SRIMAD BHAGAVAD GITA
Chapter Four
Gnana Yoga
A SLOKA A DAY
Published by LANKA KRISHNA MURTI FOUNDATION
(https://www.facebook.com/lankakrishnamurtifoundation/) Website (https://krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
Chapter Four: Gnana Yoga
श्रीभगवानुवाच
इमं विवस्वते योगं
प्रोक्तवानहमव्ययम्।
विवस्वान् मनवे प्राह
मनुरिक्ष्वाकवेऽब्रवीत्॥४.१॥
ಶ್ರೀಭಗವಾನುವಾಚ ।
ಇಮಂ ವಿವಸ್ವತೇ ಯೋಗಂ
ಪ್ರೋಕ್ತವಾನಹಮವ್ಯಯಮ್ ।
ವಿವಸ್ವಾನ್ಮನವೇ ಪ್ರಾಹ
ಮನುರಿಕ್ಷ್ವಾಕವೇಽಬ್ರವೀತ್ ॥ 4-1॥
इमं विवस्वते योगं प्रोक्तवानहमव्ययम्।
विवस्वान् मनवे प्राह मनुरिक्ष्वाकवेऽब्रवीत्॥४.१॥
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್ ।
ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇಽಬ್ರವೀತ್ ॥ 4-1॥
1.Sri Bhagavan said:
Arjuna,
The yoga I have taught you so far,
The Karma Yoga, the Yoga of Action,
A Discipline that is Imperishable and Unmodified,
Is the self-same Yoga that I imparted,
Long, long ago, to the Sun God,
Who, in turn, taught it to his own son Manu
And Manu, in turn, taught it to his own son Ikshwaku.
ಭಗವಂತನಾದ ಶ್ರೀ ಕೃಷ್ಣನು ಹೇಳಿದನು:
ಅರ್ಜುನಾ!
ಇಲ್ಲಿಯವರೆಗೆ ನಾನು ನಿನಗೆ ಹೇಳಿದ, ಮಾರ್ಪಡಿಸಲಾಗದ ಮತ್ತು ಅವಿನಾಶಿಯಾದ ಕರ್ಮಯೋಗವನ್ನು ಬಹಳ ಹಿಂದೆ ಸೂರ್ಯದೇವನಿಗೆ ಹೇಳಿದ್ದೆ. ಸೂರ್ಯನು ತನ್ನ ಪುತ್ರನಾದ ವೈವಸ್ವತ ಮನುವಿಗೆ ಹೇಳಿದನು, ಮತ್ತು ಮನುವು ತನ್ನ ಪುತ್ರನಾದ ರಾಜಾ ಇಕ್ಷ್ವಾಕುವಿಗೆ ಹೇಳಿದನು.
एवं परम्पराप्राप्तं
इमं राजर्षयो विदुः।
स कालेनेह महता
योगो नष्टः परंतप॥४.२॥
ಏವಂ ಪರಂಪರಾಪ್ರಾಪ್ತಂ
ಇಮಂ ರಾಜರ್ಷಯೋ ವಿದುಃ ।
ಸ ಕಾಲೇನೇಹ ಮಹತಾ
ಯೋಗೋ ನಷ್ಟಃ ಪರಂತಪ ॥ 4-2॥
एवं परम्पराप्राप्तमिमं राजर्षयो विदुः।
स कालेनेह महता योगो नष्टः परंतप॥४.२॥
ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋ ವಿದುಃ ।
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ ॥ 4-2॥
- Arjuna,
Many royal sages knew of this Karma Yoga
As it was handed down traditionally, for long.
But with the long passage of time,
It was lost.
ಎಲೈ ಅರ್ಜುನಾ!
ಈ ಪ್ರಕಾರವಾಗಿ ಪರಂಪರೆಯಿಂದ ಪ್ರಾಪ್ತವಾದ ಈ ಕರ್ಮಯೋಗವನ್ನು ಬಹಳ ಕಾಲ ಅನೇಕ ರಾಜರ್ಷಿಗಳು ತಿಳಿದುಕೊಂಡಿದ್ದರು. ಆದರೆ ಕಾಲಕ್ರಮದಲ್ಲಿ ಈ ಪರಂಪರೆಯು ಅಳಿಸಿಹೋಗಿ ಈ ಯೋಗವಿದ್ಯೆಯು ನಶಿಸಿತು.
स एवायं मया तेऽद्य
योगः प्रोक्तः पुरातनः।
भक्तोऽसि मे सखा चेति
रहस्यं ह्येतदुत्तमम्॥४.३॥
ಸ ಏವಾಯಂ ಮಯಾ ತೇಽದ್ಯ
ಯೋಗಃ ಪ್ರೋಕ್ತಃ ಪುರಾತನಃ ।
ಭಕ್ತೋಽಸಿ ಮೇ ಸಖಾ ಚೇತಿ
ರಹಸ್ಯಂ ಹ್ಯೇತದುತ್ತಮಮ್ ॥ 4-3॥
स एवायं मया तेऽद्य योगः प्रोक्तः पुरातनः।
भक्तोऽसि मे सखा चेति रहस्यं ह्येतदुत्तमम्॥४.३॥
ಸ ಏವಾಯಂ ಮಯಾ ತೇಽದ್ಯ ಯೋಗಃ ಪ್ರೋಕ್ತಃ ಪುರಾತನಃ ।
ಭಕ್ತೋಽಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್ ॥ 4-3॥
- This ancient Yoga contains
Knowledge of highest excellence,
Though secret in nature.
I have imparted this to you now
As you are my devotee and friend.
ಈ ಪುರಾತನವಾದ ಯೋಗವಿದ್ಯೆಯು ಅಲೌಕಿಕ ರಹಸ್ಯವಾಗಿದ್ದು ಉತ್ಕೃಷ್ಟತೆಯ ಜ್ಞಾನವಾಗಿದೆ. ನೀನು ನನ್ನ ಭಕ್ತನೂ ಮತ್ತು ಪ್ರಿಯಸಖನೂ ಆಗಿರುವುದರಿಂದ ನಾನು ನಿನಗೆ ಈ ರಹಸ್ಯ ಜ್ಞಾನವನ್ನು ಈಗ ಹೇಳುತ್ತಿದ್ದೇನೆ.
अर्जुन उवाच-
अपरं भवतो जन्म
परं जन्म विवस्वतः।
कथमेतद्विजानीयां
त्वमादौ प्रोक्तवानिति?॥४.४॥
ಅರ್ಜುನ ಉವಾಚ ।
ಅಪರಂ ಭವತೋ ಜನ್ಮ
ಪರಂ ಜನ್ಮ ವಿವಸ್ವತಃ ।
ಕಥಮೇತದ್ವಿಜಾನೀಯಾಂ
ತ್ವಮಾದೌ ಪ್ರೋಕ್ತವಾನಿತಿ ॥ 4-4॥
अपरं भवतो जन्म परं जन्म विवस्वतः।
कथमेतद्विजानीयां त्वमादौ प्रोक्तवानिति?॥४.४॥
ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ ।
ಕಥಮೇತದ್ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ ॥ 4-4॥
- Arjuna said:
It was very long ago,
In the beginning,
That the Sun God came into being.
But your birth is later and recent.
How am i to understand
You gave this knowledge to the Sun God
In the beginning?
ಅರ್ಜುನನು ಹೇಳಿದನು:-
ಸೂರ್ಯನ ಅಸ್ತಿತ್ವವು ಬಹಳ ಪ್ರಾಚೀನವಾದುದು, ಅರ್ಥಾತ್ ಸೂರ್ಯನ ಜನ್ಮಈ ಕಲ್ಪದ ಆದಿಯಲ್ಲಿ ಆಗಿರುವುದು. ಆದರೆ ನಿನ್ನ ಜನ್ಮವು ನಂತರ ಇತ್ತೀಚಿನದ್ದಾಗಿದೆ. ಹಾಗಿರುವಾಗ ಕಲ್ಪದ ಆದಿಯಲ್ಲಿ ನೀನೇ ಸೂರ್ಯನಿಗೆ ಈ ಯೋಗಜ್ಞಾನವನ್ನು ಬೋಧಿಸಿದ್ದೆಂದು ನಾನು ಹೇಗೆ ತಿಳಿದುಕೊಳ್ಳಲಿ.
श्रीभगवनुवाच
बहूनि मे व्यतीतानि
जन्मानि तव चार्जुन।
तान्यहं वेद सर्वाणि
न त्वं वेत्थ परन्तप॥४.५॥
ಶ್ರೀಭಗವಾನುವಾಚ ।
ಬಹೂನಿ ಮೇ ವ್ಯತೀತಾನಿ
ಜನ್ಮಾನಿ ತವ ಚಾರ್ಜುನ ।
ತಾನ್ಯಹಂ ವೇದ ಸರ್ವಾಣಿ
ನ ತ್ವಂ ವೇತ್ಥ ಪರಂತಪ ॥ 4-5॥
बहूनि मे व्यतीतानि जन्मानि तव चार्जुन।
तान्यहं वेद सर्वाणि न त्वं वेत्थ परन्तप॥४.५॥
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ ।
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ ॥ 4-5॥
- Sri Bhagavan said:
Arjuna,
Several births have taken place
For you as well as me.
Whereas I am aware of each one of them,
You are not.
ಶ್ರೀ ಭಗವಂತನು ಹೇಳಿದನು:
ಅರ್ಜುನಾ! ನನಗೂ ಹಾಗೂ ನಿನಗೂ ಎಷ್ಟೋ ಜನ್ಮಗಳು ಆಗಿ ಹೋಗಿವೆ. ಎಲೈ ಪರಂತಪನೇ, ನನಗೆ ಪ್ರತಿಯೊಂದು ಜನ್ಮದ ಅರಿವಿದೆ. ನಿನಗದು ತಿಳಿದಿಲ್ಲ.
अजोऽपि सन्नव्ययात्मा
भूतानामीश्वरोऽपि सन्।
प्रकृतिं स्वामधिष्ठाय
सम्भवाम्यात्ममायया॥४.६॥
ಅಜೋಽಪಿ ಸನ್ನವ್ಯಯಾತ್ಮಾ
ಭೂತಾನಾಮೀಶ್ವರೋಽಪಿ ಸನ್ ।
ಪ್ರಕೃತಿಂ ಸ್ವಾಮಧಿಷ್ಠಾಯ
ಸಂಭವಾಮ್ಯಾತ್ಮಮಾಯಯಾ ॥ 4-6॥
अजोऽपि सन्नव्ययात्मा भूतानामीश्वरोऽपि सन्।
प्रकृतिं स्वामधिष्ठाय सम्भवाम्यात्ममायया॥४.६॥
ಅಜೋಽಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋಽಪಿ ಸನ್ ।
ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ ॥ 4-6॥
- Though I am unborn and birth-less,
Though I am the Immutable Self,
Though I am the Controller of all beings
From Brahma down to the blade of grass,
Taking control over my Prakriti,
And through the power of my Maya,
I manifest my birth.
ನಾನು ಜನ್ಮರಹಿತನೂ, ಅವಿನಾಶಿ ಸ್ವರೂಪನಾಗಿದ್ದಾರೂ, ಎಲ್ಲ ಚರಾಚರ ಜೀವಿಗಳ ನಿಯಂತ್ರಕನಾಗಿದ್ದರೂ, ಬ್ರಹ್ಮನಿಂದ ಹಿಡಿದು ತೃಣಮೂಲದವರೆಗೆ ನನ್ನ ಅಂಕೆಯಲ್ಲಿರುವ ಸಮಸ್ತ ಪ್ರಕೃತಿಯನ್ನು ವಶಮಾಡಿಕೊಂಡು ನನ್ನ ಮಾಯಾಶಕ್ತಿಯ ಮೂಲಕ ನಾನು ಅವತರಿಸುತ್ತೇನೆ.
यदा यदा हि धर्मस्य
ग्लानिर्भवति भारत।
अभ्युत्थानमधर्मस्य
तदात्मानं सृजाम्यहम्॥४.७॥
ಯದಾ ಯದಾ ಹಿ ಧರ್ಮಸ್ಯ
ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ
ತದಾತ್ಮಾನಂ ಸೃಜಾಮ್ಯಹಮ್ ॥ 4-7॥
यदा यदा हि धर्मस्य ग्लानिर्भवति भारत।
अभ्युत्थानमधर्मस्य तदात्मानं सृजाम्यहम्॥४.७॥
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ॥ 4-7॥
- Whenever there is decline of Dharma
Followed by an upsurge of Adharma,
Arjuna, I manifest myself as a being.
ಹೇ ಭರತಕುಲೋದ್ಭವ, ಅರ್ಜುನನೇ ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೆಯೋ
ಮತ್ತು ಅದರಿಂದ ಅಧರ್ಮದ ವೃದ್ಧಿಯಾಗುತ್ತದೆಯೋ ಆಗ ನಾನು ಸ್ವಯಂ ಸಾಕಾರ
ರೂಪದಿಂದ ಅವತರಿಸುತ್ತೇನೆ.
परित्राणाय साधूनां
विनाशाय च दुष्कृताम्।
धर्मसंस्थापनार्थाय
सम्भवामि युगे युगे॥४.८॥
ಪರಿತ್ರಾಣಾಯ ಸಾಧೂನಾಂ
ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ ॥ 4-8॥
परित्राणाय साधूनां विनाशाय च दुष्कृताम्।
धर्मसंस्थापनार्थाय सम्भवामि युगे युगे॥४.८॥
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥ 4-8॥
- I manifest myself in every age
To give protection to the virtuous people,
To cause destruction of the wicked ones
And to establish the Dharmic Order.
ಸಾಧು ಸಜ್ಜನರನ್ನು ಸಂರಕ್ಷಿಸುವುದಕ್ಕಾಗಿಯೂ,
ದುಷ್ಟರನ್ನೂ, ಪಾಪಕರ್ಮ ಮಾಡುವವರನ್ನೂ ನಾಶಮಾಡುವುದಕ್ಕಾಗಿಯೂ ಮತ್ತು ಧರ್ಮಸಂಸ್ಥಾಪನೆಗಾಗಿಯೂ ನಾನು ಪ್ರತಿ ಯುಗದಲ್ಲಿಯೂ ಅವತರಿಸುತ್ತೇನೆ.
जन्म कर्म च मे दिव्यं
एवं यो वेत्ति तत्वतः।
त्यक्त्वा देहं पुनर्जन्म
नैति मामेति सोऽर्जुन॥४.९॥
ಜನ್ಮ ಕರ್ಮ ಚ ಮೇ ದಿವ್ಯಂ
ಏವಂ ಯೋ ವೇತ್ತಿ ತತ್ತ್ವತಃ ।
ತ್ಯಕ್ತ್ವಾ ದೇಹಂ ಪುನರ್ಜನ್ಮ
ನೈತಿ ಮಾಮೇತಿ ಸೋಽರ್ಜುನ ॥ 4-9॥
जन्म कर्म च मे दिव्यमेवं यो वेत्ति तत्वतः।
त्यक्त्वा देहं पुनर्जन्म नैति मामेति सोऽर्जुन॥४.९॥
ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ ॥ 4-9॥
- Whoever understands the Truth
Of my Divine Manifestations
And the kind of works I do
Will not take birth again
After leaving the body,
But will reach Me alone, Arjuna.
ಎಲೈ ಅರ್ಜುನ, ಯಾರು ಹೀಗೆ ನನ್ನ ದಿವ್ಯವಾದ ಅಲೌಕಿಕ ನಿರ್ಮಲ ಅವತಾರವನ್ನೂ ಮತ್ತು ಕರ್ಮವನ್ನೂ ಯಥಾರ್ಥವಾಗಿ ತತ್ವದಿಂದ ತಿಳಿದುಕೊಳ್ಳುತ್ತಾರೆಯೋ ಅವರು ದೇಹತ್ಯಾಗ ಮಾಡಿದ ನಂತರ ಪುನಃ ಈ ಐಹಿಕ ಜಗತ್ತಿನಲ್ಲಿ ಹುಟ್ಟುವುದಿಲ್ಲ. ಅವರು ನನ್ನನ್ನೇ ಸೇರುತ್ತಾರೆ.
वीतरागभयक्रोधा:
मन्मया मामुपाश्रिताः।
बहवो ज्ञानतपसा
पूता मद्भावमागताः॥४.१०॥
ವೀತರಾಗಭಯಕ್ರೋಧಾಃ
ಮನ್ಮಯಾ ಮಾಮುಪಾಶ್ರಿತಾಃ ।
ಬಹವೋ ಜ್ಞಾನತಪಸಾ
ಪೂತಾ ಮದ್ಭಾವಮಾಗತಾಃ ॥ 4-10॥
वीतरागभयक्रोधा मन्मया मामुपाश्रिताः।
बहवो ज्ञानतपसा पूता मद्भावमागताः॥४.१०॥
ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ ।
ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ ॥ 4-10॥
- Getting free from desire, anger and fear,
Many people dedicated themselves always to Me
And sought refuge in Me;
They purified themselves in the fire of my Knowledge
And attained Me.
ಕಾಮ, ಕ್ರೋಧ ಮತ್ತು ಭಯವನ್ನು ತ್ಯಜಿಸಿದ ಅನೇಕರು, ಸಂಪೂರ್ಣವಾಗಿ ನನ್ನಲ್ಲಿಯೇ ಮನಸ್ಸುಳ್ಳವರಾಗಿ ಮತ್ತು ನನ್ನನ್ನೇ ಆಶ್ರಯಿಸಿದವರಾಗಿ ನನ್ನ ಜ್ಞಾನಸ್ವರೂಪೀ ತಪಸ್ಸಿನಿಂದ ಪರಿಶುದ್ಧರಾಗಿದ್ದಾರೆ ಮತ್ತು ನನ್ನನ್ನೇ ಹೊಂದಿದ್ದಾರೆ.
ये यथा मां प्रपद्यन्ते
तांस्तथैव भजाम्यहम्।
मम वर्त्मानुवर्तन्ते
मनुष्याः पार्थ सर्वशः॥४.११॥
ಯೇ ಯಥಾ ಮಾಂ ಪ್ರಪದ್ಯಂತೇ
ತಾಂಸ್ತಥೈವ ಭಜಾಮ್ಯಹಮ್ ।
ಮಮ ವರ್ತ್ಮಾನುವರ್ತಂತೇ
ಮನುಷ್ಯಾಃ ಪಾರ್ಥ ಸರ್ವಶಃ ॥ 4-11॥
ये यथा मां प्रपद्यन्ते तांस्तथैव भजाम्यहम्।
मम वर्त्मानुवर्तन्ते मनुष्याः पार्थ सर्वशः॥४.११॥
ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ ।
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥ 4-11॥
- O Arjuna,
Whoever approaches Me
Seeking favours,
Whatever they be,
I grant them the same.
Indeed all people follow the path set by Me.
ಹೇ ಅರ್ಜುನನೇ! ಯಾರು ಯಾವುದೇ ಕೃಪೆಗಾಗಿ ನನ್ನನ್ನು ಕೋರುತ್ತಾರೆಯೋ, ನಾನು ಅವರಿಗೆ ಅದನ್ನು ಅನುಗ್ರಹಿಸುತ್ತೇನೆ. ಯಾವ ಭಕ್ತರು ನನ್ನನ್ನು ಯಾವ ಭಾವದಿಂದ ಭಜಿಸುತ್ತಾರೋ, ಅವರನ್ನು ನಾನು ಸಹ ಅದೇ ಭಾವದಿಂದ ಅನುಗ್ರಹಿಸುತ್ತೇನೆ. ಮನುಷ್ಯರು ಎಲ್ಲಾ ರೀತಿಯಿಂದಲೂ ನಾನು ತೋರಿಸಿದ ಮಾರ್ಗವನ್ನೇ ಅನುಸರಿಸುತ್ತಾರೆ.
काङ्क्षन्तः कर्मणां सिद्धिं
यजन्त इह देवताः।
क्षिप्रं हि मानुषे लोके
सिद्धिर्भवति कर्मजा॥४.१२॥
ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ
ಯಜಂತ ಇಹ ದೇವತಾಃ ।
ಕ್ಷಿಪ್ರಂ ಹಿ ಮಾನುಷೇ ಲೋಕೇ
ಸಿದ್ಧಿರ್ಭವತಿ ಕರ್ಮಜಾ ॥ 4-12॥
काङ्क्षन्तः कर्मणां सिद्धिं यजन्त इह देवताः।
क्षिप्रं हि मानुषे लोके सिद्धिर्भवति कर्मजा॥४.१२॥
ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ ।
ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ ॥ 4-12॥
- With a desire to obtain
Fruits of their actions,
People make offerings to various gods
By performing yagnas.
For in this human world,
Quickly comes success
Through performance of actions.
ಕರ್ಮಗಳ ಫಲವನ್ನುಹೊಂದುವ ಇಚ್ಛೆಯಿಂದ ಈ ಮನುಷ್ಯಲೋಕದಲ್ಲಿನ ಜನರು ಯಜ್ಞಗಳನ್ನು ಮಾಡಿ ಹಲವಾರು ದೇವತೆಗಳನ್ನು ಆರಾಧಿಸುತ್ತಾರೆ. ಏಕೆಂದರೆ ಅವರಿಗೆ ಕರ್ಮದಿಂದ ಉತ್ಪನ್ನವಾಗುವ ಸಿದ್ಧಿಯು ಶೀಘ್ರವಾಗಿ ದೊರೆಯುತ್ತದೆ. (ನನ್ನ ಸಂಬಂಧವಾದ ಜ್ಞಾನಸಿದ್ಧಿಯು ಅಷ್ಟು ಸುಲಭವಾಗಿ ದೊರೆಯಲಾರದು)
चातुर्वर्ण्यं मया सृष्टं
गुणकर्मविभागशः।
तस्य कर्तारमपि मां
विध्यकर्तारमव्ययम्॥४.१३॥
ಚಾತುರ್ವರ್ಣ್ಯಂ ಮಯಾ ಸೃಷ್ಟಂ
ಗುಣಕರ್ಮವಿಭಾಗಶಃ ।
ತಸ್ಯ ಕರ್ತಾರಮಪಿ ಮಾಂ
ವಿದ್ಧ್ಯಕರ್ತಾರಮವ್ಯಯಮ್ ॥ 4-13॥
चातुर्वर्ण्यं मया सृष्टं गुणकर्मविभागशः।
तस्य कर्तारमपि मां विध्यकर्तारमव्ययम्॥४.१३॥
ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ ।
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ॥ 4-13॥
- Based on the divisions of Gunas,
Sattva, Rajas and Tamas,
And the nature of actions,
A four-fold Varna system
Has been established by me.
Though I am its creator,
Know, Arjuna, that I am Changeless
And a non-doer.
ಗುಣತ್ರಯಗಳಾದ ಸತ್ವ, ರಜಸ್ಸು ಮತ್ತು ತಮಸ್ಸು ಹಾಗೂ ಕರ್ಮದ ಪ್ರಕೃತಿಗೆ ಅನುಗುಣವಾಗಿ ಮನುಷ್ಯ ಸಮಾಜದ ನಾಲ್ಕು ವರ್ಣಗಳ ಸಮೂಹವು ವಿಭಾಗಪೂರ್ವಕವಾಗಿ ನನ್ನಿಂದ ರಚಿಸಲ್ಪಟ್ಟಿದೆ. ಈ ವ್ಯವಸ್ಥೆಯನ್ನು ನಾನು ಸೃಷ್ಟಿಸಿದ್ದರೂ, ಅರ್ಜುನಾ! ನಾನು ಬದಲಾವಣೆಯಿಲ್ಲದವನು, ಅವ್ಯಯನು ಮತ್ತು ನನ್ನನ್ನು ನೀನು ವಾಸ್ತವವಾಗಿ ಕರ್ತೃವಲ್ಲವೆಂದೇ ತಿಳಿ.
न मां कर्माणि लिम्पन्ति
न मे कर्मफले स्पृहा।
इति मां योऽभिजानाति
कर्मभिर्न स बध्यते॥४.१४॥
ನ ಮಾಂ ಕರ್ಮಾಣಿ ಲಿಂಪಂತಿ
ನ ಮೇ ಕರ್ಮಫಲೇ ಸ್ಪೃಹಾ ।
ಇತಿ ಮಾಂ ಯೋಽಭಿಜಾನಾತಿ
ಕರ್ಮಭಿರ್ನ ಸ ಬಧ್ಯತೇ ॥ 4-14॥
न मां कर्माणि लिम्पन्ति न मे कर्मफले स्पृहा।
इति मां योऽभिजानाति कर्मभिर्न स बध्यते॥४.१४॥
ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ ।
ಇತಿ ಮಾಂ ಯೋಽಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ ॥ 4-14॥
- I remain untouched by actions;
I have no desire for their fruits;
He who understands me to be so,
Is not bound by karma.
ಕರ್ಮಗಳು ನನ್ನನ್ನು ಅಂಟಿಕೊಳ್ಳುವುದಿಲ್ಲ. ನನಗೆ ಯಾವುದೇ ಕರ್ಮಫಲದಲ್ಲಿ ಆಸಕ್ತಿಯಿಲ್ಲ. ಈ ಪ್ರಕಾರವಾಗಿ ಯಾರು ನನ್ನನ್ನು ತತ್ವದಿಂದ ತಿಳಿದುಕೊಳ್ಳುತ್ತಾನೆಯೋ ಅವನು ಕೂಡ ಕರ್ಮಗಳಿಂದ ಬಂಧಿತನಾಗುವುದಿಲ್ಲ.( ಅಂದರೆ ಅವನಿಗೆ ಫಲಾಪೇಕ್ಷೆಯ ಕರ್ಮಬಂಧನವಿರುವುದಿಲ್ಲ)
एवं ज्ञात्वा कृतं कर्म
पूर्वैरपि मुमुक्षुभिः।
कुरु कर्मैव तस्मात्त्वं
पूर्वैः पूर्वतरं कृतम्॥४.१५॥
ಏವಂ ಜ್ಞಾತ್ವಾ ಕೃತಂ ಕರ್ಮ
ಪೂರ್ವೈರಪಿ ಮುಮುಕ್ಷುಭಿಃ ।
ಕುರು ಕರ್ಮೈವ ತಸ್ಮಾತ್ತ್ವಂ
ಪೂರ್ವೈಃ ಪೂರ್ವತರಂ ಕೃತಮ್ ॥ 4-15॥
एवं ज्ञात्वा कृतं कर्म पूर्वैरपि मुमुक्षुभिः।
कुरु कर्मैव तस्मात्त्वं पूर्वैः पूर्वतरं कृतम्॥४.१५॥
ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ ।
ಕುರು ಕರ್ಮೈವ ತಸ್ಮಾತ್ತ್ವಂ ಪೂರ್ವೈಃ ಪೂರ್ವತರಂ ಕೃತಮ್ ॥ 4-15॥
- It was with this knowledge and understanding
That the ancient seekers of Liberation
Performed their actions.
Therefore you too should follow them
And perform actions as were done
By the ancient sages in the olden days.
ಪ್ರಾಚೀನರಾದ ಮುಮುಕ್ಷುಗಳು ಈ ಪ್ರಕಾರದ ಜ್ಞಾನ ಮತ್ತು ತಿಳುವಳಿಕೆಯಿಂದ ಕರ್ಮಗಳನ್ನು ಮಾಡಿದ್ದಾರೆ. ಆದುದರಿಂದ ನೀನೂ ಸಹ ಪೂರ್ವಜರ ಹೆಜ್ಜೆಯನ್ನು ಅನುಸರಿಸಿ, ಅವರಿಂದ ಮಾಡಲ್ಪಟ್ಟ ಪುರಾತನವಾದ ಕರ್ಮವನ್ನು ಆಚರಿಸು.
किं कर्म किमकर्मेति
कवयोऽप्यत्र मोहिताः।
तत्ते कर्म प्रवक्ष्यामि
यज्ज्ञात्वा मोक्ष्यसेऽशुभात्॥४.१६॥
ಕಿಂ ಕರ್ಮ ಕಿಮಕರ್ಮೇತಿ
ಕವಯೋಽಪ್ಯತ್ರ ಮೋಹಿತಾಃ ।
ತತ್ತೇ ಕರ್ಮ ಪ್ರವಕ್ಷ್ಯಾಮಿ
ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್ ॥ 4-16॥
किं कर्म किमकर्मेति कवयोऽप्यत्र मोहिताः।
तत्ते कर्म प्रवक्ष्यामि यज्ज्ञात्वा मोक्ष्यसेऽशुभात्॥४.१६॥
ಕಿಂ ಕರ್ಮ ಕಿಮಕರ್ಮೇತಿ ಕವಯೋಽಪ್ಯತ್ರ ಮೋಹಿತಾಃ ।
ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಜ್ಞಾತ್ವಾ ಮೋಕ್ಷ್ಯಸೇಽಶುಭಾತ್ ॥ 4-16॥
- In respect of Karma or Action
And what is Akarma or non-action,
Even the learned people get confused.
I shall explain to you the nature
Of such action by knowing which
You will be free from the evil of samsara.
ಕರ್ಮವೆಂದರೇನು ಮತ್ತು ಅಕರ್ಮವೆಂದರೇನು ಎಂಬ ವಿಷಯದಲ್ಲಿ ಪಂಡಿತರೂ ಸಹ ಗೊಂದಲಕ್ಕೊಳಗಾಗಿದ್ದಾರೆ. ಆದ್ದರಿಂದ ಆ ಕರ್ಮ ತತ್ವವನ್ನು ನಾನು ನಿನಗೆ ವಿವರಿಸಿ ಹೇಳುತ್ತೇನೆ. ಅದನ್ನು ತಿಳಿದುಕೊಂಡು ನೀನು ಅಶುಭದಿಂದ ಅರ್ಥಾತ್ ಸಂಸಾರಬಂಧನವೆಂಬ ಕೇಡಿನಿಂದ ಮುಕ್ತನಾಗಿ ಬಿಡುಗಡೆ ಹೊಂದುವೆ.
कर्मणो ह्यपि बोद्धव्यं
बोद्धव्यं च विकर्मणः।
अकर्मणश्च बोद्धव्यं
गहना कर्मणो गतिः॥४.१७॥
ಕರ್ಮಣೋ ಹ್ಯಪಿ ಬೋದ್ಧವ್ಯಂ
ಬೋದ್ಧವ್ಯಂ ಚ ವಿಕರ್ಮಣಃ ।
ಅಕರ್ಮಣಶ್ಚ ಬೋದ್ಧವ್ಯಂ
ಗಹನಾ ಕರ್ಮಣೋ ಗತಿಃ ॥ 4-17॥
कर्मणो ह्यपि बोद्धव्यं बोद्धव्यं च विकर्मणः।
अकर्मणश्च बोद्धव्यं गहना कर्मणो गतिः॥४.१७॥
ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ ।
ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ ॥ 4-17॥
- You should know about Karma or Action
As prescribed by the Shastras;
You should also know about Vikarma,
Which is Action that is prohibited;
And you should also know about Akarma,
Renunciation of action.
Indeed, the course of Action is very profound.
ಶಾಸ್ತ್ರಗಳಲ್ಲಿ ವಿಧಿಸಿರತಕ್ಕಂತಹ ಕರ್ಮ ತತ್ವವನ್ನು ನೀನು ಅರಿತುಕೊಳ್ಳಬೇಕು. ಹಾಗೆಯೇ ನಿಷಿದ್ಧ
ಕರ್ಮಗಳಾದ ವಿಕರ್ಮದ ಬಗ್ಗೆಯೂ ನೀನು ತಿಳಿದುಕೊಳ್ಳಬೇಕು ಮತ್ತು ಕರ್ಮದ ಪರಿತ್ಯಾಗವಾದ
ಅಕರ್ಮದ ಬಗ್ಗೆಯೂ ಸಹ ನೀನು ತಿಳುವಳಿಕೆಯನ್ನು ಹೊಂದಬೇಕು, ಏಕೆಂದರೆ ಕರ್ಮದ
ಅಗಾಧತೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ.
कर्मण्यकर्म यः पस्येत्
अकर्मणि च कर्म यः।
स बुद्धिमान्मनुष्येषु
स युक्तः कृत्स्नकर्मकृत्॥४.१८॥
ಕರ್ಮಣ್ಯಕರ್ಮ ಯಃ ಪಶ್ಯೇತ್
ಅಕರ್ಮಣಿ ಚ ಕರ್ಮ ಯಃ ।
ಸ ಬುದ್ಧಿಮಾನ್ಮನುಷ್ಯೇಷು
ಸ ಯುಕ್ತಃ ಕೃತ್ಸ್ನಕರ್ಮಕೃತ್ ॥ 4-18॥
कर्मण्यकर्म यः पस्येदकर्मणि च कर्म यः।
स बुद्धिमान्मनुष्येषु स युक्तः कृत्स्नकर्मकृत्॥४.१८॥
ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ ।
ಸ ಬುದ್ಧಿಮಾನ್ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್ ॥ 4-18॥
- He who finds non-Action in Action
And Action in non-Action
Is a wise man and a Yogi,
Unified and well-accomplished.
ಕರ್ಮದಲ್ಲಿ ಅಕರ್ಮವನ್ನೂ, ಅಕರ್ಮದಲ್ಲಿ ಕರ್ಮವನ್ನೂ ಯಾರು ಕಾಣುತ್ತಾರೆಯೋ ಅವನು ಮನುಷ್ಯರಲ್ಲಿ ಬುದ್ಧಿವಂತನು. ಅವನೇ ಯೋಗಿಯು. ಅವನೇ ಯುಕ್ತನು ಮತ್ತು ಎಲ್ಲಾ ವಿಧದಿಂದಲೂ ಕೃತ ಕೃತ್ಯನು.
यस्य सर्वे समारम्भाः
कामसङ्कल्पवर्जिताः।
ज्ञानाग्निदग्धकर्माणं
तमाहुः पण्डितं बुधाः॥४.१९॥
ಯಸ್ಯ ಸರ್ವೇ ಸಮಾರಂಭಾಃ
ಕಾಮಸಂಕಲ್ಪವರ್ಜಿತಾಃ ।
ಜ್ಞಾನಾಗ್ನಿದಗ್ಧಕರ್ಮಾಣಂ
ತಮಾಹುಃ ಪಂಡಿತಂ ಬುಧಾಃ ॥ 4-19॥
यस्य सर्वे समारम्भाः कामसङ्कल्पवर्जिताः।
ज्ञानाग्निदग्धकर्माणं तमाहुः पण्डितं बुधाः॥४.१९॥
ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಜಿತಾಃ ।
ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ ॥ 4-19॥
- He whose works are not prompted
By the desire for fruits,
But whose works are burnt in the fire of knowledge –
Such a person is considered to be
A Pandita or wise man by the learned.
ಯಾರ ಸಂಪೂರ್ಣ ಶಾಸ್ತ್ರಸಮ್ಮತವಾದ ಕರ್ಮಗಳು ಕಾಮನೆ ಮತ್ತು ಸಂಕಲ್ಪವಿಲ್ಲದೆ ಇರುತ್ತವೆಯೋ ಹಾಗೂ ಯಾರ ಸಮಸ್ತ ಕರ್ಮಗಳು ಜ್ಞಾನವೆಂಬ ಅಗ್ನಿಯಿಂದ ಭಸ್ಮವಾಗಿ ಹೋಗಿವೆಯೋ, ಆ ಮಹಾಪುರುಷನನ್ನು ಜ್ಞಾನಿಗಳು ಪಂಡಿತನೆಂದು ಹೇಳುವರು.
त्यक्त्वा कर्मफलासङ्गं
नित्यतृप्तो निराश्रयः।
कर्मण्यभिप्रवृत्तोऽपि
नैव किञ्चित्करोति सः॥४.२०॥
ತ್ಯಕ್ತ್ವಾ ಕರ್ಮಫಲಾಸಂಗಂ
ನಿತ್ಯತೃಪ್ತೋ ನಿರಾಶ್ರಯಃ ।
ಕರ್ಮಣ್ಯಭಿಪ್ರವೃತ್ತೋಽಪಿ
ನೈವ ಕಿಂಚಿತ್ಕರೋತಿ ಸಃ ॥ 4-20॥
त्यक्त्वा कर्मफलासङ्गं नित्यतृप्तो निराश्रयः।
कर्मण्यभिप्रवृत्तोऽपि नैव किञ्चित्करोति सः॥४.२०॥
ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯಃ ।
ಕರ್ಮಣ್ಯಭಿಪ್ರವೃತ್ತೋಽಪಿ ನೈವ ಕಿಂಚಿತ್ಕರೋತಿ ಸಃ ॥ 4-20॥
- If a person gives up all attachment
To the fruits of his actions,
Keeps for ever in a state of contentment,
And remains independent,
Such a person is a non-doer,
Even if he performs actions.
ಎಲ್ಲಾ ವ್ಯಾಮೋಹವನ್ನು ತ್ಯಜಿಸಿ ತನ್ನ ಕರ್ಮಗಳಲ್ಲಿ ಮತ್ತು ಅವುಗಳ ಫಲದಲ್ಲಿ ಆಸಕ್ತಿಯನ್ನು ಬಿಟ್ಟು
ಸರ್ವದಾ ನಿತ್ಯ ತೃಪ್ತನೂ ಮತ್ತು ಸರ್ವ ಸ್ವತಂತ್ರನೂ, ಯಾವುದರ ಮೇಲೂ
ಆಧಾರವಿಲ್ಲದವನಾಗಿರುವ ಪುರುಷನು ಕರ್ಮವನ್ನು ಮಾಡಿದರೂ ಸಹ ವಾಸ್ತವವಾಗಿ ಕರ್ಮ
ಮಾಡದವನಾಗಿರುತ್ತಾನೆ.
निराशीर्यतचित्तात्मा
त्यक्तसर्वपरिग्रहः।
शारीरं केवलं कर्म
कुर्वन्नाप्नोति किल्बिषम्॥४.२१॥
ನಿರಾಶೀರ್ಯತಚಿತ್ತಾತ್ಮಾ
ತ್ಯಕ್ತಸರ್ವಪರಿಗ್ರಹಃ ।
ಶಾರೀರಂ ಕೇವಲಂ ಕರ್ಮ
ಕುರ್ವನ್ನಾಪ್ನೋತಿ ಕಿಲ್ಬಿಷಮ್ ॥ 4-21॥
निराशीर्यतचित्तात्मा त्यक्तसर्वपरिग्रहः।
शारीरं केवलं कर्म कुर्वन्नाप्नोति किल्बिषम्॥४.२१॥
ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹಃ ।
ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್ ॥ 4-21॥
- Without any expectation
From what he does,
With full control over his mind
And the inner instruments,
Renouncing all possessiveness,
He engages his body
Merely for performing actions, —
Such a one thereby incurs no sin.
ತನ್ನ ಕಾರ್ಯಕ್ಕೆ ಪ್ರತಿಫಲವನ್ನು ಬಯಸದವನೂ, ಆಸೆಯಿಲ್ಲದವನೂ, ಮನಸ್ಸು ದೇಹೇಂದ್ರಿಯಗಳನ್ನು ನಿಗ್ರಹಿಸಿದವನೂ, ಸಮಸ್ತ ಪರಿಗ್ರಹಗಳನ್ನು ಬಿಟ್ಟವನೂ, ಕೇವಲ ಶರೀರ ರಕ್ಷಣೆಗೆ ಬೇಕಾದ ಕರ್ಮವನ್ನು ಮಾಡುತ್ತಿರುವವನೂ ಆದ ಯೋಗಿಯು ಯಾವುದೇ ಪಾಪವನ್ನು ಹೊಂದುವುದಿಲ್ಲ.
यदृच्छालाभसन्तुष्टॊ
द्वन्द्वातीतो विमत्सरः।
समः सिद्धावसिद्धौ च
कृत्वापि न निबद्ध्यते॥४.२२॥
ಯದೃಚ್ಛಾಲಾಭಸಂತುಷ್ಟೋ
ದ್ವಂದ್ವಾತೀತೋ ವಿಮತ್ಸರಃ ।
ಸಮಃ ಸಿದ್ಧಾವಸಿದ್ಧೌ ಚ
ಕೃತ್ವಾಪಿ ನ ನಿಬಧ್ಯತೇ ॥ 4-22॥
यदृच्छालाभसन्तुष्टो द्वन्द्वातीतो विमत्सरः।
समः सिद्धावसिद्धौ च कृत्वापि न निबद्ध्यते॥४.२२॥
ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ ।
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ ॥ 4-22॥
- If a person is satisfied
With the benefit that comes
Of its own accord,
If he has transcended the dualities
Like heat and cold, sorrow and joy,
If he is without a trace of jealousy
And accepts gain and loss with equanimity, —
Such a person is not bound by his actions.
ತಾನಾಗಿ ಬಂದುದರಲ್ಲಿ ತೃಪ್ತಿಯುಳ್ಳವನೂ, ಶೀತೋಷ್ಣ ಸುಖ ದುಖಾಃದಿ ದ್ವಂದ್ವಗಳಿಗೆ ಅತೀತನಾದವನೂ, ಮಾತ್ಸರ್ಯವಿಲ್ಲದವನೂ, ಜಯಾಪಜಯಗಳಲ್ಲಿ ಸಮಬುದ್ಧಿಯುಳ್ಳವನೂ ಆದ ಯೋಗಿಯು ಕರ್ಮವನ್ನು ಮಾಡಿದರೂ ಬಂಧನಕ್ಕೆ ಸಿಲುಕುವುದಿಲ್ಲ.
गतसङ्गस्य मुक्तस्य
ज्ञानावस्थितचेतसः।
यज्ञायाचरतः कर्म
समग्रं प्रविलीयते॥४.२३॥
ಗತಸಂಗಸ್ಯ ಮುಕ್ತಸ್ಯ
ಜ್ಞಾನಾವಸ್ಥಿತಚೇತಸಃ ।
ಯಜ್ಞಾಯಾಚರತಃ ಕರ್ಮ
ಸಮಗ್ರಂ ಪ್ರವಿಲೀಯತೇ ॥ 4-23॥
गतसङ्गस्य मुक्तस्य ज्ञानावस्थितचेतसः।
यज्ञायाचरतः कर्म समग्रं प्रविलीयते॥४.२३॥
ಗತಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ ।
ಯಜ್ಞಾಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ ॥ 4-23॥
- In the case of a person
Who is bereft of attachment,
Who is liberated,
Whose mind is well established in gnana or knowledge,
And whose actions have taken the form
Of yagna or sacrifice,
The actions of such person
Get completely dissolved.
ಐಹಿಕ ಪ್ರಕೃತಿಯ ಗುಣಗಳಿಗೆ ಅಂಟಿಕೊಳ್ಳದವನೂ, ಮುಕ್ತನೂ ಆತ್ಮಜ್ಞಾನದಲ್ಲಿ ಸ್ಥಿರವಾದ ಅಂತಃಕರಣವುಳ್ಳವನೂ ಮತ್ತು ಕೇವಲ ಯಜ್ಞಕ್ಕೋಸ್ಕರವಾಗಿ ಕರ್ಮವನ್ನು ಆಚರಿಸುತ್ತಿರುವವನೂ ಆದ ಯೋಗಿಯ ಸಮಗ್ರ ಕರ್ಮವು ಪೂರ್ಣವಾಗಿ ವಿಲೀನವಾಗುತ್ತದೆ.
ब्रह्मार्पणं ब्रह्म हविः
ब्रह्माग्नौ ब्रह्मणा हुतम्।
ब्रह्मैव तेन गन्तव्यं
ब्रह्मकर्मसमाधिना॥४.२४॥
ಬ್ರಹ್ಮಾರ್ಪಣಂ ಬ್ರಹ್ಮ ಹವಿಃ
ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ ।
ಬ್ರಹ್ಮೈವ ತೇನ ಗಂತವ್ಯಂ
ಬ್ರಹ್ಮಕರ್ಮಸಮಾಧಿನಾ ॥ 4-24॥
ब्रह्मार्पणं ब्रह्म हविर्ब्रह्माग्नौ ब्रह्मणा हुतम्।
ब्रह्मैव तेन गन्तव्यं ब्रह्मकर्मसमाधिना॥४.२४॥
ಬ್ರಹ್ಮಾರ್ಪಣಂ ಬ್ರಹ್ಮ ಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ ।
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ ॥ 4-24॥
- Brahman is everything
For the yagna or sacrifice
that he performs.
The instruments he uses are Brahman;
The oblation he makes is Brahman;
The fire is also Brahman;
The perfomer and the performance
are both Brahman;
And with Brahman-sense he does the act;
Such a person surely ends up
Attaining the State of Brahman.
ಯಜ್ಞದಲ್ಲಿ ಆಹುತಿಯೆಂಬ ಅರ್ಪಣಕ್ರಿಯೆ ಬ್ರಹ್ಮ; ಯಜ್ಞಪರಿಕರಗಳು ಬ್ರಹ್ಮ; ಯಜ್ಞಾಜ್ಞಿಯು ಬ್ರಹ್ಮ;
ಯಜ್ಞ ಕರ್ತೃವು ಬ್ರಹ್ಮ; ಯಜ್ಞಕ್ರಿಯೆಯೂ ಬ್ರಹ್ಮ; ಪುರುಷನು ಆಚರಿಸುವ ಯಜ್ಞದಲ್ಲಿ ಪ್ರತಿಯೊಂದೂ
ಬ್ರಹ್ಮವೇ! ಮತ್ತು ಕರ್ಮದಲ್ಲಿ ಬ್ರಹ್ಮಬುದ್ಧಿಯುಳ್ಳ ಪುರುಷನು ಪಡೆಯುವ ಫಲವೂ ಸಹ ಬ್ರಹ್ಮವೇ!
ಅಂದರೆ ಆತ ಬ್ರಹ್ಮನನ್ನೇ ಹೊಂದುತ್ತಾನೆ.
दैवमेवापरे यज्ञं
योगिनः पर्युपासते।
ब्रह्माग्नावपरे यज्ञं
यज्ञेनैवोपजुह्वति॥४.२५॥
ದೈವಮೇವಾಪರೇ ಯಜ್ಞಂ
ಯೋಗಿನಃ ಪರ್ಯುಪಾಸತೇ ।
ಬ್ರಹ್ಮಾಗ್ನಾವಪರೇ ಯಜ್ಞಂ
ಯಜ್ಞೇನೈವೋಪಜುಹ್ವತಿ ॥ 4-25॥
दैवमेवापरे यज्ञं योगिनः पर्युपासते।
ब्रह्माग्नावपरे यज्ञं यज्ञेनैवोपजुह्वति॥४.२५॥
ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ ।
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ ॥ 4-25॥
- Some people who practise Karma Yoga
Worship several devas or deities
And make several offerings to them
By performing a yagna;
This is called Karma Yagna.
Some others make the yagna itself
An offering into the fire of Brahman.
This is called Gnana Yagna.
ಕರ್ಮಯೋಗವನ್ನು ಆಚರಿಸುವ ಕೆಲವರು ಹಲವು ದೈವಗಳನ್ನು ಪೂಜಿಸಿ, ಯಜ್ಞವನ್ನಾಚರಿಸಿ ಹವಿಸ್ಸನ್ನು ಅರ್ಪಿಸುತ್ತಾರೆ. ಇದನ್ನು ಕರ್ಮಯಜ್ಞವೆಂದು ಕರೆಯಲಾಗುತ್ತದೆ. ಮತ್ತೆ ಕೆಲವರು ಬ್ರಹ್ಮನೆಂಬ ಅಗ್ನಿಗೆ ಯಜ್ಞವನ್ನೇ ಆಹುತಿಯನ್ನಾಗಿ ಅರ್ಪಿಸುತ್ತಾರೆ. ಇದನ್ನು ಜ್ಞಾನ ಯಜ್ಞ ಎಂದು ಕರೆಯುತ್ತಾರೆ. ಇದರರ್ಥ ಆತ್ಮನೇ ಬ್ರಹ್ಮ ಎಂಬುದಾಗಿದೆ.
श्रोत्रादीनिन्द्रियाण्यन्ये
सम्यमाग्निषु जुह्वति।
शब्दादीन्विषयानन्ये
इन्द्रियाग्निषु जुह्वति॥४.२६॥
ಶ್ರೋತ್ರಾದೀನೀಂದ್ರಿಯಾಣ್ಯನ್ಯೇ
ಸಂಯಮಾಗ್ನಿಷು ಜುಹ್ವತಿ ।
ಶಬ್ದಾದೀನ್ವಿಷಯಾನನ್ಯೇ
ಇಂದ್ರಿಯಾಗ್ನಿಷು ಜುಹ್ವತಿ ॥ 4-26॥
श्रोत्रादीनिन्द्रियाण्यन्ये सम्यमाग्निषु जुह्वति।
शब्दादीन्विषयानन्ये इन्द्रियाग्निषु जुह्वति॥४.२६॥
ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ ।
ಶಬ್ದಾದೀನ್ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ ॥ 4-26॥
- Some others make an offering
Of their senses like seeing, hearing, etc.
Into the fire of restraint;
While some others offer
The sense objects like sound, touch, etc.
Into the fire of senses.
ಮತ್ತೆ ಕೆಲವರು ಶ್ರವಣ, ದೃಷ್ಟಿ ಇತ್ಯಾದಿ ಶ್ರೋತ್ರಾದಿ ಇಂದ್ರಿಯಗಳನ್ನು ಸಂಯಮವೆಂಬ ಅಗ್ನಿಯಲ್ಲಿ
ಹೋಮ ಮಾಡುತ್ತಾರೆ. ಅಂದರೆ ಇಂದ್ರಿಯ ಸಂಯಮವನ್ನು ಸಾಧಿಸುತ್ತಾರೆ. ಇನ್ನು ಕೆಲವರು ಶಬ್ದ,
ಸ್ಪರ್ಶ ಇತ್ಯಾದಿ ಶಬ್ದಾದಿ ವಿಷಯಗಳನ್ನು ಇಂದ್ರಿಯಗಳೆಂಬ ಅಗ್ನಿಯಲ್ಲಿ ಹೋಮ ಮಾಡುತ್ತಾರೆ.
ಅಂದರೆ ಯೋಗ್ಯ ರೀತಿಯಲ್ಲಿ ವಿಷಯೋಪ ಭೋಗ ಸಾಧಿಸುತ್ತಾರೆ.
सर्वाणीन्द्रियकर्माणि
प्राणकर्माणि चापरे।
आत्मसंयमयोगाग्नौ
जुह्वति ज्ञानदीपिते॥४.२७॥
ಸರ್ವಾಣೀಂದ್ರಿಯಕರ್ಮಾಣಿ
ಪ್ರಾಣಕರ್ಮಾಣಿ ಚಾಪರೇ ।
ಆತ್ಮಸಂಯಮಯೋಗಾಗ್ನೌ
ಜುಹ್ವತಿ ಜ್ಞಾನದೀಪಿತೇ ॥ 4-27॥
सर्वाणीन्द्रियकर्माणि प्राणकर्माणि चापरे।
आत्मसंयमयोगाग्नौ जुह्वति ज्ञानदीपिते॥४.२७॥
ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ ।
ಆತ್ಮಸಂಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ ॥ 4-27॥
- Some make the offering
Of the activities of the senses
And the activities of the vital breaths,
The pancha pranas,
Into the fire of self restraint
That is kindled by gnana.
ಮತ್ತೆ ಕೆಲವರು ಇಂದ್ರಿಯ ಕ್ರಿಯೆಗಳನ್ನೂ ಮತ್ತು ಪ್ರಾಣ ಕ್ರಿಯೆಗಳನ್ನೂ, ಅಂದರೆ ಪಂಚಪ್ರಾಣಗಳನ್ನೂ ಜ್ಞಾನದಿಂದ ಪ್ರದೀಪ್ತವಾದ ಆತ್ಮಾನುಸಂಧಾನವೆಂಬ ಆತ್ಮ ಸಂಯಮದ ಯೋಗಾಗ್ನಿಯಲ್ಲಿ ಹೋಮ ಮಾಡುತ್ತಾರೆ.
द्रव्ययज्ञास्तपोयज्ञा:
योगयज्ञास्तथापरे।
स्वाध्यायज्ञानयज्ञाश्च
यतयः संशितव्रताः॥४.२८॥
ದ್ರವ್ಯಯಜ್ಞಾಸ್ತಪೋಯಜ್ಞಾ
ಯೋಗಯಜ್ಞಾಸ್ತಥಾಪರೇ ।
ಸ್ವಾಧ್ಯಾಯಜ್ಞಾನಯಜ್ಞಾಶ್ಚ
ಯತಯಃ ಸಂಶಿತವ್ರತಾಃ ॥ 4-28॥
द्रव्ययज्ञास्तपोयज्ञा योगयज्ञास्तथापरे।
स्वाध्यायज्ञानयज्ञाश्च यतयः संशितव्रताः॥४.२८॥
ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾಪರೇ ।
ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ ॥ 4-28॥
- Some other varieties of yagna include
Dravya yagna,
Wherein material things
Like food, land, etc.
Are given away as daana;
Tapo yagna,
In which one’s tapas or penance
Is made into an offering;
Yoga yagna consists of spiritual exercises
Like pranayama and pratyaahaara
Turned into offerings;
Some others make an offering
Of the knowledge of scriptural studies,
Obtained with steady, firm dedication, —
This goes by the name Gnana yagna.
ಆಹಾರ, ಭೂಮಿ ಇತ್ಯಾದಿ ವಸ್ತುಗಳನ್ನು ದಾನದ ರೂಪದಲ್ಲಿ ನೀಡುವ ದ್ರವ್ಯಯಜ್ಜ್ಞವನ್ನು ಕೆಲವರು ಮಾಡುವರು. ತಮ್ಮ ತಪೋಶಕ್ತಿಯನ್ನು ಧಾರೆಯೆರೆಯುವ ತಪೋಯಜ್ಞವನ್ನು ಹಲವರು ಆಚರಿಸುವರು. ಮತ್ತೆ ಕೆಲವರು ಆಧ್ಯಾತ್ಮಿಕ ಆಚರಣೆಗಳಾದ ಪ್ರಾಣಾಯಾಮ ಮತ್ತು ಪ್ರತ್ಯಾಹಾರಗಳನ್ನು ನೀಡುವ ಯೋಗ ಯಜ್ಞವನ್ನು ಮಾಡುವರು. ಶಾಸ್ತ್ರಗಳಲ್ಲಿ ಜ್ಞಾನವನ್ನು ವ್ರತದಂತೆ ಗ್ರಹಿಸಿ ಜ್ನಾನಯಜ್ಞವನ್ನುಆಚರಿಸುವವರು, ಸ್ವಾಧ್ಯಾಯರೂಪವಾದ ಮತ್ತು ಜ್ಞಾನ ರೂಪವಾದ ಯಜ್ಞಗಳನ್ನು ಮಾಡುವ ಇವರೆಲ್ಲರೂ ಧೃಢವ್ರತರಾದ ಯತಿಗಳು.
अपाने जुह्वति प्राणं
प्राणेऽपानं तथापरे।
प्राणापानगती रुद्ध्वा
प्राणायामपरायणाः॥४.२९॥
ಅಪಾನೇ ಜುಹ್ವತಿ ಪ್ರಾಣಂ
ಪ್ರಾಣೇಽಪಾನಂ ತಥಾಪರೇ ।
ಪ್ರಾಣಾಪಾನಗತೀ ರುದ್ಧ್ವಾ
ಪ್ರಾಣಾಯಾಮಪರಾಯಣಾಃ ॥ 4-29॥
अपाने जुह्वति प्राणं प्राणेऽपानं तथापरे।
प्राणापानगती रुद्ध्वा प्राणायामपरायणाः॥४.२९॥
ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇಽಪಾನಂ ತಥಾಪರೇ ।
ಪ್ರಾಣಾಪಾನಗತೀ ರುದ್ಧ್ವಾ ಪ್ರಾಣಾಯಾಮಪರಾಯಣಾಃ ॥ 4-29॥
- Some yogis perform the yagna
Called Yoga yagna
Through pranayama or breath-control.
They sacrifice prana, in-breaath,
Into apana, out-breath,
Making the puraka.
They sacrifice apana into prana,
Making the rechaka.
Thus by regulating both prana and apana,
They reach a state of kumbhaka.
ಕೆಲವು ಯೋಗಿಗಳು ಪ್ರಾಣಾಯಾಮದ ಮೂಲಕ ಯೋಗ ಯಜ್ಞವನ್ನು ಆಚರಿಸುತ್ತಾರೆ. ಅವರು ಅಪಾನವಾಯುವಿನಲ್ಲಿ ಪ್ರಾಣವಾಯುವನ್ನೂ, ಪ್ರಾಣವಾಯುವಿನಲ್ಲಿ ಅಪಾನವಾಯುವನ್ನೂ ರೇಚಕ ಮಾಡಿ ಹೋಮ ಮಾಡುತ್ತಾರೆ. ಮತ್ತೆ ಕೆಲವರು ಪ್ರಾಣ ಅಂದರೆ ಉಚ್ಛ್ವಾಸ ಮತ್ತು ಅಪಾನ ಅಂದರೆ ಪೂರಕವನ್ನು ಮಾಡಿ, ಪ್ರಾಣಾಪಾನಗಳ ಗತಿಗಳೆರಡನ್ನೂ ನಿರೋಧಿಸಿ ಕುಂಭಕವೆಂಬ ಸ್ಥಿತಿಯನ್ನು ತಲುಪುತ್ತಾರೆ.
अपरे नियताहाराः
प्राणान्प्राणेषु जुह्वति।
सर्वेऽप्येते यज्ञविदो
यज्ञक्षपितकल्मषाः॥४.३०॥
ಅಪರೇ ನಿಯತಾಹಾರಾಃ
ಪ್ರಾಣಾನ್ಪ್ರಾಣೇಷು ಜುಹ್ವತಿ ।
ಸರ್ವೇಽಪ್ಯೇತೇ ಯಜ್ಞವಿದೋ
ಯಜ್ಞಕ್ಷಪಿತಕಲ್ಮಷಾಃ ॥ 4-30॥
अपरे नियताहाराः प्राणान्प्राणेषु जुह्वति।
सर्वेऽप्येते यज्ञविदो यज्ञक्षपितकल्मषाः॥४.३०॥
ಅಪರೇ ನಿಯತಾಹಾರಾಃ ಪ್ರಾಣಾನ್ಪ್ರಾಣೇಷು ಜುಹ್ವತಿ ।
ಸರ್ವೇಽಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ ॥ 4-30॥
- Others, by regulating their food intake,
Offer their vital breaths as oblations
Into the vital breaths.
All these that are good at performing yagnas
Thus get absolved of all their sins
By the performance of yagnas.
ಇನ್ನು ಕೆಲವರು ನಿಯಮಿತವಾದ ಆಹಾರವುಳ್ಳವರಾಗಿ ಪ್ರಾಣಗಳೆಂಬ ವಾಯುಗಳನ್ನು
ಪ್ರಾಣವಾಯುಗಳಲ್ಲಿಯೇ ಹೋಮ ಮಾಡುತ್ತಾರೆ. ಮೇಲೆ ಹೇಳಿದ ಯಜ್ಞವೇತ್ತರೆಲ್ಲರೂ, ಆಯಾ
ಯಜ್ಞಗಳಿಂದ ತಮ್ಮ ಪಾಪವನ್ನು ಹೋಗಲಾಡಿಸಿಕೊಳ್ಳುತ್ತಾರೆ.
यज्ञशिष्टामृतभुज:
यान्ति ब्रह्म सनातनम्।
नायं लोकोऽस्त्ययज्ञस्य
कुतोन्यः कुरुसत्तम॥४.३१॥
ಯಜ್ಞಶಿಷ್ಟಾಮೃತಭುಜಃ
ಯಾಂತಿ ಬ್ರಹ್ಮ ಸನಾತನಮ್ ।
ನಾಯಂ ಲೋಕೋಽಸ್ತ್ಯಯಜ್ಞಸ್ಯ
ಕುತೋಽನ್ಯಃ ಕುರುಸತ್ತಮ ॥ 4-31॥
यज्ञशिष्टामृतभुजो यान्ति ब्रह्म सनातनम्।
नायं लोकोऽस्त्ययज्ञस्य कुतोन्यः कुरुसत्तम॥४.३१॥
ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್ ।
ನಾಯಂ ಲೋಕೋಽಸ್ತ್ಯಯಜ್ಞಸ್ಯ ಕುತೋಽನ್ಯಃ ಕುರುಸತ್ತಮ ॥ 4-31॥
- They perform various yagnas
And partake of the remnant,
Which is the very amruta.
It helps them to attain
The Eternal Brahman.
O the best of Kuru Princes,
Those that do not perform the yagnas,
And thereby do not eat the amruta remnant
Cannot win even this world,
Not to speak of the other worlds.
ಹೇ ಕುರುಕುಲೋತ್ತಮನೇ! ಹೀಗೆ ವಿವಿಧ ರೀತಿಯ ಯಜ್ಞಗಳನ್ನು ಆಚರಿಸಿ ಅಮೃತವೆಂಬ ಹೆಸರುಳ್ಳ ಯಜ್ಞದ ಶೇಷವನ್ನು ಯಾರು ಸೇವಿಸುತ್ತಾರೆಯೋ ಅವರು ಸನಾತನವಾದ ಬ್ರಹ್ಮವನ್ನು ಹೊಂದುತ್ತಾರೆ. ಯಜ್ಞವನ್ನು ಮಾಡದವನಿಗೆ ಮತ್ತು ಯಜ್ಞಶೇಷವಾದ ಅಮೃತವನ್ನು ಸೇವಿಸದವನಿಗೆ, ಈ ಲೋಕವನ್ನು ಜಯಿಸಲಾಗದವನಿಗೆ ಪರಲೋಕದ ಮಾತೆಲ್ಲಿ?
एवं बहुविधा यज्ञा:
वितता ब्रह्मणो मुखे।
कर्मजान्विद्धि तान्सर्वान्
एवं ज्ञात्वा विमोक्ष्यसे॥४.३२॥
ಏವಂ ಬಹುವಿಧಾ ಯಜ್ಞಾ
ವಿತತಾ ಬ್ರಹ್ಮಣೋ ಮುಖೇ ।
ಕರ್ಮಜಾನ್ವಿದ್ಧಿ ತಾನ್ಸರ್ವಾನ್
ಏವಂ ಜ್ಞಾತ್ವಾ ವಿಮೋಕ್ಷ್ಯಸೇ ॥ 4-32॥
एवं बहुविधा यज्ञा वितता ब्रह्मणो मुखे।
कर्मजान्विद्धि तान्सर्वानेवं ज्ञात्वा विमोक्ष्यसे॥४.३२॥
ಏವಂ ಬಹುವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ ।
ಕರ್ಮಜಾನ್ವಿದ್ಧಿ ತಾನ್ಸರ್ವಾನೇವಂ ಜ್ಞಾತ್ವಾ ವಿಮೋಕ್ಷ್ಯಸೇ ॥ 4-32॥
- In this way,
Many kinds of yagnas
Have been stated in the Vedas.
Know that they are all born of Karma,
Born of Actions.
When you know them to be so,
You will get liberated.
ಈ ರೀತಿ ವೇದಗಳಲ್ಲಿ ನಾನಾ ವಿಧವಾದ ಯಜ್ಞಗಳನ್ನು ವಿಸ್ತಾರವಾಗಿ ವರ್ಣಿಸಲ್ಪಟ್ಟಿದೆ. ಅವುಗಳೆಲ್ಲವೂ ಕರ್ಮದಿಂದ ಹುಟ್ಟಿದವುಗಳೆಂದು ತಿಳಿ. ಈ ಪ್ರಕಾರವಾಗಿ ತತ್ವದಿಂದ ತಿಳಿದು ಅವುಗಳ ಅನುಷ್ಠಾನದ ಮೂಲಕ ನೀನು ಕರ್ಮಬಂಧನದಿಂದ ಸರ್ವಥಾ ಮುಕ್ತನಾಗುವೆ.
श्रेयान्द्रव्यमयाद् यज्ञात्
ज्ञानयज्ञः परन्तप।
सर्वं कर्माखिलं पार्थ
ज्ञाने परिसमाप्यते॥४.३३॥
ಶ್ರೇಯಾಂದ್ರವ್ಯಮಯಾದ್ಯಜ್ಞಾತ್
ಜ್ಜ್ಞಾನಯಜ್ಞಃ ಪರಂತಪ ।
ಸರ್ವಂ ಕರ್ಮಾಖಿಲಂ ಪಾರ್ಥ
ಜ್ಞಾನೇ ಪರಿಸಮಾಪ್ಯತೇ ॥ 4-33॥
श्रेयान्द्रव्यमयाद्यज्ञाज्ज्ञानयज्ञः परन्तप।
सर्वं कर्माखिलं पार्थ ज्ञाने परिसमाप्यते॥४.३३॥
ಶ್ರೇಯಾಂದ್ರವ್ಯಮಯಾದ್ಯಜ್ಞಾಜ್ಜ್ಞಾನಯಜ್ಞಃ ಪರಂತಪ ।
ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ ॥ 4-33॥
Offering of knowledge as oblation
Into the fire of Brahman –
This is Gnana Yagna,
Which is superior to the Dravya Yagna
Performed with the help of materials
Like rice, twigs, etc.
Arjuna, all actions,
Along with their results,
Culminate in the Knowledge of the Self.
ಎಲೈ ಪರಂತಪನಾದ ಅರ್ಜುನನೇ! ಜ್ಞಾನವನ್ನು ಹವಿಸ್ಸಾಗಿ ಬ್ರಹ್ಮನೆಂಬ ಅಗ್ನಿಗೆ ಅರ್ಪಿಸುವುದೇ
ಜ್ಞಾನಯಜ್ಞ. ಲೌಕಿಕ ವಸ್ತುಗಳಾದ ಅಕ್ಕಿ, ಸಮಿತ್ತು ಇತ್ಯಾದಿಗಳ ಸಹಾಯದಿಂದ ಆಚರಿಸುವ
ದ್ರವ್ಯಯಜ್ಞಕ್ಕಿಂತಲೂ ಜ್ಞಾನಯಜ್ಞವು ಶ್ರೇಷ್ಠವಾಗಿರುತ್ತದೆ. ಎಲ್ಲಾ ಕರ್ಮಗಳಿಗೂ ಜ್ಞಾನವೇ ಪರಮ
ಗಮ್ಯಸ್ಥಾನ, ಹಾಗಾಗಿ ಎಲ್ಲ ಕರ್ಮವೂ ಜ್ಞಾನದಲ್ಲಿ ನಿಶ್ಶೇಷವಾಗಿ ಪರಿಸಮಾಪ್ತಿಯನ್ನು ಹೊಂದುತ್ತದೆ.
तद्विद्धि प्रणिपातेन
परिप्रश्नेन शेवया।
उपदेश्यन्ति ते ज्ञानं
ज्ञानिनस्तत्वदर्शिनः॥४.३४॥
ತದ್ವಿದ್ಧಿ ಪ್ರಣಿಪಾತೇನ
ಪರಿಪ್ರಶ್ನೇನ ಸೇವಯಾ ।
ಉಪದೇಕ್ಷ್ಯಂತಿ ತೇ ಜ್ಞಾನಂ
ಜ್ಞಾನಿನಸ್ತತ್ತ್ವದರ್ಶಿನಃ ॥ 4-34॥
तद्विद्धि प्रणिपातेन परिप्रश्नेन शेवया।
उपदेश्यन्ति ते ज्ञानं ज्ञानिनस्तत्वदर्शिनः॥४.३४॥
ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ ।
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ ॥ 4-34॥
- You have to acquire that knowledge
From the Gnanis,
The knowers of the Ultimate Truth.
Approach them with all humility,
Make obeisance to them,
Question them exhaustively
And render service to them.
ಆ ಜ್ಞಾನವನ್ನು ನೀನು ತತ್ವದರ್ಶಿಗಳಾದ, ಅಂತಿಮ ಸತ್ಯದ ಸಾಕ್ಷಾತ್ಕಾರವಾದ ಜ್ಞಾನಿಗಳ ಬಳಿಗೆ ಹೋಗಿ ತಿಳಿದುಕೋ. ಅವರನ್ನು ವಿನಯ ಮತ್ತು ನಮ್ರತೆಯಿಂದ ಸಂಪರ್ಕಿಸು. ಅವರಲ್ಲಿ ವಿಧೇಯತೆಯನ್ನು ತೋರು. ಅವರನ್ನು ಆಶ್ರಯಿಸಿ ಸೇವೆ ಮಾಡಿ ವಿನಯದಿಂದ ಸಮಗ್ರವಾಗಿ ಪ್ರಶ್ನೆ ಮಾಡಿ ಆ ಜ್ಞಾನವನ್ನು ತಿಳಿದುಕೋ. ಅವರು ನಿನಗೆ ಜ್ಞಾನವನ್ನು ಉಪದೇಶ ಮಾಡುವರು.
यज्ज्ञात्वा न पुनर्मोहं
एवं यास्यसि पाण्डव।
येन भूतान्यशेषेण
द्रक्ष्यस्यात्मन्यथो मयि॥४.३५॥
ಯಜ್ಜ್ಞಾತ್ವಾ ನ ಪುನರ್ಮೋಹಂ
ಏವಂ ಯಾಸ್ಯಸಿ ಪಾಂಡವ ।
ಯೇನ ಭೂತಾನ್ಯಶೇಷೇಣ
ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ ॥ 4-35॥
यज्ज्ञात्वा न पुनर्मोहं एवं यास्यसि पाण्डव।
येन भूतान्यशेषेण द्रक्ष्यस्यात्मन्यथो मयि॥४.३५॥
ಯಜ್ಜ್ಞಾತ್ವಾ ನ ಪುನರ್ಮೋಹಂ ಏವಂ ಯಾಸ್ಯಸಿ ಪಾಂಡವ ।
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ ॥ 4-35॥
- Arjuna,
When you attain this Knowledge of Brahman,
You will never get into such delusion
As you are now in;
Having attained that Gnana,
You will behold every being,
Both animate and inanimate,
In yourself as well as in Me.
ಅರ್ಜುನಾ! ಬ್ರಹ್ಮನ ಈ ಜ್ಞಾನವನ್ನು ನೀನು ಪಡೆದುಕೊಂಡರೆ ನಿನಗೆ ಪುನಃ ಈಗಿರುವಂತಹ
ಮೋಹವುಂಟಾಗುವುದಿಲ್ಲ. ಜ್ಞಾನವನ್ನು ಹೊಂದಿದ ನೀನು ಸಮಸ್ತ ಭೂತಗಳನ್ನೂ, ಮೊದಲು
ನಿನ್ನಲ್ಲಿಯೂ ನಂತರ ನನ್ನಲ್ಲಿಯೂ ನೋಡಬಲ್ಲೆ.
अपि चेदसि पापेभ्यः
सर्वेभ्यः पापकृत्तमः।
सर्वं ज्ञानप्लवेनैव
वृजिनं सन्तरिष्यसि॥४.३६॥
ಅಪಿ ಚೇದಸಿ ಪಾಪೇಭ್ಯಃ
ಸರ್ವೇಭ್ಯಃ ಪಾಪಕೃತ್ತಮಃ ।
ಸರ್ವಂ ಜ್ಞಾನಪ್ಲವೇನೈವ
ವೃಜಿನಂ ಸಂತರಿಷ್ಯಸಿ ॥ 4-36॥
अपि चेदसि पापेभ्यः सर्वेभ्यः पापकृत्तमः।
सर्वं ज्ञानप्लवेनैव वृजिनं सन्तरिष्यसि॥४.३६॥
ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ ।
ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ ॥ 4-36॥
- Though you happen to be
The most sinful among all the sinners,
This Gnana,
The Knowledge of the Brahman,
Be assured, like a raft,
Helps you to cross over
The sea of sins.
ಒಂದು ವೇಳೆ ನೀನು ಎಲ್ಲಾ ಪಾಪಿಗಳಿಗಿಂತಲೂ ಹೆಚ್ಚು ಪಾಪವನ್ನು ಮಾಡಿದವನಾಗಿದ್ದರೂ, ಬ್ರಹ್ಮನನ್ನು ಅರಿತುಕೊಳ್ಳುವ ಈ ಜ್ಞಾನವೆಂಬ ನಾವೆಯ ಮೂಲಕ ಪಾಪವೆಂಬ ಸಮುದ್ರವನ್ನು ನಿಸ್ಸಂದೇಹವಾಗಿ, ಅನಾಯಾಸವಾಗಿ ದಾಟಿ ಪಾರಾಗುವೆ.
यथैधांसि समिद्धोऽग्नि:
भस्मसात्कुरुतेऽर्जुन।
ज्ञानाग्निः सर्वकर्माणि
भस्मसात्कुरुते तथा॥४.३७॥
ಯಥೈಧಾಂಸಿ ಸಮಿದ್ಧೋಽಗ್ನಿಃ
ಭಸ್ಮಸಾತ್ಕುರುತೇಽರ್ಜುನ ।
ಜ್ಞಾನಾಗ್ನಿಃ ಸರ್ವಕರ್ಮಾಣಿ
ಭಸ್ಮಸಾತ್ಕುರುತೇ ತಥಾ ॥ 4-37॥
यथैधांसि समिद्धोऽग्निः भस्मसात्कुरुतेऽर्जुन।
ज्ञानाग्निः सर्वकर्माणि भस्मसात्कुरुते तथा॥४.३७॥
ಯಥೈಧಾಂಸಿ ಸಮಿದ್ಧೋಽಗ್ನಿಃ ಭಸ್ಮಸಾತ್ಕುರುತೇಽರ್ಜುನ ।
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇ ತಥಾ ॥ 4-37॥
- Arjuna,
Just as blazing fire reduces
Firewood to ashes,
So the fire of knowledge
Burns all sins to ashes.
ಅರ್ಜುನಾ! ಧಗಧಗನೆ ಪ್ರಜ್ವಲಿಸುತ್ತಾ ಉರಿಯುವ ಅಗ್ನಿಯು ಸೌದೆಯನ್ನು ಹೇಗೆ ಸುಟ್ಟು ಬೂದಿ ಮಾಡುತ್ತದೆಯೋ ಹಾಗೆಯೇ ಜ್ಞಾನವೆಂಬ ಅಗ್ನಿಯು ಎಲ್ಲ ಪಾಪರೂಪಿ ಕರ್ಮಗಳನ್ನು ಸುಟ್ಟು ಭಸ್ಮ ಮಾಡಿಬಿಡುವುದು.
न हि ज्ञानेन सदृशं
पवित्रमिह विद्यते।
तत्स्वयं योगसंसिद्धः
कालेनात्मनि विन्दति॥४.३८॥
ನ ಹಿ ಜ್ಞಾನೇನ ಸದೃಶಂ
ಪವಿತ್ರಮಿಹ ವಿದ್ಯತೇ ।
ತತ್ಸ್ವಯಂ ಯೋಗಸಂಸಿದ್ಧಃ
ಕಾಲೇನಾತ್ಮನಿ ವಿಂದತಿ ॥ 4-38॥
न हि ज्ञानेन सदृशं पवित्रमिह विद्यते।
तत्स्वयं योगसंसिद्धः कालेनात्मनि विन्दति॥४.३८॥
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ।
ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ ॥ 4-38॥
- There is nothing in this world
As pure and precious as knowledge
That is well-established and perfected in yoga.
The seeker of liberation,
In course of time,
Attains the knowledge of Brahman
In himself.
ಈ ಜಗತ್ತಿನಲ್ಲಿ ಆಧ್ಯಾತ್ಮಿಕ ಜ್ಞಾನದಷ್ಟು ಪವಿತ್ರವಾದದ್ದು ಮತ್ತು ಪರಿಶುದ್ಧವಾದದ್ದೂ ಬೇರೆ ಯಾವುದೂ ಇಲ್ಲ. ಇಂತಹ ಜ್ಞಾನವು ಯೋಗದ ಅನುಭಾವದಿಂದ ಪರಿಪಕ್ವವಾದದ್ದು. ಯೋಗದಿಂದ ಸಂಸಿದ್ಧಿಯನ್ನು ಹೊಂದಿದವನು ಕಾಲಕ್ರಮದಲ್ಲಿ ಬ್ರಹ್ಮಜ್ಞಾನವನ್ನು ತನ್ನಲ್ಲಿ ತಾನೇ ಹೊಂದುವನು.
श्रद्धावांल्लभते ज्ञानं
तत्परः सम्यतेन्द्रियः।
ज्ञानं लब्ध्वा परां शान्तिं
अचिरेणाधिगच्छति॥४.३९॥
ಶ್ರದ್ಧಾವಾँಲ್ಲಭತೇ ಜ್ಞಾನಂ
ತತ್ಪರಃ ಸಂಯತೇಂದ್ರಿಯಃ ।
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಂ
ಅಚಿರೇಣಾಧಿಗಚ್ಛತಿ ॥ 4-39॥
श्रद्धावांल्लभते ज्ञानं तत्परः सम्यतेन्द्रियः।
ज्ञानं लब्ध्वा परां शान्तिं अचिरेणाधिगच्छति॥४.३९॥
ಶ್ರದ್ಧಾವಾँಲ್ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ ।
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಂ ಅಚಿರೇಣಾಧಿಗಚ್ಛತಿ ॥ 4-39॥
- It is by virtue
Of possessing faith,
By being intent
And by gaining control over senses
That one earns wisdom or gnana.
Having obtained it, before long,
He attains Supreme Peace.
ಶ್ರದ್ಧೆಯುಳ್ಳವನೂ, ತತ್ಪರನೂ, ಜಿತೇಂದ್ರಿಯನೂ, ಸಾಧನಾಪರಾಯಣನೂ ಆದ ಮುಮುಕ್ಷುವು ಜ್ಞಾನವನ್ನು ಹೊಂದುತ್ತಾನೆ. ಜ್ಞಾನವನ್ನು ಪಡೆದು ಶೀಘ್ರವಾಗಿ ವಿಳಂಬವಿಲ್ಲದೇ ಭಗವತ್ಪ್ರಾಪ್ತಿ ರೂಪೀ ಪರಮ ಆಧ್ಯಾತ್ಮಿಕ ಶಾಂತಿಯನ್ನು ಪಡೆಯುತ್ತಾನೆ.
अज्ञश्चाश्रद्दधानश्च
संशयात्मा विनस्यति।
नायंलोकोऽस्ति न परः
न सुखं संशयात्मनः॥४.४०॥
ಅಜ್ಞಶ್ಚಾಶ್ರದ್ದಧಾನಶ್ಚ
ಸಂಶಯಾತ್ಮಾ ವಿನಶ್ಯತಿ ।
ನಾಯಂ ಲೋಕೋಽಸ್ತಿ ನ ಪರಃ
ನ ಸುಖಂ ಸಂಶಯಾತ್ಮನಃ ॥ 4-40॥
अज्ञश्चाश्रद्दधानश्च संशयात्मा विनस्यति।
नायंलोकोस्ति न परो न सुखं संशयात्मनः॥४.४०॥
ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ ।
ನಾಯಂ ಲೋಕೋಽಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ ॥ 4-40॥
- One who is ignorant,
Doubting and unfaithful,
Would surely perish.
There is no happiness
For a skeptical person
Either here in this world
Or in the next one.
ಅಜ್ಞಾನಿಯೂ, ಸಂಶಯಾತ್ಮನೂ, ಶ್ರದ್ಧೆ ಇಲ್ಲದವನೂ ಆದ ಮನುಷ್ಯ ಖಂಡಿತವಾಗಿ
ನಾಶಹೊಂದುವನು. ಇಂತಹ ಸಂಶಯಾತ್ಮನಿಗೆ ಇಹದಲ್ಲಿಯೂ ಮತ್ತು ಪರದಲ್ಲಿಯೂ ಸುಖವಿಲ್ಲ.
ಇಲ್ಲಿಗೆ ಉಪನಿಷತ್ತೂ, ಬ್ರಹ್ಮ ವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ
ಶ್ರೀಮದ್ಭಗವದ್ಗೀತೆಯಲ್ಲಿ ಜ್ಞಾನಯೋಗವೆಂಬ ಹೆಸರಿನ ನಾಲ್ಕನೇ ಅಧ್ಯಾಯವು ಮುಗಿದುದು.
योगसन्यस्तकर्माणं
ज्ञानसञ्छिन्नसंशयम्।
आत्मवन्तं न कर्माणि
निबध्नन्ति धनञ्जय॥४.४१॥
ಯೋಗಸಂನ್ಯಸ್ತಕರ್ಮಾಣಂ
ಜ್ಞಾನಸಂಛಿನ್ನಸಂಶಯಮ್ ।
ಆತ್ಮವಂತಂ ನ ಕರ್ಮಾಣಿ
ನಿಬಧ್ನಂತಿ ಧನಂಜಯ ॥ 4-41॥
योगसन्यस्तकर्माणं ज्ञानसञ्छिन्नसंशयम्।
आत्मवन्तं न कर्माणि निबध्नन्ति धनञ्जय॥४.४१॥
ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್ ।
ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ ॥ 4-41॥
- Arjuna,
Actions will not bind
When a person renounces actions
Through yoga,
When the knowledge of Brahman
Shatters all doubts
And when one is alert and vigilant.
ಎಲೈ ಅರ್ಜುನಾ! ಯೋಗದಿಂದ ಕರ್ಮಗಳನ್ನು ತ್ಯಜಿಸಿದವನೂ, ಬ್ರಹ್ಮಜ್ಞಾನದಿಂದ ಸಮಸ್ತ
ಸಂಶಯವನ್ನು ನಾಶಮಾಡಿದವನೂ ಮತ್ತು ಸದಾ ಎಚ್ಚರದಿಂದ ಜಾಗರೂಕರನಾಗಿರುವವನೂ,
ಆತ್ಮವಂತನೂ ಆದ ಪುರುಷನನ್ನು ಕರ್ಮಗಳು ಬಂಧಿಸಲಾರವು.
तस्मादज्ञानसम्भूतं
हृत्स्थं ज्ञानासिनात्मनः।
छित्वैनं संशयं योगं
आतिष्ठोत्तिष्ठ भारत॥४.४२॥
ತಸ್ಮಾದಜ್ಞಾನಸಂಭೂತಂ
ಹೃತ್ಸ್ಥಂ ಜ್ಞಾನಾಸಿನಾತ್ಮನಃ ।
ಛಿತ್ತ್ವೈನಂ ಸಂಶಯಂ ಯೋಗಃ
ಆತಿಷ್ಠೋತ್ತಿಷ್ಠ ಭಾರತ ॥ 4-42॥
तस्मादज्ञानसम्भूतं हृत्स्थं ज्ञानासिनात्मनः।
छित्वैनं संशयं योगमातिष्ठोत्तिष्ठ भारत॥४.४२॥
ತಸ್ಮಾದಜ್ಞಾನಸಂಭೂತಂ ಹೃತ್ಸ್ಥಂ ಜ್ಞಾನಾಸಿನಾತ್ಮನಃ ।
ಛಿತ್ತ್ವೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ ॥ 4-42॥
- Using the sword of knowledge,
Cut down the doubt in your heart
Caused by ignorance.
Take to yoga through renunciation.
Stand up, Arjuna,
And go to fight.
ऒम् तत्सदिति
ಓಂ ತತ್ಸದಿತಿ
श्रीमद्भगवद्गितासू
ಶ್ರೀಮದ್ಭಗವದ್ಗೀತಾಸೂ
उपनिषत्सु
ಉಪನಿಷತ್ಸು
ब्रह्म विद्यायां
ಬ್ರಹ್ಮವಿದ್ಯಾಯಾಂ
यॊगशास्त्रॆ
ಯೋಗಶಾಸ್ತ್ರೇ
श्रीकृष्णार्जुनसंवादॆ
ಶ್ರೀಕೃಷ್ಣಾರ್ಜುನಸಂವಾದೇ
ज्ञानयोगॊ नाम
ಜ್ಞಾನಯೋಗೋ ನಾಮ
चतुर्थोऽद्ध्यायः
ಚತುರ್ಥೋಧ್ಯಾಯಃ
ऒं ततसत्
ಓಂ ತತ್ಸತ್
ಅಜ್ಞಾನದಿಂದ ಹುಟ್ಟಿದ, ನಿನ್ನ ಮನಸ್ಸು ಮತ್ತು ಹೃದಯದಲ್ಲಿ ಅಡಗಿರುವ ಅತ್ಮ ವಿಷಯವಾದ ಸಂಶಯವನ್ನು ಜ್ಞಾನವೆಂಬ ಕತ್ತಿಯಿಂದ ಕತ್ತರಿಸಿ, ಕರ್ಮಯೋಗವನ್ನು ಅನುಷ್ಠಾನ ಮಾಡು. ಎಲೈ ಅರ್ಜುನಾ, ಎದ್ದೇಳು. ಯುದ್ಧಕ್ಕೆ ಸನ್ನದ್ಧನಾಗು.
ಓಂ ತತ್ಸತ್ ಇತಿ
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಜ್ಞಾನಯೋಗವೆಂಬ ಹೆಸರಿನ ನಾಲ್ಕನೆಯ ಅಧ್ಯಾಯವು ಮುಗಿದುದು.