अथज्ञानविज्ञानयोगो नाम सप्तमोऽध्यायः
CHAPTER SEVEN: GNANA VIGNANA YOGA
Published by LANKA KRISHNA MURTI FOUNDATION
(https://www.facebook.com/lankakrishnamurtifoundation/)
Website (https://krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
We have completed the first six chapters in this Divine-Human Discourse, KrishnaarjunaSamvaada. They constitute one unit that is generally referred to, by many commentators, as Karma Shatkam. They mainly deal with the theme of Karma. Krishna defines the term Karma and describes different kinds of Karma. He advises Arjuna to become a Karma Yogi by practicing Nishkama Karma. It involves
a. cultivating a steady and detached outlook;
b. renouncing the fruits if all actions; and
c. making all actions as devotional offerings to the Supreme Self.
In the next six chapters, ch.7 to ch.12, which go by the name Bhakti Shatka, Krishma first educates Arjuna on the Knowledge of the Supreme Self, Brahman, and then reveals His Cosmic Form, Vishvaruapa. He specifies Bhakti as the means to attain Mukti or Liberation.
In the last six chapters, ch. 13 to ch.18, known as Gnana Shatka, Krishna further educates Arjuna on how the individual self is related to Prakriti as well as to the Supreme Self. With the help of Nishkama Karma and intense devotion, the spiritual aspirant gets his inner instruments, antahkarana, completely cleansed. It is then that Gnana or Wisdom dawns and Mukti or Liberation happens.
The effect of Krishna’s long Discourse is seen in Arjuna’s transformation from a state of delusion and uncertainty to one of total surrender, acceptance and obedience.
We will notice, at the end, that this long Divine-Human Discourse is not only an excellent treatise on Brahma Gnana or the Knowledge and Realisation of Brahman but also, more importantly, a Work Book that helps every one to work out one’s own goal of Liberation or Mukti.
———————–
ಏಳನೆಯ ಅಧ್ಯಾಯ: ಜ್ಞಾನ ವಿಜ್ಞಾನ ಯೋಗ
ನರನಾರಾಯಣರ ನಡುವೆ ಉಂಟಾದ ವ್ಯಾಖ್ಯಾನ ಅಂದರೆ ಶ್ರೀ ಕೃಷ್ಣಾರ್ಜುನ ಸಂವಾದದಲ್ಲಿನ ಮೊದಲ ಆರು ಅಧ್ಯಾಯಗಳನ್ನು ನಾವು ಮುಗಿಸಿದ್ದೇವೆ. ಹಲವಾರು ವ್ಯಾಖ್ಯಾನಕಾರರು ಹೇಳಿರುವಂತೆ ಈ ಆರು ಅಧ್ಯಾಯಗಳ ಓಂದು ಘಟ್ಟವು “ ಕರ್ಮ ಷಟ್ಕ” ಎಂದು ಕರೆಯಲ್ಪಡುತ್ತದೆ. ಇಲ್ಲಿ ಪ್ರಮುಖವಾಗಿ ಕರ್ಮ ಸಿದ್ಧಾಂತವನ್ನು ಚರ್ಚಿಸಲಾಗಿದೆ. ಕರ್ಮ ಎಂದರೇನೆಂಬುದನ್ನು ಹಾಗೂ ವಿವಿಧ ಕರ್ಮಗಳ ಬಗ್ಗೆ ಶ್ರೀ ಕೃಷ್ಣನು ಅರ್ಜುನನಿಗೆ ವಿಷದವಾಗಿ ತಿಳಿಹೇಳುತ್ತಾನೆ. ನಿಷ್ಕಾಮ ಕರ್ಮವನ್ನು ಆಚರಿಸಿ ಕರ್ಮಯೋಗಿಯಾಗು ಎಂಬುದಾಗಿ ಶ್ರೀ ಕೃಷ್ಣನು ಅರ್ಜುನನಿಗೆ ಉಪದೇಶಿಸುತ್ತಾನೆ. ನಿಷ್ಕಾಮ ಕರ್ಮದಲ್ಲಿ ಮುಖ್ಯವಾಗಿ ಈ ಕೆಳಗಿನ ಮೂರು ಅಂಶಗಳು ಒಳಗೊಂಡಿರುತ್ತವೆ.
1. ನಿರ್ಲಿಪ್ತ ಹಾಗೂ ಸ್ಥಿರವಾದ ದೃಷ್ಟಿಕೋನವನ್ನು ಪಾಲಿಸುವುದು.
2. ಎಲ್ಲ ಕರ್ಮಫಲಗಳನ್ನು ತ್ಯಜಿಸುವುದು.
3. ತಾನು ಮಾಡುವ ಎಲ್ಲ ಕರ್ಮಗಳನ್ನೂ ಪರಮಾತ್ಮನಿಗೆ ಭಕ್ತಿಪೂರ್ವಕವಾಗಿ ಅರ್ಪಿಸುವುದು.
“ಭಕ್ತಿ ಷಟ್ಕ” ಎಂದು ಕರೆಯಲ್ಪಡುವ ಮುಂದಿನ ಆರು ಅಧ್ಯಾಯಗಳಲ್ಲಿ ಅಂದರೆ ಏಳನೆಯ ಅಧ್ಯಾಯದಿಂದ ಹನ್ನೆರಡನೆಯ ಅಧ್ಯಾಯದವರೆಗಿನ ಶ್ಲೋಕಗಳಲ್ಲಿ, ಮೊದಲಿಗೆ ಶ್ರೀ ಕೃಷ್ಣನು ಅರ್ಜುನನಿಗೆ, ಪರಮಾತ್ಮನ ಬಗೆಗಿನ ಜ್ಞಾನ ಹಾಗೂ ಬ್ರಹ್ಮತತ್ವದ ಬಗ್ಗೆ ಬೋಧಿಸುತ್ತಾನೆ. ನಂತರ ತನ್ನ ವಿಶ್ವ ರೂಪವನ್ನು ತೋರಿಸುತ್ತಾನೆ. ಮೋಕ್ಷ ಅಥವಾ ಮುಕ್ತಿಯನ್ನು ಹೊಂದಲು ಬೇಕಾದ ಭಕ್ತಿಮಾರ್ಗದ ಬಗ್ಗೆ ವಿಷದವಾಗಿ ವಿವರಿಸುತ್ತಾನೆ.
“ಜ್ಞಾನ ಷಟ್ಕ” ಎಂದು ಕರೆಯಲ್ಪಡುವ ಕೊನೆಯ ಆರು ಅಧ್ಯಾಯಗಳು ಅಂದರೆ 13ನೆಯ
ಅಧ್ಯಾಯದಿಂದ 18ನೆಯ ಅಧ್ಯಾಯದವರೆಗಿನ ಶ್ಲೋಕಗಳಲ್ಲಿ, ಹೇಗೆ ಆತ್ಮನು ಪ್ರಕೃತಿ ಹಾಗೂ
ಪರಮಾತ್ಮನೊಡನೆ ಸಂಬಂಧವನ್ನು ಹೊಂದಿರುವನು ಎಂಬ ಬಗ್ಗೆ ಶ್ರೀ ಕೃಷ್ಣನು, ಅರ್ಜುನನಿಗೆ
ಬೋಧಿಸುತ್ತಾನೆ. ನಿಷ್ಕಾಮ ಕರ್ಮ ಮತ್ತು ಅಗಾಧ ಭಕ್ತಿಯ ಸಹಾಯದಿಂದ ಆಧ್ಯಾತ್ಮಯೋಗಕ್ಕಾಗಿ
ಹಂಬಲಿಸುವವನು, ತನ್ನ ಅಂತಃಕರಣವನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತಾನೆ. ಅದಾದ ಬಳಿಕವಷ್ಟೇ
ಪ್ರಜ್ಞೆ ಹಾಗೂ ಜ್ಞಾನ ಉದಯಿಸಿ ಮುಕ್ತಿ ಉಂಟಾಗುತ್ತದೆ.
ಸಂದಿಗ್ಧತೆ, ಭ್ರಮೆ, ಮೋಹ, ಮತ್ತು ಭ್ರಾಂತಿಯ ಸ್ಥಿತಿಯಿಂದ, ಸಂಪೂರ್ಣ ಶರಣಾಗತಿ,
ವಿಧೇಯತೆ ಮತ್ತು ಸಮ್ಮತಿಯ ಸ್ಥಿತಿಯೆಡೆಗೆ ಅರ್ಜುನನಲ್ಲಾಗುವ ಪರಿವರ್ತನೆಯನ್ನು, ಶ್ರೀ ಕೃಷ್ಣನ
ದೀರ್ಘವಾದ ಪ್ರವಚನದಲ್ಲಿ ಕಾಣಬಹುದಾಗಿದೆ.
ನರ-ನಾರಾಯಣರ ನಡುವೆ ನಡೆದ ಈ ದೀರ್ಘ ಸಂವಾದ, ಬ್ರಹ್ಮಜ್ಞಾನದ ಅರಿವನ್ನು
ಮೂಡಿಸುವ ಸದ್ಗ್ರಂಥವಷ್ಟೇ ಅಲ್ಲದೆ, ಪ್ರಮುಖವಾಗಿ ಪ್ರತಿಯೊಬ್ಬರಿಗೂ ತಮ್ಮ ಮುಕ್ತಿಸಾಧನೆಯ ಗುರಿಯೆಡೆಗೆ
ಸಾಗಲು ಸಹಾಯ ಮಾಡುವ ಕೈಪಿಡಿಯಾಗಿದೆ ಎಂಬುದನ್ನು ನಾವು ಅಂತ್ಯದಲ್ಲಿ ಗಮನಿಸುತ್ತೇವೆ.
अथज्ञानविज्ञानयोगो नाम सप्तमोऽध्यायः
ಅಥಜ್ಞಾನವಿಜ್ಞಾನಯೋಗೋ ನಾಮ ಸಪ್ತಮೋಽಧ್ಯಾಯಃ
श्रीभगवानुवाच
मय्यासक्तमनाः पार्थ
योगं युञ्जन्मदाश्रयः।
असंशयं समग्रं मां
यथा ज्ञास्यसि तच्छृणु॥७.१॥
ಶ್ರೀಭಗವಾನುವಾಚ ।
ಮಯ್ಯಾಸಕ್ತಮನಾಃ ಪಾರ್ಥ
ಯೋಗಂ ಯುಂಜನ್ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ
ಯಥಾ ಜ್ಞಾಸ್ಯಸಿ ತಚ್ಛೃಣು ॥ 7-1॥
मय्यासक्तमनाः पार्थ योगं युञ्जन्मदाश्रयः।
असंशयं समग्रं मां यथा ज्ञास्यसि तच्छृणु॥७.१॥
ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ॥ 7-1॥
Sri Bhagavan said:
1. Listen to me, Arjuna,
I shall explain to you
How you will acquire complete Knowledge
Of My Glory. Majesty and Power,
If you set your mind firmly on Me
And, while practicing Karma Yoga,
If you take refuge in Me completely.
Surely you will get that knowledge.
ಶ್ರೀ ಭಗವಂತನು ಹೇಳಿದನು:
ಹೇ ಅರ್ಜುನಾ! ನನ್ನಲ್ಲಿಯೇ ಸ್ಥಿರವಾಗಿ ಮನಸ್ಸಿಟ್ಟು, ನಾನೇ ಗತಿ ಎಂದು ನಂಬಿ, ನನ್ನನೇ ಆಶ್ರಯಿಸಿದವನಾಗಿ ಯೋಗವನ್ನು ಆಚರಿಸುತ್ತಾ ಸಂಪೂರ್ಣವಾಗಿಯೂ, ನಿಸ್ಸಂಶಯವಾಗಿಯೂ ನನ್ನ ಭವ್ಯತೆಯನ್ನು, ಘನತೆಯನ್ನು ಮತ್ತು ಶಕ್ತಿಯನ್ನು ಹೇಗೆ ತಿಳಿದುಕೊಳ್ಳಬಹುದೆಂದು ಹೇಳುತ್ತೇನೆ, ಕೇಳು. ಖಂಡಿತವಾಗಿಯೂ ನಿನಗೆ ಜ್ಞಾನೋದಯ ಆಗುತ್ತದೆ.
ज्ञानं तेऽहंसविज्ञानं
इदं वक्ष्याम्यशेषतः।
यज्ज्ञात्वा नेह भूयोन्यत्
ज्ञातव्यमवशिष्यते॥७.२॥
ಜ್ಞಾನಂ ತೇಽಹಂ ಸವಿಜ್ಞಾನಂ
ಇದಂ ವಕ್ಷ್ಯಾಮ್ಯಶೇಷತಃ ।
ಯಜ್ಜ್ಞಾತ್ವಾ ನೇಹ ಭೂಯೋಽನ್ಯತ್
ಜ್ಞಾತವ್ಯಮವಶಿಷ್ಯತೇ ॥ 7-2॥
ज्ञानं तेऽहं सविज्ञानमिदं वक्ष्याम्यशेषतः।
यज्ज्ञात्वा नेह भूयोऽन्यज्ज्ञातव्यमवशिष्यते॥७.२॥
ಜ್ಞಾನಂ ತೇಽಹಂ ಸವಿಜ್ಞಾನಂ ಇದಂ ವಕ್ಷ್ಯಾಮ್ಯಶೇಷತಃ ।
ಯಜ್ಜ್ಞಾತ್ವಾ ನೇಹ ಭೂಯೋಽನ್ಯತ್ ಜ್ಞಾತವ್ಯಮವಶಿಷ್ಯತೇ ॥ 7-2॥
2. I shall explain to you
In detail, exhaustively,
That Knowledge of Brahman
Along with the means of its realization,
By knowing which
Nothing remains whatever
To be known further.
ಈಗ ನಾನು ನಿನಗೆ ವಿವರವಾಗಿಯೂ ಹಾಗೂ ವಿಷದವಾಗಿಯೂ ಬ್ರಹ್ಮಜ್ಞಾನವನ್ನು ಮತ್ತು ಅದನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ವಿಧಾನವನ್ನು ತಿಳಿಸಿಕೊಡುತ್ತೇನೆ. ಇದನ್ನು ಅರಿತುಕೊಂಡ ಮೇಲೆ ನೀನು ತಿದ್ದುಕೊಳ್ಳಬೇಕಾದದ್ದು ಏನೂ ಇರುವುದಿಲ್ಲ.
मनुष्याणां सहस्रेषु
कश्चिद्यतति सिद्धये।
यततामपि सिद्धानां
कश्चित् मां वेत्ति तत्वतः॥७.३॥
ಮನುಷ್ಯಾಣಾಂ ಸಹಸ್ರೇಷು
ಕಶ್ಚಿದ್ಯತತಿ ಸಿದ್ಧಯೇ ।
ಯತತಾಮಪಿ ಸಿದ್ಧಾನಾಂ
ಕಶ್ಚಿತ್ ಮಾಂ ವೇತ್ತಿ ತತ್ತ್ವತಃ ॥ 7-3॥
मनुष्याणां सहस्रेषु कश्चिद्यतति सिद्धये।
यततामपि सिद्धानां कश्चित् मां वेत्ति तत्वतः॥७.३॥
ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ ।
ಯತತಾಮಪಿ ಸಿದ್ಧಾನಾಂ ಕಶ್ಚಿತ್ ಮಾಂ ವೇತ್ತಿ ತತ್ತ್ವತಃ ॥ 7-3॥
3.
It is only one in a thousand
Who makes an effort to get
The Knowledge of Brahman.
Even among such seekers of the Truth
Only one person succeeds
In getting at the Truth.
ಸಾವಿರಾರು ಮನುಷ್ಯರಲ್ಲಿ ಬ್ರಹ್ಮಜ್ಞಾನ ಸಿದ್ಧಿಗಾಗಿ ಯಾರೋ ಒಬ್ಬನು ಪ್ರಯತ್ನಿಸಿ ಪರಿಶ್ರಮ ಪಡುತ್ತಾನೆ. ಅಂತಹ ಯತ್ನ ಮಾಡುವ ಸತ್ಯಾನ್ವೇಷಿಗಳಲ್ಲೂ ಯೋರೋ ಒಬ್ಬನು ನನ್ನನ್ನು ಯಥಾರ್ಥವಾಗಿ ತಿಳಿಯಲು, ಸತ್ಯವನ್ನು ಅರಿಯಲು ಶಕ್ಯನಾಗುತ್ತಾನೆ.
भूमिरापोऽनलो वायुः
खं मनो बुद्धिरेव च।
अहङ्कार इतीयं मे
भिन्ना प्रकृतिरष्टधा॥७.४॥
ಭೂಮಿರಾಪೋಽನಲೋ ವಾಯುಃ
ಖಂ ಮನೋ ಬುದ್ಧಿರೇವ ಚ ।
ಅಹಂಕಾರ ಇತೀಯಂ ಮೇ
ಭಿನ್ನಾ ಪ್ರಕೃತಿರಷ್ಟಧಾ ॥ 7-4॥
भूमिरापोऽनलो वायुः खं मनो बुद्धिरेव च।
अहङ्कार इतीयं मे भिन्ना प्रकृतिरष्टधा॥७.४॥
ಮಿರಾಪೋಽನಲೋ ವಾಯುಃ ಖಂ ಮನೋ ಬುದ್ಧಿರೇವ ಚ ।
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ॥ 7-4॥
4. Know that
My Nature or Prakruti
Is made up of
Eight Distinctive Features:
The earth, water, fire, air, space,
Mind, intellect and the ego-sense.
This is my Lower Nature, AparaPrakruti.
ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ ಎಂಬ ಈ ಎಂಟು ವಿಧಗಳಿಂದ ನನ್ನ ಪ್ರಕೃತಿಯು ಮಾಡಲ್ಪಟ್ಟಿದೆ. ಇದು ನನ್ನ ಅಪರಾಪ್ರಕೃತಿ, ಅಂದರೆ ಕೆಳಸ್ತರದ ಪರಕೃತಿ ಎಂದು ತಿಳಿ. अपरेयमितस्त्वन्यां
प्रकृतिं विद्धि मे पराम्।
जीवभूतां महाबाहो
ययेदं धार्यते जगत्॥७.५॥
ಅಪರೇಯಮಿತಸ್ತ್ವನ್ಯಾಂ
ಪ್ರಕೃತಿಂ ವಿದ್ಧಿ ಮೇ ಪರಾಮ್ ।
ಜೀವಭೂತಾಂ ಮಹಾಬಾಹೋ
ಯಯೇದಂ ಧಾರ್ಯತೇ ಜಗತ್ ॥ 7-5॥
अपरेयमितस्त्वन्यां प्रकृतिं विद्धि मे पराम्।
जीवभूतां महाबाहो ययेदं धार्यते जगत्॥७.५॥
ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಮ್ ।
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ ॥ 7-5॥
5. There is another Prakruti of mine,
Arjuna, it is Para Prakruti,
The Higher one, the Living one.
It is the Living Nature of mine
That sustains the whole world.
ಎಲೈ ಅರ್ಜುನಾ! ನನ್ನ ಇನ್ನೊಂದು ಪ್ರಕೃತಿಯೂ ಇದೆ. ಅದು ಪರಾಪ್ರಕೃತಿ. ಇದು ಮೇಲಿನ ಸ್ತರದ ಮತ್ತು ಜೀವಂತ ಪ್ರಕೃತಿಯಾಗಿದೆ. ಅದು ಜೀವರೂಪವಾದದ್ದು, ಚೈತನ್ಯ ರೂಪಿ. ಅದರಿಂದಲೇ ಈ ಸಮಸ್ತ ಜಗತ್ತು ಧರಿಸಲ್ಪಟ್ಟಿರುತ್ತದೆ. एतद्योनीनि भूतानि
सर्वाणीत्युपधारय।
अहं कृत्स्नस्य जगतः
प्रभवः प्रलयस्तथा॥७.६॥
ಏತದ್ಯೋನೀನಿ ಭೂತಾನಿ
ಸರ್ವಾಣೀತ್ಯುಪಧಾರಯ ।
ಅಹಂ ಕೃತ್ಸ್ನಸ್ಯ ಜಗತಃ
ಪ್ರಭವಃ ಪ್ರಲಯಸ್ತಥಾ ॥ 7-6॥
एतद्योनीनि भूतानि सर्वाणीत्युपधारय।
अहं कृत्स्नस्य जगतः प्रभवः प्रलयस्तथा॥७.६॥
ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ ।
ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ ॥ 7-6॥
6. Know that all the beings in the world
Are born of my Dual Nature –
Para and Apara.
I am the source of Creation
Of the entire world;
I am also the source
Of its Dissolution.
ಈ ನನ್ನ ಪರಾ ಮತ್ತು ಅಪರಾ ಪ್ರಕೃತಿಗಳಿಂದಲೇ ಜಡಚೇತನಗಳಾದ ಸರ್ವಭೂತಗಳು ಉತ್ಪನ್ನವಾಗುತ್ತಿವೆ. ನಾನು ಸಮಸ್ತ ಜಗತ್ತಿನ ಸೃಷ್ಟಿ ಮತ್ತು ಪ್ರಳಯಗಳಿಗೆ ಮೂಲ ಕಾರಣನೆಂದು ತಿಳಿ.
मत्तः परतरं नान्यत्
किञ्चिदस्ति धनञ्जय।
मयि सर्वमिदं प्रोतं
सूत्रे मणिगणा इव॥७.७॥
ಮತ್ತಃ ಪರತರಂ ನಾನ್ಯತ್
ಕಿಂಚಿದಸ್ತಿ ಧನಂಜಯ ।
ಮಯಿ ಸರ್ವಮಿದಂ ಪ್ರೋತಂ
ಸೂತ್ರೇ ಮಣಿಗಣಾ ಇವ ॥ 7-7॥
मत्तः परतरं नान्यत् किञ्चिदस्ति धनञ्जय।
मयि सर्वमिदं प्रोतं सूत्रे मणिगणा इव॥७.७॥
ಮತ್ತಃ ಪರತರಂ ನಾನ್ಯತ್ ಕಿಂಚಿದಸ್ತಿ ಧನಂಜಯ ।
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ॥ 7-7॥
7. There is nothing other than Me, whatsoever.
Arjuna, everything depends on Me.
I am like the thread
That keeps the gems strung together.
ಎಲೈ ಅರ್ಜುನ, ನನಗಿಂತ ಶ್ರೇಷ್ಠತರವಾದ ವಸ್ತುವು ಬೇರೆಯಾವುದೂ ಇಲ್ಲ. ನನಗಿಂತ ಶ್ರೇಷ್ಠವಾದ ಸತ್ಯವಿಲ್ಲ. ಸಕಲವೂ ನನ್ನ ಮೇಲೆ ಆಧಾರಪಟ್ಟಿವೆ. ಮಣಿಗಳನ್ನು ಪೋಣಿಸಿ ಹಿಡಿದಿಟ್ಟ ದಾರದಂತೆ ನಾನಿದ್ದೇನೆ.
रसोहमप्सु कौन्तेय
प्रभास्मि शशिसूर्ययोः।
प्रणवः सर्ववेदेषु
शब्दः खे पौरुषं नृषु॥७.८॥
ರಸೋಽಹಮಪ್ಸು ಕೌಂತೇಯ
ಪ್ರಭಾಸ್ಮಿ ಶಶಿಸೂರ್ಯಯೋಃ ।
ಪ್ರಣವಃ ಸರ್ವವೇದೇಷು
ಶಬ್ದಃ ಖೇ ಪೌರುಷಂ ನೃಷು ॥ 7-8॥
रसोहमप्सु कौन्तेय प्रभास्मि शशिसूर्ययोः।
प्रणवः सर्ववेदेषु शब्दः खे पौरुषं नृषु॥७.८॥
ರಸೋಽಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ ।
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು ॥ 7-8॥
8. Of water I am the rasa or essence;
Of the sun and the moon I am the brightness
Of all the Vedas I am the sacred sound AUM;
Of the space or akasha I am the inherent sound;
And in men I am the manliness.
ಹೇ ಅರ್ಜುನಾ, ನಾನು ಜಲದಲ್ಲಿ ರಸ ಸ್ವರೂಪ ಅಥವಾ ಮೂಲತತ್ವವಾಗಿರುವೆನು. ಸೂರ್ಯಚಂದ್ರರಲ್ಲಿ ಪ್ರಕಾಶವಾಗಿದ್ದೇನೆ. ಸರ್ವ ವೇದಗಳಲ್ಲಿ ಪವಿತ್ರ ಪ್ರಣವ ಶಬ್ದವಾದ ಓಂಕಾರವಾಗಿದ್ದೇನೆ. ಆಕಾಶದಲ್ಲಿ ಅಂತರ್ಜಾತ ಶಬ್ದವಾಗಿದ್ದೇನೆ ಮತ್ತು ಪುರುಷರಲ್ಲಿ ಪೌರುಷವಾಗಿದ್ದೇನೆ
पुण्यो गन्धः पृथिव्यां च
तेजश्चास्मि विभावसोः।
जीवनं सर्वभूतेषु
तपश्चास्मि तपस्विषु॥७.९॥
ಪುಣ್ಯೋ ಗಂಧಃ ಪೃಥಿವ್ಯಾಂ ಚ
ತೇಜಶ್ಚಾಸ್ಮಿ ವಿಭಾವಸೌ ।
ಜೀವನಂ ಸರ್ವಭೂತೇಷು
ತಪಶ್ಚಾಸ್ಮಿ ತಪಸ್ವಿಷು ॥ 7-9॥
पुण्यो गन्धः पृथिव्यां च तेजश्चास्मि विभावसोः।
जीवनं सर्वभूतेषु तपश्चास्मि तपस्विषु॥७.९॥
ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಸ್ಮಿ ವಿಭಾವಸೌ ।
ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು ॥ 7-9॥
9. Of the earth, I am the sacred smell;
In the fire, I am the glow;
In all beings, I am the very life force; and
In those who perform tapas,
I am the very austerity.
ನಾನು ಪೃಥ್ವಿಯಲ್ಲಿ ಪರಿಮಳವಾದ ಗಂಧವಾಗಿದ್ದೇನೆ. ನಾನು ಅಗ್ನಿಯಲ್ಲಿ ತೇಜಸ್ಸಾಗಿದ್ದೇನೆ. ಸಕಲ ಚರಾಚರ ಜೀವಿಗಳಲ್ಲಿ ನಾನೇ ಜೀವಶಕ್ತಿಯಾಗಿದ್ದೇನೆ. ತಪೋನಿಷ್ಠರಲ್ಲಿ ತಪಸ್ಸೂ ಆಗಿರುವೆನು.
बीजं मां सर्वभूतानां
विद्धि पार्थ सनातनम्।
बुद्धिर्बुद्धिमतामस्मि
तेजस्तेजस्विनामहम्॥७.१०॥
ಬೀಜಂ ಮಾಂ ಸರ್ವಭೂತಾನಾಂ
ವಿದ್ಧಿ ಪಾರ್ಥ ಸನಾತನಮ್ ।
ಬುದ್ಧಿರ್ಬುದ್ಧಿಮತಾಮಸ್ಮಿ
ತೇಜಸ್ತೇಜಸ್ವಿನಾಮಹಮ್ ॥ 7-10॥
बीजं मां सर्वभूतानां विद्धि पार्थ सनातनम्।
बुद्धिर्बुद्धिमतामस्मि तेजस्तेजस्विनामहम्॥७.१०॥
ಬೀಜಂ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್ ।
ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ॥ 7-10॥
10. O Arjuna, know Me to be
The eternal root cause of all beings,
The intellect of the intelligent people
And the splendour of those who are splendid.
ಓ ಅರ್ಜುನಾ! ಸಮಸ್ತಭೂತಗಳಿಗೆ ನಾನೇ ಸನಾತನವಾದ ಮೂಲಬೀಜವಾಗಿದ್ದೇನೆ. ಬುದ್ಧಿವಂತರ ಬುದ್ಧಿಶಕ್ತಿ ನಾನಾಗಿದ್ದೇನೆ, ಮತ್ತು ತೇಜಸ್ವಿಗಳ ತೇಜಸ್ಸೂ ಆಗಿರುವೆನು.
बलं बलवतां चाहं
कामरागविवर्जितम्।
धर्माविरुद्धो भूतेषु
कामोस्मि भरतर्षभ॥७.११॥
ಬಲಂ ಬಲವತಾಂ ಚಾಹಂ
ಕಾಮರಾಗವಿವರ್ಜಿತಮ್ ।
ಧರ್ಮಾವಿರುದ್ಧೋ ಭೂತೇಷು
ಕಾಮೋಽಸ್ಮಿ ಭರತರ್ಷಭ ॥ 7-11॥
बलं बलवतां चाहं कामरागविवर्जितम्।
धर्माविरुद्धो भूतेषु कामोस्मि भरतर्षभ॥७.११॥
ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್ ।
ಧರ್ಮಾವಿರುದ್ಧೋ ಭೂತೇಷು ಕಾಮೋಽಸ್ಮಿ ಭರತರ್ಷಭ ॥ 7-11॥
11. Arjuna,
Of the strong people,
I am the strength
Devoid of desire and attachment;
Of all the beings,
I am the desire
That is not opposed to Dharma.
ಅರ್ಜುನಾ! ನಾನು ಬಲವಂತರಲ್ಲಿರುವ ಕಾಮರಾಗಗಳಿಲ್ಲದ ಬಲವಾಗಿದ್ದೇನೆ. ಎಲ್ಲ ಭೂತಗಳಲ್ಲಿರುವ ಧರ್ಮವಿರುದ್ಧವಲ್ಲದ ಕಾಮವೂ ನಾನೇ ಆಗಿರುತ್ತೇನೆ.
ये चैव सात्विका भावा
राजसास्तामसाश्च ये।
मत्त एवेति तान् विद्धि
न त्वहं तेषु ते मयि॥७.१२॥
ಯೇ ಚೈವ ಸಾತ್ತ್ವಿಕಾ ಭಾವಾ
ರಾಜಸಾಸ್ತಾಮಸಾಶ್ಚ ಯೇ ।
ಮತ್ತ ಏವೇತಿ ತಾನ್ವಿದ್ಧಿ
ನ ತ್ವಹಂ ತೇಷು ತೇ ಮಯಿ ॥ 7-12॥
ये चैव सात्विका भावा राजसास्तामसाश्च ये।
मत्त एवेति तान् विद्धि न त्वहं तेषु ते मयि॥७.१२॥
ಯೇ ಚೈವ ಸಾತ್ತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ ।
ಮತ್ತ ಏವೇತಿ ತಾನ್ವಿದ್ಧಿ ನ ತ್ವಹಂ ತೇಷು ತೇ ಮಯಿ ॥ 7-12॥
12. Again, Arjuna, know that
All the ideas –
Be they Sattvik, Rajasic or Tamasic-
Originate from Me only.
All of them are in Me
But I am not bound to them.
ಅರ್ಜುನಾ! ಇದನ್ನು ತಿಳಿದುಕೋ. ಸಾತ್ವಿಕ, ರಾಜಸ ಮತ್ತು ತಾಮಸ ಭಾವಗಳು ಯಾವುದೇ ಆದರೂ ಅವೆಲ್ಲವೂ ನನ್ನಿಂದಲೇ ಉತ್ಪತ್ತಿಯಾದವುಗಳೆಂದು ತಿಳಿ. ಒಂದು ಅರ್ಥದಲ್ಲಿ ಪ್ರತಿಯೊಂದು ವಸ್ತುವೂ ನಾನೇ. ಆದರೆ ನಾನು ಸ್ವತಂತ್ರನು. ನಾನು ಐಹಿಕ ಪ್ತಕೃತಿಯ ಗುಣಗಳಿಗೆ ಒಳಪಟ್ಟಿಲ್ಲ ಅಂದರೆ ಅವುಗಳಲ್ಲಿ ನಾನಿಲ್ಲ. ಬದಲಿಗೆ ಅವು ನನ್ನಲ್ಲಿರುವುವು.
त्रिभिर्गुणमयैर्भावै:
एभिः सर्वमिदं जगत्।
मोहितं नाभिजानाति
मामेभ्यः परमव्ययम्॥७.१३॥
ತ್ರಿಭಿರ್ಗುಣಮಯೈರ್ಭಾವೈಃ
ಏಭಿಃ ಸರ್ವಮಿದಂ ಜಗತ್ ।
ಮೋಹಿತಂ ನಾಭಿಜಾನಾತಿ
ಮಾಮೇಭ್ಯಃ ಪರಮವ್ಯಯಮ್ ॥ 7-13॥
त्रिभिर्गुणमयैर्भावैरेभिः सर्वमिदं जगत्।
मोहितं नाभिजानाति मामेभ्यः परमव्ययम्॥७.१३॥
ತ್ರಿಭಿರ್ಗುಣಮಯೈರ್ಭಾವೈಃ ಏಭಿಃ ಸರ್ವಮಿದಂ ಜಗತ್ ।
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ ॥ 7-13॥
13. People are deluded
By the three Gunas –
Sattva, Rajas and Tamas –
As they combine and transform
Into Kama, Krodha, Lobha, etc.
People fail to recognize Me
To be the Unchanging One,
Different from and beyond those Gunas.
ಸಾತ್ವಿಕ, ರಾಜಸ ಮತ್ತು ತಾಮಸವೆನ್ನುವ ತ್ರಿಗುಣ ವಿಕಾರಗಳಿಗೆ ಗುರಿಯಾಗಿ, ಈ ಮೂರೂ ಗುಣಗಳಿಂದ ಮೋಹಿತವಾಗಿ, ಈ ಸಮಸ್ತ ಜಗತ್ತು ನನ್ನನ್ನು ಅರಿಯದೆ ಇದೆ. ಏಕೆಂದರೆ ತ್ರಿಗುಣಗಳು ಒಟ್ಟುಗೂಡಿ, ಕಾಮ, ಕ್ರೋಧ, ಲೋಭ, ಮೋಹ ಇತ್ಯಾದಿಗಳಾಗಿ ಮಾರ್ಪಟ್ಟು ಮನುಷ್ಯರು, ಈ ತ್ರಿಗುಣಗಳಿಗೆ ಅತೀತನಾದ ಮತ್ತು ಭಿನ್ನನಾದ ನನ್ನನ್ನು ಗ್ರಹಿಸಲಾರದವರಾಗಿದ್ದಾರೆ. दैवी ह्येषा गुणमयी
मम माया दुरत्यया।
मामेव ये प्रपद्यन्ते
मायामेतां तरन्ति ते॥७.१४॥
ದೈವೀ ಹ್ಯೇಷಾ ಗುಣಮಯೀ
ಮಮ ಮಾಯಾ ದುರತ್ಯಯಾ ।
ಮಾಮೇವ ಯೇ ಪ್ರಪದ್ಯಂತೇ
ಮಾಯಾಮೇತಾಂ ತರಂತಿ ತೇ ॥ 7-14॥
दैवी ह्येषा गुणमयी मम माया दुरत्यया।
मामेव ये प्रपद्यन्ते मायामेतां तरन्ति ते॥७.१४॥
ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ ।
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ॥ 7-14॥
14. The deluding power of the three Gunas
Is Mine. It is my Divine Power of Maya.
It is indeed difficult to cross over My Maya.
Only those who surrender
And take refuge in Me
Will be able to go beyond My Maya.
ಈ ತ್ರಿಗುಣಮಯವಾದ ನನ್ನ ದೈವೀಮಾಯೆಯನ್ನು ಅರಿಯುವುದು ಮತ್ತು ದಾಟುವುದು ಅತಿ ಕಷ್ಟ. ಆದರೆ ಯಾರು ನನ್ನನ್ನೇ ಆಶ್ರಯಿಸುತ್ತಾರೋ, ನನಗೆ ಶರಣಾಗತರಾಗುತ್ತಾರೋ ಅವರು ಮಾತ್ರ ಈ ಮಾಯೆಯನ್ನು ದಾಟಿ ಹೋಗಬಲ್ಲರು.
न मां दुष्कृतिनो मूढाः
प्रपद्यन्ते नराधमाः।
माययापहतज्ञाना
आसुरं भावमाश्रिताः॥७.१५॥
ನ ಮಾಂ ದುಷ್ಕೃತಿನೋ ಮೂಢಾಃ
ಪ್ರಪದ್ಯಂತೇ ನರಾಧಮಾಃ ।
ಮಾಯಯಾಪಹೃತಜ್ಞಾನಾ
ಆಸುರಂ ಭಾವಮಾಶ್ರಿತಾಃ ॥ 7-15॥
न मां दुष्कृतिनो मूढाः प्रपद्यन्ते नराधमाः।
माययापहतज्ञाना आसुरं भावमाश्रिताः॥७.१५॥
ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ ।
ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ ॥ 7-15॥
15. Those ignorant evil-doers
Whose intellect is deluded by my Maya
Will develop demonic attitude
And fail to approach me with devotion.
ನನ್ನ ಮಾಯೆಯಿಂದ ಯಾರ ಬುದ್ಧಿಶಕ್ತಿಗೆ ಮಂಕುಕವಿದಿದೆಯೋ ಅಂತಹ ಮೂರ್ಖ, ನರಾಧಮರು, ಅಸುರೀ ಪ್ರವೃತ್ತಿಯನ್ನು ಬೆಳೆಸಿಕೊಂಡು, ಧರ್ಮನಿಷ್ಠೆಯಿಂದ ನನ್ನನ್ನು ಹೊಂದಲು ಅಶಕ್ಯರಾಗುತ್ತಾರೆ. ಇಂತಹ ದುಷ್ಟರು ನನಗೆ ಶರಣಾಗುವುದಿಲ್ಲ.
चतुर्विधा भजन्ते मां
जनाः सुकृतिनोऽर्जुन।
आर्तो जिज्ञासुरर्थार्थी
ज्ञानी च भरतर्षभ॥७.१६॥
ಚತುರ್ವಿಧಾ ಭಜಂತೇ ಮಾಂ
ಜನಾಃ ಸುಕೃತಿನೋಽರ್ಜುನ ।
ಆರ್ತೋ ಜಿಜ್ಞಾಸುರರ್ಥಾರ್ಥೀ
ಜ್ಞಾನೀ ಚ ಭರತರ್ಷಭ ॥ 7-16॥
चतुर्विधा भजन्ते मां जनाः सुकृतिनोऽर्जुन।
आर्तो जिज्ञासुरर्थार्थी ज्ञानी च भरतर्षभ॥७.१६॥
ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋಽರ್ಜುನ ।
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ॥ 7-16॥
16. There are four kinds of people
Who perform virtuous acts
And they approach Me with reverence.
They are: the distressed one;
The seeker of truth;
The seeker of wealth; and
The knower of Brahman.
ಎಲೈ ಭರತವಂಶ ಶ್ರೇಷ್ಠನಾದ ಅರ್ಜುನನೇ! ಈ ಜಗತ್ತಿನಲ್ಲಿ ಸದಾಚಾರದಿಂದ ಕರ್ತವ್ಯವೆಸಗುವ ಮತ್ತು ಪೂಜ್ಯ ಭಾವನೆ ಹಾಗೂ ಭಯಭಕ್ತಿಯಿಂದ ನನ್ನನ್ನು ಸೇವಿಸುವವರು ನಾಲ್ಕು ವಿಧವಾದ ಜನರಿದ್ದಾರೆ. ದುಃಖಿತರು, ಐಶ್ವರ್ಯವನ್ನು ಬಯಸುವವರು, ಜಿಜ್ಞಾಸುಗಳು ಮತ್ತು ಬ್ರಹ್ಮ ಜ್ಞಾನದ ಅನ್ವೇಷಣೆ ಮಾಡುವವರು ಇವರೇ ಆ ನಾಲ್ಕು ಬಗೆಯ ಜನರು.
तेषां ज्ञानी नित्ययुक्त:
एकभक्तिर्विशिष्यते।
प्रियो हि ज्ञानिनोऽत्यर्थं
अहं स च मम प्रियः॥७.१७॥
ತೇಷಾಂ ಜ್ಞಾನೀ ನಿತ್ಯಯುಕ್ತಃ
ಏಕಭಕ್ತಿರ್ವಿಶಿಷ್ಯತೇ ।
ಪ್ರಿಯೋ ಹಿ ಜ್ಞಾನಿನೋಽತ್ಯರ್ಥಂ
ಅಹಂ ಸ ಚ ಮಮ ಪ್ರಿಯಃ ॥ 7-17॥
तेषां ज्ञानी नित्ययुक्त एकभक्तिर्विशिष्यते।
प्रियो हि ज्ञानिनोऽत्यर्थमहं स च मम प्रियः॥७.१७॥
ತೇಷಾಂ ಜ್ಞಾನೀ ನಿತ್ಯಯುಕ್ತಃ ಏಕಭಕ್ತಿರ್ವಿಶಿಷ್ಯತೇ ।
ಪ್ರಿಯೋ ಹಿ ಜ್ಞಾನಿನೋಽತ್ಯರ್ಥಂ ಅಹಂ ಸ ಚ ಮಮ ಪ್ರಿಯಃ ॥ 7-17॥
17. Among the four types of devotees
The knower of Brahman, the Gnani,
With singleness of devotion,
Remains ever integrated with me.
So he excels all others.
I am as dear to such a devotee
As he is to Me.
ಈ ನಾಲ್ಕು ವಿಧವಾದ ಭಕ್ತರಲ್ಲಿ, ನಿತ್ಯಯುಕ್ತನೂ, ಏಕಭಕ್ತಿಯುಳ್ಳವನೂ ಆದ ಜ್ಞಾನಿಯು ಶ್ರೇಷ್ಠನು. ಅವನು ನನ್ನಿಂದ ದೂರವಾಗಿರುವುದಿಲ್ಲ. ಅವನು ಎಲ್ಲರನ್ನೂ ಮೀರಿಸುತ್ತಾನೆ. ಅವನಿಗೆ ನಾನು ಬಹಳ ಪ್ರಿಯನಾದವನು ಮತ್ತು ಅವನು ನನಗೆ ಪರಮ ಪ್ರಿಯನು.
उदाराः सर्व एवैते
ज्ञानी त्वात्मैव मे मतम्।
आस्थितः स हि युक्तात्मा
मामेवानुत्तमां गतिम्॥७.१८॥
ಉದಾರಾಃ ಸರ್ವ ಏವೈತೇ
ಜ್ಞಾನೀ ತ್ವಾತ್ಮೈವ ಮೇ ಮತಮ್ ।
ಆಸ್ಥಿತಃ ಸ ಹಿ ಯುಕ್ತಾತ್ಮಾ
ಮಾಮೇವಾನುತ್ತಮಾಂ ಗತಿಮ್ ॥ 7-18॥
उदाराः सर्व एवैते ज्ञानी त्वात्मैव मे मतम्।
आस्थितः स हि युक्तात्मा मामेवानुत्तमां गतिम्॥७.१८॥
ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್ ।
ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ॥ 7-18॥
18. All the four kinds of devotees
Are eminent indeed.
But the knower of Brahman, the Gnani,
I consider him to be My very Self
Because he integrates himself with Me
And finds Me to be the highest
And the ultimate Goal.
ಮೇಲೆ ಹೇಳಿದ ಈ ನಾಲ್ಕು ವಿಧದ ಭಕ್ತರೂ ಉತ್ತಮರೆ. ಆದರೂ ಬ್ರಹ್ಮನನ್ನು ಅರಿತಿರುವ ಜ್ಞಾನಿಯಾದರೋ ಸಾಕ್ಷಾತ್ ನನ್ನ ಸ್ವರೂಪನೇ. ಏಕೆಂದರೆ ಅವನು ಸರ್ವ ವಿಧದಿಂದಲೂ ನನ್ನನ್ನೇ ಪರಮಗತಿಯೆಂದು ನಂಬಿರುತ್ತಾನೆ. ಅವನು ಅತ್ಯಂತ ಪರಿಪೂರ್ಣ ಗುರಿಯಾದ ನನ್ನನ್ನೇ ಸೇರುತ್ತಾನೆ.
बहूनां जन्मनामन्ते
ज्ञानवान् मां प्रपद्यते।
वासुदेवः सर्वमिति
स महात्मा सुदुर्लभः॥७.१९॥
ಬಹೂನಾಂ ಜನ್ಮನಾಮಂತೇ
ಜ್ಞಾನವಾನ್ಮಾಂ ಪ್ರಪದ್ಯತೇ ।
ವಾಸುದೇವಃ ಸರ್ವಮಿತಿ
ಸ ಮಹಾತ್ಮಾ ಸುದುರ್ಲಭಃ ॥ 7-19॥
बहूनां जन्मनामन्ते ज्ञानवान् मां प्रपद्यते।
वासुदेवः सर्वमिति स महात्मा सुदुर्लभः॥७.१९॥
ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ ।
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ॥ 7-19॥
19. It is at the end
Of very many life-times
That the Gnani, the Knower,
Realizes that “Vasudeva is All”
And reaches Me.
True, Such a person
Stands highly eminent
And is very rare to come by.
ಅನೇಕ ಜನ್ಮಗಳ ಕೊನೆಯಲ್ಲಿ, ಪರಿಪಕ್ವನಾದ ಜ್ಞಾನಿಯು ”ಈ ಸಮಸ್ತವೂ ವಾಸುದೇವನೇ” ಎಂಬ ಅಖಂಡಾನುಭವದಿಂದ ನನ್ನನ್ನು ಹೊಂದುತ್ತಾನೆ. ಸತ್ಯ, ಅಂತಹ ವ್ಯಕ್ತಿಯು ಉತ್ಕೃಷ್ಟತೆಯ ತುದಿಯಲ್ಲಿದ್ದು ತೀರಾ ಅಪರೂಪದವನಾಗಿರುತ್ತಾನೆ.
कामैस्तैस्तैर्हतज्ञानाः
प्रपद्यन्तेऽन्यदेवताः।
तं तं नियममास्थाय
प्रकृत्या नियताः स्वया॥७.२०॥
ಕಾಮೈಸ್ತೈಸ್ತೈರ್ಹೃತಜ್ಞಾನಾಃ
ಪ್ರಪದ್ಯಂತೇಽನ್ಯದೇವತಾಃ ।
ತಂ ತಂ ನಿಯಮಮಾಸ್ಥಾಯ
ಪ್ರಕೃತ್ಯಾ ನಿಯತಾಃ ಸ್ವಯಾ ॥ 7-20॥
कामैस्तैस्तैर्हतज्ञानाः प्रपद्यन्तेऽन्यदेवताः।
तं तं नियममास्थाय प्रकृत्या नियताः स्वया॥७.२०॥
ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇಽನ್ಯದೇವತಾಃ ।
ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ॥ 7-20॥
20. Discriminatory knowledge being eclipsed,
By a variety of intense desires,
Some people seek favours from other deities.
And they follow such discipline as is needed
For the fulfillment of their desires,
Swayed by their inherent tendencies.
ತೀವ್ರವಾದ ವಿಧವಿಧವಾದ ಆಕಾಂಕ್ಷೆಗಳು, ಐಹಿಕ ಬಯಕೆಗಳಿಂದ, ವಿವೇಚನಾ ಶಕ್ತಿ, ಬುದ್ಧಿಶಕ್ತಿಗಳಿಗೆ ಗ್ರಹಣ ಹಿಡಿದು, ಇತರೆ ದೇವತೆಗಳ ಅನುಗ್ರಹಕ್ಕಾಗಿ ಮೊರೆ ಹೋಗಿ ಶರಣಾಗುತ್ತಾರೆ. ತಮ್ಮ ಸ್ವಭಾವಗಳಿಗೆ ಅನುಗುಣವಾಗಿ, ತಮ್ಮ ಅಪೇಕ್ಷೆಗಳನ್ನು ಸಿದ್ಧಿಸಿಕೊಳ್ಳಲು ಪೂಜೆಯ ನಿರ್ದಿಷ್ಟ ನಿಯಮ ನಿಬಂಧನೆಗಳನ್ನು ಅನುಸರಿಸುತ್ತಾರೆ.
यो यो यां यां तनुं भक्तः
श्रद्धयार्चितुमिच्छति।
तस्य तस्याचलां श्रद्धां
तामेव विदधाम्यहम्॥७.२१॥
ಯೋ ಯೋ ಯಾಂ ಯಾಂ ತನುಂ ಭಕ್ತಃ
ಶ್ರದ್ಧಯಾರ್ಚಿತುಮಿಚ್ಛತಿ ।
ತಸ್ಯ ತಸ್ಯಾಚಲಾಂ ಶ್ರದ್ಧಾಂ
ತಾಮೇವ ವಿದಧಾಮ್ಯಹಮ್ ॥ 7-21॥
यो यो यां यां तनुं भक्तः श्रद्धयार्चितुमिच्छति।
तस्य तस्याचलां श्रद्धां तामेव विदधाम्यहम्॥७.२१॥
ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ ।
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ ॥ 7-21॥
21. Any devotee who chooses to worship
Any divine form with faith,
I favour such devotee
By granting unwavering faith.
ಯಾರ್ಯಾರು ಯಾವ ಯಾವ ದೇವತೆಯನ್ನು ಶ್ರದ್ಧೆಯಿಂದ ಸೇವಿಸಲು ಇಷ್ಟಪಡುವರೋ, ಅವರವರಿಗೆ ಆಯಾ ದೇವತೆಯಲ್ಲಿಯೇ ಸ್ಥಿರವಾದ ಶ್ರದ್ಧೆಯುಂಟಾಗುವಂತೆ ನಾನು ಕರುಣಿಸುತ್ತೇನೆ.
स तया श्रद्धया युक्त:
तस्याराधनमीहते।
लभते च ततःकामान्
मयैव विहितान् हि तान्॥७.२२
ಸ ತಯಾ ಶ್ರದ್ಧಯಾ ಯುಕ್ತಃ
ತಸ್ಯಾರಾಧನಮೀಹತೇ ।
ಲಭತೇ ಚ ತತಃ ಕಾಮಾನ್
ಮಯೈವ ವಿಹಿತಾನ್ಹಿ ತಾನ್ ॥ 7-22॥
स तया श्रद्धया युक्तस्तस्याराधनमीहते।
लभते च ततःकामान् मयैव विहितान् हि तान्॥७.२२॥
ಸ ತಯಾ ಶ್ರದ್ಧಯಾ ಯುಕ್ತಃ ತಸ್ಯಾರಾಧನಮೀಹತೇ ।
ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ಹಿ ತಾನ್ ॥ 7-22॥
22. Such a devotee
Favored by Me with firm faith,
When he worships the divine form
Of his choice,
He receives from that chosen divine form
All the objects he has desired.
In fact, being the Supreme Indweller of all,
It is I that facilitate it.
ಅಚಲ ನಂಬಿಕೆಯುಳ್ಳ, ನನ್ನ ಕೃಪೆಯಿಂದ ಪೋಷಿತನಾದ ಯಾವ ಭಕ್ತನು ತನ್ನ ಆಯ್ಕೆಯ ದೇವತೆಯನ್ನು ಆರಾಧಿಸುತ್ತಾನೆಯೋ ಆ ಇಷ್ಟದೇವತೆಯ ಮೂಲಕ ಅವನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾನೆ. ಆದರೆ ವಾಸ್ತವವಾಗಿ ಎಲ್ಲ ಜೀವಿಗಳಲ್ಲಿ ನೆಲೆಸಿರತಕ್ಕಂತಹ ನಾನೇ ಈ ಅನುಗ್ರಹಗಳನ್ನೆಲ್ಲ ನೀಡುವವನು.
अन्तवत्तु फलं तेषां
तद्भवत्यल्पमेधसाम्।
देवान् देवयजो यiन्ति
मद्भक्ता यान्ति मामपि॥७.२३॥
ಅಂತವತ್ತು ಫಲಂ ತೇಷಾಂ
ತದ್ಭವತ್ಯಲ್ಪಮೇಧಸಾಮ್ ।
ದೇವಾಂದೇವಯಜೋ ಯಾಂತಿ
ಮದ್ಭಕ್ತಾ ಯಾಂತಿ ಮಾಮಪಿ ॥ 7-23॥
अन्तवत्तु फलं तेषां तद्भवत्यल्पमेधसाम्।
देवान् देवयजो यन्ति मद्भक्ता यान्ति मामपि॥७.२३॥
ಅಂತವತ್ತು ಫಲಂ ತೇಷಾಂ ತದ್ಭವತ್ಯಲ್ಪಮೇಧಸಾಮ್ ।
ದೇವಾಂದೇವಯಜೋ ಯಾಂತಿ ಮದ್ಭಕ್ತಾ ಯಾಂತಿ ಮಾಮಪಿ ॥ 7-23॥
23. Those devotees
By virtue of their limited intellect
Receive such fruits of their desires
Which must come to an end,
Without lasting forever.
Also, such devotees at the end
Go to those divine forms only,
Whereas My devotees come to Me.
ಅಲ್ಪ ಬುದ್ಧಿಯವರಾದ ಅನ್ಯದೇವೋಪಾಸಕರು ಆ ದೇವತೆಗಳನ್ನು ಪೂಜಿಸಿ ಆಯಾ ದೇವತೆಗಳಿಂದ ಅಶಾಶ್ವತವಾದ, ಮಿತವಾದ ಹಾಗೂ ಅಲ್ಪಕಾಲಿಕ ಫಲವನ್ನು ಹೊಂದುತ್ತಾರೆ. ಹಾಗೂ ಕಡೆಗೆ ಆ ದೇವತೆಗಳ ಲೋಕಕ್ಕೆ ಹೋಗುತ್ತಾರೆ. ಆದರೆ ನನ್ನ ಭಕ್ತರು ನನ್ನನ್ನೇ ಪಡೆಯುವರು.
अव्यक्तं व्यक्तिमापन्नं
मन्यन्ते मामबुद्धयः।
परं भावमजानन्तो
ममाव्ययमनुत्तमम्॥७.२४॥
ಅವ್ಯಕ್ತಂ ವ್ಯಕ್ತಿಮಾಪನ್ನಂ
ಮನ್ಯಂತೇ ಮಾಮಬುದ್ಧಯಃ ।
ಪರಂ ಭಾವಮಜಾನಂತೋ
ಮಮಾವ್ಯಯಮನುತ್ತಮಮ್ ॥ 7-24॥
अव्यक्तं व्यक्तिमापन्नं मन्यन्ते मामबुद्धयः।
परं भावमजानन्तो ममाव्ययमनुत्तमम्॥७.२४॥
ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ ।
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್ ॥ 7-24॥
24. Those lacking in discriminatory power
Consider Me to be
Manifested and revealed in form,
Without knowing Me to be Eternal,
Preeminent and Un-manifest.
ಅವಿವೇಕಗಳೂ, ವಿವೇಚನೆಯಿಲ್ಲದವರೂ ಆಗಿರುವ ಭಕ್ತರು, ಸರ್ವೋತ್ಕೃಷ್ಟನೂ, ಸಂಶಯಾತೀತನೂ, ಸನಾತನನೂ, ನಿಘೂಢವೂ ಆದ ನನ್ನನ್ನು ಅವ್ಯಕ್ತ ಅಂದರೆ ನಿರಾಕಾರನಾಗಿದ್ದು ನಂತರ ವ್ಯಕ್ತನಾಗಿರುವವನು ಎಂದು ಭಾವಿಸುತ್ತಾರೆ. ಅವರ ಅಲ್ಪ ತಿಳುವಳಿಕೆಯ ಕಾರಣದಿಂದ ಅವರಿಗೆ ನನ್ನ ಉನ್ನತ ಸ್ವರೂಪವು ಅರ್ಥವಾಗುವುದಿಲ್ಲ.
नाहं प्रकाशः सर्वस्य
योगमायासमावृतः।
मूढोऽयं नाभिजानाति
लोको मामजमव्ययम्॥७.२५॥
ನಾಹಂ ಪ್ರಕಾಶಃ ಸರ್ವಸ್ಯ
ಯೋಗಮಾಯಾಸಮಾವೃತಃ ।
ಮೂಢೋಽಯಂ ನಾಭಿಜಾನಾತಿ
ಲೋಕೋ ಮಾಮಜಮವ್ಯಯಮ್ ॥ 7-25॥
नाहं प्रकाशः सर्वस्य योगमायासमावृतः।
मूढोऽयं नाभिजानाति लोको मामजमव्ययम्॥७.२५॥
ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ ।
ಮೂಢೋಽಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್ ॥ 7-25॥
25. Enveloped as I am
By My Yoga Maya,
With its delusive power,
I do not stand revealed at all.
People deluded by My Maya
Fail to understand Me,
Who am Unborn and Unchanging.
ಯೋಗ ಮಾಯೆಯಿಂದ ಆವೃತನಾದ ನಾನು ಎಲ್ಲರಿಗೂ ಪ್ರತ್ಯಕ್ಷನಾಗುವುದಿಲ್ಲ. ನನ್ನ ವಾಸ್ತವ ಸ್ವರೂಪವು ಅಗೋಚರವಾಗಿದೆ. ಆದ್ದರಿಂದ ಈ ಅಜ್ಞಾನಿ ಜನಸಮುದಾಯವು, ಜನ್ಮರಹಿತನಾದ, ಅವಿನಾಶಿಯಾದ, ಪರಮೇಶ್ವರನಾದ ನನ್ನನ್ನು ಅರಿಯಲು ವಿಫಲರಾಗುತ್ತಾರೆ. ಅರ್ಥಾತ್ ನನ್ನನ್ನು ಜನನ-ಮರಣವುಳ್ಳವನೆಂದು ತಿಳಿಯುತ್ತಾರೆ.
वेदाहं समतीतानि
वर्तमानानि चार्जुन।
भविष्याणि च भूतानि
मां तु वेद न कश्चन॥७.२६॥
ವೇದಾಹಂ ಸಮತೀತಾನಿ
ವರ್ತಮಾನಾನಿ ಚಾರ್ಜುನ ।
ಭವಿಷ್ಯಾಣಿ ಚ ಭೂತಾನಿ
ಮಾಂ ತು ವೇದ ನ ಕಶ್ಚನ ॥ 7-26॥
वेदाहं समतीतानि वर्तमानानि चार्जुन।
भविष्याणि च भूतानि मां तु वेद न कश्चन॥७.२६॥
ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ ।
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ॥ 7-26॥
26. Arjuna,
I know all the beings
In all the three aspects of Time:
Past, Present and Future,
But no one knows Me.
ಅರ್ಜುನಾ! ದೇವೋತ್ತಮ ಪರಮ ಪುರುಷನಾಗಿ ನಾನು ಹಿಂದೆ ಆದದ್ದನ್ನು, ಈಗ ಆಗುತ್ತಿರುವುದನ್ನು ಮತ್ತು ಮುಂದೆ ಅಗಲಿರುವುದನ್ನೂ ಬಲ್ಲೆ. ನಾನು ಎಲ್ಲ ಜೀವಿಗಳನ್ನೂ ಬಲ್ಲೆ. ಆದರೆ ನನ್ನನ್ನು ಬಲ್ಲವರು ಯಾರೂ ಇಲ್ಲ.
इच्छाद्वेषसमुत्थेन
द्वन्द्वमोहेन भारत।
सर्वभूतानि संमोहं
सर्गे यान्ति परन्तप॥७.२७॥
ಇಚ್ಛಾದ್ವೇಷಸಮುತ್ಥೇನ
ದ್ವಂದ್ವಮೋಹೇನ ಭಾರತ ।
ಸರ್ವಭೂತಾನಿ ಸಮ್ಮೋಹಂ
ಸರ್ಗೇ ಯಾಂತಿ ಪರಂತಪ ॥ 7-27॥
इच्छाद्वेषसमुत्थेनद्वन्द्वमोहेन भारत।
सर्वभूतानि संमोहं सर्गे यान्ति परन्तप॥७.२७॥
ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ ।
ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ ॥ 7-27॥
27. Arjuna,
All the beings,
Right from the moment they are born,
Come under the sway of dualities
Like attachment and aversion.
The delusion caused by such dualities
Causes confusion in them.
ಎಲೈ ಅರ್ಜುನಾ! ಮೋಹ ಮತ್ಸರಗಳಿಂದ, ಇಚ್ಛಾದ್ವೇಷಗಳಿಂದ ಹುಟ್ಟಿದ ಶೀತೋಷ್ಣ ಸುಖದುಃಖಾದಿ ದ್ವಂದ್ವಗಳ ಮೋಹದಿಂದ ಸರ್ವ ಪ್ರಾಣಿಗಳು ಅವರು ಹುಟ್ಟಿದ ಕ್ಷಣದಿಂದಲೇ ಭ್ರಾಂತಿಯನ್ನು ಹೊಂದುತ್ತವೆ.
येषां त्वन्तगतं पापं
जनानां पुण्यकर्मणाम्।
ते द्वन्वमोहनिर्मुक्ता:
भजन्ते मां दृढव्रताः॥७.२८॥
ಯೇಷಾಂ ತ್ವಂತಗತಂ ಪಾಪಂ
ಜನಾನಾಂ ಪುಣ್ಯಕರ್ಮಣಾಮ್ ।
ತೇ ದ್ವಂದ್ವಮೋಹನಿರ್ಮುಕ್ತಾಃ
ಭಜಂತೇ ಮಾಂ ದೃಢವ್ರತಾಃ ॥ 7-28॥
येषां त्वन्तगतं पापं जनानां पुण्यकर्मणाम्।
ते द्वन्वमोहनिर्मुक्ता भजन्ते मां दृढव्रताः॥७.२८॥
ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್ ।
ತೇ ದ್ವಂದ್ವಮೋಹನಿರ್ಮುಕ್ತಾಃ ಭಜಂತೇ ಮಾಂ ದೃಢವ್ರತಾಃ ॥ 7-28॥
28. But in the case of virtuous people,
When their sins are exhausted,
They get freed from the delusion
Caused by the dualities,
Like attachment and aversion,
And worship Me with determined will.
ಆದರೆ ಪುಣ್ಯಕರ್ಮಗಳನ್ನು ಮಾಡುವ ಯಾವ ಜನರ ಪಾಪವು ಕ್ಷೀಣವಾಗಿರುವುದೋ, ಆ ಮಹನೀಯರು ಸುಖದುಃಖಾದಿ ದ್ವಂದ್ವಗಳ ಮೋಹದಿಂದ ಬಿಡುಗಡೆಯನ್ನು ಹೊಂದಿ ಶ್ರದ್ಧೆಯಿಂದ ಧೃಢವ್ರತರಾಗಿ ನನ್ನನ್ನು ಪೂಜಿಸುತ್ತಾರೆ.
जरामरणमोक्षाय
मामiश्रित्य यतन्ति ये।
ते ब्रह्म तद्विदुःकृत्स्नं
अध्यात्मंकर्म चाखिलम्॥७.२९॥\
ಜರಾಮರಣಮೋಕ್ಷಾಯ
ಮಾಮಾಶ್ರಿತ್ಯ ಯತಂತಿ ಯೇ ।
ತೇ ಬ್ರಹ್ಮ ತದ್ವಿದುಃ ಕೃತ್ಸ್ನಂ
ಆಧ್ಯಾತ್ಮಂ ಕರ್ಮ ಚಾಖಿಲಮ್ ॥ 7-29॥
जरामरणमोक्षाय मामiश्रित्य यतन्ति ये।
ते ब्रह्म तद्विदुःकृत्स्नंअध्यात्मंकर्म चाखिलम्॥७.२९॥
ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ ।
ತೇ ಬ್ರಹ್ಮ ತದ್ವಿದುಃ ಕೃತ್ಸ್ನಂ ಆಧ್ಯಾತ್ಮಂ ಕರ್ಮ ಚಾಖಿಲಮ್ ॥ 7-29॥
29. Those who intend to get freedom
From old age and death
Approach Me
To know about Brahman,
In its entirety,
And the self as well as all the actions
That help them to know.
ಮುಪ್ಪು ಸಾವುಗಳಿಂದ ಬಿಡುಗಡೆಯನ್ನು ಹೊಂದುವುದಕ್ಕಾಗಿ ಯಾರು ನನ್ನನ್ನು ಆಶ್ರಯಿಸಿ ಪ್ರಯತ್ನಿಸುತ್ತಾರೋ, ಅವರು ಆ ಬ್ರಹ್ಮವನ್ನೂ, ಸಂಪೂರ್ಣವಾದ ಪ್ರತ್ಯಗಾತ್ಮವನ್ನೂ ಮತ್ತು ಎಲ್ಲ ಆಧ್ಯಾತ್ಮಿಕ ಕರ್ಮವನ್ನೂ ತಿಳಿದುಕೊಳ್ಳುತ್ತಾರೆ.
साधिभूताधिदैवंमां
साधियज्ञंचयेविदुः।
प्रयाणकालेपिचमां
तेविदुर्युक्तचेतसः॥७.३०॥
ಸಾಧಿಭೂತಾಧಿದೈವಂ ಮಾಂ
ಸಾಧಿಯಜ್ಞಂ ಚ ಯೇ ವಿದುಃ ।
ಪ್ರಯಾಣಕಾಲೇಽಪಿ ಚ ಮಾಂ
ತೇ ವಿದುರ್ಯುಕ್ತಚೇತಸಃ ॥ 7-30॥
साधिभूताधिदैवंमांसाधियज्ञंचयेविदुः।
प्रयाणकालेपिचमांतेविदुर्युक्तचेतसः॥७.३०॥
ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ ।
ಪ್ರಯಾಣಕಾಲೇಽಪಿ ಚ ಮಾಂ ತೇ ವಿದುರ್ಯುಕ್ತಚೇತಸಃ ॥ 7-30॥
30. Moreover,
Those who worship Me,
Knowing full well,
Me as Adhibhutam –
As the One underlying
All the perishable elements;
Me as Adhidaivam –
As the One underlying
All the divinities or devas;
And Me as Adhiyagnam –
As the One underlying the Yagna or
The Ritual of Offerings —
Such persons do not forget Me
Even at the time of their leaving this world.
ऒम् तत्सदिति
ಓಂ ತತ್ಸದಿತಿ
श्रीमद्भगवद्गितासू
ಶ್ರೀಮದ್ಭಗವದ್ಗೀತಾಸೂ
उपनिषत्सु
ಉಪನಿಷತ್ಸು
ब्रह्म विद्यायां
ಬ್ರಹ್ಮವಿದ್ಯಾಯಾಂ
यॊगशास्त्रॆ
ಯೋಗಶಾಸ್ತ್ರೇ
श्रीकृष्णार्जुनसंवादॆ
ಶ್ರೀಕೃಷ್ಣಾರ್ಜುನಸಂವಾದೇ
ज्ञानविज्ञानयोगो नाम
ಜ್ಞಾನ ವಿಜ್ಞಾನ ಯೋಗೋ ನಾಮ
सप्तमोऽध्यायः
ಸಪ್ತಮೋಽಧ್ಯಾಯಃ
ऒं ततसत्
ಓಂ ತತ್ಸತ್
ಅದಿಭೂತ ಅಂದರೆ ಎಲ್ಲ ನಶ್ವರ ವಸ್ತುಗಳ ನಿಯಂತ್ರಕ, ಅಧಿದೈವ ಅಂದರೆ ಎಲ್ಲ ದೇವತೆಗಳ ನಿಯಂತ್ರಕ ಮತ್ತು ಅಧಿಯಜ್ಞ ಅಂದರೆ ಯಜ್ಞದ ನಿಯಂತ್ರಕನಾದ ನನ್ನನ್ನು ಯಾರು ತಿಳಿಯುತ್ತಾರೆಯೋ, ಅಂತಹ ಸಮಾಹಿತ ಚಿತ್ತರು ಮರಣಕಾಲದಲ್ಲಿಯೂ ನನ್ನನ್ನು ಅರ್ಥಮಾಡಿಕೊಳ್ಳಬಲ್ಲರು ಮತ್ತು ಅರಿಯಬಲ್ಲರು.
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ಜ್ಞಾನ ವಿಜ್ಞಾನ ಯೋಗವೆಂಬ ಹೆಸರಿನ ಏಳನೆಯ ಅಧ್ಯಾಯವು ಮುಗಿದುದು.