• Skip to primary navigation
  • Skip to main content
  • Skip to primary sidebar
Lanka Krishna Murti Foundation

Lanka Krishna Murti Foundation

  • Home
  • Aims & Objectives
  • Contact Us
  • News
  • Photos
  • Videos
  • E BOOKS
  • Disclaimer
  • Vishnushasranama A Sloka A Day
    • SRI VISHNUSAHASRANAMAM(Sanskrit, English and Kannada)
    • ಶ್ರೀ ವಿಷ್ಣುಸಹಸ್ರನಾಮ
  • Bhagavad Gita
    • SRIMAD BHAGAVAD GITA CHAPTER 1
    • SRIMAD BHAGAVAD GITA CHAPTER 2
    • SRIMAD BHAGAVAD GITA CHAPTER 3
    • SRIMAD BHAGAVADGITA CHAPTER 4
    • SRIMADBHAGAVADGITA CHAPTER 5
    • SRIMADBHAGAVADGITA CHAPTER 6
    • SRIMADBHAGAVADGITA CHAPTER 7
    • SRIMADBHAGAVADGITA CHAPTER 8
    • SRIMADBHAGAVADGITA CHAPTER 9
    • Srimadbhagavadgita Chapter 10
    • SRIMADBHAGAVADGITA CHAPTER 11
    • SRIMADBHAGAVADGITA CHAPTER 12
    • SRIMADBHAGAVADGITA CHAPTER 13
    • SRIMAD BHAGAVADGITA CHAPTER 14
    • SRIMADBHAGAVDGITA CHAPTER 15
    • SRIMADBHAGAVDGITA CHAPTER 16
    • SRIMADBHAGAVADGITA CHAPTER 17
    • SRIMADBHAGAVADGITA CHAPTER 18
    • AUDIOS OF CHAPTERS 1 TO 18 OF SRIMAD BHAGAVAD GITA
  • A SHUBHASHITA A DAY (1-300)
  • RECENT ARTICLES
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of Gayatri- ಗಾಯತ್ರಿ – Written by Late Lanka Krisna Murti
    • ನನ್ನ ಪ್ರೀತಿಯ ತಂದೆಯ ನೆನಪು
    • A Sloka A Day
  • Articles
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of Gayatri- ಗಾಯತ್ರಿ – Written by Late Lanka Krisna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • Tyagashilpa-Drama ತ್ಯಾಗ ಶಿಲ್ಪ – ನಾಟಕ ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
  • ARTICLE OF THE MONTH
    • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
    • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
    • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
    • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
    • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
    • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ARCHIVES
    • bIjAkSara’s or the ‘Seed Words’ of Dharma
    • Universal Message of all Religions of the World By Lanka Krishna Murti
    • Common Aspects in Different Religions By Late L. Krishna Murti
    • Biographical sketch of Lanka Krishna Murti
    • ನಿಜಾಯಿತಿ (Nijayithi)- ಪಿ .ವೆಂಕಟಾಚಲಂ
    • ನನ್ನ ಪ್ರೀತಿಯ ತಂದೆಯ ನೆನಪು
    • ವಾನಪ್ರಸ್ಥ ಧರ್ಮ – ಸಂನ್ಯಾಸ ಧರ್ಮ ದಿ.ಲಂಕಾ ಕೃಷ್ಣಮೂರ್ತಿ
    • ವಿಶ್ವ ಸಂಗೀತ – ಲಂಕಾ ಕೃಷ್ಣಮೂರ್ತಿ
    • ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ
    • ಶ್ರೀ ದ್ವೈಮಾತೃಕ – ದಿ.ಲಂಕಾ ಕೃಷ್ಣಮೂರ್ತಿ
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • SOME ASPECTS OF SANATANA DHARMA – By Dr. L.Adinarayana
    • ಎಲ್ಲಾ ಜಲಮಯ-ಲಂಕಾ ಕೃಷ್ಣಮೂರ್ತಿ
    • ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆ- ದಿ.ಲಂಕಾ ಕೃಷ್ಣಮೂರ್ತಿ
  • ಶ್ರೀ ವಿಷ್ಣುಸಹಸ್ರನಾಮ
  • SRI VISHNUSAHASRANAMAM(Sanskrit, English and Kannada)

May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4

ಧರ್ಮಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನ)

                     ಭಜಗೋವಿಂದಂ

1. ಭಜಗೋವಿಂದಂ ಭಜಗೋವಿಂದಂ 

     ಭಜಗೋವಿಂದಂ ಮೂಢಮತೇ I 

     ಸಂಪ್ರಾಪ್ತೇ ಸನ್ನಿಹಿತೇಕಾಲೇ

     ನಹಿ ನಹಿರಕ್ಷತಿ ಡುಕೃಞ ಕರಣೇ  II

 ಬರಿಯ ಪಾಂಡಿತ್ಯಕ್ಕಾಗಿ ವಿದ್ಯೆ ಕಲಿಯುವುದನ್ನು ಶಂಕರಾಚಾರ್ಯರು ಅನೇಕ ಕಡೆ ವಿರೋಧಿಸಿದ್ದಾರೆ. ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಲು ಪ್ರತಿಯೊಬ್ಬನೂ ಮೋಕ್ಷ ಸಾಧನವಾದ ಆತ್ಮಜ್ಞಾನವನ್ನು ಸಂಪಾದಿಸಬೇಕು ಮತ್ತು ಅದರಂತೆ ಮೋಕ್ಷ ಸಾಧನವನ್ನು ಮಾಡಬೇಕು ಎಂಬುದೇ ಅವರ ಅಭಿಪ್ರಾಯ. ಒಂದುಕಡೆ ಅವರು ಹೇಳುತ್ತಾರೆ–

ವಾಗ್ವೈಖರೀ ಶಬ್ದ ಝರೀ ಶಾಸ್ತ್ರ ವ್ಯಾಖ್ಯಾನ ಕೌಶಲಂ I 

ಆತ್ಮ ಜ್ಞಾನವಿಹೀನಸ್ಯ ಭುಕ್ತಯೇ ನತುಮುಕ್ತಯೇ I I 

ಜನ ಬೆರಗಾಗುವಂತೆ ಭಾಷಣ ಬಿಗಿಯುವ ಶಕ್ತಿ, ಶಾಸ್ತ್ರಗಳನ್ನು ಬಿಡಿಸಿ ಬಿಡಿಸಿ ವ್ಯಾಖ್ಯಾನ ಮಾಡುವ ಶಕ್ತಿ ಇವೆಲ್ಲಾ ಇದ್ದು ಆತ್ಮಜ್ಞಾನವಿಲ್ಲದಿರುವ ಪಂಡಿತನಿಗೆ ಇವೆಲ್ಲಾ ಹೊಟ್ಟೆಹೊರೆಯಲು ಉಪಯೋಗಕರವೇ ಹೊರತು ಸಂಸಾರದಿಂದ ಬಿಡುಗಡೆ ಹೊಂದಲು ಉಪಯೋಗಕರವಲ್ಲ.

‘ಶಿವಾನಂದ ಲಹರಿ’ಯಲ್ಲಿ ತರ್ಕ ಶಾಸ್ತ್ರವನ್ನು ಕಲಿತು ತರ್ಕ ಮಾಡಿ ಮಾಡಿ ಗಂಟಲನ್ನೇಕೆ ನೋಯಿಸುತ್ತೀಯೆ? ಇದು ಯಮನ ಪಾಶದಿಂದ ನಿನ್ನನ್ನು ತಪ್ಪಿಸಲಾರದು. ಇದಕ್ಕೆ ಬದಲಾಗಿ ಶಿವಶರಣನಾಗು ಎಂದು ಬೋಧಿಸಿದ್ದಾರೆ. 

ಭಜಗೋವಿಂದಂ ಶ್ಲೋಕಗಳನ್ನು ಅವರು ರಚಿಸಿದ ಸಂದರ್ಭ ಹೀಗಿದೆ. ಒಂದು ಸಲ ಅವರು ಒಬ್ಬ ಮುದುಕನನ್ನು ನೋಡಿದರು. ಆತ ಅಷ್ಟು ಮುದುಕನಾದರೂ ಇನ್ನೂ ವ್ಯಾಕರಣದಲ್ಲಿ ಪಂಡಿತನೆಂದು ಎನಿಸಿಕೊಳ್ಳಬೇಕೆಂಬ ಕೀರ್ತಿ ಮತ್ತು ಧನದಾಕಾಂಕ್ಷೆಯಿಂದ ವ್ಯಾಕರಣವನ್ನು ಕಂಠಪಾಠ ಮಾಡುತ್ತಿದ್ದನು. ಆಚಾರ್ಯರು ನೋಡುವಾಗ್ಗೆ ಆ ಮುದುಕ  ‘ಡುಕೃಞ ಕರಣೇ’ ಎಂಬ ಧಾತುವನ್ನು ಕಂಠಪಾಠ ಮಾಡುತ್ತಿದ್ದನು.  ‘ಡುಕೃಞ’ ಅನ್ನುವುದರಲ್ಲಿ ಕೃ (ಹಿಂದಿಯಲ್ಲಿ ಕರ್) ಅನ್ನುವ ಧಾತುವನ್ನು ‘ಕರಣೇ” ಅಂದರೆ ‘ಮಾಡುವುದು’ ಎಂಬ ಅರ್ಥದಲ್ಲಿ ಪ್ರಯೋಗಿಸಬೇಕು ಎಂದು ಇದರ ಅರ್ಥ. ಇದನ್ನು ಕಂಠಪಾಠ ಮಾಡುತ್ತಿದ್ದ ಮುದುಕನನ್ನು ನೋಡಿ ಶಂಕರಾಚಾರ್ಯರಿಗೆ ‘ಅಯ್ಯೋ, ಈತ ಜೀವನವನ್ನು ವ್ಯರ್ಥಗೊಳಿಸುತ್ತಿದ್ದಾನಲ್ಲಾ’ ಎಂದು ಮರುಕವುಂಟಾಗಿ ಆತನಿಗೆ ಜ್ಞಾನೋಪದೇಶ ಮಾಡಿದರು.

ಅಯ್ಯಾ ಬುದ್ಧಿ ಇಲ್ಲದವನೇ ನಿನಗೆ ಮರಣಕಾಲ ಸಮೀಪದಲ್ಲಿದೆ. ಅದು ಬಂದಾಗ ಈ ಡುಕೃಞಕರಣೇ ಎಂಬ ಈ ವ್ಯಾಕರಣ ಸೂತ್ರ ನಿನ್ನ ನೆರವಿಗೆ ಬರುವುದಿಲ್ಲ. ನಿನ್ನ ನೆರವಿಗೆ ಬಂದು ನಿನಗೆ ಸದ್ಗತಿ ಉಂಟಾಗಬೇಕಾದರೆ ನೀನು ಮಾಡಿದ ಪರಮಾತ್ಮನ ಆರಾಧನೆ ಒಂದೇ. ಆದುದರಿಂದ ಇದನ್ನು ಬಿಟ್ಟು ಈಗಲಾದರೂ ಗೋವಿಂದನನ್ನು ಆಶ್ರಯಿಸು. ಆತನನ್ನು ತಿಳಿದು ಭಕ್ತಿಯಿಂದ ಆರಾಧಿಸು. ಎಂದು ಈ ಮೊದಲನೇ ಶ್ಲೋಕದ ತಾತ್ಪರ್ಯ.  

2. ಮೂಢ ಜಹೀಹಿ ಧನಾಗಮ ತೃಷ್ಣಾಂ

ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ ।

ಯಲ್ಲಭಸೇ ನಿಜಕರ್ಮೋಪಾತ್ತಂ

ವಿತ್ತಂ ತೇನ ವಿನೋದಯ ಚಿತ್ತಂ ॥ 2 ॥

ಮೊದಲನೇ ಶ್ಲೋಕದಲ್ಲಿ ಮೋಕ್ಷಕ್ಕಾಗಿ ಪ್ರಯತ್ನ ಮಾಡದೇ ಬರೀ ವಿದ್ಯೆಗಾಗಿ ಶ್ರಮಿಸಿದವನಿಗೆ ಬೋಧನೆ ಮಾಡಿದ್ದಾಯಿತು. ಈ ಸಂಸಾರದಲ್ಲಿ ಮುಳುಗಿರುವವರು ಇನ್ನೂ ಅನೇಕ ವಿಧದ ಜನ ಇದ್ದಾರೆ. ಒಬ್ಬೊಬ್ಬರಲ್ಲಿ  ಒಂದೊಂದು ವಿಷಯದ ಮೇಲೆ ಅತ್ಯಾಶೆ, ಮಮಕಾರ, ಧನಮೋಹ, ಸ್ತ್ರೀ ಮೋಹ, ಸಂಸಾರದಲ್ಲಿ ಸುಖವಿದೆ, ಇದೇ ಶಾಶ್ವತ ಎಂಬ ಭ್ರಾಂತಿ, ಹೆಂಡತಿ, ಮಕ್ಕಳು, ಬಂಧುಗಳು ಮುಂತಾದವರ ಮೇಲೆ ಮೋಹ, ಗರ್ವ, ಆಶೆ, ಪಾಪ ಕಾರ್ಯಾಸಕ್ತಿ, ದುಃಖ, ಅಜ್ಞಾನ, ಇವುಗಳಿಂದ ಸಂಸಾರದಲ್ಲಿ ಬಿದ್ದು ನರಳುತ್ತಿರುವ ಜನರಿಗೆ ಜ್ಞಾನೋಪದೇಶ ಮಾಡಲು ಆಚಾರ್ಯರು ಮುಂದಿನ ಶ್ಲೋಕಗಳನ್ನು ರಚಿಸಿದರು.

2ನೇ ಶ್ಲೋಕದ ಭಾವಾರ್ಥ ಹೀಗಿದೆ:

ಬುದ್ಧಿಯಿಲ್ಲದವನೇ, ಧನದ ಮೇಲಿನ ಆಸೆಯನ್ನು ಬಿಟ್ಟುಬಿಡು. ಅದಕ್ಕಾಗಿ ಕೆಟ್ಟ ಮಾರ್ಗ ಅನುಸರಿಸಬೇಡ. ಸನ್ಮಾರ್ಗದಲ್ಲಿಯೇ ನಿನ್ನ ಮನಸ್ಸಿರಲಿ. ಆಸೆಯ ಬೇಗೆಯಿಂದ ಮನಸ್ಸನ್ನು ಬಿಡಿಸು. ಜೀವಿಸಿರುವುದಕ್ಕೆ ನಿನಗೆ ಧನ ಬೇಕು. ಅದಕ್ಕಾಗಿ ಕಷ್ಟಪಟ್ಟು ನಿನ್ನ ಜೀವನ ವೃತ್ತಿಯನ್ನು ಮಾಡು. ಕಷ್ಟವಿಲ್ಲದೆ ಹಣ ಸಂಪಾದಿಸಲು ಯೋಚಿಸಬೇಡ. ನಿನ್ನ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿಯವರೊಂದಿಗೆ ಸ್ಪರ್ಧಿಸಬೇಡ. ನಿನ್ನ ಕಷ್ಟಾರ್ಜಿತ ಕಡಿಮೆಯಾದರೂ ಅದರಿಂದಲೇ ತೃಪ್ತನಾಗು. ಅತೃಪ್ತಿ ಬಿಟ್ಟುಬಿಡು. ಇತರರನ್ನು ನೋಡಿ ಅಸೂಯಾ ಮತ್ಸರಗಳನ್ನು ಪಟ್ಟು ಮನಸ್ಸು ನೋಯಿಸಿಕೊಳ್ಳಬೇಡ ಕಷ್ಟಾರ್ಜಿತವನ್ನು ತೃಪ್ತಿಯಿಂದ ಉಂಡು ಅದರ ಆನಂದವನ್ನು ಅನುಭವಿಸು.

3. ನಾರೀ ಸ್ತನಭರ ನಾಭೀನಿವೇಶಂ

ಮಿಥ್ಯಾ ಮಾಯಾಮೋಹಾವೇಶಂ ।

ಏತನ್ಮಾಂಸವಸಾದಿ ವಿಕಾರಂ

ಮನಸಿ ವಿಚಿಂತಯ ವಾರಂ ವಾರಂ ॥ 

ಹೆಂಗಸಿನ ಮೊಲೆಗಳು ಹೊಕ್ಕಳು ಇವು ಭ್ರಮೆಯಿಂದ ಕೂಡಿರುವ ಮೋಹದ ಆವೇಶವನ್ನುಂಟುಮಾಡುತ್ತವೆ. ಇವುಗಳನ್ನು ಮಾಂಸ ಮತ್ತು ಕೊಬ್ಬಿನ  ವಿಕಾರಗಳೆಂದು ಪದೇ ಪದೇ ಮನಸ್ಸಿನಲ್ಲಿ ಭಾವಿಸು.

4 . ನಳಿನೀದಳಗತ ಸಲಿಲಂತರಳಂ

ತದ್ವಜ್ಜೀವಿತಮತಿಶಯಚಪಲಂ ।

ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ

ಲೋಕಂ ಶೋಕಹತಂ ಚ ಸಮಸ್ತಂ ॥ 

ತಾವರೆಲೆಯ ಮೇಲಿನ ನೀರಿನಂತೆ ಜೀವಿತ ಬಹಳ ಚಂಚಲವಾದದ್ದು. ಪ್ರಪಂಚವನ್ನೆಲ್ಲಾ ರೋಗ, ಸ್ವಾರ್ಥ, ದುಃಖ ಮುಂತಾದವು ಆವರಿಸಿಕೊಂಡು ಬಾಧಿಸುತ್ತಿವೆ ಎಂದು ತಿಳಿ.

5 . ಯಾವದ್ವಿತ್ತೋಪಾರ್ಜನ ಸಕ್ತಃ

ತಾವನ್ನಿಜಪರಿವಾರೋ ರಕ್ತಃ ।

ಪಶ್ಚಾದ್ಧಾವತಿ ಜರ್ಜರ ದೇಹೇ

ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ ॥ 

ನೀನು ಎಲ್ಲಿಯವರೆಗೆ ಹಣ ಸಂಪಾದಿಸುತ್ತ ಇರುತ್ತೀಯೋ ಅಲ್ಲಿಯವರೆಗೆ ನಿನ್ನ ಪರಿವಾರ ನಿನ್ನಲ್ಲಿ ಪ್ರೀತಿಯನ್ನು ತೋರಿಸುತ್ತದೆ. ನೀನು ಮುದುಕನಾಗಿ ಶಕ್ತಿಹೀನನಾದಾಗ ನಿನ್ನ ಗತಿ ಏನೆಂಬುದನ್ನು ಕೇಳುವವರೇ ಇರುವುದಿಲ್ಲ.

6. ಯಾವತ್ಪವನೋ ನಿವಸತಿ ದೇಹೇ

ತಾವತ್ಪೃಚ್ಛತಿ ಕುಶಲಂ ಗೇಹೇ ।

ಗತವತಿ ವಾಯೌ ದೇಹಾಪಾಯೇ

ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ ॥ 

ಶರೀರದಲ್ಲಿ ಪ್ರಾಣವಿರುವವರೆಗೆ ಎಲ್ಲರೂ ಅವನ ಕ್ಷೇಮಸಮಾಚಾರವನ್ನು ಕೇಳುತ್ತಾರೆ. ಪ್ರಾಣವಾಯು ಒಂದು ಸಲ ದೇಹವನ್ನು ಬಿಟ್ಟಿತೆಂದರೆ ಆ ಶರೀರವನ್ನು ನೋಡಿ ಆತನ ಹೆಂಡತಿಯೇ ಹೆದರಿಕೊಳ್ಳುತ್ತಾಳೆ.

7. ಅರ್ಥಮನರ್ಥಂ ಭಾವಯ ನಿತ್ಯಂ

ನಾಸ್ತಿ ತತಃ ಸುಖ ಲೇಶಃ ಸತ್ಯಮ್ |

ಪುತ್ರಾದಪಿ ಧನಭಾಜಾಂ ಭೀತಿಃ

ಸರ್ವತ್ರೈಷಾ ವಿಹಿತಾ ರೀತಿಃ ||   

ಧನವನ್ನು ಕೂಡಿಸುವುದರಿಂದ ಇಲ್ಲದ ತೊಂದರೆಗಳು ಬರುತ್ತವೆ. ಅದರಿಂದ ಸ್ವಲ್ಪವೂ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಧನ ಕೂಡಿಟ್ಟವನು ತನ್ನ ಮಗನಿಗೇ ಹೆದರುತ್ತಾನೆ. ಇದು ಪ್ರಪಂಚ ವ್ಯವಹಾರದ ಸ್ವರೂಪ.

8. ಬಾಲ ಸ್ತಾವತ್ ಕ್ರೀಡಾಸಕ್ತಃ

ತರುಣ ಸ್ತಾವತ್ ತರುಣೀಸಕ್ತಃ ।

ವೃದ್ಧ ಸ್ತಾವತ್ ಚಿಂತಾಸಕ್ತಃ

ಪರೇ ಬ್ರಹ್ಮಣಿ ಕೋಽಪಿ ನ ಸಕ್ತಃ ॥ 

ಚಿಕ್ಕಂದಿನಲ್ಲಿ ಆಟದಲ್ಲಿ ಕಾಲ ಕಳೆಯುತ್ತಾನೆ. ಯೌವನದಲ್ಲಿ ಸ್ತ್ರೀಲೋಲನಾಗಿ ಕಾಲ ಕಳೆಯುತ್ತಾನೆ. ಮುದುಕನಾದಾಗಂತೂ ಎಲ್ಲಿಯೂ ಇಲ್ಲದ ಚಿಂತೆಗಳು ಆವರಿಸುತ್ತವೆ. ಪರಬ್ರಹ್ಮನಲ್ಲಿ ಆಸಕ್ತಿ ಉಳ್ಳವನು ಒಬ್ಬನೂ ಇಲ್ಲ.

9. ಕಾ ತೇ ಕಾಂತಾ ಕಸ್ತೇ ಪುತ್ರಃ

ಸಂಸಾರೋಽಯಮತೀವ ವಿಚಿತ್ರಃ ।

ಕಸ್ಯ ತ್ವಂ ಕಃ  ಕುತ ಆಯಾತಃ

ತತ್ವಂ ಚಿಂತಯ ತದಿಹ ಭ್ರಾತಃ ॥

ಸೋದರನೇ! ನಿಜವಾಗಿಯೂ ನಿನ್ನ ಹೆಂಡತಿ ಯಾರು? ಪುತ್ರನಾರು? ನೀನು ಯಾರಿಗೆ ಸೇರಿದವನು? ಆಳವಾಗಿ ಯೋಚಿಸಿದರೆ ಈ ಸಂಸಾರವೆಲ್ಲಾ ವಿಚಿತ್ರವಲ್ಲವೇ? ನೀನು ಯಾರು ಮತ್ತು ಎಲ್ಲಿಂದ ಬಂದೆ ಎಂಬುದರ ಯಥಾರ್ಥವನ್ನು ಕುರಿತು ಆಳವಾಗಿ ಯೋಚಿಸು. 

10. ವಯಸಿ ಗತೇ ಕಃ ಕಾಮವಿಕಾರಃ

ಶುಷ್ಕೇ ನೀರೇ ಕಃ ಕಾಸಾರಃ ।

ಕ್ಷೀಣೇ ವಿತ್ತೇ ಕಃ ಪರಿವಾರಃ

ಜ್ಞಾತೇ ತತ್ತ್ವೇ ಕಃ ಸಂಸಾರಃ ॥

ಈ ಪ್ರಪಂಚದ ಸ್ವಭಾವವೇ ನಿರಂತರ ಪರಿಣಾಮ. ಯಾವ ಸ್ಥಿತಿಯೂ ಶಾಶ್ವತವಲ್ಲ. ಮುದುಕನಾದಾಗ ಅದುವರೆಗೂ ಇದ್ದ ಕಾಮ ವಿಕಾರವು ಎಲ್ಲಿಗೆ ಹೋಯಿತು? ನೀರು ತುಂಬಿರುವವರೆಗೂ ಸರೋವರವೆನಿಸಿಕೊಳ್ಳುತ್ತಿದ್ದು, ನೀರೆಲ್ಲಾ ಹೋದ ಮೇಲೆ ಸರೋವರವೆಂಬ ಹೆಸರೇ ಮಾಯವಾಗುವುದಿಲ್ಲವೇ?  ಧನವೆಲ್ಲಾ ಹೋದ ಮೇಲೆ ಪರಿವಾರವೆಲ್ಲಾ ಮಾಯವಾಗುವುದಿಲ್ಲವೇ? ಹಾಗೆಯೇ ನಿಜವಾದ ಜ್ಞಾನವಿಲ್ಲದಿರುವಾಗ ಕಾಣುತ್ತಿರುವ ಈ ಸಂಸಾರವು ಸಹ ನಿಜವಾದ ಜ್ಞಾನವುಂಟಾದ ಮೇಲೆ ಮಾಯವಾಗುತ್ತದೆ.

11. ಮಾ ಕುರು ಧನಜನ ಯೌವನ ಗರ್ವಂ

ಹರತಿ ನಿಮೇಷಾತ್ಕಾಲಃ ಸರ್ವಂ ।

ಮಾಯಾಮಯಮಿದಮಖಿಲಂ ಹಿತ್ವಾ

ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ ॥

ಧನ, ಜನಸಹಾಯ, ಯೌವನ ಇವೆಲ್ಲಾ ನನಗಿದೆಯೆಂದು ಗರ್ವಿಸಬೇಡ. ಕಾಲವು ಇದನ್ನೆಲ್ಲಾ ಒಂದು ನಿಮಿಷದಲ್ಲಿ ಅಪಹರಿಸಬಲ್ಲುದು. ಮಾಯಾಮಯವಾದ ಈ ಕಾಣುವ ಜಗತ್ತನ್ನು ನಂಬದೆ ಜ್ಞಾನ ಪಡೆದು ಶಾಶ್ವತವಾದ ಆನಂದವನ್ನು ಕೊಡುವ ಪರಬ್ರಹ್ಮತ್ವವನ್ನು ಪ್ರವೇಶಿಸು.

 12. ದಿನಮಪಿ ರಜನೀ ಸಾಯಂ ಪ್ರಾತಃ ।

ಶಿಶಿರ ವಸಂತೌ ಪುನರಾಯಾತಃ

ಕಾಲಃ ಕ್ರೀಡತಿ ಗಚ್ಛತ್ಯಾಯುಃ 

ತದಪಿನಮುಂಚತ್ಯಾಶಾವಾಯುಃ ॥ 

ಹಗಲು, ರಾತ್ರಿ, ಸಾಯಂಕಾಲ, ಬೆಳಗ್ಗೆ, ಶಿಶಿರ ಋತು, ವಸಂತ, ಹೀಗೆ ಕಾಲ ಒಂದು ಕಡೆ ಮಾಯವಾದದ್ದೇ ಪುನಃ ಬರುತ್ತ ಆಟವಾಡುತ್ತಿದೆ. ಆಯುಸ್ಸು ಕಳೆದುಹೋಗುತ್ತಿದೆ. ಆದರೂ ಆಶೆ ಎಂಬ ಬಲಿಷ್ಟವಾದ ಶಕ್ತಿ ನಮ್ಮನ್ನು ಬಿಡುತ್ತಿಲ್ಲ.

13. ಅಗ್ರೇ ವಹ್ನಿಃ ಪೃಷ್ಠೇ ಭಾನುಃ

ರಾತ್ರೌ ಚುಬುಕ–ಸಮರ್ಪಿತ–ಜಾನುಃ ।

ಕರತಲ–ಭಿಕ್ಷಸ್ತರುತಲವಾಸಃ

ತದಪಿ ನ ಮುಂಚತ್ಯಾಶಾಪಾಶಃ ॥

ಸರ್ವಸಂಗ ಪರಿತ್ಯಾಗ ಮಾಡಿದ್ದೇನೆಂದು ಸಂನ್ಯಾಸಿಯು ಮರದ ಕೆಳಗೆ ವಾಸ ಮಾಡುತ್ತಾನೆ. ಭಿಕ್ಷೆಯನ್ನು ಕೈಗಳಲ್ಲೇ ತಿನ್ನುತ್ತಾನೆ. ಚಳಿಗಾಲದಲ್ಲಿ ಮುಂದೆ ಬೆಂಕಿ ಹಾಕಿಕೊಂಡು ಬೆನ್ನಿಗೆ ಬಿಸಿಲು ತಗುಲುವಂತೆ ಕೂತಿರುತ್ತಾನೆ. ರಾತ್ರಿ ಹೊತ್ತಿನಲ್ಲಂತೂ ಮೊಣಕಾಲುಗಳಿಗೆ ಗಡ್ಡವನ್ನು ಸೇರಿಸಿ ಮುದುಡಿಕೊಂಡು ಮಲಗುತ್ತಾನೆ. ಇಂತಹವನಿಗೂ ಆಶಾಪಾಶವನ್ನು ತಪ್ಪಿಸಿಕೊಳ್ಳಲು ಕಷ್ಟವೆಂದ ಮೇಲೆ ಇತರರ ಗತಿ ಏನು?

14. ಜಟಿಲೋ ಮುಂಡೀ ಲುಂ ಜಿತ ಕೇಶಃ

ಕಾಷಾಯಾಂಬರ ಬಹುಕೃತ ವೇಷಃ |

ಪಶ್ಯನ್ನಪಿ ಚ ನಪಶ್ಯತಿ ಮೂಢಃ

ಉದರ ನಿಮಿತ್ತಂ ಬಹುಕೃತ ವೇಷಃ || 

ಜ್ಞಾನವಿಲ್ಲದವನು ವಿರಾಗಿಯಂತೆ ಜೀವಿಸಲು ಮತ್ತು ಹೊಟ್ಟೆಪಾಡಿಗಾಗಿ ಅನೇಕ ರೀತಿಯ ವೇಷಗಳನ್ನು ಧರಿಸುತ್ತಾನೆ. ಜಡೆಗಳನ್ನು ಬೆಳಸುತ್ತಾನೆ. ತಲೆ ಬೋಳಿಸಿಕೊಳ್ಳುತ್ತಾನೆ. ಅಥವಾ ಕೂದಲನ್ನು ಒಂದೊಂದಾಗಿ ಕೀಳಿಸಿಕೊಳ್ಳುತ್ತಾನೆ. ಕಾವಿ ಬಟ್ಟೆಗಳನ್ನು ಧರಿಸುತ್ತಾನೆ. ಇಷ್ಟು ಮಾಡಿದ ಮೇಲೂ ಅವನು ಸಂಸಾರದ ಅಸಾರತೆಯನ್ನು ಕಣ್ಣಾರೆ ನೋಡುತ್ತಿದ್ದರೂ ಅರಿಯಲಾರ.

15. ಅಂಗಂ ಗಲಿತಂ ಪಲಿತಂ ಮುಂಡಂ

ದಶನ ವಿಹೀನಂ ಜಾತಂ ತುಂಡಮ್ |

ವೃದ್ಧೋ ಯಾತಿ ಗೃಹೀತ್ವಾ ದಂಡಂ

ತದಪಿ ನ ಮುಂಚತ್ಯಾಶಾ ಪಿಂಡಮ್ || 

ಅಂಗಾಂಗಗಳು ಸಡಿಲವಾಗಿವೆ. ತಲೆಗೂದಲು ನೆರೆತಿದೆ. ಹಲ್ಲುಗಳೆಲ್ಲಾ ಬಿದ್ದುಹೋಗಿವೆ. ಮುದುಕನಾಗಿ ಕೋಲನ್ನೂರಿಸಿಕೊಂಡು ನಡೆಯುತ್ತಾನೆ. ಆದರೂ ಇವನು ಆಶೆಯ ತುತ್ತನ್ನು ಕೈಯಲ್ಲಿ ಹಿಡಿದುಕೊಂಡೇ ಇದ್ದಾನೆ. ಬಿಡಲಾರೆ.

16. ಪುನರಪಿ ರಜನೀ ಪುನರಪಿ ದಿವಸಃ

ಪುನರಪಿ ಪಕ್ಷಃ ಪುನರಪಿ ಮಾಸಃ I

ಪುನರಪ್ಯಯನಂ ಪುನರಪಿ ವರ್ಷಂ

ತದಪಿ ನಮುಂಚತ್ಯಾಶಾಮರ್ಷಂ II 

ಪುನಃ ರಾತ್ರಿ ಆಗುತ್ತೆ. ಪುನಃ ಹಗಲು ಬರುತ್ತೆ. ಆಮೇಲೆ ಪಕ್ಷ ಬರುತ್ತೆ, ಮಾಸ ತುಂಬುತ್ತೆ. ಪುನಃ ಆಯನ ಕಳೆಯುತ್ತೆ. ವರ್ಷ ಉರುಳುತ್ತೆ. ಹೀಗೆ ಕಾಲ ಚಕ್ರ ತಿರುಗುತ್ತಲೇ ಇದೆ. ಆದರೂ ಮನುಷ್ಯನು ದುರಾಸೆಯನ್ನೂ ಕ್ರೋಧವನ್ನೂ ಬಿಡುವುದಿಲ್ಲ.

17. ಕಸ್ತ್ವಂ ಕೋ‌ಹಂ ಕುತ ಆಯಾತಃ

ಕಾ ಮೇ ಜನನೀ ಕೋ ಮೇ ತಾತಃ |

ಇತಿ ಪರಿಭಾವಯ ನಿ ಸರ್ವಮಸಾರಂ

ಸರ್ವಂ ತ್ಯಕ್ತ್ವಾ ಸ್ವಪ್ನ ವಿಚಾರಂ II 

ನೀನು ಯಾರು ಗೊತ್ತೆ? ಆಲೋಚಿಸು. ಈ ಅಸಾರವಾದ ಜಗತ್ತನ್ನು ಸ್ವಪ್ನದಂತೆ ಗಮನಕ್ಕೆ ತೆಗೆದುಕೊಳ್ಳದೆ, ಯಾವಾಗಲೂ ನಾನು ಯಾರು, ನಾನು ಎಲ್ಲಿಂದ ಬಂದೆ, ನನ್ನ ತಾಯಿ ಯಾರು, ತಂದೆ ಯಾರು? ಎಂದು ಚೆನ್ನಾಗಿ ಆಲೋಚಿಸು.

18. ಪುನರಪಿ ಜನನಂ ಪುನರಪಿ ಮರಣಂ

ಪುನರಪಿ ಜನನೀ ಜಠರೇ ಶಯನಂ |

ಇಹ ಸಂಸಾರೇ ಬಹು ದುಸ್ತಾರೇ

ಕೃಪಯಾ‌ಪಾರೇ ಪಾಹಿ ಮುರಾರೇ || 

ಪುನಃ ಹುಟ್ಟುವುದು ಮತ್ತೆ ಸಾಯುವುದು ಪುನಃ ತಾಯಿಯ ಹೊಟ್ಟೆಯಲ್ಲಿ ಮಲಗಿರುವುದು ಹೀಗೆ ಅನಂತವಾಗಿ ನಡೆಯುತ್ತಲೇ ಇರುವುದು. ಈ ಸಂಸಾರಕ್ಕೆ ದಡ ಕಾಣುವುದಿಲ್ಲ. ಇದನ್ನು ದಾಟುವುದು ಕಷ್ಟ. ದೇವರೇ, ನನ್ನನ್ನು ಇದರಿಂದ ರಕ್ಷಿಸು.

19. ಸುಖತಃ ಕ್ರಿಯತೇ ರಾಮಾಭೋಗಃ

ಪಶ್ಚಾದ್ಧಂತ ಶರೀರೇ ರೋಗಃ |

ಯದ್ಯಪಿ ಲೋಕೇ ಮರಣಂ ಶರಣಂ

ತದಪಿನ ಮುಂಚತಿ ಪಾಪಾಚರಣಂ || 

ಮನುಷ್ಯನು ಸುಖದಲ್ಲಿ ಅತ್ಯಾಸಕ್ತನಾಗಿ ಮೆರೆಯುತ್ತಾನೆ. ಇದರ ಫಲವಾಗಿ ಶರೀರ ರೋಗಗ್ರಸ್ತವಾಗುತ್ತೆ. ಕೊನೆಗೆ ಎಲ್ಲರಿಗೂ ಮರಣವೇ ಗತಿ ಎಂದು ತಿಳಿದಿದ್ದರೂ ಪಾಪ ಮಾಡುವುದನ್ನು ಇವನು ಬಿಡುವುದಿಲ್ಲ.

20. ರಥ್ಯಾ ಚರ್ಪಟ ವಿರಚಿತ ಕಂಥಃ

ಪುಣ್ಯಾಪುಣ್ಯ ವಿವರ್ಜಿತ ಪಂಥಃ |

ನಾಹಂ ನತ್ವಂ ನಾಯಂ ಲೋಕಃ   

ತದಪಿ ಕಿಮರ್ಥಂ ಕ್ರಿಯತೇ ಶೋಕಃ || 

ಬೀದಿಗಳಲ್ಲಿ ಬಿದ್ದಿರುವ ಚಿಂದಿ ಬಟ್ಟೆಗಳ ಕಂತೆಯನ್ನು ಧರಿಸಿ, ಪುಣ್ಯ ಪಾಪಗಳ ಭೇದವನ್ನು ವರ್ಜಿಸಿ, ನಾನು, ನೀನು, ಈ ಲೋಕ ಎಂಬ ಭೇದ ದೃಷ್ಟಿಯಿರಬಾರದೆಂದು ನಂಬಿ ತಿರುಗುವ ಬೈರಾಗಿಯು ಮನಸ್ಸಿನಲ್ಲಿ ಒಂದೊಂದು ಸಲ ಏಕೆ ದುಃಖಿಸುತ್ತಾನೆ?

21. ಸತ್ಸಂಗತ್ವೇ ನಿಸ್ಸಂಗತ್ವಂ

ನಿಸ್ಸಂಗತ್ವೇ ನಿರ್ಮೋಹತ್ವಮ್ |

ನಿರ್ಮೋಹತ್ವೇ ನಿಶ್ಚಲಚಿತ್ತಂ

ನಿಶ್ಚಲಚಿತ್ತೇ ಜೀವನ್ಮುಕ್ತಿಃ || 

ಸಾತ್ವಿಕರೂ ಜ್ಞಾನಿಗಳೂ ಆದವರ ಸಾಂಗತ್ಯದಿಂದ ಪ್ರಪಂಚದಲ್ಲಿನ ವ್ಯಾಮೋಹ ಬಿಡುತ್ತದೆ. ಅದರಿಂದ ಮನಸ್ಸು ನಿಶ್ಚಲವಾಗುತ್ತದೆ. ಜೀವನ್ಮುಕ್ತಿ ಲಭಿಸುತ್ತದೆ.

22. ಭಗವದ್ಗೀತಾ ಕಿಂಚಿದಧೀತಾ

ಗಂಗಾ ಜಲಲವ ಕಣಿಕಾ ಪೀತಾ |

ಸಕೃದಪಿ ಯಸ್ಯ ಮುರಾರೀ ಸಮರ್ಚಾ

ತಸ್ಯ ಯಮಃ ಕಿಂ ಕುರುತೇ ಚರ್ಚಾ || 

ಆಸಕ್ತಿಯಿಂದ ಭಗವದ್ಗೀತೆಯನ್ನು ಸ್ವಲ್ಪಭಾಗ ಅಧ್ಯಯನ ಮಾಡಿದರೂ, ಭಕ್ತಿಯಿಂದ ಗಂಗಾಜಲದ ಒಂದು ಬಿಂದುವನ್ನು ಕುಡಿದರೂ, ಭಕ್ತಿಯಿಂದ ಒಂದು ಸಾರಿಯಾದರೂ ವಿಷ್ಣುವನ್ನು ಅರ್ಚಿಸಿದರೂ, ಅಂಥವನ  

ತಂಟೆಗೆ ಯಮನು ಬರುವುದಿಲ್ಲ.

23. ಗೇಯಂ ಗೀತಾ ನಾಮ ಸಹಸ್ರಂ

ಧ್ಯೇಯಂ ಶ್ರೀಪತಿ ರೂಪಮಜಸ್ರಮ್ |                              ನೇಯಂ ಸಜ್ಜನ ಸಂಗೇ ಚಿತ್ತಂ                             

ದೇಯಂ ದೀನಜನಾಯ ಚ ವಿತ್ತಮ್ ||  ಭಗವದ್ಗೀತೆಯನ್ನೂ, ವಿಷ್ಣುಸಹಸ್ರನಾಮವನ್ನೂ(ಅಂತೆಯೇ ಇತರ ಗೀತೆಗಳನ್ನೂ ಸಹಸ್ರನಾಮಗಳನ್ನೂ) ಪಾರಾಯಣ ಮಾಡಬೇಕು. ಶ್ರೀಪತಿಯ ರೂಪವನ್ನು ಯಾವಾಗಲೂ ಧ್ಯಾನಿಸಬೇಕು. ಸಜ್ಜನರ ಸಹವಾಸವನ್ನು ಕೋರುತ್ತಿರಬೇಕು. ದೀನರಿಗೆ ದಾನ ಮಾಡುತ್ತಿರಬೇಕು.

24. ಕುರುತೇ ಗಂಗಾ ಸಾಗರ ಗಮನಂ                           

 ವ್ರತ ಪರಿಪಾಲನ ಮಥವಾ ದಾನಂ |                        ಜ್ಞಾನವಿಹೀನಸ್ಸರ್ವಮತೇನ                                      ಮುಕ್ತಿಂ ಭಜತಿನ ಜನ್ಮಶತೇನ ||            

ಗಂಗಾನದಿಗೆ ಹೋಗಿ ಸ್ನಾನ ಮಾಡಬಹುದು.                       ವ್ರತಗಳನ್ನು ಆಚರಿಸಬಹುದು. ದಾನಗಳನ್ನು ಮಾಡಬಹುದು. ಆದರೆ ಆತ್ಮಜ್ಞಾನವನ್ನು ಪಡೆಯದಿದ್ದರೆ ನೂರು ಜನ್ಮಗಳನ್ನೆತ್ತಿದರೂ ಮುಕ್ತಿ ಸಿಗುವುದಿಲ್ಲ.                                                                 

25. ಯೋಗ ರತೋವಾ ಭೋಗ ರತೋವಾ               

ಸಂಗ ರತೋವಾ ಸಂಗವಿಹೀನಃ |                             

ಯಸ್ಯ ಬ್ರಹ್ಮಣಿ ರಮತೇ ಚಿತ್ತಂ                            

ನಂದತಿ ನಂದತಿ ನಂದ ತ್ಯೇವ ||                                ಯೋಗಾಭ್ಯಾಸ ಮಾಡುತ್ತಿರಲಿ, ಬಂಧುಮಿತ್ರರ ಜೊತೆಯಲ್ಲಿರಲಿ ಅಥವಾ ಒಬ್ಬನೇ ಇರಲಿ. ಯಾವನ ಮನಸ್ಸು ಪರಬ್ರಹ್ಮತತ್ವವನ್ನೇ ಗ್ರಹಿಸುತ್ತಿರುತ್ತದೆಯೋ ಅವನು ಯಾವಾಗಲೂ ಆನಂದಿಸುತ್ತಲೇ ಇರುತ್ತಾನೆ ಅವನಿಗೆ ದುಃಖವೆಂಬುದಿಲ್ಲ.

Primary Sidebar

A SLOKA A DAY VISHNUSAHASRANAMA VIDEOS

Please click (>) to watch next video.

SAADHANA MAARGA VIDEOS

SRIMAD BHAGAVAD GITA A SLOKA A DY

A SHUBHASHITA A DAY

Article of the Month

  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1

Recent Articles

  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
  • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
  • All Articles Of Gayatri- ಗಾಯತ್ರಿ – Written by Late Lanka Krisna Murti
  • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
  • ನನ್ನ ಪ್ರೀತಿಯ ತಂದೆಯ ನೆನಪು
  • A Sloka A Day

Copyright © 2022 · Lanka Krishna Murti Foundation