SRIMAD BHAGAVAD GITA
Chapter Five
Karma Sannyasa Yoga
A SLOKA A DAY
Published by LANKA KRISHNA MURTI FOUNDATION
(https://www.facebook.com/lankakrishnamurtifoundation/)
Website (https://krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
CHAPTER FIVE: Karma Sannyasa Yoga.
ऒं ततसत्
ಓಂ ತತ್ಸತ್
अथ कर्मसन्यासयोगो नाम पञ्चमोद्ध्यायः
ಅಥ್ಹ ಕರ್ಮಸನ್ಯಾಸಯೋಗೋ ನಾಮ ಪಂಚಮೋಧ್ಯಾಯಃ
अर्जुन उवाच
सन्यासं कर्मणां कृष्ण
पुनर्योगं च शंससि।
यच्छ्रेय एतयोरेकं
तन्मे ब्रूहि सुनिश्चितम्॥५.१॥
ಅರ್ಜುನ ಉವಾಚ ।
ಸಂನ್ಯಾಸಂ ಕರ್ಮಣಾಂ ಕೃಷ್ಣ
ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ
ತನ್ಮೇ ಬ್ರೂಹಿ ಸುನಿಶ್ಚಿತಮ್ ॥ 5-1॥
सन्यासं कर्मणां कृष्ण पुनर्योगं च शंससि।
यच्छ्रेय एतयोरेकं तन्मे ब्रूहि सुनिश्चितम्॥५.१॥
ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ।
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ॥ 5-1॥
- Arjuna said:
Krishna,
You talk approvingly
Of the Renunciation of Action, Sannyasa,
And the Performance of Action, Karma Yoga, as well.
Tell me with certainty
Which of the two brings
The greatest good.
ಐದನೆಯ ಅಧ್ಯಾಯ
ಕರ್ಮಸನ್ಯಾಸ ಯೋಗ
ಅರ್ಜುನ ಹೇಳಿದನು:
ಹೇ ಕೃಷ್ಣಾ! ನೀನು ಕರ್ಮಗಳನ್ನು ತ್ಯಜಿಸುವಿಕೆ, ಅಂದರೆ ಸನ್ಯಾಸವನ್ನೂ ಮತ್ತು ಕರ್ಮಗಳ ಅನುಷ್ಠಾನವನ್ನು ಅಂದರೆ ಕರ್ಮಯೋಗವನ್ನೂ, ಹೀಗೆ ಎರಡನ್ನೂ ಒಪ್ಪಿತವಾಗುವ ಹಾಗೆ ಹೇಳುತ್ತಿರುವೆ. ಆದುದರಿಂದ ಇವೆರಡರಲ್ಲಿ ಯಾವುದು ಹೆಚ್ಚು ಶ್ರೇಯಸ್ಕರವೋ ಅದನ್ನು ನನಗೆ ಖಚಿತವಾಗಿ ಹೇಳು.
श्रीभगवानुवाच
संन्यासः कर्मयोगश्च
निश्रेयसकरावुभौ।
तयोस्तु कर्मसंन्यासात्
कर्मयोगो विशिष्यते॥५.२॥
ಶ್ರೀಭಗವಾನುವಾಚ ।
ಸಂನ್ಯಾಸಃ ಕರ್ಮಯೋಗಶ್ಚ
ನಿಃಶ್ರೇಯಸಕರಾವುಭೌ ।
ತಯೋಸ್ತು ಕರ್ಮಸಂನ್ಯಾಸಾತ್
ಕರ್ಮಯೋಗೋ ವಿಶಿಷ್ಯತೇ ॥ 5-2॥
संन्यासः कर्मयोगश्च निश्रेयसकरावुभौ।
तयोस्तु कर्मसंन्यासात्कर्मयोगो विशिष्यते॥५.२॥
ಶ್ರೀಭಗವಾನುವಾಚ ।
ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ ।
ತಯೋಸ್ತು ಕರ್ಮಸಂನ್ಯಾಸಾತ್ಕರ್ಮಯೋಗೋ ವಿಶಿಷ್ಯತೇ ॥ 5-2॥
- Sri Bhagavan said:
Arjuna,
Sannyasa, Renunciation of Action,
and Karma Yoga, Performance of Action,
both lead to the greatest good,
namely, Liberation.
but of the two,
Karma Yoga, Performance of Action,
Is certainly the better one.
ಭಗವಂತನು ಹೇಳಿದನು:
ಅರ್ಜುನಾ! ಸನ್ಯಾಸ ಅಂದರೆ ಕರ್ಮದ ಪರಿತ್ಯಾಗ ಮತ್ತು ಕರ್ಮಯೋಗ ಅಂದರೆ ಕರ್ಮದ ಅನುಷ್ಠಾನ, ಇವೆರಡೂ ಶ್ರೇಯಸ್ಸನ್ನುಂಟುಮಾಡಿ ಮೋಕ್ಷದೆಡೆಗೆ ಕೊಂಡೊಯ್ಯುತ್ತವೆ. ಆದರೆ ಅವೆರಡರಲ್ಲಿ ಕರ್ಮಸನ್ಯಾಸಕ್ಕಿಂತ ಕರ್ಮಯೋಗವು ಖಂಡಿತವಾಗಿ ಉತ್ಕೃಷ್ಟವಾದುದು.
ज्ञेयः स नित्यसन्यासी
यो न द्वेष्टि न काङ्क्षति।
निर्द्वन्द्वो हि महाबाहो
सुखं बन्धात्प्रमुच्यते ॥५.३॥
ಜ್ಞೇಯಃ ಸ ನಿತ್ಯಸಂನ್ಯಾಸೀ
ಯೋ ನ ದ್ವೇಷ್ಟಿ ನ ಕಾಂಕ್ಷತಿ ।
ನಿರ್ದ್ವಂದ್ವೋ ಹಿ ಮಹಾಬಾಹೋ
ಸುಖಂ ಬಂಧಾತ್ಪ್ರಮುಚ್ಯತೇ ॥ 5-3॥
ज्ञेयः स नित्यसन्यासी यो न द्वेष्टि न काङ्क्षति।
निर्द्वन्द्वो हि महाबाहो सुखं बन्धात्प्रमुच्यते ॥५.३॥
ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ ।
ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ಪ್ರಮುಚ್ಯತೇ ॥ 5-3॥
- Arjuna, know that
The person who remains established
Firmly and continuously,
In a state of renunciation,
Who neither desires nor dislikes anything,
And who rises above the dualities
Like pleasure and pain,
Such a person easily finds
Liberation from bondage.
ಹೇ ಅರ್ಜುನನೇ! ಯಾವ ಪುರುಷನು ಯಾರನ್ನೂ ದ್ವೇಶಿಸುವುದಿಲ್ಲವೋ ಮತ್ತು ಯಾವುದನ್ನೂ ಬಯಸುವುದಿಲ್ಲವೋ ಹಾಗೂ ಯಾರು ಸ್ಥಿರವಾಗಿ, ಸತತವಾಗಿ ವೈರಾಗ್ಯದಲ್ಲಿ ನೆಲೆಗೊಂಡಿರುತ್ತಾನೆಯೋ ಆ ಕರ್ಮಯೋಗಿಯು ನಿತ್ಯಸನ್ಯಾಸಿಯಾಗಿರುತ್ತಾನೆ. ಏಕೆಂದರೆ ರಾಗದ್ವೇಷಾದಿ ದ್ವಂದ್ವಗಳಿಂದ ಹೊರಬಂದವನು ಸುಲಭವಾಗಿ ಸಂಸಾರ ಬಂಧನದಿಂದ ಮುಕ್ತನಾಗುತ್ತಾನೆ.
साङ्ख्ययोगौ पृथग्बालाः
प्रवदन्ति न पण्डिताः।
एकमप्यास्थितः सम्यक्
उभयोर्विन्दते फलम्॥५.४॥
ಸಾಂಖ್ಯಯೋಗೌ ಪೃಥಗ್ಬಾಲಾಃ
ಪ್ರವದಂತಿ ನ ಪಂಡಿತಾಃ ।
ಏಕಮಪ್ಯಾಸ್ಥಿತಃ ಸಮ್ಯಕ್
ಉಭಯೋರ್ವಿಂದತೇ ಫಲಮ್ ॥ 5-4॥
साङ्ख्ययोगौ पृथग्बालाः प्रवदन्ति न पण्डिताः।
एकमप्यास्थितः सम्यगुभयोर्विन्दते फलम्॥५.४॥
ಸಾಂಖ್ಯಯೋಗೌ ಪೃಥಗ್ಬಾಲಾಃ ಪ್ರವದಂತಿ ನ ಪಂಡಿತಾಃ ।
ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್ ॥ 5-4॥
- The ignorant and ill-informed people
Think that the two,
Sannyasa and Karma Yoga,
Are two different disciplines;
But the learned and the well-informed ones
Consider both of them to be the same:
Either of them, when well practiced
Brings the same fruit.
ಮೇಲೆ ಹೇಳಿದ ಸನ್ಯಾಸ ಮತ್ತು ಕರ್ಮಯೋಗವನ್ನು ಅಜ್ಞಾನಿ ಮತ್ತು ಸರಿಯಾದ ಮಾಹಿತಿಯಿಲ್ಲದ ಜನರು, ಎರಡು ಭಿನ್ನವಾದ ಶಾಖೆಗಳು ಎಂದು ತಿಳಿಯುತ್ತಾರೆ. ಆದರೆ ಪಂಡಿತರು ಮತ್ತು ಸರಿಯಾದ ತಿಳುವಳಿಕೆಯನ್ನು ಹೊಂದಿದವರು ಅವೆರಡೂ ಒಂದೇ ಫಲವನ್ನು ನೀಡುತ್ತವೆ ಎಂದು ಭಾವಿಸುತ್ತಾರೆ. ಇವೆರಡರಲ್ಲಿ ಯಾವುದನ್ನೇ ಆಗಲಿ ಚೆನ್ನಾಗಿ ಅನುಷ್ಠಾನ ಮಾಡಿದಲ್ಲಿ ಎರಡರ ಫಲವೂ ಒಂದೇ ಆಗಿರುತ್ತದೆ.
यत्साङ्ख्यैः प्राप्यते स्थानं
तद्योगैरपि गम्यते।
एकं साङ्ख्यं च योगं च
यः पस्यति स पस्यति॥५.५॥
ಯತ್ಸಾಂಖ್ಯೈಃ ಪ್ರಾಪ್ಯತೇ ಸ್ಥಾನಂ
ತದ್ಯೋಗೈರಪಿ ಗಮ್ಯತೇ ।
ಏಕಂ ಸಾಂಖ್ಯಂ ಚ ಯೋಗಂ ಚ
ಯಃ ಪಶ್ಯತಿ ಸ ಪಶ್ಯತಿ ॥ 5-5॥
यत्साङ्ख्यैः प्राप्यते स्थानं तद्योगैरपि गम्यते।
एकं साङ्ख्यं च योगं च यः पस्यति स पस्यति॥५.५॥
ಯತ್ಸಾಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ಯೋಗೈರಪಿ ಗಮ್ಯತೇ ।
ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ ॥ 5-5॥
- Sankhyas are those who acquire gnana
Through sannyasa or renunciation.
The status they attain through renunciation
Is the same as the one attained through Karma yoga,
That is Liberation or Moksha.
He who perceives
That both are one and the same
Is the true perceiver.
ಸನ್ಯಾಸದ ಮೂಲಕ ಜ್ಞಾನವನ್ನು ಗಳಿಸುವವರನ್ನು ಸಾಂಖ್ಯರೆನ್ನುತ್ತಾರೆ. ಸಾಂಖ್ಯಯೋಗಿಗಳಿಗೆ ಪರಿತ್ಯಾಗದ ಮೂಲಕ ಲಭಿಸುವ ಮೋಕ್ಷಫಲವು ಕರ್ಮಯೋಗದ ಮುಖಾಂತರ ಲಭಿಸುವ ಮೋಕ್ಷಫಲಕ್ಕೆ ಸಮನಾಗಿರುತ್ತದೆ. ಜ್ಞಾನಯೋಗವನ್ನೂ, ಕರ್ಮಯೋಗವನ್ನೂ ಒಂದೇ ಎಂದು ಯಾರು ಭಾವಿಸುತ್ತಾನೆಯೋ ಅವನೇ ನಿಜವಾದ ಯಥಾರ್ಥ ಜ್ಞಾನಿ.
सन्यासस्तु महाबाहो
दुःखमाप्तुमयोगतः।
योगयुक्तो मुनिर्ब्रह्म
न चिरेणाधिगच्छति॥५.६॥
ಸಂನ್ಯಾಸಸ್ತು ಮಹಾಬಾಹೋ
ದುಃಖಮಾಪ್ತುಮಯೋಗತಃ ।
ಯೋಗಯುಕ್ತೋ ಮುನಿರ್ಬ್ರಹ್ಮ
ನಚಿರೇಣಾಧಿಗಚ್ಛತಿ ॥ 5-6॥
सन्यासस्तु महाबाहो दुःखमाप्तुमयोगतः।
योगयुक्तो मुनिर्ब्रह्म न चिरेणाधिगच्छति॥५.६॥
ಸಂನ್ಯಾಸಸ್ತು ಮಹಾಬಾಹೋ ದುಃಖಮಾಪ್ತುಮಯೋಗತಃ ।
ಯೋಗಯುಕ್ತೋ ಮುನಿರ್ಬ್ರಹ್ಮ ನಚಿರೇಣಾಧಿಗಚ್ಛತಿ ॥ 5-6॥
- Arjuna,
Without the practice of Karma Yoga,
It is very difficult to acquire sannyasa
Or renunciation.
But by practicing Karma Yoga,
In the form of Nishkama Karma,
And getting into a state of contemplation,
The sannyasi attains Braman before long.
ಆದರೆ ಎಲೈ ಅರ್ಜುನನೇ! ಕರ್ಮಯೋಗವನ್ನು ಆಚರಿಸದೆ, ಅದರ ಸಹಾಯವಿಲ್ಲದೆ ಸನ್ಯಾಸವನ್ನು ಹೊಂದುವುದು ಬಹಳ ಕಷ್ಟ. ಆದರೆ ಕರ್ಮಯೋಗವನ್ನು ನಿಷ್ಕಾಮ ಕರ್ಮದ ರೂಪದಲ್ಲಿ ಆಚರಿಸಿ ಸನ್ಯಾಸಿಯಾದವನು ಶೀಘ್ರವಾಗಿ ಬ್ರಹ್ಮನನ್ನು ಹೊಂದುತ್ತಾನೆ.
योगयुक्तो विशुद्धात्मा
विजितात्मा जितेन्द्रियः।
सर्वभूतात्मभूतात्मा
कुर्वन्नपि न लिप्यते॥५.७॥
ಯೋಗಯುಕ್ತೋ ವಿಶುದ್ಧಾತ್ಮಾ
ವಿಜಿತಾತ್ಮಾ ಜಿತೇಂದ್ರಿಯಃ ।
ಸರ್ವಭೂತಾತ್ಮಭೂತಾತ್ಮಾ
ಕುರ್ವನ್ನಪಿ ನ ಲಿಪ್ಯತೇ ॥ 5-7॥
योगयुक्तो विशुद्धात्मा विजितात्मा जितेन्द्रियः।
सर्वभूतात्मभूतात्मा कुर्वन्नपि न लिप्यते॥५.७॥
ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇಂದ್ರಿಯಃ ।
ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ ॥ 5-7॥
- He who keeps his mind in a pure state,
Who gains control over the senses,
Who restrains his own self
And practices Nishkama Karma;
And he who finds commonness
Between his own self
And the selves of others –
Such a person, though performs actions,
Remains untainted by them.
ಯಾರು ತನ್ನ ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಳ್ಳುವನೋ, ಯಾರು ಇಂದ್ರಿಯಗಳ ಮೇಲೆ ಹತೋಟಿಯನ್ನು ಹೊಂದಿರುವನೋ, ಯಾರು ನಿಷ್ಕಾಮ ಕರ್ಮದ ಅನುಷ್ಠಾನದಿಂದ ತನ್ನ ಮೇಲೆ ನಿಯಂತ್ರಣ ಹೊಂದಿರುತ್ತಾನೆಯೋ, ಮತ್ತು ಯಾರು ಸರ್ವಭೂತಗಳ ಆತ್ಮವನ್ನು ತನ್ನ ಆತ್ಮವೆಂದು ಭಾವಿಸುವನೋ, ಅಂತಹ ಪುರುಷನು ಕರ್ಮವನ್ನು ಮಾಡುತ್ತಿದ್ದರೂ ಅದರಲ್ಲಿ ಸಿಲುಕಿಕೊಳ್ಳುವುದಿಲ್ಲ.
नैव किञ्चित्करोमीति
युक्तो मन्येत तत्ववित्।
पस्यन् शृण्वन् स्पृशन् जिघ्रन्
अश्नन् गच्छन् स्वपन् , श्वसन् , ॥५.८॥
ನೈವ ಕಿಂಚಿತ್ಕರೋಮೀತಿ
ಯುಕ್ತೋ ಮನ್ಯೇತ ತತ್ತ್ವವಿತ್ ।
ಪಶ್ಯನ್ ಶೃಣ್ವನ್ ಸ್ಪೃಶಣ್ ಜಿಘ್ರನ್
ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್॥ 5-8॥
नैव किञ्चित्करोमीति युक्तो मन्येत तत्ववित्।
पस्यञ्शृण्वन्स्पृशञ्जिघ्रन्नश्नन्गच्छन्स्वपञ्श्वसन्॥५.८॥
ನೈವ ಕಿಂಚಿತ್ಕರೋಮೀತಿ ಯುಕ್ತೋ ಮನ್ಯೇತ ತತ್ತ್ವವಿತ್ ।
ಪಶ್ಯನ್ ಶೃಣ್ವನ್ ಸ್ಪೃಶಣ್ ಜಿಘ್ರನ್ ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್॥ 5-8॥
प्रलपन् विशृजन् गृह्णन्
उन्मिषन् निमिषन् अपि
इन्द्रियाणीन्द्रियार्थेषु
वर्तन्त इति धारयन्॥५.९॥
ಪ್ರಲಪನ್ ವಿಶೃಜನ್ ಗೃಹ್ಣನ್
ಉನ್ಮಿಷನ್ ನಿಮಿಷನ್ ಅಪಿ ।
ಇಂದ್ರಿಯಾಣೀಂದ್ರಿಯಾರ್ಥೇಷು
ವರ್ತಂತ ಇತಿ ಧಾರಯನ್ ॥ 5-9॥
प्रलपन्विशृजन्गृह्णन्नुन्मिषन्निमिषन्नपि।
इन्द्रियाणीन्द्रियार्तेर्थेषु वर्तन्त इति धारयन्॥५.९॥
ಪ್ರಲಪನ್ವಿಸೃಜನ್ಗೃಹ್ಣನ್ನುನ್ಮಿಷನ್ನಿಮಿಷನ್ನಪಿ ।
ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತ ಇತಿ ಧಾರಯನ್ ॥ 5-9॥
- Through the practice of Nishkama Karma,
The Karma Yogi acquires gnana,
Knowledge of the Supreme Reality;
And while carrying out all psycho-physical activities,
Like seeing, hearing, touching, smelling,
Eating, walking, sleeping, breathing,
Talking, evacuating, grasping, and
Opening and closing of eyes,
He thinks:
‘I am not the doer of all these actions;
It is the senses that operate among their objects.’
ನಿಷ್ಕಾಮ ಕರ್ಮದ ಆಚರಣೆಯ ಮುಖಾಂತರ, ಕರ್ಮಯೋಗಿಯು ಪರಬ್ರಹ್ಮನ ಅರಿವಿನ ಜ್ಞಾನವನ್ನು ಹೊಂದುತ್ತಾನೆ. ತತ್ವಜ್ಞಾನಿಯಾದ ಯೋಗಿಯು ಭೌತಿಕ ಮತ್ತು ಮಾನಸಿಕ ಚಟುವಟಿಕೆಗಳು ಅಂದರೆ ನೋಡುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ತಿನ್ನುವಾಗ, ನಡೆಯುವಾಗ, ನಿದ್ರಿಸುವಾಗ, ಉಸಿರಾಡುವಾಗ, ಮಾತನಾಡುವಾಗ, ವಿಸರ್ಜಿಸುವಾಗ, ಗ್ರಹಣ ಮಾಡುವಾಗ ಮತ್ತು ಕಣ್ಣುಗಳನ್ನು ಮುಚ್ಚಿ ತೆರೆಯುವಾಗ, “ಈ ಎಲ್ಲ ಕ್ರಿಯೆಗಳನ್ನು ಮಾಡುವವನು ನಾನಲ್ಲ. ಆಯಾ ಇಂದ್ರಿಯಗಳು ಆಯಾ ಕಾರ್ಯಗಳನ್ನು ಪ್ರವರ್ತಿಸುತ್ತಿವೆ” ಯೆಂಬುದಾಗಿ ತಿಳಿಯುತ್ತಾನೆ.
ब्रह्मण्याधाय कर्माणि
सङ्गं त्यक्त्वा करोति यः।
लिप्यते न स पापेन
पद्मपत्रमिवाम्भसा॥५.१०॥
ಬ್ರಹ್ಮಣ್ಯಾಧಾಯ ಕರ್ಮಾಣಿ
ಸಂಗಂ ತ್ಯಕ್ತ್ವಾ ಕರೋತಿ ಯಃ ।
ಲಿಪ್ಯತೇ ನ ಸ ಪಾಪೇನ
ಪದ್ಮಪತ್ರಮಿವಾಂಭಸಾ ॥ 5-10॥
ब्रह्मण्याधाय कर्माणि सङ्गं त्यक्त्वा करोति यः।
लिप्यते न स पापेन पद्मपत्रमिवाम्भसा॥५.१०॥
ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ ।
ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ ॥ 5-10॥
- By offering all actions to Brahman
And by remaining unattached,
Though the Karma Yogi acts,
He keeps untouched by sin,
Like the lotus leaf un-drenched by water.
ಯಾವ ಪುರುಷನು ಎಲ್ಲ ಕರ್ಮಗಳನ್ನು ಬ್ರಹ್ಮನಲ್ಲಿ ಅರ್ಪಣೆ ಮಾಡಿ ಮತ್ತು ಆಸಕ್ತಿಯನ್ನು ತ್ಯಾಗಮಾಡಿ ನಿರ್ಲಿಪ್ತನಾಗಿ ತನ್ನ ಕರ್ಮವನ್ನು ಮಾಡುತ್ತಾನೆಯೋ, ಆ ಪುರುಷನು ಹೇಗೆ ನೀರಿನಲ್ಲಿರುವ ಕಮಲದೆಲೆಯು ನೀರಿನಿಂದ ಲಿಪ್ತವಾಗುವುದಿಲ್ಲವೋ ಹಾಗೆ ಪಾಪದಿಂದ ಲಿಪ್ತನಾಗುವುದಿಲ್ಲ.
कायेन मनसा बुध्या
केवलैरिन्द्रियैरपि।
योगिनः कर्म कुर्वन्ति
सङ्गं त्यक्त्वात्मशुद्धये॥५.११॥
ಕಾಯೇನ ಮನಸಾ ಬುದ್ಧ್ಯಾ
ಕೇವಲೈರಿಂದ್ರಿಯೈರಪಿ ।
ಯೋಗಿನಃ ಕರ್ಮ ಕುರ್ವಂತಿ
ಸಂಗಂ ತ್ಯಕ್ತ್ವಾತ್ಮಶುದ್ಧಯೇ ॥ 5-11॥
कायेन मनसा बुध्या केवलैरिन्द्रियैरपि।
योगिनः कर्म कुर्वन्ति सङ्गं त्यक्त्वात्मशुद्धये॥५.११॥
ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ ।
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮಶುದ್ಧಯೇ ॥ 5-11॥
- The Karma Yogi performs actions
Merely by his body, mind and intellect,
Without any sense of involvement.
It is only to purify his own self
He does so.
ಕರ್ಮಯೋಗಿಗಳು ಮಮತ್ವಬುದ್ಧಿರಹಿತರಾಗಿ, ಫಲದಲ್ಲಿ ಆಸಕ್ತಿಯನ್ನು ಬಿಟ್ಟು, ಕೇವಲ ಇಂದ್ರಿಯಗಳಿಂದಲೂ, ದೇಹದಿಂದಲೂ, ಮನಸ್ಸಿನಿಂದಲೂ, ಬುದ್ಧಿಯಿಂದಲೂ ಸತ್ವಶುದ್ಧಿಗಾಗಿ, ಆತ್ಮಶುದ್ಧಿಗಾಗಿ ಕರ್ಮಗಳನ್ನು ಮಾಡುತ್ತಾರೆ.
युक्तः कर्मफलं त्यक्त्वा
शान्तिमाप्नोति नैष्ठिकीम्।
अयुक्तः कामकारेण
फले सक्तो निबद्ध्यते॥५.१२॥
ಯುಕ್ತಃ ಕರ್ಮಫಲಂ ತ್ಯಕ್ತ್ವಾ
ಶಾಂತಿಮಾಪ್ನೋತಿ ನೈಷ್ಠಿಕೀಮ್ ।
ಅಯುಕ್ತಃ ಕಾಮಕಾರೇಣ
ಫಲೇ ಸಕ್ತೋ ನಿಬಧ್ಯತೇ ॥ 5-12॥
युक्तः कर्मफलं त्यक्त्वा शान्तिमाप्नोति नैष्ठिकीम्।
अयुक्तः कामकारेण फले सक्तो निबद्ध्यते॥५.१२॥
ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್ ।
ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ ॥ 5-12॥
- The Karma Yogi,
Well-established in yoga,
Renounces the fruit of his actions
And attains peace
Through disciplined action;
Whereas the undisciplined yogi,
Driven by the desire for the fruit of his actions,
Gets bound to them.
ಯೋಗದಲ್ಲಿ ಪರಿಣಿತನಾದ ನಿಷ್ಕಾಮ ಕರ್ಮಯೋಗಿಯು ಫಲಾಸಕ್ತಿಯನ್ನು ತ್ಯಜಿಸುವುದರಿಂದ ಜ್ಞಾನನಿಷ್ಠಾತ್ಮಕವಾದ ಮುಕ್ತಿಯನ್ನು, ಭಗವತ್ಪ್ರಾಪ್ತಿರೂಪವಾದ ಶಾಂತಿಯನ್ನು ಪಡೆಯುತ್ತಾನೆ. ಆದರೆ ಅಯುಕ್ತನಾದ, ಯೋಗಹೀನನಾದ, ಸಕಾಮಪುರುಷನು ಕಾಮನೆಯ ಪ್ರೇರಣೆಯಿಂದ, ಕೋರಿಕೆಗಳಿಗೆ ಸಿಲುಕಿ ಫಲಾಸಕ್ತಿಯಿಂದ ಬಂಧಿಸಲ್ಪಡುತ್ತಾನೆ.
सर्वकर्माणि मनसा
सन्यस्यास्ते सुखं वशी।
नवद्वारे पुरे देही
नैवकुर्वन् न कारयन्॥५.१३॥
ಸರ್ವಕರ್ಮಾಣಿ ಮನಸಾ
ಸಂನ್ಯಸ್ಯಾಸ್ತೇ ಸುಖಂ ವಶೀ ।
ನವದ್ವಾರೇ ಪುರೇ ದೇಹೀ
ನೈವ ಕುರ್ವನ್ನ ಕಾರಯನ್ ॥ 5-13॥
सर्वकर्माणि मनसा सन्यस्यास्ते सुखं वशी।
नवद्वारे पुरे देही नैवकुर्वन् न कारयन्॥५.१३॥
ಸರ್ವಕರ್ಮಾಣಿ ಮನಸಾ ಸಂನ್ಯಸ್ಯಾಸ್ತೇ ಸುಖಂ ವಶೀ ।
ನವದ್ವಾರೇ ಪುರೇ ದೇಹೀ ನೈವ ಕುರ್ವನ್ನ ಕಾರಯನ್ ॥ 5-13॥
- The self-controlled sannyasi
Renounces all actions mentally
And sits happily in the nine-gated city
Namely, his body with nine openings,
Neither doing any action
Nor causing others to act.
ಸಾಂಖ್ಯಯೋಗವನ್ನು ಆಚರಿಸುವ ಸಂಯಮಿಯಾದ, ಜಿತೇಂದ್ರಿಯನಾದ ಸಂನ್ಯಾಸಿಯು ಸಮಸ್ತ ಕರ್ಮಗಳನ್ನೂ ಮನಸ್ಸಿನಿಂದ ತ್ಯಜಿಸಿ, ತಾನು ಕರ್ಮವನ್ನು ಮಾಡದೆ ಮತ್ತು ಇತರರಿಂದ ಏನನ್ನೂ ಮಾಡಿಸದೇ, ನವದ್ವಾರಪುರದಲ್ಲಿ ಅಂದರೆ ನವದ್ವಾರಗಳುಳ್ಳ ಶರೀರದಲ್ಲಿ ಸುಖವಾಗಿ ಇರುತ್ತಾನೆ.
न कर्तृत्वं न कर्माणि
लोकस्य सृजति प्रभुः।
न कर्मफलसंयोगं
स्वभावस्तु प्रवर्तते॥५.१४॥
ನ ಕರ್ತೃತ್ವಂ ನ ಕರ್ಮಾಣಿ
ಲೋಕಸ್ಯ ಸೃಜತಿ ಪ್ರಭುಃ ।
ನ ಕರ್ಮಫಲಸಂಯೋಗಂ
ಸ್ವಭಾವಸ್ತು ಪ್ರವರ್ತತೇ ॥ 5-14॥
न कर्तृत्वं न कर्माणि लोकस्य सृजति प्रभुः।
न कर्मफलसंयोगं स्वभावस्तु प्रवर्तते॥५.१४॥
ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ ।
ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ ॥ 5-14॥
- Prabhu or Atma, the Lord,
is not the performer of actions,
Nor does he cause others to perform.
He does not create objects in the world,
Nor is he associated with the fruits of actions.
All the things happen because of the operation
Of Prakriti or Maya or Nature.
ಪ್ರಭುವಾದ ಆತ್ಮನು ಕರ್ಮಗಳನ್ನು ನೆರವೇರಿಸುವನಲ್ಲ ಹಾಗೂ ಇತರರ ಮೂಲಕ ಕರ್ಮಗಳನ್ನು ಮಾಡಿಸುವವನೂ ಅಲ್ಲ. ಪ್ರಪಂಚದಲ್ಲಿನ ವಸ್ತುಗಳ ನಿರ್ಮಾತೃವೂ ಅಲ್ಲ. ಆತ್ಮನು ಕರ್ಮಫಲದೊಂದಿಗೆ ಸಂಬಂಧವಿರಿಸಿಕೊಂಡವನೂ ಅಲ್ಲ ಅಂದರೆ ಆತ್ಮನು ಕರ್ಮಗಳನ್ನಾಗಲಿ, ಕರ್ತೃತ್ವವನ್ನಾಗಲೀ, ಕರ್ಮಫಲಸಂಬಂಧವನ್ನಾಗಲಿ ಲೋಕಕ್ಕೆ ತಾನು ಅಂಟುಗಟ್ಟುವುದಿಲ್ಲ. ಅವೆಲ್ಲವೂ ಮಾಯೆ ಅಥವಾ ಪ್ರಕೃತಿಸ್ವಭಾವದ ನಾಟಕವು.
नादत्ते कस्यचित्पापं
नचैव सुकृतं विभुः।
अज्ञानेनावृतं ज्ञानं
तेन मुह्यन्ति जन्तवः॥५.१५॥
ನಾದತ್ತೇ ಕಸ್ಯಚಿತ್ಪಾಪಂ
ನ ಚೈವ ಸುಕೃತಂ ವಿಭುಃ ।
ಅಜ್ಞಾನೇನಾವೃತಂ ಜ್ಞಾನಂ
ತೇನ ಮುಹ್ಯಂತಿ ಜಂತವಃ ॥ 5-15॥
नादत्ते कस्यचित्पापं नचैव सुकृतं विभुः।
अज्ञानेनावृतं ज्ञानं तेन मुह्यन्ति जन्तवः॥५.१५॥
ನಾದತ್ತೇ ಕಸ್ಯಚಿತ್ಪಾಪಂ ನ ಚೈವ ಸುಕೃತಂ ವಿಭುಃ ।
ಅಜ್ಞಾನೇನಾವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ ॥ 5-15॥
- He is Vibhu, the Supreme Self
Who does not accept either the sins
Resulting from bad actions
Or the merit resulting from good actions.
He is beyond the purview
Of doer-ship and agent-ship.
People are deluded to think
He is the giver and receiver
Of good and bad, punya and papa.
This delusion is caused
When gnana or knowledge
Is shrouded by ignorance.
ವಿಭುವಾದ ಪರಮಾತ್ಮನು ಯಾರದೇ ಕುಕೃತ್ಯಗಳಿಂದಾಗುವ ಪಾಪವನ್ನಾಗಲೀ, ಸುಕೃತ್ಯಗಳಿಂದಾಗುವ ಪುಣ್ಯವನ್ನಾಗಲೀ ಸ್ವೀಕರಿಸುವುದಿಲ್ಲ. ಆತನು ಕರ್ತೃತ್ವ ಮತ್ತು ಕಾರಣೀಭೂತತ್ವಕ್ಕೆ ಅತೀತನಾದವನು. ಪರಮಾತ್ಮನೇ ಒಳ್ಳೆಯದನ್ನು, ಪುಣ್ಯವನ್ನು ಕೊಡುವವನು ಹಾಗೂ ಕೆಟ್ತದ್ದನ್ನು, ಪಾಪವನ್ನು ಸ್ವೀಕರಿಸಿ ಮನ್ನಿಸುವವನು ಎಂಬುದು ಜನತೆಯ ಭ್ರಾಂತಿಯಾಗಿದೆ. ಜೀವಿಗಳ ನಿಜವಾದ ಜ್ಞಾನವನ್ನು ಅಜ್ಞಾನವು ಮುಚ್ಚಿರುವುದರಿಂದ ಅವರು ದಿಗ್ಭ್ರಮೆಗೊಳ್ಳುತ್ತಾರೆ.
ज्ञानेन तु तदज्ञानं
येषां नाशितमात्मनः।
तेषामादित्यवज्ज्ञानं
प्रकाशयति तत्परम्॥५.१६॥
ಜ್ಞಾನೇನ ತು ತದಜ್ಞಾನಂ
ಯೇಷಾಂ ನಾಶಿತಮಾತ್ಮನಃ ।
ತೇಷಾಮಾದಿತ್ಯವಜ್ಜ್ಞಾನಂ
ಪ್ರಕಾಶಯತಿ ತತ್ಪರಮ್ ॥ 5-16॥
ज्ञानेन तु तदज्ञानं येषां नाशितमात्मनः।
तेषामादित्यवज्ज्ञानं प्रकाशयति तत्परम्॥५.१६॥
ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ ।
ತೇಷಾಮಾದಿತ್ಯವಜ್ಜ್ಞಾನಂ ಪ್ರಕಾಶಯತಿ ತತ್ಪರಮ್ ॥ 5-16॥
- But for those whose ignorance is destroyed
By gnana, true knowledge of the Self,
The same gnana illumines the Supreme Brahman
Like the sun.
ಆದರೆ ಆತ್ಮಜ್ಞಾನದ ಮೂಲಕ ಯಾರ ಅಜ್ಞಾನವು ನಾಶಮಾಡಲ್ಪಟ್ತಿದೆಯೋ, ಅಂತಹವರ ಆತ್ಮಜ್ಞಾನವು ಸೂರ್ಯನ ಹಾಗೆ. ಆ ಸಚ್ಚಿದಾನಂದ ಘನನಾದ ಪರಬ್ರಹ್ಮನನ್ನು ಪ್ರಕಾಶಗೊಳಿಸುತ್ತದೆ.
तद्बुद्धयस्तदात्मान:
तन्निष्ठास्तत्परायणाः।
गच्छन्त्यपुनरावृत्तिं
ज्ञाननिर्धूतकल्मषाः॥५.१७॥
ತದ್ಬುದ್ಧಯಸ್ತದಾತ್ಮಾನಃ
ತನ್ನಿಷ್ಠಾಸ್ತತ್ಪರಾಯಣಾಃ ।
ಗಚ್ಛಂತ್ಯಪುನರಾವೃತ್ತಿಂ
ಜ್ಞಾನನಿರ್ಧೂತಕಲ್ಮಷಾಃ ॥ 5-17॥
तद्बुद्धयस्तदात्मान: तन्निष्ठास्तत्परायणाः।
गच्छन्त्यपुनरावृत्तिं ज्ञाननिर्धूतकल्मषाः॥५.१७॥
ತದ್ಬುದ್ಧಯಸ್ತದಾತ್ಮಾನಃ ತನ್ನಿಷ್ಠಾಸ್ತತ್ಪರಾಯಣಾಃ ।
ಗಚ್ಛಂತ್ಯಪುನರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ ॥ 5-17॥
- Those whose intellect is firmly established
In the Brahman,
Who perceive it as their own self.
Who are completely devoted to it,
And who always contemplate on it,
When their sins are completely destroyed
By gnana, —
They reach a state of Liberation or Moksha
Without ever returning from it.
ಯಾರು ಬ್ರಹ್ಮನಲ್ಲಿಯೇ ನಿಶ್ಚಯ ಬುದ್ಧಿಯುಳ್ಳವರಾಗಿರುವರೋ, ಯಾರು ಬ್ರಹ್ಮನಲ್ಲಿಯೇ ಮನಸ್ಸನ್ನಿಟ್ಟಿರುವರೋ, ಯಾರು ಬ್ರಹ್ಮನಿಷ್ಠರಾಗಿರುವರೋ, ಯಾರು ಬ್ರಹ್ಮನನ್ನೇ ಗತಿಯೆಂದು ನಂಬಿರುವರೋ, ಯಾರು ಜ್ಞಾನದಿಂದ ಕಲ್ಮಶಗಳನ್ನು ತೊಳೆದುಕೊಂಡಿರುವರೋ ಅಂತಹವರು ಮರಳಿಬಾರದವರಾಗಿ ಮೋಕ್ಷವನ್ನು ಹೊಂದುತ್ತಾರೆ.
विद्याविनयसम्पन्ने
ವಿದ್ಯಾವಿನಯಸಂಪನ್ನೇ
ब्राह्मणे गवि हस्तिनि।
ಬ್ರಾಹ್ಮಣೇ ಗವಿ ಹಸ್ತಿನಿ ।
शुनि चैव श्वपाके च
ಶುನಿ ಚೈವ ಶ್ವಪಾಕೇ ಚ
पण्डिता: समदर्शिनः॥५.१८॥
ಪಂಡಿತಾಃ ಸಮದರ್ಶಿನಃ ॥ 5-18॥
विद्याविनयसम्पन्ने ब्राह्मणे गवि हस्तिनि।
शुनि चैव श्वपाके च पण्डिता समदर्शिनः॥५.१८॥
ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ ।
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ॥ 5-18॥
Be it a well-versed, well-cultured brahmin,
A cow, an elephant, a dog or a dog-eater,
A gnani, endowed with the knowledge of Brahman,
Treats them all alike,
As he finds the same Truth
Shining in each one of them.
ನಮ್ರರಾದ ಬ್ರಹ್ಮಜ್ಞಾನಿಗಳು, ನಿಜವಾದ ಜ್ಞಾನವನ್ನು ಪಡೆದವರಾದುದರಿಂದ, ವಿದ್ಯಾವಿನಯ ಸಂಪನ್ನನಾದ ಬ್ರಾಹ್ಮಣನನ್ನೂ, ಹಸುವನ್ನೂ, ಆನೆಯನ್ನೂ, ನಾಯಿಯನ್ನೂ, ನಾಯಿಯನ್ನು ತಿನ್ನುವವನನ್ನೂ, ಒಂದೇ ರೀತಿ ಸಮದರ್ಶಿತ್ವದಿಂದ ಕಾಣುತ್ತಾರೆ. ಏಕೆಂದರೆ ಪ್ರತಿಯೊಬ್ಬರಲ್ಲಿಯು ಒಂದೇ ಸತ್ಯವು ಪ್ರಕಾಶಿಸುತ್ತಿರುವದನ್ನು ಅವರು ಗುರುತಿಸುತ್ತಾರೆ.
इहैव तैर्जितः सर्गः
येषां साम्ये स्थितं मनः।
निर्दोषं हि समं ब्रह्म
तस्माद्ब्रह्मणि ते स्थिताः॥५.१९॥
ಇಹೈವ ತೈರ್ಜಿತಃ ಸರ್ಗಃ
ಯೇಷಾಂ ಸಾಮ್ಯೇ ಸ್ಥಿತಂ ಮನಃ ।
ನಿರ್ದೋಷಂ ಹಿ ಸಮಂ ಬ್ರಹ್ಮ
ತಸ್ಮಾದ್ ಬ್ರಹ್ಮಣಿ ತೇ ಸ್ಥಿತಾಃ ॥ 5-19॥
इहैव तैर्जितः सर्गो येषां साम्ये स्थितं मनः।
निर्दोषं हि समं ब्रह्म तस्माद्ब्रह्मणि ते स्थिताः॥५.१९॥
ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ ।
ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ ಬ್ರಹ್ಮಣಿ ತೇ ಸ್ಥಿತಾಃ ॥ 5-19॥
- Those who get their minds anchored
In the sameness they perceive
In each and everyone,
That is, the same Brahman shining
In each and everyone,
Conquer birth here, in this life only.
Brahman is the same, indeed,
Without any defects.
Hence they reside in the Brahman.
ಪ್ರತಿಯೊಬ್ಬರಲ್ಲಿಯೂ ಒಂದೇ ಬ್ರಹ್ಮನು ಪ್ರಕಾಶಿಸುತ್ತಿರುವುದಾಗಿ ಯಾರು ತಮ್ಮ ಮನಸ್ಸಿನಲ್ಲಿ ಭರವಸೆಯನ್ನಿರಿಸಿಕೊಂಡಿರುವರೋ ಅಂದರೆ ಯಾರ ಮನಸ್ಸು ಬ್ರಹ್ಮನಲ್ಲಿ ಸ್ಥಿರವಾಗಿ ಸಮಭಾವದಲ್ಲಿ ನಿಂತಿರುವುದೋ ಅವರು ಈ ಜನ್ಮದಲ್ಲಿಯೇ ಹುಟ್ಟು ಸಾವುಗಳ ಸ್ಥಿತಿಯನ್ನು ಗೆಲ್ಲುತ್ತಾರೆ. ಅವರು ಬ್ರಹ್ಮನಂತೆ ದೋಷರಹಿತರು. ಆದುದರಿಂದ ಅವರು ಬ್ರಹ್ಮನಲ್ಲಿಯೇ ಸ್ಥಿತರಾಗಿರುತ್ತಾರೆ.
न प्रहृष्येत्प्रियं प्राप्य
नोद्विजेत्प्राप्य चाप्रियम्।
स्थिरबुद्धिरसम्मूढः
ब्रह्मविद्ब्रह्मणि स्थितः॥५.२०॥
ನ ಪ್ರಹೃಷ್ಯೇತ್ಪ್ರಿಯಂ ಪ್ರಾಪ್ಯ
ನೋದ್ವಿಜೇತ್ಪ್ರಾಪ್ಯ ಚಾಪ್ರಿಯಮ್ ।
ಸ್ಥಿರಬುದ್ಧಿರಸಮ್ಮೂಢಃ
ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ॥ 5-20॥
न प्रहृष्येत्प्रियं प्राप्य नोद्विजेत्प्राप्य चाप्रियम्।
स्थिरबुद्धिरसम्मूढो ब्रह्मविद्ब्रह्मणि स्थितः॥५.२०॥
ನ ಪ್ರಹೃಷ್ಯೇತ್ಪ್ರಿಯಂ ಪ್ರಾಪ್ಯ ನೋದ್ವಿಜೇತ್ಪ್ರಾಪ್ಯ ಚಾಪ್ರಿಯಮ್ ।
ಸ್ಥಿರಬುದ್ಧಿರಸಮ್ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ॥ 5-20॥
- With a stable intellect,
Free from delusion,
And well-established in the Brahman,
The knower of Brahman
Does not feel elated
When he gains the pleasant,
Nor does he feel depressed
When he gets the unpleasant.
ಸ್ಥಿರಬುದ್ಧಿಯುಳ್ಳವನೂ, ಮೋಹವಿಲ್ಲದವನೂ, ಬ್ರಹ್ಮನಲ್ಲಿಯೇ ಸ್ಥಿರವಾಗಿ ಇರುವವನೂ ಆದ ಬ್ರಹ್ಮಜ್ಞಾನಿಯು ಪ್ರಿಯವಾದುದನ್ನು ಸಾಧಿಸಿದಾಗ ಹರ್ಷಿಸುವುದಿಲ್ಲ ಮತ್ತು ಅಪ್ರಿಯವಾದುದು ಘಟಿಸಿದಾಗ ಕುಗ್ಗುವುದೂ ಇಲ್ಲ.
बाह्यस्पर्शेष्वसक्तात्मा
विन्दत्यात्मनि यत्सुखम्।
स ब्रह्मयोगयुक्तात्मा
सुखमक्षयमश्नुते॥५.२१॥
ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ
ವಿಂದತ್ಯಾತ್ಮನಿ ಯತ್ಸುಖಮ್ ।
ಸ ಬ್ರಹ್ಮಯೋಗಯುಕ್ತಾತ್ಮಾ
ಸುಖಮಕ್ಷಯಮಶ್ನುತೇ ॥ 5-21॥
बाह्यस्पर्शेष्वसक्तात्मा विन्दत्यात्मनि यत्सुखम्।
स ब्रह्मयोगयुक्तात्मा सुखमक्षयमश्नुते॥५.२१॥
ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ ವಿಂದತ್ಯಾತ್ಮನಿ ಯತ್ಸುಖಮ್ ।
ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ ॥ 5-21॥
- He shows no interest
In the objects of the outer world,
But finds joy in himself.
His inner sense stands united with the Brahman –
Such a one is a Yogi
Who enjoys unending bliss.
ಶಬ್ದಾದಿ ಬಾಹ್ಯವಿಷಯಗಳಲ್ಲಿ, ಐಹಿಕ ಇಂದ್ರಿಯ ಸುಖದಲ್ಲಿ ಆಸಕ್ತನಾಗದವನು ಅಂತಃಕರಣದಲ್ಲಿ ವಿಷಯನಿರಪೇಕ್ಷವಾದ ಆಂತರ್ಯ ಸುಖವನ್ನು ಪಡೆಯುತ್ತಾನೆ. ಬ್ರಹ್ಮಯೋಗದಿಂದ ಕೂಡಿದ ಆತ್ಮವುಳ್ಳ ಈ ಯೋಗಿಯು ಬ್ರಹ್ಮಾನುಸಂಧಾನತತ್ಪರನಾಗಿ ಅಕ್ಷಯವಾದ ಸುಖವನ್ನು ಪಡೆಯುತ್ತಾನೆ.
ये हि संस्पर्शजा भोगा:
दुःखयोनय एव ते।
आद्यन्तवन्तः कौन्तेय
न तेषु रमते बुधः॥५.२२॥
ಯೇ ಹಿ ಸಂಸ್ಪರ್ಶಜಾ ಭೋಗಾಃ
ದುಃಖಯೋನಯ ಏವ ತೇ ।
ಆದ್ಯಂತವಂತಃ ಕೌಂತೇಯ
ನ ತೇಷು ರಮತೇ ಬುಧಃ ॥ 5-22॥
ये हि संस्पर्शजा भोगा दुःखयोनय एव ते।
आद्यन्तवन्तः कौन्तेय न तेषु रमते बुधः॥५.२२॥
ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ ।
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ ॥ 5-22॥
- Those pleasures
Arising out of contact
With the objects of senses
Indeed end up in pain and sorrow;
Arjuna, they have, moreover,
A beginning and an end.
So the Gnani is not pleased with them.
ವಿಷಯೇಂದ್ರಿಯಗಳ ಸಂಯೋಗದಿಂದ ಉಂಟಾದ ಭೋಗಗಳು ಯಾತನೆ ಮತ್ತು ದುಃಖದಲ್ಲಿ ಪರಿಸಮಾಪ್ತಿಯಾಗುತ್ತವೆ. ಅರ್ಜುನಾ! ಅಷ್ಟಲ್ಲದೆ ಇಂತಹ ಸುಖಗಳಿಗೆ ಆದಿಯೂ ಮತ್ತು ಅಂತ್ಯವೂ ಉಂಟು. ಅರ್ಥಾತ್ ವಿಷಯ ಸುಖಗಳು ಅನಿತ್ಯವಾಗಿವೆ. ಅವು ಕ್ಷಣಿಕವಾದುವುಗಳು. ಆದುದರಿಂದ ಜ್ಞಾನಿಯು ಅವುಗಳಲ್ಲಿ ಸಂತೋಷಪಡುವುದಿಲ್ಲ.
शक्नोतीहैव यः सोढुं
प्राक्शरीरविमोक्षणात्।
कामक्रोधोद्भवं वेगं
स युक्तः स सुखी नरः॥५.२३॥
ಶಕ್ನೋತೀಹೈವ ಯಃ ಸೋಢುಂ
ಪ್ರಾಕ್ಶರೀರವಿಮೋಕ್ಷಣಾತ್ ।
ಕಾಮಕ್ರೋಧೋದ್ಭವಂ ವೇಗಂ
ಸ ಯುಕ್ತಃ ಸ ಸುಖೀ ನರಃ ॥ 5-23॥
शक्नोतीहैव यः सोढुं प्राक्शरीरविमोक्षणात्।
कामक्रोधोद्भवं वेगं स युक्तः स सुखी नरः॥५.२३॥
ಶಕ್ನೋತೀಹೈವ ಯಃ ಸೋಢುಂ ಪ್ರಾಕ್ಶರೀರವಿಮೋಕ್ಷಣಾತ್ ।
ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ॥ 5-23॥
- He is the Yogi filled with aananda
Who is able to put up with
The forceful impact of the compulsions
Caused by Kama and Krodha,
Desire and Anger.
He remains so in this world itself
Before the body falls.
ಕಾಮ ಮತ್ತು ಕ್ರೋಧದಿಂದ ಉಂಟಾಗುವ ನಿರ್ಬಂಧಗಳ ಆವೇಗದ ಪರಿಣಾಮವನ್ನು ಯಾರು ಸಮರ್ಥವಾಗಿ ಸಹಿಸಿಕೊಳ್ಳಲು ಶಕ್ತನಾಗುವನೋ ಅವನೇ ಆನಂದ ಸ್ವರೂಪಿಯಾದ ಯೋಗಿಯಾಗಿರುತ್ತಾನೆ. ಅವನು ಈ ದೇಹವನ್ನು ಬಿಡುವುದಕ್ಕೆ ಮೊದಲೇ ಐಹಿಕ ಇಂದ್ರಿಯಗಳ ಬಯಕೆಗಳನ್ನು ಸಹಿಸಿಕೊಂಡು ಈ ಪ್ರಪಂಚದಲ್ಲಿರಬಲ್ಲನು. ಅರ್ಥಾತ್ ಬದುಕಿ ದೇಹದೊಡನೆ ಇರುವಾಗಲೇ ಕಾಮಕ್ರೋಧಗಳ ವೇಗವನ್ನು ಸಹಿಸಬಲ್ಲವನೇ ಯೋಗಿ. ಅವನೇ ಸುಖಿ.
योऽन्तःसुखोऽन्तराराम:
तथान्तर्ज्योतिरेव यः।
स योगी ब्रह्मनिर्वाणं
ब्रह्मभूतोऽधिगच्छति॥५.२४॥
ಯೋಽಂತಃಸುಖೋಽಂತರಾರಾಮಃ
ತಥಾಂತರ್ಜ್ಯೋತಿರೇವ ಯಃ ।
ಸ ಯೋಗೀ ಬ್ರಹ್ಮನಿರ್ವಾಣಂ
ಬ್ರಹ್ಮಭೂತೋಽಧಿಗಚ್ಛತಿ ॥ 5-24॥
योऽन्तःसुखोऽन्तरारामस्तथान्तर्ज्योतिरेव यः।
स योगी ब्रह्मनिर्वाणं ब्रह्मभूतोऽधिगच्छति॥५.२४॥
ಯೋಽಂತಃಸುಖೋಽಂತರಾರಾಮಃ ತಥಾಂತರ್ಜ್ಯೋತಿರೇವ ಯಃ ।
ಸ ಯೋಗೀ ಬ್ರಹ್ಮನಿರ್ವಾಣಂ ಬ್ರಹ್ಮಭೂತೋಽಧಿಗಚ್ಛತಿ ॥ 5-24॥
- He who revels within himself,
He who keeps sportive and playful within himself,
And he who remains self-illumined,
Is a Yogi who becomes Brahman,
Enjoying the Brahma Ananda.
ಯಾರು ಅಂತರಾತ್ಮದಲ್ಲಿಯೇ ಸುಖಪಡುವನೋ, ಯಾರು ಆಂತರ್ಯದಲ್ಲಿಯೇ ಕ್ರಿಯಾಶೀಲನಾಗಿದ್ದು ರಮಿಸುತ್ತಾನೆಯೋ, ಮತ್ತು ಯಾರು ಆತ್ಮನಲ್ಲಿಯೇ ಪ್ರಕಾಶವುಳ್ಳವನೋ ಅವನೇ ವಾಸ್ತವವಾಗಿ ಪರಿಪೂರ್ಣ ಯೋಗಿ. ಅವನು ಬ್ರಹ್ಮಾನಂದವನ್ನು ಅನುಭವಿಸಿ ಬ್ರಹ್ಮನಲ್ಲಿ ಐಕ್ಯನಾಗುತ್ತಾನೆ.
लभन्ते ब्रह्मनिर्वाणं
ऋषयः क्षीणकल्मषाः।
छिन्नद्वैधा यतात्मानः
सर्वभूतहिते रताः॥५.२५॥
ಲಭಂತೇ ಬ್ರಹ್ಮನಿರ್ವಾಣಂ
ಋಷಯಃ ಕ್ಷೀಣಕಲ್ಮಷಾಃ ।
ಛಿನ್ನದ್ವೈಧಾ ಯತಾತ್ಮಾನಃ
ಸರ್ವಭೂತಹಿತೇ ರತಾಃ ॥ 5-25॥
लभन्ते ब्रह्मनिर्वाणमृषयः क्षीणकल्मषाः।
छिन्नद्वैधा यतात्मानः सर्वभूतहिते रताः॥५.२५॥
ಲಭಂತೇ ಬ್ರಹ್ಮನಿರ್ವಾಣಮೃಷಯಃ ಕ್ಷೀಣಕಲ್ಮಷಾಃ ।
ಛಿನ್ನದ್ವೈಧಾ ಯತಾತ್ಮಾನಃ ಸರ್ವಭೂತಹಿತೇ ರತಾಃ ॥ 5-25॥
- Those seers
Who have their sins diminished,
Who get their doubts cleared,
Who exercise self-restraint,
And who promote the welfare of all human beings
Attain Liberation or Moksha in this life itself.
ಯಾರು ಪಾಪರಹಿತರೋ, ಯಾರು ಸಂದೇಹಗಳಿಂದ ಉದ್ಭವವಾಗುವ ದ್ವಂದ್ವಗಳನ್ನು ಮೀರಿರುವರೋ, ಯಾರು ಜಿತೇಂದ್ರಿಯರೋ, ಯಾರು ಸ್ವಯಂ ನಿಗ್ರಹವುಳ್ಳವರೋ, ಯಾರು ಎಲ್ಲ ಜೀವಿಗಳ ಹಿತಕ್ಕಾಗಿ ಸದಾ ಶ್ರಮಿಸುವರೋ ಮತ್ತು ಯಾರು ಎಲ್ಲ ಪಾಪಗಳಿಂದ ಮುಕ್ತರಾಗಿರುವರೋ ಅವರು ಈ ಜನ್ಮದಲ್ಲಿಯೇ ಮೋಕ್ಷವನ್ನು ಹೊಂದುತ್ತಾರೆ.
कामक्रोधवियुक्तानां
यतीनां यतचेतसाम्।
अभितो ब्रह्मनिर्वाणं
वर्तते विजितात्म नाम्॥५.२६॥
ಕಾಮಕ್ರೋಧವಿಯುಕ್ತಾನಾಂ
ಯತೀನಾಂ ಯತಚೇತಸಾಮ್ ।
ಅಭಿತೋ ಬ್ರಹ್ಮನಿರ್ವಾಣಂ
ವರ್ತತೇ ವಿದಿತಾತ್ಮನಾಮ್ ॥ 5-26॥
कामक्रोधवियुक्तानां यतीनां यतचेतसाम्।
अभितो ब्रह्मनिर्वाणं वर्तते विजितात्म नाम्॥५.२६॥
ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಮ್ ।
ಅಭಿತೋ ಬ್ರಹ್ಮನಿರ್ವಾಣಂ ವರ್ತತೇ ವಿದಿತಾತ್ಮನಾಮ್ ॥ 5-26॥
- Those Yogis
Who are free from kama and krodha,
Desire and anger,
Who possess self-restraint,
And who have acquired the knowledge of Brahman
Attain Moksha, the Eternal Bliss,
While living in the body
As well as after leaving the body.
ಕಾಮಕ್ರೋಧಗಳಿಂದ ಬಿಡುಗಡೆಯನ್ನು ಹೊಂದಿರುವವರೂ, ಮನಸ್ಸನ್ನು ವಶದಲ್ಲಿಟ್ಟುಕೊಂಡು ಸ್ವಯಂ ಶಿಸ್ತಿರುವವರೂ, ನಿರಂತರವಾಗಿ ಪರಿಪೂರ್ಣತೆಗಾಗಿ ಶ್ರಮಿಸಿ ಬ್ರಹ್ಮಜ್ಞಾನವನ್ನು ಪಡೆದವರೂ ಆದ ಯೋಗಿಗಳು ಈ ದೇಹದಲ್ಲಿ ಜೀವಂತವಾಗಿರುವಾಗಲೂ ಹಾಗೂ ದೇಹತ್ಯಾಗ ಮಾಡಿದ ನಂತರವೂ ಬ್ರಹ್ಮನಿರ್ವಾಣ ಅಂದರೆ ಮೋಕ್ಷವನ್ನು ಹೊಂದುತ್ತಾರೆ.
स्पर्शान्कृत्वा बहिर्बाह्यान्
चक्षुश्चैवान्तरे भ्रुवोः।
प्राणापानौ समं कृत्वा
नासाभ्यन्तरचiरिणौ॥५.२७॥
ಸ್ಪರ್ಶಾನ್ಕೃತ್ವಾ ಬಹಿರ್ಬಾಹ್ಯಾನ್
ಚಕ್ಷುಶ್ಚೈವಾಂತರೇ ಭ್ರುವೋಃ ।
ಪ್ರಾಣಾಪಾನೌ ಸಮಂ ಕೃತ್ವಾ
ನಾಸಾಭ್ಯಂತರಚಾರಿಣೌ ॥ 5-27॥
यतेन्द्रियमनोबुद्धि:
मुनिर्मोक्षपरायणः।
विगतेच्छाभयक्रोध:
यः सदा मुक्त एव सः॥५.२८॥
ಯತೇಂದ್ರಿಯಮನೋಬುದ್ಧಿಃ
ಮುನಿರ್ಮೋಕ್ಷಪರಾಯಣಃ ।
ವಿಗತೇಚ್ಛಾಭಯಕ್ರೋಧಃ
ಯಃ ಸದಾ ಮುಕ್ತ ಏವ ಸಃ ॥ 5-28॥
स्पर्शान्कृत्वा बहिर्बाह्याञ्श्चक्षुश्चैवान्तरे भ्रुवोः।
प्राणापानौ समं कृत्वा नासाभ्यन्तरचiरिणौ॥५.२७॥
ಸ್ಪರ್ಶಾನ್ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶ್ಚೈವಾಂತರೇ ಭ್ರುವೋಃ ।
ಪ್ರಾಣಾಪಾನೌ ಸಮಂ ಕೃತ್ವಾ ನಾಸಾಭ್ಯಂತರಚಾರಿಣೌ ॥ 5-27॥
यतेन्द्रियमनोबुद्धिः मुनिर्मोक्षपरायणः।
विगतेच्छाभयक्रोधः यः सदा मुक्त एव सः॥५.२८॥
ಯತೇಂದ್ರಿಯಮನೋಬುದ್ಧಿಃ ಮುನಿರ್ಮೋಕ್ಷಪರಾಯಣಃ ।
ವಿಗತೇಚ್ಛಾಭಯಕ್ರೋಧಃ ಯಃ ಸದಾ ಮುಕ್ತ ಏವ ಸಃ ॥ 5-28॥t
The Yogi
Who keeps out all contacts
With the external world,
Who fixes the eye sight
In between the eye brows,
Equalizing prana and apana,
The in-breath and the out-breath,
Which flow through the nostrils,
In a state of Kumbhaka,
Who gains control over the senses, mind and intellect,
And who keeps free from desire, fear and anger,
And is intent on attaining Liberation,
Attains and remains in the state of Liberation
For ever, indeed.
ಆಧ್ಯಾತ್ಮವಾದಿಯು ಬಾಹ್ಯ ವಿಷಯ ಚಿಂತನೆಯನ್ನು ತ್ಯಜಿಸಿ, ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸಿ, ಶ್ವಾಸೋಚ್ಚಾಸ ಅಂದರೆ ಮೂಗಿನ ಹೊಳ್ಳೆಗಳ ಮೂಲಕ ಸಂಚರಿಸುವ ಪ್ರಾಣಾಪಾನ ವಾಯುವನ್ನು ಕುಂಭಕ ಸ್ಥಿತಿಯಲ್ಲಿ ಸಮೀಕರಿಸಿ, ಇಂದ್ರಿಯ ಮನೋಬುದ್ಧಿಗಳನ್ನು ನಿಗ್ರಹಿಸಿ, ಆಸೆ, ಭಯ ಮತ್ತು ಕ್ರೋಧಗಳಿಂದ ಮುಕ್ತನಾಗಿ, ಮೋಕ್ಷಪರಾಯಣನಾಗಿರುತ್ತಾನೆ. ಇಂತಹ ಯೋಗಿಯು ಮೋಕ್ಷವನ್ನು ಹೊಂದಿ ಸದಾ ಮುಕ್ತನಾಗಿರುತ್ತಾನೆ.
भोक्तारं यज्ञतपसां
सर्वलोकमहेश्वरं।
सुहृदं सर्वभूतानां
ज्ञात्वा मां शान्तिमृच्छति॥५.२९॥
ಭೋಕ್ತಾರಂ ಯಜ್ಞತಪಸಾಂ
ಸರ್ವಲೋಕಮಹೇಶ್ವರಮ್ ।
ಸುಹೃದಂ ಸರ್ವಭೂತಾನಾಂ
ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ॥ 5-29॥
भोक्तारं यज्ञतपसां सर्वलोकमहेश्वरं।
सुहृदं सर्वभूतानां ज्ञात्वा मां शान्तिमृच्छति॥५.२९॥
ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್ ।
ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ॥ 5-29॥
- The Yogi who knows Me
As the partaker of the yagna
As well as the tapas,
As the Supreme Lord of all the worlds,
And as the friend and well-wisher
Of all the beings, —
Such a yogi attains Peace.
ತಪೋಯಜ್ಞ ಫಲಗಳ ಭೋಕ್ತನೂ, ಸರ್ವಲೋಕಗಳ ಮತ್ತು ದೇವತೆಗಳ ಪರಮ ಪ್ರಭುವು, ಸಮಸ್ತ ಭೂತಗಳಿಗೆ ಉಪಕಾರಿಯೂ, ಹಿತೈಷಿಯೂ ಮತ್ತು ಆಪ್ತ ಮಿತ್ರನೂ ಆದ ನನ್ನನ್ನು ಅರಿತ ಯೋಗಿಯು ಐಹಿಕ ದುಃಖಗಳ ಯಾತನೆಯಿಂದ ಮುಕ್ತನಾಗಿ ಶಾಂತಿಯನ್ನು ಪಡೆಯುತ್ತಾನೆ.
ऒम् तत्सदिति
ಓಂ ತತ್ಸದಿತಿ
श्रीमद्भगवद्गितासू
ಶ್ರೀಮದ್ಭಗವದ್ಗೀತಾಸೂ
उपनिषत्सु
ಉಪನಿಷತ್ಸು
ब्रह्म विद्यायां
ಬ್ರಹ್ಮವಿದ್ಯಾಯಾಂ
यॊगशास्त्रॆ
ಯೋಗಶಾಸ್ತ್ರೇ
श्रीकृष्णार्जुनसंवादॆ
ಶ್ರೀಕೃಷ್ಣಾರ್ಜುನಸಂವಾದೇ
कर्मसन्यासयोगो नाम
ಕರ್ಮಸನ್ಯಾಸಯೋಗೋ ನಾಮ
पञ्चमोद्ध्यायः
ಪಂಚಮೋಧ್ಯಾಯಃ
ऒं ततसत्
ಓಂ ತತ್ಸತ್
ಓಂ ತತ್ಸತ್ ಇತಿ
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಕರ್ಮಸನ್ಯಾಸಯೋಗವೆಂಬ ಹೆಸರಿನ ಐದನೆಯ ಅಧ್ಯಾಯವು ಮುಗಿದುದು.
The End of Chapter Five