Pratah Smarana Stotram
75-80
PRATAH- SAMARANA – STOTRAM
(A Morning Prayer)
By Sri Sankaracharya
Mananam
प्रातः स्मरामि हृदि संस्फुरदात्मतत्त्वं
सच्चित्सुखं परमहंसगतिं तुरीयम् ।
यत्स्वप्नजागरसुषुप्तिमवैति नित्यं
तद्ब्रह्म निष्कलमहं न च भूतसङ्घः ॥१॥
prātaḥ smarāmi hṛdi saṃsphuradātmatattvaṃ
sachchitsukhaṃ paramahaṃsagatiṃ turīyam ।
yatsvapnajāgarasuṣuptamavaiti nityaṃ
tadbrahma niṣkalamahaṃ na cha bhūtasaṅghaḥ ॥ 1 ॥
As the day dawns,
I recollect the Truth and Reality
of Atman that it is
Sat – Chit – Ananda;
It flashes in my Hrudaya
that I am indeed that Brahman,
the Goal attained by
all Spiritual Seekers;
It is a State that is beyond
the Three States of
Waking, Dreaming and Deep Sleep ,
it is the Fourth State of Consciousness;
It is Eternal and Everlasting.
I tell myself that I am that Brahman,
but not a mere bundle of Elements
प्रातर्भजामि मनसा वचसामगम्यं
वाचो विभान्ति निखिला यदनुग्रहेण ।
यन्नेतिनेतिवचनैर्निगमा अवोचुः
तं देवदेवमजमच्युतमाहुरग्र्यम् ॥२॥
prātarbhajāmi manasāṃ vachasāmagamyaṃ
vāchō vibhānti nikhilā yadanugrahēṇa ।
yannētinēti vachanairnigamā avōchuḥ
taṃ dēvadēvamajamachyutamāhuragryam ॥ 2 ॥
As it dawns, I pray to That
that is beyond the range
of mind and speech
but That by whose Grace
speech becomes enlightened;
it is He whom the scriptures refer to by using the expressions like
‘Not this, Not this’.
I pray to Him that is the God of all gods,
who is Unborn, Imperishable and Foremost.
प्रातर्नमामि तमसः परमर्कवर्णं
पूर्णं सनातनपदं पुरुषोत्तमाख्यम् ।
यस्मिन्निदं जगदशेषमशेषमूर्तौ
रज्ज्वां भुजङ्गम इव प्रतिभासितं वै ॥३॥
prātarnamāmi tamasaḥ paramarkavarṇaṃ
pūrṇaṃ sanātanapadaṃ puruṣōttamākhyam ।
yasminnidaṃ jagadaśēṣamaśēṣamūrtau
rajjvāṃ bhujaṅgama iva pratibhāsitaṃ vai ॥ 3 ॥
As it dawns
I bow down to that Effulgent One,
shining with the brilliance of the Sun,
beyond Darkness;
His is the State
Eternal, Full and Total;
He is called Purushottama
and in Whom this World
with its endless and manifold
shapes and forms
shines forth like
the Serpent in the Rope –
it is indeed so!
श्लोकत्रयमिदं पुण्यं लोकत्रयविभूषणम् ।
प्रातःकाले पठेद्यस्तु स गच्छेत्परमं पदम् ॥४॥
ślōkatrayamidaṃ puṇyaṃ lōkatrayavibhūṣaṇam I
prātaḥ kālē paṭhēdyastu sa gachChētparamaṃ padam ॥
This holy bunch of three Slokas
stands as an ornament to all the Three Worlds;
he who recites them
will reach the Supreme State.
(ಬೆಳಗಿನ ಪ್ರಾರ್ಥನೆ)
ರಚನೆ:ಶ್ರೀ ಶಂಕರಾಚಾರ್ಯರು
ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮತತ್ತ್ವಂ
ಸಚ್ಚಿತ್ಸುಖಂ ಪರಮಹಂಸಗತಿಂ ತುರೀಯಮ್ |
ಯತ್ಸ್ವಪ್ನಜಾಗರಸುಷುಪ್ತಿಮವೈತಿ ನಿತ್ಯಂ
ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತಸಂಘಃ || 1 ||
ದಿನದ ಬೆಳಗಾಗುತ್ತಿದಂತೆ, ಆತ್ಮನ ಸತ್ಯಸ್ಥಿತಿ ಮತ್ತು ಅಸ್ತಿತ್ವ ಅಂದರೆ ಸತ್-ಚಿತ್-ಆನಂದ ವನ್ನು ನಾನು ಸ್ಮರಿಸಿಕೊಳ್ಳುತ್ತೇನೆ; ನಿಶ್ಚಯವಾಗಿ ನಾನೇ ಬ್ರಹ್ಮ ಎಂಬುದು ನನ್ನ ಹೃದಯದಲ್ಲಿ ಸ್ಫುರಿಸುತ್ತದೆ. ಬ್ರಹ್ಮ ಎಂಬುದು ಎಲ್ಲ ಆಧ್ಯಾತ್ಮಿಕ ಅನ್ವೇಷಕರು ಹೊಂದುವ ನಡೆಯುವುದು, ಕನಸು ಕಾಣುವುದು ಮತ್ತು ಗಾಢ ನಿದ್ದೆ ಎಂಬ ಮೂರು ಅವಸ್ಥೆಗಳಿಗೆ ಅತೀತವಾದುದು ಈ ಸ್ಥಿತಿಯು. ಇದು ಪ್ರಜ್ಞೆಯ ನಾಲ್ಕನೆಯ ಸ್ಥಿತಿ; ಇದು ಸನಾತನ ಮತ್ತು ಚಿರಂತನ. ಆ ಬ್ರಹ್ಮನು ನಾನೇ; ಕೇವಲ ಪಂಚಭೂತಗಳಿಂದಾದ ಮೂಲಧಾತುಗಳ ಮೂಟೆಯು ನಾನಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಅಂತಿಮ ಗುರಿ.
ಪ್ರಾತರ್ಭಜಾಮಿ ಮನಸಾ ವಚಸಾಮಗಮ್ಯಂ
ವಾಚೋ ವಿಭಾಂತಿ ನಿಖಿಲಾ ಯದನುಗ್ರಹೇಣ I
ಯನ್ನೇತಿನೇತಿ ವಚನೈರ್ನಿಗಮಾ ಅವೋಚುಃ
ತಂ ದೇವದೇವಮಜಮಚ್ಯುತಮಾಹುರಗ್ರ್ಯಮ್ II 2 II
ಬೆಳಗಾಗುತ್ತಿದ್ದಂತೆ, ಮನಸ್ಸು ಮತ್ತು ಮಾತಿನ ವ್ಯಾಪ್ತಿಗೆ ನಿಲುಕದ, ಆದರೆ ಯಾರ ಅನುಗ್ರಹದಿಂದ ಮಾತು ಜ್ಞಾನೋದಯವನ್ನುಂಟು ಮಾಡಿ ಪ್ರಜ್ವಲಿಸುತ್ತದೆಯೋ ಅಂತಹ ಆತನನ್ನು ಕುರಿತು ನಾನು ಭಜಿಸುತ್ತೇನೆ.
“ಇದು ಅಲ್ಲ, ಇದು ಅಲ್ಲ’ ಎಂಬ ಭಾವವನ್ನು ಪ್ರಯೋಗಿಸಿ ಶಾಸ್ತ್ರಗಳು ಉಲ್ಲೇಖಿಸಿರುವ ಆತನನ್ನು ಅಂದರೆ ಸಮಸ್ತ ದೇವತೆಗಳ ದೇವನೂ, ಜನ್ಮರಹಿತನೂ, ಅಚ್ಯುತನೂ ಮತ್ತು ಅಗ್ರೇಸರನೂ ಆದ ಆ ಭಗವಂತನನ್ನು ನಾನು ಪ್ರಾರ್ಥಿಸುತ್ತೇನೆ.
ಪ್ರಾತ್ರ್ನಮಾಮಿ ತಮಸಃ ಪರಮರ್ಕವರ್ಣಂ
ಪೂರ್ಣಂ ಸನಾತನಪದಂ ಪುರುಷೋತ್ತಮಾಖ್ಯಮ್ II
ಯಸ್ಮಿನ್ನಿದಂ ಜಗದಶೇಷಮಶೇಷಮೂರ್ತೌ
ರಜ್ಜ್ವಾಂ ಭುಜಂಗಮ ಇವ ಪ್ರತಿಭಾಸಿತಂ ವೈ II 3 II
ಬೆಳಗಾಗುತ್ತಿದ್ದಂತೆ, ಕತ್ತಲಿನಾಚೆಗೆ ಹೊಳೆಯುವ, ಕಾಂತಿಯುಕ್ತ ಸೂರ್ಯನಂತೆ ಪ್ರಕಾಶಿಸುವ, ಆತನಿಗೆ ನಾನು ನಮಸ್ಕರಿಸುತ್ತೇನೆ. ಈತನು ಸನಾತನನು, ಪರಿಪೂರ್ಣನು ಮತ್ತು ಸಮಗ್ರನು. ಈತನನ್ನು ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಹಗ್ಗದ ಮೇಲಿನ ಹಾವಿನಂತೆ ಮುಂದಾಗಿ ಹೊಳೆಯುವ, ನಾನಾವಿಧದ ಮತ್ತು ಅನಂತವಾದ ರೂಪ ಮತ್ತು ಆಕಾರಗಳುಳ್ಳ ಈ ಜಗತ್ತು ಆತನಲ್ಲಿ ನಿಶ್ಚಯವಾಗಿಯೂ ಅಡಕವಾಗಿದೆ.
ಶ್ಲೋಕತ್ರಯಮಿದಂ ಪುಣ್ಯಂ ಲೋಕತ್ರಯವಿಭೂಷಣಮ್
ಪ್ರಾತಃ ಕಾಲೇ ಪಠೇದ್ಯಸ್ತು ಸ ಗಚ್ಛೇತ್ಪರಮಂ ಪದಮ್ II
ಫಲಶೃತಿ
ಈ ಮೂರು ಶ್ಲೋಕಗಳ ಪವಿತ್ರ ಗೊಂಚಲು, ಎಲ್ಲ ಮೂರು ಲೋಕಗಳಿಗೂ ಭೂಷಣವೆನಿಸುವಂತೆ, ಅಲಂಕಾರಿಕವಾಗಿ ನಿಲ್ಲುತ್ತದೆ. ಯಾರು ಈ ಶ್ಲೋಕಗಳನ್ನು ಪಠಿಸುವರೋ ಅವರು ಪರಮಪದವನ್ನು ಹೊಂದುತ್ತಾರೆ.