Chapter Fourteen: Gunatraya Vibhaga Yoga
Published by LANKA KRISHNA MURTI FOUNDATION
(https://www.facebook.com/lankakrishnamurtifoundation/)
Website (https://krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
श्रीभगवानुवाच
परं भूयः प्रवक्ष्यामि
ज्ञानानां ज्ञानमुत्तमम्।
यज्ज्ञात्वा मुनयः सर्वे
परां सिद्धिमितो गताः॥१४.१॥
ಶ್ರೀಭಗವಾನುವಾಚ ।
ಪರಂ ಭೂಯಃ ಪ್ರವಕ್ಷ್ಯಾಮಿ
ಜ್ಞಾನಾನಾಂ ಜ್ಞಾನಮುತ್ತಮಮ್ ।
ಯಜ್ಜ್ಞಾತ್ವಾ ಮುನಯಃ ಸರ್ವೇ
ಪರಾಂ ಸಿದ್ಧಿಮಿತೋ ಗತಾಃ ॥ 14-1॥
परं भूयः प्रवक्ष्यामि ज्ञानानां ज्ञानमुत्तमम्।
यज्ज्ञात्वा मुनयः सर्वे परां सिद्धिमितो गताः॥१४.१॥
ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ ।
ಯಜ್ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ॥ 14-1॥
- Sri Bhagawan said:
Arjuna,
I shall explain again in detail
That Ganana or Knowledge,
Which is the best and highest,
By knowing which the great Munis,
The silent Sages,
Were liberated from bondage
And they achieved a state of Perfection.
ಶ್ರೀ ಭಗವಂತನು ಹೇಳಿದನು:
ಅರ್ಜುನಾ! ಯಾವುದನ್ನು ಅರಿತುಕೊಂಡು ಶ್ರೇಷ್ಠ ಮುನಿಗಳು, ಪ್ರಾಜ್ಞ ಋಷಿಗಳು ಐಹಿಕ ಬಂಧನದಿಂದ ಮುಕ್ತಿ ಹೊಂದಿ ಪರಮ ಸಿದ್ಧಿಯನ್ನು ಹೊಂದಿದರೋ, ಅಂತಹ ಜ್ಞಾನಗಳಲ್ಲಿ ಉತ್ತಮವೂ ಹಾಗೂ ಉನ್ನತವೂ ಆದ ಜ್ಞಾನವನ್ನು ವಿಷದವಾಗಿ ಪುನಃ ನಿನಗೆ ಹೇಳುತ್ತೇನೆ ಕೇಳು.
इदं ज्ञानमुपाश्रित्य
मम साधर्म्यमागताः।
सर्गेऽपि नोपजायन्ते
प्रळये न व्यथन्ति च॥१४.२॥
ಇದಂ ಜ್ಞಾನಮುಪಾಶ್ರಿತ್ಯ
ಮಮ ಸಾಧರ್ಮ್ಯಮಾಗತಾಃ ।
ಸರ್ಗೇಽಪಿ ನೋಪಜಾಯಂತೇ
ಪ್ರಲಯೇ ನ ವ್ಯಥಂತಿ ಚ ॥ 14-2॥
इदं ज्ञानमुपाश्रित्य मम साधर्म्यमागताः।
सर्गेऽपि नोपजायन्ते प्रळये न व्यथन्ति च॥१४.२॥
ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ ।
ಸರ್ಗೇಽಪಿ ನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ ॥ 14-2॥
- Taking recourse to that Gnana or Knowledge
Those Munis have achieved My own State;
Having attained My State,
They are neither born
At the time of Creation
Nor do they get distressed
At the time of Pralaya.
They are totally liberated.
ಈ ಜ್ಞಾನವನ್ನು ಆಶ್ರಯಿಸಿ ಅರ್ಥಾತ್ ಧಾರಣೆ ಮಾಡಿ ನನ್ನ ಸ್ವರೂಪವನ್ನು ಪ್ರಾಪ್ತಿಮಾಡಿಕೊಂಡ ಮುನಿಗಳು
ಸೃಷ್ಟಿಯ ಆದಿಯಲ್ಲಿ ಪುನಃ ಹುಟ್ಟುವುದಿಲ್ಲ, ಮತ್ತು ಪ್ರಳಯಕಾಲದಲ್ಲಿ ವ್ಯಥೆ ಪಡುವುದಿಲ್ಲ. ಅವರು ಸಂಪೂರ್ಣವಾಗಿ
ಮುಕ್ತರು.
मम योनिर्महद्ब्रह्म
तस्मिन्गर्भं दधाम्यहम्।
सम्भवः सर्वभूतानां
ततो भवति भारत॥१४.३॥
ಮಮ ಯೋನಿರ್ಮಹದ್ ಬ್ರಹ್ಮ
ತಸ್ಮಿನ್ಗರ್ಭಂ ದಧಾಮ್ಯಹಮ್ ।
ಸಂಭವಃ ಸರ್ವಭೂತಾನಾಂ
ತತೋ ಭವತಿ ಭಾರತ ॥ 14-3॥
मम योनिर्महद्ब्रह्म तस्मिन्गर्भं दधाम्यहम्।
सम्भवः सर्वभूतानां ततो भवति भारत॥१४.३॥
ಮಮ ಯೋನಿರ್ಮಹದ್ ಬ್ರಹ್ಮ ತಸ್ಮಿನ್ಗರ್ಭಂ ದಧಾಮ್ಯಹಮ್ ।
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ ॥ 14-3॥
- Arjuna,
Prakruti or Material Nature
With its three constituents
Of Sattva, Rajas and Tamas
Happens to be My Womb
Wherein I place the seed
That causes the birth of all beings.
ಎಲೈ ಅರ್ಜುನ, ಸತ್ವ, ರಜಸ್ ಮತ್ತು ತಮೋಗುಣಗಳೆಂಬ ಮೂರು ಘಟಕಗಳನ್ನು ಒಳಗೊಂಡ ಮಹತ್
ಪ್ರಕೃತಿಯು ಸಮಸ್ತ ಪ್ರಾಣಿಗಳ ಯೋನಿಯಾಗಿದೆ ಅರ್ಥಾತ್ ಗರ್ಭಾಧಾನದ ಸ್ಥಾನವಾಗಿದೆ. ಅದರಲ್ಲಿ ನಾನು ಗರ್ಭ
ಬೀಜವನ್ನು ಇಡುತ್ತೇನೆ. ಅದರಿಂದ ಸಮಸ್ತ ಜೀವಿಗಳ ಉತ್ಪತ್ತಿ ಆಗುತ್ತದೆ.
सर्वयोनिषु कौन्तेय
मूर्तयः सम्भवन्ति याः।
तासां ब्रह्म महद्योनि:
अहं बीजप्रदःपिता॥१४.४॥
ಸರ್ವಯೋನಿಷು ಕೌಂತೇಯ
ಮೂರ್ತಯಃ ಸಂಭವಂತಿ ಯಾಃ ।
ತಾಸಾಂ ಬ್ರಹ್ಮ ಮಹದ್ಯೋನಿಃ
ಅಹಂ ಬೀಜಪ್ರದಃ ಪಿತಾ ॥ 14-4॥
सर्वयोनिषु कौन्तेय मूर्तयः सम्भवन्ति याः।
तासां ब्रह्म महद्योनि: अहं बीजप्रदःपिता॥१४.४॥
ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ ।
ತಾಸಾಂ ಬ್ರಹ್ಮ ಮಹದ್ಯೋನಿಃ ಅಹಂ ಬೀಜಪ್ರದಃ ಪಿತಾ ॥ 14-4॥
- All the beings that take birth
From wombs of different kinds,
Like those of gods, pitrus, humans and animals,
Remember Arjuna,
They have Prakruti as their Mother
And I am their Father,
As I provide the seed.
ದೇವತೆಗಳು, ಪಿತೃಗಳು, ಮನುಷ್ಯರು ಮತ್ತು ಪ್ರಾಣಿಗಳು, ಹೀಗೆ ಎಲ್ಲ ಜೀವಿಗಳು ವಿವಿಧ ರೀತಿಯ ಗರ್ಭಗಳಿಂದ
ಜನ್ಮ ಪಡೆಯುವ ರೂಪಗಳಿಗೆಲ್ಲಾ ಪ್ರಕೃತಿಯೇ ತಾಯಿ. ನಾನೇ ಬೀಜವನ್ನು ಸ್ಥಾಪಿಸುವ ತಂದೆ.
सत्वं रजस्तम इति
गुणाः प्रकृतिसम्भवाः।
निबध्नन्ति महाबाहो
देहे देहिनमव्ययम्॥१४.५॥
ಸತ್ತ್ವಂ ರಜಸ್ತಮ ಇತಿ
ಗುಣಾಃ ಪ್ರಕೃತಿಸಂಭವಾಃ ।
ನಿಬಧ್ನಂತಿ ಮಹಾಬಾಹೋ
ದೇಹೇ ದೇಹಿನಮವ್ಯಯಮ್ ॥ 14-5॥
सत्वं रजस्तम इति गुणाः प्रकृतिसम्भवाः।
निबध्नन्ति महाबाहो देहे देहिनमव्ययम्॥१४.५॥
ಸತ್ತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ ।
ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್ ॥ 14-5॥
- Sattva, Rajas and Tamas
Are the three Gunas or Constituents
Born of Prakruti.
O Arjuna,
These Gunas bind the unchanging Spirit
To the body.
ಸತ್ವಗುಣ, ರಜೋಗುಣ ಮತ್ತು ತಮೋಗುಣಗಳೆಂಬ ಮೂರು ಗುಣಗಳು ಪ್ರಕೃತಿಯಿಂದ ಉತ್ಪನ್ನವಾಗಿವೆ. ಹೇ
ಅರ್ಜುನಾ, ಈ ಗುಣಗಳು ನಿರ್ವಿಕಾರವಾದ ಜೀವಾತ್ಮನನ್ನು ದೇಹದಲ್ಲಿ ಬಂಧಿಸುತ್ತವೆ.
तत्र सत्वं निर्मलत्वात्
प्रकाशकमनामयम्।
सुखसङ्गेन बध्नाति
ज्ञानसङ्गेनचानघ॥१४.६॥
ತತ್ರ ಸತ್ತ್ವಂ ನಿರ್ಮಲತ್ವಾತ್
ಪ್ರಕಾಶಕಮನಾಮಯಮ್ ।
ಸುಖಸಂಗೇನ ಬಧ್ನಾತಿ
ಜ್ಞಾನಸಂಗೇನ ಚಾನಘ ॥ 14-6॥
तत्र सत्वं निर्मलत्वात् प्रकाशकमनामयम्।
सुखसङ्गेन बध्नाति ज्ञानसङ्गेनचानघ॥१४.६॥
ತತ್ರ ಸತ್ತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್ ।
ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ ॥ 14-6॥
- Of the three Gunas,
Sattva is pure, stainless and
Illuminating, with healing power.
Arjuna, Sattva binds the Spirit
By causing a clinging to pleasure
And also to knowledge.
ಈ ಮೂರು ಗುಣಗಳ ಪೈಕಿ ಸತ್ವಗುಣವು ನಿರ್ಮಲವಾದುದು. ಪ್ರಕಾಶವಾದುದು ಹಾಗೂ ಪವಿತ್ರವಾದುದು.
ಗುಣಮಾಡುವ ಶಕ್ತಿಯುಳ್ಳದ್ದು. ಅಂದರೆ ಮನುಷ್ಯನನ್ನು ಎಲ್ಲ ಪಾಪಕರ ಪ್ರತಿಕ್ರಿಯೆಗಳಿಂದ ಬಿಡುಗಡೆ ಮಾಡುತ್ತದೆ.
ಅರ್ಜುನಾ, ಈ ಗುಣ ಹೊಂದಿದ ಆತ್ಮನನ್ನು ಸುಖ ಮತ್ತು ಜ್ಞಾನಗಳ ಪ್ರಜ್ಞೆಯು ಬಂಧಿಸುತ್ತದೆ.
रजो रागात्मकं विद्धि
तृष्णासङ्गसमुद्भवम्।
तन्निबध्नाति कौन्तेय
कर्मसङ्गेन देहिनम्॥१४.७॥
ರಜೋ ರಾಗಾತ್ಮಕಂ ವಿದ್ಧಿ
ತೃಷ್ಣಾಸಂಗಸಮುದ್ಭವಮ್ ।
ತನ್ನಿಬಧ್ನಾತಿ ಕೌಂತೇಯ
ಕರ್ಮಸಂಗೇನ ದೇಹಿನಮ್ ॥ 14-7॥
रजो रागात्मकं विद्धि तृष्णासङ्गसमुद्भवम्।
तन्निबध्नाति कौन्तेय कर्मसङ्गेन देहिनम्॥१४.७॥
ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಮ್ ।
ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್ ॥ 14-7॥
- Arjuna, know that
Rajas is essentially attachment
Caused by craving or intense desire
And passion or intense fondness to possess something.
It binds the Spirit by causing
Attachment to action. ಹೇ ಅರ್ಜುನಾ! ರಜೋಗುಣವು ಅನುರಾಗ ರೂಪವಾದುದು. ಅದು ಮಿತಿಯಿಲ್ಲದ ಆಸೆಗಳು ಮತ್ತು ಬಯಕೆಗಳಿಂದ ತುಂಬಿದೆ. ಏನಾದರೊಂದನ್ನು ವಶಪಡಿಸಿಕೊಳ್ಳಬೇಕೆಂಬ ಅತೀವ ಮೋಹ ಮತ್ತು ಮಮಕಾರವನ್ನು ಉಂಟು ಮಾಡಿ ಕರ್ಮ ಫಲಾಸಕ್ತಿಯಿಂದ ಜೀವನನ್ನು ಕಟ್ಟಿಹಾಕುತ್ತದೆ.
तमस्त्वज्ञानजं विद्धि
मोहनं सर्वदेहिनाम्।
प्रमादालस्यनिद्राभि:
तन्निबध्नाति भारत॥१४.८ ll
ತಮಸ್ತ್ವಜ್ಞಾನಜಂ ವಿದ್ಧಿ
ಮೋಹನಂ ಸರ್ವದೇಹಿನಾಮ್ ।
ಪ್ರಮಾದಾಲಸ್ಯನಿದ್ರಾಭಿಃ
ತನ್ನಿಬಧ್ನಾತಿ ಭಾರತ ॥ 14-8॥
तमस्त्वज्ञानजं विद्धि मोहनं सर्वदेहिनाम्।
प्रमादालस्यनिद्राभि: तन्निबध्नाति भारत॥१४.८ ll
ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಮ್ ।
ಪ್ರಮಾದಾಲಸ್ಯನಿದ್ರಾಭಿಃ ತನ್ನಿಬಧ್ನಾತಿ ಭಾರತ ॥ 14-8॥
- Arjuna, Tamas is born of Agnana or ignorance.
It causes Moha or delusion
In all the embodied beings.
It binds the Spirit with forgetfulness,
Laziness and sleepiness.
ಅರ್ಜುನಾ! ತಮೋಗುಣವು ಅಜ್ಞಾನದಿಂದ ಹುಟ್ಟಿದೆ. ಅದು ದೇಹಧಾರಿಗಳಾದ ಸಮಸ್ತ ಪ್ರಾಣಿಗಳಲ್ಲಿ ಮೋಹವನ್ನುಂಟುಮಾಡುತ್ತದೆ. ಅದು ಪ್ರಮಾದ, ಮರೆಗುಳಿತನ, ಸೋಮಾರಿತನ ಹಾಗೂ ನಿದ್ರೆ ಇವುಗಳಿಂದ ಆತ್ಮನನ್ನು ಬಂಧಿಸುತ್ತದೆ.
सत्वं सुखे सञ्जयति
रजः कर्मणि भारत।
ज्ञानमावृत्य तु तमः
प्रमादे सञ्जयत्युत॥१४.९॥
ಸತ್ತ್ವಂ ಸುಖೇ ಸಂಜಯತಿ
ರಜಃ ಕರ್ಮಣಿ ಭಾರತ ।
ಜ್ಞಾನಮಾವೃತ್ಯ ತು ತಮಃ
ಪ್ರಮಾದೇ ಸಂಜಯತ್ಯುತ ॥ 14-9॥
सत्वं सुखे सञ्जयति रजः कर्मणि भारत।
ज्ञानमावृत्य तु तमः प्रमादे सञ्जयत्युत॥१४.९॥
ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ ।
ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ ॥ 14-9॥
- Sattva produces a clinging,
Firmly holding on, to pleasure;
Rajas produces a strong urge towards action; and
Tamas, by enveloping or covering Knowledge,
Shows a tendency towards committing errors.
ಸತ್ವಗುಣವು ಜೀವನನ್ನು ಸುಖಾಸಕ್ತಿಯಿಂದ ಕಟ್ಟಿಹಾಕುತ್ತದೆ. ರಜೋಗುಣವು ಕಾಮ್ಯ ಕರ್ಮಗಳನ್ನು ಮಾಡಲು ಬದ್ಧಗೊಳಿಸುತ್ತದೆ. ತಮೋಗುಣವು ಮನುಷ್ಯನ ಜ್ಞಾನವನ್ನು ಆವರಿಸಿಕೊಂಡು ಪ್ರಮಾದದಲ್ಲಿ ಸಂಗವನ್ನುಂಟು ಮಾಡುತ್ತದೆ.
रजस्तमश्चाभिभूय
सत्वं भवति भारत।
रजः सत्वं तमश्चैव
तमः सत्वं रजस्तथा॥१४.१०॥
ರಜಸ್ತಮಶ್ಚಾಭಿಭೂಯ
ಸತ್ತ್ವಂ ಭವತಿ ಭಾರತ ।
ರಜಃ ಸತ್ತ್ವಂ ತಮಶ್ಚೈವ ಜುನಾ!
ತಮಃ ಸತ್ತ್ವಂ ರಜಸ್ತಥಾ ॥ 14-10॥
रजस्तमश्चाभिभूय सत्वं भवति भारत।
रजः सत्वं तमश्चैव तमः सत्वं रजस्तथा॥१४.१०॥
ರಜಸ್ತಮಶ್ಚಾಭಿಭೂಯ ಸತ್ತ್ವಂ ಭವತಿ ಭಾರತ ।
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ ॥ 14-10॥
- Arjuna, Sattva becomes dominant
when it suppresses Rajas and Tamas;
in the same way, Rajas gains control
when it suppresses Tamas and Sattva
and Tamas predominates
when Sattva and Rajas are subjugated.
ಎಲೈ ಅರ್ಜುನಾ! ರಜೋಗುಣವನ್ನೂ, ತಮೋಗುಣವನ್ನು ಹತ್ತಿಟ್ಟರೆ ಸತ್ವಗುಣವು ಪ್ರಬಲವಾಗುತ್ತದೆ. ಹಾಗೆಯೇ
ಕೆಲವೊಮ್ಮೆ ಸತ್ವಗುಣವನ್ನೂ, ತಮೋಗುಣವನ್ನೂ ಹತ್ತಿಕ್ಕಿದಾಗ ರಜೋಗುಣವು ಪ್ರಬಲವಾಗುತ್ತದೆ. ಇನ್ನೂ ಕೆಲವು
ಬಾರಿ ತಮೋಗುಣವು, ಸತ್ವ ಮತ್ತು ರಜೋಗುಣಗಳನ್ನು ಕಳೆಗುಂದಿಸಿ ತಾನು ಮೇಲುಗೈ ಪಡೆದು ಎದ್ದು ಕಾಣುತ್ತದೆ.
सर्वद्वारेषु देहेऽस्मिन्
प्रकाश उपजायते।
ज्ञानं यदा तदा विद्यात्
विवृद्धं सत्वमित्युत॥१४.११॥
ಸರ್ವದ್ವಾರೇಷು ದೇಹೇಽಸ್ಮಿನ್
ಪ್ರಕಾಶ ಉಪಜಾಯತೇ ।
ಜ್ಞಾನಂ ಯದಾ ತದಾ ವಿದ್ಯಾತ್
ವಿವೃದ್ಧಂ ಸತ್ವಮಿತ್ಯುತ॥ 14-11॥
सर्वद्वारेषु देहेऽस्मिन् प्रकाश उपजायते।
ज्ञानं यदा तदा विद्यात् विवृद्धं सत्वमित्युत॥१४.११॥
ಸರ್ವದ್ವಾರೇಷು ದೇಹೇಽಸ್ಮಿನ್ ಪ್ರಕಾಶ ಉಪಜಾಯತೇ ।
ಜ್ಞಾನಂ ಯದಾ ತದಾ ವಿದ್ಯಾತ್ ವಿವೃದ್ಧಂ ಸತ್ವಮಿತ್ಯುತ॥ 14-11॥
- When the light of knowledge
brightens the openings of the sense organs,
like eyes, ears, etc.
it is to be known that
Sattva Guna is dominant.
ಯಾವಾಗ ಈ ದೇಹದ ಸಮಸ್ತ ಇಂದ್ರಿಯದ್ವಾರಗಳಾದ ಕಣ್ಣು, ಕಿವಿ, ಇತ್ಯಾದಿಗಳಲ್ಲಿ ಜ್ಞಾನವೆಂಬ ಪ್ರಕಾಶವು
ಉಂಟಾಗುವುದೋ ಆಗ ಸತ್ವ ಗುಣವು ವೃದ್ಧಿಯಾಗಿದೆ ಎಂದು ತಿಳಿಯಬೇಕು. लोभः प्रवृत्तिरारम्भः
कर्मणामशमः स्पृहा।
रजस्येतानि जायन्ते
विवृद्धे भरतर्षभ॥१४.१२॥
ಲೋಭಃ ಪ್ರವೃತ್ತಿರಾರಂಭಃ
ಕರ್ಮಣಾಮಶಮಃ ಸ್ಪೃಹಾ ।
ರಜಸ್ಯೇತಾನಿ ಜಾಯಂತೇ
ವಿವೃದ್ಧೇ ಭರತರ್ಷಭ ॥ 14-12॥
लोभः प्रवृत्तिरारम्भः कर्मणामशमः स्पृहा।
रजस्येतानि जायन्ते विवृद्धे भरतर्षभ॥१४.१२॥
ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ ।
ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ ॥ 14-12॥ - Arjuna,
You will observe the following qualities
When Rajas takes dominant position:
Greed, activity, taking to some action,
Unrest and desire.
ಎಲೈ ಅರ್ಜುನನೇ! ರಜೋಗುಣವು ಹೆಚ್ಚಿದಾಗ ಈ ಕೆಳಕಂಡ ಗುಣಲಕ್ಷಣಗಳನ್ನು ನೀನು ಗಮನಿಸುತ್ತೀಯೆ.
ಅತ್ಯಾಸೆ, ಲೋಭ, ಪ್ರವೃತ್ತಿಶೀಲತೆ, ಸ್ವಾರ್ಥಬುದ್ಧಿಯ ಮೂಲಕ ಸಕಾಮ ಭಾವದಿಂದ
ಕರ್ಮಗಳನ್ನು ಮಾಡುವುದು, ಅಶಾಂತಿ ಮತ್ತು ವಿಷಯಭೋಗಗಳ ಲಾಲಸೆ- ಇವೇ ಆ ಗುಣಲಕ್ಷಣಗಳು.
अप्रकाशोऽप्रवृत्तिश्च
प्रमादो मोह एव च।
तमस्येतानि जायन्ते
विवृद्धे कुरुनन्दन॥१४.१३॥
ಅಪ್ರಕಾಶೋಽಪ್ರವೃತ್ತಿಶ್ಚ
ಪ್ರಮಾದೋ ಮೋಹ ಏವ ಚ ।
ತಮಸ್ಯೇತಾನಿ ಜಾಯಂತೇ
ವಿವೃದ್ಧೇ ಕುರುನಂದನ ॥ 14-13॥
अप्रकाशोऽप्रवृत्तिश्च प्रमादो मोह एव च।
तमस्येतानि जायन्ते विवृद्धे कुरुनन्दन॥१४.१३॥
ಅಪ್ರಕಾಶೋಽಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ ।
ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ ॥ 14-13॥
- Arjuna,
When Tamas predominates,
The following signs become evident:
Gloom, inaction, indifference and delusion.
ಅರ್ಜುನಾ! ತಮೋಗುಣವು ವೃದ್ಧಿಯನ್ನು ಹೊಂದಿದಾಗ, ಈ ಕೆಳಕಂಡ ಲಕ್ಷಣಗಳು
ವ್ಯಕ್ತವಾಗುತ್ತವೆ- ವಿಷಣ್ಣತೆ, ಮ್ಲಾನತೆ, ಜಡತ್ವ, ಉದಾಸೀನತೆ, ಭ್ರಾಂತಿ ಮತ್ತು ಮೂಢತ್ವ,
ಇವೇ ಆ ಲಕ್ಷಣಗಳು. ಇವು ಎದ್ದು ಕಾಣುತ್ತವೆ. यदा सत्वे प्रवृद्धे तु
प्रलयं याति देहभृत्।
तदोत्तमविदां लोकान्
अमलान्प्रतिपद्यते॥१४.१४॥
ಯದಾ ಸತ್ತ್ವೇ ಪ್ರವೃದ್ಧೇ ತು
ಪ್ರಲಯಂ ಯಾತಿ ದೇಹಭೃತ್ ।
ತದೋತ್ತಮವಿದಾಂ ಲೋಕಾನ್
ಅಮಲಾನ್ಪ್ರತಿಪದ್ಯತೇ ॥ 14-14॥
यदा सत्वे प्रवृद्धे तु प्रलयं याति देहभृत्।
तदोत्तमविदां लोकान् अमलान्प्रतिपद्यते॥१४.१४॥
ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಲಯಂ ಯಾತಿ ದೇಹಭೃತ್ ।
ತದೋತ್ತಮವಿದಾಂ ಲೋಕಾನ್ ಅಮಲಾನ್ಪ್ರತಿಪದ್ಯತೇ ॥ 14-14॥ - If death occurs
When Sattva is in a dominant state,
The embodied being reaches
such pure and unstained worlds
that belong to the best knowledgeable people.
ಸತ್ವಗುಣವು ವೃದ್ಧಿಯನ್ನು ಹೊಂದಿರುವಾಗ, ದೇಹಧಾರಿಯು ಸಾವನ್ನಪ್ಪಿದರೆ, ಆಗ ಅವನು
ಉತ್ತಮ ಜ್ಞಾನಿಗಳಿಗೆ ಯೋಗ್ಯವಾದ, ಪರಿಶುದ್ಧವಾದ ಮತ್ತು ನಿರ್ಮಲವಾದ ಪುಣ್ಯಲೋಕವನ್ನು
ತಲುಪುತ್ತಾನೆ.
रजसि प्रलयं गत्वा
कर्मसङ्गिषु जायते।
तथा प्रलीनस्तमसि
मूढयोनिषु जायते॥१४.१५॥
ರಜಸಿ ಪ್ರಲಯಂ ಗತ್ವಾ
ಕರ್ಮಸಂಗಿಷು ಜಾಯತೇ ।
ತಥಾ ಪ್ರಲೀನಸ್ತಮಸಿ
ಮೂಢಯೋನಿಷು ಜಾಯತೇ ॥ 14-15॥
रजसि प्रलयं गत्वा कर्मसङ्गिषु जायते।
तथा प्रलीनस्तमसि मूढयोनिषु जायते॥१४.१५॥
ರಜಸಿ ಪ್ರಲಯಂ ಗತ್ವಾ ಕರ್ಮಸಂಗಿಷು ಜಾಯತೇ ।
ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ ॥ 14-15॥
- if death should happen
when Rajo Guna is domimnant,
the embodied being takes birth
among those who are addicted to works or action;
in the event of death
when Tamas is predominating,
the embodied being will be born
in the wombs of unintelligent beings
like dogs and pigs.
ರಜೋಗುಣವು ಪ್ರಬಲವಾಗಿರುವಾಗ ಮರಣ ಸಂಭವಿಸದರೆ ಮನುಷ್ಯನು
ಕರ್ಮಾಸಕ್ತಿಯುಳ್ಳವವರ ವಂಶದಲ್ಲಿ ಹುಟ್ಟುತ್ತಾನೆ. ತಮೋಗುಣವು ಪ್ರಬಲವಾಗಿರುವಾಗ
ಜೀವಿಯು ಸತ್ತರೆ, ಆ ಜೀವಿಯು ನಾಯಿ, ಹಂದಿ, ಪಶುಪಕ್ಷಿ ಸ್ಥಾವರಾದಿ ಮೂಢ
ಪ್ರಾಣಿವರ್ಗದ ಯೋನಿಗಳಲ್ಲಿ ಜನಿಸುತ್ತಾನೆ.
कर्मणः सुकृतस्याहुः
सात्विकं निर्मलं फलम्।
रजसस्तु फलं दुःखं
अज्ञानं तमसः फलम्॥१४.१६॥
ಕರ್ಮಣಃ ಸುಕೃತಸ್ಯಾಹುಃ
ಸಾತ್ತ್ವಿಕಂ ನಿರ್ಮಲಂ ಫಲಮ್ ।
ರಜಸಸ್ತು ಫಲಂ ದುಃಖಂ
ಅಜ್ಞಾನಂ ತಮಸಃ ಫಲಮ್ ॥ 14-16॥
कर्मणः सुकृतस्याहुः सात्विकं निर्मलं फलम्।
रजसस्तु फलं दुःखं अज्ञानं तमसः फलम्॥१४.१६॥
ಕರ್ಮಣಃ ಸುಕೃತಸ್ಯಾಹುಃ ಸಾತ್ತ್ವಿಕಂ ನಿರ್ಮಲಂ ಫಲಮ್ ।
ರಜಸಸ್ತು ಫಲಂ ದುಃಖಂ ಅಜ್ಞಾನಂ ತಮಸಃ ಫಲಮ್ ॥ 14-16॥
- They say that
the fruit of meritorious actions
is pure, stainless and Sattvic in nature,
whereas pain is the fruit of Rajasic actions
and ignorance that of Tamasic actions.
ಸಾತ್ವಿಕವಾದ ಒಳ್ಳೆಯ ಕೆಲಸಗಳಿಗೆ ನಿರ್ಮಲವಾದ, ಪರಿಶುದ್ಧವಾದ ಫಲ ದೊರಕುತ್ತದೆಂದು
ತಿಳಿದವರು ಹೇಳುವರು. ಆದರೆ ರಜೋಗುಣದಲ್ಲಿ ಮಾಡಿದ ಕೆಲಸದ ಫಲವು ನೋವನ್ನೂ,
ದುಃಖವನ್ನೂ ಉಂಟುಮಾಡುತ್ತದೆ.ಹಾಗೆಯೇ ತಮೋಗುಣದಲ್ಲಿ ಮಾಡಿದ ಕೆಲಸದ ಫಲವು
ಅಜ್ಞಾನವಾಗಿರುತ್ತದೆ.
सत्वात्सञ्जायते ज्ञानं
रजसो लोभ एव च।
प्रमादमोहौ तमसो
भवतोऽज्ञानमेव च॥१४.१७॥
ಸತ್ತ್ವಾತ್ಸಂಜಾಯತೇ ಜ್ಞಾನಂ
ರಜಸೋ ಲೋಭ ಏವ ಚ ।
ಪ್ರಮಾದಮೋಹೌ ತಮಸೋ
ಭವತೋಽಜ್ಞಾನಮೇವ ಚ ॥ 14-17॥
सत्वात्सञ्जायते ज्ञानं रजसो लोभ एव च।
प्रमादमोहौ तमसो भवतोऽज्ञानमेव च॥१४.१७॥
ಸತ್ತ್ವಾತ್ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ ।
ಪ್ರಮಾದಮೋಹೌ ತಮಸೋ ಭವತೋಽಜ್ಞಾನಮೇವ ಚ ॥ 14-17॥
- Knowledge is the benefit that Sattva brings;
Rajas results in greed; and
Tamas produces error, delusion and ignorance.
ಸತ್ವಗುಣದಿಂದ ಜ್ಞಾನವು ಉಂಟಾಗುತ್ತದೆ. ರಜೋಗುಣದಿಂದ ಲೋಭ ಉಂಟಾಗುತ್ತದೆ.
ತಮೋಗುಣದಿಂದ ಪ್ರಮಾದ, ಮೋಹ ಮತ್ತು ಅಜ್ಞಾನ ಇವು ಉಂಟಾಗುತ್ತವೆ.
ऊर्ध्वं गच्छन्ति सत्वस्था
मध्ये तिष्ठन्ति राजसाः।
जघन्यगुणवृत्तिस्था
अधो गच्छन्ति तामसाः॥१४.१८॥
ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ
ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣವೃತ್ತಿಸ್ಥಾ
ಅಧೋ ಗಚ್ಛಂತಿ ತಾಮಸಾಃ ॥ 14-18॥
ऊर्ध्वं गच्छन्ति सत्वस्था मध्ये तिष्ठन्ति राजसाः।
जघन्यगुणवृत्तिस्था अधो गच्छन्ति तामसाः॥१४.१८॥
ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ ।
ಜಘನ್ಯಗುಣವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ ॥ 14-18॥
- Those established in Sattva Guna
reach higher regions,
that is, they take birth in the world of gods.
Those dominated by Rajo Guna
take their birth in the world of humans.
ಸತ್ವಗುಣದಲ್ಲಿರುವವರು ಕ್ರಮೇಣ ಊರ್ಧ್ವ ಲೋಕಗಳಿಗೆ ಏರಿ ಹೋಗುವರು ಮತ್ತು ದೇವತೆಗಳ
ಲೋಕದಲ್ಲಿ ಆಂದರೆ ಸ್ವರ್ಗದಲ್ಲಿ ಜನ್ಮ ಪಡೆಯುವರು. ರಜೋಗುಣದಲ್ಲಿರುವವರು ಮಧ್ಯದಲ್ಲಿ
ಅಂದರೆ ಮನುಷ್ಯಲೋಕದಲ್ಲಿ ಜನ್ಮವನ್ನು ಹೊಂದುವರು. ಆದರೆ ನಿದ್ರೆ, ಆಲಸ್ಯ, ಅಜ್ಞಾನ ಇತ್ಯಾದಿ
ನಿಕೃಷ್ಟಗುಣದ ಆಚಾರಣೆಯಲ್ಲಿರುವ ತಾಮಸರು ಪಶುಗಳ ಪ್ರಪಂಚವಾದ ಅಧೋಲೋಕವನ್ನು
ಸೇರುವರು.
नान्यं गुणेभ्यः कर्तारं
यदा द्रष्टानुपस्यति।
गुणेभ्यश्च परं वेत्ति
मद्भावं सोऽधिगच्छति॥१४.१९॥
ನಾನ್ಯಂ ಗುಣೇಭ್ಯಃ ಕರ್ತಾರಂ
ಯದಾ ದ್ರಷ್ಟಾನುಪಶ್ಯತಿ ।
ಗುಣೇಭ್ಯಶ್ಚ ಪರಂ ವೇತ್ತಿ
ಮದ್ಭಾವಂ ಸೋಽಧಿಗಚ್ಛತಿ ॥ 14-19॥
नान्यं गुणेभ्यः कर्तारं यदा द्रष्टानुपस्यति।
गुणेभ्यश्च परं वेत्ति मद्भावं सोऽधिगच्छति॥१४.१९॥
ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾನುಪಶ್ಯತಿ ।
ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋಽಧಿಗಚ್ಛತಿ ॥ 14-19॥
- When one perceives that
the Agent or doer of actions
is none other than the three Gunas and
when one sees the self to be
beyond the activities of Gunas
as a Witness,
he attains My status as Brahman.
ಮೂರು ಗುಣಗಳ ವಿನಃ ಬೇರೆ ಕರ್ತರಿಲ್ಲವೆಂದೂ, ತಾನೇ ತ್ರಿಗುಣಗಳಿಗೆ ಸಾಕ್ಷಿಯೆಂದೂ ಮತ್ತು
ಮೂರೂ ಗುಣಗಳಿಗಿಂತ ಅತ್ಯಂತ ಶ್ರೇಷ್ಟನಾದ ಪರಮಾತ್ಮನು ನಾನೇ ಎಂದು ಅರಿತಾಗ
ಆಧ್ಯಾತ್ಮಿಕ ಭಾವವನ್ನು ಪಡೆದು ಪರಬ್ರಹ್ಮನಾದ ನನ್ನನ್ನು ಹೊಂದುತ್ತಾನೆ.
गुणान्येतानतीत्य त्रीन्
देही देहसमुद्भवान्।
जन्ममृत्युजरादुःखै:
विमुक्तोऽमृतमश्नुते॥१४.२०॥
ಗುಣಾನೇತಾನತೀತ್ಯ ತ್ರೀನ್
ದೇಹೀ ದೇಹಸಮುದ್ಭವಾನ್ ।
ಜನ್ಮಮೃತ್ಯುಜರಾದುಃಖೈಃ
ವಿಮುಕ್ತೋಽಮೃತಮಶ್ನುತೇ ॥ 14-20॥
गुणान्येतानतीत्य त्रीन् देही देहसमुद्भवान्।
जन्ममृत्युजरादुःखै: विमुक्तोऽमृतमश्नुते॥१४.२०॥
ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹಸಮುದ್ಭವಾನ್ ।
ಜನ್ಮಮೃತ್ಯುಜರಾದುಃಖೈಃ ವಿಮುಕ್ತೋಽಮೃತಮಶ್ನುತೇ ॥ 14-20॥
- By rising above the three Gunas
from which has emerged the body,
the embodied self gets liberated
from birth, death, old age and sorrow
and gains immortality.
ದೇಹಿಯು ದೇಹೋತ್ಪತ್ತಿಗೆ ಕಾರಣವಾಗಿರುವ ಈ ಮೂರು ಗುಣಗಳನ್ನು ದಾಟಿ, ಜನ್ಮ, ಮೃತ್ಯು, ಮುಪ್ಪು ಮತ್ತು
ಕ್ಲೇಷಗಳೆಂಬ ದುಖಃಗಳಿಂದ ಬಿಡುಗಡೆ ಪಡೆದು ಅಮೃತತ್ವವನ್ನು ಹೊಂದುತ್ತಾನೆ.
अर्जुन उवाच:
कैर्लिङ्गैस्त्रीन्गुणानेतान्
अतीतो भवति प्रभो।
किमाचारः कथं चैतान्
त्रीन्गुणानतिवर्तते॥१४.२१॥
ಅರ್ಜುನ ಉವಾಚ ।
ಕೈರ್ಲಿಂಗೈಸ್ತ್ರೀನ್ಗುಣಾನೇತಾನ್
ಅತೀತೋ ಭವತಿ ಪ್ರಭೋ ।
ಕಿಮಾಚಾರಃ ಕಥಂ ಚೈತಾನ್
ತ್ರೀನ್ಗುಣಾನತಿವರ್ತತೇ ॥ 14-21॥
कैर्लिङ्गैस्त्रीन्गुणानेतान् अतीतो भवति प्रभो।
किमाचारः कथं चैतान् त्रीन्गुणानतिवर्तते॥१४.२१॥
ಕೈರ್ಲಿಂಗೈಸ್ತ್ರೀನ್ಗುಣಾನೇತಾನ್ ಅತೀತೋ ಭವತಿ ಪ್ರಭೋ ।
ಕಿಮಾಚಾರಃ ಕಥಂ ಚೈತಾನ್ ತ್ರೀನ್ಗುಣಾನತಿವರ್ತತೇ ॥ 14-21॥
- Arjuna said:
O Lord,
By what signs
is such a person to be recognized
as having transcended the three Gunas?
How does such a person behave?
How can he rise above the Gunas?
ಅರ್ಜುನನು ಹೇಳಿದನು:
ಓ ಪ್ರಭುವೇ! ಈ ಗುಣತ್ರಯಗಳನ್ನು ಮೀರಿದವನು ಯಾವ ಲಕ್ಷಣಗಳನ್ನು ಹೊಂದಿರುತ್ತಾನೆ? ಯಾವ ಪ್ರಕಾರದ
ಆಚರಣೆಯುಳ್ಳವನಾಗಿರುತ್ತಾನೆ? ಯಾವ ರೀತಿ ವರ್ತಿಸುತ್ತಾನೆ? ಮತ್ತು ಈ ಮೂರು ಗುಣಗಳನ್ನು ಮೀರಿ ಹೇಗೆ
ಅತಿಕ್ರಮಿಸುತ್ತಾನೆ?
श्रीभगवानुवाच-
प्रकाशं च प्रवृत्तिं च
मोहमेव च पाण्डव।
न द्वेष्टि सम्प्रवृत्तानि
न निवृत्तानि काङ्क्षति॥१४.२२॥
ಶ್ರೀಭಗವಾನುವಾಚ ।
ಪ್ರಕಾಶಂ ಚ ಪ್ರವೃತ್ತಿಂ ಚ
ಮೋಹಮೇವ ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ
ನ ನಿವೃತ್ತಾನಿ ಕಾಂಕ್ಷತಿ ॥ 14-22॥
प्रकाशं च प्रवृत्तिं च मोहमेव च पाण्डव।
न द्वेष्टि सम्प्रवृत्तानि न निवृत्तानि काङ्क्षति॥१४.२२॥
ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ ।
ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ ॥ 14-22॥
- Sri Bhagawan said:
Arjuna,
When the effects of the Gunas happen,
like light from Sattva, action from Rajas
and delusion from Tamas,
such a person who has transcended the Gunas
neither hates them nor goes after them
as they disappear.
ಭಗವಂತನು ಹೀಗೆಂದನು:
ಎಲೈ ಅರ್ಜುನ, ಪ್ರಕಾಶರೂಪವಾದ ಸತ್ವಗುಣವೇ ಆಗಲಿ, ಪ್ರವೃತ್ತಿ ರೂಪವಾದ ರಜೋಗುಣವೇ ಆಗಲಿ,
ಮೋಹರೂಪವಾದ ತಮೋಗುಣವೇ ಆಗಲಿ ಸಂಪ್ರಾಪ್ತವಾದಾಗ, ತ್ರಿಗುಣಾತೀತನಾದವನು ಅವುಗಳನ್ನು
ದ್ವೇಷಿಸುವುದಿಲ್ಲ. ಹಾಗೂ ಅವುಗಳು ಮರೆಯಾದಾಗ ಅದರ ಪ್ರಾಪ್ತಿಗಾಗಿ ಬಯಸುವುದಿಲ್ಲ.
उदासीनवदासीनो
गुणैर्यो न विचाल्यते।
गुणा वर्तन्त इत्येव
योऽवतिष्ठति नेङ्गते॥१४.२३॥
ಉದಾಸೀನವದಾಸೀನೋ
ಗುಣೈರ್ಯೋ ನ ವಿಚಾಲ್ಯತೇ ।
ಗುಣಾ ವರ್ತಂತ ಇತ್ಯೇವಂ
ಯೋಽವತಿಷ್ಠತಿ ನೇಂಗತೇ ॥ 14-23॥
उदासीनवदासीनो गुणैर्यो न विचाल्यते।
गुणा वर्तन्त इत्येव योऽवतिष्ठति नेङ्गते॥१४.२३॥
ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ ।
ಗುಣಾ ವರ್ತಂತ ಇತ್ಯೇವಂ ಯೋಽವತಿಷ್ಠತಿ ನೇಂಗತೇ ॥ 14-23॥
- Seated as if unconcerned,
the Gunateeta does not feel disturbed
by the play of Gunas.
He remains steadfast,
without being moved by the Gunas.
He tells himself that
the Gunas are just carrying on their work.
ಗುಣಾತೀತನಾದವನು, ಐಹಿಕ ಗುಣಗಳ ಎಲ್ಲ ಪ್ರತಿಕ್ರಿಯೆಗಳ ಆಟದ ಉದ್ದಕ್ಕೂ ತನಗೇನೂ
ಸಂಬಂಧವಿಲ್ಲವೆಂಬಂತೆ ನಿಶ್ಚಲನಾಗಿ ಮತ್ತು ನಿರಾತಂಕನಾಗಿ ಇರುತ್ತಾನೆ. ಗುಣಗಳು ಅವುಗಳ ಕೆಲಸವನ್ನು ತಮ್ಮ
ಪಾಡಿಗೆ ನೆರವೇರಿಸುತ್ತಿವೆಯೆಂದು ಭಾವಿಸಿ ಅವುಗಳಿಂದ ವಿಚಲಿತನಾಗದೆ ಉದಾಸೀನನಾಗಿರುತ್ತಾನೆ.
समदुःखसुखः स्वस्थः
समलोष्टाश्मकाञ्चनः।
तुल्यप्रियाप्रियो धीर:
तुल्यनिन्दात्मसंस्तुतिः॥१४.२४॥
ಸಮದುಃಖಸುಖಃ ಸ್ವಸ್ಥಃ
ಸಮಲೋಷ್ಟಾಶ್ಮಕಾಂಚನಃ ।
ತುಲ್ಯಪ್ರಿಯಾಪ್ರಿಯೋ ಧೀರಃ
ತುಲ್ಯನಿಂದಾತ್ಮಸಂಸ್ತುತಿಃ ॥ 14-24॥
समदुःखसुखः स्वस्थः समलोष्टाश्मकाञ्चनः।
तुल्यप्रियाप्रियो धीर: तुल्यनिन्दात्मसंस्तुतिः॥१४.२४॥
ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ ।
ತುಲ್ಯಪ್ರಿಯಾಪ್ರಿಯೋ ಧೀರಃ ತುಲ್ಯನಿಂದಾತ್ಮಸಂಸ್ತುತಿಃ ॥ 14-24॥
- The Gunatita,
keeping himself well-established
in the Self,
considers pain and pleasure as equal.
To him clod, stone and gold are all alike.
He views alike both the pleasant and the unpleasant.
In the same way,
Remaining undisturbed, he treats
Censure and pleasure in equal measure.
ಗುಣಾತೀತನು ಆತ್ಮನಲ್ಲಿ ಸ್ಥಿರನಾಗಿ ಸುಖ ದುಃಖಗಳನ್ನು ಒಂದೇ ರೀತಿ ಕಾಣುತ್ತಾನೆ. ಆತನಿಗೆ ಮಣ್ಣಿನ ಹೆಂಟೆ, ಕಲ್ಲು
ಮತ್ತು ಚಿನ್ನದ ತುಂಡು ಎಲ್ಲವೂ ಒಂದೇ. ಎಲ್ಲದರಲ್ಲೂ ಸಮದೃಷ್ಟಿ. ಪ್ರಿಯ ಮತ್ತು ಅಪ್ರಿಯ ವಿಷಯಗಳಲ್ಲಿ ಒಂದೇ
ಸಮನೆ ಇರುತ್ತಾನೆ. ಅದೇ ರೀತಿ ತೆಗಳಿಕೆ ಮತ್ತು ಹೊಗಳಿಕೆಗಳಿಗೆ ವಿಚಲಿತನಾಗದೆ ಸಮಾನ
ಮನಸ್ಕನಾಗಿರುತ್ತಾನೆ. मानापमानयोस्तुल्य :
तुल्यो मित्रारिपक्षयोः।
सर्वारम्भपरित्यागी
गुणातीतः स उच्यते॥१४.२५॥
ಮಾನಾಪಮಾನಯೋಸ್ತುಲ್ಯಃ
ತುಲ್ಯೋ ಮಿತ್ರಾರಿಪಕ್ಷಯೋಃ ।
ಸರ್ವಾರಂಭಪರಿತ್ಯಾಗೀ
ಗುಣಾತೀತಃ ಸ ಉಚ್ಯತೇ ॥ 14-25॥
मानापमानयोस्तुल्य : तुल्यो मित्रारिपक्षयोः।
सर्वारम्भपरित्यागी गुणातीतः स उच्यते॥१४.२५॥
ಮಾನಾಪಮಾನಯೋಸ್ತುಲ್ಯಃ ತುಲ್ಯೋ ಮಿತ್ರಾರಿಪಕ್ಷಯೋಃ ।
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ ॥ 14-25॥ - He is said to be a Gunaateeta,
One who has transcended the three Gunas,
who treats alike honor and dishonor,
who treats alike friend and foe, and
who has stopped initiating any action.
ಯಾರು ಮಾನ, ಅಪಮಾನಗಳಲ್ಲಿ ಸಮಬುದ್ಧಿಯುಳ್ಳವನಾಗಿರುತ್ತಾನೆಯೋ, ಶತ್ರು, ಮಿತ್ರ ಪಕ್ಷಗಳಲ್ಲಿ ಸಮಚಿತ್ತನಾಗಿರುತ್ತಾನೆಯೋ, ಸರ್ವಸಂಘ ಪರಿತ್ಯಾಗಿಯಾಗಿರುತ್ತಾನೆಯೋ, ಅಂಥವನು ಮೂರು ಗುಣಗುಣಗಳನ್ನು ಮೀರಿದ ಗುಣಾತೀತನೆನಿಸಿಕೊಳ್ಳುತ್ತಾನೆ.
मां च योऽव्यभिचारेण
भक्तियोगेन सेवते।
स गुणान्समतीत्यैतान्
ब्रह्मभूयाय कल्पते॥१४.२६॥
ಮಾಂ ಚ ಯೋಽವ್ಯಭಿಚಾರೇಣ
ಭಕ್ತಿಯೋಗೇನ ಸೇವತೇ ।
ಸ ಗುಣಾನ್ಸಮತೀತ್ಯೈತಾನ್
ಬ್ರಹ್ಮಭೂಯಾಯ ಕಲ್ಪತೇ ॥ 14-26॥
मां च योऽव्यभिचारेण भक्तियोगेन सेवते।
स गुणान्समतीत्यैतान् ब्रह्मभूयाय कल्पते॥१४.२६॥
ಮಾಂ ಚ ಯೋಽವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।
ಸ ಗುಣಾನ್ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ ॥ 14-26॥ - Answering the question,
How to reach the state of Gunaateeta?
Sri Bhagawan says:
He who serves me
through the Yoga of unswerving devotion
will be able to transcend the Gunas
and becomes eligible to attain
the Status of Brahman.
ಗುಣಾತೀತ ಸ್ಥಿತಿಯನ್ನು ಹೇಗೆ ತಲುಪುವುದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಶ್ರೀ ಭಗವಂತನು ಹೇಳುತ್ತಾನೆ.
ಯಾರು ವ್ಯಭಿಚಾರವಿಲ್ಲದ ಹಳಿತಪ್ಪದ ಭಕ್ತಿಯೋಗದಿಂದ ನನ್ನನ್ನು ನಿರಂತರ ಸೇವಿಸುತ್ತಾನೆಯೋ ಅವನು ಕೂಡಲೇ
ಐಹಿಕ ಪ್ರಕೃತಿ ಗುಣಗಳಾದ ತ್ರಿಗುಣಗಳನ್ನು ದಾಟಿ ಬ್ರಹ್ಮಭಾವವನ್ನು, ಬ್ರಹ್ಮ ಸ್ವರೂಪವನ್ನು ಹೊಂದಲು
ಸಮರ್ಥನಾಗುತ್ತಾನೆ.
ब्रह्मणो हि प्रतिष्ठाहं
अमृतस्याव्ययस्य च।
शाश्वतस्य च धर्मस्य
सुखस्यैकान्तिकस्य च॥१४.२७॥
ಬ್ರಹ್ಮಣೋ ಹಿ ಪ್ರತಿಷ್ಠಾಹಂ
ಅಮೃತಸ್ಯಾವ್ಯಯಸ್ಯ ಚ ।
ಶಾಶ್ವತಸ್ಯ ಚ ಧರ್ಮಸ್ಯ
ಸುಖಸ್ಯೈಕಾಂತಿಕಸ್ಯ ಚ ॥ 14-27॥
ब्रह्मणो हि प्रतिष्ठाहं अमृतस्याव्ययस्य च।
शाश्वतस्य च धर्मस्य सुखस्यैकान्तिकस्य च॥१४.२७॥
ಬ್ರಹ್ಮಣೋ ಹಿ ಪ್ರತಿಷ್ಠಾಹಂ ಅಮೃತಸ್ಯಾವ್ಯಯಸ್ಯ ಚ ।
ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ ॥ 14-27॥
- I am the ground or base
on which stands that Brahman
who is Eternal, Unchanging,
and who is the Supporter of Righteousness
and who is also Everlasting Bliss.
ಅಮರವೂ, ಅವ್ಯಯವೂ, ಶಾಶ್ವತವೂ, ಧರ್ಮವೂ, ನಿರತಿಶಯ ಸುಖವೂ ಆದ ಬ್ರಹ್ಮಕ್ಕೆ ನಾನೇ ಆಶ್ರಯ ಸ್ಥಾನವು.
ಓಂ ತತ್ ಸತ್ ಇತಿ.
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಶ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಗುಣತ್ರಯವಿಭಾಗಯೋಗವೆಂಬ ಹೆಸರಿನ ಹದಿನಾಲ್ಕನೆಯ ಅಧ್ಯಾಯವು ಮುಗಿದುದು.
ऒम् तत्सदिति ಓಂ ತತ್ಸದಿತಿ
श्रीमद्भगवद्गीतासु ಶ್ರೀಮದ್ಭಗವದ್ಗೀತಾಸು
उपनिषत्सु ಉಪನಿಷತ್ಸು
ब्रह्मविद्यायां ಬ್ರಹ್ಮವಿದ್ಯಾಯಾಂ
यॊगशास्त्रे ಯೋಗಶಾಸ್ತ್ರೇ
श्री कृष्णार्जुन संवादॆ ಶ್ರೀಕೃಷ್ಣಾರ್ಜುನಸಂವಾದೇ
गुणत्रयविभागयोगो नाम ಗುಣತ್ರಯವಿಭಾಗಯೋಗೋ ನಾಮ
चतुर्र्दशोऽध्यायः ಚತುರ್ದಶೋಽಧ್ಯಾಯಃ
ऒम् तत्सत् ಓಂ ತತ್ಸತ್
——- The End of Chapter Fourteen ——–