अथ विश्वरूपदर्शनयोगो नाम एकादशोऽध्यायः
Chapter Eleven: Vishvarupadarshana Yoga
Published by LANKA KRISHNA MURTI FOUNDATION
(https://www.facebook.com/lankakrishnamurtifoundation/)
Website (https://krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
अथ विश्वरूपदर्शनयोगो नाम एकादशोऽध्यायः
Chapter Eleven: Vishvarupadarshana Yoga
अर्जुन उवाच
मदनुग्रहाय परमं
गुह्यमध्यात्मसञ्ज्ञितम्।
यत्त्वयोक्तं वचस्तेन
मोहोऽयं विगतो मम॥११.१॥
ಅರ್ಜುನ ಉವಾಚ ।
ಮದನುಗ್ರಹಾಯ ಪರಮಂ
ಗುಹ್ಯಮಧ್ಯಾತ್ಮಸಂಜ್ಞಿತಮ್ ।
ಯತ್ತ್ವಯೋಕ್ತಂ ವಚಸ್ತೇನ
ಮೋಹೋಽಯಂ ವಿಗತೋ ಮಮ ॥ 11-1॥
मदनुग्रहाय परमं गुह्यमध्यात्मसञ्ज्ञितम्।
यत्त्वयोक्तं वचस्तेन मोहोऽयं विगतो मम॥११.१॥
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್ ।
ಯತ್ತ್ವಯೋಕ್ತಂ ವಚಸ್ತೇನ ಮೋಹೋಽಯಂ ವಿಗತೋ ಮಮ ॥ 11-1॥
1. Arjuna said:
Krishna,
In order to favor and bless me,.
You have explained to me
The Supreme Knowledge of the soul
In relation to the Supreme Self,
Which is profound and confidential.
Now my delusion is gone by listening to you.
ಅರ್ಜುನ ಹೇಳಿದನು: ಕೃಷ್ಣ, ನನ್ನನ್ನು ಅನುಗ್ರಹಿಸಿ, ಆಶೀರ್ವದಿಸುವ ಸಲುವಾಗಿ, ಗಾಢ ಚಿಂತನೆಯ ಮತ್ತು ಪರಮ ಗೋಪ್ಯವಾದ, ಪರಮಾತ್ಮನ ಸಂಂಬಂಧವಾದ, ಆತ್ಮನ ಪರಮೋಚ್ಛ ಆಧ್ಯಾತ್ಮಿಕ ಜ್ಞಾನವನ್ನು ನನಗೆ ಬೋಧಿಸಿರುಸುವೆ. ಇದನ್ನು ಆಲಿಸಿದ ನಂತರ ನನ್ನ ಮೋಹಾಂಧಕಾರವು ನಾಶವಾಯಿತು.
भवाप्ययौ हि भूतानां
श्रुतौ विस्तरशो मया।
त्वत्तः कमलपत्राक्ष
माहात्म्यमपि चाव्ययम्॥११.२॥
ಭವಾಪ್ಯಯೌ ಹಿ ಭೂತಾನಾಂ
ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲಪತ್ರಾಕ್ಷ
ಮಾಹಾತ್ಮ್ಯಮಪಿ ಚಾವ್ಯಯಮ್ ॥ 11-2॥
भवाप्ययौ हि भूतानां श्रुतौ विस्तरशो मया।
त्वत्तः कमलपत्राक्ष माहात्म्यमपि चाव्ययम्॥११.२॥
ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ॥ 11-2॥
2. You have described to me, in great detail,
The birth and passing away of all beings.
O Krishna with eyes resembling lotus petals,
I have also heard about your Eternal Grandeur.
ಹೇ ಕೃಷ್ಣಾ, ಕಮಲಗಳ ನೇತ್ರನೇ, ಪ್ರತಿಯೊಂದು ಜೀವಿಯ ಹುಟ್ಟು ಮತ್ತು ಸಾವಿನ ವಿಷಯವನ್ನು ನಿನ್ನಿಂದ ವಿವರವಾಗಿ ಕೇಳಿದೆನು. ಹಾಗೆಯೇ ನೀನು ಹೇಳಿದ ಅಖಂಡವಾದ ನಿನ್ನ ಮಹಾತ್ಮೆಯನ್ನು, ಎಂದೂ ಕೊನೆಯಾಗದ ನಿನ್ನ ವೈಭವಗಳನ್ನು ವಿಸ್ತಾರವಾಗಿ ಕೇಳಿ ಅರ್ಥಮಾಡಿಕೊಂಡಿದ್ದೇನೆ.
एवमेतद्यथात्थ त्वं
आत्मानं परमेश्वर।
द्रष्टुमिच्छामि ते रूपं
ऐश्वरं पुरुषोत्तम॥११.३॥
ಏವಮೇತದ್ಯಥಾತ್ಥ ತ್ವಂ
ಆತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಂ
ಐಶ್ವರಂ ಪುರುಷೋತ್ತಮ ॥ 11-3॥
एवमेतद्यथात्थ त्वं आत्मानं परमेश्वर।
द्रष्टुमिच्छामि ते रूपं ऐश्वरं पुरुषोत्तम॥११.३॥ \
ಏವಮೇತದ್ಯಥಾತ್ಥ ತ್ವಂ ಆತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಂ ಐಶ್ವರಂ ಪುರುಷೋತ್ತಮ ॥ 11-3॥
3. O Supreme Lord,
it is so, indeed,.
as you have described about Yourself.
O Supreme Being,
Yet I would like to see
Your Supreme Cosmic Form
That is Lordly and Majestic.
ಎಲೈ ಪರಮೇಶ್ವರನೇ, ನೀನು ನಿನ್ನನ್ನು ವರ್ಣಿಸಿಕೊಂಡಂತೆ, ಅದು ಸರಿಯಾಗಿ ಹಾಗೆಯೇ ಇದೆ. ಅದನ್ನು ನಿನ್ನ ವಾಸ್ತವ ಸ್ಥಿತಿಯಲ್ಲಿ ನಾನು ಕಾಣುತ್ತಿದ್ದೇನೆ. ಆದರೆ ಹೇ ಪುರುಶೋತ್ತಮನೇ, ನಿನ್ನ ಶ್ರೇಷ್ಥ ಹಾಗೂ ವೈಭವೋಪೇತವಾದ ವಿಶ್ವರೂಪವನ್ನು ನೋಡಲು ಬಯಸುತ್ತೇನೆ.
मन्यसे यदि तच्छक्यं
मया द्रष्टुमिति प्रभो।
योगेश्वर ततो मे त्वं
दर्शयात्मानमव्ययम्॥११.४॥
ಮನ್ಯಸೇ ಯದಿ ತಚ್ಛಕ್ಯಂ
ಮಯಾ ದ್ರಷ್ಟುಮಿತಿ ಪ್ರಭೋ ।
ಯೋಗೇಶ್ವರ ತತೋ ಮೇ ತ್ವಂ
ದರ್ಶಯಾತ್ಮಾನಮವ್ಯಯಮ್ ॥ 11-4॥
मन्यसे यदि तच्छक्यं मया द्रष्टुमिति प्रभो।
योगेश्वर ततो मे त्वं दर्शयात्मानमव्ययम्॥११.४॥
ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ ।
ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಮ್ ॥ 11-4॥
4. O Prabhu, Master of the Universe,
If you think it is possible for me
To see that Form
Then reveal that Eternal Form
Of Yourself to me.
ಓ ಪ್ರಭುವೇ, ಯೋಗೀಶ್ವರನೇ, ನಿನ್ನ ವಿಶ್ವರೂಪವನ್ನು ನೋಡಲು ನನ್ನಿಂದ ಸಾಧ್ಯವಾಗುವುದೆಂದು ನೀನು ಭಾವಿಸುವೆಯಾದರೆ, ಆ ನಿನ್ನ ಅವ್ಯಯ ಸ್ವರೂಪವಾದ, ಅಪರಿಮಿತ ವಿಶ್ವರೂಪ ದರ್ಶನವನ್ನು ನನಗೆ ಮಾಡಿಸು. श्री भगवानुवाच
पस्य मे पार्थ रूपाणि
शतशोऽथ सहस्रशः।
नानाविधानि दिव्यानि
नानावर्णाकृतीनि च॥११.५॥
ಶ್ರೀಭಗವಾನುವಾಚ ।
ಪಶ್ಯ ಮೇ ಪಾರ್ಥ ರೂಪಾಣಿ
ಶತಶೋಽಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ
ನಾನಾವರ್ಣಾಕೃತೀನಿ ಚ ॥ 11-5॥
पस्य मे पार्थ रूपाणि शतशोऽथ सहस्रशः।
नानाविधानि दिव्यानि नानावर्णाकृतीनि च॥११.५॥
ಪಶ್ಯ ಮೇ ಪಾರ್ಥ ರೂಪಾಣಿ ಶತಶೋಽಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ॥ 11-5॥
5. Sri Bhagawan said:
Arjuna, Son of Pruthu or Kunti,
Then behold my Froms in hundreds and thousands,
Of different types, of many colours,
Divine and Extraordinary!
ಶ್ರೀ ಭಗವಾನನು ಹೇಳಿದನು :- ಪೃಥೆ ಅಥವಾ ಕುಂತಿಯ ಮಗನಾದ ಪಾರ್ಥನೇ, ನಾನಾ ವಿಧವಾದ, ದಿವ್ಯವಾದ, ಅನೇಕ ವರ್ಣಗಳುಳ್ಳ ಮತ್ತು ಆಕೃತಿಗಳುಳ್ಳ ಹಾಗೂ ಅಸಾಧಾರಣವಾದ ನನ್ನ ನೂರಾರು ಸಾವಿರಾರು ದಿವ್ಯ ರೂಪಗಳನ್ನು ನೋಡು. पस्यादित्यान्वसून्रुद्रान्
अश्विनौ मरुतस्तथा।
बहून्यदृष्टपूर्वाणि
पस्याश्चर्याणि भारत॥११.६॥
ಪಶ್ಯಾದಿತ್ಯಾನ್ವಸೂನ್ರುದ್ರಾನ್
ಅಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟಪೂರ್ವಾಣಿ
ಪಶ್ಯಾಶ್ಚರ್ಯಾಣಿ ಭಾರತ ॥ 11-6॥
पस्यादित्यान्वसून्रुद्रान् अश्विनौ मरुतस्तथा।
बहून्यदृष्टपूर्वाणि पस्याश्चर्याणि भारत॥११.६॥
ಪಶ್ಯಾದಿತ್ಯಾನ್ವಸೂನ್ರುದ್ರಾನ್ ಅಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ ॥ 11-6॥
6. O Arjuna of Bharata’s clan,
Observe in Me
the Adityas twelve in number,
Vasus in eight foms,
the Eleven Rudras,
Seven Forms of the Wind God, Marut,
and the Twin Aswins.
Also behold other forms, various and wonderful,
not seen so far by you or by anyone!
ಹೇ ಭರತವಂಶೀಯನಾದ ಅರ್ಜುನನೇ! ನನ್ನಲ್ಲಿ ಆದಿತ್ಯರನ್ನು ಅರ್ಥಾತ್ ಅದಿತಿಯ ಹನ್ನೆರಡು ಪುತ್ರರನ್ನು, ಅಷ್ಟವಸುಗಳನ್ನು, ಏಕಾದಶ ರುದ್ರರನ್ನು, ಅವಳಿಜವಳಿಗಳಾದ ಇಬ್ಬರು ಅಷ್ವಿನಿಕುಮಾರರನ್ನು, ವಾಯುದೇವರ ಏಳುರೂಪದ ಮರುತರನ್ನು ನೋಡು. ಹಾಗೆಯೇ ನಿನ್ನಿಂದಾಗಲೀ ಅಥವಾ ಬೇರೆಯಾರಿಂದಾಗಲೀ ನೋಡಲ್ಪಡದ, ಕೇಳಲ್ಪಡದ ಅನೇಕ ಆಶ್ಚರ್ಯಕರ ಅಧ್ಭುತ ರೂಪಗಳನ್ನು ನೋಡು.
इहैकस्थं जगत्कृत्स्नं
पस्याद्य सचराचरम्।
मम देहे गुडाकेश
यच्चान्यद्द्रष्टुमिच्छसि॥११.७॥
ಇಹೈಕಸ್ಥಂ ಜಗತ್ಕೃತ್ಸ್ನಂ
ಪಶ್ಯಾದ್ಯ ಸಚರಾಚರಮ್ ।
ಮಮ ದೇಹೇ ಗುಡಾಕೇಶ
ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥ 11-7॥
इहैकस्थं जगत्कृत्स्नं पस्याद्य सचराचरम्।
मम देहे गुडाकेश यच्चान्यद्द्रष्टुमिच्छसि॥११.७॥
ಇಹೈಕಸ್ಥಂ ಜಗತ್ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ ।
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥ 11-7॥
7. O Arjuna,
(He is addressed as Gudakesa meaning
‘One who has control over sleep’)
You may see in My Body,
Assembled in one place,
All beings, moving and static,
Nay –the entire world.
You will also find there
Everything that you wish to see.
ಓ ಗುಡಾಕೇಶಿಯೇ! (ನಿದ್ದೆಯ ಮೇಲೆ ನಿಯಂತ್ರಣವುಳ್ಳವನೇ ಗುಡಾಕೇಶಿ, ಇದು ಅರ್ಜುನನ ಮತ್ತೊಂದು ಹೆಸರು). ಈಗ ನನ್ನ ಈ ಶರೀರದಲ್ಲಿ, ಒಂದೆಡೆ ಸ್ಥಿತವಾಗಿರುವ ಜಡಚೇತನಾತ್ಮಕವಾದ ಇಡಿಯ ಜಗತ್ತನ್ನು ನೋಡು. ನೀನು ಏನೇನನ್ನು ನೋಡಲು ಬಯೆಸುತ್ತೀಯೋ, ಮುಂದೆ ಏನನ್ನು ನೋಡಲು ಬಯಸಬಹುದೋ, ಅವೆಲ್ಲವನ್ನೂ ಈ ವಿಶ್ವರೂಪವು ನಿನಗೆ ತೋರಿಸುವುದು. ಅವೆಲ್ಲವನ್ನೂ ನೋಡು.
न तु मां शक्यसे द्रष्टुं
अनेनैव स्वचक्षुषा।
दिव्यं ददामि ते चक्षुः
पस्य मे योगमैश्वरम्॥११.८॥
ನ ತು ಮಾಂ ಶಕ್ಯಸೇ ದ್ರಷ್ಟಂ
ಅನೇನೈವ ಸ್ವಚಕ್ಷುಷಾ ।
ದಿವ್ಯಂ ದದಾಮಿ ತೇ ಚಕ್ಷುಃ
ಪಶ್ಯ ಮೇ ಯೋಗಮೈಶ್ವರಮ್ ॥ 11-8॥
न तु मां शक्यसे द्रष्टुं अनेनैव स्वचक्षुषा।
दिव्यं ददामि ते चक्षुः पस्य मे योगमैश्वरम्॥११.८॥
ನ ತು ಮಾಂ ಶಕ್ಯಸೇ ದ್ರಷ್ಟಂ ಅನೇನೈವ ಸ್ವಚಕ್ಷುಷಾ ।
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ ॥ 11-8॥
8. But, Arjuna,
You cannot see My Form
With your physical eyes.
Therefore I shall give you
Divine Eyes with which
You will be able to see
My Extraordinary Yogic Power.
ಆದರೆ ಅರ್ಜುನಾ! ಈ ನಿನ್ನ ಭೌತಿಕ ಕಣ್ಣುಗಳಿಂದ ನನ್ನ ರೂಪವನ್ನು ನೋಡಲು ನೀನು ಸಮರ್ಥನಲ್ಲ. ಆದುದರಿಂದ ನಾನು ನಿನಗೆ ದಿವ್ಯದೃಷ್ಟಿಯನ್ನು ಕೊಡುತ್ತೇನೆ. ಅದರಿಂದ ನನ್ನ ಅಲೌಕಿಕ ಯೋಗ ಶಕ್ತಿಯನ್ನು ನೋಡಲು ನೀನು ಶಕ್ತನಾಗುತ್ತೀಯೆ.
सञ्जय उवाच
एवमुक्त्वा ततो राजन्
महायोगेश्वरो हरिः।
दर्शयामास पार्थाय
परमं रूपमैश्वरम्॥११.९॥
ಸಂಜಯ ಉವಾಚ ।
ಏವಮುಕ್ತ್ವಾ ತತೋ ರಾಜನ್
ಮಹಾಯೋಗೇಶ್ವರೋ ಹರಿಃ ।
ದರ್ಶಯಾಮಾಸ ಪಾರ್ಥಾಯ
ಪರಮಂ ರೂಪಮೈಶ್ವರಮ್ ॥ 11-9॥
एवमुक्त्वा ततो राजन् महायोगेश्वरो हरिः।
दर्शयामास पार्थाय परमं रूपमैश्वरम्॥११.९॥
ಏಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ॥ 11-9॥
9. Addressing King Dhrutarashtra,
Sanjaya said:
O King,
Krishna, the Master of Yoga,
Saying so, revealed to Arjuna
His Transcendental Cosmic Form.
ರಾಜ ಧೃತರಾಷ್ಟ್ರನನ್ನುದ್ದೇಶಿಸಿ ಸಂಜಯನು ಹೇಳಿದನು. ಎಲೈ ಮಹಾರಾಜನೇ, ಮಹಾ ಯೋಗೀಶ್ವರನೂ, ದೇವೋತ್ತಮ ಪುರುಷನೂ ಆದ ಭಗವಂತನು ಈ ಪ್ರಕಾರವಾಗಿ ಹೇಳಿ, ಉತ್ಕೃಷ್ಟವಾದ ತನ್ನ ವಿಶ್ವರೂಪವನ್ನು ಅರ್ಜುನನಿಗೆ ತೋರಿಸಿದನು.
अनेकवक्त्रनयनं
अनेकाद्भुतदर्शनम्।
अनेकदिव्याभरणं
दिव्यानेकोद्यतायुधम्॥११.१०॥
ಅನೇಕವಕ್ತ್ರನಯನಂ
ಅನೇಕಾದ್ಭುತದರ್ಶನಮ್ ।
ಅನೇಕದಿವ್ಯಾಭರಣಂ
ದಿವ್ಯಾನೇಕೋದ್ಯತಾಯುಧಮ್ ॥ 11-10॥
अनेकवक्त्रनयनं अनेकाद्भुतदर्शनम्।
अनेकदिव्याभरणं दिव्यानेकोद्यतायुधम्॥११.१०॥
ಅನೇಕವಕ್ತ್ರನಯನಂ ಅನೇಕಾದ್ಭುತದರ್ಶನಮ್ ।
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ॥ 11-10॥
10. The Lord revealed His Cosmic Form
With innumerable mouths and eyes,
With several marvelous aspects,
With a variety of ornaments,
And with a large number of weapons
Held uplifted.
ಅನೇಕ ಮುಖಗಳು ಕಣ್ಣುಗಳು ಇರುವ, ಅನೇಕ ಅದ್ಭುತ ದರ್ಶನಗಳಿರುವ, ದಿವ್ಯಾಭರಣಗಳಿಂದ ಅಲಂಕೃತವಾದ ಮತ್ತು ಎತ್ತಿ ಹಿಡಿಯಲ್ಪಟ್ಟ ಅನೇಕ ದಿವ್ಯಾಯುಧಗಳಿಂದ ಕೂಡಿದ, ನೋಡುವುದಕ್ಕೆ ಮಹಾ ಅದ್ಭುತವಾಗಿರುವ ತನ್ನ ವಿಶ್ವರೂಪವನ್ನು ಪ್ರಕಟಿಸಿದನು.
दिव्यमाल्याम्बरधरं
दिव्यगन्धानुलेपनम्।
सर्वाश्चर्यमयं देवं
अनन्तं विश्वतोमुखम्॥११.११॥
ದಿವ್ಯಮಾಲ್ಯಾಂಬರಧರಂ
ದಿವ್ಯಗಂಧಾನುಲೇಪನಮ್ ।
ಸರ್ವಾಶ್ಚರ್ಯಮಯಂ ದೇವಂ
ಅನಂತಂ ವಿಶ್ವತೋಮುಖಮ್ ॥ 11-11॥
दिव्यमाल्याम्बरधरं दिव्यगन्धानुलेपनम्।
सर्वाश्चर्यमयं देवं अनन्तं विश्वतोमुखम्॥११.११॥
ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಮ್ ।
ಸರ್ವಾಶ್ಚರ್ಯಮಯಂ ದೇವಂ ಅನಂತಂ ವಿಶ್ವತೋಮುಖಮ್ ॥ 11-11॥
11. The Lord revealed his Cosmic Form
Well-dressed and well-garlanded,
Smeared all over with divine fragrance,
And it looked marvelous.
It was a Form that appeared endless,
With faces turned in all directions.
ದಿವ್ಯವಾದ ಮಾಲೆಗಳನ್ನೂ, ವಸ್ತ್ರಗಳನ್ನೂ ಧರಿಸಿರುವ, ದಿವ್ಯವಾದ ಪರಿಮಳಯುಕ್ತ ಗಂಧವನ್ನು ಮೈತುಂಬಾ ಲೇಪಿಸಿಕೊಂಡಿರುವ, ಸರ್ವಾಶ್ಚರ್ಯಮಯನೂ, ದೇದೀಪ್ಯಮಾನನೂ, ಅನಂತನೂ, ವಿಶ್ವತೋಮುಖನೂ ಆದ ದೇವನು ತನ್ನ ವಿಶ್ವರೂಪವನ್ನು ತೋರಿಸಿದನು.
दिवि सूर्यसहस्रस्य
भवेद्युगपदुत्थिता।
यदि भाः सदृशी सा स्यात्
भासस्तस्य महात्मनः॥११.१२॥
ದಿವಿ ಸೂರ್ಯಸಹಸ್ರಸ್ಯ
ಭವೇದ್ಯುಗಪದುತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾತ್
ಭಾಸಸ್ತಸ್ಯ ಮಹಾತ್ಮನಃ ॥ 11-12॥
दिवि सूर्यसहस्रस्य भवेद्युगपदुत्थिता।
यदि भाः सदृशी सा स्यात् भासस्तस्य महात्मनः॥११.१२॥
ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾತ್ ಭಾಸಸ್ತಸ್ಯ ಮಹಾತ್ಮನಃ ॥ 11-12॥
12. If a thousand suns,
All at a time, rise in the sky
And blaze forth,
It may come close to the dazzle
Of that Mighty Being
in the Cosmic Form.
ಆಕಾಶದಲ್ಲಿ ಸಾವಿರಾರು ಸೂರ್ಯರು ಒಮ್ಮೆಲೇ ಉದಯಿಸುವುದರಿಂದ ಉಂಟಾಗುವ ಪ್ರಕಾಶವು, ವಿಶ್ವರೂಪದಲ್ಲಿದ್ದ ಆ ಪರಮಪುರುಷನ ತೇಜಸ್ಸಿಗೆ ಸಾಟಿಯಾಗುತ್ತಿರಲಿಲ್ಲ ಎಂಬುದು ಸತ್ಯವಾಕ್ಯವು.
तत्रैकस्थं जगत्कृत्स्नं
प्रविभक्तमनेकधा।
अपस्यद्देवदेवस्य
शरीरे पाण्डवस्तदा॥११.१३॥
ತತ್ರೈಕಸ್ಥಂ ಜಗತ್ಕೃತ್ಸ್ನಂ
ಪ್ರವಿಭಕ್ತಮನೇಕಧಾ ।
ಅಪಶ್ಯದ್ದೇವದೇವಸ್ಯ
ಶರೀರೇ ಪಾಂಡವಸ್ತದಾ ॥ 11-13॥
तत्रैकस्थं जगत्कृत्स्नं प्रविभक्तमनेकधा।
अपस्यद्देवदेवस्य शरीरे पाण्डवस्तदा॥११.१३॥
ತತ್ರೈಕಸ್ಥಂ ಜಗತ್ಕೃತ್ಸ್ನಂ ಪ್ರವಿಭಕ್ತಮನೇಕಧಾ ।
ಅಪಶ್ಯದ್ದೇವದೇವಸ್ಯ ಶರೀರೇ ಪಾಂಡವಸ್ತದಾ ॥ 11-13॥
13.
Then Arjuna saw in that Cosmic Form
The entire world variously divided
Into different units
Of gods, Pitrus, humans, etc.
All in one place.
ಆಗ ಅರ್ಜುನನು, ಮಾನವರು, ಪಿತೃಗಳು ಮತ್ತು ದೇವತೆಗಳನ್ನೊಳಗೊಂಡ ಅನೇಕ ಪ್ರಕಾರದಿಂದ ವಿಭಕ್ತವಾದ, ವಿವಿಧ ವಿಚಿತ್ರಗಳಿಂದ ಕೂಡಿದ ಜಗೆತ್ತೆಲ್ಲವೂ ದೇವಾದಿದೇವನಾದ ಭಗವಂತನ ವಿಶ್ವರೂಪಿ ಶರೀರದಲ್ಲಿ, ಒಂದೇ ಕಡೆಯಲ್ಲಿ ಸ್ಥಿತವಾಗಿರುವುದನ್ನು ನೋಡಿದನು.
ततः स विस्मयाविष्टो
हृष्टरोमा धनञ्जयः।
प्रणम्य शिरसा देवं
कृताञ्जलिरभाषत॥११.१४॥
ತತಃ ಸ ವಿಸ್ಮಯಾವಿಷ್ಟೋ
ಹೃಷ್ಟರೋಮಾ ಧನಂಜಯಃ ।
ಪ್ರಣಮ್ಯ ಶಿರಸಾ ದೇವಂ
ಕೃತಾಂಜಲಿರಭಾಷತ ॥ 11-14॥
ततः स विस्मयाविष्टो हृष्टरोमा धनञ्जयः।
प्रणम्य शिरसा देवं कृताञ्जलिरभाषत॥११.१४॥
ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ ।
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ॥ 11-14॥
14. Seeing that marvelous Cosmic Form,
Arjuna was overwhelmed with wonder,
With hairs standing on end.
With bent head and folded hands,
He addressed the Lord thus:
ಅನಂತರ ಆಶ್ಚರ್ಯಪರವಶನಾಗಿ, ಹರ್ಷದಿಂದ ರೋಮಾಂಚಿತನಾದ, ಅರ್ಜುನನು, ಪ್ರಕಾಶಮಯನೂ, ವಿಶ್ವರೂಪಿಯೂ ಆದ ಪರಮಾತ್ಮನಿಗೆ ತಲೆಬಾಗಿ, ಕೈಜೋಡಿಸಿ ನಮಸ್ಕರಿಸಿ ಹೀಗೆಂದು ಸ್ತುತಿಸಲು ತೊಡಗಿದನು.
अर्जुन उवाच :
पस्यामि देवांस्तव देव देहे
सर्वास्तथा भूतविशेषसङ्घान्।
ब्रह्माणमीशं कमलासनस्थं
ऋषीन् च सर्वानुरगांश्च दिव्यान् ॥११.१५॥
ಅರ್ಜುನ ಉವಾಚ ।
ಪಶ್ಯಾಮಿ ದೇವಾಂಸ್ತವ ದೇವ ದೇಹೇ
ಸರ್ವಾಂಸ್ತಥಾ ಭೂತವಿಶೇಷಸಂಘಾನ್ ।
ಬ್ರಹ್ಮಾಣಮೀಶಂ ಕಮಲಾಸನಸ್ಥಂ
ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ॥ 11-15॥
पस्यामि देवांस्तव देव देहे
सर्वास्तथा भूतविशेषसङ्घान्।
ब्रह्माणमीशं कमलासनस्थं
ऋषीन् च सर्वानुरगांश्च दिव्यान् ॥११.१५॥
ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್ ।
ಬ್ರಹ್ಮಾಣಮೀಶಂ ಕಮಲಾಸನಸ್ಥಂ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ॥ 11-15॥
15. Arjuna said:
O Mighty Resplendent Lord,
I see in your Cosmic Form
All gods and all groups of beings,
Moving and static,
All the shining Rishis,
All the celestial Serpents
And also Lord Brahma
With four faces seated in the lotus.
ಅರ್ಜುನ ಹೇಳಿದನು: ಎಲೈ ಪರಾಕ್ರಮಿಯಾದ, ತೇಜಸ್ವಿಯಾದ ಪ್ರಭುವೇ! ಎಲ್ಲ ದೇವತೆಗಳನ್ನೂ, ಸರ್ವಭೂತಸಮುದಾಯವನ್ನೂ, ಚರಾಚರ ವಸ್ತುಗಳನ್ನೂ, ಸಮಸ್ತ ಋಷಿಗಳನ್ನೂ, ದಿವ್ಯವಾದ ಸರ್ಪಗಳನ್ನೂ, ಕಮಲಾಸನದ ಮೇಲೆ ವಿರಾಜಮಾನನಾದ ಚತುರ್ಮುಖ ಬ್ರಹ್ಮನನ್ನೂ ಹಾಗೂ ಈಶ್ವರನನ್ನೂ ನಿನ್ನ ವಿಶ್ವರೂಪದಲ್ಲಿ ಕಾಣುತ್ತಿದ್ದೇನೆ.
अनेकबाहूदरवक्त्रनेत्रं
पस्यामि त्वां सर्वतोऽनन्तरूपम्।
नान्तं न मध्यं न पुनस्तवादिं
पस्यामि विश्वेश्वर विश्वरूप॥११.१६॥,
ಅನೇಕಬಾಹೂದರವಕ್ತ್ರನೇತ್ರಂ
ಪಶ್ಯಾಮಿ ತ್ವಾಂ ಸರ್ವತೋಽನಂತರೂಪಮ್ ।
ನಾಂತಂ ನ ಮಧ್ಯಂ ನ ಪುನಸ್ತವಾದಿಂ
ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ॥ 11-16॥
अनेकबाहूदरवक्त्रनेत्रं पस्यामि त्वां सर्वतोऽनन्तरूपम्।
नान्तं न मध्यं न पुनस्तवादिं पस्यामि विश्वेश्वर विश्वरूप॥११.१६॥,
ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋಽನಂತರೂಪಮ್ ।
ನಾಂತಂ ನ ಮಧ್ಯಂ ನ ಪುನಸ್ತವಾದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ॥ 11-16॥
16. O Lord of the Universe,
O Lord of Cosmic Form,
I find you with innumerable hands,
Bellies, faces and eyes.
Your Form is spread everywhere,
In all directions.
It is endless and eternal.
There is no beginning or middle or end to it.
ಹೇ ವಿಶ್ವೇಶ್ವರನೇ, ವಿಶ್ವರೂಪನೇ, ನಿನ್ನ ದೇಹದಲ್ಲಿ ಎಲ್ಲೆಲ್ಲೂ ಅಮಿತವಾಗಿ ವಿಸ್ತಾರಗೊಂಡ ಅನೇಕಾನೇಕ ಬಾಹುಗಳನ್ನೂ, ಉದರಗಳನ್ನೂ, ಮುಖಗಳನ್ನೂ ಮತ್ತು ನೇತ್ರಗಳನ್ನೂ ನಾನು ಕಾಣುತ್ತಿದ್ದೇನೆ. ನಿನ್ನ ರೂಪವು ಎಲ್ಲೆಡೆಯೂ ಎಲ್ಲ ದಿಕ್ಕುಗಳಲ್ಲೂ ಹರಡಿದೆ. ಅದು ಅನಂತ ಮತ್ತು ಶಾಶ್ವತ. ನಿನ್ನ ರೂಪಕ್ಕೆ ಆದಿಯಾಗಲೀ, ಮಧ್ಯವಾಗಲೀ ಅಥವಾ ಅಂತ್ಯವಾಗಲೀ ಕಾಣುತ್ತಿಲ್ಲ.
किरीटिनं गदिनं चक्रिणं च
तेजोराशिं सर्वतो दीप्तिमन्तम्।
पस्यामि त्वां दुर्निरीक्ष्यं समन्तात्
दीप्तानलार्कद्युतिमप्रमेयम्॥११.१७॥
ಕಿರೀಟಿನಂ ಗದಿನಂ ಚಕ್ರಿಣಂ ಚ
ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾತ್
ದೀಪ್ತಾನಲಾರ್ಕದ್ಯುತಿಮಪ್ರಮೇಯಮ್ ॥ 11-17॥
किरीटिनं गदिनं चक्रिणं च तेजोराशिं सर्वतो दीप्तिमन्तम्।
पस्यामि त्वां दुर्निरीक्ष्यं समन्तात् दीप्तानलार्कद्युतिमप्रमेयम्॥११.१७॥
ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾದ್ ದೀಪ್ತಾನಲಾರ್ಕದ್ಯುತಿಮಪ್ರಮೇಯಮ್ ॥ 11-17॥
17. O Lord,
I see your Cosmic Form
With innumerable faces
Wearing shining crowns,
With hands holding maces,
Wielding the Chakra,
With a flourish of splendor everywhere,
And dazzling all around with the light
Of blazing fire and sun.
It is Immeasurable and difficult to gaze at.
ಹೇ ಪ್ರಭುವೇ! ನಿನ್ನ ಈ ವಿಶ್ವರೂಪದಲ್ಲಿ, ಹೊಳೆಯುವ ಕಿರೀಟಗಳಿಂದ ಅಲಂಕೃತವಾದ ಅಸಂಖ್ಯಾತ ಶಿರಸ್ಸುಗಳನ್ನೂ ಗದೆಯನ್ನು ಹಿಡಿದಿರುವ ಕೈಗಳನ್ನೂ, ತಿರುಗುತ್ತಿರುವ ಚಕ್ರಗಳನ್ನು ಹೊಂದಿದ ಪಾಣಿಗಳನ್ನೂ ನಾನು ಕಾಣುತ್ತಿದ್ದೇನೆ. ಪ್ರಕಾಶಿಸುತ್ತಿರುವ ಅಗ್ನಿ ಸೂರ್ಯರಂತೆ ಪ್ರಭೆಯುಳ್ಲವನೂ, ಎಲ್ಲೆಲ್ಲಿಯೂ ಪ್ರಕಾಶವುಳ್ಳವನೂ, ಅಗ್ನಿಯಂತೆ ಧಗಧಗಿಸುವ ಕಣ್ಣುಳ್ಳವನೂ, ಸುತ್ತಲೂ ನೋಡಲಸಾಧ್ಯನೂ ಆದ ನಿನ್ನ ರೂಪವನ್ನು ನೋಡುವುದು ನನಗೆ ಕಷ್ಟವಾಗಿದೆ.
त्वमक्षरं परमं वेदितव्यं
त्वमस्य विश्वस्य परं निधानम्।
त्वमव्ययः शाश्वतधर्मगोप्ता
सनातनस्त्वं पुरुषो मतो मे॥११.१८॥
ತ್ವಮಕ್ಷರಂ ಪರಮಂ ವೇದಿತವ್ಯಂ
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ
ಸನಾತನಸ್ತ್ವಂ ಪುರುಷೋ ಮತೋ ಮೇ ॥ 11-18॥
त्वमक्षरं परमं वेदितव्यं त्वमस्य विश्वस्य परं निधानम्।
त्वमव्ययः शाश्वतधर्मगोप्ता सनातनस्त्वं पुरुषो मतो मे॥११.१८॥
ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ ॥ 11-18॥
18. O Eternal and Supreme Being!
You are to be known
As the Imperishable and Supreme One.
You are the Wealth, Nourishment and Support
Of the Universe.
You remain Changeless
And you protect the Eternal Dharma.
ಹೇ ಸನಾತನನೇ, ಪರಮೇಶ್ವರನೇ! ಮುಮುಕ್ಷುಗಳು ತಿಳಿಯಬೇಕಾಗಿರುವ ಪರಮ ಅಕ್ಷರನು ಅರ್ಥಾತ್ ಪರಬ್ರಹ್ಮ ನೀನು. ಈ ವಿಶ್ವಕ್ಕೆ ನೀನೇ ಸಂಪತ್ತು, ನೀನೇ ಪೋಷಕನು, ನೀನೇ ಆಧಾರಸ್ಥಂಭ. ನೀನು ಸ್ಥಿರನು ಮತ್ತು ಶಾಶ್ವತವಾದ ಧರ್ಮವನ್ನು ರಕ್ಷಿಸುವವನು ಎಂದು ನನ್ನ ಅಭಿಪ್ರಾಯವಾಗಿದೆ.
अनादिमध्यान्तमनन्तवीर्यं
अनन्तबाहुं शशिसूर्यनेत्रं।
पस्यामि त्वां दीप्तहुताशवक्त्रं
स्वतेजसा विश्वमिदं तपन्तम्॥११.१९॥
ಅನಾದಿಮಧ್ಯಾಂತಮನಂತವೀರ್ಯಂ
ಅನಂತಬಾಹುಂ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ
ಸ್ವತೇಜಸಾ ವಿಶ್ವಮಿದಂ ತಪಂತಮ್ ॥ 11-19॥
अनादिमध्यान्तमनन्तवीर्यं अनन्तबाहुं शशिसूर्यनेत्रं।
पस्यामि त्वां दीप्तहुताशवक्त्रं स्वतेजसा विश्वमिदं तपन्तम्॥११.१९॥
ಅನಾದಿಮಧ್ಯಾಂತಮನಂತವೀರ್ಯಂ ಅನಂತಬಾಹುಂ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ ಸ್ವತೇಜಸಾ ವಿಶ್ವಮಿದಂ ತಪಂತಮ್ ॥ 11-19॥
19. O Lord,
You are without beginning, middle or end.
Your Energy is Inexhaustible.
You possess innumerable hands.
You have the Sun and the Moon as your eyes.
And your Face blazes forth
Like fire causing the Universe
To burn with your Radiance!
ಹೇ ಜಗದೀಶನೇ! ನೀನು ಆದಿ, ಮಧ್ಯೆ ಮತ್ತು ಅಂತ್ಯಗಳಿಲ್ಲದವನು. ನೀನು ಅನಂತವೀರ್ಯನು. ನೀನು ಅಸಂಖ್ಯಾತ ಬಾಹುಗಳನ್ನು ಹೊಂದಿರುವವನು. ಸೂರ್ಯ ಚಂದ್ರರೇ ನೇತ್ರಗಳಾಗಿ ಉಳ್ಳವನು. ಪ್ರದೀಪ್ತವಾದ ಅಗ್ನಿಯಂತಹ ಮುಖವುಳ್ಳವನು. ಸ್ವಪ್ರಕಾಶದಿಂದ ಇಡೀ ವಿಶ್ವವನ್ನು ಸುಡುತ್ತಿರುವಂತಹವನಾದ ನಿನ್ನನ್ನು ನೋಡುತ್ತಿದ್ದೇನೆ.
द्यावापृथिव्योरिदमन्तरं हि
व्याप्तं त्वयैकेन दिशश्च सर्वाः।
दृष्ट्वाद्भुतं रूपमुग्रं तवेदं
लोकत्रयं प्रव्यथितं महात्मन्॥११.२०॥
ದ್ಯಾವಾಪೃಥಿವ್ಯೋರಿದಮಂತರಂ ಹಿ
ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ ।
ದೃಷ್ಟ್ವಾದ್ಭುತಂ ರೂಪಮುಗ್ರಂ ತವೇದಂ
ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ ॥ 11-20॥
द्यावापृथिव्योरिदमन्तरं हि व्याप्तं त्वयैकेन दिशश्च सर्वाः।
दृष्ट्वाद्भुतं रूपमुग्रं तवेदं लोकत्रयं प्रव्यथितं महात्मन्॥११.२०॥
ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ ।
ದೃಷ್ಟ್ವಾದ್ಭುತಂ ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ ॥ 11-20॥
20. O Mighty and Magnanimous Being,
You pervade the whole of the space
Between the earth and the sky,
Including all the directions.
All the three worlds are getting terrified
By looking at your Fierce Cosmic Form.
ಹೇ ಪರಾಕ್ರಮಿಯೂ ಮತ್ತು ಉದಾತ್ತನೂ ಆದ ಪರಮಾತ್ಮನೇ, ನೀನು ಒಬ್ಬನೇ. ಆದರೂ ನೀನು ಭೂಮಿ ಮತ್ತು ಆಕಾಶದ ನಡುವೆ ಇರುವ ಎಲ್ಲ ಲೋಕಗಳನ್ನೂ, ಅವುಗಳ ನಡುವೆ ಇರುವ ಎಲ್ಲ ಸ್ಥಳವನ್ನೂ, ಎಲ್ಲ ದಿಕ್ಕುಗಳಿಂದಲೂ ವ್ಯಾಪಿಸಿರುವೆ. ಮಹಾತ್ಮನೇ ಅದ್ಭುತವೂ, ಉಗ್ರವೂ ಆದ ನಿನ್ನ ಈ ರೂಪವನ್ನು ನೋಡಿ ಮೂರು ಲೋಕಗಳೂ ಭಯಗೊಂಡಿವೆ.
अमी हि त्वां सुरसङ्घा विशन्ति
केचिद्भीताःप्राञ्जलयो घृणन्ति।
स्वस्तीत्युक्त्वा महर्षिसिद्धसङ्घाः
स्तुवन्ति त्वां स्तुतिभिःपुष्कलाभिः॥११.२१।
ಅಮೀ ಹಿ ತ್ವಾಂ ಸುರಸಂಘಾ ವಿಶಂತಿ
ಕೇಚಿದ್ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ
ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಲಾಭಿಃ ॥ 11-21॥
अमी हि त्वां सुरसङ्घा विशन्ति केचिद्भीताःप्राञ्जलयो घृणन्ति।
स्वस्तीत्युक्त्वा महर्षिसिद्धसङ्घाः स्तुवन्ति त्वां स्तुतिभिःपुष्कलाभिः॥११.२१।
ಅಮೀ ಹಿ ತ್ವಾಂ ಸುರಸಂಘಾ ವಿಶಂತಿ ಕೇಚಿದ್ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಲಾಭಿಃ ॥ 11-21॥
21. O Lord,
Some gods who have taken human form
And are about to fight in this battle
Are found entering your Cosmic Form.
Some others, frightened by your fierce appearance,
Praise you with folded hands.
Some Maharshis, great seers,
And Siddhas, perfected souls,
Saying “let there be auspiciousness and prosperity,”
Praise you copiously with their hymns.
ಹೇ ಒಡೆಯನೇ, ಈ ಯುದ್ಧದಲ್ಲಿ ಹೋರಾಡಲು ಸನ್ನದ್ಧರಾಗಿರುವ, ಮನುಷ್ಯ ರೂಪ ತಳೆದ, ಕೆಲವು ದೇವತೆಗಳು ನಿನ್ನ ಈ ವಿಶ್ವರೂಪದಲ್ಲಿ ಪ್ರವೇಶಿಸುತ್ತಿರುವುದು ಕಂಡುಬರುತ್ತಿದೆ. ಮತ್ತೆ ಕೆಲವರು ನಿನ್ನ ಈ ರೌದ್ರ ಚಹರೆಯನ್ನು ಕಂಡು ಭಯಭೀತರಾಗಿ, ಕರಗಳನ್ನು ಜೋಡಿಸಿ ನಿನ್ನನ್ನು ಪ್ರಾರ್ಥಿಸುತ್ತಿದ್ದಾರೆ. ಹಲವು ಮಹರ್ಷಿಗಳು, ಮಹಾಮುನಿಗಳು ಮತ್ತು ಪರಿಪೂರ್ಣ ಸಿದ್ಧರು ಸ್ವಸ್ತಿವಾಚನಗೈದು, ನಿನ್ನನ್ನು ತಮ್ಮ ಸ್ತೋತ್ರಗಳಿಂದ ಧಾರಾಳವಾಗಿ ಸ್ತುತಿಸುತ್ತಿದ್ದಾರೆ.
रुद्रादित्या वसवो ये च साध्या
विश्वेऽस्विनौ मरुतश्चोष्मपाश्च।
गन्धर्वयक्षासुरसिद्धसङ्घा:
वीक्षन्ते त्वां विस्मिताश्चैव सर्वे॥११.२२॥
ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ
ವಿಶ್ವೇಽಶ್ವಿನೌ ಮರುತಶ್ಚೋಷ್ಮಪಾಶ್ಚ ।
ಗಂಧರ್ವಯಕ್ಷಾಸುರಸಿದ್ಧಸಂಘಾ
ವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ ॥ 11-22॥
रुद्रादित्या वसवो ये च साध्या विश्वेऽस्विनौ मरुतश्चोष्मपाश्च।
गन्धर्वयक्षासुरसिद्धसङ्घा: वीक्षन्ते त्वां विस्मिताश्चैव सर्वे॥११.२२॥
ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ ವಿಶ್ವೇಽಶ್ವಿನೌ ಮರುತಶ್ಚೋಷ್ಮಪಾಶ್ಚ ।
ಗಂಧರ್ವಯಕ್ಷಾಸುರಸಿದ್ಧಸಂಘಾ ವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ ॥ 11-22॥
22. O Lord,
Various celestial bodies
Including Rudras, Adityas, Vasus,
Sadhyas, Visvedevas, the Two Aswins,
Maruts, Pitrus, Gandharvas, Yakshas,
Rakshasas, siddhas, –All,
All of them gaze at you, wonder-struck!
ಹೇ ದೇವನೇ, ನಾನಾ ವಿಧದ ದಿವ್ಯಾತ್ಮಗಳಾದ ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಸುಗಳು ಸಾಧ್ಯರು, ಮರುದ್ಗಣಗಳು, ವಿಶ್ವೇದೇವತೆಗಳು, ಇಬ್ಬರು ಅಶ್ವಿನೀಕುಮಾರರು, ಪಿತೃಗಳು, ಗಂಧರ್ವರು, ಯಕ್ಷರು, ರಾಕ್ಷಸರು ಮತ್ತು ಸಿದ್ಧರು, ಇವರೆಲ್ಲರೂ ವಿಸ್ಮಿತರಾಗಿ ನಿನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ.
रूपं महत्ते बहुवक्त्रनेत्रं
महाबाहो बहुबाहूरुपादम्।
बहूदरं बहुदंष्ट्राकराळं
दृष्ट्वा लोकाः प्रव्यथितास्तथाहम्॥११.२३॥
ರೂಪಂ ಮಹತ್ತೇ ಬಹುವಕ್ತ್ರನೇತ್ರಂ
ಮಹಾಬಾಹೋ ಬಹುಬಾಹೂರುಪಾದಮ್ ।
ಬಹೂದರಂ ಬಹುದಂಷ್ಟ್ರಾಕರಾಲಂ
ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಮ್ ॥ 11-23॥
रूपं महत्ते बहुवक्त्रनेत्रं महाबाहो बहुबाहूरुपादम्।
बहूदरं बहुदंष्ट्राकराळं दृष्ट्वा लोकाः प्रव्यथितास्तथाहम्॥११.२३॥
ರೂಪಂ ಮಹತ್ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಮ್ ।
ಬಹೂದರಂ ಬಹುದಂಷ್ಟ್ರಾಕರಾಲಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಮ್ ॥ 11-23॥
23. O Mighty –Armed One,
Seeing your Cosmic Form
With its innumerable mouths and eyes,
With many arms, thighs and feet,
With terrifying fangs sticking out,
All the people in all the worlds
Are left in a state of consternation.
So am I.
ಹೇ ಪರಾಕ್ರಮಿಯಾದ ಮಹಾಭಾಹುವೇ, ಅಸಂಖ್ಯಾತ ಮುಖಗಳು ಮತ್ತು ಕಣ್ಣುಗಳು, ಬಾಹುಗಳು, ತೊಡೆಗಳು ಮತ್ತು ಪಾದಗಳು, ಉದರಗಳು, ಮುಂದೆ ಚಾಚಿಕೊಂಡಿರುವ ಭಯಂಕರ ಕೋರೆದಾಡೆಗಳಿಂದ ಇರುವ ಈ ನಿನ್ನ ಕರಾಳವಾದ ಮಹದ್ರೂಪವನ್ನು ಕಂಡು ಎಲ್ಲ ಲೋಕಗಳಲ್ಲಿರುವ ಸಮಸ್ತ ಜನರು ತಲ್ಲಣಗೊಂಡಿದ್ದಾರೆ. ಹಾಗೆಯೇ ನಾನೂ ಸಹ ಅವರಂತೆಯೇ ಭಯಗೊಂಡಿದ್ದೇನೆ.
नभःस्पृशं दीप्तमनेकवर्णं
व्यात्ताननं दीप्तविशालनेत्रम्।
दृष्ट्वा हि त्वां प्रव्यथितान्तरात्मा
धृतिं न विन्दामि शमं च विष्णो!॥११.२४॥
ನಭಃಸ್ಪೃಶಂ ದೀಪ್ತಮನೇಕವರ್ಣಂ
ವ್ಯಾತ್ತಾನನಂ ದೀಪ್ತವಿಶಾಲನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ
ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ ॥ 11-24॥
नभःस्पृशं दीप्तमनेकवर्णं व्यात्ताननं दीप्तविशालनेत्रम्।
दृष्ट्वा हि त्वां प्रव्यथितान्तरात्मा धृतिं न विन्दामि शमं च विष्णो!॥११.२४॥
ನಭಃಸ್ಪೃಶಂ ದೀಪ್ತಮನೇಕವರ್ಣಂ ವ್ಯಾತ್ತಾನನಂ ದೀಪ್ತವಿಶಾಲನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ ॥ 11-24॥
24. O Vishnu, All-Pervading Lord,
I observe your Form
Extending to the boundaries of the sky,
Blazing with many colours,
With wide-open mouths,
And with eyes flaming and spread out —
Seeing you thus,
My inner self is deeply troubled.
I cannot keep my courage and peace.
ಓ ವಿಷ್ಣವೇ! ಸರ್ವಾಂತರ್ಯಾಮಿಯೇ! ಅಂತರಿಕ್ಷದ ಎಲ್ಲೆಯವರೆಗೂ ಚಾಚಿಕೊಂಡಿರುವ, ಅನೇಕ ಉಜ್ವಲ ವರ್ಣಗಳಿಂದ ಶೋಭಿಸುತ್ತಿರುವ, ವಿಶಾಲವಾಗಿ ತೆರೆದಿರುವ ಬಾಯಿಗಳನ್ನುಳ್ಳ ಮತ್ತು ಪ್ರಕಾಶಿಸುವ ವಿಶಾಲ ನೇತ್ರಗಳನ್ನು ಹೊಂದಿರುವ ನಿನ್ನ ವಿಶ್ವರೂಪವನ್ನು ನೋಡಿ ನನ್ನ ಅಂತರಾತ್ಮವು ಉತ್ಕಟವಾಗಿ ಪ್ರಕ್ಷುಬ್ದಗೊಂಡಿದೆ. ನಾನು ನನ್ನ ಧೃತಿಯನ್ನಾಗಲೀ, ಸಮಚಿತ್ತವನ್ನಾಗಲೀ ಉಳಿಸಿಕೊಳ್ಳಲಾಗುತ್ತಿಲ್ಲ.
दंष्ट्राकराळानि च ते मुखानि
दृष्ट्वैव कालानलसन्निभानि।
दिशो न जाने न लभे च शर्म
प्रसीद देवेश जगन्निवास॥११.२५॥
ದಂಷ್ಟ್ರಾಕರಾಲಾನಿ ಚ ತೇ ಮುಖಾನಿ
ದೃಷ್ಟ್ವೈವ ಕಾಲಾನಲಸನ್ನಿಭಾನಿ ।
ದಿಶೋ ನ ಜಾನೇ ನ ಲಭೇ ಚ ಶರ್ಮ
ಪ್ರಸೀದ ದೇವೇಶ ಜಗನ್ನಿವಾಸ ॥ 11-25॥
दंष्ट्राकराळानि च ते मुखानि दृष्ट्वैव कालानलसन्निभानि।
दिशो न जाने न लभे च शर्म प्रसीद देवेश जगन्निवास॥११.२५॥
ದಂಷ್ಟ್ರಾಕರಾಲಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ ।
ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ ॥ 11-25॥
25. O Lord of the gods,
Abode of the Worlds,
Seeing your terrifying mouths
With fang-like teeth sticking out,
Blazing like fire that bursts forth
At the time of Dissolution or Pralaya,
I get confused and direction-less.
I do not get any peace or happiness.
O Lord, be gracious towards me.
ಓ ದೇವಾದಿದೇವನೇ, ಎಲ್ಲ ಲೋಕಗಳ ಆಶ್ರಯದಾತನೇ, ಪ್ರಳಯಕಾಲದಲ್ಲಿ ಸಿಡಿಯುವ ಜ್ವಾಲಾಗ್ನಿಯಂತೆ
ಇರುವ ನಿನ್ನ ಪ್ರಜ್ವಲಿಸುತ್ತಿರುವ ಮೃತ್ಯು ಸದೃಶ ಮುಖಗಳನ್ನೂ, ಮುಂದೆ ಚಾಚಿಕೊಂಡಿರುವ ಭಯಂಕರವಾದ
ಕೋರೆದಾಡೆಗಳನ್ನು ಕಂಡು ನಾನು ದಿಗ್ಭ್ರಾಂತನಾಗಿದ್ದೇನೆ. ಯಾವುದೇ ವಿಧದ ಸಂತೋಷ ಅಥವಾ ಶಾಂತಿ
ನನಗೆ ದೊರೆಯುತ್ತಿಲ್ಲ. ಆದ್ದರಿಂದ ಎಲೈ ಜಗನ್ನಾಥನೇ, ಪ್ರಸನ್ನನಾಗು. ನನ್ನ ಮೇಲೆ ದಯೆ ತೋರು.
अमी च त्वां धृतराष्ट्रस्य पुत्राः
सर्वे सहैवावनिपालसङ्घैः।
भीष्मो द्रोणः सूतपुत्रस्तथासौ
सहास्मदीयैरपि योधमुख्यैः॥११.२६॥
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ
ಸರ್ವೇ ಸಹೈವಾವನಿಪಾಲಸಂಘೈಃ ।
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾಸೌ
ಸಹಾಸ್ಮದೀಯೈರಪಿ ಯೋಧಮುಖ್ಯೈಃ ॥ 11-26॥
अमी च त्वां धृतराष्ट्रस्य पुत्राः सर्वे सहैवावनिपालसङ्घैः।
भीष्मो द्रोणः सूतपुत्रस्तथासौ सहास्मदीयैरपि योधमुख्यैः॥११.२६॥
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿಪಾಲಸಂಘೈಃ ।
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾಸೌ ಸಹಾಸ್ಮದೀಯೈರಪಿ ಯೋಧಮುಖ್ಯೈಃ ॥ 11-26॥
26. O Lord,
All the sons of Dhrutarashtra,
Along with groups of rulers of the earth,
As also Bheeshma, Drona, Karna the son
Of a Charioteer,
Together with important warriors on our side,
All – I find all of them entering your Form!
ಹೇ ಓಡೆಯನೇ, ಧೃತರಾಷ್ಟ್ರನ ಎಲ್ಲಾ ಪುತ್ರರು, ಭೂಪಾಲರಾದ ರಾಜರುಗಳ ಸಮುದಾಯ ಸಹಿತರಾಗಿ, ಭೀಷ್ಮ ಪಿತಾಮಹರು, ದ್ರೋಣಾಚಾರ್ಯರು ಮತ್ತು ಸೂತಪುತ್ರನಾದ ಕರ್ಣ ಇವರುಗಳು ನಮ್ಮ ಕಡೆಯ ಪ್ರಧಾನ ಯೋಧರುಗಳ ಸಹಿತ, ನಿನ್ನ ಈ ವಿಶ್ವರೂಪದಲ್ಲಿ ಪ್ರವೇಶಿಸುತ್ತಿರುವುದನ್ನು ಕಾಣುತ್ತಿದ್ದೇನೆ.
वक्त्राणि ते त्वरमाणा विशन्ति
दंष्ट्राकराळानि भयानकानि।
केचिद्विलग्ना: दशनान्तरेषु
संदृश्यन्ते चूर्णितैरुत्तमाङ्गै:॥११.२७॥
ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ
ದಂಷ್ಟ್ರಾಕರಾಲಾನಿ ಭಯಾನಕಾನಿ ।
ಕೇಚಿದ್ವಿಲಗ್ನಾಃ ದಶನಾಂತರೇಷು
ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ॥ 11-27॥
वक्त्राणि ते त्वरमाणा विशन्ति दंष्ट्राकराळानि भयानकानि।
केचिद्विलग्ना: दशनान्तरेषु संदृश्यन्ते चूर्णितैरुत्तमाङ्गै:॥११.२७॥
ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಲಾನಿ ಭಯಾನಕಾನಿ ।
ಕೇಚಿದ್ವಿಲಗ್ನಾಃ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ॥ 11-27॥
27. O Lord,
All of them seem to be entering your mouths
In a hurry – those mouths that are frightening
Because of the awesome fang-like teeth projecting.
Some of them seem to be sticking between the teeth
With their heads crushed.
ಓ ಪ್ರಭುವೇ, ಹೊರಚಾಚಿಕೊಂಡಿರುವ ಕೋರೆದಾಡೆಯನ್ನು ಹೊಂದಿದ, ಭಯ ಹುಟ್ಟಿಸುವ ಕರಾಳವಾದ ಆ ನಿನ್ನ ಬಾಯಿಗಳಲ್ಲಿ ಅವರೆಲ್ಲರೂ ತ್ವರೆಯಿಂದ, ಅತಿ ವೇಗವಾಗಿ ಪ್ರವೇಶಿಸುತ್ತಿರುವಂತೆ ಭಾಸವಾಗುತ್ತಿದೆ. ಅದರಲ್ಲಿ ಕೆಲವರ ತಲೆಗಳು ನಿನ್ನ ಹಲ್ಲುಗಳ ನಡುವೆ ಸಿಲುಕಿಕೊಂಡು ನುಚ್ಚುನೂರಾಗಿ ಹೋಗುತ್ತಿರುವಂತೆ ಕಾಣಿಸುತ್ತಿದೆ.
यथा नदीनां बहवोऽम्बुवेगाः
समुद्रमेवाभिमुखं द्रवन्ति।
तथा तवामी नरलोकवीरा
विशन्ति वक्त्राण्यभिविज्वलन्ति॥११.२८॥
ಯಥಾ ನದೀನಾಂ ಬಹವೋಽಂಬುವೇಗಾಃ
ಸಮುದ್ರಮೇವಾಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾ
ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ॥ 11-28॥
यथा नदीनां बहवोऽम्बुवेगाः समुद्रमेवाभिमुखं द्रवन्ति।
तथा तवामी नरलोकवीरा विशन्ति वक्त्राण्यभिविज्वलन्ति॥११.२८॥
ಯಥಾ ನದೀನಾಂ ಬಹವೋಽಂಬುವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ॥ 11-28॥
28. O Lord,
Just as the currents in the river water
Rush towards the sea,
So those human heroes are seen
Hurrying into your burning mouths!
ಹೇಗೆ ನದಿಗಳ ವಿಪುಲವಾದ ಜಲಪ್ರವಾಹಗಳು, ಸ್ವಾಭಾವಿಕವಾಗಿಯೇ ಸಮುದ್ರಾಭಿಮುಖವಾಗಿ
ಹರಿಯುತ್ತಿರುವುವೋ, ಹಾಗೆಯೇ ಈ ನರಲೋಕದ ಶ್ರೇಷ್ಠ ವೀರರೂ ಸಹ ಪ್ರಜ್ವಲಿಸುತ್ತಿರುವ ನಿನ್ನ
ಬಾಯಿಗಳನ್ನು ಪ್ರವೇಶಿಸುತ್ತಿರುವರು.
यथा प्रदीप्तं ज्वलनं पतङ्गा
विशन्ति नाशाय समृद्धवेगाः।
तथैव नाशाय विशन्ति लोका:
तवापि वक्त्राणि समृद्धवेगाः॥११.२९॥
ಯಥಾ ಪ್ರದೀಪ್ತಂ ಜ್ವಲನಂ ಪತಂಗಾ
ವಿಶಂತಿ ನಾಶಾಯ ಸಮೃದ್ಧವೇಗಾಃ ।
ತಥೈವ ನಾಶಾಯ ವಿಶಂತಿ ಲೋಕಾಃ
ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ ॥ 11-29॥
यथा प्रदीप्तं ज्वलनं पतङ्गा विशन्ति नाशाय समृद्धवेगाः।
तथैव नाशाय विशन्ति लोका: तवापि वक्त्राणि समृद्धवेगाः॥११.२९॥
ಯಥಾ ಪ್ರದೀಪ್ತಂ ಜ್ವಲನಂ ಪತಂಗಾ ವಿಶಂತಿ ನಾಶಾಯ ಸಮೃದ್ಧವೇಗಾಃ ।
ತಥೈವ ನಾಶಾಯ ವಿಶಂತಿ ಲೋಕಾಃ ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ ॥ 11-29॥
29. O Lord,
Just as moths enter the fire, in great hurry,
For their own destruction,
So people are seen entering your mouths,
In great haste, for their own ruination!
ಹೇ ಪ್ರಭುವೇ, ಹೇಗೆ ಮರಣ ಸಮೀಪಿಸಿದ ಪತಂಗಗಳು ಮೋಹವಶವಾಗಿ ತಮ್ಮ ವಿನಾಶಕ್ಕಾಗಿ
ಉರಿಯುತ್ತಿರುವ ಜ್ವಾಲೆಯನ್ನು ಪ್ರವೇಶಿಸುತ್ತವೆಯೋ, ಹಾಗೆಯೇ ಕಾಲವು ಸಮೀಪಿಸಿರುವ ಈ ಎಲ್ಲಾ ಜನರೂ
ಕೂಡ ಅತಿವೇಗದಿಂದ, ನಿನ್ನ ಬಾಯಿಗಳೊಳಕ್ಕೆ ತಮ್ಮ ನಾಶಕ್ಕಾಗಿ ಧಾವಿಸಿ ಪ್ರವೇಶಮಾಡುತ್ತಿರುವರು.
लेलिह्यसे ग्रसमानः समन्तात्
लोका न्समग्रान्वदनैर्ज्वलद्भिः।
तेजोभिरापूर्य जगत्समग्रं
भासस्तवोग्राः प्रतपन्ति विष्णो॥११.३०॥
ಲೇಲಿಹ್ಯಸೇ ಗ್ರಸಮಾನಃ ಸಮಂತಾತ್
ಲೋಕಾನ್ಸಮಗ್ರಾನ್ವದನೈರ್ಜ್ವಲದ್ಭಿಃ ।
ತೇಜೋಭಿರಾಪೂರ್ಯ ಜಗತ್ಸಮಗ್ರಂಯಃ
ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ॥ 11-30॥
लेलिह्यसे ग्रसमानः समन्तात् लोका न्समग्रान्वदनैर्ज्वलद्भिः। तेजोभिरापूर्य जगत्समग्रं भासस्तवोग्राः प्रतपन्ति विष्णो॥११.३०॥
ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ಸಮಗ್ರಾನ್ವದನೈರ್ಜ್ವಲದ್ಭಿಃ ।
ತೇಜೋಭಿರಾಪೂರ್ಯ ಜಗತ್ಸಮಗ್ರಂಯಃ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ॥ 11-30॥
30. O Lord Vishnu,
You seem to enjoy
Gobbling up and licking
All living beings
When they enter your blazing mouths.
You seem to fill the whole universe
With the radiance of those flames
That are dreadful and scorching!
ಹೇ ವಿಷ್ಣುವೇ, ಅವರು ಉರಿಯುತ್ತಿರುವ ನಿನ್ನ ಬಾಯಿಗಳನ್ನು ಪ್ರವೇಶಿಸುವಾಗ, ಆ ಎಲ್ಲಾ ಜೀವಿಗಳನ್ನೂ ಚಪ್ಪರಿಸುತ್ತಾ ಕಬಳಿಸುವುದನ್ನು ನೀನು ಆಸ್ವಾದಿಸುತ್ತಿರುವಂತೆ ತೋರುತ್ತಿದೆ. ಭೀಕರವಾದ ಮತ್ತು ದಹಿಸುವ ಆ ಅಗ್ನಿಜ್ವಾಲೆಗಳ ಪ್ರಖರ ತಾಪದಿಂದ ನೀನು ಇಡೀ ವಿಶ್ವವನ್ನು ತುಂಬಿಕೊಂಡಂತೆ ಕಾಣುತ್ತಿದೆ.
आख्याहि मे को भवानुग्ररूपो
नमोऽस्तु ते देववर प्रसीद।
विज्ञातुमिच्छामि भवन्तमाद्यं
न हि प्रजानामि तव प्रवृत्तिम्॥११.३१॥
ಆಖ್ಯಾಹಿ ಮೇ ಕೋ ಭವಾನುಗ್ರರೂಪೋ
ನಮೋಽಸ್ತು ತೇ ದೇವವರ ಪ್ರಸೀದ ।
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ
ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ॥ 11-31॥
आख्याहि मे को भवानुग्ररूपो नमोऽस्तु ते देववर प्रसीद।
विज्ञातुमिच्छामि भवन्तमाद्यं न हि प्रजानामि तव प्रवृत्तिम्॥११.३१॥
ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋಽಸ್ತು ತೇ ದೇವವರ ಪ್ರಸೀದ ।
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ॥ 11-31॥
31. O Lord, Chief of all Divinities!
Salutations to you.
Be gracious towards me,
As I fail to understand
The nature of your activity.
Tell me who you are
With this fearful Form.
I wish to know you
The Primordial Being.
ಓ ಪ್ರಭುಗಳ ಪ್ರಭುವೇ, ನಿನಗೆ ನನ್ನ ಪ್ರಣಾಮಗಳು. ದಯವಿಟ್ಟು ನನ್ನಲ್ಲಿ ಕೃಪೆಮಾಡು. ನೀನು ಪ್ರಸನ್ನನಾಗು. ನಿನ್ನ
ಪ್ರವೃತ್ತಿಯನ್ನು, ನಿನ್ನ ಉದ್ದೇಶವನ್ನೂ ಅರಿಯಲು ನಾನು ಅಸಮರ್ಥನು. ಉಗ್ರರೂಪಿಯಾದ ನೀನು ಯಾರು
ಎಂಬುದನ್ನು ನನಗೆ ಹೇಳು. ಆದಿಪುರುಷನಾದ ನಿನ್ನನ್ನು ನಾನು ತಿಳಿಯಲು ಬಯಸುತ್ತೇನೆ.
श्रीभगवानुवाच
कालोऽस्मि लोकक्षयकृत्प्रवृद्धो
लोकान्समाहर्तुमिह प्रवृत्तः।
ऋतेऽपि त्वां न भविष्यन्ति सर्वे
येऽवस्थिताः प्रत्यनीकेषु योधाः॥११.३२॥
ಶ್ರೀಭಗವಾನುವಾಚ ।
ಕಾಲೋಽಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ
ಲೋಕಾನ್ಸಮಾಹರ್ತುಮಿಹ ಪ್ರವೃತ್ತಃ ।
ಋತೇಽಪಿ ತ್ವಾಂ ನ ಭವಿಷ್ಯಂತಿ ಸರ್ವೇ
ಯೇಽವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ॥ 11-32॥
कालोऽस्मि लोकक्षयकृत्प्रवृद्धो लोकान्समाहर्तुमिह प्रवृत्तः।
ऋतेऽपि त्वां न भविष्यन्ति सर्वे येऽवस्थिताः प्रत्यनीकेषु योधाः॥११.३२॥
ಕಾಲೋಽಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ ಲೋಕಾನ್ಸಮಾಹರ್ತುಮಿಹ ಪ್ರವೃತ್ತಃ ।
ಋತೇಽಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇಽವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ॥ 11-32॥
32. Sri Bhagawan said:
Arjuna,
I am Time Terrible
Commanding the Dissolution of the world.
I am in Active State of gathering
All beings in the world.
All those warriors deployed
In the enemy ranks
Will cease to exist.
Without you even!
ಶ್ರೀ ಭಗವಂತನು ಹೇಳಿದನು:- ಅರ್ಜುನಾ, ನಾನು ಲೋಕಗಳನ್ನು ನಾಶಮಾಡಲು ಬೆಳೆದಿರುವಂತಹ ಮಹಾಕಾಲನಾಗಿದ್ದೇನೆ. ಈ ಸಮಯದಲ್ಲಿ ಈ ಲೋಕಗಳನ್ನು ನಾಶಪಡಿಸುವುದಕ್ಕಾಗಿ ಪ್ರವೃತ್ತನಾಗಿದ್ದೇನೆ. ಲೋಕಗಳನ್ನು ಪ್ರಳಯ ಮಾಡುವುದೇ ನನ್ನ ಕೆಲಸ. ಅದಕ್ಕಾಗಿ ಶತ್ರು ಸೈನ್ಯಗಳಲ್ಲಿ ಯಾವ ಯೋಧರು ಇರುವರೋ ಅವರೆಲ್ಲರೂ ನೀನು ಯುದ್ಧ ಮಾಡದಿದ್ದರೂ ಸಹ ಉಳಿಯಲಾರರು. ಅರ್ಥಾತ್ ಇವರೆಲ್ಲರೂ ನಾಶವಾಗುವರು.
तस्मात्त्वमुत्तिष्ठ यशो लभस्व
जित्वा शत्रून्भुङ्क्ष्व राज्यं समृद्धम्।
मयैवैते निहताः पूर्वमेव
निमित्तमात्रं भव सव्यसाचिन्॥११.३३॥
ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ ।
ಮಯೈವೈತೇ ನಿಹತಾಃ ಪೂರ್ವಮೇವ
ನಿಮಿತ್ತಮಾತ್ರಂ ಭವ ಸವ್ಯಸಾಚಿನ್ ॥ 11-33॥
तस्मात्त्वमुत्तिष्ठ यशो लभस्व जित्वा शत्रून्भुङ्क्ष्व राज्यं समृद्धम्।
मयैवैते निहताः पूर्वमेव निमित्तमात्रं भव सव्यसाचिन्॥११.३३॥
ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ ।
ಮಯೈವೈತೇ ನಿಹತಾಃ ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್ ॥ 11-33॥
33. Therefore, Arjuna,
Stand up.
I know you are skilful
In wielding arrows
With your left hand, too.
Conquer your enemies.
Win renown and enjoy
The riches of kingdom.
All your enemies have already been killed
By me. Be a mere pretext or excuse
For their elimination.
ಆದುದರಿಂದ ಎದ್ದೇಳು ಅರ್ಜುನಾ! ನೀನು ನಿನ್ನ ಎಡಗೈಯಿಂದಲೂ ಸಹ ಬಾಣಪ್ರಯೋಗ ಮಾಡಬಲ್ಲ
ಸವ್ಯಸಾಚಿಯೆಂದು ನನಗೆ ತಿಳಿದಿದೆ. ನಿನ್ನ ಶತ್ರುಗಳನ್ನು ಜಯಿಸು. ಗೆದ್ದು ಸಮೃದ್ಧವಾದ ರಾಜ್ಯವನ್ನು
ಸ್ವೇಚ್ಛೆಯಾಗಿ ಅನುಭವಿಸು. ನಿನ್ನ ಶತ್ರುಗಳೆಲ್ಲರೂ ಈ ಮೊದಲೇ ನನ್ನಿಂದಲೇ ಹತರಾಗಿರುವರು. ಅವರ
ಅಳಿವಿಗೆ ನೀನು ನಿಮಿತ್ತ ಮಾತ್ರನಾಗಿ ನಿಲ್ಲು.
द्रोणं च भीष्मं च जयद्रथं च
कर्णं तथान्यानपि योधवीरान्।
मया हतान्स्त्वं जहि मा व्यथिष्ठा
युध्यस्व जेतासि रणे सपत्नान्॥११.३४॥
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ
ಕರ್ಣಂ ತಥಾನ್ಯಾನಪಿ ಯೋಧವೀರಾನ್ ।
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ
ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ ॥ 11-34॥
द्रोणं च भीष्मं च जयद्रथं च कर्णं तथान्यानपि योधवीरान्।
मया हतान्स्त्वं जहि मा व्यथिष्ठा युध्यस्व जेतासि रणे सपत्नान्॥११.३४॥
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾನ್ಯಾನಪಿ ಯೋಧವೀರಾನ್ ।
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ ॥ 11-34॥
34. Arjuna,
Get up and go to kill
Drona, Bheeshma, Jayadratha, Karna
And all the other warriors.
Do not be worried.
For all of them have already been killed by me.
Go and fight.
You will win over the enemies in the war.
ಅರ್ಜುನಾ; ನನ್ನಿಂದ ಆಗಲೇ ಕೊಲ್ಲಲ್ಪಟ್ಟು ನಾಮ ಮಾತ್ರಕ್ಕೆ ಇರುವ ದ್ರೋಣಾಚಾರ್ಯರು, ಭೀಷ್ಮಾಚಾರ್ಯರು,
ಜಯದ್ರಥ, ಕರ್ಣ ಮತ್ತು ಇತರ ವೀರ ಯೋಧರನ್ನು ಎದ್ದುನಿಂತು ವಧಿಸು. ವ್ಯಥೆ ಪಡಬೇಡ. ಚಿಂತೆಯನ್ನು ಬಿಟ್ಟು
ಹೋಗಿ ಯುದ್ಧ ಮಾಡು. ನಿಸ್ಸಂದೇಹವಾಗಿ ನೀನು ಯುದ್ಧದಲ್ಲಿ ಶತ್ರುಗಳನ್ನು ಜಯಿಸುವೆ.
सञ्जय उवाच
एतच्छृत्वा वचनं केशवस्य
कृताञ्जलिर्वेपमानः किरीटी।
नमस्कृत्वा भूय एवाह कृष्णं
सगद्गदं भीतभीतः प्रणम्य॥११.३५॥
ಸಂಜಯ ಉವಾಚ ।
ಏತಚ್ಛ್ರುತ್ವಾ ವಚನಂ ಕೇಶವಸ್ಯ
ಕೃತಾಂಜಲಿರ್ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ
ಸಗದ್ಗದಂ ಭೀತಭೀತಃ ಪ್ರಣಮ್ಯ ॥ 11-35॥
एतच्छृत्वा वचनं केशवस्य कृताञ्जलिर्वेपमानः किरीटी।
नमस्कृत्वा भूय एवाह कृष्णं सगद्गदं भीतभीतः प्रणम्य॥११.३५॥
ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ॥ 11-35॥
35. Sanjaya said:
Having listened to Krishna’s words,
Arjuna, in a nervous and agitated state,
Prostrated before Krishna with folded hands.
Bowing down again, he spoke to Krishna,
Fumbling for words.
ಸಂಜಯ ಹೇಳಿದನು;
ಶ್ರೀ ಕೃಷ್ಣನ ಈ ಮಾತನ್ನು ಕೇಳಿ ಅರ್ಜುನನು ಧೈರ್ಯಹೀನನಾಗಿ, ಕ್ಷೋಭೆಯಿಂದ ನಡುಗುತ್ತಾ, ಕೈಗಳನ್ನು ಜೋಡಿಸಿಕೊಂಡು, ಕೃಷ್ಣನಿಗೆ ಪುನಃ ಪುನಃ ನಮಸ್ಕಾರ ಮಾಡಿದನು. ನಂತರ ಮಾತನಾಡಲು ತಡಬಡಿಸುತ್ತಾ ತಲೆಬಾಗಿಸಿಕೊಂಡು ಗದ್ಗದ ಕಂಠದಿಂದ ಶ್ರೀಕೃಷ್ಣನಿಗೆ ಹೀಗೆ ಹೇಳಿದನು.
अर्जुन उवाच
स्थाने हृषीकेश तव प्रकीर्त्या
जगत्प्रहृष्यत्यनुरज्यते च।
रक्षांसि भीतानि दिशो द्रवन्ति
सर्वे नमस्यन्ति च सिद्धसङ्घाः॥११.३६॥
ಅರ್ಜುನ ಉವಾಚ ।
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ
ಜಗತ್ಪ್ರಹೃಷ್ಯತ್ಯನುರಜ್ಯತೇ ಚ ।
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ
ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ॥ 11-36॥
स्थाने हृषीकेश तव प्रकीर्त्या जगत्प्रहृष्यत्यनुरज्यते च।
रक्षांसि भीतानि दिशो द्रवन्ति सर्वे नमस्यन्ति च सिद्धसङ्घाः॥११.३६॥
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾಂ ಅಗತ್ಪ್ರಹೃಷ್ಯತ್ಯನುರಜ್ಯತೇ ಚ ।
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ॥ 11-36॥
36. Arjuna said:
Krishna,
By praising your Glory in song
The whole world is gratified.
All the people in the world enjoy doing so.
But the Rakshasas, fearing you, take to their heels,
Whereas all groups of Siddhas or perfected souls
Offer their obeisance to you.
It is very appropriate that they do so.
ಅರ್ಜುನ ಹೇಳಿದನು:
ಕೃಷ್ಣಾ, ನಿನ್ನ ಮಹಾತ್ಮೆಯ ಕೀರ್ತನೆಯಿಂದ ಸಕಲ ಜಗತ್ತು ಸಂತಸಪಡುತ್ತಲಿದೆ ಮತ್ತು ನಿನ್ನಲ್ಲಿ ಅನುರಾಗವನ್ನು ಹೊಂದುತ್ತಲಿದೆ. ನಿನ್ನನ್ನು ಕೊಂಡಾಡುವುದನ್ನು ಎಲ್ಲರೂ ಆನಂದಿಸುತ್ತಾರೆ. ಆದರೆ ಭಯಭೀತರಾದ ರಾಕ್ಷಸರು ಮಾತ್ರ ಬೆದರಿ ಎಲ್ಲ ದಿಕ್ಕುಗಳಲ್ಲಿ ಓಡಿಹೋಗುತ್ತಾರೆ, ಹಾಗೂ ಸಿದ್ಧರ ಸಮೂಹವು ನಿನಗೆ ತಮ್ಮ ಗೌರವಪೂರ್ವಕ ನಮಸ್ಕಾರಗಳನ್ನು ಅರ್ಪಿಸುತ್ತಾರೆ. ಅವರು ಹಾಗೆ ಮಾಡುವುದು ಯುಕ್ತವಾಗಿಯೇ ಇದೆ.
कस्माच्च ते न नमेरन्महात्मन्
गरीयसे ब्रह्मणोऽप्यादिकर्त्रे।
अनन्त देवेश जगन्निवास
त्वमक्षरं सदसत्परं यत्॥११.३७॥
ಕಸ್ಮಾಚ್ಚ ತೇ ನ ನಮೇರನ್ಮಹಾತ್ಮನ್
ಗರೀಯಸೇ ಬ್ರಹ್ಮಣೋಽಪ್ಯಾದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ
ತ್ವಮಕ್ಷರಂ ಸದಸತ್ತತ್ಪರಂ ಯತ್ ॥ 11-37॥
कस्माच्च ते न नमेरन्महात्मन् गरीयसे ब्रह्मणोऽप्यादिकर्त्रे।
अनन्त देवेश जगन्निवास त्वमक्षरं सदसत्परं यत्॥११.३७॥
ಕಸ್ಮಾಚ್ಚ ತೇ ನ ನಮೇರನ್ಮಹಾತ್ಮನ್ ಗರೀಯಸೇ ಬ್ರಹ್ಮಣೋಽಪ್ಯಾದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ತತ್ಪರಂ ಯತ್ ॥ 11-37॥
37. O Krishna,
You are the Primal Cause.
You are more Pre-eminent than even Brahma.
O the Infinite One,
O God of gods,
You are the Abode and Refuge
For the entire world.
You are Imperishable.
You are Sat and Asat: Being and Non-being.
You are beyond them both.
You are the Mighty One, Mahatma.
So all should salute you, shouldn’t they?
ಎಲೈ ಮಹಾತ್ಮನೇ, ನೀನು ಆದಿ ಸೃಷ್ಟಿಕರ್ತನು. ಬ್ರಹ್ಮನನ್ನೂ ಮೀರಿದ ಸರ್ವೋತ್ಕೃಷ್ಟನು. ಹೇ ಅನಂತನೇ, ದೇವತೆಗಳಿಗೇ ದೇವ ನೀನು. ಸಕಲ ವಿಶ್ಚಕ್ಕೂ ನೀನೇ ನಿವಾಸಸ್ಥಾನನು ಮತ್ತು ಆಶ್ರಯದಾತನು. ನೀನು ಅಕ್ಷಯನು. ನೀನು ಸತ್ತಿಗೂ, ಅಸತ್ತಿಗೂ ಅತೀತನಾಗಿರುವ ಪರಬ್ರಹ್ಮನಲ್ಲವೇ? ನೀನು ಅಜೇಯನು. ಮಹಾತ್ಮನೇ ನೀನು ಎಲ್ಲಾ ಕಾರಣಗಳ ಕಾರಣನು. ಈ ಐಹಿಕ ಅಭಿವ್ಯಕ್ತಿಗೆ ಅತೀತನಾದವನು. ಆದುದರಿಂದ ಎಲ್ಲರೂ ನಿನಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಏಕೆ ಅರ್ಪಿಸಬಾರದು?
त्वमादिदेवः पुरुषः पुराणः
त्वं अस्य विश्वस्य परं निधानम्।
वेत्तासि वेद्यं च परं च धाम
त्वया ततं विश्वमनन्तरूप॥११.३८॥
ತ್ವಮಾದಿದೇವಃ ಪುರುಷಃ ಪುರಾಣಃ
ತ್ವಂ ಅಸ್ಯ ವಿಶ್ವಸ್ಯ ಪರಂ ನಿಧಾನಮ್ ।
ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ
ತ್ವಯಾ ತತಂ ವಿಶ್ವಮನಂತರೂಪ ॥ 11-38॥
त्वमादिदेवः पुरुषः पुराणः त्वं अस्य विश्वस्य परं निधानम्।
वेत्तासि वेद्यं च परं च धाम त्वया ततं विश्वमनन्तरूप॥११.३८॥
ತ್ವಮಾದಿದೇವಃ ಪುರುಷಃ ಪುರಾಣಃ ತ್ವಂ ಅಸ್ಯ ವಿಶ್ವಸ್ಯ ಪರಂ ನಿಧಾನಮ್ ।
ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ॥ 11-38॥
38. O Lord of Eternal Form,
you are the Prime Lord,
Eternal and Supreme Being.
You are the Great Nourisher
and Support to the universe.
You are the Knower of all
that is to be known.
You are the Ultimate Destination
and the entire universe is pervaded by you.
ಓ ಸನಾತನ ರೂಪಿಯಾದ ಭಗವಂತನೇ, ನೀನು ಆದಿ ದೇವನು, ಪುರಾಣ ಪುರುಷನು. ಈ ವಿಶ್ವಕ್ಕೆ ಪರಂಧಾಮನು. ಈ ಪ್ರಕಟಿತ ವಿಶ್ವದ ಅಂತಿಮ ಆಶ್ರಯ ನೀನು. ಎಲ್ಲವನ್ನೂ ತಿಳಿದವನು ನೀನು. ತಿಳಿಯಲು ಸಾಧ್ಯವಿರುವುದು ಎಲ್ಲವೂ ನೀನೇ. ಹೇ ಅನಂತರೂಪನೇ, ಈ ವಿಶ್ವವನ್ನೆಲ್ಲಾ ನೀನೇ ವ್ಯಾಪಿಸಿರುವೆ.
वायुर्यमोऽग्निर्वरुणः शशाङ्कः
प्रजापतिस्त्वं प्रपितामहश्च।
नमो नमस्ते2स्तु सहस्रकृत्वः
पुनश्च भूयोऽपि नमो नमस्ते॥११.३९॥
ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ
ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ ।
ನಮೋ ನಮಸ್ತೇಽಸ್ತು ಸಹಸ್ರಕೃತ್ವಃ
ಪುನಶ್ಚ ಭೂಯೋಽಪಿ ನಮೋ ನಮಸ್ತೇ ॥ 11-39॥
वायुर्यमोऽग्निर्वरुणः शशाङ्कः प्रजापतिस्त्वं प्रपितामहश्च।
नमो नमस्ते2स्तु सहस्रकृत्वः पुनश्च भूयोऽपि नमो नमस्ते॥११.३९॥
ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ ।
ನಮೋ ನಮಸ್ತೇಽಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋಽಪಿ ನಮೋ ನಮಸ್ತೇ ॥ 11-39॥
39. O Lord,
You are Vayu, god of Wind,
Yama, god of Death, Agni, god of Fire,
Varuna, god of Water, Sasanka, the Moon,
Prajapati, the Progenitor of all beings,
And Grandfather, being Brahma’s father.
You are every one of them. All of them.
Salutations to you. Salutations a thousand times.
Again salutations. I salute you again and again.
ಓ ಭಗವಂತನೇ, ನೀನೇ ವಾಯು, ಗಾಳಿಯ ದೇವತೆ, ನೀನೇ ಯಮ, ಮೃತ್ಯು ದೇವತೆ, ನೀನೇ ಅಗ್ನಿ ಬೆಂಕಿಯ ದೇವತೆ. ನೀನೇ ವರುಣ, ಜಲದೇವತೆ. ನೀನೇ ಶಶಾಂಕ, ಚಂದ್ರನು, ನೀನೆ ಪ್ರಜಾಪತಿ, ಎಲ್ಲ ಜೀವಿಗಳ ಮೂಲ ಪುರುಷ, ನೀನೇ ಬ್ರಹ್ಮನ ತಂದೆಯಾದ ಪ್ರಪಿತಾಮಹ. ಇವರೆಲ್ಲರೂ ನೀನು. ನಿನಗೆ ಸಾವಿರ ಬಾರಿ ನಮಸ್ಕಾರ. ಪುನಃ ಪುನಃ ನಿನಗೆ ನನ್ನ ಪ್ರಣಾಮಗಳು.
नमः पुरस्तादथ पृष्ठतस्ते
नमोऽस्तु ते सर्वत एव सर्व।
अनन्तवीर्यामितविक्रमस्त्वं
सर्वं समाप्नोषि ततोऽसि सर्वः॥११.४०॥
ನಮಃ ಪುರಸ್ತಾದಥ ಪೃಷ್ಠತಸ್ತೇ
ನಮೋಽಸ್ತು ತೇ ಸರ್ವತ ಏವ ಸರ್ವ ।
ಅನಂತವೀರ್ಯಾಮಿತವಿಕ್ರಮಸ್ತ್ವಂ
ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ ॥ 11-40॥
नमः पुरस्तादथ पृष्ठतस्ते नमोऽस्तु ते सर्वत एव सर्व।
अनन्तवीर्यामितविक्रमस्त्वं सर्वं समाप्नोषि ततोऽसि सर्वः॥११.४०॥
ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋಽಸ್ತು ತೇ ಸರ್ವತ ಏವ ಸರ್ವ ।
ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ ॥ 11-40॥
40. O All-Inclusive Lord,
I salute standing in front of you.
I salute you from behind you, too.
My salutations to you from all sides.
You have Infinite Power and
Immeasurable Energy.
You have pervaded the whole Universe.
You are indeed All in All.
ಎಲೈ ಸರ್ವಾತ್ಮನೇ, ನಿನ್ನ ಮುಂದೆ ನಿಂತು ನಾನು ನಿನಗೆ ನಮಸ್ಕರಿಸುತ್ತೇನೆ. ನಿನ್ನ ಹಿಂದಿನಿಂದಲೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ನಿನಗೆ ಎಲ್ಲ ಕಡೆಗಳಿಂದಲೂ, ನಮಸ್ಕಾರವನ್ನು ಮಾಡುತ್ತೇನೆ. ಎಲೈ ಅನಂತವೀರ್ಯನೇ, ನೀನು ಅಮಿತ ಪರಾಕ್ರಮಶಾಲಿ. ನೀನು ಎಲ್ಲ ಜಗತ್ತನ್ನೂ ವ್ಯಾಪಿಸಿಕೊಂಡಿರುವೆ. ಆದ್ದರಿಂದ ಎಲ್ಲವೂ ನೀನೇ ಆಗಿದ್ದೇಯೆ.
सखेति मत्वा प्रसभं यदुक्तं
हे कृष्ण हे यादव हे सखेति।
अजानता महिमानं तवेदं
मया प्रमादात्प्रणयेन वापि॥११.४१॥
ಸಖೇತಿ ಮತ್ವಾ ಪ್ರಸಭಂ ಯದುಕ್ತಂ
ಹೇ ಕೃಷ್ಣ ಹೇ ಯಾದವ ಹೇ ಸಖೇತಿ ।
ಅಜಾನತಾ ಮಹಿಮಾನಂ ತವೇದಂ
ಮಯಾ ಪ್ರಮಾದಾತ್ಪ್ರಣಯೇನ ವಾಪಿ ॥ 11-41॥
सखेति मत्वा प्रसभं यदुक्तं हे कृष्ण हे यादव हे सखेति।
अजानता महिमानं तवेदं मया प्रमादात्प्रणयेन वापि॥११.४१॥
ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ ।
ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ಪ್ರಣಯೇನ ವಾಪಿ ॥ 11-41॥
यच्चावहासार्थमसत्कृतोऽसि
विहारशय्यासनभोजनेषु।
एकोऽथवाप्यच्युत तत्समक्षं
तत्क्षामये त्वामहमप्रमेयम्॥११.४२॥
ಯಚ್ಚಾವಹಾಸಾರ್ಥಮಸತ್ಕೃತೋಽಸಿ
ವಿಹಾರಶಯ್ಯಾಸನಭೋಜನೇಷು ।
ಏಕೋಽಥವಾಪ್ಯಚ್ಯುತ ತತ್ಸಮಕ್ಷಂ
ತತ್ಕ್ಷಾಮಯೇ ತ್ವಾಮಹಮಪ್ರಮೇಯಮ್ ॥ 11-42॥
यच्चावहासार्थमसत्कृतोऽसि विहारशय्यासनभोजनेषु।
एकोऽथवाप्यच्युत तत्समक्षं तत्क्षामये त्वामहमप्रमेयम्॥११.४२॥
ಯಚ್ಚಾವಹಾಸಾರ್ಥಮಸತ್ಕೃತೋಽಸಿ ವಿಹಾರಶಯ್ಯಾಸನಭೋಜನೇಷು ।
ಏಕೋಽಥವಾಪ್ಯಚ್ಯುತ ತತ್ಸಮಕ್ಷಂ ತತ್ಕ್ಷಾಮಯೇ ತ್ವಾಮಹಮಪ್ರಮೇಯಮ್ ॥ 11-42॥
41. O Achyuta, the Imperishable One,
42. Without knowing your Glory and Majesty,
Thinking that you are my pal,
My companion,
I addressed you as “O Krishna, O Yadava, O Sakha.”
It was quite improper
And indecent way of addressing you.
May be due to my affection for you
Or carelessness
I behaved like that both in privacy
And in the company of others,—
While resting, sitting, eating or playing games.
I beg you, O Immeasurable One,
To pardon me for those offences.
ಎಲೈ ಅಚ್ಯುತ, ನಿನ್ನ ಮಹಿಮೆಯನ್ನು ಮತ್ತು ಈ ವಿಶ್ವರೂಪವನ್ನು ಅರಿಯದೆ, ನೀನು ನನ್ನ ಸ್ನೇಹಿತನೆಂದು ತಿಳಿದು, ನನ್ನ ಒಡನಾಡಿ ಎಂದು ಭಾವಿಸಿ, ಯೋಚನೆ ಮಾಡದೆ ನಿನ್ನನ್ನು “ಓ ಕೃಷ್ಣಾ, ಓ ಯಾದವಾ, ಓ ಗೆಳೆಯಾ” ಎಂದೆಲ್ಲ ಕರೆದಿದ್ದೇನೆ. ಪ್ರಮಾದದಿಂದಾಗಲಿ, ಪ್ರೀತಿಯಿಂದಾಗಲಿ, ನಾನು ಮಾಡಿರುವ ಅಪರಾಧಗಳನ್ನು ಕ್ಷಮಿಸು. ವಿಶ್ರಮಿಸುವಾಗ, ಕುಳಿತಿರುವಾಗ, ಊಟ ಮಾಡುವಾಗ, ವಿಹಾರದಲ್ಲಿರುವಾಗ ಅಥವಾ ನಾವಿಬ್ಬರೇ ಇದ್ದಾಗಲಾಗಲೀ, ಇತರರ ಎದುರಿಗಾಗಲೀ ನಾನು ನಿನಗೆ ಅಪಹಾಸ್ಯ ಮಾಡಿದ್ದಕ್ಕಾಗಲೀ, ನಿನ್ನನ್ನು ತೃಣೀಕರಿಸಿದ ಅಪಚಾರಕ್ಕಾಗಲೀ ನಾನು ನಿನ್ನ ಕ್ಷಮೆಯನ್ನು ಕೋರುತ್ತೇನೆ. ಹೇ ಅಪ್ರಮೇಯ! ನಿನ್ನ ಸಮಕ್ಷಮದಲ್ಲಿ ಕ್ಸಮಾಪಣೆ ಬೇಡುತ್ತೇನೆ.
पितासि लोकस्य चराचरस्य
त्वमस्य पूज्यश्च गुरुर्गरीयान्।
न त्वत्समोऽस्त्यभ्यधिकः कुतोऽन्यो
लोकत्रयेप्यप्रतिमप्रभाव॥११.४३॥
ಪಿತಾಸಿ ಲೋಕಸ್ಯ ಚರಾಚರಸ್ಯ
ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ।
ನ ತ್ವತ್ಸಮೋಽಸ್ತ್ಯಭ್ಯಧಿಕಃ ಕುತೋಽನ್ಯೋ
ಲೋಕತ್ರಯೇಽಪ್ಯಪ್ರತಿಮಪ್ರಭಾವ ॥ 11-43॥
पितासि लोकस्य चराचरस्य त्वमस्य पूज्यश्च गुरुर्गरीयान्।
न त्वत्समोऽस्त्यभ्यधिकः कुतोऽन्यो लोकत्रयेप्यप्रतिमप्रभाव॥११.४३॥
ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ।
ನ ತ್ವತ್ಸಮೋಽಸ್ತ್ಯಭ್ಯಧಿಕಃ ಕುತೋಽನ್ಯೋ ಲೋಕತ್ರಯೇಽಪ್ಯಪ್ರತಿಮಪ್ರಭಾವ ॥ 11-43॥
43. O Lord of Unparalleled Power,
You are the Father of the entire universe.
For all the sentient and non-sentient beings,
You are the Venerable Guru,
Worthy of worship.
There is none equal to you
In all the three worlds.
How can there be?
ಹೇ ಅಪ್ರತಿಮ ಪ್ರಭಾವನೇ, ಈ ಸಮಸ್ತ ವಿಶ್ವಕ್ಕೆ ನೀನೇ ತಂದೆ. ಈ ಸ್ಥಾವರ ಜಂಗಮಾತ್ಮಕವಾದ ಲೋಕಕ್ಕೆ ಪೂಜನೀಯ ಮಹಾ ಗುರುವು ನೀನು. ಮೂರು ಲೋಕಗಳಲ್ಲಿ ನಿನಗೆ ಸರಿಸಾಟಿಯಾದವರು ಯಾರೂ ಇಲ್ಲ. ಹೀಗಿರುವಾಗ ನಿನಗಿಂತ ಮಿಗಿಲಾದವರು ಇರಲು ಹೇಗೆ ಸಾಧ್ಯ?
तस्मात्प्रणम्य प्रणिधाय कायं
प्रसादये त्वामहमीशमीड्यम्।
पितेव पुत्रस्य सखेव सख्युः
प्रियः प्रियायार्हसि देव सोढुम्॥११.४४॥
ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ
ಪ್ರಸಾದಯೇ ತ್ವಾಮಹಮೀಶಮೀಡ್ಯಮ್ ।
ಪಿತೇವ ಪುತ್ರಸ್ಯ ಸಖೇವ ಸಖ್ಯುಃ
ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ॥ 11-44॥
तस्मात्प्रणम्य प्रणिधाय कायं प्रसादये त्वामहमीशमीड्यम्।
पितेव पुत्रस्य सखेव सख्युः प्रियः प्रियायार्हसि देव सोढुम्॥११.४४॥
ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್ ।
ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ॥ 11-44॥
44. Hence, O Resplendent Lord,
I salute you, lying prostrate.
I seek favour from you.
You should bear with me,
As a father does with his son,
A friend with friend, and
A lover with his beloved.
ಆದುದರಿಂದ ತೇಜಸ್ವಿಯಾದ ಪ್ರಭುವೇ, ಪೂಜ್ಯನಾದ ನಿನಗೆ ದೀರ್ಘದಂಡ ಸಾಷ್ಟಾಂಗ ನಮಸ್ಕಾರ ಮಾಡಿ ನಿನ್ನ ದಯೆಯನ್ನು ಬೇಡುತ್ತೇನೆ. ತಂದೆಯು ಮಗನ ಅವಿಧೇಯತೆಯನ್ನು, ಸ್ನೇಹಿತನು ಸ್ನೇಹಿತನ ಅಧಿಕಪ್ರಸಂಗವನ್ನು ಮತ್ತು ಪ್ರಿಯಕರನು ತನ್ನ ಪ್ರಿಯತಮೆಯ ಸಲಿಗೆಯನ್ನು, ಕ್ಷಮಿಸುವಂತೆ, ನೀನು ನಾನು ಮಾಡಿರಬಹುದಾದ ತಪ್ಪುಗಳನ್ನು ಮನ್ನಿಸಬೇಕು ದೇವಾ!
अदृष्टपूर्वं हृषितोऽस्मि दृष्ट्वा
भयेन च प्रव्यथितं मनो मे।
तदेव मे दर्शय देव रूपं
प्रसीद देवेश जगन्निवास॥११.४५॥
ಅದೃಷ್ಟಪೂರ್ವಂ ಹೃಷಿತೋಽಸ್ಮಿ ದೃಷ್ಟ್ವಾ
ಭಯೇನ ಚ ಪ್ರವ್ಯಥಿತಂ ಮನೋ ಮೇ ।
ತದೇವ ಮೇ ದರ್ಶಯ ದೇವ ರೂಪಂ
ಪ್ರಸೀದ ದೇವೇಶ ಜಗನ್ನಿವಾಸ ॥ 11-45॥
अदृष्टपूर्वं हृषितोऽस्मि दृष्ट्वा भयेन च प्रव्यथितं मनो मे।
तदेव मे दर्शय देव रूपं प्रसीद देवेश जगन्निवास॥११.४५॥
ಅದೃಷ್ಟಪೂರ್ವಂ ಹೃಷಿತೋಽಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ ।
ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ ॥ 11-45॥
45.
O Resplendent Lord,
I am delighted by seeing
What has never been seen before.
But my mind is frightened by the sight
Of your Cosmic Form.
O God of gods, Abode of the worlds,
Favour me by showing
The Form that is familiar to me.
ಎಲೈ ತೇಜೋಮಯನೇ, ನಾನು ಈ ಮೊದಲು ಎಂದೂ ನೋಡದಿದ್ದ ನಿನ್ನ ಈ ವಿಶ್ವರೂಪವನ್ನು ಕಂಡು
ಹರ್ಷಿತನಾಗಿದ್ದೇನೆ. ಆದರೆ ಅದೇ ಸಮಯದಲ್ಲಿ ನಿನ್ನ ಆಶ್ಚರ್ಯ ರೂಪವನ್ನು ಕಂಡು ನನ್ನ ಮನಸ್ಸು ಭಯದಿಂದ
ತಲ್ಲಣಗೊಂಡಿದೆ. ಹೇ! ದೇವದೇವಾ! ಜಗನ್ನಿವಾಸನೇ, ನನಗೆ ಪರಿಚಿತವಾದ ಆ ನಿನ್ನ ಮೂಲಸ್ವರೂಪವನ್ನು
ಕೃಪೆಮಾಡಿ ಮತ್ತೆ ತೋರಿಸು. ಪ್ರಸನ್ನನಾಗು.
किरीटिनं गदिनं चक्रहस्तं
इच्छामि त्वां द्रष्टुमहं तथैव।
तेनैव रूपेण चतुर्भुजेन
सहस्रबाहो भव विश्वमूर्ते॥११.४६॥
ಕಿರೀಟಿನಂ ಗದಿನಂ ಚಕ್ರಹಸ್ತಂ
ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ ।
ತೇನೈವ ರೂಪೇಣ ಚತುರ್ಭುಜೇನ
ಸಹಸ್ರಬಾಹೋ ಭವ ವಿಶ್ವಮೂರ್ತೇ ॥ 11-46॥
किरीटिनं गदिनं चक्रहस्तं इच्छामि त्वां द्रष्टुमहं तथैव।
तेनैव रूपेण चतुर्भुजेन सहस्रबाहो भव विश्वमूर्ते॥११.४६॥
ಕಿರೀಟಿನಂ ಗದಿನಂ ಚಕ್ರಹಸ್ತಂ ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ ।
ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ ॥ 11-46॥
46. O Thousand-Armed One,
I wish to see a different form of yours –
The familiar one, as in the past,
Wearing a crown and holding a mace,
With the chakra in one hand.
O Lord,
You have made the Cosmos your Abode,
Resume your four-armed Form,
As Vasudeva’s son.
ಎಲೈ ಸಹಸ್ರಬಾಹುವೇ, ಕಿರೀಟಧಾರಿಯಾಗಿ, ಗದಾಧರನಾಗಿ, ಚಕ್ರಪಾಣಿಯಾಗಿ ಮೊದಲಿನಂತೆ ನನಗೆ ಚಿರಪರಿಚಿತವಾಗಿರುವ ನಿನ್ನ ವಿವಿಧ ರೂಪಗಳನ್ನು ನೋಡಲು ಬಯಸುತ್ತೇನೆ. ಹೇ ವಿಶ್ವ ಮೂರ್ತಿಯೇ, ಇಡಿಯ ವಿಶ್ವವನ್ನೇ ನಿನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದೀಯೆ. ವಸುದೇವನ ಮಗನಂತೆ ನಿನ್ನ ಚತುರ್ಭುಜ ರೂಪವನ್ನು ಧರಿಸುವಂತಹವನಾಗು.
श्रीभगवानुवाच
मया प्रसन्नेन तवार्जुनेदं
रूपं परं दर्शितमात्मयोगात्।
तेजोमयं विश्वमनन्तमाद्यं
यन्मे त्वदन्येन न द्रुष्टपूर्वम्॥११.४७॥
ಶ್ರೀಭಗವಾನುವಾಚ ।
ಮಯಾ ಪ್ರಸನ್ನೇನ ತವಾರ್ಜುನೇದಂ
ರೂಪಂ ಪರಂ ದರ್ಶಿತಮಾತ್ಮಯೋಗಾತ್ ।
ತೇಜೋಮಯಂ ವಿಶ್ವಮನಂತಮಾದ್ಯಂ
ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್ ॥ 11-47॥
मया प्रसन्नेन तवार्जुनेदं रूपं परं दर्शितमात्मयोगात्।
तेजोमयं विश्वमनन्तमाद्यं यन्मे त्वदन्येन न द्रुष्टपूर्वम्॥११.४७॥
ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್ ।
ತೇಜೋಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್ ॥ 11-47॥
47. Sri Bhagawan said:
Arjuna,
It is by my grace and benevolence
And with the help of my Yogic Power
That I have revealed to you
The Supreme Cosmic Form –
Brilliant, Universal, Infinite and Primal,
Which none but you saw ever before.
ಭಗವಂತನು ಹೇಳಿದನು: ಅರ್ಜುನಾ, ಪ್ರಸನ್ನನಾದ ನನ್ನ ಕೃಪಾಕಟಾಕ್ಷ ಮತ್ತು ಔದಾರ್ಯದಿಂದ, ಹಾಗೂ ನನ್ನ
ಯೋಗ ಶಕ್ತಿಯ ಪ್ರಭಾವದಿಂದ, ತೇಜೋಮಯವೂ, ಸಂಪೂರ್ಣವೂ, ಅನಂತವೂ, ಅನಾದಿಯೂ ಆದ ಈ ಪರಮ
ವಿಶ್ವರೂಪವನ್ನು ನಾನು ನಿನಗೆ ತೋರಿಸಿದ್ದೇನೆ. ನಿನ್ನ ಹೊರತು ಈ ಮೊದಲು ಬೇರೆ ಯಾರೂ ಇದನ್ನು
ನೋಡಿರಲಿಲ್ಲ.
न वेदयज्ञाध्ययनैर्न दानै:
न च क्रियाभिर्न तपोभिरुग्रैः।
एवंरूपः शक्य अहं नृलोके
द्रष्टुं त्वदन्येन कुरुप्रवीर॥११.४८॥
ನ ವೇದಯಜ್ಞಾಧ್ಯಯನೈರ್ನ ದಾನೈಃ
ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ ।
ಏವಂರೂಪಃ ಶಕ್ಯ ಅಹಂ ನೃಲೋಕೇ
ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ॥ 11-48॥
न वेदयज्ञाध्ययनैर्न दानै: न च क्रियाभिर्न तपोभिरुग्रैः।
एवंरूपः शक्य अहं नृलोके द्रष्टुं त्वदन्येन कुरुप्रवीर॥११.४८॥
ನ ವೇದಯಜ್ಞಾಧ್ಯಯನೈರ್ನ ದಾನೈಃ ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ ।
ಏವಂರೂಪಃ ಶಕ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ॥ 11-48॥
48. Arjuna, the Choicest and
Most Valiant of the Kuru clan,
This Cosmic Form of mine
Cannot be seen by anyone,
Other than you,
In this human world,
Even by means of the study of Vedas,
Or by performing rituals,
Or by making gifts,
Or by observing severe austerities.
ಅರ್ಜುನಾ! ಕುರುವಂಶದಲ್ಲಿಯೇ ಅಪ್ರತಿಮ ಯೋಧನೇ, ನಿನ್ನನ್ನು ಹೊರತುಪಡಿಸಿ ಮನುಷ್ಯಲೋಕದಲ್ಲಿ ಬೇರೆ
ಯಾರೂ ನನ್ನ ಈ ವಿಶ್ವರೂಪವನ್ನು ನೋಡಿರಲಿಲ್ಲ. ವೇದಾಧ್ಯನದಿಂದಾಗಲೀ, ಯಜ್ಞಗಳನ್ನು
ಮಾಡುವುದರಿಂದಾಗಲೀ, ದಾನದಿಂದಾಗಲೀ, ಪುಣ್ಯಕಾರ್ಯಗಳಿಂದಾಗಲೀ, ಉಗ್ರ ತಪಸ್ಸಿನಿಂದಾಗಲೀ, ಈ ಐಹಿಕ
ಜಗತ್ತಿನಲ್ಲಿ ನನ್ನ ಈ ರೂಪವನ್ನು ನೋಡಲು ಬೇರೆ ಯಾರಿಗೂ ಸಾಧ್ಯವಿಲ್ಲ.
मा ते व्यथा मा च विमूढभावो
दृष्ट्वा रूपं घोरमीदृङ्ममेदम्।
व्यपेतभीः प्रीतमनाः पुनस्त्वं
तदेव मे रूपमिदं प्रपस्य॥११.४९॥
ಮಾ ತೇ ವ್ಯಥಾ ಮಾ ಚ ವಿಮೂಢಭಾವೋ
ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಮ್ ।
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ
ತದೇವ ಮೇ ರೂಪಮಿದಂ ಪ್ರಪಶ್ಯ ॥ 11-49॥
मा ते व्यथा मा च विमूढभावो दृष्ट्वा रूपं घोरमीदृङ्ममेदम्।
व्यपेतभीः प्रीतमनाः पुनस्त्वं तदेव मे रूपमिदं प्रपस्य॥११.४९॥
ಮಾ ತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಮ್ ।
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ ॥ 11-49॥
49. Arjuna,
Do not get confused and terror-stricken
By looking at this awesome Form of mine.
Now look at that familiar Form of mine as before,
Without any fear and feeling glad at heart.
ಅರ್ಜುನಾ, ನನ್ನ ಈ ಘೋರವಾದ ಭೀಷಣ ರೂಪವನ್ನು ನೋಡಿ ನೀನು ತಳಮಳಗೊಳ್ಳದಿರು ಮತ್ತು
ಭಯಭೀತನಾಗದಿರು. ಈಗ ಇದು ಮುಕ್ತಾಯವಾಗಲಿ. ನೀನು ಭಯವನ್ನು ತ್ಯಜಿಸಿ. ನಿರ್ಭೀತನಾಗಿ ಮತ್ತು
ಪ್ರಸನ್ನ ಚಿತ್ತನಾಗಿ, ಹೃದಯದಲ್ಲಿ ನಲಿವನ್ನು ತುಂಬಿಕೊಂಡು ಪುನಃ ನನ್ನ ಮೊದಲಿನ ಚಿರಪರಿಚಿತ ರೂಪವನ್ನು
ನೋಡು.
सञ्जय उवाच
इत्यर्जुनं वासुदेवस्तथोक्त्वा
स्वकं रूपं दर्शयामास भूयः।
आश्वासयामास च भीतमेनं
भूत्वा पुनः सौम्यवपुर्महात्मा॥११.५०॥
ಸಂಜಯ ಉವಾಚ ।
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ
ಸ್ವಕಂ ರೂಪಂ ದರ್ಶಯಾಮಾಸ ಭೂಯಃ ।
ಆಶ್ವಾಸಯಾಮಾಸ ಚ ಭೀತಮೇನಂ
ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ ॥ 11-50॥
इत्यर्जुनं वासुदेवस्तथोक्त्वा स्वकं रूपं दर्शयामास भूयः।
आश्वासयामास च भीतमेनं भूत्वा पुनः सौम्यवपुर्महात्मा॥११.५०॥
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ ।
ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ ॥ 11-50॥
50. Sanjaya said:
Having spoken thus to Arjuna,
Vasudeva revealed his familiar Form to him.
Having assumed his gentle Form
The Mighty One consoled terror-stricken Arjuna.
ಸಂಜಯ ಹೇಳಿದನು: ಹೀಗೆಂದು ಅರ್ಜುನನಿಗೆ ಹೇಳಿದ ವಾಸುದೇವನು, ಮೊದಲಿನ ತನ್ನ ಸಹಜ ಶಾಂತರೂಪವನ್ನು ಅವನಿಗೆ ತೋರಿಸಿದನು. ಮಹಾತ್ಮನಾದ ಶ್ರೀ ಕೃಷ್ಣನು ಸೌಮ್ಯವಾದ ಶರೀರವುಳ್ಳವನಾಗಿ ತನ್ನ ದರ್ಶನವನ್ನಿತ್ತು, ಭಯಗೊಂಡಿದ್ದ ಅರ್ಜುನನಿಗೆ ಧೈರ್ಯ ತುಂಬಿದನು.
अर्जुन उवाच
दृष्ट्वेदं मानुषं रूपं
तव सौम्यं जनार्दन
इदानीमस्मि संवृत्तः
सचेताः प्रकृतिं गतः॥११.५१॥
ಅರ್ಜುನ ಉವಾಚ ।
ದೃಷ್ಟ್ವೇದಂ ಮಾನುಷಂ ರೂಪಂ
ತವ ಸೌಮ್ಯಂ ಜನಾರ್ದನ ।
ಇದಾನೀಮಸ್ಮಿ ಸಂವೃತ್ತಃ ಸಚೇತಾಃ
ಪ್ರಕೃತಿಂ ಗತಃ ॥ 11-51॥
दृष्ट्वेदं मानुषं रूपं तव सौम्यं जनार्दन
इदानीमस्मि संवृत्तः सचेताः प्रकृतिं गतः॥११.५१॥
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ ।
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ ॥ 11-51॥
51. Arjuna said:
O Krishna,
Seeing this gentle and human Form now
I have regained my composure
And normal nature.
ಅರ್ಜುನ ಹೇಳಿದನು: ಓ ಕೃಷ್ಣಾ, ನಿನ್ನ ಸೌಮ್ಯವಾದ ಈ ಮನುಷ್ಯರೂಪವನ್ನು ನೋಡಿ ಈಗ ನಾನು
ಚಿತ್ತಶಾಂತಿಯನ್ನು ಹೊಂದಿ ನನ್ನ ಸಹಜ ಸ್ಥಿತಿಗೆ ಮರಳಿದ್ದೇನೆ. ನನ್ನ ಮನಸ್ಸು ಸಮಾಧಾನವಾಗಿದೆ.
श्रीभगवानुवाच
सुदर्शनमिदं रूपं
दृष्टवानसि यन्मम।
देवा अप्यस्य रूपस्य
नित्यं दर्शनकाङ्क्षिणः॥११.५२॥
ಶ್ರೀಭಗವಾನುವಾಚ ।
ಸುದುರ್ದರ್ಶಮಿದಂ ರೂಪಂ
ದೃಷ್ಟವಾನಸಿ ಯನ್ಮಮ ।
ದೇವಾ ಅಪ್ಯಸ್ಯ ರೂಪಸ್ಯ
ನಿತ್ಯಂ ದರ್ಶನಕಾಂಕ್ಷಿಣಃ ॥ 11-52॥
सुदर्शनमिदं रूपं दृष्टवानसि यन्मम।
देवा अप्यस्य रूपस्य नित्यं दर्शनकाङ्क्षिणः॥११.५२॥
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ ।
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣಃ ॥ 11-52॥
52. Sri Bhagavan said:
Arjuna,
This Cosmic Form of mine
Is very difficult for anyone to see.
This same Form that you have seen
Even the gods always crave to see.
ಭಗವಂತನು ಹೇಳಿದನು: ಅರ್ಜುನಾ, ನಿನಗೆ ಸಿದ್ಧಿಸಿದ ನನ್ನ ಈ ವಿಶ್ವರೂಪ ದರ್ಶನವು ಯಾರಿಗೇ ಆಗಲೀ,
ತುಂಬಾ ದುರ್ಲಭವಾಗಿದೆ. ನೀನು ನೋಡಿದ ಈ ರೂಪದ ದರ್ಶನಕ್ಕಾಗಿ ದೇವತೆಗಳೂ ಸಹ ಯಾವಾಗಲೂ
ಹಂಬಲಿಸುತ್ತಿರುತ್ತಾರೆ.
नाहं वेदैः न तपसा
न दानेन न चेज्यया।
शक्य एवंविधो द्रष्टुं
दृष्टवानसि मां यथा॥११.५३॥
ನಾಹಂ ವೇದೈರ್ನ ತಪಸಾ
ನ ದಾನೇನ ನ ಚೇಜ್ಯಯಾ ।
ಶಕ್ಯ ಏವಂವಿಧೋ ದ್ರಷ್ಟುಂ
ದೃಷ್ಟವಾನಸಿ ಮಾಂ ಯಥಾ ॥ 11-53॥
नाहं वेदैः न तपसा न दानेन न चेज्यया।
शक्य एवंविधो द्रष्टुं दृष्टवानसि मां यथा॥११.५३॥
ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ ।
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ ॥ 11-53॥
53. Arjuna,
Neither by the study of Vedas,
Nor by doing penance,
Nor by giving daana,
Nor by making sacrifices
Can one get the Vision
Of my Cosmic Form
In the same way as you have got it.
ಅರ್ಜುನಾ! ವೇದಾಧ್ಯಯನದ ಮಾತ್ರದಿಂದಾಗಲೀ, ಅಥವಾ ಕಠಿಣ ತಪಸ್ಸಿನಿಂದಾಗಲೀ, ಅಥವಾ
ದಾನಾದಿಗಳಿಂದಾಗಲೀ, ಅಥವಾ ಯಜ್ಞಯಾಗಾದಿಗಳನ್ನು ಆಚರಿಸುವುದರಿಂದಾಗಲೀ, ನೀನು ನಿನ್ನ ದಿವ್ಯ
ನೇತ್ರಗಳಿಂದ ಕಾಣುತ್ತಿರುವ ನನ್ನ ಈ ವಿಶ್ವರೂಪವನ್ನು ನೋಡುವುದಕ್ಕೆ ಸಾಧ್ಯವಿಲ್ಲ.
भक्त्या त्वनन्यया शक्य:
अहमेवंविधोऽर्जुन।
ज्ञातुं द्रष्टुं च तत्वेन
प्रवेष्टुं च परंतप॥११.५४॥
ಭಕ್ತ್ಯಾ ತ್ವನನ್ಯಯಾ ಶಕ್ಯಃ
ಅಹಮೇವಂವಿಧೋಽರ್ಜುನ ।
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ
ಪ್ರವೇಷ್ಟುಂ ಚ ಪರಂತಪ ॥ 11-54॥
भक्त्या त्वनन्यया शक्य: अहमेवंविधोऽर्जुन।
ज्ञातुं द्रष्टुं च तत्वेन प्रवेष्टुं च परंतप॥११.५४॥
ಭಕ್ತ್ಯಾ ತ್ವನನ್ಯಯಾ ಶಕ್ಯಃ ಅಹಮೇವಂವಿಧೋಽರ್ಜುನ ।
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ ॥ 11-54॥
54. Arjuna,
It is only by means of
Steady and undivided devotion
That I may be known –
Known really and seen truthfully.
It is also possible for such a devotee
To enter and get united with me.
ಅರ್ಜುನಾ, ಅನನ್ಯ ಭಕ್ತಿಯಿಂದ, ಏಕಚಿತ್ತದ ಭಕ್ತಿ ಸೇವೆಯಿಂದ ಮಾತ್ರ ನಿನ್ನ ಮುಂದೆ ನಿಂತಿರುವ ಈ
ವಿಧವಾದ ನನ್ನನ್ನು ಯತಾರ್ಥವಾಗಿ ತಿಳಿದುಕೊಂಡು, ಪ್ರಾಮಾಣಿಕವಾಗಿ ನೋಡಲು ಸಾಧ್ಯ. ಹಾಗೆಯೇ
ಅಂತಹ ಭಕ್ತರು ನನ್ನನ್ನು ಸಾಕ್ಷಾತ್ಕರಿಸಿಕೊಂಡು ನನ್ನಲ್ಲಿ ಐಕ್ಯವಾಗುವುದಕ್ಕೂ ಸಾಧ್ಯವಾಗುತ್ತದೆ.
मत्कर्मकृन्मत्परमो
मद्भक्तः सङ्गवर्जितः।
निर्वैरः सर्वभूतेषु
यः स मामेति पाण्डव॥११.५५॥
ಮತ್ಕರ್ಮಕೃನ್ಮತ್ಪರಮೋ
ಮದ್ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು
ಯಃ ಸ ಮಾಮೇತಿ ಪಾಂಡವ ॥ 11-55॥
मत्कर्मकृन्मत्परमो मद्भक्तः सङ्गवर्जितः।
निर्वैरः सर्वभूतेषु यः स मामेति पाण्डव॥११.५५॥
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ ॥ 11-55॥
55. Arjuna,
Whoever does my work or
Performs work for me,
Whoever keeps Me as his Supreme Goal,
Gets rid of all attachments,
And keeps free from malice or ill-will
Towards anyone –
Such a person surely attains Me.
ಹೇ ಅರ್ಜುನಾ, ಯಾರು ನನ್ನ ಕೆಲಸಗಳನ್ನು ಮಾಡುವರೋ, ಅಥವಾ ನನಗಾಗಿ ಸತ್ಕರ್ಮಗಳನ್ನು ಮಾಡುವರೋ, ಯಾರು ನಾನೇ ಪರಮಶರಣ್ಯನೆಂದು ನಂಬಿ ನನ್ನಲ್ಲಿ ಅನನ್ಯ ಭಕ್ತಿಯುಳ್ಳವರಾಗಿ, ಎಲ್ಲ ಬಂಧಗಳನ್ನು ಕಳಚಿಕೊಂಡು, ಸಂಗರಹಿತರಾಗಿ, ಸಮಸ್ತ ಭೂತಗಳಲ್ಲಿ ವೈರತ್ವವಿಲ್ಲದೆ ಇರುವರೋ, ಅವರು ನನ್ನನ್ನು ಪಡೆದುಕೊಳ್ಳುತ್ತಾರೆ. ಅನ್ಯಥಾ ಸಾಧ್ಯವಿಲ್ಲ.
ऒम् तत्सदिति ಓಂ ತತ್ಸದಿತಿ
श्रीमद्भगवद्गितासू ಶ್ರೀಮದ್ಭಗವದ್ಗೀತಾಸೂ
उपनिषत्सु ಉಪನಿಷತ್ಸು
ब्रह्म विद्यायां ಬ್ರಹ್ಮವಿದ್ಯಾಯಾಂ
यॊगशास्त्रॆ ಯೋಗಶಾಸ್ತ್ರೇ
श्रीकृष्णार्जुनसंवादॆ ಶ್ರೀಕೃಷ್ಣಾರ್ಜುನಸಂವಾದೇ
विश्वरूपदर्शनयोगो नाम ವಿಶ್ವರೂಪದರ್ಶನಯೋಗೋ ನಾಮ
एकादशोऽध्यायः ಏಕಾದಶೋಧ್ಯಾಯಃ
ऒं ततसत् ಓಂ ತತ್ಸತ್
ಓಂ ತತ್ಸದ್ ಇತಿ. ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ ಶ್ರೀಕೃಷ್ಣಾರ್ಜುನಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ವಿಶ್ವರೂಪದರ್ಶನಯೋಗವೆಂಬ ಹೆಸರಿನ ಹನ್ನೊಂದನೆಯ ಅಧ್ಯಾಯವು ಮುಗಿದುದು.
इति विश्वरूपदर्शनयोगो नाम एकादशोऽध्यायः
End of Chapter Eleven