DAKSHINAMURTI STOTRAM
144-169
Bagavadgita: Saadhana Maarga
Track Four: SmaranaM
Towards Self-Realization – 6
We have recited and tried to understand the meaning and significance of the preceding two Stotras by Shankara: Gurvashtakam and Sri Shiva Manasa Pooja.
Gurvashtakam forcefully emphasizes the value of Guru’s words:
लभेत् वांछितार्थ पदं ब्रह्मसंज्ञं
गुरोरुक्तवाक्ये मनो यस्य लग्नम् ॥
labhedvāñchiārthaṃ padaṃ brahmasamñjñaṃ
guroruktavākye mano yasya lagnaṃ ।।
He who keeps his mind fixed
on what the Guru has said,
would attain the desired goal
of Liberation – the State of Brahman. –
Let us know a little about the dynamics of a Stotra.
A Stotra or a Stuti is a hymn in praise of a God or Goddess.
Shankara has composed a variety of Stotras on different deities.
A Suktam is a Vedic hymn like the Narayana Shuktam which we have already studied.
It consists of Vedic mantras.
Stotras or Stuties are largely poetic compositions in the form of stanzas composed in various meters in praise of one’s preferred deity.
In general, when the devotee recites a Stotra, there is the subject-object divide between the devotee and his deity.
The devotee offers all the Upacharas and prostrations and then praises the deity in front of him.
But an altogether different experience happens when the divinity is internalized in the inner space.
The deity gets installed in the Hrudayaakaasa, close to the Indwelling Self, the Antaryami.
This is the feeling we get when we are reciting Sri Shiva Manasa Pooja.
The first three stanzas in Sri Shiva Maanasa Pooja enable us to go inward, to some extent, and to perform the Shodasopachara Pooja mentally by means of visualization.
Next, in the Fourth stanza, we take a step more inwardly and internalize the whole process of visualizing
Shiva and Girija and their Parivaara and offer ourselves entirely to them.
This internalized Divine Worship and Prayer, we presume, has purified our Antahkarana to some extent.
In this context, we remember the powerful images we came across in the Narayana Sukta:
the Images of a Garland of Fire, the Flame in it, the Flash within it and a Spark: denoting the Prana, the Jeeva and Paramaatma, respectively.
We also recollect the Two Birds perched on the same branch of a tree representing Jeevatma and Parammaatma and the Jeevatma getting identified with Parmatma, as described in the Mundakopanishad.
In this Saadhana Maarga — this Spiritual Practice that we have taken up, we should attempt to integrate the two: Jeevaatma and Paramaatma.
We should try to experience the Presence of Shiva and Girija as representing Purusha and Prakruti, the manifest forms of the Supreme Brahman.
And we should also experience that it is the same Brahman that is within each one of us as Antaryami,
the In-dwelling Witness Consciousness.
This helps us to make an attempt to seek the identity of the Atma, the individual Self, with the Paramatma, the Supreme Self.
This is what the Maha Vaakyas say:
Aham Brahmaasmi. I AM BRAHMA
Tattvamasi. THOU ART THAT
Pragnaanam Brahma CONSCIOUSNESS IS BRAHMA
Ayam Atma Brahma THIS ATMA IS BRAHMA
Shankara sums up the Essence of Advaita Vedanta when he says:
Brahma Satyam Jagan -Mithya
Jeevo Brahmaiva naaparaH
Brahman alone is real and this jagat or universe is unreal
and the Jeeva is not different from Brahman
While stating the identity of Jeevaatma and Paramatma, Shankara introduces the concept of Mithya.
It is also called Maaya.
He also says: Sarvam Khalu Idam Brahma.
It is the idea of ONENESS OF EVERYTHING or Sarvaatmatva.
Pure Consciousness is the Deep Structure of this Universe
Before we go to study Sri Dakshina Murty Stotram, it is necessary to have a clear idea of the concept of Maya or Mithya.
MAAYA
Maaya has multiple meanings in Indian philosophies.
In the Dualist philosophies, the word refers only to the Creative Power of Ishvara.
But in Advaita philosophy, it has several connotations.
The word literally means ‘illusion’ or ‘magic’ or more precisely ‘ignorance.’
Vedanta declares that our real nature is divine. We are pure, perfect and eternally free.
Our true Self, the Atman, is one with Brahman.
If our real nature is divine, why are we not aware of it?
The answer is– it is because of Maaya or ignorance.
Maaya, like a veil, covers our real nature.
‘The world is not as it seems.’ or ‘what we see is not the way it is.’
It is because of ‘ignorance.’
1. Maaya is anaadi or beginning-less.
2. It is a mysterious something.
3. We cannot characterize it as ‘this’ or ‘that.’
4. It is ‘thrigunaatmakam’ that is, it has the Powers of Sattva, Rajas and Tamas.
5. Maaya has two more powers: Aavarana shakti, Veiling Power and Vikshepa shakti, Projecting Power.
Shankara gives the example of the ‘Rope and the Snake’ to illustrate this concept:
While walking down a darkened road, one sees a snake. His heart begins to pound. His pulse quickens.
On close examination, the snake turns out to be just a piece of rope.
When the delusion goes, the snake disappears forever.
Because of ignorance, we see ourselves as mortal beings and find the universe conditioned by time and space and causation. We are aware of our limitations, bondage and suffering.
When the illusion goes with the dawning of knowledge, both the world and we turn out to be Brahman.
This is possible with the help of a Guru, as we are going to find in the Sri Dakshina Murty Stotram.
Ishvara and Prakruti are the Saguna aspects of Nirguna Brahma .
Maaya is another name of Prakruti.
At the Macro level, Maaya with its Creative Power consisting of the three Gunas, namely Sattva, Rajas and Tamas, causes the Cosmos to come into being.
It happens through the process of Panchikarana. Then it is called Brahmanda or VISWAM.
It has its replica at the Micro level as Pindanda, the individual entity or JEEVA.
Both the Cosmos and the individual self – VISWAM and JEEVA — are enlivened and pervaded by the same Consciousness, Sat-Chit-Ananda.
Jeeva
When the reflection of Brahman in our body identifies itself with the gross body, it is called Jeeva.
Confined to the body-mind complex, Jeeva is conditioned by ignorance – that is the power of Maaya.
When the Jeeva realizes through Gnana, and the Grace and Upadesha of the Guru, that it is different from the body-mind complex and that its true nature is that of Existence-Consciousness-Bliss, the Jeeva gets rid of ignorance and attains Liberation from the cycles of births and deaths.
The Seeker of Liberation through self-realization needs the Upadesha from a competent Guru.
Sri Dakshina Murti Stotram
Showing his Grace and Compassion towards us, Shankara places us right in front of such Guru.
It is Sri Dakshina Murti, the Incarnation of Ishvara, revealed in the Divine Aspect of Guru.
So we have Shankara’s Sri Dakshina Murty Stotra.
Let us understand who this Dakshina Murty is and what we get from this Stotra.
There are several connotations to the name of Sri Dakshina Murty:
1. Ishvara, who is endowed with Gnana, manifests as Sri Dakshina Murty to grace those who seek Gnana.
2. He sits facing South to impart Gnana.
3. He is also viewed as one endowed with daakshinya or Efficiency and Competence to favour his devotees with Gnana.
4. He is approached and addressed as Guru Murty.
5. According to Ramana Maharshi, Sri Dakshina Murty is to be meditated on, by visualizing him in the Hrudaya, a little towards the Right.
This is a Stotra, a devotional poem, addressed to Sri Dakshina Murti.
It consists of ten stanzas.
Shankara uses a refrain in the first nine stanzas:
Tasmai Sri Gurumurtaye nama idam Sri Dakshina Murtaye.
“My salutations to that Divine Aspect of Guru (Guru Murty) who is none other than Sri Dakshina Murty.”
This is an expression of Gratitude to the Guru for the measure of Gnana received in each Stanza.
There are nine such stanzas, measures of Gnana, brilliantly and artistically filled with the essence of Advaita Vedanta as well as of Upanishadic Wisdom.
The Fruit (phala sruti) is contained in the last Stanza, which is sarvaatmatva, the Idea of ONENESS pervaded by Pure Consciousness.
Shankara, interestingly, uses the same meter that he had used for Sri Shiva Maanasa Pooja, namely Shaardoola Vikreeditam, which gives a majestic gait to the lines!
Now let us approach the text of each stanza and try to share and experience the Gnana.
But before that there are some dhyana shlokas, which help us to know more about Sri Dakshina Murti and which enable us to concentrate and meditate on Him.
Dakshinamurthy Stotram
–
composed by Sri Adi Shankaracharya
दक्षिणामूर्ति स्तोत्रम्
ध्यानं DHYAANAM
मौनव्याख्या प्रकटित परब्रह्मतत्त्वं युवानं
वर्षिष्ठांते वसद् ऋषिगणैः आवृतं ब्रह्मनिष्ठैः ।
आचार्येन्द्रं करकलित चिन्मुद्रमानंदमूर्तिं
स्वात्मारामं मुदितवदनं दक्षिणामूर्तिमीडे ॥१॥
Mauna-Vyaakhyaa Prakattita Para-Brahma-Tattvam Yuvaanam
Varssisstthaam-Te Vasad Rssigannaih Aavrtam Brahma-Nisstthaih |
Aacaaryendram Kara-Kalita Cin-Mudram-Aananda-Muurtim
Svaatmaaraamam Mudita-Vadanam Dakssinnaamuurti-Miidde ||1||
I worship Sri Dakshinamurthy
who is found surrounded by a group of rishis,
who are his students.
They are elderly and well-versed in the Knowledge of Brahman.
But Sri Dakshinamurthy looks young
and reveals the Truth of the Ultimate Reality
through silence
and by means of a Mudra called Chinmudra.
He is the King among teachers.
He is brimming with Aananda
that is expressed through a smile on His face.
He seems to revel in his own Self.
I worship such Sri Dakshinamurthy.
वटविटपिसमीपेभूमिभागे निषण्णं
सकलमुनिजनानां ज्ञानदातारमारात् ।
त्रिभुवनगुरुमीशं दक्षिणामूर्तिदेवं
जननमरणदुःखच्छेद दक्षं नमामि ॥२॥
Vatta-Vittapi-Samiipe-Bhuumi-Bhaage Nissannnnam
Sakala-Muni-Janaanaam Jnyaana-Daataaram-Aaraat |
Tri-Bhuvana-Gurum-Iisham Dakssinnaamuurti-Devam
Janana-Maranna-Duhkhac-Cheda Dakssam Namaami ||2||
I salute Sri Dakshinamurthy
who is seated on the ground
near a banyan tree with many branches.
In front of Him are seated many rishis.
He is the Giver of Knowledge,
Lord, Teacher, God of the Three Worlds.
He is skillful in removing sorrow and suffering
due to birth and death.
I salute Sri Dakshinamurthy.
चित्रं वटतरोर्मूले वृद्धाः शिष्या गुरुर्युवा ।
गुरोस्तु मौनं व्याख्यानं शिष्यास्तुच्छिन्नसंशयाः ॥३॥
Citram Vatta-Taror-Muule Vrddhaah Shissyaa Gurur-Yuvaa |
Guros-Tu Maunam Vyaakhyaanam Shissyaas-Tuc-Chinna-Samshayaah ||3||
It is amazing to see,
at the base of the Banyan Tree,
students are old
and the Teachr is young.
Another amazing thing –
the teaching of the Guru
takes place in silence!
Surprisingly, all the doubts of the students
are dispelled!
This is astonishing!
I salute Sri Dakshinamurthy
निधये सर्वविद्यानां भिषजे भवरोगिणाम् ।
गुरवे सर्वलोकानां दक्षिणामूर्तये नमः ॥४॥
Nidhaye Sarva-Vidyaanaam Bhissaje Bhava-Roginnaam |
Gurave Sarva-Lokaanaam Dakssinnaamuurtaye Namah ||4||
Salutations to the One
who is the Treasure of all Knaowledge.
Salutations to Him
who is the Medicine for the disease of worldly ills;
Salutations to the Teacher
of all the Worlds
in the Form of Sri Dakshinamurthy
ॐ नमः प्रणवार्थाय शुद्धज्ञानैकमूर्तये ।
निर्मलाय प्रशान्ताय दक्षिणामूर्तये नमः ॥५॥
Om Namah Prannava-Arthaaya Shuddha-Jnyaanaia-Muurtaye |
Nirmalaaya Prashaantaaya Dakssinnaamuurtaye Namah ||5||
Salutations to Sri Dakshinamurthy
who is the Meaning of Pranava or OM,
whose Form is only Pure Knowledge
and who is Pure and utterly Peaceful.
ईश्वरो गुरुरात्मेति मूर्तिभेदविभागिने ।
व्योमवद् व्याप्तदेहाय दक्षिणामूर्तये नमः ॥६॥
Cid-Ghanaaya Mahehaaya Vatta-Muula-Nivaasine |
Sac-Cid-Aananda-Ruupaaya Dakssinnaamuurtaye Namah ||6||
My Salutation to Sri Dakshinamurthy
who pervades everywhere like the Space,
though He is Manifest in different Forms
as Ishvara, Guru and Atman.
Mananam
स्तोत्रम्
विश्वं दर्पणदृश्यमाननगरीतुल्यं निजान्तर्गतं
पश्यन्नात्मनि मायया बहिरिवोद्भूतं यथा निद्रया ।
यः साक्षात्कुरुते प्रबोधसमये स्वात्मानमेवाद्वयं
तस्मै श्रीगुरुमूर्तये नम इदं श्रीदक्षिणामूर्तये ॥१॥
Vishvam Darpanna-Drshyamaana-Nagarii-Tulyam Nija-Antargatam
Pashyann-Aatmani Maayayaa Bahir-Ivodbhuutam Yathaa Nidrayaa |
Yah Saakssaat-Kurute Prabodha-Samaye Svaatmaanam-Eva-Advayam
Tasmai Shrii-Guru-Muurtaye Nama Idam Shrii-Dakssinnaamuurtaye ||1||
1. Viswam, the universe of names and forms,
is similar to the image of a city
reflected in a mirror.
It is because of Maaya that the universe looks
projected outside, as in a dream.
While dreaming, the dreamer finds the dream
acting out outside.
Waking up, he knows that the dream was within him.
The Universe of names and forms
keeps within, reflected on the mirror of the mind,
not as a separate entity
because Atma alone shines forth within —
without a second.
The Guru at the time of bodha or spiritual instruction
makes me realize that I am the ONE within,
the Atma – no second one.
In gratitude, I offer my salutations
to the Divine Form of Guru
as well as to Sri Dakshinamurthy.
बीजस्याऽन्तरिवाङ्कुरो जगदिदं प्राङ्गनिर्विकल्पं पुनः
मायाकल्पितदेशकालकलना वैचित्र्यचित्रीकृतम् ।
मायावीव विजृम्भयत्यपि महायोगीव यः स्वेच्छया
तस्मै श्रीगुरुमूर्तये नम इदं श्रीदक्षिणामूर्तये ॥२॥
Biijasya-Antar-Iva-Angkuro JagadIdam Praangga-Nirvikalpam Punah
Maayaa-Kalpita-Desha-Kaala-Kalanaa Vaicitrya-Citrii-Krtam |
Maayaavi-Iva Vijrmbhayaty-Api Mahaa-Yogi-Iva Yah Svecchayaa
Tasmai Shrii-Guru-Muurtaye Nama Idam Shrii-Dakssinnaamuurtaye ||2||
2. Before Creation, this Jagat, this world,
was in an undifferentiated state.
Then, just as the sprout comes out
from within the seed,
this world has come forth,
as a projection made by the Creative Power
of Maaya.
Then it looked, as it were, painted
with many colours,
and gave rise to Time and Space.
It is like a Magician making a Spectacular
and Colourful Display.
Or a Mahayogi, with unusual powers,
by his own free will, causing the Colourful Expansion
of the World.
I make my salutation
to that Ishwara, the Creator,
who is also in the Divine Form of my Guru
as well as of Sri Dakshinamurthy.
यस्यैव स्फुरणं सदात्मकमसत्कल्पार्थकं भासते
साक्षात्तत्त्वमसीति वेदवचसा यो बोधयत्याश्रितान् ।
यत्साक्षात्करणाद्भवेन्न पुनरावृत्तिर्भवाम्भोनिधौ
तस्मै श्रीगुरुमूर्तये नम इदं श्रीदक्षिणामूर्तये ॥३॥
Yasya-Eva Sphurannam Sadaatmakam-Asat-Kalpa-Arthakam Bhaasate
Saakssaat-Tat-Tvam-Asi-Iti Veda-Vacasaa Yo Bodhayaty-Aashritaan |
Yat-Saakssaat-Karannaad-Bhaven-Na Punaraavrttir-Bhavaam-Bho-Nidhau
Tasmai Shrii-Guru-Muurtaye Nama Idam Shrii-Dakssinnaamuurtaye ||3||
3. The underlying Reality of this Creation,
the Pulsating Power of Ishwara,
is indeed Real
but looks as though Unreal
Due to the Veiling Power of Maaya.
We take the names, forms and appearances
to be Real.
Sri Dakshinamurthy is the One
who makes those who seek His refuge
to discover directly,
through the teaching of Veda,
that You are That.
‘That’ refers to the underlying Reality
of the Pulsating Creation,
giving “existence” and “appearance”
to the Creation.
This immediate recognition ensures
no return to the Sea of Worldly life.
My salutation is unto Him
who imparts this knowledge
in the Form of my Guru
as well as in the Form of Sri Dakshinamurthy.
नानाच्छिद्रघटोदरस्थितमहादीपप्रभा भास्वरं
ज्ञानं यस्य तु चक्षुरादिकरणद्वारा वहिः स्पन्दते ।
जानामीति तमेव भान्तमनुभात्येतत्समस्तं जगत्
तस्मै श्रीगुरुमूर्तये नम इदं श्रीदक्षिणामूर्तये ॥४॥
Naanaac-Chidra-Ghattodara-Sthita-Mahaa-Diipa-Prabhaa Bhaasvaram
Jnyaanam Yasya Tu Cakssur-Aadi-Karanna-Dvaaraa Vahih Spandate |
Jaanaam-Iiti Tam-Eva Bhaantam-Anubhaaty-Etat-Samastam Jagat
Tasmai Shrii-Guru-Muurtaye Nama Idam Shrii-Dakssinnaamuurtaye ||4||
4. Imagine that there is a big shining lamp
placed inside a pot
that has many holes.
Consciousness, like the light of that bright lamp,
streams out by means of the sense organs
such as the eyes, ears, etc.
I know that the same Consciousness
shines forth and pervades the entire Universe,
illumining everything in it.
My salutation to that Consciousness
in the Form of my Guru
as well as in the Form of Sri Dakshinamurthy.
देहं प्राणमपीन्द्रियाण्यपि चलां बुद्धिं च शून्यं विदुः
स्त्रीबालान्धजडोपमास्त्वहमिति भ्रान्ता भृशं वादिनः ।
मायाशक्तिविलासकल्पितमहाव्यामोहसंहारिणे
तस्मै श्रीगुरुमूर्तये नम इदं श्रीदक्षिणामूर्तये ॥५॥
Deham Praannam-Api-Indriyaanny-Api Calaam Buddhim Ca Shuunyam Viduh
Strii-Baala-Andha-Jaddo(a-U)pamaas-tvAham-Iti Bhraantaa Bhrsham Vaadinah |
Maayaa-Shakti-Vilaasa-Kalpita-Mahaa-Vyaamoha-Samhaarinne
Tasmai Shrii-Guru-Muurtaye Nama Idam Shrii-Dakssinnaamuurtaye ||5||
People argue variously
and describe the Self as the body, or as the life-force,
or as the senses or as the active intellect,
or even as non-existence, Shunyam.
They are false and misguided
in their arguments, like those of women,
children, or people who are blind or dull-witted.
They do so because of the great delusion
caused by the play of powerful Maaya.
My salutation to Him
who removes that ignorance caused by Maaya
and who is in the Form of my Guru
that is none other than Sri Dakshinamurthy.
राहुग्रस्तदिवाकरेन्दुसदृशो मायासमाच्छादनात्
सन्मात्रः करणोपसंहरणतो योऽभूत्सुषुप्तः पुमान् ।
प्रागस्वाप्समिति प्रबोधसमये यः प्रत्यभिज्ञायते
तस्मै श्रीगुरुमूर्तये नम इदं श्रीदक्षिणामूर्तये ॥६॥
Raahu-Grasta-Divaakarendu-Sadrsho Maayaa-Sama-acchaadanaat
San-Maatrah Karannopasangharannato Yo(a-A]bhuut-Sussuptah Pumaan |
Praag-Asvaapsam-Iti Prabodha-Samaye Yah Pratyabhijnyaayate
Tasmai Shrii-Guru-Muurtaye Nama Idam Shrii-Dakssinnaamuurtaye ||6||
{This shloka describes the state of mind during deep sleep (sushupti).
The remaining two states of mind during waking and dream state (jaagruti and swapna)
are described in the next shloka.}
Just as the Sun and the Moon are covered by darkness
at the time of an eclipse,
so a person’s mind in deep sleep
gets blank because of the withdrawal
of all senses from the screen of the mind.
Consciousness, however, remains present.
It did not have anything to reflect
because the mind was blank.
In this state of the withdrawal of all senses,
the screen of the mind is covered
by Maaya or Ignorance.
Consciousness also remained covered by Maaya.
At the time when the person wakes up,
he recognizes that Consciousness was present
though it did not have anything to reflect on.
He who remains as Pure Consciousness
even during deep sleep state,–
my salutations to that Person
and to Him who is in the Form of my Guru
as well as in the Form of Sri Dakshinamurthy.
बाल्यादिष्वपि जाग्रदादिषु तथा सर्वास्ववस्थास्वपि
व्यावृत्तास्वनुवर्तमानमहमित्यन्तः स्फुरन्तं सदा ।
स्वात्मानं प्रकटीकरोति भजतां यो मुद्रयाभद्रया
तस्मै श्रीगुरुमूर्तये नम इदं श्रीदक्षिणामूर्तये ॥७॥
Baalya-AdissvApi Jaagrad-Aadissu Tathaa SarvaasvAvasthaasvApi
VyaavrttaasvAnu-Vartamaanam-AhamItyAntah Sphurantam Sadaa |
Svaatmaanam Prakattii-Karoti Bhajataam Yo Mudrayaa-Bhadrayaa
Tasmai Shrii-Guru-Muurtaye Nama Idam Shrii-Dakssinnaamuurtaye ||7||
In all the different states of experiences,
as in childhood, youth, old age, etc.
and also in different states like waking and dreaming,
there is one thing which persists,
which is unchanging.
It is continually shining within
as “I” (aham),
the Consciousness.
The Truth is revealed to those who are
devoted to the Guru.
It is revealed by means of an auspicious Symbol,
the Chinmudra.
My salutaions to the One
who reveals my true nature
as Conscious Being.
My salutations unto that Guru
as well as to Sri Dakshinamurthy.
विश्वं पश्यति कार्यकारणतया स्वस्वामिसम्बन्धतः
शिष्याचार्यतया तथैव पितृपुत्राद्यात्मना भेदतः ।
स्वप्ने जाग्रति वा य एष पुरुषो मायापरिभ्रामितः
तस्मै श्रीगुरुमूर्तये नम इदं श्रीदक्षिणामूर्तये ॥८॥
Vishvam Pashyati Kaarya-Kaaranna-Tayaa Svasvaami-Sambandhatah
Shissyaacaarya-Tayaa Tatha-Eva Pitr-PutraadyAatmanaa Bhedatah |
Svapne Jaagrati Vaa Ya Essa Purusso Maayaa-Paribhraamitah
Tasmai Shrii-Guru-Muurtaye Nama Idam Shrii-Dakssinnaamuurtaye ||8||
(This shloka describes the Brahma Gnaani,
one who has gained the Knowledge of Brahman.)
He sees the world as oneself:,
whatever he sees in life is all seen
as a natural manifestation of one’s own Consciousness.
He sees all the differences
such as Cause and Effect;
Master and Servant; Teacher and Student;
Father and Son, or Sleep and Wakefulness –
all these are taken to be
the Projections of Maaya.
The non-dual Brahman manifests in all these,
using Maaya with its Power of Creation.
He, the Brahma Gnaani, sees the ONENESS of all.
My salutation is unto Him
and to the divine Form of Guru
who is none other than Sri Dakshinamurthy.
भूरम्भांस्यनलोऽनिलोऽम्बरमहर्नाथो हिमांशु पुमान्
इत्याभाति चराचरात्मकमिदं यस्यैव मूर्त्यष्टकम्
नान्यत् किञ्चन विद्यते विमृशतां यस्मात्परस्माद्विभोः
तस्मै श्रीगुरुमूर्तये नम इदं श्रीदक्षिणामूर्तये ॥९॥
Bhuur-Ambhaamsy-Analonilombaram-Aharnaatho Himaamshu Pumaan
ItyAabhaati Cara-Acaraatmakam-Idam Yasya-Eva MuurtyAssttakam
Naanyat Kin.cana Vidyate Vimrshataam Yasmaat-Parasmaad-Vibhoh
Tasmai Shrii-Guru-Muurtaye Nama Idam Shrii-Dakssinnaamuurtaye ||9||
In this shloka, Sri Dakshinsmurthy is described
as having an eight-fold Form: Ashta Murthy.
It includes the Five Elements of Earth, Water,
Fire, Air and Space.
Also included are the Sun who is the Master of the Day
and the Moon that spreads coolness all over
and the Conscious Being.
This Eight-fold Form also comprises
all the Sentient and Non-Sentient forms in the Universe.
Nothing exists other than this Supreme
All-Pervasive Being known as Vibhu.
This is understood by those who are wise
and those who can discern the Truth
that all that exists is Brahman.
This Form of Ashta Murthy also helps
the Devotee to worship and meditate on,
by way of Sagunopasana.
My salutation to that Brahman
who is in the Form of my Guru
as well as in the Form of Sri Dakshinamurthy.
सर्वात्मत्वमिति स्फुटीकृतमिदं यस्मादमुष्मिन् स्तवे
तेनास्य श्रवणात्तदर्थमननाद्ध्यानाच्च संकीर्तनात् ।
सर्वात्मत्वमहाविभूतिसहितं स्यादीश्वरत्वं स्वतः
सिद्ध्येत्तत्पुनरष्टधा परिणतं चैश्वर्यमव्याहतम् ॥१०॥
Sarvaatmatvam-Iti Sphuttii-Krtam-Idam Yasmaad-Amussmin Stave
Tena-Asya Shravannaat-Tadartha-Mananaad-Dhyaanaac-Ca Sangkiirtanaat |
Sarva-(A)atmatva-Mahaa-Vibhuuti-Sahitam Syaad-Iishvaratvam Svatah
Siddhyet-Tat-Punar-Assttadhaa Parinnatam Cashvaryam-Avyaahatam ||10||
This last sloka states the Phalasruti,
the Benefit one would get from reciting
Sri Dakshinamurthy Stotram,
as shown below:
In this Stuti, it has been made crystal-clear
about the idea of ONENESS of ALL,
Sarvaatmata, that everything is Brahman.
Sarvam khalvidam Brahma.
All This Is Indeed Brahman.
One can attain that State of Sarvatmatva
with the help of the following
Spiritual Practices:
Shravanam: listening to this Stuti
to understand the Truth;
Mananam: meditation :
spiritual enquiry into the Truth;
Dhyanam: or Nididhyasana:
It is Contemplation: the Process of
seeing the Truth again and again;
Sankeertnam: reciting the Stuti repeatedly.
With the help of these practices,
one would reach the State of Ishwarathva,
that is, the Glory and Power of Ishwara.
Added to this will be the Acquisition
of the Ashta Siddhis, without any impediments.
The following are the Eight-fold Siddhis:
1. – Anima – An ability to shrink infinitely small
2. – Mahima – Ability to expand infinitely large
3. – Garima – Capacity to become extra- ordinarily heavy
4. – Laghima – Power to become incredibly light.
5. – Prapti – Ability of translocation – instantaneously appear wherever you want.
6. – Prakamya – Ability to fulfill your desires, just by wanting to be so.
7. – Ishitva – Sovereignty, ability to be utterly free so no one has control over you.
8. – Vashitva – Ability to have control over everyone else.
ದಕ್ಷಿಣಾಮೂರ್ತಿ ಸ್ತೋತ್ರ
ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಶ್ರೀ ಶಂಕರಾಚಾರ್ಯ ವಿರಚಿತ
ಭಗವದ್ಗೀತಾ;- ಸಾಧನ ಮಾರ್ಗ
ಮಾರ್ಗ ನಾಲ್ಕು : ಸ್ಮರಣಂ
ಆತ್ಮ ಸಾಕ್ಷಾತ್ಕಾರದೆಡೆಗೆ ಭಾಗ – 6
ಶ್ರೀ ಶಂಕರಾಚಾರ್ಯರು ರಚಿಸಿದಂತಹ “ಗುರುವಷ್ಟಕಂ” ಮತ್ತು “ಶ್ರೀ ಶಿವಮಾನಸ ಪೂಜಾ” ಎಂಬ ಎರಡು ಶ್ಲೋಕಗಳನ್ನು ನಾವು ಹಿಂದೆ ಪಠಿಸಿದೆವು ಮತ್ತು ಅವುಗಳ ಅರ್ಥ ಮತ್ತು ಪ್ರಾಮುಖ್ಯತೆಯನ್ನು ಅರಿಯಲು ಪ್ರಯತ್ನಿಸಿದೆವು.
ಗುರುವಿನ ವಚನಗಳ ಮಹತ್ವವನ್ನು “ಗುರುವಷ್ಟಕಂ” ಶಕ್ತಿಯುತವಾಗಿ ಸಾರಿ ತಿಳಿಹೇಳುತ್ತದೆ.
“ಲಭೇದ್ವಾಂಛಿತಾರ್ಥಂ ಪದಂ ಬ್ರಹ್ಮಸಂಜ್ಞಂ
ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್ ॥”
ಗುರುವು ಹೇಳಿದ ವಾಕ್ಯದ ಮೇಲೆ ಯಾರು ತನ್ನ ಮನಸ್ಸನ್ನು ಲಕ್ಷ್ಯವಿಟ್ಟು ನೆಲೆಗೊಳಿಸುತ್ತಾನೆಯೋ, ಅವನು ತಾನು ಬಯಸಿದ ಮುಕ್ತಿಯ ಗುರಿಯಾದ “ಬ್ರಹ್ಮ ಪದ”ವನ್ನು ಹೊಂದುತ್ತಾನೆ.
ನಾವೀಗ “ಸ್ತೋತ್ರ”ದ ಚಲನ ಶಕ್ತಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಯಾವುದೇ “ಸ್ತೋತ್ರ” ಅಥವಾ “ಸ್ತುತಿ”ಯು ಯಾವುದೇ ದೇವ ಅಥವಾ ದೇವತೆಯನ್ನು ಶ್ಲಾಘಿಸುವ ಕೃತಿಯಾಗಿರುತ್ತದೆ. ಹಲವಾರು ದೇವತೆಗಳ ಮೇಲೆ ಶಂಕರರು ಬಗೆಬಗೆಯ ಸ್ತೋತ್ರಗಳನ್ನು ರಚಿಸಿದ್ದಾರೆ.
“ಸೂಕ್ತ” ಎನ್ನುವುದು ವೈದಿಕ ಸ್ತೋತ್ರವಾಗಿದೆ. ನಾವು ಈಗಾಗಲೇ ಅಧ್ಯಯನ ಮಾಡಿರುವ “ನಾರಾಯಣ ಸೂಕ್ತ”ವು ಒಂದು ಉದಾಹರಣೆ. ಅದು ವೈದಿಕ ಮಂತ್ರಗಳನ್ನೊಳಗೊಂಡಿದೆ.
ತಮ್ಮ ಇಷ್ಟದೈವವನ್ನು ಕುರಿತು ಬಗೆಬಗೆಯ ಛಂದಸ್ಸಿನಲ್ಲಿ, ವೃತ್ತಗಳಲ್ಲಿ, ಆ ದೈವವನ್ನು ಪ್ರಶಂಸಿಸಿ ರಚಿಸುವ ಹಲವು ಚರಣಗಳಳುಳ್ಳ ಹೆಚ್ಚಾಗಿ ಕಾವ್ಯ ರೂಪದ ರಚನೆಗಳು “ಸ್ತೋತ್ರ”ಗಳು ಅಥವಾ “ಸ್ತುತಿಗಳು” ಎಂದೆನಿಸಿಕೊಳ್ಳುತ್ತವೆ.
ಸಾಮಾ
ನ್ಯವಾಗಿ ಭಕ್ತನು ಸ್ತೋತ್ರವನ್ನು ಪಠಿಸಿದಾಗ, ಭಕ್ತನ ಮತ್ತು ಅವನ ಇಷ್ಟದೈವದ ನಡುವೆ ವಿಷಯ – ಉದ್ದೇಶದ ಪ್ರತ್ಯೇಕತೆ ಇರುತ್ತದೆ. ಭಕ್ತನು ಎಲ್ಲ ವಿಧದ ಉಪಚಾರಗಳನ್ನು ಮತ್ತು ನಮಸ್ಕಾರಗಳನ್ನು ಸಮರ್ಪಿಸಿ ನಂತರ ತನ್ನ ಮುಂದಿರುವ ದೇವತೆಯನ್ನು ಸ್ತುತಿಸಲು ತೊಡಗುತ್ತಾನೆ.
ಆದರೆ ಯಾವಾಗ ದೈವತ್ವವು ಆಂತರ್ಯದಲ್ಲಿ ಅಂತರ್ಗತವಾಗುವುದೋ, ಆಗ ಒಟ್ಟಾರೆಯಾಗಿ ವಿಭಿನ್ನವಾದ ಅನುಭೂತಿಯುಂಟಾಗುತ್ತದೆ. ಅಂತರ್ಯಾಮಿಯ ಸಮೀಪದಲ್ಲಿಯೇ ದೈವವು ಹೃದಯಾಕಾಶದಲ್ಲಿ ಸ್ಥಾಪಿಸಲ್ಪಪಡುತ್ತದೆ. ನಾವು “ಶ್ರೀ ಶಿವಮಾನಸ ಪೂಜೆ”ಯನ್ನು ಪಠಿಸುವಾಗ ಇದೇ ಅನುಭೂತಿಯನ್ನು ಹೊಂದುತ್ತೇವೆ. “ಶ್ರೀ ಶಿವಮಾನಸ ಪೂಜೆ” ಯಲ್ಲಿನ ಮೊದಲ ಮೂರು ಚರಣಗಳು ಸ್ವಲ್ಪ ಮಟ್ಟಿಗೆ ಅಂತರಂಗದ ಒಳಕ್ಕೆ ಹೋಗಲು ನಮ್ಮನ್ನು ಶಕ್ತಗೊಳಿಸುತ್ತವೆ. ಹಾಗೆಯೇ ಕಲ್ಪನೆಯ ಮುಖಾಂತರ ಮಾನಸಿಕವಾಗಿ “ಷೋಡಶೋಪಚಾರ” ಪೂಜೆಯನ್ನು ಮಾಡಲು ನಮ್ಮನ್ನು ಅಣಿಗೊಳಿಸುತ್ತದೆ.
ನಂತರ ನಾಲ್ಕನೆಯ ಚರಣದಲ್ಲಿ, ಶಿವ, ಗಿರಿಜೆ ಮತ್ತು ಅವರ ಪರಿವಾರವನ್ನು ಚಿತ್ರಿಸಿಕೊಳ್ಳುವ ಸಂಪೂರ್ಣಕ್ರಿಯೆ ಮತ್ತು ಅವರಿಗೆ ನಾವು ನಮ್ಮನ್ನು ಸಮಗ್ರವಾಗಿ ಸಮರ್ಪಿಸಿಕೊಳ್ಳುವ ಕ್ರಿಯೆಯು ನಡೆದು ನಾವು ಮತ್ತಷ್ಟು ಆಂತರ್ಯದ ಒಳಹೊಕ್ಕು ಅದನ್ನು ಅಂತರ್ಗತ ಮಾಡಿಕೊಳ್ಳುತ್ತೇವೆ.
ಈ ರೀತಿಯಾಗಿ ಅಂತರ್ಗತ ಮಾಡಿಕೊಂಡ ದೈವಿಕ ಪೂಜೆ ಮತ್ತು ಪ್ರಾರ್ಥನೆಯು, ನಮ್ಮ ಅಂತಃಕರಣವನ್ನು ಸ್ವಲ್ಪ ಮಟ್ಟಿಗಾದರೂ ಪರಿಶುದ್ಧಿಗೊಳಿಸಿದೆಯೆಂಬುದಾಗಿ ನಾವು ಗ್ರಹಿಸುತ್ತೇವೆ.
ಈ ಸಂದರ್ಭದಲ್ಲಿ ಕ್ರಮವಾಗಿ ಪ್ರಾಣ, ಜೀವ ಮತ್ತು ಪರಮಾತ್ಮನನ್ನು ಸೂಚಿಸುವ ಪ್ರಬಲವಾದ ಕಲ್ಪನೆಗಳಾದ ಬೆಂಕಿಯ ಸರಮಾಲೆ, ಅದರೊಳಗಿನ ಜ್ವಾಲೆ, ಅದರಲ್ಲಿನ ಉರಿ ಮತ್ತು ಅದರ ಕಿಡಿಯ ಪ್ರತಿಮೆಯನ್ನು “ನಾರಾಯಣ ಸೂಕ್ತ”ದಲ್ಲಿ ನಾವು ಕಂಡದ್ದನ್ನು ನೆನಪಿಸಿಕೊಳ್ಳಬಹುದಾಗಿದೆ.
ಅಂತೆಯೇ ಮುಂಡಕೋಪನಿಷತ್ತಿನಲ್ಲಿ ವಿವರಿಸಲಾದ ಒಂದು ಮರದ ಒಂದೇ ರೆಂಬೆಯ ಮೇಲೆ ಕುಳಿತ ಎರಡು ಹಕ್ಕಿಗಳು ಜೀವಾತ್ಮ ಮತ್ತು ಪರಮಾತ್ಮನನ್ನು ಪ್ರತಿನಿಧಿಸುವುದನ್ನು ಹಾಗೂ ಜೀವಾತ್ಮನು, ಪರಮಾತ್ಮನೊಂದಿಗೆ ಗುರುತಿಸಿಕೊಳ್ಳುವುದನ್ನೂ ಸಹ ನಾವಿಲ್ಲಿ ಸ್ಮರಿಸಬಹುದಾಗಿದೆ.
ಆಧ್ಯಾತ್ಮಿಕ ಅಭ್ಯಾಸದ ಈ ಸಾಧನ ಮಾರ್ಗದಲ್ಲಿ, ಜೀವಾತ್ಮ ಮತ್ತು ಪರಮಾತ್ಮ ಇವೆರಡನ್ನೂ ಸಮಗ್ರಗೊಳಿಸಲು ಪ್ರಯತ್ನಿಸುವ ಕಾರ್ಯವನ್ನು ನಾವು ಕೈಗೆತ್ತಿಕೊಂಡಿರುವೆವು.
ಪರಬ್ರಹ್ಮನ ವ್ಯಕ್ತರೂಪವಾದ, ಪುರುಷ ಮತ್ತು ಪ್ರಕೃತಿಯನ್ನು ಪ್ರತಿನಿಧಿಸುವ ಶಿವ ಮತ್ತು ಗಿರಿಜೆಯರ ಸನ್ನಿಧಾನವನ್ನು ಅನುಭವಿಸಲು ನಾವು ಪ್ರಯತ್ನಿಸಬೇಕು.
ಹಾಗೆಯೇ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಪ್ರಜ್ಞೆಗೆ ಸಾಕ್ಷೀಭೂತವಾಗಿ, ಅಂತರ್ಯಾಮಿಯಾಗಿ ಇರುವುದು ಅದೇ ಬ್ರಹ್ಮನು ಎಂಬುದನ್ನು ನಾವು ಅರಿತು ಅನುಭವಿಸಬೇಕು.
ಪರಮಾತ್ಮನೊಡನೆ ಆತ್ಮನ ಅನನ್ಯತೆಯನ್ನು ಅನ್ವೇಷಿಸುವ ಪ್ರಯತ್ನಕ್ಕೆ ಇದು ಸಹಕಾರಿಯಾಗಿದೆ.
ಮಹಾವಾಕ್ಯಗಳು ಇದನ್ನು ಹೇಳುತ್ತವೆ.
ಅಹಂ ಬ್ರಹ್ಮಾಸ್ಮಿ – ನಾನು ಬ್ರಹ್ಮ.
ತತ್ವಮಸಿ – ನೀನು ಅದೇ ಆಗಿದ್ದೀಯೆ.
ಪ್ರಜ್ಞಾನಂ ಬ್ರಹ್ಮ – ಪ್ರಜ್ಞೆಯೇ ಬ್ರಹ್ಮ.
ಅಯಂ ಆತ್ಮ ಬ್ರಹ್ಮ – ಈ ಆತ್ಮವು ಬ್ರಹ್ಮ.
ಅದ್ವೈತ ವೇದಾಂತದ ತಿರುಳನ್ನು ಒಟ್ಟುಗೂಡಿಸಿ ಶ್ರೀ ಶಂಕರರು ಹೀಗೆ ಹೇಳುತ್ತಾರೆ.
ಬ್ರಹ್ಮ ಸತ್ಯಂ ಜಗನ್ ಮಿಥ್ಯ
ಜೀವೋ ಬ್ರಹ್ಮೈವ ನಾ ಪರಃ
ಬ್ರಹ್ಮನೊಬ್ಬನೇ ಸತ್ಯ. ಈ ಜಗತ್ತು ಮಿಥ್ಯೆ ಮತ್ತು ಜೀವನು ಬ್ರಹ್ಮನಲ್ಲದೆ ಬೇರೆ ಅಲ್ಲ.
ಬ್ರಹ್ಮನೊಡನೆ ಜೀವಾತ್ಮನ ಅನನ್ಯತೆಯ ಬಗ್ಗೆ ಹೇಳುವಾಗ ಶಂಕರರು “ಮಿಥ್ಯೆ” ಎಂಬ ಸಿದ್ಧಾಂತದ ವಿಚಾರವನ್ನು ಪರಿಚಯಿಸುತ್ತಾರೆ.
ಮಿಥ್ಯೆಯನ್ನು “ಮಾಯೆ” ಎಂಬುದಾಗಿಯೂ ಕರೆಯಲಾಗುತ್ತದೆ.
ಅವರು “ ಸರ್ವಂ ಖಲು ಇದಂ ಬ್ರಹ್ಮ” ಎಂದೂ ಸಹ ಹೇಳುತ್ತಾರೆ.
ಇದು “ಸರ್ವಾತ್ಮತ್ವ” ಅಂದರೆ ಎಲ್ಲದರ ಒಗ್ಗೂಡಿಕೆ ಎಂಬ ಪರಿಕಲ್ಪನೆಯಾಗಿದೆ.
ಪರಿಶುದ್ಧ ಪ್ರಜ್ಞೆಯು ಈ ಜಗತ್ತಿನ ಗಾಢವಾದ ರಚನೆಯಾಗಿದೆ. “ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ”ವನ್ನು ಅಧ್ಯಯನ ಮಾಡುವ ಮುನ್ನ ಮಿಥ್ಯೆ ಅಥವಾ ಮಾಯೆಯ ಪರಿಕಲ್ಪನೆಯ ಬಗ್ಗೆ ಸ್ಪಷ್ಟವಾದ ಅರಿವು ಇರಬೇಕಾದುದು ಅವಶ್ಯವಾಗಿದೆ.
“ಮಾಯೆ”
ಭಾರತೀಯ ತತ್ವಶಾಸ್ತ್ರದಲ್ಲಿ “ಮಾಯೆ”ಗೆ ಅನೇಕ ಅರ್ಥಗಳಿವೆ.
ದ್ವೈತ ತತ್ವಶಾಸ್ತ್ರಗಳಲ್ಲಿ, ಮಾಯೆಯು ಈಶ್ವರನ ಸೃಜನಾತ್ಮಕ ಶಕ್ತಿಯನ್ನು ಮಾತ್ರ ನಿರ್ದೇಶಿಸುತ್ತದೆ.
ಆದರೆ ಅದ್ವೈತ ತತ್ವಶಾಸ್ತ್ರದಲ್ಲಿ, ಮಾಯೆಗೆ ಹಲವಾರು ಗೂಢಾರ್ಥಗಳಿವೆ.
ವಾಸ್ತವವಾಗಿ ಮಾಯೆ ಪದಕ್ಕೆ “ಭ್ರಮೆ” ಅಥವಾ “ಮೋಡಿ” ಅಥವಾ ಮತ್ತಷ್ಟು ನಿಖರವಾಗಿ ಹೇಳಬೇಕೆಂದರೆ “ಅಜ್ಞಾನ” ಎಂಬ ಅರ್ಥವಿದೆ.
ನಮ್ಮ ವಾಸ್ತವಿಕ ಸ್ವರೂಪವು, ದೈವಿಕವಾದುದು ಎಂಬುದಾಗಿ ವೇದಾಂತವು ಘೋಷಿಸುತ್ತದೆ. ನಾವು ಪರಿಶುದ್ಧರು, ಪರಿಪೂರ್ಣರು ಮತ್ತು ಶಾಶ್ವತವಾಗಿ ಸ್ವತಂತ್ರರು. ನಮ್ಮ ನಿಜರೂಪವಾದ ಆತ್ಮವು ಬ್ರಹ್ಮನೊಂದಿಗೆ ಒಂದಾಗಿರತಕ್ಕಂತಹುದು.
ನಮ್ಮ ವಾಸ್ತವಿಕ ಸ್ವರೂಪ ದೈವಿಕವಾಗಿದ್ದರೆ, ಏಕೆ ನಮಗೆ ಅದರ ಅರಿವಿಲ್ಲವಾಗಿದೆ?
ಅದು ಮಾಯೆ ಅಥವಾ ಅಜ್ಞಾನದಿಂದ ಎಂಬುದೇ ಅದಕ್ಕೆ ಉತ್ತರ.
ನಮ್ಮ ವಾಸ್ತವಿಕ ಸ್ವರೂಪವನ್ನು, ಮಾಯೆಯು ಮುಸುಕಿನಂತೆ ಆವರಿಸಿಕೊಂಡಿರುತ್ತದೆ.
ಈ ಜಗತ್ತು ಅದು ನಮಗೆ ಕಾಣುವಂತೆ ಇರುವುದಲ್ಲ ಅಥವಾ ನಾವೇನು ಕಾಣುತ್ತಿರುವೆವೋ ಅದು ಆ ರೀತಿಯಲ್ಲಿ ಇಲ್ಲ.
ಇದು ಮಾಯೆಯ ಕಾರಣದಿಂದ ಹಾಗಿದೆ.
1. ಮಾಯೆಯು ಅನಾದಿಯು. ಅಂದರೆ ಅದಕ್ಕೆ ಪ್ರಾರಂಭವೇ ಇಲ್ಲ.
2. ಅದು ಯಾವುದೋ ನಿಗೂಢವಾಗಿರುವಂತಹುದು.
3. ಮಾಯೆಯನ್ನು ಇದು ಅಥವಾ ಅದು ಎಂದು ನಿಖರವಾದ ಗುಣಲಕ್ಷಣಗಳಿಂದ ವಿವರಿಸಲಾಗದು.
4. ಅದು ತ್ರಿಗುಣಾತ್ಮಕವು. ಅಂದರೆ ಅದು ಸತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳ ಶಕ್ತಿಯನ್ನು ಹೊಂದಿರುತ್ತದೆ.
5. ಮಾಯೆಯು ಮತ್ತೆರಡು ಶಕ್ತಿಗಳನ್ನು ಹೊಂದಿದೆ. “ಆವರಣ ಶಕ್ತಿ” ಅಂದರೆ ಮುಸುಕಿನಂತೆ ಆವರಿಸಿಕೊಳ್ಳುವುದು ಮತ್ತು “ವಿಕ್ಷೇಪ ಶಕ್ತಿ” ಅಂದರೆ ತೋರ್ಪಡಿಕೆಯನ್ನು ಬಿಂಬಿಸುವ ಶಕ್ತಿ.
ಈ ಪರಿಕಲ್ಪನೆಯನ್ನು ವಿವರಿಸಲು ಶಂಕರರು “ಹಾವು ಮತ್ತು ಹಗ್ಗ”ದ ಉದಾಹರಣೆಯನ್ನು ಕೊಡುತ್ತಾರೆ.
ಒಬ್ಬನು ಕತ್ತಲೆಯ ದಾರಿಯಲ್ಲಿ ನಡೆಯುತ್ತಿದ್ದಾಗ ಒಂದು ಹಾವನ್ನು ನೋಡುತ್ತಾನೆ. ಅವನಿಗೆ ಹೃದಯ ಬಾಯಿಗೆ ಬಂದಂತಾಯಿತು. ಅವನ ಎದೆ ಬಡಿತ ತೀವ್ರವಾಯಿತು. ಆದರೆ ಎದೆಗುಂದದೆ ಹತ್ತಿರದಿಂದ ಪರಿಶೀಲಿಸಲಾಗಿ ಹಗ್ಗದ ತುಂಡೊಂದು ಅವನಿಗೆ ಹಾವಾಗಿ ಕಂಡಿತ್ತು. ಯಾವಾಗ ಭ್ರಾಂತಿಯು ಕಳಚಿತೋ ಆಗ ಹಾವು ಶಾಶ್ವತವಾಗಿ ಅದೃಶ್ಯವಾಯಿತು.
ಅಜ್ಞಾನದಿಂದಾಗಿ ನಾವು ನಮ್ಮನ್ನು ನಶ್ಚರ ಜೀವಿಗಳೆಂದು ಭಾವಿಸಿ ಈ ಪ್ರಪಂಚವು ಕಾಲ, ಆಕಾಶ ಮತ್ತು ಕಾರ್ಯಕಾರಣ ಭಾವದಿಂದ ಸಂಘಟಿತವಾಗಿದೆಯೆಂದು ತಿಳಿದುಕೊಳ್ಳುತ್ತೇವೆ. ನಮ್ಮ ಇತಿಮಿತಿಗಳ, ಬಂಧಗಳ ಮತ್ತು ವೇದನೆಗಳ ಬಗ್ಗೆ ನಮಗೆ ಅರಿವಿದೆ ಎಂದುಕೊಳ್ಳುತ್ತೇವೆ. ಜ್ಞಾನೋದಯದಿಂದ ಯಾವಾಗ ಭ್ರಮೆಯು ತೊಲಗುವುದೋ ಆಗ ನಾವು ಮತ್ತು ಈ ಜಗತ್ತು ಇವೆರಡೂ ಬ್ರಹ್ಮನಾಗಿ ಮಾರ್ಪಡುತ್ತದೆ. ಇದು ಗುರುವಿನ ಸಹಾಯದಿಂದ ಸಾಧ್ಯ ಎಂಬುದನ್ನು “ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ” ನಲ್ಲಿ ನಾವು ಕಂಡುಕೊಳ್ಳಲಿದ್ದೇವೆ. ಈಶ್ವರ ಮತ್ತು ಪ್ರಕೃತಿ ಇವು ನಿರ್ಗುಣ ಬ್ರಹ್ಮನ ಸಗುಣ ಅಂಶಗಳಾಗಿವೆ.
ಪ್ರಕೃತಿಯ ಮತ್ತೊಂದು ಹೆಸರು ಮಾಯೆ.
ತ್ರಿಗುಣಗಳೆಂಬ ಮೂರು ಗುಣಗಳಾದ ಸತ್ವಗುಣ, ರಜೋಗುಣ ಮತ್ತು ತಮೋಗುಣಗಳನ್ನು ಒಳಗೊಂಡಿರುವ ಮಾಯೆಯು ದೊಡ್ಡ ಪ್ರಮಾಣದಲ್ಲಿ ಇಡಿಯಾಗಿ ಸುವ್ಯವಸ್ಥಿತವಾದ ವಿಶ್ವವನ್ನು ಅಸ್ತಿತ್ವಕ್ಕೆ ತಂದಿತು. ಇದು “ಪಂಚೀಕರಣ” ಎಂಬ ಪ್ರಕ್ರಿಯೆಯಿಂದ ಜರುಗುತ್ತದೆ. ಆಗ ಇದು ಬ್ರಹ್ಮಾಂಡ ಅಥವಾ ವಿಶ್ವ ಎಂದು ಕರೆಯಲ್ಪಡುತ್ತದೆ.
ಅತಿ ಸೂಕ್ಷ್ಮ ಸ್ತರದಲ್ಲಿ ಏಕ ವ್ಯಕ್ತಿಪರನಾದ “ಜೀವ”ನ “ಪಿಂಡಾಂಡ”ದ ರೂಪದಲ್ಲಿ ಬ್ರಹ್ಮಾಂಡದ ಪ್ರತಿಕೃತಿಯು ಇರುತ್ತದೆ.
“ವಿಶ್ವ” ಮತ್ತು “ಜೀವ” ಇವೆರಡೂ ಒಂದೇ ಪ್ರಜ್ಞೆಯಾದ ಸತ್ – ಚಿತ್ – ಆನಂದದಿಂದ ವ್ಯಾಪಿಸಲ್ಪಟ್ಟಿರುತ್ತದೆ ಮತ್ತು ಚೇತನಗೊಳಿಸಲ್ಪಟ್ಟಿರುತ್ತದೆ.
ಜೀವ
ನಮ್ಮ ದೇಹದಲ್ಲಿರುವ ಬ್ರಹ್ಮನ ಪ್ರತಿಬಿಂಬವು ತನ್ನನ್ನು ಸ್ಥೂಲ ಶರೀರದೊಂದಿಗೆ ಗುರುತಿಸಿಕೊಂಡಾಗ ಅದನ್ನು ಜೀವ ಎಂದು ಕರೆಯಲಾಗುತ್ತದೆ. ಶರೀರ ಮತ್ತು ಮನಸ್ಸಿನ ಸಂಕೀರ್ಣತೆಗೆ ಮಾತ್ರ ಸೀಮಿತವಾಗಿರುವ ಜೀವವು ಮಾಯೆಯ ಪ್ರಭಾವದಿಂದಾಗಿ ಅಜ್ಞಾನದಿಂದ ಕೂಡಿರುತ್ತದೆ. ಜೀವವು ಶರೀರ ಮತ್ತು ಮನಸ್ಸಿನ ಸಂಕೀರ್ಣತೆಗಿಂತ ಭಿನ್ನ ಎಂಬುದನ್ನು ಮತ್ತು ಸತ್ – ಚಿತ್ – ಆನಂದವು ಅದರ ನಿಜವಾದ ಸ್ವರೂಪ ಎಂಬುದನ್ನು, ಗುರುವಿನ ಅನುಗ್ರಹ ಮತ್ತು ಉಪದೇಶದಿಂದ ಹಾಗೂ ಜ್ಞಾನದಿಂದ ಯಾವಾಗ ಜೀವವು ಗ್ರಹಿಸುತ್ತದೆಯೋ, ಆಗ ಅದು ಅಜ್ಞಾನದಿಂದ ಬಿಡುಗಡೆ ಹೊಂದಿ ಹುಟ್ಟು ಸಾವಿನ ಆವರ್ತನದಿಂದ ಮುಕ್ತಿ ಹೊಂದುತ್ತದೆ.
ಆತ್ಮ ಸಾಕ್ಷಾತ್ಕಾರದಿಂದ ಮುಕ್ತಿಯನ್ನು ಹೊಂದಲು ಬಯಸುವವರು ಅರ್ಹ ಗುರುವಿನಿಂದ ಉಪದೇಶವನ್ನು ಪಡೆಯುವುದು ಅತ್ಯವಶ್ಯಕವಾಗಿದೆ.
ಶ್ರೀ ದಕ್ಷಿಣಾಮೂರ್ತಿ ಸ್ತೋತ್ರಂ
ತನ್ನ ಅನುಗ್ರಹ ಮತ್ತು ಅನುಕಂಪವನ್ನು ನಮ್ಮೆಡೆಗೆ ಕರುಣಿಸುತ್ತಾ ಶಂಕರರು ನಮ್ಮನ್ನು ಅಂತಹ ಗುರುವಿನ ಮುಂದೆ ನಿಲ್ಲಿಸುತ್ತಾರೆ.
ಈಶ್ವರನ ಅವತಾರವಾದ ಶ್ರೀ ದಕ್ಷಿಣಾಮೂರ್ತಿಯು ಗುರುವಿನ ದೈವಿಕ ಅಂಶದಲ್ಲಿ ಪ್ರಕಟವಾಗುತ್ತಾನೆ.
ಹೀಗೆ ಶಂಕರರ ಶ್ರೀ ದಕ್ಷಿಣಾಮೂರ್ತಿಸ್ತೋತ್ರವು ನಮಗೆ ಲಭಿಸಿದೆ.
ದಕ್ಷಿಣಾಮೂರ್ತಿ ಎಂದರೆ ಯಾರು ಮತ್ತು ಈ ಸ್ತೋತ್ರದಿಂದ ಏನನ್ನು ಪಡೆಯಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳೋಣ.
ಶ್ರೀ ದಕ್ಷಿಣಾಮೂರ್ತಿಯ ಹೆಸರಿಗೆ ಹಲವಾರು ಒಳಾರ್ಥಗಳಿವೆ.
1. ಯಾರು ಜ್ಞಾನವನ್ನು ಬಯಸುವರೋ ಅವರನ್ನು ಅನುಗ್ರಹಿಸಲು, ಜ್ಞಾನ ಸಂಪನ್ನನಾದ ಈಶ್ವರನು ಶ್ರೀ ದಕ್ಷಿಣಾಮೂರ್ತಿಯಾಗಿ ಅವತರಿಸಿದನು.
2. ಜ್ಞಾನವನ್ನು ದಯಪಾಲಿಸುವ ಸಲುವಾಗಿ ಆತನು ದಕ್ಷಿಣಾಭಿಮುಖವಾಗಿ ಕುಳಿತಿರುವನು.
3. ತನ್ನ ಭಕ್ತರಿಗೆ ಜ್ಞಾನವನ್ನು ದಯಪಾಲಿಸಲು “ದಾಕ್ಷಿಣ್ಯ” ಅಂದರೆ ಸಮರ್ಥತೆ ಮತ್ತು ದಕ್ಷತೆಯಿಂದ ಸಂಪನ್ನವಾಗಿರುವನು ಎಂದೂ ಸಹಾ ಈತನನ್ನು ಗ್ರಹಿಸಲಾಗುತ್ತದೆ.
4. ಗುರುಮೂರ್ತಿ ಎಂಬುದಾಗಿ ಈತನನ್ನು ಸಂಬೋಧಿಸಲಾಗುತ್ತದೆ ಮತ್ತು ಅನುಸಂಧಾನ ಮಾಡಲಾಗುತ್ತದೆ.
5. ರಮಣಮಹರ್ಷಿಯವರ ಅನುಸಾರ ಶ್ರೀ ದಕ್ಷಿಣಾಮೂರ್ತಿಯನ್ನು ಹೃದಯದ ಸ್ವಲ್ಪ ಬಲಭಾಗದಲ್ಲಿ ಇರುವಂತೆ ಕಲ್ಪಿಸಿಕೊಂಡು ಧ್ಯಾನವನ್ನು ಮಾಡಬೇಕು. ಶ್ರೀ ದಕ್ಷಿಣಾಮೂರ್ತಿಯನ್ನು ಉದ್ದೇಶಿಸಿ ಬರೆದ ಭಕ್ತಿಪೂರ್ವಕ ಕವಿತೆಯೇ ಈ ಸ್ತೋತ್ರವು.
ಇದರಲ್ಲಿ ಹತ್ತು ಚರಣಗಳಿವೆ. ಮೊದಲ ಒಂಭತ್ತು ಚರಣಗಳಲ್ಲಿ ಶಂಕರರು ಪುನರಾವರ್ತನೆಯಾಗುವ ಪಲ್ಲವಿಯನ್ನು ಬಳಸಿದ್ದಾರೆ.
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ.
ಗುರುಮೂರ್ತಿಯ ಅಂದರೆ ಗುರುವಿನ ದೈವಿಕ ಅಂಶವಾದ, ಏಕಮೇವಾದ್ವಿತೀಯ ಶ್ರೀ ದಕ್ಷಿಣಾಮೂರ್ತಿಗೆ ನನ್ನ ನಮಸ್ಕಾರಗಳು.
ಪ್ರತಿಯೊಂದು ಚರಣದಲ್ಲಿಯೂ ಪಡೆದಕೊಂಡ ಜ್ಞಾನದ ಪರಿಮಾಣಕ್ಕೆ ಗುರುವಿಗೆ ಸಲ್ಲಿಸುವ ಕೃತಜ್ಞತೆಯ ಭಾವವು ಇದಾಗಿದೆ.
ಈ ರೀತಿಯಾಗಿ, ಅದ್ವೈತ ವೇದಾಂತದೊಂದಿಗೆ ಉಪನಿಷತ್ತಿನ ಜ್ಞಾನದ ಸಾರವನ್ನು, ಕಾಂತಿಯುಕ್ತವಾಗಿ ಮತ್ತು ಚಮತ್ಕಾರವಾಗಿ ತುಂಬಿದ ಜ್ಞಾನದ ಪರಿಮಾಣವು ಈ ಒಂಭತ್ತು ಚರಣಗಳಲ್ಲಿದೆ.
ಪರಿಶುದ್ಧ ಪ್ರಜ್ಞೆಯಿಂದ ಆವರಿಸಿದ, ಅನನ್ಯತೆಯ ಪರಿಕಲ್ಪನೆಯಾದ “ಸರ್ವಾತ್ಮತ್ವ” ಎಂಬ ಫಲಶೃತಿಯು ಕೊನೆಯ ಚರಣದಲ್ಲಿ ಅಡಕವಾಗಿದೆ.
“ಶ್ರೀ ಶಿವಮಾನಸ ಪೂಜೆ”ಯಲ್ಲಿ ಬಳಸಿದ “ಶಾರ್ದೂಲ ವಿಕ್ರೀಡಿತ” ಛಂದಸ್ಸನ್ನೇ, ಶಂಕರರು ಇಲ್ಲಿಯೂ ಬಳಸಿರುವುದು ಕುತೂಹಲಕಾರಿಯಾಗಿದೆ. ಇಲ್ಲಿನ ಸಾಲುಗಳಿಗೆ ಆ ಛಂದಸ್ಸು ಉದಾತ್ತ ನಡೆಯನ್ನು ತಂದು ಕೊಟ್ಟಿದೆ.
ಈಗ ನಾವು ಪ್ರತಿಯೊಂದು ಚರಣದ ಮೂಲ ಪಾಠವನ್ನು ಓದಿ ಮನನ ಮಾಡಿಕೊಂಡು, ಅದರಲ್ಲಿನ ಜ್ಞಾನವನ್ನು ತಿಳಿದುಕೊಂಡು, ಅದನ್ನು ಹಂಚಿಕೊಳ್ಳಲು ಪ್ರಯತ್ನಿಸೋಣ.
ಆದರೆ ಅದಕ್ಕೂ ಮೊದಲು ಶ್ರೀ ದಕ್ಷಿಣಾಮೂರ್ತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯಕವಾಗುವ ಕೆಲವು ಧ್ಯಾನ ಶ್ಲೋಕಗಳಿವೆ. ಆತನ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನವನ್ನು ಮಾಡಲು ಈ ಶ್ಲೋಕಗಳು ಸಹಾಯಕವಾಗಿವೆ. ಹಾಗಾಗಿ ಮೊದಲಿಗೆ ಅವುಗಳನ್ನು ತಿಳಿದುಕೊಳ್ಳೋಣ.
ಧ್ಯಾನಮ್
ಮೌನವ್ಯಾಖ್ಯಾ ಪ್ರಕಟಿತ ಪರಬ್ರಹ್ಮತತ್ವಂಯುವಾನಂ
ವರ್ಶಿಷ್ಠಾಂತೇ ವಸದ್ ಋಷಿಗಣೈಃ ಆವೃತಂ ಬ್ರಹ್ಮನಿಷ್ಠೈಃ |
ಆಚಾರ್ಯೇಂದ್ರಂ ಕರಕಲಿತ ಚಿನ್ಮುದ್ರಮಾನಂದಮೂರ್ತಿಂ
ಸ್ವಾತ್ಮರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ || 1 ||
ದಕ್ಷಿಣಾಮೂರ್ತಿ ಸ್ತೋತ್ರಂ
ದಕ್ಷಿಣಾಮೂರ್ತಿ ಸ್ತೋತ್ರಂ
ಶ್ರೀ ಆದಿ ಶಂಕರಾಚಾರ್ಯ ವಿರಚಿತ
ಧ್ಯಾನಂ
1.ತನ್ನ ಶಿಷ್ಯರಾದ ಋಷಿಗಣಗಳಿಂದ ಆವೃತನಾಗಿ ಕಂಡುಬರುವ ಶ್ರೀ ದಕ್ಷಿಣಾಮೂರ್ತಿಯನ್ನು ನಾನು ಪೂಜಿಸುತ್ತೇನೆ. ಅವರೆಲ್ಲರೂ ಹಿರಿಯರು ಮತ್ತು ಬ್ರಹ್ಮ ಜ್ಞಾನವನ್ನು ಚೆನ್ನಾಗಿ ಅರಿತವರು. ಆದರೆ ಕಿರಿಯನಂತೆ ಕಂಡುಬರುವ ದಕ್ಷಿಣಾಮೂರ್ತಿಯು ಚಿನ್ಮುದ್ರೆಯೆಂಬ ಸಾಧನದಿಂದ ಮತ್ತು ಮೌನದ ಮುಖಾಂತರ, ಅಂತಿಮ ಅಸ್ತಿತ್ವವಾದ ಸತ್ಯವನ್ನು ಪ್ರಕಟಪಡಿಸಿದ್ದಾನೆ. ಗುರುಗಳಿಗೆ ರಾಜನು ಈತ. ತನ್ನ ವದನದ ಮೇಲೆ ಮೂಡಿರುವ ಮಂದಹಾಸದ ಮೂಲಕ ವ್ಯಕ್ತವಾಗುವ ಆನಂದದಿಂದ ಆತನು ತುಂಬಿ ತುಳುಕುತ್ತಿದ್ದಾನೆ. ಆತ ತನ್ನಲ್ಲಿಯೇ ಆನಂದತುಂದಿಲನಾಗಿದ್ದಾನೆ. ಅಂತಹ ಶ್ರೀ ದಕ್ಷಿಣಾಮೂರ್ತಿಯನ್ನು ನಾನು ಪೂಜಿಸುವೆನು.
ವಟವಿಟಪಿಸಮೀಪೇಭೂಮಿಭಾಗೇ ನಿಷಣ್ಣಂ
ಸಕಲಮುನಿಜನಾನಾಂ ಜ್ಞಾನದಾತಾರಮಾರಾತ್ |
ತ್ರಿಭುವನಗುರುಮೀಶಂ ದಕ್ಷಿಣಾಮೂರ್ತಿದೇವಂ
ಜನನಮರಣದುಃಖಚ್ಛೇದ ದಕ್ಷಂ ನಮಾಮಿ || 2 ||
2. ಅನೇಕ ಬಿಳಲುಗಳು, ರೆಂಬೆಕೊಂಬೆಗಳು ಇರುವ ಆಲದಮರದ ಬಳಿ ನೆಲದ ಮೇಲೆ ಕುಳಿತಿರುವ ಶ್ರೀ ದಕ್ಷಿಣಾಮೂರ್ತಿಗೆ ನಾನು ನಮಿಸುತ್ತೇನೆ. ಹಲವಾರು ಋಷಿಮುನಿಗಳು ಆತನಿಗೆ ಎದುರಾಗಿ ಕುಳಿತಿದ್ದಾರೆ. ಮೂರು ಲೋಕಗಳ ಒಡೆಯ ಈತ. ಗುರು, ಪ್ರಭು, ಜ್ಞಾನದಾತನು ಈತ. ಜನನ ಮತ್ತು ಮರಣದಿಂದ ಉಂಟಾಗುವ ಕ್ಲೇಶವನ್ನೂ, ವೇದನೆಯನ್ನೂ, ದುಃಖವನ್ನೂ ತೊಡೆದು ಹಾಕುವುದರಲ್ಲಿ ಈತ ನಿಪುಣನಾಗಿದ್ದಾನೆ.
ಶ್ರೀ ದಕ್ಷಿಣಾಮೂರ್ತಿಗೆ ನಾನು ನಮಿಸುವೆನು.
ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾಃ ಗುರುರ್ಯುವಾ |
ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತುಚ್ಛಿನ್ನಸಂಶಯಾಃ || 3 ||
3. ಆಲದ ಮರದ ಕೆಳಗೆ ಕುಳಿತಿರುವ ಶಿಷ್ಯರು ಹಿರಿಯರಾಗಿದ್ದು ಅವರಿಗೆ ಬೋಧಿಸುವ ಗುರುವು ಕಿರಿಯನಾಗಿರುವುದು ನೋಡಲು ವಿಚಿತ್ರವಾಗಿದೆ. ಮತ್ತೊಂದು ವಿಸ್ಮಯವೇನೆಂದರೆ ಗುರುವಿನ ಬೋಧನೆಯು ಮೌನದಲ್ಲಿ ಜರುಗುತ್ತಿದೆ. ಶಿಷ್ಯರ ಸಂದೇಹಗಳೆಲ್ಲವೂ ಆಶ್ಚರ್ಯಕರ ರೀತಿಯಲ್ಲಿ ಪರಿಹರಿಸಲ್ಪಟ್ಟಿವೆ. ಇದೊಂದು ಅದ್ಭುತವೇ ಸರಿ!
ಶ್ರೀ ದಕ್ಷಿಣಾಮೂರ್ತಿಗೆ ನಾನು ನಮಿಸುವೆನು.
ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ |
ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ || 4 ||
4. ಜ್ಞಾನದ ಭಂಡಾರವಾಗಿರುವ ಈತನಿಗೆ ನಮಸ್ಕಾರಗಳು. ಭವರೋಗಗಳಿಗೆ ಔಷಧದಂತಿರುವ ಈತನಿಗೆ ನಮಸ್ಕಾರಗಳು. ಶ್ರೀ ದಕ್ಷಿಣಾಮೂರ್ತಿಯ ರೂಪದಲ್ಲಿರುವ, ಸಕಲ ಲೋಕಗಳ ಗುರುವಿಗೆ ನಮಸ್ಕಾರಗಳು.
ಓಂ ನಮಃ ಪ್ರಣವಾರ್ಥಾಯ ಶುದ್ಧಜ್ಞಾನೈಕಮೂರ್ತಯೇ |
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ|| 5 ||
5. ಪ್ರಣವಕ್ಕೆ ಅಥವಾ ಓಂಕಾರಕ್ಕೆ ಅರ್ಥತಾತ್ಪರ್ಯ ರೂಪನಾದ, ಜ್ಞಾನವೇ ಮೈವೆತ್ತಂತಿರುವ, ಪರಿಶುದ್ಧನಾದ ಮತ್ತು ಸಂಪೂರ್ಣವಾಗಿ ಶಾಂತನಾಗಿರುವ ಶ್ರೀ ದಕ್ಷಿಣಾಮೂರ್ತಿಗೆ ನನ್ನ ನಮಸ್ಕಾರಗಳು.
ಈಶ್ವರೋ ಗುರುರಾತ್ಮೇತಿ ಮೂತ್ರಿಭೇದ ವಿಭಾಗಿನೇ |
ವ್ಯೋಮವದ್ ವ್ಯಾಪ್ತದೇಹಾಯ ದಕ್ಷಿಣಾಮೂರ್ತಯೇ ನಮಃ || 6 ||
6. ಈಶ್ವರ, ಗುರು ಮತ್ತು ಆತ್ಮನ ವಿವಿಧ ಅವತಾರಗಳ ಮೂರ್ತಿಯಾಗಿದ್ದರೂ, ಆಕಾಶದಂತೆ ಎಲ್ಲೆಡೆ ಪಸರಿಸುವ, ಶ್ರೀ ದಕ್ಷಿಣಾಮೂರ್ತಿಗೆ ನನ್ನ ನಮಸ್ಕಾರಗಳು.
ಮನನಂ
ವಿಶ್ವಂದರ್ಪಣ ದೃಶ್ಯಮಾನ ನಗರೀ ತುಲ್ಯಂ ನಿಜಾಂತರ್ಗತಂ
ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾನಿದ್ರಯಾ |
ಯಸ್ಸಾಕ್ಷಾತ್ಕುರುತೇ ಪ್ರಭೋಧಸಮಯೇ ಸ್ವಾತ್ಮಾನಮೇ ವಾದ್ವಯಂ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||
1.ನಾಮರೂಪಗಳ ಪ್ರಪಂಚವಾದ ಈ ವಿಶ್ವವು, ಕನ್ನಡಿಯಲ್ಲಿ ಪ್ರತಿಫಲಿಸುವ ಒಂದು ನಗರದ ಪ್ರತಿಬಿಂಬದಂತೆ ಸಾದೃಶವಾಗಿದೆ. ಏಕೆಂದರೆ ಸ್ವಪ್ನದ ದೆಸೆಯಿಂದ ಅಂತರ್ಗತವಾದ ವಸ್ತುವು ಹೊರಗಡೆ ಕಾಣುವಂತೆ, ಅದು ಮಾಯೆಯಿಂದ ಹಾಗೆ ಗೋಚರಿಸುತ್ತದೆ. ಕನಸು ಕಾಣುವವನು, ಕನಸನ್ನು ಕಾಣುತ್ತಿರುವಾಗ, ಆ ಕನಸು ಹೊರಗಡೆ ವ್ಯಕ್ತವಾಗುತ್ತಿರುವಂತೆ ಭಾವಿಸುತ್ತಾನೆ. ಆದರೆ ಎಚ್ಚರಗೊಂಡ ಕೂಡಲೇ, ಆ ಕನಸನ್ನು ತನ್ನ ಆಂತರ್ಯದಲ್ಲಿ ಕಂಡೆನೆಂಬುದನ್ನು ಅರಿತುಕೊಳ್ಳುತ್ತಾನೆ.
ನಾಮರೂಪಗಳ ಈ ಪ್ರಪಂಚವು, ಮನಸ್ಸೆಂಬ ಕನ್ನಡಿಯಲ್ಲಿ ಪ್ರತಿಫಲಿಸಿ, ಪ್ರತ್ಯೇಕವಾದ ಅಸ್ತಿತ್ವದಂತೆ ಇರದೆ ತನ್ನೊಳಗೆ ಹುದುಗಿರುತ್ತದೆ. ಏಕೆಂದರೆ ಏಕಮೇವಾದ್ವಿತೀಯವಾಗಿರುವ ಆತ್ಮವು ಮಾತ್ರ ಹೊರಗೆ ಮತ್ತು ಒಳಗೆ ಪ್ರಕಾಶಿಸುತ್ತದೆ.
ನಾನಲ್ಲದೆ ಅಂದರೆ ಆತ್ಮನಲ್ಲದೆ ಮತ್ಯಾರೂ ಆಂತರ್ಯದಲ್ಲಿ ಇರುವುದಿಲ್ಲವೆಂಬುದನ್ನು, ಬೋಧನೆ ಅಥವಾ ಆಧ್ಯಾತ್ಮಿಕ ಶಿಕ್ಷಣದ ಸಮಯದಲ್ಲಿ ಗುರುವು ನನಗೆ ತಿಳಿಸಿ ಕೊಡುತ್ತಾರೆ. ಅಂದರೆ ಪ್ರಬೋಧ ಕಾಲದಲ್ಲಿ ನನ್ನ ಅದ್ವಯವಾದ ಸ್ವರೂಪವನ್ನು ಸಾಕ್ಷಾತ್ತಾಗಿ ತಿಳಿಯಲು ಗುರುವು ಸಹಕಾರಿಯಾಗುತ್ತಾರೆ.
ಆದ್ದರಿಂದ ಕೃತಜ್ಞತಾ ಸೂಚಕವಾಗಿ, ಗುರುವೆಂಬ ದೈವಿಕ ಸ್ವರೂಪಿಗೆ ಹಾಗೆಯೇ ಶ್ರೀ ದಕ್ಷಿಣಾಮೂರ್ತಿಗೆ ನನ್ನ ನಮಸ್ಕಾರಗಳನ್ನು ಸಮರ್ಪಿಸುತ್ತಿದ್ದೇನೆ.
ಬೀಜಸ್ಯಾಂತತಿ ವಾಂಕುರೋ ಜಗದಿತಂ ಪ್ರಾಙ್ನರ್ವಿಕಲ್ಪಂ ಪುನಃ
ಮಾಯಾಕಲ್ಪಿತ ದೇಶಕಾಲಕಲನಾ ವೈಚಿತ್ರ್ಯಚಿತ್ರೀಕೃತಂ |
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 2 ||
2. ಬೀಜದಲ್ಲಿ ಮೊಳಕೆಯು ಅವ್ಯಕ್ತವಾಗಿ ಇರುವ ಹಾಗೆ ಸೃಷ್ಟಿಗೆ ಪೂರ್ವದಲ್ಲಿ ಈ ಜಗತ್ತು ನಾಮರೂಪಗಳಿಲ್ಲದೆ ನಿರ್ವಿಕಲ್ಪ ಸ್ಥಿತಿಯಲ್ಲಿತ್ತು. ನಂತರ ಬೀಜದಿಂದ ಮೊಳಕೆಯೊಡೆದು ಬರುವ ಹಾಗೆ, ಮಾಯೆಯ ಸೃಜನಾತ್ಮಕ ಶಕ್ತಿಯಿಂದ ಚಿಮ್ಮಿ ಈ ಜಗತ್ತು ಹೊರಹೊಮ್ಮಿತು. ಆಮೇಲೆ ಬಗೆಬಗೆಯ ಬಣ್ಣಗಳಿಂದ ಚಿತ್ರಿಸಿದಂತೆ ಅದು ಗೋಚರಿಸಿ ಕಾಲ ಮತ್ತು ಆಕಾಶದ ಸೃಷ್ಟಿಗೆ ಎಡೆಮಾಡಿಕೊಟ್ಟಿತು. ಅದು ಒಬ್ಬ ಮಾಯಾವಿಯು ತೋರುವ ವರ್ಣರಂಜಿತ ಮತ್ತು ಚಮತ್ಕಾರಿಕ ಪ್ರದರ್ಶನದಂತೆ ಕಂಡುಬರುತ್ತಿತ್ತು. ಅಥವಾ ಒಬ್ಬ ಮಹಾ ಯೋಗಿಯು ತನ್ನ ಅಸಾಧಾರಣ ಶಕ್ತಿಯಿಂದ, ಸ್ವೇಚ್ಛೆಯಿಂದ, ವಿಶ್ವದ ವರ್ಣಮಯ ವಿಸ್ತರಣೆಯನ್ನು ಮಾಡುವಂತಿತ್ತು.
ಸೃಷ್ಟಿಕರ್ತನಾದ ಆ ಈಶ್ವರನಿಗೆ, ಹಾಗೆಯೇ ದೈವ ಸ್ವರೂಪಿಯಾದ ನನ್ನ ಗುರುವಿಗೆ ಮತ್ತು ಶ್ರೀ ದಕ್ಷಿಣಾಮೂರ್ತಿಗೆ ನನ್ನ ನಮಸ್ಕಾರಗಳು.
ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ
ಸಾಕ್ಷಾತ್ತತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ |
ಯಸ್ಸಾಕ್ಷಾತ್ಕರಣಾದ್ಭವೇನ್ನ ಪುರನಾವೃತ್ತಿರ್ಭವಾಂಭೋನಿಧೌ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 3 ||
3. ಈ ಸೃಷ್ಟಿಯ ಒಳಗಿನ ಅಸ್ತಿತ್ವ, ಈಶ್ವರನ ಸ್ಫುರಿಸುವ ಶಕ್ತಿ, ಇವು ಭ್ರಮೆಯಂತೆ ಭಾಸವಾದರೂ, ವಾಸ್ತವಿಕವಾಗಿ ಅದು ಸತ್ಯವಾಗಿದೆ. ಮಾಯೆಯ ಮುಸುಕಿನಿಂದಾಗಿ ನಾವು ಹೆಸರುಗಳನ್ನು, ಆಕಾರಗಳನ್ನು ಮತ್ತು ಬಾಹ್ಯ ಚಹರೆಗಳನ್ನು ನಿಜವೆಂದು ಭಾವಿಸುತ್ತೇವೆ.
ಯಾರು ತನ್ನಲ್ಲಿ ಆಶ್ರಯ ಕೋರಿ ಶರಣು ಬರುವರೋ ಅವರಿಗೆ ಶ್ರೀ ದಕ್ಷಿಣಾಮೂರ್ತಿಯು “ತತ್ವಮಸಿ” ಎಂಬ ವೇದವಾಕ್ಯವನ್ನು ಸಾಕ್ಷಾತ್ತಾಗಿ ಪ್ರಕಟಪಡಿಸುವವನಾಗಿದ್ದಾನೆ. ತತ್ ಎಂಬುದು ಸೃಷ್ಟಿಗೆ “ಅಸ್ತಿತ್ವ” ಮತ್ತು “ದರ್ಶನ”ವನ್ನು ಕೊಟ್ಟಿರುವ ಸ್ಪಂದನಾತ್ಮಕ ಸೃಷ್ಟಿಯಲ್ಲಿನ ಒಳವಾಸ್ತವವನ್ನು ಪ್ರತಿನಿಧಿಸುತ್ತದೆ.
ಈ ನೇರವಾದ ಗ್ರಹಿಕೆಯು ಅವನ ಸಾಕ್ಷಾತ್ಕಾರದಿಂದ “ಸಂಸಾರ ಸಾಗರ”ಕ್ಕೆ ನಾವು ಪುನಃ ಪಾದಾರ್ಪಣೆ ಮಾಡದಿರುವುದನ್ನು ಖಾತ್ರಿಗೊಳಿಸುತ್ತದೆ.
ಈ ಜ್ಞಾನವನ್ನು ತಿಳಿಸಿದಂತಹ ಗುರು ರೂಪಧಾರಿಯೂ ಹಾಗೆಯೇ ಶ್ರೀ ದಕ್ಷಿಣಾಮೂರ್ತಿ ಸ್ವರೂಪಿಯೂ ಆದಂತಹ ಆತನಿಗೆ ನನ್ನ ನಮಸ್ಕಾರಗಳು.
ನಾನಾಚ್ಛಿದ್ರ ಘಟೋದರ ಸ್ಥಿತ ಮಹಾದೀಪ ಪ್ರಭಾಭಾಸ್ವರಂ
ಜ್ಞಾನಂ ಯಸ್ಯ ತು ಚಕ್ಷುರಾದಿಕರಣ ದ್ವಾರಾ ಬಹಿಃ ಸ್ಪಂದತೇ |
ಜಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸಮಸ್ತಂ ಜಗತ್
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 4 ||
4. ಅನೇಕ ಕಿಂಡಿಗಳುಳ್ಳ ಒಂದು ಪಾತ್ರೆಯ ಒಳಗೆ ಒಂದು ಉಜ್ವಲವಾದ ದೀಪವನ್ನಿರಿಸಿರುವಂತೆ ಊಹಿಸಿಕೊಳ್ಳಿ. ಆ ಉಜ್ವಲ ಪ್ರಭೆಯುಳ್ಳ ದೀಪದಂತೆ ಪ್ರಜ್ಞೆಯು, ಕಣ್ಣು, ಕಿವಿ ಮುಂತಾದ ಇಂದ್ರಿಯಗಳ ಮುಖಾಂತರ ಸ್ಪಂದಿಸಿ ಜ್ಞಾನವನ್ನು ಹೊರಸೂಸುತ್ತದೆ. ಅದೇ ಹೊಳೆಯುವ ಪ್ರಜ್ಞೆಯು ಹೊರಹೊಮ್ಮಿ ಸಕಲವನ್ನೂ ಬೆಳಗುತ್ತಾ ಸಂಪೂರ್ಣ ವಿಶ್ವವನ್ನು ಆವರಿಸಿಕೊಳ್ಳುತ್ತದೆ.
ನನ್ನ ಗುರುವಿನ ರೂಪದಲ್ಲಿರುವ, ಹಾಗೆಯೇ ಶ್ರೀ ದಕ್ಷಿಣಾಮೂರ್ತಿ ಸ್ವರೂಪದಲ್ಲಿರುವ ಆ ಪ್ರಜ್ಞೆಗೆ ನನ್ನ ನಮಸ್ಕಾರಗಳು.
ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ
ಸ್ತ್ರೀ ಬಾಲಾಂಧ ಜಡೋಪಮಾಸ್ತ್ವಹಮಿತಿ ಭ್ರಾಂತಾಭೃಶಂ ವಾದಿನಃ |
ಮಾಯಾಶಕ್ತಿ ವಿಲಾಸಕಲ್ಪಿತ ಮಹಾವ್ಯಾಮೋಹ ಸಂಹಾರಿಣೇ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 5 ||
5. “ನಾನೇ ದೇಹ, ನಾನೇ ಪ್ರಾಣ ಶಕ್ತಿ, ನಾನೇ ಇಂದ್ರಿಯಗಳು, ನಾನೇ ಚಂಚಲವಾದ ಮನಸ್ಸು ಅಥವಾ ನಾನೇ ಶೂನ್ಯ” ಹೀಗೆಂದು ಜನರು ವಿಧವಿಧವಾಗಿ ತರ್ಕ ಮಾಡುತ್ತಾರೆ. ಅಂತಹವರು ಹೆಂಗಸರಂತೆ, ಮಕ್ಕಳಂತೆ, ಕುರುಡರಂತೆ ಅಥವಾ ಮಂದ ಬುದ್ಧಿಯುಳ್ಳವರಂತೆ ತಮ್ಮ ತರ್ಕದಿಂದಾಗಿ ತಪ್ಪು ದಾರಿಗೆ ಎಳೆಯಲ್ಪಟ್ಟವರು ಹಾಗೂ ವಂಚಿಸಲ್ಪಟ್ಟವರು. ಅವರು ಭ್ರಾಂತರೇ ಸರಿ, ಏಕೆಂದರೆ ಪ್ರಬಲವಾದ ಮಾಯೆಯ ಆಟದಿಂದ ಉಂಟಾದ ಭ್ರಮೆಯಿಂದ ಹೀಗೆ ಮಾಡುತ್ತಾರೆ.
ಮಾಯಾಶಕ್ತಿಯ ವಿಲಾಸದಿಂದ ಕಲ್ಪಿತವಾದ ಮಹಾವ್ಯಾಮೋಹವನ್ನು ನಾಶಮಾಡುವ ಹಾಗೂ ಗುರುರೂಪಧಾರಿಯಾದ ಶ್ರೀ ದಕ್ಷಿಣಾಮೂರ್ತಿಗೆ ನನ್ನ ನಮಸ್ಕಾರಗಳು.
ರಾಹುಗ್ರಸ್ತ ದಿವಾಕರೇಂದು ಸದೃಶೋ ಮಾಯಾ ಸಮಾಚ್ಛಾದನಾತ್
ಸನ್ಮಾತ್ರಃ ಕರಣೋಪ ಸಂಹರಣತೋ ಯೋಽಭೂತ್ಸುಷುಪ್ತಃ ಪುಮಾನ್ |
ಪ್ರಾಗಸ್ವಾಪ್ಸಮಿತಿ ಪ್ರಭೋದಸಮಯೇ ಯಃ ಪ್ರತ್ಯಭಿಜ್ಞಾಯತೇ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 6 ||
6. (ಈ ಶ್ಲೋಕವು ಗಾಢನಿದ್ದೆ ಅಂದರೆ ಸುಷುಪ್ತಿಯಲ್ಲಿರುವ ಮನಸ್ಸಿನ ಸ್ಥಿತಿಯನ್ನು ವಿವರಿಸುತ್ತದೆ, ಉಳಿದ ಎರಡು ಮನಸ್ಸಿನ ಸ್ಥಿತಿಗಳಾದ ಜಾಗೃತಾವಸ್ಥೆ ಮತ್ತು ಸ್ವಪ್ನಾವಸ್ಥೆಯ ಬಗ್ಗೆ ಮುಂದಿನ ಶ್ಲೋಕದಲ್ಲಿ ವಿವರಿಸಲಾಗಿದೆ)
ಗ್ರಹಣ ಕಾಲದಲ್ಲಿ ರಾಹುಗ್ರಸ್ತನಾದ ಸೂರ್ಯನಂತೆ ಅಥವಾ ಚಂದ್ರನಂತೆ, ಗಾಢ ನಿದ್ರೆಯಲ್ಲಿರುವ ವ್ಯಕ್ತಿಯ ಮನಸ್ಸು ಶೂನ್ಯವಾಗಿರುತ್ತದೆ. ಏಕೆಂದರೆ ಆತನ ಎಲ್ಲ ಇಂದ್ರಿಯ ಸಮೂಹಗಳು ಮನಸ್ಸೆಂಬ ಪರದೆಯ ಹಿಂದೆ ಜಾರಿರುತ್ತದೆ. ಇಷ್ಟಾದರೂ ಆತನ ಪ್ರಜ್ಞೆಯು ಜಾಗೃತವಾಗಿರುತ್ತದೆ.- ಮನಸ್ಸು ಶೂನ್ಯವಾಗಿರುವ ಕಾರಣದಿಂದ ಆತನಲ್ಲಿ ಯಾವುದೇ ಚಟುವಟಿಕೆ ಇರುವುದಿಲ್ಲ. ಎಲ್ಲ ಇಂದ್ರಿಯಗಳ ಹಿಂತೆಗೆತದ ಈ ಸ್ಥಿತಿಯಲ್ಲಿ ಮನಸ್ಸೆಂಬ ಪರದೆಯು ಮಾಯೆ ಅಥವಾ ಅಜ್ಞಾನದಿಂದ ಅವೃತವಾಗಿರುತ್ತದೆ. ಪ್ರಜ್ಞೆಯೂ ಸಹ ಮಾಯೆಯಿಂದ ಸುತ್ತುವರಿದಿರುತ್ತದೆ. ಆ ವ್ಯಕ್ತಿಯು ಎಚ್ಚರಗೊಂಡ ಸಮಯದಲ್ಲಿ ಪ್ರಜ್ಞೆಯು ಏನನ್ನೂ ಪ್ರತಿಫಲಿಸದಿದ್ದರೂ ಸಹ, ಅದು ಅಲ್ಲಿ ಸ್ಥಿತವಾಗಿತ್ತೆಂಬುದನ್ನು ಆತ ಗುರುತಿಸುತ್ತಾನೆ.
ಗಾಢ ನಿದ್ರೆಯ ಸ್ಥಿತಿಯಲ್ಲಿಯೂ ಸಹ, ನಿರ್ಮಲ ಪ್ರಜ್ಞೆಯಂತೆ ಸನ್ಮಾತ್ರ ರೂಪದಲ್ಲಿ ಯಾರು ನೆಲೆಸುವನೋ ಅಂತಹ ವ್ಯಕ್ತಿಗೆ ಮತ್ತು ನನ್ನ ಗುರುವಿನ ರೂಪಧಾರಿಯಾಗಿ ಯಾರಿರುವರೋ ಅವರಿಗೆ ಅಂತೆಯೇ ಶ್ರೀ ದಕ್ಷಿಣಾಮೂರ್ತಿಗೆ ನನ್ನ ನಮಸ್ಕಾರಗಳು.
ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ
ವ್ಯಾವೃತ್ತಾ ಸ್ವನು ವರ್ತಮಾನ ಮಹಮಿತ್ಯಂತಃ ಸ್ಫುರಂತಂ ಸದಾ |
ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 7 ||
7. ಬಾಲ್ಯ, ಯೌವನ,ಮುಪ್ಪುಗಳು ಎಂಬ ಎಲ್ಲ ವಿವಿಧ ಅನುಭೋಗದ ಅವಸ್ಥೆಗಳಲ್ಲಿ, ಹಾಗೆಯೇ ಜಾಗೃತ, ಸ್ವಪ್ನ, ನಿದ್ರಾದಿಗಳೆಂಬ ವಿವಿಧ ಅನುಭವದ ಸ್ಥಿತಿಗಳಲ್ಲಿ, ಬದಲಾಗದೆ ನಿತ್ಯವಾಗಿ ಉಳಿದುಕೊಂಡಿರುವ ಒಂದು ವಿಷಯವಿದೆ. ಅದೇ ಅವಿಚ್ಛಿನ್ನವಾಗಿ ಪ್ರಕಾಶಿಸುತ್ತಿರುವ “ಅಹಂ”, ಅಂದರೆ ನಾನು ಎಂಬ ಪ್ರಜ್ಞೆ. ಯಾರು ಗುರುವಿನಲ್ಲಿ ಧೃಢನಿಷ್ಠೆ ಉಳ್ಳವರಾಗಿರುತ್ತಾರೋ ಅವರಿಗೆ ಸತ್ಯದರ್ಶನವಾಗುತ್ತದೆ. ಅದು “ಚಿನ್ಮುದ್ರೆ” ಎಂಬ ಶುಭಕಾರಕ ಸಂಕೇತದ ಮೂಲಕ ಪ್ರಕಟವಾಗುತ್ತದೆ.
ಪ್ರಜ್ಞಾವಂತನಾಗಿರುವುದು ನನ್ನ ನಿಜರೂಪ ಎಂಬುದಾಗಿ ಯಾರು ಪ್ರಕಟಗೊಳಿಸಿದರೋ ಅವರಿಗೆ ನನ್ನ ನಮಸ್ಕಾರಗಳು. ಆ ಗುರುವಿಗೆ ಮತ್ತು ಅಂತಯೇ ಶ್ರೀ ದಕ್ಷಿಣಾಮೂರ್ತಿಗೆ ನನ್ನ ನಮಸ್ಕಾರಗಳು.
ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬಂಧತಃ
ಶಿಷ್ಯಚಾರ್ಯತಯಾ ತಥೈವ ಪಿತೃ ಪುತ್ರಾದ್ಯಾತ್ಮನಾ ಭೇದತಃ |
ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾ ಪರಿಭ್ರಾಮಿತಃ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 8 ||
8. (ಈ ಶ್ಲೋಕವು “ಬ್ರಹ್ಮಜ್ಞಾನಿ”ಯನ್ನು ವರ್ಣಿಸುತ್ತದೆ)
ಈತನು ಇಡೀ ವಿಶ್ವವನ್ನು ಏಕಾತ್ಮನಂತೆ ಕಾಣುತ್ತಾನೆ. ತನ್ನ ಜೀವಿತಕಾಲದಲ್ಲಿ ಈತನು ಏನನ್ನು ಕಾಣುತ್ತಾನೆಯೋ ಅದೆಲ್ಲವೂ ಆತನ ಸ್ವಂತ ಪ್ರಜ್ಞೆಯ ಸ್ವಾಭಾವಿಕ ಅಭಿವ್ಯಕ್ತಿ ಎಂದು ತಿಳಿಯುತ್ತಾನೆ.
ಕಾರ್ಯ ಮತ್ತು ಕಾರಣ; ಸ್ವಾಮಿ ಮತ್ತು ಸೇವಕ; ಆಚಾರ್ಯ ಮತ್ತು ಶಿಷ್ಯಾ; ಪಿತೃ ಮತ್ತು ಪುತ್ರ ; ನಿದ್ರೆ ಮತ್ತು ಜಾಗೃತಾವಸ್ಥೆ ಇವುಗಳಲ್ಲಿನ ಎಲ್ಲ ಭೇದಗಳನ್ನು, ಮಾಯೆಯ ಪ್ರಕ್ಷೇಪ ಎಂಬುದಾಗಿ ಈತನು ಭಾವಿಸುತ್ತಾನೆ. ಮಾಯೆಯ ಕರ್ತೃತ್ವ ಶಕ್ತಿಯನ್ನು ಬಳಸಿ, ಅದ್ವೈತ ಬ್ರಹ್ಮನು ಇವೆಲ್ಲವುಗಳಲ್ಲಿ ಅಭಿವ್ಯಕ್ತಗೊಳ್ಳುತ್ತಾನೆ. ಈ ಬ್ರಹ್ಮಜ್ಞಾನಿಯು ಎಲ್ಲದರಲ್ಲಿಯೂ ಏಕತೆಯನ್ನು ಕಾಣುತ್ತಾನೆ. ಈತನಿಗೆ ಮತ್ತು ದಿವ್ಯ ಗುರುರೂಪಧಾರಿಯಾದ ಶ್ರೀ ದಕ್ಷಿಣಾಮೂರ್ತಿಗೆ ನನ್ನ ನಮಸ್ಕಾರಗಳು.
ಭೂರಂಭಾಂಸ್ಯನಲೋಽನಿಲೋಽಂಬರ ಮಹರ್ನಾಥೋ ಹಿಮಾಂಶುಃ ಪುಮಾನ್
ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಮ್ |
ನಾನ್ಯತ್ಕಿಂಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋ
ತಸ್ಮೈ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 9 ||
9. ಈ ಶ್ಲೋಕದಲ್ಲಿ ಶ್ರೀ ದಕ್ಷಿಣಾಮೂರ್ತಿಯನ್ನು ಎಂಟು ಬಗೆಯ ರೂಪಗಳನ್ನುಳ್ಳ ಅಷ್ಟಮೂರ್ತಿ ಎಂಬುದಾಗಿ ವರ್ಣಿಸಲಾಗಿದೆ.
ಆ ಎಂಟು ರೂಪಗಳಲ್ಲಿ ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶಗಳು ಒಳಗೊಂಡಿವೆ. ಹಾಗೆಯೇ ದಿನಕರನಾದ ಸೂರ್ಯ ಮತ್ತು ಹಿಮಾಂಶುವಾದ ಚಂದ್ರ ಮತ್ತು ಪ್ರಜ್ಞಾವಂತನಾದ ಆತ್ಮ ಇವರೂ ಸಹ ಆ ಎಂಟು ರೂಪಗಳಲ್ಲಿ ಸೇರಿದ್ದಾರೆ. ವಿಶ್ವದಲ್ಲಿನ ಚೇತನಯುಕ್ತ ಮತ್ತು ಚೇತನರಹಿತ ಆಕಾರಗಳೂ ಸಹ ಈ ಎಂಟು ಬಗೆಯ ರೂಪಗಳಲ್ಲಿ ಅಡಕವಾಗಿವೆ.
ಸಕಲ ಅಸ್ತಿತ್ವಗಳಲ್ಲಿರುವುದು ಬ್ರಹ್ಮನೇ ಎಂಬ ಸತ್ಯವನ್ನು ಯಾರು ಗ್ರಹಿಸುತ್ತಾರೋ ಮತ್ತು ಯಾರು ಜ್ಞಾನಿಗಳಾಗಿರುತ್ತಾರೋ ಅವರು ವಿಭು ಎಂದು ಕರೆಯಲ್ಪಡುವ ಸರ್ವವ್ಯಾಪಿಯಾದ ಪರಮಾತ್ಮನನ್ನು ಮೀರಿ ಮತ್ತೇನೂ ಇರಲು ಸಾಧ್ಯವಿಲ್ಲ ಎಂಬ ತತ್ವವನ್ನು ಅರ್ಥಮಾಡಿಕೊಳ್ಳಬಲ್ಲರು.
ಅಷ್ಟಮೂರ್ತಿಯ ಈ ಆಕಾರವು, ಸಗುಣೋಪಾಸನೆಯ ಮೂಲಕ ಧ್ಯಾನ ಮತ್ತು ಪೂಜೆಯನ್ನು ಮಾಡುವವರಿಗೂ ಸಹ ಉಪಯುಕ್ತವಾಗಿರುತ್ತದೆ.
ನನ್ನ ಗುರುವಿನ ರೂಪದಲ್ಲಿರುವ ಅಂತೆಯೇ ಶ್ರೀ ದಕ್ಷಿಣಾಮೂರ್ತಿ ಸ್ವರೂಪದಲ್ಲಿರುವ ಆ ಬ್ರಹ್ಮನಿಗೆ ನನ್ನ ನಮಸ್ಕಾರಗಳು.
ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿನ್ ಸ್ತವೇ
ತೇನಾಸ್ವ ಶ್ರವಣಾತ್ತದರ್ಥ ಮನನಾದ್ಧ್ಯಾನಾಚ್ಚ ಸಂಕೀರ್ತನಾತ್ |
ಸರ್ವಾತ್ಮತ್ವಮಹಾವಿಭೂತಿ ಸಹಿತಂ ಸ್ಯಾದೀಶ್ವರತ್ವಂ ಸ್ವತಃ
ಸಿದ್ಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯ ಮವ್ಯಾಹತಮ್ || 10 ||
10.ಕೊನೆಯದಾದ ಈ ಶ್ಲೋಕದಲ್ಲಿ, ಶ್ರೀ ದಕ್ಷಿಣಾಮೂರ್ತಿ ಸ್ತೋತ್ರವನ್ನು ಪಠಿಸುವುದರಿಂದ ದೊರಕುವ ಫಲಶೃತಿಯ ಬಗ್ಗೆ ಕೆಳಕಂಡಂತೆ ವಿವರಿಸಲಾಗಿದೆ.
ಸಕಲವೂ ಬ್ರಹ್ಮ ಎಂಬ “ಸರ್ವಾತ್ಮತ್ವ”ದ ಧ್ಯೇಯದ ಬಗ್ಗೆ ಈ ಸ್ತುತಿಯಲ್ಲಿ, ಸ್ಫುಟವಾಗಿ ವಿವರಿಸಲಾಗಿದೆ.
ಸರ್ವಂ ಖಲ್ವಿದಂ ಬ್ರಹ್ಮ!; ವಾಸ್ತವವಾಗಿ ಸಕಲವೂ ಬ್ರಹ್ಮನೇ!
ಈ ಕೆಳಗಿನ ಆಧ್ಯಾತ್ಮಿಕ ಆಚರಣೆಗಳ ಸಹಾಯದಿಂದ “ಸರ್ವಾತ್ಮತ್ವ” ಸ್ಥಿತಿಯನ್ನು ಯಾರು ಬೇಕಾದರೂ ಹೊಂದಬಹುದಾಗಿದೆ:
ಶ್ರವಣಂ: ಈ ಸ್ತುತಿಯನ್ನು ಕೇಳುವುದರಿಂದ ಸತ್ಯವನ್ನು ಅರಿಯಬಹುದಾಗಿದೆ.
ಮನನಂ: ಸತ್ಯದೊಳಗಿನ ಆಧ್ಯಾತ್ಮಿಕ ತಿಳುವಳಿಕೆಗಾಗಿ ಧ್ಯಾನ.
ಧ್ಯಾನಂ ಅಥವಾ ನಿದಿಧ್ಯಾಸನ: ಪುನಃ ಪುನಃ ಸತ್ಯವನ್ನು ಕಾಣುವ ಪ್ರಕ್ರಿಯೆ, ಇದು ಒಂದು ಧ್ಯಾನ ಸಮಾಧಿಯ ಅನುಸಂಧಾನ.
ಸಂಕೀರ್ತನಂ: ಸ್ತುತಿಯನ್ನು ಪದೇ ಪದೇ ಪಠಿಸುವ ಕ್ರಿಯೆ.
ಈ ಆಚರಣೆಗಳ ಸಹಾಯದಿಂದ ಯಾರು ಬೇಕಾದರೂ ಈಶ್ವರನ ಶಕ್ತಿ ಸಾಮರ್ಥ್ಯ ಮತ್ತು ವೈಭವದ ಸ್ಥಿತಿಯಾದ “ಈಶ್ವರತ್ವವನ್ನು” ತಲುಪಬಹುದು. ಜತೆಗೆ ಯಾವುದೇ ವಿಘ್ನ, ಅಡೆತಡೆಗಳಿಲ್ಲದೆ ಅಷ್ಟ ಸಿದ್ಧಿಗಳನ್ನು ಆರ್ಜಿಸಬಹುದು.
ಎಂಟು ಬಗೆಯ ಸಿದ್ಧಿಗಳು ಕೆಳಕಂಡಂತಿವೆ.
1. ಅಣಿಮಾ – ಪಾರವಿಲ್ಲದೆ ಚಿಕ್ಕದಾಗಿ ಕುಗ್ಗುವ ಸಾಮರ್ಥ್ಯ.
2. ಮಹಿಮಾ – ಪಾರವಿಲ್ಲದೆ ದೊಡ್ಡದಾಗಿ ಹಿಗ್ಗುವ ಸಾಮರ್ಥ್ಯ.
3. ಗರಿಮಾ – ಅಸಾಧಾರಣವಾಗಿ ಭಾರ ಮತ್ತು ತೂಕ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ.
4. ಲಘಿಮಾ – ನಂಬಲಾರದಷ್ಟು ಹಗುರವಾಗುವ ಸಾಮರ್ಥ್ಯ.
5. ಪ್ರಾಪ್ತಿ – ಸ್ಥಳಾಂತರಗೊಳಿಸುವ ಸಾಮರ್ಥ್ಯ – ಕ್ಷಣಾರ್ಧದಲ್ಲಿ ಎಲ್ಲಿ ಬೇಕಾದರಲ್ಲಿ ಪ್ರತ್ಯಕ್ಷವಾಗುವ ಶಕ್ತಿ.
6. ಪ್ರಕಾಮ್ಯ – ಬಯಸಿದ ಕಾಮನೆಗಳನ್ನು ಅಂದುಕೊಂಡ ಕೂಡಲೇ ಪೂರೈಸಿಕೊಳ್ಳುವ ಸಾಮರ್ಥ್ಯ.
7. ಇಶಿತ್ವ – ಸಾರ್ವಭೌಮತ್ವ ಅಥವಾ ಪರಮಾಧಿಕಾರ. ಸಂಪೂರ್ಣವಾದ ಸ್ವಾತಂತ್ರ್ಯ ಹೊಂದುವ ಸಾಮರ್ಥ್ಯ ಹಾಗೂ ಯಾರ ಅಂಕೆಗೂ ಒಳಪಡದ ನಿರಂಕುಶತ್ವ.
8. ವಶಿತ್ವ – ಪ್ರತಿಯೊಬ್ಬರ ಮೇಲೂ ನಿಯಂತ್ರಣ ಹೊಂದುವ, ಎಲ್ಲರನ್ನೂ ನಿಯಂತ್ರಿಸುವ ಸಾಮರ್ಥ್ಯ.
ಯಾರು ತಾವು ಸರ್ವಾತ್ಮ ಎಂಬುದನ್ನು ಅರಿತುಕೊಂಡಿರುತ್ತಾರೋ, ಯಾರು ಈಶ್ವರತ್ವದ ಸ್ಥಿತಿಯನ್ನು ತಲುಪಿರುತ್ತಾರೋ ಅಂತಹವರಿಗೆ ಮೇಲೆ ವಿವರಿಸಿದ ಅಷ್ಟ ಸಿದ್ಧಿಯ ಶಕ್ತಿಗಳ ಅವಶ್ಯಕತೆ ಕಂಡುಬರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಈ ಅಷ್ಟಸಿದ್ಧಿಗಳು ಅಂತಹವರಿಗೆ ಯಾವುದೇ ರೀತಿಯಲ್ಲಿ ಮಹತ್ವ ಪೂರ್ಣವಾಗಿರುವುದಿಲ್ಲ.