(ದಿ. 1-10-1991 ಧರ್ಮಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಒದುಗರಪತ್ರಗಳಿಗೆ ದಿ.ಲಂಕಾ ಕೃಷ್ಣಮೂರ್ತಿಯವರು ಕೊಟ್ಟ ಉತ್ತರದ ಲೇಖನ)
ಪ್ರಶ್ನೆ:- ಪಂಚಮಹಾಭೂತಗಳ ಸಹಜ(ಸಾಮಾನ್ಯ) ಧರ್ಮ(ಗುಣ)ಗಳೇನು? ದೇಶ ಕಾಲವನ್ನು ಅನುಸರಿಸಿ ಅವು ತಮ್ಮ ಧರ್ಮಗಳನ್ನು ಬದಲಾಯಿಸುತ್ತವೆಯೇ? ಅಥವಾ ನಮಗೆ ಬದಲಾವಣೆಯಾದಂತೆ ಭಾಸವಾಗುತ್ತದೆಯೇ?
ಉತ್ತರ:- ಪೃಥಿವಿ(ಭೂಮಿ) ಆಪ್(ನೀರು) ತೇಜಸ್ಸು(ಅಗ್ನಿ) ವಾಯು(ಗಾಳಿ) ಆಕಾಶ ಎಂಬ ಈ ಐದು ಪಂಚಮಹಾಭೂತಗಳು. ಇವು ಬ್ರಹ್ಮಾಂಡ ಮತ್ತು ಪಿಂಡಾಂಡ ಎರಡರಲ್ಲೂ ತುಂಬಿವೆ. ಸ್ಥೂಲ ಭೂತಗಳಿಂದ ಬ್ರಹ್ಮಾಂಡದ ಉತ್ಪತ್ತಿ. ಸೂಕ್ಷ್ಮಭೂತಗಳಿಂದ ಪಿಂಡಾಂಡದ ಉತ್ಪತ್ತಿ. ಇವುಗಳ ಹೆಸರುಗಳನ್ನು ನೋಡಿದರೆ ಇವು ಬಾಹ್ಯಪ್ರಪಂಚದ ವಸ್ತುಗಳೆಂಬ ಭಾವನೆ ಬರುತ್ತೆ. ಆದರೆ ಇವುಗಳಿಗೆ ಶಾಸ್ತ್ರಗಳು ಕೊಟ್ಟಿರುವ ಶಬ್ಬ್ದ ಸ್ಪರ್ಶರೂಪ ರಸ ಗಂಧಗಳೆಂಬ ಗುಣಗಳನ್ನು ನೋಡಿದರೆ ಬಾಹ್ಯಪ್ರಪಂಚದ ವಸ್ತುಗಳ ವಿಷಯದಲ್ಲಿ ಈ ಗುಣಗಳನ್ನು ಅನ್ವಯಿಸಿ ಹೇಳುವುದೇ ಕಷ್ಟವಾಗುತ್ತದೆ. ಆಕಾಶದ ಗುಣ ಶಬ್ದ. ಇದು ಅರ್ಥವಾಗುವುದೇ ಕಷ್ಟ. ಅಕ್ಕಶದಿಂದ ಹುಟ್ಟಿದ ಗಾಳಿಯ ಗುಣ ಸ್ಪರ್ಶ. ಶಬ್ದಗುಣವೂ ಇದರಲ್ಲಿದೆ. ಹೀಗೆಯೇ ಅಗ್ನಿಯ ಗುಣ ರೂಪ. ಶಬ್ದ ಸ್ಪರ್ಶಗಳೂ ಸೇರಿವೆ. ನಿರಿನ ಗುಣ ರುಚಿ. ಶಬ್ದಸ್ಪರ್ಶರೂಪಗಳೂ ಸೇರಿವೆ. ಶಬ್ದಗುಣವನ್ನು ಬಿಟ್ಟರೆ ಉಳಿದವು ಸ್ಥೂಲವಾಗಿ ಅನ್ವಯವಾಗುತ್ತದೆ. ಶಬ್ದಗುಣವನ್ನು ಅರ್ಥಮಾಡಿಕೊಳ್ಳಲು ಪುರಾಣ ಕಥೆಗಳೇ ಗತಿ. ಸಂಕಟ ಪರಿಸ್ಥಿತಿಗಳಲ್ಲಿ ಆಕಾಶವಾಣಿ ಉದ್ಭವಿಸಿದ ಕಥೆಗಳಿವೆ ಮತ್ತು ದುಷ್ಟರನ್ನು ಪಂಚಭೂತಗಳೂ ನಿಂದಿಸಿರುವ ಕಥೆಗಳಿವೆ.
ಹೆಸರುಗಳಿಗೆ ಪ್ರಾಧಾನ್ಯ ಕೊಡದೆ ಬ್ರಹ್ಮಾಂಡದ ಮೂಲಭೂತವಾದ ಅಣುಗಳಲ್ಲಿನ ೫ ಭಾಗಗಳೇ ಸ್ಥೂಲ ಭೂತಗಳೆಂದು ಭಾವಿಸಬಹುದೇ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಪಿಂಡಾಂಡದಲ್ಲಿ ಸ್ಥೂಲ ಶರೀರದ ಭಾಗಗಳು ಸಹ ಬ್ರಹ್ಮಾಂಡಕ್ಕೆ ಸೇರಿಲ್ಲವೇ? ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಒಟ್ಟಿನಲ್ಲಿ ಹೇಳಬೇಕಾದರೆ ವೈಜ್ಞಾನಿಕವಾಗಿಯು ಅಣುವಿನ ರಚನೆಗೂ ಬಾಹ್ಯ ಪ್ರಪಂಚದ ರಚನೆಗೂ ಸಾದೃಶ್ಯವಿದ್ದಹಾಗೆ ಬ್ರಹ್ಮಾಂಡ ಪಿಂಡಾಂಡಗಳೂ, (ಸ್ಥೂಲ ಸೂಕ್ಷ್ಮ ಶರೀರಗಳನ್ನು ಸೇರಿಕೊಂಡು) ಒಂದೇ ವಿಧವಾದ ೫ ತತ್ವಗಳಿಂದ ಕೂಡಿವೆ ಎಂಬ ಸತ್ಯವನ್ನು ಈ ಪಂಚಭೂತಗಳ ಕಲ್ಪನೆಯು ಪೋಷಿಸುತ್ತಿದೆ.
ಪಿಂಡಾಂಡದ ರಚನೆಯಲ್ಲಿ ಸೂಕ್ಷ್ಮ ಭೂತಗಳು ಭಾಗವಹಿಸುವ ವಿಷಯದಲ್ಲಿ ಇವು ಪ್ರತ್ಯೇಕವಾಗಿ ಅಲ್ಲದೆ ಅನ್ಯೋನ್ಯ ಮಿಶ್ರಣವನ್ನು ಹೊಂದಿರುತ್ತವೆ ಎಂಬವಿಷಯವನ್ನು ಪಂಚೀಕರಣವೆಂಬ ಪದ್ಧತಿಯು ನಿರೂಪಿಸುತ್ತಿದೆ. ಸ್ಥಳಾವಕಾಶವಿಲ್ಲದಿರುವುದರಿಂದ ಇದರ ಹೆಚ್ಚಿನ ವಿವರ ಕೊಡಲು ಸಾಧ್ಯವಿಲ್ಲ. ಆದರೆ ಶಿವತತ್ವ ರತ್ನಾಕರದಲ್ಲಿರುವ ಕೆಳಕಂಡ ವಿಷಯಗಳು ಸ್ವಾರಸ್ಯಪೂರ್ಣವಾಗಿವೆ.
ಮೂಲಭೂತ ಅಂಶಭೂತ ಇವೆರಡರಿಂದ ಬರುವ ತತ್ವ
ಆಕಾಶ ಆಕಾಶ ಜ್ಞಾನ
ಆಕಾಶ ವಾಯು ಮನಸ್ಸು
ಆಕಾಶ ತೇಜಸ್ಸು ಬುದ್ಧಿ ಅಂತಃಕರಣ ಚತುಷ್ಟಯ
ಆಕಾಶ ನೀರು ಚಿತ್ತ
ಆಕಾಶ ಭೂಮಿ ಅಹಂಕಾರ
ವಾಯು ಆಕಾಶ ಸಮಾನ ವಾಯು
ವಾಯು ವಾಯು ವ್ಯಾನ
ವಾಯು ತೇಜಸ್ಸು ಉದಾನ
ವಾಯು ನೀರು ಅಪಾನ ಪಂಚಪ್ರಾಣಗಳು
ವಾಯು ಭೂಮಿ ಪ್ರಾಣ
ತೇಜಸ್ಸು ಆಕಾಶ ಕಿವಿ
ತೇಜಸ್ಸು ವಾಯು ಚರ್ಮ ಪಂಚ ಜ್ಞಾನೇಂದ್ರಿಯಗಳು
ತೇಜಸ್ಸು ತೇಜಸ್ಸು ಕಣ್ಣು
ತೇಜಸ್ಸು ನೀರು ನಾಲಿಗೆ
ತೇಜಸ್ಸು ಭೂಮಿ ಮೂಗು
ನೀರು ಆಕಾಶ ಶಬ್ದ
ನೀರು ವಾಯು ಸ್ಪರ್ಶ ಇವುಗಳ ವಿಷಯಗಳು
ನೀರು ತೇಜಸ್ಸು ರೂಪ
ನೀರು ನೀರು ರಸ
ನೀರು ಭೂಮಿ ಗಂಧ
ಭೂಮಿ ಆಕಾಶ ವಾಕ್ಕು ಪಂಚ ಕರ್ಮೇಂದ್ರಿಯಗಳು
ಭೂಮಿ ವಾಯು ಕೈಗಳು
ಭೂಮಿ ತೇಜಸ್ಸು ಪಾದಗಳು
ಭೂಮಿ ನೀರು ಉಪಸ್ಥ
ಭೂಮಿ ಭೂಮಿ ವಾಯು
ಒಟ್ಟಿನಲ್ಲಿ ಸೂಕ್ಷ್ಮ ಭೂತಗಳ ಧರ್ಮಗಳು ದೇಶ ಕಾಲಗಳನನ್ನುಸರಿಸಿ ಬದಲಾವಣೆ ಹೊಂದುವುದಿಲ್ಲ. ಇದು ಸತ್ಯವೆಂದು ತೆಗೆದುಕೊಳ್ಳಬಹುದು. ಆದರೆ ಸ್ಥೂಲ ಭೂತಗಳ ಸ್ವರೂಪಕ್ಕೆ ಇವು ಬಂದಾಗ ಸ್ಥೂಲ ಶರೀರದಲ್ಲಗಲಿ ಬ್ರಹ್ಮಾಂಡದಲ್ಲಗಲಿ ಇವುಗಳ ಧರ್ಮಗಳು ಮತ್ತು ಗುಣಗಳು ದೇಶ ಕಾಲಗಳನ್ನನುಸರಿಸಿ ಬದಲಾವಣೆ ಆಗುತ್ತರಿತ್ತವೆ ಎಂದು ಇದು ಪಾರಮಾರ್ಥಿಕ ಸತ್ಯವಲ್ಲದೆ ವ್ಯಾವಹಾರಿಕ ಸತ್ಯವೆಂದೂ ಭಾವಿಸಬಹುದು ಎಂದು ನನ್ನ ಅಲ್ಪಮತಿಗೆ ತೋಚುತ್ತದೆ.
ಸೂಕ್ಷ್ಮ ಸ್ಥಿತಿಯಲ್ಲಿ ಆಕಾಶದ ಶಬ್ದ ಗುಣವು ಎಂಬುದು ಆಕಾಶದ ಗುಂಪಿಗೆ ಸೇರಿದ ಜ್ಞಾನ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಬೆಂಬೆಲ್ಲವೂ ವಾಗ್ರೂಪ ಶಬ್ದಮಯವಾಗಿಯೇ ಇರುವ ಸತ್ಯವನ್ನು ಸೂಚಿಸುತ್ತದೆ.