SRIMAD BHAGAVAD GITA
SAADHANA MAARGA
INTRODUCTION It is a matter of great satisfaction that we have completed the recitation and study of Srimad Bhagavadgita, containing 700 slokas spread over 18 Chapters, made possible through video-streaming under the caption ‘A Sloka A Day’. We have thus performed a Yagna, which Lord Krishna Himself calls it Gnana Yagna:adhyēṣyatē ca ya imaṁ dharmyaṁ saṁvādamāvayōḥ | jñānayajñēna tēnāhamiṣṭaḥ syāmiti mē matiḥ || 18.70 || Arjuna, Whoever studies and understands this Dharmic conversation between you and Me will be considered to have offered Me Gnana Yagna — This is My View. There are four kinds of Yagnas: Vidhi Yagna, the performance of a ritual as ordained by the Vedas; Japa Yagna, the chanting of mantras, making them audible; Upamsu Yagna, the chanting of mantras within one’s own hearing; and Gnana Yagna, acquiring Gnana by employing mental faculties. Gnana Yagna is the best among the four. Bhagavadgita is famously referred to as Brahma Vidya. We have acquired some Gnana through adhyayana or study. The purpose of acquiring this Gnana is to attain Siddhi, the Supreme State of Liberation. That is the Gneyam. his involves Saadhana or Upasana.. Bhagavadgita is also known as Yoga Shastra. Krishna specifies four different kinds of Yogic practices by way of Saadhana to attain Siddhi or Perfection. They are: Gnana Yoga helps to access and acquire Gnana, the Knowledge of Brahman and also Gneya, the Object of Knowledge, through Adhyayana or study, leading to Realisation. Karma Yoga requires one to perform scripturally ordained actions without attachment to the fruits of actions and in a state of detachment, there by reaching Siddhi through Saatvic Thyaga. Dhyana Yoga lays emphasis on practicing concentration and meditation to attain the state of Samadhi. Bhakti Yoga is the most favoured practice involving intense love and devotion to the Saguna Aspect of Brahman or to the Nirguna Aspect of Brahman. Though these four Practices appear to be different tracks on the Saadhana Maarga, each individually capable of helping to attain Siddhi, it is desirable to make an integrative approach and start practicing ALI of them one by one. Moreover, Bhagavadgita is reputed to be an Upanishat An Upanishat is a sacred scriptural text in which the Acharya or Teacher engages with the Shishya in the form of giving Aadesha and Upadesa or instruction and advice. In the Bhagavadgita, Krishna is the Gitacharya. He is also a loving and caring well-wisher of Arjuna. He advises Arjuna, and through him advises us, on several issues. At the end, the Gitacharya sums up the essence of his upadesha in the following shloka
: manmanā bhava madbhaktō madyājī māṁ namaskuru | māmēvaiṣyasi satyaṁ tē pratijānē priyō:’si mē || 18.65 ||
Arjuna, Set your mind on Me; be My Devotee; offer your worship to Me; and prostrate yourself before Me. As you are very dear to Me, I promise that you will surely reach Me. Here is a four-step Saadhana Marga clearly indicated, with emphasis on Bhakti. What is Bhakti? It is a bhaava, a state of mind, in which one feels intense love and devotion towards the Saguna Aspect of Brahman or the Nirguna Aspect of Brahman. It is a sensibility that gets expressed in nine different ways, known as Navavidha Bhakti In the Bhagavata Purana, we hear Prahlada saying: Sravanam keertanam VishnoH smaranam paadasevanam archanam vandanam daasyam sakhyam aatmanivedanam
SHRAVANAM: | listening to His Glories; |
KEERTANAM: | singing His praises; |
SMARANAM: | recollecting His Glories and Praises; |
PAADASEVANAM• | offering service at His feet; |
ARCHANAM: | doing ritualistic worship; |
VANDANAM: | prostrating oneself before Him |
DAASYAM: | expressing service-mindedness; |
SAKHYAM: | cultivating respectful friendliness; |
AATMA NIVEDANAM• | surrendering one’s self to Him completely. |
This Saadhana Maarga, as suggested by Krishna in his advice, should form into an integral approach inclusive of the other three practices of Adhyayana, Anushthana and Dhyana. Surely, then it becomes foremost among all the spiritual practices that are directed towards attaining Mukti or Liberation.
All these days we have been progressing on the track of Gnana Yoga. We have a fairly clear idea of what Brahma Gnana is and also what its Gneya or Goal is.
Next it is proposed to open up the other three tracks on the Saadhana Maarga, with the following nomenclature:
SAADHANA MAARGA:
Track One: Adhyayana (Study)
Track Two: Swadharma — Anushthana (Spiritual Observances)
Track Three: Dhyana (Meditation)
Track Four: Smaranam (Remembering with Understanding)
With the help of some select Stotras, we wish to facilitate Shravanam, Mananam, Dhyanam and Samkeertanam
ಶ್ರೀಮದ್ಭಗವದ್ಗೀತೆ: ಸಾಧನ ಮಾರ್ಗ – ಪೀಠಿಕೆ
ಹದಿನೆಂಟು ಅಧ್ಯಾಯಗಳಲ್ಲಿ ಪಸರಿಸಿದ್ದ ಏಳುನೂರು ಶ್ಲೋಕಗಳನ್ನೊಳಗೊಂಡ ಶ್ರೀಮದ್ಭಗವದ್ಗೀತೆಯ ಪಾರಾಯಣ ಮತ್ತು ಅಧ್ಯಯನವನ್ನು”ದಿನಕ್ಕೊಂದು ಶ್ಲೋಕ” ಎಂಬ ಶೀರ್ಷಿಕೆಯ ಅಡಿಯಲ್ಲಿ ದೃಶ್ಯಮಾಧ್ಯಮದ ರೂಪದಲ್ಲಿ ನಾವು ಯಶಸ್ವಿಯಾಗಿ ಸಂಪೂರ್ಣಗೊಳಿಸಿರುವುದು ಅತ್ಯಂತ ತೃಪ್ತಿಕರ ವಿಷಯವಾಗಿದೆ.
ಶ್ರೀ ಕೃಷ್ಣನೇ ಸ್ವಯಂ ಘೋಷಿಸಿರುವ “ಜ್ಞಾನ ಯಜ್ಞ” ಎಂಬ ಯಜ್ಞವನ್ನು ನೆರವೇರಿಸಿರುವೆವು ಎಂಬ ಸಮಾಧಾನ ನಮಗಿದೆ.
ಅಧ್ಯೇಷ್ಯತೇ ಚ ಯ ಇಮಂ
ಧರ್ಮ್ಯಂ ಸಂವಾದಮಾವಯೋಃ ।
ಜ್ಞಾನಯಜ್ಞೇನ ತೇನಾಹಂ
ಇಷ್ಟಃ ಸ್ಯಾಮಿತಿ ಮೇ ಮತಿಃ ॥ 18-70॥
ಅರ್ಜುನಾ, ನನ್ನ ಮತ್ತು ನಿನ್ನ ನಡುವೆ ನಡೆದ ಈ ಧಾರ್ಮಿಕ ಸಂವಾದವನ್ನು ಯಾರು ಅಧ್ಯಯನ ಮಾಡುತ್ತಾರೆಯೋ ಮತ್ತು ಅದನ್ನು ಅರ್ಥ ಮಾಡಿಕೊಳ್ಳುತ್ತಾರೆಯೋ ಅವರು ನನಗಾಗಿ ಜ್ಞಾನಯಜ್ಞವನ್ನು ಮಾಡಿದಂತಾಗುತ್ತದೆ ಎಂಬುದು ನನ್ನ ಅಭಿಪ್ರಾಯ.
ಯಜ್ಞಗಳಲ್ಲಿ ನಾಲ್ಕು ವಿಧಗಳು:
1. ವಿಧಿಯಜ್ಞ : ವೇದಗಳಲ್ಲಿ ಆದೇಶಿಸಲಾದಂತೆ ಶಾಸ್ತ್ರವಿಧಿಗಳ ಆಚರಣೆ.
2. ಜಪಯಜ್ಞ: ಸಶಬ್ದವಾಗಿ ಎಲ್ಲರಿಗೂ ಕೇಳಿಸುವಂತೆ ಹೇಳುವ ಮಂತ್ರಪಠಣ.
3. ಉಪಾಂಶು ಯಜ್ಞ: ತನಗೆ ಮಾತ್ರ ಕೇಳುವಂತೆ ಸ್ವಗತವಾಗಿ ಜಪಿಸುವ ಮಂತ್ರಪಠಣ.
4. ಜ್ಞಾನಯಜ್ಞ: ಮಾನಸಿಕ ಅಥವಾ ಧೀಶಕ್ತಿಯನ್ನು ಉಪಯೋಗಿಸಿಕೊಂಡು ಜ್ಞಾನವನ್ನು ಗಳಿಸುವುದು.
ಈ ನಾಲ್ಕು ವಿಧಗಳಲ್ಲಿ ಜ್ಞಾನಯಜ್ಞವು ಅತ್ಯುತ್ತಮವಾದುದು. ಭಗವದ್ಗೀತೆಯು “ಬ್ರಹ್ಮವಿದ್ಯೆ” ಎಂಬುದಾಗಿ ಪ್ರಖ್ಯಾತಿ ಪಡೆದಿದೆ. ಈ ಗ್ರಂಥದ ಅಧ್ಯಯನದ ಮೂಲಕ ನಾವು ಒಂದಷ್ಟು ಜ್ಞಾನವನ್ನು ಗಳಿಸಿರುವೆವು. ಈ ಜ್ಞಾನವನ್ನು ಗಳಿಸುವ ಪ್ರಮುಖ ಉದ್ದೇಶವೇನೆಂದರೆ ಪರಮಪದವಾದ ಮುಕ್ತಿ ಅಂದರೆ ಸಿದ್ಧಿಯನ್ನು ಹೊಂದುವುದು. ಇದೇ ಜ್ಞೇಯ. ಇದು ಸಾಧನೆ ಅಥವಾ ಉಪಾಸನೆಯನ್ನು ಒಳಗೊಂಡಿದೆ.
ಭಗವದ್ಗೀತೆಯನ್ನು “ಯೋಗಶಾಸ್ತ್ರ” ಎಂದೂ ಸಹ ಗುರುತಿಸಲಾಗುತ್ತದೆ. ಸಾಧನೆಯ ಮೂಲಕ ಸಿದ್ಧಿಯನ್ನು ಹೊಂದುವ ಸಲುವಾಗಿ ಮಾಡುವ ಯೋಗಾಚರಣೆಗಳ ನಾಲ್ಕು ವಿಧಗಳನ್ನು ಕೃಷ್ಣನು ವಿವರಿಸುತ್ತಾನೆ.
(1) ಜ್ಞಾನ ಎಂದರೆ ಬ್ರಹ್ಮನ ಬಗೆಗಿನ ಅರಿವು ಮತ್ತು ಜ್ಞೇಯ ಎಂದರೆ ಅರಿವಿನ ಗುರಿ, ಇವುಗಳನ್ನು ಅಧ್ಯಯನದ ಮೂಲಕ ಅರಿತುಕೊಳ್ಳಲು ಹಾಗೂ ಸಾಕ್ಷಾತ್ಕಾರದೆಡೆಗೆ ನಮ್ಮನ್ನು ನಡೆಸಲು ಜ್ಞಾನಯೋಗವು ಸಹಾಯ ಮಾಡುತ್ತದೆ.
(2) ಸಾತ್ವಿಕ ತ್ಯಾಗದಿಂದ ಸಿದ್ಧಿಯನ್ನು ಹೊಂದಲು, ಶಾಸ್ತ್ರಗಳಲ್ಲಿ ಆಜ್ಞಾಪಿಸಿದ ಕರ್ಮಗಳನ್ನು, ಕರ್ಮಫಲಾಪೇಕ್ಷೆ ಇಲ್ಲದೆ ಹಾಗೂ ನಿರ್ಲಿಪ್ತ ಸ್ಥಿತಿಯಲ್ಲಿ, ಮಾಡುವ ಆಚರಣೆಯನ್ನು ಕರ್ಮಯೋಗವು ಬಯಸುತ್ತದೆ.
(3) ಸಮಾಧಿ ಸ್ಥಿತಿಯನ್ನು ಹೊಂದಲು ಬೇಕಾದ ಧ್ಯಾನ ಮತ್ತು ಏಕಾಗ್ರತೆಯ ಆಚರಣೆಗೆ ಧ್ಯಾನಯೋಗವುಒತ್ತನ್ನು ನೀಡುತ್ತದೆ.
(4) ಬ್ರಹ್ಮನ ಸಗುಣ ಅಥವಾ ನಿರ್ಗುಣ ತತ್ವದ ಬಗೆಗಿನ ನಿಷ್ಠೆ ಮತ್ತು ತೀವ್ರ ಒಲವನ್ನು ಒಳಗೊಂಡ ಭಕ್ತಿಯೋಗವು ವಿಶೇಷ ಕೃಪೆಯಿಂದ ಕಾಣಲಾದ ಆಚರಣೆಯಾಗಿದೆ.
ಸಾಧನ ಮಾರ್ಗದಲ್ಲಿ ಈ ನಾಲ್ಕು ಬಗೆಯ ಆಚರಣೆಗಳೂ ವಿಭಿನ್ನ ಹಾದಿಗಳಂತೆ ಕಂಡರೂ ಪ್ರತಿಯೊಂದು ವಿಧದ ಯೋಗವೂ ಸಿದ್ಧಿಯನ್ನು ಹೊಂದಲು ಸಹಾಯಕವಾಗಿದೆ. ಹಾಗಾಗಿ ಈ ಎಲ್ಲ ಬಗೆಗಳನ್ನೂ ಒಂದೊಂದಾಗಿ ಆಚರಿಸುವ ಒಂದು ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವುದು ಸಮಂಜಸವಾಗಿರುತ್ತದೆ.
ಅಷ್ಟೇ ಅಲ್ಲದೆ ಭಗವದ್ಗೀತೆಯು ಒಂದು ಉಪನಿಷತ್ ಎಂಬುದಾಗಿ ಪ್ರಖ್ಯಾತಿಗಳಿಸಿದೆ. ಉಪನಿಷತ್ ಎಂಬುದು ಗುರುವು ಶಿಷ್ಯನಿಗೆ ಕೊಡುವ ಆದೇಶ ಮತ್ತು ಉಪದೇಶವನ್ನೊಳಗೊಂಡ ಪವಿತ್ರ ಗ್ರಂಥವಾಗಿದೆ. ಭಗವದ್ಗೀತೆಯಲ್ಲಿ ಕೃಷ್ಣನು ಗೀತಾಚಾರ್ಯ. ಆತನು ಅರ್ಜುನನ ಪ್ರೀತಿಯ ಹಿತೈಷಿಯೂ ಸಹ. ಆತ ಅರ್ಜುನನಿಗೆ ಉಪದೇಶಿಸುತ್ತಾನೆ ಹಾಗೂ ಆತನ ಮೂಲಕ ಹಲವಾರು ಅಂಶಗಳ ಬಗ್ಗೆ ನಮಗೂ ಬೋಧಿಸುತ್ತಾನೆ. ಕೊನೆಯಲ್ಲಿ ಗೀತಾಚಾರ್ಯನು ಆತನ ಉಪದೇಶದ ಸಾರಾಂಶವನ್ನು ಈ ಕೆಳಗಿನ ಶ್ಲೋಕದ ಮೂಲಕ ಸಾದರಪಡಿಸುತ್ತಾನೆ.
ಮನ್ಮನಾ ಭವ ಮದ್ಭಕ್ತೋ
ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಸತ್ಯಂ ತೇ
ಪ್ರತಿಜಾನೇ ಪ್ರಿಯೋಽಸಿ ಮೇ ॥ 18-65॥
ಅರ್ಜುನಾ!
1. ನಿನ್ನ ಮನಸ್ಸನ್ನು ನನ್ನಲ್ಲಿ ನಿಲ್ಲಿಸು.
2. ನನ್ನ ಭಕ್ತನಾಗಿರು.
3. ನಿನ್ನ ಪೂಜೆಯನ್ನು ನನಗೆ ಅರ್ಪಿಸು ಮತ್ತು
4. ನೀನು ನನಗೆ ಸಾಷ್ಟಾಂಗ ನಮಸ್ಕಾರ ಮಾಡು.
ನೀನು ನನಗೆ ಬಹಳ ಪ್ರಿಯನಾಗಿರುವುದರಿಂದ ನೀನು ಖಂಡಿತವಾಗಿಯೂ ನನ್ನನ್ನೇ ಹೊಂದುವೆ ಎಂಬುದಾಗಿ ನಿನಗೆ ಪ್ರಮಾಣ ಮಾಡುತ್ತೇನೆ.
ಭಕ್ತಿಯ ಮೇಲಿನ ಪ್ರಾಧಾನ್ಯತೆಗೆ ಒತ್ತು ಕೊಡುವ ನಾಲ್ಕು ಸ್ತರದ ಸಾಧನ ಮಾರ್ಗವನ್ನು ಇಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಭಕ್ತಿ ಯೆಂದರೇನು? ಅದು ಒಂದು ಭಾವವು. ಅದು ಬ್ರಹ್ಮನ ಸಗುಣ ಅಥವಾ ನಿರ್ಗುಣ ತತ್ವದ ಬಗೆಗಿನ ನಿಷ್ಠೆ ಮತ್ತು ಒಲವನ್ನು ತೀವ್ರವಾಗಿ ಅನುಭವಿಸುವ ಮನಸ್ಸಿನ ಒಂದು ಸ್ಥಿತಿಯು.
ನವವಿಧ ಭಕ್ತಿ ಎಂದು ಕರೆಯಲ್ಪಡುವ, ಒಂಬತ್ತು ವಿವಿಧ ರೀತಿಯಲ್ಲಿ ವ್ಯಕ್ತಪಡಿಸಲಾಗುವ ಮನಸ್ಸಿನ ಸಂವೇದನ ಶಕ್ತಿಯೇ ಭಕ್ತಿ.
ಭಾಗವತ ಪುರಾಣದಲ್ಲಿ, ಪ್ರಹ್ಲಾದನು ಹೀಗೆ ಹೇಳುತ್ತಾನೆ.
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ
ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಂ
1. ಶ್ರವಣಂ:- ಆತನ ಅಂದರೆ ಭಗವಂತನ ವೈಭವವನ್ನು ಆಲಿಸುವುದು.
2. ಕೀರ್ತನಂ:- ಆತನ ಸ್ತುತಿಯನ್ನು ಗಾಯನ ಮಾಡುವುದು.
3. ಸ್ಮರಣಂ:- ಆತನ ಶ್ಲಾಘನೆ ಮತ್ತು ಭವ್ಯತೆಯನ್ನು ಸ್ಮರಿಸುವುದು.
4. ಪಾದಸೇವನಂ:- ಆತನ ಪಾದಗಳಿಗೆ ಸೇವೆಯನ್ನು ಅರ್ಪಿಸುವುದು.
5. ಅರ್ಚನಂ:- ಶಾಸ್ತ್ರೋಕ್ತ ಪೂಜೆಯಿಂದ ಆತನನ್ನು ಅರ್ಚಿಸುವುದು.
6. ವಂದನಂ:- ಆತನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುವುದು.
7. ದಾಸ್ಯಂ:- ಸೇವಾ ಮನೋಭಾವವನ್ನು ವ್ಯಕ್ತಪಡಿಸುವುದು.
8. ಸಖ್ಯಂ:- ಗೌರವಯುತವಾಗಿ ಸ್ನೇಹವನ್ನು ಬೆಳಸುವುದು.
9. ಆತ್ಮನಿವೇದನಂ:- ತನ್ನ ಆತ್ಮವನ್ನು ಸಂಪೂರ್ಣವಾಗಿ ಆತನಿಗೆ ನಿವೇದಿಸುವುದು.
ಕೃಷ್ಣನಿಂದ ಆತನ ಉಪದೇಶದಲ್ಲಿ ಸೂಚಿಸಲ್ಪಟ್ಟ ಸಾಧನ ಮಾರ್ಗವನ್ನು ಅಧ್ಯಯನ, ಅನುಷ್ಠಾನ ಮತ್ತು ಧ್ಯಾನವೆಂಬ ಇತರೆ ಮೂರು ಆಚರಣೆಗಳನ್ನೊಳಗೊಂಡಂತೆ ಒಂದು ಸಮಗ್ರ ಅನುಸಂಧಾನವನ್ನಾಗಿ ರೂಪಿಸಿಕೊಳ್ಳಬೇಕಾಗಿದೆ. ಆಗಲೇ ಮುಕ್ತಿಯನ್ನು ಹೊಂದಲು ಬೇಕಾದ ಎಲ್ಲಾ ಆಧ್ಯಾತ್ಮಿಕ ಆಚರಣೆಗಳಲ್ಲಿ ಇದು ಖಂಡಿತ ಮುಂಚೂಣಿಯಲ್ಲಿರುವಂಥಹದ್ದಾಗಿರುತ್ತದೆ.
ಇಲ್ಲಿಯವರೆಗೂ ಜ್ಞಾನ ಯಜ್ಞದ ಹಾದಿಯಲ್ಲಿ ನಾವು ಮುಂದೆ ಸಾಗುತ್ತಿದ್ದೆವು. ಬ್ರಹ್ಮಜ್ಞಾನ ಎಂದರೆ ಏನು ಮತ್ತು ಜ್ಞೇಯ ಎಂದರೆ ಏನು ಎಂಬುದರ ಬಗ್ಗೆ ನಮಗೆ ನಿಚ್ಚಳವಾದ ಕಲ್ಪನೆ ಉಂಟಾಗಿದೆ.
ಮುಂದೆ ಸಾಧನ ಮಾರ್ಗದ ಹಾದಿಯಲ್ಲಿ ಸಾಗುವ ಇತರ ಮೂರು ಮಾರ್ಗಗಳನ್ನು ಅರಿತುಕೊಳ್ಳುವ ಪ್ರಸ್ತಾವನೆಯನ್ನು ಈ ಕೆಳಗೆ ನಮೂದಿಸಿದ ಪರಿಭಾಷೆಯೊಂದಿಗೆ ಕೈಗೊಳ್ಳುತ್ತಿದ್ದೇವೆ.
1. ಸಾಧನ ಮಾರ್ಗ:- ಮೊದಲ ಪಥ : ಅಧ್ಯಯನ.
2. ಸಾಧನ ಮಾರ್ಗ:- ಎರಡನೆಯ ಪಥ : ಸ್ವಧರ್ಮ – ಅನುಷ್ಠಾನ.
3. ಸಾಧನ ಮಾರ್ಗ:- ಮೂರನೆಯ ಪಥ : ಧ್ಯಾನ.
4. ಸಾಧನ ಮಾರ್ಗ:- ನಾಲ್ಕನೆಯ ಪಥ : ಸ್ಮರಣ.
ಶ್ರವಣ, ಮನನ, ಧ್ಯಾನ, ಮತ್ತು ಸಂಕೀರ್ತನೆಯನ್ನು ಸುಗಮಗೊಳಿಸುವ ಸಲುವಾಗಿ ಕೆಲವು ಆಯ್ದ ಸ್ತೋತ್ರಗಳ ನೆರವಿನಿಂದ ಲಂಕಾ ಕೃಷ್ಣಮೂರ್ತಿ ಸ್ಮಾರಕವು ಮೇಲೆ ಸೂಚಿಸಿದಂತೆ ಹೊಸ ರೂಪದಲ್ಲಿ ಪ್ರತಿನಿತ್ಯ ದೃಶ್ಯಮಾಧ್ಯಮದಲ್ಲಿ ಪ್ರಸ್ತುತ ಪಡಿಸುವುದನ್ನು ಮುಂದುವರಿಸುತ್ತದೆ.