Self-Awakening (Audio)
Please watch Videos of SELF AWAKENING
41 -43(E) SD
41-43 (E)
Self-Awakening
Guided Meditation
Transcription
After energizing yourself by meditating on the Seven Energy Centres in the body,
The process of self-awakening starts.
It involves the shifting of your consciousness from the lowest body level to the deepest spiritual level
Most of the time, you are conscious of your physical body, the physiognomy, in terms of
its appearance, strength, ability, attractiveness, and appeal..
The body has its own language which you use to communicate in all interpersonal relationships.
The physical body contains several systems like the muscular, circulatory, digestive, endocrine, etc., all of which are regulated and controlled by the prana, or the life force.
Prana is the organizing principle of body functioning
At other times,
you are dragged into the past or pushed into the future by your mind and you get stuck there.
Free yourself from the obsessive and compulsive preoccupation with mind and thinking.
Bring your consciousness to the present and turn it inward.
Take a deep breath and exhale slowly.
Be aware of your breathing.
Watch your breathing.
Concentrate on the nostrils where the breath flows in and out.
Notice the brief gap, a stillness, at the end of the out-breath, before you start breathing again.
Continue conscious breathing.
Note the sensation of breath.
Feel the air moving in and out of the body.
You are in the inner space.
Discover the depth within yourself.
Try to feel the body from within.
Feel some specific parts of the body from within.
Feel the hands, arms, feet, abdomen, chest, neck and your lips. You will feel life in them. Be aware of the whole inside of your body. Breath-awareness has helped to bring a lot of space into your life..
You are now conscious not only of your physical body but of the life within it.
It is the life-force that keeps you alive, that coordinates so many activities in you.
Now view the gross body between two spaces: the outer space and the inner space.
It is easy to imagine it to be like a sheath, placed in between the outer space and inner space.
Our ancient sages used the word Kosha, sheath, to describe such a body between two spaces.
They called the gross body Annamaya Kosha.
It is born of the essence of food; it is sustained by food; and finally it gets merged in food after death.
It is composed of the five elements: earth, water, fire, air and space.
With several systems and processes, this body is kept alive and healthy by the Prana. Prana is the soul or self of this Annamaya Kosha. Meditate on it.
Continue conscious breathing once again.
You are in the inner space. You can experience the life force, the prana, as an inner body, filling the inner space of the Annamaya Kosha.
This is Pranamaya Kosha.
It has a human shape too.
The prana divides itself into five vital functions.
Prana, positioning in the face, controls breathing,
Apana in the lower region helps evacuation,
Vyana, as vital energy, pervades the whole body through the nerves, giving strength to joints and vital parts. ,
Udana at the throat helps the process of metabolism, and
Samana at the naval helps digestion.
Again the prana activates the five organs of action for proper use:
the tongue for speech;
hands for grasping;
legs for locomotion;
genitals for procreation; and
the anus for evacuation.
This Pranamaya Kosha has manas as its soul.
Meditate on the Pranamaya Kosha
Breathe again consciously. You are in the breath body.
On one side is the physical body and on the other side, deeper, is another body. It is filled with manas.
Enter the Manomaya Kosha.
Observe the faculty of manas. Observe how it is fickle, changing, wavering, imagining and analytic.
It helps you to exercise volition. The iccha shakti.
Thoughts like waves rise and fall. Observe them. Let them come and let them go. You are an observer.
Observe the vast treasure house of memories – the Chtta. The knowledge you get through the five sense organs is stored in the chitta. What a wonderful instrument this manas is!
There are two layers within manas called the subconscious and the unconscious, both of which are filled by samskaras and vasanas formed of actions done in the past.
Observe how innumerable thoughts are triggered by the samskaras.
They pull you into the past or push you into the future.
It is these samskaras and vasanas that motivate you to desire, think, decide, speak and act.
If you want to change your habits, you should initiate new thought grooves.
You are flooded by thoughts. Observe them.
As you observe them coming and going, the manas becomes calm like a lake, where you have now the glimpse of another faculty, buddhi.
Buddhi is the soul of this Manomaya Kosha. Meditate on the Manomay Kosha.
The Manomaya kosha is filled by the Vignanamaya Kosha.
Centre yourself in the Vignanamaya kosha characterized by ahankara and buddhi.
Ahankara is the sense of I-ness and my-ness.
Buddhi, assisted by the five sense organs, validates the knowledge acquired by manas.
It becomes Vignana, wisdom.
Buddhi is characteriszed by discrimination, certitude and decision- making.
It has two powers: gnana shakti and kriya shakti.
It has two functions. Assisted by faith, it acts in conformity with truth and righteousness or dharma.
Endowed with the power of concentration, it meditates.
Both action and meditation result in ananda, happiness.
Ananda is the result of meditation and right action.
Ananda is the soul or self of this Vignanamaya kosha.
Meditate on this Vignanamaya kosha.
Go deeper and enter the Anandamaya kosha, which is permeated by joy, enjoyment, exhilaration and bliss.
Your consciousness has reached its natural state.
It is a state of Purity, Peace, Love, Bliss, Harmony, Truth, Beauty and Freedom.
The source of this ananda is Brahman, the Supreme Self, whose reflection you are.
You are now with your Inmost Self. You are your True Self. Pure Consciousness.
Chidananda rupah shivo’ham. Shivo’ham.
You are in harmony with Nature both inward and outward.
Remain anchored in this state of Bliss.
Expand your consciousness in all directions.
Generate and spread positive thoughts in all directions.
Sarve bhavantu sukhinah sarve santu niramayah
Sarve bhadrani pashyantu maakaschit dukha bhaag bhavet
Remain anchored in this state, the natural, original, perfect state – where you have purity, peace, love and bliss. There is also freedom – it is the most expansive and the most inclusive freedom.
Everything gets merged and unified into a non-dual ONENESS –beyond form, beyond name, the pure ESSENCE.
You have reached a new dimension of consciousness.
You are in a stable, alert and joyful state.
Enthusiasm flows into everything you say or do.
You are part of the whole creation, connected to everyone and everything.
You are one with the All-Pervasive Self.
Remaining at this deepest spiritual level, you will exercise complete command on all the earlier selves:
at the level of the body, vital breath, the five organs of action and the five sense organs, manas and buddhi.
You are the master of all the faculties within you.
You can visualize yourself like a person seated in a chariot.
Atmanam rathinam viddhi shareeram rathamevatu,
Buddhimtu sarathim viddhi manah pragrahamevaca,
Indriyani hayanyahuh vishansteshu gocharan
Atmendriyamanoyuktam bhoktetyahur maneeshinah.
The body is the chariot. Buddhi is the charioteer. Manas is the bridle. The organs of action and perception are the horses. Your objectives are the way. Seated in this chariot, and associated with Buddhi, manas, and organs of perception and organs of action, you are the Enjoyer.
You are making a journey to reach your goal which is Abhyudaya – all round, comprehensive progress that includes success and achievement.
You are transformed
You are completely awakened and know who you really are.
You are Consciousness, Truth and Bliss. In association with your manas, Buddhi, organs of perception and organs of action, you are the Doer and Enjoyer. You have now discovered your true nature and the potential you have.
Yogah karmasu kausalam
Skillfulness in action is Yoga
Awakened and empowered, proceed.
Stop not till you realize your goal.
Om shantih, shantih, shantih
Gently open your eyes. Gently.
ಆತ್ಮಜಾಗೃತಿ ಧ್ಯಾನ ಮಾರ್ಗದರ್ಶಿ ಪ್ರತಿಲಿಪಿ
ಸಾಧನ ಮಾರ್ಗ ಧ್ಯಾನಂ ಆತ್ಮಜಾಗೃತಿ ಧ್ಯಾನ ಮಾರ್ಗದರ್ಶಿ ಪ್ರತಿಲಿಪಿ 1
ಆತ್ಮೋನ್ನತಿಯ ಪದರಗಳು
ಐದು ಕೋಶಗಳು
ಅನ್ನಮಯಕೋಶ (ಭೌತಿಕ ಶರೀರ)
ಪ್ರಾಣಮಯ ಕೋಶ( ಪ್ರಾಣಶರೀರ)
ಮನೋಮಯಕೋಶ( ಭಾವ ಶರೀರ)
ವಿಜ್ಞಾನಮಯಕೋಶ(ಜ್ಞಾನ ಶರೀರ)
ಆನಂದಮಯಕೋಶ( ಆನಂದ ಶರೀರ)
ಶರೀರದಲ್ಲಿನ ಏಳು ಪ್ರಾಣಕೇಂದ್ರಗಳನ್ನು ಕುರಿತು ಧ್ಯಾನ ಮಾಡಿ ನಿಮ್ಮನ್ನು ಸಚೇತನಗೊಳಿಸಿಕೊಂಡನಂತರ ಆತ್ಮಜಾಗೃತಿಯ ಪ್ರಕ್ರಿಯೆ ಶುರುವಾಗುತ್ತದೆ.
ಕನಿಷ್ಟ ಶರೀರದ ಮಟ್ಟದಿಂದ ಆಳವಾದ ಆಧ್ಯಾತ್ಮಿಕ ಮಟ್ಟದವರೆವಿಗೆ ನಿಮ್ಮ ಪ್ರಜ್ಞೆಯನ್ನು ರೂಪಾಂತರಗೊಳಿಸುವ ಕ್ರಿಯೆಯನ್ನು ಇದು ಒಳಗೊಂಡಿದೆ.
ಮುಖ ಸಾಮುದ್ರಿಕ ಶಾಸ್ತ್ರ, ಅದರ ಬಾಹ್ಯಚಹರೆ, ಸಾಮರ್ಥ್ಯ, ತಾಕತ್ತು, ಆಕರ್ಷಣೆ ಇವುಗಳ ವಿಚಾರದಲ್ಲಿ ನಿಮ್ಮ ಭೌತಿಕ ಶರೀರದ ಬಗ್ಗೆ ನೀವು ಬಹಳಷ್ಟು ಜಾಗೃತರಾಗಿರುತ್ತೀರಿ.
ಎಲ್ಲಾ ರೀತಿಯ ಪರಸ್ಪರ ಸಂಬಂಧಗಳಲ್ಲಿ ನೀವು ವ್ಯವಹರಿಸಲು ಶರೀರಕ್ಕೆ ಅದರದೇ ಆದ ಭಾಷೆ ಇದೆ.
ಸ್ನಾಯುರಚನೆ, ರಕ್ತಪರಿಚಲನೆಯ ರಚನೆ, ಜೀರ್ಣಾಂಗ ರಚನೆ, ಗ್ರಂಥಿರಚನೆ, ಇತ್ಯಾದಿ ಹಲವಾರು ರಚನೆಗಳನ್ನು ಭೌತಿಕ ಶರೀರ ಹೊಂದಿರುತ್ತದೆ. ಇವೆಲ್ಲವುಗಳನ್ನು ಪ್ರಾಣಶಕ್ತಿಯು ನಿಯಂತ್ರಿಸುತ್ತಿರುತ್ತದೆ.
ಶರೀರದ ವ್ಯವಸ್ಥಿತ ಕಾರ್ಯಗಳಿಗೆ ಪ್ರಾಣವೇ ಮೂಲ ಕಾರಣ.
ಬೇರೆ ಸಮಯಗಳಲ್ಲಿ ನಿಮ್ಮ ಮನಸ್ಸಿನಿಂದ ನೀವು ಭೂತಕಾಲಕ್ಕೆ ಸೆಳೆದೊಯ್ಯುಲ್ಪಡುವಿರಿ ಅಥವಾ ಭವಿಷ್ಯತ್ ಕಾಲಕ್ಕೆ ತಳ್ಳಲ್ಪಡುವಿರಿ ಮತ್ತು ನೀವು ಅಲ್ಲಿಯೇ ಬಂಧಿಯಾಗುವಿರಿ.
ಮನಸ್ಸು ಮತ್ತು ಆಲೋಚನೆಗಳ ಭ್ರಾಂತಿ ಮತ್ತು ನಿರ್ಬಂಧಿತ ಅನ್ಯ ಮನಸ್ಕತೆಯಿಂದ ನಿಮ್ಮನ್ನು ನೀವು ಬಿಡಿಸಿಕೊಳ್ಳಿ.
ನಿಮ್ಮ ಪ್ರಜ್ಞೆಯನ್ನು ಪ್ರಚಲಿತ ವರ್ತಮಾನಕ್ಕೆ ತಂದುಕೊಂಡು ಅಲ್ಲಿಂದ ಅದನ್ನು ಒಳಮುಖವನ್ನಾಗಿಸಿಕೊಳ್ಳಿ.
ಆಳವಾಗಿ ಉಸಿರನ್ನು ಎಳೆದುಕೊಳ್ಳಿ ಮತ್ತು ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ.
ನಿಮ್ಮ ಉಸಿರಾಟದ ಬಗ್ಗೆ ಅರಿವಿರಲಿ.
ನಿಮ್ಮ ಉಸಿರಾಟವನ್ನು ಗಮನಿಸುತ್ತಿರಿ.
ಶ್ವಾಸವು ಒಳಗೆ ಮತ್ತು ಹೊರಗೆ ಹೋಗುವ ಮೂಗಿನ ಹೊಳ್ಳೆಗಳ ಮೇಲೆ ಏಕಾಗ್ರತೆ ಇರಲಿ.
ನೀವು ಪುನಃ ಉಸಿರಾಟವನ್ನು ಶುರು ಮಾಡುವ ಮೊದಲು, ನಿಮ್ಮ ಉಸಿರಿನ ನಿಶ್ವಾಸದ ಕೊನೆಯಲ್ಲಿ ಕಿರು ಅಂತರದಲ್ಲಿನ ಶಾಂತತೆಯನ್ನು ಗಮನಿಸಿ.
ಪ್ರಜ್ಞಾವಂತಿಕೆಯಿಂದ ಉಸಿರಾಡುವುದನ್ನು ಮುಂದುವರಿಸಿ.
ಉಸಿರಿನ ಸಂವೇದನೆಯನ್ನು ಗುರುತಿಸಿ.
ಶರೀರದ ಒಳಗೆ ಮತ್ತು ಹೊರಗೆ ಹರಿದಾಡುವ ಗಾಳಿಯನ್ನು ಅನುಭವಿಸಿ. ನೀವು ನಿಮ್ಮ ಅಂತರಂಗದಲ್ಲಿರುವಿರಿ.
ನಿಮ್ಮಲ್ಲಿನ ಆಳ ಭಾವನೆಯನ್ನು ಹುಡುಕಿ ತೆಗೆಯಿರಿ.
ಒಳಗಿನಿಂದ ಶರೀರದ ಸ್ಪರ್ಶವನ್ನು ಅನುಭವಿಸಲು ಪ್ರಯತ್ನಿಸಿ.
ಒಳಗಿನಿಂದಲೇ ಶರೀರದ ಕೆಲವು ವಿಶಿಷ್ಟ ಅವಯವಗಳ ಸ್ಪರ್ಶಾನುಭೂತಿಯನ್ನು ಹೊಂದಿರಿ.
ಕೈಗಳು, ತೋಳುಗಳು, ಪಾದಗಳು, ಹೊಟ್ಟೆ, ಎದೆ, ಕೊರಳು ಮತ್ತು ನಿಮ್ಮ ತುಟಿಗಳ ಸ್ಪರ್ಶ ಸಂವೇದನೆಯನ್ನು ಪಡೆಯಿರಿ. ನೀವು ಅವುಗಳಲ್ಲಿ ಪ್ರಾಣದ ಅನುಭೂತಿಯನ್ನು ಹೊಂದುತ್ತೀರಿ. ನಿಮ್ಮ ಶರೀರದ ಸಂಪೂರ್ಣ ಒಳಗಿನ ಬಗ್ಗೆ ಜಾಗೃತಿ ಹೊಂದಿರಿ. ಶ್ವಾಸ – ಜಾಗೃತಿಯು ನಿಮ್ಮ ಬಾಳಿನಲ್ಲಿ ಬಹಳಷ್ಟು ಅಂತರಾರ್ಥವನ್ನು ತರಲು ಸಹಕಾರಿಯಾಗಿದೆ.
ನಿಮ್ಮ ಭೌತಿಕ ಶರೀರವಷ್ಟೇ ಅಲ್ಲದೆ ಅದರೊಳಗಿನ ಪ್ರಾಣದ ಬಗ್ಗೆಯೂ ಸಹ ಈಗ ನಿಮಗೆ ಅರಿವು ಉಂಟಾಗಿದೆ.
ನಿಮ್ಮಲ್ಲಿ ಬಹಳಷ್ಟು ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಪ್ರಾಣಶಕ್ತಿಯು ನಿಮ್ಮನ್ನು ಜೀವಂತವಾಗಿರಿಸುತ್ತದೆ.
ಈಗ ಎರಡು ಸ್ಥಾನಗಳಾದ ಬಹಿರಂಗ ಮತ್ತು ಅಂತರಂಗದ ನಡುವೆ ನಿಮ್ಮ ಒಟ್ಟು ಶರೀರವನ್ನು ವೀಕ್ಷಿಸಿ.
ಅಂತರಂಗ ಮತ್ತು ಬಹಿರಂಗಗಳ ನಡುವೆ ಇರಿಸಲಾದ ಒಂದು ಆವರಣದಂತೆ, ಕೋಶದಂತೆ ಅದನ್ನು ಕಲ್ಪಿಸಿಕೊಳ್ಳುವುದು ಸುಲಭವಾಗಿರುತ್ತದೆ.
ನಮ್ಮ ಪ್ರಾಚೀನ ಋಷಿಮುನಿಗಳು ಕೋಶ, ಆವರಣ ಎಂಬ ಪದಗಳನ್ನು, ಅಂತರಂಗ ಮತ್ತು ಬಹಿರಂಗಗಳ ಮಧ್ಯೆ ಇರಿಸಲಾದಂತಹ ಶರೀರವನ್ನು ವರ್ಣಿಸಲು ಬಳಸುತ್ತಿದ್ದರು.
ಅವರು ನಮ್ಮ ಭೌತಿಕ ದೇಹವನ್ನು “ಅನ್ನಮಯ ಕೋಶ” ಎಂದು ಕರೆದರು. ಆಹಾರದ ಮೂಲತತ್ವದಿಂದ ಇದು ಹುಟ್ಟಿದೆ,ಆಹಾರದಿಂದ ಇದು ಪೋಷಿಸಲ್ಪಟ್ಟಿದೆ; ಕೊನೆಗೆ ಸಾವಿನ ನಂತರ ಇದು ಆಹಾರದೊಂದಿಗೆ ಬೆರೆತುಹೋಗುತ್ತದೆ. ಇದು ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶ ಎಂಬ ಪಂಚಭೂತಗಳಿಂದ ನಿರ್ಮಿಸಲ್ಪಟ್ಟಿದೆ. ಹಲವಾರು ವ್ಯವಸ್ಥೆಗಳಿಂದ ಹಾಗೂ ಪ್ರಕ್ರಿಯೆಗಳಿಂದ, ಪ್ರಾಣದ ಸಹಾಯದಿಂದ ಈ ದೇಹವು ಜೀವಂತವಾಗಿದೆ ಮತ್ತು ಆರೋಗ್ಯಕರವಾಗಿದೆ. ಈ ಅನ್ನಮಯಕೋಶದ ಆತ್ಮವೇ ಪ್ರಾಣ. ಅದನ್ನು ಕುರಿತು ಧ್ಯಾನ ಮಾಡಿ.
ಸಾಧನ ಮಾರ್ಗ – ಧ್ಯಾನಂ –
ಆತ್ಮಜಾಗೃತಿ
ಧ್ಯಾನ ಮಾರ್ಗದರ್ಶಿ
– ಪ್ರತಿಲಿಪಿ-2
ಮತ್ತೊಮ್ಮೆ ಪ್ರಜ್ಞಾಪೂರ್ವಕವಾಗಿ ಉಸಿರಾಟವನ್ನು ಮುಂದುವರಿಸಿ. ನೀವೀಗ ಅಂತರ್ಮುಖಿಯಾಗಿದ್ದೀರ. ಅನ್ನಮಯ ಕೋಶದ ಅಂತರಾತ್ಮವನ್ನು ತುಂಬಿರುವ ಪ್ರಾಣವನ್ನು ಅಂತಃಶರೀರವನ್ನಾಗಿಸಿದ ಅನುಭವವನ್ನು ನೀವು ಹೊಂದಬಹುದು.
ಇದೇ ಪ್ರಾಣಮಯ ಕೋಶ.
ಇದಕ್ಕೆ ಮನುಷ್ಯಾಕೃತಿಯೂ ಸಹ ಇದೆ.
ಪ್ರಾಣವು ತನ್ನಷ್ಟಕ್ಕೆ ಐದು ಮಹತ್ವದ ಕಾರ್ಯಗಳಾಗಿ ವಿಭಜಿಸಲ್ಪಡುತ್ತದೆ.
ಮುಖದಲ್ಲಿ ನೆಲಸಲ್ಪಟ್ಟ ಪ್ರಾಣವು ಉಸಿರಾಟವನ್ನು ನಿಯಂತ್ರಿಸುತ್ತದೆ.
ಕೆಳಭಾಗದಲ್ಲಿರುವ ಅಪಾನವು ವಿರೇಚನಕ್ಕೆ ಸಹಾಯ ಮಾಡುತ್ತದೆ.
ಮಹತ್ವದ ಶಕ್ತಿಯಾದ ವ್ಯಾನವು ನರಗಳ ಮೂಲಕ ಸಂಪೂರ್ಣ ಶರೀರವನ್ನು ವ್ಯಾಪಿಸಿ ಮುಖ್ಯ ಅಂಗಗಳಿಗೆ ಮತ್ತು ಸಂಧಿಗಳಿಗೆ ಬಲವನ್ನು ಕೊಡುತ್ತದೆ.
ಕಂಠದಲ್ಲಿರುವ ಉದಾನವು ಪರಿವರ್ತನೆಯ ಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಕ್ಕಳಿನ ಬಳಿ ಇರುವ ಸಮಾನವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಪಂಚ ಕರ್ಮೇಂದ್ರಿಯಗಳ ಸರಿಯಾದ ಬಳಕೆಗೆ ಪ್ರಾಣವು ಮತ್ತೆ ಚುರುಕು ನೀಡುತ್ತದೆ.
ಮಾತಾಡುವ ಕಾರ್ಯಕ್ಕಾಗಿ ನಾಲಿಗೆ
ಹಿಡಿತಕ್ಕಾಗಿ ಹಸ್ತಗಳು
ಚಲನೆಗಾಗಿ ಕಾಲುಗಳು
ಸಂತಾನಕ್ಕಾಗಿ ಜನನಾಂಗಗಳು
ವಿಸರ್ಜನೆಗಾಗಿ ಗುದದ್ವಾರ
ಪ್ರ್ರಾಣಮಯ ಕೋಶದಲ್ಲಿ ಮನಸ್ಸು ಅದರ ಆತ್ಮವಾಗಿದೆ
ಪ್ರಾಣಮಯ ಕೋಶವನ್ನು ಕುರಿತು ಧ್ಯಾನಿಸಿ.
ಮತ್ತೆ ಪ್ರಜ್ಞಾಪೂರ್ವಕವಾಗಿ ಉಸಿರಾಡಿ. ನೀವು ಶ್ವಾಸಕ್ರಿಯೆ ಇರುವ ದೇಹದಲ್ಲಿದ್ದೀರಿ. ಒಂದೆಡೆ ಭೌತಿಕ ಶರೀರವಿದೆ ಮತ್ತು ಆಳವಾದ ಇನ್ನೊಂದೆಡೆ ಮತ್ತೊಂದು ಶರೀರವಿದೆ. ಅದು ಮನಸ್ಸಿನಿಂದ ಆವರಿಸಿದೆ.
ಮನೋಮಯ ಕೋಶವನ್ನು ಪ್ರವೇಶಿಸಿ.
ಮನಸ್ಸಿನ ಧೀಶಕ್ತಿಯನ್ನು ಅವಲೋಕಿಸಿ. ಚಂಚಲತೆ, ಪರಿವರ್ತನೆ, ಹೊಯ್ದಾಟ, ತುಮುಲ, ಕಲ್ಪನೆ, ವಿಶ್ಲೇಷಣೆ,…
ಹೀಗೆ ಮನಸ್ಸಿನ ಹಲವು ಮಜಲುಗಳನ್ನು ಗಮನಿಸಿ.
ಇದು ನಿಮ್ಮ ಇಚ್ಛಾಶಕ್ತಿಯನ್ನು ಬಳಸಲು ಸಹಾಯಮಾಡುತ್ತದೆ.
ಅಲೆಗಳ ರೂಪದಲ್ಲಿ ಆಲೋಚನೆಗಳ ಏರಿಳಿತ ಉಂಟಾಗುತ್ತದೆ.
ಅವನ್ನು ಗಮನಿಸಿ. ಅವುಗಳು ಬಂದು ಹೋಗಲಿ. ನೀವೊಬ್ಬ ಪ್ರೇಕ್ಷಕರಾಗಿರಿ.
ಚಿತ್ತ ಎಂದು ಕರೆಯಲ್ಪಡುವ ನೆನಪುಗಳ ವಿಶಾಲ ಖಜಾನೆಯನ್ನು ಅವಲೋಕಿಸಿ. ನಿಮ್ಮ ಪಂಚೇಂದ್ರಿಯಗಳ ಮೂಲಕ ನಿಮಗೆ ದೊರಕುವ ಅನುಭವ, ಜ್ಞಾನವು ಚಿತ್ತದಲ್ಲಿ ಸಂಗ್ರಹವಾಗಿರುತ್ತದೆ.
ಎಂತಹ ಅದ್ಭುತ ಸಾಧನ ಈ ಮನಸ್ಸು ಎಂಬುದು?!!
ಪೂರ್ವ ಜನ್ಮಗಳಲ್ಲಿ ಮಾಡಿದ ಕರ್ಮಗಳಿಂದ ಉಂಟಾದ ಸಂಸ್ಕಾರ ಮತ್ತು ವಾಸನೆಗಳಿಂದ ತುಂಬಿರುವ, ಅರೆ ಜಾಗೃತ ಪ್ರಜ್ಞೆ ಮತ್ತು ಅನಭಿಜ್ಞ ಪ್ರಜ್ಞೆ ಎಂಬ ಎರಡು ಪದರಗಳು ಮನಸ್ಸಿನೊಳಗೆ ಇರುತ್ತವೆ.
ಸಂಸ್ಕಾರಗಳಿಂದ ಅಸಂಖ್ಯಾತ ಆಲೋಚನೆಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ಗಮನಿಸಿ. ಅವು ನಿಮ್ಮನ್ನು ಗತಕಾಲಕ್ಕೆ ಸೆಳೆದೊಯ್ಯುತ್ತವೆ ಅಥವಾ ಭವಿಷ್ಯತ್ ಕಾಲಕ್ಕೆ ದೂಡುತ್ತವೆ. ಅಪೇಕ್ಷೆ, ಆಲೋಚನೆ, ನಿರ್ಧಾರ, ಮಾತು ಮತ್ತು ಕೃತಿ ಹೀಗೆ ನಿಮ್ಮನ್ನು ಪ್ರೇರೇಪಿಸುವುದು ಈ ಸಂಸ್ಕಾರಗಳು ಮತ್ತು ವಾಸನೆಗಳು.
ನೀವು ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಬೇಕೆಂದಿದ್ದರೆ, ಆಗ ನೀವು ಹೊಸ ಆಲೋಚನಾ ಲಹರಿಯನ್ನು ಪ್ರಾರಂಭಿಸಿ ಅದನ್ನು ಅಳವಡಿಸಿಕೊಳ್ಳಬೇಕು.
ನೀವು ಆಲೋಚನೆಗಳೆಂಬ ಪ್ರವಾಹದಲ್ಲಿ ಮುಳುಗಿರುವಿರಿ.
ಅವುಗಳನ್ನು ಗಮನಿಸಿ.
ಆ ಆಲೋಚನೆಗಳು ಬಂದು ಹೋಗುವುದನ್ನು ನೀವು ಅವಲೋಕಿಸುತ್ತಿರುವಂತೆಯೇ ಮನಸ್ಸು ಸರೋವರದಂತೆ ಪ್ರಶಾಂತವಾಗತೊಡಗುತ್ತದೆ. ಆ ಮನಸ್ಸಿನಲ್ಲಿ ಮತ್ತೊಂದು ಧೀಶಕ್ತಿಯಾದ ಬುದ್ಧಿಯ ಕ್ಷಣಿಕ ದರ್ಶನ ಈಗ ನಿಮಗಾಗಿರುತ್ತದೆ.
ಮನೋಮಯ ಕೋಶದ ಆತ್ಮವೇ ಬುದ್ಧಿ. ಆ ಮನೋಮಯ ಕೋಶವನ್ನು ಕುರಿತು ಧ್ಯಾನಿಸಿ.
ಸಾಧನ ಮಾರ್ಗ
ಧ್ಯಾನಂ
ಆತ್ಮಜಾಗೃತಿ
ಧ್ಯಾನ ಮಾರ್ಗದರ್ಶಿ
ಪ್ರತಿಲಿಪಿ – 3
ಮನೋಮಯ ಕೋಶವು, ವಿಜ್ಞಾನಮಯ ಕೋಶದಿಂದ ಆವರಿಸಲ್ಪಟ್ಟಿದೆ.
ಅಹಂಕಾರ ಮತ್ತು ಬುದ್ಧಿ ಎಂಬ ವಿಶಿಷ್ಟ ಗುಣಲಕ್ಷಣಗಳಿಂದ ಕೂಡಿದ ವಿಜ್ಞಾನಮಯ ಕೋಶದ ಕೇಂದ್ರದಲ್ಲಿ ನಿಮ್ಮನ್ನು ನಿಲ್ಲಿಸಿಕೊಳ್ಳಿ.
ನಾನು ಮತ್ತು ನನ್ನದು ಎಂಬುದು ಅಹಂಕಾರದ ಪ್ರಜ್ಞೆ.
ಪಂಚ ಕರ್ಮೇಂದ್ರಿಯಗಳ ನೆರವಿನಿಂದ ಬುದ್ಧಿಯು ಮನಸ್ಸಿನಿಂದ ಗಳಿಸಿದ ಜ್ಞಾನವನ್ನು ಊರ್ಜಿತಗೊಳಿಸುತ್ತದೆ. ಅದು ವಿಜ್ಞಾನ, ವಿವೇಕವಾಗುತ್ತದೆ.
ವಿವೇಚನೆ, ದಿಟ್ಟತನ, ನಿರ್ಧಾರ ತೆಗೆದುಕೊಳ್ಳುವುದು ಇತ್ಯಾದಿಗಳು ಬುದ್ಧಿಯ ಗುಣಲಕ್ಷಣಗಳು.
ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಇವು ಬುದ್ಧಿಯ ಎರಡು ಶಕ್ತಿಗಳು. ಬುದ್ಧಿಗೆ ಎರಡು ಕಾರ್ಯಗಳಿವೆ. ನಂಬಿಕೆಯ ನೆರವಿನೊಂದಿಗೆ ಧರ್ಮ ಅಥವಾ ಋಜುಮಾರ್ಗ ಮತ್ತು ಸತ್ಯದ ಅನುಸರಣೆಯೊಂದಿಗೆ ಅದು ಕಾರ್ಯ ನಿರ್ವಹಿಸುತ್ತದೆ. ಚಿತ್ತೈಕಾಗ್ರತೆಯ ಶಕ್ತಿಯಿಂದ ಸಂಪನ್ನವಾದ ಬುದ್ಧಿಯು ಧ್ಯಾನಮಾಡುತ್ತದೆ.
ಧ್ಯಾನ ಮತ್ತು ಕ್ರಿಯೆ ಆನಂದದಲ್ಲಿ ಪರ್ಯವಸಾನಗೊಳ್ಳುತ್ತದೆ.
ಧ್ಯಾನ ಮತ್ತು ಸತ್ಕಾರ್ಯದ ಫಲಿತವೇ ಆನಂದ.
ಈ ವಿಜ್ಞಾನಮಯ ಕೋಶದ ಆತ್ಮವೇ ಆನಂದ.
ಈ ವಿಜ್ಞಾನಮಯ ಕೋಶವನ್ನು ಕುರಿತು ಧ್ಯಾನಮಾಡಿ.
ಇನ್ನೂ ಒಳಹೊಕ್ಕು, ಆನಂದ, ಸಂತೋಷ, ಉಲ್ಲಾಸ ಮತ್ತು ಪರಮಸುಖದಿಂದ ವ್ಯಾಪಿಸಿರುವ ಆನಂದಮಯ ಕೋಶವನ್ನು ಪ್ರವೇಶಿಸಿ.
ನಿಮ್ಮ ಪ್ರಜ್ಞೆಯು ತನ್ನ ಸ್ವಾಭಾವಿಕ ಸ್ಥಿತಿಯನ್ನು ತಲುಪಿದೆ.
ಅದು ನಿಷ್ಕಲ್ಮಶವಾದ, ಶಾಂತವಾದ, ಪರಮಾನಂದದ, ಪ್ರೀತಿಯ ಸಾಮರಸ್ಯದ, ಸತ್ಯದ, ಅಂದದ ಮತ್ತು ಸ್ವತಂತ್ರವಾದ ಒಂದು ಸ್ಥಿತಿ. ಪರಮಾತ್ಮನಾದ ಬ್ರಹ್ಮನು ಆನಂದದ ಮೂಲ ಪುರುಷ.
ಆತನ ಪ್ರತಿಬಿಂಬವೇ ನೀವು. ನೀವೀಗ ನಿಮ್ಮ ಅಂತರಾತ್ಮನ ಜತೆ ಇರುವಿರಿ. ನೀವೇ ನಿಮ್ಮ ಸತ್ಯಾತ್ಮ, ಪರಿಶುದ್ಧ ಪ್ರಜ್ಞೆ ಆಗಿರುವಿರಿ.
ಚಿದಾನಂದ ರೂಪಃ ಶಿವೋಹಂ, ಶಿವೋಹಂ
ಒಳಮುಖವಾಗಿರುವ ಮತ್ತು ಹೊರಮುಖವಾಗಿರುವ ಪ್ರಕೃತಿಯೊಂದಿಗೆ ನೀವು ಐಕಮತ್ಯವನ್ನು ಹೊಂದಿರುವಿರಿ. ಈ ಪರಮಾನಂದದ ಸ್ಥಿತಿಯಲ್ಲಿಯೇ ನೀವು ಸ್ಥಿತರಾಗಿರಿ. ನಿಮ್ಮ ಪ್ರಜ್ಞೆಯನ್ನು ಎಲ್ಲ ದಿಕ್ಕುಗಳಲ್ಲೂ ವಿಸ್ತರಿಸಿ. ಧನಾತ್ಮಕ ಚಿಂತನೆಗಳನ್ನು ಉತ್ಪತ್ತಿ ಮಾಡಿ ಅದನ್ನು ಎಲ್ಲಡೆ ಪಸರಿಸಿ.
ಸರ್ವೇ ಭವಂತು ಸುಖಿನಃ ಸರ್ವೆ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು ಮಾಕಶ್ಚಿತ್ ದುಃಖ ಭಾಗ್ಭವೇತ್.
ಇದೇ ಸ್ಥಿತಿಯಲ್ಲಿ ಅಂದರೆ ಸ್ವಾಬಾವಿಕ,ಮೂಲಭೂತ, ಪರಿಪೂರ್ಣ ಸ್ಥಿತಿಯಲ್ಲಿ ಕೊಂಡಿ ಕಳಚಿದಂತೆ ಇದ್ದುಬಿಡಿ.- ಇಲ್ಲಿ ನಿಮಗೆ ಪವಿತ್ರತೆ, ಶಾಂತಿ,ಪ್ರೀತಿ ಮತ್ತು ಪರಮಾನಂದದ ಜತೆಗೆ ಸ್ವಾತಂತ್ರವೂ ಸಿಗುತ್ತದೆ. ಇದು ಅತ್ಯಂತ ವ್ಯಾಪಕ ಮತ್ತು ಅಂತರ್ಗತ ಸ್ವಾತಂತ್ರ್ಯ. ನಾಮಾತೀತ, ಸ್ವರೂಪಾತೀತ, ಪರಿಶುದ್ಧ ಸಾರವುಳ್ಳ ಸಕಲವೂ ದ್ವಂದ್ವವಿಲ್ಲದೆ ಏಕೀಭವಿಸಿ ಐಕ್ಯವಾಗುತ್ತವೆ.
ಪ್ರಜ್ಞಾವಸ್ಥೆಯ ಹೊಸ ಆಯಾಮವನ್ನು ನೀವು ತಲುಪಿದ್ದೀರಿ.
ನೀವು ಅಚಲವಾದ, ಜಾಗರೂಕವಾದ, ಆನಂದಮಯ ಸ್ಥಿತಿಯಲ್ಲಿದ್ದೀರಿ.
ನೀವು ಹೇಳುವ ಅಥವಾ ಮಾಡುವ ಎಲ್ಲದರಲ್ಲಿಯೂ ಉತ್ಸಾಹ ತುಂಬಿ ತುಳುಕುತ್ತಿರುತ್ತದೆ. ಸಕಲಕ್ಕೂ ಮತ್ತು ಸರ್ವರಿಗೂ ಸಂಬಂಧಿಸಿದ ಸಂಪೂರ್ಣ ಜಗತ್ತಿನ ಭಾಗವಾಗಿರುವಿರಿ ನೀವು.
ಪೂರ್ಣವ್ಯಾಪ್ತಿಯುಳ್ಳ ಆತ್ಮನಲ್ಲಿ ನೀವು ಒಂದಾಗಿರುವಿರಿ.
ಈ ಆಳವಾದ ಆಧ್ಯಾತ್ಮಿಕ ಸ್ಥಿತಿಯಲ್ಲಿ ಇರುವ ನೀವು ಶರೀರದ ಮಟ್ಟ ಮಹತ್ವಪೂರ್ಣವಾದ ಶ್ವಾಸ, ಪಂಚಕರ್ಮೇಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ, ಈ ಎಲ್ಲ ಮುಂಚಿನ ಸ್ಥಿತಿಗಳ ಮೇಲೆ ಸಂಪೂರ್ಣ ಹತೋಟಿಯನ್ನು ಚಲಾಯಿಸುತ್ತೀರಿ.
ನಿಮ್ಮಲ್ಲಿರುವ ಎಲ್ಲ ಧೀಶಕ್ತಿ ಮತ್ತು ಸಾಮರ್ಥ್ಯಗಳಿಗೆ ನೀವೇ ಅಧಿಪತಿಗಳು.
ರಥದಲ್ಲಿ ಆಸೀನನಾದ ವ್ಯಕ್ತಿಯಂತೆ ನೀವು ನಿಮ್ಮನ್ನು ಕಲ್ಪಿಸಿಕೊಳ್ಳಬಹುದು.
ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವತು,
ಬುದ್ಧಿಂತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವಚ,
ಇಂದ್ರಿಯಾಣಿ ಹಯಾನ್ಯಾಹುಃ ವಿಶಯಾಂಸ್ತೇಷು ಗೋಚರಾನ್
ಆತ್ಮೇಂದ್ರಿಯ ಮನೋಯುಕ್ತಂ ಭೋಕ್ತೇತ್ಯಾಹುಃ ಮನೀಷಿಣಃ
ದೇಹವೇ ರಥವು. ಬುದ್ಧಿಯು ಅದರ ಸಾರಥಿ.
ಮನಸ್ಸು ರಥವನ್ನು ಎಳೆಯುವ ಕುದುರೆಗಳಿಗೆ ಹಾಕಿದ ಲಗಾಮು, ಕರ್ಮೇಂದ್ರಿಯಗಳು ಮತ್ತು ಗ್ರಹಣೇಂದ್ರಿಯಗಳು ರಥಕ್ಕೆ ಕಟ್ಟಿದ ಕುದುರೆಗಳು.
ನಿಮ್ಮ ಧ್ಯೇಯಗಳೇ ಪಥವು. ಈ ರಥದಲ್ಲಿ ಕುಳಿತು, ಬುದ್ಧಿ, ಮನಸ್ಸು, ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಇವುಗಳೊಡನೆ ಸಾಗುವ ನೀವೇ ಅದರ ಭೋಕ್ತರು.
ಅಭ್ಯುದಯ– ಅಂದರೆ ಯಶಸ್ಸು ಮತ್ತು ಸಾಧನೆಯನ್ನೊಳಗೊಂಡ ಸರ್ವಾಗೀಣವಾದ, ವ್ಯಾಪಕವಾದ ಪ್ರಗತಿಯೆಂಬ ಗುರಿಯನ್ನು ಸೇರಲು ನೀವು ಪಯಣ ಮಾಡುತ್ತಿರುವಿರಿ.
ನೀವು ಪರಿವರ್ತನೆ ಹೊಂದಿರುವಿರಿ. ನಿಜವಾಗಿ ನೀವು ಯಾರು ಎಂಬುದನ್ನು, ಸಂಪೂರ್ಣವಾಗಿ ಎಚ್ಚೆತ್ತುಕೊಂಡ ನೀವು ಅರಿತಿರುವಿರಿ. ನೀವೇ ಪ್ರಜ್ಞೆ, ನೀವೇ ಸತ್ಯ, ಮತ್ತು ನೀವೇ ಆನಂದ. ನಿಮ್ಮ ಬುದ್ಧಿ, ನಿಮ್ಮ ಗ್ರಹಣೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು, ನಿಮ್ಮ ಮನಸ್ಸು ಇವುಗಳ ಸಹಚರ್ಯದಿಂದ ನೀವೇ ಕರ್ತೃ ಮತ್ತು ನೀವೇ ಭೋಕ್ತ ಆಗಿದ್ದೀರಿ.
ನಿಮ್ಮ ನಿಜ ಸ್ವರೂಪ ಮತ್ತು ನಿಮ್ಮಲ್ಲಿರುವ ಸಂಕಲ್ಪ ಶಕ್ತಿಯನ್ನು ನೀವೀಗ ಕಂಡುಕೊಂಡಿರುವಿರಿ.
ಯೋಗಃ ಕರ್ಮಸು ಕೌಶಲಂ.
ಕರ್ಮದಲ್ಲಿನ ಕೌಶಲ್ಯವೇ ಯೋಗ.
ನೀವೀಗ ಎಚ್ಚೆತ್ತುಕೊಂಡಿರುವಿರಿ ಮತ್ತು ಶಕ್ತಿವಂತರಾಗಿರುವಿರಿ.
ನಿಮ್ಮ ಗುರಿಯನ್ನು, ಧ್ಯೇಯವನ್ನು ಸಿದ್ಧಿಸಿಕೊಳ್ಳುವವರೆಗೂ ವಿರಮಿಸಬೇಡಿ.
ಓಂ ಶಾಂತಿಃ, ಶಾಂತಿಃ, ಶಾಂತಿಃ.
ಸಾವಕಾಶವಾಗಿ ನಿಮ್ಮ ಕಣ್ಣುಗಳನ್ನು ತೆರೆಯಿರಿ. ಸಾವಕಾಶವಾಗಿ.
ॐ
ಆತ್ಮಜಾಗೃತಿಯ
ಮಾರ್ಗದರ್ಶಿತ ಧ್ಯಾನ
ದಯವಿಟ್ಟು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಪರಿವೀಕ್ಷಿಸಲು ಆರಂಭಿಸಿ