Chapter Thirteen: Kshetra Kshetrajna Vibhaga Yoga
Published by LANKA KRISHNA MURTI FOUNDATION
(https://www.facebook.com/lankakrishnamurtifoundation/)
Website (https://krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
अथ क्षेत्रक्षेत्रज्ञविभागयोगो नाम त्त्रयोदशोऽध्यायः
ಅಥ ತ್ರಯೋದಶೋಽಧ್ಯಾಯಃ । ಕ್ಷೇತ್ರಕ್ಷೇತ್ರಜ್ಞವಿಭಾಗಯೋಗಃ
After learning about Karma and Bhakti in the first two Shatkas, we now proceed to understand
what Gnana or Knowledge is, in the last six chapters under Gnana Shatka.
Sri Bhagawan explains, in detail, certain concepts like Kshetra (Field), Kshetragna (Field-Knower), Prakruti (Material Nature), Purusha (Spirit), Gnana (Knowledge) and Gneya (Object of Knowledge), the understanding of which is essential for the realisation of Brahman
ಮೊದಲಿನ ಎರಡು ಷಟ್ಕಗಳಲ್ಲಿ ಕರ್ಮ ಮತ್ತು ಭಕ್ತಿಯ ಬಗ್ಗೆ ತಿಳಿದುಕೊಂಡ ನಂತರ, “ಜ್ಞಾನ ಷಟ್ಕ” ದ ಅಡಿಯಲ್ಲಿರುವ ಅಂತಿಮ ಆರು ಅಧ್ಯಾಯಗಳಲ್ಲಿ ಜ್ಞಾನವೆಂದರೆ ಏನು ಎಂಬ ಬಗ್ಗೆ ಅರಿತುಕೊಳ್ಳಲು ನಾವು ಮುಂದುವರೆಯೋಣ.
ಬ್ರಹ್ಮನ ಸಾಕ್ಷಾತ್ಕಾರಕ್ಕೆ ಅವಶ್ಯವಾಗಿ ತಿಳಿದುಕೊಳ್ಳಬೇಕಾಗಿರುವ ಕ್ಷೇತ್ರ ಅಂದರೆ ಪ್ರದೇಶ, ಕ್ಷೇತ್ರಜ್ಞ ಅಂದರೆ ಪ್ರದೇಶವನ್ನು ಅರಿತವನು, ಪ್ರಕೃತಿ ಅಂದರೆ ನಿಸರ್ಗ ಪುರುಷ ಅಂದರೆ ಚೈತನ್ಯ, ಜ್ಞಾನ ಅಂದರೆ ಅರಿವು ಮತ್ತು ಜ್ಞೇಯ ಅಂದರೆ ಅರಿವಿನ ಗುರಿ ಇತ್ಯಾದಿ ಸಾಮಾನ್ಯ ಜ್ಞಾನಗಳ ಬಗ್ಗೆ ವಿಷದವಾಗಿ ಶ್ರೀ ಭಗವಾನನು ವಿವರಿಸುತ್ತಾನೆ.
अर्जुन उवाचः
प्रक्रुतिं पुरुषं चैव
क्षेत्रं क्षेत्रज्ञ्नमेव च l
एतद्वेदितुमिच्छामि
ज्ञ्नानं ज्ञ्नेयं च केशव ll
ಅರ್ಜುನ ಉವಾಚ ।
ಪ್ರಕೃತಿಂ ಪುರುಷಂ ಚೈವ
ಕ್ಷೇತ್ರಂ ಕ್ಷೇತ್ರಜ್ಞಮೇವ ಚ ।
ಏತದ್ವೇದಿತುಮಿಚ್ಛಾಮಿ
ಜ್ಞಾನಂ ಜ್ಞೇಯಂ ಚ ಕೇಶವ ॥
प्रक्रुतिं पुरुषं चैव क्षेत्रं क्षेत्रज्ञ्नमेव च l
एतद्वेदितुमिच्छामि ज्ञ्नानं ज्ञ्नेयं च केशव ll
ಪ್ರಕೃತಿಂ ಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವ ಚ ।
ಏತದ್ವೇದಿತುಮಿಚ್ಛಾಮಿ ಜ್ಞಾನಂ ಜ್ಞೇಯಂ ಚ ಕೇಶವ ॥
Arjuna said:
O Krishna,
I wish you help me understand
What the following expressions mean:
Prakruti or Matter
Purusha or Spirit
Kshetra or Field
Kshetragna or Field-knower
Gnana or knowledge and
Gneya or object of knowledge.
Though this sloka is not found in many standard editions of Bhagavdgita
like those of Shankara and others , it introduces the important topics that
Lord Krishna is going to deal with, in detail.
ಅರ್ಜುನ ಹೇಳಿದನು.
ಓ ಕೃಷ್ಣ, ಪ್ರಕೃತಿ, ಪುರುಷ, ಕ್ಷೇತ್ರ, ಕ್ಷೇತ್ರಜ್ಞ, ಜ್ಞಾನ ಮತ್ತು ಜ್ಞೇಯ ಎಂದರೆ ಏನೆಂಬುದನ್ನು ತಿಳಿದುಕೊಳ್ಳಲು ಬಯುಸುತ್ತೇನೆ. ಇವುಗಳನ್ನು ಅರಿಯಲು ನೀನು ನನಗೆ ಸಹಾಯ ಮಾಡಬೇಕೆಂದು ಕೋರುತ್ತೇನೆ.
ಈ ಅಧ್ಯಾಯದಲ್ಲಿ ಅರ್ಜುನನು ಪ್ರಶ್ನೆ ಮಾಡಿದ ಮೊದಲನೆಯ ಈ ಶ್ಲೋಕವು ಶಂಕರ ಮತ್ತು ಇತರರ ಹಲವು ಪ್ರಸಿದ್ಧ ಭಗವದ್ಗೀತೆಯ ಸಂಪುಟಗಳಲ್ಲಿ ಇಲ್ಲದಿದ್ದರೂ ಸಹ, ಶ್ರೀ ಕೃಷ್ಣನು ಈ ಪ್ರಮುಖ ವಿಚಾರಗಳ ಬಗ್ಗೆ ವಿಷದವಾಗಿ ಹೇಗೆ ವಿಶ್ಲೇಷಿಸುತ್ತಾನೆ ಎಂಬುದಕ್ಕೆ ಪೀಠಿಕೆಯಾಗಿದೆ ಈ ಶ್ಲೋಕ.
श्रीभगवानुवच
इदं शरीरं कौन्तेय
क्षेत्रमित्यभिधीयते।
येतद्यो वेत्ति तं प्राहुः
क्षेत्रज्ञ इति तद्विदः॥१३.१॥
ಶ್ರೀಭಗವಾನುವಾಚ ।
ಇದಂ ಶರೀರಂ ಕೌಂತೇಯ
ಕ್ಷೇತ್ರಮಿತ್ಯಭಿಧೀಯತೇ ।
ಏತದ್ಯೋ ವೇತ್ತಿ ತಂ ಪ್ರಾಹುಃ
ಕ್ಷೇತ್ರಜ್ಞ ಇತಿ ತದ್ವಿದಃ ॥ 13-1॥
इदं शरीरं कौन्तेय क्षेत्रमित्यभिधीयते।
येतद्यो वेत्ति तं प्राहुः क्षेत्रज्ञ इति तद्विदः॥१३.१॥
ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ ।
ಏತದ್ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ ॥ 13-1॥
1. Sri Bhagavan said:
Arjuna,
This body is said to be kshetra or the field
And one who knows this field is said to be
Kshrtragna or knower of the field,
According to those who have the knowledge
Of both kshetra and kshetrajgna,
The field and the field-knower.
ಭಗವಂತನು ಹೇಳಿದನು:-
ಅರ್ಜುನಾ. ಈ ಶರೀರವನ್ನು ಕ್ಷೇತ್ರವೆಂದು ಹೇಳಲ್ಪಡುತ್ತದೆ. ಈ ಕ್ಷೇತ್ರವನ್ನು ಯಾರು ತಿಳಿಯುತ್ತಾನೆಯೋ ಅವನನ್ನು ಕ್ಷೇತ್ರಜ್ಞನೆಂದು, ಕ್ಷೇತ್ರ ಕ್ಷೇತ್ರಜ್ಞರ ಸ್ವರೂಪವನ್ನು ತಿಳಿದವರು ಹೇಳುತ್ತಾರೆ.
क्षेत्रज्ञं चापि मां विद्धि
सर्वक्षेत्रेषु भारत।
क्षेत्रक्षेत्रज्ञयोर्ज्ञानं
यत्तज्ज्ञानं मतं मम॥१३.२॥
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ
ಸರ್ವಕ್ಷೇತ್ರೇಷು ಭಾರತ ।
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ
ಯತ್ತಜ್ಜ್ಞಾನಂ ಮತಂ ಮಮ ॥ 13-2॥
क्षेत्रज्ञं चापि मां विद्धि सर्वक्षेत्रेषु भारत।
क्षेत्रक्षेत्रज्ञयोर्ज्ञानं यत्तज्ज्ञानं मतं मम॥१३.२॥
ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ ।
ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್ಜ್ಞಾನಂ ಮತಂ ಮಮ ॥ 13-2॥
2. Arjuna,
Know Me also to be
The Knower of the Field, Kshetraga,
Present in all the Fields.
In my opinion, the Knowledge
Of the Field as well as the Knowledge
Of the knowers of the field
Is the Real Knowledge.
ಎಲೈ ಅರ್ಜುನಾ, ಸರ್ವ ಕ್ಷೇತ್ರಗಳಲ್ಲಿಯೂ ಇರುವ ಕ್ಷೇತ್ರಜ್ಞ ಅರ್ಥಾತ್ ಜೀವಾತ್ಮ ನಾನು ಎಂದು ತಿಳಿ. ಕ್ಷೇತ್ರ, ಕ್ಷೇತ್ರಜ್ಞರನ್ನು ವಿಭಾಗ ಮಾಡಿ ತಿಳಿದುಕೊಳ್ಳುವ ಜ್ಞಾನವೇ ನಿಜವಾದ ಜ್ಞಾನವೆಂದು ನನ್ನ ಅಭಿಪ್ರಾಯ.
तत्क्षेत्रं यच्च यादृक्च
यद्विकारि यतश्च यत्।
स च यो यत्प्रभावश्च
तत्समासेन मे शृणु॥१३.३॥
ತತ್ಕ್ಷೇತ್ರಂ ಯಚ್ಚ ಯಾದೃಕ್ಚ
ಯದ್ವಿಕಾರಿ ಯತಶ್ಚ ಯತ್ ।
ಸ ಚ ಯೋ ಯತ್ಪ್ರಭಾವಶ್ಚ
ತತ್ಸಮಾಸೇನ ಮೇ ಶೃಣು ॥ 13-3॥
तत्क्षेत्रं यच्च यादृक्चयद्विकारि यतश्च यत्।
स च यो यत्प्रभावश्च तत्समासेन मे शृणु॥१३.३॥
ತತ್ಕ್ಷೇತ್ರಂ ಯಚ್ಚ ಯಾದೃಕ್ಚ ಯದ್ವಿಕಾರಿ ಯತಶ್ಚ ಯತ್ ।
ಸ ಚ ಯೋ ಯತ್ಪ್ರಭಾವಶ್ಚ ತತ್ಸಮಾಸೇನ ಮೇ ಶೃಣು ॥ 13-3॥
3. I shall explain, in brief,
What that Kshetra or Field is,
Of what kind it is,
What modifications it includes,
From where and how
It has originated,
Who that Kshetragna is
And what his powers are.
ಈ ಕಾರ್ಯಕ್ಷೇತ್ರ ಮತ್ತು ಅದರ ಸ್ವರೂಪ ಯಾವುದು ಮತ್ತು ಎಂತಹ ಪ್ರಕಾರವುಳ್ಳದ್ದು; ಯಾವ ವಿಕಾರವುಳ್ಳದ್ದು; ಅದು ಹೇಗೆ ಉತ್ಪತ್ತಿಯಾಯಿತು, ಯಾವುದರಿಂದ ಯಾವುದು ಉಂಟಾಗಿದೆ; ಆ ಕ್ಷೇತ್ರವನ್ನು ಬಲ್ಲವನು ಯಾರು ಹಾಗೂ ಅವನ ಪ್ರಭಾವಗಳು ಯಾವುವು ಎಂಬುದನ್ನು ನಾನು ಸಂಕ್ಷೇಪವಾಗಿ ಹೇಳುತ್ತೇನೆ ಕೇಳು.
ऋषिभिर्बहुधा गीतं
छन्दोभिर्विविधैः पृथक्।
ब्रह्मसूत्रपदैश्चैव
हेतुमद्भिर्विनिश्चितैः॥१३.४॥
ಋಷಿಭಿರ್ಬಹುಧಾ ಗೀತಂ
ಛಂದೋಭಿರ್ವಿವಿಧೈಃ ಪೃಥಕ್ ।
ಬ್ರಹ್ಮಸೂತ್ರಪದೈಶ್ಚೈವ
ಹೇತುಮದ್ಭಿರ್ವಿನಿಶ್ಚಿತೈಃ ॥ 13-4॥
ऋषिभिर्बहुधा गीतं छन्दोभिर्विविधैः पृथक्।
ब्रह्मसूत्रपदैश्चैव हेतुमद्भिर्विनिश्चितैः॥१३.४॥
ಋಷಿಭಿರ್ಬಹುಧಾ ಗೀತಂ ಛಂದೋಭಿರ್ವಿವಿಧೈಃ ಪೃಥಕ್ ।
ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ ॥ 13-4॥
4. The Truth and Power
Of the Field and Field-knower,
Kshetra and Kshetragna,
Has been sung by the Rishis
Through Vedic Hymns,
Separately and variously.
It has also been stated
Through well-reasoned and definitive expressions
In the Brahma Sutras.
ಕ್ಷೇತ್ರ ಮತ್ತು ಕ್ಷೇತ್ರಜ್ಞನ ಸತ್ಯತತ್ವ ಮತ್ತು ಶಕ್ತಿ ಪ್ರಭಾವಗಳನ್ನು ಅನೇಕ ಋಷಿಗಳು ವೈದಿಕ ಸ್ತೋತ್ರಗಳಲ್ಲಿ ಬಿಡಿ ಬಿಡಿಯಾಗಿ ಹಾಗೂ ಬಹುಪ್ರಕಾರವಾಗಿ ಹಾಡಿ ವರ್ಣಿಸಿದ್ದಾರೆ. ಹಾಗೆಯೇ ಬ್ರಹ್ಮ ಸೂತ್ರಗಳಲ್ಲಿ ಸಯುಕ್ತಿಕವಾಗಿ ಕಾರ್ಯ ಕಾರಣದ ತರ್ಕದೊಂದಿಗೆ ಈ ಸಿದ್ಧಾಂತವು ನಿರೂಪಸಲ್ಪಟ್ಟಿದೆ.
महाभूतान्यहङ्कारो
बुद्धिरव्यक्तमेव च।
इन्द्रियाणि दशैकं च
पञ्च चेन्द्रियगोचराः॥१३.५॥
ಮಹಾಭೂತಾನ್ಯಹಂಕಾರೋ
ಬುದ್ಧಿರವ್ಯಕ್ತಮೇವ ಚ ।
ಇಂದ್ರಿಯಾಣಿ ದಶೈಕಂ ಚ
ಪಂಚ ಚೇಂದ್ರಿಯಗೋಚರಾಃ ॥ 13-5॥
इच्छा द्वेषः सुखं दुःखं
सङ्घातश्चेतनाधृतिः।
एतत्क्षेत्रं समासेन
सविकारमुदाहृतम्॥१३.६॥
ಇಚ್ಛಾ ದ್ವೇಷಃ ಸುಖಂ ದುಃಖಂ
ಸಂಘಾತಶ್ಚೇತನಾ ಧೃತಿಃ ।
ಏತತ್ಕ್ಷೇತ್ರಂ ಸಮಾಸೇನ
ಸವಿಕಾರಮುದಾಹೃತಮ್ ॥ 13-6॥
महाभूतान्यहङ्कारो बुद्धिरव्यक्तमेव च।
इन्द्रियाणि दशैकं च पञ्च चेन्द्रियगोचराः॥१३.५॥
ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ ।
ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾಃ ॥ 13-5॥
इच्छा द्वेषः सुखं दुःखं सङ्घातश्चेतनाधृतिः।
एतत्क्षेत्रं समासेन सविकारमुदाहृतम्॥१३.६॥
ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ ।
ಏತತ್ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್ ॥ 13-6॥
5.
6. The Constituents of the Field, Kshetra,
Include, in brief,
The Great Elements (5),
The Ego, the Intellect, the Unmanifest,
Which is the power of Prakruti
That enlightens the intellect,
The ten senses (5 organs of action and 5 organs of
perception),
The mind and the five objects of senses
Like sound, smell, etc.
Along with the modifications that happen
Such as desire, enmity, pleasure, pain,
The body with the senses, awareness and courage.
ಪಂಚಮಹಾಭೂತಗಳು, ಅಹಂಕಾರ, ಬುದ್ಧಿ, ಬುದ್ಧಿಯನ್ನು ಪ್ರಕಾಶಪಡಿಸುವ ಮೂಲ ಪ್ರಕೃತಿಯ ಶಕ್ತಿಯಾದ ಅವ್ಯಕ್ತತೆ, ಹತ್ತು ಇಂದ್ರಿಯಗಳು (ಐದು ಕರ್ಮೇಂದ್ರಿಯಗಳು ಮತ್ತು ಐದು ಗ್ರಹಣೇಂದ್ರಿಯಗಳು), ಮನಸ್ಸು ಮತ್ತು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳನ್ನು ಗ್ರಹಿಸುವ ಐದು ವಿಷಯೇಂದ್ರಿಯಗಳು, ಬಯಕೆ, ದ್ವೇಷ, ಸುಖಃ, ದುಖಃ, ಸ್ಥೂಲ ದೇಹದ ಪಿಂಡ, ಚೈತನ್ಯ ಮತ್ತು ಧೃತಿ- ಸಂಕ್ಷೇಪವಾಗಿ ಇವೆಲ್ಲವೂ ಕ್ಷೇತ್ರ ಮತ್ತು ಅದರ ಪರಸ್ಪರ ಪ್ರತಿಕ್ರಿಯೆಗಳಾಗಿರುತ್ತವೆ. ಹೀಗೆ ಕ್ಷೇತ್ರಗಳನ್ನು ಮತ್ತು ಅವುಗಳ ಪ್ರತಿಕ್ರಿಯೆಗಳನ್ನು ವಿವರಿಸಿದ ನಂತರ ಶ್ರೀ ಕೃಷ್ಣನು ಯಾವ ಗುಣ ವಿಶೇಷಣಗಳನ್ನು ಹೊಂದುವುದರಿಂದ ಜ್ಞಾನವನ್ನು ಪಡೆಯಲು ಅರ್ಹರಾಗುತ್ತಾರೆಂಬುದನ್ನು ಏಳರಿಂದ, ಹನ್ನೊಂದನೆಯ ಶ್ಲೋಕಗಳಲ್ಲಿ ವಿಷದೀಕರಿಸುತ್ತಾನೆ.
अमानित्वं अदम्भित्वं
अहिंसा क्षान्तिरार्जवम्।
आचार्योपासनं शौचं
स्थैर्यमात्मविनिग्रहः॥१३.७॥
ಅಮಾನಿತ್ವಂ ಅದಂಭಿತ್ವಂ
ಅಹಿಂಸಾ ಕ್ಷಾಂತಿರಾರ್ಜವಮ್ ।
ಆಚಾರ್ಯೋಪಾಸನಂ ಶೌಚಂ
ಸ್ಥೈರ್ಯಮಾತ್ಮವಿನಿಗ್ರಹಃ ॥ 13-7॥
अमानित्वं अदम्भित्वं अहिंसा क्षान्तिरार्जवम्।
आचार्योपासनं शौचं स्थैर्यमात्मविनिग्रहः॥१३.७॥
ಅಮಾನಿತ್ವಂ ಅದಂಭಿತ್ವಂ ಅಹಿಂಸಾ ಕ್ಷಾಂತಿರಾರ್ಜವಮ್ ।
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ॥ 13-7॥
After describing the constituents and modifications of the field, Kshetra,
Krishna proceeds to enumerate those characteristics by possessing which
one becomes eligible to acquire knowledge, in slokas 7 to 11.
7. Humility; modesty; non-violence; endurance;
Simplicity; service to one’s Acharya;
Purity both within and without; persistence; self-control;
ನಮ್ರತೆ, ಜಂಬವಿಲ್ಲದಿರುವಿಕೆ, ಅಹಿಂಸೆ, ಸಹಿಷ್ಣುತೆ, ಸರಳತೆ, ಶ್ರದ್ಧಾಭಕ್ತಿ ಸಹಿತ ಗುರುಗಳ ಸೇವೆ, ಅಂತರಂಗ ಮತ್ತು ಬಹಿರಂಗ ಶುಚಿತ್ವ, ಎಷ್ಟು ವಿಘ್ನಗಳು ಬಂದರೂ ಮೋಕ್ಷ ಮಾರ್ಗದಿಂದ ವಿಚಲಿತನಾಗದಿರುವ ಛಲ, ಆತ್ಮ ಸಂಯಮ ಅಥವಾ ಮನೋ ನಿಗ್ರಹ- ಈ ಗುಣಗಳನ್ನು ಹೊಂದಿದವರು ಜ್ಞಾನಾರ್ಜನೆಗೆ ಅರ್ಹರಾಗುತ್ತಾರೆ.
इन्द्रियार्थेषु वैराग्यं
अनहङ्कार एव च।
जन्ममृत्युजराव्याधि
दुःख दोषानुदर्शनम्॥१३.८॥
ಇಂದ್ರಿಯಾರ್ಥೇಷು ವೈರಾಗ್ಯಂ
ಅನಹಂಕಾರ ಏವ ಚ ।
ಜನ್ಮಮೃತ್ಯುಜರಾವ್ಯಾಧಿ
ದುಃಖದೋಷಾನುದರ್ಶನಮ್ ॥ 13-8॥
इन्द्रियार्थेषु वैराग्यं अनहङ्कार एव च।
जन्ममृत्युजराव्याधि दुःख दोषानुदर्शनम्॥१३.८॥
ಇಂದ್ರಿಯಾರ್ಥೇಷು ವೈರಾಗ್ಯಂ ಅನಹಂಕಾರ ಏವ ಚ ।
ಜನ್ಮಮೃತ್ಯುಜರಾವ್ಯಾಧಿ ದುಃಖದೋಷಾನುದರ್ಶನಮ್ ॥ 13-8॥
Here are some more characteristics by possessing which
one becomes eligible to acquire knowledge:
8. Dislike for sense-objects like sound, smell, etc;
Absence of egoism; perception of evil in regard to
Birth, death, old age, disease and pain;
ಶಬ್ದ, ವಾಸನೆ ಇತ್ಯಾದಿ ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ; ಅಹಂಕಾರವಿಲ್ಲದಿರುವುದು; ಜನ್ಮ, ಮರಣ, ವೃದ್ಧಾಪ್ಯ, ರೋಗ ಮತ್ತು ಬಾಧೆಯ ದೋಷಗಳ ಕೆಡುಕನ್ನು ಗ್ರಹಿಸುವುದು; ಹೀಗೆ ಮತ್ತಷ್ಟು ಗುಣಗಳನ್ನು ಹೊಂದಿರುವವರು ಜ್ಞಾನವನ್ನು ಅರ್ಜಿಸಲು ಅರ್ಹರಾಗಿರುತ್ತಾರೆ.
असक्तिरनभिष्वङ्गः
पुत्रदारागृहादिषु।
नित्यं च समचित्तत्वं
इष्टानिष्टोपपत्तिषु॥१३.९॥
ಅಸಕ್ತಿರನಭಿಷ್ವಂಗಃ
ಪುತ್ರದಾರಗೃಹಾದಿಷು ।
ನಿತ್ಯಂ ಚ ಸಮಚಿತ್ತತ್ವಂ
ಇಷ್ಟಾನಿಷ್ಟೋಪಪತ್ತಿಷು ॥ 13-9॥
असक्तिरनभिष्वङ्गः पुत्रदारागृहादिषु।
नित्यं च समचित्तत्वं इष्टानिष्टोपपत्तिषु॥१३.९॥
ಅಸಕ್ತಿರನಭಿಷ್ವಂಗಃ ಪುತ್ರದಾರಗೃಹಾದಿಷು ।
ನಿತ್ಯಂ ಚ ಸಮಚಿತ್ತತ್ವಂ ಇಷ್ಟಾನಿಷ್ಟೋಪಪತ್ತಿಷು ॥ 13-9॥
Here are some more characteristics by possessing which
one becomes eligible to acquire knowledge:
9. Non-clinging to objects that attract;
Absence of excessive love for children,
Wife, home, etc.,
Maintaining steady equanimity
In all situations;
ಆಕರ್ಷಣೀಯ ವಸ್ತುಗಳಿಗೆ ಅಂಟಿಕೊಳ್ಲದಿರುವಿಕೆ; ಮಕ್ಕಳು, ಹೆಂಡತಿ, ಮನೆ ಮತ್ತಿತರ ವಿಷಯಗಳ ಬಗ್ಗೆ ಅತಿಯಾದ ವ್ಯಾಮೋಹ ಇಲ್ಲದಿರುವಿಕೆ, ಇಷ್ಟಾನಿಷ್ಟಗಳ ಮಧ್ಯೆ ಸಮಚಿತ್ತತೆ- ಇವು ಜ್ಞಾನವನ್ನು ಹೊಂದಲು ಬೇಕಾಗಿರುವ ಇನ್ನಷ್ಟು ಗುಣಗಳಾಗಿರುತ್ತವೆ.
मयि चानन्ययोगेन
भक्तिरव्यभिचरिणी।
विविक्तदेश सेवित्वं
अरतिर्जनसंसदि॥१३.१०॥
ಮಯಿ ಚಾನನ್ಯಯೋಗೇನ
ಭಕ್ತಿರವ್ಯಭಿಚಾರಿಣೀ ।
ವಿವಿಕ್ತದೇಶಸೇವಿತ್ವಮಂ
ಅರತಿರ್ಜನಸಂಸದಿ ॥ 13-10॥
मयि चानन्ययोगेन भक्तिरव्यभिचरिणी।
विविक्तदेश सेवित्वं अरतिर्जनसंसदि॥१३.१०॥
ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ ।
ವಿವಿಕ್ತದೇಶಸೇವಿತ್ವಮಂ ಅರತಿರ್ಜನಸಂಸದಿ ॥ 13-10॥
Here are some more characteristics by possessing which
one becomes eligible to acquire knowledge:
10. Maintaining unswerving devotion
To Me, without attachment to everything else;
Keeping to a lonely and secluded place,
Away from crowds of uncultured people;
ನಾನೇ ಗತಿಯೆಂದು ನಂಬಿ, ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿಯನ್ನು ಹೊಂದಿರುವುದು, ಏಕಾಂತವಾದ ನಿರ್ಜನ ಸ್ಥಳದಲ್ಲಿ ಪ್ರತ್ಯೇಕವಾಗಿ ವಾಸಿಸುವ ಅಭಿಲಾಷೆ, ಮತ್ತು ವಿಷಯಾಸಕ್ತರಾದ ಜನಸಮೂಹದಲ್ಲಿ ಆಸಕ್ತಿಯಿಲ್ಲದೇ ಅವರಿಂದ ದೂರವಿರುವುದು- ಇವು ಜ್ಞಾನವನ್ನು ಹೊಂದಲು ಬೇಕಾಗಿರುವ ಮತ್ತಷ್ಟು ಗುಣಗಳಾಗಿರುತ್ತವೆ.
अध्यात्मज्ञाननित्यत्वं
तत्त्वज्ञानार्थदर्शनम्।
एतज्ज्ञानमिति प्रोक्तम्
अज्ञानं यदतोऽन्यथा॥१३.११॥
ಅಧ್ಯಾತ್ಮಜ್ಞಾನನಿತ್ಯತ್ವಂ
ತತ್ತ್ವಜ್ಞಾನಾರ್ಥದರ್ಶನಮ್ ।
ಏತಜ್ಜ್ಞಾನಮಿತಿ ಪ್ರೋಕ್ತಂ
ಅಜ್ಞಾನಂ ಯದತೋಽನ್ಯಥಾ ॥ 13-11॥
अध्यात्मज्ञाननित्यत्वं तत्त्वज्ञानार्थदर्शनम्।
एतज्ज्ञानमिति प्रोक्तम् अज्ञानं यदतोऽन्यथा॥१३.११॥
ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್ ।
ಏತಜ್ಜ್ಞಾನಮಿತಿ ಪ್ರೋಕ್ತಂ ಅಜ್ಞಾನಂ ಯದತೋಽನ್ಯಥಾ ॥ 13-11॥
Here are some more characteristics by possessing which one becomes eligible to acquire knowledge:
11. Steady cultivation of spiritual knowledge; and Meditation on the content of philosophical knowledge –all this is said to be Knowledge, Gnana.
all that is opposed to this is Ignorance or Agnana.
ಆಧ್ಯಾತ್ಮ ಜ್ಞಾನದಲ್ಲಿ ನಿರಂತರ ಕೃಷಿ ಮಾಡುವುದು, ಪರಿಪೂರ್ಣ ಸತ್ಯದ ತತ್ವಜ್ಞಾನಾರ್ಥದ ಅನ್ವೇಷಣೆಯ ಬಗ್ಗೆ ಸದಾ ಧ್ಯಾನವಿರಿಸುವುದು – ಇದು ಜ್ಞಾನವೆಂದು ಹೇಳಲ್ಪಟ್ಟಿದೆ. ಯಾವುದು ಇದಕ್ಕಿಂತ ವ್ಯತಿರಿಕ್ತವಾಗಿರುವುದೋ ಅದು ಅಜ್ಞಾನವೆಂದು ಹೇಳಿಸಿಕೊಳ್ಳುತ್ತದೆ.
ज्ञेयं यत्तत्प्रवक्ष्यामि
यज्ज्ञात्वामृतमश्नुते।
अनादिमत्परं भ्रह्म
न सत्तन्नासदुच्यते॥१३.१२॥
ಜ್ಞೇಯಂ ಯತ್ತತ್ಪ್ರವಕ್ಷ್ಯಾಮಿ
ಯಜ್ಜ್ಞಾತ್ವಾಮೃತಮಶ್ನುತೇ ।
ಅನಾದಿಮತ್ಪರಂ ಬ್ರಹ್ಮ
ನ ಸತ್ತನ್ನಾಸದುಚ್ಯತೇ ॥ 13-12॥
ज्ञेयं यत्तत्प्रवक्ष्यामि यज्ज्ञात्वामृतमश्नुते।
अनादिमत्परं भ्रह्म न सत्तन्नासदुच्यते॥१३.१२॥
ಜ್ಞೇಯಂ ಯತ್ತತ್ಪ್ರವಕ್ಷ್ಯಾಮಿ ಯಜ್ಜ್ಞಾತ್ವಾಮೃತಮಶ್ನುತೇ ।
ಅನಾದಿಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ ॥ 13-12॥
12. After describing what Gnana or Knowledge means,
Sri Bhagavan goes to explain the meaning of Gneya
Or Object of Knowledge, the Knowable, in the next
Six slokas.
He says:
Arjuna, It is by understanding what Gneya means that
one attains Immortality or Amrutatva. It is that
Beginning-less Brahman. It is neither Sat, Existant
nor Asat, Nonexistent.
ಜ್ಞಾನವೆಂದರೆ ಏನೆಂದು ವಿವರಿಸಿದನಂತರ ಶ್ರೀ ಭಗವಂತನು ಜ್ಞೇಯವೆಂದರೆ ಏನೆಂಬುದನ್ನು ಇನ್ನುಳಿದ ಆರು ಶ್ಲೋಕಗಳಲ್ಲಿ ಹೇಳಲು ಉಪಕ್ರಮಿಸುತ್ತಾನೆ. ಭಗವಂತನು ಹೇಳುತ್ತಾನೆ: ಅರ್ಜುನಾ ಜ್ಞೇಯವೆಂದರೆ ಏನೆಂದು ವಿಷದವಾಗಿ ಅರ್ಥಮಾಡಿಕೊಂಡವನು ಅಮೃತತ್ವವನ್ನು ಹೊಂದುತ್ತಾನೆ. ಅದುವೇ ಅನಾದಿಯಾದ ಪರಬ್ರಹ್ಮನು. ಯಾವುದನ್ನು ಸತ್ ಅಂದರೆ ಅಸ್ತಿತ್ವವುಳ್ಳದ್ದು ಎಂದಾಗಲೀ, ಅಸತ್ ಅಂದರೆ ಅಸ್ತಿತ್ವವಿಲ್ಲದ್ದು ಎಂದಾಗಲೀ ಹೇಳಲು ಬರುವುದಿಲ್ಲವೋ ಆ ಜ್ಞೇಯವನ್ನು ಅಂದರೆ ಅರಿವಿನ ಗುರಿಯನ್ನು ಹೇಳುತ್ತೇನೆ.
सर्वतःपाणि पादं तत्
सर्वतोऽक्षिशिरोमुखम्।
सर्वतःश्रुतिमल्लोके
सर्वमावृत्य तिष्ठति॥१३.१३॥
ಸರ್ವತಃ ಪಾಣಿಪಾದಂ ತತ್
ಸರ್ವತೋಽಕ್ಷಿಶಿರೋಮುಖಮ್ ।
ಸರ್ವತಃ ಶ್ರುತಿಮಲ್ಲೋಕೇ
ಸರ್ವಮಾವೃತ್ಯ ತಿಷ್ಠತಿ ॥ 13-13॥
सर्वतःपाणिपादं तत् सर्वतोऽक्षिशिरोमुखम्।
सर्वतःश्रुतिमल्लोके सर्वमावृत्य तिष्ठति॥१३.१३॥
ಸರ್ವತಃ ಪಾಣಿಪಾದಂ ತತ್ ಸರ್ವತೋಽಕ್ಷಿಶಿರೋಮುಖಮ್ ।
ಸರ್ವತಃ ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ॥ 13-13॥
The meaning of Gneya
Or Object of Knowledge, the Knowable, is further explained.
13. The Sat or Existence aspect of Brahman
Is indicated here:
Brahman has hands and feet
Spread on all sides.
So also eyes, hands and mouths on all sides.
On all sides are the ears spread in this world.
It stands all-inclusive and all-embracing.
ಬ್ರಹ್ಮನ ಸತ್ ಅಥವಾ ಅಸ್ತಿತ್ವದ ನೋಟವನ್ನು ಇಲ್ಲಿ ತಿಳಿಸಲಾಗಿದೆ:
ಬ್ರಹ್ಮವು ಎಲ್ಲಾ ದಿಕ್ಕುಗಳಲ್ಲೂ ಕೈ ಮತ್ತು ಕಾಲುಗಳನ್ನು ಹರಡಿಕೊಂಡಿರುವಂತದ್ದು, ಹಾಗೆಯೇ ಎಲ್ಲೆಲ್ಲಿಯೂ ಕಣ್ಣು, ತಲೆ, ಬಾಯಿಗಳುಳ್ಳದ್ದು. ಎಲ್ಲೆಲ್ಲಿಯೂ ಕಿವಿಗಳನ್ನು ಹೊಂದಿರುವಂತದ್ದು. ಅದು ಲೋಕದಲ್ಲಿ ಎಲ್ಲವನ್ನೂ ವ್ಯಾಪಕವಾಗಿ ಆವರಿಸಿಕೊಂಡಿರುವಂತದ್ದು. ಹೀಗೆ ಜ್ಞೇಯವನ್ನು ಮತ್ತಷ್ಟು ವಿವರಿಸಲಾಗುತ್ತದೆ.
सर्वेन्द्रियगुणाभासं
सर्वेन्द्रियविवर्जितम्।
असक्तं सर्वभृच्चैव
निर्गुणं गुणभोक्तृ च॥१३.१४॥
ಸರ್ವೇಂದ್ರಿಯಗುಣಾಭಾಸಂ
ಸರ್ವೇಂದ್ರಿಯವಿವರ್ಜಿತಮ್ ।
ಅಸಕ್ತಂ ಸರ್ವಭೃಚ್ಚೈವ
ನಿರ್ಗುಣಂ ಗುಣಭೋಕ್ತೃ ಚ ॥ 13-14॥
सर्वेन्द्रियगुणाभासं सर्वेन्द्रियविवर्जितम्।
असक्तं सर्वभृच्चैव निर्गुणं गुणभोक्तृ च॥१३.१४॥
ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಮ್ ।
ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ ॥ 13-14॥
The meaning of Gneya
Or Object of Knowledge, the Knowable, is further explained.
14. Brahman appears to possess
All the sense organs
With their functions,
But in reality, it is without them all.
It is unattached though it sustains everything.
It is devoid of the three Gunas or constituents,
Yet it experiences them all.
ಬ್ರಹ್ಮನು ಎಲ್ಲ ಗ್ರಹಣೇಂದ್ರಿಯಗಳನ್ನು ಹೊಂದಿರುವನಂತೆ ಗೋಚರಿಸಿದರೂ ವಾಸ್ತವವಾಗಿ ಆತನಿಗೆ ಇಂದ್ರಿಯಗಳಿಲ್ಲ. ಅಂದರೆ ಅವನು ಸಂಪೂರ್ಣ ಇಂದ್ರಿಯಗಳ ವಿಷಯಗಳನ್ನು ಬಲ್ಲವನಾಗಿದ್ದರೂ ಇಂದ್ರಿಯರಹಿತನು. ಹಾಗೆಯೇ ಯಾವುದನ್ನೂ ಅಂಟಿಸಿಕೊಳ್ಳದಿದ್ದರೂ ಸರ್ವವನ್ನೂ ಧರಿಸಿದವನಾಗಿದ್ದಾನೆ. ಅಂದರೆ ಎಲ್ಲ ಜೀವರಾಶಿಯನ್ನು ಪಾಲಿಸುವವನಾದರೂ ನಿರಾಸಕ್ತನು. ಆತನು ಗುಣರಹಿತನಾಗಿದ್ದಾರೂ, ನಿಸರ್ಗದ ಎಲ್ಲ ಗುಣಗಳ ಭೋಕ್ತೃವಾಗಿದ್ದಾನೆ. ಹೀಗೆ ಜ್ಞೇಯವನ್ನು ಮತ್ತಷ್ಟು ವಿವರಿಸಲಾಗುತ್ತದೆ.
बहिरन्तश्च भूतानां
अचरं चरमेव च।
सूक्ष्मत्वात्तदविज्ञेयं
दूरस्थं चान्तिके च तत्॥१३.१५॥
ಬಹಿರಂತಶ್ಚ ಭೂತಾನಾಂ
ಅಚರಂ ಚರಮೇವ ಚ ।
ಸೂಕ್ಷ್ಮತ್ವಾತ್ತದವಿಜ್ಞೇಯಂ
ದೂರಸ್ಥಂ ಚಾಂತಿಕೇ ಚ ತತ್ ॥ 13-15॥
बहिरन्तश्च भूतानां अचरं चरमेव च।
सूक्ष्मत्वात्तदविज्ञेयं दूरस्थं चान्तिके च तत्॥१३.१५॥
ಬಹಿರಂತಶ್ಚ ಭೂತಾನಾಂ ಅಚರಂ ಚರಮೇವ ಚ ।
ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ ॥ 13-15॥
The meaning of Gneya
Or Object of Knowledge, the Knowable, is further explained.
15. Brahman is inside all beings
As well as outside;
It is both static and moving.
Being subtle, it is difficult to know.
And it is near yet far.
ಬ್ರಹ್ಮನು ಎಲ್ಲ ಜೀವಿಗಳ ಮತ್ತು ಚರಾಚರಗಳ ಒಳಗೂ ಹಾಗೂ ಹೊರಗೂ ಇದ್ದಾನೆ. ಆತನು ಅತಿ ಸೂಕ್ಷ್ಮನಾದದ್ದರಿಂದ ತಿಳಿಯಲು ಅಶಕ್ಯನು. ಅಂದರೆ ಐಹಿಕ ಇಂದ್ರಿಯಗಳು ಅವನನ್ನು ನೋಡಲಾರವು ಮತ್ತು ತಿಳಿಯಲಾರವು. ಆತನು ಸಮೀಪವಿದ್ದಂತೆ ಗೋಚರಿಸಿದರೂ ಬಹು ದೂರದಲ್ಲಿದ್ದಾನೆ. ಅರ್ಥಾತ್ ತಿಳಿದವರಿಗೆ ಸಮೀಪದಲ್ಲಿದ್ದಾನೆ ಮತ್ತು ತಿಳಿಯದವರಿಗೆ ದೂರದಲ್ಲಿದ್ದಾನೆ. ಹೀಗೆ ಜ್ಞೇಯವನ್ನು ಮತ್ತಷ್ಟು ವಿವರಿಸಲಾಗುತ್ತದೆ.
अविभक्तं च भूतेषु
विभक्तमिव च स्थितम्।
भूतभर्तृ च तज्ज्ञेयं
ग्रसिष्णु प्रभविष्णु च॥१३.१६॥
ಅವಿಭಕ್ತಂ ಚ ಭೂತೇಷು
ವಿಭಕ್ತಮಿವ ಚ ಸ್ಥಿತಮ್ ।
ಭೂತಭರ್ತೃ ಚ ತಜ್ಜ್ಞೇಯಂ
ಗ್ರಸಿಷ್ಣು ಪ್ರಭವಿಷ್ಣು ಚ ॥ 13-16॥
अविभक्तं च भूतेषु विभक्तमिव च स्थितम्।
भूतभर्तृ च तज्ज्ञेयं ग्रसिष्णु प्रभविष्णु च॥१३.१६॥
ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ ।
ಭೂತಭರ್ತೃ ಚ ತಜ್ಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ ॥ 13-16॥
The meaning of Gneya
Or Object of Knowledge, the Knowable, is further explained.
16. Brahman stays undivided in all bodies,
Yet it appears divided.
Brahman, that Knowable one,
Sustains all beings.
It consumes them at the time of Dissolution
And causes their manifestation
At the time of Creation again.
ಬ್ರಹ್ಮನು ಎಲ್ಲ ಪ್ರಾಣಿಗಳಲ್ಲಿ ಹಂಚಿಹೋಗಿರುವಂತೆ ಕಂಡರೂ ಅವನು ವಿಭಕ್ತನಲ್ಲ. ಅವನು ಎಲ್ಲ ಜೀವಿಗಳಲ್ಲಿ ಏಕವಾಗಿ ಸ್ಥಿತನಾಗಿರುತ್ತಾನೆ. ಬ್ರಹ್ಮನು ಸಮಸ್ತ ಭೂತಗಳ ಪಾಲಕ. ಪ್ರಳಯಕಾಲದಲ್ಲಿ ಎಲ್ಲವನ್ನೂ ಲಯ ಮಾಡುವ ಆತನು ಮತ್ತೆ ಸೃಷ್ಟಿಯ ಸಮಯದಲ್ಲಿ ಜೀವ ತುಂಬುವನು. ಅಂದರೆ ಸೃಷ್ಟಿ, ಸ್ಥಿತಿ, ಲಯಗಳ ಕಾರಣೀಭೂತನಾದ ಆ ಬ್ರಹ್ಮನನ್ನು ಅರಿತುಕೋ. ಹೀಗೆ ಜ್ಞೇಯವನ್ನು ಮತ್ತಷ್ಟು ವಿವರಿಸಲಾಗುತ್ತದೆ.
ज्योतिषामपि तज्ज्योति:
तमसः परमुच्यते।
ज्ञानं ज्ञेयं ज्ञानगम्यं
हृदि सर्वस्य विष्ठितम्॥१३.१७॥
ಜ್ಯೋತಿಷಾಮಪಿ ತಜ್ಜ್ಯೋತಿಃ
ತಮಸಃ ಪರಮುಚ್ಯತೇ ।
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ
ಹ್ರುದಿ ಸರ್ವಸ್ಯ ವಿಷ್ಠಿತಮ್ ॥ 13-17॥
ज्योतिषामपि तज्ज्योति: तमसः परमुच्यते।
ज्ञानं ज्ञेयं ज्ञानगम्यं हृदि सर्वस्य विष्ठितम्॥१३.१७॥
ಜ್ಯೋತಿಷಾಮಪಿ ತಜ್ಜ್ಯೋತಿಃ ತಮಸಃ ಪರಮುಚ್ಯತೇ ।
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹ್ರುದಿ ಸರ್ವಸ್ಯ ವಿಷ್ಠಿತಮ್ ॥ 13-17॥
The meaning of Gneya
Or Object of Knowledge, the Knowable, is further explained.
17. Brahman is said to be
The Light of all Lights,
Beyond Darkness;
It is Knowledge
As it is Knowable and
Attainable through Knowledge.
In fact, it remains well-established
In the hearts of all as Antaryami.
ಬ್ರಹ್ಮನು ಎಲ್ಲ ಪ್ರಕಾಶಮಾನ ವಸ್ತುಗಳ ಬೆಳಕಿನ ಮೂಲ ಮತ್ತು ಜಡವಸ್ತುವಿನ ತಮಸ್ಸಿನ ಆಚೆ ಇರುವವನು. ಅವನು ಅವ್ಯಕ್ತನು. ಅವನು ಜ್ಞಾನ ಸ್ವರೂಪನು. ಜ್ಞಾನದಿಂದಲೇ ತಿಳಿಯಲ್ಪಡುವವನು. ಅವನು ಎಲ್ಲ ಅಂತರ್ಯಾಮಿಗಳ ಹೃದಯಗಳಲ್ಲಿ ಸ್ಥಿರವಾಗಿ ಪ್ರತಿಷ್ಠಿತನಾಗಿದ್ದಾನೆ.
इति क्षेत्रं तथा ज्ञानं
ज्ञेयं चोक्तं समासतः।
मद्भक्त एतद्विज्ञाय
मद्भावायोपपद्यते॥१३.१८॥
ಇತಿ ಕ್ಷೇತ್ರಂ ತಥಾ ಜ್ಞಾನಂ
ಜ್ಞೇಯಂ ಚೋಕ್ತಂ ಸಮಾಸತಃ ।
ಮದ್ಭಕ್ತ ಏತದ್ವಿಜ್ಞಾಯ
ಮದ್ಭಾವಾಯೋಪಪದ್ಯತೇ ॥ 13-18॥
इति क्षेत्रं तथा ज्ञानं ज्ञेयं चोक्तं समासतः।
मद्भक्त एतद्विज्ञाय मद्भावायोपपद्यते॥१३.१८॥
ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ ।
ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ ॥ 13-18॥
18. Concluding the topic of Kshetra and Kshetragna,
Sri Bhagavan says:
Arjuna,
Thus I have given you, in brief,
The description of Kshetra, Field,
Gnana, Knowledge and
Gneyam, the Knowable or the Object of Knowledge.
By understanding these three,
My devotee becomes eligible
To reach Me and attain Liberation.
ಕ್ಷೇತ್ರ ಮತ್ತು ಕ್ಷೇತ್ರಜ್ಞರ ವಿಚಾರವನ್ನು ಮುಗಿಸುತ್ತಾ ಶ್ರೀ ಭಗವಂತನು ಹೇಳಿದನು:
ಅರ್ಜುನಾ, ಹೀಗೆ ನಾನು ಕ್ಷೇತ್ರ ಅಂದರೆ ದೇಹ, ಜ್ಞಾನ ಮತ್ತು ಜ್ಞಾನಕ್ಕೆ ಸಿಲುಕುವುದು ಅಂದರೆ ಜ್ಞೇಯದ ಬಗ್ಗೆ ನಿನಗೆ ಸಂಕ್ಷಿಪ್ತವಾಗಿ ಹೇಳಿದ್ದೇನೆ. ನನ್ನ ಭಕ್ತನಾದವನು ಈ ಮೂರನ್ನೂ ಸರಿಯಾಗಿ ಅರಿತುಕೊಂಡು ನನ್ನನ್ನು ಸೇರಿ ಮೋಕ್ಷ ಹೊಂದಲು ಯೋಗ್ಯನಾಗಿರುತ್ತಾನೆ.
प्रकृतिं पुरुषं चैव
विद्ध्यनादी उभावपि।
विकारांश्च गुणांश्चैव
विद्धि प्रकृतिसम्भवान्॥१३.१९॥
ಪ್ರಕೃತಿಂ ಪುರುಷಂ ಚೈವ
ವಿದ್ಧ್ಯನಾದೀ ಉಭಾವಪಿ ।
ವಿಕಾರಾಂಶ್ಚ ಗುಣಾಂಶ್ಚೈವ
ವಿದ್ಧಿ ಪ್ರಕೃತಿಸಂಭವಾನ್ ॥ 13-19॥
प्रकृतिं पुरुषं चैव विद्ध्यनादी उभावपि।
विकारांश्च गुणांश्चैव विद्धि प्रकृतिसम्भवान्॥१३.१९॥
ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ ।
ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿಸಂಭವಾನ್ ॥ 13-19॥
19. Sri Bhagavan says:
Arjuna,
Know that Prakruti, Power
And Purusha, Spirit or Self
Are both beginning-less.
Also know that all the transformations
In the form of the body and senses
And the constituents
Like the Gunas
Have originated in Prakruti.
ಶ್ರೀ ಭಗವಂತನು ಹೇಳುತ್ತಾನೆ:
ಅರ್ಜುನಾ, ಪ್ರಕೃತಿ ಮತ್ತು ಪುರುಷ ಇವೆರಡಕ್ಕೂ ಆದಿಯಿಲ್ಲವೆಂಬುದನ್ನು ತಿಳಿ. ಅವು ಅನಾದಿ ತತ್ವಗಳು. ಆದರೂ ರಾಗದ್ವೇಷಾದಿ ವಿಕಾರಗಳು, ಸಾತ್ವಿಕವಾದ ಗುಣಗಳು ಪ್ರಕೃತಿಯಿಂದಲೇ ಹುಟ್ಟಿದವಗಳೆಂಬುದನ್ನು ಅರಿತುಕೋ.
कार्यकरणकर्तृत्वे
हेतुः प्रकृतिरुच्यते।
पुरुषः सुखदुःखानां
भोक्तृत्वे हेतुरुच्यते॥१३.२०॥
ಕಾರ್ಯಕರಣಕರ್ತೃತ್ವೇ
ಹೇತುಃ ಪ್ರಕೃತಿರುಚ್ಯತೇ ।
ಪುರುಷಃ ಸುಖದುಃಖಾನಾಂ
ಭೋಕ್ತೃತ್ವೇ ಹೇತುರುಚ್ಯತೇ ॥ 13-20॥
कार्यकरणकर्तृत्वे हेतुः प्रकृतिरुच्यते।
पुरुषः सुखदुःखानां भोक्तृत्वे हेतुरुच्यते॥१३.२०॥
ಕಾರ್ಯಕರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ ।
ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ ॥ 13-20॥
20. Prakruti is said to be the cause
That brings about the effects
Like the body and the senses.
Purusha is said to be
The cause of the experience
Of pleasure and pain.
ಪ್ರಕೃತಿಯು ಶರೀರೇಂದ್ರಿಯಗಳ ಉತ್ಪತ್ತಿಗೆ ಕಾರಣವೆನಿಸಿರುವುದು. ಪುರುಷನು ಸುಖದುಖಃಗಳ ಅನುಭವಕ್ಕೆ ಕಾರಣನೆನಿಸಿರುವವನು.
पुरुषः प्रकृतिस्थो हि
भुङ्क्ते प्रकृतिजान्गुणान्।
कारणं गुणसङ्गोऽस्य
सदसद्योनिजन्मसु॥१३.२१॥
ಪುರುಷಃ ಪ್ರಕೃತಿಸ್ಥೋ ಹಿ
ಭುಂಕ್ತೇ ಪ್ರಕೃತಿಜಾನ್ಗುಣಾನ್ ।
ಕಾರಣಂ ಗುಣಸಂಗೋಽಸ್ಯ
ಸದಸದ್ಯೋನಿಜನ್ಮಸು ॥ 13-21॥
पुरुषः प्रकृतिस्थो हि भुङ्क्ते प्रकृतिजान्गुणान्।
कारणं गुणसङ्गोऽस्य सदसद्योनिजन्मसु॥१३.२१॥
ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ಗುಣಾನ್ ।
ಕಾರಣಂ ಗುಣಸಂಗೋಽಸ್ಯ ಸದಸದ್ಯೋನಿಜನ್ಮಸು ॥ 13-21॥
21. Situated in Prakruti,
Purusha, as enjoyer, experiences
The Gunas or the Constituents
Like Sattva, Rajas and Tamas.
It is due to the effect of these Gunas
That he takes birth in wombs,
Good or evil,
Like those of the divine, human and animal beings.
ಪುರುಷನು ಪ್ರಕೃತಿಯಲ್ಲಿದ್ದುಕೊಂಡೇ, ಪ್ರಕೃತಿಯಿಂದ ಹುಟ್ಟಿದ ಸತ್ವಗುಣ, ರಜೋಗುಣ ಮತ್ತು ತಮೋಗುಣಗಳನ್ನು ಅನುಭವಿಸುತ್ತಿರುವನು. ಇವನು ದೇವತೆಗಳ, ಮನುಷ್ಯರ ಮತ್ತು ಪ್ರಾಣಿಗಳ, ಒಳ್ಳೆಯ ಮತ್ತು ಕೆಟ್ಟ ಯೋನಿಗಳಲ್ಲಿ ಹುಟ್ಟುವುದಕ್ಕೆ ಈ ಗುಣಗಳಲ್ಲಿರುವ ಆಸಕ್ತಿಯೇ ಕಾರಣವಾಗಿದೆ.
उपद्रष्टानुमन्ता च
भर्ता भोक्ता महेश्वरः।
परमात्मेति चाप्युक्तो
देहेस्मिन्पुरुषः परः॥१३.२२ ll
ಉಪದ್ರಷ್ಟಾನುಮಂತಾ ಚ
ಭರ್ತಾ ಭೋಕ್ತಾ ಮಹೇಶ್ವರಃ ।
ಪರಮಾತ್ಮೇತಿ ಚಾಪ್ಯುಕ್ತೋ
ದೇಹೇಽಸ್ಮಿನ್ಪುರುಷಃ ಪರಃ ॥ 13-22॥
उपद्रष्टानुमन्ता च भर्ता भोक्ता महेश्वरः।
परमात्मेति चाप्युक्तो देहेस्मिन्पुरुषः परः॥१३.२२ ll
ಉಪದ್ರಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ ।
ಪರಮಾತ್ಮೇತಿ ಚಾಪ್ಯುಕ್ತೋ ದೇಹೇಽಸ್ಮಿನ್ಪುರುಷಃ ಪರಃ ॥ 13-22॥
22. Here is a description of the Supreme Spirit
As he is said to reside in the human body or kshetra:
Witness, Sanctioner, Supporter,
Experiencer and Supreme Lord.
ಅಂಟಿಯೂ ಅಂಟದ ಈ ಶರೀರವೆಂಬ ಕ್ಷೇತ್ರದಲ್ಲಿರುವ ಪರಮಪುರುಷನನ್ನು ಸಾಕ್ಷಿಯೆಂದೂ, ಅನುಮೋದಕನೆಂದೂ, ಭರ್ತ ಅಂದರೆ ಎಲ್ಲರ ಧಾರಣೆ- ಪೋಷಣೆ ಮಾಡುವವನೆಂದೂ, ಜೀವರೂಪದಿಂದಿರುವುದರಿಂದ ಭೋಕ್ತನೆಂದೂ, ಸಕಲ ದೇವತೆಗಳ ಒಡೆಯನಾದ್ದರಿಂದ ಮಹೇಶ್ವರನೆಂದೂ, ಪರಮಾತ್ಮನೆಂದೂ ಸಹ ಹೇಳುತ್ತಾರೆ.
य एवं वेत्ति पुरुषं
प्रकृतिं च गुणैः सह।
सर्वथा वर्तमानोऽपि
न स भूयोऽभिजायते॥१३.२३॥
ಯ ಏವಂ ವೇತ್ತಿ ಪುರುಷಂ
ಪ್ರಕೃತಿಂ ಚ ಗುಣೈಃ ಸಹ ।
ಸರ್ವಥಾ ವರ್ತಮಾನೋಽಪಿ
ನ ಸ ಭೂಯೋಽಭಿಜಾಯತೇ ॥ 13-23॥
य एवं वेत्ति पुरुषं प्रकृतिं च गुणैः सह।
सर्वथा वर्तमानोऽपि न स भूयोऽभिजायते॥१३.२३॥
ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ ।
ಸರ್ವಥಾ ವರ್ತಮಾನೋಽಪಿ ನ ಸ ಭೂಯೋಽಭಿಜಾಯತೇ ॥ 13-23॥
23. He who knows thus
About the Supreme Soul
As well as about the Power of Prakuti
And its Constituents,
Namely, Sattva, Rajas ad Tamas,
Is no more born,
Whatever be the state in which
He conducts himself.
ಯಾರು ಈ ರೀತಿಯಾಗಿ ಕ್ಷೇತ್ರಜ್ಞ ಪುರುಷನನ್ನೂ, ಪ್ರಕೃತಿ ಮತ್ತು ಅದರ ಮೂಲ ಘಟಕಗಳಾದ ಸತ್ವ, ರಜಸ್ಸು ಮತ್ತು ತಮೋ ಗುಣಗಳ ಪರಸ್ಪರ ಪ್ರಕ್ರಿಯೆಯನ್ನು ಕುರಿತ ಈ ತತ್ವಜ್ಞಾನವನ್ನು ಅರಿತುಕೊಳ್ಳುವನೋ ಅವನು, ಯಾವುದೇ ಸ್ಥಿತಿಯಲ್ಲಿದ್ದರೂ ಪುನಃ ಹುಟ್ಟುವುದಿಲ್ಲ.
ध्यानेनात्मनि पस्यन्ति
केचिदात्मानमात्मना।
अन्ये साङ्ख्येन योगेन
कर्मयोगेनचापरे॥१३.२४॥
ಧ್ಯಾನೇನಾತ್ಮನಿ ಪಶ್ಯಂತಿ
ಕೇಚಿದಾತ್ಮಾನಮಾತ್ಮನಾ ।
ಅನ್ಯೇ ಸಾಂಖ್ಯೇನ ಯೋಗೇನ
ಕರ್ಮಯೋಗೇನ ಚಾಪರೇ ॥ 13-24॥
ध्यानेनात्मनि पस्यन्ति केचिदात्मानमात्मना।
अन्ये साङ्ख्येन योगेन कर्मयोगेनचापरे॥१३.२४॥
ಧ್ಯಾನೇನಾತ್ಮನಿ ಪಶ್ಯಂತಿ ಕೇಚಿದಾತ್ಮಾನಮಾತ್ಮನಾ ।
ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ ॥ 13-24॥
24. Some people realise the Supreme Self
in their own self by means of meditation;
some others realise by means of Sankhya Yoga
and yet others by means of Karma Yoga.
ಕೆಲವರು ದೇಹದಲ್ಲಿ ಇರುವ ಈ ಆತ್ಮನನ್ನು ಶುದ್ಧ ಬುದ್ಧಿಯ ಸಹಾಯದಿಂದ, ಧ್ಯಾನದ ಮೂಲಕ ದರ್ಶಿಸುತ್ತಾರೆ. ಮತ್ತೆ ಕೆಲವರು ಸಾಂಖ್ಯಯೋಗದ ಮುಖಾಂತರ ಆತ್ಮನನ್ನು ನೋಡುತ್ತಾರೆ. ಇನ್ನೂ ಕೆಲವರು ಕರ್ಮಯೋಗದಿಂದ ತಮ್ಮೊಳಗಿರುವ ಆತ್ಮನನ್ನು ಕಾಣುತ್ತಾರೆ.
अन्ये त्वेवमजानन्तः
श्रुत्वान्येभ्य उपासते।
तेऽपि चातितरन्त्येव
मृत्युं श्रुतिपरायणाः॥१३.२५॥
ಅನ್ಯೇ ತ್ವೇವಮಜಾನಂತಃ
ಶ್ರುತ್ವಾನ್ಯೇಭ್ಯ ಉಪಾಸತೇ ।
ತೇಽಪಿ ಚಾತಿತರಂತ್ಯೇವ
ಮೃತ್ಯುಂ ಶ್ರುತಿಪರಾಯಣಾಃ ॥ 13-25॥
न्ये त्वेवमजानन्तः श्रुत्वान्येभ्य उपासते।
तेऽपि चातितरन्त्येव मृत्युं श्रुतिपरायणाः॥१३.२५॥
ಅನ್ಯೇ ತ್ವೇವಮಜಾನಂತಃ ಶ್ರುತ್ವಾನ್ಯೇಭ್ಯ ಉಪಾಸತೇ ।
ತೇಽಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ ॥ 13-25॥
25. Those who do not know the above means
For the realization of the Supreme Self,
However, approach those who have knowledge
Of Brahman and thus worship the Supreme Self.
They too by eagerly listening to their teachings
Overcome the cycle of birth and death.
ಧ್ಯಾನದಿಂದಾಗಲೀ, ಯೋಗದಿಂದಾಗಲೀ ಪರಮಾತ್ಮನನ್ನು ಗ್ರಹಿಸಲು ಅಸಮರ್ಥರಾದವರೂ, ಹೆಚ್ಚು ಆಧ್ಯಾತ್ಮಿಕ ಜ್ಞಾನವಿಲ್ಲದವರೂ, ಬ್ರಹ್ಮಜ್ಞಾನ ಉಳ್ಳವರನ್ನು ಸಂಪರ್ಕಿಸಿ, ಅವರಿಂದ ಕೇಳಿ ಪರಮಾತ್ಮನನ್ನು ಉಪಾಸಿಸುತ್ತಾರೆ. ಅಂತಹ ವೇದಾಂತ ಶ್ರವಣತತ್ಪರರಾದವರೂ ಸಹ ತಪ್ಪದೆ ಹುಟ್ಟು ಸಾವಿನ ಚಕ್ರದಿಂದ ಹೊರಬಂದು ಮೃತ್ಯುರೂಪ ಸಂಸಾರವನ್ನು ದಾಟಬಲ್ಲರು.
यावत्सञ्जायते किञ्चित्
सत्वं स्थावरजङ्गमम्।
क्षेत्रक्षेत्रज्ञसंयोगात्
तद्विद्धि भरतर्षभ॥१३.२६॥
ಯಾವತ್ಸಂಜಾಯತೇ ಕಿಂಚಿತ್
ಸತ್ತ್ವಂ ಸ್ಥಾವರಜಂಗಮಮ್ ।
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್
ತದ್ವಿದ್ಧಿ ಭರತರ್ಷಭ ॥ 13-26॥
यावत्सञ्जायते किञ्चित् सत्वं स्थावरजङ्गमम्।
क्षेत्रक्षेत्रज्ञसंयोगात् तद्विद्धि भरतर्षभ॥१३.२६॥
ಯಾವತ್ಸಂಜಾಯತೇ ಕಿಂಚಿತ್ ಸತ್ತ್ವಂ ಸ್ಥಾವರಜಂಗಮಮ್ ।
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ ತದ್ವಿದ್ಧಿ ಭರತರ್ಷಭ ॥ 13-26॥
26. Arjuna,
Whatever be the being that is born,
Be it moving or unmoving,
Know that to be the union
Of Kshetra and Kshetragna,
Of the Field and the Field-knower.
ಅರ್ಜುನಾ, ಸ್ಥಾವರ ಜಂಗಮರೂಪವಾದ ಯಾವುದೇ ವಸ್ತು ಉತ್ಪನ್ನವಾಗುವುದೋ, ಅದು ಕ್ಷೇತ್ರ ಕ್ಷೇತ್ರಜ್ಞರ ಸಂಯೋಗದಿಂದ ಹುಟ್ಟಿರುವುದೆಂದು ತಿಳಿ.
समं सर्वेषु भूतेषु
तिष्ठन्तं परमेश्वरम्।
विनश्यत्स्वविनस्यन्तं
यः पस्यति स पस्यति॥१३.२७॥
ಸಮಂ ಸರ್ವೇಷು ಭೂತೇಷು
ತಿಷ್ಠಂತಂ ಪರಮೇಶ್ವರಮ್ ।
ವಿನಶ್ಯತ್ಸ್ವವಿನಶ್ಯಂತಂ
ಯಃ ಪಶ್ಯತಿ ಸ ಪಶ್ಯತಿ ॥ 13-27॥
समं सर्वेषु भूतेषु तिष्ठन्तं परमेश्वरम्।
विनश्यत्स्वविनस्यन्तं यः पस्यति स पस्यति॥१३.२७॥
ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್ ।
ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ ॥ 13-27॥
27. He alone observes truly
Who perceives the Supreme Self
Dwelling alike in all beings
And not perishing when they perish.
ಎಲ್ಲ ದೇಹಗಳಲ್ಲಿ ಜೀವಾತ್ಮನ ಜೊತೆಗಿರುವ ಪರಮಾತ್ಮನನ್ನು ಕಂಡುಕೊಂಡು, ನಾಶವಾಗುವ ದೇಹದಲ್ಲಿರುವ ಜೀವಾತ್ಮನಾಗಲೀ, ಪರಮಾತ್ಮನಾಗಲೀ ಅಳಿಯುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳುವವನೇ ನಿಜವಾಗಿ ನೋಡುತ್ತಾನೆ.
समं पस्यन्हि सर्वत्र
समवस्थितमीश्वरम्।
न हिनस्त्यात्मनात्मानं
ततो याति परां गतिम्॥१३.२८॥
ಸಮಂ ಪಶ್ಯನ್ಹಿ ಸರ್ವತ್ರ
ಸಮವಸ್ಥಿತಮೀಶ್ವರಮ್ ।
ನ ಹಿನಸ್ತ್ಯಾತ್ಮನಾತ್ಮಾನಂ
ತತೋ ಯಾತಿ ಪರಾಂ ಗತಿಮ್ ॥ 13-28॥
समं पस्यन्हि सर्वत्र समवस्थितमीश्वरम्।
न हिनस्त्यात्मनात्मानं ततो याति परां गतिम्॥१३.२८॥
ಸಮಂ ಪಶ್ಯನ್ಹಿ ಸರ್ವತ್ರ ಸಮವಸ್ಥಿತಮೀಶ್ವರಮ್ ।
ನ ಹಿನಸ್ತ್ಯಾತ್ಮನಾತ್ಮಾನಂ ತತೋ ಯಾತಿ ಪರಾಂ ಗತಿಮ್ ॥ 13-28॥
28. When one sees the Supreme Lord
Dwelling alike everywhere,
He does not injure or destroy
The Supreme Self by the self.
Thus he reaches the Supreme Goal.
ಎಲ್ಲೆಲ್ಲಿಯೂ, ಪ್ರತಿಯೊಂದು ಜೀವಂತ ಪ್ರಾಣಿಯಲ್ಲಿಯೂ ಒಂದೇ ಸಮನಾಗಿ ಪರಮಾತ್ಮನು ಇರುವುದನ್ನು ಕಾಣಬಲ್ಲವನು ತನ್ನ ಮನಸ್ಸಿನಿಂದ ತನ್ನನ್ನು ಘಾಸಿ ಮಾಡಿಕೊಳ್ಳುವುದಿಲ್ಲ ಅಥವಾ ನಾಶಪಡಿಸಿಕೊಳ್ಳುವುದಿಲ್ಲ. ಹೀಗೆ ಅವನು ಪರಮ ಗತಿಯನ್ನು ಸೇರುತ್ತಾನೆ.
प्रकृत्यैव च कर्माणि
क्रियमाणानि सर्वशः।
यः पस्यति तथात्मानं
अकर्तारं स पस्यति॥१३.२९॥
ಪ್ರಕೃತ್ಯೈವ ಚ ಕರ್ಮಾಣಿ
ಕ್ರಿಯಮಾಣಾನಿ ಸರ್ವಶಃ ।
ಯಃ ಪಶ್ಯತಿ ತಥಾತ್ಮಾನಮನಂ
ಅಕರ್ತಾರಂ ಸ ಪಶ್ಯತಿ ॥ 13-29॥
प्रकृत्यैव च कर्माणि क्रियमाणानि सर्वशः।
यः पस्यति तथात्मानं अकर्तारं स पस्यति॥१३.२९॥
ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ ।
ಯಃ ಪಶ್ಯತಿ ತಥಾತ್ಮಾನಮನಂ ಅಕರ್ತಾರಂ ಸ ಪಶ್ಯತಿ ॥ 13-29॥
29. He alone perceives truly
Who understands that
All actions are done everywhere
By Prakruti only
And finds the Field-knower
Or the Self as a non-doer.
ಈ ಜಗತ್ತಿನಲ್ಲಿ ಜರುಗುವ ಕರ್ಮ ಕಲಾಪಗಳೆಲ್ಲವೂ ಪ್ರಕೃತಿಯಿಂದಲೇ ನಡೆಯುತ್ತಿದೆಯೆಂದೂ, ಆತ್ಮ ಯಾವುದಕ್ಕೂ ಕರ್ತನಲ್ಲವೆಂದೂ ಅಂದರೆ ತಾನು ಏನನ್ನೂ ಮಾಡುವುದಿಲ್ಲವೆಂದು ಯಾರು ಅರಿತುಕೊಳ್ಳುವನೋ ಅವನು ಸತ್ಯವನ್ನು ಗ್ರಹಿಸುವನಾಗಿರುತ್ತಾನೆ.
यदा भूतपृथग्भावं
एकस्थमनुपस्यति।
तत एव च विस्तारं
ब्रह्म सम्पद्यते तदा॥१३.३०॥
ಯದಾ ಭೂತಪೃಥಗ್ಭಾವಂ
ಏಕಸ್ಥಮನುಪಶ್ಯತಿ ।
ತತ ಏವ ಚ ವಿಸ್ತಾರಂ
ಬ್ರಹ್ಮ ಸಂಪದ್ಯತೇ ತದಾ ॥ 13-30॥
यदा भूतपृथग्भावं एकस्थमनुपस्यति।
तत एव च विस्तारं ब्रह्म सम्पद्यते तदा॥१३.३०॥
ಯದಾ ಭೂತಪೃಥಗ್ಭಾವಂ ಏಕಸ್ಥಮನುಪಶ್ಯತಿ ।
ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ ॥ 13-30॥
30. When one perceives all the multiplicity
Of forms abiding in the One
And all the plurality emanating from
That One alone,
Such a person becomes
The very Brahman.
ನಾನಾವಿಧದ ವೈವಿಧ್ಯತೆಗಳನ್ನುಳ್ಳ ಪ್ರಾಣಿಗಳ ಭೂತಜಾಲಗಳೆಲ್ಲವೂ ಒಂದೇ ಆತ್ಮದಲ್ಲಿರುವುದೆಂದೂ ಮತ್ತು ಅದರಿಂದಲೇ ಇವೆಲ್ಲವೂ ವಿಕಾಸವನ್ನು ಹೊಂದಿ ಪ್ರಕಟವಾಗಿದೆಯೆಂದೂ ಯಾವ ಮನುಷ್ಯನು ತಿಳಿದುಕೊಳ್ಳುತ್ತಾನೆಯೋ, ಆಗ ಅವನು ಬ್ರಹ್ಮವನ್ನು ಹೊಂದುತ್ತಾನೆ.
अनादित्वान्निर्गुणत्वात्
परमात्मायमव्ययः।
शरीरस्थोऽपि कौन्तेय
न करोति न लिप्यते॥१३.३१॥
ಅನಾದಿತ್ವಾನ್ನಿರ್ಗುಣತ್ವಾತ್
ಪರಮಾತ್ಮಾಯಮವ್ಯಯಃ ।
ಶರೀರಸ್ಥೋಽಪಿ ಕೌಂತೇಯ
ನ ಕರೋತಿ ನ ಲಿಪ್ಯತೇ ॥ 13-31॥
अनादित्वान्निर्गुणत्वात् परमात्मायमव्ययः।
शरीरस्थोऽपि कौन्तेय न करोति न लिप्यते॥१३.३१॥
ಅನಾದಿತ್ವಾನ್ನಿರ್ಗುಣತ್ವಾತ್ ಪರಮಾತ್ಮಾಯಮವ್ಯಯಃ ।
ಶರೀರಸ್ಥೋಽಪಿ ಕೌಂತೇಯ ನ ಕರೋತಿ ನ ಲಿಪ್ಯತೇ ॥ 13-31॥
31. Arjuna,
This Parmatma or Supreme Self
By virtue of being beginning-less,
Without being influenced
By the attributes of Nature or Prakruti
Like the three Gunas,
And also being Imperishable,
He neither acts nor gets stained by the actions.
ಎಲೈ ಅರ್ಜುನ, ಅವಿನಾಶಿಯಾದ ಆತ್ಮವು ದಿವ್ಯವಾದದ್ದು, ನಿತ್ಯವಾದದ್ದು ಮತ್ತು ಪ್ರಕೃತಿಯ ಮೂರು ಗುಣಗಳನ್ನು ಮೀರಿದ್ದು. ಅನಾದಿಯಾಗಿರುವುದರಿಂದಲೂ, ನಿರ್ಗುಣನಾಗಿ ಇರುವುದರಿಂದಲೂ, ಈ ಅವ್ಯಯನಾದ ಪರಮಾತ್ಮನು ಶರೀರದಲ್ಲಿದ್ದರೂ ಯಾವ ಕರ್ಮವನ್ನೂ ಮಾಡುವುದಿಲ್ಲ. ಕರ್ಮಕ್ಕೆ ಅಂಟುವುದಿಲ್ಲ.
यथा सर्वगतं सौक्ष्म्यात्
आकाशं नोपलिप्यते।
सर्वत्रावस्थितो देहे
तथात्मा नोपलिप्यते॥१३.३२॥
ಯಥಾ ಸರ್ವಗತಂ ಸೌಕ್ಷ್ಮ್ಯಾತ್
ಆಕಾಶಂ ನೋಪಲಿಪ್ಯತೇ ।
ಸರ್ವತ್ರಾವಸ್ಥಿತೋ ದೇಹೇ
ತಥಾತ್ಮಾ ನೋಪಲಿಪ್ಯತೇ ॥ 13-32॥
यथा सर्वगतं सौक्ष्म्यात् आकाशं नोपलिप्यते।
सर्वत्रावस्थितो देहे तथात्मा नोपलिप्यते॥१३.३२॥
ಯಥಾ ಸರ್ವಗತಂ ಸೌಕ್ಷ್ಮ್ಯಾತ್ ಆಕಾಶಂ ನೋಪಲಿಪ್ಯತೇ ।
ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ ॥ 13-32॥
32. Just as Akasa or Space
By virtue of being subtle and all-pervasive
Does not get stained,
So the Supreme Self remains positioned
In all the bodies without getting stained.
ಹೇಗೆ ಸರ್ವವ್ಯಾಪಿಯಾದ ಆಕಾಶವು ತನ್ನ ಸೂಕ್ಷ್ಮ ಸ್ವರೂಪದಿಂದಾಗಿ ಯಾವುದರೊಡನೆಯೂ ಬೆರೆಯುವುದಿಲ್ಲವೋ ಹಾಗೆಯೇ ಎಲ್ಲ ಜೀವಿಗಳ ದೇಹದಲ್ಲಿರುವ ಆತ್ಮನು ಲಿಪ್ತನಾಗುವುದಿಲ್ಲ.
यथा प्रकाशयत्येकः
कृत्स्नं लोकमिमं रविः।
क्षेत्रं क्षेत्री तथा कृत्स्नं
प्रकाशयति भारत॥१३.३३॥
ಯಥಾ ಪ್ರಕಾಶಯತ್ಯೇಕಃ
ಕೃತ್ಸ್ನಂ ಲೋಕಮಿಮಂ ರವಿಃ ।
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ
ಪ್ರಕಾಶಯತಿ ಭಾರತ ॥ 13-33॥
यथा प्रकाशयत्येकः कृत्स्नं लोकमिमं रविः।
क्षेत्रं क्षेत्री तथा कृत्स्नं प्रकाशयति भारत॥१३.३३॥
ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿಮಂ ರವಿಃ ।
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ ॥ 13-33॥
33. Arjuna,
Just as the One Sun
Lights up the entire world,
So the Kshetri,
The Owner of the Field,
Illumines the Kshetra, the Field,
With all its constituents
Like the Great Elements, etc.
ಎಲೈ ಅರ್ಜುನ, ಯಾವ ಪ್ರಕಾರವಾಗಿ ಒಬ್ಬನೇ ಆದ ಸೂರ್ಯನು ಈ ಲೋಕವನ್ನೆಲ್ಲಾ ಹೇಗೆ
ಪ್ರಕಾಶಗೊಳಿಸುತ್ತಾನೆಯೋ, ಹಾಗೆಯೇ ಕ್ಷೇತ್ರಜ್ಞನಾದ ಆತ್ಮನು ಸಮಸ್ತಕ್ಷೇತ್ರವನ್ನು ಪ್ರಕಾಶಗೊಳಿಸುತ್ತಾನೆ.
क्षेत्रक्षेत्रज्ञयोरेवं
अन्तरं ज्ञानचक्षुषा।
भूतप्रकृतिमोक्षं च
ये विदुर्यान्ति ते परम्॥१३.३४॥
ಕ್ಷೇತ್ರಕ್ಷೇತ್ರಜ್ಞಯೋರೇವಂ
ಅಂತರಂ ಜ್ಞಾನಚಕ್ಷುಷಾ ।
ಭೂತಪ್ರಕೃತಿಮೋಕ್ಷಂ ಚ
ಯೇ ವಿದುರ್ಯಾಂತಿ ತೇ ಪರಮ್ ॥ 13-34॥
क्षेत्रक्षेत्रज्ञयोरेवं अन्तरं ज्ञानचक्षुषा।
भूतप्रकृतिमोक्षं च ये विदुर्यान्ति ते परम्॥१३.३४॥
ಕ್ಷೇತ್ರಕ್ಷೇತ್ರಜ್ಞಯೋರೇವಂ ಅಂತರಂ ಜ್ಞಾನಚಕ್ಷುಷಾ ।
ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್ ॥ 13-34॥
34. Those who observe thus,
With the Eye of Gnana or Knowledge,
The difference between the Field
And the Field-Knower
And perceive the materiality of Prakruti
Attain the goal of Supreme Brahman.
ಈ ಪ್ರಕಾರವಾಗಿ ಕ್ಷೇತ್ರ ಮತ್ತು ಕ್ಷೇತ್ರಜ್ಞರ ನಡುವಣ ವ್ಯತ್ಯಾಸವನ್ನು ಅಂದರೆ ಭೇದವನ್ನು ಯಾರು ಜ್ಞಾನನೇತ್ರಗಳಿಂದ ಕಾಣಬಲ್ಲರೋ ಮತ್ತು ಯಾರು ಐಹಿಕ ಪ್ರಕೃತಿಯಲ್ಲಿ ಬಂಧನದಿಂದ ಮೋಕ್ಷ ಪಡೆಯುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬಲ್ಲರೋ, ಅವರು ಪರಬ್ರಹ್ಮ ಪರಮಾತ್ಮನನ್ನು ಹೊಂದಿ ಉತ್ತಮ ಗತಿಯನ್ನು ಪಡೆಯುತ್ತಾರೆ.
ಓಂ ತತ್ಸದಿತಿ ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಶ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದರೂಪವಾದ ಶ್ರೀಮದ್ಭಗವದ್ಗೀತೆಯಲ್ಲಿ ಕ್ಷೇತ್ರ ಕ್ಷೇತ್ರಜ್ಞವಿಭಾಗಯೋಗವೆಂಬ ಹೆಸರಿನ ಹದಿಮೂರನೆಯ ಅಧ್ಯಾಯವು ಮುಗಿದುದು.
ऒम् तत्सदिति ಓಂ ತತ್ಸದಿತಿ
श्रीमद्भगवद्गीतासु ಶ್ರೀಮದ್ಭಗವದ್ಗೀತಾಸು
उपनिषत्सु ಉಪನಿಷತ್ಸು
ब्रह्मविद्यायां ಬ್ರಹ್ಮವಿದ್ಯಾಯಾಂ
यॊगशास्त्रे ಯೋಗಶಾಸ್ತ್ರೇ
श्री कृष्णार्जुन संवादॆ ಶ್ರೀಕೃಷ್ಣಾರ್ಜುನಸಂವಾದೇ
क्षेत्रक्षेत्रज्ञविभागयोगो नाम ಕ್ಷೇತ್ರಕ್ಷೇತ್ರಜ್ಞವಿಭಾಗಯೋಗೋ ನಾಮ
त्त्रयोदशोऽध्यायः ತ್ರಯೋದಶೋಽಧ್ಯಾಯಃ
ऒम् तत्सत् ಓಂ ತತ್ಸತ್
The End of Chapter Thirteen