Chapter Six: Dhyana Yoga
also known as
Atmasamyama Yoga
Published by LANKA KRISHNA MURTI FOUNDATION
(https://www.facebook.com/lankakrishnamurtifoundation/)
Website (https://krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
अथ ध्यानयोगो नाम षष्टोऽध्यायः
ಅಥ ಧ್ಯಾನಯೋಗೋ ನಾಮ ಷಷ್ಠೋಧ್ಯಾಯಃ
श्रीभगवानुवाच-
अनाश्रितः कर्मफलं
कार्यं कर्म करोति यः।
स सन्यासी च योगी च
न निरग्निर्न चाक्रियः॥६.१॥
ಶ್ರೀಭಗವಾನುವಾಚ ।
ಅನಾಶ್ರಿತಃ ಕರ್ಮಫಲಂ
ಕಾರ್ಯಂ ಕರ್ಮ ಕರೋತಿ ಯಃ ।
ಸ ಸಂನ್ಯಾಸೀ ಚ ಯೋಗೀ ಚ
ನ ನಿರಗ್ನಿರ್ನ ಚಾಕ್ರಿಯಃ ॥ 6-1॥
श्रीभगवानुवाच :
अनाश्रितः कर्मफलं कार्यं कर्म करोति यः।
स सन्यासी च योगी च न निरग्निर्न चाक्रियः॥६.१॥
ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ ।
ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ ॥ 6-1॥
1. He is the Sanyasi,
He is also the Yogi
Who performs actions
That are prescribed and 0bligatory
Without depending upon their results;
But not that person
Who merely gives up all prescribed actions
Nor the one who remains a non-doer.
ಆರನೆಯ ಅಧ್ಯಾಯ
ಧ್ಯಾನಯೋಗ ಅಥವಾ ಆತ್ಮ ಸಂಯಮಯೋಗ
ಶ್ರೀ ಭಗವಂತನು ಹೇಳಿದನು:
ಧರ್ಮಶಾಸ್ತ್ರದಲ್ಲಿ ಆಜ್ಞಾಪಿಸಿರುವ ಮತ್ತು ಅವಶ್ಯಕವಾದ ಕರ್ತವ್ಯಕರ್ಮವನ್ನು, ಯಾವುದೇ ಕರ್ಮಫಲವನ್ನು ಆಶಿಸದೆ ಮಾಡುವವನೇ ನಿಜವಾದ ಸನ್ಯಾಸಿ ಹಾಗೂ ಅವನೇ ಯೋಗಿಯಾಗಿದ್ದಾನೆ. ಅಷ್ಟೇ ಅಲ್ಲದೆ ಶಾಸ್ತ್ರ ವಿಧಿಸಿದ ಕ್ರಿಯೆಗಳನ್ನು ಅಂದರೆ ಅಗ್ನಿಕಾರ್ಯ ಮುಂತಾದವುಗಳನ್ನು ಬಿಟ್ಟವನೂ ಹಾಗೂ ಕರ್ಮಗಳನ್ನು ಬಿಟ್ಟವನೂ ಯೋಗಿಯಲ್ಲ, ಸನ್ಯಾಸಿಯಲ್ಲ.
यंसन्यासमितिप्राहु:
योगंतंविद्धिपाण्डव।
नह्यसन्यस्तसङ्कल्पो
योगीभवतिकश्चन॥६.२॥
ಯಂ ಸಂನ್ಯಾಸಮಿತಿ ಪ್ರಾಹುಃ
ರ್ಯೋಗಂ ತಂ ವಿದ್ಧಿ ಪಾಂಡವ ।
ನ ಹ್ಯಸಂನ್ಯಸ್ತಸಂಕಲ್ಪೋ
ಯೋಗೀ ಭವತಿ ಕಶ್ಚನ ॥ 6-2॥
यंसन्यासमितिप्राहुर्योगंतंविद्धिपाण्डव।
नह्यसन्यस्तसङ्कल्पोयोगीभवतिकश्चन॥६.२॥
ಯಂ ಸಂನ್ಯಾಸಮಿತಿ ಪ್ರಾಹುಃ ಯೋಗಂ ತಂ ವಿದ್ಧಿ ಪಾಂಡವ ।
ನ ಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ ॥ 6-2॥
2. Arjuna,
What is said to be Sannyasa
Or renunciation,
That is also to be known as Yoga,
For none can ever claim to be a Yogi
Without renouncing his sankalpa,
Intention or resolve.
ಅರ್ಜುನಾ!
ಯಾವುದನ್ನು ಸನ್ಯಾಸವೆಂದು ಹೇಳುವರೋ ಅದನ್ನೇ ನೀನು ಯೋಗವೆಂದು ತಿಳಿ. ಸನ್ಯಾಸವೆಂದರೂ, ಯೋಗವೆಂದರೂ ಒಂದೇ. ಏಕೆಂದರೆ ಸಂಕಲ್ಪವನ್ನು ತ್ಯಾಗ ಮಾಡದಿರುವ ಯಾವ ಪುರುಷನೂ ಕೂಡಾ ಯೋಗಿಯಾಗಲಾರನು.
3. आरुरुक्षोर्मुनेर्योगं
कर्मकारणमुच्यते।
योगारूढस्यतस्यैव
शमःकारणमुच्यते॥६.३॥
ಆರುರುಕ್ಷೋರ್ಮುನೇರ್ಯೋಗಂ
ಕರ್ಮ ಕಾರಣಮುಚ್ಯತೇ ।
ಯೋಗಾರೂಢಸ್ಯ ತಸ್ಯೈವ
ಶಮಃ ಕಾರಣಮುಚ್ಯತೇ ॥ 6-3॥
आरुरुक्षोर्मुनेर्योगंकर्मकारणमुच्यते।
योगारूढस्यतस्यैवशमःकारणमुच्यते॥६.३॥
ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ ।
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ ॥ 6-3॥
3. Action without attachment
To its fruit
Is said to be the means
For a silent sage, aMuni,
Who wishes to reach the peak of Yoga;
For the same silent sage
Who has reached the peak of Yoga,
Cessation of all action is said to be
The cause for attaining that state of Yoga.
ಯೋಗದ ಉನ್ನತಿ ಹೊಂದಬಯಸುವ ಮುನಿಗೆ, ಕರ್ಮಫಲದ ಬಂಧನವಿಲ್ಲದ ಕರ್ಮವೇ ಸಾಧನವಾಗಿರುತ್ತದೆ. ಅಂದರೆ ಧ್ಯಾನ ಯೋಗವನ್ನು ಸಿದ್ಧಿಸಿಕೊಳ್ಳಬೇಕೆಂಬ ಮುನಿಗೆ ನಿಷ್ಕಾಮ ಕರ್ಮವೇ ಸಾದನ. ಹಾಗೆಯೇ ಯೋಗೋನ್ನತಿಯನ್ನು ಸೇರಿದ ಅದೇ ಮುನಿಗೆ ಎಲ್ಲ ಕರ್ಮಗಳ ಉಪಶಾಂತಿಯೇ ಅಂದರೆ ಎಲ್ಲ ಐಹಿಕ ಕಾರ್ಯಗಳನ್ನು ನಿಲ್ಲಿಸುವುದೇ ಸಾಧನವಾಗಿರುತ್ತದೆ.
यदाहिनेन्द्रियार्थेषु
नकर्मस्वनुषज्जते।
सर्वसङ्कल्पसन्यासी
योगारूढस्तदोच्यते॥६.४॥
ಯದಾ ಹಿ ನೇಂದ್ರಿಯಾರ್ಥೇಷು
ನ ಕರ್ಮಸ್ವನುಷಜ್ಜತೇ ।
ಸರ್ವಸಂಕಲ್ಪಸಂನ್ಯಾಸೀ
ಯೋಗಾರೂಢಸ್ತದೋಚ್ಯತೇ ॥ 6-4॥
यदाहिनेन्द्रियार्थेषुनकर्मस्वनुषज्जते।
सर्वसङ्कल्पसन्यासीयोगारूढस्तदोच्यते॥६.४॥
ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ ।
ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ ॥ 6-4॥
4. One is said to have reached
The heights of Yoga
When he renounces the sankalpa,
His intent and resolve,
And when he remains unattached
To the objects of senses
As well as to all the prescribed
And obligatory actions.
ಇಂದ್ರಿಯಗಳ ವಿಷಯಗಳಲ್ಲಿ, ಐಹಿಕ ಬಯಕೆಗಳನ್ನು ತ್ಯಜಿಸಿ, ಇಂದ್ರಿಯ ತೃಪ್ತಿಗಾಗಿ ಕರ್ಮ ಮಾಡದೆ, ಫಲಾಪೇಕ್ಷೆಯ ಕರ್ಮದಲ್ಲಿ ತೊಡಗದೆ, ಸರ್ವ ಸಂಕಲ್ಪವನ್ನು ತ್ಯಜಿಸಿದವನನ್ನು ಯೋಗಾರೂಢನೆಂದು ಹೇಳುತ್ತಾರೆ.
उद्धरेदात्मनात्मानं
नात्मानमवसादयेत्।
आत्मैवह्यात्मनोबन्धु:
आत्मैवरिपुरात्मनः॥६.५॥
ಉದ್ಧರೇದಾತ್ಮನಾತ್ಮಾನಂ
ನಾತ್ಮಾನಮವಸಾದಯೇತ್ ।
ಆತ್ಮೈವ ಹ್ಯಾತ್ಮನೋ ಬಂಧುಃ
ಆತ್ಮೈವರಿಪುರಾತ್ಮನಃ ॥ 6-5॥
उद्धरेदात्मनात्मानं नात्मानमवसादयेत्।
आत्मैवह्यात्मनोबन्धु: आत्मैवरिपुरात्मनः॥६.५॥
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ ।
ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವರಿಪುರಾತ್ಮನಃ ॥ 6-5॥
5. Elevate yourself
With a mind that is
Detached, intelligent and discriminatory;
Do not degrade yourself
By a mind that is
Attached to the objects of senses.
Indeed the mind can be
A friend to your self
As well as its enemy.
ನಿರ್ಲಿಪ್ತ, ಪ್ರಾಜ್ಞ ಮತ್ತು ವಿವೇಚನಾಯುಕ್ತ ಮನಸ್ಸಿನಿಂದ ತನ್ನನ್ನು ತಾನು ಸಂಸಾರ ಸಮುದ್ರದಿಂದ ಉದ್ಧರಿಸಿಕೊಳ್ಳಬೇಕು. ಇಂದ್ರಿಯ ವಿಷಯಾಸಕ್ತಿಗಳ ಮೋಹದಿಂದ ಬಂಧಿಸಲ್ಪಟ್ಟ ಮನಸ್ಸಿನಿಂದ ತನ್ನನ್ನು ತಾನು ಕುಗ್ಗಿಸಿಕೊಳ್ಳಬಾರದು. ಏಕೆಂದರೆ ಬದ್ಧಜೀವಿಗೆ ಮನಸ್ಸೇ ಬಂಧು, ಮನಸ್ಸೇ ಶತ್ರು, ಎಂದರೆ ತನ್ನ ಒಳಿತಿಗೆ ಮತ್ತು ಕೆಡುಕಿಗೆ ತಾನೇ ಕಾರಣ. ಮತ್ಯಾರೂ ಅಲ್ಲ.
बन्धुरात्मात्मनस्तस्य
येनात्मैवात्मनाजितः।
आनात्मनस्तुशत्रुत्वे
वर्तेतात्मैवशत्रुवत्॥६.६॥
ಬಂಧುರಾತ್ಮಾತ್ಮನಸ್ತಸ್ಯ
ಯೇನಾತ್ಮೈವಾತ್ಮನಾ ಜಿತಃ ।
ಅನಾತ್ಮನಸ್ತು ಶತ್ರುತ್ವೇ
ವರ್ತೇತಾತ್ಮೈವ ಶತ್ರುವತ್ ॥ 6-6॥
बन्धुरात्मात्मनस्तस्ययेनात्मैवात्मनाजितः।
आनात्मनस्तुशत्रुत्वेवर्तेतात्मैवशत्रुवत्॥६.६॥
ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತಃ ।
ಅನಾತ್ಮನಸ್ತು ಶತ್ರುತ್ವೇ ವರ್ತೇತಾತ್ಮೈವ ಶತ್ರುವತ್ ॥ 6-6॥
6. That discriminatory mind
Which gains control over the self,
That is, over the body and senses,
Is a friend to the self;
But the mind not brought under control
Acts verily like an enemy to the self.
ದೇಹ ಮತ್ತು ವಿಷಯೇಂದ್ರಿಯಗಳ ಮೇಲೆ ಹತೋಟಿಯನ್ನು ಸಾಧಿಸಿರುವ, ವಿವೇಚನಾಯುಕ್ತವಾಗಿ ಸ್ವಾಧೀನವಾದ ತನ್ನ ಮನಸ್ಸೇ ತನಗೆ ಮಿತ್ರ, ಬಂಧು ಹಾಗೂ ಆಪ್ತ. ಆದರೆ ಸ್ವಾಧೀನದಲ್ಲಿಲ್ಲದ, ಹತೋಟಿಯಲ್ಲಿಲ್ಲದ ತನ್ನ ಚಿತ್ತವೇ ತನಗೆ ವೈರಿ.
जितात्मनःप्रशान्तस्य
परमात्मासमाहितः।
शीतोष्णसुखदुःखेषु
तथामनापमानयोः॥६.७॥
ಜಿತಾತ್ಮನಃ ಪ್ರಶಾಂತಸ್ಯ
ಪರಮಾತ್ಮಾ ಸಮಾಹಿತಃ ।
ಶೀತೋಷ್ಣಸುಖದುಃಖೇಷು
ತಥಾ ಮಾನಾಪಮಾನಯೋಃ ॥ 6-7॥
जितात्मनःप्रशान्तस्यपरमात्मासमाहितः।
शीतोष्णसुखदुःखेषुतथामनापमानयोः॥६.७॥
ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ ।
ಶೀತೋಷ್ಣಸುಖದುಃಖೇಷು ತಥಾ ಮಾನಾಪಮಾನಯೋಃ ॥ 6-7॥
7. The Yogi will remain concentrated
On the Supreme Self
When he gains control over the senses
And he keeps his cool
While facing the dualities
Like cold and heat,
Pleasure and pain and
Honor and dishonor.
ಶೀತ ಮತ್ತು ಉಷ್ಣ, ಸುಖ ಮತ್ತು ದುಃಖ, ಹಾಗೂ ಮಾನ ಮತ್ತು ಅಪಮಾನ ಎಂಬ ದ್ವಂದ್ವಗಳನ್ನು ಎದುರಿಸುವಲ್ಲಿ ಚಿತ್ತವನ್ನು ಜಯಿಸಿದ, ಪ್ರಶಾಂತ ಮನಸ್ಸಿನ ಯೋಗಿಗೆ ಪರಮಾತ್ಮನ ಅನುಭವವುಂಟಾಗುತ್ತದೆ ಹಾಗೂ ಪರಮಾತ್ಮನಲ್ಲಿ ತಲ್ಲೀನನಾಗುತ್ತಾನೆ.
ज्ञानविज्ञानतृप्तात्मा
कूटस्थोविजितेन्द्रियः।
युक्तइत्युच्यतेयोगी
समलोष्टाश्मकाञ्चनः॥६.८॥
ಜ್ಞಾನವಿಜ್ಞಾನತೃಪ್ತಾತ್ಮಾ
ಕೂಟಸ್ಥೋ ವಿಜಿತೇಂದ್ರಿಯಃ ।
ಯುಕ್ತ ಇತ್ಯುಚ್ಯತೇ ಯೋಗೀ
ಸಮಲೋಷ್ಟಾಶ್ಮಕಾಂಚನಃ ॥ 6-8॥
ज्ञानविज्ञानतृप्तात्माकूटस्थोविजितेन्द्रियः।
युक्तइत्युच्यतेयोगीसमलोष्टाश्मकाञ्चनः॥६.८॥
ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯಃ ।
ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನಃ ॥ 6-8॥
8. That Yogi is said to be
Well-integrated
If he keeps content
With the knowledge and experience
He has gained from the shastras;
If he remains unchangeable;
If he has total control over his senses;
And if he treats all alike –
Lump of earth, stone and gold.
ಶಾಸ್ತ್ರಗಳಿಂದ ಆರ್ಜಿಸಿದ ಜ್ಞಾನ ಮತ್ತು ಸ್ವಾನುಭವ ಜ್ಞಾನಗಳಿಂದ ತೃಪ್ತನಾದವನೂ, ನಿರ್ವಿಕಾರನೂ, ಜಿತೇಂದ್ರಿಯನೂ, ಮಣ್ಣು, ಕಲ್ಲು ಮತ್ತು ಬಂಗಾರವನ್ನು ಸಮವಾಗಿ ನೋಡುವವನೂ ಆದ ಯೋಗಿಯು, ಶ್ರೇಷ್ಠನೂ, ಯುಕ್ತನೂ ಹಾಗೂ ಯೋಗಾರೂಢನೂ ಆಗಿರುತ್ತಾನೆ.
सुहृन्मित्रार्युदासीन
मध्यस्थद्वेष्यबन्धुषु।
साधुष्वपिचपापेषु
समबुद्धिर्विशिष्यते॥६.९॥
ಸುಹೃನ್ಮಿತ್ರಾರ್ಯುದಾಸೀನ
ಮಧ್ಯಸ್ಥದ್ವೇಷ್ಯಬಂಧುಷು ।
ಸಾಧುಷ್ವಪಿ ಚ ಪಾಪೇಷು
ಸಮಬುದ್ಧಿರ್ವಿಶಿಷ್ಯತೇ ॥ 6-9॥
सुहृन्मित्रार्युदासीनमध्यस्थद्वेष्यबन्धुषु।
साधुष्वपिचपापेषुसमबुद्धिर्विशिष्यते॥६.९॥
ಸುಹೃನ್ಮಿತ್ರಾರ್ಯುದಾಸೀನ ಮಧ್ಯಸ್ಥದ್ವೇಷ್ಯಬಂಧುಷು ।
ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ ॥ 6-9॥
9. He is said to have reached yogic heights
Who treats everyone with equanimity,
Whoever he be, —
A well-wisher, a friend, an enemy,
An indifferent person, a neutral, an opponent,
Or a relative.
ಸಹೃದಯರು, ಹಿತೈಷಿಗಳು, ಮಿತ್ರರು, ವೈರಿಗಳು, ಉದಾಸೀನರು, ಮಧ್ಯಸ್ಥರು, ದ್ವೇಷಿಗಳು, ಬಂಧುಗಳು, ಸುಜನರು, ಕುಜನರು ಎಂಬ ವಿವಿಧ ವರ್ಗಗಳಲ್ಲಿಯೂ, ಸಾಧುಗಳಲ್ಲಿಯೂ ಮತ್ತು ಪಾಪಿಗಳಲ್ಲಿಯೂ ಸಮಬುದ್ಧಿಯುಳ್ಳವನು ಯೋಗಾರೂಢರಲ್ಲಿ ಶ್ರೇಷ್ಥನಾಗಿರುತ್ತಾನೆ.
योगीयुञ्जीतसततं
आत्मानंरहसिस्थितः।
एकाकीयतचित्तात्मा
निराशीरपरिग्रहः॥६.१०॥
ಯೋಗೀ ಯುಂಜೀತ ಸತತಂ
ಆತ್ಮಾನಂ ರಹಸಿ ಸ್ಥಿತಃ ।
ಏಕಾಕೀ ಯತಚಿತ್ತಾತ್ಮಾ
ನಿರಾಶೀರಪರಿಗ್ರಹಃ ॥ 6-10॥
योगीयुञ्जीतसततं आत्मानंरहसिस्थितः।
एकाकीयतचित्तात्मा निराशीरपरिग्रहः॥६.१०॥
ಯೋಗೀ ಯುಂಜೀತ ಸತತಂ ಆತ್ಮಾನಂ ರಹಸಿ ಸ್ಥಿತಃ ।
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ॥ 6-10॥
10. A yogi should constantly apply
Himself to yoga
By living in solitude,
In a secluded place,
With full control over body and mind,
With no cravings
And expecting nothing from others.
ನಿರ್ಜನ ಪ್ರದೇಶದಲ್ಲಿದ್ದುಕೊಂಡು, ಏಕಾಂತದಲ್ಲಿ ವಾಸಿಸುತ್ತಾ, ಶರೀರ ಮತ್ತು ಮನಸ್ಸನ್ನು ನಿಗ್ರಹಿಸಿಕೊಂಡು, ಯಾವುದೇ ಬಯಕೆಗಳಿಲ್ಲದೆ, ಗಳಿಕೆಯ ಆಸೆಯಿಲ್ಲದೆ, ಅಪರಿಗ್ರಹನಾಗಿ ಯೋಗಿಯು ಆತ್ಮವನ್ನು ನಿರಂತರವಾಗಿ ಪರಮಾತ್ಮನಲ್ಲಿ ತೊಡಗಿಸಿ, ಮನಸ್ಸನ್ನು ಯೋಗದಲ್ಲಿಡಬೇಕು.
शुचौदेशेप्रतिष्ठाप्य
स्थिरमासनमात्मनः।
नात्युच्छ्रितंनातिनीचं
चैलाजिनकुशोत्तरम्॥६.११॥
ಶುಚೌ ದೇಶೇ ಪ್ರತಿಷ್ಠಾಪ್ಯ
ಸ್ಥಿರಮಾಸನಮಾತ್ಮನಃ ।
ನಾತ್ಯುಚ್ಛ್ರಿತಂ ನಾತಿನೀಚಂ
ಚೈಲಾಜಿನಕುಶೋತ್ತರಮ್ ॥ 6-11॥
तत्रैकाग्रंमनःकृत्वा
यतचित्तेन्द्रियक्रियः।
उपविश्यासनेयुञ्ज्याद्
योगमात्मविशुद्धये॥६.१२॥
ತತ್ರೈಕಾಗ್ರಂ ಮನಃ ಕೃತ್ವಾ
ಯತಚಿತ್ತೇಂದ್ರಿಯಕ್ರಿಯಃ ।
ಉಪವಿಶ್ಯಾಸನೇ ಯುಂಜ್ಯಾದ್
ಯೋಗಮಾತ್ಮವಿಶುದ್ಧಯೇ ॥ 6-12॥
शुचौदेशेप्रतिष्ठाप्य स्थिरमासनमात्मनः।
नात्युच्छ्रितंनातिनीचं चैलाजिनकुशोत्तरम्॥६.११॥
ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ ।
ನಾತ್ಯುಚ್ಛ್ರಿತಂ ನಾತಿನೀಚಂ ಚೈಲಾಜಿನಕುಶೋತ್ತರಮ್ ॥ 6-11॥
तत्रैकाग्रंमनःकृत्वा यतचित्तेन्द्रियक्रियः।
उपविश्यासनेयुञ्ज्याद् योगमात्मविशुद्धये॥६.१२॥
ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಃ ।
ಉಪವಿಶ್ಯಾಸನೇ ಯುಂಜ್ಯಾದ್ ಯೋಗಮಾತ್ಮವಿಶುದ್ಧಯೇ ॥ 6-12॥
11.
12. By choosing a clean spot
And arranging a firm seat
That is neither too high nor too low
And covering it with a cloth,
A hide and kusha grass,
One on the other,
The yogi should sit on it.
Having seated, he should control
The actions of the mind and senses,
And he should keep the mind one-pointed.
He should thus practice yoga
For the purification of the inner instruments –For chittasuddhi.
ಯೋಗಾಭ್ಯಾಸ ಮಾಡಲು ಏಕಾಂತವಾದ ಸ್ಥಳಕ್ಕೆ ಹೋಗಬೇಕು. ನೆಲದ ಮೇಲೆ ದರ್ಭೆಯನ್ನು ಹಾಸಿ ಅದನ್ನು ಜಿಂಕೆಯ ಚರ್ಮ ಅಂದರೆ ಕೃಷ್ಣಾಜಿನ ಮತ್ತು ಮೃದುವಾದ ಬಟ್ಟೆಯಿಂದ ಹೊದೆಯಬೇಕು. ಪೀಠವು ಬಹಳ ಎತ್ತರವಾಗಿಯೂ ಇರಬಾರದು, ಬಹಳ ತಗ್ಗಾಗಿಯೂ ಇರಬಾರದು ಮತ್ತು ಅದು ಪವಿತ್ರವಾದ ಸ್ಥಳದಲ್ಲಿ ಇರಬೇಕು. ಯೋಗಿಯು ಅದರ ಮೇಲೆ ಧೃಢವಾಗಿ ಕುಳಿತು, ತನ್ನ ಮನಸ್ಸನ್ನೂ, ಇಂದ್ರಿಯಗಳನ್ನೂ ಮತ್ತು ಕಾರ್ಯಗಳನ್ನೂ ನಿಗ್ರಹಿಸಿ, ಮನಸ್ಸನ್ನು ಒಂದು ಬಿಂದುವಿನಲ್ಲಿ ಕೇಂದ್ರೀಕರಿಸಿ ಚಿತ್ತಶುದ್ಧಿಗಾಗಿ, ಹೃದಯ ಶುದ್ಧಿಗಾಗಿ ಯೋಗಾಭ್ಯಾಸ ಮಾಡಬೇಕು.
समंकायशिरोग्रीवं
धारयन्नचलंस्थिरः
संप्रेक्ष्यनासिकाग्रंस्वं
दिशश्चानवलोकयन्॥६.१३॥
ಸಮಂ ಕಾಯಶಿರೋಗ್ರೀವಂ
ಧಾರಯನ್ನಚಲಂ ಸ್ಥಿರಃ ।
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ
ದಿಶಶ್ಚಾನವಲೋಕಯನ್ ॥ 6-13॥
प्रशान्तात्माविगतभी:
ब्रह्मचारिव्रतेस्थितः।
मनःसम्यम्यमच्चित्तो
युक्तआसीतमत्परः॥६.१४॥
ಪ್ರಶಾಂತಾತ್ಮಾ ವಿಗತಭೀಃ
ಬ್ರಹ್ಮಚಾರಿವ್ರತೇ ಸ್ಥಿತಃ ।
ಮನಃ ಸಂಯಮ್ಯ ಮಚ್ಚಿತ್ತೋ
ಯುಕ್ತ ಆಸೀತ ಮತ್ಪರಃ ॥ 6-14॥
समंकायशिरोग्रीवंधारयन्नचलंस्थिरम्।
संप्रेक्ष्यनासिकाग्रंस्वंदिशश्चानवलोकयन्॥६.१३॥
ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ ।
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್ ॥ 6-13॥
प्रशान्तात्माविगतभीर्ब्रह्मचारिव्रतेस्थितः।
मनःसम्यम्यमच्चित्तोयुक्तआसीतमत्परः॥६.१४॥
ಪ್ರಶಾಂತಾತ್ಮಾ ವಿಗತಭೀಃ ಬ್ರಹ್ಮಚಾರಿವ್ರತೇ ಸ್ಥಿತಃ ।
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ॥ 6-14॥
13.
14. Keeping the body, head and neck
Straight, firm and steady,
He should direct his eye-sight
On the tip of his nose,
That is, in-between the eye-brows,
Without looking around;
Bringing calmness to the inner sense,
Remaining fearless
And observing brahmacharya,
The Yogi should bring his mind
Under his control,
And rest all his thoughts on Me,
Who am the Supreme Being.
ಶರೀರ, ಶಿರಸ್ಸು ಮತ್ತು ಕುತ್ತಿಗೆ ಇವುಗಳನ್ನು ನೆಟ್ಟಗೆ, ಸಮವಾಗಿ ಮತ್ತು ಧೃಢವಾಗಿ ಇರಿಸಿಕೊಂಡು, ಸ್ಥಿರನಾಗಿ ತನ್ನ ದೃಷ್ಟಿಯನ್ನು ಮೂಗಿನ ತುದಿಯ ಮೇಲೆ ಕೇಂದ್ರೀಕರಿಸಿ, ಅಂದರೆ ದೃಷ್ಟಿಯನ್ನು ಅತ್ತ ಇತ್ತ ಸರಿಸದೆ ಭ್ರೂಮಧ್ಯದಲ್ಲಿ ನಿಲ್ಲಿಸಿ, ಪ್ರಶಾಂತಾತ್ಮನಾಗಿ, ನಿರ್ಭಯನಾಗಿ, ಬ್ರಹ್ಮಚರ್ಯದೀಕ್ಷಾಬದ್ಧನಾಗಿ, ಮನಸ್ಸನ್ನು ಸಂಯಮಮಾಡಿಕೊಂಡು, ನನ್ನಲ್ಲಿಯೇ ಚಿತ್ತವುಳ್ಳವನಾಗಿ, ನಾನೇ ಪರಮಾತ್ಮನೆಂದು ಭಾವಿಸಿ ಧ್ಯಾನ ಮಾಡಬೇಕು.
युञ्जन्नेवंसदात्मानं
योगीनियतमानसः।
शान्तिंनिर्वाणपरमां
मत्संस्थामधिगच्छति॥६.१५॥
ಯುಂಜನ್ನೇವಂ ಸದಾತ್ಮಾನಂ
ಯೋಗೀ ನಿಯತಮಾನಸಃ ।
ಶಾಂತಿಂ ನಿರ್ವಾಣಪರಮಾಂ
ಮತ್ಸಂಸ್ಥಾಮಧಿಗಚ್ಛತಿ ॥ 6-15॥
युञ्जन्नेवंसदात्मानंयोगीनियतमानसः।
शान्तिंनिर्वाणपरमांमत्संस्थामधिगच्छति॥६.१५॥
ಯುಂಜನ್ನೇವಂ ಸದಾತ್ಮಾನಂ ಯೋಗೀ ನಿಯತಮಾನಸಃ ।
ಶಾಂತಿಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ ॥ 6-15॥
15. TheYogishouldpractice constantly,
As stated above,
With disciplined and concentrated mind.
He will then win Peace that abides in Me –
Peace that culminates in Liberation.
ಮೇಲೆ ತಿಳಿಸಿದ ಪ್ರಕಾರ, ಶಿಸ್ತಿನಿಂದ ಮತ್ತು ಕೇಂದ್ರೀಕರಿಸಿದ ಮನಸ್ಸಿನಿಂದ ಸತತವಾಗಿ ಅಭ್ಯಾಸಮಾಡುತ್ತಾ ಯೋಗವನ್ನು ಮಾಡುವ ಯೋಗಿಯು ನನ್ನ ಸ್ಥಾನವಾದ ಪರಮ ನಿರ್ವಾಣವನ್ನು ಸುಖವಾಗಿ ಪ್ರಾಪ್ತಮಾಡಿಕೊಂಡು ಶಾಂತಿಯನ್ನು ಹೊಂದುತ್ತಾನೆ.
नात्यश्नतस्तुयोगोऽस्ति
नचैकान्तमनश्नतः।
नचातिस्वप्नशीलस्य
जाग्रतोनैवचार्जुन॥६.१६॥
ನಾತ್ಯಶ್ನತಸ್ತು ಯೋಗೋಽಸ್ತಿ
ನ ಚೈಕಾಂತಮನಶ್ನತಃ ।
ನ ಚಾತಿಸ್ವಪ್ನಶೀಲಸ್ಯ
ಜಾಗ್ರತೋ ನೈವ ಚಾರ್ಜುನ ॥ 6-16॥
नात्यश्नतस्तुयोगोऽस्तिनचैकान्तमनश्नतः।
नचातिस्वप्नशीलस्यजाग्रतोनैवचार्जुन॥६.१६॥
ನಾತ್ಯಶ್ನತಸ್ತು ಯೋಗೋಽಸ್ತಿ ನ ಚೈಕಾಂತಮನಶ್ನತಃ ।
ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ॥ 6-16॥
16. Arjuna,
No Yoga is there for one
Who eats too much
Or for one who eats not at all.
In the same way,
No Yoga for one who sleeps too much
Or who keeps always awake.
ಅರ್ಜುನಾ! ಅತಿಯಾಗಿ ತಿನ್ನುವವನಿಗೂ ಅಥವಾ ಏನೂ ತಿನ್ನದೆ ಇರುವವನಿಗೂ ಯೋಗವು ಸಿದ್ಧಿಸುವುದಿಲ್ಲ. ಹಾಗೆಯೇ ಅತಿಯಾಗಿ ನಿದ್ರೆ ಮಾಡುವವನಿಗೂ ಅಥವಾ ಎಚ್ಚರವಾಗಿಯೇ ಇರುವವನಿಗೂ ಯೋಗವು ಪ್ರಾಪ್ತವಾಗುವುದಿಲ್ಲ.
युक्ताहारविहारस्य
युक्तचेष्टस्यकर्मसु।
युक्तस्वप्नावबोधस्य
योगोभवतिदुःखहा॥६.१७॥
ಯುಕ್ತಾಹಾರವಿಹಾರಸ್ಯ
ಯುಕ್ತಚೇಷ್ಟಸ್ಯ ಕರ್ಮಸು ।
ಯುಕ್ತಸ್ವಪ್ನಾವಬೋಧಸ್ಯ
ಯೋಗೋ ಭವತಿ ದುಃಖಹಾ ॥ 6-17॥
युक्ताहारविहारस्ययुक्तचेष्टस्यकर्मसु।
युक्तस्वप्नावबोधस्ययोगोभवतिदुःखहा॥६.१७॥
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು ।
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ॥ 6-17॥
17. Yoga that removes all pain
Happens when one
Eats and sleeps moderately;
Similarly, when one engages
In proper measure
In activities that are obligatory
Like japa and tapas; and
Similarly, when one’s sleep and wakefulness
Are of measured duration.
ಆಹಾರ, ನಿದ್ರಾದಿಗಳನ್ನು ಮಿತಿಯಲ್ಲಿರಿಸಿಕೊಂಡಿರುವನಿಗೆ ಎಲ್ಲ ನೋವುಗಳನ್ನು, ಬಾಧೆಗಳನ್ನು ತೊಡೆದು ಹಾಕುವ ಯೋಗಸಿದ್ಧಿಯಾಗುತ್ತದೆ. ಹಾಗೆಯೇ ಬಂಧಕವಾದ ಕಾರ್ಯಗಳಾದ ಜಪ ಮತ್ತು ತಪಗಳನ್ನು ಆಚರಿಸುವವನಿಗೂ, ನಿಗದಿತ ಕಾಲಮಾನಕ್ಕೆ ತಕ್ಕಂತೆ ನಿದ್ರೆ, ಎಚ್ಚರ ಮತ್ತು ಕಾರ್ಯಶೀಲತೆಗಳ ಮಿತಿಯಲ್ಲಿರುವವನಿಗೂ ಯೋಗವು ಸಿದ್ಧಿಸುತ್ತದೆ.
यदाविनियतंचित्तं
आत्मन्येवावतिष्ठते।
निःस्पृहःसर्वकामेभ्यो
युक्तइत्युच्यतेतदा॥६.१८॥
ಯದಾ ವಿನಿಯತಂ ಚಿತ್ತಂ
ಆತ್ಮನ್ಯೇವಾವತಿಷ್ಠತೇ ।
ನಿಃಸ್ಪೃಹಃ ಸರ್ವಕಾಮೇಭ್ಯೋ
ಯುಕ್ತ ಇತ್ಯುಚ್ಯತೇ ತದಾ ॥ 6-18॥
यदाविनियतंचित्तमात्मन्येवावतिष्ठते।
निःस्पृहःसर्वकामेभ्योयुक्तइत्युच्यतेतदा॥६.१८॥
ಯದಾ ವಿನಿಯತಂ ಚಿತ್ತಂ ಆತ್ಮನ್ಯೇವಾವತಿಷ್ಠತೇ ।
ನಿಃಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ॥ 6-18॥
18. When the disciplined mind
Gets free from the longing
For the objects of desire,
And abides in the self completely,
The Yogi is said to be
Well-established in Yoga.
ಯಾವಾಗ ಕಾಮನೆ, ಬಯಕೆಗಳಿಂದ ಮುಕ್ತವಾಗಿ, ನಿಗ್ರಹಿಸಲ್ಪಟ್ಟ ಚಿತ್ತವು ಆತ್ಮನಲ್ಲಿಯೇ ಸಂಪೂರ್ಣವಾಗಿ ನಿಲ್ಲುತ್ತದೆಯೋ, ಆಗ ಸರ್ವಕಾಮಗಳಲ್ಲಿ ಬಯಕೆಯಿಲ್ಲದವನಾಗಿ ಯೋಗಿ ಎಂದು ಕರೆಯಲ್ಪಡುತ್ತಾನೆ.
यथादीपोनिवातस्थो
नेङ्गतेसोपमास्मृता।
योगिनोयतचित्तस्य
युञ्जतोयोगमात्मनः॥६.१९॥
ಯಥಾ ದೀಪೋ ನಿವಾತಸ್ಥೋ
ನೇಂಗತೇ ಸೋಪಮಾ ಸ್ಮೃತಾ ।
ಯೋಗಿನೋ ಯತಚಿತ್ತಸ್ಯ
ಯುಂಜತೋ ಯೋಗಮಾತ್ಮನಃ ॥ 6-19॥
यथादीपोनिवातस्थोनेङ्गतेसोपमास्मृता।
योगिनोयतचित्तस्ययुञ्जतोयोगमात्मनः॥६.१९॥
ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಸ್ಮೃತಾ ।
ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ ॥ 6-19॥
19. The lamp’s flam remains steady
Without flickering
In a windless place –
This simile is mentioned
In the scriptures
To describe the Yogi
Practicing Yoga
With a disciplined and concentrated mind.
“ಗಾಳಿ ಬೀಸದಿರುವ ಪ್ರದೇಶದಲ್ಲಿರುವ ದೀಪವು ಮಿಣುಕದೆ ಹೇಗೆ ನಿಶ್ಚಲವಾಗಿರುವುದೋ” ಎಂಬುದು ಆತ್ಮಯೋಗವನ್ನು ಮಾಡುತ್ತಿರುವ ಯೋಗಿಯ ನಿಗ್ರಹಿಸಲ್ಪಟ್ಟ ಚಿತ್ತಕ್ಕೆ ಉಪಮೆಯಾಗಿ ಹೇಳಲ್ಪಟ್ಟಿದೆ.
20. यत्रोपरमतेचित्तं
निरुद्धंयोगसेवया।
यत्रचैवात्मनात्मानं
पस्यन्नात्मनितुष्यति॥६.२०॥
ಯತ್ರೋಪರಮತೇ ಚಿತ್ತಂ
ನಿರುದ್ಧಂ ಯೋಗಸೇವಯಾ ।
ಯತ್ರ ಚೈವಾತ್ಮನಾತ್ಮಾನಂ
ಪಶ್ಯನ್ನಾತ್ಮನಿ ತುಷ್ಯತಿ ॥ 6-20॥
यत्रोपरमतेचित्तंनिरुद्धंयोगसेवया।
यत्रचैवात्मनात्मानंपस्यन्नात्मनितुष्यति॥६.२०॥
ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ ।
ಯತ್ರ ಚೈವಾತ್ಮನಾತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ ॥ 6-20॥
20. The following four shlokas describe the State of Yoga:
It is a state where the mind
Through the practice of Yoga
Withdraws from the outer objects
And in a purified state
Finds and rejoices in the self;
ಈ ಕೆಳಗಿನ ನಾಲ್ಕು ಶ್ಲೋಕಗಳು ಯೋಗ ಸ್ಥಿತಿಯನ್ನು ವಿವರಿಸುತ್ತವೆ.
ಯೋಗದ ಸತತ ಅಭ್ಯಾಸದಿಂದ, ಬಾಹ್ಯ ಪರಿಸರದಿಂದ ವಿಮುಖನಾಗುವ ಮನಸ್ಸಿನ ಸ್ಥಿತಿಯಲ್ಲಿ ಹಾಗೂ ನಿರ್ಮಲವಾದ ಸ್ಥಿತಿಯಲ್ಲಿ ಆತ್ಮನನ್ನು ಕಾಣುವ ಸಂಭ್ರಮದ ಸ್ಥಿತಿ.
सुखमात्यन्तिकंयत्तत्
बुद्द्धिग्राह्यमतीन्द्रियम्।
वेत्तियत्रनचैवायं
स्थितश्चलतितत्वतः॥६.२१॥
ಸುಖಮಾತ್ಯಂತಿಕಂ ಯತ್ತತ್
ಬುದ್ಧಿಗ್ರಾಹ್ಯಮತೀಂದ್ರಿಯಮ್ ।
ವೇತ್ತಿ ಯತ್ರ ನ ಚೈವಾಯಂ
ಸ್ಥಿತಶ್ಚಲತಿ ತತ್ತ್ವತಃ ॥ 6-21॥
सुखमात्यन्तिकंयत्तत बुद्द्धिग्राह्यमतीन्द्रियम्।
वेत्तियत्रनचैवायं स्थितश्चलतितत्वतः॥६.२१॥
ಸುಖಮಾತ್ಯಂತಿಕಂ ಯತ್ತತ್ ಬುದ್ಧಿಗ್ರಾಹ್ಯಮತೀಂದ್ರಿಯಮ್ ।
ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ ॥ 6-21॥
21. It is a state in which
The Yogi experiences endless bliss
Beyond the range of senses,
Which can be grasped by the intellect only;
It is a state in which
He remains firmly established,
Without moving away from the Truth;
ಜ್ಞಾನಿಗಳಿಂದ ಮಾತ್ರವೇ ಗ್ರಹಿಸಬಲ್ಲ, ಇಂದ್ರಿಯಾತೀತ, ಕೊನೆಯಿಲ್ಲದ, ಅತ್ಯಾನಂದದ ಸ್ಥಿತಿಯಲ್ಲಿನ ಯೋಗಿಯ ಅನುಭೂತಿ. ಈ ಸ್ಥಿತಿಯಲ್ಲಿ, ಸತ್ಯದಿಂದ ದೂರ ಸರಿಯದೆ ಯೋಗಿಯು ಧೃಢವಾಗಿ ಸ್ಥಾಪಿಸಲ್ಪಡುತ್ತಾನೆ.
यंलब्ध्वाचापरंलाभं
मन्यतेनाधिकंततः।
यस्मिन्स्थितोनदुःखेन
गुरुणापिविचाल्यते॥६.२२॥
ಯಂ ಲಬ್ಧ್ವಾ ಚಾಪರಂ ಲಾಭಂ
ಮನ್ಯತೇ ನಾಧಿಕಂ ತತಃ ।
ಯಸ್ಮಿನ್ಸ್ಥಿತೋ ನ ದುಃಖೇನ
ಗುರುಣಾಪಿ ವಿಚಾಲ್ಯತೇ ॥ 6-22॥
यंलब्ध्वाचापरंलाभं मन्यतेनाधिकंततः।
यस्मिन्स्थितोनदुःखेन गुरुणापिविचाल्यते॥६.२२॥
ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ ।
ಯಸ್ಮಿನ್ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ ॥ 6-22॥
22. It is a state
The Yogi finds to be
More beneficial than anything else;
A state in which
The Yogi is not afflicted
By any kind of grief,
However great it might be;
ಈ ಸ್ಥಿತಿಯಲ್ಲಿ ಮಿಕ್ಕೆಲ್ಲದ್ದಕ್ಕಿಂತಲೂ ಹಿತವನ್ನು ಯೋಗಿಯು ಕಾಣುತ್ತಾನೆ. ಎಷ್ಟೇ ಕಷ್ಟಕರವಾದ, ಯಾವುದೇ ದುಃಖದಿಂದಲೂ ಯೋಗಿಗೆ ಬಾಧೆಯಾಗದ ಸ್ಥಿತಿ ಇದು.
तंविद्याद्दुःखसंयोग
वियोगंयोगसञ्ज्ञितम्।
सनिश्चयेनयोक्तव्यॊ
योगोऽनिर्विण्णचेतसा॥६.२३॥
ತಂ ವಿದ್ಯಾದ್ ದುಃಖಸಂಯೋಗ
ವಿಯೋಗಂ ಯೋಗಸಂಜ್ಞಿತಮ್ ।
ಸ ನಿಶ್ಚಯೇನ ಯೋಕ್ತವ್ಯೋ
ಯೋಗೋಽನಿರ್ವಿಣ್ಣಚೇತಸಾ ॥ 6-23॥
तंविद्याद्दुःखसंयोग वियोगंयोगसञ्ज्ञितम्।
सनिश्चयेनयोक्तव्यॊ योगोऽनिर्विण्णचेतसा॥६.२३॥
ತಂ ವಿದ್ಯಾದ್ ದುಃಖಸಂಯೋಗ ವಿಯೋಗಂ ಯೋಗಸಂಜ್ಞಿತಮ್ ।
ಸ ನಿಶ್ಚಯೇನ ಯೋಕ್ತವ್ಯೋ ಯೋಗೋಽನಿರ್ವಿಣ್ಣಚೇತಸಾ ॥ 6-23॥
23. Know that the State of Yoga
Is one in which
Contact with pain
Gets totally lost.
This Yoga should be practiced
Tirelessly with determination.
ಈ ಯೋಗ ಸ್ಥಿತಿಯಲ್ಲಿ, ನೋವಿನ ಸಂಪರ್ಕ ಸಂಪೂರ್ಣವಾಗಿ ಇಲ್ಲವಾಗುತ್ತದೆ ಎಂಬುದನ್ನು ತಿಳಿ. ಈ ಯೋಗವನ್ನು ಧೃಢ ಸಂಕಲ್ಪದಿಂದ ದಣಿಯದೆ ಅಭ್ಯಾಸಮಾಡಿ ಆಚರಿಸಬೇಕು.
सङ्कल्पप्रभवान्कामान्
त्यक्त्वासर्वानशेषतः।
मनसैवेन्द्रियग्रामं
विनियम्यसमन्ततः॥६.२४॥
ಸಂಕಲ್ಪಪ್ರಭವಾನ್ಕಾಮಾನ್
ತ್ಯಕ್ತ್ವಾಸರ್ವಾನಶೇಷತಃ ।
ಮನಸೈವೇಂದ್ರಿಯಗ್ರಾಮಂ
ವಿನಿಯಮ್ಯ ಸಮಂತತಃ ॥ 6-24॥
शनैःशनैरुपरमेत्
बुद्ध्याधृतिगृहीतया।
आत्मसंस्थंमनःकृत्वा
नकञ्चिदपिचिन्तयेत्।६.२५॥
ಶನೈಃ ಶನೈರುಪರಮೇತ್
ಬುದ್ಧ್ಯಾ ಧೃತಿಗೃಹೀತಯಾ ।
ಆತ್ಮಸಂಸ್ಥಂ ಮನಃ ಕೃತ್ವಾ
ನ ಕಿಂಚಿದಪಿ ಚಿಂತಯೇತ್ ॥ 6-25॥
सङ्कल्पप्रभवान्कामांस्त्यक्त्वासर्वानशेषतः।
मनसैवेन्द्रियग्रामंविनियम्यसमन्ततः॥६.२४॥
ಸಂಕಲ್ಪಪ್ರಭವಾನ್ಕಾಮಾನ್ ತ್ಯಕ್ತ್ವಾಸರ್ವಾನಶೇಷತಃ ।
ಮನಸೈವೇಂದ್ರಿಯಗ್ರಾಮಂ ವಿನಿಯಮ್ಯ ಸಮಂತತಃ ॥ 6-24॥
शनैःशनैरुपरमेद्बुद्ध्याधृतिगृहीतया
आत्मसंस्थंमनःकृत्वानकञ्चिदपिचिन्तयेत्।६.२५॥
ಶನೈಃ ಶನೈರುಪರಮೇತ್ ಬುದ್ಧ್ಯಾ ಧೃತಿಗೃಹೀತಯಾ ।
ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ ॥ 6-25॥
24.
25. As a practicing Yogi,
You should renounce all cravings
Born of selfish intent and resolve –sankalpa,
You should also,
With the help of a determined mind,
Control the senses, on all sides,
From going after their objects;
And then, slowly and steadily,
With a firm and determined intellect,
Withdraw the mind
And anchor it in the Self.
Do not bother about anything else.
ಯೋಗಾಚರಣೆಯಲ್ಲಿ ತೊಡಗಿಸಿಕೊಂಡು ಅಭ್ಯಾಸ ಮಾಡುತ್ತಿರುವ ಯೋಗಿಯಾಗಿ ನೀನು ಎಲ್ಲ ಸ್ವಾರ್ಥಪರ ಲಾಲಸೆಗಳನ್ನು ವರ್ಜಿಸುವುದಾಗಿ ಸಂಕಲ್ಪ ಮಾಡಬೇಕು. ಹಾಗೂ ಧೃಢ ಮನಸ್ಸಿನ ಸಹಾಯದಿಂದ ವಿಶಯಾಸಕ್ತಿಗಳ ಹಿಂದೆ ಹೋಗದಂತೆ ಇಂದ್ರಿಯಗಳನ್ನು ನಿಯಂತ್ರಿಸಬೇಕು. ನಂತರ ನಿಧಾನವಾಗಿ ಹಾಗೂ ಸ್ಥಿರವಾಗಿ ಧೃಢ ಸಂಕಲ್ಪದಿಂದ ಮನಸ್ಸನ್ನು ಅಂತರ್ಮುಖಿಯನ್ನಾಗಿಸಿ ಆತ್ಮನಲ್ಲಿ ಸೇರಿಸು. ಬೇರೆ ಯಾವುದರ ಬಗ್ಗೆಯೂ ಚಿಂತಿಸಬೇಡ.
यतोनिश्चरति
मनश्चञ्चलमस्थिरम्।
ततस्ततोनियम्यतत्
आत्मन्यैववशंनयेत्॥६.२६॥
ಯತೋ ಯತೋ ನಿಶ್ಚರತಿ
ಮನಶ್ಚಂಚಲಮಸ್ಥಿರಮ್ ।
ತತಸ್ತತೋ ನಿಯಮ್ಯತತ್
ಆತ್ಮನ್ಯೇವವಶಂನಯೇತ್ ॥ 6-26॥
यतोयतोनिश्चरतिमनश्चञ्चलमस्थिरम्।
ततस्ततोनियम्यैतदात्मन्यैववशंनयेत्॥६.२६॥
ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ ।
ತತಸ್ತತೋ ನಿಯಮ್ಯ ತದಾತ್ಮನ್ಯೇವವಶಂನಯೇತ್ ॥ 6-26॥
26. If the fickle and unsteady mind of yours
Runs after its objects,
And wherever it may go,
Withdraw it from those objects
And firmly anchor it in the Self.
ಚಂಚಲ ಮತ್ತು ಅಸ್ಥಿರವಾದ ನಿನ್ನ ಮನಸ್ಸು ಯಾವಾಗ ವಿಷಯಾಸಕ್ತಿಯ ಕಡೆಗೆ ಹೊರಳುತ್ತದೆಯೋ ಮತ್ತು ಎಲ್ಲೆಲ್ಲಿಯೋ ಅಲೆದಾಡುತ್ತದೆಯೋ, ಆಗ ನೀನು ಆ ವಿಷಯದಿಂದ ಮನಸ್ಸನ್ನು ಹಿಂದಕ್ಕೆ ಸೆಳೆದು ಅದನ್ನು ನಿಗ್ರಹಿಸಿ ಆತ್ಮದ ನಿಯಂತ್ರಣಕ್ಕೆ ಒಳಪಡಿಸು.
प्रशान्तमनसंह्येनं
योगिनंसुखमुत्तमम्।
उपैतिशान्तरजसं
ब्रह्मभूतमकल्मषम्॥६.२७॥
ಪ್ರಶಾಂತಮನಸಂ ಹ್ಯೇನಂ
ಯೋಗಿನಂ ಸುಖಮುತ್ತಮಮ್ ।
ಉಪೈತಿ ಶಾಂತರಜಸಂ
ಬ್ರಹ್ಮಭೂತಮಕಲ್ಮಷಮ್ ॥ 6-27॥
प्रशान्तमनसंह्येनंयोगिनंसुखमुत्तमम्।
उपैतिशान्तरजसंब्रह्मभूतमकल्मषम्॥६.२७॥
ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್ ।
ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಮ್ ॥ 6-27॥
27. Supreme Bliss will be attained
Indeed by that Yogi
Whose mind is completely stilled,
Whose quality of Rajas is subdued,
Who is without any blemish,
And who has realized his identity
With Brahman.
ಪ್ರಶಾಂತ ಚಿತ್ತನೂ, ರಜೋಗುಣವಿಲ್ಲದವನೂ, ಕಲ್ಮಶರಹಿತನೂ, ಬ್ರಹ್ಮಭಾವವನ್ನು ಹೊಂದಿದವನೂ ಆದ ಈ ಯೋಗಿಗೆ ಉತ್ತಮ ಸುಖವು ಪ್ರಾಪ್ತವಾಗುತ್ತದೆ.
युञ्जन्नेवंसदात्मानं
ಯುಂಜನ್ನೇವಂ ಸದಾತ್ಮಾನಂ
योगीविगतकल्मषः।
ಯೋಗೀ ವಿಗತಕಲ್ಮಷಃ ।
सुखेनब्रह्मसंस्पर्शं
ಸುಖೇನ ಬ್ರಹ್ಮಸಂಸ್ಪರ್ಶಃ
अत्यन्तंसुखमश्नुते॥६.२८॥
ಅತ್ಯಂತಂ ಸುಖಮಶ್ನುತೇ ॥ 6-28॥
युञ्जन्नेवंसदात्मानंयोगीविगतकल्मषः।
सुखेनब्रह्मसंस्पर्शमत्यन्तंसुखमश्नुते॥६.२८॥
ಯುಂಜನ್ನೇವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ ।
ಸುಖೇನ ಬ್ರಹ್ಮಸಂಸ್ಪರ್ಶಃ ಅತ್ಯಂತಂ ಸುಖಮಶ್ನುತೇ ॥ 6-28॥
When the Yogi gets his mind
Completely absorbed in Yoga,
As stated above,
And keeps himself free from sins,
He easily experiences Brahman
And thereby attains Infinite Peace
And Liberation.
ಮೇಲೆ ತಿಳಿಸಿದ ಪ್ರಕಾರ ಯಾವ ಯೋಗಿಯು ಹೀಗೆ ತನ್ನ ಮನಸ್ಸನ್ನು ಸಂಪೂರ್ಣವಾಗಿ ಯೋಗದಲ್ಲಿ ತೊಡಗಿಸಿಕೊಂಡು ಮತ್ತು ತನ್ನನ್ನು ಪಾಪರಹಿತನನ್ನಾಗಿಸಿಕೊಂಡು ಇರುತ್ತಾನೆಯೋ, ಅಂತಹವನು ವಿಮೋಚನೆ ಹೊಂದಿ, ಸುಲಭವಾಗಿ ಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಂಡು, ಅನಂತವಾದ ಆನಂದವನ್ನು ಹೊಂದುವನು.
सर्वभूतस्थमात्मानं
सर्वभूतानिचात्मनि।
ईक्षतेयोगयुक्तात्मा
सर्वत्रसमदर्शनः॥६.२९॥
ಸರ್ವಭೂತಸ್ಥಮಾತ್ಮಾನಂ
ಸರ್ವಭೂತಾನಿ ಚಾತ್ಮನಿ ।
ಈಕ್ಷತೇ ಯೋಗಯುಕ್ತಾತ್ಮಾ
ಸರ್ವತ್ರ ಸಮದರ್ಶನಃ ॥ 6-29॥
सर्वभूतस्थमात्मानंसर्वभूतानिचात्मनि।
ईक्षतेयोगयुक्तात्मासर्वत्रसमदर्शनः॥६.२९॥
ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ ।
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ॥ 6-29॥
29. The Yogi whose self is fully integrated
With the Supreme Self or Brahman
Will be able to obtain the Equality of Vision,
Or samadarshana.
Then he experiences the Self
Pervading all beings
And finds all beings
Inherent in the Self.
ಪರಮಾತ್ಮ ಅಥವಾ ಬ್ರಹ್ಮನಲ್ಲಿ ಸಂಪೂರ್ಣವಾಗಿ ಒಂದಾಗಿರುವ ಯೋಗಿಯು ಸಮದರ್ಶಿತ್ವವನ್ನು ಹೊಂದಲು ಶಕ್ಯನಾಗುತ್ತಾನೆ. ಅಂತಹ ಯೋಗಯುಕ್ತಾತ್ಮನು ಆತ್ಮನನ್ನು ಸರ್ವಭೂತಗಳಲ್ಲಿಯೂ, ಸರ್ವಭೂತಗಳನ್ನು ಆತ್ಮನಲ್ಲಿಯೂ ಕಾಣುತ್ತಾನೆ.
योमांपस्यतिसर्वत्र
सर्वंचमयिपस्यति।
तस्याहंनप्रणस्यामि
सचमेनप्रणश्यति॥६.३०॥
ಯೋ ಮಾಂ ಪಶ್ಯತಿ ಸರ್ವತ್ರ
ಸರ್ವಂ ಚ ಮಯಿ ಪಶ್ಯತಿ ।
ತಸ್ಯಾಹಂ ನ ಪ್ರಣಶ್ಯಾಮಿ
ಸ ಚ ಮೇ ನ ಪ್ರಣಶ್ಯತಿ ॥ 6-30॥
योमांपस्यतिसर्वत्रसर्वंचमयिपस्यति।
तस्याहंनप्रणस्यामिसचमेनप्रणश्यति॥६.३०॥
ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ ।
ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ॥ 6-30॥
30. He who sees Me in all beings
And sees in Me every being
Will not lose sight of Me;
Nor will I forsake him.
ಯಾರು ನನ್ನನ್ನು ಎಲ್ಲೆಲ್ಲಿಯೂ ಕಾಣುತ್ತಾನೆಯೋ ಮತ್ತು ನನ್ನಲ್ಲಿಯೇ ಎಲ್ಲವನ್ನೂ ಕಾಣುತ್ತಾನೆಯೋ ಅಂತಹವನಿಗೆ ನಾನು ಮರೆಯಾಗುವುದಿಲ್ಲ ಮತ್ತು ಅವನೂ ನನ್ನ ದೃಷ್ಟಿಯಿಂದ ಮರೆಯಾಗುವುದಿಲ್ಲ ಹಾಗೂ ಅವನನ್ನು ನಾನು ತ್ಯಜಿಸುವುದಿಲ್ಲ.
सर्वभूतस्थितंयोमां
भजत्येकत्वमास्थितः।
सर्वथावर्तमानोऽपि
सयोगीमयिवर्तते॥६.३१॥
ಸರ್ವಭೂತಸ್ಥಿತಂ ಯೋ ಮಾಂ
ಭಜತ್ಯೇಕತ್ವಮಾಸ್ಥಿತಃ ।
ಸರ್ವಥಾ ವರ್ತಮಾನೋಽಪಿ
ಸ ಯೋಗೀ ಮಯಿ ವರ್ತತೇ ॥ 6-31॥
सर्वभूतस्थितंयोमांभजत्येकत्वमास्थितः।
सर्वथावर्तमानोऽपिसयोगीमयिवर्तते॥६.३१॥
ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ ।
ಸರ್ವಥಾ ವರ್ತಮಾನೋಽಪಿ ಸ ಯೋಗೀ ಮಯಿ ವರ್ತತೇ ॥ 6-31॥
31. Well-established in the idea
Of oneness of Brahman,
The Yogi, who worships Me
As being present in all beings,
Lives in Me,
Whatever be the situations
In which he is placed.
ನಾನು ಮತ್ತು ಪರಮಾತ್ಮ ಒಂದೇ ಎಂಬ ಏಕತ್ವ ಭಾವದಲ್ಲಿ, ಸಮಸ್ತ ಚರಾಚರಗಳಲ್ಲಿಯೂ ಇರುವ ನನ್ನನ್ನು ಪೂಜಿಸುವ ಆ ಯೋಗಿಯು ಹೇಗೇ ಇದ್ದರೂ ಎಲ್ಲ ಸನ್ನಿವೇಶಗಳಲ್ಲಿಯೂ ನನ್ನಲ್ಲಿಯೇ ಇರುತ್ತಾನೆ.
आत्मौपम्येनसर्वत्र
समंपस्यतियोऽर्जुन।
सुखंवायदिवादुःखं
सयोगीपरमोमतः॥६.३२॥
ಆತ್ಮೌಪಮ್ಯೇನ ಸರ್ವತ್ರ
ಸಮಂ ಪಶ್ಯತಿ ಯೋಽರ್ಜುನ ।
ಸುಖಂ ವಾ ಯದಿ ವಾ ದುಃಖಂ
ಸ ಯೋಗೀ ಪರಮೋ ಮತಃ ॥ 6-32॥
आत्मौपम्येनसर्वत्रसमंपस्यतियोऽर्जुन।
सुखंवायदिवादुःखंसयोगीपरमोमतः॥६.३२॥
ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋಽರ್ಜುನ ।
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ ॥ 6-32॥
32. Arjuna,
Be it pleasure or pain,
He who sees them alike,
In all other beings,
In comparison to his own self,
Is considered to be a supreme Yogi.
ಅರ್ಜುನಾ! ಇತರರ ಸುಖದುಖಗಳನ್ನು ತನ್ನದೆಂದು ಭಾವಿಸಿ ಎಲ್ಲರನ್ನೂ ಸಮವಾಗಿ ಭಾವಿಸುವ ಯೋಗಿಯು
ಸರ್ವಯೋಗಿಗಳಲ್ಲಿ ಶ್ರೇಷ್ಠನೆಂದು ತಿಳಿಯಲ್ಪಟ್ಟಿದ್ದಾನೆ.
अर्जुनउवाच
योऽयंयोगस्त्वयाप्रोक्तः
साम्येनमधुसूदन।
एतस्याहंनपस्यामि
चञ्चलत्वात्स्थितिंस्थिराम्॥६.३३॥
ಅರ್ಜುನ ಉವಾಚ ।
ಯೋಽಯಂ ಯೋಗಸ್ತ್ವಯಾ ಪ್ರೋಕ್ತಃ
ಸಾಮ್ಯೇನ ಮಧುಸೂದನ ।
ಏತಸ್ಯಾಹಂ ನ ಪಶ್ಯಾಮಿ
ಚಂಚಲತ್ವಾತ್ಸ್ಥಿತಿಂ ಸ್ಥಿರಾಮ್ ॥ 6-33॥
अर्जुनउवाच
योऽयंयोगस्त्वयाप्रोक्तःसाम्येनमधुसूदन।
एतस्याहंनपस्यामिचञ्चलत्वात्स्थितिंस्थिराम्॥६.३३॥
ಅರ್ಜುನ ಉವಾಚ ।
ಯೋಽಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ ।
ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ಸ್ಥಿತಿಂ ಸ್ಥಿರಾಮ್ ॥ 6-33॥
33. Arjuna said:
O Krishna,
The Yoga of sameness,
Of looking alike at pleasure and pain,
Both in oneself
And in all other beings; —
This is what you have explained so far.
I am not able to grasp its certainty,
My mind being fickle and unsteady.
ಅರ್ಜುನ ಹೇಳಿದನು: ಹೇ ಮಧುಸೂದನಾ! ನೀನು ಇಲ್ಲಿಯವರೆಗೆ ವಿವರಿಸಿದ, ಸಮತ್ವದ ಯೋಗ ಅಂದರೆ ತನ್ನಲ್ಲಿಯಾಗಲೀ ಮತ್ತು ಇತರರಲ್ಲಿಯಾಗಲೀ, ಸುಖ ಮತ್ತು ದುಃಖಗಳನ್ನು ಒಂದೇ ರೀತಿ ಕಾಣುವ ಆಧ್ಯಾತ್ಮವನ್ನು, ನನ್ನ ಮನಸ್ಸು ಚಂಚಲ ಮತ್ತು ಅಸ್ಥಿರವಾಗಿರುವುದರಿಂದ, ನಾನು ಇದನ್ನು ಖಚಿತವಾಗಿ ಗ್ರಹಿಸಲಾಗುತ್ತಿಲ್ಲ.
चञ्चलंहिमनःकृष्ण
प्रमाथिबलवद्दृढम्।
तस्याहंनिग्रहंमन्ये
वायोरिवसुदुष्करम्॥६.३४॥
ಚಂಚಲಂ ಹಿ ಮನಃ ಕೃಷ್ಣ
ಪ್ರಮಾಥಿ ಬಲವದ್ ದೃಢಮ್ ।
ತಸ್ಯಾಹಂ ನಿಗ್ರಹಂ ಮನ್ಯೇ
ವಾಯೋರಿವ ಸುದುಷ್ಕರಮ್ ॥ 6-34॥
चञ्चलंहिमनःकृष्णप्रमाथिबलवद्दृढम्।
तस्याहंनिग्रहंमन्येवायोरिवसुदुष्करम्॥६.३४॥
ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ ದೃಢಮ್ ।
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ॥ 6-34॥
34. O Krishna,
The mind is indeed fickle;
It causes irritation to the body and its parts;
And it is very powerful and adamant.
I consider bringing it under control
As difficult as controlling the wind’s flow.
ಎಲೈ ಕೃಷ್ಣಾ! ಮನಸ್ಸು ಚಂಚಲವಾದದ್ದು. ದೇಹದ ಅಂಗಾಂಗಗಳಿಗೆ ಕ್ಷೋಭೆಯನ್ನುಂಟುಮಾಡುವ ಸ್ವಭಾವವುಳ್ಳದ್ದು. ಮನಸ್ಸು ಹಠಮಾರಿ ಮತ್ತು ಬಲವಾದದ್ದು. ಅದನ್ನು ನಿಗ್ರಹಿಸುವುದೆಂದರೆ ಚಲಿಸುವ ಗಾಳಿಯನ್ನು ನಿಯಂತ್ರಿಸುವಷ್ಟೇ ಕಷ್ಟಕರವಾದದ್ದು ಎಂದು ನನಗೆ ತೋರುತ್ತದೆ.
श्रीभगवानुवाच
असंशयंमहाबाहो!
मनोदुर्निग्रहंचलम्।
अभ्यासेनतुकौन्तेय!
वैराग्येणचगृह्यते॥६.३५॥
ಶ್ರೀಭಗವಾನುವಾಚ ।
ಅಸಂಶಯಂ ಮಹಾಬಾಹೋ
ಮನೋ ದುರ್ನಿಗ್ರಹಂ ಚಲಮ್ ।
ಅಭ್ಯಾಸೇನ ತು ಕೌಂತೇಯ
ವೈರಾಗ್ಯೇಣ ಚ ಗೃಹ್ಯತೇ ॥ 6-35॥
श्रीभगवानुवाच
असंशयंमहाबाहो! मनोदुर्निग्रहंचलम्।
अभ्यासेनतुकौन्तेय! वैराग्येणचगृह्यते॥६.३५॥
ಶ್ರೀಭಗವಾನುವಾಚ ।
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ ।
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ॥ 6-35॥
35. Sri Bhagavan said:
O Heroic Arjuna,
There is no doubt about the mind
Being fickle and difficult to control.
But O Arjuna,
It can be brought under control
With the help
Of steady practice and detachment.
ಭಗವಂತನು ಹೀಗೆ ಹೇಳಿದನು:
ಹೇ ಮಹಾಭಾಹುವೇ, ಮನಸ್ಸು ಚಂಚಲವಾದದ್ದು ಮತ್ತು ನಿಗ್ರಹಿಸಲು ಕಷ್ಟಕರವಾದದ್ದು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಓ ಅರ್ಜುನಾ, ಸತತ ಅಭ್ಯಾಸದಿಂದಲೂ ಮತ್ತು ವೈರಾಗ್ಯದಿಂದಲೂ ಮನಸ್ಸನ್ನು ನಿಗ್ರಹಿಸಬಹುದಾಗಿದೆ.
असंयतात्मनायोगो
दुष्प्रापइतिमेमतिः।
वस्यात्मनातुयतता
शक्योऽवाप्तुमुपायतः॥६.३६॥
ಅಸಂಯತಾತ್ಮನಾ ಯೋಗೋ
ದುಷ್ಪ್ರಾಪ ಇತಿ ಮೇ ಮತಿಃ ।
ವಶ್ಯಾತ್ಮನಾ ತು ಯತತಾ
ಶಕ್ಯೋಽವಾಪ್ತುಮುಪಾಯತಃ ॥ 6-36॥
असंयतात्मनायोगोदुष्प्रापइतिमेमतिः।
वस्यात्मनातुयतताशक्योऽवाप्तुमुपायतः॥६.३६॥
ಅಸಂಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ ।
ವಶ್ಯಾತ್ಮನಾ ತು ಯತತಾ ಶಕ್ಯೋಽವಾಪ್ತುಮುಪಾಯತಃ ॥ 6-36॥
36. O Arjuna,
In my opinion,
Yoga is not possible
For one who lacks self-control.
But for one who is determined
To put in effort again and again,
And who is well-disciplined,
It is possible to attain Yoga
By employing appropriate methods.
ಓ ಅರ್ಜುನಾ! ನನ್ನ ಅಭಿಪ್ರಾಯದಲ್ಲಿ ಯಾರಿಗೆ ಆತ್ಮನಿಗ್ರಹವಿರುವುದಿಲ್ಲವೋ, ಚಿತ್ತವು ಸ್ವಾಧೀನದಲ್ಲಿರುವುದಿಲ್ಲವೋ ಅವರಿಗೆ ಯೋಗಸಾಧನೆ ಕಷ್ಟಕರವಾಗುತ್ತದೆ. ಆದರೆ ಸ್ವಾಧೀನ ಚಿತ್ತನಾದವನು, ಸಂಯಮಿಯಾದವನೂ ಮತ್ತು ಮರಳಿ ಪ್ರಯತ್ನಿಸುವವನೂ ಖಂಡಿತವಾಗಿಯೂ ಯುಕ್ತ ವಿಧಾನಗಳನ್ನು ಅನುಸರಿಸುವುದರಿಂದ ಯೋಗಸಿದ್ಧಿಯನ್ನು ಪಡೆಯಬಹುದು.
अर्जुनउवाच
अयतिःश्रद्धयोपेतॊ
योगाच्चलितमानसः।
अप्राप्ययोगसंसिद्धिं
कांगतिंकृष्णगच्छति॥६.३७॥
ಅರ್ಜುನ ಉವಾಚ ।
ಅಯತಿಃ ಶ್ರದ್ಧಯೋಪೇತೋ
ಯೋಗಾಚ್ಚಲಿತಮಾನಸಃ ।
ಅಪ್ರಾಪ್ಯ ಯೋಗಸಂಸಿದ್ಧಿಂ
ಕಾಂ ಗತಿಂ ಕೃಷ್ಣ ಗಚ್ಛತಿ ॥ 6-37॥
अर्जुनउवाच
अयतिःश्रद्धयोपेतॊयोगाच्चलितमानसः।
अप्राप्ययोगसंसिद्धिंकांगतिंकृष्णगच्छति॥६.३७॥
ಅರ್ಜುನ ಉವಾಚ ।
ಅಯತಿಃ ಶ್ರದ್ಧಯೋಪೇತೋಯೋಗಾಚ್ಚಲಿತಮಾನಸಃ । ।
ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ ॥ 6-37॥
37. Arjuna said:
Krishna, please tell me
What will be the fate
Of a practitioner of yoga
Who starts practising
With all faith and conviction,
But fails to discipline himself
And gets distracted,
Without attaining the goal?
ಅರ್ಜುನ ಹೇಳಿದನು: ಕೃಷ್ಣಾ! ಸಂಪೂರ್ಣ ಶ್ರದ್ಧೆ ಮತ್ತು ಧೃಢನಿಶ್ಚಯದಿಂದ ಯೋಗಸಾಧನೆಯನ್ನಾರಂಭಿಸಿದವನು, ಚಿತ್ತ ಚಾಂಚಲ್ಯದಿಂದ ತನ್ನನ್ನು ತಾನು ಅಂಕೆಯಲ್ಲಿಟ್ಟುಕೊಳ್ಳದವನಾಗಿ, ಪ್ರಯತ್ನದ ಒಲವು ಕಡಿಮೆಯಾಗಿರುವುದರಿಂದ ಪೂರ್ಣಸಿದ್ಧಿಯನ್ನು ಪಡೆಯದೇ ಮಧ್ಯದಲ್ಲಿಯೇ ಯೋಗದಿಂದ ಜಾರಿದವನು ಯಾವ ಗತಿ ಪಡೆಯುತ್ತಾನೆ?
कच्चिन्नोभयविब्भष्ट:
छिन्नाभ्रमिवनश्यति।
अप्रतिष्ठोमहाबाहो
विमूढोब्रह्मणःपथि॥६.३८॥
ಕಚ್ಚಿನ್ನೋಭಯವಿಭ್ರಷ್ಟಃ
ಛಿನ್ನಾಭ್ರಮಿವ ನಶ್ಯತಿ ।
ಅಪ್ರತಿಷ್ಠೋ ಮಹಾಬಾಹೋ
ವಿಮೂಢೋ ಬ್ರಹ್ಮಣಃ ಪಥಿ ॥ 6-38॥
कच्चिन्नोभयविब्भष्टश्छिन्नाभ्रमिवनश्यति।
अप्रतिष्ठोमहाबाहोविमूढोब्रह्मणःपथि॥६.३८॥
ಕಚ್ಚಿನ್ನೋಭಯವಿಭ್ರಷ್ಟಃ ಛಿನ್ನಾಭ್ರಮಿವ ನಶ್ಯತಿ ।
ಅಪ್ರತಿಷ್ಠೋ ಮಹಾಬಾಹೋ ವಿಮೂಢೋ ಬ್ರಹ್ಮಣಃ ಪಥಿ ॥ 6-38॥
38. O Krishna,
When such a practitioner of Yoga,
On his way to the realization of Brahman,
Without getting well established in Yoga,
Gets confused and fails
And falls off from both the paths
Of Karma and Gnana,
Will not such a failed Yogi perish
Like a scattered cloud?
ಓ ಕೃಷ್ಣಾ! ಬ್ರಹ್ಮನ ಸಾಕ್ಷಾತ್ಕಾರದ ಪಥದಲ್ಲಿ, ಯೋಗದಲ್ಲಿ ಸರಿಯಾಗಿ ನೆಲೆಗೊಳ್ಳದೆ, ಗೊಂದಲದಲ್ಲಿ ಸಿಲುಕಿ, ಯೋಗ ಭ್ರಷ್ಟನಾಗಿ, ಕರ್ಮ ಮತ್ತು ಜ್ಞಾನ ಈ ಎರಡೂ ಮಾರ್ಗಗಳಲ್ಲಿ ದಿಕ್ಕು ತಪ್ಪಿದವನಾಗಿರುವಂತಹ ಯೋಗ ಸಾಧಕನ ಪಾಡು ಚದುರಿದ ಮೋಡಗಳಂತಾಗುವುದಿಲ್ಲವೇ?
एतन्मेसंशयंकृष्ण
छेत्तुमर्हस्यशेषतः।
त्वदन्यःसंशयस्यास्य
छेत्तानह्युपपद्यते॥६.३९॥
ಏತನ್ಮೇ ಸಂಶಯಂ ಕೃಷ್ಣ
ಛೇತ್ತುಮರ್ಹಸ್ಯಶೇಷತಃ ।
ತ್ವದನ್ಯಃ ಸಂಶಯಸ್ಯಾಸ್ಯ
ಛೇತ್ತಾ ನ ಹ್ಯುಪಪದ್ಯತೇ ॥ 6-39॥
एतन्मेसंशयंकृष्णछेत्तुमर्हस्यशेषतः।
त्वदन्यःसंशयस्यास्यछेत्तानह्युपपद्यते॥६.३९॥
ಏತನ್ಮೇ ಸಂಶಯಂ ಕೃಷ್ಣ ಛೇತ್ತುಮರ್ಹಸ್ಯಶೇಷತಃ ।
ತ್ವದನ್ಯಃ ಸಂಶಯಸ್ಯಾಸ್ಯ ಛೇತ್ತಾ ನ ಹ್ಯುಪಪದ್ಯತೇ ॥ 6-39॥
39. Krishna,
This doubt of mine
Regarding the fate
Of a failed Yogi,
AYogabhrastha,
You alone should clear completely;
None else can possibly do it.
ಎಲೈ ಕೃಷ್ಣಾ! ಯೋಗಭ್ರಷ್ಟನಾದ ಯೋಗಿಯ ಬಗೆಗಿನ ನನ್ನ ಈ ಸಂಶಯವನ್ನು ನಿಶ್ಯೇಷವಾಗಿ ಹೋಗಲಾಡಿಸಲು ನೀನು ಅರ್ಹನು. ಈ ನನ್ನ ಸಂಶಯವನ್ನು ಪೂರ್ಣ ನಿವಾರಿಸು. ನನ್ನ ಸಂದೇಹವನ್ನು ನಿವಾರಿಸಲು ನೀನಲ್ಲದೆ ಬೇರೆ ಯಾರೂ ಇಲ್ಲ.
श्रीभगवानुवाच
पार्थनैवेहनामुत्र
विनाशस्तस्यविद्यते।
नहिकल्याणकृत्कश्चित्
दुर्गतिंतातगच्छति॥६.४०॥
ಶ್ರೀಭಗವಾನುವಾಚ ।
ಪಾರ್ಥ ನೈವೇಹ ನಾಮುತ್ರ
ವಿನಾಶಸ್ತಸ್ಯ ವಿದ್ಯತೇ ।
ನ ಹಿ ಕಲ್ಯಾಣಕೃತ್ಕಶ್ಚಿತ್
ದುರ್ಗತಿಂ ತಾತ ಗಚ್ಛತಿ ॥ 6-40॥
श्रीभगवानुवाच
पार्थनैवेहनामुत्रविनाशस्तस्यविद्यते।
नहिकल्याणकृत्कश्चिद्दुर्गतिंतातगच्छति॥६.४०॥
ಶ್ರೀಭಗವಾನುವಾಚ ।
ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ ।
ನ ಹಿ ಕಲ್ಯಾಣಕೃತ್ಕಶ್ಚಿತ್ ದುರ್ಗತಿಂ ತಾತ ಗಚ್ಛತಿ ॥ 6-40॥
40. Sri Bhagavan said:
Arjuna,
Such a failed Yogi,
Yogabhrastha,
Will not face ruin
Either in this world
Or in the next world.
For anyone who has done some good,
My child,
Will not face any downfall whatsoever.
ಶ್ರೀ ಭಗವಂತನು ಹೀಗೆಂದನು:-
ಎಲೈ ಅರ್ಜುನಾ! ಯೋಗ ಭ್ರಷ್ಟನಿಗೆ ಈ ಲೋಕದಲ್ಲಿಯಾಗಲೀ ಅಥವಾ ಪರಲೋಕದಲ್ಲಿಯಾಗಲೀ ಎಲ್ಲಿಯೂ ಕೆಡುಕಿಲ್ಲ, ವಿನಾಶವಿಲ್ಲ. ಏಕೆಂದರೆ ಕಂದಾ ಸ್ವಲ್ಪವಾದರೂ ಒಳ್ಳೆಯ ಕಲ್ಯಾಣ ಕಾರ್ಯಗಳನ್ನು ಮಾಡುವ ಯಾರೂ ಕೂಡಾ ಅಧೋಗತಿಯನ್ನು ಹೊಂದುವುದಿಲ್ಲ.
प्राप्यपुण्यकृतांलोकान्
उषित्वाशाश्वतीःसमाः।
शुचीनांश्रीमतांगेहे
योगभ्रष्टोऽभिजायते॥६.४१॥
ಪ್ರಾಪ್ಯ ಪುಣ್ಯಕೃತಾಂ ಲೋಕಾನ್
ಉಷಿತ್ವಾ ಶಾಶ್ವತೀಃ ಸಮಾಃ ।
ಶುಚೀನಾಂ ಶ್ರೀಮತಾಂ ಗೇಹೇ
ಯೋಗಭ್ರಷ್ಟೋಽಭಿಜಾಯತೇ ॥ 6-41॥
प्राप्यपुण्यकृतांलोकानुषित्वाशाश्वतीःसमाः।
शुचीनांश्रीमतांगेहेयोगभ्रष्टोऽभिजायते॥६.४१॥
ಪ್ರಾಪ್ಯ ಪುಣ್ಯಕೃತಾಂ ಲೋಕಾನ್ ಉಷಿತ್ವಾ ಶಾಶ್ವತೀಃ ಸಮಾಃ ।
ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋಽಭಿಜಾಯತೇ ॥ 6-41॥
41. On the other hand,
The yogabhrastha or the failed Yogi
Goes, after death, to such lokas
Resevrved for those who have performed
Acts of punya;
Staying there for several years,
He comes back to this world,
Taking birth in the home
Of a wealthy person
With a pure character.
ಯೋಗ ಸಿದ್ಧಿಯನ್ನು ಪಡೆಯದೆ ಸತ್ತ ಯೋಗಭ್ರಷ್ಟನು ಪುಣ್ಯಶಾಲಿಗಳಿಗೆ ಯೋಗ್ಯವಾದ ಸ್ವರ್ಗಾದಿ ಲೋಕಗಳನ್ನು ಹೊಂದಿ, ಚಿರಕಾಲ ಸುಖವನ್ನನುಭವಿಸಿ, ಅನಂತರ ಭೂಲೋಕಕ್ಕೆ ಮರಳಿ ಬಂದು ಪವಿತ್ರರಾದ ಸದಾಚಾರಶೀಲರೂ, ಶ್ರೀಮಂತರೂ ಆದ ಭಾಗ್ಯವಂತರ ಮನೆಯಲ್ಲಿ ಜನಿಸುತ್ತಾನೆ.
अथवायोगिनामेव
कुलेभवतिधीमताम्।
एतद्धिदुर्लभतरं
लोकेजन्मयदीदृशम्॥६.४२॥
ಅಥವಾ ಯೋಗಿನಾಮೇವ
ಕುಲೇ ಭವತಿ ಧೀಮತಾಮ್ ।
ಏತದ್ಧಿ ದುರ್ಲಭತರಂ
ಲೋಕೇ ಜನ್ಮ ಯದೀದೃಶಮ್ ॥ 6-42॥
अथवायोगिनामेवकुलेभवतिधीमताम्।
एतद्धिदुर्लभतरंलोकेजन्मयदीदृशम्॥६.४२॥
ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್ ।
ಏತದ್ಧಿ ದುರ್ಲಭತರಂ ಲೋಕೇ ಜನ್ಮ ಯದೀದೃಶಮ್ ॥ 6-42॥
42. Or he takes birth in the family
Of learned Yogis.
This kind of birth is indeed
Very rare in this world.
ಅಥವಾ ಪ್ರಜ್ಞಾವಂತರಾದ ಯೋಗಿಗಳ ವಂಶದಲ್ಲಿಯಾದರೂ ಹುಟ್ಟುವನು. ನಿಜವಾಗಿ ಇಂತಹ ಈ ಜನ್ಮವು ಲೋಕದಲ್ಲಿ ತೀರಾ ಅಪರೂಪ ಹಾಗೂ ದುರ್ಲಭವಾದದ್ದು.
तत्रतंबुद्धिसंयोगं
लभतेपौर्वदैहिकम्।
यततेचततोभूयः
संसिद्धौकुरुनन्दन॥६.४३॥
ತತ್ರ ತಂ ಬುದ್ಧಿಸಂಯೋಗಂ
ಲಭತೇ ಪೌರ್ವದೇಹಿಕಮ್ ।
ಯತತೇ ಚ ತತೋ ಭೂಯಃ
ಸಂಸಿದ್ಧೌ ಕುರುನಂದನ ॥ 6-43॥
तत्रतंबुद्धिसंयोगंलभतेपौर्वदैहिकम्।
यततेचततोभूयःसंसिद्धौकुरुनन्दन॥६.४३॥
ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಮ್ ।
ಯತತೇ ಚ ತತೋ ಭೂಯಃ ಸಂಸಿದ್ಧೌ ಕುರುನಂದನ ॥ 6-43॥
43. Having born in the household
Of a learned Yogi,
He remembers the effort and experience
He had put in, in the earlier life.
Arjuna.
He makes greater effort this time
With renewed vigour
And goes to achieve perfection,
That is, Liberation.
ಧೀಮಂತನಾದ ಯೋಗಿಯ ಮನೆತನದಲ್ಲಿ ಜನಿಸಿದ ನಂತರ, ಅಲ್ಲಿ ಪೂರ್ವಜನ್ಮ ಸಂಬಂಧವಾದ ಯೋಗದ ಪರಿಶ್ರಮ ಮತ್ತು ಅನುಭವದ ಅರಿವು ಆತನಿಗಾಗುತ್ತದೆ. ಅರ್ಜುನಾ! ಹಾಗಾಗಿ ಈ ಬಾರಿ, ಪುನರ್ನವೀಕರಿಸಿದ ಓಜಸ್ಸಿನಿಂದ, ಮೋಕ್ಷವನ್ನು ಸಾಧಿಸಲು ಹಾಗೂ ಸಂಸಿದ್ಧಿಗಾಗಿ ಅಧಿಕ ಪ್ರಯತ್ನ ಮಾಡುತ್ತಾನೆ.
पूर्वाभ्यासेनतेनैव
ह्रियतेह्यवशोऽपिसः।
जिज्ञासुरपियोगस्य
शब्दब्रह्मातिवर्तते॥६.४४॥
ಪೂರ್ವಾಭ್ಯಾಸೇನ ತೇನೈವ
ಹ್ರಿಯತೇ ಹ್ಯವಶೋಽಪಿ ಸಃ ।
ಜಿಜ್ಞಾಸುರಪಿ ಯೋಗಸ್ಯ
ಶಬ್ದಬ್ರಹ್ಮಾತಿವರ್ತತೇ ॥ 6-44॥
पूर्वाभ्यासेनतेनैवह्रियतेह्यवशोऽपिसः।
जिज्ञासुरपियोगस्यशब्दब्रह्मातिवर्तते॥६.४४॥
ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋಽಪಿ ಸಃ ।
ಜಿಜ್ಞಾಸುರಪಿ ಯೋಗಸ್ಯ ಶಬ್ದಬ್ರಹ್ಮಾತಿವರ್ತತೇ ॥ 6-44॥
44. Though not having control over himself,
Such person, born into a learned family,
By virtue of the experience gained in the previous life,
Gets attracted towards Yogic practices.
In fact, one who is inclined to know
More about Yoga,
Goes beyond the area of Karma and its fruits,
As prescribed in the Vedas,
And works for Liberation.
ಪೂರ್ವಜನ್ಮ ಸಂಸ್ಕಾರ ಬಲದಿಂದ, ತನ್ನ ಹಿಂದಿನ ಜನ್ಮದ ದೈವೀ ಪ್ರಜ್ಞೆಯ ಪ್ರಭಾವದಿಂದ, ಜ್ಞಾನಿಗಳ ವಂಶದಲ್ಲಿ ಜನಿಸಿದ ಯೋಗ ಭ್ರಷ್ಠನು ಸ್ವಯಂ ನಿಯಂತ್ರಣವಿಲ್ಲದಿದ್ದರೂ ಸಹ ಯೋಗಾಭ್ಯಾಸದೆಡೆಗೆ ಆಕರ್ಷಿತನಾಗುತ್ತಾನೆ. ಅವನು ಯೋಗದ ಜಿಜ್ಞಾಸುವಾಗಿದ್ದರೂ ಸಹ ವೇದಗಳಲ್ಲಿ ಉಲ್ಲೆಖಿಸಲಾದ ಸಕಾಮ ಕರ್ಮಗಳ ಫಲವನ್ನು ದಾಟಿ ಮೋಕ್ಷವನ್ನು ಹೊಂದಲು ಉಪಕ್ರಮಿಸುತ್ತಾನೆ.
प्रयत्नाद्यतमानस्तु
योगीसंशुद्धकिल्बिषः।
अनेकजन्मसंसिद्ध:
ततोयातिपरांगतिम्॥६.४५॥
ಪ್ರಯತ್ನಾದ್ಯತಮಾನಸ್ತು
ಯೋಗೀ ಸಂಶುದ್ಧಕಿಲ್ಬಿಷಃ ।
ಅನೇಕಜನ್ಮಸಂಸಿದ್ಧಃ
ತತೋ ಯಾತಿ ಪರಾಂ ಗತಿಮ್ ॥ 6-45॥
प्रयत्नाद्यतमानस्तुयोगीसंशुद्धकिल्बिषः।
अनेकजन्मसंसिद्धस्ततोयातिपरांगतिम्॥६.४५॥
ಪ್ರಯತ್ನಾದ್ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಿಷಃ ।
ಅನೇಕಜನ್ಮಸಂಸಿದ್ಧಃ ತತೋ ಯಾತಿ ಪರಾಂ ಗತಿಮ್ ॥ 6-45॥
45. But one who makes determined effort
To achieve perfection
Will be able to make good progress
On the strength of the samskaras
Generated by his yogic practices
In the previous lives
And with all his sins
Having been washed away
He will attain the Supreme Goal
Of Moksha or Liberation.
ಹಿಂದಿನ ಜನ್ಮಗಳ ಯೋಗಸಾಧನೆಗಳಿಂದ ಉದ್ಭವವಾದ ಸಂಸ್ಕಾರ ಬಲದಿಂದ, ಯೋಗಭ್ರಷ್ಟನು ಪರಿಪೂರ್ಣತೆಯನ್ನು ಸಾಧಿಸುವ ಸಲುವಾಗಿ ಸಂಕಲ್ಪ ಸಿದ್ಧಿಯಿಂದ, ಉತ್ತಮವಾದ ಪ್ರಗತಿಯನ್ನು ಸಾಧಿಸಿ, ತನ್ನೆಲ್ಲಾ ಪಾಪಗಳನ್ನು ತೊಳೆದುಕೊಂಡವನಾಗಿ, ದೋಷರಹಿತನಾಗಿ ಪರಮಸಿದ್ದಿಯನ್ನು ಪಡೆಯುತ್ತಾನೆ.
तपस्विभ्योऽधिकोयोगी
ज्ञiनिभ्योऽपिमतोऽधिकः।
कर्मिभ्यश्चाधिकोयोगी
तस्माद्योगीभवार्जुन॥६.४६॥
ತಪಸ್ವಿಭ್ಯೋಽಧಿಕೋ ಯೋಗೀ
ಜ್ಞಾನಿಭ್ಯೋಽಪಿ ಮತೋಽಧಿಕಃ ।
ಕರ್ಮಿಭ್ಯಶ್ಚಾಧಿಕೋ ಯೋಗೀ
ತಸ್ಮಾದ್ಯೋಗೀ ಭವಾರ್ಜುನ ॥ 6-46॥
तपस्विभ्योऽधिकोयोगीज्ञiनिभ्योऽपिमतोऽधिकः।
कर्मिभ्यश्चाधिकोयोगीतस्माद्योगीभवार्जुन॥६.४६॥
ತಪಸ್ವಿಭ್ಯೋಽಧಿಕೋ ಯೋಗೀ ಜ್ಞಾನಿಭ್ಯೋಽಪಿ ಮತೋಽಧಿಕಃ ।
ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ಯೋಗೀ ಭವಾರ್ಜುನ ॥ 6-46॥
46. The Yogi who aims at Mukti or Liberation,
In my opinion, is greater than those
Who do mere tapas;
He is more eminent than those
Who are well-versed in the Vedas;
And he is also superior to those
Who do sakaamkarma,
Or do actions with a desire
To derive benefits from them.
Therefore, Arjuna, I want you to become a Yogi.
ನನ್ನ ಅಭಿಪ್ರಾಯದಲ್ಲಿ, ಮುಕ್ತಿಯನ್ನು ಗುರಿಯಾಗಿಸಿಕೊಂಡ ಯೋಗಿಯು, ಬರಿಯ ತಪಸ್ಸನ್ನು ಮಾಡುವ ತಪಸ್ವಿಗಳಿಗಿಂತಲೂ ಮೇಲು, ವೇದ ಜ್ಞಾನವನ್ನು ಹೊಂದಿದ ಶಾಸ್ತ್ರ ಜ್ಞಾನಿಗಳಿಗಿಂತಲೂ ಉತ್ತಮ ಮತ್ತು ಕರ್ಮಫಲವನ್ನು ಆಶಿಸುವ ಸಕಾಮ ಕರ್ಮ ಮಾಡುವವರಿಗಿಂತಲೂ ಯೋಗಿಯು ಶ್ರೇಷ್ಠನಾಗಿದ್ದಾನೆ. ಆದ್ದರಿಂದ ಹೇ ಅರ್ಜುನಾ! ನೀನು ಯೋಗಿಯಾಗಬೇಕೆಂದು ನಾನು ಬಯಸುವೆ.
योगिनामपिसर्वेषां
मद्गतेनान्तरात्मना।
श्रद्धावान्भजतेयोमां
समेयुक्ततमोमतः॥६.४७॥
ಯೋಗಿನಾಮಪಿ ಸರ್ವೇಷಾಂ
ಮದ್ಗತೇನಾಂತರಾತ್ಮನಾ ।
ಶ್ರದ್ಧಾವಾನ್ಭಜತೇ ಯೋ ಮಾಂ
ಸ ಮೇ ಯುಕ್ತತಮೋ ಮತಃ ॥ 6-47॥
योगिनामपिसर्वेषांमद्गतेनान्तरात्मना।
श्रद्धावान्भजतेयोमांसमेयुक्ततमोमतः॥६.४७॥
ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ ।
ಶ್ರದ್ಧಾವಾನ್ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ ॥ 6-47॥
47. Among such Yogis
The Yogi who worships Me in full faith,
With his inner self completely absorbed in Me,
Is superior, according to Me,
To the other Yogis who worship other deities.
ऒम् तत्सदिति
ಓಂ ತತ್ಸದಿತಿ
श्रीमद्भगवद्गितासू
ಶ್ರೀಮದ್ಭಗವದ್ಗೀತಾಸೂ
उपनिषत्सु
ಉಪನಿಷತ್ಸು
ब्रह्म विद्यायां
ಬ್ರಹ್ಮವಿದ್ಯಾಯಾಂ
यॊगशास्त्रॆ
ಯೋಗಶಾಸ್ತ್ರೇ
श्रीकृष्णार्जुनसंवादॆ
ಶ್ರೀಕೃಷ್ಣಾರ್ಜುನಸಂವಾದೇ
ध्यानयोगो नाम
ಧ್ಯಾನಯೋಗೋ ನಾಮ
षष्टोऽध्यायः
ಷಷ್ಠೋಧ್ಯಾಯಃ
ऒं ततसत्
ಓಂ ತತ್ಸತ್
ಇಂತಹ ಯೋಗಿಗಳಲ್ಲೆಲ್ಲಾ, ಯಾವ ಯೋಗಿಯು ಸಂಪೂರ್ಣ ನಿಷ್ಠೆಯಿಂದ ನನ್ನನ್ನು ಆರಾಧಿಸುವನೋ, ತನ್ನ ಅಂತರಾತ್ಮನನ್ನು ನನ್ನಲ್ಲೇ ಲೀನವಾಗಿಸಿ ಪೂಜಿಸುವನೋ, ಅವನು ಬೇರೆ ದೇವತೆಗಳನ್ನು ಪೂಜಿಸುವ ಇತರೆ ಯೋಗಿಗಳಿಗಿಂತಲೂ ಪರಮ ಶ್ರೇಷ್ಠನೆಂದು ನನ್ನ ಅಭಿಪ್ರಾಯ.
ಓಂ ತತ್ ಸತ್
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಧ್ಯಾನಯೋಗ(ಆತ್ಮ ಸಂಯಮಯೋಗ) ಎಂಬ ಹೆಸರಿನ ಆರನೆಯ ಅಧ್ಯಾಯವು ಮುಗಿದುದು.
THE END OF CHAPTER SIX