Nitya Karma Anushthana
8-12(K) SM PRINCIPLES & PRACTICES
NITYA KARMA ANUSTHTANA
13-16&16(2) (E) SM
Sanaathana Dharma:
Svadharma-Nityakarma-Anushtaana
A Presentation by
Dr L. Adinarayana
Technical assistance by
Ms Ananya Apparaju
Amba te charana dwandwam
aalambe brahmana priye
sthitva me manasambhoje
punihi vachanam mama
Amba: Mother
Alambe: I seek support and protection from
Te charana dwandwam: your two feet.
Brhmana priye: Oh Brahma’s Beloved,
Sthitwa: seated
Me manasambhoje: in the lotus of my mind,
Puneehi: purify
Mama Vachanam: my speech.
This is a prayer for purification of speech.
Emphasis on purification or pavitrata.
This sloka was composed by my brother Lanka Krishna Murti.
Svadharma: Nitya Karma Anushthana
Before we go into the details of Anusthana, it is important to understand the human body as an instrument for spiritual sadhana for realizing the four goals of human existence: dharma, artha, kama and moksha.
Sariramaadyam khalu dharma saadhanam
The body is indeed the pre-eminent instrument for dharma
The Human Body is an Instrument for anushtaana
The body has three dimensions:
a) the physical body,
b) the faculty of speech, and
c) the mind with four-fold functions.
A healthy body is of vital importance for success in anushtaana. It is only when the body is strong , firm and healthy that it can be used as the best instrument for spiritual saadhana.
The Human Body is an Instrument for anushtaana…
The shanti mantra of Kathopanishat says, “ May my limbs, speech, vital force, eyes, ears, as also strength and all the organs , become well developed…”
The Kathopanishat also says, “The Purusha, of the size of a thumb, dwells in the body. He is the Lord of the past and the future. After knowing Him, one does not conceal oneself any more… There is a city with eleven gates belonging to the unborn Atman of undistorted Consciousness. He who meditates on Him grieves no more. Liberated from the bonds of ignorance, he becomes free…”
The shanti mantra of Ganapati Upanishat says,
“ Oh the Great Divine Ones, May our ears hear only auspicious things.
May our eyes see only auspicious things.
With good health and strength, may we spend our complete lifetime in singing your praises…”
In the sacred texts of Vedanta,
the body with a strong mind and pure speech is compared to a boat, with the help of which the spiritual seeker crosses the ocean of mortality and sorrow.
Anushthaana
With such encouraging ideas firmly planted in our minds, we should perform daily anushtaana.
I am sure most of you are doing your daily anushtaana.
My purpose is to place it in the proper context and define its components, describe the procedures and encourage every one, particularly the younger generation, to take up the practice and derive great benefit from it.
We should set apart some fixed time every day, preferably in the morning, soon after taking bath. At least 15 minutes.
The same place must be used every day for this purpose.
What is Anushtaana?
Anushtaana is a daily course of spiritual practices with several components.
Each course starts with the following components:
1. aasana,
2. aachamana,
3. pranayama,
4. samkalpa, and
5. dhyaana on the deity chosen in the samkalpa.
Anushtaana: Components
It consists of any one or more of the following:
1. mantra japa,
2. sandhya vandana,
3. archana,
4. pooja,
5. paraayana,
6. bhajana,
1. Asana (Posture)
Choose a clean and calm place, free from any distraction or disturbance; preferably your pooja room. Sit in a posture you find to be convenient and comfortable.
The head, shoulders and the hips must be in a straight line.
Keep the Spinal Column free and relaxed because all action is along it…
Take a long deep breath and throw it out.
I am sure every home belonging to our culture provides Sacred Space for performing various types of religious practices, including Anushthaana.
2. Aachamana
Holding a spoon filled with water in the left hand, dip your right thumb in the water in the spoon and sprinkle some drops over your head, as you recite this mantra
Apavitrah pavitrova sarvavasthan gatopiva
Yah smaret pundarikasham sa bahyaabhyantarah suchih
Bring the right palm into a bowl shape by joining the thumb and the forefinger, pour a spoonful of water into it and send it over your lower lip to sip, three times, while reciting the first three manthras:
Om keshavaaya swaaha; Om narayanaya swaaha; Om madhavaya swaaha
Then recite the following 21 manthras:
Om govindaaya namah; Om vishnave namah; Om madhusudanaaya namah; Om trivikramaaya namah; Om vaamanaaya namah; Om sridharaya namah; Om hrishikesaya namah: Om padmanabhaya namah; Om damodaraya namah: Om samkarshanaya namah; Om vasudevaya namah; Om pradyumnaya namah:; Om aniruddhaya namah; Om purushottamaya namah; Om adhokshajaya namah; Om narasimhaya namah; Om achyutaya namah ; Om janardanaya namah; Om upendraya namah; Om haraye namah, Om srikrishnaya namah.
What does this ritual signify?
With the first three manthras, you send a kind of oblation into the body thrice, as you do into fire in a homa, to propitiate the indwelling Self.
Then as you recite the 21 manthras, you touch several parts of the body one by one, by suggesting that each part of the body as belonging to a particular divinity, like govinda, vishnu, madhusudana, etc.
As a result,
1. The body is now sanctified, like a temple, and becomes a sacred instrument for you to perform the anushthaana.
2. When all the Sanskrit sounds in the 24 names are properly pronounced, their vibrations produce great impact on different levels of existence: the senses, the mind and the intellect. They pierce through these levels to bring about purification.
3. The mind gets focused and it becomes easy for you to concentrate and meditate on the desired form.
So all the three dimensions are fully engaged: body, speech and mind.
Purification: trikarana suddhi (thought, word and deed)
You may wonder why much emphasis is laid on purity and purification.
The purer these three instruments are the greater will be their receptivity.
The easier will be the descent of Divine Grace.
3. Pranaayama
Aachamana is followed by pranaayaama.
Praana is the vital force, aayaama is restraint.
So praanaayaama is restraint of the vital force.
There is connection between breath and the life force or praana.
So praanayaama is the control and regulation of the breathing process.
The nature of a person’s breathing indicates the quality of his mind.
Heavy and coarse breathing, for example, suggests that he has a crude mentality. A certain kind of quick breathing is a sign of short life.
When one is angry, fearful, depressed or excited, there will be pounding of heart and rapid and shallow breathing. Breathing takes place through one nostril.
When one is calm, collected, composed and controlled, breathing will be regular, harmonious and rhythmic. Breathing then takes place in both the nostrils.
Praanayaama aims to make the mind calm by the control and regulation of breathing.
Praana is not just breath. It is cosmic energy.
Breath is the gross manifestation of praana, which is subtle.
We are all immersed in air which is filled with praana. When we breath in air, we are taking in both air and praana.
When we breathe in, praana takes five modifications:
Praana, apaana, samaana, udaana and vyaana.
What is Praanayama?
Actual praanaayama takes place when the breath is stopped for a period of time between inhalation and exhalation.
Praanayaama is practised with the three components: puraka, kumbhaka, and rechaka
following a formula ratio of 1:4:2.
The Procedure
Close the right nostril with the thumb of your right hand. Draw in the breath gently through the left nostril. As you do this, mentally count 1.
Then close the left nostril with the third and fourth fingers of your right hand. With both nostrils closed, retain the breath while counting up to 4.
Release the right nostril and breathe out slowly, counting up to 2, keeping the left nostril closed.
With the left nostril still closed, and right one open, breathe in slowly, counting 1.
Close the right nostril. With both nostrils closed, retain the breath, counting up to 4.
Release the left nostril and breathe out slowly, counting up to 2, keeping the right nostril closed.
The above is known as “one round” of pranayama.
The benefit from this is that this arrests the modifications of the mind and makes it one-pointed.
It helps to concentrate and meditate on the chosen form or sound.
4. Samkalpa
After Pranaayama, we make a resolve, specifying the purpose for which the ritual is going to be performed.
Om bhuh, om bhuvah, ogum suvah, om mahah, om janah, om tapah, ogum satyam, om tat savitur varenyam bhargo devasya dheemahi, dhiyoyo nah prachodayat, om apo jyotiraso amrutam brahma bhurbhuvassuvarom.
Mama upaatta samasta duritakshaya dwaara sree parameswara preetyartham;
Dharmaartha kaaama moksha chaturvidha phala purushartha siddhyartham,
Gayatri mantra japam karishye.
I solemnly resolve to perform the Gayatri japa in order to please the Supreme Lord, through the eradication of all the accumulated sins, and to realize the four-fold goals of dharma, artha, kama and moksha of human existence..
5. Dhyaana
Dhyaana or meditation, simply stated, is the practice of bringing the mind to focus, and then concentrating on some desired object or person.
We meditate on the divine form or sound specific to the practice we have chosen to do:
Om in the case of Om Japa or gaayathri in the case of gaayatri japa, or Lalita Devi in the case of Lalita Sahasranaama, or the Sun God in the case of Adityahrdaya.
A Powerful Tool
Dhyaana is a valuable instrument we have inherited from our ancient Rishis and Yogis.
According to the Vedic view of life, right action should be complemented by contemplation and meditation.
Dhyaana as a tool has been well established in our knowledge systems, particularly by Maharshi Patanjali in his Ashtaangayoga.
The Procedure
If you have chosen to do mantra japa on Gayatri, the most sacred of all mantras, it is essential to know what a mantra is.
A mantra is a specific combination of letters or words with a mysterious power hidden within it.
Mantra japa
When it is used in a particular manner, it brings about certain results.
Each mantra has
1. A meter,
2. A presiding deity, and
3. A Rishi to whom it was revealed and who attained supreme realization by meditating on it.
Practice of Mantra japa
The mantra should be repeated or chanted according to its specific meter and rhythm.
While doing so, you should meditate on the deity represented by it, and establish a mental connection with the Rishi of that mantra.
Such repetition and meditation release the inherent power and bring about the desired transformation of consciousness.
What happens during the practice?
As the mantra is repeated or chanted, a sound vibration is produced within.
Continuous and steady repetition produces a stream of vibrations.
Then the whole mind resonates with the rhythm of the mantra.
The mind attains thus purity and holiness.
The presiding deity bestows fulfillment and power to maintain the realization.
Meditation on Gayatri
While chanting or repeating the mantra, you should focus your attention on the Deity, that is Gayatri.
The following is the dhyana shloka:
Dhyana shloka
Mukta vidruma hema neela dhavala chaaeih mukhaih thriyakshanaih,
Yuktaamindu nibaddha rathna makutam tatvartha varnatmikam,
Gaytreem varadabhayam amkusakasham subhram kapalam gadaam,
Sankham chakram atharavinda yugalam
Hastairvahanteem bhaje.
Dhyana sloka: Translation
I invoke Goddess Gayatri,
Who has five faces of different hues: pearly, coral, gold, sapphire and diamond; each face having three eyes; all the five heads holding crowns studded with moonstones and diamonds;
With a body shining forth with the knowledge of Brahman;
And with ten hands holding in each an abhaya and a varada sign, an ankusa, a whip, a skull, a gada, a shanka, a chakra and a pair of lotuses.
Gayatri japa
Then you perform the japa.
Om Bhur Bhuva Svah
Tat Savitur Varenyam
Bhargo Devasya Dhimahi
Dhiyo Yo Nah Prachodayat.
Om.
Concluding Prayer
Kaayena vaacha manasa indriairva
buddyatmana va prakrite svabhavat
karomi yadyat sakalam parasmai
narayanayeti samarpayami.
I offer all my thoughts, words and actions to the Supreme Self.
Here is a Dhyana Shloka taken from Sri Sankara’s SOUNDARYALAHARI, which is reputed to be packed with such great Mantric power that it is capable of bestowing Liberation from the Cycle of Births and Deaths.
सुधासिन्धोर्मध्ये सुरविटपिवाटीपरिवृते
मणिद्वीपे नीपोपवनवति चिन्तामणिगृहे ।
शिवाकारे मञ्चे परमशिवपर्यङ्कनिलयां
भजन्ति त्वां धन्याः कतिचन चिदानन्दलहरीम् ॥ ८॥
sudhāsindhormadhye suraviṭa-pivāṭī-parivṛte
maṇidvīpe nīpo-pavanavati chintāmaṇi gṛhe |
śivakāre mañche paramaśiva-paryaṅka nilayām
bhajanti tvāṃ dhanyāḥ katichana chidānanda-laharīm ‖ 8 ‖
O Mother,
You are Chit Ananda Lahari,
You are a Wave of Consciousness and Bliss.
Those are indeed the few blessed ones
who worship and meditate on you
as you are seated on the lap of Paramashiva
on a throne rendered auspicious by your
combined Presence,
in the Shrine built with precious Chintamani
stones
that is surrounded by a Garden of Kadamba
trees
and located in the famous Mani Dweepa,
which is encircled by rows of Divine Trees
amidst the Ocean of Nectar, Sudha Sindhu..
O Mother,
You are Chit Ananda Lahari,
You are a Wave of Consciousness and Bliss Om Sri Matre Namah
Om Sri Matre Namah
Om Sri Matre Namah
ओम् श्री मात्रे नमः
ओम् श्री मात्रे नमः
ओम् श्री मात्रे नमः
This is Sarva Gayatri Mantra which can be used by anyone for meditative repetition. It is considered equivalent to the regular Gayatri Mantra.
ओम् सर्व चैतन्य रूपां तां l
आद्यां विद्यां च धीमहि l
बुद्धिं या नः प्रचोदयात् ll
Om sarva chaitanya rUpAm tAm I
AdyAam vidyAm cha dhImahi I
Buddhim yA naha prachOdayAt I
Here are a few more mantras which can be chanted by anyone.
It is important to ensure proper
pronunciation.
There are three components for each mantra:
a. the deity we wish to learn about; (vidmahe)
b. the deity on whom we meditate; (dhimahi)
and
c. the deity from whom we seek guidance and inspiration.(prachodayat)
1. ओम् तत्पुरुषाय विद्महे l
महा देवाय धीमहि l
तन्नो रुद्रः प्रचोदयात् ll
mahA dEvAya dhImahi I
2. ओम् तत्पुरुषाय विद्महे l
वक्रतुन्डाय धीमहि l
तन्नो दन्तिः प्रचोदयात् ll
Om tatpuruShAya vidmahE I
vakratundAya dhImahi I
tannO dantIH pracOdayAt II
3. ओम् भास्कराय विद्महे l
महा द्युतिकराय धीमहि l
तन्नो आदित्य: प्रचोदयात् ll
Om bhAskarAya vidmahE I
mahA dyutikarAya dhImahi I
tanno AdityaH prachOdayAt I
4. ओम् कात्यायनाय विद्महे l
कन्यकुमारि धीमहि l
तन्नो दुर्गिः प्रचोदयात् ll
Om kAtyAyanAya vidmahE I
kanyakumAri dhImahi I
tannO durgIH prachOdayAt II
5. ओम् धन्वन्तराय विद्महे l
वासुदेवाय धीमहि l
तन्नो विष्णुःप्रचोदयात् ll
Om dhanvantarAya vidmahE I
vaasudEvAya dhIMahi I
tannO vishnuH prachOdayAt II
The Benefits of Practicing Daily Anushtaana
A committed and consistent practice of Anushtaana brings about the transformation of character and personality.
The practitioner gets a new birth, while the old self dies.
He/she gradually begins to develop a new mind, new nerves, new perspectives and new samskaras.
New character and personality
The entire character and personality undergo transformation, with observable signs:
1. Improvement of Health
Good health is the first sign of spiritual advancement.
There will be clear change in the behaviour.
One can see this in the cheerful temper and sweet disposition.
A healthy body frees the mind from body-consciousness.
Otherwise, a weak body continually draws all the attention of the mind to itself.
2. Integration of Personality
Next, practice of meditation helps the inner consciousness to free itself from identification with body and mind.
There will be gradual integration of thoughts, words, emotions and actions.
As a result, a person is always sincere, honest and straightforward.
There will be a rise in the quality of sattva (spiritual balance) over the qualities of rajas (restlessness) and tamas (dullness).
3. Increased mastery over mind and senses
One can observe steadiness of mind and mastery over the senses.
4. Longing for God
There is also an increased longing for God and devotion to one’s ishtadevata.
5. Taste of Inner Bliss
Taste of inner bliss is the most positive sign of progress in the spiritual path of meditation.
One goes well beyond the joy of worldly enjoyments.
It is the joy of worship one feels while chanting God’s name.
And this joy will finally lead to the joy of Brahman.
It is the Supreme Bliss known as Brahmananda.
A committed and consistent practice of daily Anushthaana will make you receptive to Divine Grace and ensure your well-being here and hereafter.
THE END
ನಿತ್ಯಕರ್ಮ ಅನುಷ್ಠಾನ
17-20 (K) SM NITYA KARMA ANUSTHTANA
ಸಾಧನ ಮಾರ್ಗ – ಸ್ವಧರ್ಮ – ನಿತ್ಯಕರ್ಮ ಅನುಷ್ಠಾನ
ದಿನಾಂಕ 21-6-2015 ರಂದು ಲಂಕಾ ಕೃಷ್ಣಮೂರ್ತಿ ಪ್ರತಿಷ್ಠಾನದ ವಾರ್ಷಿಕ ಸಮಾರಂಭದಲ್ಲಿ
ಡಾ. ಎಲ್. ಆದಿನಾರಾಯಣರವರು ಮಾಡಿದ ಪ್ರಸ್ತುತಿಯ ಕನ್ನಡ ಅನುವಾದ
ಸನಾತನ ಧರ್ಮ : ಸ್ವಧರ್ಮ – ನಿತ್ಯಕರ್ಮ ಅನುಷ್ಠಾನ
ಡಾII ಎಲ್. ಆದಿನಾರಯಣ ರವರಿಂದ ಪ್ರಸ್ತುತಿ
ಮಿಸ್. ಅನನ್ಯ ಅಪ್ಪರಾಜು ರವರಿಂದ ತಾಂತ್ರಿಕ ನೆರವು
ಅಂಬ ತೇ ಚರಣ ದ್ವಂದ್ವಂ
ಆಲಂಬೇ ಬ್ರಹ್ಮಣಪ್ರಿಯೇ
ಸ್ಥಿತ್ವಾ ಮೇ ಮಾನಸಾಂಭೋಜೇ
ಪುನೀಹಿ ವಚನಂ ಮಮ
ಅಂಬ: ತಾಯಿ
ಆಲಂಬೇ: ನಾನು ರಕ್ಷಣೆ ಮತ್ತು ಆಶ್ರಯವನ್ನು ಕೋರುತ್ತೇನೆ.
ತೇ ಚರಣ ದ್ವಂದ್ವಂ: ನಿನ್ನ ಎರಡು ಪಾದಗಳಲ್ಲಿ
ಬ್ರಹ್ಮಣಪ್ರಿಯೇ: ಓ ಬ್ರಹ್ಮನ ಅಚ್ಚುಮೆಚ್ಚಿನವಳೇ
ಸ್ಥಿತ್ವಾ : ಕುಳಿತಿರುವ
ಮೇ ಮಾನಸಾಂಭೋಜೇ: ನನ್ನ ಮನೋಕಮಲದಲ್ಲಿ
ಪುನೀಹಿ : ಪಾವನ ಮಾಡು
ಮಮ ವಚನಂ: ನನ್ನ ವಾಕ್ಕನ್ನು.
ಪವಿತ್ರತೆಗಾಗಿ ಪ್ರಾರ್ಥನೆ.
ವಾಕ್ಕಿನ ಶುದ್ಧೀಕರಣಕ್ಕಾಗಿ ಈ ಪ್ರಾರ್ಥನೆ.
ಪವಿತ್ರತೆಯ ಪ್ರಾಮುಖ್ಯತೆ.
ಈ ಪ್ರಾರ್ಥನೆಯ ಶ್ಲೋಕವನ್ನು ನನ್ನ ಅಣ್ಣನವರಾದ ಲಂಕಾ ಕೃಷ್ಣಮೂರ್ತಿಯವರು ರಚಿಸಿರುವರು.
ಸ್ವಧರ್ಮ: ನಿತ್ಯಕರ್ಮ ಅನುಷ್ಠಾನ
ಅನುಷ್ಠಾನದ ಬಗ್ಗೆ ವಿವರಗಳನ್ನು ತಿಳಿಯುವ ಮೊದಲು, ಮನುಷ್ಯನ ಅಸ್ತಿತ್ವವನ್ನು ಸಿದ್ಧಿಸಿಕೊಳ್ಳಲು ಬೇಕಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಧ್ಯೇಯಗಳ ಆಧ್ಯಾತ್ಮಿಕ ಸಾಧನೆಗೆ ಸಾಧನವಾಗಿರುವ ಮಾನವ ಶರೀರವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಶರೀರಮಾದ್ಯಂ ಖಲು ಧರ್ಮ ಸಾಧನಂ …
ಧರ್ಮವನ್ನು ಮಾಡಲು ಶರೀರವು ನಿಜಕ್ಕೂ ಸರ್ವಶ್ರೇಷ್ಠ (ಉತ್ತಮತರ) ಸಾಧನವಾಗಿದೆ.
ಅನುಷ್ಠಾನವನ್ನು ಮಾಡಲು ಮಾನವ ಶರೀರವು ಒಂದು ಸಾಧನ.
ಶರೀರವು ಮೂರು ಆಯಾಮಗಳುಳ್ಳದ್ದು.
1. ಭೌತಿಕ ಶರೀರ
2. ವಾಕ್ ಸಾಮರ್ಥ್ಯ ಮತ್ತು
3. ನಾಲ್ಕು ಪದರಗಳ ಕಾರ್ಯಾಂಗವುಳ್ಳ ಮನಸ್ಸು.
ಅನುಷ್ಠಾನದಲ್ಲಿ ಯಶಸ್ಸುಗಳಿಸಲು ಆರೋಗ್ಯಕರ ಶರೀರವು ಮುಖ್ಯ ಪಾತ್ರ ವಹಿಸುತ್ತದೆ. ಸಧೃಢ, ಸ್ಥಿರ ಮತ್ತು ಆರೋಗ್ಯವಂತವಾಗಿರುವ ಶರೀರವಿದ್ದಾಗ ಮಾತ್ರ ಅದನ್ನು ಆಧ್ಯಾತ್ಮಿಕ ಸಾಧನೆಗೆ ಉತ್ಕೃಷ್ಟ ಸಾಧನವನ್ನಾಗಿ ಬಳಸಬಹುದಾಗಿದೆ.
ಅನುಷ್ಠಾನಕ್ಕೆ ಸಾಧನವಾಗಿ ಮಾನವ ಶರೀರ.
ಕಠೋಪನಿಷತ್ತಿನ ಶಾಂತಿ ಮಂತ್ರವು ಹೀಗಿದೆ.
ನನ್ನ ಅವಯವಗಳು, ಮಾತುಗಳು, ಕಣ್ಣುಗಳು, ಕಿವಿಗಳು, ಪ್ರಾಣಶಕ್ತಿ, ಎಲ್ಲ ಅಂಗಾಂಗಗಳೂ ಮತ್ತು ಅವುಗಳ ಸಾಮರ್ಥ್ಯ ಇವೆಲ್ಲವೂ ಚೆನ್ನಾಗಿ ವಿಕಸಿಸುವಂತಾಗಲಿ.
ಕಠೋಪನಿಷತ್ತು ಹೇಳುತ್ತದೆ – “ ಹೆಬ್ಬೆಟ್ಟಿನ ಗಾತ್ರದ ಪುರುಷನು ಈ ದೇಹದಲ್ಲಿ ವಾಸಿಸುತ್ತಾನೆ. ಭೂತ ಮತ್ತು ಭವಿಷ್ಯದ ಒಡೆಯ ಈತನು. ಈತನನ್ನು ಅರಿತ ನಂತರ ಯಾರೂ ತಮ್ಮನ್ನು ತಾವು ಮರೆಮಾಚಲಾರರು.
ವಿರೂಪಗೊಳಿಸದ ಪ್ರಜ್ಞೆಯುಳ್ಳ, ಹುಟ್ಟಿಲ್ಲದ ಆತ್ಮನಿಗೆ ಸೇರಿದ ಹನ್ನೊಂದು ಬಾಗಿಲುಗಳುಳ್ಳ ನಗರವಿದೆ. ಯಾರು ಆತನನ್ನು ಕುರಿತು ಧ್ಯಾನಿಸುತ್ತಾನೆಯೋ ಅವನು ಎಂದಿಗೂ ಶೋಕಿಸುವುದಿಲ್ಲ. ಅಜ್ಞಾನದ ಬಂಧದಿಂದ ವಿಮೋಚಿತನಾಗಿ ಅವನು ಸ್ವತಂತ್ರನಾಗುತ್ತಾನೆ.
ಕಠೋಪನಿಷತ್ ಹೇಳುತ್ತದೆ:
ನೀವೇ ಅಧಿಪತಿಗಳು.
ನಿಮ್ಮಲ್ಲಿರುವ ಎಲ್ಲ ಶಾರೀರಿಕ ಸಾಮರ್ಥ್ಯಕ್ಕೆ ನೀವೇ ಅಧಿಪತಿಗಳು.
ರಥದಲ್ಲಿ ಕುಳಿತಿರುವ ವ್ಯಕ್ತಿಯಂತೆ ನೀವೇ ನಿಮ್ಮನ್ನು ಚಿತ್ರಿಸಿಕೊಳ್ಳಬಹುದು.
ನಿಮ್ಮ ಶರೀರವನ್ನು ರಥವೆಂದು ತಿಳಿದುಕೊಳ್ಳಿ, ನೀವೇ ರಥದ ಮಾಲೀಕ ಹಾಗೂ ತುಲನಾತ್ಮಕ ಗುಣವುಳ್ಳ ನಿಮ್ಮ ಪ್ರಜ್ಞೆಯೇ ಸಾರಥಿ ಮತ್ತು ನಿಮ್ಮ ಮನಸ್ಸೇ ಲಗಾಮು. ಜ್ಞಾನಿಗಳು ಹೇಳುವಂತೆ ನಿಮ್ಮ ಇಂದ್ರಿಯಗಳೇ ಸ್ವಾರ್ಥಪೂರಿತ, ಕಾಮನೆ ಎಂಬ ರಸ್ತೆಯ ಮೇಲೆ ಚಲಿಸುತ್ತಿರುವ ಅಶ್ವಗಳು.
ಗಣಪತಿ ಉಪನಿಷತ್ತಿನ ಶಾಂತಿ ಮಂತ್ರವು ಹೇಳುತ್ತದೆ.
ಓ ಮಹಾನ್ ದೇವಾದಿದೇವತೆಗಳೇ, ನಮ್ಮ ಕಿವಿಗಳು ಶುಭಕರವಾದುದನ್ನು ಮಾತ್ರ ಕೇಳುವಂತಾಗಲಿ.
ನಮ್ಮ ಕಣ್ಣುಗಳು ಮಂಗಳಕರವಾದುದನ್ನು ಮಾತ್ರ ನೋಡುವಂತಾಗಲಿ.
ಒಳ್ಳೆಯ ಆರೋಗ್ಯ ಮತ್ತು ಸಾಮರ್ಥ್ಯದಿಂದ, ನಾವು ನಿನ್ನನ್ನು ಕೊಂಡಾಡಿ ಹಾಡುತ್ತಾ ನಮ್ಮ ಸಂಪೂರ್ಣ ಜೀವಮಾನವನ್ನು ಸವೆಸುವಂತಾಗಲಿ.
ವೇದಾಂತದ ಪವಿತ್ರ ಗ್ರಂಥಗಳಲ್ಲಿ
ಆರೋಗ್ಯಪೂರ್ಣ ಮನಸ್ಸು ಮತ್ತು ಪರಿಶುದ್ಧವಾದ ವಾಕ್ಕು ಉಳ್ಳ ಶರೀರವನ್ನು ದೋಣಿಗೆ ಹೋಲಿಸಲಾಗಿದೆ. ಈ ಶರೀರದ ಸಹಾಯದಿಂದ ಆಧ್ಯಾತ್ಮ ಅನ್ವೇಷಕನು ದುಃಖ ಮತ್ತು ಮರ್ತ್ಯತೆ ಎಂಬ ಸಾಗರವನ್ನು ದಾಟಬಲ್ಲನು.
ಅನುಷ್ಠಾನ.
ಇಂತಹ ಉತ್ತೇಜನಕಾರಿ ಮನೋಭಾವನೆಗಳನ್ನು ಗಟ್ಟಿಯಾಗಿ ನಮ್ಮ ಮನಗಳಲ್ಲಿ ಬೇರೂರಿಸಿಕೊಂಡು ನಾವು ಪ್ರತಿದಿನವೂ ಅನುಷ್ಠಾನವನ್ನು ಆಚರಿಸಬೇಕು.
ನಿಮ್ಮಲ್ಲಿ ಬಹಳಷ್ಟು ಮಂದಿ ನಿಮ್ಮ ನಿತ್ಯ ಅನುಷ್ಠಾನವನ್ನು ಮಾಡುತ್ತಿರುವಿರೆಂಬ ಖಾತ್ರಿ ನನಗಿದೆ.
ಸರಿಯಾದ ಸಂದರ್ಭದಲ್ಲಿ ಇದನ್ನು ಇರಿಸಿಕೊಂಡು ಅದರ ಉಪಾಂಗಗಳನ್ನು ನಿರೂಪಿಸಿ, ಅದರ ಕಾರ್ಯವಿಧಾನವನ್ನು ವಿವರಿಸಿ, ಪ್ರತಿಯೊಬ್ಬರನ್ನೂ ಉತ್ತೇಜಿಸಿ, ಅದರಲ್ಲೂ ಯುವಜನಾಂಗವನ್ನು ಗುರಿಯಾಗಿಸಿಕೊಂಡು, ಅನುಷ್ಠಾನವನ್ನು ಆಚರಣೆಯಲ್ಲಿ ತಂದು ಅದರಿಂದ ಪ್ರತಿಯೊಬ್ಬರೂ ಉತ್ತಮ ಪ್ರಯೋಜನ ಪಡೆದುಕೊಳ್ಳಬೇಕೆಂಬುದು ನನ್ನ ಉದ್ದೇಶ.
ಇದಕ್ಕಾಗಿ ಪ್ರತಿದಿನವೂ ನಿಗದಿತ ಸಮಯವನ್ನು ನಾವು ಮೀಸಲಿರಿಸಬೇಕು. ಅದರಲ್ಲೂ ಬೆಳಗಿನ ಸಮಯ, ಸ್ನಾನವಾದ ನಂತರ ಕನಿಷ್ಟ 15 ನಿಮಿಷಗಳನ್ನು ಇದಕ್ಕಾಗಿ ವಿನಿಯೋಗಿಸಬಹುದಾಗಿದೆ.
ಇದರ ಸಲುವಾಗಿ ಪ್ರತಿನಿತ್ಯವೂ ಒಂದೇ ಸ್ಥಳವನ್ನು ಉಪಯೋಗಿಸಬೇಕು.
ಎರಡನೆಯ ದಿನ
ಅನುಷ್ಠಾನ ಎಂದರೇನು?
ಪ್ರತಿದಿನವೂ ಆಚರಿಸುವ ಹಲವಾರು ಉಪಾಂಗಗಳನ್ನುಳ್ಳ ಆಧ್ಯಾತ್ಮಿಕ ನಡವಳಿಕೆಯೇ ಅನುಷ್ಠಾನ.
ಪ್ರತಿ ನಡಾವಳಿಯೂ ಈ ಕೆಳಗಿನ ಉಪಾಂಗಗಳೊಡನೆ ಶುರುವಾಗುತ್ತದೆ.
1. ಆಸನ
2. ಆಚಮನ
3. ಪ್ರಾಣಾಯಾಮ
4. ಸಂಕಲ್ಪ ಮತ್ತು
5. ಧ್ಯಾನ– ಸಂಕಲ್ಪದಲ್ಲಿ ನಿಶ್ಚಯಿಸಿಕೊಂಡ ದೇವರನ್ನು ಕುರಿತು ಧ್ಯಾನ
ಅನುಷ್ಠಾನ: ಉಪಾಂಗಗಳು
ಈ ಕೆಳಗಿನ ಒಂದು ಅಥವಾ ಅದಕ್ಕಿಂತ ಹೆಚ್ಚಿನವುಗಳನ್ನು ಇದು ಒಳಗೊಂಡಿದೆ.
1. ಮಂತ್ರಜಪ
2. ಸಂಧ್ಯಾವಂದನೆ
3. ಅರ್ಚನೆ
4. ಪೂಜೆ
5. ಪಾರಾಯಣ
6. ಭಜನೆ
1.ಆಸನ
ವಿಕ್ಷಿಪ್ತವಲ್ಲದ ಮತ್ತು ಅಡಚಣೆಗಳಿಲ್ಲದ ಸ್ವಚ್ಛವಾಗಿರುವ ಮತ್ತು ಪ್ರಶಾಂತವಾಗಿರುವ ಸ್ಥಳವನ್ನು, ಪ್ರಾಯಶಃ ನಿಮ್ಮ ಪೂಜಾಮಂದಿರವನ್ನು ಆಯ್ಕೆಮಾಡಿಕೊಳ್ಳಿ. ನಿಮಗೆ ಪ್ರಶಸ್ತವಾದ ಮತ್ತು ಆರಾಮದಾಯಕವಾದ ಭಂಗಿಯಲ್ಲಿ ಕುಳಿತುಕೊಳ್ಳಿ.
ನಿಮ್ಮ ತಲೆ, ಭುಜಗಳು ಮತ್ತು ಸೊಂಟವು ಒಂದೇ ನೇರ ರೇಖೆಯಲ್ಲಿರಬೇಕು.
ನಿಮ್ಮ ಬೆನ್ನುಹುರಿಯನ್ನು ಸಡಿಲ ಹಾಗೂ ನೇರವಾಗಿರಿಸಿಕೊಳ್ಳಿ. ಏಕೆಂದರೆ ಎಲ್ಲ ಕ್ರಿಯೆಯೂ ಅದರ ಉದ್ದಕ್ಕೂ ನಡೆಯುತ್ತದೆ.
ಆಳವಾಗಿ ಉಸಿರನ್ನು ಒಳಗೆ ಎಳೆದುಕೊಳ್ಳಿ ಮತ್ತು ಅದನ್ನು ಹೊರಹಾಕಿ.
ನಮ್ಮ ಸಂಸ್ಕೃತಿಗೆ ಸೇರಿದ ಎಲ್ಲ ಮನೆಗಳೂ, ಅನುಷ್ಠಾನವನ್ನೂ ಒಳಗೊಂಡಂತೆ ವಿವಿಧ ಬಗೆಯ ಧಾರ್ಮಿಕ ಕ್ರಿಯೆಗಳನ್ನು ಮಾಡುವ ಸಲುವಾಗಿ ಪ್ರತ್ಯೇಕವಾದ ಪವಿತ್ರ ಸ್ಥಳವನ್ನು ಹೊಂದಿರುತ್ತವೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ.
2. ಆಚಮನ.
ನೀರು ತುಂಬಿದ ಉದ್ಧರಣೆಯನ್ನು ನಿಮ್ಮ ಎಡಗೈಲ್ಲಿ ಇಟ್ಟುಕೊಂಡು, ನಿಮ್ಮ ಬಲ ಹೆಬ್ಬೆರಳನ್ನು ನೀರಿನಲ್ಲಿ ಅದ್ದಿ, ಈ ಕೆಳಗಿನ ಮಂತ್ರವನ್ನು ಉಚ್ಛರಿಸುತ್ತಿರುವಂತೆ ನಿಮ್ಮ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳಿ.
ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂಗತೋ ಪಿವ
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಂಭ್ಯಂತರಃ ಶುಚಿಃ
ನಿಮ್ಮ ಬಲ ಹಸ್ತದ ಹೆಬ್ಬೆರಳು ಮತ್ತು ತೋರುಬೆರಳನ್ನು ಜೋಡಿಸಿ ಬೊಗಸೆಯಾಕಾರ ಮಾಡಿ ಅದರಲ್ಲಿ ಒಂದು ಉದ್ಧರಣೆ ನೀರನ್ನು ಹಾಕಿಕೊಂಡು ಈ ಕೆಳಗಿನ ಮೊದಲ ಮೂರು ಮಂತ್ರಗಳನ್ನು ಜಪಿಸುತ್ತಾ ನಿಮ್ಮ ಕೆಳತುಟಿಯ ಮೂಲಕ ಗುಟುಕರಿಸಿ.
ಓಂ ಕೇಶವಾಯ ಸ್ವಾಹ; ಓಂ ನಾರಾಯಣಾಯ ಸ್ವಾಹ; ಓಂ ಮಾಧವಾಯ ಸ್ವಾಹ .
ಆಚಮನ.
ಆಮೇಲೆ ಈ ಕೆಳಗಿನ 21 ಮಂತ್ರಗಳನ್ನು ಪಠಿಸಿ.
ಓಂ ಗೋವಿಂದಾಯ ನಮಃ, ಓಂ ವಿಷ್ಣವೇ ನಮಃ, ಓಂ ಮಧುಸೂದನಾಯ ನಮಃ, ಓಂ ತ್ರಿವಿಕ್ರಮಾಯ ನಮಃ, ಓಂ ವಾಮನಾಯ ನಮಃ, ಓಂ ಶ್ರೀಧರಾಯ ನಮಃ, ಓಂ ಹೃಷೀಕೇಷಾಯ ನಮಃ, ಓಂ ಪದ್ಮನಾಭಾಯ ನಮಃ, ಓಂ ದಾಮೋದರಾಯ ನಮಃ, ಓಂ ಸಂಕರ್ಷಣಾಯ ನಮಃ, ಓಂ ವಾಸುದೇವಾಯ ನಮಃ, ಓಂ ಪ್ರದ್ಯುಮ್ನಾಯ ನಮಃ, ಓಂ ಅನಿರುದ್ಧಾಯ ನಮಃ, ಓಂ ಪುರುಷೋತ್ತಮಾಯ ನಮಃ, ಓಂ ಅಧೋಕ್ಷಜಾಯ ನಮಃ, ಓಂ ನಾರಸಿಂಹಾಯ ನಮಃ, ಓಂ ಅಚ್ಯುತಾಯ ನಮಃ, ಓಂ ಜನಾರ್ದನಾಯ ನಮಃ, ಓಂ ಉಪೇಂದ್ರಾಯ ನಮಃ, ಓಂ ಹರಯೇ ನಮಃ, ಓಂ ಶ್ರೀ ಕೃಷ್ಣಾಯ ನಮಃ,
ಈ ಶಾಸ್ತ್ರವಿಧಿಯು ಏನನ್ನು ಸೂಚಿಸುತ್ತದೆ?
ಹೋಮದಲ್ಲಿ ಅಗ್ನಿಯನ್ನು ತೃಪ್ತಿಪಡಿಸಲು ಆಜ್ಯವನ್ನು ಹಾಕುವಂತೆ, ಅಂತರಾತ್ಮನನ್ನು ಒಲಿಸಿಕೊಳ್ಳಲು, ಮೊದಲ ಮೂರು ಮಂತ್ರಗಳಿಂದ, ಶರೀರಕ್ಕೆ ಮೂರು ಬಾರಿ ನೀವು ಒಂದು ವಿಧದ ನೈವೇದ್ಯ ಮಾಡುತ್ತೀರಿ.
ನಂತರ 21 ಮಂತ್ರಗಳನ್ನು ಹೇಳುವಾಗ, ನೀವು ನಿಮ್ಮ ಶರೀರದ ಹಲವು ಭಾಗಗಳನ್ನು ಒಂದೊಂದಾಗಿ ಮುಟ್ಟುವಿರಿ. ಶರೀರದ ಪ್ರತಿಯೊಂದು ಭಾಗವೂ ಗೋವಿಂದ, ವಿಷ್ಣು, ಮಧುಸೂದನ ಇತ್ಯಾದಿ ಪ್ರತ್ಯೇಕ ದೇವತೆಗಳಿಗೆ ಸೇರಿದೆ ಎಂಬುದನ್ನು ಇದು ಸೂಚಿಸುತ್ತದೆ.
ಈ ಶಾಸ್ತ್ರವಿಧಿಯು ಏನನ್ನು ಸೂಚಿಸುತ್ತದೆ?
ಫಲಿತಾಂಶವೇನೆಂದರೆ
1. ದೇವಸ್ಥಾನದಂತೆ ಶರೀರವನ್ನು ಈಗ ಪಾವನಗೊಳಿಸಲಾಗಿದೆ
ಹಾಗಾಗಿ ನೀವು ಅನುಷ್ಠಾನ ಮಾಡಲು ಅದು ಪವಿತ್ರ ಸಾಧನವಾಗಿದೆ.
2. ಎಲ್ಲಾ 24 ನಾಮಗಳಲ್ಲಿನ ಸಂಸ್ಕೃತ ಶಬ್ದಗಳನ್ನು ಸರಿಯಾಗಿ ಉಚ್ಛರಿಸಿದಾಗ ಉಂಟಾಗುವ ಕಂಪನಗಳು, ಸ್ಪರ್ಶ, ಮನಸ್ಸು ಮತ್ತು ಬುದ್ಧಿ ಇತ್ಯಾದಿ ಪ್ರಾಣದ ಹಲವು ಸ್ತರಗಳ ಮೇಲೆ ಅಗಾಧ ಪರಿಣಾಮವನ್ನು ಉಂಟುಮಾಡುತ್ತವೆ. ಈ ಸ್ತರಗಳ ಮೂಲಕ ಆ ಕಂಪನಗಳು ಹಾದುಹೋಗಿ ಅವುಗಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ.
3. ನಿಮ್ಮ ಮನಸ್ಸು ತಿಳಿಗೊಂಡು ನಿಮಗೆ ಇಚ್ಛಿತ ರೂಪದ ಮೇಲೆ ಕೇಂದ್ರೀಕರಿಸಿ ಧ್ಯಾನ ಮಾಡಲು ಸುಲಭವಾಗುತ್ತದೆ.
ಹಾಗಾಗಿ ದೇಹ, ವಾಕ್ಕು ಮತ್ತು ಮನಸ್ಸು ಹೀಗೆ ಎಲ್ಲಾ ಮೂರು ಆಯಾಮಗಳು ಪೂರ್ತಿಯಾಗಿ ಕಾರ್ಯನಿರತವಾಗುತ್ತವೆ.
ಪರಿಶುದ್ಧಿ:- ತ್ರಿಕರಣ ಶುದ್ಧಿ( ಆಲೋಚನೆ, ಮಾತು ಮತ್ತು ಕೃತಿ)
ಪವಿತ್ರತೆ ಮತ್ತು ಪರಿಶುದ್ಧಿಗೆ ಏಕಿಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ನೀವು ಆಶ್ಚರ್ಯ ಪಡಬಹುದು.
ಈ ಮೂರು ಕರಣಗಳು ನಿಷ್ಕಲ್ಮಶವಾಗಿದ್ದಷ್ಟೂ, ಅವುಗಳ ಗ್ರಹಣಶಕ್ತಿ ಹೆಚ್ಚಾಗುತ್ತದೆ.
ದೈವಾನುಗ್ರಹದ ಫಲಿತವು ಸುಲಭವಾಗುತ್ತದೆ.
3. ಪ್ರಾಣಾಯಾಮ.
ಆಚಮನದ ನಂತರ ಪ್ರಾಣಾಯಾಮ.
ಪ್ರಾಣ ಎಂಬುದು ಜೀವಕ್ಕೆ ಅಗತ್ಯವಾದ ಶಕ್ತಿ,
ಆಯಾಮ ಎಂಬುದು ಹತೋಟಿ ಅಥವಾ ಸಂಯಮ
ಹಾಗಾಗಿ ಪ್ರಾಣಾಯಾಮ ಎಂಬುದು ಜೀವಶಕ್ತಿಯ ನಿಯಂತ್ರಣ.
ಉಸಿರಿಗೂ ಮತ್ತು ಪ್ರಾಣಕ್ಕೂ ಸಂಬಂಧವಿದೆ.
ಆದುದರಿಂದ ಶ್ವಾಸಕ್ರಿಯೆಯ ನಿಯಂತ್ರಣ ಮತ್ತು ಹತೋಟಿಯೇ ಪ್ರಾಣಾಯಾಮ.
ಮೂರನೆಯ ದಿನ
3. ಪ್ರಾಣಾಯಾಮ.
ಒಬ್ಬ ವ್ಯಕ್ತಿಯ ಉಸಿರಾಟದ ಲಕ್ಷಣವು ಆತನ ಮನಸ್ಸಿನ ಗುಣಮಟ್ಟವನ್ನು ಸೂಚಿಸುತ್ತದೆ.
ಉದಾಹರಣೆಗೆ ಪ್ರಯಾಸದ ಮತ್ತು ಒರಟು ಉಸಿರಾಟ ಮನುಷ್ಯನ ಅಪಕ್ವ ಮನಃಸ್ಥಿತಿಯನ್ನು ಬಿಂಬಿಸುತ್ತದೆ.
ಒಂದು ಬಗೆಯ ತ್ವರಿತ ಉಸಿರಾಟವು ಅಲ್ಪಾಯುಷ್ಯದ ಲಕ್ಷಣವಾಗಿದೆ.
ಯಾರಾದರೂ ಕೋಪಗೊಂಡಿದ್ದರೆ, ಭಯಗೊಂಡಿದ್ದರೆ, ಕಳವಳಗೊಂಡಿದ್ದರೆ ಅಥವಾ ಉದ್ರೇಕಗೊಂಡಿದ್ದರೆ, ಏದುಸಿರು ಮತ್ತು ತೀವ್ರ ಉಸಿರಾಟದಿಂದ ಅವರ ಹೃದಯ ಬಡಿದುಕೊಳ್ಳುತ್ತಿರುತ್ತದೆ. ಮೂಗಿನ ಒಂದು ಹೊಳ್ಳೆಯ ಮೂಲಕ ಅವರು ಉಸಿರಾಡುತ್ತಿರುತ್ತಾರೆ.
ಯಾರಾದರೂ ಪ್ರಶಾಂತರಾಗಿ, ಸಮಚಿತ್ತರಾಗಿ ಮತ್ತು ನಿಯಂತ್ರಣವುಳ್ಳವರಾಗಿದ್ದರೆ ಅವರ ಉಸಿರಾಟವು ಕ್ರಮಬದ್ಧವಾಗಿ, ಲಯಬದ್ಧವಾಗಿ ಮತ್ತು ಏಕತಾನತೆಯಿಂದ ಕೂಡಿರುತ್ತದೆ. ಆಗ ಮೂಗಿನ ಎರಡು ಹೊಳ್ಳೆಗಳ ಮೂಲಕ ಅವರು ಉಸಿರಾಡುತ್ತಿರುತ್ತಾರೆ.
ಉಸಿರಾಟದ ನಿಯಂತ್ರಣ ಮತ್ತು ಹತೋಟಿಯಿಂದ ಮನಸ್ಸನ್ನು ಶಾಂತಗೊಳಿಸುವುದು ಪ್ರಾಣಾಯಾಮದ ಉದ್ದೇಶ.
3. ಪ್ರಾಣಾಯಾಮ…
ಪ್ರಾಣ ಎಂಬುದು ಬರಿಯ ಉಸಿರಷ್ಟೇ ಅಲ್ಲ. ಅದು ವಿಶ್ವ ಶಕ್ತಿ.
ಪ್ರಾಣದ ಬಹಿರಂಗ ತೋರ್ಪಡಿಕೆಯೇ ಉಸಿರು. ಅದು ಅತಿ ಸೂಕ್ಷ್ಮವಾದುದು.
ಪ್ರಾಣದಿಂದ ತುಂಬಿರುವ ಗಾಳಿಯಲ್ಲಿ ನಾವೆಲ್ಲರೂ ಮುಳುಗಿದ್ದೇವೆ.
ನಾವು ಗಾಳಿಯನ್ನು ಒಳಕ್ಕೆ ಎಳೆದುಕೊಂಡಾಗ, ನಾವು ಗಾಳಿ ಮತ್ತು ಪ್ರಾಣ ಎರಡನ್ನೂ ತೆಗೆದುಕೊಳ್ಳುತ್ತಿರುತ್ತೇವೆ.
ನಾವು ಉಸಿರನ್ನು ತೆಗೆದುಕೊಂಡಾಗ, ಪ್ರಾಣವು ಐದು ಮಾರ್ಪಾಟುಗಳನ್ನು ಒಳಗೊಳ್ಳುತ್ತದೆ.
ಪ್ರಾಣ, ಅಪಾನ, ಸಮಾನ, ಉದಾನ ಮತ್ತು ವ್ಯಾನ.
ಪಂಚ ಪ್ರಾಣಗಳು
ವ್ಯಾನ – ಸಂಪೂರ್ಣ ಶರೀರ
ಉದಾನ – ಕೊರಳು ಮತ್ತು ತಲೆಯ ಭಾಗ
ಪ್ರಾಣ – ಎದೆಯ ಭಾಗ
ಸಮಾನ – ಹೊಟ್ಟೆಯ ಭಾಗ
ಅಪಾನ – ಉದರದ ಮತ್ತು ಪೃಷ್ಠದ ಭಾಗ
ಪ್ರಾಣಾಯಾಮ ಎಂದರೇನು?
ಉಚ್ಛ್ವಾಸ ಮತ್ತು ನಿಶ್ವಾಸದ ನಡುವೆ ಉಸಿರನ್ನು ಕೆಲಕಾಲ ತಡೆಹಿಡಿದಾಗ ನಿಜವಾದ ಪ್ರಾಣಾಯಾಮವು ಸಂಭವಿಸುತ್ತದೆ.
ಪೂರಕ, ಕುಂಭಕ ಮತ್ತು ರೇಚಕ ಎಂಬ ಮೂರು ಉಪಾಂಗಗಳೊಂದಿಗೆ ಪ್ರಾಣಾಯಾಮವನ್ನು ಅಭ್ಯಾಸಮಾಡಬೇಕು. ಅವುಗಳು 1:4:2 ಅನುಪಾತದಲ್ಲಿರಬೇಕು.
ವಿಧಾನ
ನಿಮ್ಮ ಬಲಗೈನ ಹೆಬ್ಬೆಟ್ಟಿನಿಂದ ಮೂಗಿನ ಬಲ ಹೊಳ್ಳೆಯನ್ನು ಮುಚ್ಚಿಕೊಳ್ಳಿ.
ನಂತರ ಸಾವಕಾಶವಾಗಿ ನಿಮ್ಮ ಎಡಹೊಳ್ಳೆಯ ಮೂಲಕ ಉಸಿರನ್ನು ಒಳಗೆ ಎಳೆದುಕೊಳ್ಳಿ. ಹೀಗೆ ಮಾಡುವಾಗ ಮನಸ್ಸಿನಲ್ಲಿ ಒಂದನ್ನು ಎಣೆಸಿಕೊಳ್ಳಿ.
ಆಮೇಲೆ ಎಡ ಹೊಳ್ಳೆಯನ್ನು ನಿಮ್ಮ ಬಲಗೈನ ಮೂರು ಮತ್ತು ನಾಲ್ಕನೆಯ ಬೆರಳುಗಳಿಂದ ಮುಚ್ಚಿಕೊಳ್ಳಿ. ಹೀಗೆ ಎರಡೂ ಹೊಳ್ಳೆಗಳನ್ನು ಮುಚ್ಚಿಕೊಂಡು ನಾಲ್ಕರವರೆಗೆ ಎಣಿಸುತ್ತಾ ಉಸಿರನ್ನು ಹಿಡಿದಿಟ್ಟುಕೊಳ್ಳಿ. ಈಗ ನಿಮ್ಮ ಬಲಹೊಳ್ಳೆಯನ್ನು ತೆರೆದು ಎರಡರವರೆಗೆ ಎಣಿಸುತ್ತಾ ನಿಧಾನವಾಗಿ ಉಸಿರನ್ನು ಹೊರಹಾಕಿ. ಎಡಹೊಳ್ಳೆಯನ್ನು ಮುಚ್ಚಿಕೊಂಡೇ ಇರಿ.
ಎಡಹೊಳ್ಳೆಯನ್ನು ಹಾಗೇ ಮುಚ್ಚಿಕೊಂಡಿದ್ದು, ಬಲಹೊಳ್ಳೆಯನ್ನು ತೆರೆದಿದ್ದು ಒಂದನ್ನು ಎಣಿಸುತ್ತಾ ನಿಧಾನವಾಗಿ ಉಸಿರನ್ನು ಒಳಗೆ ಎಳೆದುಕೊಳ್ಳಿ.
ಈಗ ಬಲಹೊಳ್ಳೆಯನ್ನು ಮುಚ್ಚಿ. ಎರಡೂ ಹೊಳ್ಳೆಗಳನ್ನು ಮುಚ್ಚಿರುವ ಸ್ಥಿತಿಯಲ್ಲಿ ನಾಲ್ಕರವರೆಗೆ ಎಣಿಸುತ್ತಾ ಉಸಿರನ್ನು ಹಿಡಿದಿಟ್ಟುಕೊಳ್ಳಿ.
ಎಡಹೊಳ್ಳೆಯನ್ನು ತೆರೆದು, ಎರಡರವರೆಗೆ ಎಣಿಸುತ್ತಾ ನಿಧಾನವಾಗಿ ಉಸಿರನ್ನು ಹೊರಹಾಕಿ. ಬಲ ಹೊಳ್ಳೆಯನ್ನು ಮುಚ್ಚಿಕೊಂಡೇ ಇರಿ.
ವಿಧಾನ..
ಈ ಮೇಲೆ ತಿಳಿಸಿರುವುದು ಪ್ರಾಣಾಯಾಮದ “ಒಂದು ಸುತ್ತು” ಎಂದು ಕರೆಯಲ್ಪಡುತ್ತದೆ.
ಹೀಗೆ ಮಾಡುವುದರಿಂದ ಅದು ಮನಸ್ಸಿನ ಚಂಚಲತೆಯನ್ನು ಪ್ರತಿಬಂಧಿಸಿ ಅದನ್ನು ಒಂದೆಡೆ ನಿಲ್ಲಿಸುವುದರಲ್ಲಿ ಸಹಕಾರಿಯಾಗುತ್ತದೆ.
ಒಂದು ಆಯ್ದ ಆಕೃತಿ ಅಥವಾ ಶಬ್ದವನ್ನು ಕುರಿತು ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಧ್ಯಾನ ಮಾಡಲು ಇದು ಸಹಾಯ ಮಾಡುತ್ತದೆ.
4.ಸಂಕಲ್ಪ.
ಪ್ರಾಣಾಯಾಮದ ನಂತರ ಯಾವ ಕಾರಣಕ್ಕಾಗಿ ಈ ಶಾಸ್ತ್ರವಿಧಿಯನ್ನು ಆಚರಿಸಲಾಗುತ್ತಿದೆ ಎಂಬುದನ್ನು ವಿವರಿಸುತ್ತಾ ನಾವು ಸಂಕಲ್ಪವನ್ನು ಮಾಡುತ್ತೇವೆ.
ಓಂ ಭೂಃ, ಓಂ ಭುವಹ, ಓಗುಂ ಸುವಃ, ಓಂ ಮಹಃ, ಓಂ ಜನಃ, ಓಂ ತಪಃ, ಓಗುಮ್ ಸತ್ಯಂ, ಓಂ ತತ್ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ, ಧಿಯೋಯೋನಃ ಪ್ರಚೋದಯಾತ್, ಓಂ ಆಪೋ ಜ್ಯೋತೀರಸೋ ಅಮೃತಂ ಬ್ರಹ್ಮ ಭೂರ್ಭುವಸ್ಸುವರೋಂ.
ಮಮ ಉಪಾತ್ತ ಸಮಸ್ತ ದುರಿತಕ್ಷಯ ದ್ವಾರಾ
ಶ್ರೀ ಪರಮೇಶ್ವರ ಪ್ರೀತ್ಯರ್ಥಂ;
ಧರ್ಮಾರ್ಥ ಕಾಮ ಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಯರ್ಥಂ,
ಗಾಯತ್ರಿ ಮಂತ್ರ ಜಪಂ ಕರಿಷ್ಯೆ.
4.ಸಂಕಲ್ಪ…
ಎಲ್ಲಾ ಸಂಚಯಿತ ಪಾಪಗಳನ್ನು, ನಿವಾರಿಸಲು ಮತ್ತು ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ವಿಧದ ಗುರಿಯನ್ನು ಸಾಧಿಸಲು ಮತ್ತು ಮನುಕುಲದ ಮೋಕ್ಷಕ್ಕಾಗಿ ಪರಮಾತ್ಮನನ್ನು ಸಂತೃಪ್ತಿಗೊಳಿಸುವ ಸಲುವಾಗಿ ನಾನು ಗಾಯತ್ರಿ ಜಪವನ್ನು ಜಪಿಸುತ್ತೇನೆಂದು ಶಾಸ್ತ್ರೋಕ್ತವಾಗಿ ಸಂಕಲ್ಪ ಮಾಡುತ್ತೇನೆ.
5.ಧ್ಯಾನ
ಸರಳವಾಗಿ ಹೇಳಬೇಕೆಂದರೆ ಧ್ಯಾನ ಎಂದರೆ ಮನಸ್ಸನ್ನು ಏಕಾಗ್ರಗೊಳಿಸಿ, ಯಾವುದಾದರೊಂದು ಅಪೇಕ್ಷಣೀಯ ವಸ್ತು ಅಥವ ವ್ಯಕ್ತಿಯ ಮೇಲೆ ಕೇಂದ್ರೀಕರಿಸುವ ಕ್ರಿಯೆ.
ನಾವು ಮಾಡಬೇಕು ಎಂದು ಆಯ್ಕೆ ಮಾಡಿಕೊಂಡ, ನಿರ್ದಿಷ್ಟ ಆಚರಣೆಗೆ ತಕ್ಕುದಾದ, ಶಬ್ದವನ್ನು ಕುರಿತಾಗಲೀ ಅಥವಾ ದೈವೀಕ ಆಕಾರವನ್ನು ಕುರಿತಾಗಲೀ ನಾವು ಧ್ಯಾನ ಮಾಡುತ್ತೇವೆ.
ಓಂ ಜಪದಲ್ಲಿ ‘ಓಂ’ ಶಬ್ದವನ್ನು ಕುರಿತು, ಗಾಯತ್ರಿ ಜಪದಲ್ಲಿ “ಗಾಯತ್ರಿ ದೇವಿ”ಯನ್ನು ಕುರಿತು, ಲಲಿತಾ ಸಹಸ್ರನಾಮದಲ್ಲಿ “ಲಲಿತಾದೇವಿ” ಯನ್ನು ಕುರಿತು, ಆದಿತ್ಯ ಹೃದಯದಲ್ಲಿ “ಸೂರ್ಯನನ್ನು” ಕುರಿತು ಧ್ಯಾನ ಮಾಡುತ್ತೇವೆ.
ಒಂದು ಶಕ್ತಿಯುತ ಸಾಧನ
ನಮ್ಮ ಪುರಾತನ ಋಷಿಗಳು ಮತ್ತು ಯೋಗಿಗಳಿಂದ ನಾವು ವಂಶಪಾರಂಪರ್ಯವಾಗಿ ಪಡೆದುಕೊಂಡ ಅಮೂಲ್ಯ ಸಾಧನ “ಧ್ಯಾನ”.
ವೈದಿಕ ಜೀವನ ನೋಟದ ಪ್ರಕಾರ, ಆಲೋಚನೆ ಮತ್ತು ಧ್ಯಾನವು, ಯುಕ್ತವಾದ ಕರ್ಮಕ್ಕೆ ಪೂರಕವಾಗಿರಬೇಕು.
ವಿಶೇಷವಾಗಿ ಮಹರ್ಷಿ ಪತಂಜಲಿಯ “ಅಷ್ಟಾಂಗ ಯೋಗ” ದಲ್ಲಿ ನಮ್ಮ ಜ್ಞಾನ ಮಾರ್ಗಗಳಿಗೆ ಧ್ಯಾನವು ಒಂದು ಸಾಧನ ಎಂಬುದನ್ನು ಚೆನ್ನಾಗಿ ಪ್ರಚುರಪಡಿಸಲಾಗಿದೆ.
ವಿಧಾನ
ಸಕಲ ಮಂತ್ರಗಳಲ್ಲಿಯೂ ಶ್ರೇಷ್ಠವಾದ ಹಾಗೂ ಪವಿತ್ರವಾದ “ಗಾಯತ್ರಿ” ಮಂತ್ರದ ಜಪವನ್ನು ಮಾಡಲು ನೀವು ಆಯ್ಕೆ ಮಾಡಿಕೊಂಡಿದ್ದರೆ, “ಮಂತ್ರ” ಎಂದರೆ ಏನು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ. “ಮಂತ್ರ” ಎಂಬುದು ಪದಗಳ ವಿಶಿಷ್ಟವಾದ ಸಂಯೋಜನೆ ಅಥವಾ ತನ್ನೊಳಗೆ ಗೂಢಾರ್ಥಗಳ ಶಕ್ತಿಯನ್ನು ಅಡಗಿಸಿಕೊಂಡಿರುವ ಪದಗಳ ಗುಚ್ಛ.
ಮಂತ್ರಜಪ
ಒಂದು ನಿರ್ದಿಷ್ಟ ವಿಧಾನದಲ್ಲಿ ಇದನ್ನು ಉಪಯೋಗಿಸಿದಾಗ, ಅದು ಖಚಿತವಾದ ಫಲಿತಾಂಶವನ್ನು ತಂದುಕೊಡುತ್ತದೆ.
ಪ್ರತಿಯೊಂದು ಮಂತ್ರವೂ ಇದನ್ನು ಹೊಂದಿರುತ್ತದೆ.
1. ಒಂದು ಛಂದಸ್ಸು
2. ಒಬ್ಬ ಪ್ರಾಣದೇವತೆಯ ಹೆಸರು ಮತ್ತು
3. ತನಗೆ ಪ್ರಕಟವಾದ ಮಂತ್ರಧ್ಯಾನದಿಂದ ಪರಮ ಸಾಕ್ಷಾತ್ಕಾರವನ್ನು ಹೊಂದಿದ ಋಷಿಯ ಹೆಸರು.
ಮಂತ್ರಜಪದ ಆಚರಣೆ.
ವಿಶಿಷ್ಟವಾದ ಲಯಬದ್ಧ ಮತ್ತು ಛಂದೋಬದ್ಧ ಪಠಣದಿಂದ ಮಂತ್ರವನ್ನು ಪುನರುಚ್ಛರಿಸುತ್ತಿರಬೇಕು.
ಹಾಗೆ ಮಾಡುವಾಗ, ನೀವು ಆ ಮಂತ್ರವನ್ನು ಪ್ರತಿನಿಧಿಸುವ ದೈವವನ್ನು ಕುರಿತು ಧ್ಯಾನ ಮಾಡಬೇಕು. ಹಾಗೆಯೇ ಆ ಮಂತ್ರದ ಋಷಿಯೊಡನೆ ಮಾನಸಿಕ ಸಂಪರ್ಕ ಬೆಳೆಸಿಕೊಳ್ಳಬೇಕು.
ಈ ರೀತಿಯಾಗಿ ಮಾಡಿದ ಧ್ಯಾನ ಮತ್ತು ಮಂತ್ರದ ಪುನರುಕ್ತಿಯಿಂದ ಅಂತರ್ಜಾತ ಶಕ್ತಿಯ ಬಿಡುಗಡೆ ಆಗಿ ಅಪೇಕ್ಷಿತ ಪ್ರಜ್ಞೆಯ ರೂಪಾಂತರ ಉಂಟಾಗುತ್ತದೆ.
ಅಭ್ಯಾಸದ ವೇಳೆ ಏನಾಗುತ್ತದೆ?
ಮಂತ್ರವನ್ನು ಪಠಿಸುತ್ತಿರುವಾಗ ಅಥವಾ ಪುನರುಚ್ಛರಿಸುತ್ತಿರುವಾಗ ನಮ್ಮೊಳಗೆ ಶಬ್ದ ಕಂಪನಗಳು ಉಂಟಾಗುತ್ತವೆ.
ಮಂತ್ರಗಳ ಸತತವಾದ ಮತ್ತು ಸ್ಥಿರವಾದ ಪುನರುಕ್ತಿಯು ಕಂಪನಗಳ ಪ್ರವಾಹವನ್ನೇ ಸೃಷ್ಟಿಸುತ್ತದೆ.
ಆಗ ಮಂತ್ರದ ಲಯಬದ್ಧತೆಗೆ ಸರಿಯಾಗಿ ಮನಸ್ಸು ಸಂಪೂರ್ಣವಾಗಿ ಅನುರಣಿಸುತ್ತದೆ.
ಹಾಗಾಗಿ ಮನಸ್ಸು ಭಾವಶುದ್ಧಿಯನ್ನು ಮತ್ತು ಪರಿಶುದ್ಧಿಯನ್ನು ಹೊಂದುತ್ತದೆ.
ಸಿದ್ಧಿಯನ್ನು ಸಂರಕ್ಷಿಸುವ ಶಕ್ತಿಯನ್ನು ಮತ್ತು ಸಫಲತೆಯನ್ನು ಪ್ರಾಣದೇವತೆಯು ದಯಪಾಲಿಸುತ್ತದೆ.
ಗಾಯತ್ರಿಯ ಧ್ಯಾನ
ಮಂತ್ರವನ್ನು ಪಠಿಸುತ್ತಿರುವಾಗ ಅಥವಾ ಪುನರುಚ್ಛರಿಸುತ್ತಿರುವಾಗ ನೀವು ನಿಮ್ಮ ಗಮನವನ್ನು ಗಾಯತ್ರಿ ದೇವಿಯ ಮೇಲೆ ಕೇಂದ್ರೀಕರಿಸಬೇಕು.
ಧ್ಯಾನ ಶ್ಲೋಕವು ಈ ಕೆಳಗಿನಂತಿದೆ.
ಧ್ಯಾನ ಶ್ಲೋಕ
ಮುಕ್ತಾ ವಿದ್ರುಮ ಹೇಮ ನೀಲ ಧವಳ ಛಾಯೈಃ ಮುಖೈಃ ತ್ರಿಯಕ್ಷಣೈಃ
ಯುಕ್ತಾಮಿಂದು ನಿಬದ್ಧ ರತ್ನ ಮಕುಟಾಂ ತತ್ವಾರ್ಥ ವರ್ಣಾತ್ಮಿಕಾಂ
ಗಾಯತ್ರೀಂ ವರದಯಾಭಯಂ ಅಂಕುಶಕಶಾಂ ಶುಭ್ರಂ ಕಪಾಲಂ ಗದಾಂ,
ಶಂಖಂ ಚಕ್ರಂ ಅಥಾರವಿಂದ ಯುಗಳಂ ಹಸ್ತೈರ್ವಹಂತೀಂ ಭಜೆ
ಧ್ಯಾನಶ್ಲೋಕ: ಅನುವಾದ
ಮುತ್ತು, ಹವಳ, ಬಂಗಾರ, ನೀಲ ಮತ್ತು ವಜ್ರ ಹೀಗೆ ವಿವಿಧ ಛಾಯೆಗಳ ಐದು ಮುಖಗಳನ್ನುಳ್ಳವಳು; ಪ್ರತಿಯೊಂದು ಮುಖದಲ್ಲೂ ಮೂರು ಕಣ್ಣುಗಳನ್ನು ಹೊಂದಿರುವವಳು; ರತ್ನಗಳಿಂದ ಮತ್ತು ಚಂದ್ರಕಾಂತ ಮಣಿಗಳಿಂದ ಪೋಣಿಸಲಾದ ಕಿರೀಟಗಳನ್ನು ಐದು ತಲೆಗಳ ಮೇಲೆ ಧರಿಸಿದಂತಹವಳು;
ಬ್ರಹ್ಮಜ್ಞಾನದಿಂದ ಹೊಳೆಯುತ್ತಿರುವ ಶರೀರವುಳ್ಳವಳು;
ಶಂಖ, ಚಕ್ರ, ಗದೆ, ಕಮಲದ್ವಯಗಳು, ಕಪಾಲ, ಅಂಕುಶ, ಚಾವಟಿ, ಅಭಯ ಮತ್ತು ವರದ ಮುದ್ರೆ ಇವುಗಳನ್ನು ತನ್ನ ಹತ್ತು ಕೈಗಳಲ್ಲಿ ಹಿಡಿದಿರುವಂತಹವಳು ಆದ ಗಾಯತ್ರಿ ದೇವಿಯನ್ನು ನಾನು ಆವಾಹನೆ ಮಾಡುತ್ತೇನೆ ಮತ್ತು ಭಜಿಸುತ್ತೇನೆ.
ಗಾಯತ್ರಿ ಜಪ
ನಂತರ ನೀವು ಜಪವನ್ನು ನೆರವೇರಿಸಿ
ಓಂ ಭೂರ್ಭುವಸ್ವಃ
ತತ್ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋ ನಃ ಪ್ರಚೋದಯಾತ್
ಓಂ
ಮುಕ್ತಾಯದ ಪ್ರಾರ್ಥನೆ
ಕಾಯೇನ ವಾಚಾ ಮನಸೇಂದ್ರಿಯೈರ್ವ
ಬುದ್ಢ್ಯಾತ್ಮನಾವ ಪ್ರಕೃತೇ ಸ್ವಭಾವಾತ್
ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ
ನನ್ನ ಎಲ್ಲಾ ಭಾವನೆಗಳನ್ನೂ, ಮಾತುಗಳನ್ನೂ ಮತ್ತು ಕ್ರಿಯೆಗಳನ್ನೂ ನಾನು ಪರಮಾತ್ಮನಿಗೆ ಸಮರ್ಪಿಸುತ್ತೇನೆ.
ಶ್ರೀ ಶಂಕರರ ಸೌಂದರ್ಯಲಹರಿಯಿಂದ ಆಯ್ದುಕೊಳ್ಳಲಾದ ಒಂದು ಧ್ಯಾನಶ್ಲೋಕವು ಇಲ್ಲಿದೆ. ಹುಟ್ಟು ಮತ್ತು ಸಾವಿನ ಕಾಲಚಕ್ರದಿಂದ ಮುಕ್ತಿಯನ್ನು ದಯಪಾಲಿಸುವ ಸಾಮರ್ಥ್ಯವುಳ್ಳ ಮಹಾನ್ ಮಾಂತ್ರಿಕ ಶಕ್ತಿಯಿಂದ ತುಂಬಿದೆಯೆಂಬ ಖ್ಯಾತಿಯನ್ನು ಹೊಂದಿದೆ ಈ ಶ್ಲೋಕವು.
ಸುಧಾಸಿಂಧೋರ್ಮಧ್ಯೇ ಸುರವಿಟ–ಪಿವಾಟೀ–ಪರಿವೃತೇ
ಮಣಿದ್ವೀಪೇ ನೀಪೋ–ಪವನವತಿ ಚಿಂತಾಮಣಿ ಗೃಹೇ |
ಶಿವಕಾರೇ ಮಂಚೇ ಪರಮಶಿವ–ಪರ್ಯಂಕ ನಿಲಯಾಮ್
ಭಜಂತಿ ತ್ವಾಂ ಧನ್ಯಾಃ ಕತಿಚನ ಚಿದಾನಂದ–ಲಹರೀಮ್ || 8 ||
ಓ ಮಾತೇ,
ನೀನೇ ಚಿದಾನಂದ ಲಹರಿ,
ಪ್ರಜ್ಞೆ ಮತ್ತು ಆನಂದದ ಅಲೆಯು ನೀನು .
“ಸುಧಾ ಸಿಂಧು” ಎಂಬ ಅಮೃತದ ಕಡಲ ಮಧ್ಯೆ, ದೈವಿಕ ಮರಗಳ ಸಾಲುಗಳಿಂದ ಆವೃತವಾಗಿರುವ ಪ್ರಖ್ಯಾತ ಮಣಿದ್ವೀಪದಲ್ಲಿ ಸ್ಥಿತವಾಗಿರುವ, ಕದಂಬ ವೃಕ್ಷಗಳ ಬನಗಳಿಂದ ಸುತ್ತುವರಿದಿರುವ,
ಅಮೂಲ್ಯವಾದ ಚಿಂತಾಮಣಿ ರತ್ನಗಳಿಂದ ನಿರ್ಮಿಸಲಾದ ಗುಡಿಯಲ್ಲಿ, ನಿಮ್ಮಿಬ್ಬರ ಸನ್ನಿಧಾನದಿಂದ ಒಪ್ಪಿತವಾದ, ಶುಭಕಾರಕವಾದ ಸಿಂಹಾಸನದ ಮೇಲೆ, ಪರಮಶಿವನ ಮಡಿಲಲ್ಲಿ ನೀನು ಕುಳಿತಿರುವಾಗ, ನಿನ್ನನ್ನು ಕುರಿತು ಧ್ಯಾನಿಸುವವರೂ ಮತ್ತು ನಿನ್ನನ್ನು ಪೂಜಿಸುವವರೂ ನಿಶ್ಚಯವಾಗಿ ನಿನ್ನ ಕೃಪಾಕಟಾಕ್ಷವನ್ನು ಹೊಂದಿದ ಕೆಲವೇ ಮಂದಿ ಧನ್ಯಾತ್ಮರಾಗಿರುತ್ತಾರೆ.
ಓ ಮಾತೆಯೇ,
ನೀನೇ ಚಿದಾನಂದ ಲಹರಿ,
ನೀನೇ ಪ್ರಜ್ಞೆ ಮತ್ತು ಆನಂದದ ಅಲೆಯು.
ಮತ್ತಷ್ಟು ಮಂತ್ರಗಳು
ಧ್ಯಾನದ ಪುನರುಕ್ತಿಗಾಗಿ ಯಾರು ಬೇಕಾದರೂ ಉಪಯೋಗಿಸಬಹುದಾದ “ಸರ್ವ ಗಾಯತ್ರಿ ಮಂತ್ರ” ಇದು. ಇದನ್ನು ಕ್ರಮಬದ್ಧವಾದ ಗಾಯತ್ರಿ ಮಂತ್ರಕ್ಕೆ ತತ್ಸಮಾನವೆಂದು ಪರಿಗಣಿಸಲಾಗಿದೆ.
ಓಂ ಸರ್ವ ಚೈತನ್ಯ ರೂಪಾಂ ತಾಂ I
ಆದ್ಯಾಂ ವಿದ್ಯಾಂ ಚ ಧೀಮಹಿ I
ಬುದ್ಧಿಂ ಯಾ ನಃ ಪ್ರಚೋದಯಾತ್ II
ಯಾರು ಬೇಕಾದರೂ ಪಠಣ ಮಾಡಬಹುದಾದ ಮತ್ತಷ್ಟು ಮಂತ್ರಗಳು ಇಲ್ಲಿವೆ.
ಸರಿಯಾದ ಉಚ್ಛಾರಣೆಯನ್ನು ಮಾಡುವುದರ ಬಗ್ಗೆ ಗಮನಹರಿಸುವುದು ಬಹಳ ಮುಖ್ಯವಾಗಿದೆ.
ಪ್ರತಿಯೊಂದು ಮಂತ್ರಕ್ಕೂ ಮೂರು ಉಪಾಂಗಗಳಿವೆ.
೧. ನಾವು ಯಾವ ದೇವತೆಯ ಬಗ್ಗೆ ಜ್ಞಾನ ಸಂಪಾದಿಸಿಕೊಳ್ಳಬೇಕೆಂದಿರುವೆವು(ವಿದ್ಮಹೇ)
೨. ನಾವು ಯಾವ ದೇವರನ್ನು ಕುರಿತು ಧ್ಯಾನ ಮಾಡಬೇಕೆಂದಿರುವೆವು(ಧೀಮಹಿ) ಮತ್ತು
೩. ನಾವು ಯಾವ ದೇವತೆಯಿಂದ ಮಾರ್ಗದರ್ಶನ ಮತ್ತು ದೈವೀ ಪ್ರೇರಣೆಯನ್ನು ಪಡೆಯಲು ಪ್ರಯತ್ನಿಸುತ್ತಿರುವೆವು(ಪ್ರಚೋದಯಾತ್)
1. ओम् तत्पुरुषाय विद्महे l महा देवाय धीमहि l
तन्नो रुद्रः प्रचोदयात् ll
ಓಂ ತತ್ಪುರುಷಾಯ ವಿದ್ಮಹೇ l ಮಹಾ ದೇವಾಯ ಧೀಮಹಿ I
ತನ್ನೋ ರುದ್ರಃ ಪ್ರಚೋದಯಾತ್ I
2. ओम् तत्पुरुषाय विद्महे l वक्रतुन्डाय धीमहि l
तन्नो दन्तिः प्रचोदयात् ll
ಓಂ ತತ್ಪುರುಷಾಯ ವಿದ್ಮಹೇ I ವಕ್ರತುಂಡಾಯ ಧೀಮಹಿ I
ತನ್ನೋ ದಂತಿಃ ಪ್ರಚೋದಯಾತ್ ll
3. ओम् भास्कराय विद्महे l महा द्युतिकराय धीमहि l
तन्नो आदित्य: प्रचोदयात् ll
ಓಂ ಭಾಸ್ಕರಾಯ ವಿದ್ಮಹೇ I ಮಹಾದ್ಯುತಿಕರಾಯ ಧೀಮಹಿ I
ತನ್ನೋ ಆದಿತ್ಯಃ ಪ್ರಚೋದಯಾತ್ ll
4. ओम् कात्यायनाय विद्महे l कन्यकुमारि धीमहि l
तन्नो दुर्गिः प्रचोदयात् ll
ಓಂ ಕಾತ್ಯಾಯನಾಯ ವಿದ್ಮಹೇ I ಕನ್ಯಕುಮಾರಿ ಧೀಮಹಿ I
ತನ್ನೋ ದುರ್ಗಿಃ ಪ್ರಚೋದಯಾತ್ ll
5. ओम् धन्वन्तराय विद्महे l वासुदेवाय धीमहि l
तन्नो विष्णुःप्रचोदयात् ll
ಓಂ ಧನ್ವಂತರಾಯ ವಿದ್ಮಹೇ I ವಾಸುದೇವಾಯ ಧೀಮಹಿ I
ತನ್ನೋ ವಿಷ್ಣುಃ ಪ್ರಚೋದಯಾತ್ ll
ನಿತ್ಯಾನುಷ್ಠಾನದ ಪ್ರಯೋಜನಗಳು
ನಿಷ್ಠೆ ಮತ್ತು ಬದ್ಧತೆಯುಳ್ಳ ಅನುಷ್ಠಾನದ ಆಚರಣೆಯು, ವ್ಯಕ್ತಿತ್ವ ಮತ್ತು ನಡತೆಯಲ್ಲಿ ಬದಲಾವಣೆ ತರುತ್ತದೆ.
ಇದನ್ನು ಅಭ್ಯಾಸ ಮಾಡುವವರಿಗೆ, ಹಳೆಯ ಚಾಳಿ ಅಂತ್ಯವಾಗಿ ಹೊಸ ಜನ್ಮ ದೊರಕುತ್ತದೆ.
ಅವನು ಅಥವ ಅವಳು ಕಾಲಕ್ರಮೇಣ ಹೊಸ ಮನೋದಾರ್ಢ್ಯವನ್ನೂ, ಹೊಸ ಕಸುವನ್ನೂ, ಹೊಸ ದೃಷ್ಟಿಯನ್ನೂ ಮತ್ತು ಹೊಸ ಸಂಸ್ಕಾರಗಳನ್ನೂ ಬೆಳೆಸಿಕೊಳ್ಳಲು ಶುರುಮಾಡುತ್ತಾನೆ ಅಥವ ಶುರುಮಾಡುತ್ತಾಳೆ.
ಹೊಸ ಚಾರಿತ್ರ್ಯ ಮತ್ತು ವ್ಯಕ್ತಿತ್ವ
ನಿರೀಕ್ಷಿತ ಲಕ್ಷಣಗಳೊಂದಿಗೆ, ಸಂಪೂರ್ಣ ಚಾರಿತ್ರ್ಯವು ಮತ್ತು ವ್ಯಕ್ತಿತ್ವವು ಬದಲಾವಣೆಗಳಿಗೆ ಒಳಗಾಗುವುದು ಕಂಡುಬರುತ್ತದೆ.
1. ಆರೋಗ್ಯದ ಸುಧಾರಣೆ
ಆಧ್ಯಾತ್ಮಿಕ ಏಳಿಗೆಯ ಮೊದಲ ಚಿಹ್ನೆ ಉತ್ತಮ ಆರೋಗ್ಯ.
ನಡವಳಿಕೆಯಲ್ಲಿ ಸ್ಪಷ್ಟವಾದ ಬದಲಾವಣೆ ಇರುತ್ತದೆ.
ಉಲ್ಲಸಿತ ಸ್ವಭಾವವನ್ನು ಮತ್ತು ಮಧುರ ಪ್ರವೃತ್ತಿಯನ್ನು ನಾವು ಕಾಣಬಹುದು.
ಆರೋಗ್ಯಕರ ದೇಹವು ಶರೀರ ಪ್ರಜ್ಞೆಯಿಂದ ಮನಸ್ಸನ್ನು ಸ್ವತಂತ್ರಗೊಳಿಸುತ್ತದೆ.
ಇಲ್ಲವಾದರೆ, ಅನಾರೋಗ್ಯಕರ ಶರೀರವು, ಮನಸ್ಸಿನ ಗಮನವನ್ನು ನಿರಂತರವಾಗಿ ಶರೀರದ ನಿತ್ರಾಣತೆಯ ಕಡೆಗೆ ಸೆಳೆಯುತ್ತದೆ.
2. ವ್ಯಕ್ತಿತ್ವದ ಒಗ್ಗೂಡಿಕೆ
ಆಮೇಲೆ ಧ್ಯಾನ ಮಾಡುವ ಅಭ್ಯಾಸವು ನಮ್ಮ ಅಂತಃಕರಣವು, ಶರೀರ ಮತ್ತು ಮನಸ್ಸಿನ ಜತೆ ಗುರುತಿಸಿಕೊಳ್ಳುವುದರಿಂದ ದೂರ ಸರಿಯಲು ಸಹಾಯ ಮಾಡುತ್ತದೆ.
ಕ್ರಮೇಣವಾಗಿ ಆಲೋಚನೆಗಳ, ಮಾತುಗಳ, ಭಾವನೆಗಳ ಮತ್ತು ಕೃತಿಗಳ ಸಮನ್ವಯ ಅಥವಾ ಒಗ್ಗೂಡಿಕೆ ಇರುತ್ತದೆ.
ಅದರ ಪರಿಣಾಮವಾಗಿ ವ್ಯಕ್ತಿಯು ಯಾವಾಗಲೂ ನಿಷ್ಠಾವಂತನಾಗಿ, ಪ್ರಾಮಾಣಿಕನಾಗಿ ಮತ್ತು ಮುಚ್ಚುಮರೆಯಿಲ್ಲದವನಾಗಿ ಇರುತ್ತಾನೆ.
ಆಧ್ಯಾತ್ಮಿಕ ಸಮತೋಲನೆ ಅಥವಾ ಸತ್ವಗುಣದ ಮನಶ್ಶಕ್ತಿಯ ಅಭಿವೃದ್ಧಿಯಾಗುತ್ತದೆ. ರಜೋಗುಣದ ಅಂದರೆ ಸ್ತಿಮಿತವಿಲ್ಲದ ಮತ್ತು ತಮೋಗುಣದ ಅಂದರೆ ಮಂದಬುದ್ಧಿಯ ಗುಣಲಕ್ಷಣಗಳು ಕಡಿಮೆಯಾಗುತ್ತವೆ.
3. ಮನಸ್ಸು ಮತ್ತು ವಿವೇಕದ ಮೇಲಿನ ಅಧಿಪತ್ಯ ಹೆಚ್ಚುತ್ತದೆ.
ಮನಸ್ಸಿನ ಸ್ಥಿರತೆ ಮತ್ತು ವಿವೇಕದ ಮೇಲಿನ ಹಿಡಿತವನ್ನು ಗಮನಿಸಬಹುದು.
4. ದೇವರಿಗಾಗಿ ಹಂಬಲಿಸುವುದು
ದೇವರಿಗಾಗಿ ಹಂಬಲ ಮತ್ತು ತನ್ನ ಇಷ್ಟದೇವತೆಯ ಮೇಲಿನ ಭಕ್ತಿ ಇವೆರಡೂ ಹೆಚ್ಚುತ್ತದೆ.
5. ಅಂತರಂಗದಲ್ಲಿನ ಪರಮಾನಂದದ ಸುಖ
ಧ್ಯಾನದ ಆಧ್ಯಾತ್ಮಿಕ ಹಾದಿಯಲ್ಲಿ ಕಂಡುಬರುವ ಪ್ರಗತಿಯ ಅತ್ಯಂತ ಧನಾತ್ಮಕ ಲಕ್ಷಣವೆಂದರೆ ಅಂತರಂಗದಲ್ಲಾಗುವ ಪರಮ ಆನಂದದ ಸವಿ.
ಪ್ರಾಪಂಚಿಕ ಉಪಭೋಗಗಳ ಸಂತೋಷವನ್ನು ಮೀರಿದ ಸುಖದ ಅನುಭೂತಿ ಆಗುತ್ತದೆ.
ದೇವರ ನಾಮಗಳನ್ನು ಪಠಿಸುತ್ತಿರುವಾಗ, ಆರಾಧನೆಯ ಸುಖಾನುಭೂತಿಯನ್ನು ಪ್ರತಿಯೊಬ್ಬರೂ ಹೊಂದುತ್ತಾರೆ.
ಈ ಸಂತೋಷವು ಕೊನೆಗೆ “ಬ್ರಹ್ಮಾನಂದ”ಕ್ಕೆ ಎಡೆ ಮಾಡಿಕೊಡುತ್ತದೆ.
“ಬ್ರಹ್ಮಾನಂದ” ವೆಂದರೆ ಪರಮ ಶ್ರೇಷ್ಠವಾದ ಆನಂದ.
ಅನುಷ್ಠಾನ
ಬದ್ಧತೆಯಿಂದ ಮತ್ತು ನಿಷ್ಠೆಯಿಂದ ಪ್ರತಿನಿತ್ಯವೂ ಅನುಷ್ಠಾನವನ್ನುಆಚರಿಸಿದಾಗ, ಅದು ನಿಮಗೆ ದೈವ ಕೃಪೆಯನ್ನು ಹೊಂದಲು ಮತ್ತು ಇಹದಲ್ಲೂ ಹಾಗೆಯೇ ಪರದಲ್ಲಿಯೂ ನಿಮ್ಮ ಯೋಗಕ್ಷೇಮವನ್ನು ಸಂರಕ್ಷಿಸಲು ಎಡೆ ಮಾಡಿಕೊಡುತ್ತದೆ.
ಸಮಾಪ್ತಿ
ನನ್ನ ನಮಸ್ಕಾರಗಳು.