BHAKTI AND GNANA YOGA
SMARANAM
53 E
Bagavadgita: Saadhanamaarga
Track Four: SmaranAM
INTRODUCTION
dakshina
Bhakti is foremost among the four approaches in the Saadhana Maarga, the other three being Adhyayana, Swadharma Anushthana and Dhyaana.
Bhakti is a bhaava or a state of mind in which t devotee feels intense urge, great impulsion, to seek and find union with the object of devotion. The Bhakta reaches out with intensity of emotion .
In one of the shlokas in his Shivaanandalahari, Sri Sankara defines bhakti thus:
अङ्कोलं निजबीजसन्ततिरयस्कान्तोपलं सूचिका
साध्वी नैजविभुं लता क्षितिरुहं सिन्धुः सरिद्वल्लभम् ।
प्राप्नोतीह यथा तथा पशुपतेः पादारविन्दद्वयं
चेतोवृत्तिरुपेत्य तिष्ठति सदा सा भक्तिरित्युच्यते ॥ ६१॥
Ankolam nija beeja santhathi rayaskkantho soochika,
Sadhvi naija vibhum latha kshithiruham sindhussaridvallabham,
Prapnothiha yadha thadha pasupathe padara sindhu dwaiyam,
Chetho vruthi roopethya thishtathi sada saa bhakthirithyuchyathe II 61 II
As the seeds of Ankola tree, which lie scattered on the ground, find their way back to the mother tree;
As the iron needle is irresistibly drawn by the lodestone placed nearby,
As the faithful wife looks solely to her beloved husband for comfort and pleasure;
As the growing creeper seeks the support of the nearby tree to rest upon it;
As the flowing river rushes to the ocean to merge in it;
So does my mind seek out ardently the two lotus-feet of Shiva, find them and remain
fixed to them –
that indeed is called Bhakti.
The urge, the drive, to attain the union with the Divine requires to be put into practice constantly and consistently. With total involvement, the urge should get intensified by enhancing the potential in all the three dimensions of one’s personality:
1, at the body level, by stepping up the energies;
2. at the speech level, by toning up the purity of articulation, Vaakshuddhi; and
3. at the level of the mind, by gearing up the functions of Manas and Buddhi.
Of the nine ways of Bhakti, Navavidha Bhakti, Smaranam seems to serve our purpose best. It is a practice more inclusive than Shravanam and Keertanam. Smaranam means remembering or recollecting what we have experienced by way of Shravanam and Keertanam. It should also include Mananam and Dhyanam, Reflection and Meditation. That is, the experience gets consolidated when we understand the meaning and meditate on it.
In our devotional practices, our attention, most of the time, is outwardly.
We visualize images, places, and events away from us objectively.
Let us see how it works when we internalize the practice.
Let us shift the field of practice to the space in our Hrudaya, at the central region in the chest.
It is a sacred space preferred by the Yogis for contemplation and meditation.
योगिहृद्ध्यानगम्यं
“yogi hruddhyaana gamyam”
‘By meditating on Him, the Yogis aim at realizing Him in their hearts.’
It is also known as Hrudaya Aakasa. There is a reference to it in the Taittariya Upanishad:
“In the space that there is in the heart, is this Purusha who is realizable through knowledge, and who is immortal and effulgent.” (Part I Chapter 6)
So HRUDAYA is a sacred space and Paramatma resides there together with Prana and Jivatma.
We often hear the expression “Hrudaya Kamala”, the Lotus of the Heart.
Let us fix our attention on this Lotus, using the technique of Visualization.
Let us choose the space in the Hrudaya Kamala for practicing Bhakti.
Let us make a small beginning.
With closed eyes focus your attention
on the middle of your chest.
Visualize the vast space within.
It is the Hrudayakaasha.
(With closed eyes)
Visualize a JYOTHI
with full brilliance,
The Light of Lights,
And pray:
ॐ असतो मा सद्गमय ।
तमसो मा ज्योतिर्गमय ।
मृत्योर्मा अमृतं गमय ।
ॐ शान्तिः शान्तिः शान्तिः ॥
Om Asatoma Sad-Gamaya ।
Tamaso Maa Jyotir-Gamaya ।
Mrytyor-Maa Amritam Gamaya ।
Om Shaantih Shaantih Shaantihi । ।
Lead me from Untruth to Truth.
Lead me from Darkness to Light.
Lead me from Death to Immortality.
Om Shantih. Shantih. Shantih.
May I be blessed with Divine Grace!
Daivaanugraham.
I invite the Divine Grace
Through the channel of my Buddhi
into the Lake of my Manas
to fill its waves with Ananda.
Open your eyes gently.. gently.
This comes as a new experience!
——————
ಭಗವದ್ಗೀತಾ: ಸಾಧನ ಮಾರ್ಗ
ಸಾಧನ ಮಾರ್ಗವನ್ನು ಅನುಸಂಧಾನ ಮಾಡಲು ಇರುವ ನಾಲ್ಕು ಮಾರ್ಗಗಳಲ್ಲಿ ಭಕ್ತಿಮಾರ್ಗವು ಪ್ರಧಾನವಾದುದು. ಅಧ್ಯಯನ, ಸ್ವಧರ್ಮ – ಅನುಷ್ಠಾನ ಮತ್ತು ಧ್ಯಾನ ಇವು ಉಳಿದ ಮೂರು ಮಾರ್ಗಗಳು.
ಭಕ್ತಿ ಎನ್ನುವುದು ಮನಸ್ಸಿನ ಒಂದು ಸ್ಥಿತಿ. ಆ ಸ್ಥಿತಿ ಅಥವಾ ಭಾವದಲ್ಲಿ ಭಕ್ತನು ತನ್ನ ಉಪಾಸನೆಯ ಗುರಿಯನ್ನು ಹುಡುಕಲು ಮತ್ತು ಅದರೊಂದಿಗೆ ಸಂಯೋಗ ಹೊಂದಲು ಅನುಭವಿಸುವ ತೀವ್ರವಾದ ತುಡಿತ ಮತ್ತು ದೊಡ್ಡ ಪ್ರೇರೇಪಣೆಯೇ ಭಕ್ತಿ. ಭಕ್ತನು ತೀವ್ರ ಭಾವೋದ್ವೇಗದಿಂದ ಗುರಿ ತಲುಪುತ್ತಾನೆ.
ಶ್ರೀ ಶಂಕರರು ಅವರು ರಚಿಸಿದ “ಶಿವಾನಂದ ಲಹರಿ” ಯಲ್ಲಿನ ಒಂದು ಶ್ಲೋಕದಲ್ಲಿ ಭಕ್ತಿಯನ್ನು ಹೀಗೆ ನಿರೂಪಿಸುತ್ತಾರೆ.
ಅನ್ಕೋಲಂ ನಿಜ ಬೀಜ ಸಂತತಿರ್–ಅಯಸ್ಕಾಂತೋಪಲಂ ಸೂಚಿಕಾ
ಸಾಧ್ವೀ ನೈಜ ವಿಭುಂ ಲತಾ ಕ್ಶಿತಿ–ರುಹಂ ಸಿಂಧುಹ್–ಸರಿದ್–ವಲ್ಲಭಮ್
ಪ್ರಾಪ್ನೋತೀಹ ಯಥಾ ತಥಾ ಪಶು–ಪತೇಃ ಪಾದಾರವಿಂದ–ದ್ವಯಂ
ಚೇತೋವೃತ್ತಿರ್–ಉಪೇತ್ಯ ತಿಶ್ಠತಿ ಸದಾ ಸಾ ಭಕ್ತಿರ್–ಇತಿ–ಉಚ್ಯತೇ 61 ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅಂಕೋಲ ಮರದ ಬೀಜಗಳು ತನ್ನ ತಾಯಿ ವೃಕ್ಷದೆಡೆಗೆ ಮರಳಿ ಹೋಗಲು ತನ್ನ ಪಥವನ್ನು ಕಂಡುಕೊಂಡಂತೆ ಸಮೀಪದಲ್ಲೇ ಇರಿಸಲಾದ ಅಯಸ್ಕಾಂತದಿಂದ ಅಡೆತಡೆಯಿಲ್ಲದೆ ಸೆಳೆಯಲ್ಪಡುವ ಕಬ್ಬಿಣದ ಸೂಜಿಯಂತೆ
ಹಿತಕ್ಕಾಗಿ ಮತ್ತು ಆನಂದಕ್ಕಾಗಿ ತನ್ನ ಪ್ರೀತಿಯ ಗಂಡನೆಡೆಗೆ ಅನನ್ಯವಾಗಿ ನೋಡುವ ನೆಚ್ಚಿನ ಸತಿಯಂತೆ ಬೆಳೆಯುವ ಬಳ್ಳಿಯು ಹತ್ತಿರದ ಮರವನ್ನು ಆಸರೆಗಾಗಿ ಬಯಸಿದಂತೆ ಹರಿಯುವ ನದಿಯು ಸಮುದ್ರವನ್ನು ಸೇರಿ ಅದರಲ್ಲಿ ಒಂದಾಗಲು ಬಯಸಿ ರಭಸದಿಂದ ನುಗ್ಗುವಂತೆ
ನನ್ನ ಮನವು ಕಾತರದಿಂದ ಶಿವನ ಎರಡು ಪಾದಾರವಿಂದಗಳನ್ನು ಕಾಣಲು ಸೇರಲು ಮತ್ತು ಅಲ್ಲಿಯೇ ಸದಾ ಸ್ಥಿರವಾಗಿರಲು ಹಾತೊರೆಯುತ್ತಿದೆ.
ಅದನ್ನೇ ನಿಶ್ಚಯವಾಗಿ ಭಕ್ತಿ ಎಂದು ಕರೆಯಲಾಗುತ್ತದೆ.
ದೈವಿಕ ಸಂಯೋಗವನ್ನು ಹೊಂದುವ ಬಯಕೆ, ಉತ್ಕಟತೆಯು, ಸತತವಾಗಿ ಮತ್ತು ಸ್ಥಿರವಾಗಿ ಅಭ್ಯಾಸ ಮಾಡುವ ಅವಶ್ಯಕತೆಯನ್ನು ಬೇಡುತ್ತದೆ. ಹಾಗಾಗಿ, ಸಂಪೂರ್ಣವಾಗಿ ಇದರಲ್ಲಿ ತಲ್ಲೀನರಾಗುವುದರಿಂದ, ತನ್ನ ವ್ಯಕ್ತಿತ್ವದ ಮೂರು ಆಯಾಮಗಳಲ್ಲಿ ಅಂತಃಶಕ್ತಿಯನ್ನು ವೃದ್ಧಿಸಿಕೊಳ್ಳುವುದರಿಂದ, ಆ ಬಯಕೆಯು ತೀವ್ರಗೊಳ್ಳುತ್ತದೆ.
ಎಲ್ಲ ಚೈತನ್ಯಗಳನ್ನು ಒಗ್ಗೂಡಿಸಿಕೊಂಡ ಶರೀರದ ಸ್ತರದಲ್ಲಿ
ವಾಕ್ ಶುದ್ಧಿಯನ್ನು ಶ್ರುತಿಗೂಡಿಸಿಕೊಂಡ ವಾಕ್ಕಿನ ಸ್ತರದಲ್ಲಿ, ಮತ್ತು
ಮನಸ್ಸು ಮತ್ತು ಬುದ್ಧಿಯ ಅಂಗಗಳನ್ನು ಸಜ್ಜಾಗಿಸಿಕೊಂಡ ಚಿತ್ತದ ಸ್ತರದಲ್ಲಿ.
ನವವಿಧದ ಭಕ್ತಿಗಳಲ್ಲಿ, ಸ್ಮರಣವು ನಮ್ಮ ಉದ್ದೇಶವನ್ನು ಸಾಧಿಸುವುದರಲ್ಲಿ ಉತ್ತಮವಾದುದು ಎಂದು ತೋರುತ್ತದೆ. ಶ್ರವಣ ಮತ್ತು ಕೀರ್ತನ ಇವುಗಳಿಗಿಂತಲೂ ಸ್ಮರಣದ ಆಚರಣೆಯಲ್ಲಿ ನಾವು ಪಾಲ್ಗೊಳ್ಳುವ ಪ್ರಕ್ರಿಯೆ ಜಾಸ್ತಿಯಿರುತ್ತದೆ. ಶ್ರವಣ ಮತ್ತು ಕೀರ್ತನದ ಮೂಲಕ ನಾವು ಏನನ್ನು ಅನುಭವಿಸುತ್ತೇವೆಯೋ ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅಥವ ಜ್ಞಾಪಿಸಿಕೊಳ್ಳುವುದು “ಸ್ಮರಣ” ಎಂಬುದರ ಅರ್ಥವಾಗಿರುತ್ತದೆ. ಇದು “ಮನನ” ಮತ್ತು “ಧ್ಯಾನ”ವನ್ನೂ ಒಳಗೊಂಡಿರುತ್ತದೆ. ಅಂದರೆ ನಾವು ಅದರ ಅರ್ಥವನ್ನು ಗ್ರಹಿಸಿದಾಗ ಮತ್ತು ಅದನ್ನು ಕುರಿತು ಧ್ಯಾನ ಮಾಡಿದಾಗ ನಮ್ಮ ಅನುಭವವು ಕ್ರೋಢೀಕರಣಗೊಳ್ಳುತ್ತದೆ.
ನಮ್ಮ ದೈವಿಕ ಆಚರಣೆಗಳಲ್ಲಿ, ಬಹಳಷ್ಟು ಕಾಲ ನಮ್ಮ ಗಮನವು ಹೊರಮುಖವಾಗಿರುತ್ತದೆ. ನಾವು ಆಕಾರಗಳನ್ನು, ಸ್ಥಳಗಳನ್ನು ಮತ್ತು ಘಟನೆಗಳನ್ನು ಪಕ್ಷಪಾತರಹಿತ ರೀತಿಯಲ್ಲಿ ನಮ್ಮಿಂದ ದೂರದಲ್ಲಿರುವಂತೆ ಕಾಣುತ್ತೇವೆ.
ಈ ಆಚರಣೆಗಳನ್ನು ನಾವು ಅಂತರಂಗದ ದೃಷ್ಟಿಯಲ್ಲಿ ನೋಡಿದರೆ ಅದು ಹೇಗೆ ಕೆಲಸಮಾಡುತ್ತದೆಂಬುದನ್ನು ನೋಡೋಣ.
ನಮ್ಮ ಎದೆಯ ಮಧ್ಯ ಭಾಗದಲ್ಲಿರುವ ಹೃದಯದ ಒಳಗಿರುವ ಸ್ಥಳಕ್ಕೆ ನಮ್ಮ ಆಚರಣೆಯ ಕ್ಷೇತ್ರವನ್ನು ಬದಲಾಯಿಸೋಣ. ಧ್ಯಾನಕ್ಕಾಗಿ ಮತ್ತು ಯೋಗಸಮಾಧಿಗಾಗಿ, ಯೋಗಿಗಳಿಂದ ಇಷ್ಟಪಟ್ಟು ಆರಿಸಿಕೊಳ್ಳಲಾದ ಪವಿತ್ರ ಸ್ಥಳ ಇದು.
ಯೋಗಿ ಹೃಧ್ಯಾನಗಮ್ಯ೦
ಭಗವಂತನ ಕುರಿತು ಧ್ಯಾನ ಮಾಡುತ್ತಾ, ಯೋಗಿಗಳು ತಮ್ಮ ಹೃದಯಗಳಲ್ಲಿ ಆತನನ್ನು ಸಾಕ್ಷಾತ್ಕಾರಿಸಿಕೊಳ್ಳುತ್ತ ಲಕ್ಷ್ಯವಿರಿಸುತ್ತಾರೆ.
ಇದನ್ನು “ಹೃದಯ ಆಕಾಶ” ಎಂದೂ ಸಹ ಕರೆಯಲಾಗುತ್ತದೆ. ಇದರ ಬಗ್ಗೆ ತೈತ್ತಿರೀಯ ಉಪನಿಷತ್ತಿನಲ್ಲಿ ಉಲ್ಲೇಖವಿದೆ.
“ಹೃದಯದ ಒಳಗೆ ಇರುವ ಪ್ರದೇಶದಲ್ಲಿ, ಜ್ಞಾನದಿಂದ ಸಾಕ್ಷಾತ್ಕರಿಸಿಕೊಳ್ಳಬಲ್ಲ, ಸದಾಪ್ರಕಾಶಿಸುವ ಮತ್ತು ಚಿರಂತನವಾದ ಈ ಪುರುಷನಿದ್ದಾನೆ.”
ಆದುದರಿಂದ ಹೃದಯವು ಒಂದು ಪವಿತ್ರ ಸ್ಥಳ ಮತ್ತು ಅಲ್ಲಿ ಪರಮಾತ್ಮನು ಪ್ರಾಣ ಹಾಗೂ ಜೀವಾತ್ಮರೊಡಗೂಡಿ ನೆಲೆಸಿರುತ್ತಾನೆ. “ಹೃದಯ ಕಮಲ” ಎಂಬ ಶಬ್ದ ಪ್ರಯೋಗವನ್ನು ನಾವು ಆಗಾಗ ಕೇಳುತ್ತಿರುತ್ತೇವೆ.
ಕಲ್ಪನೆ ಎಂಬ ತಂತ್ರಕೌಶಲ್ಯವನ್ನು ಬಳಸಿ ನಮ್ಮ ಗಮನವನ್ನು ಈ ಕಮಲದ ಮೇಲೆ ನೆಲೆಗೊಳಿಸೋಣ.
ಭಕ್ತಿಯನ್ನು ಆಚರಿಸಲು ಹೃದಯ ಕಮಲದಲ್ಲಿ ಇರುವ ಸ್ಥಳವನ್ನು ಆಯ್ದುಕೊಳ್ಳೋಣ
ಈ ನಿಟ್ಟಿನಲ್ಲಿ ನಾವು ಸಣ್ಣದಾಗಿ ಪ್ರಾರಂಭಿಸೋಣ.
ನೀವು ನಿಮ್ಮ ಲಕ್ಷ್ಯವನ್ನು, ನಿಮ್ಮ ಎದೆಯ ಮಧ್ಯಭಾಗದಲ್ಲಿ ಕೇಂದ್ರೀಕರಿಸಿ. ಅಲ್ಲಿರುವ ವಿಶಾಲವಾದ ಪ್ರದೇಶವನ್ನು ಮನಗಾಣಿರಿ. ಅದೇ ಹೃದಯಾಕಾಶವು.
(ಕಣ್ಣುಗಳನ್ನು ಮುಚ್ಚಿಕೊಂಡು)
ದೇದೀಪ್ಯಮಾನವಾಗಿ ಬೆಳಗುತ್ತಿರುವ, ದೀಪಗಳ ದೀಪವಾದ, ಜ್ಯೋತಿಯನ್ನು ಕಲ್ಪಿಸಿಕೊಂಡು ಅದನ್ನೇ ದಿಟ್ಟಿಸಿ ನೋಡಿ. ಈಗ ಪ್ರಾರ್ಥಿಸಿ.
ಓಂ, ಅಸತೋಮಾ ಸದ್ಗಮಯ,
ತಮಸೋಮಾ ಜ್ಯೋತಿರ್ಗಮಯ,
ಮೃತ್ತ್ಯೋರ್ಮಾ ಅಮೃತಂಗಮಯ,
ಓಂ ಶಾಂತಿಃ ಶಾಂತಿಃ ಶಾಂತಿಃ
ಅಸತ್ಯದಿಂದ ಸತ್ಯದೆಡೆಗೆ ನನ್ನನ್ನು ನಡೆಸು.
ತಮಸ್ಸಿನಿಂದ ಜ್ಯೋತಿಯೆಡೆಗೆ ನನ್ನನ್ನು ನಡೆಸು.
ಮೃತ್ಯುವಿನಿಂದ ಅಮೃತತ್ವದೆಡೆಗೆ ನನ್ನನ್ನು ನಡೆಸು.
ಓಂ ಶಾಂತಿಃ ಶಾಂತಿಃ ಶಾಂತಿಃ
ದೈವೀಕ ಕೃಪಾಕಟಾಕ್ಷದಿಂದ ನನಗೆ ಅನುಗ್ರಹ ಉಂಟಾಗಲಿ!
ದೈವಾನುಗ್ರಹ.
ನನ್ನ ಬುದ್ಧಿಯೆಂಬ ವಾಹಿನಿಯ
ಮುಖಾಂತರ ನನ್ನ ಮನಸ್ಸೆಂಬ ಸರೋವರವನ್ನು ಆನಂದವೆಂಬ ತರಂಗಗಳಿಂದ ತುಂಬಲೆಂದು ನಾನು ದೈವೀಕ ಕೃಪಾಕಟಾಕ್ಷವನ್ನು ಆಹ್ವಾನಿಸುತ್ತೇನೆ.ಇದು ಒಂದು ಹೊಸ ಅನುಭವದಂತೆ ತೋರಿಬರುತ್ತಿದೆ.