಕ್ಕದ್ದು. ನಾಶರಹಿತವಾದದ್ದು, ಪವಿತ್ರವಾದದ್ದು, ಪ್ರತ್ಯಕ್ಷವಾಗಿ ಅರಿವಾಗತಕ್ಕದ್ದು, ಸಾಕ್ಷಾತ್ ಫಲದಾಯಕವಾದದ್ದು, ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಾಧನೆಗೆ ಸುಲಭಸಾಧ್ಯವಾದುದು. अश्रद्दधानाः पुरुषाः धर्मस्यास्य परंतप। अप्राप्य मां निवर्तन्ते मृत्युसंसारवर्त्मनि॥९.३॥ ಅಶ್ರದ್ದಧಾನಾಃ ಪುರುಷಾಃ ಧರ್ಮಸ್ಯಾಸ್ಯ ಪರಂತಪ । ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ ॥ 9-3॥ अश्रद्दधानाः पुरुषाः धर्मस्यास्य परंतप। अप्राप्य मां निवर्तन्ते मृत्युसंसारवर्त्मनि॥९.३॥ ಅಶ್ರದ್ದಧಾನಾಃ ಪುರುಷಾಃ ಧರ್ಮಸ್ಯಾಸ್ಯ ಪರಂತಪ । ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ ॥ 9-3॥ 3. Arjuna, Those who have no faith In this Spiritual Law Of Self-Knowledge, Without reaching Me, Take to the path that leads To Samsara, Which is marked by repeated deaths. ಅರ್ಜುನಾ! ಸ್ವಯಂ ಸಂಪಾದಿತ ಜ್ಞಾನದ ಆಧ್ಯಾತ್ಮಿಕ ನಿಬಂಧನೆಯಲ್ಲಿ ಯಾರು ಶ್ರದ್ಧೆ, ನಂಬಿಕೆಯನ್ನು ಇರಿಸಿಕೊಳ್ಳುವುದಿಲ್ಲವೋ ಅವರು ನನ್ನನ್ನು ಸೇರುವುದಿಲ್ಲ ಮತ್ತು ನನ್ನಿಂದ ದೂರವಾಗಿ ಜನನ ಮರಣದ ಮೃತ್ಯುರೂಪೀ ಸಂಸಾರಚಕ್ರದ ಹಾದಿಯಲ್ಲಿ ಸುತ್ತುತ್ತಿರುತ್ತಾರೆ. |
मया ततमिदं सर्वं
जगदव्यक्तमूर्तिना।
मत्स्थानि सर्वभूतानि
न चाहं तेष्ववस्थितः॥९.४॥
ಮಯಾ ತತಮಿದಂ ಸರ್ವಂ
ಜಗದವ್ಯಕ್ತಮೂರ್ತಿನಾ ।
ಮತ್ಸ್ಥಾನಿ ಸರ್ವಭೂತಾನಿ
ನ ಚಾಹಂ ತೇಷ್ವವಸ್ಥಿತಃ ॥ 9-4॥
मया ततमिदं सर्वं जगदव्यक्तमूर्तिना।
मत्स्थानि सर्वभूतानि न चाहं तेष्ववस्थितः॥९.४॥
ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।
ಮತ್ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ॥ 9-4॥
4. This entire Universe
Has been pervaded by Me
In My Unmanifest Form,
Which remains beyond the range
Of sense perception.
All the beings dwell in Me
But I do not dwell in them.
(In the sense that
I do not depend on those beings.)
ಅವ್ಯಕ್ತ, ಅತೀಂದ್ರಿಯ ಸ್ವರೂಪನಾದ ನನ್ನಿಂದ ಈ ಇಡೀ ಜಗತ್ತು ವ್ಯಾಪಿಸಲ್ಪಟ್ಟಿದೆ. ನನ್ನ ಸ್ವರೂಪವು ಇಂದ್ರಿಯಾತೀತವಾಗಿದೆ. ಸಮಸ್ತ ಭೂತಗಳೂ ನನ್ನೊಳಗೆ ಸಂಕಲ್ಪದ ಆಧಾರದಿಂದ ಸ್ಥಿತವಾಗಿವೆ. ಆದರೆ ವಾಸ್ತವವಾಗಿ ನಾನು ಅವುಗಳಲ್ಲಿ ಸ್ಥಿತನಾಗಿಲ್ಲ.( ಅಂದರೆ ನಾನು ಅವುಗಳ ಮೇಲೆ ಅವಲಿಂಬಿಸಿಲ್ಲ)
न च मत्स्थानि भूतानि
पस्य मे योगमैश्वरम्। ,
भूतभृन्न च भूतस्थो
ममात्मा भूतभावनः॥९.५॥
ನ ಚ ಮತ್ಸ್ಥಾನಿ ಭೂತಾನಿ
ಪಶ್ಯ ಮೇ ಯೋಗಮೈಶ್ವರಮ್ ।
ಭೂತಭೃನ್ನ ಚ ಭೂತಸ್ಥೋ
ಮಮಾತ್ಮಾ ಭೂತಭಾವನಃ ॥ 9-5॥
न च मत्स्थानि भूतानि पस्य मे योगमैश्वरम्। ,
भूतभृन्न च भूतस्थो ममात्मा भूतभावनः॥९.५॥
ನ ಚ ಮತ್ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ ।
ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ ॥ 9-5॥
5. Arjuna, observe
My extraordinary Yogic Power,
As revealed in the Creative Process:
All the beings
Though created by Me
Do not exist in Me.
(I remain unassociated.)
Though it is My Self that brings
All beings into existence
And sustains them,
I do not dwell in them.
(I am unattached.)
ಅರ್ಜುನಾ! ಈ ಸೃಷ್ಟಿಕ್ರಿಯೆಯಲ್ಲಿ ಬಿಂಬಿತವಾದ ನನ್ನ ಈಶ್ವರೀಯ ಯೋಗಶಕ್ತಿಯನ್ನು ನೋಡು. ಎಲ್ಲ ಜೀವಿಗಳೂ ನನ್ನಿಂದ ಸೃಸ್ಟಿಸಲ್ಪಟ್ಟಿವೆಯಾದರೂ ಅವುಗಳು ನನ್ನಲ್ಲಿ ಸ್ಥಿತವಾಗಿಲ್ಲ. (ಅಂದರೆ ನಾನು ಅವುಗಳ ಸಂಯೋಗದಲ್ಲಿಲ್ಲ). ಎಲ್ಲ ಜೀವಿಗಳ ಅಸ್ತಿತ್ವವೂ ನನ್ನಿಂದಲೇ ಆಗಿರುವುದಾದರೂ ಹಾಗೂ ನಾನೇ ಅವುಗಳ ಆಧಾರವಾಗಿದ್ದರೂ ನಾನು ಅವುಗಳಲ್ಲಿ ಸ್ಥಿತನಾಗಿಲ್ಲ.(ಅಂದರೆ ನಾನು ಬಂಧರಹಿತನು)
यथाकाशस्थितो नित्यं
वायुः सर्व गतो महान्।
तथा सर्वाणि भूतानि
मत्स्थानीत्युपधारय॥९.६॥
ಯಥಾಕಾಶಸ್ಥಿತೋ ನಿತ್ಯಂ
ವಾಯುಃ ಸರ್ವಗತೋ ಮಹಾನ್ ।
ತಥಾ ಸರ್ವಾಣಿ ಭೂತಾನಿ
ಮತ್ಸ್ಥಾನೀತ್ಯುಪಧಾರಯ ॥ 9-6॥
यथाकाशस्थितो नित्यं वायुः सर्व गतो महान्।
तथा सर्वाणि भूतानि मत्स्थानीत्युपधारय॥९.६॥
ಯಥಾಕಾಶಸ್ಥಿತೋ ನಿತ್ಯಂ ವಾಯುಃ ಸರ್ವಗತೋ ಮಹಾನ್ ।
ತಥಾ ಸರ್ವಾಣಿ ಭೂತಾನಿ ಮತ್ಸ್ಥಾನೀತ್ಯುಪಧಾರಯ ॥ 9-6॥
6. The Royal Mystery of the Relationship
between the Creator and the Beings is illustrated
with the help of a simile:
As the expansive and powerful air
Always subsists in space,
In the Akasha,
So all beings, animate and inanimate,
Created by Me
Exist in Me and are supported by Me.
Understand so, Arjuna.
ಸೃಷ್ಟಿಕರ್ತ ಮತ್ತು ಜೀವಿಗಳ ನಡುವೆ ಇರುವ ಸಂಬಂಧದ ರಾಜರಹಸ್ಯವನ್ನು ಒಂದು ಉಪಮೆಯ ಮೂಲಕ ವಿವರಿಸಲಾಗಿದೆ: “ ಎಲ್ಲ ಕಡೆಯೂ ವ್ಯಾಪಿಸಿರುವ ಮತ್ತು ಬಲಶಾಲಿಯಾದ ಗಾಳಿಯು ಸದಾ ಆಕಾಶದಲ್ಲಿ ಹೀಗೆ ನೆಲೆಸಿರುವುದೋ, ಹಾಗೆಯೇ ನನ್ನಿಂದ ಸೃಷ್ಟಿಸಲ್ಪಟ್ಟ ಎಲ್ಲ ಚರಾಚರ ಜೀವಿಗಳು ನನ್ನಲ್ಲಿಯೇ ನೆಲೆಗೊಂಡಿವೆ ಹಾಗೂ ನನ್ನಿಂದಲೇ ಸಂರಕ್ಷಿಸಲ್ಪಟ್ಟಿವೆ ಎಂದು ತಿಳಿ ಅರ್ಜುನ.”
सर्वभूतानि कौन्तेय!
प्रकृतिं यान्ति मामिकाम्।
कल्पक्षये, पुनस्तानि
कल्पादौ विसृजाम्यहम्॥९.७॥
ಸರ್ವಭೂತಾನಿ ಕೌಂತೇಯ
ಪ್ರಕೃತಿಂ ಯಾಂತಿ ಮಾಮಿಕಾಮ್ ।
ಕಲ್ಪಕ್ಷಯೇ ಪುನಸ್ತಾನಿ
ಕಲ್ಪಾದೌ ವಿಸೃಜಾಮ್ಯಹಮ್ ॥ 9-7॥
सर्वभूतानि कौन्तेय! प्रकृतिं यान्ति मामिकाम्।
कल्पक्षये, पुनस्तानि कल्पादौ विसृजाम्यहम्॥९.७॥
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ ।
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ ॥ 9-7॥
Arjuna,
At the end of each Time Cycle
Called Kalpa,
All beings, animate and inanimate,
Come back to My Nature or Prakruti;
Again, at the beginning
Of a New Time Cycle called Kalpa,
I create them.
ಅರ್ಜುನಾ! ಕಲ್ಪಗಳ ಅಂತ್ಯದಲ್ಲಿ ಅಂದರೆ ಪ್ರಳಯಕಾಲದಲ್ಲಿ ಸಮಸ್ತ ಚರಾಚರ ಜೀವಕೋಟಿಗಳು ನನ್ನ ಪ್ರಕೃತಿಯಲ್ಲಿ ಲೀನವಾಗುತ್ತವೆ. ಮತ್ತೆ ಹೊಸ ಕಲ್ಪದ ಆದಿಯಲ್ಲಿ ಪುನಃ ಅವುಗಳನ್ನು ನಾನು ನನ್ನ ಶಕ್ತಿಯಿಂದ ಸೃಷ್ಟಿಸುತ್ತೇನೆ.
प्रकृतिं स्वामवष्टभ्य
विसृजामि पुनःपुनः।
भूतग्राममिमं कृत्स्नं
अवशं प्रकृतेर्वशात्॥९.८॥
ಪ್ರಕೃತಿಂ ಸ್ವಾಮವಷ್ಟಭ್ಯ
ವಿಸೃಜಾಮಿ ಪುನಃ ಪುನಃ ।
ಭೂತಗ್ರಾಮಮಿಮಂ ಕೃತ್ಸ್ನಃ
ಅವಶಂ ಪ್ರಕೃತೇರ್ವಶಾತ್ ॥ 9-8॥
प्रकृतिं स्वामवष्टभ्य विसृजामि पुनःपुनः।
भूतग्राममिमं कृत्स्नं अवशं प्रकृतेर्वशात्॥९.८॥
ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ ।
ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್ ॥ 9-8॥
8. Taking control of My Nature
Or My Prakruti,
I create those beings again and again –
The entire animate and inanimate existences
Under the sway
Of their own earlier tendencies–
Vasanas and samskaras.
ವಾಸನೆಗಳು ಮತ್ತು ಸಂಸ್ಕಾರಗಳೆಂಬ ತೂಗಾಟದಿಂದ ಒಳಗೊಂಡಿರುವ, ಪ್ರಕೃತಿಯ ವಶದಿಂದ ಪರತಂತ್ರವಾಗಿರುವ ಸಕಲ ಸಜೀವ ಮತ್ತು ನಿರ್ಜೀವ ಭೂತಸಮುದಾಯವನ್ನು ಪುನಃ, ಪುನಃ, ಅವುಗಳ ಕರ್ಮಗಳಿಗನುಸಾರವಾಗಿ ಸೃಷ್ಟಿಸುತ್ತಿರುವೆನು.
न च मां तानि कर्माणि
निबध्नन्ति धनञ्जय।
उदासीनवदासीनं
असक्तं तेषु कर्मसु॥९.९॥
ನ ಚ ಮಾಂ ತಾನಿ ಕರ್ಮಾಣಿ
ನಿಬಧ್ನಂತಿ ಧನಂಜಯ ।
ಉದಾಸೀನವದಾಸೀನಂ
ಅಸಕ್ತಂ ತೇಷು ಕರ್ಮಸು ॥ 9-9॥
न च मां तानि कर्माणि निबध्नन्ति धनञ्जय।
उदासीनवदासीनं असक्तं तेषु कर्मसु॥९.९॥
ನ ಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂಜಯ ।
ಉದಾಸೀನವದಾಸೀನಂ ಅಸಕ್ತಂ ತೇಷು ಕರ್ಮಸು ॥ 9-9॥
9. Arjuna,
Those repeated acts
Of Creation and Dissolution –
Those acts done by Me
Do not bind Me to them.
Being unattached to them,
I remain indifferent to those acts.
ಅರ್ಜುನಾ!
ಸೃಷ್ಟಿ ಮತ್ತು ಲಯವೆಂಬ ಪುನರಾವೃತ್ತಿ ಕ್ರಿಯೆಯನ್ನು ನಾನು ಮಾಡುತ್ತಿದ್ದರೂ ಸಹ, ಆ ಕ್ರಿಯೆಯು ನನ್ನನ್ನು ಬಂಧಿಸುವುದಿಲ್ಲ. ಹಾಗಾಗಿ ಆ ಕ್ರಿಯೆಯಿಂದ ನಿರ್ಬಂಧನಾಗಿದ್ದು ನಾನು ಅತೀತನಾಗಿರುವೆ. ಆಸಕ್ತಿಯಿಲ್ಲದೆ ತಟಸ್ಥನಂತೆ ಇರುವ ನನ್ನನ್ನು ಆ ಕರ್ಮಗಳು ಬಂಧಿಸಲಾರವು.
मयाध्यक्षेण प्रकृतिः
सूयते सचराचरम्।
हेतुनानेन कौन्तेय
जगद्विपरिवर्तते॥९.१०॥
ಮಯಾಧ್ಯಕ್ಷೇಣ ಪ್ರಕೃತಿಃ
ಸೂಯತೇ ಸಚರಾಚರಮ್ ।
ಹೇತುನಾನೇನ ಕೌಂತೇಯ
ಜಗದ್ವಿಪರಿವರ್ತತೇ ॥ 9-10॥
मयाध्यक्षेण प्रकृतिः सूयते सचराचरम्।
हेतुनानेन कौन्तेय जगद्विपरिवर्तते॥९.१०॥
ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್ ।
ಹೇತುನಾನೇನ ಕೌಂತೇಯ ಜಗದ್ವಿಪರಿವರ್ತತೇ ॥ 9-10॥
10. Arjuna,
It is under My supervision
That Prakruti or Nature
Is causing Creation of all beings,
Mobile and immobile.
It is for this reason
That the world goes on revolving
In manifold ways.
ಅರ್ಜುನಾ, ಎಲ್ಲ ಸ್ಥಾವರ, ಜಂಗಮಾತ್ಮಕ ಭೂತಗಳ ಜಗತ್ತನ್ನು ಸೃಷ್ಟಿ ಮಾಡುತ್ತಿರುವ ಪ್ರಕೃತಿಯು, ಅಧ್ಯಕ್ಷನಾದ ನನ್ನ ಸನ್ನಿಧಾನ ಬಲದ ಮೇಲ್ವಿಚಾರಣೆಗೆ ಒಳಪಟ್ಟಿದೆ. ಆ ಕಾರಣದಿಂದಲೇ ಜಗತ್ತು ನಾನಾ ಪ್ರಕಾರವಾಗಿ ಪರಿವರ್ತಿತವಾಗುತ್ತಾ ಸುತ್ತುತ್ತಿದೆ.
अवजानन्ति मां मूढा:
मानुषीं तनुमाश्रितम्।
परं भावमजानन्तो
मम भूतमहेश्वरम्॥९.११॥
ಅವಜಾನಂತಿ ಮಾಂ ಮೂಢಾಃ
ಮಾನುಷೀಂ ತನುಮಾಶ್ರಿತಮ್ ।
ಪರಂ ಭಾವಮಜಾನಂತೋ
ಮಮ ಭೂತಮಹೇಶ್ವರಮ್ ॥ 9-11॥
अवजानन्ति मां मूढा: मानुषीं तनुमाश्रितम्।
परं भावमजानन्तो मम भूतमहेश्वरम्॥९.११॥
ಅವಜಾನಂತಿ ಮಾಂ ಮೂಢಾಃ ಮಾನುಷೀಂ ತನುಮಾಶ್ರಿತಮ್ ।
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ ॥ 9-11॥
11. Seeing the human form
That I have assumed,
Taking Me to be
Like any other human being,
Fools show disregard
And disdain towards Me.
They fail to recognize
My Transcendental Status
As the Great Lord of all beings.
ನಾನು ಧರಿಸಿರುವ ಮಾನವ ಶರೀರವನ್ನು ಕಂಡು, ನನ್ನನ್ನು ಯಾವುದೇ ಇತರ ಮಾನವನಂತೆಯೇ ಭಾವಿಸಿ ಅಸಡ್ಡೆಯಿಂದ ಉಪೇಕ್ಷಿಸಿ ಮೂರ್ಖರು ನಿರ್ಲಕ್ಷಿಸುತ್ತಾರೆ. ಸರ್ವಭೂತಗಳಿಗೂ ಮಹೇಶ್ವರನಾದ ನನ್ನ ಇಂದ್ರಿಯಾತೀತವಾದ ಅಲೌಕಿಕ ಶಕ್ತಿಯನ್ನು ಗುರ್ತಿಸಲು ಅವರು ವಿಫಲರಾಗುತ್ತಾರೆ.
मोघाशा मोघकर्माणो
मोघज्ञाना विचेतसः।
राक्षसीमासुरीं चैव
प्रकृतिं मोहिनीं श्रिताः॥९.१२॥
ಮೋಘಾಶಾ ಮೋಘಕರ್ಮಾಣೋ
ಮೋಘಜ್ಞಾನಾ ವಿಚೇತಸಃ ।
ರಾಕ್ಷಸೀಮಾಸುರೀಂ ಚೈವ
ಪ್ರಕೃತಿಂ ಮೋಹಿನೀಂ ಶ್ರಿತಾಃ ॥ 9-12॥
मोघाशा मोघकर्माणो मोघज्ञाना विचेतसः।
राक्षसीमासुरीं चैव प्रकृतिं मोहिनीं श्रिताः॥९.१२॥
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ ।
ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ ॥ 9-12॥
12. Those fools who show
Disregard and contempt towards Me
Are people of a kind
Whose desires are futile,
Whose actions remain unfulfilled,
Whose knowledge is deficient
And who exhibit monstrous
And demonic tendencies.
ನನ್ನನ್ನು ತಿರಸ್ಕರಿಸುವ, ನನಗೆ ಅಗೌರವ ತೋರಿಸುವ ಆ ಮೂರ್ಖರ ಆಸೆಗಳು ವ್ಯರ್ಥವಾದವುಗಳು, ಅವರ ಕೋರಿಕೆಗಳೂ ವ್ಯರ್ಥವೇ. ಅವರ ಅರಿವು ನಿರುಪಯೋಗಿ. ವಿಕ್ಷಿಪ್ತ, ಚಿತ್ತರಾದ ಅಜ್ಞಾನಿಗಳಾದ ಅಂತಹವರು ಮೋಹಕರವಾದ ರಾಕ್ಷಸೀ ಪ್ರಕೃತಿಯನ್ನು, ಅಸುರೀ ಸ್ವಭಾವವನ್ನು ಆಶ್ರಯಿಸಿದವರಾಗಿರುತ್ತಾರೆ.
महात्मानस्तु मां पार्थ
दैवीं प्रकृतिमाश्रिताः।
भजन्त्यनन्यमनसः
ज्ञात्वा भूतादिमव्ययम्॥९.१३॥
ಮಹಾತ್ಮಾನಸ್ತು ಮಾಂ ಪಾರ್ಥ
ದೈವೀಂ ಪ್ರಕೃತಿಮಾಶ್ರಿತಾಃ ।
ಭಜಂತ್ಯನನ್ಯಮನಸಃ
ಜ್ಞಾತ್ವಾ ಭೂತಾದಿಮವ್ಯಯಮ್ ॥ 9-13॥
महात्मानस्तु मां पार्थ दैवीं प्रकृतिमाश्रिताः।
भजन्त्यनन्यमनसः ज्ञात्वा भूतादिमव्ययम्॥९.१३॥
ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ ।
ಭಜಂತ್ಯನನ್ಯಮನಸಃ ಜ್ಞಾತ್ವಾ ಭೂತಾದಿಮವ್ಯಯಮ್ ॥ 9-13॥
13.
Arjuna, on the other hand,
Great-hearted people
Adopting a course of action
That is divine,
Get into a single-minded state
And understand Me to be
The Imperishable Source of all beings
And worship Me so.
ಅರ್ಜುನಾ! ಆದರೆ ಇನ್ನೊಂದಡೆ, ದೈವೀ ಪ್ರಕೃತಿಯನ್ನು ಆಶ್ರಯಿಸಿ ಮಹಾತ್ಮರಾದವರು, ಹೃದಯ ವೈಶಾಲ್ಯ ಉಳ್ಳವರು, ಸರ್ವಭೂತಗಳಿಗೆ ಕಾರಣನೂ, ಎಲ್ಲದರ ಆದಿಯೂ, ಅವ್ಯಯನೂ ಆದ ನನನ್ನು ತಿಳಿದು ಅನನ್ಯ ಚಿತ್ತದಿಂದ ಯುಕ್ತರಾಗಿ ನಿರಂತರ ಪೂಜಿಸುತ್ತಾರೆ.
सततं कीर्तयन्तो मां
यतन्तश्च दृढव्रताः।
नमस्यन्तश्च मां भक्त्या
नित्ययुक्ता उपासते॥९.१४॥
ಸತತಂ ಕೀರ್ತಯಂತೋ ಮಾಂ
ಯತಂತಶ್ಚ ದೃಢವ್ರತಾಃ ।
ನಮಸ್ಯಂತಶ್ಚ ಮಾಂ ಭಕ್ತ್ಯಾ
ನಿತ್ಯಯುಕ್ತಾ ಉಪಾಸತೇ ॥ 9-14॥
सततं कीर्तयन्तो मां यतन्तश्च दृढव्रताः।
नमस्यन्तश्च मां भक्त्या नित्ययुक्ता उपासते॥९.१४॥
ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ ।
ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ ॥ 9-14॥
14. They always praise and glorify Me.
They keep steadfast in their vows.
They make prostrations to Me.
They engage themselves in devotional practices
And remain eternally united with Me.
ಅವರು ಸದಾ ನನ್ನನ್ನು ಪ್ರಶಂಸಿಸುತ್ತಾ ಉಪಾಸಿಸುತ್ತಾರೆ. ಅವರು ತಮ್ಮ ವೃತನಿಷ್ಠೆಯಲ್ಲಿ ಧೃಢಸಂಕಲ್ಪವನ್ನು ಮಾಡಿರುತ್ತಾರೆ. ಅವರು ನಿರಂತರವಾಗಿ ದೈವಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಹಾಗೂ ನನ್ನಲ್ಲಿಯೇ ಶಾಶ್ವತವಾಗಿ ಏಕೀಭವಿಸುತ್ತಾರೆ.
ज्ञानयज्ञेन चाप्यन्ये
यजन्तो मामुपासते।
एकत्वेन पृथक्त्वेन
बहुधा विश्वतोमुखम्॥९.१५॥
ಜ್ಞಾನಯಜ್ಞೇನ ಚಾಪ್ಯನ್ಯೇ
ಯಜಂತೋ ಮಾಮುಪಾಸತೇ ।
ಏಕತ್ವೇನ ಪೃಥಕ್ತ್ವೇನ
ಬಹುಧಾ ವಿಶ್ವತೋಮುಖಮ್ ॥ 9-15॥
ज्ञानयज्ञेन चाप्यन्ये यजन्तो मामुपासते।
एकत्वेन पृथक्त्वेन बहुधा विश्वतोमुखम्॥९.१५॥
ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ ।
ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋಮುಖಮ್ ॥ 9-15॥
15. Some worship Me
By performing Gnana Yagna,
That is, they offer
Their knowledge of Brahan
As an oblation –
The knowledge that considers
The Supreme Self as One.
Others worship Me differently:
They look at Me manifesting
In different forms,
As the sun, the moon, etc.
Yet other worshippers see Me
With My face turned everywhere,
Holding that it is the same Brahman
That has several forms
And all the forms are His.
ಮತ್ತೆ ಕೆಲವರು ಜ್ಞಾನಯಜ್ಞದಿಂದ ನನ್ನನ್ನು ಉಪಾಸಿಸುತ್ತಾರೆ. ಅಂದರೆ ಅವರ ಬ್ರಹ್ಮಜ್ಞಾನವನ್ನು ನನಗೆ ನೈವೇದ್ಯವಾಗಿ ಸಮರ್ಪಿಸುತ್ತಾರೆ. ಬ್ರಹ್ಮಜ್ಞಾನವೆಂದರೆ ಪರಮಾತ್ಮನ ಏಕತ್ವದ ಅರಿವು. ಇನ್ನೂ ಕೆಲವರು ನನ್ನನ್ನು ವಿಭಿನ್ನವಾಗಿ ಪೂಜಿಸುತ್ತಾರೆ. ಇವರು ಸೂರ್ಯ, ಚಂದ್ರ ಇತ್ಯಾದಿ ಸ್ಪಷ್ಟ ರೂಪದಲ್ಲಿ ನನ್ನನ್ನು ಕಾಣುತ್ತಾರೆ. ಮತ್ತೆ ಕೆಲವು ಉಪಾಸಕರು ವಿರಾಟ್ ಸ್ವರೂಪೀ ಪರಮೇಶ್ವರನಾದ ನನ್ನನ್ನು ಪೃಥಕ್ ಭಾವದಿಂದ ಆರಾಧಿಸುತ್ತಾರೆ. ಹಲವರು ಭೇದಭಾವದಿಂದ, ಪರಿಪರಿ ವಿಧವಾಗಿ ಸೇವಿಸುತ್ತಾರೆ.
अहं क्रतुरहं यज्ञः
स्वधाहमहमौषधम्।
मन्त्रोऽहमहमेवाज्यं
अहमग्निरहं हुतम्॥९.१६॥
ಅಹಂ ಕ್ರತುರಹಂ ಯಜ್ಞಃ
ಸ್ವಧಾಹಮಹಮೌಷಧಮ್ ।
ಮಂತ್ರೋಽಹಮಹಮೇವಾಜ್ಯಂ
ಅಹಮಗ್ನಿರಹಂ ಹುತಮ್ ॥ 9-16॥
अहं क्रतुरहं यज्ञः स्वधाहमहमौषधम्।
मन्त्रोऽहमहमेवाज्यं अहमग्निरहं हुतम्॥९.१६॥
ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಮ್ ।
ಮಂತ್ರೋಽಹಮಹಮೇವಾಜ್ಯಂ ಅಹಮಗ್ನಿರಹಂ ಹುತಮ್ ॥ 9-16॥
16. I am the Kratu,
A rite enjoined by the Shruti:
It is an elaborate Vedic ritual
Involving the use of Fire and Soma Juice.
I am the Yagna.
The Smruti ordains the performance
Of Five Kinds of Yagna,
Known as Pancha Maha Yagnas;
a. Brahma Yagna or Rushi Yagna
b. Deva Yagna
c. Pitru Yagna
d. Manushya Yagna and
e. Bhuta Yagna.
I am swadha,
The oblation offered to the ancestors.
I am Aushadham,
The medicinal herb.
I am the Mantra.
I am the Ajyam, clarified butter
Used to make offerings into fire.
I am the Fire used to perform Homa.
I am also the oblation or offering
Made into the Fire.
ನಾನೇ ಕ್ರತುವು.
(ಕ್ರತು ಎಂಬುದು ಶ್ರುತಿಗಳಲ್ಲಿ ಹೇಳಿರುವ ಒಂದು ಶಾಸ್ತ್ರೋಕ್ತ ಕರ್ಮ. ಅಗ್ನಿ ಮತ್ತು ಸೋಮರಸವನ್ನು ಬಳಸಿ ನಡೆಸುವ, ಸಂಗೋಪಾಂಗ ವೈದಿಕ ಕ್ರಿಯೆ ಇದಾಗಿದೆ)
ನಾನೇ ಯಜ್ಞ.
(ಪಂಚಮಹಾಯಜ್ಞಗಳೆಂಬ ಐದು ಪ್ರಕಾರದ ಮಹಾಯಜ್ಞಗಳ ಕ್ರಿಯೆಯನ್ನು ಸ್ಮೃತಿಗಳಲ್ಲಿ ವಿಧಿಸಲಾಗಿದೆ.
೧. ಬ್ರಹ್ಮ ಯಜ್ಞ, ಅಥವಾ ಋಷಿಯಜ್ಞ,
೨. ದೇವ ಯಜ್ಞ.
೩. ಪಿತೃ ಯಜ್ಞ.
೪. ಮನುಷ್ಯ ಯಜ್ಞ.
೫. ಭೂತ ಯಜ್ಞ. )
ಸ್ವಧಾಕಾರವು ನಾನೇ.
(ನಮ್ಮ ಪಿತೃಗಳಿಗೆ ಅರ್ಪಿಸುವ ಪಿಂಡವನ್ನು ಸ್ವಧಾ ಎನ್ನುತ್ತಾರೆ)
ನಾನೇ ಔಷಧವು. ( ಖಾಯಿಲೆ ಗುಣಪಡಿಸುವ ಗಿಡ ಮೂಲಿಕೆ.)
ನಾನೇ ಮಂತ್ರ.
ನಾನೇ ಆಜ್ಯ (ಹೋಮದಲ್ಲಿ, ಅಗ್ನಿಗೆ ಸಮರ್ಪಿಸುವ ಬೆಣ್ಣೆ ಕಾಯಿಸಿದ ತುಪ್ಪ.)
ನಾನೇ ಅಗ್ನಿ (ಹೋಮ ಮಾಡಲಿಕ್ಕೆ ಬೇಕಾದ ಬೆಂಕಿ.)
ನಾನೇ ಹವಿಸ್ಸು.( ಹೋಮದ ಅಗ್ನಿಗೆ ಸಮರ್ಪಿಸುವ ನೈವೇದ್ಯ ಅಥವಾ ಆಹುತಿ.)
पिताहमस्य जगतो
मlता धाता पितामहः।
वेद्यं पवित्रमोङ्कार:
ऋक्साम यजुरेव च॥९.१७॥
ಪಿತಾಹಮಸ್ಯ ಜಗತೋ
ಮಾತಾ ಧಾತಾ ಪಿತಾಮಹಃ ।
ವೇದ್ಯಂಪವಿತ್ರಮೋಂಕಾರಃ ಋಕ್ಸಾಮ ಯಜುರೇವ ಚ ॥ 9-17॥
पिताहमस्य जगतो मlता धाता पितामहः।
वेद्यं पवित्रमोङ्कार: ऋक्साम यजुरेव च॥९.१७॥
ಪಿತಾಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ ।
ವೇದ್ಯಂಪವಿತ್ರಮೋಂಕಾರಃ ಋಕ್ಸಾಮ ಯಜುರೇವ ಚ ॥ 9-17॥
17. I am the Father of this world,
I am its Mother too;
I am the Dispenser of the fruits of actions;
I am also the Grandfather of this world;
I am the Object of Knowing;
I am the Sacred Syllable AUM;
And I am also the three Vedas:
Ruk, Sama and Yajus.
ಈ ಜಗತ್ತಿಗೆ ತಂದೆ ನಾನು. ತಾಯಿಯೂ ಹೌದು. ಕರ್ಮಫಲಗಳನ್ನು ಕೊಡುವವನು ನಾನು. ಈ ವಿಶ್ವದ ಪಿತಾಮಹನೂ ನಾನೇ. ತಿಳಿಯಲು ಯೋಗ್ಯವಾದ ವಸ್ತು ನಾನು. ಪವಿತ್ರವಾದ ಓಂಕಾರವು ನಾನು. ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೂ ನಾನೇ ಆಗಿದ್ದೇನೆ.
गतिर्भर्ता प्रभुः साक्षी
निवासः शरणं सुहृत्।
प्रभवः प्रळयः स्थानं
निधानं बीजमव्ययम्॥९.१८॥
ಗತಿರ್ಭರ್ತಾ ಪ್ರಭುಃ ಸಾಕ್ಷೀ
ನಿವಾಸಃ ಶರಣಂ ಸುಹೃತ್ ।
ಪ್ರಭವಃ ಪ್ರಳಯ ಸ್ಥಾನಂ
ನಿಧಾನಂ ಬೀಜಮವ್ಯಯಮ್ ॥ 9-18॥
गतिर्भर्ता प्रभुः साक्षी निवासः शरणं सुहृत्।
प्रभवः प्रळयः स्थानं निधानं बीजमव्ययम्॥९.१८॥
ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್ ।
ಪ್ರಭವಃ ಪ್ರಳಯ ಸ್ಥಾನಂ ನಿಧಾನಂ ಬೀಜಮವ್ಯಯಮ್ ॥ 9-18॥
18. I am the Goal,
I am the Support as well.
I am the Lord
Standing as the Witness.
I am the Abode for all beings.
For people who suffer,
I am the Refuge.
I am also the Well-Wisher.
I am the Origin of this world
And I cause its Dissolution.
I am Existence.
I am the Treasury of Fruits
That people reap.
And I am also the Indestructible Seed.
ನಾನೇ ಗುರಿಯು. ನಾನೇ ಪೋಷಿಸುವವನು. ಜಗತ್ತಿಗೆ ಸಾಕ್ಷಿಯಾಗಿ ನಿಂತಿರುವ ನಾನೇ ಎಲ್ಲರ ಒಡೆಯನು. ಜಗತ್ತಿನ ಎಲ್ಲರ ವಾಸಸ್ಥಾನವೂ ನಾನೇ. ಕಷ್ಟಕಾರ್ಪಣ್ಯಗಳಿಂದ ನರಳುತ್ತಿರುವವರಿಗೆ ನಾನೇ ಆಶ್ರಯದಾತನು. ಎಲ್ಲರ ಹಿತೈಷಿಯೂ ನಾನೇ. ಈ ಪ್ರಪಂಚದ ಸೃಷ್ಟಿಕರ್ತ ನಾನು, ಮತ್ತು ಪ್ರಳಯಕಾರಕನೂ ನಾನೇ. ಈ ಜಗತ್ತಿನ ಅಸ್ತಿತ್ವ ನಾನು. ಕಾಲಾಂತರದಲ್ಲಿ ಪ್ರಾಣಿಗಳು ಪಡೆಯುವ ಫಲಗಳ ಭಂಡಾರ ನಾನು, ಹಾಗೂ ಜಗತ್ತಿನ ಅಕ್ಷಯಬೀಜವೂ ನಾನೇ ಆಗಿರುವೆನು.
तपाम्यहमहं वर्षं
निगृह्णाम्युत्सृजामि च।
अमृतं चैव मृत्युश्च
सदसच्चाहमर्जुन॥९.१९॥
ತಪಾಮ್ಯಹಮಹಂ ವರ್ಷಂ
ನಿಗೃಹ್ಣಾಮ್ಯುತ್ಸೃಜಾಮಿ ಚ ।
ಅಮೃತಂ ಚೈವ ಮೃತ್ಯುಶ್ಚ
ಸದಸಚ್ಚಾಹಮರ್ಜುನ ॥ 9-19॥
तपाम्यहमहं वर्षं निगृह्णाम्युत्सृजामि च।
अमृतं चैव मृत्युश्च सदसच्चाहमर्जुन॥९.१९॥
ತಪಾಮ್ಯಹಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ ।
ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ॥ 9-19॥
19. Arjuna,
I cause heat;
I send forth rain
And withhold it too.
I am Death as well as Immortality.
I am both Sat and Asat:
Being and Non-Being.
ಎಲೈ ಅರ್ಜುನಾ,
ಸೂರ್ಯನ ರೂಪದಿಂದ ಶಾಖವನ್ನು ಉತ್ಪತ್ತಿ ಮಾಡುವವನು ನಾನು. ನಾನೇ ಮಳೆಯನ್ನು ತಡೆಹಿಡಿಯುವವನು ಹಾಗೂ ಮಳೆ ಸುರಿಸುವವನು. ನಾನೇ ಅಮೃತ ಮತ್ತು ನಾನೇ ಮೃತ್ಯುವಾಗಿದ್ದೇನೆ. ಸತ್ ಮತ್ತು ಆಸತ್ ಕೂಡಾ ನಾನೇ ಆಗಿದ್ದೇನೆ. ಜಡವಸ್ತು ಮತ್ತು ಚೇತನ ಎರಡೂ ನನಲ್ಲಿವೆ.
त्रैविद्या मां सोमपाः पूतपापाः
यज्ञैरिष्ट्वा स्वर्गतिं प्रार्थयन्ते।
ते पुण्यमासाद्य सुरेन्द्रलोकं
अश्नन्ति दिव्यान्दिवि देवभोगान्॥९.२०॥
ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾಃ
ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ ।
ತೇ ಪುಣ್ಯಮಾಸಾದ್ಯ ಸುರೇಂದ್ರಲೋಕಂ
ಅಶ್ನಂತಿ ದಿವ್ಯಾಂದಿವಿ ದೇವಭೋಗಾನ್ ॥ 9-20॥
त्रैविद्या मां सोमपाः पूतपापाः यज्ञैरिष्ट्वा स्वर्गतिं प्रार्थयन्ते।
ते पुण्यमासाद्य सुरेन्द्रलोकं अश्नन्ति दिव्यान्दिवि देवभोगान्॥९.२०॥
ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾಃ ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ ।
ತೇ ಪುಣ್ಯಮಾಸಾದ್ಯ ಸುರೇಂದ್ರಲೋಕಂ ಅಶ್ನಂತಿ ದಿವ್ಯಾಂದಿವಿ ದೇವಭೋಗಾನ್ ॥ 9-20॥
20. Knowers of the three Vedas,
Ruk, Sama and Yajus,
Worship Me
Through the performance of Yagnas
And partaking of Soma Juice.
They thus get rid of their sins
And seek attainment of Heaven.
As a result of the punya they have acquired,
They attain the World of Indra
And enjoy there the divine pleasures.
ಋಗ್ವೇದ, ಯಜುರ್ವೇದ, ಮತ್ತು ಸಾಮವೇದಗಳೆಂಬ ಮೂರು ವೇದಗಳನ್ನು ಬಲ್ಲವರು, ಸೋಮರಸಪಾನ ಮಾಡುವವರಾಗಿ ಯಜ್ಞಗಳ ಮೂಲಕ ನನ್ನನ್ನು ಪೂಜಿಸುತ್ತಾರೆ. ಈ ಮೂಲಕ ಅವರು ತಮ್ಮ ಪಾಪಗಳನ್ನು ಕಳೆದುಕೊಂಡು ಸ್ವರ್ಗದ ಪ್ರಾಪ್ತಿಯನ್ನು ಬಯಸುತ್ತಾರೆ. ಅವರು ಗಳಿಸಿದ ಪುಣ್ಯದ ಫಲವಾಗಿ, ಇಂದ್ರ ಲೋಕವನ್ನು ಹೊಂದಿ ಸ್ವರ್ಗದಲ್ಲಿ ದಿವ್ಯವಾದ ದೇವತೆಗಳ ನಾನಾ ವಿಧದ ಭೋಗಗಳನ್ನು ಯಥೇಚ್ಛವಾಗಿ ಅನುಭವಿಸುತ್ತಾರೆ.
ते तं भुक्त्वा स्वर्गलोकं विशालं
क्षीणे पुण्ये मर्त्यलोकं विशन्ति।
एवं त्रयीधर्ममनुप्रपन्ना:
गतागतं कामकामा लभन्ते॥९.२१॥
ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ
ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ ।
ಏವಂ ತ್ರಯೀಧರ್ಮಮನುಪ್ರಪನ್ನಾಃ
ಗತಾಗತಂ ಕಾಮಕಾಮಾ ಲಭಂತೇ ॥ 9-21॥
ते तं भुक्त्वा स्वर्गलोकं विशालं क्षीणे पुण्ये मर्त्यलोकं विशन्ति।
एवं त्रयीधर्ममनुप्रपन्ना: गतागतं कामकामा लभन्ते॥९.२१॥
ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ ।
ಏವಂ ತ್ರಯೀಧರ್ಮಮನುಪ್ರಪನ್ನಾಃ ಗತಾಗತಂ ಕಾಮಕಾಮಾ ಲಭಂತೇ ॥ 9-21॥
21. Those revelers of vast
And expansive heavenly pleasures
When their punya gets exhausted
Come back to this world of mortality.
Thus those pleasure-seekers,
In accordance with the Vedic Laws,
Register their movements to and from heaven.
ಹೀಗೆ ಆ ವಿಲಾಸಿಗಳು ಸ್ವರ್ಗಲೋಕದ ಅಪಾರವಾದ ಇಂದ್ರಿಯ ಭೋಗಗಳನ್ನು ಅನುಭವಿಸಿ, ತಮ್ಮ ಪುಣ್ಯ ಕಾರ್ಯಗಳ ಫಲಗಳು ಕ್ಷಯಿಸಿದ ನಂತರ ಈ ಮರ್ತ್ಯ ಲೋಕಕ್ಕೆ ಹಿಂದಿರುಗುತ್ತಾರೆ. ಹೀಗೆ ಮೂರು ವೇದಗಳ ತತ್ವಗಳ ವೈದಿಕ ಕರ್ಮವನ್ನು ಅನುಷ್ಠಾನ ಮಾಡುವ ಕಾಮಕಾಮಿಗಳು, ಇಂದ್ರಿಯ ಸುಖವನ್ನಷ್ಟೇ ಅರಸುವವರು ಮತ್ತೆ ಮತ್ತೆ ಹುಟ್ಟಿ ಸಾಯುವ ಗಮನ- ಆಗಮನಗಳನ್ನು ಹೊಂದುತ್ತಾರೆ. ಅರ್ಥಾತ್ ಪುಣ್ಯದ ಪ್ರಭಾವದಿಂದ ಸ್ವರ್ಗಕ್ಕೆ ಹೋಗುತ್ತಾರೆ ಮತ್ತು ಪುಣ್ಯವು ಕ್ಷೀಣಿಸಿದ ನಂತರ ಮರ್ತ್ಯಲೋಕಕ್ಕೆ ಬರುತ್ತಾರೆ.
येप्यन्यदेवता भक्ता:
यजन्ते श्रद्धयान्विताः।
तेऽपि मामेव कौन्तेय
यजन्त्यविधिपूर्वकम्॥९.२३॥
ಯೇಽಪ್ಯನ್ಯದೇವತಾ ಭಕ್ತಾಃ
ಯಜಂತೇ ಶ್ರದ್ಧಯಾನ್ವಿತಾಃ ।
ತೇಽಪಿ ಮಾಮೇವ ಕೌಂತೇಯ
ಯಜಂತ್ಯವಿಧಿಪೂರ್ವಕಮ್ ॥ 9-23॥
येप्यन्यदेवता भक्ता: यजन्ते श्रद्धयान्विताः।
तेऽपि मामेव कौन्तेय यजन्त्यविधिपूर्वकम्॥९.२३॥
ಯೇಽಪ್ಯನ್ಯದೇವತಾ ಭಕ್ತಾಃ ಯಜಂತೇ ಶ್ರದ್ಧಯಾನ್ವಿತಾಃ ।
ತೇಽಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ ॥ 9-23॥
अहं हि सर्वयज्ञानां
भोक्ता च प्रभुरेव च।
न तु मामभिजानन्ति
तत्वेनातश्च्यवन्ति ते॥९.२४॥
ಅಹಂ ಹಿ ಸರ್ವಯಜ್ಞಾನಾಂ
ಭೋಕ್ತಾ ಚ ಪ್ರಭುರೇವ ಚ ।
ನ ತು ಮಾಮಭಿಜಾನಂತಿ
ತತ್ತ್ವೇನಾತಶ್ಚ್ಯವಂತಿ ತೇ ॥ 9-24॥
अहं हि सर्वयज्ञानां भोक्ता च प्रभुरेव च।
न तु मामभिजानन्ति तत्वेनातश्च्यवन्ति ते॥९.२४॥
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ ।
ನ ತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ॥ 9-24॥
23.
24. Arjuna,
The devotees of other divinities
Who worship them with firm faith,
In fact, worship Me only.
They do so,
Being ignorant of Vedic injunctions.
I am indeed the Enjoyer
Of all Yagnas.
I am also the Lord.
But they, in ignorance,
Do not recognize Me so.
They fall off from the benefits
Which they get from their performances.
In short, they come back to this world
Of births and deaths,
Without attaining Me.
ಹೇ ಅರ್ಜುನನೇ,
ಧೃಢ ನಿಶ್ಚಯದಿಂದ, ಶ್ರದ್ಧೆಯಿಂದ ಇತರ ದೇವತೆಗಳನ್ನು ಪೂಜಿಸುವವರೂ ಸಹ, ನನ್ನನ್ನು ಆರಾಧಿಸುವವರೇ ಆಗಿರುತ್ತಾರೆ. ಅಂದರೆ ಪರೋಕ್ಷವಾಗಿ ನನ್ನನ್ನೇ ಪೂಜಿಸಿದಂತಾಗುತ್ತದೆ. ಅವರು ವೈದಿಕ ಕಟ್ಟಳೆಯ ಅಜ್ಞಾನದಿಂದ ಹೀಗೆ ಅನ್ಯ ದೇವೋಪಾಸಕರಾಗಿರುತ್ತಾರೆ. ಆದರೂ ಅವರ ಪೂಜೆಯು ವಿಧಿಪೂರ್ವಕವಾದುದಲ್ಲ. ಸಮಸ್ತ ಯಜ್ಞಗಳ ಭೋಕ್ತಾರನೂ ಮತ್ತು ಒಡೆಯನೂ ನಾನೇ ಆಗಿದ್ದೇನೆ. ಆದರೆ ಅವರು ಅಜ್ಙಾನದಿಂದ ನನ್ನನ್ನು ಗ್ರಹಿಸುವುದಿಲ್ಲ. ಹೀಗಾಗಿ ತಮ್ಮ ಸಾಧನೆಯಿಂದ ದೊರಕಬೇಕಾದ ಲಾಭವು ಅವರಿಗೆ ದೊರಕುವುದಿಲ್ಲ. ಸ್ಥೂಲವಾಗಿ ಹೇಳಬೇಕೆಂದರೆ, ಅವರು ಜನನ ಮತ್ತು ಮರಣ ಚಕ್ರದ ಈ ಪ್ರಪಂಚಕ್ಕೆ ಮರಳಿ ಬರುತ್ತಾರೆ. ಅವರಿಗೆ ನನ್ನನ್ನು ಹೊಂದಲು ಆಗುವುದಿಲ್ಲ.
यान्ति देवव्रता देवान्
पितॄन्यान्ति पितृव्रताः।
भूतानि यान्ति भूतेज्या:
यान्ति मद्याजिनोऽपि माम्॥९.२५॥
ಯಾಂತಿ ದೇವವ್ರತಾ ದೇವಾನ್
ಪಿತೄನ್ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾಃ
ಯಾಂತಿ ಮದ್ಯಾಜಿನೋಽಪಿ ಮಾಮ್ ॥ 9-25॥
यान्ति देवव्रता देवान् पितॄन्यान्ति पितृव्रताः।
भूतानि यान्ति भूतेज्या: यान्ति मद्याजिनोऽपि माम्॥९.२५॥
ಯಾಂತಿ ದೇವವ್ರತಾ ದೇವಾನ್ ಪಿತೄನ್ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾಃ ಯಾಂತಿ ಮದ್ಯಾಜಿನೋಽಪಿ ಮಾಮ್ ॥ 9-25॥
25. Those who are devoted to,
And worship, the deities
Like Indra and Aditya
Go to the realms of those deities only.
Those who are devoted to
And worship the Ancestors
reach their realm, the Pitruloka.
And those who are devoted to,
And worship, the Spirits like Vinayaka,
Reach those realms of the Spirits.
But those who are devoted to,
And worship, Me
Attain Me alone.
ಇಂದ್ರ ಮತ್ತು ಆದಿತ್ಯ ಮುಂತಾದ ದೇವತೆಗಳಲ್ಲಿ ಅನುರಕ್ತರಾಗಿ ಪೂಜೆಯನ್ನು ಮಾಡುವವರು, ದೇವತಾಲೋಕಗಳನ್ನು ಮಾತ್ರ ಪಡೆಯುತ್ತಾರೆ. ಪಿತೃಗಳನ್ನು ಪೂಜಿಸಿ ಆರಾಧಿಸುವವರು, ಪಿತೃಲೋಕವನ್ನು ಹೊಂದುತ್ತಾರೆ: ಮತ್ತು ವಿನಾಯಕ ಮುಂತಾದ ಭೂತಗಣಗಳನ್ನು ಉಪಾಸಿಸಿ, ಪೂಜೆ ಮಾಡುವವರು, ಭೂತ ಲೋಕವನ್ನು ಸೇರುತ್ತಾರೆ. ಆದರೆ ಯಾರು ನನ್ನನ್ನು ಧೃಢ ಭಕ್ತಿಯಿಂದ ಪೂಜಿಸುವರೋ, ಅವರು ನಿಶ್ಚಯವಾಗಿ ನನ್ನನ್ನೇ ಪಡೆಯುತ್ತಾರೆ. ಅದಕ್ಕಾಗಿ ನನ್ನ ಭಕ್ತರಿಗೆ ಪುನರ್ಜನ್ಮವಾಗುವುದಿಲ್ಲ.
पत्रं पुष्पं फलं तोयं
यो मे भक्त्या प्रयच्छति।
तदहं भक्त्युपहृतं
अश्नामि प्रयतात्मनः॥९.२६॥
ಪತ್ರಂ ಪುಷ್ಪಂ ಫಲಂ ತೋಯಂ
ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯುಪಹೃತಮಂ
ಅಶ್ನಾಮಿ ಪ್ರಯತಾತ್ಮನಃ ॥ 9-26॥
पत्रं पुष्पं फलं तोयं यो मे भक्त्या प्रयच्छति।
तदहं भक्त्युपहृतं अश्नामि प्रयतात्मनः॥९.२६॥
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।
ತದಹಂ ಭಕ್ತ್ಯುಪಹೃತಮಂ ಅಶ್ನಾಮಿ ಪ್ರಯತಾತ್ಮನಃ ॥ 9-26॥
26. I will accept willingly
A leaf, a flower, a fruit,
Or even a little water,
When offered to Me
By a pure-hearted devotee.
ಶುದ್ಧ ಚಿತ್ತವುಳ್ಳ, ನಿಷ್ಕಾಮ ಪ್ರೇಮಿಯಾದ ಭಕ್ತನು, ನನಗೆ ಪ್ರೇಮದಿಂದ ಪತ್ರ ಅಂದರೆ ಎಲೆಯನ್ನಾಗಲೀ, ಪುಷ್ಪ ಅಂದರೆ ಹೂವನ್ನಾಗಲೀ, ಫಲ ಅಂದರೆ ಹಣ್ಣನ್ನಾಗಲೀ ಅಥವಾ ಒಂದಿಷ್ಟು ಜಲ ಅಂದರೆ ನೀರನ್ನಾಗಲೀ, ಅರ್ಪಿಸಿದಾಗ, ಅವುಗಳನ್ನು ಇಷ್ಟಪಟ್ಟು, ಪ್ರೇಮದಿಂದ ನಾನು ಸ್ವೀಕರಿಸುತ್ತೇನೆ.
यत्करोषि यदश्नासि
यज्जुहोषि ददासि यत्।
यत्तपस्यसि कौन्तेय
तत्कुरुष्व मदर्पणम्॥९.२७॥
ಯತ್ಕರೋಷಿ ಯದಶ್ನಾಸಿ
ಯಜ್ಜುಹೋಷಿ ದದಾಸಿ ಯತ್ ।
ಯತ್ತಪಸ್ಯಸಿ ಕೌಂತೇಯ
ತತ್ಕುರುಷ್ವ ಮದರ್ಪಣಮ್ ॥ 9-27॥
यत्करोषि यदश्नासि यज्जुहोषि ददासि यत्।
यत्तपस्यसि कौन्तेय तत्कुरुष्व मदर्पणम्॥९.२७॥
ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ ।
ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್ ॥ 9-27॥
27. Whatever activity you may be engaged in,-
Whatever you do, eat,
Whatever offerings you make,
Whatever gifts you give,
Or whatever austerities you perform –
Arjuna, offer that activity to Me
As dedication.
ಎಲೈ ಅರ್ಜುನ, ನೀನು ಯಾವುದೇ ಕಾರ್ಯದಲ್ಲಿ ತೊಡಗಿರು, ಯಾವುದೇ ಕರ್ಮವನ್ನು ಮಾಡು, ಏನನ್ನೇ ಭುಂಜಿಸು, ಏನನ್ನೇ ಅರ್ಪಿಸು ಅಥವಾ ಕೊಟ್ಟುಬಿಡು, ಯಾವುದೇ ತಪಸ್ಸನ್ನು ಮಾಡು, ಮತ್ತು ಯಾವುದನ್ನೇ ಹೋಮ ಮಾಡು – ಅದನ್ನು ನನಗೆ ಕಾಣಿಕೆಯಾಗಿ ಧನ್ಯಭಾವದಿಂದ ಸಮರ್ಪಿಸು.
शुभाशुभफलैरेवं
मोक्ष्यसे कर्मबन्धनैः।
सन्यासयोगयुक्तात्मा
विमुक्तो मामुपैष्यसि॥९.२८॥
ಶುಭಾಶುಭಫಲೈರೇವಂ
ಮೋಕ್ಷ್ಯಸೇ ಕರ್ಮಬಂಧನೈಃ ।
ಸಂನ್ಯಾಸಯೋಗಯುಕ್ತಾತ್ಮಾ
ವಿಮುಕ್ತೋ ಮಾಮುಪೈಷ್ಯಸಿ ॥ 9-28॥
शुभाशुभफलैरेवं मोक्ष्यसे कर्मबन्धनैः।
सन्यासयोगयुक्तात्मा विमुक्तो मामुपैष्यसि॥९.२८॥
ಶುಭಾಶುಭಫಲೈರೇವಂ ಮೋಕ್ಷ್ಯಸೇ ಕರ್ಮಬಂಧನೈಃ ।
ಸಂನ್ಯಾಸಯೋಗಯುಕ್ತಾತ್ಮಾ ವಿಮುಕ್ತೋ ಮಾಮುಪೈಷ್ಯಸಿ ॥ 9-28॥
28. By doing so,
That is, by dedicating
Every work that you do
To Me,
You will be freed
From the bonds of actions
With their fruits: both good and bad.
This is Yoga of Renunciation.
When you get integrated with this Yoga,
You will get Liberated
And will come to Me at the end.
ಈ ರೀತಿಯಲ್ಲಿ, ನೀನು ಮಾಡುವ ಯಾವುದೇ ಕೆಲಸವನ್ನು ನನಗೆ ಸಮರ್ಪಿಸಿ, ಶುಭಾಶುಭ ಫಲರೂಪವಾದ ಕರ್ಮಬಂಧನದಿಂದ ಮುಕ್ತಿಯನ್ನು ಹೊಂದುವೆ. ಇದೇ ಸನ್ಯಾಸಯೋಗ. ಈ ಯೋಗದೊಂದಿಗೆ ನೀನು ಏಕೀಕರಿಸಿದಾಗ ನಿನಗೆ ಶಾಶ್ವತ ಮುಕ್ತಿ ದೊರೆತು, ಕಡೆಗೆ ನನ್ನನ್ನು ಸೇರುವೆ.
समोऽहं सर्वभूतेषु
न मे द्वेष्योऽस्ति न प्रियः।
ये भजन्ति तु मां भक्त्या
मयि ते तेषु चाप्यहम्॥९.२९॥
ಸಮೋಽಹಂ ಸರ್ವಭೂತೇಷು
ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ ।
ಯೇ ಭಜಂತಿ ತು ಮಾಂ ಭಕ್ತ್ಯಾ
ಮಯಿ ತೇ ತೇಷು ಚಾಪ್ಯಹಮ್ ॥ 9-29॥
समोऽहं सर्वभूतेषु न मे द्वेष्योऽस्ति न प्रियः।
ये भजन्ति तु मां भक्त्या मयि ते तेषु चाप्यहम्॥९.२९॥
ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ ।
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ॥ 9-29॥
29. I have neither a foe nor a friend.
I treat everyone alike.
But those who worship Me
With devotion
Will come to dwell in Me
And I too will remain in their hearts.
ನಾನು ಸಮಸ್ತ ಜೀವರಾಶಿಗಳಲ್ಲಿ ಸಮಭಾವದಿಂದ ವ್ಯಾಪಕನಾಗಿದ್ದು ಎಲ್ಲರನ್ನೂ ಒಂದೇ ವಿಧವಾಗಿ ಭಾವಿಸುತ್ತೇನೆ. ನನಗೆ ಶತ್ರುವೂ ಇಲ್ಲ, ಮಿತ್ರನೂ ಇಲ್ಲ. ಆದರೆ ಭಕ್ತಿಪೂರ್ವಕವಾಗಿ ಯಾರು ನನ್ನನ್ನು ಭಜಿಸುತ್ತಾರೆಯೋ ಅವರು ನನ್ನಲ್ಲಿಯೇ ಮನೆ ಮಾಡಿರುತ್ತಾರೆ, ಮತ್ತು ನಾನೂ ಸಹ ಅವರ ಹೃದಯಗಳಲ್ಲಿ ನೆಲೆಸಿರುತ್ತೇನೆ.
अपि चेत्सुदुराचारो
भजते मामनन्यभाक्।
साधुरेव स मन्तव्यः
सम्यग्व्यवसितो हि सः॥९.३०॥
ಅಪಿ ಚೇತ್ಸುದುರಾಚಾರೋ
ಭಜತೇ ಮಾಮನನ್ಯಭಾಕ್ ।
ಸಾಧುರೇವ ಸ ಮಂತವ್ಯಃ
ಸಮ್ಯಗ್ವ್ಯವಸಿತೋ ಹಿ ಸಃ ॥ 9-30॥
अपि चेत्सुदुराचारो भजते मामनन्यभाक्।
साधुरेव स मन्तव्यः सम्यग्व्यवसितो हि सः॥९.३०॥
ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್ ।
ಸಾಧುರೇವ ಸ ಮಂತವ್ಯಃ ಸಮ್ಯಗ್ವ್ಯವಸಿತೋ ಹಿ ಸಃ ॥ 9-30॥
30. A person
Though extremely wicked and evil
If with exclusive devotion
Worships Me,
He should be considered a worthy person
For the right decision taken
In favour of devotion to Me.
ಒಂದು ವೇಳೆ ಯಾರಾದರೂ ಮಿತಿಮೀರಿದ ದುರಾಚಾರಿ ಮತ್ತು ನೀಚ, ಆಗಿದ್ದರೂ ಸಹ ತನ್ನ ವಿಕಲ್ಪಗಳನ್ನು ತ್ಯಜಿಸಿ ಅನನ್ಯ ಭಕ್ತಿಯಿಂದ ನನ್ನನ್ನು ಭಜಿಸಿದರೆ, ಅವನನ್ನು ಸಾಧು ಎಂದೇ ಪರಿಗಣಿಸಬೇಕು. ಏಕೆಂದರೆ ಆತನು ನನ್ನ ಭಕ್ತನಾಗುವ ವಿಚಾರದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡವನಾಗಿರುತ್ತಾನೆ.
क्षिप्रं भवति धर्मात्मा
शश्वच्छान्तिं निगच्छति।
कौन्तेय! प्रतिजानीहि
न मे भक्तः प्रणस्यति॥९.३१॥
ಕ್ಷಿಪ್ರಂ ಭವತಿ ಧರ್ಮಾತ್ಮಾ
ಶಶ್ವಚ್ಛಾಂತಿಂ ನಿಗಚ್ಛತಿ ।
ಕೌಂತೇಯ ಪ್ರತಿಜಾನೀಹಿ
ನ ಮೇ ಭಕ್ತಃ ಪ್ರಣಶ್ಯತಿ ॥ 9-31॥
क्षिप्रं भवति धर्मात्मा शश्वच्छान्तिं निगच्छति।
कौन्तेय! प्रतिजानीहि, न मे भक्तः प्रणस्यति॥९.३१॥
ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾಂತಿಂ ನಿಗಚ್ಛತಿ ।
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ॥ 9-31॥
31. Such a wicked person
Who turns My devotee
In no time becomes virtuous
And attains lasting peace.
Arjuna, know for sure
That never will My devotee perish.
ಅಂತಹ ದುಷ್ಟ ಮನುಷ್ಯನು, ನನ್ನ ಭಕ್ತನಾಗಿ ಪರಿವರ್ತಿತನಾದ ಮೇಲೆ, ಶೀಘ್ರವಾಗಿ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತವಾದ ಶಾಂತಿಯನ್ನು ಹೊಂದುತ್ತಾನೆ. ಹೇ ಅರ್ಜುನಾ! ನನ್ನ ಭಕ್ತನು ಎಂದಿಗೂ ನಾಶವಾಗುವುದಿಲ್ಲ ಎಂಬ ನಿಶ್ಚಯಪೂರ್ವಕವಾದ ಸತ್ಯವನ್ನು ತಿಳಿ.
मां हि पार्थ व्यपाश्रित्य
येऽपि स्युः पापयोनयः।
स्त्रियो वैश्यास्तथा शूद्रा:
तेऽपि यान्ति परां गतिम्॥९.३२॥
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ
ಯೇಽಪಿ ಸ್ಯುಃ ಪಾಪಯೋನಯಃ ।
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಃ
ತೇಪಿ ಯಾಂತಿ ಪರಾಂ ಗತಿಮ್ ॥ 9-32॥
मां हि पार्थ व्यपाश्रित्य येऽपि स्युः पापयोनयः।
स्त्रियो वैश्यास्तथा शूद्रा: तेऽपि यान्ति परां गतिम्॥९.३२॥
ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಽಪಿ ಸ್ಯುಃ ಪಾಪಯೋನಯಃ ।
ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಃ ತೇಪಿ ಯಾಂತಿ ಪರಾಂ ಗತಿಮ್ ॥ 9-32॥
32. Arjuna,
People of lowly or sinful origins,
Be they women, Vasishyas or Shudras,
By seeking refuge in Me
They realize and surely attain
The Supreme Goal.
ಎಲೈ ಅರ್ಜುನಾ!
ಸ್ತ್ರೀಯರು, ವೈಶ್ಯರು, ಶೂದ್ರರು ಹಾಗೂ ಪಾಪಯೋನಿಜರು ಮುಂತಾದ ಯಾರೇ ಆಗಿರಲಿ, ನನ್ನಲ್ಲಿ ಆಶ್ರಯಪಡೆಯುವುದರಿಂದ ಖಂಡಿತವಾಗಿಯೂ ಪರಮಗತಿಯನ್ನು, ಉತ್ತಮ ಪದವಿಯನ್ನು ಸಾಧಿಸುತ್ತಾರೆ ಮತ್ತು ಪಡೆಯುತ್ತಾರೆ.
किं पुनर्ब्राह्मणाः पुण्या:
भक्ता राजर्षयस्तथा।
अनित्यमसुखं लोकं
इमं प्राप्य भजस्व माम्॥९.३३॥
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾಃ
ಭಕ್ತಾ ರಾಜರ್ಷಯಸ್ತಥಾ ।
ಅನಿತ್ಯಮಸುಖಂ ಲೋಕಂ
ಇಮಂ ಪ್ರಾಪ್ಯ ಭಜಸ್ವ ಮಾಮ್ ॥ 9-33॥
किं पुनर्ब्राह्मणाः पुण्या: भक्ता राजर्षयस्तथा।
अनित्यमसुखं लोकं इमं प्राप्य भजस्व माम्॥९.३३॥
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾಃ ಭಕ್ತಾ ರಾಜರ್ಷಯಸ್ತಥಾ ।
ಅನಿತ್ಯಮಸುಖಂ ಲೋಕಂ ಇಮಂ ಪ್ರಾಪ್ಯ ಭಜಸ್ವ ಮಾಮ್ ॥ 9-33॥
33. In the case of those
Who are virtuous Brahmins
And devout Royal Sages,
You can be more certain
About their attaining the Supreme Goal.
Arjuna, having come to this
Transient and unhappy world,
Make sure to worship Me.
ಹೀಗಿರುವಾಗ ಪುಣ್ಯಾತ್ಮರಾದ, ಬ್ರಾಹ್ಮಣರು, ರಾಜರ್ಷಿಗಳು ಮತ್ತು ಭಕ್ತಜನರು ಪರಮ ಸದ್ಗತಿಯನ್ನು ಹೊಂದುವರೆಂಬುದರಲ್ಲಿ ನಿನಗೆ ಸಂದೇಹವೇ ಬೇಡ. ಆದುದರಿಂದ ಅಶಾಶ್ವತವಾದ ಮತ್ತು ಕ್ಲೇಶಗಳಿಂದ ತುಂಬಿರುವ ಈ ಲೋಕಕ್ಕೆ ಬಂದಿರುವ ನೀನು, ನನ್ನನ್ನು ನಿರಂತರವಾಗಿ ಭಜಿಸು ಮತ್ತು ಪೂಜಿಸು.
मन्मना भव मद्भक्तो
मद्याजी मां नमस्कुरु।
मामेवैष्यसि युक्त्वैवं
आत्मानं मत्परायणः॥९.३४॥
ಮನ್ಮನಾ ಭವ ಮದ್ಭಕ್ತೋ
ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಯುಕ್ತ್ವೈವಂ
ಆತ್ಮಾನಂ ಮತ್ಪರಾಯಣಃ ॥ 9-34॥
मन्मना भव मद्भक्तो मद्याजी मां नमस्कुरु।
मामेवैष्यसि युक्त्वैवं आत्मानं मत्परायणः॥९.३४॥
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಯುಕ್ತ್ವೈವಂ ಆತ್ಮಾನಂ ಮತ್ಪರಾಯಣಃ ॥ 9-34॥
34. Arjuna, this is how
You should go about worshipping Me:
Fix your mind on Me;
Become My devotee;
Make offerings to Me through Yagnas;
Pay obeisance to Me;
And surrendering to Me wholly,
Be fully intent and united with Me.
Then you will surely attain Me.
ಅರ್ಜುನಾ! ಸದಾ ನನ್ನಲ್ಲಿಯೇ ಮನಸ್ಸುಳ್ಳವನಾಗಿರು. ನನ್ನ ಭಕ್ತನಾಗಿರು. ಯಜ್ಞದ ಮುಖಾಂತರ ನನ್ನನ್ನು ಪೂಜಿಸು. ನನಗೆ ನಮಸ್ಕರಿಸು. ನನ್ನಲ್ಲಿ ಸಂಪೂರ್ಣ ಶರಣಾಗು. ನನ್ನಲ್ಲಿಯೇ ಪೂರ್ಣವಾಗಿ ತಲ್ಲೀನನಾಗು, ನನ್ನಲ್ಲಿ ಒಂದಾಗು. ಈ ರೀತಿಯಾಗಿ ಸರ್ವವಿಧದಲ್ಲಿ ನನ್ನನ್ನು ಪೂಜಿಸಿದಲ್ಲಿ ನೀನು ನನ್ನನ್ನೇ ಪಡೆಯುವೆ.
ऒम् तत्सदिति ಓಂ ತತ್ಸದಿತಿ
श्रीमद्भगवद्गितासू ಶ್ರೀಮದ್ಭಗವದ್ಗೀತಾಸೂ
उपनिषत्सु ಉಪನಿಷತ್ಸು
ब्रह्म विद्यायां ಬ್ರಹ್ಮವಿದ್ಯಾಯಾಂ
यॊगशास्त्रॆ ಯೋಗಶಾಸ್ತ್ರೇ
श्रीकृष्णार्जुनसंवादॆ ಶ್ರೀಕೃಷ್ಣಾರ್ಜುನಸಂವಾದೇ
राजविद्याराजगुह्ययोगो नाम
ರಾಜವಿದ್ಯಾರಾಜಗುಹ್ಯಯೋಗೋ ನಾಮ
नवमोऽध्यायः ನವಮೋಽಧ್ಯಾಯಃ
ಓಂ ತತ್ಸತ್ ಇತಿ
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ರಾಜವಿದ್ಯಾರಾಜಗುಹ್ಯ ಯೋಗವೆಂಬ ಹೆಸರಿನ ಒಂಭತ್ತನೆಯ ಅಧ್ಯಾಯವು ಮುಗಿದುದು.
End of Chapter Nine