DVA SUPARNA or TWO BIRDS
73 (E)
Bagavadgita: SaadHanamaarga
Track four: Smaranam
Towards Self-Realisation – 2
ॐ
नारायणाय विद्महे वासुदेवाय धीमहि ।
तन्नो विष्णुः प्रचोदयात् ॥
nārāyaṇāya vidmahe vāsudevāya dhīmahi,
tanno viṣṇuḥ pracodayāt.
We understand Narayana,
We meditate on Vasudeva,
May that Vishnu inspire and enlighten us!
We understand that Narayana is the Supreme Reality.
All-Pervasive, both within and without.
He is present in each one of us,
in the Heart of Hearts, as Antaratma,–
as Witness Consciousness.
We also understand that
He is the same Brahma, Hari, Vishnu, Indra and the Supreme Consciousness.
How can we relate to Him and realize Him?
As a first step, we must stabilize the thought that Paramatma shines forth
as a Spark in the Flame of Jeevatma;
Jeevatma and Paramatma are together,
one within the other.
and they are ONE.
Jeevatma should get identified with Parmatma.
The Narayana Suktam reveals this Truth
by employing the imagery
of a Flame and the Spark within it.
Let us go to the Mundaka Upanishad in which (Ch. 3. 1-3)
we find how the Jeevatma gets identified with the Parmatma.
It is presented with the help of the imagery of TWO BIRDS
sitting on the same branch of a tree.
द्वा सुपर्णा सयुजा सखाया समानं वृक्षं परिषस्वजाते।
तयोरन्य: पिप्पलं स्वाद्वत्त्यनश्नन्नन्यो अभिचाकशीति॥
dva suparna sayuja sakhaya samanam vriksham parishasvajate |
tayoranyah pippalam svadvattyanashnannanyo abhicakashiti ||
On the same tree, two birds are perched,
each as the friend of the other,
always found together.
Of the two, one is fully engrossed
in eating the fruits of the tree,
while the other bird simply look on
without eating.
समाने वृक्षे पुरुषों निमग्नोऽनीशया शोचति मुह्यमान:।
जुष्टं यदा पश्यत्यन्यमीशमस्य महिमानमिति वीतशोक:॥
samāne vṛkṣe puruṣo nimagno’nīśayā śocati muhyamānaḥ |
juṣṭaṁ yadā paśyatyanyamīśamasya mahimānamiti vītaśokaḥ ||
Of the two that are perched on the same tree,
one is the Jeevatma, the eating bird,
which is under delusion and suffers
because of its incapacity.
But when it looks at the other bird
who is the Lord, full of Glory,
commanding all respect,
the suffering bird gets freedom
from all its suffering.
यदा पश्य: पश्यते रुक्मवर्णं कर्तारमीशं पुरुषं ब्रह्मयोनिम्।
तदा विद्वान्पुण्यपापे विधूय निरंजन: परमं साम्यमुपैति॥
yadā paśyaḥ paśyate rukmavarṇaṁ kartāramīśaṁ puruṣaṁ brahmayonim |
tadā vidvān puṇyapāpe vidhūya nirañjanaḥ paramaṁ sāmyamupaiti ||
When one sees the gold-coloured bird,
who is the Lord,
the source of the Supreme Brahman,
the Creator of the entire Universe,
the Lord of all beings, the Purusha,
the Paramatma,
he gets rid of all sinful and pious reactions.
He becomes Pure and gets identified
with the Spiritual Form of the Lord Himself.
The story of the TWO BIRDS
is a symbolic representation
of Human Condition.
The suffering bird stands for Jeevatma.
The Jeevatma’s identification
with Ego, mind and body
is the cause of its suffering.
When Jeevatma turns away
from the Ego-mind-body complex,
and looks at the gold-coloured Bird,
which symbolizes the Witness Consciousness,
it gets free from all suffering.
Jeevatma becomes one with Paramatma.
To reach this identity,
to become one with Paramatma
is the goal of spiritual journey.
May that Vishnu impel us
towards realizing the Goal!
The thought that
“I am not the Ego-mind-body
but I am the Brahman”
should get well established
through repeated remembrance —
through Smaranam.
ದ್ವಾ ಸುಪರ್ಣಾ
ಓಂ
ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ।
ತನ್ನೋ ವಿಷ್ಣುಃ ಪ್ರಚೋದಯಾತ್ ॥
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇI
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ ಅನಶ್ನನ್ ಅನ್ಯೋ ಅಭಿಚಾಕಶೀತಿII
ಸಮಾನೇ ವೃಕ್ಷೇ ಪುರುಷೋ ನಿಮಗ್ನೋ ಅನೀಶಯಾ ಶೋಚತಿ ಮುಹ್ಯಮಾನಃI
ಜುಷ್ಟಂ ಯದಾ ಪಶ್ಯತ್ ಅನ್ಯಮೀಶಂ ಅಸ್ಯ ಮಹಿಮಾನಮಿತಿ ವೀತಶೋಕಃII
ಯದಾ ಪಶ್ಯಃ ಪಶ್ಯತೇ ರುಕ್ಮವರ್ಣಂ ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಮ್ I
ತದಾ ವಿದ್ವಾನ್ ಪುಣ್ಯಪಾಪೇ ವಿಧೂಯ ನಿರಂಜನಃ ಪರಮಂ ಸಾಮ್ಯಮುಪೈತಿ II
ನಾರಾಯಣನನ್ನು ನಾವು ಅರಿತುಕೊಳ್ಳುವೆವು.
ನಾರಾಯಣನನ್ನು ಕುರಿತು ನಾವು ಧ್ಯಾನಿಸುವೆವು.
ಆ ವಿಷ್ಣುವು ನಮ್ಮನ್ನು ಉತ್ತೇಜಿಸಿ ನಮಗೆ ಜ್ಞಾನೋದಯವನ್ನು ನೀಡಲಿ.
ನಾರಯಣನೇ ಪರಮ ಸತ್ಯ ಎಂಬುದನ್ನು ನಾವು ಅರಿತುಕೊಳ್ಳುವೆವು.
ಹೃದಯಗಳಲ್ಲಿನ ಹೃದಯದಲ್ಲಿ ಪ್ರಜ್ಞೆಯ ಸಾಕ್ಷಿಯಾಗಿ, ಅಂತರಾತ್ಮನಾಗಿ ಸ್ಥಿತನಾಗಿರುವ ಆತನು ಪ್ರತಿಯೊಬ್ಬರಲ್ಲಿಯೂ ಒಳಗೆ ಮತ್ತು ಹೊರಗೆ, ಎಲ್ಲೆಡೆಯೂ ವ್ಯಾಪಿಸಿದ್ದಾನೆ.
ಈತನೇ ಬ್ರಹ್ಮ, ಹರಿ, ವಿಷ್ಣು, ಇಂದ್ರ ಮತ್ತು ಪ್ರಜ್ಞೆಯ ಪರಮ ಪ್ರತೀಕವಾಗಿದ್ದಾನೆಂಬುದನ್ನು ಸಹ ನಾವು ಅರಿತುಕೊಳ್ಳುವೆವು.
ಆತನೊಂದಿಗೆ ನಾವು ಹೇಗೆ ಸಮೀಕರಿಸಿಕೊಳ್ಳಬೇಕು ಮತ್ತು ಹೇಗೆ ಆತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು?
ಇದಕ್ಕೆ ಮೊದಲ ಹೆಜ್ಜೆಯಾಗಿ, ಜೀವಾತ್ಮನೆಂಬ ಜ್ವಾಲೆಯಲ್ಲಿ ಪರಮಾತ್ಮನು ಒಂದು ಕಿಡಿಯಾಗಿ ಪ್ರಜ್ವಲಿಸುತ್ತಾನೆಂಬ ವಿಚಾರವನ್ನು ನಾವು ಧೃಢ ಪಡಿಸಿಕೊಳ್ಳಬೇಕು. ಜೀವಾತ್ಮ ಮತ್ತು ಪರಮಾತ್ಮ ಇವರಿಬ್ಬರೂ ಒಬ್ಬರೊಳಗೆ ಒಬ್ಬರಾಗಿ ಜೊತೆಯಾಗಿ ಇರುವವರು ಮತ್ತು ಅವರೀರ್ವರೂ ಒಂದು ಎಂಬುದನ್ನು ಅರಿತುಕೊಳ್ಳಬೇಕು. ಪರಮಾತ್ಮನೊಂದಿಗೆ ಜೀವಾತ್ಮನು ಗುರುತಿಸಿಕೊಳ್ಳಬೇಕು. ಜ್ವಾಲೆ ಮತ್ತು ಅದರೊಳಗಿನ ಕಿಡಿಯ ಉಪಮೆಯನ್ನು ಬಳಸಿಕೊಂಡು ನಾರಾಯಣ ಸೂಕ್ತವು ಈ ಸತ್ಯವನ್ನು ತಿಳಿಸಿಕೊಡುತ್ತದೆ.
ಎರಡು ಪಕ್ಷಿಗಳ ಉಪಮೆ.
ಮುಂಡಕ ಉಪನಿಷತ್ತಿನಲ್ಲಿ(ಅಧ್ಯಾಯ 3.1-3) ಜೀವಾತ್ಮನು ಹೇಗೆ ಪರಮಾತ್ಮನೊಡನೆ ಗುರುತಿಸಿಕೊಳ್ಳುತ್ತಾನೆಂಬುದನ್ನು ನಾವು ಕಾಣಬಹುದು. ಒಂದು ಮರದ ಒಂದೇ ರೆಂಬೆಯ ಮೇಲೆ ಕುಳಿತಿರುವ ಎರಡು ಪಕ್ಷಿಗಳ ಉಪಮೆಯ ನೆರವಿನಿಂದ ಅದನ್ನು ಪ್ರಸ್ತುತಪಡಿಸಲಾಗಿದೆ.
1. ಒಂದೇ ಮರದ ರೆಂಬೆಯ ಮೇಲೆ ಎರಡು ಹಕ್ಕಿಗಳು ನೆಲೆಸಿದ್ದವು. ಅವೆರಡೂ ಸದಾ ಒಟ್ಟಿಗೆ ಕಂಡುಬರುತ್ತಿದ್ದೆವು ಮತ್ತು ಪರಸ್ಪರ ಗೆಳೆಯರಾಗಿದ್ದವು. ಅವೆರಡರಲ್ಲಿ ಒಂದು ಹಕ್ಕಿಯು ಮರದಲ್ಲಿದ್ದ ಹಣ್ಣುಗಳನ್ನು ತಿನ್ನುವುದರಲ್ಲಿ ಸಂಪೂರ್ಣವಾಗಿ ಲೀನವಾಗಿರುತ್ತಿತ್ತು. ಆದರೆ ಮತ್ತೊಂದು ಹಕ್ಕಿಯು ಏನನ್ನೂ ತಿನ್ನದೆ ಸುಮ್ಮನೆ ನೋಡುತ್ತಿರುತ್ತಿತ್ತು.
2. ಒಂದೇ ಮರದ ಮೇಲೆ ನೆಲಸಿರುವ ಆ ಎರಡು ಹಕ್ಕಿಗಳಲ್ಲಿ, ಸದಾ ತಿನ್ನುವುದರಲ್ಲಿ ಮಗ್ನವಾದ ಒಂದು ಹಕ್ಕಿಯೇ ಜೀವಾತ್ಮ. ಅದರ ಅಸಮರ್ಥತೆಯ ಕಾರಣದಿಂದ ಅದು ಭ್ರಮೆ ಅಥವಾ ಭ್ರಾಂತಿಯಿಂದಾಗಿ ಕಷ್ಟವನ್ನು ಅನುಭವಿಸುತ್ತಿತ್ತು. ಆದರೆ, ಸಕಲ ಗೌರವಾದರಗಳಿಗೆ ಪಾತ್ರನಾದ, ಸಂಪೂರ್ಣ ವೈಭವದಿಂದ ಕೂಡಿದ ಪರಮಾತ್ಮನಾದ ಮತ್ತೊಂದು ಹಕ್ಕಿಯೆಡೆಗೆ ಅದು ನೋಡಿದಾಗ, ಯಾತನೆಯನ್ನು ಅನುಭವಿಸುತ್ತಿರುವ ಹಕ್ಕಿಯು ತನ್ನೆಲ್ಲಾ ವೇದನೆಗಳಿಂದ ಮುಕ್ತಿ ಹೊಂದಿತ್ತು.
3. ಸಕಲ ದೇವತೆಗಳ ಒಡೆಯನಾದ ಪುರುಷ, ಸಮಸ್ತ ಜಗತ್ತಿನ ಸೃಷ್ಟಿಕರ್ತ, ಪರಮಪದನಾದ ಬ್ರಹ್ಮನ ಜನಕ, ಪರಮಾತ್ಮನಾದ ಆ ಬಂಗಾರದ ವರ್ಣದ ಪಕ್ಷಿಯನ್ನು ಯಾರು ನೋಡುತ್ತಾನೆಯೋ ಅವನು ತನ್ನೆಲ್ಲಾ ಪಾಪಕರ್ಮಗಳಿಂದ ಮುಕ್ತಿ ಹೊಂದುತ್ತಾನೆ. ಅವನು ಪರಿಶುದ್ಧನಾಗಿ ಸ್ವಯಂ ಭಗವಂತನ ಆಧ್ಯಾತ್ಮಿಕ ರೂಪದ ಜತೆ ತನ್ನನ್ನು ಗುರುತಿಸಿಕೊಳ್ಳುತ್ತಾನೆ.
ಎರಡು ಪಕ್ಷಿಗಳ ಕಥೆಯು ಮಾನವನ ಗುಣವನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಯಾತನೆಯನ್ನು ಅನುಭವಿಸುತ್ತಿರುವ ಹಕ್ಕಿಯು ಜೀವಾತ್ಮನನ್ನು ಪ್ರತಿನಿಧಿಸುತ್ತದೆ. ಶರೀರ, ಮನಸ್ಸು ಮತ್ತು ಅಹಂ ಇವುಗಳೊಂದಿಗಿನ ಜೀವಾತ್ಮನ ತಾದಾತ್ಮ್ಯವು ಅವನ ದುಃಖ, ವ್ಯಥೆ, ಯಾತನೆಗಳಿಗೆ ಕಾರಣವಾಗಿರುತ್ತದೆ.
ಯಾವಾಗ ಜೀವಾತ್ಮನು ಶರೀರ, ಮನಸ್ಸು ಮತ್ತು ಅಹಂ ಇವುಗಳ ತೊಡಕಿನಿಂದ ವಿಮುಖನಾಗಿ, ಸಾಕ್ಷೀಭೂತ ಪ್ರಜ್ಞೆಗೆ ಪ್ರತೀಕವಾದ ಬಂಗಾರದ ವರ್ಣದ ಹಕ್ಕಿಯನ್ನು ನೋಡುತ್ತಾನೆಯೋ ಆಗ ಆ ಜೀವಾತ್ಮನಿಗೆ ವೇದನೆಯಿಂದ ಮುಕ್ತಿ ದೊರಕುತ್ತದೆ.
ಪರಮಾತ್ಮನೊಂದಿಗೆ ಜೀವಾತ್ಮನು ಒಂದಾಗುತ್ತಾನೆ. ಪರಮಾತ್ಮನೊಂದಿಗೆ ಒಂದಾಗುವ ಪ್ರಕ್ರಿಯೆಯನ್ನು ಸಾಧಿಸುವುದೇ, ಆಧ್ಯಾತ್ಮಿಕ ಪಯಣದ ಮುಖ್ಯ ಗುರಿಯಾಗಿರುತ್ತದೆ.
ನಮ್ಮ ಗುರಿಯನ್ನು ಸಾಧಿಸುವೆಡೆಗೆ ಆ ವಿಷ್ಣುವು ನಮ್ಮನ್ನು ಪ್ರೇರೇಪಿಸಲಿ.
ನಾನು ಎಂಬುದು ಖಂಡಿತವಾಗಿಯೂ ಈ ಶರೀರ, ಮನಸ್ಸು ಮತ್ತು ಅಹಂ ಅಲ್ಲ, ಆದರೆ ನಾನೇ ಬ್ರಹ್ಮ ಎಂಬ ವಿಚಾರವು ಸ್ಮರಣದ ಮೂಲಕ ಪದೇ ಪದೇ ನೆನಪಿಗೆ ಬಂದು ನಿರ್ವಿವಾದವಾಗಿ ನಮ್ಮಲ್ಲಿ ನೆಲೆಗೊಳ್ಳಬೇಕು.
ಇದನ್ನು ಶ್ರೀ ಶಂಕರಾಚಾರ್ಯರು ರಚಿಸಿರುವ “ಪ್ರಾತಃ ಸ್ಮರಣ ಸ್ತೋತ್ರ”ದ ಮೂಲಕ ಪಾಲಿಸಬಹುದಾಗಿದೆ.