Sanathana Dharma
I : Principles and Practices
II: Svadharma: Nityakarma-anushthana
A Presentation by
Dr L.Adinarayana
Technical assistance by
Ms Ananya Apparaju
Prayer for Purification
This is a prayer for purification of speech.
Emphasis on purification or pavitrata.
Amba te charana dwandwam
aalambe brahmana priye
sthitva me manasambhoje
punihi vacanam mama
Amba: Mother
Alambe: I seek support and protection
Te charana dwandwam: from your two feet.
Brahmana priye: Oh Brahma’s Beloved,
Sthitwa: seated
Me manasambhoje: in the lotus of my mind,
Puneehi: purify
Mama Vachanam: my speech.
This Prayer – Sloka was written by my brother Lanka Krishna Murti.
Lanka Krishna Murti as you know is a man of very great character.
Whenever I think of him, I become immediately aware of the wonderful
facets of his personality.
He was very simple, honest, straightforwarl, loving, caring and compassionate.
He was a traditionalist with a modern outlook. it is a very important thing I noticed in him.
He followed the traditions — the Vedic traditions, but he was open to new ideas and then he was prepared to adopt himself to the changing situations.
He was a profound scholar, proficient in three languages:
Sanskrit, Telugu and Kannada.
And he was the Author of many works which were very thought-provoking..
In addition, he was a great artist. A lover of Art, particularly Music.
And Above all he was a committed activist who promoted values of Sanathana Dharma.
And he inspired thousands of people to understand and follow Dharmic values.
And to do this, he instituted Sanathana Dharma
Samrkshana Samsthe;
And to propagate the values the Sanatana Dharma, he ran a paper, as all of you know,
named Darma Prabha.
Let us try to understand some basic principles of
Sanathana Dharma
Post- instruction Vedic Advice
Let us go back to the Vedic days.
Whenever the Brahmacaharis
completed their Vedic Studies,
they were given the instruction –
the post instruction Vedic advice, as it is
called:
Vedamanuchya acharayah
Antevasinamanusasti:
satyam vada, dharmam chara,
swadhyayaan maa pramadah
Speak the Truth,
Practise Dharma and
Don’t deviate from Study
I want you to concentrate on these three aspects of the instruction.
One is — Speaking the Truth.
The other thing is practicing Dharma
and the third one is Study.
Three faculties in our body are engaged here.
One is the Speech.
The second one is the Action and
the third one is the mind– your thinking.
These are the three important dimensions of our body. We have the physical body to act. We have the speech faculty and then we have the mind to think.
How to practice this Dharma and what happens if we practice it and what happens if we don’t practice it.
Let us go back to Manu Dharma Shastra and there you find this Shloka:
dharmo rakshati raksitah
Dharma eva hato hanti
The first part of it says that “Dharma eva hato hanti” that is, if Dharma is not respected , if Dharma is not practiced, if one kills Dharma, then Dharma kills him.
Dharma hato hanti. When Dharma is killed, it kills the person who kills Dharma.
Then we have the classic example of Mahabharata where Adharma that was practised by Kauravas led to large scale destruction and then to total deovastation.
Whereas,if you respect Dharma, or follow Dharma ,it protects you.
We have the classic example of Sri Rama in the Ramayana.
He followed Dharma. At every instance, he acted according to Dharma. Thereby, we have the famous saying:
Ramo Vigrahavan Dharmah.
He is the very embodiment of Dharma.
Therefore this is the importance and value of Dharma –
That if you respect it, it will save you. If you decline it, if you destroy it, it will destroy you.
The present context
Now what is Dharma and how, or at what stage, this Dharma is.
A variety of issues cause concern and anxiety in the times of today:
To mention a few, they are:
Large scale Corruption everywhere;
Nepotism and favoritism;
Gender discrimination;
Caste discrimination;
Intolerance;
Violence;
Econonomic disparity;
Environmental pollution;
Health issues like depression, obesity and stress-related problems.
Serious Imbalance
When you look at these issues — the problems you are facing –
There seems to be some serious imbalance in the functioning and management of human affairs.
How should we respond to this? –
That is the question everyone will have to ask.
Change of attitude
In the present scenario, what is it that we can do, when there is so much deviation from Dharma, when there is so much of imbalance in the functioning of human affairs?
It may be possible to restore the balance of Dharma, the orderliness, if we initiate a change of attitude at the individual level
Each one of us should initiate a change of attitude and undertake to restore the dharmic balance.
Restoration of Dharmic balance
The tension between Dhama and Adharma was always there in every age, every period
and whenever there was some imbalance,
when Adharma gained the upper hand,
we have the statement made by the Lord in the Bhagavad Gita:
Yada yada hi dharmasya glanirbhavati bharata
Abhyutthanam adharmasya tadatmanam srjamyaham.
He says that whenever there is imbalance, Adharma, gaining upper hand, then He manifests himself in order to restore Dharmic balance.
Restoration of Dharmic balance
But, this has been so in the case of the earlier periods when Adharma was largely localized, –
it was concentrated in one particular point or a person or a place and the Lord manifested Himself to tackle that problem, that menace,
as in the case of Matsyavatara, Kurmavatara, Varahavatara or even Narasimhavatara.
He came and killed Hiranyakashipu, and thereby he restored the Dharmic balance.
But when we come to the later stages, we find that this Adharma is not concentrated in a person or in a place or in a particular situation.
It is wide-spread. When Adharma is on a large scale, wide scale, what should we do?
Krishna says whenever there is Adharma, I will manifest myself –
Abhyutthanam adharmasya tadatmanam srjamyaham.
What does he do when he manifests himself?
He says Paritranaya Sadhunam Vinashaya Cha Dushkrutam Dharma Samsthapanarthaya Sambhavami Yuge Yuge.
It is what he did on several occasions.
But when Adharma is on such a wide, large scale, how to tackle this?
In the Krishnavatara, He has Himself given us a solution to this. He has stated that whenever there is Adharma He will manifest himself. That is the purpose of his manifestation. He will restore Dharmic balance.
But He doesn’t say how?.
How to restore this Dharmic balance?
In the sama Bhagavad Gita He shows how the Dharmic balance has to be established.
Krishna shows how to restore this Dharmic balance.
It is at the individual level that the action should be initiated.
Because of Adharma, Arjuna was baffled and he was paralyzed completely and then he approached Krishna for his help and message.
Krishna teaches him, enlightens him, on several aspects like Philosophy, Morality, Yoga, Bhakti, Sanyasa. All these things were inculcated to him and thereby Arjuna, the individual, gets enlightened and in the 18th Chapter Arjuna says:
“ Nasto mohah smrtir labdha”.
My delusion is gone and I have realized who I am really and now I am going to do my Swadharma.
“ Tava vachanam karishye”.
I shall do thy bidding, I will act as you have instructed me.
Individual responsibility
So, this is what every individual has to do. He has to realize his own importance, his own responsibility and then he must act in such a way that he will generate waves of Dharma and then ultimately help the entire society to regain its Dharmic values.
Categories of dharma
My brother used to talk a great deal about this Dharma and then he used to categorise these Dharmas into two categories
General dharmas and
Special dharmas
Saamanya Dharmas
General dharmas or Samaanya dharmas are:
a. ahimsa
b. satya
c. asteya. Asteya means not getting anything without permission. Not grabbing.
d. shaucha (Purity)
e. indriya nigraha i.e. control over the organs of perception and the organs of action.
f. daana (Charity)
g. dama (Control over the inner instruments, Anthahkarana: Manas, Buddhi, Ahankara and Chitta)
h. Daya and
i. Kshaanti ( Kshaanti means Tolerance,ie remaining calm and quiet , balanced, even when somebody provokes us.)
Visesha Dharmas
Visesha Dharmas include:
A. varnaasrama dharma or svadharma
B. prayer and worship
C. observance of vratas
D. penance and
E. visiting holy places
Svadharma: 1
I want to concentrate on Svadharma at the individual level, because I suggested that every individual has to initiate the process of reviving Dharma.
Therefore, this Svadharma is a very important aspect.
We learn from Manu, in his Manu Dharma Shastra, that God created this Universe and He divided the entire humanity into four categories.
According to Manu:
“to protect this whole creation, the lustrous one made separate innate activities for those born of his mouth, arms, thighs and feet. For priests, he ordained teaching and learning, sacrificing for themselves and sacrificing for others, giving and receiving.” (1.88,89)
For a Brahmin, Svadharma, as stated by Manu,
is that he should learn and teach.
He should perform rituals and help others to perform them.
He should give Dana and he should also receive Dana.
What we find from Manu Dharma Shastra is that Svadharma is presented as a class-centric Dharma.
It applies to the entire class or class of people, like Brahmanas, Kshatriyas, Vaishyas, etc.
But we are talking about the individuals.
Svadharma: 2
We go to another Dharma Shastra called Yajnavalkya Smriti. Here, this is what we have about Svadharma:
“one should practise dharma that is appropriate to one’s power of intellect, financial status, ability to give expression to thoughts, education, occupation and social status.”
Here, the emphasis is on the individual and the individual capacities, capabilities, accomplishments,etc.
According to Manu, Swadharma is a group-centric activity. Whereas, when we come to Yajnavalkya Smriti, it is individual-centric as well as context- centric. In each context, we decide for ourselves, according to our power of intellect, what is right, what is proper for our Dharma.
Our Samskriti
This is the guiding principle of Svadharma.
These ideas of Dharma and Svadharma are required to be placed in the context of our culture.
We should know a little bit about the culture where all these principles developed, nourished and sustained the whole set of values for thousands of years.
Samskriti: the defining features
What are the characteristic features of the culture to which we belong?
1. The first important feature is that every act is done with due resolve and commitment. That is, we do Sankalpa –
We resolve in order to realize the four goals of human existence.
Dharma
Artha
Kaama
Moksha
This is the first important feature of our culture.
2. Then, every individual is bound by the laws of Karma.
The Theory of Karma, as all of you know, is
the principle by which an individual’s thoughts
and words and actions create consequences in the
present as well as in the future.
Then, it offers an ethical framework in which each bears responsibility and accountability for the choices freely made.
We have freedom to choose, freedom to act, but whatever we do will have
a consequence, will produce a result and we are responsible and accountable for the result made by our choice.
When there is possibility for everyone to make
and remake their lives,
many people ask, if there is free will in our culture.
Yes. There is free will. Though there is destiny, but we can alter the destiny by exercising our free will.
3. Then another important principle is Reincarnation or Punarjanama, as it is called.
The actions that we do, they may bear all the results in this Janma or some of them will be carried over to the next Janma.
Therefore, we believe in this theory of Reincarnation or Punarjanama.
Karma is not something about God acting arbitrarily. It has nothing to do with God. It has to do with something that we do and we face the consequences. We are accountable for the consequences of what we have done.
Nor is it a random occurrence.
Because there is something of a rule here.
If we sow an apple seed, we only get an apple, nothing else. Therefore, whatever action you do , it has its own consequence.. It is the individual ego that creates.
Ego the Aham.
By making choices, because choices are made, and actions are done, the consequences are faced by the ego and then ego is bound by the consequences. When the individual ego transforms itself and loses its separateness from the Ultimate Reality, such a release is called Liberation.
Liberation
So, Liberation or Moksha is just getting free from that bondage that Karma has imposed on us.
4. Now another defining feature of our culture is Inwardness.
I just made a mention of that. Yoga means looking in. This is Inwardness. Action is two-directional: outward-bound or inward-bound.
When an action is outward-bound, it is called pravritti ;
when it is inward-bound, it is called nivrtti.
This nivrtti is helpful in doing yogic practices like pranayama, dharana, dhyana, etc.
Our ancient rishis were able to attain deep meditative states in which they discovered and realized many valuable truths through this inwardness. It is not by the exercise of intellect that they realized these truths. It is only by looking into themselves, by getting into states of Meditation, deep states of Meditation, that they were able to realize many of these truths.
it is important to practice exploring the inner dimension.
5. Then another defining feature is the use to which human body is put.
I want you to pay some special attention to this particular aspect.
The human body, it is a very important instrument given to us by God. It is an instrument given to us to perform dharmic work. It is an instrument of knowing. Higher knowing is within the body.
The ancient rishis discovered several practices to bring about transformation through yoga and sadhana.
Each family in our culture traces its origin back to a particular rishi.
The legacy is passed on from generation to generation.
The concept of family as it developed in our samskriti promoted dharmic values in a practical manner, both by precept and practice.
It is of our culture and this concept of the family, the Hindu Joint Family, as it is called. It has several important features. Values were handed down from generation to generation. It is not like today when you read a book and try to understand and try to practice.
Knowledge and value systems were passed on, handed down, from generation to generation both by precept and practice. They were explaining these values and they were practicing these values and helping the next generation to acquire the practice.
Not satisfied with mere survival, however comfortable and technology-driven it might be, everyone should, through sadhana, seek the ultimate goal of Liberation.
The ancient rishis have set the example of
svadharma by doing tapas and svaadhyaaya.
Everyone according to our tradition is required
to observe the daily anushthaana, which is a set of
spiritual practices.
Then another important feature of our culture,– perhaps a very great legacy we have inherited,– is the discovery of Sanskrit by our ancient Rishis.
Sanskrit language was discovered and it has tremendous potential.
Sanskrit sounds are mantric in their vibrational
effect and reach deeper levels of consciousness to
effect transformation.
Prachara and Achara
My brother Lanka Krishna Murti tried all his time, with all the resources he had at his
command, to propagate Sanatana Dharma.
I have tried to highlight some of the basic principles of Sanatana Dharma, as exemplified
and propagated by my brother, Lanka Krishna Murti.
He devoted all his time to Dharma Prachara.
He inspired thousands of people to develop Dharmic awareness.
As one inspired by him, I wish to devote some time to deal with one
practical aspect of Svadharma, namely, Nitya Karma Anushtaana.
I conclude with this introduction to what I wanted to say about Svadharma today.
In the next session, I want to explain
1. what is meant by Anusthana,
2. what are its components and
3. how to practice this Anusthana every day.
It is a Nityakarma.
That is, one has to follow this everyday in order to
improve himself, his own personality and seek
higher levels of consciousness.
8-12(K) SM PRINCIPLES & PRACTICES
ದಿನಾಂಕ 21-6-2015 ರಂದು ಲಂಕಾ ಕೃಷ್ಣಮೂರ್ತಿ ಪ್ರತಿಷ್ಠಾನದ ವಾರ್ಷಿಕ ಸಮಾರಂಭದಲ್ಲಿ ಡಾ. ಎಲ್. ಆದಿನಾರಾಯಣರವರು ಮಾಡಿದ ಪ್ರಸ್ತುತಿ
ಸಾಧನ ಮಾರ್ಗ – ಸ್ವಧರ್ಮ– ಮೂಲ ತತ್ವಗಳು ಮತ್ತು ಆಚರಣೆಗಳು
ನಾಳೆ ಮುಂದುವರೆಯುತ್ತದೆ. ದಯವಿಟ್ಟು ನೋಡಿ
1.
ಸನಾತನ ಧರ್ಮ
1. ಮೂಲ ತತ್ವಗಳು ಮತ್ತು ಆಚರಣೆಗಳು.
2. ಸ್ವಧರ್ಮ : ನಿತ್ಯಕರ್ಮ – ಅನುಷ್ಠಾನ
ಪ್ರಸ್ತುತ ಪಡಿಸುವವರು :- ಡಾ. ಎಲ್. ಆದಿನಾರಾಯಣ.
ತಾಂತ್ರಿಕ ನೆರವು :- ಕುಮಾರಿ ಅನನ್ಯ ಅಪ್ಪರಾಜು.
2. ಪವಿತ್ರತೆಗಾಗಿ ಪ್ರಾರ್ಥನೆ.
ವಾಕ್ಕಿನ ಶುದ್ಧೀಕರಣಕ್ಕಾಗಿ ಈ ಪ್ರಾರ್ಥನೆ.
ಪವಿತ್ರತೆಯ ಪ್ರಾಮುಖ್ಯತೆ.
3,
ಅಂಬ ತೇ ಚರಣ ದ್ವಂದ್ವಂ
ಆಲಂಬೇ ಬ್ರಹ್ಮಣಪ್ರಿಯೇ
ಸ್ಥಿತ್ವಾ ಮೇ ಮಾನಸಾಂಭೋಜೇ
ಪುನೀಹಿ ವಚನಂ ಮಮ
ಅಂಬ: ತಾಯಿ
ಆಲಂಬೇ: ನಾನು ರಕ್ಷಣೆ ಮತ್ತು ಆಶ್ರಯವನ್ನು ಕೋರುತ್ತೇನೆ.
ತೇ ಚರಣ ದ್ವಂದ್ವಂ: ನಿನ್ನ ಎರಡು ಪಾದಗಳಲ್ಲಿ
ಬ್ರಹ್ಮಣಪ್ರಿಯೇ: ಓ ಬ್ರಹ್ಮನ ಅಚ್ಚುಮೆಚ್ಚಿನವಳೇ
ಸ್ಥಿತ್ವಾ : ಕುಳಿತಿರುವ
ಮೇ ಮಾನಸಾಂಭೋಜೇ: ನನ್ನ ಮನೋಕಮಲದಲ್ಲಿ
ಪುನೀಹಿ : ಪಾವನ ಮಾಡು
ಮಮ ವಚನಂ: ನನ್ನ ವಾಕ್ಕನ್ನು.
4.
ಲಂಕಾ ಕೃಷ್ಣಮೂರ್ತಿ
ಈ ಪ್ರಾರ್ಥನೆಯ ಶ್ಲೋಕವನ್ನು ನನ್ನ ಅಣ್ಣನವರಾದ ಲಂಕಾ ಕೃಷ್ಣಮೂರ್ತಿಯವರು ರಚಿಸಿರುವರು.
ತಮಗೆಲ್ಲರಿಗೂ ತಿಳಿದಿರುವಂತೆ ಲಂಕಾ ಕೃಷ್ಣಮೂರ್ತಿಯವರು ಉನ್ನತ ಚಾರಿತ್ರ್ಯವುಳ್ಳ ವ್ಯಕ್ತಿ.
ಅವರನ್ನು ನಾನು ನೆನೆದಾಗಲೆಲ್ಲ ಬೆರಗುಗೊಳಿಸುವ ಅವರ ವ್ಯಕ್ತಿತ್ವದ ಬಹುಮುಖ ಪ್ರತಿಭೆ ತಕ್ಷಣವೇ ನನ್ನ ಅರಿವಿಗೆ ಬರುತ್ತದೆ.
5.
ಅವರು ಅತ್ಯಂತ ಸರಳ ಜೀವಿಯಾಗಿದ್ದರು. ಹಾಗೆಯೇ ನೇರನಡೆನುಡಿಯ, ಪ್ರಾಮಾಣಿಕ, ದಯಾಳು, ಇತರರ ಬಗ್ಗೆ ಕಾಳಜಿಯುಳ್ಳ ಪ್ರೀತಿ ಪಾತ್ರರಾದ ವ್ಯಕ್ತಿಯಾಗಿದ್ದರು. ಅವರು ಸಂಪ್ರದಾಯವಾದಿಯಾಗಿದ್ದರೂ ಸಹ ಆಧುನಿಕ ದೃಷ್ಟಿಕೋನ ಉಳ್ಳವರಾಗಿದ್ದದ್ದು ನಾನು ಅವರಲ್ಲಿ ಕಂಡ ಮುಖ್ಯ ಸಂಗತಿ. ಅವರು ಸಂಪ್ರದಾಯಗಳನ್ನು, ಅದರಲ್ಲೂ ವೈದಿಕ ಆಚಾರಗಳನ್ನು ಅನುಸರಿಸುತ್ತಿದ್ದರೂ ಸಹ, ಹೊಸ ವಿಚಾರಧಾರೆಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಬದಲಾಗುವ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಂದಿಕೊಳ್ಳುತ್ತಿದ್ದರು. ಅವರು ಪ್ರಜ್ಞಾವಂತ ವಿದ್ವಾಂಸರಾಗಿದ್ದರು. ಸಂಸ್ಕೃತ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಅಗಾಧವಾದ ಪಾಂಡಿತ್ಯ ಹೊಂದಿದ್ದರು. ವಿಚಾರ ಪ್ರಚೋದಕವಾದ ಹಲವಾರು ಕೃತಿಗಳ ಕರ್ತೃ ಇವರಾಗಿದ್ದಾರೆ.
6.
ಇಷ್ಟಲ್ಲದೆ ಅವರೊಬ್ಬ ಉತ್ತಮ ಚಿತ್ರಕಲಾವಿದರಾಗಿದ್ದರು. ಕಲಾಪ್ರೇಮಿ. ಅದರಲ್ಲೂ ಪ್ರಮುಖವಾಗಿ ಸಂಗೀತ ಪ್ರೇಮಿಯಾಗಿದ್ದರು. ಇವೆಲ್ಲಕ್ಕೂ ಮಿಗಿಲಾಗಿ ಸನಾತನ ಧರ್ಮದ ಮೌಲ್ಯಗಳನ್ನು ಪ್ರಚುರಪಡಿಸುವ ಸಲುವಾಗಿ ಟೊಂಕಕಟ್ಟಿ ಕಾರ್ಯನಿರತರಾಗಿದ್ದರು. ಈ ಕಾರ್ಯದಲ್ಲಿ ಯಶಸ್ಸನ್ನು ಕಂಡ ಅವರು ಧರ್ಮದ ಧ್ಯೇಯಗಳನ್ನು ಅರಿತು ಪಾಲಿಸಲು ಸಾವಿರಾರು ಮಂದಿಗೆ ಸ್ಪೂರ್ತಿಯನ್ನುಂಟು ಮಾಡಿದರು. ಇದನ್ನು ಮಾಡುವ ಸಲುವಾಗಿ “ ಸನಾತನ ಧರ್ಮ ಸಂರಕ್ಷಣ ಸಂಸ್ಥೆ” ಯನ್ನು ಹುಟ್ಟು ಹಾಕಿದರು. ಸನಾತನ ಧರ್ಮದ ಮೌಲ್ಯಗಳನ್ನು ಪಸರಿಸುವ ಸಲುವಾಗಿ ತಮಗೆಲ್ಲರಿಗೂ ತಿಳಿದಿರುವ “ಧರ್ಮ ಪ್ರಭ” ಎಂಬ ಮಾಸ ಪತ್ರಿಕೆಯನ್ನು ಹೊರತಂದು ನಡೆಸುತ್ತಿದ್ದರು.
7.
ಈಗ ನಾವು ಸನಾತನ ಧರ್ಮದ ಕೆಲವು ಮೂಲಭೂತ ತತ್ವಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.
8. ವೈದಿಕ ಉಪದೇಶದ ನಂತರದ ಬೋಧನೆ
ವೇದ ಕಾಲದ ದಿನಗಳಿಗೆ ನಾವು ಹೋಗೋಣ. ಬ್ರಹ್ಮಚಾರಿಗಳು ತಮ್ಮ ವೇದಾಧ್ಯಯನವನ್ನು ಮುಗಿಸಿದ ತರುವಾಯ, ಅವರಿಗೆ ವೈದಿಕ ಉಪದೇಶದ ನಂತರದಬೋಧನೆಯೆಂದು ಕರೆಯಲಾಗುವ ಆದೇಶಗಳನ್ನು ನೀಡುತ್ತಿದ್ದರು.
ವೇದ ಮನೂಚ್ಯ ಆಚಾರ್ಯೋ
ಅಂತೇ ವಾಸಿನಂ ಅನುಶಾಸ್ತಿ
9.
ಸತ್ಯಂ ವದ ಧರ್ಮಂ ಚರ
ಸ್ವಾಧ್ಯಾಯಾನ್ ಮಾ ಪ್ರಮದಃ
ಸತ್ಯವನ್ನು ನುಡಿ, ಧರ್ಮವನ್ನು ಆಚರಿಸು ಮತ್ತು ಅಧ್ಯಯನದಿಂದ ವಿಮುಖನಾಗಿ ಅಡ್ಡದಾರಿ ಹಿಡಿಯದಿರು.
10.
ಈ ಬೋಧನೆಯ ಮೂರು ವಿಚಾರಗಳ ಬಗ್ಗೆ ನೀವು ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ನಾನು ಬಯಸುತ್ತೇನೆ.
ಮೊದಲನೆಯದು – ಸತ್ಯವನ್ನು ನುಡಿಯುವುದು.
ಎರಡನೆಯದು– ಧರ್ಮವನ್ನು ಆಚರಿಸುವುದು ಮತ್ತು
ಮೂರನೆಯದು– ಅಧ್ಯಯನ ಮಾಡುವುದು.
ಇಲ್ಲಿ ನಮ್ಮ ಮೂರು ಶಾರೀರಿಕ ಸಾಮರ್ಥ್ಯಗಳು ತೊಡಗಿಸಿಕೊಳ್ಳುತ್ತವೆ.
ಮೊದಲನೆಯದು– ಮಾತು
ಎರಡನೆಯದು– ಕೃತಿ ಮತ್ತು
ಮೂರನೆಯದು– ಮನಸ್ಸು– ನಿಮ್ಮ ವಿವೇಚನೆ ಅಂದರೆ ಬುದ್ಧಿ
ಇವೇ ನಮ್ಮ ಶರೀರದ ಮೂರು ಮುಖ್ಯ ಆಯಾಮಗಳು. ಕ್ರಿಯೆಯನ್ನು ಮಾಡಲು ನಮಗೆ ಭೌತಿಕ ಶರೀರವಿದೆ. ನಮಗೆ ಮಾತಿನ ಸಾಮರ್ಥ್ಯವೂ ಇದೆ ಮತ್ತು ಯೋಚನೆ ಮಾಡಲು ಮನಸ್ಸು ಸಹ ಇದೆ.
11.
ಧರ್ಮವನ್ನು ಹೇಗೆ ಆಚರಿಸುವುದು ಮತ್ತು ಧರ್ಮವನ್ನು ಆಚರಿಸುವುದರಿಂದ ಏನಾಗುತ್ತದೆ ಹಾಗೂ ಆಚರಿಸಲಿಲ್ಲವೆಂದರೆ ಏನಾಗುತ್ತದೆ.?
ನಾವು ಮನುಧರ್ಮಶಾಸ್ತ್ರವನ್ನು ಗಮನಿಸಿದರೆ ಅಲ್ಲಿ ನಿಮಗೆ ಈ ಶ್ಲೋಕ ಕಂಡುಬರುತ್ತದೆ.
12.
ಧರ್ಮ ಏವ ಹತೋ ಹಂತಿ.
ಧರ್ಮೋ ರಕ್ಷತಿ ರಕ್ಷಿತಃ.
13. ಈ ಶ್ಲೋಕದ ಮೊದಲ ಭಾಗವಾದ “ಧರ್ಮ ಏವ ಹತೋ ಹಂತಿ” ಹೇಳುವುದೇನೆಂದರೆ ಧರ್ಮವನ್ನು ಗೌರವಿಸಲಿಲ್ಲವೆಂದರೆ, ಧರ್ಮವನ್ನು ಆಚರಿಸಲಿಲ್ಲವೆಂದರೆ, ಯಾರಾದರೂ ಧರ್ಮವನ್ನು ಕೊಂದರೆ, ಆಗ ಧರ್ಮ ಅವರನ್ನು ಸಂಹರಿಸುತ್ತದೆ.
ಧರ್ಮ ಹತೋ ಹಂತಿ. ಧರ್ಮವು ಕೊಲ್ಲಲ್ಪಟ್ಟಾಗ, ಯಾರು ಧರ್ಮವನ್ನು ಕೊಂದರೋ ಅವರನ್ನು ಅದು ಸಂಹರಿಸುತ್ತದೆ.
ಮಹಾಭಾರತದಲ್ಲಿ ಅಧರ್ಮವನ್ನು ಪಾಲಿಸಿದ ಕೌರವರಲ್ಲಿ ದೊಡ್ಡಪ್ರಮಾಣದಲ್ಲಿ ಅಳಿವುಂಟಾಗಿ ಕೊನೆಗೆ, ಅವರ ಸಂಪೂರ್ಣ ವಿನಾಶಕ್ಕೆ ಎಡೆ ಮಾಡಿಕೊಟ್ಟ ಉತ್ತಮ ನಿದರ್ಶನವಿದೆ.
ಹಾಗಲ್ಲದೆ ಯಾರು ಧರ್ಮವನ್ನು ಗೌರವಿಸುತ್ತಾರೆಯೋ ಅಥವಾ ಧರ್ಮವನ್ನು ಅನುಸರಿಸುತ್ತಾರೆಯೋ ಅವರನ್ನು ಧರ್ಮವು ಕಾಪಾಡುತ್ತದೆ.
ಇದಕ್ಕೆ ರಾಮಾಯಣದ ಶ್ರೀರಾಮನೇ ಉತ್ತಮ ದೃಷ್ಟಾಂತ.
ರಾಮನು ಧರ್ಮವನ್ನು ಅನುಸರಿಸಿದನು. ಪ್ರತಿಯೊಂದು ಸಂದರ್ಭದಲ್ಲಿಯೂ ಅವನು ಧರ್ಮಕ್ಕೆ ಅನುಗುಣವಾಗಿ ವರ್ತಿಸಿದನು. ಹಾಗಾಗಿ ಈ ಪ್ರಖ್ಯಾತ ನುಡಿಗಟ್ಟಿದೆ.
ರಾಮೋ ವಿಗ್ರಹವಾನ್ ಧರ್ಮಃ
ರಾಮನು ಧರ್ಮದ ಪ್ರತಿರೂಪ
ಆದುದರಿಂದ ಧರ್ಮದ ಪ್ರಾಮುಖ್ಯತೆ ಹಾಗೂ ಮೌಲ್ಯವೇನೆಂದರೆ ನೀವು ಅದನ್ನು ಗೌರವಿಸಿದರೆ ಅದು ನಿಮ್ಮನ್ನು ಉಳಿಸುತ್ತದೆ. ನೀವು ಅದನ್ನು ತಿರಸ್ಕರಿಸಿದರೆ, ನೀವು ಅದನ್ನು ನಾಶಮಾಡಿದರೆ ಅದು ನಿಮ್ಮನ್ನು ನಾಶಮಾಡುತ್ತದೆ.
14. ಈಗಿನ ಸಂದರ್ಭ
ಈಗಿನ ಸಂದರ್ಭದಲ್ಲಿ ಧರ್ಮವೆಂದರೇನು ಮತ್ತು ಧರ್ಮವು ಹೇಗಿದೆ ಅಥವಾ ಯಾವ ಘಟ್ಟದಲ್ಲಿ ಈ ಧರ್ಮವು ಇದೆ. ಈಗಿನ ಕಾಲದಲ್ಲಿ ಹಲವಾರು ವಿಚಾರಗಳು ನಮ್ಮನ್ನು ಚಿಂತೆ ಮತ್ತು ಆತಂಕಕ್ಕೆ ಈಡು ಮಾಡುತ್ತವೆ. ಕೆಲವೊಂದನ್ನು ಪ್ರಸ್ತಾವಿಸಬೇಕೆಂದರೆ ಅವು:
ಎಲ್ಲೆಡೆಯೂ ದೊಡ್ಡ ಪ್ರಮಾಣದಲ್ಲಿರುವ ಭ್ರಷ್ಟಾಚಾರ.
ಜಾತಿ ಮತ್ತು ಪಕ್ಷಪಾತ.
ಲಿಂಗ ಭೇದ.
ಜಾತಿ ಭೇದ
ಅಸಹಿಷ್ಣುತೆ.
ಹಿಂಸೆ.
15.
ಆರ್ಥಿಕ ಅಸಮತೆ.
ಪರಿಸರ ಮಾಲಿನ್ಯ.
ಖಿನ್ನತೆ, ಸ್ಥೂಲಕಾಯ ಮತ್ತು ಒತ್ತಡಸಂಬಂಧಿ ತೊಂದರೆ ಮುಂತಾದ ಆರೋಗ್ಯ ತೊಂದರೆಗಳು.
16.
ಗಂಭೀರ ಅಸಮತೋಲನೆ.
ನೀವು ಈ ವಿಚಾರಗಳ ಬಗ್ಗೆ ಗಮನ ಹರಿಸಿದಾಗ ನೀವು ಎದುರಿಸುತ್ತಿರುವ ತೊಂದರೆಗಳು–
ಮಾನವೀಯ ವಿಷಯಗಳ ಕಾರ್ಯದಲ್ಲಿ ಮತ್ತು ನಿರ್ವಹಣೆಯಲ್ಲಿ ತೀವ್ರವಾದ ಅಸಮತೋಲನೆಯು ಇರುವುದು ಗೋಚರಿಸುತ್ತದೆ.
ಇದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
ಈ ಪ್ರಶ್ನೆಯನ್ನು ಎಲ್ಲರೂ ಕೇಳಬೇಕಾಗಿದೆ.
17. ಮನೋವೃತ್ತಿಯಲ್ಲಿ ಬದಲಾವಣೆ
ಪ್ರಚಲಿತ ವಿದ್ಯಮಾನದಲ್ಲಿ, ಧರ್ಮದಿಂದ ಬಹಳಷ್ಟು ವಿಮುಖತೆ ಮತ್ತು ಮಾನವನ ಚಟುವಟಿಕೆಗಳಲ್ಲಿ ಬಹಳಷ್ಟು ಏರುಪೇರುಗಳಾಗುತ್ತಿರುವಂಥ ಸಂದರ್ಭದಲ್ಲಿ ನಾವು ಏನು ಮಾಡಬಹುದು?
ಪ್ತತಿಯೊಬ್ಬರೂ ತಮ್ಮ ಮನೋವೃತ್ತಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯಶೀಲರಾದರೆ ಧರ್ಮದ ಸಮತೋಲನವನ್ನು, ಕ್ರಮಬದ್ಧತೆಯನ್ನು ಪುನರ್ ಪ್ರತಿಸ್ಠಾಪಿಸಲು ಸಾಧ್ಯವಾಗುತ್ತದೆ.
ಹಾಗಾಗಿ ನಾವೆಲ್ಲರೂ ಧರ್ಮದ ಸಮತೋಲನವನ್ನು ಕಾಯ್ದುಕೊಳ್ಳುವ ಸಲುವಾಗಿ ನಮ್ಮ ನಮ್ಮ ಮನೋಧರ್ಮವನ್ನು ಬದಲಾಯಿಸಿಕೊಳ್ಳಲು ಪ್ರಾರಂಭಿಸಬೇಕು.
18. ಧಾರ್ಮಿಕ ಸಮತೋಲನದ ಪುನರ್ ಪ್ರತಿಷ್ಠಾಪನೆ
ಎಲ್ಲ ಕಾಲಮಾನದಲ್ಲೂ ಎಲ್ಲ ವೇಳೆಯಲ್ಲೂ, ಧರ್ಮ ಮತ್ತು ಅಧರ್ಮದ ನಡುವೆ ಸದಾ ಸಂಘರ್ಷ ಇರುತ್ತದೆ.
ಹಾಗೂ ಯಾವಾಗ ಅಸಮತೋಲನೆ ಇರುವುದೋ ಅದರಿಂದ
ಅಧರ್ಮವು ಮೇಲುಗೈಯನ್ನು ಸಾಧಿಸಿದಾಗ
ಭಗವದ್ಗೀತೆಯಲ್ಲಿ ಭಗವಂತನು ಕೊಟ್ಟ ಹೇಳಿಕೆ ನಮ್ಮಲ್ಲಿದೆ.
ಯದಾ ಯದಾಹಿ ಧರ್ಮಸ್ಯ ಜ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮ್ ಅಧರ್ಮಸ್ಯ ತದಾತ್ಮಾನಾಂ ಸೃಜಾಮ್ಯಹಂ
ಯಾವಾಗ ಧರ್ಮದ ಅಸಮತೋಲನವು ಉಂಟಾಗುತ್ತದೋ, ಅಧರ್ಮವು ಮೇಲುಗೈ ಸಾಧಿಸುತ್ತದೋ, ಆಗ ಭಗವಂತನು ಧರ್ಮದ ಪುನರ್ ಪ್ರತಿಷ್ಠಾನಕ್ಕೆ ಸ್ವಯಂ ಅವತರಿಸುತ್ತಾನೆ.
19.ಧಾರ್ಮಿಕ ಸಮತೋಲನೆಯ ಪುನರ್ ಸ್ಥಾಪನೆ
ಆದರೆ ಪ್ರಾಚೀನ ಕಾಲದಲ್ಲಿ ಅಧರ್ಮವು ನಿರ್ದಿಷ್ಟ ಸ್ಥಳಕ್ಕೆ ಸಂಬಂಧಿಸಿದಂತೆ ತಾಂಡವವಾಡುತ್ತಿರುವಾಗ ಧಾರ್ಮಿಕ ಸಮತೋಲನೆಯ ಪುನರ್ ಸ್ಥಾಪನೆ ಬೇಕಾಗುತ್ತಿತ್ತು.
ಒಂದು ನಿರ್ದಿಷ್ಟ ಬಿಂದುವಿನಲ್ಲಾಗಲೀ ಅಥವಾ ಸ್ಥಳದಲ್ಲಾಗಲೀ ಅಥವಾ ವ್ಯಕ್ತಿಯಲ್ಲಾಗಲೀ ಅಧರ್ಮವು ಕೇಂದ್ರೀಕೃತವಾಗಿದ್ದಾಗ ಭಗವಂತನು ಸ್ವಯಂ ಅವತರಿಸಿ ಆ ತೊಂದರೆಯನ್ನು ನಿವಾರಿಸುತ್ತಿದ್ದನು. ಮತ್ಸ್ಯಾವತಾರ, ಕೂರ್ಮಾವತಾರ, ವರಾಹಾವತಾರ ಅಥವಾ ನರಸಿಂಹಾವತಾರದಲ್ಲಿ ಇದನ್ನು ನಾವು ಗಮನಿಸುತ್ತೇವೆ.
ಭಗವಂತನು ಬಂದು ಹಿರಣ್ಯಕಷಿಪುವನ್ನು ಕೊಂದು ಧರ್ಮದ ಸಮತೋಲನೆಯನ್ನು ಉಳಿಸಿದನು.
20.ಧಾರ್ಮಿಕ ಸಮತೋಲನೆಯ ಪುನರ್ ಸ್ಥಾಪನೆ
ಆದರೆ ನಂತರದ ಕಾಲಮಾನದಲ್ಲಿ, ಅಧರ್ಮವು ಒಂದು ಸ್ಥಳಕ್ಕಾಗಲೀ, ಒಬ್ಬ ವ್ಯಕ್ತಿಗಾಗಲೀ ಅಥವಾ ಒಂದು ಸಂದರ್ಭಕ್ಕಾಗಲೀ ಸೀಮಿತವಾಗಿರಲಿಲ್ಲ.
ಅದು ಸರ್ವ ವ್ಯಾಪಿಯಾಯಿತು. ಅಧರ್ಮವು ಹೀಗೆ ಅಧಿಕ ಪ್ರಮಾಣದಲ್ಲಿ ಹರಡಿದಾಗ ನಾವು ಏನು ಮಾಡಬೇಕು?
ಕೃಷ್ಣನು ಹೇಳುತ್ತಾನೆ ಯಾವಾಗ ಅಧರ್ಮವು ಹೆಚ್ಚಾಗುವುದೋ ನಾನು ಸ್ವಯಂ ಅವತರಿಸುತ್ತೇನೆ.
ಅಭ್ಯುತ್ಥಾನಮ್ ಅಧರ್ಮಸ್ಯ ತದಾತ್ಮಾನಾಂ ಸೃಜಾಮ್ಯಹಂ.
ಭಗವಂತನು ಅವತರಿಸಿದಾಗ ಏನು ಮಾಡುತ್ತಾನೆ?
ಭಗವಂತನು ಹೇಳುತ್ತಾನೆ– ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ.
ಅದನ್ನೇ ಆತನು ಹಲವು ಪ್ರಸಂಗಗಳಲ್ಲಿ ಮಾಡಿದನು.
ಆದರೆ ಅಧರ್ಮವು ಅತಿಯಾದಾಗ, ಅಳತೆ ಮೀರಿದಾಗ ಅದನ್ನು ಹೇಗೆ ನಿಭಾಯಿಸುವುದು?
21.ಧಾರ್ಮಿಕ ಸಮತೋಲನದ ಪುನರ್ ಪ್ರತಿಷ್ಠಾಪನೆ
ಕೃಷ್ಣಾವತಾರದಲ್ಲಿ ಭಗವಂತನು, ಸ್ವಯಂ ತಾನೇ ಇದಕ್ಕೆ ಪರಿಹಾರವನ್ನು ಕೊಟ್ಟಿದ್ದಾನೆ. ಯಾವಾಗ ಅಧರ್ಮ ಹೆಚ್ಚುವುದೋ ಆಗ ತಾನು ಅವತರಿಸುವುದಾಗಿ ಹೇಳಿದ್ದಾನೆ.
ಆತನ ಅವತಾರದ ಉದ್ದೇಶವೇ ಅದು. ಆತನು ಧರ್ಮವನ್ನು ಎತ್ತಿ ಹಿಡಿಯುತ್ತಾನೆ
ಆದರೆ ಅದು ಹೇಗೆ ಎಂಬುದಾಗಿ ಆತನು ಹೇಳುವುದಿಲ್ಲ. ಈ ಧಾರ್ಮಿಕ ಸಮತೋಲನವನ್ನು ಉಳಿಸುವುದು ಹೇಗೆ?
ಭಗವದ್ಗೀತೆಯಲ್ಲಿ ಧಾರ್ಮಿಕ ಸಮತೋಲನವನ್ನು ಸ್ಥಾಪಿಸುವುದು ಹೇಗೆಂಬುದನ್ನು ಭಗವಂತನು ತೋರಿಸುತ್ತಾನೆ. ಧಾರ್ಮಿಕ ಸಮತೋಲನವನ್ನು ಪುನರುಜ್ಜೀವನಗೊಳಿಸುವುದನ್ನು ಕೃಷ್ಣನು ತೋರಿಸುತ್ತಾನೆ.
ವ್ಯಕ್ತಿಗತವಾಗಿ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.
ಅಧರ್ಮದ ದೆಸೆಯಿಂದಾಗಿ, ಅರ್ಜುನನು ಆತಂಕಕ್ಕೊಳಗಾಗಿ ಸಂಪೂರ್ಣವಾಗಿ ನಿಶ್ಚೇಷ್ಟಿತನಾಗಿ, ನಂತರ ಸಹಾಯಕ್ಕಾಗಿ ಮತ್ತು ಉಪದೇಶಕ್ಕಾಗಿ ಕೃಷ್ಣನನ್ನು ಮೊರೆಹೋಗುತ್ತಾನೆ.
21. 22.
ತತ್ವಜ್ಞಾನ, ನೀತಿಶಾಸ್ತ್ರ, ಯೋಗ, ಭಕ್ತಿ, ಸನ್ಯಾಸ ಹೀಗೆ ಹಲವಾರು ವಿಷಯಗಳ ಬಗ್ಗೆ ಕೃಷ್ಣನು ಆತನಿಗೆ ಉಪದೇಶಿಸುತ್ತಾನೆ. ಆತನಿಗೆ ಜ್ಞಾನೋದಯವಾಗುವಂತೆ ಮಾಡುತ್ತಾನೆ.
ಅರ್ಜುನನ ಮನಸ್ಸಿಗೆ ನಾಟುವಂತೆ ಕೃಷ್ಣನು ಉಪದೇಶಿಸಿದ ನಂತರ ವ್ಯಕ್ತಿಗತವಾಗಿ ಅರ್ಜುನನು ಜ್ಞಾನೋದಯವನ್ನು ಹೊಂದುತ್ತಾನೆ.
ಹದಿನೆಂಟನೆಯ ಅಧ್ಯಾಯದಲ್ಲಿ ಅರ್ಜುನನು ಹೇಳುತ್ತಾನೆ:
“ನಷ್ಟೋ ಮೋಹಃ ಸ್ಮೃತಿರ್ಲಬ್ಧಾ”
ನನ್ನಲ್ಲಿದ್ದ ಮೋಹವು ನಾಶವಾಯಿತು. ನಿಜವಾಗಿ ನಾನಾರೆಂಬುದನ್ನು ಅರಿತುಕೊಂಡೆನು ಮತ್ತು ನನ್ನ ಸ್ವಧರ್ಮವನ್ನು ಪಾಲಿಸಲು ಮುಂದಾಗುತ್ತೇನೆ.
“ತವ ವಚನಂಕರಿಷ್ಯೇ”
ನಿನ್ನ ಅಪ್ಪಣೆಯನ್ನು ಪಾಲಿಸುತ್ತೇನೆ. ನೀನು ನನಗೆ ಸೂಚಿಸಿದಂತೆ ನಾನು ಕಾರ್ಯನಿರ್ವಹಿಸುತ್ತೇನೆ.
23. ವ್ಯಕ್ತಿಗತವಾದ ಜವಾಬ್ದಾರಿ
ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಇದನ್ನು ಮಾಡಬೇಕು.
ತನ್ನ ಪ್ರಾಮುಖ್ಯತೆಯನ್ನು ಆ ವ್ಯಕ್ತಿಯು ಅರಿತುಕೊಳ್ಳಬೇಕು.
ತನ್ನ ಜವಾಬ್ದಾರಿಯನ್ನು ಅರಿತು ಧರ್ಮದ ಅಲೆಗಳನ್ನೆಬ್ಬಿಸಲು ತನ್ನದೇ ರೀತಿಯಲ್ಲಿ ಕ್ರಿಯಾಶೀಲನಾಗಬೇಕು. ಅಂತಿಮವಾಗಿ ಈ ಮೂಲಕ ಸಮಸ್ತ ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಬೇಕು.
24. ಧರ್ಮದ ವಿಭಾಗಗಳು
ನಮ್ಮ ಅಣ್ಣನವರು ಧರ್ಮದ ಬಗ್ಗೆ ಬಹಳ ಆಳವಾಗಿ ತಿಳಿದುಕೊಂಡು ಮಾತನಾಡುತ್ತಿದ್ದರು ಹಾಗೂ ಧರ್ಮವನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿ ಹೇಳುತ್ತಿದ್ದರು.
ಸಾಮಾನ್ಯ ಧರ್ಮಗಳು ಮತ್ತು
ವಿಶೇಷ ಧರ್ಮಗಳು.
25. ಸಾಮಾನ್ಯ ಧರ್ಮಗಳು.
ಸಾಮಾನ್ಯ ಧರ್ಮಗಳು ಯಾವುವೆಂದರೆ
ಅಹಿಂಸೆ
ಸತ್ಯ
ಆಸ್ತೇಯ, ಅನುಮತಿಯಿಲ್ಲದೆ ಯಾವುದನ್ನೇ ಆಗಲಿ ಪಡೆಯಬಾರದು, ಯಾರಿಂದಲೂ ಏನನ್ನೂ ಕಿತ್ತುಕೊಳ್ಳಬಾರದು ಎಂಬುದು ಆಸ್ತೇಯ.
ಶೌಚ
ಇಂದ್ರಿಯ ನಿಗ್ರಹ.
ದಾನ
ದಮ, ದಮ ಅಂದರೆ ಅಂತಃಕರಣ, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಮತ್ತು ವಿಷಯೋಪ ಭೋಗಗಳ ಮೇಲಿನ ನಿಯಂತ್ರಣ
ದಯೆ
ಕ್ಷಾಂತಿ, ಕ್ಷಾಂತಿ ಎಂದರೆ ಸಹಿಷ್ಣುತೆ, ಅಂದರೆ ಸದಾ ಸೌಮ್ಯ ಮತ್ತು ಶಾಂತ ಭಾವದಿಂದಿರುವುದು, ಯಾರೇ ಪ್ರಚೋದಿಸಿದರೂ ಸಹ ಸಮಚಿತ್ತರಾಗಿರುವುದು
26. ವಿಶೇಷ ಧರ್ಮಗಳು
ವಿಶೇಷ ಧರ್ಮಗಳು ಯಾವುವೆಂದರೆ
೧. ವರ್ಣಾಶ್ರಮ ಧರ್ಮ ಅಥವಾ ಸ್ವಧರ್ಮ
೨. ಪ್ರಾರ್ಥನೆ ಮತ್ತು ಪೂಜೆ
೩. ವ್ರತ ಪರಿಪಾಲನೆ
೪. ತಪಸ್ಸು ಮತ್ತು
೫. ಪುಣ್ಯಕ್ಷೇತ್ರಗಳ ದರ್ಶನ
27. ಸ್ವಧರ್ಮ: 1
ವ್ಯಕ್ತಿಗತ ನೆಲೆಯಲ್ಲಿ ಸ್ವಧರ್ಮ ಪರಿಪಾಲನೆಯ ಬಗ್ಗೆ ನಾನು ಗಮನ ಹರಿಸಬೇಕೆಂದಿದ್ದೇನೆ ಏಕೆಂದರೆ ಧರ್ಮದ ಪುನರ್ಸ್ಥಾಪನೆಯ ಹಾದಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಹೊಣೆಗಾರನಾಗಬೇಕೆಂಬುದಾಗಿ ನಾನು ಸಲಹೆಯನ್ನು ಕೊಟ್ಟಿದ್ದೆ. ಹಾಗಾಗಿ ಸ್ವಧರ್ಮ ಎಂಬುದು ಬಹಳ ಮುಖ್ಯವಾದ ವಿಚಾರವಾಗಿದೆ. ನಾವು ಮನುವಿನಿಂದ ಕಲಿಯಬಹುದಾಗಿದೆ. ಆತನ ಮನುಧರ್ಮ ಶಾಸ್ತ್ರದಲ್ಲಿ, ಭಗವಂತನು ಈ ಜಗತ್ತನ್ನು ಸೃಷ್ಟಿಸಿದನು ಮತ್ತು ಆ ಜಗತ್ತಿನಲ್ಲಿನ ಸಮಸ್ತ ಮನುಷ್ಯಕುಲವನ್ನು ನಾಲ್ಕು ವರ್ಣಗಳನ್ನಾಗಿ ವಿಭಜಿಸಿದನು.
ಮನುವಿನ ಪ್ರಕಾರ
“ ತೇಜೋಮಯನಾದ ಭಗವಂತನು ಸಮಸ್ತ ಜೀವರಾಶಿಯನ್ನು ಸಲಹುವ ಸಲುವಾಗಿ, ತನ್ನ ಬಾಯಿ, ಬಾಹುಗಳು, ತೊಡೆಗಳು ಮತ್ತು ಪಾದಗಳಿಂದ ಜನಿಸಿದವರಿಗೆ ಪ್ರತ್ಯೇಕವಾದ ಸ್ವಾಭಾವಿಕ ಚಟುವಟಿಕೆಗಳನ್ನು ಈ ಸಂಪೂರ್ಣ ಸೃಷ್ಟಿಯನ್ನು ಸಲಹುವ ಸಲುವಾಗಿ ನಿಯೋಜಿಸಿದನು. ಪ್ರವಚನ ಮತ್ತು ಕಲಿಕೆ, ತಮಗಾಗಿ ಮತ್ತು ಇತರರಿಗಾಗಿ ತ್ಯಾಗ ಮಾಡುವುದು, ಕೊಡುವುದು ಮತ್ತು ತೆಗೆದುಕೊಳ್ಳುವುದು ಮುಂತಾದ ಕಾರ್ಯಗಳನ್ನು ಪುರೋಹಿತರಿಗೆ ವಹಿಸಲಾಯಿತು “ (1. 88, 89)
29. ತಾನು ಕಲಿತು, ಇತರರಿಗೆ ಕಲಿಸುವುದು ಬ್ರಾಹ್ಮಣರ ಸ್ವಧರ್ಮ ಎಂದು ಮನು ಸಾರಿದನು.
ಬ್ರಾಹ್ಮಣನು ಸ್ವಯಂ ಧರ್ಮವನ್ನು ಆಚರಿಸಬೇಕು ಮತ್ತು ಇತರರು ಧರ್ಮವನ್ನು ಆಚರಿಸಲು ಸಹಾಯಮಾಡಬೇಕು. ಬ್ರಾಹ್ಮಣನು ದಾನವನ್ನು ಮಾಡಬೇಕು ಹಾಗೂ ದಾನವನ್ನು ಸ್ವೀಕರಿಸಬೇಕು. ಮನು ಧರ್ಮ ಶಾಸ್ತ್ರದಲ್ಲಿ ಸ್ವಧರ್ಮವನ್ನು “ವರ್ಣ ಕೇಂದ್ರೀಕೃತ ಧರ್ಮ” ಎಂಬುದಾಗಿ ಪ್ರಸ್ತುತ ಪಡಿಸಿರುವುದನ್ನು ನಾವು ಕಾಣುತ್ತೇವೆ. ಬ್ರಾಹ್ಮಣರು, ಕ್ಷತಿಯರು, ವೈಶ್ಯರು ಇತ್ಯಾದಿ ಎಲ್ಲ ವರ್ಣಗಳಿಗೆ ಹಾಗೂ ಅಯಾ ವರ್ಣದ ಜನಗಳಿಗೆ ಇದು ಅನ್ವಯಿಸುತ್ತದೆ.
ಆದರೆ ಇಲ್ಲಿ ನಾವು ವ್ಯಕ್ತಿಪರವಾಗಿ ಮಾತನಾಡುತ್ತಿದ್ದೇವೆ.
30. ಸ್ವಧರ್ಮ: 2
ಈಗ ನಾವು “ಯಾಜ್ಞವಲ್ಕ್ಯ ಸ್ಮೃತಿ” ಎಂಬ ಮತ್ತೊಂದು ಧರ್ಮಶಾಸ್ತ್ರದ ಕಡೆಗೆ ಹೊರಳೋಣ. ಇಲ್ಲಿ ಸ್ವಧರ್ಮದ ಬಗ್ಗೆ ನಮಗೆ ತಿಳಿದುಬರುವ ವಿಚಾರವೆಂದರೆ
“ ತಮ್ಮ ಬುದ್ಧಿವಂತಿಕೆಯ ಶಕ್ತಿಗೆ, ಆರ್ಥಿಕ ಸ್ಥಿತಿಗತಿಗೆ, ಅನಿಸಿಕೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯಕ್ಕೆ, ವಿದ್ಯೆಗೆ, ವೃತ್ತಿಗೆ ಮತ್ತು ಸಾಮಾಜಿಕ ಸ್ಥಾನಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ಧರ್ಮವನ್ನು ಪಾಲಿಸಬೇಕು”
ಇಲ್ಲಿ ವ್ಯಕ್ತಿಗತವಾಗಿ, ಅವರವರ ಸಾಮರ್ಥ್ಯಕ್ಕೆ, ಅರ್ಹತೆಗೆ, ಪಾಂಡಿತ್ಯಕ್ಕೆ, ಇತ್ಯಾದಿಗಳಿಗೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ.
ಮನುವಿನ ಪ್ರಕಾರ ಸ್ವಧರ್ಮ ಎಂಬುದು ಒಂದು ಗುಂಪು ಅಥವಾ ಬಣಕ್ಕೆ ಸಂಬಂಧಿಸಿದ ಚಟುವಟಿಕೆ ಆಗಿರುತ್ತದೆ. ಆದರೆ ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಇದು ವ್ಯಕ್ತಿಗತ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಪರಿಗಣಿಸಲ್ಪಡುತ್ತದೆ.
ಪ್ರತಿಯೊಂದು ಸಂದರ್ಭದಲ್ಲೂ ಸ್ವಧರ್ಮ ಪರಿಪಾಲನೆಗೆ ಯಾವುದು ಸರಿ, ಯಾವುದು ಸಮಂಜಸ ಎಂಬುದನ್ನು ನಮ್ಮ ಬುದ್ಧಿಶಕ್ತಿಯ ಸಹಾಯದಿಂದ ನಾವೇ ನಿರ್ಧರಿಸುವಂತಹುದಾಗಿರುತ್ತದೆ.
31. ನಮ್ಮ ಸಂಸ್ಕೃತಿ
ಸ್ವಧರ್ಮದ ಮೂಲತತ್ವಕ್ಕೆ ನಮ್ಮ ಸಂಸ್ಕೃತಿಯು ದಾರಿದೀಪ.
ಧರ್ಮ ಮತ್ತು ಸ್ವಧರ್ಮದ ವಿಚಾರಗಳನ್ನು ನಮ್ಮ ಸಂಸ್ಕೃತಿಯ ಸಂದರ್ಭಕ್ಕನುಗುಣವಾಗಿ ಮಂಡಿಸಬೇಕಾಗುತ್ತದೆ.
ಸಾವಿರಾರು ವರ್ಷಗಳ ಕಾಲ ಈ ಎಲ್ಲ ಮೂಲತತ್ವಗಳನ್ನು ಅಭಿವೃದ್ಧಿಪಡಿಸಿ, ಪಾಲನೆ ಮಾಡಿ ಮತ್ತು ಸಂರಕ್ಷಿಸಿರುವುದರ ಹಿಂದೆ ಇರುವ ಸಂಸ್ಕೃತಿಯ ಬಗ್ಗೆ ನಾವು ಸ್ವಲ್ಪವಾದರೂ ತಿಳಿದುಕೊಳ್ಳಬೇಕು.
32. ಸಂಸ್ಕೃತಿ: ವೈಷಿಷ್ಟ್ಯದ ಲಕ್ಷಣಗಳು.
1. ನಮಗೆ ಸಂಬಂಧಿಸಿದ ಸಂಸ್ಕೃತಿಯ ವೈಷಿಷ್ಟ್ಯದ ಗುಣಲಕ್ಷಣಗಳು ಏನು?
ಮೊಟ್ಟಮೊದಲ ಗುಣಲಕ್ಷಣ ಏನೆಂದರೆ ಪ್ರತಿಯೊಂದು ಕಾರ್ಯವನ್ನು ಸೂಕ್ತ ನಿರ್ಧಾರ ಮತ್ತು ವಚನಬದ್ಧತೆಯಿಂದ ಮಾಡುವುದಾಗಿದೆ.
ಮಾನವನ ಅಸ್ತಿತ್ವದ ನಾಲ್ಕು ಧ್ಯೇಯಗಳನ್ನು ಗ್ರಹಿಸುವ ಸಲುವಾಗಿ ನಾವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.
ಧರ್ಮ
ಅರ್ಥ
ಕಾಮ
ಮೋಕ್ಷ
33. ನಮ್ಮ ಸಂಸ್ಕೃತಿಯ ಅತಿಮುಖ್ಯ ಗುಣಲಕ್ಷಣ ಇದು.
2. ಆಮೇಲೆ ಕರ್ಮದ ನಿಯಮಗಳಿಗೆ ಪ್ರತಿಯೊಬ್ಬರೂ ಬದ್ಧರಾಗಿರುತ್ತಾರೆ.
ನಿಮಗೆಲ್ಲಾ ತಿಳಿದಂತೆ ಕರ್ಮ ಸಿದ್ಧಾಂತ ಏನೆಂದರೆ
ಪ್ರತಿಯೊಬ್ಬ ವ್ಯಕ್ತಿಯ ಆಲೋಚನೆಗಳ ಮೂಲ ಹಾಗೂ ಮಾತುಕೃತಿಗಳು, ವರ್ತಮಾನದಲ್ಲಿಯೂ ಹಾಗೆಯೇ ಭವಿಷ್ಯದಲ್ಲಿಯೂ ಸಹ ಉಂಟುಮಾಡುವ ಪರಿಣಾಮಗಳು
ನಂತರ ನಿರ್ಬಂಧವಿಲ್ಲದೇ ಸ್ವತಂತ್ರವಾಗಿ ಮಾಡಿದ ಆಯ್ಕೆಗಳಿಗೆ ಜವಾಬ್ದಾರಿಯನ್ನೂ ಮತ್ತು ಉತ್ತರದಾಯತ್ವವನ್ನೂ ಹೊರುವ ನಿಯಮಗಳ ಚೌಕಟ್ಟನ್ನು ಇದು ಒದಗಿಸುತ್ತದೆ.
ಆಯ್ಕೆಗಳಲ್ಲಿ ನಮಗೆ ಸ್ವಾತಂತ್ರ್ಯವಿದೆ, ಕಾರ್ಯತಂತ್ರದಲ್ಲಿ ನಮಗೆ ಸ್ವಾತಂತ್ರ್ಯವಿದೆ, ಆದರೆ ನಾವು ಏನೇ ಮಾಡಿದರೂ ಅದಕ್ಕೆ ಒಂದು ಪರಿಣಾಮ ಇರುತ್ತದೆ. ಅದು ಒಂದು ಫಲಿತಾಂಶವನ್ನು ಉಂಟುಮಾಡುತ್ತದೆ. ಹಾಗಾಗಿ ನಾವು ಮಾಡಿದ ಆಯ್ಕೆಯ ಫಲಿತಾಂಶಕ್ಕೆ ನಾವೇ ಹೊಣೆಗಾರರಾಗುತ್ತೇವೆ.
ನಮ್ಮ ಜೀವನವನ್ನು ಕಟ್ಟಿಕೊಳ್ಳಲು ಹಾಗೂ ಪುನಃ ರೂಪಿಸಿಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯತೆ ಇರುವಾಗ, ನಮ್ಮ ಸಂಸ್ಕೃತಿಯಲ್ಲಿ ಸ್ವತಂತ್ರ ಸಂಕಲ್ಪಕ್ಕೆ ಆಸ್ಪದ ಇದೆಯೇ ಎಂಬ ಪ್ರಶ್ನೆಗೆ ಹೌದು ಎಂಬುದು ಉತ್ತರವಾಗಿದೆ.
34.
ಹೌದು, ಸ್ವಸಂಕಲ್ಪಕ್ಕೆ ಆಸ್ಪದ ಇದೆ. ವಿಧಿ ಎಂಬುದು ಇದ್ದರೂ ಸಹ, ನಮ್ಮ ಸಂಕಲ್ಪವನ್ನು ಅನುಷ್ಠಾನಗೊಳಿಸುವುದರ ಮೂಲಕ ವಿಧಿಬರಹವನ್ನು ಬದಲಿಸಬಹುದಾಗಿದೆ.
3. ನಂತರ ಪುನರ್ಜನ್ಮ ಎಂಬುದು ಮತ್ತೊಂದು ಪ್ರಮುಖ ಸಿದ್ಧಾಂತ.
ನಾವು ಯಾವುದೇ ಕರ್ಮವನ್ನು ಮಾಡಿದರೂ ಅದರ ಫಲವನ್ನು ಸಂಪೂರ್ಣವಾಗಿ ಈ ಜನ್ಮದಲ್ಲಿಯೇ ಹೊರಬೇಕಾಗುತ್ತದೆ ಅಥವಾ ಸ್ವಲ್ಪ ಭಾಗದ ಫಲವನ್ನು ಮುಂದಿನ ಜನ್ಮಕ್ಕೆ ವರ್ಗಾಯಿಸಲಾಗುತ್ತದೆ. ಆದುದರಿಂದ ಪುನರ್ಜನ್ಮ ಸಿದ್ಧಾಂತವನ್ನು ನಾವು ನಂಬುತ್ತೇವೆ.
ಕರ್ಮ ಎಂಬುದು ದೇವರು ನಿರಂಕುಶವಾಗಿ ಇಚ್ಛಾನುಸಾರ ಮಾಡುವ ಕ್ರಿಯೆಯಲ್ಲ. ಖಂಡಿತವಾಗಿಯೂ ಕರ್ಮದಲ್ಲಿ ದೇವರ ಕೈವಾಡವಿಲ್ಲ. ಕರ್ಮವು ನಾವು ಮಾಡುವ ಕ್ರಿಯೆ ಹಾಗೂ ನಾವು ಎದುರಿಸುವ ಪರಿಣಾಮಗಳಿಂದಾದುದು ಮಾತ್ರ. ನಾವು ಮಾಡಿರುವ ಕ್ರಿಯೆಗಳ ಪರಿಣಾಮಗಳಿಗೆ ನಾವೇ ಹೊಣೆಗಾರರು.
35. ಕರ್ಮವು ಗೊತ್ತುಗುರಿಯಿಲ್ಲದ ಇಷ್ಟಾನುಸಾರ ನಡೆಯುವ ಘಟನೆಯೂ ಅಲ್ಲ. ಏಕೆಂದರೆ ಕರ್ಮದಲ್ಲಿ ಒಂದು ನಿಯಮ ನಿಬಂಧನೆಯಿದೆ. ಸೇಬಿನ ಬೀಜವನ್ನು ಬಿತ್ತರೆ ನಮಗೆ ಸೇಬು ಹಣ್ಣು ಮಾತ್ರ ದೊರೆಯುತ್ತದೆ, ಬೇರೆ ಹಣ್ಣು ಸಿಗುವುದಿಲ್ಲ. ಆದುದರಿಂದ ನೀವು ಏನೇ ಕಾರ್ಯ ಮಾಡಿದರೂ ಅದಕ್ಕೆ ಅದರದೇ ಆದ ಪರಿಣಾಮಗಳಿರುತ್ತವೆ. ವ್ಯಕ್ತಿಗತ ಅಹಂಕಾರದಿಂದ ಅದು ಹುಟ್ಟುತ್ತದೆ.
ಅಹಂ
ಆಯ್ಕೆಗಳನ್ನು ಮಾಡುವುದರಿಂದ ಏಕೆಂದರೆ ಆಯ್ಕೆಗಳು ಮಾಡಲ್ಪಡುತ್ತವೆ ಮತ್ತು ಕ್ರಿಯೆಗಳನ್ನು ಮಾಡಲಾಗುತ್ತದೆ. ಅದರ ಪರಿಣಾಮಗಳನ್ನು ಅಹಂ ಎದುರಿಸುತ್ತದೆ ಮತ್ತು ಅಹಂಕಾರವು ಪರಿಣಾಮಗಳಿಂದ ಸುತ್ತುವರಿದಿದೆ. ಯಾವಾಗ ವ್ಯಕ್ತಿಗತ ಅಹಂಕಾರವು ತನ್ನಷ್ಟಕ್ಕೆ ಪರಿವರ್ತನೆ ಹೊಂದಿ, ಅಂತಿಮ ಸತ್ಯಸ್ಥಿತಿಗೆ ತನ್ನ ಪ್ರತ್ಯೇಕತೆಯನ್ನು ಕಳೆದು ಕೊಳ್ಳುತ್ತದೆಯೋ, ಅಂತಹ ವಿಮೋಚನೆಯನ್ನು ಮೋಕ್ಷ ಎಂದು ಕರೆಯಲಾಗುತ್ತದೆ.
36. ಮೋಕ್ಷ
ಕರ್ಮವು ನಮ್ಮ ಮೇಲೆ ಹೇರಲಾದ ಸಂಕೋಲೆಯಿಂದ ಹೊಂದುವ ಬಿಡುಗಡೆಯನ್ನೇ ಮೋಕ್ಷ ಎನ್ನಬಹುದು.
37. ಸಂಸ್ಕೃತಿ: ಗುಣಲಕ್ಷಣಗಳು
4. ನಮ್ಮ ಸಂಸ್ಕೃತಿಯ ಮತ್ತೊಂದು ನಿರೂಪಿತ ಗುಣಲಕ್ಷಣವೆಂದರೆ ಅಂತರ್ಮುಖತೆ ಅಥವಾ ಅಧ್ಯಾತ್ಮಿಕತೆ.
ನಾನು ಅದರ ಉಲ್ಲೇಖವನ್ನು ಈಗಷ್ಟೇ ಮಾಡಿದ್ದೇನೆ. ಯೋಗವೆಂದರೆ ಅಂತರ್ಮುಖಿಯಾಗುವುದು. ಇದೇ ಅಧ್ಯಾತ್ಮಿಕತೆ. ಕ್ರಿಯೆಯು ಎರಡು ಪಥವುಳ್ಳದ್ದು. ಬಹುರ್ಮುಖಿ ಕ್ರಿಯೆ ಮತ್ತು ಅಂತರ್ಮುಖಿ ಕ್ರಿಯೆ.
ಬಹುರ್ಮುಖಿ ಕ್ರಿಯೆಯನ್ನು ಪ್ರವೃತ್ತಿ ಎನ್ನುತ್ತಾರೆ.
ಅಂತರ್ಮುಖಿ ಕ್ರಿಯೆಯನ್ನು ನಿವೃತ್ತಿ ಎನ್ನುತ್ತಾರೆ.
ಪ್ರಾಣಾಯಾಮ, ಧಾರಣ, ಧ್ಯಾನ ಇತ್ಯಾದಿ ಯೋಗಾಚರಣೆಗಳನ್ನು ಮಾಡಲು ನಿವೃತ್ತಿ ಪಥವು ಸಹಾಯಕಾರಿಯಾಗುತ್ತದೆ.
ಆಧ್ಯಾತ್ಮಿಕತೆಯಿಂದಾಗಿ ನಮ್ಮ ಪ್ರಾಚೀನ ಋಷಿಗಳು ಸಮಾಧಿ ಸ್ಥಿತಿಯನ್ನು ಹೊಂದಲು ಶಕ್ತರಾಗಿ ಬಹಳ ಅಮೂಲ್ಯ ಸತ್ಯತತ್ವಗಳನ್ನು ಅನ್ವೇಷಿಸಲು ಹಾಗೂ ಗ್ರಹಿಸಲು ಸಹಾಯವಾಯಿತು. ಬೌದ್ಧಿಕ ಕಸರತ್ತಿನಿಂದ ಅವರು ಈ ಸತ್ಯತತ್ವಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅವರು ತಮ್ಮ ಒಳನೋಟದಿಂದ, ಅಂತರ್ಮುಖತೆಯಿಂದ ದೀರ್ಘ ಸಮಾಧಿ ಸ್ಥಿತಿಯನ್ನು ತಲುಪಿ ಸತ್ಯಸಾಕ್ಷಾತ್ಕಾರ ಮಾಡಿಕೊಂಡರು.
ಆದುದರಿಂದ ಅಂತರಂಗದ ಶೋಧನೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
38.
5. ನಮ್ಮ ಸಂಸ್ಕೃತಿಯ ಮತ್ತೊಂದು ಉಲ್ಲೇಖನೀಯ ಗುಣಲಕ್ಷಣವೆಂದರೆ ಮಾನವ ಶರೀರದ ಬಳಕೆ.
ಈ ಒಂದು ನಿರ್ದಿಷ್ಟ ವಿಚಾರದ ಬಗ್ಗೆ ನೀವು ವಿಶೇಷವಾಗಿ ಗಮನ ಹರಿಸಬೇಕೆಂದು ನಾನು ಬಯಸುತ್ತೇನೆ.
ಮನುಷ್ಯ ಶರೀರವು ಭಗವಂತನು ನಮಗೆ ನೀಡಿದ ಅತಿ ಮುಖ್ಯ ಸಾಧನವಾಗಿದೆ.
ಧರ್ಮಕಾರ್ಯಗಳನ್ನು ಮಾಡಲು ನಮಗೆ ದೇವರು ದಯಪಾಲಿಸಿದ ಸಾಧನ ಇದು. ಅರಿವಿನ ಸಾಧನ ಇದು. ಉನ್ನತ ಜ್ಞಾನಾರ್ಜನೆ ನಮ್ಮ ದೇಹದಲ್ಲಿ ಅಂತರ್ಗತವಾಗಿದೆ.
ಯೋಗ ಮತ್ತು ಸಾಧನೆಯ ಮುಖಾಂತರ ಪರಿವರ್ತನೆಯನ್ನು ತರಲು ಬೇಕಾದ ಹಲವು ಆಚರಣೆಗಳನ್ನು ನಮ್ಮ ಪುರಾತನ ಋಷಿ ಮುನಿಗಳು ಆವಿಷ್ಕರಿಸಿದರು.
39. ನಮ್ಮ ಸಂಸ್ಕೃತಿಯ ಜಾಡಿನಲ್ಲಿ ಪ್ರತಿಯೊಂದು ಕುಟುಂಬಕ್ಕೂ ನಿರ್ದಿಷ್ಟ ಋಷಿಯ ಮೂಲಸ್ಥಾನ ಇರುತ್ತದೆ.
ತಲೆಮಾರಿನಿಂದ ತಲೆಮಾರಿಗೆ ಪೂರ್ವಾರ್ಜಿತವು ರವಾನಿಸಲಾಗುತ್ತದೆ.
ನಮ್ಮ ಸಂಸ್ಕೃತಿಯಲ್ಲಿ ವಿಕಸನ ಹೊಂದಿದ ಕುಟುಂಬ ಕಲ್ಪನೆಯು ಧಾರ್ಮಿಕ ಮೌಲ್ಯಗಳನ್ನು ಅನುಭೂತಿ ಮತ್ತು ಆಚರಣೆ ಎರಡರಲ್ಲಿಯೂ ವ್ಯಾವಹಾರಿಕ ವಿಧಾನದಲ್ಲಿ ಉನ್ನತೀಕರಿಸಿದೆ.
ಇದು ನಮ್ಮ ಸಂಸ್ಕೃತಿ ಮತ್ತು “ಹಿಂದೂ ಅವಿಭಕ್ತ ಕುಟುಂಬ” ಎಂದು ಕರೆಯಲ್ಪಡುವ ಕುಟುಂಬದ ಪರಿಕಲ್ಪನೆ. ಇದರಲ್ಲಿ ಹಲವಾರು ಪ್ರಮುಖ ವೈಶಿಷ್ಟ್ಯಗಳಿವೆ. ತಲತಲಾಂತರದಿಂದ ಮೌಲ್ಯಗಳ ಹಸ್ತಾಂತರವಾಗುತ್ತಿದ್ದವು.
ಇಂದಿನ ದಿನಗಳಂತೆ ಪುಸ್ತಕಗಳನ್ನೋದಿ ಮೌಲ್ಯಗಳನ್ನು ತಿಳಿಯಲು ಮತ್ತು ಪಾಲಿಸಲು ಪ್ರಯತ್ನಿಸುವ ಪುಸ್ತಕದ ಬದನೆಯಂತಿರಲಿಲ್ಲ ಆಗ.
ತಲತಲಾಂತರದಿಂದ ಜ್ಞಾನ ಮತ್ತು ಮೌಲ್ಯಗಳ ಪರಿಕಲ್ಪನೆ ಮತ್ತು ಪಾಲನೆಗಳು ಹಸ್ತಾಂತರಗೊಂಡು ನಮ್ಮ ಸಂಸ್ಕೃತಿಯಲ್ಲಿ ಹರಿದುಬರುತ್ತಿದ್ದವು. ನಮ್ಮಲ್ಲಿ ಗಟ್ಟಿಯಾಗಿ ಬೀಡುಬಿಟ್ಟಿದ್ದವು. ನಮ್ಮ ಹಿರಿಯರು ಈ ಮೌಲ್ಯಗಳನ್ನು ವಿವರಿಸುತ್ತಿದ್ದರು ಮತ್ತು ಅವುಗಳನ್ನು ಪಾಲಿಸುತ್ತಿದ್ದರು. ಹಾಗೆಯೇ ತಮ್ಮ ಮುಂದಿನ ಜನಾಂಗದವರೂ ಇದನ್ನು ಪಾಲಿಸಲು ಸಹಾಯ ಮಾಡುತ್ತಿದ್ದರು.
ಅದು ಎಷ್ಟೇ ನೆಮ್ಮದಿಯಾಗಿರುವ ಮತ್ತು ಉತ್ತಮ ತಂತ್ರಜ್ಞಾನದಿಂದ ಕೂಡಿರುವ ಆರಾಮದಾಯಕ ಜೀವನವಾಗಿರಲಿ, ಅದರಿಂದಷ್ಟೇ ತೃಪ್ತರಾಗದೆ ಪ್ರತಿಯೊಬ್ಬರೂ ಪರಮೋಚ್ಛ ಧ್ಯೇಯವಾದ ಮೋಕ್ಷವನ್ನು ಸಾಧನೆಯ ಮೂಲಕ ಪಡೆಯಲು ಪ್ರಯತ್ನಿಸಬೇಕು.
40. ತಪಸ್ಸು ಮತ್ತು ಸ್ವಾಧ್ಯಾಯದಿಂದ ಪ್ರಾಚೀನ ಋಷಿಮುನಿಗಳು ಸ್ವಧರ್ಮದ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ.
ಆಧ್ಯಾತ್ಮಿಕ ಆಚರಣೆಗಳ ಗುಚ್ಛದಿಂದ ಕೂಡಿದ ಪ್ರತಿನಿತ್ಯದ ಅನುಷ್ಠಾನವನ್ನು ಆಚರಿಸುವ ಪರಿಪಾಠವವನ್ನು ನಮ್ಮ ಪರಂಪರೆಯ ಪ್ರತಿಯೊಬ್ಬರೂ ಬೆಳಸಿಕೊಳ್ಳಬೇಕು.
ನಮ್ಮ ಸಂಸ್ಕೃತಿಯ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ,- ಬಹುಶಃ ನಾವು ಬಳುವಳಿಯಾಗಿ ಪಡೆದ ಅತ್ಯಂತ ಪ್ರಧಾನವಾದ ಆಸ್ತಿ –
ನಮ್ಮ ಪ್ರಾಚೀನ ಋಷಿಗಳಿಂದ ಆವಿಷ್ಕರಿಸಲ್ಪಟ್ಟ ಸಂಸ್ಕೃತ ಭಾಷೆ.
ಸಂಸ್ಕೃತ ಭಾಷೆಯನ್ನು ಆವಿಷ್ಕರಿಸಲಾಯಿತು ಮತ್ತು ಆ ಭಾಷೆಗೆ ಪ್ರಚಂಡ ಸಾಮರ್ಥ್ಯವಿದೆ.
ಸಂಸ್ಕೃತ ಶಬ್ದಗಳ ತರಂಗದಲ್ಲಿ ಮಾಂತ್ರಿಕತೆಯಿದೆ ಮತ್ತು ನಮ್ಮನ್ನು ಪರಿವರ್ತನೆಗೊಳಿಸುವ ಆಳವಾದ ಪ್ರಜ್ಞಾವಂತಿಕೆ ಇದೆ.
41.ಪ್ರಚಾರ ಮತ್ತು ಆಚಾರ
ತಮ್ಮ ಸುಪರ್ದಿಯಲ್ಲಿದ್ದ ಎಲ್ಲ ಸಂಪನ್ಮೂಲಗಳನ್ನು ಮತ್ತು ತನ್ನೆಲ್ಲಾ ಸಮಯವನ್ನು ಸನಾತನ ಧರ್ಮದ ಪ್ರಚಾರಕ್ಕಾಗಿ ನನ್ನ ಅಣ್ಣನವರಾದ ಲಂಕಾ ಕೃಷ್ಣಮೂರ್ತಿಯವರು ವಿನಿಯೋಗಿಸಿದರು.
ನನ್ನ ಸಹೋದರನಾದ ಲಂಕಾ ಕೃಷ್ಣಮೂರ್ತಿಯವರು ಸನಾತನ ಧರ್ಮದ ಕೆಲವು ಮೂಲ ತತ್ವಗಳನ್ನು ಪ್ರಚುರಪಡಿಸಿದಂತೆ, ನಿದರ್ಶನಗೊಳಿಸಿದಂತೆ, ನಾನು ಅವುಗಳನ್ನು ಬೆಳಕಿಗೆ ತರಲು ಪ್ರಯತ್ನಿಸಿದ್ದೇನೆ.
ಅವರು ತಮ್ಮ ಎಲ್ಲಾ ಸಮಯವನ್ನು ಧರ್ಮಪ್ರಚಾರಕ್ಕೆ ಮುಡಿಪಾಗಿಟ್ಟರು. ಅವರು ಸಾವಿರಾರು ಮಂದಿಗೆ ಧಾರ್ಮಿಕ ತಿಳುವಳಿಕೆಯನ್ನು ಮೂಡಿಸಿ ಅವರನ್ನು ಉತ್ತೇಜಿಸಿದರು. ಅವರಿಂದ ಸ್ಫೂರ್ತಿಗೊಂಡವರಲ್ಲಿ ನಾನೂ ಒಬ್ಬ. ನಾನು ನನ್ನ ಸಮಯವನ್ನು ಸ್ವಧರ್ಮದ ಕಾರ್ಯರೂಪದ ಒಂದು ಅಂಶವಾದ ನಿತ್ಯಕರ್ಮ ಅನುಷ್ಠಾನದ ಬಗ್ಗೆ ಮೀಸಲಿರಿಸಲು ಇಚ್ಛಿಸುತ್ತೇನೆ.
42. ಇಂದು ಸ್ವಧರ್ಮದ ಬಗ್ಗೆ ನಾನು ಏನು ಹೇಳಲು ಬಯಸಿದ್ದೆನೋ ಅದನ್ನು ಈ ಪರಿಚಯದ ಮೂಲಕ ಮುಗಿಸುತ್ತೇನೆ.
ಮುಂದಿನ ಸಮಾವೇಶದಲ್ಲಿ ನಾನು ವಿವರಿಸಬಯಸುವುದು ಏನೆಂದರೆ
1. ಅನುಷ್ಠಾನ ಅಂದರೆ ಏನು?
2. ಅದರ ಉಪಾಂಗಗಳು ಯಾವುವು? ಮತ್ತು
3. ಪ್ರತಿನಿತ್ಯವೂ ಈ ಅನುಷ್ಠಾನವನ್ನು ಆಚರಿಸುವುದು ಹೇಗೆ?
ಇದು ಒಂದು ನಿತ್ಯ ಕರ್ಮವು.
ತನ್ನನ್ನು ತಾನು ಅಭಿವೃದ್ಧಿಪಡಿಸಿಕೊಳ್ಳಲು, ತನ್ನ ವ್ಯಕ್ತಿತ್ವವನ್ನು ಉದ್ಧರಿಸಿಕೊಳ್ಳಲು ಮತ್ತು ಮೇಲುಸ್ತರದ ಪ್ರಜ್ಞೆಯನ್ನು ಹೊಂದಲು, ಪ್ರತಿಯೊಬ್ಬರೂ ಪ್ರತಿನಿತ್ಯವೂ ಇದನ್ನು ಅನುಸರಿಸಬೇಕು.