SRI SUKTAM
(283-319)
Purusha Suktam, the mantras of which we have completed reciting with their meanings, is often associated with another great Suktam called Sree Suktam.
Both Purusha Suktam and Sri Suktam are extensively used in the practices of daily worship, recitation and other rituals.
Sometimes one mantra from Purusha Sukta is paired with one mantra from Sree Suktam and both are used in the ritual of performing the Shodasopachaara Puja.
If the Purusha Suktam gives the vision of Cosmic Creation and the Glory and the Splendour of the Creator, Sree Suktam provides an insight into the Power and Energy required to sustain that Creation.
It is to be noted that the word SRI has wider associations with Sri Chakra, Sri Vidya, Sri Maata and Lalita Tripura Sundari.
The text of Sree Suktam is to be found as supplement to the Fifth Mandala of Rig Veda.
It consists of 15 mantras.
Mantras 1 and 2: We invoke Jaataveda, the All-Knowing God of Fire, to invite, on our behalf, Goddess Sri into our homes.
Mantra 3 : Answering our prayers, Goddess Lakshmi appears in all her Splendour, seated in a chariot drawn by horses and elephants trumpeting her Glory.
Mantra 4 to 10: We directly praise Her Glory, Majesty and Splendour and invite Her to be present in our homes.
Two mantras, 11 and 12, are addressed, first,
a. to Sage Kadruma, who accepted Goddess Lakshmi as his daughter when she emerged from the Churning of the Milky Ocean. We approach him to help bring Goddess Lakshmi into our families;
b. and then to Chikleeta, Lakshmi’s son, asking him to accompany his Mother to stay with us in our homes.
In Mantraas 13, 14, and 15, we again address Jataveda and plead with him to help us invite the Goddess into our homes.
Mantra 16 gives the phalasruti, the benefit we get from properly reciting the mantras.
Mantra 17 tells that the Rishis for this Suktam are the famous Ananda, Kardama and Chikleeta, and Sree Herself is the Devata.
This is for the purpose of doing Mantra Japa.
The first 15 mantrans in this Sri Suktam are infused with great mantric power. Hence they are recommended for Mantra Japa.
. The remaining mantras in this Suktam are prayers, which are drawn from other Vedic and Pauranic texts.
The two terms SRI and LAKSHMI have come to be used in the limited sense of “the Consort of Vishnu” and “the Goddess of Wealth” alone, whereas, in the Vedic mantras, the two terms have very broad connotations.
Sri or Lakshmi is presented as the Supreme Mother and the Supreme Ruler of all Creation. She is the Goddess that stands for Opulence, Magnificence and Splendour; Health, Wealth and Happiness; and everything that is Good and Auspicious.
Reciting all the mantras with their meanings contained in Srisuktam should help us to reorient ourselves to the broad connotations as envisaged by the great Rishis in their mantras.
Sri or Lakshmi is also shown as the antithesis of Jyestha, the elder sister of Lakshmi, who is also called Alakshmi that stands for hunger, thirst, poverty, misery and misfortune.
Let us drive out Alakshmi or Jyestha and welcome Sri or Laksmi into our homes and let her join all our families and stay with us.
Let Her bless us with Good Health, Happiness and Prosperity.
****
Before I conclude this Introduction to Sri Suktam, let me remember my brother Late Lanka Krishna Murti and make a reference to his first poetical work called Sree Vilaasamu. It is a kavya in the form of a shataka, containing 108 padyas.
In this poem, my brother laments over the use of the two terms Sri and Lakshmi in the limited sense of mere wealth, and consequently the undue importance given to the acquisition of wealth, which results in social unrest, inequality and suffering.
The remedy lies in the proper understanding of the concepts of Sri and Lakshmi, as shown in the Sree Suktam. This should help people to lead a Dharmic way of life and live in peace and harmony, he asserted.
Sree Vilaasamu was his first poetical work and perhaps his first initiative, through his writings, for the propagation of Sanaathana Dharma.
*****
SREE SUKTAM
ॐ
हिरण्यवर्णां हरिणीं सुवर्णरजतस्रजाम् ।
चन्द्रां हिरण्मयीं लक्ष्मीं जातवेदो म आवह ॥१॥
Om
Hirannya-Varnnaam Harinniim Suvarnna-Rajata-Srajaam |
Candraam Hirannmayiim Lakssmiim Jaatavedo Ma Aavaha ||1||
1. O Jataveda, the All-Knowing God of Fire,
invoke for me that Goddess Lakshmi.
who shines forth with golden complexion,
who takes away all our sins,
who is adorned by garlands of gold and silver,
who resembles the moon in shedding cool rays,
and who stands radiating golden luster –
that is Goddess Lakshmi –
Please invite Her on my behalf.
तां म आवह जातवेदो लक्ष्मीमनपगामिनीम् ।
यस्यां हिरण्यं विन्देयं गामश्वं पुरुषानहम् r॥२॥
Taam Ma Aavaha Jaatavedo Lakssmiim-Anapagaaminiim |
Yasyaam Hirannyam Vindeyam Gaam-Ashvam Purussaan-Aham ||2||
2. O Jaataveda, the All-Knowing God of Fire,
Invite, on my behalf, Goddess Sree
to come and stay with me.
Having come and given all favours,
She should not leave me.
While She is with me, I shall gain
wealth, gold, cows, horses;
I shall gain relatives and friends.
O Jaataveda, invite Her to bless me with them.
अश्वपूर्वां रथमध्यां हस्तिनादप्रबोधिनीम् ।
श्रियं देवीमुपह्वये श्रीर्मा देवी जुषताम् ॥३॥
Ashva-Puurvaam Ratha-Madhyaam Hastinaada-Prabodhiniim |
Shriyam Deviim-Upahvaye Shriirmaa Devii Jussataam ||3||
3. In answer to the prayers made,
Goddess Lakshmi arrives in a spectacular way.
She is seated in a chariot that is drawn by horses
and She is greeted by the trumpeting of elephants.
O Radiant Goddess, I invite you heartily.
Stay with us in happiness.
कां सोस्मितां हिरण्यप्राकारामार्द्रां ज्वलन्तीं तृप्तां तर्पयन्तीम् ।
पद्मे स्थितां पद्मवर्णां तामिहोपह्वये श्रियम् ॥४॥
Kaam So-Smitaam Hirannya-Praakaaraam-Aardraam Jvalantiim Trptaam Tarpayantiim |
Padme Sthitaam Padma-Varnnaam Taam-Ihopahvaye Shriyam ||4||
4. I request the Goddess Sree to be with us
with her Radiance and Glory;
with a smiling face of golden complexion,
filled with Joy and spreading it all over;
as She is seated in a lotus,
and shining like the lotus.
I entreat Her to be so,
with such glorious and gracious Presence.
चन्द्रां प्रभासां यशसा ज्वलन्तीं श्रियं लोके देवजुष्टामुदाराम् ।
तां पद्मिनीमीं शरणमहं प्रपद्येऽलक्ष्मीर्मे नश्यतां त्वां वृणे ॥५॥
Candraam Prabhaasaam Yashasaa Jvalantiim Shriyam Loke Deva-Jussttaam-Udaaraam |
Taam Padminiim-Iim Sharannam-Aham Prapadye-[A]lakssmiir-Me Nashyataam Tvaam Vrnne ||5||
5.I seek refuge at the Lotus Feet of Goddess Sree
who shines Moon-like, who is Resplendent,
Who is Generous and Kind,
Who receives adorations from all the Devas,
Who holds a beautiful Lotus in her hand
and Who is the Devata for the Beeja Mantra EEM.
May She eradicate all the poverty and misfortune
signified by Alakshmi.
आदित्यवर्णे तपसोऽधिजातो वनस्पतिस्तव वृक्षोऽथ बिल्वः ।
तस्य फलानि तपसानुदन्तु मायान्तरायाश्च बाह्या अलक्ष्मीः ॥६॥
Aaditya-Varnne Tapasodhi-Jaato Vanaspatis-Tava Vrkssotha Bilvah |
Tasya Phalaani Tapasaa-Nudantu Maaya-Antaraayaashca Baahyaa Alakssmiih ||6||
6. O Resplendent Goddess, shining like the Sun,
by the Power generated by your Tapas,
the Bilva Tree has come into being
as the King of the trees in the forest.
By the same power of your Tapas,
the Fruits of the Bilva Tree have acquired the Power
to cure both the internal ailments caused by ignorance
and the external obstructions caused by Alakshmi
that stands for Inauspiciousness.
उपैतु मां देवसखः कीर्तिश्च मणिना सह ।
प्रादुर्भूतोऽस्मि राष्ट्रेऽस्मिन् कीर्तिमृद्धिं ददातु मे ॥७॥
Upaitu Maam Deva-Sakhah Kiirtish-Ca Manninaa Saha |
Praadurbhuutosmi Raassttre-smin Kiirtim-Rddhim Dadaatu Me ||7||
7. O Goddess Sree,
May I be accompanied by Kubera,
the God of Wealth, who remains friends
with all the gods;
May I also be accompanied by Fame and Prosperity.
I feel blessed and favoured by You
for having taken birth in this State.
Grant me Fame and Fortune.
क्षुत्पिपासामलां ज्येष्ठामलक्ष्मीं नाशयाम्यहम् ।
अभूतिमसमृद्धिं च सर्वां निर्णुद मे गृहात् ॥८॥
Kssut-Pipaasaa-Malaam Jyesstthaam-Alakssmiim Naashayaamy-Aham |
Abhuutim-Asamrddhim Ca Sarvaam Nirnnuda Me Grhaat ||8||
8. By your Grace, O Goddess Sree,
I want to eradicate Alakshmi,
who happens to be Your elder Sister named Jyestha,
and who stands for hunger and thirst.
I shall also drive away from my home
poverty and decay.
गन्धद्वारां दुराधर्षां नित्यपुष्टां करीषिणीम् ।
ईश्वरींग् सर्वभूतानां तामिहोपह्वये श्रियम् ॥९॥
Gandha-Dvaaraam Duraadharssaam Nitya-Pussttaam Kariissinniim |
Iishvariing Sarva-Bhuutaanaam Taam-Ihopahvaye Shriyam ||9||
9. I welcome into our midst Goddess Lakshmi,
who is richly fragrant, unconquerable,
and ever-nourishing;
who is endowed with every virtue and
who is the Ruler and Controller of every being.
May She bless us with her Presence.
मनसः काममाकूतिं वाचः सत्यमशीमहि ।
पeशूनां रूपमन्नस्य मयि श्रीः श्रयतां यशः ॥१०॥
Manasah Kaamam-Aakuutim Vaacah Satyam-Ashiimahi |
Pashuunaam Ruupam-Annasya Mayi Shriih Shrayataam Yashah ||10||
10. May noble thoughts generate in my mind.
May I be full of Joy.
May my speech be Truthful.
May I be delighted by the possession of cattle
and abundance of food.
It is all by your Grace, O Goddess Sree.
कर्दमेन प्रजाभूता मयि सम्भव कर्दम ।
श्रियं वासय मे कुले मातरं पद्ममालिनीम् ॥११॥
Kardamena Prajaa-Bhuutaa Mayi Sambhava Kardama |
Shriyam Vaasaya Me Kule Maataram Padma-Maaliniim ||11||
11. O Sage Kardama,
Goddes Lakshmi,
whom you have as your daughter,
and who is Goddess of Wealth and Prosperity,
and who wears a garland of lotuses,
see to it that She comes to dwell always
in our homes as our Mother.
आपः सृजन्तु स्निग्धानि चिक्लीत वस मे गृहे ।
नि च देवीं मातरं श्रियं वासय मे कुले ॥१२॥
Aapah Srjantu Snigdhaani Cikliita Vasa Me Grhe |
Ni Ca Deviim Maataram Shriyam Vaasaya Me Kule ||12||
12. O Sage Chikleeta,
May the life-giving waters produce
plenty of food.
We invite you into our house
along with your Mother, Goddess Laksmi.
Make sure that your Mother, Goddess Lakshmi,
continues to stay with our family for ever.
आर्द्रां पुष्करिणीं पुष्टिं पिङ्गलां पद्ममालिनीम् ।
चन्द्रां हिरण्मयीं लक्ष्मीं जातवेदो म आवह ॥१३॥
Aardraam Pusskarinniim Pussttim Pinggalaam Padma-Maaliniim |
Candraam Hirannmayiim Lakssmiim Jaatavedo Ma Aavaha ||13||
13. O Jaataveda, the All-Knowing God of Fire,
Please invoke and invite, on our behalf, Goddess Lakshmi.
She Is full of Grace flowing out of Her,
out of Compassion.
She resides in the Lotus.
She nourishes and sustains the whole Universe.
She is adorned with Lotus garlands.
She resembles the Moon in spreading coolness;
at the same time, She shines brilliantly like gold.
That is Goddess Lakshmi.
Please invoke Her for me.
आर्द्रां यः करिणीं यष्टिं सुवर्णां हेममालिनीम् ।
सूर्यां हिरण्मयीं लक्ष्मीं जातवेदो म आवह ॥१४॥
Aardraam Yah Karinniim Yassttim Suvarnnaam Hema-Maaliniim |
Suuryaam Hirannmayiim Lakssmiim Jaatavedo Ma Aavaha ||14||
14.O Jaataveda, the All-Knowing God of Fire,
Invoke for me Goddess Lakshmi, who is full of Compassion.
She holds the Sceptre in her hand,
which signifies that She is the Ruler
of the entire Existence.
She shines brilliantly like the Sun.
She is adorned with gold ornaments and garlands –
That is Goddess Lakshmi.
Please invoke Her to bless me.
तां म आवह जातवेदो लक्ष्मीमनपगामिनीम् ।
यस्यां हिरण्यं प्रभूतं गावो दास्योऽश्वान् विन्देयं पूरुषानहम् ॥१५॥
Taam Ma Aavaha Jaatavedo Lakssmiim-Anapagaaminiim |
Yasyaam Hirannyam Prabhuutam Gaavo Daasyo-[A]shvaan Vindeyam Puurussaan-Aham ||15||
15.O Jaataveda, the All-Knowing God of Fire.
invoke for me Goddess Lakshmi.
Please see that that Goddess from whom
I have received plenty of gold, cows, horses, and servants
would not leave me.
Please ensure that.
यः शुचिः प्रयतो भूत्वा जुहुयादाज्यमन्वहम् ।
श्रियः पञ्चदशर्चं च श्रीकामः सततं जपेत् ॥१६॥
Yah Shucih Prayato Bhuutvaa Juhu-Yaad-Aajyam-Anvaham |
Suuktam Pan.cadasharcam Ca Shriikaamah Satatam Japet ||16||
16. Whoever is desirous of seeking favours from Sree
should remain pure
and keep the senses under control
and perform Homa with the offering of ghee everyday
and keep reciting the above-stated Fifteen Mantras
properly, as stated in this Sukta.
आनन्दः कर्दमस्चैव चिक्लीत इति विश्रुताः
ऋषयः ते त्रयः प्रोक्ता स्वयं श्रीरेव देवता ll
AnandaH kardamastaiva chiklIta iti vishrutaaH
RsahayaH tE trayaH prOktA svayaM shrI rEva dEvatA
17. The well-known Sages mentioned in this Sukta,
Ananda, Kardama and Chikleeta are the Rishis
and Sree Herself is the Devata for the purpose of
doing Mantra Japa.
पद्मानने पद्म ऊरु पद्माक्षी पद्मासम्भवे ।
त्वं मां भजस्व पद्माक्षी येन सौख्यं लभाम्यहम् ॥
Padma-anane Padma Uuru Padma-Akssii Padmaa-Sambhave |
Tvam Maam Bhajasva Padma-Akssii Yena Saukhyam LabhaamyAham |
18.O Goddess Lakshmi,
Favour us with your Grace.
You have a face that is lotus-like;
Your thighs are like two lotuses;
Lotus-like are your Eyes too;
Indeed you have emanated from the lotus.
Grant us that which keeps us
Happy and Joyous.
अश्वदायि गोदायि धनदायि महाधने ।
धनं मे जुषतां देवि सर्वकामांश्च देहि मे ॥
Ashva-Daayi Go-Daayi Dhana-Daayi Mahaa-Dhane |
Dhanam Me Jussataam Devi Sarva-Kaamaamsh-Ca Dehi Me
19. O Goddess Lakshmi,
You are the Presiding Deity
of Wealth and Prosperity.
We pray to you to grant us Wealth
in the form of horses and cows.
Grant us the fulfillment of all our desires.
पुत्रपौत्र धनं धान्यं हस्त्यश्वादिगवे रथम् ।
प्रजानां भवसि माता आयुष्मन्तं करोतु माम् ॥१९॥
Putra-Pautra Dhanam Dhaanyam Hasty-Ashvaadi-Gave Ratham |
Prajaanaam Bhavasi Maataa Aayussmantam Karotu Maam ||
20. O Goddess Lakshmi,
O Mother, bless me by granting
children, grand children,
wealth and plenty of food grains,
elephants, horses, cows and chariots.
You are indeed generous.
Bless me with long life too.
धनमग्निर्धनं वायुर्धनं सूर्यो धनं वसुः ।
धनमिन्द्रो बृहस्पतिर्वरुणं धनमश्नुते ॥
Dhanam-Agnir-Dhanam Vaayur-Dhanam Suuryo Dhanam Vasuh |
Dhanam-Indro Brhaspatir-Varunnam Dhanam-Ashnute ||
21. O Mother,
It is due to your Grace and Blessings
that the Gods of Fire, Wind, and the Sun,
the Vasus,- known as Ashta Vasus,
elemental Gods representing aspects of Nature –
and Indra, Brihaspati and Varuna –
all of them are happily placed,
enjoying the abundance of wealth
granted by you.
वैनतेय सोमं पिब सोमं पिबतु वृत्रहा ।
सोमं धनस्य सोमिनो मह्यं ददातु सोमिनः ॥
Vainateya Somam Piba Somam Pibatu Vrtrahaa |
Somam Dhanasya Somino Mahyam Dadaatu Sominah ||
22. (Soma is the juice of a plant.
It is an offering made to the gods
in the performance of certain Yagnas.
It is said that gods are very fond of
drinking the Soma juice.
The performer of the yagna drinks it too.)
O Goddess,
It is due to your Grace
that I am performing the Soma Yaga.
Generate for me plenty of Soma Rasa.
Let Vainateya or Garuda drink plenty of Soma;
let Indra, the Slayer of Vritra, also drink it in plenty.
Let me share some of it too.
न क्रोधो न च मात्सर्य न लोभो नाशुभा मतिः ।
भवन्ति कृतपुण्यानां भक्तानां श्रीसूक्तं जपेत्सदा ॥
Na Krodho Na Ca Maatsarya Na Lobho Na-Ashubhaa Matih |
Bhavanti Krtapunnyaanaam Bhaktaanaam Shriisuuktam Japet-Sadaa ||
23 O Goddess,
Those devotees who have earned punya
or Merit will be free from anger, jealousy,
miserliness and evil intentions.
So to earn Merit and Devotion
one should keep doing the Mantra Japa
of Sree Suktam always.
वर्षन्तु ते विभावरि दिवो अभ्रस्य विद्युतः ।
रोहन्तु सर्वबीजान्यव ब्रह्म द्विषो जहि ॥
Varssantu Te Vibhaavari Divo Abhrasya Vidyutah |
Rohantu Sarva-Biija-Anyava Brahma Dvisso Jahi ||
24.O Goddess,
It is with your Blessing
that the clouds filled with streaks of lightnings
rain down, day and night.
Let all the seeds sown
sprout and grow well.
Those who denounce God
be kept away.
पद्मप्रिये पद्मिनि पद्महस्ते पद्मालये पद्मदलायताक्षि ।
विश्वप्रिये विष्णु मनोऽनुकूले त्वत्पादपद्मं मयि सन्निधत्स्व ॥२४॥
Padma-Priye Padmini Padma-Haste Padma-alaye Padma-Dalaayata-Akssi |
Vishva-Priye Vissnnu Mano-nukuule Tvat-Paada-Padmam Mayi Sannidhatsva ||
25. O Goddess Lakshmi,
You have great fondness for the Lotus;
you are born in the lotus;
your hands are tender and lotus-like;
you have made the lotus your abode;
Your eyes are indeed wide like the lotus petals.
The whole world has great liking for you.
You are well-disposed towards your Husband
Lord Vishnu.
Please rest your lotus feet on my head
and bless me.
या सा पद्मासनस्था विपुलकटितटी पद्मपत्रायताक्षी ।
गम्भीरा वर्तनाभिः स्तनभर नमिता शुभ्र वस्त्रोत्तरीया
लक्ष्मीर्दिव्यैर्गजेन्द्रैर्मणिगणखचितैस्स्नापिता हेमकुम्भैः ।
नित्यं सा पद्महस्ता मम वसतु गृहे सर्वमाङ्गल्ययुक्ता ॥
Yaa Saa Padmasana-Sthaa Vipula-Kattitattii Padma-Patraayata-Akssii |
Gambhiiraa Varta-Naabhih Stanabhara Namitaa Shubhra Vastrottariiyaa ||
26. The Goddess Lakshmi
who is seated on the lotus, wide-bottomed,
whose broad eyes resemble the lotus petals,
who has a deep-hollowed naval,
and who is slightly bent
due to heaviness of breasts,
and who is dressed in well-cleaned and pure clothes;
She, on whose head
the divine elephants sprinkle water
from gold pots studded with gems,
such Goddess, Sri Lakshmi,
holding lotuses in her hands;
who is associated with all auspicious things,
may She come to stay in my house always!
लक्ष्मीं क्षीरसमुद्र राजतनयां श्रीरङ्गधामेश्वरीम् ।
दासीभूतसमस्त देव वनितां लोकैक दीपांकुराम् ॥
श्रीमन्मन्दकटाक्षलब्ध विभव ब्रह्मेन्द्रगङ्गाधराम् ।
त्वां त्रैलोक्य कुटुम्बिनीं सरसिजां वन्दे मुकुन्दप्रियाम् ॥
Lakssmiim Kssiira-Samudra Raaja-Tanayaam Shriirangga-Dhaameshvariim |
Daasii-Bhuuta-Samasta Deva Vanitaam Loka-ika Diipa-Amkuraam ||
27. I offer my salutations to Goddess Lakshmi,
who happens to be the daughter
to the King of the Milky-Ocean,
who reigns from her abode called Sreerangam,
who is served, and attended on,
by a host of divine damsels;
and who, flame-like, brightens the entire world.
Brahma, Indra and Shiva
enjoy their status and position
because of the blessings they received
from Lakshmi in the form of a mere benign smile;
who runs the three worlds as her own Family;
who has taken birth in a Lotus Pond;
and who is the Beloved of Sri Vishnu –
to her my salutations.
सिद्धलक्ष्मीर्मोक्षलक्ष्मीः जयलक्ष्मीस्सरस्वती ।
श्रीलक्ष्मीर्वरलक्ष्मीश्च प्रसन्ना मम सर्वदा ॥
Siddha-Lakssmiir-Mokssa-Lakssmiir-Jaya-Lakssmiis-Sarasvatii |
Shrii-Lakssmiir-Vara-Lakssmiishca Prasannaa Mama Sarvadaa ||
28. I pray to you Goddess Lakshmi,
You have emerged from a Lotus Pond.
You appear in a variety of Potencies like
Siddha Lakshmi, One who fulfills our desires;
Moksha Lakshmi, One who grants Liberation;
Jaya Lakshmi, One who favours with Victory;
Sree Lakshmi, One who gives Wealth and Prosperity; and
Vara Lakshmi, One who grants boons.
I pray to you:
May I be always blessed with your Grace and Favours!
ಶ್ರೀ ಸೂಕ್ತಂ
ಪೀಠಿಕೆ
ಪುರುಷ ಸೂಕ್ತದಲ್ಲಿನ ಮಂತ್ರಗಳನ್ನುಅವುಗಳ ಅರ್ಥದೊಂದಿಗೆ ನಾವು ಪಠಿಸಿ ಮುಗಿಸಿದ್ದೇವೆ. ಮತ್ತೊಂದು ಶ್ರೇಷ್ಠ ಹಾಗೂ ಮಹಾನ್ ಸೂಕ್ತ ಎಂದು ಕರೆಯಲ್ಪಡುವ ಶ್ರೀ ಸೂಕ್ತವನ್ನುಸಹ ಬಹಳಷ್ಟು ಸಲ ಪುರುಷ ಸೂಕ್ತದ ಜತೆಗೆ ಪಠಿಸಲಾಗುತ್ತದೆ.
ಪುರುಷ ಸೂಕ್ತ ಮತ್ತು ಶ್ರೀ ಸೂಕ್ತಗಳೆರಡನ್ನೂ ನಮ್ಮ ನಿತ್ಯಕರ್ಮಾನುಷ್ಠಾನದಲ್ಲಿ, ನಿತ್ಯಪೂಜೆಯಲ್ಲಿ ಮತ್ತುಇತರೆ ಧಾರ್ಮಿಕ ಆಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಷೋಡಶೋಪಚಾರ ಪೂಜೆಯನ್ನು ಮಾಡುವಾಗ ಕೆಲವು ಬಾರಿ ಪುರುಷಸೂಕ್ತದ ಮಂತ್ರಗಳ ಜೊತೆಗೆ ಶ್ರೀ ಸೂಕ್ತದಲ್ಲಿನ ಮಂತ್ರಗಳನ್ನು ಹೊಂದಿಸಿ ಜತೆ ಮಾಡಿ ಪಠಿಸಲಾಗುತ್ತದೆ.
ಪುರುಷ ಸೂಕ್ತವು ಬ್ರಹ್ಮಾಂಡದ ಸೃಷ್ಟಿಯನ್ನೂ ಹಾಗೂ ಸೃಷ್ಟಿಕರ್ತನ ವೈಭವ ಮತ್ತು ಭವ್ಯತೆಯ ದರ್ಶನವನ್ನೂ ಮಾಡಿಸಿದರೆ, ಆ ಸೃಷ್ಟಿಯನ್ನು ಪೋಷಿಸಿ ಸಂರಕ್ಷಿಸಲು ಬೇಕಾದ ಶಕ್ತಿ ಮತ್ತು ಸಾಮರ್ಥ್ಯದ ಒಳನೋಟವನ್ನು ಶ್ರೀ ಸೂಕ್ತವು ಒದಗಿಸುತ್ತದೆ. “ಶ್ರೀ” ಎಂಬ ಶಬ್ದವು ಶ್ರೀ ಚಕ್ರ, ಶ್ರೀ ವಿದ್ಯಾ, ಶ್ರೀ ಮಾತಾ ಮತ್ತು ಲಲಿತಾ ತ್ರಿಪುರ ಸುಂದರಿ ಎಂಬ ಪದಗಳೊಂದಿಗೆ ವಿಶಾಲವಾದ ಸಹಯೋಗವನ್ನು ಹೊಂದಿದೆ ಎಂಬುದನ್ನು ಗಮನಿಸಬಹುದಾಗಿದೆ.
ಋಗ್ವೇದದ ಐದನೆಯ ಮಂಡಲಕ್ಕೆ ಅನುಬಂಧವಾಗಿ ಶ್ರೀ ಸೂಕ್ತದ ಮೂಲಪಾಠವು ಸ್ಥಾಪಿತವಾಗಿರುವುದು ಕಂಡುಬರುತ್ತದೆ.
ಈ ಸೂಕ್ತವು ಹದಿನೈದು ಮಂತ್ರಗಳನ್ನು ಒಳಗೊಂಡಿದೆ.
1 ಮತ್ತು 2 ನೆಯ ಮಂತ್ರಗಳು: ನಮ್ಮ ಪರವಾಗಿ “ಶ್ರೀ” ದೇವತೆಯನ್ನು ನಮ್ಮ ಮನೆಗಳಿಗೆ ಆಹ್ವಾನಿಸಲು, ಸಮಸ್ತವನ್ನೂ ಅರಿತಿರುವಂತಹ ಅಗ್ನಿದೇವತೆಯಾದ “ಜಾತವೇದ”ನನ್ನು ನಾವು ಆವಾಹನೆ ಮಾಡಿ ಪ್ರಾರ್ಥಿಸುತ್ತೇವೆ.
3ನೆಯ ಮಂತ್ರ: ತನ್ನ ವೈಭವವನ್ನು ಸಾರಿ ಹೇಳುತ್ತಿರುವ ಆನೆಗಳು ಮತ್ತು ಕುದುರೆಗಳಿಂದ ಎಳೆಯಲ್ಪಡುತ್ತಿರುವ ರಥದಲ್ಲಿ ಕುಳಿತು ಲಕ್ಷ್ಮೀದೇವಿಯು ತನ್ನೆಲ್ಲಾ ಭವ್ಯತೆ , ವೈಭವಗಳಿಂದ ಕೂಡಿದವಳಾಗಿ, ನಮ್ಮ ಪ್ರಾರ್ಥನೆಗೆ ಓಗೊಟ್ಟು, ನಮ್ಮ ಮುಂದೆ ಪ್ರತ್ಯಕ್ಷಳಾಗುವಳು.
4 ರಿಂದ 10ನೆಯ ಮಂತ್ರಗಳು: ಆಕೆಯ ಘನತೆ, ಗಾಂಭೀರ್ಯ, ಭವ್ಯತೆ ಮತ್ತು ವೈಭವಗಳನ್ನು ನೇರವಾಗಿ ಕೊಂಡಾಡುತ್ತಾ ನಾವು ಆಕೆಯನ್ನು ನಮ್ಮ ಮನೆಗಳಿಗೆ ಬಂದು ನೆಲಸಬೇಕೆಂದು ಆಹ್ವಾನಿಸುತ್ತೇವೆ.
11 ಮತ್ತು 12ನೆಯದಾದ ಎರಡು ಮಂತ್ರಗಳಲ್ಲಿ ಮೊದಲಿಗೆ
(i) ಕ್ಷೀರಸಾಗರವನ್ನು ಮಂಥನ ಮಾಡುವಾಗ ಪ್ರತ್ಯಕ್ಷಳಾದ ಲಕ್ಷ್ಮೀದೇವಿಯನ್ನು ತನ್ನ ಮಗಳನ್ನಾಗಿ ಸ್ವೀಕರಿಸಿದ ಕದ್ರುಮ ಋಷಿಯನ್ನು ಕುರಿತು ದೇವಿ ಲಕ್ಷ್ಮಿಯು ನಮ್ಮ ಕುಟುಂಬದೊಳಗೆ ಒಂದಾಗಿ ಬರಲು ಸಹಾಯ ಮಾಡುವಂತೆ ಕೋರುತ್ತೇವೆ.
(ii) ನಂತರ ಲಕ್ಶ್ಮಿಯ ಮಗನಾದ ಚಿಕ್ಲೀತನನ್ನು ಆತನ ತಾಯಿಯ ಜತೆಗೂಡಿ ನಮ್ಮ ಮನೆಗಳಿಗೆ ಬಂದು ನೆಲೆಸುವಂತೆ ಕೇಳಿಕೊಳ್ಳುತ್ತೇವೆ.
13, 14 ಮತ್ತು15ನೆಯ ಮಂತ್ರಗಳಲ್ಲಿ, “ಶ್ರೀ” ದೇವಿಯನ್ನು ನಮ್ಮ ಮನೆಗಳಿಗೆ ಸ್ವಾಗತಿಸುವ ಸಲುವಾಗಿ , ನಮಗೆ ಸಹಾಯ ಮಾಡಬೇಕೆಂದು ಜಾತವೇದನನ್ನು ಉದ್ದೇಶಿಸಿ ನಾವು ಪುನಃ ಬೇಡಿಕೊಳ್ಳುತ್ತೇವೆ .
16ನೆಯ ಮಂತ್ರವು ಫಲಶ್ರುತಿಯನ್ನುಕೊಡುತ್ತದೆ. ಅಂದರೆ ಮಂತ್ರಗಳ ಸರಿಯಾದ ಉಚ್ಛಾರಣೆ ಮತ್ತು ಪಠಣದಿಂದ ನಮಗೆ ದೊರಕುವ ಉಪಯೋಗಳನ್ನು ತಿಳಿಸಿಕೊಡುತ್ತದೆ.
17ನೆಯ ಮಂತ್ರವು ಪ್ರಖ್ಯಾತರಾದ ಆನಂದ, ಕರ್ದಮ ಮತ್ತು ಚಿಕ್ಲೀತ ಇವರುಗಳೇ ಈ ಸೂಕ್ತಕ್ಕೆ ಋಷಿಗಳು ಮತ್ತು ಸ್ವಯಂ ಶ್ರೀ ದೇವಿಯೇ ಇದರ ದೇವತೆ ಎಂಬುದಾಗಿ ತಿಳಿಸಿಕೊಡುತ್ತದೆ.
ಮಂತ್ರಜಪದ ಸಂಕಲ್ಪ ಮಾಡುವ ಉದ್ದೇಶಕ್ಕಾಗಿ ಇದನ್ನು ತಿಳಿಸಲಾಗಿದೆ.
ಈ ಶ್ರೀ ಸೂಕ್ತದಲ್ಲಿನ ಮೊದಲ ಹದಿನೈದು ಮಂತ್ರಗಳು ಅತಿಶಯವಾದ ಮಾಂತ್ರಿಕ ಶಕ್ತಿಯಿಂದ ತುಂಬಿವೆ. ಆದುದರಿಂದ ಅವುಗಳು ಮಂತ್ರ ಜಪಕ್ಕೆ ಸೂಕ್ತವಾದವು ಎಂದು ಶಿಫಾರಸು ಮಾಡಲಾಗಿದೆ.
ಈ ಸೂಕ್ತದಲ್ಲಿನ ಉಳಿದ ಮಂತ್ರಗಳು ದೇವತಾ ಪ್ರಾರ್ಥನೆಗಳಾಗಿವೆ . ಇವುಗಳನ್ನು ಬೇರೆ ಬೇರೆ ವೇದ ಮತ್ತು ಪುರಾಣ ಗ್ರಂಥಗಳಿಂದ ಆಯ್ದುಕೊಳ್ಳಲಾಗಿದೆ.
—————
“ಶ್ರೀ” ಮತ್ತು “ಲಕ್ಷ್ಮಿ” ಎಂಬ ಎರಡು ಪದಗಳು “ವಿಷ್ಣುವಿನ ಪತ್ನಿ” ಮತ್ತು “ಸಂಪತ್ತಿನ ದೇವತೆ” ಎಂಬ ಸೀಮಿತ ಅರ್ಥದಲ್ಲಿ ಮಾತ್ರ ಬಳಸಲಾಗುತ್ತದೆ. ಆದರೆ ವೈದಿಕ ಮಂತ್ರಗಳಲ್ಲಿ ಈ ಎರಡು ಪದಗಳೂ ಅತ್ಯಂತ ಉದಾತ್ತವಾದ ಒಳಾರ್ಥಗಳನ್ನು ಹೊಂದಿವೆ.
“ಶ್ರೀ” ಅಥವಾ “ಲಕ್ಷ್ಮಿ” ಯನ್ನು ಸಕಲ ಸೃಷ್ಟಿಯ “ಪರಮೋಚ್ಚ ಮಾತೆ “ ಮತ್ತು “ಪ್ರಧಾನ ಪಾಲಕಿ” ಎಂಬುದಾಗಿ ವ್ಯಕ್ತಪಡಿಸಲಾಗಿದೆ. ಸಂಪತ್ತು, ಸಮೃದ್ಧಿ, ಸೌಂದರ್ಯ, ಭವ್ಯತೆ, ಆರೋಗ್ಯ, ಐಶ್ವರ್ಯ ಮತ್ತು ಸುಖಸಂತೋಷ; ಹಾಗೆಯೇ ಒಳ್ಳೆಯದಾದ ಮತ್ತು ಶುಭಕರವಾದ ಪ್ರತಿಯೊಂದಕ್ಕೂ ಪ್ರತೀಕವಾದ ದೇವತೆ ಈಕೆ.
ಶ್ರೀ ಸೂಕ್ತದಲ್ಲಿರುವ ಎಲ್ಲಾ ಮಂತ್ರಗಳನ್ನು ಅವುಗಳ ಅರ್ಥದೊಂದಿಗೆ ಪಠಿಸಿದರೆ, ಅದು ನಮ್ಮ ದೃಷ್ಟಿಕೋನವನ್ನು ಆ ಮಂತ್ರಗಳ ವಿಶಾಲವಾದ ಒಳಾರ್ಥವನ್ನು ಗ್ರಹಿಸಿದಂತಹ ಮಹಾನ್ ಋಷಿಗಳ ದೃಷ್ಟಿಕೋನದೊಂದಿಗೆ ಸಮೀಕರಿಸಲು ಸಹಾಯ ಮಾಡುತ್ತದೆ.
ಲಕ್ಷ್ಮಿಯ ಹಿರಿಯ ಸಹೋದರಿಯಾದ “ಜೇಷ್ಠಾ” ಳ ವಿರುದ್ಧ ಭಾವವಾಗಿ “ಶ್ರೀ” ಅಥವಾ “ಲಕ್ಷ್ಮಿ” ಯನ್ನು ತೋರಿಸಲಾಗಿದೆ. ಹಸಿವು, ದಾಹ, ಬಡತನ, ಕಡುಕಷ್ಟ, ವಿಪತ್ತು ಮತ್ತು ದುರಾದೃಷ್ಟದ ಪ್ರತಿನಿಧಿಯಾಗಿ ನಿಲ್ಲುವ “ಜೇಷ್ಠಾ” ಳನ್ನು “ಅಲಕ್ಷ್ಮಿ” ಎಂದೂ ಸಹ ಕರೆಯಲಾಗುತ್ತದೆ.
ಅಲಕ್ಷ್ಮಿ ಅಥವಾ ಜ್ಯೇಷ್ಠಾಳನ್ನು ನಾವು ಹೊರಗೋಡಿಸಿ, ಶ್ರೀ ಅಥವಾ ಲಕ್ಷ್ಮಿಯನ್ನು ನಮ್ಮ ಮನೆಗಳಿಗೆ ಸ್ವಾಗತಿಸೋಣ ಮತ್ತು ನಮ್ಮ ಕುಲಬಾಂಧವರೊಂದಿಗೆ ಜೊತೆಗೂಡಿ ಇರುವಂತೆ ಆಕೆಯ ಮನವೊಲಿಸಿ ಆರಾಧಿಸೋಣ. ಉತ್ತಮ ಆರೋಗ್ಯ, ಆನಂದ ಮತ್ತು ಅಭ್ಯುದಯವನ್ನು ಆಕೆ ನಮಗೆ ದಯಪಾಲಿಸಿ ಆಶೀರ್ವದಿಸಲಿ ಎಂದು ಬೇಡಿಕೊಳ್ಳೋಣ.
———-
ಶ್ರೀ ಸೂಕ್ತಕ್ಕೆ ಬರೆದ ಈ ಪೀಠಿಕೆಯನ್ನು ಮುಗಿಸುವ ಮುನ್ನ ನನ್ನ ಅಣ್ಣನವರಾದ ದಿವಂಗತ ಲಂಕಾ ಕೃಷ್ಣಮೂರ್ತಿಯವರನ್ನು ಸ್ಮರಿಸುತ್ತಾ ಅವರ ಮೊದಲ ಕಾವ್ಯ ಕೃತಿಯಾದ “ಶ್ರೀ ವಿಲಾಸಮು” ಬಗ್ಗೆ ಉಲ್ಲೇಖಿಸಲು ಬಯಸುತ್ತೇನೆ. ಶತಕದ ರೂಪದಲ್ಲಿರುವ ಈ ಕಾವ್ಯದಲ್ಲಿ 108 ಪದ್ಯಗಳಿವೆ.
ಶ್ರೀ ಮತ್ತು ಲಕ್ಷ್ಮಿ ಎಂಬ ಪದಗಳ ಬಳಕೆಯನ್ನು ಕೇವಲ ಐಶ್ವರ್ಯ, ಸಂಪತ್ತು ಎಂಬ ಪರಿಮಿತಿಯಲ್ಲಿನ ಅರ್ಥವನನ್ನಾಗಿ ಬಳಸಿ ಮತ್ತು ಅದಕ್ಕನುಗುಣವಾಗಿ ಸಂಪತ್ತಿನ ಸಂಗ್ರಹಣೆಗೆ ನ್ಯಾಯವಲ್ಲದ ಪ್ರಾಮುಖ್ಯತೆಯನ್ನು ಕಲ್ಪಿಸಿ, ಸಮಾಜದ ಅಶಾಂತಿಗೆ ಅಸಮಾನತೆಗೆ ಮತ್ತು ವೇದನೆಗೆ ಕಾರಣವಾಗಿರುವುದಕ್ಕೆ ಅವರು ತಮ್ಮವ್ಯಥೆಯನ್ನು ಈ ಕಾವ್ಯದಲ್ಲಿ ವ್ಯಕ್ತಪಡಿಸಿದ್ದಾರೆ.
ಹಾಗಾಗಿ “ಶ್ರೀ” ಮತ್ತು”ಲಕ್ಷ್ಮಿ” ಎಂಬ ಶಬ್ದಾರ್ಥದ ಬಗ್ಗೆ ಶ್ರೀ ಸೂಕ್ತದಲ್ಲಿ ತಿಳಿಸಲಾದ ಸರಿಯಾದ ಅರ್ಥವನ್ನು ಅರಿಯುವುದರಲ್ಲಿ ಇದಕ್ಕೆ ಪರಿಹಾರ ಅಡಗಿದೆ. ಈ ಸರಿಯಾದ ಜ್ಞಾನವು ಜನರಿಗೆ ಧರ್ಮ ಮಾರ್ಗದ ಜೀವನಕ್ಕೆ ಮತ್ತು ಶಾಂತಿ ಸೌಹಾರ್ದಯುತ ಬಾಳ್ವೆಗೆ ಸಹಕಾರಿಯಾಗುತ್ತದೆ ಎಂಬುದಾಗಿ ಅವರು ಪ್ರತಿಪಾದಿಸಿದ್ದಾರೆ.
“ಶ್ರೀ ವಿಲಾಸಮು” ಅವರ ಮೊದಲ ಕಾವ್ಯ ಕೃತಿಯಾಗಿದೆ. ಪ್ರಾಯಶಃ ಬರವಣಿಗೆಯ ಮೂಲಕ ಸನಾತನ ಧರ್ಮದ ಪ್ರಚಾರಕ್ಕೆ ಇದು ಅವರ ಮೊದಲ ಹೆಜ್ಜೆ ಆಗಿದ್ದಿರಬಹುದು.
ಓಂ
ಹಿರಣ್ಯವರ್ಣಾಂ ಹರಿಣೀಂ ಸುವರ್ಣರಜತಸ್ರಜಾಮ್ | ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||
ಶ್ರೀ ಸೂಕ್ತಂ
ಓಂ
ಓ ಜಾತವೇದನೇ, ಸಕಲವನ್ನೂ ತಿಳಿದಿರುವ ಅಗ್ನಿದೇವನೇ, ಚಿನ್ನದ ಮೈಬಣ್ಣದಿಂದ ಹೊಳೆಯುತ್ತಿರುವ, ಆಶ್ರಿತರಾದ ನಮ್ಮೆಲ್ಲರ ಪಾಪಗಳನ್ನು ತೊಡೆದುಹಾಕುವ, ಬೆಳ್ಳಿ ಮತ್ತು ಬಂಗಾರದ ಮಾಲೆಗಳಿಂದ ಅಲಂಕೃತಳಾಗಿರುವ, ತಂಪಾದ ಕಿರಣಗಳನ್ನು ಹೊರಚೆಲ್ಲುವ ಚಂದ್ರನನ್ನು ಹೋಲುವ ಸುವರ್ಣ ಪ್ರಭೆಯನ್ನು ಸೂಸುತ್ತಾ ನಿಂತಿರುವ ಲಕ್ಶ್ಮೀ ದೇವಿಯನ್ನು ನನಗಾಗಿ ಆವಾಹನೆ ಮಾಡು. ದಯವಿಟ್ಟು ನನ್ನ ಪರವಾಗಿ ಆಕೆಯನ್ನು ಆಹ್ವಾನಿಸು.
ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್ |
ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರುಷಾನಹಮ್ ||
ಎರಡನೆಯ ಮಂತ್ರ
ಓ ಜಾತವೇದನೇ ಸಕಲವನ್ನೂ ತಿಳಿದಿರುವ ಅಗ್ನಿದೇವನೇ, ಶ್ರೀ ದೇವಿಯು ಬಂದು ನನ್ನೊಡನೆ ನೆಲೆಸುವ ಸಲುವಾಗಿ ನನ್ನ ಪರವಾಗಿ ದೇವಿಯನ್ನು ಆಹ್ವಾನಿಸು ಹಾಗೆ ಬಂದು ನನಗೆ ಎಲ್ಲ ನೆರವು ನೀಡಿ ಆಕೆ ನನ್ನನ್ನು ತೊರೆಯದಿರಲಿ, ಆಕೆ ನನ್ನೊಡನಿರುವಾಗ ಧನ, ಕನಕ, ಗೋ ಸಂಪತ್ತು, ಅಶ್ವ ಸಂಪತ್ತು ಇವೆಲ್ಲವನ್ನೂ ನಾನು ಹೊಂದುವಂತಾಗಲಿ, ಬಂಧು, ಬಳಗ ಮತ್ತು ಮಿತ್ರರನ್ನು ನಾನು ಹೊಂದುವಂತಾಗಲಿ,
ಓ ಜಾತವೇದ, ಇವೆಲ್ಲವನ್ನೂ ನೀಡಿ ನನಗೆ ಆಶೀರ್ವದಿಸಲೆಂದು ಆಕೆಯನ್ನು ಆಮಂತ್ರಿಸು.
ಅಶ್ವಪೂರ್ವಾಂ ರಥಮಧ್ಯಾಂ ಹಸ್ತಿನಾದಪ್ರಬೋಧಿನೀಮ್ |
ಶ್ರಿಯಂ ದೇವೀಮುಪಹ್ವಯೇ ಶ್ರೀರ್ಮಾ ದೇವೀರ್ಜುಷತಾಮ್ ||
ಮೂರನೆಯ ಮಂತ್ರ
ಮಾಡಿದ ಪ್ರಾರ್ಥನೆಗೆ ಪ್ರತ್ಯುತ್ತರವಾಗಿ ದೇವಿ ಲಕ್ಷ್ಮಿಯು ನಯನ ಮನೋಹರ ರೀತಿಯಲ್ಲಿ ಆಗಮಿಸುತ್ತಾಳೆ. ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಆಕೆ ಆಸೀನಳಾಗಿರುವಳು. ಆನೆಗಳು ಘೋಷಗಳೊಂದಿಗೆ ಆಕೆಯನ್ನುಸ್ವಾಗತಿಸುತ್ತಿವೆ. ಹೇ ದೇದೀಪ್ಯಮಾನಳಾದ ದೇವಿಯೇ, ಹೃದಯಪೂರ್ವಕವಾಗಿ ನಾನು ನಿನ್ನನ್ನು ಆಮಂತ್ರಿಸುತ್ತೇನೆ. ನಮ್ಮೊಂದಿಗೆ ಆನಂದದಿಂದ ನೆಲೆಸುವಂತಹವಳಾಗು.
ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಾಂ ಜ್ವಲಂತೀಂ ತೃಪ್ತಾಂ ತರ್ಪಯಂತೀಮ್ |
ಪದ್ಮೇ ಸ್ಥಿತಾಂ ಪದ್ಮವರ್ಣಾಂ ತಾಮಿಹೋಪಹ್ವಯೇ ಶ್ರಿಯಮ್ ||
ನಾಲ್ಕನೆಯ ಮಂತ್ರ
ತನ್ನ ತೇಜಸ್ಸಿನಿಂದ ಮತ್ತು ಭವ್ಯತೆಯಿಂದ ಶ್ರೀ ದೇವಿಯು ಬಂದು ನಮ್ಮೊಂದಿಗಿರಲೆಂದು ನಾನು ಆಕೆಯನ್ನು ವಿನಂತಿಸಿಕೊಳ್ಳುತೇನೆ. ಬಂಗಾರದ ಮೈಬಣ್ಣ ಉಳ್ಳವಳಾಗಿ, ನಗುಮುಖದಿಂದ ಸಂತೋಷಚಿತ್ತಳಾಗಿ, ಸುತ್ತಲೂ ಆನಂದವನ್ನು ಪಸರಿಸುತ್ತಾ, ದಿವ್ಯ ಮಂಟಪದಲ್ಲಿ ಕಮಲದ ಹೂವಿನಲ್ಲಿ ಆಸೀನಳಾಗಿ, ಪದ್ಮವರ್ಣದಿಂದ ಶೋಭಿಸುತ್ತಾ ದಯಾರ್ದ್ರ ಹೃದಯಾಳಾಗಿರುವ ಆಕೆಯ ದಿವ್ಯವಾದ ಮತ್ತು ಆನಂದದಾಯಕ ಸನ್ನಿಧಿಯು ಅಂತೆಯೇ ಇರಲೆಂದು ನಾನು ಆಕೆಯನ್ನು ಪ್ರಾರ್ಥಿಸುತ್ತೇನೆ.
ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜು ಷ್ಟಾಮುದಾರಾಮ್ |
ತಾಂ ಪದ್ಮಿನೀಮೀಂ ಶರಣಮಹಂ ಪ್ರಪದ್ಯೇಲಕ್ಷ್ಮೀರ್ಮೇ ನಶ್ಯತಾಂ ತ್ವಾಂ ವೃಣೇ ||
ಐದನೆಯ ಮಂತ್ರ
ಯಾರು ಚಂದ್ರನಂತೆ ಕಂಗೊಳಿಸುತ್ತಿರುವಳೋ, ಯಾರು ಪ್ರಕಾಶಮಾನಳಾಗಿರುವಳೋ ಯಾರು ಉದಾರ ಸ್ವಭಾವ ಉಳ್ಳವಳೋ ಮತ್ತು ದಯಾಪರಳೋ, ಯಾರು ಸಕಲದೇವತೆಗಳಿಂದ ಸಂಪೂಜಿಲ್ಪಡುವಳೋ, ಯಾರು ತನ್ನ ಕೈಯಲ್ಲಿ ಸುಂದರವಾದ ಕಮಲವನ್ನು ಹಿಡಿದಿರುವಳೋ, ಮತ್ತು ಯಾರು “ಈಂ” ಎಂಬ ಬೀಜ ಮಂತ್ರಕ್ಕೆ ಅಧಿದೇವತೆಯೋ ಅಂತಹ ಶ್ರೀದೇವಿಯ ಪಾದ ಪಂಕಜಗಳಲ್ಲಿ ನಾನು ಆಶ್ರಯವನ್ನು ಕೋರುತ್ತೇನೆ. ಅಲಕ್ಷ್ಮಿಯಿಂದ ಉಂಟಾಗುವ ಸರ್ವ ದಾರಿದ್ರ್ಯ ಮತ್ತು ದುರ್ದೆಶೆಯನ್ನು ಈಕೆಯು ತೊಲಗಿಸಲಿ.
ಆದಿತ್ಯವರ್ಣೇ ತಪಸೋಧಿಜಾತೋ ವನಸ್ಪತಿಸ್ತವ ವೃಕ್ಷೋಥ ಬಿಲ್ವಃ |
ತಸ್ಯ ಫಲಾನಿ ತಪಸಾನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ ||
ಆರನೆಯ ಮಂತ್ರ
ಹೇ, ಆದಿತ್ಯನಂತೆ ಹೊಳೆಯುವ ಉಜ್ವಲ ಕಾಂತಿಯುಳ್ಳ ದೇವಿಯೇ, ನಿನ್ನ ತಪಃ ಶಕ್ತಿಯಿಂದ ಹುಟ್ಟಿದ, ವನಸ್ಪತಿಯೂ, ಮಂಗಳಕರವೂ ಆದ ಬಿಲ್ವ ವೃಕ್ಷವು, ಕಾಡಿನ ಮರಗಳ ರಾಜನೆನಿಸಿಕೊಂಡಿದೆ. ಅಮಂಗಳಕ್ಕೆ ಹೆಸರಾದ ಅಲಕ್ಷ್ಮಿಯಿಂದ ಉಂಟಾಗುವ, ಅಜ್ಞಾನದಿಂದ ಬರುವ ಆಂತರಿಕ ಜಾಡ್ಯಗಳನ್ನೂ ಮತ್ತು ಬಾಹ್ಯ ತೊಂದರೆಗಳನ್ನೂ ಗುಣಪಡಿಸುವ ಶಕ್ತಿಯನ್ನು ನಿನ್ನ ಅದೇ ತಪಃ ಶಕ್ತಿಯಿಂದ ಆ ಬಿಲ್ವ ವೃಕ್ಷದ ಫಲಗಳು ಪಡೆದಿವೆ.
ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ |
ಪ್ರಾದುರ್ಭೂತೋಸ್ಮಿ ರಾಷ್ಟ್ರೇಸ್ಮಿನ್ ಕೀರ್ತಿಮೃದ್ಧಿಂ ದದಾದು ಮೇ ||
ಏಳನೆಯ ಮಂತ್ರ
ಹೇ ಶ್ರೀ ದೇವಿಯೇ ಸಕಲ ದೇವತೆಗೊಳೊಂದಿಗೆ ಸಖ್ಯವನ್ನು ಹೊಂದಿರುವ, ಐಶ್ವರ್ಯಕ್ಕೆ ಒಡೆಯನಾದ ಕುಬೇರನೊಂದಿಗೆ ನನ್ನನ್ನು ಸಹಚರನನ್ನಾಗಿಸು. ಅಂತೆಯೇ ಕೀರ್ತಿ ಮತ್ತುಅಭ್ಯುದಯಗಳಿಗೆ ನನ್ನನ್ನುಜೊತೆಗೂಡಿಸು. ಈ ಲೋಕದಲ್ಲಿ, ಈ ಸ್ಥಿತಿಯಲ್ಲಿ ಜನ್ಮ ತಳೆದಿರುವುದಕ್ಕಾಗಿ ನಿನ್ನ ವಿಶೇಷ ಕೃಪೆಗೆ ಪಾತ್ರನಾಗಿರುವುದಕ್ಕಾಗಿ ನಾನು ನಿನಗೆ ಆಭಾರಿಯಾಗಿದ್ದೇನೆ. ನನಗೆ ಕೀರ್ತಿ ಮತ್ತು ಸಮೃದ್ಧಿಯನ್ನು ಕರುಣಿಸು.
ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷೀಂ ನಾಶಯಾಮ್ಯಹಮ್ |
ಅಭೂತಿಮಸಮೃದ್ಧಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್ ||
ಎಂಟನೆಯ ಮಂತ್ರ
ಹಸಿವು ಬಾಯಾರಿಕೆಗಳಿಗೆ ಕಾರಣೀಭೂತಳೂ, ಅಪವಿತ್ರಳೂ, ನಿನ್ನ ಹಿರಿಯ ಸಹೋದರಿಯೂ ಆದ ಜೇಷ್ಠಾ ಎಂಬ ಹೆಸರಿನ ಅಲಕ್ಷ್ಮಿಯನ್ನು ನಾನು ನಿನ್ನ ಕೃಪೆಯಿಂದ ತೊಲಗಿಸಬೇಕೆಂದಿದ್ದೇನೆ; ಹೇ ಶ್ರೀದೇವಿಯೇ! ನನ್ನ ಮನೆಯಿಂದ ಅಸಮೃದ್ಧಿಯನ್ನೂ ಮತ್ತು ದಾರಿದ್ರ್ಯವನ್ನೂ ನಾನು ಹೊರಗೋಡಿಸಬೇಕಾಗಿದೆ.
ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂ ಕರೀಷಿಣೀಮ್ |
ಈಶ್ವರೀಗ್ಮ್ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ ||
ಒಂಬತ್ತನೆಯ ಮಂತ್ರ
ಗಂಧ ಇತ್ಯಾದಿ ಸುಗಂಧದ ಪರಿಮಳದಿಂದ ಕೂಡಿದವಳೂ, ಅಜೇಯಳೂ , ನಿತ್ಯ ಪರಿಪೂರ್ಣಳೂ , ಸರ್ವದಾ ನಮ್ಮನ್ನು ಪೋಷಿಸುವವಳೂ, ಸದ್ಗುಣ, ಪಾವಿತ್ರ್ಯಗಳಿಂದ ಸದಾ ಸಂಪನ್ನಳಾದವಳೂ, ಸರ್ವಭೂತಗಳ ಪಾಲಕಳೂ ಮತ್ತು ನಿಯಂತ್ರಕಳೂ ಆಗಿರುವ ಲಕ್ಷ್ಮೀ ದೇವಿಯನ್ನು ನಮ್ಮ ನಡುವೆ ಇರಬೇಕೆಂದು ಪ್ರಾರ್ಥಿಸಿ ಆಹ್ವಾನಿಸುತ್ತೇನೆ. ಆಕೆಯು ನಮ್ಮನ್ನು ತನ್ನ ಸಾನ್ನಿಧ್ಯದಿಂದ ಹರಸಲಿ.
ಮನಸಃ ಕಾಮಮಾಕೂತಿಂ ವಾಚಃ ಸತ್ಯಮಶೀಮಹಿ |
ಪಶೂನಾಂ ರೂಪಮನ್ಯಸ್ಯ ಮಯಿ ಶ್ರೀಃ ಶ್ರಯತಾಂ ಯಶಃ||
ಹತ್ತನೆಯ ಮಂತ್ರ
ನನ್ನ ಮನಸ್ಸಿನಲ್ಲಿ ಉದಾತ್ತ ಭಾವನೆಗಳು, ಆಲೋಚನೆಗಳು ಹುಟ್ಟಲಿ. ನಾನು ಸಂಪೂರ್ಣ ಆನಂದವನ್ನು ಹೊಂದುವಂತಾಗಲಿ, ನನ್ನಮಾತು ಸತ್ಯ, ಪ್ರಾಮಾಣಿಕತೆಯಿಂದ ಕೂಡಿರಲಿ. ಪಶು ಸಮೃದ್ಧಿಯಿಂದ, ಧಾನ್ಯ ಸಮೃದ್ಧಿಯಿಂದ ನನಗೆ ಹರ್ಷವುಂಟಾಗಲಿ. ಹೇ ಶ್ರೀದೇವಿಯೇ ಇವೆಲ್ಲವೂ ನಿನ್ನ ಕೃಪಾಕಟಾಕ್ಷದಿಂದ ನೆರವೇರುವಂತಾಗಲಿ.
ಕರ್ದಮೇನ ಪ್ರಜಾಭೂತಾ ಮಯಿ ಸಂಭವ ಕರ್ದಮ |
ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಮಾಲಿನೀಮ್ ||
ಹನ್ನೊಂದನೆಯ ಮಂತ್ರ
ಹೇ ಕರ್ದಮ ಪ್ರಜಾಪತಿಯೇ, ನಿನ್ನಿಂದ ಮಗಳಾಗಿ ಸ್ವೀಕರಿಸಲ್ಪಟ್ಟ , ಸಂಪತ್ತು ಮತ್ತುಅಭ್ಯುದಯಕ್ಕೆ ದೇವತೆಯಾದ, ಪದ್ಮಗಳ ಮಾಲೆಯನ್ನು ಧರಿಸತಕ್ಕಂತಹ ಲಕ್ಷ್ಮೀ ದೇವಿಯು ನಮ್ಮ ಮಾತೆಯಾಗಿ ಸದಾ ನಮ್ಮ ಮನೆಗಳಲ್ಲಿ ಬಂದು ನೆಲಸುವಂತೆ ಮಾಡು.
ಆಪಃ ಸೃಜಂತು ಸ್ನಿಗ್ದಾನಿ ಚಿಕ್ಲೀತ ವಸ ಮೇ ಗೃಹೇ |
ನಿ ಚ ದೇವೀಂ ಮಾತರಂ ಶ್ರಿಯಂ ವಾಸಯ ಮೇ ಕುಲೇ ||
ಹನ್ನೆರಡನೆಯ ಮಂತ್ರ
ಹೇ ಚಿಕ್ಲೀತ ಋಷಿಯೇ,
ಜೀವಜಲವು ಸಮೃದ್ಧವಾದ ಆಹಾರವನ್ನು, ಸ್ನಿಗ್ಧ ವಸ್ತುಗಳನ್ನು ಉಂಟುಮಾಡಲಿ. ನಿನ್ನ ತಾಯಿಯಾದ ಲಕ್ಷ್ಮೀ ದೇವಿಯೊಂದಿಗೆ ನೀನು ನಮ್ಮ ಮನೆಗೆ ಬಂದು ನೆಲೆಸಲೆಂದು ನಾವು ನಿನ್ನನ್ನು ಆಹ್ವಾನಿಸುತ್ತೇವೆ.. ನಿನ್ನ ಮಾತೆಯಾದ ಶ್ರೀ ಲಕ್ಷ್ಮಿಯು, ಸದಾಕಾಲವೂ ನಮ್ಮ ಕುಟುಂಬದೊಂದಿಗೆ ನೆಲೆಸುವಂತೆ ನೀನು ನಮಗೆ ಖಾತ್ರಿಪಡಿಸು.
ಆರ್ದ್ರಾಂ ಪುಷ್ಕರಿಣೀಂ ಪುಷ್ಟಿಂ ಪಿಂಗಲಾಂ ಪದ್ಮಮಾಲಿನೀಮ್ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||
ಹದಿಮೂರನೆಯ ಮಂತ್ರ
ಹೇ ಜಾತವೇದನೆೇ, ಸಕಲವನ್ನೂ ತಿಳಿದಿರುವ ಅಗ್ನಿದೇವನೇ ದಯವಿಟ್ಟು ಲಕ್ಷ್ಮೀ ದೇವಿಯನ್ನು ಆವಾಹಿಸಿ, ನಮ್ಮ ಪರವಾಗಿ ಆಕೆಯನ್ನು ಆಮಂತ್ರಿಸು. ಕರುಣೆ ಅನುಕಂಪದಿಂದ ಕೂಡಿದ ಆಕೆಯು ದಯಾರ್ದ್ರ ಹೃದಯಳು , ಆಕೆಯು ನೈದಿಲೆಗಳಿರುವ ಪುಷ್ಕರಣಿಯಲ್ಲಿ ವಾಸಿಸುವವಳು, ಆಕೆಯು ಇಡೀ ಬ್ರಹ್ಮಾಂಡವನ್ನು ಪೋಷಿಸಿ ಪಾಲಿಸುವವಳು, ಆಕೆಯು ಪದ್ಮ ಮಾಲಾಧಾರಿಣಿಯು, ತಂಪಾದ ಆಹ್ಲಾದವನ್ನು ಪಸರಿಸುವುದರಲ್ಲಿ ಆಕೆಯು ಚಂದ್ರನನ್ನು ಹೋಲುವವಳು, ಹಾಗೆಯೇ ಬಂಗಾರದಂತೆ ಥಳಥಳಿಸಿ ಹೊಳೆಯುವವಳು, ಆಕೆಯೇ ಹಿರಣ್ಮಯಿಯಾದ ಲಕ್ಷ್ಮೀದೇವಿಯು. ದಯಮಾಡಿ ಆಕೆಯನ್ನು ನನಗಾಗಿ ಆವಾಹಿಸು.
ಆರ್ದ್ರಾಂ ಯಃ ಕರಿಣೀಂ ಯಷ್ಟಿಂ ಸುವರ್ಣಾಮ್ ಹೇಮಾಮಾಲಿನೀಮ್
ಸೂರ್ಯಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||
ಹದಿನಾಲ್ಕನೆಯ ಮಂತ್ರ
ಹೇ ಜಾತವೇದನೇ, ಸಕಲವನ್ನೂ ತಿಳಿದಿರುವ ಅಗ್ನಿದೇವನೇ, ದಯಾರ್ದ್ರ ಹೃದಯವುಳ್ಳವಳಾದ ಲಕ್ಷ್ಮೀ ದೇವಿಯನ್ನು ದಯವಿಟ್ಟು ನನಗಾಗಿ ಆವಾಹಿಸು, ಚರಾಚರಗಳಿಂದ ತುಂಬಿದ ಸಕಲ ಅಸ್ತಿತ್ವಕ್ಕೂ ಈಕೆಯೇ ಅಧಿಪತಿ ಎಂಬುದನ್ನು ಸೂಚಿಸುವ ರಾಜದಂಡವನ್ನು ಈಕೆ ತನ್ನ ಕೈಯಲ್ಲಿ ಹಿಡಿದುಕೊಂಡಿರುವಳು. ಸೂರ್ಯನಂತೆ ಪ್ರಖರವಾಗಿ ಈಕೆ ಹೊಳೆಯುತ್ತಿರುವಳು. ಬಂಗಾರದ ವಸ್ತ್ರಾಭರಣಗಳಿಂದ ಮತ್ತು ಹೇಮ ಮಾಲೆಗಳಿಂದ ಈಕೆಯು ಅಲಂಕರಿಸಲ್ಪಟ್ಟಿರುವಳು. ಈಕೆಯೇ ಹಿರಣ್ಮಯಿಯಾದ ಲಕ್ಹ್ಮೀದೇವಿಯು. ನನ್ನನ್ನು ಹರಸುವ ಸಲುವಾಗಿ ಈಕೆಯನ್ನು ಆವಾಹಿಸು.
ತಾಂ ಮ ಆವಹ ಜಾತವೇದೋ ಲಕ್ಷೀಮನಪಗಾಮಿನೀಮ್ |
ಯಸ್ಯಾಂ ಹಿರಣ್ಯಂ ಪ್ರಭೂತಂ ಗಾವೋ ದಾಸ್ಯೋஉಶ್ವಾನ್, ವಿಂದೇಯಂ ಪುರುಷಾನಹಮ್ ||
ಹದಿನೈದನೆಯ ಮಂತ್ರ
ಹೇ ಜಾತವೇದನೇ, ಸಕಲವನ್ನೂ ತಿಳಿದಿರುವ ಅಗ್ನಿದೇವನೇ, ಲಕ್ಷ್ಮೀದೇವಿಯನ್ನು ದಯವಿಟ್ಟು ನನಗಾಗಿ ಆವಾಹಿಸು. ಯಾರಲ್ಲಿ ಧನಕನಕಾದಿಗಳು ಸಮೃದ್ಧವಾಗಿವೆಯೋ, ಯಾರ ಕೃಪೆಯಿಂದ ಅಪರಿಮಿತವಾದ ದನಕರುಗಳನ್ನೂ, ಕುದುರೆಗಳನ್ನೂ, ಸೇವಕರನ್ನೂ, ಬಂಗಾರವನ್ನೂ ನಾನು ಪಡೆದಿರುವೆನೋ ಅಂತಹ ದೇವತೆಯು ನನ್ನನ್ನು ಬಿಟ್ಟು ಹೋಗದಿರುವಂತೆ ನೋಡಿಕೋ.ದಯವಿಟ್ಟು ಅದನ್ನು ನಿಶ್ಚಿತಗೊಳಿಸು.
ಯ ಶುಚಿಃ ಪ್ರಯತೋ ಭೂತ್ವಾ ಜುಹುಯಾದಾಜ್ಯಮನ್ವಹಮ್|
ಶ್ರೀಯಃ ಪಂಚದಶರ್ಚಂ ಚ ಶ್ರೀಕಾಮಃ ಸತತಂ ಜಪೇತ್ ||
ಹದಿನಾರನೆಯ ಮಂತ್ರ
ಯಾರು ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂಬ ಅಭಿಲಾಷೆ ಹೊಂದಿರುತ್ತಾರೆಯೋ, ಅವರು ನಿಷ್ಕಳಂಕರಾಗಿರಬೇಕು. ಇಂದ್ರಿಯಗಳ ಮೇಲೆ ನಿಗ್ರಹ ಸಾಧಿಸಿದವರಾಗಿರಬೇಕು. ಪ್ರತಿದಿನವೂ ತುಪ್ಪವನ್ನು ಅರ್ಪಿಸಿ ಹೋಮ ಮಾಡುವಂಥವರಾಗಿರಬೇಕು ಮತ್ತು ಈ ಸೂಕ್ತದಲ್ಲಿ ಉಲ್ಲೇಖಿಸಲಾದ ಹದಿನೈದು ಮಂತ್ರಗಳನ್ನು ಸರಿಯಾದ ರೀತಿಯಲ್ಲಿ ಪಠಿಸುತ್ತಿರುವಂತಹವರಾಗಿರಬೇಕು
ಆನಂದಃ ಕರ್ದಮಸ್ಚೈವ ಚಿಕ್ಲೀತ ಇತಿ ವಿಶ್ರುತಾಃ
ಋಷಯಃ ತೇ ತ್ರಯಃ ಪ್ರೋಕ್ತಾ ಸ್ವಯಂ ಶ್ರೀರೇವ ದೇವತಾ
ಹದಿನೇಳನೆಯ ಮಂತ್ರ
ಜಪವನ್ನು ಮಾಡಲು ಬೇಕಾದ ಸಂಕಲ್ಪಕ್ಕೆ ಈ ಸೂಕ್ತದಲ್ಲಿ ಪ್ರಸ್ತಾಪಿಸಲಾದ ಪ್ರಖ್ಯಾತ ಮುನಿಗಳಾದ ಆನಂದ , ಕರ್ದಮ ಮತ್ತು ಚಿಕ್ಲೀತ ಇವರುಗಳು ಈ ಮಂತ್ರಗಳಿಗೆ ಋಷಿಗಳಾಗಿದ್ದಾರೆ ಮತ್ತು ಸ್ವಯಂ ಶ್ರೀದೇವಿಯೇ ಈ ಮಂತ್ರಗಳ ದೇವತೆಯಾಗಿದ್ದಾಳೆ.
ಪದ್ಮಾನಾನೇ ಪದ್ಮಊರೂ ಪದ್ಮಾಕ್ಷೀ ಪದ್ಮಸಂಭವೇ
ತ್ವಂ ಮಾಂ ಭಜಸ್ವ ಪದ್ಮಾಕ್ಷೀ ಯೇನ ಸೌಖ್ಯಂ ಲಾಭಮ್ಯಹಮ್
ಹದಿನೆಂಟನೆಯ ಮಂತ್ರ
ಹೇ ಲಕ್ಷ್ಮೀದೇವಿಯೇ,
ನಿನ್ನ ಕೃಪಾಕಟಾಕ್ಷದಿಂದ ನಮ್ಮನ್ನು ಅನುಗ್ರಹಿಸು.
ಪದ್ಮದಂತಿರುವ ವದನವು ನಿನಗಿದೆ,
ನಿನ್ನ ತೊಡೆಗಳು ಎರಡು ಕಮಲಗಳಂತಿವೆ,
ನಿನ್ನ ಕಣ್ಣುಗಳೂ ಸಹ ಕಮಲಗಳಂತಿವೆ,
ನಿಶ್ಚಯವಾಗಿಯೂ ನೀನು ಕಮಲದಿಂದಲೇ ಉದ್ಭವಿಸಿರುವೆ,
ನಮಗೆ ಸೌಖ್ಯ ಮತ್ತು ಆನಂದವನ್ನು ಉಂಟು ಮಾಡುವಂತಹದ್ದನ್ನು ಕರುಣಿಸು.
ಅಶ್ವದಾಯೀ ಗೋದಾಯೀ ಧನದಾಯೀ ಮಹಾಧನೇ
ಧನಂ ಮೇ ಜ್ಯೂಷುತಾಂ ದೇವಿ ಸರ್ವಕಾಮಾಂಶ್ಚ ದೇಹಿ ಮೇ
ಹತ್ತೊಂಬತ್ತನೆಯ ಮಂತ್ರ
ಹೇ ಲಕ್ಷ್ಮೀದೇವಿಯೇ,
ಸಂಪತ್ತು ಮತ್ತು ಸಮೃದ್ಧಿಗೆ ಅಧಿದೇವತೆಯು ನೀನು,
ಕುದುರೆಗಳ ಮತ್ತು ಗೋವುಗಳ ರೂಪದಲ್ಲಿ ನಮಗೆ ಸಂಪತ್ತನ್ನು ಅನುಗ್ರಹಿಸಬೇಕೆಂದು ನಾವು ನಿನ್ನನ್ನು ಪ್ರಾರ್ಥಿಸುತ್ತೇವೆ.
ಸರ್ವ ಕಾಮ್ಯಾರ್ಥಗಳೂ ಸಿದ್ಧಿಸುವಂತೆ ನಮಗೆ ಅನುಗ್ರಹಿಸು.
ಪುತ್ರಪೌತ್ರ ಧನಂ ಧ್ಯಾನಂ ಹಸ್ತ್ಯಶ್ವಾದಿಗವೇ ರಥಮ್
ಪ್ರಜಾನಾಂ ಭವಸಿ ಮಾತಾ ಆಯುಷ್ಮನ್ತಂ ಕರೋತು ಮಾಮ್
ಇಪ್ಪತ್ತನೆಯ ಮಂತ್ರ
ಹೇ ಲಕ್ಷ್ಮೀದೇವಿಯೇ,
ಓ ಮಾತೆಯೇ ಮಕ್ಕಳನ್ನೂ, ಮೊಮ್ಮಕ್ಕಳನ್ನೂ, ಧನವನ್ನೂ, ಹೇರಳವಾದ ಧಾನ್ಯವನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಹಸುಗಳನ್ನೂ ಮತ್ತು ರಥಗಳನ್ನೂ ಕರುಣಿಸಿ ನನ್ನನ್ನು ಹರಸು.ನಿಶ್ಚಯವಾಗಿಯೂ ನೀನು ಉದಾರಳು. ನನ್ನನ್ನು ದೀರ್ಘಾಯುಷಿಯನ್ನಾಗಿ ಮಾಡಿ ಅನುಗ್ರಹಿಸು.
ಧನಮಗ್ನಿರ್ಧನಂ ವಾಯುರ್ಧನಂ ಸೂರ್ಯೋ ಧನಂ ವಸುಃ
ಧನಮಿಂದ್ರೋ ಬೃಹಸ್ಪತಿರ್ವರುಣಂ ಧನಮಶ್ನುತೆ
ಇಪ್ಪತ್ತೊಂದನೆಯ ಮಂತ್ರ
ಹೇ ಮಾತೆ,
ಅಗ್ನಿ, ವಾಯು, ಸೂರ್ಯ, ಅಷ್ಟವಸುಗಳೆಂದು ಕರೆಯಲ್ಪಡುವ ವಸುಗಳು, ಪ್ರಕೃತಿಯ ವಿಷಯ ಅಂಶಗಳನ್ನು ಪ್ರತಿನಿಧಿಸುವ ಶಕ್ತಿದೇವತೆಗಳು, ಇಂದ್ರ ಬೃಹಸ್ಪತಿ ಮತ್ತು ವರುಣ ಇವರುಗಳೆಲ್ಲಾ ನಿನ್ನ ಅನುಗ್ರಹ ಮತ್ತು ಆಶೀರ್ವಾದದಿಂದ, ನಿನ್ನಿಂದ ನೀಡಲ್ಪಟ್ಟ ಹೇರಳ ಸಂಪತ್ತನ್ನು ಅನುಭವಿಸುತ್ತಾ, ಆನಂದ ತುಂದಿಲರಾಗಿ ಇರುವರು.
ವೈನತೇಯ ಸೋಮಂ ಪಿಬ ಸೋಮಂ ಪಿಬತು ವೃತ್ರಹಾ
ಸೋಮಂ ಧನಸ್ಯ ಸೋಮಿನೋ ಮಹ್ಯಂ ದದಾತು ಸೋಮಿನಃ
ಇಪ್ಪತ್ತೆರಡನೆಯ ಮಂತ್ರ
(ಸೋಮ ಎನ್ನುವುದು ಒಂದು ಬಗೆಯ ಸಸ್ಯದ ರಸವು. ಕೆಲವು ನಿಯಮಿತ ಯಜ್ಞಗಳ ಆಚರಣೆಯಲ್ಲಿ ಈ ರಸವನ್ನು ದೇವತೆಗಳಿಗೆ ಹವಿಸ್ಸನ್ನಾಗಿ ಸಮರ್ಪಿಸಲಾಗುತ್ತದೆ. ದೇವತೆಗಳು ಸೋಮರಸ ಸೇವಿಸುವದನ್ನು ಬಹಳ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ. ಯಜ್ಞಕರ್ತನೂ ಸಹ ಈ ರಸವನ್ನು ಸೇವಿಸುತ್ತಾನೆ)
ಓ ದೇವಿಯೇ
ನಿನ್ನ ಅನುಗ್ರಹದಿಂದ ನಾನು ಸೋಮ ಯಜ್ಞವನ್ನು ಮಾಡುತ್ತಿದ್ದೇನೆ.
ನನಗಾಗಿ ಹೇರಳವಾದ ಸೋಮರಸವನ್ನು ಉತ್ಪಾದಿಸಿ ಕೊಡು.
ವೈನತೇಯ ಅಥವಾ ಗರುಡನು ಯಥೇಚ್ಚವಾಗಿ ಸೋಮರಸವನ್ನು ಕುಡಿಯುವಂತಾಗಲಿ. ವೃತ್ರಾಸುರನನ್ನು ಸಂಹರಿಸಿದ ಇಂದ್ರನೂ ಸಹ ಬೇಕಾದಷ್ಟು ಸೋಮರಸವನ್ನು ಸೇವಿಸಲಿ. ನಾನೂ ಸಹ ಅದರಲ್ಲಿ ಪಾಲುಪಡೆಯುವಂತಾಗಲಿ.
ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ
ಭವನ್ತಿ ಕೃತಪುಣ್ಯಾನಾಂ ಭಕ್ತಾನಾಂ ಶ್ರೀಸೂಕ್ತಂ ಜಪೇತ್ಸದಾ
ಇಪ್ಪತ್ಮೂರನೆಯ ಮಂತ್ರ
ಓ ದೇವಿಯೇ, ಯಾವ ಭಕ್ತರು ಪುಣ್ಯವನ್ನು ಗಳಿಸಿರುತ್ತಾರೆಯೋ ಅಂತಹವರು ಕ್ರೋಧ, ಮಾತ್ಸರ್ಯ, ಲೋಭ ಮತ್ತು ದುರಾಶೆ ಇವುಗಳಿಂದ ಮುಕ್ತರಾಗಿರುತ್ತಾರೆ. ಆದುದರಿಂದ ಯೋಗ್ಯತೆ, ಭಕ್ತಿ ಮತ್ತು ಧೃಢ ನಿಷ್ಠೆಯನ್ನು ಗಳಿಸಲು ಯಾರೇ ಆಗಲಿ ಶ್ರೀ ಸೂಕ್ತದ ಮಂತ್ರಜಪವನ್ನು ಸದಾ ಮಾಡುತ್ತಿರಬೇಕು.
ವರ್ಷನ್ತು ತೇ ವಿಭಾವರಿ ದಿವೋ ಅಭ್ರಸ್ಯ ವಿದ್ಯುತಃ
ರೋಹನ್ತು ಸರ್ವಬಿಜಾನ್ಯವ ಬ್ರಹ್ಮ ದ್ವಿಷೋ ಜಹಿ
ಇಪ್ಪತ್ನಾಲ್ಕನೆಯ ಮಂತ್ರ
ಓ ದೇವಿಯೇ, ನಿನ್ನ ಅನುಗ್ರಹದಿಂದಾಗಿಯೇ ಕೋಲ್ಮಿಂಚುಗಳಿಂದ ಕೂಡಿದ ಮೋಡಗಳು ಹಗಲು ರಾತ್ರಿ ಮಳೆ ಸುರಿಸುತ್ತಿವೆ. ನೆಲದಲ್ಲಿ ಬಿತ್ತಲಾದ ಎಲ್ಲಾ ಬೀಜಗಳೂ ಮೊಳಕೆಯೊಡೆದು ಒಳ್ಳೆಯ ಫಸಲು ದೊರಕಲಿ. ದೇವರನ್ನು ದೂಷಿಸುವವರನ್ನು ದೂರಮಾಡಲಿ.
ಪದ್ಮಪ್ರಿಯೇ ಪದ್ಮಿನಿ ಪದ್ಮಹಸ್ತೇ ಪದ್ಮಾಲಯೇ ಪದ್ಮದಳಾಯತಾಕ್ಷಿ
ವಿಶ್ವಪ್ರಿಯೆ ವಿಷ್ಣು ಮನೋನುಕೂಲೆ ತ್ವತ್ಪಾದಪದ್ಮಂ ಮಯಿ ಸನ್ನಿಧತ್ಸ್ವ
ಇಪ್ಪತ್ತೈದನೆಯ ಮಂತ್ರ
ಹೇ ಲಕ್ಷ್ಮೀದೇವಿಯೇ,
ನಿನಗೆ ಪದ್ಮಗಳ ಮೇಲೆ ಅತ್ಯಂತ ಪ್ರೀತಿಯಿದೆ. ಕಮಲದಲ್ಲಿ ಜನಿಸಿದವಳು ನೀನು. ನಿನ್ನ ಹಸ್ತಗಳು ಪದ್ಮಗಳಂತೆ ಕೋಮಲವಾಗಿವೆ; ನೀನು ಕಮಲವನ್ನೇ ನಿನ್ನ ಆಲಯವನ್ನಾಗಿರಿಸಿಕೊಂಡಿರುವೆ. ನಿಶ್ಚಯವಾಗಿಯೂ ನಿನ್ನ ಕಣ್ಣುಗಳು ಕಮಲದ ದಳಗಳಂತೆ ಅಗಲವಾಗಿವೆ. ಇಡೀ ವಿಶ್ವವೇ ನಿನ್ನನ್ನು ಇಷ್ಟಪಡುತ್ತದೆ. ನಿನ್ನ ಪತಿಯಾದ ಮಹಾವಿಷ್ಣುವಿನ ಮನೋನುಕೂಲೆಯಾಗಿದ್ದೀಯೆ . ದಯವಿಟ್ಟು ನಿನ್ನ ಪಾದಕಮಲಗಳನ್ನು ನನ್ನ ತಲೆಯ ಮೇಲಿರಿಸಿ ನನ್ನನ್ನು ಅನುಗ್ರಹಿಸು.
ಯಾ ಸಾ ಪದ್ಮಾಸನಾಸ್ಥಾ ವಿಪುಲಕಟೀತಟೀ ಪದ್ಮಪತ್ರಾಯತಾಕ್ಷೀ
ಗಂಭೀರಾ ವರ್ತನಾಭಿಃ ಸ್ತನಭರ ನಮಿತಾ ಶುಭ್ರ ವಾಸ್ತ್ರೋ ತ್ತರೀಯಾ
ಲಕ್ಷ್ಮೀರ್ದಿವ್ಯೈರ್ಗಜೇಂದ್ರೈಃ ಮಣಿಗಣ ಖಚಿತೈಸ್ಸ್ನಾಪಿತಾ ಹೇಮಕುಂಭೈ: |
ನಿತ್ಯಂ ಸಾ ಪದ್ಮಹಸ್ತಾ ಮಮ ವಸತು ಗೃಹೇ ಸರ್ವಮಾಂಗಲ್ಯಯುಕ್ತಾ ||
ಇಪ್ಪತ್ತಾರನೆಯ ಮಂತ್ರ
ಪದ್ಮದ ಮೇಲೆ ಆಸೀನಳಾಗಿರುವಂತಹವಳೂ, ವಿಶಾಲವಾದ ಪೃಷ್ಠ ವನ್ನುಳ್ಳವಳೂ, ಪದ್ಮದ ದಳಗಳನ್ನು ಹೋಲುವ ಅಗಲವಾದ ಕಣ್ಣುಗಳುಳ್ಳವಳೂ ಆಳವಾದ ಕುಳಿಯ ನಾಭಿಯನ್ನುಳ್ಳವಳೂ, ಸ್ತನಗಳ ಭಾರದಿಂದ ತುಸು ಬಾಗಿದವಳೂ ಮತ್ತು ಶುಭ್ರವಾದ ವಸ್ತ್ರ, ಉತ್ತರೀಯಗಳಿಂದ ಅಲಂಕೃತಳಾದವಳೂ ಆದ ಲಕ್ಷ್ಮೀದೇವಿಯ ಶಿರಸ್ಸಿನ ಮೇಲೆ, ದಿವ್ಯವಾದ ಆನೆಗಳು, ರತ್ನ ಖಚಿತವಾದ ಮಣಿಗಳಿಂದ ಪೋಣಿಸಿದ ಬಂಗಾರದ ಕಲಶಗಳಿಂದ ನೀರನ್ನು ಪ್ರೋಕ್ಷಿಸುತ್ತಿವೆ. ಅಂತಹ ದೇವತೆಯಾದ, ತನ್ನಕೈಗಳಲ್ಲಿ ಪದ್ಮಗಳನ್ನು ಇಟ್ಟುಕೊಂಡಿರುವ, ಶುಭಕಾರಕಳಾದ ಶ್ರೀ ಲಕ್ಷ್ಮೀದೇವಿಯು ನನ್ನ ಮನೆಗೆ ಬಂದು ಸ್ಥಿರವಾಗಿ ನೆಲೆಸಲಿ.
ಲಕ್ಷ್ಮೀಂ ಕ್ಷೀರಸಮುದ್ರ ರಾಜತನಯಾಂ ಶ್ರೀ ರಂಗಧಾಮೇಶ್ವರೀಂ |
ದಾಸೀ ಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಂ |
ಶ್ರೀ ಮನ್ಮಂದಕಟಾಕ್ಷಲಬ್ಧ ವಿಭವ ಬ್ರಹ್ಮೇಂದ್ರಗಂಗಾಧರಾಂ |
ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ ||
ಇಪ್ಪತ್ತೇಳನೆಯ ಮಂತ್ರ
ಕ್ಷೀರ ಸಮುದ್ರ ರಾಜನ ಮಗಳಾಗಿರತಕ್ಕಂತಹ, ಶ್ರೀರಂಗಧಾಮೇಶ್ವರಿಯಾದಂತಹ, ಸಮಸ್ತ ದೇವವನಿತೆಯರನ್ನು ದಾಸಿಯರನ್ನಾಗಿ ಹೊಂದಿ ಅವರಿಂದ ಸೇವೆಗಳನ್ನು ಸ್ವೀಕರಿಸುತ್ತಿರುವಂತಹ, ದೀಪದಂತೆ ಸಕಲ ಜಗತ್ತನ್ನೂ ಬೆಳಗುತ್ತಿರುವಂತಹ ಲಕ್ಷ್ಮೀದೇವಿಗೆ ನಾನು ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ. ಮೂರುಲೋಕಗಳನ್ನೂ ತನ್ನ ಸ್ವಂತ ಕುಟುಂಬವೆಂದು ಪರಿಗಣಿಸಿ ಪಾಲಿಸುತ್ತಿರುವ, ಕಮಲದ ಕೊಳದಲ್ಲಿ ಜನ್ಮ ತಾಳಿದ, ಮುಕುಂದನ ಪ್ರಿಯೆಯಾದ ಲಕ್ಷ್ಮೀದೇವಿಯ, ಕರುಣಾಪೂರಿತ ಮಂದಹಾಸದ ಕಟಾಕ್ಷದಿಂದ, ಬ್ರಹ್ಮ, ಇಂದ್ರ ಮತ್ತುಶಿವ ಇವರುಗಳು ತಮ್ಮಸ್ಥಾನ ಮತ್ತು ಅಂತಸ್ತನ್ನುಅನುಭವಿಸುತ್ತಿದ್ದಾರೆ.
ಅಂತಹ ಲಕ್ಷ್ಮೀದೇವಿಗೆ ನನ್ನ ನಮಸ್ಕಾರಗಳು.
ಸಿದ್ಧಲಕ್ಷ್ಮೀರ್ಮೋಕ್ಷಲಕ್ಷ್ಮೀಃ ಜಯಲಕ್ಷ್ಮೀಸ್ಸರಸ್ವತೀ |
ಶ್ರೀ ಲಕ್ಷ್ಮೀರ್ವರಲಕ್ಷ್ಮೀಶ್ಚ ಪ್ರಸನ್ನಾ ಮಮ ಸರ್ವದಾ |
ಇಪ್ಪತ್ತೆಂಟನೆಯ ಮಂತ್ರ
ತಾವರೆಯ ಕೊಳದಿಂದ ಉಧ್ಭವಿಸಿರುವ ನೀನು, ನಮ್ಮ ಕೋರಿಕೆಗಳನ್ನು ಈಡೇರಿಸುವ ಸಿದ್ಧಲಕ್ಷ್ಮಿಯಾಗಿ, ನಮಗೆ ಮುಕ್ತಿಯನ್ನು ದಯಪಾಲಿಸುವ ಮೋಕ್ಷಲಕ್ಷ್ಮಿಯಾಗಿ, ನಮಗೆ ಗೆಲುವನ್ನು ತಂದುಕೊಡುವ ಜಯಲಕ್ಷ್ಮಿಯಾಗಿ, ಐಶ್ವರ್ಯ ಮತ್ತು ಅಭ್ಯುದಯವನ್ನು ನೀಡುವ ಶ್ರೀಲಕ್ಷ್ಮಿಯಾಗಿ, ಮತ್ತು ವರಗಳನ್ನು ಕರುಣಿಸುವ ವರಲಕ್ಷ್ಮಿಯಾಗಿ, ವಿಧವಿಧವಾದ ಶಕ್ತಿ, ಸಾಮರ್ಥ್ಯಗಳ ರೂಪದಲ್ಲಿ ಅವತರಿಸುವ ಲಕ್ಷ್ಮೀದೇವಿಯೇ ನಿನ್ನನ್ನು ನಾನು ಪ್ರಾರ್ಥಿಸುತ್ತೇನೆ. ಸದಾ ಮತ್ತು ಸರ್ವದಾ ನಿನ್ನ ಕೃಪೆ ಮತ್ತು ಅನುಗ್ರಹ ನನ್ನ ಮೇಲಿರುವಂತಾಗಲಿ.
ಓಂ