• Skip to primary navigation
  • Skip to main content
  • Skip to primary sidebar
Lanka Krishna Murti Foundation

Lanka Krishna Murti Foundation

  • Home
  • Aims & Objectives
  • Contact Us
  • Photos
  • Videos
  • E BOOKS
  • Disclaimer
  • SAADHANA MAARGA HANDBOOK ONE TO THREE
    • SAADHANA MAARGA HANDBOOK ONE (ENGLISH AND KANNADA)
      • INTRODUCTION
      • VANDE GURU PARAMPARAM – Guru Sishya Relationships
      • GURUVASTAKAM
    • SAADHANA MAARGA HANDOOK TWO(ENGLISH AND KANNADA)
      • Sanathana Dharma: Principles and Practices
      • Nitya Karma Anushthana
      • Prasnottara Rathnamaalikaa
      • SUBHASHTAS
      • A SHUBHASHITA A DAY (1-300)
    • SAADHANA MAARGA HANDBOOK THREE(ENGLISH AND KANNADA)
      • Hatha Yoga: Guide to Meditation
      • Guided Chakra Meditation
  • SAADHANA MAARGA HANDBOOK  FOUR AND FIVE
    • SAADHANA MAARGA HANDBOOK FOUR(ENGLISH AND KANNADA)
      • Introduction
      • Pratah Smarana Stotram
      • Nirvana Shatkam
      • NARAYANA  SUKTAM
      • Dvaa Suparna: Two Birds
      • Shiva Maanasa Pooja
      • Self-Awakening (Audio)
      • Dakshina Murti Stotram
      • Dasasloki
      • Purusha Suktam
      • Sree Suktam
      • Moha Mudgaram (Bhajagovindam)
    • SAADHANA MAARGA HANDBOOK FIVE(ENGLISH AND KANNADA)
      • Tattva Bodha
      • Aparoksanubhuti
  • Vishnushasranama A Sloka A Day
    • SRI VISHNUSAHASRANAMAM(Sanskrit, English and Kannada)
    • ಶ್ರೀ ವಿಷ್ಣುಸಹಸ್ರನಾಮ
  • Bhagavad Gita
    • SRIMAD BHAGAVAD GITA CHAPTER 1
    • SRIMAD BHAGAVAD GITA CHAPTER 2
    • SRIMAD BHAGAVAD GITA CHAPTER 3
    • SRIMAD BHAGAVADGITA CHAPTER 4
    • SRIMADBHAGAVADGITA CHAPTER 5
    • SRIMADBHAGAVADGITA CHAPTER 6
    • SRIMADBHAGAVADGITA CHAPTER 7
    • SRIMADBHAGAVADGITA CHAPTER 8
    • SRIMADBHAGAVADGITA CHAPTER 9
    • Srimadbhagavadgita Chapter 10
    • SRIMADBHAGAVADGITA CHAPTER 11
    • SRIMADBHAGAVADGITA CHAPTER 12
    • SRIMADBHAGAVADGITA CHAPTER 13
    • SRIMAD BHAGAVADGITA CHAPTER 14
    • SRIMADBHAGAVDGITA CHAPTER 15
    • SRIMADBHAGAVDGITA CHAPTER 16
    • SRIMADBHAGAVADGITA CHAPTER 17
    • SRIMADBHAGAVADGITA CHAPTER 18
    • AUDIOS OF CHAPTERS 1 TO 18 OF SRIMAD BHAGAVAD GITA
  • RECENT ARTICLES
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of Gayatri- ಗಾಯತ್ರಿ – Written by Late Lanka Krisna Murti
    • ನನ್ನ ಪ್ರೀತಿಯ ತಂದೆಯ ನೆನಪು
    • A Sloka A Day
  • Articles

    • Tyagashilpa-Drama ತ್ಯಾಗ ಶಿಲ್ಪ – ನಾಟಕ ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
  • ARTICLE OF THE MONTH
    • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
    • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
    • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
    • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
    • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
    • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
    • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
    • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
    • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
    • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
    • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
    • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
    • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
    • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
    • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
    • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
    • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
    • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
    • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
    • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
    • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
    • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
    • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
    • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
    • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
    • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
    • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
    • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
    • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
    • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
    • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
    • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
    • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
    • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
    • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
    • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
    • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
    • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
    • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
    • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ಶ್ರೀ ವಿಷ್ಣುಸಹಸ್ರನಾಮ
  • ARCHIVES
    • bIjAkSara’s or the ‘Seed Words’ of Dharma
    • Universal Message of all Religions of the World By Lanka Krishna Murti
    • Common Aspects in Different Religions By Late L. Krishna Murti
    • Biographical sketch of Lanka Krishna Murti
    • ನಿಜಾಯಿತಿ (Nijayithi)- ಪಿ .ವೆಂಕಟಾಚಲಂ
    • ನನ್ನ ಪ್ರೀತಿಯ ತಂದೆಯ ನೆನಪು
    • ವಾನಪ್ರಸ್ಥ ಧರ್ಮ – ಸಂನ್ಯಾಸ ಧರ್ಮ ದಿ.ಲಂಕಾ ಕೃಷ್ಣಮೂರ್ತಿ
    • ವಿಶ್ವ ಸಂಗೀತ – ಲಂಕಾ ಕೃಷ್ಣಮೂರ್ತಿ
    • ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ
    • ಶ್ರೀ ದ್ವೈಮಾತೃಕ – ದಿ.ಲಂಕಾ ಕೃಷ್ಣಮೂರ್ತಿ
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • SOME ASPECTS OF SANATANA DHARMA – By Dr. L.Adinarayana
    • ಎಲ್ಲಾ ಜಲಮಯ-ಲಂಕಾ ಕೃಷ್ಣಮೂರ್ತಿ
    • ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆ- ದಿ.ಲಂಕಾ ಕೃಷ್ಣಮೂರ್ತಿ
  • News
  • Tribute to Dr L Adinarayana
  • Audios of entire Vishnusahasranama

Moha Mudgaram (Bhajagovindam)

(320-339)

MOHAMUDGARAH

 ( Bhaja  Govindam)

By Sri Shankaracharya

 We have made considerable progress in our journey on the Saadhana Maarga. Remembering Krishna’s advice, we have made an integrated approach by including all the four Yogas of Karma, Dhyana, Bhakti and Gnana, in our spiritual practices:

मन्मना भव मद्भक्तो मद्याजी मां नमस्कुरु।

मामेवैष्यसि सत्यं ते प्रतिजाने प्रियोऽसि मे॥१८.६५॥ 

 Arjuna,

Set your mind on Me;

be My Devotee;

offer your worship to Me;

and prostrate before Me.

As you are very dear to Me,

I promise that you will surely reach Me.

 With Shankara as our Guru and with his Grace, we are able to recite and understand a series of Stotras composed by him together with some Vedic Suktas. 

Here is another composition by Shankara that has gained immense popularity, thanks to its hauntingly melodious rendering by Late Smt. M.S. Subbulakshmi. It is popularly known as  “Bhaja Govindam,” though the real title is “MohamudgaraH”.

It is important to know what “MohamudgaraH” means. ‘Moha’ is delusion and ‘mudgara’ means ‘a hammer’. We need nothing short of a hammer to break the hard ‘shell’ of Delusion and Ignorance.

There is a story about the origin of this Poem.

It is said that once Shankara, accompanied by his disciples, was walking along a street leading to the Ganga in Vaaranaasi. He saw an old Brahmin Pundit reciting the rules of Sanskrit grammar repeatedly.

Shankara was struck by the sheer stupidity of the old learned person wasting his

time on worldly pursuits, instead of trying to save himself from the Cycle of Samsara.

Shankara  was moved by a variety of feelings: anger, pity, concern and compassion. He wanted to help people, like that old Brahmin, to find the right direction by making them think, enquire and reflect; ask the right questions; and finally seek refuge in Lord Govinda.

This Poem is a lesson in Practical Advaita Vedanta expressed in short verses that are easy to recite, understand and contemplate.

It is also an inspiring song, like those of Thyagaraja and Annamayya. The first verse serves as the pallavi or refrain.

.  Pray to Govinda; worship Govinda;

  And in Govinda alone seek Refuge,

  O you dull-witted and deluded one!

It sounds a wake-up call.

It inspires us to fly with the wings of Bhakti and Gnana

away from the prison-house of Saamsaara.

                                               ———-

Let  us Begin.

भजगोविन्दं भजगोविन्दं गोविन्दं भज मूढमते ।

संप्राप्ते सन्निहिते काले नहि नहि रक्षति डुकृञ्करणे ॥ १ ॥

bhaja gōvindaṃ bhaja gōvindaṃ
gōvindaṃ bhaja mūḍhamatē
।
samprāptē sannihitē kālē
nahi nahi rakṣati ḍukṛṅkaraṇē
॥ 1 ॥

1.  Pray to Govinda; worship Govinda;

  And in Govinda alone seek Refuge,

  O you dull-witted and deluded one!

As the hour of death draws near,

you are wasting your time in worldly pursuits,

like learning rules of Sanskrit grammar;

they will not save you when Death strikes.

Think.    Remember Govinda.

Pray to Govinda; worship Govinda;

and in Govinda alone seek Refuge.

मूढ जहीहि धनागमतृष्णां कुरु सद्बुद्धिं मनसि वितृष्णाम् ।

यल्लभसे निजकर्मोपात्तं वित्तं तेन विनोदय चित्तम् ॥ २ ॥

mūḍha jahīhi dhanāgamatṛṣṇāṃ
kuru sadbuddhiṃ manasi vitṛṣṇām
।
yallabhasē nijakarmōpāttaṃ
vittaṃ tēna vinōdaya chittam
॥ 2 ॥

2.  O you dull-headed one,

It is foolish of you to be greedy.

Give up the desire for amassing wealth.

Let your intellect guide you properly

and keep the mind free from cravings.

Be content with what you have earned

by your honest self-effort.

That will keep you in a joyous state.

Pray to Govinda; worship Govinda;

and in Govinda alone seek Refuge.

नारीस्तनभर नाभीदेशं दृष्ट्वा मागामोहावेशम् ।

एतन्मांसावसादि विकारं मनसि विचिन्तय वारं वारम् ॥ ३ ॥

nārīstanabhara-nābhīdēśaṃ
dṛṣṭvā mā gā mōhāvēśam
।
ētanmāṃsavasādivikāraṃ
manasi vichintaya vāraṃ vāram
॥ 3 ॥

3.  It is foolish to get overwhelmed by lust

     by looking at the alluring breasts

     and the attractive naval region

     in a woman’s body.

     Remember that it is all a modification

     of flesh, fat and tissues.

      Nothing more.

     So should you remind yourself of it.

     again and again                      

 Pray to Govinda; worship Govinda;

 and in Govinda alone seek Refuge.

नलिनीदलगत जलमतितरलं तद्वज्जीवितमतिशयचपलं ।

विद्धि व्याध्यभिमानग्रस्तं लोकं शोकहतं च समस्तम् ॥ ४ ॥

nalinīdala-gatajalamatitaralaṃ
tadvajjīvitamatiśaya-chapalam
।
viddhi vyādhyabhimānagrastaṃ
lōkaṃ śōkahataṃ cha samastam
॥ 4 ॥

4.    Drops of water

on a lotus leaf

keep trembling and unsteady.

So is life fickle and changing:

Know that;

People are afflicted by disease

and inflated egoism;

the entire world is filled

with enormous pain and suffering;

know that.

Pray to Govinda; worship Govinda;

and in Govinda alone seek Refuge.

  यावद्वित्तोपार्जन सक्तः तावन्निज परिवारो रक्तः ।        

पश्चाज्जीवति जर्जर देहे वार्तां कोऽपि न पृच्छति गेहे ॥ ५ ॥

yāvadvittōpārjanasaktaḥ
tāvannijaparivārō raktaḥ
।
paśchājjīvati jarjaradēhē
vārtāṃ kō’pi na pṛchChati gēhē
॥ 5 ॥

5

As long as you are able to earn money,

so long will your relatives and friends turn up,

showing interest in you;

but as soon old age sets in,

you lie unwanted, unloved and uncared for

by your own people.

Know this.

Pray to Govinda; worship Govinda;

and in Govinda alone seek Refuge.

यावत्पवनो निवसति देहे तावत्पृच्छति कुशलं गेहे ।

गतवति वायौ देहापाये भार्या बिभ्यति तस्मिन्काये ॥ ६ ॥

yāvatpavanō nivasati dēhē
tāvatpṛchChati kuśalaṃ gēhē
।
gatavati vāyau dēhāpāyē
bhāryā bibhyati tasminkāyē
॥ 6 ॥

6.

As long as one is alive and breathing,

so long will people turn up

and enquire about him.

But when breathing stops

and the body becomes dead, 

even his wife shudders

at the sight of his dead body.

Think.                      

Pray to Govinda; worship Govinda;

and in Govinda alone seek Refuge.

बालस्तावत्क्रीडासक्तः तरुणस्तावत्तरुणीसक्तः ।

वृद्धस्तावत्चिन्तासक्तः परे ब्रह्मणि कोऽपि न सक्तः ॥ ७ ॥

bālastāvatkrīḍāsaktaḥ
taruṇastāvattaruṇīsaktaḥ
।
vṛddhastāvachchintāsaktaḥ
paramē brahmaṇi kō’pi na saktaḥ
॥ 7 ॥

7.  Everyone seems to follow

 the same life-style

 of spending childhood in playing games,

 spending the period of youth

 in getting enamoured of youthful women

 and, finally, spending the whole of old age

 in worries and anxiety.

 Alas, no one seems to have time

 to think of Brahman, the Supreme Reality.

 Pray to Govinda; worship Govinda;

 and in Govinda alone seek Refuge.

काते कान्ता कस्ते पुत्रः संसारोऽयमतीव विचित्रः ।

कस्य त्वं कः कुत आयातः तत्त्वं चिन्तय तदिह भ्रातः ॥ ८ ॥

kā tē kāntā kastē putraḥ
saṃsārō’yamatīva vichitraḥ
।
kasya tvaṃ kaḥ kuta āyātaḥ
tattvaṃ chintaya tadiha bhrātaḥ
॥ 8 ॥

8.  O Brother.

Who is your wife? Who is your son?

How do you relate to them?

Who are you? Wherefrom have you come?

Strange is this Samsaara,

the Cycle of birth, death and re-birth.

O Brother, think about it

and get at the Truth.

Pray to Govinda; worship Govinda;

and in Govinda alone seek Refuge.

सत्सङ्गत्वे निस्सङ्गत्वं निस्सङ्गत्वे निर्मोहत्वम् ।

निर्मोहत्वे निश्चलतत्त्वं निश्चलतत्त्वे जीवन्मुक्तिः ॥ ९ ॥

satsaṅgatvē nissaṅgatvaṃ
nissaṅgatvē nirmōhatvam
।
nirmōhatvē niśchalatattvaṃ
niśchalatattvē jīvanmuktiḥ
॥ 9 ॥

9.  If you are in the company of

 virtuous and well-informed people,

 you will develop detachment

 towards worldly habits;

  with detachment,

  you will be rid of delusion

  caused by ignorance;

 with delusion gone,

   you will realise the Truth.

That Realisation leads to Liberation

   In this life only.

   Pray to Govinda; worship Govinda;

   and in Govinda alone seek Refuge

वयसिगते कः कामविकारः शुष्के नीरे कः कासारः ।

क्षीणेवित्ते कः परिवारः ज्ञाते तत्त्वे कः संसारः ॥ १० ॥

vayasi gatē kaḥ kāmavikāraḥ
śuṣkē nīrē kaḥ kāsāraḥ
।
kṣīṇē vittē kaḥ parivāraḥ
jñātē tattvē kaḥ saṃsāraḥ
॥ 10 ॥

10.  As age advances, no lustful cravings;

 with water dried up, it is no more a tank;

 when fortune dwindles,

 relatives distance themselves;

 and with the dawning of the Truth

 no more Samsaara.                           

Pray to Govinda; worship Govinda;

and in Govinda alone seek Refuge.

मा कुरु धन जन यौवन गर्वं हरति निमेषात्कालः सर्वम् ।

मायामयमिदमखिलं हित्वा ब्रह्मपदं त्वं प्रविश विदित्वा ॥ ११ ॥

mā kuru dhana-jana-yauvana-garvaṃ
harati nimēṣātkālaḥ sarvam
।
māyāmayamidamakhilaṃ hitvā
brahmapadaṃ tvaṃ praviśa viditvā
॥ 11 ॥

11.  Don’t feel proud of your wealth,

        of the company of relatives and friends

        that you have,   

        and of the youthful energy  you possess:

        Time takes them away in no time.

        Know that it is all unreal,

        impermanent and illusory.

        Therefore acquire Gnaana

        and with it reach the State of Brahman.

        Pray to Govinda; worship Govinda;

        and in Govinda alone seek Refuge.

दिनयामिन्यौ सायं प्रातः शिशिरवसन्तौ पुनरायातः ।

कालः क्रीडति गच्छत्यायुः तदपि न मुञ्चत्याशावायुः ॥ १२ ॥

dinayāminyau sāyaṃ prātaḥ
śiśiravasantau punarāyātaḥ
।
kālaḥ krīḍati gachChatyāyuḥ
tadapi na muñchatyāśāvāyuḥ
॥ 12 ॥

12.  It is all on the Turning Wheel of Time.

       Day is followed by night;

        evening followed by morning;

        seasons too follow suit;

        the Fall followed by the Spring;

        as Time continues its Play,

        life dissipates, longevity goes down.

        But, alas, Desire and Craving

        continue to persist.

        Pray to Govinda; worship Govinda;

        and in Govinda alone seek Refuge,

अङ्गं गलितं पलितं मुण्डं दशनविहीनं जतं तुण्डम् ।

वृद्धो याति गृहीत्वा दण्डं तदपि न मुञ्चत्याशापिण्डम् ॥  

aṅgaṃ galitaṃ palitaṃ muṇḍaṃ
daśanavihīnaṃ jātaṃ tuṇḍam
।
vṛddhō yāti gṛhītvā daṇḍaṃ
tadapi na muñchatyāśāpiṇḍam
॥ 13 ॥

13.  Wrinkled body,

        gray hair on the head,

        toothless mouth,

        walking with the support of a stick,

        totally affected by old age.

        Strange!

         Yet not free from

         the grip of cravings.

        So life goes on!                     

        Pray to Govinda; worship Govinda;

       and in Govinda alone seek Refuge.

योगरतो वा भोगरतोवा सङ्गरतो वा सङ्गविहीनः ।

यस्य ब्रह्मणि रमते चित्तं नन्दति नन्दति नन्दत्येव ॥

yōgaratō vā bhōgaratō vā
saṅgaratō vā saṅgavihīnaḥ
।
yasya brahmaṇi ramatē chittaṃ
nandati nandati nandatyēva
॥ 14 ॥

14.  Whether one observes

 the austerities of Yoga,

 or is given to a pleasurable life,

 or whether one likes companionship

 or chooses to keep aloof;

 as long as the mind remains absorbed

 in Brahman,

 one lives in a state of Bliss. Bliss. Bliss.

 Pray to Govinda; worship Govinda;

 and in Govinda alone seek Refuge.

भगवद् गीता किञ्चिदधीता गङ्गा जललव कणिकापीता ।

सकृदपि येन मुरारि समर्चा क्रियते तस्य यमेन न चर्चा ॥

bhagavadgītā kiñchidadhītā
gaṅgājala-lavakaṇikā pītā
।
sakṛdapi yēna murārisamarchā
kriyatē tasya yamēna na charchā
॥ 15 ॥

 15.  One who has taken to study

   Bhagavadgita, a part of it even;

   or one who has sipped a few drops

   of  Ganga water;

   or performed, now and then,

   the worship of Lord Vishnu –

    for such person no confrontation

    with Yama, the Lord of Hell!                        

    Pray to Govinda; worship Govinda;

    and in Govinda alone seek Refuge.

पुनरपि जननं पुनरपि मरणं पुनरपि जननी जठरे शयनम् ।

इह संसारे बहुदुस्तारे कृपयाऽपारे पाहि मुरारे ॥

punarapi jananaṃ punarapi maraṇaṃ
punarapi jananījaṭharē śayanam
।
iha saṃsārē bahudustārē
kṛpayā’pārē pāhi murārē
॥ 16 ॥

16. Samsaara – this is an Ocean,

  with  the waves rising and falling,

  again and again:

  so we take birth,

  and then we die,

  and we take birth again,

  resting in the mother’s womb.

This is going on and on.

Save me, help me cross the Ocean of Samsaara

O Muraari!

Pray to Govinda; worship Govinda;

and in Govinda alone seek Refuge,

गेयं गीता नाम सहस्रं ध्येयं श्रीपति रूपमजस्रम् ।

नेयं सज्जन सङ्गे चित्तं देयं दीनजनाय च वित्तम् ॥

gēyaṃ gītā-nāmasahasraṃ
dhyēyaṃ śrīpati-rūpamajasram
।
nēyaṃ sajjana-saṅgē chittaṃ
dēyaṃ dīnajanāya cha vittam
॥ 17 ॥

17.  Here is a New Life Style

       For you to cultivate:

       Sing the verses in the Bhagavad Gita

       as well as those in Sri Vishnu Sahasranaama;

       seek the company of Virtuous People;

       meditate always on the Form of Sri Vishnu,

       the Husband of Lakshmi;

       and share your wealth with those

       who are in need of it.

       Pray to Govinda; worship Govinda;

       and in Govinda alone seek Refuge.

गुरुचरणाम्बुज निर्भर भक्तः संसारादचिराद्भव मुक्तः ।

सेन्द्रियमानस नियमादेवं द्रक्ष्यसि निज हृदयस्थं देवम् ॥

gurucharaṇāmbuja-nirbharabhaktaḥ
saṃsārādachirādbhava muktaḥ
।
sēndriyamānasa-niyamādēvaṃ
drakṣyasi nijahṛdayasthaṃ dēvam
॥ 18 ॥

18.   One who cultivates intense devotion

        to the Lotus Feet of the Guru

        will, before long, obtain release

        from the bondage of Samsaara;

        and then, when one brings

        the mind and the senses under control,

        he will get the Vision of Brahman

        lodged in his own heart.

        Pray to Govinda; worship Govinda;

        and in Govinda alone seek Refuge.

इति भजगोविन्दं संपूर्णम्

Iti bhajagOvindam sampUrnNam

bhajagovindaṁ saṁpūrṇam

– Thus ends the Stotra known as Bhaja Govindam          

ಮೋಹ ಮುದ್ಗರಃ  (ಭಜ ಗೋವಿಂದಂ)

    ಶ್ರೀ ಶಂಕರಾಚಾರ್ಯ ವಿರಚಿತ

ಪೀಠಿಕೆ

“ಸಾಧನ ಮಾರ್ಗ” ದ ಹಾದಿಯಲ್ಲಿ ನಾವು ಗಣನೀಯವಾದ ಪ್ರಗತಿಯನ್ನು ಸಾಧಿಸಿದ್ದೇವೆ. ಶ್ರೀ ಕೃಷ್ಣನ ಉಪದೇಶವನ್ನು ಸ್ಮರಿಸುತ್ತಾ, ನಾಲ್ಕು ಯೋಗಗಳಾದ ಕರ್ಮ, ಧ್ಯಾನ  ಭಕ್ತಿ ಮತ್ತು ಜ್ಞಾನ ಇವುಗಳನ್ನು ಅಂತರ್ಗತ ಮಾಡಿಕೊಂಡು  ನಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಒಂದು ಸಮಗ್ರ ಮಾರ್ಗವನ್ನು ಕಂಡುಕೊಂಡಿದ್ದೇವೆ. 

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಽಸಿ ಮೇ ॥ 18-65॥

ಅರ್ಜುನಾ,

ನಿನ್ನಮನಸ್ಸನ್ನು ನನ್ನಲ್ಲಿಡು;

ನನ್ನ ಭಕ್ತನಾಗು; ನನ್ನನ್ನು ಪೂಜಿಸು,

ನನಗೆ ನಮಸ್ಕಾರ ಮಾಡು, 

ಖಂಡಿತವಾಗಿಯೂ ನೀನು ನನ್ನನ್ನೇ ಹೊಂದುವೆ ಎಂಬುದಾಗಿ 

ನಾನು ನಿನಗೆ ಅಭಯ ನೀಡುತ್ತೇನೆ.

ನಮ್ಮ ಗುರುಗಳಾದಂತಹ ಶ್ರೀ ಶಂಕರಾಚಾರ್ಯರ ಕೃಪಾಕಟಾಕ್ಷದಿಂದ, ಅವರಿಂದ ರಚಿಸಲ್ಪಟ್ಟ ಸ್ತೋತ್ರ ಮಾಲಿಕೆಗಳನ್ನೂ, ಅದರೊಟ್ಟಿಗೆ ಕೆಲವು ವೈದಿಕ ಸೂಕ್ತಗಳನ್ನೂ ನಾವು ಪಠಿಸಿ, ಅದನ್ನು ಅರ್ಥೈಸಿಕೊಳ್ಳಲು ಶಕ್ತರಾಗಿದ್ದೇವೆ. 

ಶ್ರೀ ಶಂಕರಾಚಾರ್ಯರಿಂದ ರಚಿಸಲ್ಪಟ್ಟ ಹಾಗೂ ದಿವಂಗತ ಶ್ರೀಮತಿ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಸುಮಧುರ ಕಂಠದಿಂದ ಹೊರಹೊಮ್ಮಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ, ಅಪಾರ ಜನಪ್ರಿಯತೆಯನ್ನು  ಗಳಿಸಿರುವ ಮತ್ತೊಂದು ಕೃತಿ ಇಲ್ಲಿದೆ. ಈ ಕೃತಿಯ ನಿಜವಾದ ಶೀರ್ಷಿಕೆ

 “ಮೋಹ ಮುದ್ಗರಃ” ಎಂಬುದಾಗಿದ್ದರೂ, “ಭಜ ಗೋವಿಂದಂ” ಎಂದೇ ಇದು ಖ್ಯಾತಿ ಹೊಂದಿದೆ. 

“ಮೋಹ ಮುದ್ಗರಃ” ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಇಲ್ಲಿ ಮುಖ್ಯವಾಗಿದೆ. “ಮೋಹ” ಎಂದರೆ ಭ್ರಾಂತಿಕಾರಕ ಎಂಬುದಾಗಿಯೂ, “ಮುದ್ಗರ” ಎಂದರೆ ಸುತ್ತಿಗೆ ಎಂದೂ ಅರ್ಥವಿದೆ. ಹಾಗಾಗಿ ಭ್ರಮೆ ಮತ್ತು ಅಜ್ಞಾನ ಎಂಬ ಕಠಿಣವಾದ ಚಿಪ್ಪನ್ನು ಒಡೆಯಲು ಜ್ಞಾನವೆಂಬ ಸುತ್ತಿಗೆಯ ಅವಶ್ಯಕತೆ ನಮಗೆ ಬೇಕಾಗಿದೆ. 

ಈ ಕೃತಿಯ ಹುಟ್ಟಿನ ಬಗ್ಗೆ ಒಂದು ಕತೆಯಿದೆ. ಒಮ್ಮೆ ಶ್ರೀ ಶಂಕರರು ತಮ್ಮ ಶಿಷ್ಯರೊಡನೆ, ವಾರಣಾಸಿಯಲ್ಲಿ ಗಂಗಾ ನದಿಗೆ ಹೋಗುವ ದಾರಿಯಲ್ಲಿ ನಡೆಯುತ್ತಿರುತ್ತಾರೆ. ಆಗ ಅವರು ಒಬ್ಬ ವೃದ್ಧ ಬ್ರಾಹ್ಮಣ ಪಂಡಿತನು, ಸಂಸ್ಕೃತ ವ್ಯಾಕರಣದ ನಿಯಮಗಳನ್ನು ಪುನರಾವರ್ತಿಸುತ್ತಾ ಜೋರಾಗಿ ಪಠಿಸುತ್ತಿರುವುದನ್ನು ನೋಡುತ್ತಾರೆ. 

ಆ ವೃದ್ಧ ಪಂಡಿತನು ಸಂಸಾರವೆಂಬ ಸುಳಿಯಿಂದ ತನ್ನನ್ನು ರಕ್ಷಿಸಿಕೊಳ್ಳುವ ಬದಲಾಗಿ, ಪ್ರಾಪಂಚಿಕ ವೃತ್ತಿಯ ಹಿಂದೆ ಬಿದ್ದು, ತನ್ನ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿರುವ ಬಗ್ಗೆ, ಆತನ ಶುದ್ಧ ಪೆದ್ದುತನದ ಬಗ್ಗೆ ಶಂಕರರು ಮರುಕ ಪಡುತ್ತಾರೆ. 

ಆ ಸಮಯದಲ್ಲಿ ಕೋಪ, ಅನುಕಂಪ, ವ್ಯಾಕುಲತೆ ಮತ್ತು ಕಾಳಜಿ ಹೀಗೆ ಬಗೆಬಗೆಯ ಭಾವಗಳಿಂದ ಶಂಕರರು ವಿಚಲಿತರಾದರು. ಆ ವೃದ್ಧ ಬ್ರಾಹ್ಮಣನಂತಹವರನ್ನು, ಚಿಂತನೆಗೆ ಹಚ್ಚಿ, ಸರಿಯಾದ ಪ್ರಶ್ನೆಗಳನ್ನು ವಿಚಾರ ಮಾಡಿ, ಸರಿಯಾದ ಮಾರ್ಗದಲ್ಲಿ ಮುನ್ನಡೆದು, ಕೊನೆಗೆ ಭಗವಂತನಾದ ಗೋವಿಂದನಲ್ಲಿಯೇ ಆಶ್ರಯ ಪಡೆಯುವತ್ತ ಮುನ್ನಡೆಸಿ ಸಹಾಯ ಮಾಡಬೇಕೆಂಬ ಸಂಕಲ್ಪ ಶಂಕರರಿಗೆ ಉಂಟಾಯಿತು. ಆಗ ಈ ಕೃತಿಯ ರಚನೆಯಾಯಿತೆನ್ನಲಾಗಿದೆ.   

ಈ ಕೃತಿಯು,  ಪುಟ್ಟ ಪುಟ್ಟ ಪದ್ಯಗಳ ರೂಪದಲ್ಲಿ, ಪಠಿಸಲು, ಅರ್ಥ ಮಾಡಿಕೊಳ್ಳಲು ಮತ್ತು ಚಿಂತನೆ ಮಾಡಲು ಅತ್ಯಂತ ಸುಲಭವಾಗಿದ್ದು, ವ್ಯಾವಹಾರಿಕ ಅದ್ವೈತ ವೇದಾಂತದ ಒಂದು ಪಾಠವಾಗಿದೆ.

ತ್ಯಾಗರಾಜ ಮತ್ತು ಅನ್ನಮಯ್ಯ ನಂತಹವರ ಕೃತಿಗಳಂತೆ ಇದೂ ಸಹ ಸ್ಫೂರ್ತಿಯನ್ನುಂಟು ಮಾಡುವ ಗೀತೆಯಾಗಿದೆ. ಮೊದಲ ಪದ್ಯವನ್ನು ಪಲ್ಲವಿಯಂತೆ ಉಪಯೋಗಿಸಲಾಗಿದೆ. ಇದು ಎಚ್ಚರಿಕೆಯ ಕರೆಗಂಟೆಯಂತೆ ಧ್ವನಿಸುತ್ತದೆ. ಭಕ್ತಿ ಮತ್ತು ಜ್ಞಾನಗಳೆಂಬ ರೆಕ್ಕೆಗಳ ಸಹಾಯದಿಂದ ಸಂಸಾರವೆಂಬ ಸೆರೆಮನೆಯಿಂದ ಹಾರಿಹೋಗಲು ಈ ಕೃತಿಯು ನಮ್ಮನ್ನು ಉತ್ತೇಜಿಸುತ್ತದೆ. 

ಭಜ ಗೋವಿಂದಂ ಭಜ ಗೋವಿಂದಂ

ಗೋವಿಂದಂ ಭಜ ಮೂಢಮತೇ ।

ಸಂಪ್ರಾಪ್ತೇ ಸನ್ನಿಹಿತೇ ಕಾಲೇ

ನಹಿ ನಹಿ ರಕ್ಷತಿ ಡುಕ್ರಿಂಕರಣೇ ॥ 1 ॥

 ಒಂದನೆಯ ಶ್ಲೋಕ

ನಾವು ಈಗ ಪ್ರಾರಂಭಿಸೋಣ.

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು

ಗೋವಿಂದನಲ್ಲಿಯೇ ಆಶ್ರಯಬಯಸು. 

ಓ ಮೂಢಮತಿಯೇ ಮತ್ತು ಭ್ರಾಂತನೇ !

ಪ್ರಾಪಂಚಿಕ ವಿಷಯಗಳನ್ನು ಬೆಂಬತ್ತಿ ನಿನ್ನ ಸಮಯವನ್ನು ಹಾಳು  ಮಾಡುತ್ತಿರುವೆ, 

ಸಾವು ಬಂದಾಗ ಅವು ನಿನ್ನನ್ನು ರಕ್ಷಿಸುವುದಿಲ್ಲ.

ಆಲೋಚಿಸು, ಗೋವಿಂದನನ್ನು ನೆನೆ;

ಗೋವಿಂದನನ್ನು ಭಜಿಸು; ಗೋವಿಂದನನ್ನುಪೂಜಿಸು.

ಗೋವಿಂದನಲ್ಲಿಯೇ ಆಶ್ರಯ ಬಯಸು.

ಮೂಢ ಜಹೀಹಿ ಧನಾಗಮತೃಷ್ಣಾಂ

ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ ।

ಯಲ್ಲಭಸೇ ನಿಜಕರ್ಮೋಪಾತ್ತಂ

ವಿತ್ತಂ ತೇನ ವಿನೋದಯ ಚಿತ್ತಂ ॥ 2 ॥

 ಎರಡನೆಯ ಶ್ಲೋಕ 

ಕೃಪಣನಾಗಿರುವುದು ನಿನ್ನ ಮೂರ್ಖತನ. ಧನ ಸಂಗ್ರಹಣೆಯ ದುರಾಸೆಯನ್ನು ಬಿಟ್ಟು ಬಿಡು. ನಿನ್ನ ಸದ್ಬುದ್ಧಿಯು ನಿನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸಲಿ. ನಿನ್ನ ಮನಸ್ಸನ್ನು ಲಾಲಸೆಗಳಿಂದ ಮುಕ್ತವಾಗಿರಿಸಿಕೋ. ನಿನ್ನ ಸ್ವಂತ ಪರಿಶ್ರಮದಿಂದ, ಪ್ರಾಮಾಣಿಕವಾಗಿ ನೀನು ಗಳಿಸಿದುದರಿಂದ ಸಂತೃಪ್ತನಾಗಿರು. ಅದು ನಿನ್ನನ್ನು ಸಂತೋಷದ ಸ್ಥಿತಿಯಲ್ಲಿ ಇರಿಸುತ್ತದೆ. 

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ನಾರೀ ಸ್ತನಭರ ನಾಭೀದೇಶಂ

ದೃಷ್ಟ್ವಾ ಮಾಗಾಮೋಹಾವೇಶಂ ।

ಏತನ್ಮಾಂಸವಸಾದಿ ವಿಕಾರಂ

ಮನಸಿ ವಿಚಿಂತಯ ವಾರಂ ವಾರಂ ॥ 3 ॥

ಮೂರನೆಯ ಶ್ಲೋಕ

 ಹೆಣ್ಣಿನ ದೇಹದಲ್ಲಿನ ಮೋಹಗೊಳಿಸುವ ಸ್ತನಗಳನ್ನು ಮತ್ತು ಆಕರ್ಷಕ ನಾಭಿ ಪ್ರದೇಶವನ್ನು ನೋಡಿ ಕಾಮಾಸಕ್ತಿಯಿಂದ ಮೋಹಾವೇಶನಾಗುವುದು ಮೂರ್ಖತನದ ಪರಮಾವಧಿ.

ನೆನಪಿಟ್ಟುಕೋ! ಅವೆಲ್ಲವೂ ಮಾಂಸ, ಕೊಬ್ಬು ಮತ್ತು ಜೀವಕೋಶಗಳ ಮಾರ್ಪಾಟಿನಿಂದ ಉಂಟಾದ ವಿಕಾರಗಳಲ್ಲದೇ ಮತ್ತೇನಲ್ಲ. ಆದ್ದರಿಂದ ಇದನ್ನು ನೀನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರು. 

 ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ನಳಿನೀದಳಗತ ಜಲಮತಿತರಳಂ

ತದ್ವಜ್ಜೀವಿತಮತಿಶಯಚಪಲಂ ।

ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ

ಲೋಕಂ ಶೋಕಹತಂ ಚ ಸಮಸ್ತಂ ॥ 4 ॥

ನಾಲ್ಕನೆಯ ಶ್ಲೋಕ

ಕಮಲದ ಎಲೆಯ ಮೇಲಿನ ನೀರ ಹನಿ ಯಾವ ರೀತಿ ಅಲುಗಾಡುತ್ತಾ ಅಸ್ಥಿರವಾಗಿರುತ್ತದೆಯೋ, ಅದೇ ರೀತಿ ನಮ್ಮ ಬದುಕೂ ಸಹ ಚಂಚಲವಾಗಿರುತ್ತದೆ ಮತ್ತು ಬದಲಾಗುತ್ತಿರುತ್ತದೆ. ಇದನ್ನು ಅರಿತುಕೋ. ಜನರು ನಾನಾ ವ್ಯಾಧಿಗಳಿಂದ ವೇದನೆ, ಕ್ಲೇಶಗಳನ್ನು ಹೊಂದುತ್ತಿರುತ್ತಾರೆ. ಅಹಂಭಾವದಿಂದ ದುರಭಿಮಾನಗ್ರಸ್ತರಾಗಿ ಮೆರೆಯುತ್ತಿರುತ್ತಾರೆ. ಸಮಸ್ತ ಲೋಕವೂ ಅತೀವ ಶೋಕ ಮತ್ತು ನೋವಿನಿಂದ ಕೂಡಿದೆ. ಇದನ್ನು ಅರಿತುಕೋ. 

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ಯಾವದ್ವಿತ್ತೋಪಾರ್ಜನ ಸಕ್ತಃ

ತಾವನ್ನಿಜಪರಿವಾರೋ ರಕ್ತಃ ।

ಪಶ್ಚಾಜ್ಜೀವತಿ ಜರ್ಜರ ದೇಹೇ

ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ ॥ 5 ॥

ಐದನೆಯ ಶ್ಲೋಕ

ಎಲ್ಲಿಯವರೆಗೆ ನೀನು ಧನವನ್ನು ಗಳಿಸಲು ಶಕ್ತನಾಗಿರುವೆಯೋ ಅಲ್ಲಿಯವರೆಗೆ ನಿನ್ನ ಬಂಧುಗಳೂ ಮಿತ್ರರೂ ಹಾಗೂ ಪರಿವಾರದವರು ಬರುತ್ತಿರುತ್ತಾರೆ, ನಿನ್ನ ಮೇಲೆ ಅನುರಕ್ತಿಯನ್ನು ತೋರುತ್ತಾರೆ; ಆದರೆ ಮುಪ್ಪು ನಿನ್ನನ್ನು ಆವರಿಸಿ, ದೇಹ ಜರ್ಜರಿತವಾದಾಗ, ನಿನ್ನ ಸ್ವಜನರಿಂದಲೇ ನೀನು ತಿರಸ್ಕರಿಸಲ್ಪಡುತ್ತೀಯೆ, ನಿನ್ನನ್ನು ಯಾರೂ ಸಹ ಪ್ರೀತಿಸುವುದಿಲ್ಲ ಮತ್ತು ಆರೈಕೆ ಮಾಡುವುದಿಲ್ಲ. ಇದನ್ನು ಅರಿತುಕೋ!

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ಯಾವತ್ಪವನೋ ನಿವಸತಿ ದೇಹೇ

ತಾವತ್ಪೃಚ್ಛತಿ ಕುಶಲಂ ಗೇಹೇ ।

ಗತವತಿ ವಾಯೌ ದೇಹಾಪಾಯೇ

ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ ॥ 6 ॥

ಆರನೆಯ ಶ್ಲೋಕ

ಎಲ್ಲಿಯವರೆಗೆ ಒಬ್ಬನು ಜೀವದಿಂದಿರುತ್ತಾನೆಯೋ ಮತ್ತು ಉಸಿರಾಡುತ್ತಿರುತ್ತಾನೆಯೋ ಅಲ್ಲಿಯವರೆಗೆ ಅವನ ಕ್ಷೇಮ ಸಮಾಚಾರವನ್ನು, ಕುಶಲವನ್ನು ವಿಚಾರಿಸಲು ಜನರು ಬರುತ್ತಿರುತ್ತಾರೆ.  ಆದರೆ ಯಾವಾಗ ಉಸಿರು ನಿಂತುಹೋಗುತ್ತದೆಯೋ ಮತ್ತು ದೇಹವು ನಿರ್ಜೀವವಾಗುತ್ತದೆಯೋ, ಆಗ ಅವನ ಮೃತ ದೇಹವನ್ನು ಕಂಡು, ಅವನ ಹೆಂಡತಿಯೂ ಸಹ ತತ್ತರಿಸಿ ಹೋಗುತ್ತಾಳೆ, ಆಲೋಚಿಸು. 

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ಬಾಲ ಸ್ತಾವತ್ ಕ್ರೀಡಾಸಕ್ತಃ

ತರುಣ ಸ್ತಾವತ್ ತರುಣೀಸಕ್ತಃ ।

ವೃದ್ಧ ಸ್ತಾವತ್ ಚಿಂತಾಸಕ್ತಃ

ಪರೇ ಬ್ರಹ್ಮಣಿ ಕೋಽಪಿ ನ ಸಕ್ತಃ ॥ 7 ॥

ಏಳನೆಯ ಶ್ಲೋಕ

ಪ್ರತಿಯೊಬ್ಬರೂ,  ಬಾಲ್ಯದಲ್ಲಿ ಕ್ರೀಡೆಗಳ ಬಗ್ಗೆ, ಆಟಪಾಟಗಳ ಬಗ್ಗೆ ಆಸಕ್ತಿ ತೋರುತ್ತಾರೆ. ನಂತರದ ತಾರುಣ್ಯದಲ್ಲಿ, ತರುಣಿಯರ ಬಗ್ಗೆ ಮನಸ್ಸನ್ನು ಹೊರಳಿಸುತ್ತಾರೆ. ಕೊನೆಗೆ ತಮ್ಮ  ವೃದ್ಧಾಪ್ಯದ ಪೂರ್ತಿ ಅವಧಿಯನ್ನು ಚಿಂತೆ, ವ್ಯಾಕುಲತೆಗಳಿಂದ ಕಳೆಯುತ್ತಾರೆ. ಇದು ಪ್ರತಿಯೊಬ್ಬರ, ಒಂದೇ ರೀತಿಯ ಜೀವನ ಶೈಲಿಯಾಗಿದೆ. ಆಶ್ಚರ್ಯವೆಂದರೆ ಪರಮ ಸತ್ಯವಸ್ತುವಾದ ಪರಬ್ರಹ್ಮನ ಬಗ್ಗೆ ಯೋಚಿಸಲು ಯಾರಿಗೂ ಸಮಯವೇ ಇಲ್ಲವೆಂದು ತೋರುತ್ತದೆ.

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ಕಾ ತೇ ಕಾಂತಾ ಕಸ್ತೇ ಪುತ್ರಃ

ಸಂಸಾರೋಽಯಮತೀವ ವಿಚಿತ್ರಃ ।

ಕಸ್ಯ ತ್ವಂ ಕಃ  ಕುತ ಆಯಾತಃ

ತತ್ವಂ ಚಿಂತಯ ತದಿಹ ಭ್ರಾತಃ ॥ 8 ॥

ಎಂಟನೆಯ ಶ್ಲೋಕ

ಓ ಸೋದರನೇ,

ಯಾರು ನಿನ್ನಮಡದಿ? ಯಾರು ನಿನ್ನ ಮಗ?

ಅವರೊಡನೆ ಯಾವ ರೀತಿಯ ಸಂಬಂಧ ನಿನಗೆ?

ಯಾರು ನೀನು? ಎಲ್ಲಿಂದ ಬಂದಿರುವೆ ನೀನು?

ಹುಟ್ಟು ಸಾವು  ಮತ್ತೆ ಮರುಹುಟ್ಟು ಎಂಬ ಈ ಪುನರಾವರ್ತಿತ ಸಂಸಾರವೇ ಒಂದು ವಿಚಿತ್ರವಾಗಿದೆ. 

ಓ ಸೋದರನೇ, ಇದರ ಬಗ್ಗೆ ಆಲೋಚಿಸು. ಸತ್ಯವನ್ನು ಅರಿಯುವತ್ತ ಚಿಂತಿಸು. 

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು. 

ಸತ್ಸಂಗತ್ವೇ ನಿಸ್ಸಂಗತ್ವಂ

ನಿಸ್ಸಂಗತ್ವೇ ನಿರ್ಮೋಹತ್ವಂ ।

ನಿರ್ಮೋಹತ್ವೇ ನಿಶ್ಚಲತತ್ತ್ವಂ

ನಿಶ್ಚಲತತ್ತ್ವೇ ಜೀವನ್ಮುಕ್ತಿಃ ॥ 9 ॥

ಒಂಬತ್ತನೆಯ ಶ್ಲೋಕ

ಸದ್ಗುಣಿಗಳು, ಶೀಲವಂತರು ಮತ್ತು ಜ್ಞಾನಿಗಳ ಸತ್ಸಂಗದಲ್ಲಿ ನೀನಿದ್ದರೆ, ಈ ಪ್ರಾಪಂಚಿಕ ಸ್ವಭಾವಗಳ ಬಗ್ಗೆ ವಿರಕ್ತಿಯನ್ನು ಬೆಳೆಸಿಕೊಳ್ಳುತ್ತೀಯೆ. ಅಜ್ಞಾನದಿಂದ ಉಂಟಾದ ಮೋಹ ಮತ್ತು ಭ್ರಮೆಯಿಂದ ವಿಮುಕ್ತನಾಗುತ್ತೀಯೆ. ಯಾವಾಗ ನಿರ್ಮೋಹತ್ವವು ಉಂಟಾಗುತ್ತದೆಯೋ ಆಗ ನಿನಗೆ ನಿಶ್ಚಲ ತತ್ವದ ಸತ್ಯ ದರ್ಶನವಾಗುತ್ತದೆ.

ಆ ಜ್ಞಾನೋದಯವು,  ಈ ಜನ್ಮದಲ್ಲಿಯೇ ನಿನ್ನನ್ನು ಜೀವನ್ಮುಕ್ತಿಯೆಡೆಗೆ ಕೊಂಡೊಯ್ಯುತ್ತದೆ.

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ವಯಸಿ ಗತೇ ಕಃ ಕಾಮವಿಕಾರಃ

ಶುಷ್ಕೇ ನೀರೇ ಕಃ ಕಾಸಾರಃ ।

ಕ್ಷೀಣೇ ವಿತ್ತೇ ಕಃ ಪರಿವಾರಃ

ಜ್ಞಾತೇ ತತ್ತ್ವೇ ಕಃ ಸಂಸಾರಃ ॥ 10 ॥

ಹತ್ತನೆಯ ಶ್ಲೋಕ

ವಯಸ್ಸಾಗುತ್ತಿದ್ದಂತೆಯೇ ಕಾಮ ವಿಕಾರಗಳು ಇಲ್ಲವಾಗುತ್ತವೆ. ನೀರೆಲ್ಲವೂ ಖಾಲಿಯಾದ ಮೇಲೆ,  ಆ ಹೊಂಡವು ಶುಷ್ಕವಾಗುತ್ತದೆ. ಯಾವಾಗ ಐಶ್ವರ್ಯವು ಕ್ಷೀಣವಾಗುತ್ತದೆಯೋ ಆಗ ಬಂಧು, ಮಿತ್ರ, ಪರಿವಾರದವರು ತನ್ನಂತಾನೇ ದೂರವಾಗುತ್ತಾರೆ. ಯಾವಾಗ ತತ್ವ ಜ್ಞಾನದ ಸತ್ಯವು ಗೋಚರವಾಗುತ್ತದೆಯೋ ಆಗ ಸಂಸಾರ ಇಲ್ಲವಾಗುತ್ತದೆ. 

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.     

ಮಾ ಕುರು ಧನಜನ ಯೌವನ ಗರ್ವಂ

ಹರತಿ ನಿಮೇಷಾತ್ಕಾಲಃ ಸರ್ವಂ ।

ಮಾಯಾಮಯಮಿದಮಖಿಲಂ ಹಿತ್ವಾ

ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ ॥ 11 ॥

ಹನ್ನೊಂದನೆಯ ಶ್ಲೋಕ 

ನಿನ್ನ ಸಂಪತ್ತಿನ ಬಗ್ಗೆ, ನಿನ್ನ ಬಂಧು ಮಿತ್ರರ ಒಡನಾಟದ ಬಗ್ಗೆ, ನಿನ್ನ   ಯೌವನದ ಬಗ್ಗೆ, ನೀನು ಹೊಂದಿರುವ ಶಕ್ತಿಯ ಬಗ್ಗೆ ಎಂದಿಗೂ ಗರ್ವ ಪಡಬೇಡ. ಕ್ಷಣ ಮಾತ್ರದಲ್ಲಿ ಕಾಲವು ಅವೆಲ್ಲವನ್ನೂ ಇಲ್ಲವಾಗಿಸುತ್ತದೆ. ಇವೆಲ್ಲವೂ ಕ್ಷಣಿಕ, ಮಿಥ್ಯೆ ಮತ್ತು ಅಸ್ಥಿರ ಎಂಬುದನ್ನು ಅರಿತುಕೋ. ಆದುದರಿಂದ ಜ್ಞಾನವನ್ನು ಗಳಿಸಿಕೋ ಮತ್ತು ಆ ಜ್ಞಾನದಿಂದ ಬ್ರಹ್ಮಪದವನ್ನು ಸೇರಲು ಪ್ರಯತ್ನಿಸು. 

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.  

ದಿನಯಾಮಿನ್ಯೌ ಸಾಯಂ ಪ್ರಾತಃ

ಶಿಶಿರವಸಂತೌ ಪುನರಾಯಾತಃ ।

ಕಾಲಃ ಕ್ರೀಡತಿ ಗಚ್ಛತ್ಯಾಯುಃ

ತದಪಿ ನ ಮುಂಚತ್ಯಾಶಾವಾಯುಃ ॥ 12 ॥

ಹನ್ನೆರಡನೆಯ ಶ್ಲೋಕ 

ಇರುಳು ಹಗಲನ್ನು ಅನುಸರಿಸುತ್ತದೆ, ಸಾಯಂಕಾಲವು, ಪ್ರಾತಃಕಾಲವನ್ನು ಅನುಸರಿಸುತ್ತದೆ. ಅಂತೆಯೇ ಋತುಗಳೂ ಸಹ ಪುನರಾವರ್ತಿಸುತ್ತವೆ. ವಸಂತ ಋತುವನ್ನು, ಶಿಶಿರ ಋತುವು ಹಿಂಬಾಲಿಸುತ್ತದೆ. ಕಾಲವು ತನ್ನ ಆಟವನ್ನು ಮುಂದುವರಿಸುತ್ತಿರುವಂತೆಯೇ, ಬದುಕು ಚದುರಿ ವ್ಯರ್ಥವಾಗುತ್ತದೆ. ಆಯಸ್ಸು ಕ್ಷೀಣಿಸುತ್ತದೆ. ಆದರೆ ಅಕಟಕಟಾ! ಆಸೆ ಮತ್ತು ಬಯಕೆಗಳು ದೃಢವಾಗಿ ಮುಂದುವರಿಯುತ್ತವೆ. 

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.   

ಅಂಗಂ ಗಲಿತಂ ಪಲಿತಂ ಮುಂಡಂ

ದಶನ ವಿಹೀನಂ ಜಾತಂ ತುಂಡಂ ।

ವೃದ್ಧೋ ಯಾತಿ ಗೃಹೀತ್ವಾ ದಂಡಂ

ತದಪಿ ನ ಮುಂಚತ್ಯಾಶಾ ಪಿಂಡಂ ॥ 13 ॥

ಹದಿಮೂರನೆಯ ಶ್ಲೋಕ 

ಸುಕ್ಕುಗಟ್ಟಿದ ದೇಹ, ನರೆತ ಬಿಳಿಕೂದಲಿನ ತಲೆ, ಹಲ್ಲಿಲ್ಲದ ಬೊಚ್ಚುಬಾಯಿ, ನಡೆಯಲು ಊರುಗೋಲಿನ ಸಹಾಯ, ವೃದ್ಧಾಪ್ಯದಿಂದ ಬಾಧಿತವಾದ ಸಂಪೂರ್ಣ ಕೃಶ ಕಾಯ. ಆದರೂ ಸಹ ಬಯಕೆಗಳ ಹಿಡಿತದಿಂದ ಮುಕ್ತನಾಗದಿರುವುದು, ಬದುಕು ಮುಂದುವರಿಸುತ್ತಿರುವುದು, ಪರಮಾಶ್ಚರ್ಯ!

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.     

ಯೋಗರತೋ ವಾ ಭೋಗರತೋ ವಾ

ಸಂಗರತೋ ವಾ ಸಂಗವಿಹೀನಃ ।

ಯಸ್ಯ ಬ್ರಹ್ಮಣಿ ರಮತೇ ಚಿತ್ತಂ

ನಂದತಿ ನಂದತಿ ನಂದತ್ಯೇವ ॥ 14 ॥

ಹದಿನಾಲ್ಕನೆಯ ಶ್ಲೋಕ 

ಯಾರೇ ಆಗಲೀ , ಕಠಿಣ ಯೋಗಸಾಧನೆಯಲ್ಲಿ ನಿರತರಾಗಿರಲಿ ಅಥವಾ ಭೋಗಜೀವನವನ್ನು ಅನುಸರಿಸುತ್ತಿರಲಿ, ಜನರ ಒಡನಾಟದಲ್ಲಿರಲು ಬಯಸಲಿ ಅಥವಾ ಸಂಗವಿಹೀನರಾಗಿ ಏಕಾಂಗಿಯಾಗಿರಲಿ, ಎಲ್ಲಿಯವರೆಗೆ ಅವರ ಮನಸ್ಸು ಬ್ರಹ್ಮನಲ್ಲಿ ಮಗ್ನವಾಗಿರುತ್ತದೆಯೋ ಅಲ್ಲಿಯವರೆಗೆ ಅವರು ಸಂಪೂರ್ಣ ಆನಂದ, ಪರಮಾನಂದ ಮತ್ತು ಅತ್ಯಾನಂದದ ಸ್ಥಿತಿಯಲ್ಲಿ ಜೀವಿಸುತ್ತಾರೆ.

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ಭಗವದ್ಗೀತಾ ಕಿಂಚಿದಧೀತಾ

ಗಂಗಾ ಜಲಲವ ಕಣಿಕಾ ಪೀತಾ ।

ಸಕೃದಪಿ ಯೇನ ಮುರಾರಿ  ಸಮರ್ಚಾ

ಕ್ರಿಯತೇ ತಸ್ಯ ಯಮೇನ ನ ಚರ್ಚಾ ॥ 15 ॥

ಹದಿನೈದನೆಯ ಶ್ಲೋಕ 

ಯಾರು ಭಗವದ್ಗೀತೆಯನ್ನು ಪಠಿಸಲು ತೊಡಗಿರುತ್ತಾರೆಯೋ ಅಥವಾ ಭಗವದ್ಗೀತೆಯ ಸ್ವಲ್ಪ ಭಾಗವನ್ನೇ ಆಗಲಿ, ಪಠಿಸಿರುತ್ತಾರೆಯೋ, ಯಾರು ಗಂಗಾ ಜಲದ ಕೆಲವೇ ಕೆಲವು ಹನಿಗಳನ್ನೇ ಆಗಲಿ, ಗುಟುಕರಿಸಿರುತ್ತಾರೆಯೋ, 

ಯಾರು ಆಗಾಗ್ಗೆ ಪರಮಾತ್ಮನಾದ ವಿಷ್ಣುವನ್ನು ಪೂಜಿಸಿರುತ್ತಾರೆಯೋ, ಅಂತಹವರಿಗೆ  ನರಕಾಧಿಪತಿಯಾದ ಯಮನೊಂದಿಗೆ ಯಾವುದೇ ರೀತಿಯ ಮುಖಾಮುಖಿ ಇರುವುದಿಲ್ಲ!

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ಪುನರಪಿ ಜನನಂ ಪುನರಪಿ ಮರಣಂ

ಪುನರಪಿ ಜನನೀ ಜಠರೇ ಶಯನಂ ।

ಇಹ ಸಂಸಾರೇ ಬಹು ದುಸ್ತಾರೇ

ಕೃಪಯಾಽಪಾರೇ ಪಾಹಿ ಮುರಾರೇ ॥ 16 ॥

 ಹದಿನಾರನೆಯ ಶ್ಲೋಕ 

ಸಂಸಾರ ಎಂಬುದು ಪುನಃ ಪುನಃ ಅಪ್ಪಳಿಸುವ ಅಲೆಗಳ ಏರಿಳತಗಳಿಂದ ಕೂಡಿದ ಸಾಗರವು. ನಾವು ಜನಿಸುತ್ತೇವೆ ಮತ್ತು ಸಾಯುತ್ತೇವೆ. ನಂತರ ತಾಯಿಯ ಗರ್ಭದಲ್ಲಿ ಮಲಗಿದ್ದು ಪುನಃ ಜನಿಸುತ್ತೇವೆ. ಪುನಃ ಜನನ, ಪುನಃ ಮರಣ, ಇದು ಹೀಗೆಯೇ ಸಾಗುತ್ತಿರುತ್ತದೆ. ನನ್ನನ್ನು ಕಾಪಾಡು. 

ಓ ಮುರಾರಿಯೇ! ಸಂಸಾರ ಸಾಗರವನ್ನು ದಾಟಿ ಪಾರಾಗಲು ನನಗೆ ಸಹಾಯ ಮಾಡು. 

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.     

ಗೇಯಂ ಗೀತಾ ನಾಮ ಸಹಸ್ರಂ

ಧ್ಯೇಯಂ ಶ್ರೀಪತಿ ರೂಪಮಜಸ್ರಂ ।

ನೇಯಂ ಸಜ್ಜನ ಸಂಗೇ ಚಿತ್ತಂ

ದೇಯಂ ದೀನಜನಾಯ ಚ ವಿತ್ತಂ ॥ 17 ॥

 ಹದಿನೇಳನೆಯ ಶ್ಲೋಕ 

ನೀವು ಅವಶ್ಯವಾಗಿ ರೂಢಿಸಿಕೊಳ್ಳಬೇಕಾಗಿರುವ ಹೊಸ ಜೀವನ ವಿಧಾನವು ಇಲ್ಲಿದೆ;

ಭಗವದ್ಗೀತೆಯಲ್ಲಿನ ಶ್ಲೋಕಗಳನ್ನುಹಾಗೆಯೇ ವಿಷ್ಣುಸಹಸ್ರನಾಮದ ಶ್ಲೋಕಗಳನ್ನು ಗಾಯನ ಮಾಡಿ. ಸಜ್ಜನರ ಸಂಗವನ್ನು ಬಯಸಿರಿ;

ಲಕ್ಷ್ಮಿಯ ಪತಿಯಾದ ಶ್ರೀ ಮಹಾವಿಷ್ಣುವಿನ ರೂಪವನ್ನು ಕುರಿತು ಸದಾ ಧ್ಯಾನ ಮಾಡಿ. 

ನಿಮ್ಮ ಸಂಪತ್ತನ್ನು ದೀನಜನರಿಗೆ, ನಿರ್ಗತಿಕರಿಗೆ ಹಂಚಿ ದಾನ ಮಾಡಿ

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ಗುರು ಚರಣಾಂಬುಜ ನಿರ್ಭರ ಭಕ್ತಃ

ಸಂಸಾರಾದಚಿರಾದ್ಭವ  ಮುಕ್ತಃ ।

ಸೇಂದ್ರಿಯಮಾನಸ ನಿಯಮಾದೇವಂ

ದ್ರಕ್ಷ್ಯಸಿ ನಿಜ ಹೃದಯಸ್ಥಂ ದೇವಂ ॥ 18 ॥

ಹದಿನೆಂಟನೆಯ ಶ್ಲೋಕ 

ಯಾರು ಗುರುವಿನ ಚರಣ ಕಮಲಗಳಲ್ಲಿ ಗಾಢವಾದ ಭಕ್ತಿಯನ್ನು ಬೆಳೆಸಿಕೊಳ್ಳುತ್ತಾರೆಯೋ, ಅವರು ಸಂಸಾರವೆಂಬ ಬಂಧನದಿಂದ ಶೀಘ್ರವಾಗಿ ಮುಕ್ತಿಯನ್ನು ಪಡೆಯುತ್ತಾರೆ. ಯಾರು ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುತ್ತಾರೆಯೋ, ಅವರು ತಮ್ಮ ಸ್ವಂತ ಹೃದಯದಲ್ಲಿ ನೆಲೆಸಿರುವ ಬ್ರಹ್ಮನ ದರ್ಶನವನ್ನು ಪಡೆಯುತ್ತಾರೆ. 

ಗೋವಿಂದನನ್ನು ಭಜಿಸು; ಗೋವಿಂದನನ್ನು ಪೂಜಿಸು;

ಗೋವಿಂದನಲ್ಲಿಯೇ ಆಶ್ರಯ ಬಯಸು.

ಇಲ್ಲಿಗೆ ಭಜಗೋವಿಂದಂ ಸ್ತೋತ್ರವು ಮುಗಿದುದು.

Primary Sidebar

A SLOKA A DAY VISHNUSAHASRANAMA VIDEOS

Please select the video by clicking the Playlist.

SAADHANA MAARGA VIDEOS

SRIMAD BHAGAVAD GITA A SLOKA A DY

A SHUBHASHITA A DAY

Article of the Month

  • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
  • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
  • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
  • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
  • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು -29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು -27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
  • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
  • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
  • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
  • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
  • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
  • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
  • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
  • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
  • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
  • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
  • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
  • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
  • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
  • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21

Recent Articles

  • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
  • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
  • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
  • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
  • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
  • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
  • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
  • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
  • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
  • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
  • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
  • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
  • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
  • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
  • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
  • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
  • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
  • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
  • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
  • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
  • All Articles Of Gayatri- ಗಾಯತ್ರಿ – Written by Late Lanka Krisna Murti
  • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
  • ನನ್ನ ಪ್ರೀತಿಯ ತಂದೆಯ ನೆನಪು
  • A Sloka A Day
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24

Copyright © 2025 · Lanka Krishna Murti Foundation