PURUSHA SUKTAM
(255-282)
Purusha Suktam forms an integral part of the Rgveda Samhita (10.7.90.1-6). It is highly venerated and extensively used in daily recitation of spiritual texts (parayana), and in various rituals and ceremonies. It must have been revealed to some great Rshi, who gives expression to his vision in a highly poetic manner. It excels, in it poetic beauty and mystical splendor, in giving an interesting insight into the process of Creation in two stages: primary and secondary. Every time it is recited, the vision comes alive with all its glow.
This sacred text consisting of 24 mantras, according to me, serves a dual purpose:
a. The mere recitation of the mantras, with proper accent, intonation and swara, energizes the intellect with the vibrations coming from it, and
b. When the intellect is energized, the comprehension, the understanding of the meaning of the text, illumines the intellect with gnana or wisdom.
This great Sukta epitomizes the world-view of the whole of our culture, right from the Vedic times to the present day, kept alive and vibrant, through precept and practice.
It is possible, in my opinion, to access the following benefits from a regular, meaningful and concentrated recitation of this Sukta:
a. It inculcates Dharmic action;
b. It enriches the mind with bhakti ( devotion);
c. It confers health, prosperity and happiness;
d. It illumines the intellect with gnana ( wisdom); and
e. It makes possible, through upasana ( meditation), the attainment of moksha or Liberation.
Shanti Mantra:
OM. We invoke Him to ward off evil
And confer Happiness on us.
We pray for the proper performance
Of the ritual of Yagna.
We pray for the welfare
Of the performer of the Yagna.
May the divine and auspicious Blessings
Be conferred on us,
And on the entire humankind!
May the Flora and Fauna flourish abundantly!
May health and prosperity be showered
Upon all the living beings:
The two-footed as well as the four-footed!
OM Shantih. Shantih. Shantih.
1. ॐ स॒हस्र॑शीर्षा॒ पुरु॑षः । स॒ह॒स्रा॒क्षः स॒हस्र॑पात् ।
स भूमिं॑ वि॒श्वतो॑ वृ॒त्वा । अत्य॑तिष्ठद्दशाङ्गु॒लम् । १
ōṃ sa̠hasra̍śīrṣā̠ puru̍ṣaḥ । sa̠ha̠srā̠kṣa-ssa̠hasra̍pāt ।
sa bhūmi̍ṃ vi̠śvatō̍ vṛ̠tvā । atya̍tiṣṭhaddaśāṅgu̠lam ॥
XZ1. Thousand-Headed is the Purusha,
He has a thousand eyes and as many feet,
And, enveloping this world,
He stands transcending it by ten inches above.
2. पुरु॑ष ए॒वेदꣳ सर्वम्᳚ । यद्भू॒तं यच्च॒ भव्यम्᳚।
उ॒तामृ॑त॒त्वस्येशा॑नः । यदन्ने॑नाति॒रोह॑ति । २
puru̍ṣa ē̠vēdagṃ sarvam̎ । yadbhū̠taṃ yachcha̠ bhavyam̎ ।
u̠tāmṛ̍ta̠tva syēśā̍naḥ । ya̠dannē̍nāti̠rōha̍ti ॥
2. Whatever was, whatever will be,
And whatever is now,
Everything is that Purusha alone.
He stands supreme,
Lording over the Immortal State,
Transcending the Material World
That grows and is sustained by food.
3. ए॒तावा॑नस्य महि॒मा । अतो॒ ज्यायाँश्च पूरुषः
पादोऽस्य विश्वा॑ भू॒तानि॑ । त्रि॒पाद॑स्या॒मृतं॑ दि॒वि । ३
ē̠tāvā̍nasya mahi̠mā । atō̠ jyāyāg̍ścha̠ pūru̍ṣaḥ ।
pādō̎-‘sya̠ viśvā̍ bhū̠tāni̍ । tri̠pāda̍syā̠mṛta̍-ndi̠vi ॥
3. Whatever seen here is His Splendour,
But He is greater than that.
All the Beings form but a part of Him,
A Quarter;
The other Three-Quarters rests established
As immortal in Heaven.
4. त्रि॒पादू॒र्ध्व उदै॒त्पुरु॑षः । पादो᳚ऽस्ये॒हाऽऽभ॑वा॒त्पुनः॑ ।
ततो॒ विश्व॒ङ्व्य॑क्रामत् । सा॒श॒ना॒न॒श॒ने अ॒भि । ४
tri̠pādū̠rdhva udai̠tpuru̍ṣaḥ । pādō̎-‘syē̠hā-”bha̍vā̠tpuna̍ḥ ।
tatō̠ viṣva̠ṅvya̍krāmat । sā̠śa̠nā̠na̠śa̠nē a̠bhi ॥
4. He is well-established above
In the Three-Fourths.
The One-Fourth of His
Is manifested here, again and again,
And He with His Presence remains inherent
Among the Sentient as well as the non-Sentient.
तस्मा᳚द्वि॒राड॑जायत । वि॒राजो॒ अधि॒ पूरु॑षः ।
स जा॒तो अत्य॑रिच्यत । प॒श्चाद्भूमि॒मथो॑ पु॒रः । ५
tasmā̎dvi̠rāḍa̍jāyata । vi̠rājō̠ adhi̠ pūru̍ṣaḥ ।
sa jā̠tō atya̍richyata । pa̠śchādbhūmi̠mathō̍ pu̠raḥ ॥
5. He is the Primordial Purusha;
From Whom emerged the Cosmos,
The Brahmanda;
With the Cosmos emerged the Immense Purusha,
Viratpurusha,
He, having emerged, multiplied Himself,
And spread all over;
All over the Earth and the Beings on it.
यत्पुरु॑षेण ह॒विषा᳚ । दे॒वा य॒ज्ञमत॑न्वत ।
व॒स॒न्तो अ॑स्यासी॒दाज्यम्᳚ । ग्री॒ष्म इ॒ध्मः श॒रद्ध॒विः । ६
yatpuru̍ṣēṇa ha̠viṣā̎ । dē̠vā ya̠jñamata̍nvata ।
va̠sa̠ntō a̍syāsī̠dājyam̎ । grī̠ṣma i̠dhmaśśa̠radhdha̠viḥ ॥
6. The devas performed a Yagna,
Making Him (Viratpurusha) the havis,
The oblation material,
With Spring (Vasanta) becoming the very aajya or ghee,
Summer (Greeshma) serving as the very faggots (firewood)
And Autumn (Sharat) filling the place of havis.
स॒प्तास्या॑सन्परि॒धयः॑ । त्रिः स॒प्त स॒मिधः॑ कृ॒ताः ।
दे॒वा यद्य॒ज्ञं त॑न्वा॒नाः । अब॑ध्न॒न्पु॑रुषं प॒शुम् । ७
sa̠ptāsyā̍sanpari̠dhaya̍ḥ । tri-ssa̠pta sa̠midha̍ḥ kṛ̠tāḥ ।
dē̠vā yadya̠jña-nta̍nvā̠nāḥ । aba̍dhna̠n-puru̍ṣa-mpa̠śum ॥
7. There were, for this yagna, seven paridhis,
Serving as the defining borders,
In the form of the Five Elements,
Together with Day and Night.
Also, there were twenty-one principles
Made as samidhas,
Comprising the Five Sense Organs,
The Five Organs of Action,
The Five Vital Breaths,
The Four Inner Instruments
(the antahkaranas:
The mind, the intellect, the ego and the memory),
And Dharma and Adharma –
Twenty-one Principles in all,
Twenty-one samidhas in all .
The Purusha served Himself as the pasu,
The Sacrificial Animal.
तं य॒ज्ञं ब॒र्हिषि॒ प्रौक्षन्॑ । पुरु॑षं जा॒तम॑ग्र॒तः ।
तेन॑ दे॒वा अय॑जन्त । सा॒ध्या ऋष॑यश्च॒ ये । ८
taṃ ya̠jña-mba̠r̠hiṣi̠ praukṣan̍ । puru̍ṣa-ñjā̠tama̍gra̠taḥ ।
tēna̍ dē̠vā aya̍janta । sā̠dhyā ṛṣa̍yaścha̠ yē ॥
8. The Devas sprinkled some water
On the Purusha, the First-born,
Now made sacrificial means,
Using barhis, or sacrificial grass,
And then, along with Sadhyas and Rshis,
Performed the Yagna.
तस्मा᳚द्य॒ज्ञात्स॑र्व॒हुतः॑ । संभृ॑तं पृषदा॒ज्यम् ।
प॒शूꣳस्ताꣳश्च॑क्रे वाय॒व्यान्॑ । आ॒र॒ण्यान्ग्रा॒म्याश्च॒ ये । ९
tasmā̎dya̠jñāthsa̍rva̠huta̍ḥ । sambhṛ̍ta-mpṛṣadā̠jyam ।
pa̠śūgg-stāgg-ścha̍krē vāya̠vyān̍ । ā̠ra̠ṇyān-grā̠myāścha̠ yē ॥
9. That was the yagna wherein
The Purusha was Himself the oblation;
There emerged from the yagna, the prasadajya,
That is, curds mixed with ghee;
Then there came into being
Birds flying in the air,
The animals of the forest,
And those that were domesticated.
तस्मा᳚द्य॒ज्ञात्स॑र्व॒हुतः॑ । ऋचः॒ सामा॑नि जज्ञिरे ।
छन्दांसि जज्ञिरे॒ तस्मा᳚त् । यजु॒स्तस्मा॑दजायत । १०
tasmā̎dya̠jñāthsa̍rva̠huta̍ḥ । ṛcha̠-ssāmā̍ni jajñirē ।
Chandāg̍ṃsi jajñirē̠ tasmā̎t । yaju̠stasmā̍dajāyata ॥
10. From that yagna wherein
The Purusha was Himself the oblation,
There emerged the mantras of Rgveda,
Some mantras of Samaveda,
Also, the Yajurveda along with metres
Like the Gayatri.
तस्मा॒दश्वा॑ अजायन्त । ये के चो॑भ॒याद॑तः ।
गावो॑ ह जज्ञिरे॒ तस्मा᳚त् । तस्मा᳚ज्जा॒ता अ॑जा॒वयः॑ । ११
tasmā̠daśvā̍ ajāyanta । yē kē chō̍bha̠yāda̍taḥ ।
gāvō̍ ha jajñirē̠ tasmā̎t । tasmā̎jjā̠tā a̍jā̠vaya̍ḥ ॥
11. There emerged from that yagna
Horses, and those animals
That have two rows of teeth,
Then cattle, goats and sheep did follow.
यत्पुरु॑षं॒ व्य॑दधुः । क॒ति॒धा व्य॑कल्पयन् ।
मुखं॒ किम॑स्य॒ कौ बा॒हू । कावू॒रू पादा॑वुच्येते । १२
yatpuru̍ṣa̠ṃ vya̍dadhuḥ । ka̠ti̠thā vya̍kalpayann ।
mukha̠-ṅkima̍sya̠ kau bā̠hū । kāvū̠rū pādā̍vuchyētē ॥
12. “When they made the Purusha Himself
The sacrificial offering,
In how many ways did they do so?
What became of His face?
His two arms, His two thighs?
What came to be known as his feet?”
ब्रा॒ह्म॒णो᳚ऽस्य॒ मुख॑मासीत् । बा॒हू रा॑ज॒न्यः॑ कृ॒तः ।
ऊ॒रू तद॑स्य॒ यद्वैश्यः॑ । पद्भ्यां शू॒द्रो अ॑जायत । १३
brā̠hma̠ṇō̎-‘sya̠ mukha̍māsīt । bā̠hū rā̍ja̠nya̍ḥ kṛ̠taḥ ।
ū̠rū tada̍sya̠ yadvaiśya̍ḥ । pa̠dbhyāgṃ śū̠drō a̍jāyataḥ ॥
13. His Face became the Brahmana,
From His two arms emerged the Kshatriya,
His two thighs changed into the Vaishya,
And from His feet the Shudra was born.
च॒न्द्रमा॒ मन॑सो जा॒तः । चक्षोः॒ सूर्यो॑ अजायत ।
मुखा॒दिन्द्र॑श्चा॒ग्निश्च॑ । प्रा॒णाद्वा॒युर॑जायत । १४
cha̠ndramā̠ mana̍sō jā̠taḥ । chakṣō̠-ssūryō̍ ajāyata ।
mukhā̠dindra̍śchā̠gniścha̍ । prā̠ṇādvā̠yura̍jāyata ॥
14. From His mind came the moon,
The sun came from his two eyes,
Indra and Agni emerged from his mouth,
And His vital breath became the very air.
नाभ्या॑ आसीद॒न्तरि॑क्षम् । शी॒र्ष्णो द्यौः सम॑वर्तत ।
प॒द्भ्यां भूमि॒र्दिशः॒ श्रोत्रा᳚त् । तथा॑ लो॒काꣳ अ॑कल्पयन् । १५
nābhyā̍ āsīda̠ntari̍kṣam । śī̠rṣṇō dyau-ssama̍vartata ।
pa̠dbhyā-mbhūmi̠rdiśa̠-śśrōtrā̎t । tathā̍ lō̠kāgṃ a̍kalpayann ॥
15. From his navel emerged the Antariksha,
The space between the Earth and Heaven,
From his head emerged the Heaven,
The Earth from his feet,
The Directions from his ears,
And the other worlds too followed suit.
वेदा॒हमे॒तं पुरु॑षं म॒हान्तम्᳚ । आ॒दि॒त्यव॑र्णं॒ तम॑सस्तु॒ पा॒रे ।
सर्वा॑णि रू॒पाणि॑ वि॒चित्य॒ धीरः॑ । नामा॑नि कृ॒त्वाऽभि॒वद॒न् यदास्ते᳚ । १६
vēdā̠hamē̠ta-mpuru̍ṣa-mma̠hāntam̎ । ā̠di̠tyava̍rṇa̠-ntama̍sa̠stu pā̠rē ।
sarvā̍ṇi rū̠pāṇi̍ vi̠chitya̠ dhīra̍ḥ । nāmā̍ni kṛ̠tvā-‘bhi̠vada̠n̠, yadā-”stē̎ ॥
How do I relate myself to this Great Act of Creation?
The Great Purusha has offered Himself
In different Forms,
In different Ways.
What should I do?
I should know Him?
I know Him, this Great Purusha,
The Wise One,
Who, having created various Names and Forms,
And dealing with them with all His Wisdom,
Stands shining brilliantly like the Sun,
Beyond the darkness.
I know Him, the Great Purusha.
धा॒ता पु॒रस्ता॒द्यमु॑दाज॒हार॑ । श॒क्रः प्रवि॒द्वान्प्र॒दिश॒श्चत॑स्रः ।
तमे॒वं वि॒द्वान॒मृत॑ इ॒ह भ॑वति । नान्यः पन्था॒ अय॑नाय विद्यते । १७
dhā̠tā pu̠rastā̠dyamu̍dāja̠hāra̍ । śa̠kraḥ pravi̠dvān-pra̠diśa̠śchata̍sraḥ ।
tamē̠vaṃ vi̠dvāna̠mṛta̍ i̠ha bha̍vati । nānyaḥ panthā̠ aya̍nāya vidyatē ॥
17. Prajapati praised this Purusha,
Long long ago;
Indra who knows all the Four Quarters,
Spoke well about Him;
Anyone who knows about Him, thus,
Gets Liberation even here;
No other way to get Liberation
Than getting knowledge of Him,
Of this Supreme Purusha,
Here, in this life.
य॒ज्ञेन॑ य॒ज्ञम॑यजन्त दे॒वाः । तानि॒ धर्मा॑णि प्रथ॒मान्या॑सन् ।
ते ह॒ नाकं॑ महि॒मानः॑ सचन्ते । यत्र॒ पूर्वे॑ सा॒ध्याः सन्ति॑ दे॒वाः । १८
ya̠jñēna̍ ya̠jñama̍yajanta dē̠vāḥ । tāni̠ dharmā̍ṇi pratha̠mānyā̍sann ।
tē ha̠ nāka̍-mmahi̠māna̍-ssachantē । yatra̠ pūrvē̍ sā̠dhyāssanti̍ dē̠vāḥ ॥
18. The devas worshipped Him thus
By performing a yagna,
With Him, by making Him
The very sacrificial act;
Those processes evolved by them
Have become the primary dharmas,
Whereby all the great ones
Attain that Heaven,
The abode attained earlier
By the devas and sadhyas.
Uttaranarayana
अ॒द्भ्यः संभू॑तः पृथि॒व्यै रसा᳚च्च । वि॒श्वक॑र्मणः॒ सम॑वर्त॒ताधि॑ ।
तस्य॒ त्वष्टा॑ वि॒दध॑द्रू॒पमे॑ति । तत्पुरु॑षस्य॒ विश्व॒माजा॑न॒मग्रे᳚ । १
a̠dbhya-ssambhū̍taḥ pṛthi̠vyai rasā̎chcha । vi̠śvaka̍rmaṇa̠-ssama̍varta̠tādhi̍ ।
tasya̠ tvaṣṭā̍ vi̠dadha̍drū̠pamē̍ti । tatpuru̍ṣasya̠ viśva̠mājā̍na̠magrē̎ ॥
19. It was from the all-pervasive water
And the essence of the earth
That the Great Purusha,
The Viratpurusha, manifested;
Indeed, He emanated from
Paramapurusha,
Who, as Twasta, the Creator,
Created the fourteen worlds;
Having created the expanded universe,
He remains spread all over the expansion
For a very very long time;
He has been there since the very Beginning
Of Creation.
वेदा॒हमे॒तं पुरु॑षं म॒हान्तम्᳚ । आ॒दि॒त्यव॑र्णं॒ तम॑सः॒ पर॑स्तात् ।
तमे॒वं वि॒द्वान॒मृत॑ इ॒ह भ॑वति । नान्यः पन्था॑ विद्य॒तेय॑ऽनाय । २
vēdā̠hamē̠ta-mpuru̍ṣa-mma̠hāntam̎ । ā̠di̠tyava̍rṇa̠-ntama̍sa̠ḥ para̍stāt ।
tamē̠vaṃ vi̠dvāna̠mṛta̍ i̠ha bha̍vati । nānyaḥ panthā̍ vidya̠tē-‘ya̍nāya ॥
20. “I have known that Great Purusha,
Brilliant and dazzling like the Sun,
Far beyond the edge of Darkness.
He who knows Him thus
Becomes immortal even here.
This is the only Path,
None other than this will bring
Immortality, here and now.”
प्र॒जाप॑तिश्चरति॒ गर्भे॑ अ॒न्तः । अ॒जाय॑मानो बहु॒धा विजा॑यते ।
तस्य॒ धीराः॒ परि॑जानन्ति॒ योनिम्᳚ । मरी॑चीनां प॒दमि॑च्छन्ति वे॒धसः॑ ।l
pra̠jāpa̍tiścharati̠ garbhē̍ a̠ntaḥ । a̠jāya̍mānō bahu̠dhā vijā̍yatē ।
tasya̠ dhīrā̠ḥ pari̍jānanti̠ yōnim̎ । marī̍chīnā-mpa̠dami̍chChanti vē̠dhasa̍ḥ ॥
21. Prajapati, the Lord of all Beings,
Keeps moving inside the Cosmic Womb;
Though unborn, He takes birth
In different Manifestations;
Wise Ones know Him to be
The Origin and Source of the Universe;
Brahma and others, entrusted with the job
Of Secondary Creation,
Aspire to attain that exalted position that
Mariachi and other Rshis have attained.
यो दे॒वेभ्य॒ आत॑पति । यो दे॒वानां᳚ पु॒रोहि॑तः ।
पूर्वो॒ यो दे॒वेभ्यो॑ जा॒तः । नमो॑ रु॒चाय॒ ब्राह्म॑ये ।
yō dē̠vēbhya̠ āta̍pati । yō dē̠vānā̎-mpu̠rōhi̍taḥ ।
pūrvō̠ yō dē̠vēbhyō̍ jā̠taḥ । namō̍ ru̠chāya̠ brāhma̍yē ॥
22. Our obeisance to Him
Who is Resplendent,
Who shines on the gods,
Who acts as the Preceptor
And conducts gods’ rituals,
And who manifested long before
The gods came into being.
Our obeisance to that Resplendent One.
रुचं॑ ब्रा॒ह्मम् ज॒नय॑न्तः । दे॒वा अग्रे॒ तद॑ब्रुवन् ।
यस्त्वै॒वं ब्रा᳚ह्म॒णो वि॒द्यात् । तस्य॑ दे॒वा अस॒न् वशे᳚ । ५
rucha̍-mbrā̠hma-ñja̠naya̍ntaḥ । dē̠vā agrē̠ tada̍bruvann ।
yastvai̠va-mbrā̎hma̠ṇō vi̠dyāt । tasya̍ dē̠vā asa̠n vaśē̎ ॥
23. While explaining the Truth about Him,
The gods, the resplendent ones,
Addressed Him thus, in the beginning:
“Those who know You
And realize You thus,
Those seekers of Brahman
Will have the gods at their beck and call.”
ह्रीश्च॑ ते ल॒क्ष्मीश्च॒ पत्न्यौ᳚ । अ॒हो॒रा॒त्रे पा॒र्श्वे ।
नक्ष॑त्राणि रू॒पम् । अ॒श्विनौ॒ व्यात्तम्᳚ । इ॒ष्टम् म॑निषाण ।
अ॒मुं म॑निषाण । सर्व॑म् मनिषाण । ६
hrīścha̍ tē la̠kṣmīścha̠ patnyau̎ । a̠hō̠rā̠trē pā̠rśvē ।
nakṣa̍trāṇi rū̠pam । a̠śvinau̠ vyāttam̎ ।
i̠ṣṭa-mma̍niṣāṇa । a̠mu-mma̍niṣāṇa । sarva̍-mmaniṣāṇa ॥
24. The goddesses Hri (Modesty) and Sri (Lakshmi)
They are your Consorts.
Day and Night are your lateral limbs.
The stars constitute your Form.
The Ashvins are your well-blossomed Face.
O Purusha,
Bless us with the fulfillment of our desire
For Self-Knowledge!
Grant us the favor of worldly-wellbeing!
Favour us with the attainment of all our needs!
ॐ तच्छं॒ योरावृ॑णीमहे । गा॒तुं य॒ज्ञाय॑ । गा॒तुं यज्ञप॑तये । दैवी᳚स्स्व॒स्तिर॑स्तु नः ।
स्व॒स्तिर्मानु॑षेभ्यः । ऊ॒र्ध्वं जि॑गातु भेष॒जम् । शन्नो॑ अस्तु द्वि॒पदे᳚ । शं चतु॑ष्पदे ।
ॐ शान्तिः॒ शान्तिः॒ शान्तिः॑।
tachCha̠ṃ yōrāvṛ̍ṇīmahē । gā̠tuṃ ya̠jñāya̍ । gā̠tuṃ ya̠jñapa̍tayē । daivī̎ sva̠stira̍stu naḥ । sva̠stirmānu̍ṣēbhyaḥ । ū̠rdhva-ñji̍gātu bhēṣa̠jam । śa-nnō̍ astu dvi̠padē̎ । śa-ñchatu̍ṣpadē ।
ōṃ śānti̠-śśānti̠-śśānti̍ḥ ॥
OM. We invoke Him to ward off evil
And confer Happiness on us.
We pray for the proper performance
Of the ritual of Yagna.
We pray for the welfare
Of the performer of the Yagna.
May the divine and auspicious Blessings
Be conferred on us,
And on the entire humankind!
May the Flora and Fauna flourish abundantly!
May health and prosperity be showered
Upon all the living beings:
The two-footed as well as the four-footed ones!
ಪುರುಷ ಸೂಕ್ತಂ
ಪೀಠಿಕೆ
ಪುರುಷಸೂಕ್ತವು ಋಗ್ವೇದ ಸಂಹಿತೆಯ ( 10.7.90.1-6 )
ಅವಿಭಾಜ್ಯ ಅಂಗವಾಗಿದೆ. ಪ್ರತಿದಿನದ ಪಾರಾಯಣದಲ್ಲಿಯು ಮತ್ತು ಹಲವಾರು ಧಾರ್ಮಿಕ ಆಚರಣೆಗಳಲ್ಲಿ ಹಾಗೂ ಶಾಸ್ತ್ರವಿಧಿಗಳಲ್ಲಿ, ಅತ್ಯಂತ ಪೂಜನೀಯವಾದ ಈ ಪುರುಷ ಸೂಕ್ತವನ್ನು ವ್ಯಾಪಕವಾಗಿ ಪಠಿಸಲಾಗುತ್ತದೆ. ಪುರುಷ ಸೂಕ್ತವು ಮಹರ್ಷಿಯೊಬ್ಬರಿಗೆ ಸಾಕ್ಷಾತ್ಕಾರವಾಗಿ, ಅವರು ತಮ್ಮ ದೃಷ್ಟಿಗೆ ಗೋಚರವಾದ ಈ ಸೂಕ್ತಕ್ಕೆ, ಅತ್ಯಂತ ಕಾವ್ಯಮಯವಾದ ರೀತಿಯಲ್ಲಿ ಭಾವವನ್ನು ತುಂಬಿ ರಚನೆ ಮಾಡಿದ್ದರಬಹುದೆಂದು ಊಹಿಸಬಹುದಾಗಿದೆ. ಪ್ರಾಥಮಿಕ ಮತ್ತು ಅನುಷಂಗಿಕ ಎಂಬ ಎರಡು ಹಂತಗಳಲ್ಲಿನ ಸೃಷ್ಟಿಕ್ರಿಯೆಯ ಹೃದಯಂಗಮ ಒಳನೋಟವನ್ನು ಕಟ್ಟಿಕೊಡುವುದರಲ್ಲಿ, ಕಾವ್ಯಾಲಂಕಾರ ಮತ್ತು ಆಧ್ಯಾತ್ಮಿಕ ಭವ್ಯತೆಯಿಂದ ಕೂಡಿದ ಈ ಸೂಕ್ತವು ಅತಿಶಯವೆನಿಸುತ್ತದೆ. ಪ್ರತಿಯೊಂದು ಸಲವೂ ಇದನ್ನು ಪಠಿಸಿದಾಗ, ಸಂಪೂರ್ಣ ಉಜ್ವಲತೆಯಿಂದ ಇದರ ದರ್ಶನವು ಜೀವಂತಗೊಳ್ಳುತ್ತದೆ.
ನನ್ನ ಪ್ರಕಾರ, 24 ಮಂತ್ರಗಳನ್ನೊಳಗೊಂಡ ಈ ಪವಿತ್ರವಾದ ಮೂಲಪಾಠವು ಎರಡು ಉದ್ದೇಶಗಳನ್ನು ಸಾಧಿಸುತ್ತದೆ.
1. ಸರಿಯಾದ ಸ್ವರ ಮತ್ತು ವರ್ಣೋಚ್ಛಾರಣೆಯಿಂದ ಈ ಸೂಕ್ತದಲ್ಲಿನ ಮಂತ್ರಗಳನ್ನು, ಕೇವಲ ಪಠಿಸುವುದರಿಂದ ಮಾತ್ರವೇ, ಅದರಿಂದ ಹೊರಹೊಮ್ಮುವ ಕಂಪನಗಳು, ನಮ್ಮ ಪ್ರಜ್ಞೆಯನ್ನು ಉದ್ದೀಪನಗೊಳಿಸುತ್ತವೆ ಮತ್ತು
2. ಯಾವಾಗ ಪ್ರಜ್ಞೆಯು ಚೈತನ್ಯವನ್ನು ಹೊಂದುತ್ತದೆಯೋ, ಆಗ ಈ ಪಠ್ಯದ ಅರ್ಥವನ್ನು, ಮಹತ್ವವನ್ನು ಗ್ರಹಿಸುವ ಧಾರಣ ಶಕ್ತಿಯು, ನಮ್ಮ ಬುದ್ಧಿಯನ್ನು ಜ್ಞಾನದಿಂದ ಬೆಳಗುತ್ತದೆ.
ವೈದಿಕ ಕಾಲದಿಂದ ಹಿಡಿದು ಇಂದಿನವರೆಗೂ, ಅನುಭೂತಿ ಮತ್ತು ಆಚರಣೆಯ ಮುಖಾಂತರ ಜ್ವಲಂತವಾಗಿ ಹಾಗೂ ಜೀವಂತವಾಗಿರುವ ನಮ್ಮ ಸಮಗ್ರ ಸಂಸ್ಕೃತಿಯ ವಿಶ್ವರೂಪವನ್ನು, ಅತ್ಯಂತ ಶ್ರೇಷ್ಠವಾದ ಈ ಸೂಕ್ತವು ಸಂಗ್ರಹಿಸಿ ಕೊಡುತ್ತದೆ.
ನನ್ನ ಅಭಿಪ್ರಾಯದಲ್ಲಿ ಈ ಸೂಕ್ತವನ್ನು ನಿಯಮಿತವಾಗಿ, ಅರ್ಥಪೂರ್ಣವಾಗಿ ಹಾಗೂ ಏಕಾಗ್ರತೆಯಿಂದ ಪಾರಾಯಣ ಮಾಡಿ ಪಠಿಸುವುದರಿಂದ ಈ ಕೆಳಕಂಡ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
1. ಧರ್ಮಕಾರ್ಯಗಳು ಮನಸ್ಸಿಗೆ ನಾಟುವಂತೆ ಮಾಡುತ್ತದೆ.
2. ಮನಸ್ಸನ್ನು ಭಕ್ತಿಯಿಂದ ಸಮೃದ್ಧಗೊಳಿಸುತ್ತದೆ.
3. ಆರೋಗ್ಯ, ಅಭ್ಯುದಯ ಮತ್ತು ಆನಂದವನ್ನು ಅನುಗ್ರಹಿಸುತ್ತದೆ.
4. ಚಿತ್ತ ಪ್ರಜ್ಞೆಯನ್ನು ಜ್ಞಾನದಿಂದ ಬೆಳಗುತ್ತದೆ.
5. ಉಪಾಸನೆಯ ಮುಖಾಂತರ ಮೋಕ್ಷವನ್ನು ಹೊಂದಲು ಶಕ್ಯವಾಗಿದೆ.
ಶಾಂತಿ ಮಂತ್ರ
ಓಂ, ಕೆಟ್ಟದ್ದನ್ನುತೊಡೆದುಹಾಕಿ ನಮಗೆ ಆನಂದವನ್ನು ಅನುಗ್ರಹಿಸುವ ಸಲುವಾಗಿ, ನಾವು ಆತನನ್ನು ಪ್ರಾರ್ಥಿಸುವೆವು. ಯಜ್ಞಕಾರ್ಯಗಳ ಶಾಸ್ತ್ರವಿಧಿಗಳನ್ನು ಯೋಗ್ಯವಾದ ರೀತಿಯಲ್ಲಿ ಆಚರಿಸುವಂತಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಯಜ್ಞಕರ್ತನ ಅಭ್ಯುದಯಕ್ಕಾಗಿ ನಾವು ಪ್ರಾರ್ಥಿಸುತ್ತೇವೆ. ದೈವಿಕವಾದ ಮತ್ತು ಶುಭಕಾರಕವಾದ ಆಶೀರ್ವಾದಗಳು ನಮ್ಮ ಮೇಲೆ ಅನುಗ್ರಹಿಸುವಂತಾಗಲಿ ಹಾಗೆಯೇ ಸಮಸ್ತ ಮನುಕುಲದ ಮೇಲೆಯೂ ಸಹ ಆತನ ಅನುಗ್ರಹ ಪ್ರಾಪ್ತವಾಗಲಿ! ದ್ವಿಪದಿಗಳು, ಚತುಷ್ಪದಿಗಳು ಆದ ಪ್ರಾಣಿ ಸಮೂಹಗಳೂ ಹಾಗೂ ವನಸ್ಪತಿಗಳೂ ಸಮೃದ್ಧವಾಗಿ ಅಭಿವೃದ್ಧಿ ಹೊಂದುವಂತಾಗಲಿ. ಸಕಲ ಜೀವಿಗಳ ಮೇಲೂ ಆರೋಗ್ಯ ಮತ್ತು ಅಭ್ಯುದಯದ ವೃಷ್ಟಿ ಸುರಿಯಲಿ.
ಓಂ ಶಾಂತಿಃ ಶಾಂತಿಃ ಶಾಂತಿಃ
1. ಓಂ ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ |
ಸ ಭೂಮಿಂ ವಿಶ್ವತೋ ವೃತ್ವಾ | ಅತ್ಯತಿಷ್ಠದ್ದಶಾಂಗುಲಂ ||
ಒಂದನೆಯ ಮಂತ್ರ
ಸಾವಿರಾರು ಶಿರಸ್ಸುಗಳನ್ನುಳ್ಳ ಪುರುಷನು, ಸಾವಿರಾರು ಕಣ್ಣುಗಳುಳ್ಳವನು, ಸಾವಿರಾರು ಪಾದಗಳುಳ್ಳವನು, ಅವನು ಬ್ರಹ್ಮಾಂಡರೂಪವಾದ ಈ ವಿಶ್ವವನ್ನು ಸುತ್ತಲೂ ವ್ಯಾಪಿಸಿಕೊಂಡು ಅದರ ಮೇಲೆ ಹತ್ತು ಅಂಗುಲದಷ್ಟು ಅತಿಕ್ರಮಿಸಿರುವನು.
2.ಪುರುಷ ಏವೇದಗ್ಮ್ ಸರ್ವಮ್ | ಯದ್ಭೂತಂ ಯಚ್ಚ ಭವ್ಯಮ್ |
ಉತಾಮೃತತ್ವ ಸ್ಯೇಶಾನಃ | ಯದನ್ನೇನಾತಿರೋಹತಿ ||
ಎರಡನೆಯ ಮಂತ್ರ
ಹಿಂದೆ ಇದ್ದದ್ದು, ಮುಂದೆ ಸಂಭವಿಸುವುದು ಮತ್ತು ಈಗ ಇರುವುದು ಇವೆಲ್ಲವೂ ಆ ಪುರುಷನೊಬ್ಬನೇ. ಅನ್ನದಿಂದ ಆಧರಿಸಿ ಬೆಳೆಯುತ್ತಿರುವ ಈ ಭೌತಿಕ ಪ್ರಪಂಚವನ್ನು ಮೀರಿ, ಅಮೃತತ್ವಕ್ಕೆ ಪ್ರಭುವಾಗಿ, ಪರಮಶ್ರೇಷ್ಠನಾಗಿ ಅವನು ನಿಲ್ಲುತ್ತಾನೆ.
3.ಏತಾವಾನಸ್ಯ ಮಹಿಮಾ | ಅತೋ ಜ್ಯಾಯಾಗ್ಶ್ಚ ಪೂರುಷಃ |
ಪಾದೋಸ್ಯ ವಿಶ್ವಾ ಭೂತಾನಿ | ತ್ರಿಪಾದಸ್ಯಾಮೃತಂ ದಿವಿ |
ಮೂರನೆಯ ಮಂತ್ರ
ಇಲ್ಲಿ ಕಂಡುಬರುವುದೆಲ್ಲವೂ ಈತನ ಮಹಿಮೆ. ಆದರೆ ಈತನು ಜಗತ್ತಿಗಿಂತಲೂ ಇನ್ನೂ ದೊಡ್ಡವನು. ಈತನ ಅಂಗವಾದ ಸಮಸ್ತ ಪ್ರಾಣಿಸಮೂಹಗಳೂ ಈ ಪುರುಷನ ಕಾಲುಭಾಗವಾಗಿದೆ. ಉಳಿದ ಮುಕ್ಕಾಲು ಭಾಗವು ದೇವಲೋಕವಾದ ಸ್ವರ್ಗದಲ್ಲಿ ಚಿರಂತನವಾಗಿ ನೆಲೆಗೊಂಡಿದೆ.
4.ತ್ರಿಪಾದೂರ್ಧ್ವ ಉದೈತ್ಪುರುಷಃ | ಪಾದೋಸ್ಯೇಹಾಭವತ್ಪುನಃ |
ತತೋ ವಿಷ್ವಜ್ವ್ಯಕ್ರಾಮತ್ | ಸಾಶನಾನಶನೇ ಅಭಿ ||
ನಾಲ್ಕನೆಯ ಮಂತ್ರ
ನಮಗೆ ಅಗೋಚರವಾದ ಪುರುಷನ ಮುಕ್ಕಾಲು ಭಾಗವು ದ್ಯುಲೋಕದಲ್ಲಿ ಚೆನ್ನಾಗಿ ಸ್ಥಾಪಿತವಾಗಿದೆ. ಇವನ ಕಾಲುಭಾಗ ಮಾತ್ರ ಇಲ್ಲಿ ಪುನಃ ಪುನಃ ವ್ಯಕ್ತವಾಗುತ್ತದೆ. ಆದಿ ಪುರುಷನು ಈ ವ್ಯಕ್ತವಾದ ಅವಸ್ಥೆಯಲ್ಲಿ ಹಸಿವು ದಾಹಗಳುಳ್ಳ ಪ್ರಾಣಿಗಳಲ್ಲಿಯೂ, ಹಸಿವಿಲ್ಲದ ಜಡವಸ್ತುಗಳಲ್ಲಿಯೂ ನಾನಾ ರೂಪಗಳಿಂದ ವ್ಯಾಪಿಸಿಕೊಂಡಿರುತ್ತಾನೆ.
5. ತಸ್ಮಾದ್ವಿರಾಡಜಾಯತ | ವಿರಾಜೋ ಅಧಿ ಪೂರುಷಃ |
ಸ ಜಾತೋ ಅತ್ಯರಿಚ್ಯತ | ಪಶ್ಚಾದ್ಭೂಮಿಮಥೋ ಪುರಃ ||
ಐದನೆಯ ಮಂತ್ರ
ಈತನು ಆದಿಪುರುಷ. ಈತನಿಂದ ವಿವಿಧ ಪ್ರಕಾರಗಳಲ್ಲಿ ರಾರಾಜಿಸುತ್ತಿರುವ ಬ್ರಹ್ಮಾಂಡವು ಉತ್ಪನ್ನವಾಯಿತು. ಬ್ರಹ್ಮಾಂಡದೊಂದಿಗೆ ವಿರಾಟ್ ಪುರುಷನು ಹೊರಹೊಮ್ಮಿದನು, ಆತನು ಗೋಚರವಾಗುತ್ತಿದ್ದಂತೆಯೇ ತನ್ನಂತಾನೇ ಅಗಣಿತವಾಗಿ ವೃದ್ಧಿಸಿದನು ಹಾಗೂ ಎಲ್ಲೆಡೆಯೂ ವ್ಯಾಪಿಸಿಕೊಂಡನು. ಭೂಮಿಯನ್ನೆಲ್ಲಾ ವ್ಯಾಪಿಸಿಕೊಂಡು ನಂತರ ಅಲ್ಲಿರುವ ಅಸ್ತಿತ್ವದಲ್ಲಿ ತುಂಬಿಕೊಂಡನು.
6. ಯತ್ಪುರುಷೇಣ ಹವಿಷಾ | ದೇವಾ ಯಙ್ಞಮತನ್ವತ |
ವಸಂತೋ ಅಸ್ಯಾಸೀದಾಜ್ಯಮ್ | ಗ್ರೀಷ್ಮ ಇಧ್ಮಶ್ಶರಧ್ಧವಿಃ ||
ಆರನೆಯ ಮಂತ್ರ
ಅನಂತರ ದೇವತೆಗಳು, ಆ ವಿರಾಟ್ ಪುರುಷನನ್ನು ಹವಿಸ್ಸನ್ನಾಗಿಸಿ ಒಂದು ಯಜ್ಞವನ್ನು ಮಾಡಿದರು. ಈ ಯಜ್ಞಕ್ಕೆ ವಸಂತ ಋತುವು ಆಜ್ಯವಾಯಿತು. ಗ್ರೀಷ್ಮಋತುವು ಸಮಿತ್ತಾಯಿತು ಮತ್ತು ಶರದೃತುವು ಹವಿಸ್ಸಾಯಿತು.
7. ಸಪ್ತಾಸ್ಯಾಸನ್ ಪರಿಧಯಃ | ತ್ರಿಸ್ಸಪ್ತ ಸಮಿಧಃ ಕೃತಾಃ |
ದೇವಾ ಯದ್ಯಙ್ಞಂ ತನ್ವಾನಾಃ | ಅಬಧ್ನನ್ಪುರುಷಂ ಪಶುಮ್ ||
ಏಳನೆಯ ಮಂತ್ರ
ಈ ಯಜ್ಞಕ್ಕೆ ಏಳು ಛಂದಸ್ಸುಗಳು ಪರಿಧಿಗಳಾದವು. ಆ ಏಳು ಪರಿಧಿಗಳು ಯಾವುವೆಂದರೆ ಪಂಚಭೂತಗಳು ಮತ್ತು ಹಗಲು ರಾತ್ರಿಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಗ್ರಹಣೇಂದ್ರಿಯಗಳು, ಪಂಚಪ್ರಾಣವಾಯುಗಳು(ಬುದ್ಧಿ, ಪ್ರಜ್ಞೆ, ಅಹಂ ಮತ್ತು ಸ್ಮೃತಿ ) ಎಂಬ ನಾಲ್ಕು ಅಂತಃಕರಣಗಳು, ಧರ್ಮ ಮತ್ತು ಅಧರ್ಮ, ಹೀಗೆ ಒಟ್ಟು ಇಪ್ಪತ್ತೊಂದು ತತ್ವಗಳು ಸಮಿತ್ತುಗಳಾದವು. ದೇವತೆಗಳು ಯಜ್ಞಸಾಧನನಾದ ಈ ವಿರಾಟ್ ಪುರುಷನನ್ನೇ ಪಶುವಾಗಿ ಯೂಪಸ್ತಂಭಕ್ಕೆ ಕಟ್ಟಿದರು.
8. ತಂ ಯಙ್ಞಂ ಬರ್ಹಿಷಿ ಪ್ರೌಕ್ಷನ್ | ಪುರುಷಂ ಜಾತಮಗ್ರತಃ |
ತೇನ ದೇವಾ ಅಯಜಂತ | ಸಾಧ್ಯಾ ಋಷಯಶ್ಚ ಯೇ ||
ಎಂಟನೆಯ ಮಂತ್ರ
ಪ್ರಪ್ರಥಮವಾಗಿ ಜನಿಸಿದವನೂ, ಯಜ್ಞಕ್ಕೆ ಸಾಧನಭೂತನೂ ಆದ ವಿರಾಟ್ ಪುರುಷನ ಮೇಲೆ “ಬರ್ಹಿ” ಅಂದರೆ ಧರ್ಭೆಯನ್ನು ಬಳಸಿ, ದೇವತೆಗಳು ನೀರನ್ನು ಪ್ರೋಕ್ಷಿಸಿದರು. ನಂತರ ಸಾಧ್ಯರು ಮತ್ತು ಋಷಿಗಳ ಜತೆಗೂಡಿ ದೇವತೆಗಳು ಯಜ್ಞವನ್ನು ಮಾಡಿದರು.
9. ತಸ್ಮಾದ್ಯಙ್ಞಾತ್ಸರ್ವಹುತಃ |
ಸಂಭೃತಂ ಪೃಷದಾಜ್ಯಮ್ |
ಪಶೂಗ್ಂಸ್ತಾಗ್ಂಶ್ಚಕ್ರೇವಾಯವ್ಯಾನ್| ಆರಣ್ಯಾನ್ಗ್ರಾಮ್ಯಾಶ್ಚ ಯೇ ||
ಒಂಬತ್ತನೆಯ ಮಂತ್ರ
ಸರ್ವಾತ್ಮಕನಾದ ಪುರುಷನೇ ಸ್ವಯಂ ಆಹುತಿಯಾಗಿ ಉಳ್ಳ ಯಜ್ಞವಾಗಿತ್ತು ಅದು. ಆಗ ಆ ಯಜ್ಞದಿಂದ “ಪ್ರಸಾದಾಜ್ಯ” ಅಂದರೆ ಮೊಸರಿನೊಡನೆ ಕೂಡಿದ ತುಪ್ಪವು ಉತ್ಪನ್ನವಾಯಿತು. ಅನಂತರ ವಾಯುಮಾರ್ಗದಲ್ಲಿ ಸಂಚರಿಸುವ ಪಕ್ಷಿಗಳೂ, ಕಾಡಿನ ಮೃಗಗಗಳೂ, ಗ್ರಾಮಗಳಲ್ಲಿರುವ ಪಳಗಿಸಿದ ಪ್ರಾಣಿಗಳೂ ಹುಟ್ಟಿ ಬಂದವು.
10. ತಸ್ಮಾದ್ಯಙ್ಞಾತ್ಸರ್ವಹುತಃ |
ಋಚಃಸ್ಸಾಮಾನಿ ಜಜ್ಞಿರೇ |
ಛಂದಾಗಂಸಿ ಜಜ್ಞಿರೇ ತಸ್ಮಾತ್ | ಯಜುಸ್ತಸ್ಮಾದಜಾಯತ ||
ಹತ್ತನೆಯ ಮಂತ್ರ
ಸ್ವಯಂ ವಿರಾಟ್ ಪುರುಷನೇ ಆಹುತಿಯಾಗಿದ್ದಂತಹ ಆ ಯಜ್ಞದಿಂದ, ಋಗ್ವೇದದ ಮಂತ್ರಗಳೂ, ಸಾಮವೇದದ ಕೆಲವು ಮಂತ್ರಗಳೂ, ಹಾಗೆಯೇ ಗಾಯತ್ರ್ಯಾದಿ ಛಂದಸ್ಸುಗಳೂ, ಇವುಗಳ ಜೊತೆಗೆ ಯಜುರ್ವೇದವೂ ಆವಿರ್ಭವಿಸಿದವು.
11. ತಸ್ಮಾದಶ್ವಾ ಅಜಾಯಂತ | ಯೇ ಕೇ ಚೋಭಯಾದತಃ |
ಗಾವೋಹಜಙ್ಞಿರೇತಸ್ಮಾತ್ |
ತಸ್ಮಾಜ್ಜಾತಾ ಅಜಾವಯಃ ||
ಹನ್ನೊಂದನೆಯ ಮಂತ್ರ
ಆ ಯಜ್ಞದಿಂದಲೇ ಅಶ್ವಗಳೂ, ಎರಡು ಸಾಲು ಹಲ್ಲುಗಳುಳ್ಳ ಪ್ರಾಣಿಗಳೂ, ಗೋವುಗಳೂ, ಆಡು, ಕುರಿ ಮೊದಲಾದವುಗಳು ಹುಟ್ಟಿ ಬಂದವು
12. ಯತ್ಪುರುಷಂ ವ್ಯದಧುಃ | ಕತಿಥಾ ವ್ಯಕಲ್ಪಯನ್ |
ಮುಖಂ ಕಿಮಸ್ಯ ಕೌ ಬಾಹೂ | ಕಾವೂರೂ ಪಾದಾವುಚ್ಯೇತೇ ||
ಹನ್ನೆರಡನೆಯ ಮಂತ್ರ
ಈ ವಿರಾಟ್ ಪುರುಷನನ್ನು ಹವಿಸ್ಸಿನ ರೂಪದಲ್ಲಿ ಆಹುತಿ ಕೊಡಲು ಬಯಸಿದಾಗ ಅವನನ್ನು ಎಷ್ಟು ಪ್ರಕಾರವಾಗಿ ವಿಂಗಡಿಸಿದರು? ಇವನ ಮುಖವು ಯಾವುದಾಯಿತು? ಇವನ ಎರಡು ಬಾಹುಗಳು ಏನಾದವು? ಇವನ ಎರಡು ತೊಡೆಗಳು ಏನಾದವು? ಈತನ ಪಾದಗಳು ಏನಾದವು?
13. ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯಃ ಕೃತಃ |
ಊರೂ ತದಸ್ಯ ಯದ್ವೈಶ್ಯಃ | ಪದ್ಭ್ಯಾಗ್ಮ್ ಶೂದ್ರೋ ಅಜಾಯತ ||
ಹದಿಮೂರನೆಯ ಮಂತ್ರ
ಈತನ ಮುಖದಿಂದ ಬ್ರಾಹ್ಮಣರು ಹುಟ್ಟಿಬಂದರು. ಈತನ ಎರಡು ಬಾಹುಗಳಿಂದ ಕ್ಷತ್ರಿಯರು ಉದಯಿಸಿದರು. ಈತನ ಎರಡು ತೊಡೆಗಳಿಂದ ವೈಶ್ಯರು ಹೊರಬಂದರು. ಹಾಗೆಯೇ ಈತನ ಪಾದಗಳಿಂದ ಶೂದ್ರರು ಜನಿಸಿದರು.
14. ಚಂದ್ರಮಾ ಮನಸೋ ಜಾತಃ | ಚಕ್ಷೋಃ ಸೂರ್ಯೋ ಅಜಾಯತ |
ಮುಖಾದಿಂದ್ರಶ್ಚಾಗ್ನಿಶ್ಚ |
ಪ್ರಾಣಾದ್ವಾಯುರಜಾಯತ ||
ಹದಿನಾಲ್ಕನೆಯ ಮಂತ್ರ
ಈತನ ಮನಸ್ಸಿನಿಂದ ಚಂದ್ರನು ಜನಿಸಿದನು. ಈತನ ಎರಡು ಕಣ್ಣುಗಳಿಂದ ಸೂರ್ಯನು ಉದಯಿಸಿದನು. ಈತನ ಬಾಯಿಯಿಂದ ಇಂದ್ರ ಮತ್ತು ಅಗ್ನಿ ಹುಟ್ಟಿ ಬಂದರು. ಈತನ ಪ್ರಾಣದಿಂದವಾಯುವಿನ ಉತ್ಪನ್ನವಾಯಿತು.
15. ನಾಭ್ಯಾ ಆಸೀದಂತರಿಕ್ಷಂ | ಶೀರ್ಷ್ಣೋ ದ್ಯೌಃ ಸಮವರ್ತತ |
ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾತ್ | ತಥಾ ಲೋಕಾಗ್ಂಅಕಲ್ಪಯನ್ ||
ಹದಿನೈದನೆಯ ಮಂತ್ರ
ಭೂಮಿ ಮತ್ತು ಸ್ವರ್ಗದ ನಡುವಿನ ಸ್ಥಳವಾದ ಅಂತರಿಕ್ಷವು ಈತನ ನಾಭಿಯಿಂದ ಹೊರಹೊಮ್ಮಿತು. ಈತನ ಶಿರಸ್ಸಿನಿಂದ ಸ್ವರ್ಗ ಲೊಕವು ಹುಟ್ಟಿತು,. ಅಂತೆಯೇ ಪಾದಗಳಿಂದ ಭೂಮಿಯೂ, ಕಿವಿಗಳಿಂದ ದಿಕ್ಕುಗಳೂ ಉತ್ಪನ್ನವಾದವು. ಇದರೊಂದಿಗೆ ಬೇರೆಲ್ಲಾ ಲೋಕಗಳೂ ಜತೆಸೇರಿ ಉದಯಿಸಿದವು
16. ವೇದಾಹಮೇತಂ ಪುರುಷಂ ಮಹಾಂತಮ್ | ಆದಿತ್ಯವರ್ಣಂ ತಮಸಸ್ತು ಪಾರೇ |
ಸರ್ವಾಣಿ ರೂಪಾಣಿ ವಿಚಿತ್ಯ ಧೀರಃ | ನಾಮಾನಿ ಕೃತ್ವಾಭಿವದನ್ ಯದಾಸ್ತೇ
ಹದಿನಾರನೆಯ ಮಂತ್ರ
ಈ ಸೃಷ್ಟಿಯ ಮಹಾನ್ ಕಾರ್ಯದಲ್ಲಿ ನನ್ನನ್ನು ನಾನು ಹೇಗೆ ಸಮೀಕರಿಸಿಕೊಳ್ಳಲಿ? ಈ ವಿರಾಟ್
ಪುರುಷನು ವಿವಿಧ ರೂಪಗಳಲ್ಲಿ, ವಿವಿಧ ರೀತಿಗಳಲ್ಲಿ ಸ್ವಯಂ ತಾನೇ ತನ್ನನ್ನು ನಿವೇದಿಸಿಕೊಂಡಿದ್ದಾನೆ. ನಾನೇನು ಮಾಡಲಿ? ನಾನು ಆತನನ್ನುಅರಿಯಬೇಕು.ನನಗೆತಿಳಿದಿದೆ. ಈ ಮಹಾಪುರುಷನು, ಜ್ಞಾನಿಯಾದವನು. ನಾನಾ ವಿಧದ ಹೆಸರುಗಳನ್ನು ಮತ್ತು ರೂಪಗಳನ್ನು ಸೃಷ್ಟಿಸಿದವನಾಗಿ ಮತ್ತು ಅವುಗೊಳೊಂದಿಗೆ ತನ್ನೆಲ್ಲಾ ಜ್ಞಾನದಿಂದ ವ್ಯವಹರಿಸಿ, ಅಜ್ಞಾನವೆಂಬ ಕತ್ತಲಿನಿಂದಾಚೆಗೆ ಪ್ರಕಾಶದಿಂದ ಹೊಳೆಯುವ ಸೂರ್ಯನಂತೆ ನಿಂತಿರುವನು. ಮಹಾನ್ ಪುರುಷನಾದ ಆತನನ್ನು ನಾನು ಅರಿತಿರುವೆನು.
17. ಧಾತಾ ಪುರಸ್ತಾದ್ಯಮುದಾಜಹಾರ | ಶಕ್ರಃ ಪ್ರವಿದ್ವಾನ್–ಪ್ರದಿಶಶ್ಚತಸ್ರಃ |
ತಮೇವಂ ವಿದ್ವಾನಮೃತ ಇಹ ಭವತಿ | ನಾನ್ಯಃ ಪಂಥಾ ಅಯನಾಯ ವಿದ್ಯತೇ ||
ಹದಿನೇಳನೆಯ ಮಂತ್ರ
ಬಹಳ ಹಿಂದೆಯೇ ಪ್ರಜಾಪತಿಯು ಈ ಪುರುಷನನ್ನು ಪ್ರಶಂಸಿಸಿ ಸ್ತುತಿಸಿರುವನು. ನಾಲ್ಕು ದಿಕ್ಕುಗಳನ್ನೂ, ಅಲ್ಲಿರುವ ಜೀವಸಂಕುಲವನ್ನೂ ಚೆನ್ನಾಗಿ ಬಲ್ಲ ಇಂದ್ರನು ಈತನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ಪ್ರಕಟಪಡಿಸಿರುವನು. ಅಂತಹ ಆ ವಿರಾಟ್ ಪುರುಷನನ್ನು ಮೇಲೆ ಪ್ರತಿಪಾದಿಸಿದಂತೆ ಯಾರು ಅರಿತುಕೊಂಡಿರುವರೂ ಅವರು ಇಲ್ಲಿಯೇ ಅಮೃತತ್ವವನ್ನು ಅಂದರೆ ಮೋಕ್ಷವನ್ನು ಹೊಂದುತ್ತಾರೆ. ಇಲ್ಲಿಯೇ, ಈ ಜನ್ಮದಲ್ಲಿಯೇ ಮುಕ್ತಿಯೆಂಬ ಅಮೃತವನ್ನು ಹೊಂದಲು, ವಿರಾಟ್ ಪುರುಷನಾದ ಈತನ ಬಗ್ಗೆ ಅರಿವನ್ನು ಹೊಂದುವುದಕ್ಕಿಂತ ಬೇರೊಂದು ದಾರಿಯಿಲ್ಲ.
18. ಯಜ್ಞೇನ ಯಙ್ಞಮಯಜಂತ ದೇವಾಃ | ತಾನಿ ಧರ್ಮಾಣಿ ಪ್ರಥಮಾನ್ಯಾಸನ್ |
ತೇ ಹ ನಾಕಂ ಮಹಿಮಾನಃ ಸಚಂತೇ | ಯತ್ರ ಪೂರ್ವೇ ಸಾಧ್ಯಾಸ್ಸಂತಿ ದೇವಾಃ ||
ಹದಿನೆಂಟನೆಯ ಮಂತ್ರ
ಆತನೊಂದಿಗೇ ಯಜ್ಞವನ್ನು ಆಚರಿಸಿ ಆತನನ್ನೇ ಆಹುತಿಯನ್ನಾಗಿ ಮಾಡಿ, ಯಜ್ಞಸ್ವರೂಪನಾದ ಪುರುಷನನ್ನು ಈ ರೀತಿ ದೇವತೆಗಳು ಪೂಜಿಸಿದರು. ದೇವತೆಗಳು ಹುಟ್ಟುಹಾಕಿ, ವಿಸ್ತರಿಸಿದ ಆ ಯಜ್ಞ ವಿಧಾನಗಳೇ ಪ್ರಾಥಮಿಕ ಧರ್ಮಗಳಾದವು. ಪೂರ್ವದಲ್ಲಿ ದೇವತೆಗಳೂ ಮತ್ತು ಸಾಧ್ಯರೂ ಹೊಂದಿದ ಸ್ವರ್ಗಸ್ಥಾನವನ್ನೇ, ವಿರಾಟ್ ಪುರುಷನ ಉಪಾಸಕರಾದ ಮಹಾತ್ಮರು ಹೊಂದುತ್ತಾರೆ
19. ಅದ್ಭ್ಯಃ ಸಂಭೂತಃ ಪೃಥಿವ್ಯೈರಸಾಚ್ಚ | ವಿಶ್ವಕರ್ಮಣಸ್ಸಮವರ್ತತಾಧಿ |
ತಸ್ಯ ತ್ವಷ್ಟಾ ವಿದಧದ್ರೂಪಮೇತಿ | ತತ್ಪುರುಷಸ್ಯ ವಿಶ್ವಮಾಜಾನಮಗ್ರೇ ||
ಉತ್ತರ ನಾರಾಯಣ
ಹತ್ತೊಂಬತ್ತನೆಯ ಮಂತ್ರ
ಎಲ್ಲೆಲ್ಲೂ ವ್ಯಾಪಿಸಿರುವ ನೀರಿನಿಂದಲೂ , ಪೃಥ್ವಿಯ ರಸದಿಂದಲೂ, ವಿರಾಟ್ ಪುರುಷ ಎಂದು ಕರೆಯಿಸಿಕೊಳ್ಳುವ ಶ್ರೇಷ್ಠ ಪುರುಷನ ಅಭಿವ್ಯಕ್ತಿಯಾಯಿತು. ನಿಶ್ಚಯವಾಗಿಯೂ ಆತನು ಪರಮಪುರುಷನಿಂದ ಉದ್ಭವಿಸಿರುವವನಾಗಿದ್ದಾನೆ. “ತ್ವಷ್ಟಾ” ಎಂದರೆ ಸೃಷ್ಟಿಕರ್ತನಾಗಿ ಪರಮಪುರುಷನು ಹದಿನಾಲ್ಕು ಲೋಕಗಳನ್ನುಸೃಷ್ಟಿಸಿದನು. ವಿಸ್ತಾರವಾದ ಬ್ರಹ್ಮಾಂಡವನ್ನು ಸೃಷ್ಟಿಸಿದ ನಂತರ, ಬಹಳ ಕಾಲದವರೆಗೂ ಆತನು ಆ ವಿಸ್ತರಿಸಿದ ಬ್ರಹ್ಮಾಂಡದ ಮೇಲೆ ಪಸರಿಸಿರುತ್ತಾನೆ. ಸೃಷ್ಟಿಯ ಆದಿಯಿಂದಲೂ ಆತನು ಅಲ್ಲಿಯೇ ಇದ್ದಾನೆ.
20. ವೇದಾಹಮೇತಂ ಪುರುಷಂ ಮಹಾಂತಮ್ | ಆದಿತ್ಯವರ್ಣಂ ತಮಸಃ ಪರಸ್ತಾತ್ |
ತಮೇವಂ | ವಿದ್ವಾನಮೃತ ಇಹ ಭವತಿ | ನಾನ್ಯಃ ಪಂಥಾ ವಿದ್ಯತೇಯನಾಯ ||
ಇಪ್ಪತ್ತನೆಯ ಮಂತ್ರ
“ಮಹಾಮಹಿಮನೂ, ಅಜ್ಞಾನವೆಂಬ ತಮಸ್ಸಿನ ಸೀಮೆಯಿಂದ ಬಹಳ ಆಚೆ ಇರುವವನೂ, ಆದಿತ್ಯನಂತೆ ಪ್ರಕಾಶಮಾನನೂ ಆದ ಪುರುಷನನ್ನು ನಾನು ತಿಳಿದುಕೊಂಡಿರುವೆನು. ಆತನನ್ನು ಅರಿತುಕೊಂಡಿರುವವನು ಇಲ್ಲಿಯೂ ಸಹ ಅಮೃತತ್ವವನ್ನು ಹೊಂದುತ್ತಾನೆ. ಇಲ್ಲೇ ಮತ್ತು ಈಗಲೇ ದೊರಕುವ ಅಮೃತತ್ವಕ್ಕೆ ಇದೊಂದೇ ದಾರಿ. ಇದನ್ನು ಬಿಟ್ಟು ಬೇರೆ ದಾರಿಯಿಲ್ಲ”
21. ಪ್ರಜಾಪತಿಶ್ಚರತಿ ಗರ್ಭೇ ಅಂತಃ | ಅಜಾಯಮಾನೋ ಬಹುಧಾ ವಿಜಾಯತೇ |
ತಸ್ಯ ಧೀರಾಃ ಪರಿಜಾನಂತಿ ಯೋನಿಂ | ಮರೀಚೀನಾಂ ಪದಮಿಚ್ಛಂತಿ ವೇಧಸಃ |
ಇಪ್ಪೊತ್ತೊಂದನೆಯ ಮಂತ್ರ
ಸಕಲ ಅಸ್ತಿತ್ವಗಳ ಒಡೆಯನಾದ ಪ್ರಜಾಪತಿಯು ಈ ವಿಶ್ವದ ಗರ್ಭದೊಳಗೆ ಅಂತರ್ಯಾಮಿಯಾಗಿ ಸಂಚರಿಸುತ್ತಿರುತ್ತಾನೆ. ಅವನು ಜನ್ಮರಹಿತನಾಗಿದ್ದರೂ ಸಹ ವಿವಿಧ ಅವತಾರಗಳಲ್ಲಿ ಜನ್ಮ ತಳೆಯುತ್ತಾನೆ. ಈ ಬ್ರಹ್ಮಾಂಡದ ಮೂಲಸ್ಥಾನ ಮತ್ತು ಆಕರವು ಈತನೇ ಎಂಬುದಾಗಿ ಜ್ಞಾನಿಗಳಿಗೆ ತಿಳಿದಿದೆ. ಅನುಷಂಗಿಕ ಸೃಷ್ಟಿಕ್ರಿಯೆಯ ಹೊಣೆ ಹೊತ್ತಿರುವ ಬ್ರಹ್ಮ ಮತ್ತು ಇತರ ಸಮ್ಯಕ್ ಜ್ಞಾನಿಗಳು ಮರೀಚಿ ಮತ್ತು ಇತರ ಋಷಿಗಳು ಪಡೆದ ಉತ್ಕೃಷ್ಟ ಪದವಿಯನ್ನು ಹೊಂದಲು ಬಯಸುತ್ತಾರೆ.
22. ಯೋ ದೇ॒ವೇಭ್ಯ॒ ಆತ॑ಪತಿ | ಯೋ ದೇವಾನಾಂ ಪುರೋಹಿತಃ |
ಪೂರ್ವೋ ಯೋ ದೇವೇಭ್ಯೋ ಜಾತಃ | ನಮೋ ರುಚಾಯ ಬ್ರಾಹ್ಮಯೇ
ಇಪ್ಪತ್ತೆರಡನೆಯ ಮಂತ್ರ
ಯಾರು ಉಜ್ವಲವಾದ ತೇಜಸ್ಸಿನಿಂದ ಇರುವನೋ, ಯಾರು ದೇವತೆಗಳ ಮೇಲೆ ತನ್ನ ತೇಜಹ್ಪುಂಜವನ್ನು ಹರಿಸುತ್ತಾನೆಯೋ, ಯಾರು ದೇವತೆಗಳಿಗೆ ಗುರುವಾಗಿರುವನೋ ಮತ್ತು ದೇವತೆಗಳ ಶಾಸ್ತ್ರವಿಧಿಗಳನ್ನು ನಡೆಸಿಕೊಡುವ ಪುರೋಹಿತನಾಗಿರುವನೋ ಯಾರು ದೇವತೆಗಳು ಅಸ್ತಿತ್ವಕ್ಕೆ ಬರುವುದಕ್ಕಿಂತಲೂ ಬಹಳ ಮೊದಲೇ ಅಭಿವ್ಯಕ್ತನಾಗಿದ್ದನೋ, ಆ ಸ್ವಯಂಪ್ರಕಾಶನಾದ ಬ್ರಹ್ಮನಿಗೆ ನಮ್ಮ ಪ್ರಣಾಮಗಳು.
23. ರುಚಂ ಬ್ರಾಹ್ಮಂ ಜನಯಂತಃ | ದೇವಾ ಅಗ್ರೇ ತದಬ್ರುವನ್ |
ಯಸ್ತ್ವೈವಂ ಬ್ರಾಹ್ಮಣೋ ವಿದ್ಯಾತ್ | ತಸ್ಯ ದೇವಾ ಅಸನ್ ವಶೇ ||
ಇಪ್ಪತ್ಮೂರನೆಯ ಮಂತ್ರ
ಆತನ ಬಗೆಗಿನ ಸತ್ಯವನ್ನು ವಿವರಿಸುವಾಗ, ತೇಜೋವಂತರಾದ ದೇವತೆಗಳು, ಮೊದಲಿಗೆ ಆತನನ್ನು ಉದ್ದೇಶಿಸಿ ಹೀಗೆಂದು ಹೇಳಿದರು:
“ ಯಾರು ನಿನ್ನನ್ನು ಅರಿತಿರುವರೋ ಮತ್ತು ನಿನ್ನನ್ನು ಸ್ಪಷ್ಟವಾಗಿ ಗ್ರಹಿಸಿರುವರೋ ಅಂತಹ ಬ್ರಹ್ಮನ ಅನ್ವೇಷಕರಿಗೆ ದೇವತೆಗಳು ವಶರಾಗಿ ದಾಸರಾಗುತ್ತಾರೆ.”
24. ಹ್ರೀಶ್ಚ ತೇ ಲಕ್ಷ್ಮೀಶ್ಚ ಪತ್ನ್ಯೌ | ಅಹೋರಾತ್ರೇ ಪಾರ್ಶ್ವೇ |
ನಕ್ಷತ್ರಾಣಿ ರೂಪಮ್ | ಅಶ್ವಿನೌ ವ್ಯಾತ್ತಮ್ |
ಇಷ್ಟಂ ಮನಿಷಾಣ | ಅಮುಂ ಮನಿಷಾಣ | ಸರ್ವಂ ಮನಿಷಾಣ ||
ಇಪ್ಪತ್ನಾಲ್ಕನೆಯ ಮಂತ್ರ
ದೇವತೆಗಳಾದ ” ಹ್ರೀ” ಅಂದರೆ ಗಾಂಭೀರ್ಯ ಮತ್ತು “ಶ್ರೀ” ಅಂದರೆ ಲಕ್ಷ್ಮಿ ಇವರು ನಿನ್ನ ಪತ್ನಿಯರು. ಅಹೋ ರಾತ್ರಿಗಳು ನಿನ್ನ ಪಾರ್ಶ್ವದ ಅವಯವಗಳು. ನಕ್ಷತ್ರಗಳು ನಿನ್ನ ರೂಪ. ಅಶ್ವಿನಿಗಳು ನಿನ್ನ ವಿಕಸಿತ ಮುಖಾರವಿಂದವು. ಓ ಪುರುಷನೇ ಆತ್ಮಜ್ಞಾನಕ್ಕಾಗಿ ನೀನು ನಮ್ಮ ಇಷ್ಟವನ್ನು ನೆರವೇರಿಸು. ವಿಶ್ವ ಕ್ಷೇಮಕ್ಕಾಗಿ ಅನುಗ್ರಹಿಸು. ನಮ್ಮೆಲ್ಲ ಅಗತ್ಯಗಳ ಪ್ರಾಪ್ತಿಗಾಗಿ ನಮ್ಮನ್ನು ಅನುಗ್ರಹಿಸು.
ಓಂ ತಚ್ಚಂ ಯೋರಾವೃಣೀಮಹೇ | ಗಾತುಂ ಯಙ್ಞಾಯ | ಗಾತುಂ ಯಙ್ಞಪತಯೇ | ದೈವೀ ಸ್ವಸ್ತಿರಸ್ತು ನಃ | ಸ್ವಸ್ತಿರ್ಮಾನುಷೇಭ್ಯಃ |
ಊರ್ಧ್ವಂ ಜಿಗಾತು ಭೇಷಜಮ್ | ಶಂ ನೋ ಅಸ್ತು ದ್ವಿಪದೇ | ಶಂ ಚತುಷ್ಪದೇ |
ಓಂ ಶಾಂತಿಃ ಶಾಂತಿಃ ಶಾಂತಿಃ ||
ಓಂ .
ಕೆಟ್ಟದ್ದನ್ನುತೊಡೆದುಹಾಕಿ ನಮಗೆ ಆನಂದವನ್ನು ಅನುಗ್ರಹಿಸುವ ಸಲುವಾಗಿ, ನಾವು ಆತನನ್ನು ಪ್ರಾರ್ಥಿಸುವೆವು. ಯಜ್ಞಕಾರ್ಯಗಳ ಶಾಸ್ತ್ರವಿಧಿಗಳನ್ನು ಯೋಗ್ಯವಾದ ರೀತಿಯಲ್ಲಿ ಆಚರಿಸುವಂತಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ದೈವಿಕ ಮತ್ತು ಶುಭಕಾರಕವಾದ ಆಶೀರ್ವಾದಗಳು ನಮ್ಮ ಮೇಲೆ ಅನುಗ್ರಹಿಸುವಂತಾಗಲಿ ಹಾಗೆಯೇ ಸಮಸ್ತ ಮನುಕುಲದ ಮೇಲೆಯೂ ಸಹ ಆತನ ಅನುಗ್ರಹ ಪ್ರಾಪ್ತವಾಗಲಿ! ದ್ವಿಪದಿಗಳು, ಚತುಷ್ಪದಿಗಳು ಆದ ಪ್ರಾಣಿ ಸಮೂಹಗಳೂ ಹಾಗೂ ವನಸ್ಪತಿಗಳೂ ಸಮೃದ್ಧವಾಗಿ ಅಭಿವೃದ್ಧಿ ಹೊಂದುವಂತಾಗಲಿ. ಸಕಲ ಜೀವಿಗಳ ಮೇಲೂ ಆರೋಗ್ಯ ಮತ್ತು ಅಭ್ಯುದಯದ ವೃಷ್ಟಿ ಸುರಿಯಲಿ.
ಓಂ ಶಾಂತಿಃ ಶಾಂತಿಃ ಶಾಂತಿ