Guided Chakra Meditation
Guided Chakra Meditation (See Video of Sadhana Marga No35 -37(E)
And 38 -40(K)
GUIDED MEDITATION
SRI GURUBHYONAMAH HARIHI OM
Swaadhyaya Dhyana Yoga
“Uddharet Aatmana Aatmanam’’
“ Let the self be uplifted and transformed by the Self.”
Choose a clean and calm place free from any distraction or disturbance.
Preferably your puja room
Sit in a posture you find convenient and comfortable.
The head, shoulders, and the hips must be in a straight line.
Keep the spinal column free & relaxed because all action is along it.
Take a long deep breath and throw it out.
Visualize that you are standing near a holy river- the Ganga
Take a holy dip, purify yourself
Externally and internally
Visualize that there is a Jyothi ,
a brightly lit lamp in front of you. Focus your attention on it.
Pray for illumination
I meditate on the glory of that supreme Self
who created this universe. May he illumine my mind.
We start with the practice of SELF – RELAXATION
With closed eyes, allow your attention to gently move inward.
Inside the body you have an energy field that is intensely alive.
You are going to make a survey of all your body parts — from head to toe and from toe to head.
Go to every body part with your attention to it and become aware of the subtle feeling of energy inside them.
Let the flame you have imagined in front of you merge into your awareness and shine on every body part
Start From The Top Of Your Head.
Your Forehead. Eye Brows. Middle Of The Eye Brows. Eyes. Nose. Nostrils. Cheeks. Ears. Muscles In The Mouth. Jaws. Chin.
All The Parts Of The Face Are In Perfect Condition.
Then The Throat. The Neck.
The right arm:
Shoulder. Elbow. wrist. Hand. Fingers. Tips of the fingers. Fingers. Wrist. Elbow Shoulder. The throat.
The left arm:
Shoulder. Elbow. Wrist. Hand. Fingers. Tips of the fingers. Fingers. Wrist. Elbow. Shoulder. The throat.
Both the hands are in perfect condition.
Then make a survey of your chest inside.
The right lung. The left lung and The heart.
All are in perfect condition. Then go to the diaphragm and inside the abdomen.
The stomach. The small intestine. The large intestine. Colon. Appendix. Spleen. Kidneys. Pancreas. Liver.
All the parts in the abdomen are in perfect condition.
Then the lower abdomen and the legs.
The right leg: Hip. Knee. Ankle. Heel. Sole. Foot. Toes. Tips of the toes. Toes. Foot. Sole. Heel. Ankle. Knee. Hip.
Lower abdomen.
The left leg: hip. Knee. Ankle. Heel. Sole. Foot. Toes. Tips of the toes. Toes. Foot. Sole. Heel. Ankle. Knee. Hip. Lower abdomen.
Both the legs are in perfect state.
Then go to the base of the Spine moving up:
Spinal cord. The base of the brain. The lower part of the brain. Medulla oblongata. The upper part of the brain. Pitutary gland. Pineal gland.
The right side of the brain that controls the left side of the body.
The left side of the brain that controls the right side of the body.
Both the spine and the brain are in perfect state.
In fact, it is the prana that controls both the body and the brain.
Take a deep breath and feel the space within you.
Prana is the controlling and organizing principle.
It links the body to the mind.
Now your mind is calm.
Your breath is smooth.
And your body is still.
Be aware of the calmness of the mind, smoothness of the breath, and the stillness of the body.
Being aware of the calmness of the mind, smoothness of the breath, and the stillness of the body, gently open your eyes.
You are relaxed.
Completely relaxed.
The next stage is Concentration Practice
Now that you are completely relaxed, you can practice concentration.
Look at the jyothi, the bright flame, in front of you.
Turn the mind inward.
Keep it one-pointed, and
Concentrate on the flame.
The mind easily flows outward,
Particularly when it hears or sees or feels something.
So keep it in check.
If you are able to keep your mind one-pointed for 12 seconds, it means that you have done one unit of concentration..
If you are able to keep the mind one-pointed for 12 times 12 seconds, that is 144 seconds, it means you have done one unit of meditation.
Try to keep the mind focused as long as you can. Allow the thoughts to come and go.
Gradually the conscious mind becomes still. Focus on the flame in front of you.
You will hear the seconds ticking from 1 to 144.
In the next stage, you have Meditation on the main Energy Centres — the Chakras. It is self enerzisation practice.
To keep all your faculties at their peak performance levels, you need first to energize, and then draw the energy from, the Seven Main Energy Reserves in your body– the Seven Chakras.
You will be able to do that by concentrating and meditating on them.
These subtle chakras are located within the subtle dimension of the spinal column called Sushumna Nadi.
Becoming aware of them is a way of energizing them
Please close your eyes and begin to visualize.
Visualize within your backbone a whitish translucent channel
It is Sushumna Nadi.
To the left of this nadi is Ida and to the right is
Pingala, the Sun and the Moon currents.
The first Chakra is MOOLADHARA.
At the base of Sushumna nadi is a beautiful lotus with four petals, deep red in colour. This is Mooladhara Chakra. In the centre is a yellow square. There is an inverted triangle within it. A shiva linga is in the triangle, with a lustrous cobra making three and a half rounds around it. This is Kundalini, the embodiment of unbounded power. Let Goddess Kundalini awaken this Chakra. The letter lam in the square is the beejakshara. which is associated with the element Earth. It is characterized by the quality of smell. In the square there is a white elephant. It is Iravata. Indra is seated on it, holding the Vajrayudha in one of his four hands. Brahma with his four faces is seated on a swan. Dakini is the Devi with red eyes and four arms. Mooladhara is connected with Mother Earth and the material world. It stresses the importance of here and now. It helps you to demonstrate self-mastery and high physical energy. It brings health, security and dynamic presence. Meditate on Mooladhara Chakra.
Vissualize the Goddess Kundalini risising upwards. It enters the SWADHISTHANA Chakra and awakens it.
SWADHISTHANA has six orange coloured petals with a white circle in the middle. There is a crescent moon. The letter vam is the beejakshara, which is associated with the element water, characterized by the quality of taste. Varuna is seated on a crocodile. Vishnu is seated on an eagle, bearing in his hands a Shankha, Chakra, Gada and Padma. Rakhini is a dark three-eyed devi. This chakra is associated with nurture, receptivity and emotions. The moon refers to creative energy. It lifts you from mere survival to the pleasure principle – through feeling, desire, sensation and movement. The pleasure principle generates enthusiasm and energy to take on many creative activities concerning family, profession, relationships and social activities. It symbolizes emotional identity, oriented to self-gratification.
Meditate on the SWADHISTHANA Chakra
Then MANIPURA Chakra.
Vissualize the Goddess Kundalini entering and awakening MANIPURA Chakra.
It is a ten-petalled lotus in yellow. In the centre is a red triangle downward-pointed with the beejakshara ram, which is associated with the element fire.characterized by the quality of form and shape, In the red region is Agni with four arms, seated on a ram. Also Rudra, smeared with ashes, is seated on a bull. Lakini is the dark devi, with three faces, wearing a yellow dress. This chakra is known as the power chakra. Focusing on it will bring about the development of your self-esteem. It helps you to create your own unique identity that is based on self-acceptance and self-respect. This is true inner, personal power
Meditate on the MANIPURA Chakra
Then ANAHATA Chakra.
Vissualize the Goddess Kundalini entering and awakening the central ANAHATA Chakra.
This is the central chakra in the seven-fold system. It is a green lotus with twelve petals. A hexagonal region is formed in the centre by an upright and an inverted triangle. There is another inverted triangle within, containing a lustrous linga. In this sacred place yam is the beejakshara, which is associated with the element air, characterized by the quality of touch .Vayu with four arms is seated on an antelope. The attractive figure of Siva is also there displaying abhaya and varada mudra. Devi Kakini is also there
This chakra is related to love. As it comes in the middle, it integrates the opposites like mind and body, male and female, ego and unity, etc. It is a meeting place between spirit descending into the body and body rising to meet the spirit. This chakra is concerned with unconditional love, acceptance and compassion. It helps to develop a deep sense of peace and self-acceptance.
Meditate on the ANAHATA Chakra.
Vissualize the Kundalini rising at the VISHUDDHI Chakra.
It is a blue lotus of sixteen petals with a white circle at the centre symbolizing the moon. Ham is the beejakshara, associated with the element sky, characterized by the quality of sound. A deva by name Ambara is seated on a white elephant. Sadasiva is also there with five faces and ten arms, together with Parvati.
This chakra, located in the throat, is related to communication and creativity. Visuddha means purity in terms of purposeful thought and speech. It is about personal expression combined with responsibility.
Meditate on the VISHUDDHI Chakra.
Then AJNA Chakra.
Goddess Kundalini has now reached AJNA Chakra.
It is a glorious lotus of indigo colour with two large white petals. There is a circle at the centre with an inverted triangle containing a linga. A crescent is above the triangle. Om is the beejakshara. The m of Om is above the crescent in the bindu form. Hakini is the devi with six faces. This chakra is referred to as the Third-Eye Centre. It is related to the act of seeing both physically and intuitively.
It is connected to the higher functions of consciousness. It offers an inner vision or “in-sight”. It opens yourself up to intuitive sight and wisdom.
Meditate on the AJNA Chakra.
Now we see Kundalini entering Sahasrara Chakra.
It is a lotus with very many petals white in colour hanging downward and arranged in multiple layers. At the centre is a full moon, shedding nectarine rays. Inside the circle is a triangle wherein abides Paramasiva. The thousand petals symbolize the highest states of consciousness. Reaching this state is attaining the ultimate goal of fulfillment, enlightenment and self-realisation. This state is described in terms of bliss, rapture, and ecstasy. This happens when goddess Kundalini, having awakened each chakra starting from Mooladhara, reaches and unites with Paramasiva.
Meditate on the Sahasrara.
Let prana the universal
Life Force flow into
My Body Through these
CHAKRAs and fill me with
Energy. .
Om namah shivaaya
Please open your eyes slowly and gently. Slowly and gently open your eyes.
ಮಾರ್ಗದರ್ಶಿತ ಧ್ಯಾನ
ಶ್ರೀ ಗುರುಭ್ಯೋ ನಮಃ ಹರಿಃ ಓಂ.
ಸ್ವಾಧ್ಯಾಯ ಧ್ಯಾನ ಯೋಗ
“ಉದ್ಧರೇತ್ ಆತ್ಮನಾತ್ಮಾನಾಂ”
ಆತ್ಮದಿಂದ ಆತ್ಮವು ಉದ್ಧಾರವಾಗಲಿ ಮತ್ತು ಪರಿವರ್ತನೆ ಹೊಂದಲಿ.
ಯಾವುದೇ ರೀತಿಯ ಅಡಚಡಣೆಗಳಿಂದ ಅಥವಾ ಕ್ಷೋಬೆಗಳಿಂದ ಮುಕ್ತವಾಗಿರುವ ಪರಿಶುದ್ಧವಾದ ಮತ್ತು ಪ್ರಶಾಂತವಾದ ಸ್ಥರವನ್ನು ಆರಿಸಿಕೊಳ್ಳಿ; ಆದಷ್ಟೂ ನಿಮ್ಮ ಪೂಜಾಗೃಹವನ್ನು ಆಯ್ಕೆಮಾಡಿ. ನಿಮಗೆ ಹಿತಕರವಾದ ಮತ್ತು ಸಮುಚಿತವಾದ ಭಂಗಿಯಲ್ಲಿ ಕುಳಿತುಕೊಳ್ಳಿ. ತಲೆ, ಭುಜಗಳು ಮತ್ತು ಸೊಂಟ ನೇರ ರೇಖೆಯಲ್ಲಿರಲಿ. ನಿಮ್ಮ ಬೆನ್ನುಹುರಿಯನ್ನು ಸಡಿಲ ಮತ್ತು ಆರಾಮವಾಗಿರುವಂತೆ ನೋಡಿಕೊಳ್ಳಿ. ಏಕೆಂದರೆ ಎಲ್ಲ ಕ್ರಿಯೆಯೂ ಅದರ ಮೂಲಕವೇ ಆಗುತ್ತದೆ. ಆಳವಾಗಿ ಉಸಿರನ್ನು ಒಳಗೆಳೆದುಕೊಳ್ಳಿ ಮತ್ತು ಅದನ್ನು ಹೊರಗೆ ಬಿಡಿ. ನೀವು ಪವಿತ್ರವಾದ ಗಂಗಾ ನದಿಯ ಬಳಿ ನಿಂತಿರುವಂತೆ ಕಲ್ಪಿಸಿಕೊಳ್ಳಿ. ನದಿಯಲ್ಲಿ ಮುಳುಗಿ ನಿಮ್ಮನ್ನು ನೀವು ಒಳಗೂ ಮತ್ತು ಹೊರಗೂ ಶುಚಿಗೊಳಿಸಿಕೊಳ್ಳಿ. ನಿಮ್ಮ ಮುಂದೆ ಪ್ರಖರ ಬೆಳಕನ್ನು ಹೊರಸೂಸುವ ಒಂದು ಜ್ಯೋತಿ ಇರುವಂತೆ ಕಲ್ಪಿಸಿಕೊಌ. ನಿಮ್ಮ ಗಮನವನ್ನು ಅದರ ಮೇಲೆ ಕೇಂದ್ರೀಕರಿಸಿ. ಬೆಳಕಿಗಾಗಿ ಪ್ರಾರ್ಥಿಸಿ. ಈ ಜಗತ್ತನ್ನು ಸೃಷ್ಟಿಸಿದ ಆ ಪರಮಾತ್ಮನ ಭವ್ಯತೆಯನ್ನು ಕುರಿತು ನಾನು ಧ್ಯಾನಿಸುತ್ತೇನೆ. ಆತನು ನನ್ನ ಮನಸ್ಸಿನ ಮೇಲೆ ಬೆಳಕು ಚಲ್ಲಲಿ.
ಸ್ವಯಂ – ವಿಶ್ರಾಂತಿಯ ಅಭ್ಯಾಸದಿಂದ ನಾವು ಶುರುಮಾಡೋಣ.
ಕಣ್ಣುಗಳನ್ನು ಮುಚ್ಚಿಕೊಂಡು ನಿಮ್ಮ ಗಮನವನ್ನು ಸಾವಕಾಶವಾಗಿ ಒಳಮುಖವಾಗಿಸಿಕೊಳ್ಳಿ.
ನಿಮ್ಮ ಶರೀರದ ಒಳಗೆ ಗಾಢವಾಗಿ ಜೀವಂತವಾಗಿರುವ ಶಕ್ತಿಕ್ಷೇತ್ರವನ್ನು ಹೊಂದುವಿರಿ.
ತಲೆಯಿಂದ ಕಾಲ ಬೆರಳಿನವರೆಗೂ ಮತ್ತು ಕಾಲಬೆರಳಿನಿಂದ ತಲೆಯವರೆಗೂ ನಿಮ್ಮ ಶರೀರದ ಎಲ್ಲ ಭಾಗಗಳ ಮೇಲೂ ದೃಷ್ಟಿ ಹರಿಸಿ.
ಶರೀರದ ಪ್ರತಿಯೊಂದು ಭಾಗಕ್ಕೂ ತೆರಳಿ, ನಿಮ್ಮ ಗಮನವನ್ನು ಅದರ ಮೇಲಿಟ್ಟು, ಆ ಭಾಗಗಳಲ್ಲಿರುವ ಶಕ್ತಿಯ ಮಾರ್ಮಿಕ ಅನುಭವದ ಅರಿವನ್ನು ಹೊಂದಿರಿ.
ನಿಮ್ಮ ಮುಂದೆ ಇದೆಯೆಂದು ನೀವು ಭಾವಿಸಿರುವ ಜ್ಯೋತಿಯು ನಿಮ್ಮ ಅರಿವಿನೊಂದಿಗೆ ಬೆರೆತು, ಶರೀರದ ಪ್ರತಿ ಭಾಗದ ಮೇಲೂ ಪ್ರಕಾಶಿಸಲು ಅನುವು ಮಾಡಿಕೊಡಿ.
ನಿಮ್ಮ ತಲೆಯ ಮೇಲ್ಭಾಗದಿಂದ ಪ್ರಾರಂಭಿಸಿ.
ನಿಮ್ಮ ಹಣೆ, ಹುಬ್ಬುಗಳು, ಹುಬ್ಬುಗಳ ಮಧ್ಯಭಾಗ, ಕಣ್ಣುಗಳು, ಮೂಗು, ಮೂಗಿನ ಹೊಳ್ಳೆಗಳು, ಕೆನ್ನೆಗಳು, ಕಿವಿಗಳು, ಬಾಯಿಯೊಳಗಿನ ಮಾಂಸಖಂಡಗಳು, ದವಡೆ, ಗಲ್ಲ.
ಮುಖದಲ್ಲಿರುವ ಎಲ್ಲ ಭಾಗಗಳೂ ಸುಸ್ಥಿತಿಯಲ್ಲಿವೆ.
ನಂತರ ಗಂಟಲು, ಕೊರಳು.
ಬಲಗೈ;
ಭುಜ, ಮೊಣಕೈ, ಮಣಿಕಟ್ಟು, ಅಂಗೈ, ಬೆರಳುಗಳು, ಬೆರಳ ತುದಿಗಳು, ಬೆರಳುಗಳು, ಅಂಗೈ, ಮಣಿಕಟ್ಟು, ಮೊಣಕೈ, ಭುಜ, ಕೊರಳು.
ಎರಡು ಕೈಗಳೂ ಸುಸ್ಥಿತಿಯಲ್ಲಿವೆ.
ನಂತರ ನಿಮ್ಮ ಎದಯ ಒಳಭಾಗದ ಪರಿಶೀಲನೆ ಮಾಡಿ.
ಬಲ ಶ್ವಾಸಕೋಶ, ಎಡ ಶ್ವಾಸಕೋಶ ಮತ್ತು ಹೃದಯ.
ಎಲ್ಲವೂ ಸುಸ್ಥಿತಿಯಲ್ಲಿವೆ. ಆಮೇಲೆ ವಪೆಯತ್ತ ತೆರಳಿ ಮತ್ತೆ ಅಲ್ಲಿಂದ ಹೊಟ್ಟೆಯ ಒಳಭಾಗವನ್ನು ಪ್ರವೇಶಿಸಿ.
ಉದರ, ಸಣ್ಣ ಕರುಳು, ದೊಡ್ಡ ಕರುಳು, ದೊಡ್ಡಕರುಳಿನ ಭಾಗ, ಕರುಳಿನ ಬಾಲ, ಪ್ಲೀಹ ಅಥವಾ ಗುಲ್ಮ, ಮೂತ್ರ ಪಿಂಡಗಳು, ಮೇದೋಜ್ಜೀರಕ ಗ್ರಂಥಿ, ಪಿತ್ತಜನಕಾಂಗ ಅಥವಾ ಯಕೃತ್ತು.
ಉದರ ಪ್ರದೇಶದ ಎಲ್ಲ ಭಾಗಗಳೂ ಸುಸ್ಥಿತಿಯಲ್ಲಿವೆ.
ನಂತರ ಕಿಬ್ಬೊಟ್ಟೆ ಮತ್ತು ಕಾಲುಗಳು.
ಬಲಗಾಲು; ಪುಷ್ಠ, ಮೊಣಕಾಲು, ಪಾದದ ಕೀಲು, ಹಿಮ್ಮಡಿ, ಅಂಗಾಲು, ಪಾದ, ಕಾಲಿನ ಬೆರಳುಗಳು, ಕಾಲಿನ ಬೆರಳುಗಳ ತುದಿಗಳು, ಕಾಲಿನಬೆರಳುಗಳು, ಪಾದ, ಅಂಗಾಲು, ಹಿಮ್ಮಡಿ, ಪಾದದ ಕೀಲು, ಮೊಣಕಾಲು,ಪುಷ್ಠ.
ಕಿಬ್ಬೊಟ್ಟೆ
ಎಡಗಾಲು; ಪುಷ್ಠ, ಮೊಣಕಾಲು, ಪಾದದ ಕೀಲು, ಹಿಮ್ಮಡಿ, ಅಂಗಾಲು, ಪಾದ, ಕಾಲಿನ ಬೆರಳುಗಳು, ಕಾಲಿನ ಬೆರಳುಗಳ ತುದಿಗಳು, ಕಾಲಿನ ಬೆರಳುಗಳು, ಪಾದ , ಅಂಗಾಲು, ಹಿಮ್ಮಡಿ, ಪಾದದ ಕೀಲು, ಮೊಣಕಾಲು, ಪುಷ್ಠ, ಕಿಬ್ಬೊಟ್ಟೆ.
ಎರಡು ಕಾಲುಗಳೂ ಸುಸ್ಥಿತಿಯಲ್ಲಿವೆ.
ನಂತರ ಬೆನ್ನು ಹುರಿಯ ಕೆಳಭಾಗಕ್ಕೆ ಹೋಗಿ ಅಲ್ಲಿಂದ ಮೇಲೇರಿ ಬನ್ನಿ.
ಬೆನ್ನುಹುರಿ, ಮೆದುಳಿನ ತಳ, ಮೆದುಳಿನ ಕೆಳ ಸ್ತರದ ಭಾಗ, ಕಶೇರು ರಜ್ಜುವಿನ ಮೂಲ, ಮೆದುಳಿನ ಮೇಲಿನ ಸ್ಥರದ ಭಾಗ, ಪಿಟ್ಯುಟರಿ(ಕಫಸ್ರಾವಕ) ಗ್ರಂಥಿ, ಮಿನಿಯಲ್(ಪೈನಿಯಲ್) ಗ್ರಂಥಿ, ಶರೀರದ ಎಡಭಾಗವನ್ನು ನಿಯಂತ್ರಿಸುವ ಮೆದುಳಿನ ಬಲಭಾಗ, ಶರೀರದ ಬಲ ಭಾಗವನ್ನು ನಿಯಂತ್ರಿಸುವ ಮೆದುಳಿನ ಎಡಭಾಗ, ಬೆನ್ನುಹುರಿ ಮತ್ತು ಮೆದುಳು ಸುಸ್ಥಿತಿಯಲ್ಲಿವೆ.
ಸರಿಯಾಗಿ ಹೇಳಬೇಕೆಂದರೆ ಶರೀರ ಮತ್ತು ಮೆದುಳನ್ನು ನಿಯಂತ್ರಿಸುವುದು ಪ್ರಾಣವೇ ಆಗಿದೆ.
ಆಳವಾಗಿ ಉಸಿರನ್ನೆಳೆದುಕೊಳ್ಳಿ ಮತ್ತು ನಿಮ್ಮೊಳಗಿನ ಪ್ರದೇಶದ ಅನುಭವವನ್ನು ಪಡೆಯಿರಿ.
ಪ್ರಾಣವೇ ನಿಯಂತ್ರಣ ಮಾಡುವ ಮತ್ತು ವ್ಯವಸ್ಥಿತವಾಗಿರಿಸುವ ಮೂಲತತ್ವ.
ಪ್ರಾಣವು ಶರೀರವನ್ನು ಮನಸ್ಸಿನೊಂದಿಗೆ ಜೋಡಿಸುತ್ತದೆ.
ಈಗ ನಿಮ್ಮ ಮನಸ್ಸು ಪ್ರಶಾಂತವಾಗಿದೆ.
ನಿಮ್ಮ ಉಸಿರು ಸರಾಗವಾಗಿದೆ.
ನಿಮ್ಮ ಶರೀರವು ಆಚಲವಾಗಿದೆ.
ಮನಸ್ಸಿನ ಪ್ರಶಾಂತತೆಯ ಬಗ್ಗೆ, ಉಸಿರಿನ ಸರಾಗತೆಯ ಬಗ್ಗೆ ಮತ್ತು ಶರೀರದ ಆಚಲತೆಯ ಬಗ್ಗೆ ಅರಿವನ್ನು ಹೊಂದಿ.
ಮನಸ್ಸಿನ ಪ್ರಶಾಂತದ ಬಗ್ಗೆ, ಉಸಿರಿನ ಸರಾಗತೆಯ ಬಗ್ಗೆ ಮತ್ತು ಶರೀರದ ಆಚಲತೆಯ ಬಗ್ಗೆ ಅರಿವುಂಟಾಗುತ್ತಿದ್ದಂತೆ
ಸಾವಕಾಶವಾಗಿ ನಿಮ್ಮ ಕಣ್ಣುಗಳನ್ನು ತೆರೆಯಿರಿ.
ನೀವೀಗ ಆರಾಮಾಗಿರುವಿರಿ. ಸಂಪೂರ್ಣವಾಗಿ ವಿರಮಿಸಿರುವಿರಿ.
ಮುಂದಿನ ಹಂತವೇ ಏಕಾಗ್ರತೆಯ ಅಭ್ಯಾಸ.
ನೀವು ಈಗ ಸಂಪೂರ್ಣವಾಗಿ ವಿಶ್ರಮಿಸಿರುವುದರಿಂದ, ಚಿತ್ತೈಕೇಗ್ರತೆಯನ್ನು ಅಭ್ಯಾಸ ಮಾಡಬಹುದಾಗಿದೆ.
ಜ್ಯೋತಿಯನ್ನು, ನಿಮ್ಮ ಮುಂದಿರುವ ಪ್ರಖರ ಜ್ವಾಲೆಯನ್ನು, ದಿಟ್ಟಿಸಿ ನೋಡಿ.
ನಿಮ್ಮ ಮನಸ್ಸನ್ನು ಒಳಮುಖವಾಗಿಸಿಕೊಳ್ಳಿ.
ಅದನ್ನು ಏಕ ಬಿಂದುವಿನ ಮೇಲೆ ಹಿಡಿದಿಡಿ ಮತ್ತು ಜ್ಯೋತಿಯ ಮೇಲೆ ನಿಮ್ಮ ಚಿತ್ತವನ್ನು ಕೇಂದ್ರೀಕರಿಸಿ.
ಆದರೆ ಚಂಚಲವಾದ ಮನಸ್ಸು ಸುಲಭವಾಗಿ ಬಹಿರ್ಮುಖವಾಗುತ್ತದೆ.
ವಿಶೇಷವಾಗಿ ಅದು ಏನನ್ನಾದರೂ ಕೇಳಿಸಿಕೊಂಡಾಗ ಅಥವಾ ನೋಡಿದಾಗ ಅಥವಾ ಸ್ಪರ್ಷಿಸಿದಾಗ.
ಹಾಗಾಗಿ ಅದನ್ನು ನಿಗ್ರಹಿಸಿ.
ನೀವು ನಿಮ್ಮ ಮನಸ್ಸನ್ನು 12 ಸೆಕೆಂಡುಗಳ ಕಾಲ ಏಕ ಬಿಂದುವಿನ ಮೇಲೆ ಕೇಂದ್ರೀಕರಿಸಿದರೆ, ಆಗ ನೀವು ಒಂದು ಪ್ರಮಾಣದಷ್ಟು ಚಿತ್ತೈಕಾಗ್ರತೆಯನ್ನು ಗಳಿಸಿದ್ದೀರಿ…..
ನೀವು ನಿಮ್ಮ ಮನಸ್ಸನ್ನು ಏಕ ಬಿಂದುವಿನ ಮೇಲೆ 12 ಸಲ 12 ಸೆಕೆಂಡುಗಳಷ್ಟು ಕಾಲ ಅಂದರೆ 144 ಸೆಕೆಂಡುಗಳ ಕಾಲ ಕೇಂದ್ರೀಕರಿಸಿದರೆ, ನೀವು ಒಂದು ಪ್ರಮಾಣದಷ್ಟು ಧ್ಯಾನವನ್ನು ಪೂರ್ಣಗೊಳಿಸಿರುವಿರಿ ಎಂದು ಅರ್ಥ.
ನಿಮ್ಮ ಕೈಲಾದಷ್ಟು ಹೊತ್ತು ನಿಮ್ಮ ಮನಸ್ಸನ್ನು ಏಕಾಗ್ರಗೊಳಿಸಲು ಪ್ರಯತ್ನಿಸಿ. ವಿಚಾರಗಳು, ಭಾವನೆಗಳು ಬಂದು ಹೋಗುತ್ತಿರಲು ಬಿಟ್ಟುಬಿಡಿ.
ಕ್ರಮೇಣ ಜಾಗೃತ ಮನಸ್ಸು ಶಾಂತವಾಗುತ್ತದೆ. ನಿಮ್ಮ ಮುಂದಿರುವ ಜ್ಯೋತಿಯ ಮೇಲೆ ಏಕಾಗ್ರ ದೃಷ್ಟಿ ಇರಲಿ.
1 ರಿಂದ 144 ಸೆಕೆಂಡುಗಳ ಟಿಕ್ ಟಿಕ್ ಶಬ್ದವನ್ನು ನೀವು ಕೇಳುವಿರಿ.
2
ಇದಲ್ಲದೆ ಇನ್ನೊಂದು ಹಂತವಿದೆ. ಅಲ್ಲಿ ಮುಖ್ಯವಾದ ಶಕ್ತಿ ಕೇಂದ್ರಗಳ(ಚಕ್ರಗಳ) ಮೇಲೆ ನೀವು ಧ್ಯಾನಿಸಬೇಕು. ಇದು ಆತ್ಮವನ್ನು ಸಚೇತನಗೊಳಿಸುವ ಆಚರಣೆಯಾಗಿದೆ.
ನಿಮ್ಮ ಶಾರೀರಿಕ ಸಾಮರ್ಥ್ಯವನ್ನು ಉನ್ನತ ಮಟ್ಟದ ನಿರ್ವಹಣೆಯಲ್ಲಿರಿಸಿಕೊಳ್ಳಬೇಕೆಂದರೆ, ನೀವು ಮೊದಲಿಗೆ ನಿಮ್ಮ ದೇಹದಲ್ಲಿನ ಏಳು ಮುಖ್ಯ ಶಕ್ತಿ ಭಂಡಾರಗಳಾದ ಏಳು ಚಕ್ರಗಳನ್ನು ಮೊದಲು ಸಚೇತನಗೊಳಿಸಿ ನಂತರ ಅವುಗಳಿಂದ ಶಕ್ತಿಯನ್ನು ಸೆಳೆದುಕೊಳ್ಳಬೇಕು.
ಅವುಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದರಿಂದಲೂ, ಅವುಗಳನ್ನು ಕುರಿತು ಧ್ಯಾನ ಮಾಡುವುದರಿಂದಲೂ ನೀವು ಅದನ್ನು ಸಾಧಿಸಬಲ್ಲಿರಿ.
ಸುಷುಮ್ನಾ ನಾಡಿ ಎಂದು ಕರೆಯಲ್ಪಡುವ ಬೆನ್ನು ಹುರಿಯ ಸೂಕ್ಷ್ಮ ಆಯಾಮದ ಒಳಗೆ ಈ ಮಾರ್ಮಿಕ ಚಕ್ರಗಳು ನೆಲೆಗೊಂಡಿವೆ. ಅವುಗಳ ಅರಿವನ್ನು ಹೊಂದುವುದೇ ಅವುಗಳನ್ನು ಉತ್ತೇಜನಗೊಳಿಸುವ ಒಂದು ವಿಧಾನ.
ದಯವಿಟ್ಟು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಅವುಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಪ್ರಾರಂಭಿಸಿ.
ನಿಮ್ಮ ಬೆನ್ನೆಲುಬಿನ ಒಳಗೆ ಒಂದು ವಿಧದ ಬಿಳಿಯ ಪಾರದರ್ಶಕವಾದ ಕಾಲುವೆಯನ್ನು ಕಲ್ಪಿಸಿಕೊಳ್ಳಿ.
ಅದೇ ಸುಷುಮ್ನಾ ನಾಡಿ.
ಅದರ ಎಡಕ್ಕಿರುವುದು ಇಡಾ ನಾಡಿ ಮತ್ತು ಅದರ ಬಲಕ್ಕಿರುವುದು ಪಿಂಗಳ ನಾಡಿ, ಸೂರ್ಯ ಮತ್ತು ಚಂದ್ರನ ಹರಿವುಗಳು.
ಮೂಲಾಧಾರವು ಮೊದಲ ಚಕ್ರ.
ಸುಷುಮ್ನಾ ನಾಡಿಯ ತಳಭಾಗದಲ್ಲಿ ಕಡು ಕೆಂಪು ಬಣ್ಣದ, ನಾಲ್ಕು ದಳಗಳುಳ್ಳ ಸುಂದರ ಕಮಲದಂತಿರುವುದೇ ಮೂಲಾಧಾರ ಚಕ್ರ. ಅದರ ಮಧ್ಯದಲ್ಲಿ ಹಳದಿ ಬಣ್ಣದ ಚೌಕವಿರುತ್ತದೆ. ಅದರೊಳಗೆ ಬುಡಮೇಲಾದ ತ್ರಿಕೋನ್ ಅಡಕವಾಗಿರುತ್ತದೆ. ಆ ತ್ರಿಕೋನದೊಳಗೆ ಹೊಳೆಯುವ ಒಂದು ನಾಗರಹಾವು ಮೂರೂವರೆ ಸುತ್ತುಗಳಿಂದ ಆ ಶಿವಲಿಂಗವನ್ನು ಸುತ್ತಿಕೊಂಡಿರುತ್ತದೆ. ಅಪರಿಮಿತ ಶಕ್ತಿಯ ಅಪರಾವತಾರವೇ ಈ “ಕುಂಡಲಿನಿ”. ಈ ಚಕ್ರವನ್ನು ದೇವಿ ಕುಂಡಲಿನಿಯು ಜಾಗೃತಗೊಳಿಸಲಿ. ಆ ಚೌಕದಲ್ಲಿರುವ “ಲಂ” ಅಕ್ಷರವು ಇದರ ಬೀಜಾಕ್ಷರ. ಈ ಅಕ್ಷರವು ಭೂಮಿಯೊಂದಿಗೆ ಸಂಯೋಜನೆ ಹೊಂದಿದೆ. ವಾಸನೆಯ ಗುಣದಿಂದ ಇದು ಗುರುತಿಸಲ್ಪಡುತ್ತದೆ. ಆ ಚೌಕದ ಒಳಗೆ ಒಂದು ಬಿಳಿಯ ಆನೆಯಿದೆ. ಅದೇ “ಐರಾವತ”. ಅದರ ಮೇಲೆ ತನ್ನ ನಾಲ್ಕು ಕೈಗಳಲ್ಲಿನ ಒಂದರಲ್ಲಿ ವಜ್ರಾಯುಧವನ್ನು ಹಿಡಿದಿರುವ ಇಂದ್ರನು ಆಸೀನನಾಗಿದ್ದಾನೆ. ಒಂದು ಹಂಸದ ಮೇಲೆ ಚತುರ್ಮುಖ ಬ್ರಹ್ಮನು ಕುಳಿತಿದ್ದಾನೆ. ಕೆಂಪು ಕಣ್ಣುಗಳು ಮತ್ತು ನಾಲ್ಕು ಕೈಗಳನ್ನುಳ್ಳ ಡಾಕಿನಿಯು ಅಲ್ಲಿರುವ ದೇವಿ. ಇಹಲೋಕದೊಂದಿಗೆ ಮತ್ತು ಭೂತಾಯಿಯೊಂದಿಗೆ ಮೂಲಾಧಾರವು ಸಂಬಂಧ ಹೊಂದಿದೆ. ಈಗಿನ ಮತ್ತು ಇಲ್ಲಿನ ಪ್ರಾಮುಖ್ಯತೆಯನ್ನು ಅದು ಒತ್ತಿ ಹೇಳುತ್ತದೆ. ಉನ್ನತವಾದ ದೈಹಿಕ ಮತ್ತು ಸ್ವಯಂ ನೈಪುಣ್ಯತೆಯನ್ನು ನಿರೂಪಿಸಲು ಇದು ಸಹಕಾರಿಯಾಗುತ್ತದೆ. ಇದು ಆರೋಗ್ಯ, ಭದ್ರತೆ ಮತ್ತು ಕ್ರಿಯಾಶೀಲತೆಯನ್ನು ತಂದುಕೊಡುತ್ತದೆ. ಮೂಲಾಧಾರ ಚಕ್ರವನ್ನು ಕುರಿತು ಧ್ಯಾನಮಾಡಿ.
ಕುಂಡಲಿನಿ ದೇವಿಯು ಮೇಲ್ಮುಖವಾಗಿ ಏರುವುದನ್ನು ಕಲ್ಪಿಸಿಕೊಳ್ಳಿ.
ಇದು ಸ್ವಾಧಿಷ್ಠಾನ ಚಕ್ರವನ್ನು ಹೊಕ್ಕು ಅದನ್ನು ಎಚ್ಚರಗೊಳಿಸುತ್ತದೆ.
ಸ್ವಾಧಿಷ್ಟಾನವು ಕಿತ್ತಳೆ ಬಣ್ಣದ ಆರು ದಳಗಳನ್ನು ಹೊಂದಿದ್ದು ಮಧ್ಯದಲ್ಲಿ ಬಿಳಿಯ ಚಕ್ರವನ್ನೊಳಗೊಂಡಿದೆ. ಇಲ್ಲಿ ಅರ್ಧ ಚಂದ್ರಾಕೃತಿ ಇದೆ
ಈ ಚಕ್ರದ ಬೀಜಾಕ್ಷರವು “ವಂ”. ಇದು ಗುಣಮಟ್ಟದ ರುಚಿಯ ಗುಣಲಕ್ಷಣಗಳುಳ್ಳ ನೀರಿನೊಂದಿಗೆ ಸಹಯೋಗ ಹೊಂದಿದೆ. “ ವರುಣ” ನು ಮೊಸಳೆಯ ಮೇಲೆ ಕುಳಿತಿದ್ದಾನೆ. ತನ್ನ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ಹಿಡಿದಿರುವ ವಿಷ್?ಣುವು ಗರುಡನ ಮೇಲೆ ಕುಳಿತಿದ್ದಾನೆ. “ರಾಖಿಣಿ” ಮೂರು ಕಣ್ಣುಗಳುಳ್ಳ ಶ್ಯಾಮಲ ವರ್ಣದ ದೇವಿ. ಸ್ವಾಧಿಷ್ಠಾನ ಚಕ್ರವು ಗ್ರಹಿಕೆ, ಭಾವನೆ ಮತ್ತು ಪಾಲನೆಗಳ ಜತೆ ಸಂಯೋಜಿಸಲ್ಪಟ್ಟಿದೆ. ಚಂದ್ರನು ಸೃಜನಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತಾನೆ.
ಇದು ಬರಿಯ ಬರಡು ಬದುಕಿನಿಂದ, ಸಂವೇದನೆ, ಆಕಾಂಕ್ಷೆ, ಇಂದ್ರಿಯಜ್ಞಾನ ಮತ್ತು ಚಲನೆ ಎಂಬ ಸುಖತತ್ವಗಳೆಡೆಗೆ ನಿಮ್ಮನ್ನು ಕೊಂಡೊಯ್ಯುತ್ತದೆ.
ಸಂಸಾರ, ಉದ್ಯೋಗ, ಸಂಬಂಧಗಳು ಮತ್ತು ಸಾಮಾಜಿಕ ಚಟುವಟಿಕೆಗಳು ಇವುಗಳಿಗೆ ಸಂಬಂಧಿಸಿದ ಬಹಳಷ್ಟು ಸೃಜನಾತ್ಮಕ ಚಟುವಟಿಕೆಗಳಿಗೆ ಬೇಕಾದ ಶಕ್ತಿ ಮತ್ತು ಉತ್ಸಾಹವನ್ನು ಈ ಸುಖ ತತ್ವಗಳು ಉಂಟುಮಾಡುತ್ತವೆ. ಇದು ಆತ್ಮ ತೃಪ್ತಿಯೆಡೆಗೆ ದಿಕ್ಸೂಚಿಯಾದ, ಭಾವನಾತ್ಮಕ ವ್ಯಕ್ತಿತ್ವವನ್ನು ಸಂಕೇತಿಸುತ್ತದೆ.
ಸ್ವಾಧಿಷ್ಠಾನ ಚಕ್ರದ ಮೇಲೆ ಧ್ಯಾನವನ್ನು ಮಾಡಿ
ನಂತರ “ ಮಣಿಪುರ ಚಕ್ರ”.
ದೇವಿ ಕುಂಡಲಿನಿಯು “ ಮಣಿಪುರ ಚಕ್ರ”ವನ್ನು ಪ್ರವೇಶಿಸಿ ಅದನ್ನು ಎಚ್ಚರಗೊಳಿಸುವುದನ್ನು ಚಿತ್ರಿಸಿಕೊಌ.
ಹಳದಿ ಬಣ್ನದ, ಹತ್ತು ದಳಗಳುಳ್ಳ ಕಮಲವು ಇದು.
ಆಕಾರ ಮತ್ತು ಸ್ವರೂಪಗಳ ಶೇಷ್ಠತೆಯನ್ನು ಗುಣಲ್ಕ್ಷಣವನ್ನಾಗಿ ಹೊಂದಿದ, ಅಗ್ನಿಯ ತತ್ವದ ಸಹಯೋಗದಿಂದೊಡಗೂಡಿದ, “ರಂ” ಎಂಬ ಅಕ್ಷರವನ್ನುಳ್ಳ, ಕೆಳಮುಖವಾಗಿರುವ ಕೆಂಪು ತ್ರಿಕೋನವು ಅದರ ಮಧ್ಯಭಾಗದಲ್ಲಿದೆ. “ ರಂ” ಅಕ್ಷರದ ಮೇಲೆ ಕುಳಿತಿರುವ, ನಾಲ್ಕು ಕೈಗಳುಳ್ಳ ಅಗ್ನಿದೇವನು ಆ ಕೆಂಪುಪ್ರದೇಶದಲ್ಲಿದ್ದಾನೆ. ಅಲ್ಲದೆ ವಿಭೂತಿಯನ್ನು ಪೂಚಿಕೊಂಡಿರುವ ರುದ್ರನು ಸಹ ನಂದಿಯ ಮೇಲೆ ಆಸೀನನಾಗಿದ್ದಾನೆ. ಹಳದಿ ವಸ್ತ್ರವನ್ನು ಧರಿಸಿರುವ, ಮೂರು ಮುಖಗಳುಳ್ಳ, ಶ್ಯಾಮಲ ವರ್ಣದ ದೇವಿಯ ಹೆಸರು “ಲಾಖಿನಿ”. ಇದು ಶಕ್ತಿ ಚಕ್ರ ಎಂದು ಹೆಸರುವಾಸಿಯಾಗಿದೆ. ಇದರ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದರಿಂದ ನಿಮ್ಮ ಆತ್ಮಸ್ಥೈರ್ಯವು ವಿಕಸನ ಹೊಂದುತ್ತದೆ. ಆತ್ಮಾಂಗೀಕಾರ ಮತ್ತು ಆತ್ಮ ಗೌರವದ ಮೇಲೆ ಆಧಾರಪಟ್ಟಿರುವ ನಿಮ್ಮದೇ ಆದ ಅದ್ವಿತೀಯ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಇದು ಸಹಾಯ ಮಾಡುತ್ತದೆ. ಇದು ನಿಜವಾದ ವೈಯಕ್ತಿಕ ಆತ್ಮಶಕ್ತಿ.
ಮಣಿಪುರ ಚಕ್ ಮೇಲೆ ಧ್ಯಾನವನ್ನು ಮಾಡಿ.
ನಂತ “ಅನಾಹತ ಚಕ್ರ”.
ದೇವಿ ಕುಂಡಲಿನಿಯು “ಅನಾಹತ ಚಕ್ರ”ವನ್ನು ಪ್ರವೇಶಿಸಿ ಅದನ್ನು ಎಚ್ಚರಗೊಳಿಸುವುದನ್ನು ಚಿತ್ರಿಸಿಕೊಳ್ಳಿ.
ಏಳು ಪದರಗಳ ಸರಣ್ಯಲ್ಲಿ ಇದು ಮಧ್ಯದಲ್ಲಿನ ಚಕ್ರ. ಹನ್ನೆರಡು ದಳಗಳನ್ನುಳ್ಳ ಹಸಿರು ಬಣ್ಣದ ಕಮಲವು ಇದು. ತಲೆಕೆಳಗಾಗಿರುವ ಮತ್ತು ಸರಳವಾದ ತ್ರಿಕೋನದ ಮಧ್ಯದಲ್ಲಿ ಷಡ್ ಭುಜಾಕೃತಿಯ ಪ್ರದೇಶವು ಏರ್ಪಟ್ಟಿರುತ್ತದೆ. ಅಲ್ಲಿ ಹೊಳೆಯುವ ಲಿಂಗವುಳ್ಳ ಮತ್ತೊಂದು ತಲೆಕೆಳಗಾದ ತ್ರಿಕೋನವಿದೆ. ಸ್ಪರ್ಶದ ಗುಣಲಕ್ಷಣಗಳುಳ್ಳ ವಾಯುವಿನ ಸಹಯೋಗವನ್ನು ಹೊಂದಿರುವ”ಯಂ” ಎಂಬ ಬೀಜಾಕ್ಷರವು ಈ ಪವಿತ್ರ ಸ್ಥಳದಲ್ಲಿದೆ. ನಾಲ್ಕು ಕೈಗಳುಳ್ಳ ವಾಯುದೇವನು ಜಿಂಕೆಯ ಮೇಲೆ ಆಸೀನನಾಗಿದ್ದಾನೆ. ಅಭಯ ಮತ್ತು ವರದ ಮುದ್ರೆಗಳನ್ನು ಪ್ರದರ್ಶಿಸುತ್ತಿರುವ ಶಿವನ ಆಕರ್ಶಕ ಆಕೃತಿಯೂ ಸಹ ಅಲ್ಲಿದೆ. ದೇವಿ ಕಾಕಿಣಿಯೂ ಸಹಾ ಅಲ್ಲಿದ್ದಾಳೆ.
ಈ ಚಕ್ರವು ಪ್ರೀತಿಗೆ ಸಂಬಂಧಿಸಿದೆ. ಇದು ಮಧ್ಯದಲ್ಲಿ ಸ್ಥಿತವಾಗಿರುವುದರಿಂದ ಮನಸ್ಸು ಮತ್ತು ದೇಹ, ಗಂಡು ಮತ್ತು ಹೆಣ್ನು, ಅಹಂ ಮತ್ತು ಐಕ್ಯತೆ, ಹೀಗೆ ವೈರುಧ್ಯಗಳನ್ನು ಒಗ್ಗೂಡಿಸುತ್ತದೆ. ದೇಹದೊಳಗೆ ಇಳಿಯುತ್ತಿರುವ ಆತ್ಮ ಮತ್ತು ಆತ್ಮವನ್ನು ಸೇರಲು ಮೇಲೇರುತ್ತಿರುವ ದೇಹ ಇವುಗಳ ಸಮಾಗಮದ ಸ್ಥಾನ ಇದು. ಅನುಕಂಪ, ಅಂಗೀಕಾರ ಮತ್ತು ಷರತ್ತುರಹಿತ ಪ್ರೀತಿಯ ಬಗ್ಗೆ ಈ ಚಕ್ರವು ವಿಶೇಷ ಕಾಳಜಿ ಹೊಂದಿದೆ. ಆತ್ಮಾನುಭೂತಿ ಮತ್ತು ಆಳವಾದ ನೆಮ್ಮದಿಯ ಅರಿವನ್ನು ಬೆಳೆಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಅನಾಹತ ಚಕ್ರದ ಮೇಲೆ ಧ್ಯಾನವನ್ನು ಮಾಡಿ.
3
ಕುಂಡಲಿನಿಯು, ವಿಶುದ್ಧಿ ಚಕ್ರದತ್ತ ಮೇಲೇರುವುದನ್ನು ಚಿತ್ರಿಸಿಕೊಳ್ಳಿ.
ಚಂದ್ರನನ್ನು ಪ್ರತಿನಿಧಿಸುವ, ಬಿಳಿಯ ಚಕ್ರವನ್ನು ಮದ್ಯದಲ್ಲಿ ಹೊಂದಿರುವ, ಹದಿನಾರು ದಳಗಳ ನೀಲವರ್ಣದ ಕಮಲ ಇದು. ಶಬ್ದದ ಗುಣಲಕ್ಷಣಗಳುಳ್ಳ, ಆಕಾಶದ ಸಹಯೋಗವನ್ನು ಹೊಂದಿರುವ ಈ ಚಕ್ರಕ್ಕೆ “ಹಂ” ಎಂಬುದು ಬೀಜಾಕ್ಷರ. “ಅಂಬರ” ಎಂಬ ದೇವನು ಒಂದು ಬಿಳಿ ಆನೆಯ ಮೇಲೆ ಕುಳಿತಿದ್ದಾನೆ. “ಪಾರ್ವತಿ” ಯೊಂದಿಗೆ, ಪಂಚ ಮುಖಗಳ ಮತ್ತು ಹತ್ತು ಕೈಗಳ “ಸದಾಶಿವ”ನೂ ಅಲ್ಲಿರುವನು.
ಕಂಠದಲ್ಲಿ ಸ್ಥಿತವಾಗಿರುವ ಈ ಚಕ್ರವು ಸಂವಹನ ಮತ್ತು ಸೃಜನಶೀಲತೆಗೆ ಚಿಂತನೆ ಮತ್ತು ಮಾತಿನ ಶುದ್ಧತೆ. ಇದು ಜವಾಬ್ದಾರಿಯಿಂದ ಒಡಗೂಡಿದ ವ್ಯಕ್ತಿಗತ ಅಭಿವ್ಯಕ್ತಿಗೆ ಸಂಬಂಧ ಪಟ್ಟಿದೆ.
ವಿಶುದ್ಧಿ ಚಕ್ರದ ಮೇಲೆ ಧ್ಯಾನವನ್ನು ಮಾಡಿ.
ನಂತರ “ಆಜ್ಞಾ ಚಕ್ರ”.
ದೇವಿ ಕುಂಡಲಿನಿಯು ಈಗ ಆಜ್ಞಾಚಕ್ರವನ್ನು ತಲುಪಿದ್ದಾಳೆ.
ಇದು ಉಜ್ವಲವಾದ ನೀಲಿ ಮತ್ತು ನೇರಳೆ ಬಣ್ಣಗಳ ಸಮ್ಮಿಶ್ರ ಬಣ್ಣ ಹೊಂದಿರುವ, ಎರಡು ಬಿಳಿಯ ಬಣ್ಣದ ದಳಗಳುಳ್ಳ ಕಮಲವು. ಒಂದು ವೃತ್ತದ ಕೇಂದ್ರ ಭಾಗದಲ್ಲಿ ಇರುವ ತಲೆಕೆಳಗಾದ ತ್ರಿಕೋನದೊಳಗೆ ಒಂದು ಲಿಂಗವು ಅಡಕವಾಗಿದೆ. ಅದೇ ಆಜ್ಞಾ ಚಕ್ರದ ಸ್ವರೂಪ. ಆ ತ್ರಿಕೋನದ ಮೇಲ್ಭಾಗದಲ್ಲಿ ಅರ್ಧ ಚಂದ್ರಾಕೃತಿಯಿದೆ. ಇದರ ಬೀಜಾಕ್ಷರ “ಓಂ” ಬಿಂದುವಿನ ರೂಪದಲ್ಲಿರುವ ಅರ್ಧ ಚಂದ್ರಾಕೃತಿಯ ಮೇಲಿರುವುದೇ “ಓಂ” ಶಬ್ದದ “ಮ” ಕಾರವು. ಆರು ಮುಖಗಳುಳ್ಳ “ಹಾಕಿನಿ” ಯು ಇದಕ್ಕೆ ದೇವತೆ. ಈ ಚಕ್ರವನ್ನು ಮೂರನೆಯ ಕಣ್ಣಿನ ಕೇಂದ್ರ ಎಂದು ಉಲ್ಲೆಖಿಸಲಾಗುತ್ತದೆ. ಭೌತಿಕ ದೃಷ್ಟಿ ಮತ್ತು ಅಂತರ್ ದೃಷ್ಟಿ ಎಂಬ ಎರಡು ವಿಧದ ಅವಲೋಕನಗಳಿಗೆ ಈ ಚಕ್ರವು ಸಂಬಂಧಿಸಿದೆ.
ಪ್ರಜ್ಞೆಯು ಪ್ರಧಾನ ಚಿಂತನೆಗಳಿಗೆ ಇದು ಸಂಬಂಧಿಸಿದೆ. ಇದು ಅಂತಃಕರಣ ವೀಕ್ಷಣೆಗೆ ಅನುವು ಮಾಡಿಕೊಡುತ್ತದೆ. ಇದು ನಿಮ್ಮ ಆತ್ಮದ ಅಂತರ್ ದೃಷ್ಟಿ ಮತ್ತು ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ.
ಆಜ್ಞಾಚಕ್ರದ ಮೇಲೆ ಧ್ಯಾನವನ್ನು ಮಾಡಿ.
ಈಗ ನಾವು ಕುಂಡಲಿನಿಯ ಸಹಸ್ರಾರ ಚಕ್ರವನ್ನು ಪ್ರವೇಶಿಸುವುದನ್ನು ನೋಡುತ್ತೇವೆ.
ಹಲವಾರು ಪದರಗಳಲ್ಲಿ ಪೇರಿಸಲ್ಪಟ್ಟ, ಜೋತುಬಿದ್ದಿರುವ, ಅನೇಕ ದಳಗಳನ್ನು ಹೊಂದಿರುವ, ಬಿಳಿಯ ಬಣ್ಣದ ಕಮಲವು ಇದು.
ಮಧ್ಯಭಾಗದಲ್ಲಿ ಅಮೃತ ಕಿರಣಗಳನ್ನು ಹೊರಸೂಸುತ್ತಿರುವ ಪೂರ್ಣಚಂದ್ರ ಇದ್ದಾನೆ. ವೃತ್ತಾಕಾರದೊಳಗೆ ಇರುವ ತ್ರಿಕೋನದಲ್ಲಿ ನೆಲೆಸಿರುವ ಪರಮಶಿವ. ಪ್ರಜ್ಞಾಚಸ್ಥೆಯ ಉನ್ನತ ಸ್ಥಿತಿಯನ್ನು ಈ ಕಮಲದ ಸಾವಿರ ದಳಗಳು ಸಂಕೇತಿಸುತ್ತವೆ. ಈ ಸ್ಥಿತಿಯನ್ನು ತಲುಪುವುದೆಂದರೆ ಸಫಲತೆಯ ಅಂತಿಮ ಗುರಿಯನ್ನು ತಲುಪಿದಂತೆ. ಆತ್ಮಸಾಕ್ಷಾತ್ಕಾರ ಮತ್ತು ಜ್ಞಾನೋದಯವನ್ನು ಹೊಂದಿದಂತೆಯೇ ಸರಿ. ಭಾವಾವೇಶ, ಪರವಶತೆ ಮತ್ತು ಆತ್ಮಾನಂದದ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು ವಿವರಿಸಬಹುದಾಗಿದೆ. ಮೂಲಾಧಾರದಿಂದ ಶುರುವಾಗಿ, ಪ್ರತಿಯೊಂದು ಚಕ್ರವನ್ನೂ ಜಾಗೃತಗೊಳಿಸಿ, ಕುಂಡಲಿನಿ ದೇವತೆಯು ಪರಮಶಿವನನ್ನು ಸೇರಿ ಅವನಲ್ಲಿ ಲೀನವಾಗುವಾಗ ಇದು ಸಂಭವಿಸುತ್ತದೆ.
ಸಹಸ್ರಾರದ ಮೇಲೆ ಧ್ಯಾನವನ್ನು ಮಾಡಿ.
ಈ ಚಕ್ರಗಳ ಮೂಲಕ ಜಗತ್ತಿನ ಜೀವಬಲವಾದ ಪ್ರಾಣವು ನನ್ನ ದೇಹದೊಳಗೆ ಹರಿದು ನನ್ನಲ್ಲಿ ಶಕ್ತಿಯನ್ನೂ, ಚೈತನ್ಯವನ್ನೂ ತುಂಬಲಿ.