Hatha Yoga: Guide to Meditation
GUIDE TO MEDITATION
21 -27(E)
WE WARMLY WELCOME YOU TO THIS PROGRMME
A GUIDE TO MEDITATION
Why this presentation?
What has prompted me to make this presentation is:
I have been meditating for the past 12 years and derived benefit from meditation in terms of acquiring
1. calmness,
2. stability, and
3. vibrancy.
As such, I thought I could share my experience with those who have the inclination to meditate.
Chakra Meditation
Sadaasiva samaarambhaam
Vyasa Shankara madhyamaam
Asmad aachaarya paryantaam
Vande guru paramparaam.
What is Meditation?
Simply stated,
Meditation is the practice of bringing the mind to focus
and then concentrating on some desired object or person.
Why should we meditate?
In the present mad rush of life, we experience too much of stress and strain.
As a result, our efficiency is compromised.
Additionally, we are robbed of our peace of mind and active involvement in life.
All these combined take a heavy toll on our health, physical and mental.
In order to regain our enthusiasm and maximize our commitment, meditation is the most suited option.
What are the benefits?
Bhagwan says in the Gita, “Uddharet Aatmana Aatmanam”: Let the self be uplifted and transformed by the Self.
This upliftment and transformation must be brought about by the individual concerned, and the method to realize this objective is through meditation.
Meditation helps us to transform ourselves into better beings, peaceful and joyous.
It helps to explore and access the potential lying hidden in us.
It also helps to reach a higher level of awareness.
Meditation in our Culture
Meditation is a valuable asset inherited by us from our ancient seers.
According to the Vedic view of life, right action should be complemented by contemplation and meditation.
Meditation as a tool has been well established in our knowledge systems, particularly by Sage Patanjali, with his Ashtanga Yoga.
Ashtanga Yoga
Yama
Niyama
Asana
Pranayama
Pratyahara
Dharana
Dhyana
Samadhi
The Present Model of Meditation: Why?
This present model is developed on the basis of certain practices proved to be efficacious.
It is called Chakra Meditation.
It is meditating on the important energy centers in the body called Chakras.
Facts You Need to Know
You should know some basic facts about yourselves.
The Body: It has three dimensions, namely,
a. The Gross Body
b. The Subtle Body and
c. The Causal Body
The Breath and the Prana, and
The Mind
The Gross Body
The Gross Body: the physical or the gross body is made up of the five elements: earth, water, fire, air, and space.
There are several systems and processes taking place in the body like:
The skeletal system, the respiratory system, the circulatory system, the digestive system, the reproductive system, the nervous system, the endocrine system, etc.
The Subtle Body
In the yogic lore, we learn that the body has two more dimensions: The Subtle Body and the Causal body.
The Subtle Body consists of 19 factors:
a. 5 pranas
b. 5 organs of action,
c. 5 organs of perception
d. 4 inner instruments of manas, buddhi, chitta and ahankara
Pancha Pranas
Organs of Action:
Tongue for speech
Hands for grasping
Legs for locomotion
Genitals for procreation
Anus for evacuation.
Organs of Perception:
Ears for sound
Body skin for touch
Sense of form from seeing
Sense of taste with the tongue
Sense of smell with the nose.
The Mind: The Internal apparatus, Antahkarana
It has four different faculties:
Manas is characterized by volition, doubt, conjucture and fickleness. It acquires knowledge through sense perception making use of the five sense organs.
Buddhi is characterised by discrimination and decision-making. Buddhi too makes use of the organs of perception.
Ahankara is the sense of doer-ship and enjoyer-ship.
Chittam is the storehouse of memories.
The Causal Body
Within the subtle body is the Causal Body.
It contains the latent tendencies in the form of vasanas and samskaras.
The Breath or The Prana
At the gross level, we inhale fresh air and exhale all the impurities in the body.
At the subtle level, it is the Life Force that enters the body and divides itself into five functions called: Prana, apana, vyana, udana and samana.
They keep every part of the body and the mind alive and functioning
Prana activates the five organs of action.
Consciousness
Above all, it is conciousenss that makes us aware of every part and function in this
body-prana-mind complex.
Consciousness also helps us to relate to every part and function.
The present meditation helps us to relate to, and meditate on, the main energy centers called CHAKRAS.
The Chakras
Each of us have a unique energy field.
The Energy is drawn in to the body from the pool of Uiversal Life Force or Praana by the Chakras.
There are two important systems In
the body:
The Autonomous Nervous System
The Endocrine System
They together ensure optimum health
and well-being.
The Chakras are located very close to the Endocrine System.
The positions of the Seven Chakras coincide approximately with the positions of the glands in the Endocrine system
The Sushumna-1
The Chakras are embedded into the Sushumna.
The Sushumna channels energy from the Universal Life Force(ULF) to and from Sahasrara and Mooladhara Chakras
Sushumna is the energetic equivalent of the spinal column.
The Sushumna Nadi-2
There are two currents passing
Through the brain and circulating down the
Sides of the spine or sushumna.
Crossing at the base and returning
To the brain.
One of these two is called Pingala.
It starts from the left hemisphere of the brain,
Crosses at the base of the brain
To the right side of the spine and
Re-crosses at the base of the spine.
The Sushumna Nadi-3
The other current, the moon (ida),
starts from the right hemisphere of the brain
and crosses at the base of the brain
to the left side of the spine
and re-crosses at the base of the spine.
These currents flow day and night
And make deposits of the Life Force at
different points called Chakras.
The Sushumna Nadi-4
The Sun and the Moon currents
are intimately connected with
breathing.
By regulating breathing, we not only
energize the body but also
gain control over it.
The Chakras
There are seven energy centres located in the Sushumna:
Mooladhara
Swadhisthana
Manipura
Anahata
Visuddhi
Ajna
Sahasrara
The Chakras
These chakras vibrate with different frequencies.
They are described as lotuses of
different colours,
of different number of petals.
Three Stages of Meditation
Stage I: Self Relaxation. This involves making a survey of all your body parts with your attention to it and becoming aware of the subtle feeling of energy inside them.
Stage II: Concentration Practice. It involves turning your mind inwards and keeping it one pointed and concentrating on the flame.
Stage III: Meditation on Energy Centers. Meditating on the seven chakras helps you to keep all your faculties at their peak performance levels.
Meditating on each Chakra
You should use your will-power
with prayer and then visualize.
First, visualize that Goddess Kudalini rises from the Mooladhara and moves to other Chakras, opening the petals of each Chakra.
Mooladhara
At the base of the Sushumna nadi is a beautiful lotus with
four petals, deeply red In colour.
This is Mooladhara.
In the centre is a yellow square.
There is an inverted triangle within it.
The letter lam is the beejakshara.
This is Goddess Kundalini. She is the embodiment of
unbounded power.
Indra is seated on a white elephant
Brahma is seated on a swan
Devi Dakini is there.
Ganapati is there.
Meditate on Moolaadhara
Benefits of Mooladhara Chakra
It is connected with Mother Earth and the material world.
It stresses the importance of here and now.
It helps you to demonstrate self mastery and high physical energy.
It brings health, security and dynamic presence.
Swadhisthana Chakra
It has six orange coloured petals with a white
circle in the middle.
There is a crescent moon.
The letter vam is the sacred word.
It is associated with water, characterised by the quality
of taste.
There is Varuna seated on a crocodile.
Vishnu is seated on an eagle, bearing in his hands a conch, chakra, mace and lotus.
Rakini is the dark three-eyed Devi
Benefits of Swadhishtana Chakra
It is associated with nurturing, receptivity and emotions.
It relates you to creative energy.
It lifts you from mere survival to the pleasure principle.
It symbolizes emotional identity oriented to self gratification.
Manipura
It is a ten-petalled lotus in yellow.
In the centre is a red triangle downward-pointed with the letter ram, which is associated with the element fire, characterized by the quality of form and shape.
In the red region is Agni with four arms seated on a ram.
Also Rudra, smeared with ashes, is seated on a bull.
Lakhini is the dark Devi with three faces, wearing a yellow dress.
Benefits of Manipura Chakra
It is known as the power chakra.
It develops your self- esteem.
It helps you to create your own unique identity.
Anahata
This is the central chakra in the seven fold system.
It is a green lotus with twelve petals.
A hexaogonal region is formed in the middle by an upright and an inverted triangle.
There is another inverted triangle with a linga.
Yam is the beejakshara. It is associated with air, characterised by the quality of touch.
Vayu with four arms is seated on an antelope.
The attractive figure of Shiva is also there with abhaya and varada mudras.
Devi Kakini is also there.
This chakra is related to love.
As it comes in the middle, it integrates the opposites, like mind and body, male and female, ego and unity, etc.
It is concerned with unconditional love, acceptance and compassion.
VISHUDDHI
It is a blue lotus of sixteen petals with a white circle at the centre symbolizing the moon. Ham is the beejakshara, associated with the element sky, characterized by the quality of sound.
Ambara is on an elephant
Sadasiva with Parvathi are also there.
Benefits of Visuddhi chakra
This chakra, located in the throat, is related to communication and creativity.
Visuddha means purity in terms of purposeful thought and speech.
It is about personal expression combined with responsibility
AJNA
It is a glorious lotus of indigo colour with two large white petals.
There is a circle at the centre with an inverted triangle containing a linga.
A crescent is above the triangle.
Om is the beejakshara.
The m of Om is above the crescent in the bindu form.
Hakini is the devi with six faces.
This chakra is referred to as the Third-Eye Centre.
It is related to the act of seeing both physically and intuitively.
Benefits of Ajna Chakra
It is connected to the higher functions of consciousness.
It offers an inner vision.
It opens your self up to intuitive sight and wisdom.
SAHASRAARA
It is a lotus with very many white petals hanging downward and arranged in multiple layers.
At the centre is a full moon, shedding nectarine rays.
Inside the circle is a triangle wherein abides Paramasiva.
Benefits of Sahasrara Chakra
Reaching this state is attaining the ultimate goal of fulfillment, enlightenment and self-realization.
The thousand petals symbolize the highest states of consciousness.
This state is described in terms of bliss, rapture and ecstasy.
This happens when Goddess Kundalini, having awakened each Chakra starting from Mooladhara, reaches and unites with Parama Shiva.
Benefits of Chakra Meditation
As stated earlier, these chakras access energy from the Universal Life Force and vibrate with certain frequencies.
Energy thus accessed is directed to several organs through channels called naadis.
When the energy distribution is normal, all the organs in the body maintain good health.
Meditating on them ensures stability and vibrancy.
You are the Master
You are the master of all the faculties within you.
You can visualize yourself like a person seated in a chariot.
Chakra Meditation
While I congratulate you for showing interest in Meditation,
I wish to advise you to remain patient and practise with determination and persistence.
I wish you all the best.
“Yogah karmasu kausalam”
Skillfulness in action is yoga
– BG 2.50
THANK YOU.
28 -34(K) GUIDE TO MEDITATION
ಸಾಧನ ಮಾರ್ಗ – ಧ್ಯಾನಂ – ಧ್ಯಾನಕ್ಕೆ ಮಾರ್ಗದರ್ಶನ
ದಿನಾಂಕ 1-6-2014ರಂದು ಲಂಕಾ ಕೃಷ್ಣಮೂರ್ತಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ
ಡಾ. ಎಲ್. ಆದಿನಾರಾಯಣರವರು ಮಾಡಿದ ಪ್ರಸ್ತುತಿಯ ಕನ್ನಡ ಅನುವಾದ
ಶ್ರೀ ಗುರುಭ್ಯೋ ನಮಃ ಹರಿಃ ಓಂ
ಈ ಪ್ರಸ್ತುತಿಗೆ ನಾವು ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ.
ಯಾಕಾಗಿ ಈ ಪ್ರಸ್ತುತಿ?
ಈ ನಿರೂಪಣೆಯನ್ನು ತಯಾರಿಸಲು ನನಗಾದ ಪ್ರೇರೇಪಣೆ ಏನು?
ಕಳೆದ 12 ವರ್ಷಗಳಿಂದ ನಾನು ಧ್ಯಾನವನ್ನು ಮಾಡುತ್ತಲಿದ್ದು ಅದರಿಂದ ಪಡೆದುಕೊಂಡ
ಪ್ರಯೋಜನಗಳೇನೆಂದರೆ
1. ಪ್ರಶಾಂತತೆ
2. ಸ್ಥಿರತೆ ಮತ್ತು
3. ಚೈತನ್ಯಭರಿತ ಜೀವನ
ಹಾಗಾಗಿ ಧ್ಯಾನವನ್ನು ಅಭ್ಯಾಸ ಮಾಡಲು ಬಯಸುವವರೊಂದಿಗೆ ನನ್ನ ಅನುಭವಗಳನ್ನು ಹಂಚಿಕೊಳ್ಳಲು ಬಯಸಿದ್ದೇನೆ.
ಚಕ್ರ ಧ್ಯಾನ
ಸದಾಶಿವ ಸಮಾರಂಭಾಂ
ವ್ಯಾಸ ಶಂಕರ ಮಧ್ಯಮಾಂ
ಅಸ್ಮತ್ ಆಚಾರ್ಯ ಪರ್ಯಂತಾಂ
ವಂದೇ ಗುರು ಪರಂಪರಾಂ||
ಧ್ಯಾನ ಎಂದರೇನು?
ಸರಳವಾಗಿ ಹೇಳಬೇಕೆಂದರೆ
ಮನಸ್ಸನ್ನು ಏಕಾಗ್ರಗೊಳಿಸುವ, ಕ್ರಿಯೆ ಮತ್ತು ಅಭ್ಯಾಸವೇ ಧ್ಯಾನ.
ನಂತರ ನಾವು ಬಯಸಿದ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು.
ನಾವು ಧ್ಯಾನವನ್ನು ಏಕೆ ಮಾಡಬೇಕು?
ಇಂದಿನ ಹುಚ್ಚು ನಾಗಾಲೋಟದ ಜೀವನದಲ್ಲಿ, ನಾವು ಬಹಳ ಒತ್ತಡ ಮತ್ತು ಪ್ರಯಾಸವನ್ನು ಅನುಭವಿಸುತ್ತಿದ್ದೇವೆ.
ಅದರ ಪರಿಣಾಮವಾಗಿ ನಮ್ಮ ಸಾಮರ್ಥ್ಯ ಕುಗ್ಗುತ್ತಿದೆ.
ಅದರ ಜತೆಗೆ ಒತ್ತಡವು ನಮ್ಮ ನೆಮ್ಮದಿಯನ್ನು ಕಸಿಯುತ್ತಿದೆ,
ಸಕ್ರಿಯ ಜೀವನಾನುಭವವನ್ನು ತಗ್ಗಿಸುತ್ತಿದೆ.
ಇದೆಲ್ಲವೂ ಒಟ್ಟುಗೂಡಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಅದಕ್ಕೆ ತಕ್ಕ ಸುಂಕ ತೆರೆಬೇಕಾಗಿದೆ.
ಹಾಗಾಗಿ ನಮ್ಮ ಹುಮ್ಮಸ್ಸನ್ನು ವೃದ್ಧಿಸಿಕೊಳ್ಳಲು ಮತ್ತು ನಮ್ಮ ಬದ್ಧತೆಯನ್ನು ಹೆಚ್ಚಿಸಿಕೊಳ್ಳಲು ಧ್ಯಾನವು ಅತ್ಯಂತ ಅನುಕೂಲಕಾರಿ ಆಯ್ಕೆ ಆಗಿದೆ.
ಧ್ಯಾನದ ಒಳಿತುಗಳೇನು?
ಗೀತೆಯಲ್ಲಿ ಭಗವಂತನು ಹೇಳುತ್ತಾನೆ.
“ಉದ್ಧರೇತ್ ಆತ್ಮನಾತ್ಮಾನಾಂ”, ಆತ್ಮನಿಂದ ಆತ್ಮನು ಏಳಿಗೆಯನ್ನು ಹೊಂದಲಿ ಮತ್ತು ಪರಿವರ್ತನೆ ಹೊಂದಲಿ.
ಈ ಪರಿವರ್ತನೆ ಮತ್ತು ಏಳಿಗೆ ಆತನಿಗೇ ಆಗುವಂತೆ ಮಾಡಬೇಕು, ಮತ್ತು ಈ ಉದ್ದೇಶವನ್ನು ಸಫಲಗೊಳಿಸುವ ವಿಧಾನವೇ ಧ್ಯಾನ.
ನಾವು ಉತ್ತಮ ಜೀವಿಗಳಾಗಿಯೂ, ಶಾಂತರಾಗಿಯೂ ಮತ್ತು ಹರ್ಷಚಿತ್ತರಾಗಿಯೂ ಇರುವಂತೆ ರೂಪಾಂತರ ಹೊಂದಲು ಧ್ಯಾನವು ಸಹಾಯ ಮಾಡುತ್ತದೆ.
ನಮ್ಮಲ್ಲಿ ಸುಪ್ತವಾಗಿರುವ ಸಾಮರ್ಥ್ಯವನ್ನು ಪರಿಶೋಧಿಸಲು ಮತ್ತು ಅದನ್ನು ಅಭಿವೃದ್ಧಿಪಡಿಸಲು ಧ್ಯಾನವು ನಮಗೆ ಸಹಾಯ ಮಾಡುತ್ತದೆ.
ತಿಳುವಳಿಕೆಯ ಉನ್ನತ ಮಟ್ಟವನ್ನು, ಮುಟ್ಟಲು ಧ್ಯಾನವು ಸಹಕಾರಿಯಾಗಿದೆ.
ನಮ್ಮ ಸಂಸ್ಕೃತಿಯಲ್ಲಿ ಧ್ಯಾನದ ಪಾತ್ರ
ಧ್ಯಾನವು ನಮ್ಮ ಪುರಾತನ ಋಷಿಮುನಿಗಳಿಂದ ನಾವು ಬಳುವಳಿಯಾಗಿ ಪಡೆದ ಅತ್ಯಮೂಲ್ಯ ಆಸ್ತಿಯಾಗಿದೆ.
ವೈದಿಕ ದೃಷ್ಟಿಕೋನದಿಂದ ನೋಡಲಾಗುವ ಜೀವನ ವಿಧಾನದ ಪ್ರಕಾರ ಔಚಿತ್ಯಪೂರ್ಣ ಕರ್ಮಕ್ಕೆ ಧ್ಯಾನ ಮತ್ತು ಸಮಾಧಿ ಸ್ಥಿತಿಯು ಪೂರಕವಾಗಿರುತ್ತದೆ.
ನಮ್ಮ ತಿಳುವಳಿಕೆಯ ಮಾರ್ಗಗಳಲ್ಲಿ ಧ್ಯಾನವು ಒಂದು ಸಾಧನವಾಗಿರುತ್ತದೆ ಎಂಬುದನ್ನು ಮಹರ್ಷಿ ಪತಂಜಲಿಯು ಆತನ ಅಷ್ಟಾಂಗ ಯೋಗದಲ್ಲಿ ಚೆನ್ನಾಗಿ ಪ್ರಸ್ತುತ ಪಡಿಸಿದ್ದಾನೆ.
ಮಹರ್ಷಿ ಪತಂಜಲಿ ಅಷ್ಟಾಂಗ ಯೋಗ
ಮಹರ್ಷಿ ಪತಂಜಲಿ ಅಷ್ಟಾಂಗ ಯೋಗ
ಯಮ
ನಿಯಮ
ಆಸನ
ಪ್ರಾಣಾಯಾಮ
ಪ್ರತ್ಯಾಹಾರ
ಧಾರಣ
ಧ್ಯಾನ
ಸಮಾಧಿ
ಧ್ಯಾನದ ಪ್ರಚಲಿತ ಮಾದರಿ: ಏಕೆ
ಅಪೇಕ್ಷಿತ ಫಲವನ್ನು ಉಂಟುಮಾಡುತ್ತದೆಂದು ಪ್ರಮಾಣಿಸಲ್ಪಟ್ಟ ಹಲವು ಆಚರಣೆಗಳ ತಳಹದಿಯ ಮೇಲೆ ಈ ಪ್ರಸ್ತುತ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಇದನ್ನು ಚಕ್ರಧ್ಯಾನ ಎಂದು ಕರೆಯಲಾಗುತ್ತದೆ. ಚಕ್ರಗಳು ಎಂದು ಕರೆಯಲ್ಪಡುವ ದೇಹದಲ್ಲಿರುವ ಪ್ರಮುಖ ಶಕ್ತಿ ಕೇಂದ್ರಗಳನ್ನು ಕೇಂದ್ರೀಕರಿಸಿ ಮಾಡಲಾಗುವ ಧ್ಯಾನ ಇದು.
ನಿಮಗೆ ತಿಳಿದಿರಬೇಕಾದ ವಿಚಾರಗಳು
ನಿಮ್ಮ ಬಗ್ಗೆ ನೀವು ತಿಳಿದಿರಬೇಕಾದಂತಹ ಮೂಲ ಭೂತ ಸಂಗತಿಗಳು.
ಶರೀರ
ಇದು ಮೂರು ಆಯಾಮಗಳನ್ನು ಹೊಂದಿದೆ
1. ಭೌತಿಕ ಶರೀರ (Gross Body)
2. ಸೂಕ್ಷ್ಮ ಶರೀರ ( Subtle Body)
3. ಕಾರಣ ಶರೀರ ( Causal Body)
ಉಸಿರು ಮತ್ತು ಪ್ರಾಣ ಮತ್ತು
ಮನಸ್ಸು ( Mind)
ಭೌತಿಕ ಶರೀರ:-
ಭೌತಿಕ ಶರೀರ ಇದು ಪಂಚ ಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಇವುಗಳಿಂದ ಮಾಡಲ್ಪಟ್ಟಿದೆ.
ಹಲವಾರು ವ್ಯವಸ್ಥೆಗಳು ಮತ್ತು ಅವುಗಳಲ್ಲಿ ಹಲವು ಪ್ರಕ್ರಿಯೆಗಳು ನಮ್ಮ ಶರೀರದಲ್ಲಿ ಉಂಟಾಗುತ್ತಿರುತ್ತವೆ.
ಅಸ್ಥಿ ಪಂಜರದ ವ್ಯವಸ್ಥೆ(Skeletal System),
ಉಸಿರಾಟದ ವ್ಯವಸ್ಥೆ (Respiratory System) ,
ರಕ್ತ ಪ್ರಸರಣ ವ್ಯವಸ್ಥೆ(Blood Circulatory System),
ಜೀರ್ಣಾಂಗ ವ್ಯೂಹ( Digestive System) ,
ಸಂತಾನೋತ್ಪತ್ತಿಯ ಪ್ರಜನನ ವ್ಯವಸ್ಥೆ( Reproductive System),
ನರಮಂಡಲ ವ್ಯೂಹ( Nervous System)
ಗ್ರಂಥಿಗಳ ವ್ಯವಸ್ಥೆ (Endocrine System)ಇತ್ಯಾದಿ.
ಸೂಕ್ಷ್ಮ ಶರೀರ
ಯೋಗ ಶಾಸ್ತ್ರದಲ್ಲಿ, ಶರೀರಕ್ಕೆ ಮತ್ತೆರಡು ಆಯಾಮಗಳಿವೆ ಎಂಬುದನ್ನು ನಾವು ಕಾಣುತ್ತೇವೆ ಅದೆಂದರೆ ಸೂಕ್ಷ್ಮ ಶರೀರ ಮತ್ತು ಕಾರಣ ಶರೀರ.
ಸೂಕ್ಷ್ಮ ಶರೀರವು 19 ಅಂಶಗಳನ್ನೊಳಗೊಂಡಿದೆ.
ಪಂಚ ಪ್ರಾಣಗಳು
ಪಂಚ ಕ್ರಿಯಾಂಗಗಳು ಅಥವಾ ಪಂಚೇಂದ್ರಿಯಗಳು.
ಪಂಚ ಗ್ರಹಣೇಂದ್ರಿಯಗಳು
ನಾಲ್ಕು ಅಂತಃಕರಣಗಳಾದ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ
ಪಂಚ ಪ್ರಾಣಗಳು
ವ್ಯಾನ – ಸಂಪೂರ್ಣ ಶರೀರ
ಉದಾನ – ಗಂಟಲು ಮತ್ತು ಶಿರೋಭಾಗ
ಪ್ರಾಣ – ವಕ್ಷ ಸ್ಥಳ
ಸಮಾನ – ಉದರ ಸ್ಥಳ
ಅಪಾನ – ಪೃಷ್ಠ ಭಾಗ
ಪಂಚೇಂದ್ರಿಯಗಳು
ಮಾತನಾಡಲು ನಾಲಿಗೆ
ಹಿಡಿತಕ್ಕಾಗಿ ಕೈಗಳು
ಸಂಚಾರಕ್ಕಾಗಿ ಕಾಲುಗಳು
ಸಂತಾನಕ್ಕಾಗಿ ಜನನೇಂದ್ರಿಯಗಳು
ವಿಸರ್ಜನೆಗಾಗಿ ಗುದದ್ವಾರ
ಗ್ರಹಣೇಂದ್ರಿಯಗಳು
ಶಬ್ದಗ್ರಹಣಕ್ಕಾಗಿ ಕಿವಿ
ಸ್ಪರ್ಶಕ್ಕಾಗಿ ಚರ್ಮ
ವೀಕ್ಷಣೆಗಾಗಿ ಕಣ್ಣು
ರುಚಿಗಾಗಿ ನಾಲಿಗೆ
ವಾಸನೆಗಾಗಿ ಮೂಗು
ಮನಸ್ಸು:- ಅಂತಃಕರಣ.
ಇದರಲ್ಲಿ ನಾಲ್ಕು ವಿವಿಧ ಶಾಖೆಗಳಿವೆ.
ಸಂಕಲ್ಪ, ಸಂದೇಹ, ಸಂಯೋಗ ಮತ್ತು ಚಂಚಲತೆ. ಇವು ಮನಸ್ಸಿನ ಗುಣಲಕ್ಷಣಗಳು. ಪಂಚೇಂದ್ರಿಯಗಳನ್ನು ಮತ್ತು ಗ್ರಹಣೇಂದ್ರಿಯಗಳನ್ನು ಬಳಸಿಕೊಂಡು ಮನಸ್ಸು ಗ್ರಹಣ ಜ್ಞಾನವನ್ನು ಹೊಂದುತ್ತದೆ.
ನಿರ್ಣಯ ಮತ್ತು ವಿವೇಚನೆ ಬುದ್ಧಿಯ ಗುಣಲಕ್ಷಣಗಳು. ಬುದ್ಧಿಯು
ಗ್ರಹಣೇಂದ್ರಿಯಗಳನ್ನೂ ಸಹ ಬಳಸಿಕೊಳ್ಳುವುದು.
3. ತನ್ನಿಂದಲೇ ಮಾಡಲ್ಪಟ್ಟಿತು ಮತ್ತು ತನ್ನಿಂದಲೇ ಅನುಭವಿಸಲ್ಪಟ್ಟಿತು ಎಂಬ
ಅಹಂಭಾವವೇ ಅಹಂಕಾರ.
4. ಚಿತ್ತವು ನೆನಪುಗಳ ಭಂಡಾರ.
ಕಾರಣ ಶರೀರ
ಕಾರಣ ಶರೀರವು ಸೂಕ್ಷ್ಮ ಶರೀರದೊಳಗೆ ಇರುತ್ತದೆ.
ವಾಸನೆಗಳು ಮತ್ತು ಸಂಸ್ಕಾರದ ರೂಪದಲ್ಲಿ ಸುಪ್ತ ಅಥವಾ ಅಗೋಚರ ಪ್ರವೃತ್ತಿಗಳನ್ನು ಕಾರಣ ಶರೀರವು ಹೊಂದಿರುತ್ತದೆ.
ಪ್ರಾಣ
ಭೌತಿಕ ಸ್ತರದಲ್ಲಿ ನಾವು ಶುದ್ಧ ಗಾಳಿಯನ್ನು ಒಳಕ್ಕೆಳೆದುಕೊಂಡು ನಮ್ಮ ಶರೀರದಲ್ಲಿನ ಎಲ್ಲ ಕಲ್ಮಶಗಳನ್ನು ಹೊರಹಾಕುತ್ತೇವೆ.
ಸೂಕ್ಷ್ಮ ಸ್ತರದಲ್ಲಿ ಪ್ರಾಣ ಶಕ್ತಿಯು ಶರೀರವನ್ನು ಹೊಕ್ಕು ಅದನ್ನು ಐದು ವಿಭಾಗಗಳನ್ನಾಗೀಕರಿಸುತ್ತದೆ. ಅವೆಂದರೆ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ.
ಅವುಗಳು ಶರೀರದ ಪ್ರತಿಯೊಂದು ಅಂಗವನ್ನು ಹಾಗೂ ಮನಸ್ಸನ್ನು ಜೀವಂತವಾಗಿರಿಸುತ್ತವೆ ಮತ್ತು ಕಾರ್ಯನಿರತವಾಗಿರುವಂತೆ ನೋಡಿಕೊಳ್ಳುತ್ತವೆ.
ಪಂಚೇಂದ್ರಿಯಗಳನ್ನು ಪ್ರಾಣವು ಚುರುಕಾಗಿರಿಸುತ್ತದೆ.
ಪ್ರಜ್ಞೆ(Conciousness)
ಎಲ್ಲಕ್ಕಿಂತಾ ಮಿಗಿಲಾಗಿ ಪ್ರತಿಯೊಂದು ಅಂಗ ಮತ್ತು ಅದರ ಕಾರ್ಯದ ಬಗೆಗಿನ ಅರಿವು ಪ್ರಜ್ಞೆಯಿಂದ ದೊರೆಯುತ್ತದೆ.
ಶರೀರ – ಪ್ರಾಣ – ಮನಸ್ಸು ಎಂಬ ಸಂಕೀರ್ಣತೆ.
ಪ್ರತಿಯೊಂದು ಭಾಗ ಮತ್ತು ಅದರ ಕಾರ್ಯಶೀಲತೆಯನ್ನು ಸಮೀಕರಿಸಲು ಪ್ರಜ್ಞೆ ನಮಗೆ ಸಹಕಾರಿಯಾಗುತ್ತದೆ. ಶಕ್ತಿ ಕೇಂದ್ರಗಳೆಂದು ಕರೆಯಲ್ಪಡುವ ಚಕ್ರಗಳ ನಡುವೆ ಸಂಬಂಧ ಕಲ್ಪಿಸಲು ಮತ್ತು ಅದರ ಬಗ್ಗೆ ಅರಿಯಲು ನಮಗೆ ಪ್ರಸಕ್ತ ಧ್ಯಾನ ವಿಧಾನವು ಸಹಾಯ ಮಾಡುತ್ತದೆ.
ಚಕ್ರಗಳು
ನಮ್ಮಲ್ಲಿ ಪ್ರತಿಯೊಬ್ಬರೂ ಅನನ್ಯ ಶಕ್ತಿ ಕ್ಷೇತ್ರವನ್ನು ಹೊಂದಿದ್ದಾರೆ.
ಜಗತ್ತಿನ ಜೀವಶಕ್ತಿ ಅಥವಾ ಪ್ರಾಣಶಕ್ತಿಯ(Universal Life Force)ಮಡುವಿನಿಂದ ಚಕ್ರಗಳ ಮೂಲಕ ಶಕ್ತಿಯು ಶರೀರದಲ್ಲಿ ಪ್ರವಹಿಸುತ್ತದೆ.
ಶರೀರದಲ್ಲಿ ಎರಡು ಪ್ರಮುಖ ರಚನೆಗಳಿವೆ.
ಸ್ವಾಯತ್ತ ನರವ್ಯೂಹ ಮಂಡಲ(Autonomous Nervous System)
ಗ್ರಂಥಿ ಮಂಡಲ( Endocrine System)
ಇವೆರಡೂ ಜತೆಯಾಗಿ ಅತ್ಯುತ್ತಮ ಆರೋಗ್ಯವನ್ನು ಮತ್ತು ಯೋಗಕ್ಷೇಮವನ್ನು ಖಾತರಿಪಡಿಸುತ್ತವೆ.
ಗ್ರಂಥಿಗಳ ಅತ್ಯಂತ ಸಮೀಪದಲ್ಲಿ ಚಕ್ರಗಳು ನೆಲೆಗೊಂಡಿರುತ್ತವೆ.
ಏಳು ಚಕ್ರಗಳ ಸ್ಥಾನಗಳು, ಗ್ರಂಥಿ ಮಂಡಲದಲ್ಲಿರುವ ಗ್ರಂಥಿಗಳ
ಸ್ಥಾನದೊಂದಿಗೆ ಸರಿಸುಮಾರಾಗಿ ಹೊಂದಿಕೆಯಾಗುತ್ತವೆ.
ಪೀನಿಯಲ್ ಪಿಟ್ಯೂಟರಿ, ಥೈರಾಯಿಡ್, ಥೈಮಸ್, ಪ್ಯಾಂಕ್ರಿಯಾಸ್ ಅಡ್ರೆನಲ್ಸ್, ಟೆಸ್ಟಿಸ್/ ಓವರೀಸ್
ಸುಷುಮ್ನಾ – 1
ಚಕ್ರಗಳು ಸುಷುಮ್ನದಲ್ಲಿ ಹುದುಗಿವೆ
ಜಗತ್ತಿನ ಪ್ರಾಣಶಕ್ತಿ (Universal Life Force)ಯಿಂದ ಸುಷುಮ್ನವು ಚೈತನ್ಯವನ್ನು ಸಹಸ್ರಾರ ಮತ್ತು ಮೂಲಾಧಾರ ಚಕ್ರಗಳ ಒಳಗೆ ಮತ್ತು ಹೊರಕ್ಕೆ ಹರಿಸುತ್ತದೆ.
ಬೆನ್ನು ಹುರಿಯ ಸಮಾನಾಂತರ ಚೈತನ್ಯವು ಸುಷುಮ್ನ.
ಅಹಂ, ದೊಡ್ಡ ಅಹಂ,ಮೂಲಾಧಾರ, ನಾಭಿ, ಕುಂಡಲಿನಿ
ಸ್ವಾದಿಷ್ಠಾನ
ಮಣಿಪುರ
ಅನಾಹತ
ವಿಶುದ್ಧಿ
ಆಜ್ಞಾ
ಸಹಸ್ರಾರ
ಇಡಾ ನಾಡಿ, ಪಿಂಗಳ ನಾಡಿ
ಸುಷುಮ್ನಾ ನಾಡಿ – 2.
ಮೆದುಳಿನ ಮೂಲಕ ಎರಡು ಹೊನಲುಗಳು ಹಾದು ಹೋಗಿ ಬೆನ್ನುಹುರಿ ಅಥವಾ ಸುಷುಮ್ನದ ಬದಿಗಳಲ್ಲಿ ಹರಿದಾಡುತ್ತವೆ.
ಅಲ್ಲಿಂದ ತಳವನ್ನು ಮುಟ್ಟಿ ಮೆದುಳಿಗೆ ಪುನಃ ವಾಪಸ್ಸು ಬರುತ್ತವೆ. ಈ ಎರಡರಲ್ಲಿ ಒಂದನ್ನು ಪಿಂಗಳ ಎಂದು ಕರೆಯಲಾಗುತ್ತದೆ. ಅದು ಮೆದುಳಿನ ಎಡ ಗೋಳಾರ್ಧದಿಂದ ಶುರುವಾಗಿ ಮೆದುಳಿನ ತಳಭಾಗವನ್ನು ಹಾದು ಬೆನ್ನುಹುರಿಯ ಬಲಭಾಗವನ್ನು ತಲುಪಿ ಅಲ್ಲಿಂದ ಬೆನ್ನುಹುರಿಯ ತಳಕ್ಕೆ ಹೋಗಿ ಮತ್ತೆ ಅಡ್ಡವಾಗಿ ಹಾದು ಹೋಗುತ್ತದೆ.
ಸುಷುಮ್ನಾ ನಾಡಿ – 3
ಚಂದ್ರ(ಇಡಾ) ಎಂಬ ಹೆಸರಿನ ಮತ್ತೊಂದು ಹೊನಲು ಮೆದುಳಿನ ಬಲ ಗೋಳಾರ್ಧದಿಂದ ಶುರುವಾಗಿ ಬೆನ್ನು ಹುರಿಯ ಎಡಭಾಗದಲ್ಲಿರುವ ಮೆದುಳಿನ ತಳಭಾಗವನ್ನು ಹಾದು ಬೆನ್ನು ಹುರಿಯ ತಳದಲ್ಲಿ ಮತ್ತೆ ಅಡ್ಡವಾಗಿ ಹಾದು ಹೋಗುತ್ತದೆ.
ಈ ಹೊನಲುಗಳು ದಿನರಾತ್ರಿಯೂ ಹರಿಯುತ್ತಲಿದ್ದು ಪ್ರಾಣಶಕ್ತಿಯನ್ನು ಚಕ್ರಗಳೆಂದು ಕರೆಯಲ್ಪಡುವ ವಿವಿಧ ಬಿಂದುಗಳಲ್ಲಿ ಸ್ಥಿರಪಡಿಸುತ್ತದೆ.
ಸುಷುಮ್ನಾ ನಾಡಿ – 4
7. ಸೂರ್ಯನ ಮತ್ತು ಚಂದ್ರನ ಹೊನಲುಗಳು ಉಸಿರಾಟದೊಂದಿಗೆ ನಿಕಟವಾಗಿ ತಳುಕು ಹಾಕಿಕೊಂಡಿವೆ.
8. ಉಸಿರಾಟವನ್ನು ಕ್ರಮಬದ್ಧಗೊಳಿಸುವುದರ ಮೂಲಕ ನಾವು ಶರೀರಕ್ಕೆ ಶಕ್ತಿ ತುಂಬುವುದಲ್ಲದೆ ಶರೀರದ ಮೇಲೆ ನಿಯಂತ್ರಣವನ್ನೂ ಸಹ ಸಾಧಿಸಬಹುದಾಗಿದೆ.
ಚಕ್ರಗಳು
ಸುಷುಮ್ನಾ ನಾಡಿಯಲ್ಲಿ ಏಳು ಶಕ್ತಿ ಕೇಂದ್ರಗಳನ್ನು ಗುರುತಿಸಲಾಗಿದೆ.
ಮೂಲಾಧಾರ
ಸ್ವಾದಿಷ್ಠಾನ
ಮಣಿಪುರ
ಅನಾಹತ
ವಿಶುದ್ಧಿ
ಆಜ್ಞಾ
ಸಹಸ್ರಾರ
ಚಕ್ರಗಳು
ವಿವಿಧ ತರಂಗಾಂತರಗಳಲ್ಲಿ ಈ ಚಕ್ರಗಳು ಕಂಪಿಸುತ್ತವೆ.
ಅವುಗಳನ್ನು ಬಗೆಬಗೆಯ ಬಣ್ಣಗಳ ಕಮಲಗಳೆಂದು ಬಣ್ಣಿಸಲಾಗಿದೆ.
ಅವುಗಳನ್ನು ವಿವಿಧ ಸಂಖ್ಯೆಗಳ ದಳಗಳನ್ನೊಳಗೊಂಡ ಮತ್ತು ವಿವಿಧ ಬೀಜಾಕ್ಷರಗಳನ್ನುಳ್ಳ ಕಮಲಗಳೆಂದು ವಿವರಿಸಲಾಗಿದೆ.
ಧ್ಯಾನದ ಮೂರು ಹಂತಗಳು
ಮೊದಲ ಹಂತ: ಸ್ವಯಂ ವಿಶ್ರಾಂತಿ
ನಿಮ್ಮ ಶರೀರದ ಎಲ್ಲಾ ಅಂಗಗಳನ್ನು ಅವಲೋಕಿಸುವ ಕಾರ್ಯವನ್ನೊಳಗೊಂಡಂತೆ ಅವುಗಳ ಮೇಲೆ ನಿಮ್ಮ ಗಮನ ಹರಿಸಿ, ಅವುಗಳಲ್ಲಿರುವ ಚೈತನ್ಯದ ಸೂಕ್ಷ್ಮ ಸಂವೇದನೆಯನ್ನು ಅನುಭವಿಸುವುದಾಗಿರುತ್ತದೆ, ಈ ಹಂತ.
ಎರಡನೆಯ ಹಂತ: ಏಕಾಗ್ರತೆಯ ಅಭ್ಯಾಸ
ನಿಮ್ಮ ಮನಸ್ಸನ್ನು ಒಳಮುಖವಾಗಿಸುವುದು ಮತ್ತು ಅದನ್ನು ಒಂದು ಬಿಂದುವಿನ ಮೇಲಿರಿಸಿ, ಜ್ವಾಲೆಯ ಮೇಲೆ ಕೇಂದ್ರೀಕರಿಸುವುದು ಈ ಹಂತದಲ್ಲಿನ ಕೆಲಸ.
ಮೂರನೆಯ ಹಂತ: ಶಕ್ತಿ ಅಥವಾ ಚೈತನ್ಯ ಕೇಂದ್ರಗಳ ಮೇಲೆ ಧ್ಯಾನ ಮಾಡುವುದು. ಏಳು ಚಕ್ರಗಳನ್ನು ಕುರಿತು ಧ್ಯಾನ ಮಾಡುವುದರಿಂದ ಅದು ನಿಮ್ಮ ಎಲ್ಲಾ ಶಾರೀರಿಕ ಸಾಮರ್ಥ್ಯಗಳನ್ನೂ, ಅವುಗಳ ಕಾರ್ಯದಕ್ಷತೆಯನ್ನೂ, ಉತ್ತುಂಗಕ್ಕೇರಿಸಲು ಸಹಕಾರಿಯಾಗುತ್ತದೆ.
ಪ್ರತಿಯೊಂದು ಚಕ್ರವನ್ನು ಕುರಿತು ಧ್ಯಾನಿಸುವುದು
ಪ್ರಾರ್ಥನೆಯಿಂದ ನೀವು ನಿಮ್ಮ ಇಚ್ಛಾಶಕ್ತಿಯನ್ನು ಉಪಯೋಗಿಸಬೇಕು ಮತ್ತು ಅದನ್ನು ಚಿತ್ರಿಸಿಕೊಳ್ಳಬೇಕು, ಅಂದರೆ ಕಣ್ಣ ಮುಂದೆ ಊಹಿಸಿಕೊಳ್ಳಬೇಕು.
ಮೊದಲಿಗೆ, ಕುಂಡಲಿನಿ ದೇವಿಯು ಮೂಲಾಧಾರದಿಂದ ಮೇಲೆದ್ದು ಇತರ ಚಕ್ರಗಳೆಡೆಗೆ ಹೊರಟು ಪ್ರತಿಯೊಂದು ಚಕ್ರಗಳ ಪಕಳೆಗಳನ್ನು ತೆರೆಯುವಂತೆ ಕಣ್ಣಮುಂದೆ ಚಿತ್ರಿಸಿಕೊಳ್ಳಿ.
ಮೂಲಾಧಾರ
ಸುಷುಮ್ನಾ ನಾಡಿಯ ತಳಭಾಗದಲ್ಲಿ ಕಡುಕೆಂಪು ಬಣ್ಣದ, ನಾಲ್ಕು ದಳಗಳ ಸುಂದರ
ಕಮಲದಂತಿರುವುದೇ ಮೂಲಾಧಾರ. ಅದರ ಮಧ್ಯದಲ್ಲಿ ಹಳದಿ ಬಣ್ಣದ ಚೌಕವಿರುತ್ತದೆ. ಅದರೊಳಗೆ ಬುಡಮೇಲಾದ ತ್ರಿಕೋಣ ಅಡಕವಾಗಿರುತ್ತದೆ. “ಲಂ” ಎಂಬ ಅಕ್ಷರವು ಇದರ ಬೀಜಾಕ್ಷರ.
ಇದು ಕುಂಡಲಿನಿ ದೇವಿ. ಸೀಮಾತೀತವಾದ ಶಕ್ತಿಯ ಪ್ರತಿರೂಪವೇ ಈಕೆ.
ಇಂದ್ರನು ಒಂದು ಬಿಳಿ ಆನೆಯ ಮೇಲೆ ಕುಳಿತಿರುತ್ತಾನೆ.
ಹಂಸದ ಮೇಲೆ ಬ್ರಹ್ಮನು ಆಸೀನನಾಗಿರುತ್ತಾನೆ.
ದೇವಿ ಡಾಕಿನಿ
ಗಣಪತಿ
ಮೂಲಾಧಾರವನ್ನು ಕುರಿತು ಧ್ಯಾನಿಸಿ
ಮೂಲಾಧಾರ ಚಕ್ರದ ಪ್ರಯೋಜನಗಳು
ಅದು ಭೂಮಾತೆ ಮತ್ತು ಇಹಲೋಕದೊಂದಿಗೆ ಸಂಪರ್ಕ ಹೊಂದಿದೆ.
ಇಲ್ಲಿನ ಮತ್ತು ಈಗಿನ ಪ್ರಾಮುಖ್ಯತೆಯನ್ನು ಅದು ಒತ್ತಿ ಹೇಳುತ್ತದೆ.
ಉನ್ನತ ದೈಹಿಕ ಶಕ್ತಿಯನ್ನು ಮತ್ತು ಸ್ವಯಂ ನೈಪುಣ್ಯತೆಯನ್ನು ಪ್ರದರ್ಶಿಸಲು ಅದು ನಿಮಗೆ ಸಹಾಯಕವಾಗುತ್ತದೆ.
ಅದು ನಿಮ್ಮಲ್ಲಿ ಆರೋಗ್ಯ, ಭದ್ರತೆ ಮತ್ತು ಕ್ರಿಯಾಶೀಲತೆಯನ್ನು ತರುತ್ತದೆ.
ಸ್ವಾಧಿಷ್ಠಾನ ಚಕ್ರ
ಮಧ್ಯದಲ್ಲಿ ಬಿಳಿಯ ವೃತ್ತವುಳ್ಳ ಆರು ಕಿತ್ತಳೆ ಬಣ್ಣದ ದಳಗಳನ್ನು ಹೊಂದಿದೆ ಈ ಚಕ್ರ.
ಇಲ್ಲಿ ಅರ್ಧ ಚಂದ್ರಾಕೃತಿ ಇದೆ. ಈ ಚಕ್ರದ ಪವಿತ್ರ ಶಬ್ದ “ ವಂ”.
ಇದು ಗುಣಮಟ್ಟದ ರುಚಿಯ ಗುಣಲಕ್ಷಣಗಳನ್ನುಳ್ಳ ನೀರಿನೊಂದಿಗೆ ಸಹಯೋಗ ಹೊಂದಿದೆ.
ಮೊಸಳೆಯ ಮೇಲೆ ಕುಳಿತಿರುವ ವರುಣನಿದ್ದಾನೆ.
ತನ್ನ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ಹೊಂದಿರುವ ವಿಷ್ಣುವು ಗರುಡನ ಮೇಲೆ ಕುಳಿತಿದ್ದಾನೆ.
ರಾಕಿಣಿ, ಮೂರು ಕಣ್ಣುಗಳುಳ್ಳ ಶ್ಯಾಮಲ ವರ್ಣದ ದೇವಿ.
ಸ್ವಾಧಿಷ್ಠಾನ ಚಕ್ರದ ಪ್ರಯೋಜನಗಳು
ಗ್ರಹಿಕೆ, ಭಾವನೆ ಮತ್ತು ಪಾಲನೆಗಳ ಜತೆ ಇದು ಸಂಯೋಜಿಸಲ್ಪಟ್ಟಿದೆ.
ಸೃಜನಾತ್ಮಕ ಶಕ್ಟಿಯೊಂದಿಗೆ ನಿಮ್ಮನ್ನು ಇದು ಜತೆಗೂಡಿಸುತ್ತದೆ.
ಕೇವಲ ಜೀವಿಸಿರುವುದರಿಂದ ಹೊರತುಪಡಿಸಿ ಇದು ನಿಮ್ಮನ್ನು ಆನಂದದ ಮೂಲ ತತ್ವಕ್ಕೆ ಎತ್ತರಿಸುತ್ತದೆ.
ಸ್ವಸಂತೋಷದ ಕಡೆಗೆ ವಾಲಿರುವ ಭಾವನಾತ್ಮಕ ಅನನ್ಯತೆಯನ್ನು ಇದು ಸಂಕೇತಿಸುತ್ತದೆ.
ಮಣಿಪುರ
ಹಳದಿ ಬಣ್ಣದ ಹತ್ತು ದಳಗಳುಳ್ಳ ಕಮಲವು ಇದು.
ಆಕಾರ ಮತ್ತು ಸ್ವರೂಪಗಳ ಶ್ರೇಷ್ಠತೆಯನ್ನು ಗುಣಲಕ್ಷಣವನ್ನಾಗಿ ಹೊಂದಿದ ಅಗ್ನಿಯ ತತ್ವದ ಸಹಯೋಗದಿಂದೊಡಗೂಡಿದ “ರಂ”ಎಂಬ ಅಕ್ಷರವುಳ್ಳ ಕೆಳಮುಖವಾಗಿರುವ ಕೆಂಪು ತ್ರಿಕೋಣವು ಅದರ ಮಧ್ಯಭಾಗದಲ್ಲಿದೆ.
ರಂ ಅಕ್ಷರದ ಮೇಲೆ ಕುಳಿತಿರುವ ನಾಲ್ಕು ಕೈಗಳುಳ್ಳ ಅಗ್ನಿಯು ಆ ಕೆಂಪು ಪ್ರದೇಶದಲ್ಲಿದೆ.
ಅಲ್ಲದೆ ವಿಭೂತಿಯನ್ನು ಪೂಸಿಕೊಂಡಿರುವ ರುದ್ರನು ಸಹ ನಂದಿಯ ಮೇಲೆ ಆಸೀನನಾಗಿದ್ದಾನೆ.
ಹಳದಿ ವಸ್ತ್ರವನ್ನು ಧರಿಸಿರುವ, ಮೂರು ಮುಖಗಳುಳ್ಳ ಶ್ಯಾಮಲ ವರ್ಣದ ದೇವಿಯ ಹೆಸರು “ಲಾಖಿನಿ”
ಮಣಿಪುರ ಚಕ್ರದ ಪ್ರಯೋಜನಗಳು
ಇದು ಶಕ್ತಿ ಚಕ್ರ ಎಂದು ಹೆಸರುವಾಸಿಯಾಗಿದೆ.
ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.
ನಿಮ್ಮದೇ ಆದ ಅದ್ವಿತೀಯ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಇದು ಸಹಾಯ ಮಾಡುತ್ತದೆ.
ಅನಾಹತ
ಏಳು ಪದರಗಳ ಸರಣಿಯಲ್ಲಿ ಇದು ಮಧ್ಯದಲ್ಲಿನ ಚಕ್ರ. ಹನ್ನೆರಡು ದಳಗಳನ್ನುಳ್ಳ ಹಸಿರು ಬಣ್ಣದ ಕಮಲವು ಇದು. ತಲೆಕೆಳಗಾಗಿರುವ ಮತ್ತು ಸರಳವಾದ ತ್ರಿಕೋಣದ ಮಧ್ಯದಲ್ಲಿ ಷಡ್ ಭುಜಾಕೃತಿಯ ಪ್ರದೇಶವು ಏರ್ಪಟ್ಟಿರುತ್ತದೆ.
ಅಲ್ಲಿ ಲಿಂಗವುಳ್ಳ ಮತ್ತೊಂದು ತಲೆಕೆಳಗಾದ ತ್ರಿಕೋನವಿದೆ.
ಇದರ ಬೀಜಾಕ್ಷರವು “ಯಂ”. ಸ್ಪರ್ಶದ ಗುಣಲಕ್ಷಣಗಳುಳ್ಳ ವಾಯುವಿನ ಸಹಯೋಗವನ್ನು ಇದು ಹೊಂದಿದೆ.
ನಾಲ್ಕು ಕೈಗಳುಳ್ಳ ವಾಯು ದೇವನು ಜಿಂಕೆಯ ಮೇಲೆ ಆಸೀನನಾಗಿದ್ದಾನೆ.
ಅಭಯ ಮತ್ತು ವರದ ಮುದ್ರೆಗಳುಳ್ಳ ಶಿವನ ಆಕರ್ಶಕ ಆಕೃತಿಯೂ ಸಹ ಅಲ್ಲಿದೆ.
ದೇವಿ ಕಾಕಿಣಿಯೂ ಸಹ ಅಲ್ಲಿದ್ದಾಳೆ.
ಅನಾಹತ ಚಕ್ರದ ಪ್ರಯೋಜನಗಳು.
ಇದು ಪ್ರೀತಿಗೆ ಸಂಬಂಧಿಸಿದ ಚಕ್ರ.
ಇದು ಮಧ್ಯದಲ್ಲಿ ಸ್ಥಿತವಾಗಿರುವುದರಿಂದ, ಮನಸ್ಸು ಮತ್ತು ದೇಹ, ಗಂಡು ಮತ್ತು ಹೆಣ್ಣು, ಅಹಂ ಮತ್ತು ಐಕ್ಯತೆ, ಹೀಗೆ ವೈರುಧ್ಯಗಳನ್ನು ಒಗ್ಗೂಡಿಸುತ್ತದೆ.
ಅನುಕಂಪ, ಅಂಗೀಕಾರ ಮತ್ತು ಷರತ್ತುರಹಿತ ಪ್ರೀತಿಯ ಬಗ್ಗೆ ಈ ಚಕ್ರವು ವಿಶೇಷ ಕಾಳಜಿ ಹೊಂದಿದೆ.
ವಿಶುದ್ಧಿ
ಚಂದ್ರನನ್ನು ಪ್ರತಿನಿಧಿಸುವ ಬಿಳಿಯ ಚಕ್ರವನ್ನು ಮಧ್ಯದಲ್ಲಿ ಹೊಂದಿರುವ, ಹದಿನಾರು ದಳಗಳ, ನೀಲವರ್ಣದ ಕಮಲ ಇದು. ಶಬ್ದದ ಗುಣಲಕ್ಷಣಗಳುಳ್ಳ, ಆಕಾಶದ ಸಹಯೋಗವನ್ನು ಹೊಂದಿರುವ ಈ ಚಕ್ರಕ್ಕೆ “ಹಂ” ಎಂಬುದು ಬೀಜಾಕ್ಷರ.
ಆನೆಯ ಮೇಲಿನ ಅಂಬರ.
ಪಾರ್ವತಿಯೊಂದಿಗೆ ಸದಾಶಿವ.
ವಿಶುದ್ಧಿ ಚಕ್ರದ ಪ್ರಯೋಜನಗಳು.
ಕಂಠದಲ್ಲಿ ಸ್ಥಿತವಾಗಿರುವ ಈ ಚಕ್ರವು ಸಂವಹನ ಮತ್ತು ಸೃಜನಶೀಲತೆಗೆ ಸಂಬಂಧಿಸಿದೆ.
ವಿಶುದ್ಧಿ ಎಂದರೆ ಉದ್ದೇಶಪೂರಿತ ಚಿಂತನೆ ಮತ್ತು ಮಾತಿನ ಶುದ್ಧತೆ.
ಇದು ಜವಾಬ್ದಾರಿಯಿಂದ ಒಡಗೂಡಿದ ವ್ಯಕ್ತಿಗತ ಅಭಿವ್ಯಕ್ತಿಗೆ ಸಂಬಂಧ ಪಟ್ಟಿದೆ.
ಆಜ್ಞಾ
ಒಂದು ವೃತ್ತದ ಕೇಂದ್ರ ಭಾಗದಲ್ಲಿ ಇರುವ ತಲೆಕೆಳಗಾದ ತ್ರಿಕೋನದಲ್ಲಿ ಒಂದು ಲಿಂಗವು ಅಡಕವಾಗಿದೆ. ಅದೇ ಆಜ್ಞಾ ಚಕ್ರದ ಸ್ವರೂಪ. ಆ ತ್ರಿಕೋನದ ಮೇಲ್ಭಾಗದಲ್ಲಿ ಅರ್ಧ ಚಂದ್ರಾಕೃತಿಯಿದೆ. ಇದರ ಬೀಜಾಕ್ಷರ “ಓಂ”. ಬಿಂದುವಿನ ರೂಪದಲ್ಲಿರುವ ಅರ್ಧ ಚಂದ್ರಾಕೃತಿಯ ಮೇಲಿರುವುದೇ “ಓಂ” ಶಬ್ದದ “ಮ” ಕಾರವು. ಆರು ಮುಖಗಳುಳ್ಳ “ಹಾಕಿನಿ”ಯು ಇದಕ್ಕೆ ದೇವಿಯು. ಈ ಚಕ್ರವನ್ನು ಮೂರನೆಯ ಕಣ್ಣಿನ ಕೇಂದ್ರ ಎಂದು ಉಲ್ಲೇಖಿಸಲಾಗುತ್ತದೆ.
ಭೌತಿಕ ದೃಷ್ಟಿ ಮತ್ತು ಅಂತರ್ ದೃಷ್ಟಿ ಎಂಬ ಎರಡು ವಿಧದ ಅವಲೋಕನೆಗಳಿಗೆ ಈ ಚಕ್ರವು ಸಂಬಂಧಿಸಿದೆ.
ಆಜ್ಞಾ ಚಕ್ರದ ಪ್ರಯೋಜನಗಳು.
ಪ್ರಜ್ಞೆಯ ಪ್ರಧಾನ ಚಿಂತನೆಗಳಿಗೆ ಇದು ಸಂಬಂಧಿಸಿದೆ.
ಇದು ಅಂತಃಕರಣ ವೀಕ್ಷಣೆಗೆ ಅನುವುಮಾಡಿಕೊಡುತ್ತದೆ.
ಇದು ನಿಮ್ಮ ಆತ್ಮದ ಅಂತರ್ ದೃಷ್ಟಿ ಮತ್ತು ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ.
ಸಹಸ್ರಾರ
ಹಲವಾರು ಪದರಗಳಲ್ಲಿ ಪೇರಿಸಲ್ಪಟ್ತ, ಜೋತುಬಿದ್ದಿರುವ ಅನೇಕ ದಳಗಳನ್ನು ಹೊಂದಿರುವ ಬಿಳಿ ಬಣ್ಣದ ಕಮಲವು ಇದು. ಮಧ್ಯಭಾಗದಲ್ಲಿ ಅಮೃತ ಕಿರಣಗಳನ್ನು ಹೊರಸೂಸುತ್ತಿರುವ ಪೂರ್ಣಚಂದ್ರ, ವೃತ್ತಾಕಾರದೊಳಗೆ ಇರುವ ತ್ರಿಕೋನದಲ್ಲಿ ನೆಲಸಿರುವ ಪರಮಶಿವ.
ಓಂ ನಮಃ ಶಿವಾಯ.
ಪರಮಶಿವ
ಸಹಸ್ರಾರ ಚಕ್ರದ ಪ್ರಯೋಜನಗಳು.
ಈ ಸ್ಥಿತಿಯನ್ನು ತಲುಪುವುದೆಂದರೆ ಸಫಲತೆಯ ಅಂತಿಮ ಗುರಿಯನ್ನು ತಲುಪಿದಂತೆ, ಆತ್ಮಸಾಕ್ಷಾತ್ಕಾರ ಮತ್ತು ಜ್ಞಾನೋದಯವನ್ನು ಹೊಂದಿದಂತೆಯೇ ಸರಿ.
ಪ್ರಜ್ಞಾವಸ್ಥೆಯ ಉನ್ನತ ಸ್ಥಿತಿಯನ್ನು, ಈ ಕಮಲದ ಸಾವಿರ ದಳಗಳು ಸಂಕೇತಿಸುತ್ತವೆ.
ಭಾವಾವೇಶ, ಪರವಶತೆ ಮತ್ತು ಅತ್ಯಾನಂದದ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು ವಿವರಿಸಬಹುದಾಗಿದೆ.
ಮೂಲಾಧಾರದಿಂದ ಶುರುವಾಗಿ, ಪ್ರತಿಯೊಂದು ಚಕ್ರವನ್ನೂ ಜಾಗೃತಗೊಳಿಸಿ, ಕುಂಡಲಿನಿ ದೇವತೆಯು ಪರಮಶಿವನನ್ನು ಸೇರಿ ಅವನಲ್ಲಿ ಲೀನವಾಗುವಾಗ ಇದು ಸಂಭವಿಸುತ್ತದೆ.
ಚಕ್ರ ಧ್ಯಾನದ ಪ್ರಯೋಜನಗಳು.
ಹಿಂದೆ ತಿಳಿಸಿದಂತೆ, ಈ ಚಕ್ರಗಳು ವಿಶ್ವದ ಪ್ರಾಣವಾಯುವಿನಿಂದ ಶಕ್ತಿಯನ್ನು ಹೀರಿ ನಿಗದಿತ ತರಂಗಾಂತರಗಳಲ್ಲಿ ಕಂಪಿಸುತ್ತವೆ.
ಹೀಗೆ ಹೀರಲ್ಪಟ್ಟ ಶಕ್ತಿಯು, ನಾಡಿಗಳ ಮುಖಾಂತರ ಹಲವಾರು ಅಂಗಗಳತ್ತ ಪ್ರವಹಿಸುತ್ತದೆ.
ಈ ಶಕ್ತಿಯ ಪ್ರಸರಣ ಸಂತುಲಿತವಾಗಿದ್ದಾಗ ಶರೀರದ ಎಲ್ಲ ಅಂಗಗಳೂ ಉತ್ತಮ ಆರೋಗ್ಯವನ್ನು ನಿಭಾಯಿಸುತ್ತಿರುತ್ತವೆ.
ಹಾಗಾಗಿ ಅವುಗಳ ಮೇಲೆ ಧ್ಯಾನವನ್ನು ಕೇಂದ್ರೀಕರಿಸಿದಾಗ ಸ್ಥಿರತೆ ಮತ್ತು ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ.
ನೀವೇ ಅಧಿಪತಿಗಳು.
ನಿಮ್ಮಲ್ಲಿರುವ ಎಲ್ಲ ಶರೀರಿಕ ಸಾಮರ್ಥ್ಯಕ್ಕೆ ನೀವೇ ಅಧಿಪತಿಗಳು.
ರಥದಲ್ಲಿ ಕುಳಿತಿರುವ ವ್ಯಕ್ತಿಯಂತೆ ನೀವೇ ನಿಮ್ಮನ್ನು ಚಿತ್ರಿಸಿಕೊಳ್ಳಬಹುದು.
ನಿಮ್ಮ ಶರೀರವನ್ನು ರಥವೆಂದು ತಿಳಿದುಕೊಳ್ಳಿ, ನೀವೇ ರಥದ ಮಾಲೀಕ ಹಾಗೂ ತುಲನಾತ್ಮಕ ಗುಣವುಳ್ಳ ನಿಮ್ಮ ಪ್ರಜ್ಞೆಯೇ ಸಾರಥಿ ಮತ್ತು ನಿಮ್ಮ ಮನಸ್ಸೇ ಲಗಾಮು. ಜ್ಞಾನಿಗಳು ಹೇಳುವಂತೆ ನಿಮ್ಮ ಇಂದ್ರಿಯಗಳೇ ಸ್ವಾರ್ಥಪೂರಿತ, ಕಾಮನೆ ಎಂಬ ರಸ್ತೆಯ ಮೇಲೆ ಚಲಿಸುತ್ತಿರುವ ಅಶ್ವಗಳು.
(ಕಠೋಪನಿಷತ್)
ಚಕ್ರ ಧ್ಯಾನ
ಧ್ಯಾನದ ಬಗ್ಗೆ ನೀವು ತೋರಿಸಿದ ಆಸಕ್ತಿಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಅದರ ಜೊತೆಗೆ ಧೃಢ ಸಂಕಲ್ಪದಿಂದ ಮತ್ತು ಛಲದಿಂದ ಜ್ಞಾನವನ್ನು ಅಭ್ಯಾಸಮಾಡಿ ಹಾಗೂ ತಾಳ್ಮೆಯನ್ನು ಕಾಯ್ದುಕೊಳ್ಳಿ ಎಂದು ನಾನು ಹಾರೈಸುತ್ತೇನೆ.
ನಿಮಗೆ ಒಳ್ಳೆಯದಾಗಲಿ
“ಯೋಗಃ ಕರ್ಮಸು ಕೌಶಲಂ”
ಕರ್ಮದಲ್ಲಿನ ಕುಶಲತೆಯೇ ಯೋಗ.
ಧನ್ಯವಾದಗಳು