81-88
Bagavadgita: Saadhanamaarga
Track four: Smaranam
Towards Self-Realisation – 3
The Truth, the Reality of Brahman,
that it is Sat-Chit-Ananda,
I recollect every morning.
And I tell myself every morning
that I am that Brahman
and not a bundle of elements.
In order to assert
what I am not
and to declare what I am.
let us recite Sri Shankara’s
“Nirvana Shatkam”
82
मनोबुद्ध्यहङ्कार चित्तानि नाहं
न कर्णं न जिह्वा न च घ्राणनेत्रे ।
न च व्योम भूमिर्न तेजो न वायुः
चिदानन्दरूपः शिवोऽहम् शिवोऽहम् ॥१॥
Mano buddhi ahankara chittani naham
Na cha shrotravjihve na cha ghraana netre
Na cha vyoma bhumir na tejo na vayuhu
Chidananda rupah shivo’ham shivo’ham
Manas, Buddhi, Chittam and Ahankaram –
none of them am I;
nor am I any of the organs of Perception
used for hearing, tasting, smelling and seeing;
nor am I the Elements
like the Sky, the Earth, Fire and Air;
but I am Shiva in the Form
of Consciousness and Bliss.
Shiva alone am I.
83
न च प्राणसंज्ञो न वै पञ्चवायुः
न वा सप्तधातुः न वा पञ्चकोशः ।
न वाक्पाणिपादं न चोपस्थपायु
चिदानन्दरूपः शिवोऽहम् शिवोऽहम् ॥२॥
Na cha prana sangyo na vai pancha vayuhu
Na va sapta dhatur na va pancha koshah
Na vak pani padam na chopastha payu
Chidananda rupah shivo’ham shivo’ham
I am not the Prana, the Vital Breath,
nor its five branches:
Prana, Apana, Vyana, Udana and Samana;
I am not the Sapta Dhatus,
the seven body tissues;
1. plasma in the blood,
2. blood,
3. muscle,
4. fat,
5. bone,
6. bone marrow and
7. shukra, the dhatu in the reproductive system.
I am not the Pancha Kosha, the Five Sheaths:
Annamaya, Pranamaya, Manomaya, Vignanamaya and Anandamaya;
nor am I the Motor Organs
like speech, hands, feet, reproductive organs and organs for evacuation;
but I am Shiva in the Form
of Consciousness and Bliss.
Shiva alone am I.
84
न मे द्वेषरागौ न मे लोभमोहौ
मदो नैव मे नैव मात्सर्यभावः ।
न धर्मो न चार्थो न कामो न मोक्षः
चिदानन्दरूपः शिवोऽहम् शिवोऽहम् ॥३॥
Na me dvesha ragau na me lobha mohau
Na me vai mado naiva matsarya bhavaha
Na dharmo na chartho na kamo na mokshaha
Chidananda rupah shivo’ham shivo’ham
I have nothing to do
with the enemies of my mind,
the arishadvaga:
kama, krodha, lobha, moha, mada and matsarya:
lust, anger, greed, infatuation, pride and envy;
nor do I entertain the four purusharthas;
dharma, artha, kama and moksha.
but I am Shiva in the Form
of Consciousness and Bliss.
Shiva alone am I.
न पुण्यं न पापं न सौख्यं न दुःखं
न मन्त्रो न तीर्थं न वेदा न यज्ञाः ।
अहं भोजनं नैव भोज्यं न भोक्ता
चिदानन्दरूपः शिवोऽहम् शिवोऽहम् ॥४॥
Na punyamna papam na saukhyam na duhkham
Na mantro na tirtham na vedah na yajnah
Aham bhojanam naiva bhojyam na bhotka
Chidananda rupah shivo’ham shivo’ham
न मृत्युर्न शङ्का न मे जातिभेदः
पिता नैव मे नैव माता न जन्मः ।
न बन्धुर्न मित्रं गुरुर्नैव शिष्य:
चिदानन्दरूपः शिवोऽहम् शिवोऽहम् ॥५॥
Na me mrtyu shanka na mejati bhedaha
Pita naiva me naiva mataa na janmaha
Na bandhur na mitram gurur naiva shisyaha
Chidananda rupah shivo’ham shivo’ham
अहं निर्विकल्पो निराकाररूपो
विभुत्वाच्च सर्वत्र सर्वेन्द्रियाणाम् ।
न चासङ्गतं नैव मुक्तिर्न मेयः
चिदानन्दरूपः शिवोऽहम् शिवोऽहम् ॥६॥
Aham nirvikalpo nirakara rupo
Vibhut vatcha sarvatra sarvendriyanam
Na cha sangatham na muktir na meyaha
Chidananda rupah shivo’ham shivo’ham
ನಿರ್ವಾಣ ಷಟ್ಕಮ್
ಭಗವದ್ಗೀತಾ: ಸಾಧನಮಾರ್ಗ
ಮಾರ್ಗ ನಾಲ್ಕು: ಸ್ಮರಣಂ
ಆತ್ಮಸಾಕ್ಷಾತ್ಕಾರದೆಡೆಗೆ – ಭಾಗ 3
ಪ್ರತಿದಿನವೂ ಪ್ರಾತಃಕಾಲದಲ್ಲಿ, ಸತ್ಯ ಅಂದರೆ ಬ್ರಹ್ಮನ ಅಸ್ತಿತ್ವವಾದ ಸತ್ಯಸ್ಥಿತಿ – ಸತ್ಯಸ್ಥಿತಿ – ಸತ್, ಚಿತ್ – ಆನಂದವನ್ನು ಸ್ಮರಿಸುತ್ತೇನೆ ಮತ್ತು ಆ ಬ್ರಹ್ಮನು ನಾನೇ, ಎಂಬುದಾಗಿ ನನಗೆ ನಾನೇ ಪ್ರತಿ ಮುಂಜಾನೆಯೂ ಹೇಳಿಕೊಳ್ಳುತ್ತೇನೆ.
ಖಂಡಿತವಾಗಿಯೂ ನಾನು ಪಂಚಭೂತಗಳಿಂದಾದ ಮೂಲಧಾತುಗಳ ಮೂಟೆಯಲ್ಲ.
ನಾನು ಯಾರಲ್ಲ ಎಂದು ಪ್ರತಿಪಾದಿಸಲು ಮತ್ತು ನಾನು ಯಾರು ಎಂದು ಧೃಢವಾಗಿ ಪ್ರಕಟಪಡಿಸುವ ಸಲುವಾಗಿ ನಾವೆಲ್ಲರೂ ಶ್ರೀ ಶಂಕರಾಚಾರ್ಯರ “ನಿರ್ವಾಣ ಷಟ್ಕಮ್” ಅನ್ನು ಪಠಿಸೋಣ.
ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ
ನ ಕರ್ಣಂ ನ ಜಿಹ್ವಾ ನ ಚ ಘ್ರಾಣನೇತ್ರೇ |
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ || 1 ||
ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ – ಇವು ಯಾವುದೂ ನಾನಲ್ಲ. ಹಾಗೆಯೇ ಶ್ರವಣಕ್ಕಾಗಿ, ರುಚಿಗಾಗಿ, ವಾಸನೆಗಾಗಿ ಮತ್ತು ನೋಡುವುದಕ್ಕಾಗಿ ಇರುವ ಗ್ರಹಣೇಂದ್ರಿಯಗಳು
ನಾನಲ್ಲ. ಅಲ್ಲದೆ ಪಂಚಭೂತಗಳಾದ ಆಕಾಶ, ಭೂಮಿ, ವಾಯು, ಜಲ ಮತ್ತು ಅಗ್ನಿಯೂ ನಾನಲ್ಲ.
ಆದರೆ ಪ್ರಜ್ಞೆ ಮತ್ತು ಚಿದಾನಂದ ರೂಪದಲ್ಲಿರುವ ಶಿವ ನಾನು. ಶಿವನೊಬ್ಬನೇ ನಾನು: ನಾನೇ ಶಿವನು.
ನ ಚ ಪ್ರಾಣ ಸಂಜ್ಞೋ ನ ವೈಪಂಚ ವಾಯುಃ
ನ ವಾ ಸಪ್ತಧಾತುಃ ನ ವಾ ಪಂಚ ಕೋಶಃ |
ನವಾಕ್ಪಾಣಿ ಪಾದಂ ನ ಚೋಪಸ್ಥ ಪಾಯು
ಚಿದಾನಂದ ರೂಪಃ ಶಿವೋಹಂ ಶಿವೋಹಂ || 2 ||
ಜೀವಕ್ಕೆ ಅತ್ಯಗತ್ಯವಾದ ಉಸಿರು ಅಂದರೆ ಪ್ರಾಣವು ನಾನಲ್ಲ ಹಾಗೂ ಅದರ ಐದು ಶಾಖೆಗಳಾದ ಪ್ರಾಣ, ಅಪಾನ, ವ್ಯಾನ ಉದಾನ ಮತ್ತು ಸಮಾನವೂ ನಾನಲ್ಲ. ಸಪ್ತ ಧಾತುಗಳಾದ
೧. ಪ್ಲಾಸ್ಮಾ ಅಂದರೆ, ರಕ್ತದಲ್ಲಿನ ಬಣ್ಣವಿಲ್ಲದ ಹೆಪ್ಪುಗಟ್ಟುವ ಭಾಗ
೨. ರಕ್ತ
೩. ಮಾಂಸಖಂಡ ಅಥವಾ ಸ್ನಾಯು
೪. ಕೊಬ್ಬು
೫. ಮೂಳೆ
೬. ಮೂಳೆಯೊಳಗಿನ ಕೊಬ್ಬು ಪದಾರ್ಥ ಅಥವಾ ಮಜ್ಜೆ. ಮತ್ತು
೭. ಶುಕ್ರ ಅಥವಾ ವೀರ್ಯ.
ಇವು ಯಾವುವೂ ನಾನಲ್ಲ.
ಪಂಚಕೋಶಗಳಾದ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶ, ಇವುಗಳು ನಾನಲ್ಲ.
ಅಲ್ಲದೆ ಮಾತು, ಕೈಗಳು, ಪಾದಗಳು, ಜನನೇಂದ್ರಿಯಗಳು ಮತ್ತು ವಿಸರ್ಜಕಾಂಗಗಳು ಹೀಗೆ ಚಲನೆಯುಳ್ಳ ಇಂದ್ರಿಯಗಳೂ ನಾನಲ್ಲ.
ಆದರೆ ಪ್ರಜ್ಞೆ ಮತ್ತು ಚಿದಾನಂದ ರೂಪದಲ್ಲಿರುವ ಶಿವ ನಾನು. ಶಿವನೊಬ್ಬನೇ ನಾನು: ನಾನೇ ಶಿವನು.
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ || 3 ||
ನನ್ನ ಮನಸ್ಸಿನ ಶತ್ರುಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ ಎಂಬ ಅರಿಷಡ್ವರ್ಗಗಳೊಂದಿಗೆ ನನಗೇನೂ ಮಾಡಲು ಕೆಲಸವಿಲ್ಲ. ಹಾಗೆಯೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳನ್ನು ನಾನು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ ಮತ್ತು ಅವುಗಳನ್ನು ಪರಿಗಣಿಸುವುದಿಲ್ಲ. ಆದರೆ ಪ್ರಜ್ಞೆ ಮತ್ತು ಚಿದಾನಂದ ರೂಪದಲ್ಲಿರುವ ಶಿವ ನಾನು. ಶಿವನೊಬ್ಬನೇ ನಾನು. ನಾನೇ ಶಿವನು.
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಧಂ ನ ವೇದಾ ನ ಯಜ್ಞಾಃ|
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋಹಂ ಶಿವೋಹಂ || 4 ||
ಇಬ್ಬಗೆಯ ದ್ವೈತ ಸ್ಥಿತಿಗಳಾದ ಪುಣ್ಯ ಮತ್ತು ಪಾಪ; ಸುಖ ಮತ್ತು ದುಃಖ ಇವುಗಳನ್ನು ನಾನು ನಿರಾಕರಿಸಿ ತ್ಯಜಿಸುತ್ತೇನೆ. ಮಂತ್ರ, ತೀರ್ಥ, ವೇದ ಮತ್ತು ಯಜ್ಞ ಇವುಗಳನ್ನು ನಾನು ಗಣನೆಗೆ ತಂದುಕೊಳ್ಳದೆ ಕಡೆಗಣಿಸುತ್ತೇನೆ.
ಭೋಜನವು ನಾನಲ್ಲ, ಭೋಕ್ತನು ನಾನಲ್ಲ, ಹಾಗೆಯೇ ಭೋಜ್ಯವೂ ನಾನಲ್ಲ(ಈ ಮೂರನ್ನೂ ತ್ರಿಪುಟಿ ಎಂದು ಕರೆಯಲಾಗುತ್ತದೆ)
ಆದರೆ ಪ್ರಜ್ಞೆ ಮತ್ತು ಚಿದಾನಂದ ರೂಪದಲ್ಲಿರುವ ಶಿವ ನಾನು. ಶಿವನೊಬ್ಬನೇ ನಾನು; ನಾನೇ ಶಿವನು.
ನ ಮೃತ್ಯುರ್ನ ಶಂಕಾ ನ ಮೇ ಜಾತಿ ಭೇದಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮಃ |
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ || 5 ||
ನನಗೆ ಸಾವಿನ ಭಯವಿಲ್ಲ. ಅಂತಸ್ತು ಮತ್ತು ಜಾತಿಯ ಆಧಾರದ ಮೇಲೆ ನಾನು ಯಾರಲ್ಲೂ ಭೇದ ಭಾವ ಮಾಡುವುದಿಲ್ಲ. ತಾಯಿ, ತಂದೆ, ಬಂಧು, ಬಳಗ ಮಿತ್ರರು
ಹೀಗೆ ಯಾವುದೇ ಸಂಬಂಧಗಳಲ್ಲಿ ನನಗೆ ಬೆಲೆಯಿಲ್ಲ ಆದರೆ ಪ್ರಜ್ಞೆ ಮತ್ತು ಚಿದಾನಂದ ರೂಪದಲ್ಲಿರುವ ಶಿವ ನಾನು. ಶಿವನೊಬ್ಬನೇ ನಾನು. ನಾನೇ ಶಿವನು.
ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ |
ನ ಚಾ ಸಂಗತಂ ನೈವ ಮುಕ್ತಿರ್ನಮೇಯಃ|
ಚಿದಾನಂದ ರೂಪಃ ಶಿವೋಹಂ ಶಿವೋಹಂ || 6 ||
ಯಾವುದೇ ಆಕಾರ, ಸ್ವರೂಪ ಮತ್ತು ಆಕೃತಿಗಳು ನನಗೆ ಶೂನ್ಯಕ್ಕೆ ಸಮಾನ. ಸಾಧನಗಳನ್ನು ಆಧರಿಸಿರುವ, ಅವುಗಳಲ್ಲಿ ವ್ಯಾಪಿಸಿರುವ ಎಲ್ಲ ಇಂದ್ರಿಯಗಳ ಮೇಲೆ ನಾನು ಪ್ರಭುತ್ವವನ್ನು ಚಲಾಯಿಸಿದ್ದೇನೆ ಹಾಗೂ ಆ ಯಾವುದೇ ಇಂದ್ರಿಯಗಳಿಗೂ ಅಂಟಿಕೊಳ್ಳದೇ ನಾನು ಪ್ರತಿಯೊಂದರ ಬಗ್ಗೆ ಸಮಚಿತ್ತತೆ ಹಾಗೂ ಸಮ ಭಾವವನ್ನು ಹೊಂದಿದ್ದೇನೆ. ಆದುದರಿಂದ ನನಗೆ ಯಾವುದೇ ರೀತಿಯ ಬಂಧಗಳಾಗಲಿ ಅಥವಾ ಬಂಧಮುಕ್ತಿಯಾಗಲೀ ಇಲ್ಲ.
ಆದರೆ ಪ್ರಜ್ಞೆ ಮತ್ತು ಚಿದಾನಂದ ರೂಪದಲ್ಲಿರುವ ಶಿವ ನಾನು. ಶಿವನೊಬ್ಬನೇ ನಾನು. ನಾನೇ ಶಿವನು.