SRIMAD BHAGAVAD GITA
CHAPTER 2
A SLOKA A DAY
PUBLISHED BY LANKA KRISHNAMURTI FOUNDATION
(https://krishnamurtifoundation.com/lanka/)
ಅಥ ಸಾಂಖ್ಯಯೋಗೋ ನಾಮ ದ್ವಿತೀಯೋಽಧ್ಯಾಯಃ ।
ಶ್ರೀಮದ್ ಭಗವದ್ಗೀತಾ ಎರಡನೆಯ ಅಧ್ಯಾಯ- ಸಾಂಖ್ಯಯೋಗ
1 सञ्जय उवाच
तं तथा कृपयाविष्टम्
अश्रुपूर्णाकुलेक्षणम्।
विषीदन्तमिदं वाक्यम्
उवाच मधुसूदनः॥२.१॥
ಸಂಜಯ ಉವಾಚ ।
ತಂ ತಥಾ ಕೃಪಯಾವಿಷ್ಟಮ್
ಅಶ್ರುಪೂರ್ಣಾಕುಲೇಕ್ಷಣಮ್ ।
ವಿಷೀದಂತಮಿದಂ ವಾಕ್ಯಮ್
ಉವಾಚ ಮಧುಸೂದನಃ ॥ 2-1॥
- Sanjaya said:
Krishna –
Aptly called Madhusudana,
Slayer of the demon Madhu,
The very personification of illusion –
Krishna made a befitting speech
Addressed to Arjuna,
Who was overwhelmed by compassion,
With eyes filled with tears,
And highly distressed.
೧. ಸಂಜಯ ಹೇಳಿದನು:
ಕಂಬನಿ ತುಂಬಿ ಮಂಜಾದ ಕಣ್ಣುಳ್ಳವನೂ, ದಯಾರ್ದ್ರನೂ, ಶೋಕಗ್ರಸ್ತನೂ ಆದ
ಅರ್ಜುನನ್ನು ಕುರಿತು, ಭ್ರಮೆಯೇ ಮೂರ್ತಿವೆತ್ತಂತಿದ್ದ ಮಧು ಎಂಬ ರಾಕ್ಷಸನನ್ನು ಕೊಂದು ಮಧುಸೂದನ ನಾಮಾಂಕಿತನಾದ ಕೃಷ್ಣನು ಹೀಗೆ ಹೇಳಿದನು.
- श्री भ्गवान् उवाच
कुतस्त्वा कश्मलमिदं
विषमे समुपस्थितम्।
अनार्यजुष्टमस्वर्गं
अकीर्तिकरमर्जुन!॥२.२॥
ಶ್ರೀಭಗವಾನುವಾಚ ।
ಕುತಸ್ತ್ವಾ ಕಶ್ಮಲಮಿದಂ
ವಿಷಮೇ ಸಮುಪಸ್ಥಿತಮ್ ।
ಅನಾರ್ಯಜುಷ್ಟಮಸ್ವರ್ಗ್ಯಮ್
ಅಕೀರ್ತಿಕರಮರ್ಜುನ ॥ 2-2॥
- Bhgawan Sri Krishna said:
O Arjuna,
How did you get into this odd state
Of delusion, unbecoming, mean,
Not leading to heaven, for sure,
By no means enhancing your prestige?
Why this delusion?
ಭಗವಾನ್ ಶ್ರೀ ಕೃಷ್ಣ ಹೇಳಿದನು:
ಹೇ ಅರ್ಜುನಾ! ಇಂತಹ ವಿಷಮ ಸಮಯದಲ್ಲಿ
ಈ ಪ್ರಕಾರದ ಮೋಹವು ಯಾವ ಕಾರಣದಿಂದ ಪ್ರಾಪ್ತವಾಯಿತು?
ಏಕೆಂದರೆ ಈ ಮೋಹವು ಆರ್ಯರಿಂದ ಆಚರಿಸಲ್ಪಡುವುದಲ್ಲ.
ಸ್ವರ್ಗವನ್ನು ಖಂಡಿತವಾಗಿಯೂ ಕೊಡುವಂತಹುದಲ್ಲ ಮತ್ತು
ಕೀರ್ತಿಯನ್ನುಂಟುಮಾಡುವುದೂ ಅಲ್ಲ. ಏಕೆ ಈ ವ್ಯಾಮೋಹ?
- क्लैब्यं मा स्म गमः पार्थ!
नैतत्वय्युपपद्यते।
क्षुद्रं हृदयदौर्बल्यं
त्यक्वोत्तिष्ठ परन्तप!॥२.३॥
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ
ನೈತತ್ತ್ವಯ್ಯುಪಪದ್ಯತೇ ।
ಕ್ಷುದ್ರಂ ಹೃದಯದೌರ್ಬಲ್ಯಂ
ತ್ಯಕ್ತ್ವೋತ್ತಿಷ್ಠ ಪರಂತಪ ॥ 2-3॥
- O Partha, the son of Pruthu,
Don’t lose your masculinity.
It is unbecoming of you to be so.
It is mean and cowardly
To be weak at heart.
Arise and prove your competence
To scare away the enemies.
೩. ಪೃಥೆಯ ಮಗನಾದ ಪಾರ್ಥನೇ,
ಷಂಡತನವನ್ನು ಹೊಂದಬೇಡ. ಇದು ನಿನಗೆ ಯೋಗ್ಯವಾದದ್ದಲ್ಲ. ಶತ್ರುಗಳಿಗೆ ತಾಪವುನ್ನುಂಟುಮಾಡುವವನೇ, ಈ ಹೃದಯ ದೌರ್ಬಲ್ಯವು ಕ್ಷುದ್ರವಾದದ್ದು. ಇದನ್ನು ಬಿಟ್ಟು ಎದ್ದೇಳು ಮತ್ತು ಶತೃಗಳನ್ನು ಓಡಿಸಲು ನಿನ್ನ ಶಕ್ತಿಯನ್ನು ಪ್ರದರ್ಶಿಸು.
- अर्जुन उवाच
कथं भीष्ममहं सङ्ख्ये
द्रोणं च मधुसूदन्!।
इषुभिः प्रतियोत्स्यामि
पूजार्हावरिसूदन!॥२.४॥
ಅರ್ಜುನ ಉವಾಚ ।
ಕಥಂ ಭೀಷ್ಮಮಹಂ ಸಂಖ್ಯೇ
ದ್ರೋಣಂ ಚ ಮಧುಸೂದನ ।
ಇಷುಭಿಃ ಪ್ರತಿಯೋತ್ಸ್ಯಾಮಿ
ಪೂಜಾರ್ಹಾವರಿಸೂದನ ॥ 2-4॥
- Arjuna said:
O Madhusudana,
Slayer of the demon Madhu,
O Krishna,
Extinguisher of all enemies,
How can I, in this war, strike with arrows
At Bheeshma, my venerable grandfather,
And at Drona, my revered Guru?
೪.
ಅರ್ಜುನನು ಹೀಗೆಂದನು:
ಮಧುವೆಂಬ ರಾಕ್ಷಸನನ್ನು ಕೊಂದ ಮಧುಸೂದನ, ಹೇ ಕೃಷ್ಣ, ಶತ್ರು ಸಂಹಾರಕನೇ! ಪೂಜಾರ್ಹನಾದ ನನ್ನ ತಾತ ಭೀಷ್ಮರನ್ನು ಹಾಗೂ ಗೌರವಾರ್ಹರಾದ ನನ್ನ ಪ್ರೀತಿಯ ಗುರುಗಳಾದ ದ್ರೋಣಾಚಾರ್ಯರನ್ನುಯುದ್ಧದಲ್ಲಿ ಬಾಣಗಳಿಂದ ಹೇಗೆ ಹೊಡೆಯಲಿ?
- गुरूनहत्वा हि महानुभावान्
श्रेयो भोक्तुं भैक्ष्यमपीहलोके।
हत्वार्थकामांस्तु गुरूनिहैव
भुञ्जीय भोगान्रुधिरप्रदिग्धान्॥२.५॥
ಗುರೂನಹತ್ವಾ ಹಿ ಮಹಾನುಭಾವಾನ್
ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ ।
ಹತ್ವಾರ್ಥಕಾಮಾಂಸ್ತು ಗುರೂನಿಹೈವ
ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್ ॥ 2-5॥
- It seems to me, said Arjuna,
Without killing these venerable elders
Of glorious virtues,
Just living on mere alms
Would be a desirable option.
Instead, should I kill them,
I will have to enjoy such pleasures in this world,
From wealth and fulfilment of my desires,
Which are smeared by the blood
Of these venerable ones.
- ಅರ್ಜುನ ಹೇಳುತ್ತಾನೆ. ನನ್ನ ಗುರುಗಳಂತಹಾ ಮಹಾನುಭಾವರನ್ನು ಕೊಂದು ಜೀವಿಸುವುದಕ್ಕಿಂತ ಈ ಜಗತ್ತಿನಲ್ಲಿ ಭಿಕ್ಷೆಯನ್ನು ಬೇಡಿ ಬದುಕುವುದು ಉತ್ತಮವೆಂದು ನನಗನ್ನಿಸುತ್ತದೆ. ಐಹಿಕ ಜೀವನದಲ್ಲಿ ಐಶ್ವರ್ಯವನ್ನು ಬಯೆಸುವೆನಾದರೂ ಅವರು ಗುರುಗಳು. ಅವರನ್ನು ಕೊಂದರೆ ನಾವು ಅನುಭವಿಸುವ ಎಲ್ಲ ಭೋಗಗಳಿಗೂ ಅವರ ರಕ್ತ ಅಂಟಿಕೊಂಡಿರುತ್ತದೆ.
- नचैतद्विद्मः कतरन्नौ/न्नो गरीयो,
यद्वा जयेम यदि वा नो जयेयुः।
यानेव हत्वा न जिजीविषामः
तॆवस्थिताः प्रमुखे धार्तराष्ट्राः॥२.६॥
ನ ಚೈತದ್ವಿದ್ಮಃ ಕತರನ್ನೋ ಗರೀಯೋ
ಯದ್ವಾ ಜಯೇಮ ಯದಿ ವಾ ನೋ ಜಯೇಯುಃ ।
ಯಾನೇವ ಹತ್ವಾ ನ ಜಿಜೀವಿಷಾಮಃ
ತೇಽವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ ॥ 2-6॥
- I am not sure, said Arjuna,
Whether we would score victory over them
Or they would subdue us,
But they the sons of Dhrutarashtra
Whom we do not wish to kill
And continue living after they are dead,
Are now face to face with us,
Standing firm and ready to attack us.
೬.
ಅರ್ಜುನ ಹೇಳುತ್ತಾನೆ. ನಾವು ಅವರ ಮೇಲೆ ವಿಜಯವನ್ನು ಸಾಧಿಸುವೆವೋ ಅಥವಾ ಅವರೇ ನಮ್ಮನ್ನು ಸೋಲಿಸುವರೋ ಗೊತ್ತಿಲ್ಲ. ಯಾರನ್ನು ಕೊಂದು ಬದುಕಲು ನಮಗೆ ಇಷ್ಟವಿಲ್ಲವೋ ಆ ಧೃತರಾಷ್ಟ್ರನ ಪುತ್ರರು ನಮಗೆ ಮುಖಾಮುಖಿಯಾಗಿ ನಿಂತು ನಮ್ಮನ್ನು
ಆಕ್ರಮಿಸಲು ಮುಂದಾಗಿದ್ದಾರೆ.
- कार्पण्यदोषोपहतस्वभावः
पृच्छामि त्वां धर्मसम्मूढचेताः।
यच्छ्रेयः स्यान्निश्चितं ब्रूहि तन्मे
शिष्यस्तेऽहं शाधि मां त्वां प्रपन्नम्॥२.७॥
ಕಾರ್ಪಣ್ಯದೋಷೋಪಹತಸ್ವಭಾವಃ
ಪೃಚ್ಛಾಮಿ ತ್ವಾಂ ಧರ್ಮಸಮ್ಮೂಢಚೇತಾಃ ।
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ
ಶಿಷ್ಯಸ್ತೇಽಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ ॥ 2-7॥
- O Krishna,
My innate nature suffers from guilt,
From the defect of faint-heartedness;
I get confused as to what is dharma.
I pray to you to enlighten me
On what action would be beneficial.
I have surrendered to you.
I am your disciple.
Teach me the right course of action.
೭.
ಹೇ ಕೃಷ್ಣಾ, ಕಾರ್ಪಣ್ಯದ ದೌರ್ಬಲ್ಯದಿಂದ ನಾನೀಗ
ನನ್ನ ಕರ್ತವ್ಯದ ಬಗ್ಗೆ ಗೊಂದಲದಲ್ಲಿದ್ದೇನೆ.
ಚಿತ್ತಸ್ವಾಸ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ.
ಧರ್ಮಾಧರ್ಮ ವಿವೇಕವು ನಷ್ಟವಾಗಿದೆ. ನಿನ್ನನ್ನು ಪ್ರಾರ್ಥಿಸುತ್ತೇನೆ
ಇಂತಹ ಸ್ಥಿತಿಯಲ್ಲಿ ಯಾವುದು ನನಗೆ ಶ್ರೇಯಸ್ಕರ ಎಂದು ಖಚಿತವಾಗಿ ಹೇಳು.ನಾನು ನಿನ್ನ ಶಿಷ್ಯನಾಗಿದ್ದೇನೆ. ನಿನ್ನಲ್ಲಿ ಶರಣಾಗಿರುವ ನನಗೆ ಸರಿಯಾದ ಕರ್ತವ್ಯವನ್ನು ಉಪದೇಶಿಸು.
- न हि प्रपस्यामि ममापनुद्यात्
यच्छोकमुच्छोषणमिन्द्रियाणाम्।
अवाप्य भूमावसपत्नमृद्धं
राज्यं सुराणामपि चाधिपत्यम्॥२.८॥
ನ ಹಿ ಪ್ರಪಶ್ಯಾಮಿ ಮಮಾಪನುದ್ಯಾದ್
ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್ ।
ಅವಾಪ್ಯ ಭೂಮಾವಸಪತ್ನಮೃದ್ಧಂ
ರಾಜ್ಯಂ ಸುರಾಣಾಮಪಿ ಚಾಧಿಪತ್ಯಮ್ ॥ 2-8॥
- O Krishna,
My senses are scorched
By the grief in me,
Deep-seated and disturbing.
It cannot be dispelled
Even if I gain kingship over the earth,
Get free from all enemies
And gain sovereignty over the divines too.
೮.
ಹೇ ಕೃಷ್ಣಾ, ನನ್ನ ಇಂದ್ರಿಯಗಳನ್ನು ಸೊರಗಿಸುತ್ತಿರುವ ಈ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ. ಈ ಭೂಮಿಯಲ್ಲಿ ಶತ್ರುಶೂನ್ಯವಾದ ಸಮೃದ್ಧ ರಾಜ್ಯವನ್ನು ಹೊಂದಿದರೂ ಮತ್ತು ದೇವತೆಗಳ ಮೇಲೆ ಒಡೆತನವನ್ನು ಪಡೆದರೂ ನಾನು ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ .
- सञ्जय उवाच-
एवमुक्त्वा हृषीकेशं
गुडाकेशः परन्तपः।
न योत्स्य इति गोविन्दं
मुक्त्वा तूष्णीं बभूव ह॥२.९॥
ಸಂಜಯ ಉವಾಚ ।
ಏವಮುಕ್ತ್ವಾ ಹೃಷೀಕೇಶಂ
ಗುಡಾಕೇಶಃ ಪರಂತಪಃ ।
ನ ಯೋತ್ಸ್ಯ ಇತಿ ಗೋವಿಂದಂ
ಮುಕ್ತ್ವಾ ತೂಷ್ಣೀಂ ಬಭೂವ ಹ ॥ 2-9॥
- Sanjaya said:
With those words addressed to Krishna,
Arjuna, known as the tormentor of enemies,
Said again, “I shall not fight”
And remained silent, indeed.
೯.
ಸಂಜಯ ಹೇಳಿದನು:
ಅರಿಭಯಂಕರನಾದ ಅರ್ಜುನನು ಈ ವಿಧವಾಗಿ ಶ್ರೀ ಕೃಷ್ಣನಿಗೆ ಮೇಲಿನ ಮಾತುಗಳನ್ನು ತಿಳಿಸಿ ಪುನಃ “ನಾನು ಯುದ್ಧ ಮಾಡುವುದಿಲ್ಲ” ಎಂದು ಹೇಳಿ ಮೌನ ತಾಳಿದನು.
- तमुवाच हृषीकेशः
प्रहसन्निव भारत!।
सेनयोरुभयोर्मद्ध्ये
विषीदन्तमिदं वचः॥२.१०॥
ತಮುವಾಚ ಹೃಷೀಕೇಶಃ
ಪ್ರಹಸನ್ನಿವ ಭಾರತ ।
ಸೇನಯೋರುಭಯೋರ್ಮಧ್ಯೇ
ವಿಷೀದಂತಮಿದಂ ವಚಃ ॥ 2-10॥
- Sanjaya said:
O Dhrutarashtra,
Krishna then, as if laughing
At Arjuna’s ignorance, spoke to him,
Who was drowned in grief,
Despairing in the middle of two armies.
೧೦.
ಸಂಜಯ ಹೇಳಿದನು:
ಎಲೈ ಧೃತರಾಷ್ಟ್ರ, ಆಗ ಎರಡು ಸೈನ್ಯಗಳ ಮಧ್ಯೆ ವಿಷಾದದಲ್ಲಿ ಮುಳುಗಿದ ಅರ್ಜುನನನ್ನು ಕುರಿತು,ಶ್ರೀ ಕೃಷ್ಣನು ನಸು ನಗುತ್ತಾ, ಈ ಮಾತುಗಳನ್ನು ಹೇಳಿದನು.
- श्रीभगवानुवाच
अशोच्यानन्वशोचस्त्वं
प्रज्ञावादांश्च भाषसे।
गतासूनगतासूंश्च
नानुशोचन्ति पण्डिताः॥२.११॥
ಶ್ರೀಭಗವಾನುವಾಚ ।
ಅಶೋಚ್ಯಾನನ್ವಶೋಚಸ್ತ್ವಂ
ಪ್ರಜ್ಞಾವಾದಾಂಶ್ಚ ಭಾಷಸೇ ।
ಗತಾಸೂನಗತಾಸೂಂಶ್ಚ
ನಾನುಶೋಚಂತಿ ಪಂಡಿತಾಃ ॥ 2-11॥
- Sri Bhagavan said:
O Arjuna,
You express grief for those
Who are not to be grieved over;
You also utter words of wisdom
Pertaining to the nature of body and soul.
In fact, the wise, who know
The nature of body and soul,
Do not grieve
Either for the dead body
Or for the living soul.
೧೧.
ಶ್ರೀ ಭಗವಂತನು ಹೇಳಿದನು:
ಓ ಅರ್ಜುನಾ! ನೀನು ಯಾರಿಗಾಗಿ ಶೋಕಪಡಬೇಕಾಗಿಲ್ಲವೋ ಅವರಿಗಾಗಿ ಶೋಕಿಸುತ್ತಿರುವೆ, ಹಾಗೂ ಶರೀರ ಮತ್ತು ಆತ್ಮದ ಬಗ್ಗೆ ಜ್ಞಾನಿಯಂತೆ ಮಾತನಾಡುತ್ತಿರುವೆ. ಆದರೆ ಪಂಡಿತರು ಮೃತ ದೇಹದ ಬಗ್ಗೆಯಾಗಲೀ, ಬದುಕಿರುವ
ಆತ್ಮದ ಬಗ್ಗೆಯಾಗಲೀ ಶೋಕಿಸುವುದಿಲ್ಲ.
- न त्वेवाहं जातु नासं
न त्वं नेमे जनाधिपाः।
न चैव न भविष्यामः
सर्वे वयमतः परम्॥२.१२॥
ನ ತ್ವೇವಾಹಂ ಜಾತು ನಾಸಂ
ನ ತ್ವಂ ನೇಮೇ ಜನಾಧಿಪಾಃ ।
ನ ಚೈವ ನ ಭವಿಷ್ಯಾಮಃ
ಸರ್ವೇ ವಯಮತಃ ಪರಮ್ ॥ 2-12॥
- O Arjuna,
That I was not there in the past,
Is not true;
And that you and those kings
Were not there in the past
Is also not true.
That we will not be hereafter
In the future –
It is also not true.
೧೨.
ಹೇ ಅರ್ಜುನಾ!
ನಾನು ಗತಕಾಲದಲ್ಲಿ ಇರಲಿಲ್ಲವೆಂಬುದು ನಿಜವಲ್ಲ
ಮತ್ತು ನೀನೂ ಹಾಗೂ ಈ ರಾಜರು ಭೂತಕಾಲದಲ್ಲಿ
ಇರಲಿಲ್ಲವೆಂಬುದೂ ನಿಜವಲ್ಲ. ಇನ್ನು ಮುಂದೆಯೂ
ಅಂದರೆ ಭವಿಷ್ಯದಲ್ಲಿಯೂ ನಾವೆಲ್ಲರೂ ಇರುವುದಿಲ್ಲ
ಎಂಬುದೂ ನಿಜವಲ್ಲ್ಕ.
देहिनोऽस्मिन्यथा देहे
कौमारं यौवनं जरा।
तथा देहान्तरप्राप्तिः
धीरस्तत्र न मुह्यति॥२.१३॥
ದೇಹಿನೋಽಸ್ಮಿನ್ಯಥಾ ದೇಹೇ
ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರಪ್ರಾಪ್ತಿಃ
ಧೀರಸ್ತತ್ರ ನ ಮುಹ್ಯತಿ ॥ 2-13॥
- Arjuna,
As the embodied self,
You observe the body changing
From childhood to youth,
From youth to old age and death.
So, after death, the self enters another body.
An intelligent person is not perturbed by it.
೧೩.
ಅರ್ಜುನಾ!
ದೇಹವುಳ್ಳ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಯೌವನದಿಂದ ಮುಪ್ಪಿಗೆ ಹಾಗೂ ಸಾವಿಗೆ ಸಾಗುವ ರೀತಿಯಲ್ಲಿಯೇ, ಈ ಆತ್ಮವು ಸಾವಿನ ನಂತರ ಮತ್ತೊಂದು ದೇಹಕ್ಕೆ ಪ್ರವೇಶಿಸುತ್ತದೆ. ಈ ವಿಷಯದಲ್ಲಿ ಜ್ಞಾನಿಯಾದವನು ಗೊಂದಲಕ್ಕೆ ಒಳಗಾಗುವುದಿಲ್ಲ.
- मात्रास्पर्षास्तु कौन्तेय
शीतोष्णसुखदुःखदाः।
आगमापायिनोऽनित्याः
तांस्तितिक्षस्व भारत॥२.१४॥
ಮಾತ್ರಾಸ್ಪರ್ಶಾಸ್ತು ಕೌಂತೇಯ
ಶೀತೋಷ್ಣಸುಖದುಃಖದಾಃ ।
ಆಗಮಾಪಾಯಿನೋಽನಿತ್ಯಾಃ
ತಾಂಸ್ತಿತಿಕ್ಷಸ್ವ ಭಾರತ ॥ 2-14॥
- When the senses make contact with their objects,
Sensations like cold and heat,
Pleasure and pain are caused.
They come and go.
So they are unreal.
O Arjuna, learn to endure them.
೧೪.
ಎಲೈ ಕುಂತೀಪುತ್ರನೇ,
ಇಂದ್ರಿಯಗಳಿಗೂ, ವಿಷಯಯಗಳಿಗೂ ಆಗುವ ಸ್ಪರ್ಶಗಳು ಶೀತೋಷ್ಣಗಳನ್ನೂ ಸುಖದುಃಖಗಳನ್ನೂ ಉಂಟುಮಾಡತಕ್ಕಂಥವುಗಳು. ಆ ಕೂಡಿಕೆ ಸ್ಥಿರವಲ್ಲ. ಬಂದುಹೋಗುತ್ತಿರುತ್ತವೆ. ಆದುದರಿಂದ ಎಲೈ ಅರ್ಜುನಾ, ಅವುಗಳನ್ನು ಸಹಿಸಿಕೋ.
यं न व्यथयन्त्येते
पुरुषं पुरुषर्षभ!।
समदुःखसुखं धीरं
सोऽमृतत्वाय कल्पते॥२.१५॥
ಯಂ ಹಿ ನ ವ್ಯಥಯಂತ್ಯೇತೇ
ಪುರುಷಂ ಪುರುಷರ್ಷಭ ।
ಸಮದುಃಖಸುಖಂ ಧೀರಂ
ಸೋಽಮೃತತ್ವಾಯ ಕಲ್ಪತೇ ॥ 2-15॥
- O Arjuna, the best among men,
He whom the sensations do not agitate,
He who remains the same in pleasure and pain,
And he who is wise becomes eligible
For immortality.
೧೫.
ಹೇ ಅರ್ಜುನಾ, ಪುರುಷಶ್ರೇಷ್ಠನೇ,
ಯಾರು ಸುಖದುಃಖಗಳಲ್ಲಿ ವಿಚಲಿತರಾಗುವುದಿಲ್ಲವೋ, ಯಾರು ಇಂದ್ರಿಯ ವಿಷಯ ಸಂಯೋಗದಿಂದ ಪೀಡಿಸಲ್ಪಡುವುದಿಲ್ಲವೋ ಮತ್ತು ಯಾರು ಜ್ಞಾನಿಯೋ ಅವನು ಮೋಕ್ಷಕ್ಕೆ ಅರ್ಹರಾನಾಗುವನು.
- नासतो विद्यते भावो
नभावो विद्यते सतः।
उभयोरपि दृष्टोऽन्तः
त्वनयोस्तत्वदर्शिभिः॥२.१६॥
ನಾಸತೋ ವಿದ್ಯತೇ ಭಾವೋ
ನಾಭಾವೋ ವಿದ್ಯತೇ ಸತಃ ।
ಉಭಯೋರಪಿ ದೃಷ್ಟೋಽಂತಃ
ತ್ವನಯೋಸ್ತತ್ತ್ವದರ್ಶಿಭಿಃ ॥ 2-16॥
- The body, being perishable and changing,
Is the unreal one,
Has no permanent existence;
Whereas the eternally existent one cannot lapse
Into perishable non-Being –
This is the truth
Of both Being and non-Being,
Perceived by the Seers and Sages.
೧೬.ಬದಲಾಗತಕ್ಕಂತಹ ಮತ್ತು ನಾಶವಾಗತಕ್ಕಂತಹ ದೇಹವು ನಶ್ವರವು ಹಾಗೂ ಮಿಥ್ಯೆಯು. ಆದರೆ ಸದ್ವಸ್ತು ಅಂದರೆ ಆತ್ಮವು ನಾಶವಾಗುವುದಿಲ್ಲ ಎಂಬುದು ಋಷಿ, ಮುನಿಗಳು ಹಾಗೂ ತತ್ವಜ್ಞರ ನಿರ್ಣಯವಾಗಿದೆ.
- अविनाशि तु तद्विद्धि
येन सर्वमिदं ततम्।
विनाशमव्ययस्यास्य
न कश्चित्कर्तुमर्हति॥२.१७॥
ಅವಿನಾಶಿ ತು ತದ್ವಿದ್ಧಿ
ಯೇನ ಸರ್ವಮಿದಂ ತತಮ್ ।
ವಿನಾಶಮವ್ಯಯಸ್ಯಾಸ್ಯ
ನ ಕಶ್ಚಿತ್ಕರ್ತುಮರ್ಹತಿ ॥ 2-17॥
- Arjuna,
You must know
That by which all this is pervaded
Is Imperishable and Indestructible.
None can cause destruction
Of that which is Immutable.
It is Eternal also.
೧೭.
ಅರ್ಜುನಾ,
ಈ ಸಮಸ್ತ ವಿಶ್ವವನ್ನು ತುಂಬಿಕೊಡಿರುವ ಆತ್ಮನು ನಾಶವಾಗುವವನಲ್ಲ. ಯಾವುದರಿಂದ ಇದೆಲ್ಲವೂ ವ್ಯಾಪ್ತವಾಗಿದೆಯೋ ಅದನ್ನು ವಿನಾಶರಹಿತವೆಂದು ತಿಳಿದುಕೋ. ಈ ಅವಿನಾಶಿಯ ವಿನಾಶವನ್ನು ಮಾಡಲು ಯಾರೂ ಕೂಡ ಸಮರ್ಥರಲ್ಲ. ಇದು ನಿತ್ಯ ಸತ್ಯ.
18.अन्तवन्त इमे देहाः
नित्यस्योक्ताः शरीरिणः।
अनाशिनोऽप्रमेयस्य
तस्म्माद्युध्यस्व भारत!॥२.१८॥
ಅಂತವಂತ ಇಮೇ ದೇಹಾಃ
ನಿತ್ಯಸ್ಯೋಕ್ತಾಃ ಶರೀರಿಣಃ ।
ಅನಾಶಿನೋಽಪ್ರಮೇಯಸ್ಯ
ತಸ್ಮಾದ್ಯುಧ್ಯಸ್ವ ಭಾರತ ॥ 2-18॥
These bodies that perish
Are said to belong to the Self
That is embodied.
While the bodies perish,
The Self remains eternal,
Imperishable and immeasurable.
Therefore, fight, Arjuna,
Of Bharata’s clan.
೧೮.
ನಿತ್ಯನೂ, ಅವಿನಾಶಿಯೂ, ಅಪ್ರಮೇಯನೂ ಆದ ಆತ್ಮನ ಐಹಿಕ ದೇಹವು ನಶ್ವರವಾದುದೆಂದು ಜ್ಞಾನಿಗಳು ಹೇಳುತ್ತಾರೆ. ಆದುದರಿಂದ ಎಲೈ ಭರತವಂಶೀ ಅರ್ಜುನನೇ, ಯುದ್ದವನ್ನು ಮಾಡು.
19.य एनं वेत्ति हन्तारं
यश्चैनं मन्यते हतं।
उभौ तौ न जानीतो
नायं हन्ति न हन्यते॥२.१९॥
ಯ ಏನಂ ವೇತ್ತಿ ಹಂತಾರಂ
ಯಶ್ಚೈನಂ ಮನ್ಯತೇ ಹತಮ್ ।
ಉಭೌ ತೌ ನ ವಿಜಾನೀತೋ
ನಾಯಂ ಹಂತಿ ನ ಹನ್ಯತೇ ॥ 2-19॥
- He who considers the Soul as slayer
And he who regards the Soul as slain –
Both know not the truth.
It is the very nature of the Soul
That it neither kills nor gets killed.
೧೯.
ಯಾರು ಈ ಆತ್ಮನನ್ನು ಕೊಲ್ಲುವನೆಂದು ತಿಳಿಯುತ್ತಾನೋ, ಹಾಗೂ ಯಾರು ಇವನು ಕೊಲ್ಲಲ್ಪಟ್ಟವನೆಂದು ಭಾವಿಸುತ್ತಾನೋ, ಅವರಿಬ್ಬರಿಗೂ ತಿಳುವಳಿಕೆ ಇರುವುದಿಲ್ಲ.
ಏಕೆಂದರೆ ಈ ಆತ್ಮನು ವಾಸ್ತವವಾಗಿ ಯಾರನ್ನೂ ಕೊಲ್ಲುವುದೂ ಇಲ್ಲ ಮತ್ತು ಯಾರಿಂದಲೂ ಕೊಲ್ಲಲ್ಪಡುವುದೂ ಇಲ್ಲ.
- न जायते म्रियते वा कदाचित्
नायं भूत्वा भविता वा न भूयः।
अजो नित्यः शाश्वतोऽयं पुराणो
न हन्यते हन्यमने शरीरे॥२.२०॥
ನ ಜಾಯತೇ ಮ್ರಿಯತೇ ವಾ ಕದಾಚಿತ್
ನಾಯಂ ಭೂತ್ವಾ ಭವಿತಾ ವಾ ನ ಭೂಯಃ ।
ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ ॥ 2-20॥
- The soul never takes birth
Nor does it ever die,
Nor having come into existence
Does it ever cease to be.
It is unborn, eternal,
Everlasting and ancient.
It is not slain when the body is killed.
೨೦.
ಈ ಆತ್ಮ ಎಂದಿಗೂ ಹುಟ್ಟುವುದೂ ಇಲ್ಲ. ಸಾಯುವುದೂ ಇಲ್ಲ. ಅದು ಹಿಂದೆ ಹುಟ್ಟಿದ್ದಿಲ್ಲ: ಈಗ ಹುಟ್ಟಿ ಬರುವುದಿಲ್ಲ: ಮುಂದೆ ಹುಟ್ಟುವುದೂ ಇಲ್ಲ. ಅದು ಜನ್ಮರಹಿತವಾದದ್ದು. ನಿತ್ಯವಾದದ್ದು, ಶಾಶ್ವತವಾದದ್ದು ಮತ್ತು ಪುರಾತನವಾದದ್ದು. ದೇಹವನ್ನು ಕೊಂದಾಗ ಅದು ಸಾಯುವುದಿಲ್ಲ.
- वेदाविनाशिनं नित्यं
य एनमजमव्ययम्।
कथं स पुरुषः पर्थ
कं घातयति हन्ति कम्?॥२.२१॥
ವೇದಾವಿನಾಶಿನಂ ನಿತ್ಯಂ
ಯ ಏನಮಜಮವ್ಯಯಮ್ ।
ಕಥಂ ಸ ಪುರುಷಃ ಪಾರ್ಥ
ಕಂ ಘಾತಯತಿ ಹಂತಿ ಕಮ್ ॥ 2-21॥
- O Arjuna, the son of Pruthu,
How can he,
Who knows the soul to be
The Imperishable, the Eternal,
The Unborn and the Un-decaying,
Cause anyone to be killed?
Whom can the Soul kill?
೨೧.
ಹೇ ಪೃಥೆಯ ಮಗನಾದ ಅರ್ಜುನನೇ, ಈ ಆತ್ಮನು ಅವಿನಾಶಿ, ನಿತ್ಯನು, ಹುಟ್ಟಿಲ್ಲದವನು ಮತ್ತು ಕ್ಷಯವಿಲ್ಲದವನು ಎಂದು ಯಾರು ತಿಳಿದಿರುವನೋ, ಆ ಪುರುಷನು ಯಾರನ್ನೇ ಆಗಲಿ ಹೇಗೆ ಕೊಲ್ಲಿಸುತ್ತಾನೆ? ಯಾರನ್ನು ಹೇಗೆ ಕೊಲ್ಲುತ್ತಾನೆ.
- वासांसि जीर्णानि यथा विहाय
नवानि गृह्णाति नरोऽपराणि।
तथा शरीराणि विहाय जीर्णान्
अन्यानि संयाति नवानि देही॥२.२२॥
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಽಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾನ್
ಅನ್ಯಾನಿ ಸಂಯಾತಿ ನವಾನಿ ದೇಹೀ ॥ 2-22॥
22 Just as a person puts on new clothes
After discarding the worn- out ones,
So does the Self discard worn-out bodies
And take up new ones.
೨೨.
ಹೇಗೆ ಮನುಷ್ಯನು ಹಳೆಯ, ಜೀರ್ಣವಾದ ವಸ್ತ್ರಗಳನ್ನು ತ್ಯಜಿಸಿ ಹೊಸದಾದ ವಸ್ತ್ರಗಳನ್ನು ಧರಿಸುತ್ತಾನೆಯೋ, ಹಾಗೆಯೇ ಜೀವಾತ್ಮನು ಹಳೆಯದಾದ, ಜೀರ್ಣವಾದ ಶರೀರಗಳನ್ನು ತ್ಯಜಿಸಿ ಬೇರೆಯಾದ ಹೊಸ ಶರೀರಗಳನ್ನು ಹೊಂದುತ್ತಾನೆ.
- नैनं छिन्दन्ति शस्त्राणि
नैनं दहति पावकः।
न चैनं क्लेदयन्त्यापो
न शोषयति मारुतः॥२.२३॥
ನೈನಂ ಛಿಂದಂತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ ।
ನ ಚೈನಂ ಕ್ಲೇದಯಂತ್ಯಾಪೋ
ನ ಶೋಷಯತಿ ಮಾರುತಃ ॥ 2-23॥
23
No weapon can kill the Self; Arjuna,
No fire can burn it;
No water can wet it;
And no wind can parch it.
೨೩.
ಅರ್ಜುನಾ, ಈ ಆತ್ಮವನ್ನು ಶಸ್ತ್ರಗಳು ಕತ್ತಿರಸಲಾರವು: ಇದನ್ನು ಬೆಂಕಿಯು ಸುಡಲಾರದು. ಇದನ್ನು ನೀರು ತೋಯಿಸಲಾರದು: ಮತ್ತು ಗಾಳಿಯು ಒಣಗಿಸಲಾರದು.
- अच्छेद्योऽयमदाह्योऽयं
अक्लेद्योऽशोष्य एव च।
नित्यः सर्वगतः स्थाणुः
अचलोऽयं सनातनः॥२.२४॥
ಅಚ್ಛೇದ್ಯೋಽಯಮದಾಹ್ಯೋಽಯಂ
ಅಕ್ಲೇದ್ಯೋಽಶೋಷ್ಯ ಏವ ಚ ।
ನಿತ್ಯಃ ಸರ್ವಗತಃ ಸ್ಥಾಣುಃ
ಅಚಲೋಽಯಂ ಸನಾತನಃ ॥ 2-24॥
24 The Self is indivisible;
It is not flammable;
Nor can it be wetted or dried.
It is eternal, all-pervasive,
Stable, immovable and everlasting.
೨೪. ಈ ಆತ್ಮನು ಕತ್ತರಿಸಲಾಗದವನು, ನೆನೆಯಿಸಲಾಗದವನು ಮತ್ತು ಒಣಗಿಸಲು ಸಹ ಆಗದವನು: ಈತನು ನಿತ್ಯನು, ಸರ್ವವ್ಯಾಪಕನು, ಸ್ಥಿರನು, ಅಚಲನು ಮತ್ತು ಸನಾತನನು.
- अव्यक्तोऽयमचिन्त्योऽयं
अविकार्योऽयमुच्यते।
तस्मादेवं विदित्वैनं
नानुशोचितुमर्हसि॥२.२५॥
ಅವ್ಯಕ್ತೋಽಯಮಚಿಂತ್ಯೋಽಯಂ
ಅವಿಕಾರ್ಯೋಽಯಮುಚ್ಯತೇ ।
ತಸ್ಮಾದೇವಂ ವಿದಿತ್ವೈನಂ
ನಾನುಶೋಚಿತುಮರ್ಹಸಿ ॥ 2-25॥
- Unperceived by the senses,
The Self remains incomprehensible
And unchangeable.
Knowing it to be so,
You ought not to grieve for it.
೨೫.
ಆತ್ಮನು ಅವ್ಯಕ್ತನು: ಅಚಿಂತ್ಯನು: ಎಂದರೆ ಕಣ್ಣಿಗೆ ಕಾಣುವುದಿಲ್ಲ ಮತ್ತು ಗ್ರಹಿಸಲು ಸಾಧ್ಯವಿಲ್ಲ. ಆತ್ಮನು ವಿಕಾರರಹಿತನೆಂದು ಹೇಳಲಾಗಿದೆ. ಆದ್ದರಿಂದ ಈತನನ್ನು ಹೀಗೆ ತಿಳಿದುಗೊಂಡು ನೀನು ಶೋಕಿಸಬಾರದು.
- अथ चैनं नित्यजातं
नित्यं वा मन्यसे मृतम्।
तथापि त्वं महाबाहो
नैवं शोचितुमर्हसि॥२.२६॥
ಅಥ ಚೈನಂ ನಿತ್ಯಜಾತಂ
ನಿತ್ಯಂ ವಾ ಮನ್ಯಸೇ ಮೃತಮ್ ।
ತಥಾಪಿ ತ್ವಂ ಮಹಾಬಾಹೋ
ನೈವಂ ಶೋಚಿತುಮರ್ಹಸಿ ॥ 2-26॥
- O Arjuna with immensely strong arms,
Even if you think
The Soul is born again and again,
Even if you think
The Soul dies again and again,
You ought not to grieve for it.
೨೬.
ಅರ್ಜುನಾ, ಹೇ ಮಹಾಬಾಹುವೇ! ಒಂದು ವೇಳೆ ನೀನು ಈ ಆತ್ಮವನ್ನು ಸದಾ ಹುಟ್ಟುವವನು ಹಾಗೂ ಸದಾ ಸಾಯುವವನು ಎಂದು ಭಾವಿಸಿದರೂ ನೀನು ಹೀಗೆ ಶೋಕಿಸಬಾರದು.
- जातस्य हि ध्रुवो मृत्युः
र्धृवं जन्म मृतस्य च।
तस्मादपरिहार्येऽर्थे
न त्वं शोचितुमर्हसि॥२.२७॥
ಜಾತಸ್ಯ ಹಿ ಧ್ರುವೋ ಮೃತ್ಯುಃ
ಧೃವಂ ಜನ್ಮ ಮೃತಸ್ಯ ಚ ।
ತಸ್ಮಾದಪರಿಹಾರ್ಯೇಽರ್ಥೇ
ನ ತ್ವಂ ಶೋಚಿತುಮರ್ಹಸಿ ॥ 2-27॥
- Arjuna,
Death is inevitable for one that is born,
Birth is certain for one that dies;
It goes on in a sequence.
That is inescapable.
So you ought not to grieve for it.
೨೭.
ಅರ್ಜುನಾ, ಏಕೆಂದರೆ ಹುಟ್ಟಿದವನಿಗೆ ಮರಣವು ತಪ್ಪದು ಮತ್ತು ಸತ್ತವನಿಗೆ ಜನ್ಮವು ನಿಶ್ಚಯವು. ಇದು ಸರಣಿಯಂತೆ ನಡೆಯುತ್ತದೆ. ಆದುದರಿಂದ ಪರಿಹರಿಸಲಾಗದ ಈ ವಿಷಯದಲ್ಲಿ ನೀನು ಶೋಕಿಸಬಾರದು.
- अव्यक्तादीनि भूतानि
व्यक्तमध्यानि भारत!।
अव्यक्तनिधनान्येव
तत्र का परिदेवना?॥२.२८॥
ಅವ್ಯಕ್ತಾದೀನಿ ಭೂತಾನಿ
ವ್ಯಕ್ತಮಧ್ಯಾನಿ ಭಾರತ ।
ಅವ್ಯಕ್ತನಿಧನಾನ್ಯೇವ
ತತ್ರ ಕಾ ಪರಿದೇವನಾ ॥ 2-28॥
- Arjuna,
Unknown and un-manifest
Is the beginning of living beings;
Only their middle state is clear and manifest;
Their end is again unknown and un-manifest.
Therefore, why lament?
೨೮.
ಎಲೈ ಅರ್ಜುನನೇ, ಸೃಷ್ಟಿಯಾದ ಎಲ್ಲ ಜೀವಿಗಳೂ ಹುಟ್ಟುವುದಕ್ಕೆ ಮೊದಲು ಕಾಣಸಿಗುವುದಿಲ್ಲ. ಹುಟ್ಟಿದ ನಂತರ ಮಧ್ಯೆ ಕೆಲಕಾಲ ಕಾಣಿಸುತ್ತವೆ ಮತ್ತು ಮರಣಾನಂತರ ನಾಶವಾದ ಮೇಲೆ ಕಂಡುಬರುವುದಿಲ್ಲ. ಹೀಗಿರುವಾಗ ಶೋಕಕ್ಕೆ ಕಾರಣವೆಲ್ಲಿದೆ?
- आश्चर्यवत्पश्यति कश्चिदेनं
आश्चर्यवद्वदति तथैव चान्यः।
आश्चर्यवच्चैनमन्यः श्रुणोति
श्रुत्वाप्येनं वेद न चैव कश्चित्॥२.२९॥
ಆಶ್ಚರ್ಯವತ್ಪಶ್ಯತಿ ಕಶ್ಚಿದೇನಂ
ಆಶ್ಚರ್ಯವದ್ವದತಿ ತಥೈವ ಚಾನ್ಯಃ ।
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ
ಶ್ರುತ್ವಾಪ್ಯೇನಂ ವೇದ ನ ಚೈವ ಕಶ್ಚಿತ್ ॥ 2-29॥
- O Arjuna,
The Self is such that
One looks at it as a wonder,
Another speaks of it in astonishment,
Yet another hears of it as a marvel;
Even after hearing so,
No one knows it verily.
೨೯.
ಹೇ ಅರ್ಜುನ, ಕೆಲವರು ಆತ್ಮನನ್ನು ಅಶ್ಚರ್ಯದಿಂದ ಕಾಣುತ್ತಾರೆ. ಕೆಲವರು ಅವನು ಆಶ್ಚರ್ಯಕರ ಎನ್ನುವ ಮಾತನ್ನು ಕೇಳುತ್ತಾರೆ. ಮತ್ತೆ ಕೆಲವರು ಅವನನ್ನು ಆಶ್ಚರ್ಯಕರ ಎಂದು ವರ್ಣಿಸುತ್ತಾರೆ. ಇನ್ನು ಕೆಲವರಾದರೋ ಅವನ ವಿಷಯ ಕೇಳಿದರೂ ಒಂದಿಷ್ಟು ಅರ್ಥ ಮಾಡಿಕೊಳ್ಳಲಾರರು.
- देही नित्यमवध्योऽयं
देहे सर्वस्य भारत!।
तस्मात्सर्वाणि भूतानि
न त्वं शोचितुमर्हसि॥२.३०॥
ದೇಹೀ ನಿತ್ಯಮವಧ್ಯೋಽಯಂ
ದೇಹೇ ಸರ್ವಸ್ಯ ಭಾರತ ।
ತಸ್ಮಾತ್ಸರ್ವಾಣಿ ಭೂತಾನಿ
ನ ತ್ವಂ ಶೋಚಿತುಮರ್ಹಸಿ ॥ 2-30॥
- O Arjuna of Bharata’s clan,
The Self that dwells in all the bodies
It is eternal and indestructible.
You ought not, therefore, to grieve
For any living being at all.
೩೦.
ಭರತವಂಶಜನಾದ ಅರ್ಜುನನೇ, ಎಲ್ಲರ ದೇಹದಲ್ಲಿಯೂ ಇರುವ ಈ ಆತ್ಮನು ಶಾಶ್ವತನು, ನಾಶರಹಿತನು ಮತ್ತು ಅವಧ್ಯನು. ಆದುದರಿಂದ ನೀನು ಯಾವ ಜೀವಿಗಾಗಿಯೇ ಆಗಲಿ ವ್ಯಥೆ ಪಡಲು, ದುಃಖಿಸಲು ಕಾರಣವಿಲ್ಲ.
- स्वधर्ममपि चावेक्ष्य
न विकम्पितुमर्हसि।
धर्माद्धि युद्धाच्छ्रेयोऽन्यत्
क्षत्रियस्य न विद्यते॥२.३१॥
ಸ್ವಧರ್ಮಮಪಿ ಚಾವೇಕ್ಷ್ಯ
ನ ವಿಕಂಪಿತುಮರ್ಹಸಿ ।
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋಽನ್ಯತ್
ಕ್ಷತ್ರಿಯಸ್ಯ ನ ವಿದ್ಯತೇ ॥ 2-31॥
- Viewed from the stand point
Of your svadharma,
The Law of your own life,
You ought not to waver.
As a Kshatria, you have no greater good
Than engaging in righteous fight.
೩೧.
ನೀನು ಕ್ಷತ್ರಿಯನಾಗಿ ಸ್ವಧರ್ಮವನ್ನು ಪರಿಗಣಿಸಿದಾಗ, ಧರ್ಮಕ್ಕಾಗಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದ ಕಾರ್ಯವು ಇನ್ನೊಂದಿಲ್ಲ ಎನ್ನುವುದನ್ನು ನೀನು ತಿಳಿದುಕೊಳ್ಳಬೇಕು.ಆದುದರಿಂದ ಹಿಂಜರಿಕೆಗೆ ಅವಕಾಶವೇ ಇಲ್ಲ.
- यदृच्छया चोपपन्नं
स्वर्गद्वारमपावृतम्।
सुखिनः क्षत्रियाः पार्थ
लभन्ते युद्धमीदृशम्॥२.३२॥
ಯದೃಚ್ಛಯಾ ಚೋಪಪನ್ನಂ
ಸ್ವರ್ಗದ್ವಾರಮಪಾವೃತಮ್ ।
ಸುಖಿನಃ ಕ್ಷತ್ರಿಯಾಃ ಪಾರ್ಥ
ಲಭಂತೇ ಯುದ್ಧಮೀದೃಶಮ್ ॥ 2-32॥
- O Arjuna,
Heaven itself, by a happy chance,
Invites you, with doors wide open,
For only fortunate kshatriyas
Get the chance to wage a war like this.
೩೨.
ಎಲೈ ಅರ್ಜುನ, ಅಪ್ರಾರ್ಥಿತವಾಗಿ ಬಂದಿರುವ ಮತ್ತು ವಿಶಾಲವಾಗಿ ತೆರೆದಿರುವ ಸ್ವರ್ಗದ ಬಾಗಿಲಾಗಿರುವ ಇಂತಹ ಯುದ್ಧವನ್ನು ಭಾಗ್ಯಶಾಲಿಗಳಾದ ಕ್ಷತ್ರಿಯರು ಪಡೆಯುತ್ತಾರೆ.
अथ चेत्वमिमं धर्म्यं
सङ्ग्रामं न करिष्यसि।
ततः स्वधर्मं कीर्तिं च
हित्वा पापमवाप्स्यसि॥२.३३॥
ಅಥ ಚೇತ್ತ್ವಮಿಮಂ ಧರ್ಮ್ಯಂ
ಸಂಗ್ರಾಮಂ ನ ಕರಿಷ್ಯಸಿ ।
ತತಃ ಸ್ವಧರ್ಮಂ ಕೀರ್ತಿಂ ಚ
ಹಿತ್ವಾ ಪಾಪಮವಾಪ್ಸ್ಯಸಿ ॥ 2-33॥
- Arjuna,
Refusal to fight this righteous war
Amounts to sacrificing your svadharma
And all the fame you earned so far;
Much worse, you will incur sin.
೩೩.
ಅರ್ಜುನಾ, ಒಂದುವೇಳೆ ನೀನೇನಾದರೂ ಈ ಧರ್ಮಯುಕ್ತವಾದ ಯುದ್ಧವನ್ನು ಮಾಡದಿದ್ದರೆ, ಆ ಕಾರಣದಿಂದ ಸ್ವಧರ್ಮವನ್ನೂ, ಇಲ್ಲಿಯವರೆಗೆ ಗಳಿಸಿದ ಕೀರ್ತಿಯನ್ನೂ ನಾಶ ಮಾಡಿಕೊಂಡು, ಪಾಪವನ್ನು ಹೊಂದುತ್ತೀಯ.
34 अकीर्तिं चापि भूतानि
कथयिष्यन्ति तेऽव्ययम्।
सम्भावितस्य चाकीर्तिः
मरणादतिरिच्यते॥२.३४॥
ಅಕೀರ್ತಿಂ ಚಾಪಿ ಭೂತಾನಿ
ಕಥಯಿಷ್ಯಂತಿ ತೇಽವ್ಯಯಾಮ್ ।
ಸಂಭಾವಿತಸ್ಯ ಚಾಕೀರ್ತಿಃ
ಮರಣಾದತಿರಿಚ್ಯತೇ ॥ 2-34॥
- This will bring you disgrace and infamy
And people will talk endlessly about it.
For an honourable person,
Infamy is worse than death.
೩೪.
ಅಷ್ಟೇ ಅಲ್ಲ. ಜನರು ಎಂದೆಂದೂ ನಿನ್ನ ಅಪಕೀರ್ತಿಯನ್ನು ಕುರಿತು ಆಡಿಕೊಳ್ಲುತಾರೆ. ಸಂಭಾವಿತನಾದ ಮನುಷ್ಯನಿಗೆ ಅಪಕೀರ್ತಿಯು ಮರಣಕ್ಕಿಂತಲೂ ಕೀಳಾದುದು.
भयाद्रणादुपरतं
मंस्यन्ते त्वां महरथाः।
येषां च त्वं बहुमतो
भूत्वा यास्यसि लाघवम्॥२.३५॥
ಭಯಾದ್ರಣಾದುಪರತಂ
ಮಂಸ್ಯಂತೇ ತ್ವಾಂ ಮಹಾರಥಾಃ ।
ಯೇಷಾಂ ಚ ತ್ವಂ ಬಹುಮತೋ
ಭೂತ್ವಾ ಯಾಸ್ಯಸಿ ಲಾಘವಮ್ ॥ 2-35॥
- Those warriors that hold you
In high esteem,
Will brand you a fugitive,
A runaway from the battlefield.
And you will be looked down upon.
೩೫. ಯಾರ ದೃಷ್ಟಿಯಲ್ಲಿ ನೀನು ಮೊದಲು ಬಹಳ ಸಮ್ಮಾನಿತನಾಗಿದ್ದೆಯೋ ಅವರು ನಿನ್ನನ್ನು ತುಚ್ಛವಾಗಿ ಕಾಣುವರು. ಅಷ್ಟೇ ಅಲ್ಲ ಆ ಕ್ಷತ್ರಿಯ ಮಹಾರಥರು ನಿನ್ನನ್ನು ಭಯದ ಕಾರಣದಿಂದಾಗಿ ಯುದ್ಧದಿಂದ ಹಿಮ್ಮೆಟ್ಟಿದವನೆಂದು ತಿಳಿಯುವುವರು.
- अवाच्यवादाम्श्च बहून्
वदिष्यन्ति तवाहिताः।
निन्दन्तस्तव सामर्थ्यं
ततो दुःखतरं नु किं?॥२.३६॥
ಅವಾಚ್ಯವಾದಾಂಶ್ಚ ಬಹೂನ್
ವದಿಷ್ಯಂತಿ ತವಾಹಿತಾಃ ।
ನಿಂದಂತಸ್ತವ ಸಾಮರ್ಥ್ಯಂ
ತತೋ ದುಃಖತರಂ ನು ಕಿಮ್ ॥ 2-36॥
- Unspeakable insults will be hurled at you
By your foes
And you will have to hear them.
Your enemies will make it a point
To downgrade your strengths.
What can be more painful
And humiliating than that?
ನಿನ್ನ ಶತ್ರುಗಳು ನಿನ್ನ ವಿಷಯವಾಗಿ ಅವಾಚ್ಯ ಶಬ್ದಗಳನ್ನಾಡುವರು ಮತ್ತು ಆ ಮಾತುಗಳನ್ನು ನೀನು ಕೇಳಬೇಕಾಗುತ್ತದೆ. ನಿನ್ನ ವೈರಿಗಳು ನಿನ್ನ ಸಾಮರ್ಥ್ಯವನ್ನು ಕೀಳಾಗಿ ಕಂಡು ನಿನ್ನನ್ನು ನಿಂದಿಸುವರು. ಅದಕ್ಕಿಂತಲೂ ಅಪಮಾನ ಮತ್ತು ನೋವಿನ ಸಂಗತಿ ಬೇರೇನಿದೆ.
- हतो वा प्रास्यसॆ स्वर्गं
जित्वा वा भोक्ष्यसे महीम्।
तस्मादुत्तिष्ठ कौन्तेय
युद्धाय कृतनिश्चयः॥२.३७॥
ಹತೋ ವಾ ಪ್ರಾಪ್ಸ್ಯಸೇ ಸ್ವರ್ಗಂ
ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ।
ತಸ್ಮಾದುತ್ತಿಷ್ಠ ಕೌಂತೇಯ
ಯುದ್ಧಾಯ ಕೃತನಿಶ್ಚಯಃ ॥ 2-37॥
- Heaven will you win
If you get slain in the war.
If you win the war,
You will enjoy this world.
Therefore, O Son of Kunti,
Resolve, stand up and fight.
೩೭. ನೀನು ಯುದ್ಧದಲ್ಲಿ ಕೊಲ್ಲಲ್ಪಟ್ಟರೆ ಸ್ವರ್ಗವನ್ನು ಪಡೆಯವೆ. ನೀನು ಯುದ್ಧವನ್ನು ಗೆದ್ದರೆ ಭೂಮಿಯ ಮೇಲೆ ರಾಜ್ಯವನ್ನು ಅನುಭವಿಸುವೆ. ಆದ್ದರಿಂದ ಓ ಕುಂತೀ ಪುತ್ರನೇ, ಯುದ್ದವನ್ನು ಮಾಡಲು ನಿಶ್ಚಯಸಿ ಎದ್ದೇಳು.
- सुखदुःखे समे कृत्वा
लाभालाभौ जयाजयौ।
ततो युद्धाय युज्यस्व
नैवं पापमवाप्स्यसि॥२.३८॥
ಸುಖದುಃಖೇ ಸಮೇ ಕೃತ್ವಾ
ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಜ್ಯಸ್ವ
ನೈವಂ ಪಾಪಮವಾಪ್ಸ್ಯಸಿ ॥ 2-38॥
೩೮. Arjuna,
With equanimity of mind
Learn to view pleasure and sorrow,
Profit and loss,
And victory and defeat.
So prepare to fight,
You will incur no sin.
೩೮. ಅರ್ಜುನಾ ಸ್ಥಿರ ಚಿತ್ತದಿಂದ ಸುಖಃ ದುಃಖಗಳನ್ನೂ, ಲಾಭನಷ್ಟಗಳನ್ನೂ,ಜಯ ಅಪಜಯಗಳನ್ನೂ ಸಮಾನವಾಗಿ ಕಾಣಲು ಕಲಿತುಕೊಂಡು ಯುದ್ದವನ್ನು ಮಾಡಲು ಸನ್ನದ್ಧನಾಗು. ಹೀಗೆ ಮಾಡಿದರೆ ನಿನಗೆ ಪಾಪದ ಲೇಪವಿಲ್ಲ.
- एषा तेऽभिहिता साङ्ख्ये
बुद्धिर्योगे त्विमां शृणु।
बुद्ध्या युक्तो यया पार्थ
कर्मबन्धं प्रहास्यसि॥२.३९॥
ಏಷಾ ತೇಽಭಿಹಿತಾ ಸಾಂಖ್ಯೇ
ಬುದ್ಧಿರ್ಯೋಗೇ ತ್ವಿಮಾಂ ಶೃಣು ।
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ
ಕರ್ಮಬಂಧಂ ಪ್ರಹಾಸ್ಯಸಿ ॥ 2-39॥
೩೯. O Arjuna,
The Knowledge imparted to you so far
Is called Sankhya.
It is Knowledge of the Soul
Acquired through discrimination
And concentrated meditation.
Listen next to the Knowledge of Karma Yoga,
Gaining which you will know
How to perform deeds
And yet be free from
Bondage of works.
ಹೇ ಅರ್ಜುನಾ! ಇಲ್ಲಿಯವರೆಗೆ ನಿನಗೆ ಬೋಧಿಸಿದ ಜ್ಞಾನವನ್ನು ಸಾಂಖ್ಯವೆನ್ನುತ್ತರೆ. ಏಕಾಗ್ರತೆಯಿಂದ ಮಾಡಿದ ಧ್ಯಾನ ಮತ್ತು ತಾರತಮ್ಯದಿಂದ ಹೊಂದಿದ ಆತ್ಮನ ಜ್ಞಾನವಿದು. ಮುಂದೆ ಕರ್ಮಯೋಗದ ಜ್ಞಾನದ ಬಗ್ಗೆ ತಿಳಿಯುವಂತಹನಾಗು. ಈ ಜ್ಞಾನದಿಂದ ಕರ್ಮದಲ್ಲಿ ತೊಡಗಿದರೆ ನೀನು ಕರ್ಮ ಬಂಧದಿಂದ ಮುಕ್ತನಾಗುವೆ.
- नेहाभिक्रमनाशोऽस्ति
प्रत्यवायो न विद्यते।
स्वल्पमप्यस्य धर्मस्य
त्रायते महतो भयात्॥२.४०॥
ನೇಹಾಭಿಕ್ರಮನಾಶೋಽಸ್ತಿ
ಪ್ರತ್ಯವಾಯೋ ನ ವಿದ್ಯತೇ ।
ಸ್ವಲ್ಪಮಪ್ಯಸ್ಯ ಧರ್ಮಸ್ಯ
ತ್ರಾಯತೇ ಮಹತೋ ಭಯಾತ್ ॥ 2-40॥
- Arjuna,
This is the Karma Yoga —
The effort you put in, however small,
Will not go waste;
No sin involved in disruption.
What little effort you make
Saves you from the great danger
Of Samsara, the chain of births and deaths.
೪೦. ಅರ್ಜುನಾ! ಈ ಕರ್ಮ ಯೋಗದಲ್ಲಿ ನೀನು ಪ್ರಾರಂಭಿಸಿದ ಪ್ರಯತ್ನವು ಅದೆಷ್ಟೇ ಸಣ್ಣದಾಗಿದ್ದರೂ ವ್ಯರ್ಥವಾಗುವುದಿಲ್ಲ. ಪ್ರಾರಂಭಿಸಿ ಬಿಟ್ಟುದದಕ್ಕಾಗಿ ಯಾವ ದೋಷವೂ ಉಂಟಾಗುವುದಿಲ್ಲ. ಈ ಕರ್ಮಯೋಗವೆಂಬ ಧರ್ಮದ ಹಾದಿಯಲ್ಲಿ ಸಾಧಿಸುವ ಸ್ವಲ್ಪ ಪ್ರಗತಿಯೂ ಸಹ ಹುಟ್ಟು ಸಾವಿನ ಸರಣಿಯಿಂದ ಉಂಟಾದ ಸಂಸಾರವೆಂಬ ಸಂಕಷ್ಟದಿಂದ ನಿನ್ನನ್ನು ರಕ್ಷಿಸುತ್ತದೆ.
೪೧. व्यवसायात्मिका बुद्धिः
ऎकेह कुरुनन्दन।
बहुशाखा ह्यनन्ताश्च
बुद्धयोऽव्यवसायिनाम्॥२.४१॥
ವ್ಯವಸಾಯಾತ್ಮಿಕಾ ಬುದ್ಧಿಃ
ಏಕೇಹ ಕುರುನಂದನ ।
ಬಹುಶಾಖಾ ಹ್ಯನಂತಾಶ್ಚ
ಬುದ್ಧಯೋಽವ್ಯವಸಾಯಿನಾಮ್ ॥ 2-41॥
- O Arjuna, delighter of the Kuru family,
In respect of those who choose Karma Yoga,
Which opens the path to the Supreme Good,
They pursue with firm and resolute conviction.
But in case of those who engage in activities
To fulfil their desires, they lack conviction.
Their perceptions are varied, diverse and endless.
೪೧. ಓ ಅರ್ಜುನಾ! ಕುರುನಂದನನೇ!
ಒಳಿತಿಗೆ ದಾರಿ ತೋರುವ ಕರ್ಮಯೋಗದಲ್ಲಿ ನಿಶ್ಚಯಸ್ವಭಾವವುಳ್ಳ ಬುದ್ಧಿ ಏಕನಿಷ್ಠವಾಗಿರುತ್ತದೆ. ಅಂದರೆ ಈ ಮಾರ್ಗದಲ್ಲಿ ಇರುವವರು ಧೃಢಸಂಕಲ್ಪ ಹೊಂದಿರುತ್ತಾರೆ ಮತ್ತು ಅವರಿಗೆ ಒಂದೇ ಗುರಿ ಇರುತ್ತದೆ. ಆದರೆ ಅಸ್ಥಿರವಾದ ವಿಚಾರವುಳ್ಳ, ವಿವೇಕಹೀನ, ಸಕಾಮರಾದ, ನಿಶ್ಚಯ ಸ್ವಭಾವವಿಲ್ಲದವರ ಬುದ್ಧಿಗಳು ಅನೇಕ ಶಾಖೆಗಳುಳ್ಳವಾಗಿಯೂ, ಅನಂತವಾಗಿಯೂ ಇರುತ್ತವೆ.
- यामिमां पुष्पितां वाचं
प्रवदन्त्यविपश्चितः।
वेदवादरताः पार्थ
नान्यदस्तीति वादिनः॥२.४२॥
ಯಾಮಿಮಾಂ ಪುಷ್ಪಿತಾಂ ವಾಚಂ
ಪ್ರವದಂತ್ಯವಿಪಶ್ಚಿತಃ ।
ವೇದವಾದರತಾಃ ಪಾರ್ಥ
ನಾನ್ಯದಸ್ತೀತಿ ವಾದಿನಃ ॥ 2-42॥
- The unwise ones swear by the Vedas;
O Arjuna, they proclaim in flowery language
There is nothing other than rites and rituals
Which promise wealth, health and cattle.
ಅವಿವೇಕಿಗಳು ವೇದಗಳಲ್ಲಿನ ಅಲಂಕಾರದ ಮಾತುಗಳಿಗೆ ಮೋಹಗೊಳ್ಳುತ್ತಾರೆ. ಹೇ ಅರ್ಜುನಾ! ಧನ, ಆರೋಗ್ಯ ಮತ್ತು ಪಶು ಸಂಪತ್ತು ದೊರಕುತ್ತದೆಂದು ಭರವಸೆ ನೀಡುವ ಆಚರಣೆ ಮತ್ತು ಕರ್ಮಗಳಿಗೆ ಪ್ರಾಮುಖ್ಯ ನೀಡುವ ಬಣ್ಣದ ಮಾತುಗಳಿಗೆ ಮರುಳಾಗುತ್ತಾರೆ.
कामात्मनः स्वर्गपरा
जन्मकर्मफलप्रदाम्।
क्रियाविशेषबहुळां
भोगैश्वर्यगतिं प्रति॥२.४३॥
ಕಾಮಾತ್ಮಾನಃ ಸ್ವರ್ಗಪರಾ
ಜನ್ಮಕರ್ಮಫಲಪ್ರದಾಮ್ ।
ಕ್ರಿಯಾವಿಶೇಷಬಹುಲಾಂ
ಭೋಗೈಶ್ವರ್ಯಗತಿಂ ಪ್ರತಿ ॥ 2-43॥
- Prompted by desires, aiming at heaven,
They speak of such actions only
Pertaining to specific rites
That yield enjoyment and wealth.
ಅವರು ಕೋರಿಕೆಗಳಲ್ಲಿ ಮುಳುಗಿರುತ್ತಾರೆ. ಸ್ವರ್ಗವನ್ನೇ ಬಯಸುವವರಾಗಿರುತ್ತಾರೆ. ಜನ್ಮಫಲ ಕರ್ಮಗಳನ್ನು ಕೊಡುವ ಭೋಗೈಶ್ವೈರ್ಯ ಲಾಭಗಳಿಗೆ ಉಪಕರಣಗಳಾಗಿರುವ ವಿವಿಧ ಕ್ರಿಯಾ ಕಲಾಪಗಳನ್ನು ಅವರು ಪ್ರಶಂಸೆ ಮಾಡುತ್ತಾರೆ.
भोगैश्वर्यप्रसक्तानां
तयापहृतचेतसाम्।
व्यवसायात्मिका बुद्धिः
समाधौ न विधीयते॥२.४४॥
ಭೋಗೈಶ್ವರ್ಯಪ್ರಸಕ್ತಾನಾಂ
ತಯಾಪಹೃತಚೇತಸಾಮ್ ।
ವ್ಯವಸಾಯಾತ್ಮಿಕಾ ಬುದ್ಧಿಃ
ಸಮಾಧೌ ನ ವಿಧೀಯತೇ ॥ 2-44॥
- Arjuna,
Deluded by the Vedic utterances
That prescribe certain rituals
For the fulfilment of their desires,
They fail to develop resolute mind
And to attain concentrated meditation
To acquire Knowledge of the Soul.
ಅರ್ಜುನಾ! ಬಯಕೆಗಳ ಪೂರೈಕೆಗಾಗಿ ಹೇಳಲ್ಪಟ್ಟಿರುವ ಕೆಲ ಆಚರಣೆಗಳುಳ್ಳ ವೇದವಾಕ್ಯಗಳಿಂದ ಪ್ರೇರಿತರಾಗಿ, ಯಾರು ಭೋಗೈಶ್ವೈರ್ಯಗಳಲ್ಲಿ ಆಸಕ್ತರಾಗಿರುವರೋ ಅವರ ಅಂತಃಕರಣದಲ್ಲಿ ನಿಶ್ಚಯಾತ್ಮಕ ಬುದ್ಧಿಯು ಇರಲಾರದು.
त्रैगुण्यविषया वेदाः
निस्त्रैगुण्यो भवार्जुन।
निर्द्वन्द्वो नित्यसत्वस्थो
निर्योगक्षेम आत्मवान्॥२.४५॥
ತ್ರೈಗುಣ್ಯವಿಷಯಾ ವೇದಾಃ
ನಿಸ್ತ್ರೈಗುಣ್ಯೋ ಭವಾರ್ಜುನ ।
ನಿರ್ದ್ವಂದ್ವೋ ನಿತ್ಯಸತ್ತ್ವಸ್ಥೋ
ನಿರ್ಯೋಗಕ್ಷೇಮ ಆತ್ಮವಾನ್ ॥ 2-45॥
- The Vedas dwell on the theme
Of the Three Gunas, the qualities of Nature:
Sattva, rajas and tamas, i.e.
Virtue, Passion and Grief, respectively.
Without getting engulfed,
You should transcend them.
One who has mastered the self
Goes beyond the dualities,
Beyond the states of attainment and welfare,
And gets firmly established
In the Knowledge of the Self.
ವೇದಗಳು ಸದ್ಗುಣ ಭಾವೋದ್ರೇಕ ಮತ್ತು ಸಂತಾಪವನ್ನು ಸೂಚಿಸುವ ತ್ರಿಗುಣಗಳಾದ ಸತ್ವ, ರಜಸ್ಸು ಮತ್ತು ತಮಸ್ಸುಗಳ ಬಗ್ಗೆ ಹೇಳುತ್ತವೆ. ನೀನು ತ್ರಿಗುಣಾತೀತನೂ, ದ್ವಂದ್ವರಹಿತನೂ ಆಗು. ಶುದ್ಧ ಸತ್ಯವನ್ನು ಆಶ್ರಯಿಸುವವನಾಗಿಯೂ, ಯೋಗಕ್ಷೇಮಗಳ ಚಿಂತೆಯಿಲ್ಲದವನಾಗಿಯೂ, ಬದಲಾಗು. ಆತ್ಮದಲ್ಲಿ ನಿಷ್ಠನಾಗು.
यावानर्थ उपादाने
सर्वतः संप्लुतोदके।
तावान्सर्वेषु वेदेषु
ब्राह्मणस्य विजानतः॥२.४६॥
ಯಾವಾನರ್ಥ ಉದಪಾನೇ
ಸರ್ವತಃ ಸಂಪ್ಲುತೋದಕೇ ।
ತಾವಾನ್ಸರ್ವೇಷು ವೇದೇಷು
ಬ್ರಾಹ್ಮಣಸ್ಯ ವಿಜಾನತಃ ॥ 2-46॥
- When wells and tanks
Overflow with flood waters,
One would still draw for his purpose
Only as much water as is required.
In the same way, the knower of Brahman
Draws only as much from the Vedas
As is required to attain salvation.
ಪ್ರವಾಹದ ನೀರಿನಿಂದ ಎಲ್ಲ ಬಾವಿಗಳೂ ಮತ್ತು ಕೆರೆಗಳೂ ತುಂಬಿ ತುಳುಕುತ್ತಿರುವಾಗ, ಯಾರು ತನ್ನ ಅವಶ್ಯಕತೆಗೆ ತಕ್ಕಷ್ಟು ಮಾತ್ರ ನೀರನ್ನು ಪಡೆದುಕೊಳ್ಳುತ್ತಾನೆಯೋ ಅದೇ ರೀತಿ ಪರಬ್ರಹ್ಮನನ್ನು ತತ್ವಶಃ ತಿಳಿದಿರುವ ಬ್ರಾಹ್ಮಣನು ತನ್ನ ಮುಕ್ತಿಗಾಗಿ ಸಮಸ್ತ ವೇದಗಳಿಂದ ತನಗೆಷ್ಟು ಉಪಯುಕ್ತವೋ ಅಷ್ಟು ಜ್ಞಾನವನ್ನು ಪಡೆಯುತ್ತಾನೆ. ಹೇಗೆಂದರೆ ಬ್ರಹ್ಮಾನಂದ ಪ್ರಾಪ್ತಿಯಾದ ಮೇಲೆ ಆನಂದಕ್ಕಾಗಿ ವೇದಗಳ ಅವಶ್ಯಕತೆ ಇರುವುದಿಲ್ಲ.
- कर्मण्येवाधिकारस्ते
मा फलेषु कदाचन।
मा कर्मफलहेतुर्भूः
मा ते सङ्गोस्त्वकर्मणि॥२.४७॥
ಕರ್ಮಣ್ಯೇವಾಧಿಕಾರಸ್ತೇ
ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂಃ
ಮಾ ತೇ ಸಂಗೋಽಸ್ತ್ವಕರ್ಮಣಿ ॥ 2-47॥
- Do the work you intend to do.
You have the right confined to doing the work alone;
And while doing, never desire for its results.
You have no claim on the result.
May you not be the cause of the result of action.
At the same time, do not be tempted
To withdraw from doing any work.
ನಿನಗೆ ಯೋಜಿಸಿದ ಕರ್ಮವನ್ನು ಮಾಡು. ಕರ್ಮ ಮಾಡುವುದರರಲ್ಲಿಯೇ ನಿನಗೆ ಅಧಿಕಾರ,: ಮತ್ತು ಕರ್ಮ ಮಾಡುವಾಗ ಕರ್ಮ ಫಲಕ್ಕೆ ಆಸೆಪಡಬೇಡ. ಕರ್ಮಫಲಕ್ಕೆ ನಿನಗೆ ಅಧಿಕಾರವಿಲ್ಲ. ಕರ್ಮಫಲಕ್ಕೇ ನೀನು ಕಾರಣ ಎಂದು ಭಾವಿಸಲೇಬೇಡ. ಅದೇ ಸಮಯದಲ್ಲಿ, ಕರ್ಮಗಳನ್ನು ಬಿಟ್ಟುಬಿಡಬೇಕೆಂಬ ಆಗ್ರಹವೂ ನಿನಗೆ ಬೇಡ.(ಅರ್ಥಾತ್ ಫಲಾಪೇಕ್ಷೆ ಇಲ್ಲದೆ ಕರ್ತವ್ಯ ಬುದ್ಧಿಯಿಂದ ಕರ್ಮಗಳನ್ನು ಮಾಡು.)
- योगस्थः कुरु कर्माणि
सङ्गं त्यक्त्वा धनञ्जय।
सिध्यसिध्योः समो भूत्वा
समत्वं योग उच्यते॥२.४८॥
ಯೋಗಸ್ಥಃ ಕುರು ಕರ್ಮಾಣಿ
ಸಂಗಂ ತ್ಯಕ್ತ್ವಾ ಧನಂಜಯ ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ
ಸಮತ್ವಂ ಯೋಗ ಉಚ್ಯತೇ ॥ 2-48॥
- Remaining in a state of yoga,
Do the works, O Arjuna,
Without any attachment to them.
Cultivate evenness of mind towards results:
Like success and failure.
This equanimity is verily yoga.
ಎಲೈ ಅರ್ಜುನಾ! ಯೋಗಸ್ಥಿತಿಯಲ್ಲಿದ್ದು ಯಾವುದೇ ಬಂಧವಿಲ್ಲದೇ ಕರ್ಮವನ್ನು ಮಾಡು; ಗೆಲುವು ಸೋಲುಗಳಲ್ಲಿ ಯಾವುದೇ ಆಸಕ್ತಿಯನ್ನು ಇಟ್ಟುಕೊಳ್ಳದೇ ಸಮಚಿತ್ತದಿಂದ ನಿನ್ನ ಕರ್ತವ್ಯವನ್ನು ಮಾಡು. ಇಂತಹ ಸಮಚಿತ್ತತೆ ಯೋಗವೆನಿಸಿಕೊಳ್ಳುತ್ತದೆ.
दूरेण ह्यवरं कर्म
बुद्धियोगाद्धनञ्जय।
बुद्धौ शरणमन्विच्छ,
कृपणा फलहेतवः॥२.४९॥
ದೂರೇಣ ಹ್ಯವರಂ ಕರ್ಮ
ಬುದ್ಧಿಯೋಗಾದ್ಧನಂಜಯ ।
ಬುದ್ಧೌ ಶರಣಮನ್ವಿಚ್ಛ
ಕೃಪಣಾಃ ಫಲಹೇತವಃ ॥ 2-49॥
- O Dhananjaya,
Work prompted by desire
Is inferior to the work done
With equanimity of mind.
Take refuge in evenness of mind.
Indeed pitiable are those whose work
Is prompted by the desire for results.
ಓ ಧನಂಜಯಾ, ಈ ಸಮತ್ವರೂಪವಾದ ಬುದ್ಧಿಯೋಗಕ್ಕಿಂತ ಸಕಾಮ ಕರ್ಮವು ಅತ್ಯಂತ ನಿಕೃಷ್ಟವಾಗಿದೆ. ಆದುದರಿಂದ ನೀನು ಸಮ ಬುದ್ಧಿಯನ್ನೇ ಆಶ್ರಯಿಸು. ತಮ್ಮ ಕರ್ಮಗಳ ಫಲಕ್ಕಾಗಿ ಆಸೆ ಪಡುವವರು ಕೃಪಣರು.
- बुद्धियुक्तो जहातीह
उभे सुकृतदुष्कृते।
तस्माद्योगाय युज्यस्व
योगः कर्मसु कौशलम्॥२.५०॥
ಬುದ್ಧಿಯುಕ್ತೋ ಜಹಾತೀಹ
ಉಭೇ ಸುಕೃತದುಷ್ಕೃತೇ ।
ತಸ್ಮಾದ್ಯೋಗಾಯ ಯುಜ್ಯಸ್ವ
ಯೋಗಃ ಕರ್ಮಸು ಕೌಶಲಮ್ ॥ 2-50॥
- He who develops evenness of mind
Liberates himself, while in this world,
From the resultant punya and papa.
Develop, therefore, the skill of non-attachment.
For yoga is indeed skilfulness in action.
ಸಮಬುದ್ಧಿಯುಳ್ಳ ಪುರುಷನು ಪುಣ್ಯ ಮತ್ತು ಪಾಪಗಳೆರಡನ್ನೂ ಇದೇ ಲೋಕದಲ್ಲಿ ತ್ಯಜಿಸುತ್ತಾನೆ ಅರ್ಥಾತ್ ಅವುಗಳಿಂದ ಮುಕ್ತನಾಗುತ್ತಾನೆ. ಆದ್ದರಿಂದ ನೀನು ಸಮತ್ವರೂಪೀ ಯೋಗದಲ್ಲಿ ತೊಡಗು. ಈ ಸಮತ್ವರೂಪೀ ಯೋಗವೇ ಕರ್ಮ ಬಂಧನದಿಂದ ಬಿಡುಗಡೆ ಹೊಂದುವ ಉಪಾಯವಾಗಿದೆ.
- कर्मजं बुद्धियुक्ता हि
फलं त्यक्त्वा मनीषिणः।
जन्मबन्धविमुक्ताः
पदं गच्छन्त्यनामयम्॥२.५१॥
ಕರ್ಮಜಂ ಬುದ್ಧಿಯುಕ್ತಾ ಹಿ
ಫಲಂ ತ್ಯಕ್ತ್ವಾ ಮನೀಷಿಣಃ ।
ಜನ್ಮಬಂಧವಿನಿರ್ಮುಕ್ತಾಃ
ಪದಂ ಗಚ್ಛಂತ್ಯನಾಮಯಮ್ ॥ 2-51॥
- Learned persons, with evenness of mind,
Renounce, in reality, the fruits of actions.
Thus they get released from the bondage of birth
And attain a supremely blissful state.
ಸಮತ್ವಬುದ್ಧಿಯಿಂದ ಕೂಡಿದ ಕರ್ಮಯೋಗಪರಾಯಣರು ಕರ್ಮಗಳಿಂದ ಉಂಟಾಗುವ ಫಲವನ್ನು ತ್ಯಜಿಸಿ ಜನ್ಮವೆಂಬ ಬಂಧನದಿಂದ ಬಿಡುಗಡೆಯನ್ನು ಹೊಂದಿ ನಿರ್ವಿಕಾರ ಪರಮಪದವನ್ನು ಹೊಂದುತ್ತಾರೆ.
यदा ते मोहकलिलं
बुद्धिर्व्यतितरिष्यति।
तदा गन्तासि निर्वेदं
श्रोतव्यस्य श्रुतस्य च॥२.५२॥
ಯದಾ ತೇ ಮೋಹಕಲಿಲಂ
ಬುದ್ಧಿರ್ವ್ಯತಿತರಿಷ್ಯತಿ ।
ತದಾ ಗಂತಾಸಿ ನಿರ್ವೇದಂ
ಶ್ರೋತವ್ಯಸ್ಯ ಶ್ರುತಸ್ಯ ಚ ॥ 2-52॥
- When your intellect overcomes delusion
Caused by attachment,
You will gain detachment
From all that you have so far heard,
And also from what remains to be heard,
About actions and their fruits.
ಯಾವಾಗ ನಿನ್ನ ಬುದ್ಧಿಯು ಮೋಹರೂಪೀ ಎಂಬ ಭ್ರಾಂತಿಯ ದಟ್ಟವಾದ ಜಾಲದಿಂದ ಹೊರಬರುವುದೋ, ಆಗ ನೀನು ಕೇಳಿರುವ, ಕೇಳಿಬರುವ ಈ ಲೋಕ ಮತ್ತು ಪರಲೋಕ ಸಂಬಂಧವಾದ ಎಲ್ಲ ಭೋಗಗಳಿಂದ ವೈರಾಗ್ಯವನ್ನು ಪಡೆಯುವೆ.
- श्रुतिविप्रतिपन्ना ते
यदा स्थास्यति निश्चला।
समाधावचला बुद्धिः
तदा योगमवाप्स्यसि॥२.५३॥
ಶ್ರುತಿವಿಪ್ರತಿಪನ್ನಾ ತೇ
ಯದಾ ಸ್ಥಾಸ್ಯತಿ ನಿಶ್ಚಲಾ ।
ಸಮಾಧಾವಚಲಾ ಬುದ್ಧಿಃ
ತದಾ ಯೋಗಮವಾಪ್ಸ್ಯಸಿ ॥ 2-53॥
- Your intellect gets bewildered and distracted
By listening to varied accounts
Of actions and their results.
On the other hand, when the intellect
Gets firmly established in concentration
And meditation,
You will attain a state of yoga.
ವೇದ ವಾದಗಳಿಂದ ಚಂಚಲವಾಗಿರುವ, ಬಗೆ ಬಗೆಯ ವಚನಗಳನ್ನು ಕೇಳುವುದರಿಂದ ವಿಚಲಿತವಾಗಿರುವ, ನಿನ್ನ ಬುದ್ಧಿಯು ಯಾವಾಗ ಪರಮಾತ್ಮನಲ್ಲಿ ಅಚಲ ಮತ್ತು ಸ್ಥಿರವಾಗಿ ನಿಲ್ಲುವುದೋ ಆಗ ನೀನು ಯೋಗವನ್ನು ಪಡೆಯುವೆ, ಅರ್ಥಾತ್ ಪರಮಾತ್ಮನೊಡನೆ ನಿನ್ನ ನಿತ್ಯಸಂಯೋಗವು ಉಂಟಾಗುವುದು.
- अर्जुन उवाच
स्थितप्रज्ञस्य का भाषा
समाधिस्थस्य केशव।
स्थितधीः किं प्रभाषेत
किमासीत व्रजेत किम्॥२.५४॥
ಅರ್ಜುನ ಉವಾಚ ।
ಸ್ಥಿತಪ್ರಜ್ಞಸ್ಯ ಕಾ ಭಾಷಾ
ಸಮಾಧಿಸ್ಥಸ್ಯ ಕೇಶವ ।
ಸ್ಥಿತಧೀಃ ಕಿಂ ಪ್ರಭಾಷೇತ
ಕಿಮಾಸೀತ ವ್ರಜೇತ ಕಿಮ್ ॥ 2-54॥
- Arjuna said:
O Krishna,
Tell me how a sthitapragna,
A person firmly established in wisdom,
Can be described.
How does he speak?
How does he sit and move about?
ಅರ್ಜುನಾ ಹೇಳುತ್ತಾನೆ:
ಹೇ ಕೃಷ್ಣಾ! ಸಮಾಧಿನಿಷ್ಟನಾಗಿ ಪರಮಾತ್ಮನನ್ನು ಪಡೆದಿರುವ ಸ್ಥಿರಬುದ್ಧಿಯುಳ್ಳ ಸ್ಥಿತಪ್ರಜ್ಞನ ಲಕ್ಷಣಗವೇನು? ಅವನು ಹೇಗೆ ಮಾತನಾಡುತ್ತಾನೆ? ಹೇಗೆ ಕುಳಿತಿರುತ್ತಾನೆ ಮತ್ತು ಹೇಗೆ ವ್ಯವಹರಿಸುತ್ತಾನೆ?
श्री भ्गवान् उवाच
प्रजहाति यदा कामान्
सर्वान् पार्थ मनोगतान्।
आत्मन्येवात्मना तुष्टः
स्थितप्रज्ञस्तदोच्यते॥२.५५॥
ಶ್ರೀಭಗವಾನುವಾಚ ।
ಪ್ರಜಹಾತಿ ಯದಾ ಕಾಮಾನ್
ಸರ್ವಾನ್ಪಾರ್ಥ ಮನೋಗತಾನ್ ।
ಆತ್ಮನ್ಯೇವಾತ್ಮನಾ ತುಷ್ಟಃ
ಸ್ಥಿತಪ್ರಜ್ಞಸ್ತದೋಚ್ಯತೇ ॥ 2-55॥
- Bhagavan Sri Krishna said:
O Arjuna,
When one wholly gives up
Desires in the mind,
And remains content with oneself,
Then one is said to be a sthitapragna,
One, that is, fully established in one’s wisdom.
ಭಗವಾನ್ ಶ್ರೀ ಕೃಷ್ನನು ಹೇಳಿದನು: ಎಲೈ ಅರ್ಜುನನೇ! ಯಾವ ಕಾಲದಲ್ಲಿ ಈ ಪುರುಷನು ಮನಸ್ಸಿನಲ್ಲಿರುವ ಎಲ್ಲ ಕಾಮನೆಗಳನ್ನು ಸಂಪೂರ್ಣವಾಗಿ ತ್ಯಜಿಸುತ್ತಾನೋ ಮತ್ತು ಆತ್ಮನಿಂದ, ಆತ್ಮನಲ್ಲಿಯೇ ಸಂತುಷ್ಟನಾಗಿರುತ್ತಾನೋ, ಆ ಕಾಲದಲ್ಲಿ ಅವನು ಸ್ಥಿತಪ್ರಜ್ಞನೆಂದು ಹೇಳಲ್ಪಡುತ್ತಾನೆ.
- दु:खेष्वनुद्विग्नमना:
सुखेषु विगतस्पृह: ।
वीतरागभयक्रोध:
स्थितधीर्मुनिरुच्यते ।।56।।
ದುಃಖೇಷ್ವನುದ್ವಿಗ್ನಮನಾಃ
ಸುಖೇಷು ವಿಗತಸ್ಪೃಹಃ ।
ವೀತರಾಗಭಯಕ್ರೋಧಃ
ಸ್ಥಿತಧೀರ್ಮುನಿರುಚ್ಯತೇ ॥ 2-56॥
- That silent sage
Who is not perturbed in mind by sorrows,
Who has no craving for pleasures,
And from whom have left
All attachment, fear and anger –
That silent sage is said to have attained
Stable wisdom.
He is a sthitapragna.
ದುಃಖ ಬಂದಾಗ ಉದ್ವೇಗವಿಲ್ಲದ ಮನಸ್ಸುಳ್ಳವನೂ, ಸುಖಲೋಲುಪತೆಯಲ್ಲಿ ಇಚ್ಚೆಇಲ್ಲದವನೂ, ಅನುರಾಗ- ಭಯ-ಕ್ರೋಧಗಳಿಲ್ಲದವನೂ ಆದ ಪ್ರಶಾಂತ ಮುನಿಯೇ ಸ್ಥಿರವಾದ ಬುಧಿಯುಳ್ಳ ಸ್ಥಿತಪ್ರಜ್ಞನೆಂದು ಕರೆಯಲ್ಪಡುತ್ತಾನೆ.
- यः सर्वत्रानभिस्नेहः
तत्तत्प्राप्य शुभाशुभम्।
नाभिनन्दति न द्वेष्टि
तस्य प्रज्ञा प्रतिष्ठिता॥२.५७॥
ಯಃ ಸರ್ವತ್ರಾನಭಿಸ್ನೇಹಃ
ತತ್ತತ್ಪ್ರಾಪ್ಯ ಶುಭಾಶುಭಮ್ ।
ನಾಭಿನಂದತಿ ನ ದ್ವೇಷ್ಟಿ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ 2-57॥
- His wisdom is steady and firm
Who is devoid of both attachment and aversion.
When good and evil occur to him
He neither invites the good nor rejects the bad.
He is a sthitapragna.
ಯಾರು ಸರ್ವವಸ್ತುಗಳಲ್ಲಿಯೂ ಆಸಕ್ತಿರಹಿತನಾಗಿ, ಅಂದರೆ ಪ್ರಿಯ ಮತ್ತು ಅಪ್ರಿಯ ಸಂಗತಿಗಳು ಘಟಿಸಿದಾಗ, ಸಂತೋಷಿಸುವುದಿಲ್ಲವೋ ಮತ್ತು ದ್ವೇಷಿಸುವುದಿಲ್ಲವೋ, ಯಾರು ಒಳಿತನ್ನು ಬಯಸುವುದಿಲ್ಲವೋ ಮತ್ತು ಕೆಟ್ಟದ್ದನ್ನು ತಿರಸ್ಕರಿಸುವುದಿಲ್ಲವೋ ಆತನೇ ಸ್ಥಿತಪ್ರಜ್ಞ.
- यदा संहरते चायं
कूर्मोऽङ्गानीव सर्वशः।
इन्द्रियाणीन्द्रियार्थेभ्यः
तस्य प्रज्ञा प्रतिष्ठिता॥२.५८॥
ಯದಾ ಸಂಹರತೇ ಚಾಯಂ
ಕೂರ್ಮೋಽಂಗಾನೀವ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ 2-58॥
- All the senses have a tendency
To go after their objects.
Instead, if a person wholly withdraws
His senses from their objects,
As a tortoise does withdraw
Its limbs from all sides,
He is said to have his mind
Well-settled in wisdom.
He is a sthitapragna.
ಮನುಷ್ಯನ ಇಂದ್ರಿಯಗಳು ವಿಷಯಾಸಕ್ತವಾಗಿರುವ ಧೋರಣೆಯನ್ನು ಹೊಂದಿರುತ್ತವೆ. ಹಾಗಲ್ಲದೆ, ಆಮೆಯು ತನ್ನ ಅಂಗಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುವಂತೆ ಯಾರು ತನ್ನ ಇಂದ್ರಿಯಗಳನ್ನು, ವಿಷಯಾಸಕ್ತಿಯಿಂದ ನಿಗ್ರಹಿಸಬಲ್ಲನೋ ಅವನ ಬುದ್ಧಿ ಪ್ರಜ್ಞೆಯಲ್ಲಿ ಸ್ಥಿರವಾಗಿರುತ್ತದೆ. ಆತನೇ ಸ್ಥಿತಪ್ರಜ್ಞ.
- विषया विनिवर्तन्ते
निराहारस्य देहिनः।
रसवर्जं, रसोऽप्यस्य
परं दृष्ट्वा निवर्तते॥२.५९॥
ವಿಷಯಾ ವಿನಿವರ್ತಂತೇ
ನಿರಾಹಾರಸ್ಯ ದೇಹಿನಃ ।
ರಸವರ್ಜಂ ರಸೋಽಪ್ಯಸ್ಯ
ಪರಂ ದೃಷ್ಟ್ವಾ ನಿವರ್ತತೇ ॥ 2-59॥
- A person may practise self-restraint
By keeping the senses withdrawn from their objects,
Even then, the senses retain
Their inherent taste or passion.
It is only in the sthitapragna,
One whose mind is well established in wisdom,
That the senses are rid of their innate taste.
ಇಂದ್ರಿಯಗಳನ್ನು ವಿಷಯಾಸಕ್ತಿಯ ಕಡೆಗೆ ವಾಲದಂತೆ ಮನೋನಿಗ್ರಹದಿಂದ, ಸತತ ಅಭ್ಯಾಸದಿಂದ ಮನುಷ್ಯ ಸಾಧಿಸಬಹುದು. ಆದರೂ ಸಹ ಇಂದ್ರಿಯಗಳು ತೃಷೆಯನ್ನು ಉಳಿಸಿಕೊಂಡಿರುತ್ತವೆ. ಅವುಗಳಲ್ಲಿರುವ ಆಸಕ್ತಿಯು ನಿವೃತ್ತವಾಗುವುದಿಲ್ಲ. ಪರಬ್ರಹ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡ ಮೇಲೆ, ಇಂದ್ರಿಯಗಳ ವಿಷಯಾಸಕ್ತಿ ಇಲ್ಲವಾಗಿ, ಆತನ ಪ್ರಜ್ಞೆಯು, ಸ್ಥಿರವಾಗುತ್ತದೆ. ಆತನೇ ಸ್ಥಿತಪ್ರಜ್ಞ.
- यततो ह्यपि कौन्तेय
पुरुषस्य विपश्चितः।
इन्द्रियाणि प्रमाथीनि
हरन्ति प्रसभं मनः॥२.६०॥
ಯತತೋ ಹ್ಯಪಿ ಕೌಂತೇಯ
ಪುರುಷಸ್ಯ ವಿಪಶ್ಚಿತಃ ।
ಇಂದ್ರಿಯಾಣಿ ಪ್ರಮಾಥೀನಿ
ಹರಂತಿ ಪ್ರಸಭಂ ಮನಃ ॥ 2-60॥
- O Arjuna, Remember
The senses are strong, stubborn and impetuous.
They draw away the mind of a learned man even,
Despite his determined effort.
ಹೇ ಅರ್ಜುನನೇ! ಇಂದ್ರಿಯಗಳು, ಮೊಂಡು, ಹಠಮಾರಿ, ಅವು ಬಲಶಾಲಿ ಮತ್ತು ವಿವೇಚನಾಶೂನ್ಯವಾಗಿ ವರ್ತಿಸುತ್ತವೆಂಬುದನ್ನು ಮರೆಯಬೇಡ. ಅವುಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ, ವಿವೇಚನಾವಂತನ ಪ್ರಯತ್ನವನ್ನೂ ಮೀರಿ ಮನಸ್ಸನ್ನು ಸೆಳೆದುಕೊಂಡು ಹೋಗಿಬಿಡುತ್ತವೆ.
- तानि सर्वाणि सम्यम्य
युक्त आसीत मत्परः।
वशे हि यस्येन्द्रियाणि
तस्य प्रज्ञा प्रतिष्ठिता॥२.६१॥
ತಾನಿ ಸರ್ವಾಣಿ ಸಂಯಮ್ಯ
ಯುಕ್ತ ಆಸೀತ ಮತ್ಪರಃ ।
ವಶೇ ಹಿ ಯಸ್ಯೇಂದ್ರಿಯಾಣಿ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ 2-61॥
- Bringing all the senses under control,
One should remain concentrated on Me,
Considering Me to be the Supreme.
Then his wisdom gets well established.
ಯಾರು ತನ್ನ ಇಂದ್ರಿಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿ ಅಂಕೆಯಲ್ಲಿಡುತ್ತಾನೆಯೋ, ಮತ್ತು ತನ್ನ ಪ್ರಜ್ಞೆಯನ್ನು ನನ್ನಲ್ಲಿ ಕೇಂದ್ರೀಕರಿಸುತ್ತಾನೆಯೋ ಅವನನ್ನು ಸ್ಥಿರ ಬುದ್ಧಿಯವನು ಎಂದು ಕರೆಯುತ್ತಾರೆ.
ध्यायतो विषयान्पुंसः
सङ्गस्तेषूपजायते।
सङ्गात्सञ्जायते कामः
कामात्क्रोधोऽभिजायते॥२.६२॥
ಧ್ಯಾಯತೋ ವಿಷಯಾನ್ಪುಂಸಃ
ಸಂಗಸ್ತೇಷೂಪಜಾಯತೇ ।
ಸಂಗಾತ್ಸಂಜಾಯತೇ ಕಾಮಃ
ಕಾಮಾತ್ಕ್ರೋಧೋಽಭಿಜಾಯತೇ ॥ 2-62॥
- Attachment to the objects of senses grows
When the mind goes on dwelling on them.
Then desire emanates from attachment
And then anger when desire is not fulfilled.
ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಪುರುಷನಿಗೆ ವಿಷಯಗಳಲ್ಲಿ ಆಸಕ್ತಿಯುಂಟಾಗುತ್ತದೆ. ಆಸಕ್ತಿಯಿಂದಾಗಿ ವಿಷಯಗಳ ಕಾಮನೆ ಉಂಟಾಗುತ್ತದೆ ಮತ್ತು ಕಾಮನೆಯು ಪೂರ್ತಿಯಾಗದಿದ್ದಾಗ ಕ್ರೋಧವು ಉಂಟಾಗುತ್ತದೆ.
- क्रोधाद्भवति सम्मोहः
सम्मोहात्स्मृतिविभ्रमः।
स्मृतिभ्रंशाद्बुद्धिनाशो
बुद्धिनाशात्प्रणस्यति॥२.६३॥
ಕ್ರೋಧಾದ್ಭವತಿ ಸಮ್ಮೋಹಃ
ಸಮ್ಮೋಹಾತ್ಸ್ಮೃತಿವಿಭ್ರಮಃ ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ
ಬುದ್ಧಿನಾಶಾತ್ಪ್ರಣಶ್ಯತಿ ॥ 2-63॥
- Delusion results from anger;
From delusion emanates failure of memory;
Forgetfulness results in failure of intellect;
And failure of intellect leads to total downfall.
ಕ್ರೋಧದಿಂದ ಸಂಮೋಹವು ಉಂಟಾಗುತ್ತದೆ. ಸಂಮೋಹದ ಅವಿವೇಕ ಮೂಢಭಾವದಿಂದ ಸ್ಮೃತಿಯಲ್ಲಿ ಭ್ರಮೆಯುಂಟಾಗುತ್ತದೆ. ಸ್ಮೃತಿಭ್ರಮೆಯಿಂದ ಬುದ್ಧಿ ನಾಶವಾಗುತ್ತದೆ. ಬುದ್ಧಿ ನಾಶವಾದರೆ ಮನುಷ್ಯನು ಮತ್ತೆ ಐಹಿಕ ಪ್ರಪಂಚದಲ್ಲಿ ಮುಳುಗಿ ಸರ್ವ ನಾಶವಾಗುತ್ತಾನೆ.
- रागद्वेषवियुक्तैस्तु
विषयानिन्द्रियैश्चरन्।
आत्मवश्यैर्विधेयात्मा
प्रसादमधिगच्छति॥२.६४॥
ರಾಗದ್ವೇಷವಿಮುಕ್ತೈಸ್ತು
ವಿಷಯಾನಿಂದ್ರಿಯೈಶ್ಚರನ್ ।
ಆತ್ಮವಶ್ಯೈರ್ವಿಧೇಯಾತ್ಮಾ
ಪ್ರಸಾದಮಧಿಗಚ್ಛತಿ ॥ 2-64॥
- With neither attachment nor aversion,
If one keeps the senses under control,
And while enjoying the objects of senses,
If he maintains control over the mind,
He surely attains serenity and composure.
ಆದರೆ ರಾಗದ್ವೇಷಗಳಿಂದ ಬಿಡುಗಡೆಯನ್ನು ಹೊಂದಿ, ತನ್ನ ವಶದಲ್ಲಿರುವ ಇಂದ್ರಿಯಗಳಿಂದ ವಿಷಯಗಳನ್ನು ಅನುಭವಿಸುವ ಸಂಯಮಚಿತ್ತವುಳ್ಳ ಮನುಷ್ಯನು ಖಂಡಿತವಾಗಿಯೂ ಅಂತಃಕರಣದ ಪ್ರಸನ್ನತೆಯನ್ನು ಪಡೆಯುತ್ತಾನೆ.
65.प्रसादे सर्वदुःखानां
हानिरस्योपजायते।
प्रसन्नचेतसो ह्याशु
बुद्धिः पर्यवतिष्ठते॥२.६५॥
ಪ್ರಸಾದೇ ಸರ್ವದುಃಖಾನಾಂ
ಹಾನಿರಸ್ಯೋಪಜಾಯತೇ ।
ಪ್ರಸನ್ನಚೇತಸೋ ಹ್ಯಾಶು
ಬುದ್ಧಿಃ ಪರ್ಯವತಿಷ್ಠತೇ ॥ 2-65॥
- All kinds of suffering become extinct
When the mind is in a state of serenity.
With purity attained, the mind rests in Me
In a state of complete submission.
ಚಿತ್ತದ ಪ್ರಸನ್ನತೆಯುಂಟಾದರೆ ಅವನ ಸಮಸ್ತ ದುಃಖಗಳೂ ನಾಶವಾಗುತ್ತವೆ. ಚಿತ್ತಶುದ್ಧಿಯಿಂದ, ಆತನ ಮನಸ್ಸು ಸಂಪೂರ್ಣ ಶರಣಾಗತಿಯ ಸ್ಥಿತಿಯಲ್ಲಿ ನನ್ನಲ್ಲಿಯೇ ವಿರಮಿಸುತ್ತದೆ.
- नास्ति बुद्धिरयुक्तस्य
न चायुक्तस्य भावना।
न चाभावयतः शान्तिः
अशान्तस्य कुतः सुखम्॥२.६६॥
ನಾಸ್ತಿ ಬುದ್ಧಿರಯುಕ್ತಸ್ಯ
ನ ಚಾಯುಕ್ತಸ್ಯ ಭಾವನಾ ।
ನ ಚಾಭಾವಯತಃ ಶಾಂತಿಃ
ಅಶಾಂತಸ್ಯ ಕುತಃ ಸುಖಮ್ ॥ 2-66॥
- But wisdom is not for one
Who has not integrated his mind with Me.
Such a person will have no desire
For self-knowledge.
Without such desire
No peace is possible.
Without peace, how can one
Achieve enduring happiness?
ನನ್ನಲ್ಲಿ ಸಂಪೂರ್ಣವಾಗಿ ತನ್ನ ಮನವನ್ನು ಕೇಂದ್ರೀಕರಿಸದವನಿಗೆ ವಿವೇಕ ಉಂಟಾಗುವುದಿಲ್ಲ. ಅಂತಹವನಿಗೆ ಅಂತಃಕರಣದಲ್ಲಿ ಭಾವನೆಯೂ ಇರುವುದಿಲ್ಲ. ಹಾಗೆ ಭಾವನಾಹೀನನಾದವನಿಗೆ ಶಾಂತಿ ಸಿಗುವುದಿಲ್ಲ ಮತ್ತು ಶಾಂತಿರಹಿತನಾದ ಮನುಷ್ಯನಿಗೆ ಸುಖವು ಹೇಗೆ ಸಿಗಬಲ್ಲದು.
इन्द्रियाणां हि चरतां
यन्मनोऽनुविधीयते।
तदस्य हरति प्रज्ञां
वायुर्नावमिवाम्भसि॥२.६७॥
ಇಂದ್ರಿಯಾಣಾಂ ಹಿ ಚರತಾಂ
ಯನ್ಮನೋಽನುವಿಧೀಯತೇ ।
ತದಸ್ಯ ಹರತಿ ಪ್ರಜ್ಞಾಂ
ವಾಯುರ್ನಾವಮಿವಾಂಭಸಿ ॥ 2-67॥
- Being slave to the senses and their objects,
The mind, when it runs after
A particular sense,
Is drawn astray from the pursuit of wisdom,
Like a boat swept off its course
By the strong winds.
ಚಂಡಮಾರುತವು ನೀರಿನಲ್ಲಿರುವ ದೋಣಿಯನ್ನು ಹೊಡೆದುಕೊಂಡು ಹೋಗುತ್ತದೆ. ಅದೇ ರೀತಿಯಲ್ಲಿ ಅಲೆದಾಡುವ ಇಂದ್ರಿಯಗಳಲ್ಲಿ ಒಂದರಲ್ಲಿ ಮನಸ್ಸನ್ನು ನೆಟ್ಟರೂ, ಅದು ಮನುಷ್ಯನ ಬುದ್ಧಿಶಕ್ತಿಯನ್ನು ಅಪಹರಿಸಬಲ್ಲದು. ಏಕೆಂದರೆ ಮನಸ್ಸು ಇಂದ್ರಿಯಗಳಿಗೆ ವಶವಾಗಿರುತ್ತದೆ.
- तस्माद्यस्य महाबाहो!
निगृहीतानि सर्वशः।
इन्द्रियाणीन्द्रियार्थेभ्यः
तस्य प्रज्ञा प्रतिष्ठिता॥२.६८॥
ತಸ್ಮಾದ್ಯಸ್ಯ ಮಹಾಬಾಹೋ
ನಿಗೃಹೀತಾನಿ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥ 2-68॥
- Therefore, Arjuna, the Bold One,It is when his senses are completely withdrawn
From their objects, from all sides,
That one gets his wisdom well established.
ಹೇ ಅರ್ಜುನಾ! ಮಹಾಬಾಹುವೇ! ಆದುದರಿಂದ ಯಾರು ತನ್ನ ಇಂದ್ರಿಯಗಳನ್ನು ಸರ್ವಪ್ರಕಾರಗಳಿಂದಲೂ, ಇಂದ್ರಿಯಗಳ ವಿಷಯಾಸಕ್ತಿಯಿಂದ ಸೆಳೆದು ನಿಗ್ರಹಿಸುತ್ತಾನೆಯೋ, ಅವನ ಪ್ರಜ್ಞೆಯು ಸ್ಥಿರವಾಗಿರುವುದು.
69.या निशा सर्वभूतानां
तस्यां जागर्ति सम्यमी।
यस्यां जाग्रति भूतानि
सा निशा पस्यतो मुनेः॥२.६९॥
ಯಾ ನಿಶಾ ಸರ್ವಭೂತಾನಾಂ
ತಸ್ಯಾಂ ಜಾಗರ್ತಿ ಸಂಯಮೀ ।
ಯಸ್ಯಾಂ ಜಾಗ್ರತಿ ಭೂತಾನಿ
ಸಾ ನಿಶಾ ಪಶ್ಯತೋ ಮುನೇಃ ॥ 2-69॥
- At what is night for all the beings,
The self-restrained one keeps awake;
When all beings are wide awake,
It is night for the silent sage.
ಎಲ್ಲಾ ಪ್ರಾಣಿಗಳಿಗೆ ರಾತ್ರಿಯಾದಾಗ ಜಿತೇಂದ್ರಿಯನಿಗೆ ಎಚ್ಚರವಾಗಿರುವ ಕಾಲ. ಎಲ್ಲಾ ಪ್ರಾಣಿಗಳೂ ಎಚ್ಚತ್ತಿರುವ ಕಾಲದಲ್ಲಿ ಆಂತರ್ಯ ಪರೀಕ್ಷೆಯನ್ನು ಮಾಡಿಕೊಳ್ಳುವ ಮುನಿಗೆ ರಾತ್ರಿಯಾಗುತ್ತದೆ. ಅಂದರೆ ಭೋಗಿಯ ರಾತ್ರಿ, ಯೋಗಿಗೆ ಹಗಲು ಮತ್ತು ಯೋಗಿಯ ರಾತ್ರಿ ಭೋಗಿಗೆ ಹಗಲು.
- आपूर्यमाणमचलप्रतिष्ठं
समुद्रमापः प्रविशन्ति यद्वत्।
तद्वत्कामा यं प्रविशन्ति सर्वे
स शान्तिमाप्नोति न कामकामी॥२.७०॥
ಆಪೂರ್ಯಮಾಣಮಚಲಪ್ರತಿಷ್ಠಂ
ಸಮುದ್ರಮಾಪಃ ಪ್ರವಿಶಂತಿ ಯದ್ವತ್ ।
ತದ್ವತ್ಕಾಮಾ ಯಂ ಪ್ರವಿಶಂತಿ ಸರ್ವೇ
ಸ ಶಾಂತಿಮಾಪ್ನೋತಿ ನ ಕಾಮಕಾಮೀ ॥ 2-70॥
Though waters come rushing into the ocean,
It remains full and stable,
So all desires with their objects
Merge into the mind
And keep him in a tranquil state.
He is a sthitapragna.
No longer craves the objects of desire.
ಸದಾ ನದಿಗಳ ಪ್ರವಾಹವು ಪ್ರವೇಶಿಸಿ, ನೀರು ತುಂಬುತ್ತಿದ್ದರೂ, ಶಾಂತವಾಗಿರುವ ಸಾಗರದಂತೆ, ನಿರಂತರವಾಗಿ ಹರಿದು ಬರುವ ಕಾಮನೆಗಳಿಂದ ಮನಸ್ಸು ಕಲಕದಂತಿರುವ ಮನುಷ್ಯನು ಮಾತ್ರವೇ ಶಾಂತಿಯನ್ನು ಸಾಧಿಸಬಲ್ಲ. ಆತನೇ ಸ್ಥಿತಪ್ರಜ್ಞ. ಇಂತಹ ಕಾಮನೆಗಳನ್ನು ತೃಪ್ತಿಗೊಳಿಸಲು ಶ್ರಮಿಸುವವನಿಗೆ ಶಾಂತಿ ದೊರೆಯಲಾರದು.
71 विहाय कामान्यःसर्वान्
पुमाञ्श्चरति निस्पृहः।
निर्ममो निरहङ्कारः
स शान्तिमधिगच्छति॥२.७१॥
ವಿಹಾಯ ಕಾಮಾನ್ಯಃ ಸರ್ವಾನ್
ಪುಮಾಂಶ್ಚರತಿ ನಿಃಸ್ಪೃಹಃ ।
ನಿರ್ಮಮೋ ನಿರಹಂಕಾರಃ
ಸ ಶಾಂತಿಮಧಿಗಚ್ಛತಿ ॥ 2-71॥
- Renouncing all desires,
One who goes about seeking nothing,
Shedding the sense of ego,
The “I” and “mine”,
Such a person wins peace and tranquillity.
ಯಾವ ಮನುಷ್ಯನು ಇಂದ್ರಿಯ ತೃಪ್ತಿಯ ಎಲ್ಲಾ ಬಯಕೆಯನ್ನು ತ್ಯಜಿಸಿದ್ದಾನೆಯೋ, ಬಯಕೆಗಳಿಂದ ಮುಕ್ತನಾಗಿ ಬದುಕುತ್ತಾನೆಯೋ, ನಾನು, ನನ್ನದು ಎಂಬ ಅಹಂಕಾರವನ್ನು ಬಿಟ್ಟಿರುವನೋ, ಅವನು ಮಾತ್ರ ನಿಜವಾದ ಶಾಂತಿಯನ್ನು ಪಡೆಯಬಲ್ಲ.
- एषा ब्राह्मी स्थितिः पार्थ
नैनां प्राप्य विमुह्यति।
स्थित्वास्यामन्तकालेऽपि
ब्रह्मनिर्वाणमृच्छति॥२.७२॥
ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ
ನೈನಾಂ ಪ್ರಾಪ್ಯ ವಿಮುಹ್ಯತಿ ।
ಸ್ಥಿತ್ವಾಸ್ಯಾಮಂತಕಾಲೇಽಪಿ
ಬ್ರಹ್ಮನಿರ್ವಾಣಮೃಚ್ಛತಿ ॥ 2-72॥
- O Arjuna,
This is the state of Brahman.
Reaching this, one gets free
From all delusion.
Staying steady in this state,
At the last stage in his life,
As death approaches,
One attains the state of immense happiness.
ಹೇ ಅರ್ಜುನಾ! ಇದು ಬ್ರಹ್ಮನನ್ನು ಪಡೆದುಕೊಂಡ ಮನುಷ್ಯನ ಬ್ರಾಹ್ಮೀಸ್ಥಿತಿ. ಇದನ್ನು ಸಾಧಿಸಿದ ಅನಂತರ ಅವನು ಮೋಹಕ್ಕೆ ಅತೀತನಾಗುತ್ತಾನೆ. ಸಾವು ಸಂಭವಿಸುವ ಮನುಷ್ಯನ ಅಂತ್ಯಕಾಲದಲ್ಲಿ, ಈ ಬ್ರಾಹ್ಮೀಸ್ಥಿತಿಯಲ್ಲಿರುವ ಮಾನವನು ಬ್ರಹ್ಮನಿರ್ವಾಣರೂಪವಾದ ಮೋಕ್ಷವನ್ನು ಪಡೆಯುತ್ತಾನೆ.
ऒम् तत्सदिति
ಓಂ ತತ್ಸದಿತಿ
श्रीमद्भगवद्गितासू
ಶ್ರೀಮದ್ಭಗವದ್ಗೀತಾಸೂ
उपनिषत्सु
ಉಪನಿಷತ್ಸು
ब्रह्म विद्यायां
ಬ್ರಹ್ಮವಿದ್ಯಾಯಾಂ
यॊगशास्त्रॆ
ಯೋಗಶಾಸ್ತ್ರೇ
श्रीकृष्णार्जुनसंवादॆ
ಶ್ರೀಕೃಷ್ಣಾರ್ಜುನಸಂವಾದೇ
साङ्ख्ययोगो नाम
ಸಾಂಖ್ಯಯೋಗೋ ನಾಮ
द्वितीयोऽध्यायः
ದ್ವಿತೀಯೋಽಧ್ಯಾಯಃ ॥ 2॥
ऒं ततसत्
ಓಂ ತತ್ಸತು
ಓಂ ತತ್ಸತ್ ಇತಿ
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಸಾಂಖ್ಯಯೋಗವೆಂಬ ಎರಡನೆಯ ಅಧ್ಯಾಯವು ಸಮಾಪ್ತವು.
To watch videos of Srimad Bhagavad Gita published by Lanka Krishna Murty Foundation press the following link
https://www.youtube.com/playlist…
To watch the videos of Vishnusahasranama published by Lanka Krishna Murti Foundation please press the following link
Vishnusahasranama A Sloka A Day: https://www.youtube.com/playlist…
To watch the videos of A Subhasita A Day published by Lanka Krishna Murti Foundation please press the following link
https://www.youtube.com/playlist…
To watch the website of Lanka Krishna Murti Foundation please press the following link
https://krishnamurtifoundation.com/lanka/
L.Subramanya