अथ श्रद्धात्रयविभागयोगो नाम सप्तदशोऽध्यायः
ಅಥ ಸಪ್ತದಶೋಽಧ್ಯಾಯಃ । ಶ್ರದ್ಧಾತ್ರಯವಿಭಾಗಯೋಗಃ
Chapter Seventeen: Sraddhatraya Vibhaga Yoga
The English word FAITH is defined as
“A strongly held belief “; or
“Trust in someone or something”.
The Sanskrit word SHRADDHA means much more than that.
Shraddha is a quality inherent in human beings.
It is born of one’s own swabhava, or personality.
Vasanas and samskaras are the resultants of actions done in the previous lives.
Personality is formed of them. Similarly, Shraddha is a dynamic expression of one’s personality.
It expresses itself in three different ways as Sattvic, Rajasic and Tamasic.
These expressions of Shraddha, and their distinctions, are described in this Chapter in respect of Worship, Food, Tapas and Daana.
At the end of Chapter 16, Lord Krishna tells Arjuna that the devotee seeking Liberation should act according to what is prescribed in the Shastra, but not as driven by ones desires. Arjuna has a doubt. He seeks clarification from the Lord:
“ಫೇತ್” ಅಂದರೆ ಶ್ರದ್ಧೆ ಎಂಬ ಆಂಗ್ಲಭಾಷೆಯ ಶಬ್ದವನ್ನು “ಬಲವಾದ ನಂಬಿಕೆ” ಅಥವಾ “ಯಾರಲ್ಲಿಯಾದರೂ ಅಥವಾ ಯಾವುದರಲ್ಲಿಯಾದರೂ ಇರಿಸಿದ ಭರವಸೆ” ಎಂದು ಅರ್ಥೈಸಲಾಗುತ್ತದೆ. ಆದರೆ ಶ್ರದ್ಧಾ ಎಂಬ ಸಂಸ್ಕೃತ ಶಬ್ದವು ಇದಕ್ಕಿಂತಲೂ ಮಿಗಿಲಾದ ಅರ್ಥವನ್ನೀಯುತ್ತದೆ.
ಶ್ರದ್ಧಾ ಎಂಬುದು ಮಾನವರಲ್ಲಿ ಅಂತರ್ಜಾತವಾದ ಸ್ವಾಭಾವಿಕ ಗುಣವಾಗಿದೆ. ಅದು ವ್ಯಕ್ತಿಯ ಸ್ವಭಾವ ಅಥವಾ ವ್ಯಕ್ತಿತ್ವದ ಸಂಭವನೀಯತೆಯಾಗಿದೆ.
ಪೂರ್ವಜನ್ಮದಲ್ಲಿ ಮಾಡಲಾದ ಕರ್ಮಗಳ ಫಲಿತಾಂಶವೇ ವಾಸನೆಗಳು ಮತ್ತು ಸಂಸ್ಕಾರಗಳು. ಅವುಗಳಿಂದ ಮನುಷ್ಯನ ವ್ಯಕ್ತಿತ್ವವು ರೂಪುಗೊಳ್ಳುತ್ತದೆ. ಹಾಗೆಯೇ ಶ್ರದ್ಧೆಯು ಮಾನವನ ವ್ಯಕ್ತಿತ್ವದ ಕ್ರಿಯಾತ್ಮಕ ಭಾವವಾಗಿದೆ. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ವಿಭಿನ್ನ ರೀತಿಯಲ್ಲಿ ಅದು ತನ್ನ ಗುಣವನ್ನು ಅಭಿವ್ಯಕ್ತಿಪಡಿಸುತ್ತದೆ.
ಆರಾಧನೆ, ಆಹಾರ, ತಪಸ್ಸು ಮತ್ತು ದಾನಗಳಿಗೆ ಅನುಗುಣವಾಗಿ, ಶ್ರದ್ಧೆಯ ಭಾವಗಳನ್ನು ಮತ್ತು ಅದರ ವಿಶೇಷ ಲಕ್ಷಣಗಳನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.
ಮೋಕ್ಷವನ್ನು ಬಯಸುವ ಭಕ್ತನು ಶಾಸ್ತ್ರಗಳಲ್ಲಿ ವಿವರಿಸಿದಂತೆ ನಡೆಯಬೇಕೇ ಹೊರತು ತನ್ನ ಅಭಿಲಾಷೆಯಂತೆ ಅಲ್ಲ ಎಂಬುದಾಗಿ ಶ್ರೀ ಕೃಷ್ಣನು ಅರ್ಜುನನಿಗೆ, ಹದಿನಾರನೆಯ ಅಧ್ಯಾಯದ ಕೊನೆಯಲ್ಲಿ ಬೋಧಿಸುತ್ತಾನೆ. ಆಗ ಅರ್ಜುನನಿಗೆ ಒಂದು ಸಂದೇಹ ಬರುತ್ತದೆ. ಅವನು ಭಗವಂತನಿಂದ ಸ್ಪಷ್ಟನೆಯನ್ನು ಕೋರುತ್ತಾನೆ.
अर्जुन उवाच
ये शास्त्रविधिमुत्सृज्य
यजन्ते श्रद्धयान्विताः।
तेषां निष्ठा तु का कृष्ण
सत्वमाहो रजस्तमः॥१७.१॥
ಅರ್ಜುನ ಉವಾಚ ।
ಯೇ ಶಾಸ್ತ್ರವಿಧಿಮುತ್ಸೃಜ್ಯ
ಯಜಂತೇ ಶ್ರದ್ಧಯಾನ್ವಿತಾಃ ।
ತೇಷಾಂ ನಿಷ್ಠಾ ತು ಕಾ ಕೃಷ್ಣ
ಸತ್ತ್ವಮಾಹೋ ರಜಸ್ತಮಃ ॥ 17-1॥
ये शास्त्रविधिमुत्सृज्य यजन्ते श्रद्धयान्विताः।
तेषां निष्ठा तु का कृष्ण सत्वमाहो रजस्तमः॥१७.१॥
ಯೇ ಶಾಸ್ತ್ರವಿಧಿಮುತ್ಸೃಜ್ಯ ಯಜಂತೇ ಶ್ರದ್ಧಯಾನ್ವಿತಾಃ ।
ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ ॥ 17-1॥
Krishna,
Without conforming to the guidance
Given in the Shastra,
But with full Shraddha or faith,
Some people follow the practices of their elders
and worship deities in their own way.
What is the status of such worshippers
with Shraddha?
Is it Sattvic or Rajasic or Tamasic?
ಕೃಷ್ಣಾ, ಶಾಸ್ತ್ರಗಳಲ್ಲಿ ನೀಡಲಾದ ಮಾರ್ಗದರ್ಶನಕ್ಕೆ ಬದ್ಧರಾಗದೆ, ಹಲವರು ತಮ್ಮ ಪೂರ್ವಜರ ಪದ್ಧತಿಗಳನ್ನು ಸಂಪೂರ್ಣ ಶ್ರದ್ಧೆಯಿಂದ ಪಾಲಿಸಿ, ದೇವತೆಗಳನ್ನು ತಮ್ಮದೇ ವಿಧಾನದಲ್ಲಿ ಆರಾಧಿಸುತ್ತಾರೆ. ಶ್ರದ್ಧೆಯುಳ್ಳ ಅಂತಹ ಆರಾಧಕರ ಸ್ಥಾನಮಾನವೇನು? ಸಾತ್ವಿಕವೋ, ರಾಜಸವೋ ಅಥವಾ ತಾಮಸವೋ?
श्रीभगवानुवाच:
त्रिविधा भवति श्रद्धा
देहिनां सा स्वभावजा।
सात्विकी राजसी चैव
तामसी चेति तां श्रुणु॥१७.२॥
ಶ್ರೀಭಗವಾನುವಾಚ ।
ತ್ರಿವಿಧಾ ಭವತಿ ಶ್ರದ್ಧಾ
ದೇಹಿನಾಂ ಸಾ ಸ್ವಭಾವಜಾ ।
ಸಾತ್ತ್ವಿಕೀ ರಾಜಸೀ ಚೈವ
ತಾಮಸೀ ಚೇತಿ ತಾಂ ಶೃಣು ॥ 17-2॥
त्रिविधा भवति श्रद्धा देहिनां सा स्वभावजा।
सात्विकी राजसी चैव तामसी चेति तां श्रुणु॥१७.२॥
ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ ।
ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು ॥ 17-2॥
Sri Bhagawan said:
Arjuna,
Faith is of three kinds
present in all the embodied beings.
Faith is born of vasanas,
which are the resultants of past actions,
good and bad, in the previous lives.
It may be Sattva or Rajas or Tamas:
Goodness, Passion and Ignorance.
Listen to what they mean.
ಶ್ರೀ ಕೃಷ್ಣ ಪರಮಾತ್ಮನು ಹೇಳಿದನು:
ಅರ್ಜುನಾ! ದೇಹದಾರಿಗಳಾದ ಎಲ್ಲ ಆತ್ಮಗಳಲ್ಲೂ ಇರುವ ಶ್ರದ್ಧೆಯು ಮೂರು ಬಗೆಯದಾಗಿರುತ್ತದೆ. ಹಿಂದಿನ ಜನ್ಮಗಳಲ್ಲಿ ಮಾಡಲಾದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ತತ್ಫಲವಾಗಿ ಉಂಟಾದ ವಾಸನೆಗಳೆಂಬ ಪ್ರಕೃತಿಗುಣಗಳಿಗೆ ಅನುಗುಣವಾಗಿ ಶ್ರದ್ಧೆಯು ಹುಟ್ಟುತ್ತದೆ. ಅದು ಸಾತ್ವಿಕ, ರಾಜಸ ಹಾಗೂ ತಾಮಸ ಹೀಗೆ ಮೂರು ಪ್ರಕಾರದ್ದಾಗಿ ಇರುತ್ತದೆ. ಅದನ್ನು ಹೇಳುತ್ತೇನೆ ಕೇಳು.
सत्वानुरूपा सर्वस्य
श्रद्धा भवति भारत।
श्रद्धामयोऽयं पुरुषो
यो यच्छ्रद्धः स एव सः॥१७.३॥
ಸತ್ತ್ವಾನುರೂಪಾ ಸರ್ವಸ್ಯ
ಶ್ರದ್ಧಾ ಭವತಿ ಭಾರತ ।
ಶ್ರದ್ಧಾಮಯೋಽಯಂ ಪುರುಷೋ
ಯೋ ಯಚ್ಛ್ರದ್ಧಃ ಸ ಏವ ಸಃ ॥ 17-3॥
सत्वानुरूपा सर्वस्य श्रद्धा भवति भारत।
श्रद्धामयोऽयं पुरुषो यो यच्छ्रद्धः स एव सः॥१७.३॥
ಸತ್ತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ ।
ಶ್ರದ್ಧಾಮಯೋಽಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ ॥ 17-3॥
Arjuna,
Faith forms in all people
according to their inner sense,
the Antahkarana.
Each individual is shaped by his Shraddha.
He is what his faith makes of him
ಅರ್ಜುನಾ! ಎಲ್ಲರ ಶ್ರದ್ಧೆಯೂ ಅವರವರ ಮನಸ್ಸಿನ ಸಂಸ್ಕಾರಕ್ಕೆ, ಅಂತಃಕರಣಕ್ಕೆ ಅನುಗುಣವಾಗಿರುತ್ತದೆ. ಶ್ರದ್ಧೆ ಇಲ್ಲದವನೇ ಇಲ್ಲ. ಪ್ತತಿಯೊಬ್ಬನೂ ಶ್ರದ್ಧೆಯಿಂದ ರೂಪಿಸಲ್ಪಟ್ತವನಾಗಿರುತ್ತಾನೆ. ಯಾರು ಯಾವ ಶ್ರದ್ಧೆಯುಳ್ಳವರೋ ಅವರು ಆ ಶ್ರದ್ಧೆಗೆ ಅನುರೂಪರಾಗಿರುತ್ತಾರೆ.
यजन्ते सात्विका देवान्
यक्षरक्षांसि राजसाः।
प्रेतान्भूतगणांश्चान्ये
यजन्ते तामसा जनाः॥१७.४॥
ಯಜಂತೇ ಸಾತ್ತ್ವಿಕಾ ದೇವಾನ್
ಯಕ್ಷರಕ್ಷಾಂಸಿ ರಾಜಸಾಃ ।
ಪ್ರೇತಾನ್ಭೂತಗಣಾಂಶ್ಚಾನ್ಯೇ
ಯಜಂತೇ ತಾಮಸಾ ಜನಾಃ ॥ 17-4॥
यजन्ते सात्विका देवान् यक्षरक्षांसि राजसाः।
प्रेतान्भूतगणांश्चान्ये यजन्ते तामसा जनाः॥१७.४॥
ಯಜಂತೇ ಸಾತ್ತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ ।
ಪ್ರೇತಾನ್ಭೂತಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ ॥ 17-4॥
Those of Sattvic faith
worship devas or deities.
Those of Rajasic faith
offer worship to Yakshas and Rakshasas.
The others of Tamasic faith
worship their ancestral spirits and ghosts.
ಸಾತ್ವಿಕರು ದೇವತೆಗಳನ್ನು ಪೂಜಿಸುತ್ತಾರೆ. ರಜೋಗುಣದವರು ಯಕ್ಷರನ್ನೂ, ರಾಕ್ಷಸರನ್ನೂ ಪೂಜಿಸುತ್ತಾರೆ. ಉಳಿದ ತಮೋಗುಣದ ಜನರು ಪ್ರೇತಗಳನ್ನೂ, ಭೂತಗಣಗಳನ್ನೂ ಪೂಜಿಸುತ್ತಾರೆ.
अशास्त्रविहितं घोरं
तप्यन्ते ये तपो जनाः।
दम्भाहङ्कारसंयुक्ताः
कामरागबलान्विताः॥१७.५॥
ಅಶಾಸ್ತ್ರವಿಹಿತಂಘೋರಂ ತಪ್ಯಂತೇಯೇತಪೋಜನಾಃ। ದಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ ॥ 17-5॥
अशास्त्रविहितं घोरं तप्यन्ते ये तपो जनाः।
दम्भाहङ्कारसंयुक्ताः कामरागबलान्विताः॥१७.५॥
ಅಶಾಸ್ತ್ರವಿಹಿತಂಘೋರಂ ತಪ್ಯಂತೇಯೇತಪೋಜನಾಃ।
ದಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ ॥ 17-5॥
कर्शयन्तः शरीरस्थं
भूतग्राममचेतसः।
मां चैवान्तःशरीरस्थं
तान्विद्ध्यासुरनिश्चयान्॥१७.६॥
ಕರ್ಷಯಂತಃ ಶರೀರಸ್ಥಂ
ಭೂತಗ್ರಾಮಮಚೇತಸಃ ।
ಮಾಂ ಚೈವಾಂತಃಶರೀರಸ್ಥಂ
ತಾನ್ವಿದ್ಧ್ಯಾಸುರನಿಶ್ಚಯಾನ್ ॥ 17-6॥
कर्शयन्तः शरीरस्थं भूतग्राममचेतसः।
मां चैवान्तःशरीरस्थं तान्विद्ध्यासुरनिश्चयान्॥१७.६॥
ಕರ್ಷಯಂತಃ ಶರೀರಸ್ಥಂ ಭೂತಗ್ರಾಮಮಚೇತಸಃ ।
ಮಾಂ ಚೈವಾಂತಃಶರೀರಸ್ಥಂ ತಾನ್ವಿದ್ಧ್ಯಾಸುರನಿಶ್ಚಯಾನ್ ॥ 17-6॥
Driven by hypocrisy and egoism,
under the force of lust and greed,
those who perform tapas
against Sastric injunctions
are senseless people who torture themselves
as well as Me dwelling in their bodies –
know them to be of Asuric nature.
ಕಾಮರಾಗಗಳ ಆವೇಶಕ್ಕೆ ಒಳಗಾಗಿ, ಬೂಟಾಟಿಕೆ ಮತ್ತು ಅಹಂಭಾವದಿಂದ ಕೂಡಿದವರಾಗಿ, ಶಾಸ್ತ್ರಗಳ ಕಟ್ಟಳೆಯನ್ನು ಉಲ್ಲಂಘಿಸಿ, ಮೂಢರಾಗಿ ಯಾರು ಘೋರವಾದ ತಪಸ್ಸನ್ನು ಆಚರಿಸುತ್ತಿರುವರೋ ಅವರು ತಮ್ಮನ್ನೇ ಹಿಂಸಿಸಿಕೊಳ್ಳುವುದಲ್ಲದೇ, ಅವರ ದೇಹಗಳಲ್ಲಿ ಸ್ಥಿತನಾದ ನನ್ನನ್ನೂ ಸಹ ಕ್ಲೇಶಗೊಳಿಸುತ್ತಾರೆ. ಅಂತಹ ಅವಿವೇಕಿಗಳನ್ನು ಅಸುರೀ ಬುದ್ಧಿಯುಳ್ಳವರೆಂದು ತಿಳಿ.
आहारस्त्वपि सर्वस्य
त्रिविधो भवति प्रियः।
यज्ञस्तपस्तथा दानं
तेषां भेदमिमं शृणु॥१७.७॥
ಆಹಾರಸ್ತ್ವಪಿ ಸರ್ವಸ್ಯ
ತ್ರಿವಿಧೋ ಭವತಿ ಪ್ರಿಯಃ ।
ಯಜ್ಞಸ್ತಪಸ್ತಥಾ ದಾನಂ
ತೇಷಾಂ ಭೇದಮಿಮಂ ಶೃಣು ॥ 17-7॥
आहारस्त्वपि सर्वस्य त्रिविधो भवति प्रियः।
यज्ञस्तपस्तथा दानं तेषां भेदमिमं शृणु॥१७.७॥
ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ ।
ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು ॥ 17-7॥
These three kinds of people,
Sattvic, Rajasic and Tamasic,
similarly have their preferences and observances
in respect of food, Tapas and Daana.
Arjuna, listen to their distinctions.
ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ಬಗೆಯ ಜನರು, ಆಹಾರ, ಯಜ್ಞ, ತಪಸ್ಸು ಮತ್ತು ದಾನಗಳ ವಿಚಾರದಲ್ಲಿಯೂ ಸಹ ಅವರದೇ ಆದ ಆದ್ಯೆತೆಗಳನ್ನು ಮತ್ತು ಆಚರಣೆಗಳನ್ನು ಹೊಂದಿರುತ್ತಾರೆ. ಅರ್ಜುನಾ, ಅವರ ವಿಶೇಷ ಲಕ್ಷಣಗಳ ಬಗ್ಗೆ ಹೇಳುವೆನು, ಕೇಳು.
आयुःसत्वबलारोग्य
सुखप्रीतिविवर्धनाः।
रस्याः स्निग्धाः स्थिरा हृद्या
आहारा सात्विकप्रियाः॥१७.८॥
ಆಯುಃಸತ್ತ್ವಬಲಾರೋಗ್ಯ
ಸುಖಪ್ರೀತಿವಿವರ್ಧನಾಃ ।
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ
ಆಹಾರಾಃ ಸಾತ್ತ್ವಿಕಪ್ರಿಯಾಃ ॥ 17-8॥
आयुःसत्वबलारोग्य सुखप्रीतिविवर्धनाः।
रस्याः स्निग्धाः स्थिरा हृद्या आहारा सात्विकप्रियाः॥१७.८॥
ಆಯುಃಸತ್ತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ ।
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ತ್ವಿಕಪ್ರಿಯಾಃ ॥ 17-8॥
Sattvic people enjoy foods
that promote health, longevity,
strength of mind, ability, comfort and pleasure.
Also foods that are delicious,
oily, unspoiled and appetizing
appeal to people of Sattvic temperament.
ಆರೋಗ್ಯವನ್ನೂ, ಆಯುಸ್ಸನ್ನೂ, ಮನೋಬಲವನ್ನೂ, ಸಾಮರ್ಥ್ಯವನ್ನೂ, ನೆಮ್ಮದಿಯನ್ನೂ, ಆನಂದವನ್ನೂ, ಪ್ರೀತಿಯನ್ನೂ ವೃದ್ಧಿಗೊಳಿಸುವ ಆಹಾರವನ್ನು ಸಾತ್ವಿಕ ಜನರು ಸೇವಿಸಿ ಆಸ್ವಾದಿಸುತ್ತಾರೆ. ಹಾಗೆಯೇ ರಸವತ್ತಾದ, ಜಿಡ್ಡಿನಿಂದ ಕೂಡಿದ, ಕೆಟ್ಟುಹೋಗದಂತಹ, ಮತ್ತು ಹಸಿವನ್ನುಂಟುಮಾಡುವ ಮನೋಹರವಾದ ಆಹಾರಗಳು ಸಾತ್ವಿಕರಿಗೆ ಪ್ರಿಯವಾಗಿರುವುವು.
कट्वम्ललवणात्युष्ण
तीक्ष्णरूक्षविदाहकाः।
आहरा राजसस्येष्टा:
दुःखशोकामयप्रदाः॥१७.९॥
ಕಟ್ವಮ್ಲಲವಣಾತ್ಯುಷ್ಣ
ತೀಕ್ಷ್ಣರೂಕ್ಷವಿದಾಹಿನಃ ।
ಆಹಾರಾ ರಾಜಸಸ್ಯೇಷ್ಟಾಃ
ದುಃಖಶೋಕಾಮಯಪ್ರದಾಃ ॥ 17-9॥
कट्वम्ललवणात्युष्ण तीक्ष्णरूक्षविदाहकाः।
आहरा राजसस्येष्टा: दुःखशोकामयप्रदाः॥१७.९॥
ಕಟ್ವಮ್ಲಲವಣಾತ್ಯುಷ್ಣ ತೀಕ್ಷ್ಣರೂಕ್ಷವಿದಾಹಿನಃ ।
ಆಹಾರಾ ರಾಜಸಸ್ಯೇಷ್ಟಾಃ ದುಃಖಶೋಕಾಮಯಪ್ರದಾಃ ॥ 17-9॥
Foods that appeal to those
of Rajasic nature
are excessively bitter, sour, saltish,
hot, pungent, dry and they cause burning.
They cause pain, suffering and ill-health.
ಅತಿ ಕಹಿಯಾದ, ಅತಿ ಹುಳಿಯಾದ, ಬಹಳ ಉಪ್ಪಿನಿಂದ ಕೂಡಿದ, ಬಿಸಿಬಿಸಿಯಾದ, ತೀಕ್ಷ್ಣವಾದ, ಒಣಕಲಾದ, ಸೀಕಲಾದ, ಹುರಿದ ಹಾಗೂ ದಾಹವನ್ನುಂಟುಮಾಡುವ, ದುಃಖವನ್ನೂ, ಶೋಕವನ್ನೂ, ರೋಗವನ್ನೂ ಉಂಟುಮಾಡತಕ್ಕಂಥ ಆಹಾರಗಳು ರಾಜಸಿಕ ಮನುಷ್ಯರಿಗೆ ಇಷ್ಟವಾದವುಗಳು.
यातयामं गतरसं
पूति पर्युषितं च यत्।
उच्छिष्टमपि चामेध्यं
भोजनं तामसप्रियम्॥१७.१०॥
ಯಾತಯಾಮಂ ಗತರಸಂ
ಪೂತಿ ಪರ್ಯುಷಿತಂ ಚ ಯತ್ ।
ಉಚ್ಛಿಷ್ಟಮಪಿ ಚಾಮೇಧ್ಯಂ
ಭೋಜನಂ ತಾಮಸಪ್ರಿಯಮ್ ॥ 17-10॥
यातयामं गतरसं पूति पर्युषितं च यत्।
उच्छिष्टमपि चामेध्यं भोजनं तामसप्रियम्॥१७.१०॥
ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।
ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಮ್ ॥ 17-10॥
Foods that are kept cold,
which are tasteless and smelling
and which are left-overs and impure —
such foods are dear to those
of Tamasic temeperament.
ಶೀತಲೀಕರಿಸಿದ ಆಹಾರಗಳು, ಅರ್ಧ ಬೆಂದಿರುವ, ರಸಹೀನವಾದ, ಹಳಸಿಹೋದ, ದುರ್ಗಂಧದಿಂದ ಕೂಡಿದ, ಉಂಡುಮಿಕ್ಕಿರುವ, ಎಂಜಲಾದ, ಅಪವಿತ್ರವಾದ ಯಜ್ಞಕ್ಕೆ ಅನರ್ಹವೂ ಆದ ಆಹಾರವು ತಾಮಸಿಕ ಮನೋಭಾವದವರಿಗೆ ಪ್ರಿಯವು.
अफलाकाङ्क्षिभिर्यज्ञो
विधिदृष्टो य इज्यते।
यष्टव्यमेवेति मनः
समाधाय स सात्विकः॥१७.११॥
ಅಫಲಾಕಾಂಕ್ಷಿಭಿರ್ಯಜ್ಞೋ
ವಿಧಿದೃಷ್ಟೋ ಯ ಇಜ್ಯತೇ ।
ಯಷ್ಟವ್ಯಮೇವೇತಿ ಮನಃ
ಸಮಾಧಾಯ ಸ ಸಾತ್ತ್ವಿಕಃ ॥ 17-11॥
अफलाकाङ्क्षिभिर्यज्ञो विधिदृष्टो य इज्यते।
यष्टव्यमेवेति मनः समाधाय स सात्विकः॥१७.११॥
ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ ।
ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ತ್ವಿಕಃ ॥ 17-11॥
Distinctions in respect of performance of Yagnas are indicated:
The Yagna that is performed
without desire for its fruits,
and which is performed
according to prescribed procedures,
with a firm conviction that –
the Yagna has to be performed by me –
Such a Yagna is known as Sattvic in nature.
ಯಜ್ಞಾಚರಣೆಗೆ ಸಂಬಂಧಿಸಿದಂತೆ ವಿಶೇಷ ಲಕ್ಷಣಗಳ ಉಲ್ಲೇಖ:
ಫಲಾಪೇಕ್ಷೆಯಿಲ್ಲದೆ “ನನ್ನಿಂದ ಯಜ್ಞವು ಆಚರಿಸಲ್ಪಡಬೇಕು” ಎಂಬ ಧೃಢವಾದ ನಿಶ್ಚಯದಿಂದ ಮನಸ್ಸನ್ನು ಸ್ಥಿರಗೊಳಿಸಿ ಶಾಸ್ತ್ರಸಮ್ಮತವಾಗಿ ಆಚರಿಸುವ ಯಜ್ಞವು ಸಾತ್ವಿಕವಾದುದಾಗಿರುತ್ತದೆ.
अभिसन्धाय तु फलं
दम्भार्थमपि चैव यत्।
इज्यते भरतश्रेष्ठ
तं यज्ञं विद्धि राजसम्॥१७.१२॥
ಅಭಿಸಂಧಾಯ ತು ಫಲಂ
ದಂಭಾರ್ಥಮಪಿ ಚೈವ ಯತ್ ।
ಇಜ್ಯತೇ ಭರತಶ್ರೇಷ್ಠ
ತಂ ಯಜ್ಞಂ ವಿದ್ಧಿ ರಾಜಸಮ್ ॥ 17-12॥
अभिसन्धाय तु फलं दम्भार्थमपि चैव यत्।
इज्यते भरतश्रेष्ठ तं यज्ञं विद्धि राजसम्॥१७.१२॥
ಅಭಿಸಂಧಾಯ ತು ಫಲಂ ದಂಭಾರ್ಥಮಪಿ ಚೈವ ಯತ್ ।
ಇಜ್ಯತೇ ಭರತಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್ ॥ 17-12॥
Arjuna,
Know that
Rajasic is the Yagna
which is performed hypocritically
and with an eye on its fruits.
ಆದರೆ ಎಲೈ ಅರ್ಜುನ, ಫಲವನ್ನು ಲಕ್ಷ್ಯದಲ್ಲಿಟ್ಟುಕೊಂಡು ತೋರಿಕೆಗಾಗಿ, ಐಹಿಕ ಲಾಭಕ್ಕಾಗಿ, ಅಹಂಕಾರದಿಂದ ಕೇವಲ ದಂಭಾಚರಣೆಗಾಗಿಯೇ ಆಚರಿಸುವ ಯಜ್ಞವನ್ನು ರಾಜಸಯಜ್ಞವೆಂದು ತಿಳಿ.
विधिहीनमसृष्टान्नं
मन्त्रहीनमदक्षिणम्।
श्रद्धाविरहितं यज्ञं
तामसं परिचक्षते॥१७.१३॥
ವಿಧಿಹೀನಮಸೃಷ್ಟಾನ್ನಂ
ಮಂತ್ರಹೀನಮದಕ್ಷಿಣಮ್ ।
ಶ್ರದ್ಧಾವಿರಹಿತಂ ಯಜ್ಞಂ
ತಾಮಸಂ ಪರಿಚಕ್ಷತೇ ॥ 17-13॥
विधिहीनमसृष्टान्नं मन्त्रहीनमदक्षिणम्।
श्रद्धाविरहितं यज्ञं तामसं परिचक्षते॥१७.१३॥
ವಿಧಿಹೀನಮಸೃಷ್ಟಾನ್ನಂ ಮಂತ್ರಹೀನಮದಕ್ಷಿಣಮ್ ।
ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ ॥ 17-13॥
They say that Yagna is Tamasic
which does not conform to the procedures
specified in the Sastra,
in which no food is offered,
which is performed without sacred chants,
in which no daana is given,
and which is uninspired by Shraddha.
ಶಾಸ್ತ್ರಗಳಲ್ಲಿ ಉಲ್ಲೇಖಿಸಿದ ವಿಧಿವಿಧಾನವಿಲ್ಲದೆ, ಅನ್ನದಾನರಹಿತವಾದ, ಮಂತ್ರೋಚ್ಛಾರಣೆಯಿಲ್ಲದೆ, ದಾನ ದಕ್ಷಿಣೆಯಿಲ್ಲದೆ ಮತ್ತು ಶ್ರದ್ಧೆಯಿಲ್ಲದೆ ಆಚರಿಸುವ ಯಜ್ಞವನ್ನು ತಾಮಸಯಜ್ಞವೆಂದು ಹೇಳುತ್ತಾರೆ.
देवद्विजगुरुप्राज्ञ
पूजनं शौचमार्जवम्।
ब्रह्मचर्यमहिंसा च
शारीरं तप उच्यते॥१॥७.१४ ll
ದೇವದ್ವಿಜಗುರುಪ್ರಾಜ್ಞ
ಪೂಜನಂ ಶೌಚಮಾರ್ಜವಮ್ ।
ಬ್ರಹ್ಮಚರ್ಯಮಹಿಂಸಾ ಚ
ಶಾರೀರಂ ತಪ ಉಚ್ಯತೇ ॥ 17-14॥
देवद्विजगुरुप्राज्ञ पूजनं शौचमार्जवम्।
ब्रह्मचर्यमहिंसा च शारीरं तप उच्यते॥१॥७.१४ ll
ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್ ।
ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ ॥ 17-14॥
Tapas is of three kinds: Bodily,Verbal and Mental.
Bodily Tapas consists of:
Showing reverence to Devas,
Brahmins, Gurus and Gnanis,
and observing cleanliness,
simplicity and non-violence.
ತಪಸ್ಸಿನಲ್ಲಿ ಮೂರು ವಿಧ;- ಶಾರೀರಿಕ ತಪಸ್ಸು, ವಾಚಿಕ ತಪಸ್ಸು ಮತ್ತು ಮಾನಸಿಕ ತಪಸ್ಸು.
ದೇವತೆಗಳನ್ನೂ, ಬ್ರಾಹ್ಮಣರನ್ನೂ, ಗುರುಗಳನ್ನೂ, ಜ್ಞಾನಿಗಳನ್ನೂ ಪೂಜಿಸುವಿಕೆ, ಶುಚಿತ್ವ, ಸರಳತನ, ಬ್ರಹ್ಮಚರ್ಯ ಮತ್ತು ಅಹಿಂಸಾಪಾಲನೆ ಇವುಗಳು ಶಾರೀರಿಕ ತಪಸ್ಸು ಎಂದೆನಿಸಿಕೊಳ್ಳುತ್ತವೆ.
अनुद्वेगकरं वाक्यं
सत्यं प्रियहितं च यत्।
स्वाध्यायाभ्यासनं चैव
वाङ्मयं तप उच्यते॥१७.१५॥
ಅನುದ್ವೇಗಕರಂ ವಾಕ್ಯಂ
ಸತ್ಯಂ ಪ್ರಿಯಹಿತಂ ಚ ಯತ್ ।
ಸ್ವಾಧ್ಯಾಯಾಭ್ಯಸನಂ ಚೈವ
ವಾಙ್ಮಯಂ ತಪ ಉಚ್ಯತೇ ॥ 17-15॥
अनुद्वेगकरं वाक्यं सत्यं प्रियहितं च यत्।
स्वाध्यायाभ्यासनं चैव वाङ्मयं तप उच्यते॥१७.१५॥
ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ ।
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ॥ 17-15॥
Verbal Tapas constitutes
using of words that do not offend others,
utterances that are pleasing and good
and regular readings of scriptural texts.
ಇತರರನ್ನು ನೋಯಿಸದಿರುವ ಉದ್ವೇಗಕರವಲ್ಲದ ಮಾತುಗಳು, ಪ್ರಿಯವಾದ, ಹಿತವಾದ ಮತ್ತು ಸತ್ಯವಾದ ನುಡಿಗಳು ಹಾಗೂ ಕ್ರಮತಪ್ಪದೆ ವೇದಾಧ್ಯಯನ ಮಾಡುವುದು ವಾಚಿಕ ತಪಸ್ಸು ಎನ್ನಿಸುತ್ತದೆ.
मनःप्रसादः सौम्यत्वं
मौनमात्मविनिग्रहः।
भावसंशुद्धिरित्येतत्
तपो मानसमुच्यते॥१७.१६॥
ಮನಃ ಪ್ರಸಾದಃ ಸೌಮ್ಯತ್ವಂ
ಮೌನಮಾತ್ಮವಿನಿಗ್ರಹಃ ।
ಭಾವಸಂಶುದ್ಧಿರಿತ್ಯೇತತ್
ತಪೋ ಮಾನಸಮುಚ್ಯತೇ ॥ 17-16॥
मनःप्रसादः सौम्यत्वं मौनमात्मविनिग्रहः।
भावसंशुद्धिरित्येतत् तपो मानसमुच्यते॥१७.१६॥
ಮನಃ ಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ ।
ಭಾವಸಂಶುದ್ಧಿರಿತ್ಯೇತತ್ ತಪೋ ಮಾನಸಮುಚ್ಯತೇ ॥ 17-16॥
Mental Tapas is said to consist of:
calmness of mind; gentleness; silence;
self-control and emotional purity.
ಮನಸ್ಸಿನ ಪ್ರಸನ್ನತೆ, ಸೌಮ್ಯನಡೆ, ಮೌನ, ಆತ್ಮ ಸಂಯಮ, ಭಾವಶುದ್ಧಿ, ಇವುಗಳು ಮಾನಸಿಕ ತಪಸ್ಸು ಎನಿಸಿಕೊಳ್ಳುತ್ತವೆ.
श्रद्धया परया तप्तं
तपस्तत्त्रिविधं नरैः।
अफलाकाङ्क्षिभिर्युक्तैः
सात्विकं परिचक्षते॥१७.१७॥
ಶ್ರದ್ಧಯಾ ಪರಯಾ ತಪ್ತಂ
ತಪಸ್ತತ್ತ್ರಿವಿಧಂ ನರೈಃ ।
ಅಫಲಾಕಾಂಕ್ಷಿಭಿರ್ಯುಕ್ತೈಃ
ಸಾತ್ತ್ವಿಕಂ ಪರಿಚಕ್ಷತೇ ॥ 17-17॥
श्रद्धया परया तप्तं तपस्तत्त्रिविधं नरैः।
अफलाकाङ्क्षिभिर्युक्तैः सात्विकं परिचक्षते॥१७.१७॥
ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ತ್ರಿವಿಧಂ ನರೈಃ ।
ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ತ್ವಿಕಂ ಪರಿಚಕ್ಷತೇ ॥ 17-17॥
All the three kinds of Tapas
of body, mind and words,
when performed with Supreme Shraddha
by an integrated person,
free from desire for rewards –
they are known as Sattvic in nature
ಫಲಾಪೇಕ್ಷೆ ಇಲ್ಲದೆ ಇರುವ ಸಮಾಹಿತರಾದ ಮನುಷ್ಯರು ಪರಮಶ್ರದ್ದೆಯಿಂದ ಆಚರಿಸುವ ಈ ಮೂರು ಬಗೆಯ ಶಾರೀರಕ, ವಾಚಿಕ ಮತ್ತು ಮಾನಸಿಕ ತಪಸ್ಸುಗಳು ಸಾತ್ವಿಕ ತಪಸ್ಸು ಎನಿಸಿಕೊಳ್ಳುತ್ತದೆ. सत्कारमानपूजार्थं
तपो दम्भेन चैव यत्।
क्रियते तदिह प्रोक्तं
राजसं चलमध्रुवम्॥१७.१८॥
ಸತ್ಕಾರಮಾನಪೂಜಾರ್ಥಂ
ತಪೋ ದಂಭೇನ ಚೈವ ಯತ್ ।
ಕ್ರಿಯತೇ ತದಿಹ ಪ್ರೋಕ್ತಂ
ರಾಜಸಂ ಚಲಮಧ್ರುವಮ್ ॥ 17-18॥
सत्कारमानपूजार्थं तपो दम्भेन चैव यत्।
क्रियते तदिह प्रोक्तं राजसं चलमध्रुवम्॥१७.१८॥
ಸತ್ಕಾರಮಾನಪೂಜಾರ್ಥಂ ತಪೋ ದಂಭೇನ ಚೈವ ಯತ್ ।
ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್ ॥ 17-18॥
Tapas that is performed
with body, mind and speech,
if done to win acclaim,
respect and reverence,
is said to be Rajasic
and its effect is occasional and short-lived.
ಮಾನ ಮರ್ಯಾದೆಗಳಿಗಾಗಿ, ಕೀರ್ತಿ ಪ್ರತಿಷ್ಠೆಗಳಿಗಾಗಿ, ಆಡಂಬರಕ್ಕಾಗಿ, ಮಾಡುವ ಶಾರೀರಕ, ವಾಚಿಕ ಹಾಗೂ ಮಾನಸಿಕ ತಪಸ್ಸು ರಾಜಸಿಕ ತಪಸ್ಸು ಎನಿಸಿಕೊಳ್ಳುತ್ತದೆ. ಅದರ ಪರಿಣಾಮವು ಅನಿಯಮಿತ ಮತ್ತು ಅಲ್ಪಕಾಲಿಕ. ಹಾಗಾಗಿ ಅದಕ್ಕೆ ಸರಿಯಾದ ಬೆಲೆಯೂ ಇಲ್ಲ, ಫಲವೂ ಇಲ್ಲ.
मूढग्राहेणात्मनो यत्
पीडयाक्रियते तपः।
परस्योत्सादनार्थं वा
तत्तामसमुदाहृतम्॥१७.१९॥
ಮೂಢಗ್ರಾಹೇಣಾತ್ಮನೋ ಯತ್
ಪೀಡಯಾಕ್ರಿಯತೇ ತಪಃ ।
ಪರಸ್ಯೋತ್ಸಾದನಾರ್ಥಂ ವಾ
ತತ್ತಾಮಸಮುದಾಹೃತಮ್ ॥ 17-19॥
मूढग्राहेणात्मनो यत् पीडयाक्रियते तपः।
परस्योत्सादनार्थं वा तत्तामसमुदाहृतम्॥१७.१९॥
ಮೂಢಗ್ರಾಹೇಣಾತ್ಮನೋ ಯತ್ ಪೀಡಯಾಕ್ರಿಯತೇ ತಪಃ ।
ಪರಸ್ಯೋತ್ಸಾದನಾರ್ಥಂ ವಾ ತತ್ತಾಮಸಮುದಾಹೃತಮ್ ॥ 17-19॥
Tapas that is done
with firmness but lacking in discrimination
or that is done to torture oneself
or aims at torturing others –
such Tapas is said to be Tamasic.
ಮೂಢಬುದ್ಧಿಯಿಂದ ತನ್ನನ್ನೇ ಹಿಂಸೆಮಾಡಿಕೊಂಡು ಮಾಡುವ ಅಥವಾ ಇತರರನ್ನು ನಾಶಮಾಡಲು ಉದ್ಧೇಶಿಸಿ ಮಾಡುವ ಅಥವಾ ಅಚಲವಾದ ಆದರೆ ವಿವೇಚನೆಯಿಲ್ಲದೆ ಮಾಡುವ ತಪಸ್ಸು, ತಾಮಸಿಕ ತಪಸ್ಸಾಗಿರುತ್ತದೆ.
दातव्यमिति यद्दानं
दीयतेऽनुपकारिणे।
देशे काले च पात्रे च
तद्दानं सात्विकं स्मृतम्॥१७.२०॥
ದಾತವ್ಯಮಿತಿ ಯದ್ದಾನಂ
ದೀಯತೇಽನುಪಕಾರಿಣೇ ।
ದೇಶೇ ಕಾಲೇ ಚ ಪಾತ್ರೇ ಚ
ತದ್ದಾನಂ ಸಾತ್ತ್ವಿಕಂ ಸ್ಮೃತಮ್ ॥ 17-20॥
दातव्यमिति यद्दानं दीयतेऽनुपकारिणे।
देशे काले च पात्रे च तद्दानं सात्विकं स्मृतम्॥१७.२०॥
ದಾತವ್ಯಮಿತಿ ಯದ್ದಾನಂ ದೀಯತೇಽನುಪಕಾರಿಣೇ ।
ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕಂ ಸ್ಮೃತಮ್ ॥ 17-20॥
Giving Daana is of three kinds:
Saathvic, Raajasic and Taamasic.
When the Daana is made by a person
who thinks that: ‘I shall give this Daana’,
without expecting anything in return,
and offers Daana at the right time and right place –
such Daana is known as Saattvic.
ದಾನ ಮಾಡುವುದರಲ್ಲಿ ಮೂರು ವಿಧಗಳು: ಸಾತ್ವಿಕ ದಾನ, ರಾಜಸಿಕ ದಾನ ಮತ್ತು ತಾಮಸಿಕ ದಾನ. ಪ್ರತಿಫಲವನ್ನು ಬಯಸದೆ “ ದಾನ ಮಾಡುವುದು ನನ್ನ ಕರ್ತವ್ಯ, ನಾನು ಈ ದಾನವನ್ನು ಮಾಡಬೇಕು” ಎಂದು ಆಲೋಚಿಸಿ ಮತ್ತು ದೇಶ, ಕಾಲ, ಪಾತ್ರಗಳನ್ನು ಗಮನಿಸಿ ಮಾಡುವ ದಾನ ಸಾತ್ವಿಕ ದಾನ ಎಂದೆನಿಸಿಕೊಳ್ಳುತ್ತದೆ.
यत्तु प्रत्युपकारार्थं
फलमुद्दिश्य वा पुनः।
दीयते च परिक्लिष्टं
तद्राजसमुदाहृतम्॥१७.२१॥
ಯತ್ತು ಪ್ರತ್ಯುಪಕಾರಾರ್ಥಂ
ಫಲಮುದ್ದಿಶ್ಯ ವಾ ಪುನಃ ।
ದೀಯತೇ ಚ ಪರಿಕ್ಲಿಷ್ಟಂ
ತದ್ದಾನಂ ರಾಜಸಂ ಸ್ಮೃತಮ್ ॥ 17-21॥
यत्तु प्रत्युपकारार्थं फलमुद्दिश्य वा पुनः।
दीयते च परिक्लिष्टं तद्राजसमुदाहृतम्॥१७.२१॥
ಯತ್ತು ಪ್ರತ್ಯುಪಕಾರಾರ್ಥಂ ಫಲಮುದ್ದಿಶ್ಯ ವಾ ಪುನಃ ।
ದೀಯತೇ ಚ ಪರಿಕ್ಲಿಷ್ಟಂ ತದ್ದಾನಂ ರಾಜಸಂ ಸ್ಮೃತಮ್ ॥ 17-21॥
Rajasic Daana is that
which is made with the expectation
of a gift in return
and which is made unwillingly
or with the hope of gaining some advantage.
ಆದರೆ ಪ್ರತ್ಯುಪಕಾರವನ್ನು ಬಯಸಿ, ಫಲಾಸಕ್ತಿಯಿಂದ ಮತ್ತು ನಿರ್ಬಂಧದಿಂದ, ಇಷ್ಟವಿಲ್ಲದೆ ಮಾಡುವ ದಾನವು ರಾಜಸಿಕ ದಾನವಾಗಿರುತ್ತದೆ.
अदेशकाले यद्दानं
अपात्रेभ्यश्च दीयते।
असत्कृतमवज्ञातं
तत्तामसमुदाहृतम्॥१७.२२॥
ಅದೇಶಕಾಲೇ ಯದ್ದಾನಂ
ಅಪಾತ್ರೇಭ್ಯಶ್ಚ ದೀಯತೇ ।
ಅಸತ್ಕೃತಮವಜ್ಞಾತಂ
ತತ್ತಾಮಸಮುದಾಹೃತಮ್ ॥ 17-22॥
अदेशकाले यद्दानं अपात्रेभ्यश्च दीयते।
असत्कृतमवज्ञातं तत्तामसमुदाहृतम्॥१७.२२॥
ಅದೇಶಕಾಲೇ ಯದ್ದಾನಂ ಅಪಾತ್ರೇಭ್ಯಶ್ಚ ದೀಯತೇ ।
ಅಸತ್ಕೃತಮವಜ್ಞಾತಂ ತತ್ತಾಮಸಮುದಾಹೃತಮ್ ॥ 17-22॥
Tamasic Daana is that
which is made to undeserving people
at inappropriate time and place
and given insultingly
ದೇಶ, ಕಾಲ, ಪಾತ್ರಗಳ ವಿಚಾರವಿಲ್ಲದೆ, ಅಶುಚಿಯಾದ ಸ್ಥಳದಲ್ಲಿ, ಅನುಚಿತವಾದ ಕಾಲದಲ್ಲಿ, ಅಪಾತ್ರನಿಗೆ ತಿರಸ್ಕಾರದಿಂದ ಕೊಟ್ಟ ದಾನವು ತಾಮಸಿಕ ದಾನ ಎಂದೆನಿಸಿಕೊಳ್ಳುತ್ತದೆ.
ओं तत्सदिति निर्देशो
ब्रह्मणस्त्रिविधं स्मृतः।
ब्राह्मणास्तेन वेदाश्च
यज्ञ्श्च विहिताः पुरा॥१७.२३॥
ಓಂತತ್ಸದಿತಿ ನಿರ್ದೇಶೋ
ಬ್ರಹ್ಮಣಸ್ತ್ರಿವಿಧಃ ಸ್ಮೃತಃ ।
ಬ್ರಾಹ್ಮಣಾಸ್ತೇನ ವೇದಾಶ್ಚ
ಯಜ್ಞಾಶ್ಚ ವಿಹಿತಾಃ ಪುರಾ ॥ 17-23॥
ओं तत्सदिति निर्देशो ब्रह्मणस्त्रिविधं स्मृतः।
ब्राह्मणास्तेन वेदाश्च यज्ञ्श्च विहिताः पुरा॥१७.२३॥
ಓಂತತ್ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ ।
ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ ॥ 17-23॥
AUM TAT SAT –
These three words
constitute the designation
of Brahman in Vedanta,
according to the Knowers of Brahman.
In this three-fold manner
were set up the Brahmanas,
the Vedas and the Yagnas.
ಓಂ ತತ್ ಸತ್ – ಇವು ವೇದಾಂತದಲ್ಲಿ ಬ್ರಹ್ಮ ಪದವಿಯ ಸತ್ಯವನ್ನು ಸಾರುವ ಮೂರು ಸಾಂಕೇತಿಕ ಶಬ್ದಗಳಾಗಿವೆ. ಹೀಗೆಂದು ಬ್ರಹ್ಮವನ್ನು ಅರಿತಿರುವ ಜ್ಞಾನಿಗಳು ಹೇಳುತ್ತಾರೆ. ಅದರಿಂದ ಸೃಷ್ಟಿಕಾಲದಲ್ಲಿ ಬ್ರಾಹ್ಮಣರೂ, ವೇದಗಳೂ, ಯಜ್ಞಗಳೂ ಸೃಷ್ಟಿಯಾದವು.
तस्मादोमित्युदाहृत्य
यज्ञदानतपःक्रियाः।
प्रवर्तन्ते विधानोक्ताः
सततं ब्रह्मवादिनाम्॥१७.२४॥
ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾ। ಪ್ರವರ್ತಂತೇವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಮ್ ॥ 17-24॥
तस्मादोमित्युदाहृत्य यज्ञदानतपःक्रियाः।
प्रवर्तन्ते विधानोक्ताः सततं ब्रह्मवादिनाम्॥१७.२४॥
ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾಃ ।
ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಮ್ ॥ 17-24॥
Therefore,
the word AUM is uttered
whenever the Knowers of Brahman
commence the Scripturally ordained acts
like Yagna, Daana and Tapas.
ಆದುದರಿಂದ ಬ್ರಹ್ಮಜ್ಞಾನಿಗಳಾದವರು ತಾವು ಮಾಡುವ ಶಾಸ್ತ್ರೋಕ್ತವಾದ ತಪಸ್ಸು, ಯಜ್ಞ, ದಾನಾದಿ ಕ್ರಿಯೆಗಳನ್ನು ಯಾವಾಗಲೂ “ಓಂ” ಕಾರ ಶಬ್ದೋಚ್ಛಾರಣಪೂರ್ವಕವಾಗಿ ಬಿಡದೆ ಆರಂಭಿಸುತ್ತಾರೆ.
तदित्यनभिसन्धाय
फलं यज्ञतपःक्रियाः।
दानक्रियाश्च विविधाः
क्रियन्ते मोक्षकाङ्क्षिभिः॥१७.२५॥
ತದಿತ್ಯನಭಿಸಂಧಾಯ
ಫಲಂ ಯಜ್ಞತಪಃಕ್ರಿಯಾಃ ।
ದಾನಕ್ರಿಯಾಶ್ಚ ವಿವಿಧಾಃ
ಕ್ರಿಯಂತೇ ಮೋಕ್ಷಕಾಂಕ್ಷಿಭಿಃ ॥ 17-25॥
तदित्यनभिसन्धाय फलं यज्ञतपःक्रियाः।
दानक्रियाश्च विविधाः क्रियन्ते मोक्षकाङ्क्षिभिः॥१७.२५॥
ತದಿತ್ಯನಭಿಸಂಧಾಯ ಫಲಂ ಯಜ್ಞತಪಃಕ್ರಿಯಾಃ ।
ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ ॥ 17-25॥
The Seekers of Liberation,
without desiring the fruits of works,
utter the word TAT
and commence Scripturally ordained works
like Yagna, Daana and Tapas.
ಹಾಗೆಯೇ ಮೋಕ್ಷದ ಆಕಾಂಕ್ಷಿಗಳಾದ ಮುಮುಕ್ಷುಗಳು “ತತ್” ಎಂಬ ಬ್ರಹ್ಮವಾಚಕವನ್ನು ಉಚ್ಛರಿಸಿ ಫಲಾಪೇಕ್ಷೆ ಇಲ್ಲದವರಾಗಿ ವಿವಿಧ ಯಜ್ಞ, ದಾನ, ತಪಸ್ಸುಗಳನ್ನು ಆಚರಿಸುತ್ತಾರೆ.
सद्भावे साधुभावे च
सदित्येतत्प्रयुज्यते।
प्रशस्ते कर्मणि तथा
सच्छब्दः पार्थ युज्यते॥१७.२६॥
ಸದ್ಭಾವೇ ಸಾಧುಭಾವೇ ಚ
ಸದಿತ್ಯೇತತ್ಪ್ರಯುಜ್ಯತೇ ।
ಪ್ರಶಸ್ತೇ ಕರ್ಮಣಿ ತಥಾ
ಸಚ್ಛಬ್ದಃ ಪಾರ್ಥ ಯುಜ್ಯತೇ ॥ 17-26॥
सद्भावे साधुभावे च सदित्येतत्प्रयुज्यते।
प्रशस्ते कर्मणि तथा सच्छब्दः पार्थ युज्यते॥१७.२६॥
ಸದ್ಭಾವೇ ಸಾಧುಭಾವೇ ಚ ಸದಿತ್ಯೇತತ್ಪ್ರಯುಜ್ಯತೇ ।
ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ದಃ ಪಾರ್ಥ ಯುಜ್ಯತೇ ॥ 17-26॥
The word SAT is uttered
To indicate Existence and Righteousness.
Arjuna, SAT is also used
To denote noble and auspicious deeds.
“ಸತ್” ಎಂಬ ಪದವು “ಸತ್ತಾ” ಎಂದರೆ ಇರುವಿಕೆಯ ವಾಚಕವಾಗಿ ಸದ್ಭಾವದಲ್ಲಿಯೂ, “ಸಾಧು” ಅಂದರೆ ಒಳ್ಳೆಯದರ ವಾಚಕವಾಗಿ ಸಾಧು ಭಾವದಲ್ಲಿಯೂ ಉಪಯೋಗಿಸಲ್ಪಡುತ್ತದೆ. ಅರ್ಜುನಾ! ಉತ್ತಮ ಕರ್ಮಗಳಿಗೂ ಮತ್ತು ಮಂಗಳಕರ ಕಾರ್ಯಗಳಿಗೂ ಪರ್ಯಾಯವಾಗಿ ಈ “ಸತ್” ಶಬ್ದವು ಪ್ರಯೋಗಿಸಲ್ಪಡುತ್ತದೆ.
यज्ञे तपसि दाने च
स्थितिः सदिति चोच्यते।
कर्म चैव तदर्थीयं
सदित्येवाभिधीयते॥१७.२७॥
ಯಜ್ಞೇ ತಪಸಿ ದಾನೇ ಚ
ಸ್ಥಿತಿಃ ಸದಿತಿ ಚೋಚ್ಯತೇ ।
ಕರ್ಮ ಚೈವ ತದರ್ಥೀಯಂ
ಸದಿತ್ಯೇವಾಭಿಧೀಯತೇ ॥ 17-27॥
यज्ञे तपसि दाने च स्थितिः सदिति चोच्यते।
कर्म चैव तदर्थीयं सदित्येवाभिधीयते॥१७.२७॥
ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ ।
ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ ॥ 17-27॥
The word SAT is employed
to indicate Austerity and Devotion
to sacred acts like Yagna, Daana and Tapas.
SAT is also used to refer to the Works
that promote all the above activities.
ಪವಿತ್ರ ಕಾರ್ಯಗಳಾದ ಯಜ್ಞಕ್ಕೂ, ತಪಸ್ಸಿಗೂ, ದಾನಕ್ಕೂ ಸಂಬಂಧಿಸಿದ ಸಂಯಮ ಮತ್ತು ನಿಷ್ಠೆಯನ್ನು “ಸತ್” ಎಂದು ಹೇಳುತ್ತಾರೆ. ಹಾಗೆಯೇ ಆ ನಿಮಿತ್ತವಾಗಿ ಮಾಡುವ ಕರ್ಮಗಳಿಗೂ ಕೂಡ ‘ಸತ್” ಎಂದೇ ಹೇಳುತ್ತಾರೆ.
अश्रद्धया हुतं दत्तं
तपस्तप्तं कृतं च यत्।
असदित्युच्यते पार्थ
न च तत्प्रेत्य नो इह॥१७.२८॥
ಅಶ್ರದ್ಧಯಾ ಹುತಂ ದತ್ತಂ
ತಪಸ್ತಪ್ತಂ ಕೃತಂ ಚ ಯತ್ ।
ಅಸದಿತ್ಯುಚ್ಯತೇ ಪಾರ್ಥ
ನ ಚ ತತ್ಪ್ರೇತ್ಯ ನೋ ಇಹ ॥ 17-28॥
अश्रद्धया हुतं दत्तं तपस्तप्तं कृतं च यत्।
असदित्युच्यते पार्थ न च तत्प्रेत्य नो इह॥१७.२८॥
ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್ ।
ಅಸದಿತ್ಯುಚ್ಯತೇ ಪಾರ್ಥ ನ ಚ ತತ್ಪ್ರೇತ್ಯ ನೋ ಇಹ ॥ 17-28॥
When the sacred acts
like Yagna, Daana and Tapas
are performed without Shraddha,
A-SAT is the term used
to refer to such acts.
Arjuna,
such performances without Shraddha
will not prove effective
either Here or Hereafter.
ಎಲೈ ಪಾರ್ಥ, ಶ್ರದ್ಧೆಯಿಲ್ಲದೆ ಮಾಡಿದ ಪವಿತ್ರ ಕಾರ್ಯಗಳಾದ ಯಜ್ಞ, ದಾನ, ತಪಸ್ಸು ಇವೆಲ್ಲವೂ “ಅಸತ್” ಎಂದು ಹೇಳಲ್ಪಡುತ್ತವೆ. ಶ್ರದ್ಧೆಯಿಲ್ಲದೆ ಮಾಡಿದ ಅದು ಇಹದಲ್ಲಿಯಾಗಲೀ, ಪರದಲ್ಲಿಯಾಗಲೀ ಫಲವನ್ನು ಕೊಡುವುದಿಲ್ಲ.
ಓಂ ತತ್ ಸತ್ ಇತಿ
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಶ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಶ್ರದ್ಧಾತ್ರಯವಿಭಾಗಯೋಗವೆಂಬ ಹೆಸರಿನ ಹದಿನೇಳನೆಯ ಅಧ್ಯಾಯವು ಮುಗಿದುದು.
ऒम् तत्सदिति ಓಂ ತತ್ಸದಿತಿ
श्रीमद्भगवद्गीतासु ಶ್ರೀಮದ್ಭಗವದ್ಗೀತಾಸು
उपनिषत्सु ಉಪನಿಷತ್ಸು
ब्रह्मविद्यायां ಬ್ರಹ್ಮವಿದ್ಯಾಯಾಂ
यॊगशास्त्रे ಯೋಗಶಾಸ್ತ್ರೇ
श्री कृष्णार्जुन संवादॆ ಶ್ರೀಕೃಷ್ಣಾರ್ಜುನಸಂವಾದೇ
श्रद्धात्रयविभागयोगो नाम ಶ್ರದ್ಧಾತ್ರಯವಿಭಾಗಯೋಗೋ ನಾಮ
सप्तदशोऽध्यायः ಸಪ್ತದಶೋಽಧ್ಯಾಯಃ
ऒम् तत्सत् ಓಂ ತತ್ಸತ್
—————— The End of Chapter Sixteen —————
——