Chapter Sixteen: Daivasura Sampad Vibhaga Yogah
Published by LANKA KRISHNA MURTI FOUNDATION
(https://www.facebook.com/lankakrishnamurtifoundation/)
Website (https://krishnamurtifoundation.com/lanka/)
LKM FOUNDATION-YOUTUBE
(https://www.youtube.com/channel/UCptmyD6GditXlBWnaRNI11A)
अथ दैवासुरसम्पद्विभागयोगो नाम षोडशोऽध्यायः
Chapter Sixteen: Daivasura Sampad Vibhaga Yogah
In this Chapter, the focus shifts from Paramatma to Jeevatma, the individual self and the spiritual practices he needs for attaining Liberation.
He is given to understand two kinds of human nature: Daivi and Asuric or Divine and Demonic. The Divine qualities are beneficial to him as opposed to the Demonic ones, which he should avoid.
The Shastra or the Scripture plays an important role. One should engage oneself only in such actions that conform to the dictates of the Shastra.
ಈ ಅಧ್ಯಾಯದಲ್ಲಿ ಭಗವಂತನ ಉಪದೇಶದ ಕೇಂದ್ರಬಿಂದು ಪರಮಾತ್ಮನಿಂದ ಜೀವಾತ್ಮನೆಡೆಗೆ ಹೊರಳುತ್ತದೆ. ಇಲ್ಲಿ ಜೀವಾತ್ಮನು ಮುಕ್ತಿಯನ್ನು ಹೊಂದಲು ವ್ಯಕ್ತಿಗತವಾಗಿ ಬೇಕಾಗಿರುವ ಅಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಹೇಳಲಾಗಿದೆ.
ದೈವೀ ಮತ್ತು ಅಸುರೀ ಎಂಬ ಎರಡು ಬಗೆಯ ಸ್ವಭಾವಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ಮಾನವರಿಗೆ ಒದಗಿಸಲಾಗಿದೆ. ದೈವೀ ಗುಣಗಳು ಅವನಿಗೆ ಪ್ರಯೋಜನಕಾರಿಯಾಗಿರುತ್ತವೆ ಮತ್ತು ಅಸುರೀ ಗುಣಗಳು ಅವನ ವಿನಾಶಕ್ಕೆ ಎಡೆ ಮಾಡಿಕೊಡುವುದರಿಂದ ಅದನ್ನು ಅವನು ನಿವಾರಿಸಿಕೊಳ್ಳಬೇಕು.
ಈ ವಿಚಾರದಲ್ಲಿ ಶಾಸ್ತ್ರಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರತಿಯೊಬ್ಬರೂ ಶಾಸ್ತ್ರಗಳಲ್ಲಿ ಆದೇಶಿಸಿದ ಆಚರಣೆಗಳಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗುತ್ತದೆ.
श्रीभगवानुवाच-
अभयं सत्वसंशुद्धि:
ज्ञानयोगव्यवस्थितिः।
दानं दमश्च यज्ञश्च
स्वाध्यायस्तप आर्जवम्॥१६.१॥
ಶ್ರೀಭಗವಾನುವಾಚ-
ಅಭಯಂ ಸತ್ತ್ವಸಂಶುದ್ಧಿಃ
ಜ್ಞಾನಯೋಗವ್ಯವಸ್ಥಿತಿಃ ।
ದಾನಂ ದಮಶ್ಚ ಯಜ್ಞಶ್ಚ
ಸ್ವಾಧ್ಯಾಯಸ್ತಪ ಆರ್ಜವಮ್ ॥ 16-1॥
अभयं सत्वसंशुद्धि: ज्ञानयोगव्यवस्थितिः।
दानं दमश्च यज्ञश्च स्वाध्यायस्तप आर्जवम्॥१६.१॥
ಅಭಯಂ ಸತ್ತ್ವಸಂಶುದ್ಧಿಃ ಜ್ಞಾನಯೋಗವ್ಯವಸ್ಥಿತಿಃ ।
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯಸ್ತಪ ಆರ್ಜವಮ್ ॥ 16-1॥
1. The Lord enumerates 26 Divine qualities:
Fearlessness; Purity of antahkarana or inner self;
Concentration and consistency in the pursuit of Knowledge;
Charitableness; Control over the senses; Performance of Yagnas;
Study of Scriptures, Tapas, Uprightness;
ಶ್ರೀ ಭಗವಂತನು ಹೇಳುತ್ತಾನೆ.
ಹೇ ಅರ್ಜುನಾ! ನಾನು ಇಪ್ಪತ್ತಾರು ದೈವೀ ಗುಣಗಳನ್ನು ನಿನ್ನ ಗಣನೆಗೆ ನಮೂದಿಸುತ್ತೇನೆ.
(1)ನಿರ್ಭಯತೆ (2) ಅಂತಃಕರಣ ಶುದ್ಧಿ (3) ಜ್ಞಾನಯೋಗ ನಿಷ್ಠೆ (4) ದಾನ
(5) ಇಂದ್ರಿಯ ನಿಗ್ರಹ (6) ಯಜ್ಞಗಳನ್ನು ಆಚರಿಸುವಿಕೆ (7) ವೇದಾಧ್ಯಯನ
(8) ತಪಸ್ಸು (9) ಋಜುವರ್ತನೆ ಮತ್ತು ಸರಳತೆ
अहिंसा सत्यमक्रोध:
त्यागः शान्तिरपैशुनम्।
दया भूतेष्वलोलुप्त्वं
मार्दवं ह्रीरचापलम्॥१६.२॥
ಅಹಿಂಸಾ ಸತ್ಯಮಕ್ರೋಧಃ
ತ್ಯಾಗಃ ಶಾಂತಿರಪೈಶುನಮ್ ।
ದಯಾ ಭೂತೇಷ್ವಲೋಲುಪ್ತ್ವಂ
ಮಾರ್ದವಂ ಹ್ರೀರಚಾಪಲಮ್ ॥ 16-2॥
अहिंसा सत्यमक्रोध: त्यागः शान्तिरपैशुनम्।
दया भूतेष्वलोलुप्त्वं मार्दवं ह्रीरचापलम्॥१६.२॥
ಅಹಿಂಸಾ ಸತ್ಯಮಕ್ರೋಧಃ ತ್ಯಾಗಃ ಶಾಂತಿರಪೈಶುನಮ್ ।
ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್ ॥ 16-2॥
2. The Lord continues enumerating the Divine qualities:
Non-violence; Truthfulness; Freedom from anger;
Renunciation; Peacefulness; Absence of envy;
Compassion towards all beings; Un-covetousness;
Gentleness; Modesty; Dignity;
ಭಗವಂತನು ಮುಂದುವರೆದು ಹೇಳುತ್ತಾನೆ
(10) ಅಹಿಂಸೆ (11) ಸತ್ಯಸಂಧತೆ (12) ಕೋಪಗೊಳ್ಳದಿರುವಿಕೆ ಅಂದರೆ ಅಕ್ರೋಧ (13) ತ್ಯಾಗಬುದ್ಧಿ (14) ಶಾಂತತೆ (15) ಚಾಡಿಹೇಳದಿರುವಿಕೆ ಅಂದರೆ ಇತರರಲ್ಲಿ ತಪ್ಪು ಕಂಡುಹಿಡಿಯುವುದರಲ್ಲಿ ವಿಮುಖನಾಗಿರುವುದು (16) ಭೂತದಯೆ (17) ವಿಷಯಲಂಪಟತೆಯಿಲ್ಲದಿರುವಿಕೆ (18) ಮೃದು ಸ್ವಭಾವ (19) ವಿನಯಶೀಲತೆ (20) ಗಾಂಭೀರ್ಯತೆ.
तेजः क्षमा धृतिः शौचं
अद्रोहो नातिमानिता।
भवन्ति संपदं दैवीं
अभिजातस्य भारत॥१६.३॥
ತೇಜಃ ಕ್ಷಮಾ ಧೃತಿಃ ಶೌಚಂ
ಅದ್ರೋಹೋ ನಾತಿಮಾನಿತಾ ।
ಭವಂತಿ ಸಂಪದಂ ದೈವೀಂ
ಅಭಿಜಾತಸ್ಯ ಭಾರತ ॥ 16-3॥
तेजः क्षमा धृतिः शौचं अद्रोहो नातिमानिता।
भवन्ति संपदं दैवीं अभिजातस्य भारत॥१६.३॥
ತೇಜಃ ಕ್ಷಮಾ ಧೃತಿಃ ಶೌಚಂ ಅದ್ರೋಹೋ ನಾತಿಮಾನಿತಾ ।
ಭವಂತಿ ಸಂಪದಂ ದೈವೀಂ ಅಭಿಜಾತಸ್ಯ ಭಾರತ ॥ 16-3॥
3. The Lord concludes the list of Divine qualities:
Effulgence; Patience; Vigour; Cleanliness;
Benevolence; Non-arrogance; —
Arjuna,
These attributes belong to the person
who has inherited the wealth of Divine qualities. (26 in number)
ಶ್ರೀ ಭಗವಂತನು ದೈವೀ ಲಕ್ಷಣಗಳ ಪಟ್ಟಿಯನ್ನು ಮುಗಿಸುತ್ತಾ ಹೇಳುತ್ತಾನೆ.
(21) ತೇಜಸ್ಸು (22) ಸಹನೆ (23) ಸ್ಥೈರ್ಯ. (24) ಶುಚಿತ್ವ (25) ಔದಾರ್ಯತೆ
(26) ನಿರಹಂಕಾರ
ಅರ್ಜುನಾ! ಇವೇ, ದೈವೀ ಗುಣಸಂಪನ್ನಗಳನ್ನು ಪಡೆದು ಹುಟ್ಟಿದ ವ್ಯಕ್ತಿಯ ಅಂತರ್ಜಾತವಾದ ಇಪ್ಪತ್ತಾರು ದಿವ್ಯ ಲಕ್ಷಣಗಳು.
दम्भो दर्पोऽभिमानश्च
क्रोधः पारुष्यमेव च।
अज्ञानं चाभिजातस्य
पार्थ सम्पदमासुरीम्॥१६.४॥
ದಂಭೋ ದರ್ಪೋಽಭಿಮಾನಶ್ಚ
ಕ್ರೋಧಃ ಪಾರುಷ್ಯಮೇವ ಚ ।
ಅಜ್ಞಾನಂ ಚಾಭಿಜಾತಸ್ಯ
ಪಾರ್ಥ ಸಂಪದಮಾಸುರೀಮ್ ॥ 16-4॥
दम्भो दर्पोऽभिमानश्च क्रोधः पारुष्यमेव च।
अज्ञानं चाभिजातस्य पार्थ सम्पदमासुरीम्॥१६.४॥
ದಂಭೋ ದರ್ಪೋಽಭಿಮಾನಶ್ಚ ಕ್ರೋಧಃ ಪಾರುಷ್ಯಮೇವ ಚ ।
ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್ ॥ 16-4॥
4. Arjuna,
Hypocrisy; Arrogance; Vanity; Anger;
Harshness and Ignorance —-
These are the qualities of a person
who has inherited Demonic or Asuric nature.
ಅರ್ಜುನಾ! ಬೂಟಾಟಿಕೆ, ದರ್ಪ, ಅಹಂಕಾರ, ಕ್ರೋಧ, ಕ್ರೌರ್ಯ ಮತ್ತು ಅಜ್ಞಾನ, ಇವೆಲ್ಲವೂ ಅಸುರೀ ಗುಣಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಯ ಗುಣಲಕ್ಷಣಗಳಾಗಿವೆ.
दैवी सम्पद्विमोक्षाय
निबन्धायासुरी मता।
मा शुचः सम्पदं दैवीं
अभिजातोसि पाण्डव॥१६.५॥
ದೈವೀ ಸಂಪದ್ವಿಮೋಕ್ಷಾಯ
ನಿಬಂಧಾಯಾಸುರೀ ಮತಾ ।
ಮಾ ಶುಚಃ ಸಂಪದಂ ದೈವೀಂ
ಅಭಿಜಾತೋಽಸಿ ಪಾಂಡವ ॥ 16-5॥
दैवी सम्पद्विमोक्षाय निबन्धायासुरी मता।
मा शुचः सम्पदं दैवीं अभिजातोसि पाण्डव॥१६.५॥
ದೈವೀ ಸಂಪದ್ವಿಮೋಕ್ಷಾಯ ನಿಬಂಧಾಯಾಸುರೀ ಮತಾ ।
ಮಾ ಶುಚಃ ಸಂಪದಂ ದೈವೀಂ ಅಭಿಜಾತೋಽಸಿ ಪಾಂಡವ ॥ 16-5॥
5. While the qualities of Daivi nature
are conducive to the attainment of Liberation,
those of Asuri nature
contribute to Bondage.
Arjuna, do not grieve.
You have inherited the wealth
of Divine Attributes.
ದೈವೀಸಂಪತ್ತಿನ ಗುಣಗಳು ಮೋಕ್ಷವನ್ನು ಹೊಂದಲು ಸಹಾಯಕ ಸಾಧನವಾಗಿವೆ, ಹಾಗೂ ಅಸುರೀ ಸಂಪತ್ತಿನ ಗುಣಗಳು ಬಂಧಕ್ಕೆ ಕಾರಣವಾಗಿವೆ. ಅರ್ಜುನಾ! ಶೋಕಿಸಬೇಡ. ನೀನು ದೈವೀ ಸಂಪತ್ತನ್ನು ಮೈಗೂಡಿಸಿಕೊಂಡು ಹುಟ್ಟರುವೆ.द्वौ भूतसर्गौ लोकेऽस्मिन्
दैव आसुर एव च।
दैवो विस्तरशः प्रोक्तः
आसुरं पार्थ मे शृणु॥१६.६॥
ದ್ವೌ ಭೂತಸರ್ಗೌ ಲೋಕೇಽಸ್ಮಿನ್
ದೈವ ಆಸುರ ಏವ ಚ ।
ದೈವೋ ವಿಸ್ತರಶಃ ಪ್ರೋಕ್ತಃ
ಆಸುರಂ ಪಾರ್ಥ ಮೇ ಶೃಣು ॥ 16-6॥
द्वौ भूतसर्गौ लोकेऽस्मिन् दैव आसुर एव च।
दैवो विस्तरशः प्रोक्तः आसुरं पार्थ मे शृणु॥१६.६॥
ದ್ವೌ ಭೂತಸರ್ಗೌ ಲೋಕೇಽಸ್ಮಿನ್ ದೈವ ಆಸುರ ಏವ ಚ ।
ದೈವೋ ವಿಸ್ತರಶಃ ಪ್ರೋಕ್ತಃ ಆಸುರಂ ಪಾರ್ಥ ಮೇ ಶೃಣು ॥ 16-6॥
There are two orders of beings
Created in human existence:
The Daiva and the Asura: or
the Divine and the Demonic.
Arjuna, I have explained in detail
the qualities that come under Daivi nature.
Now listen to the Asuri qualities.
ಲೋಕದಲ್ಲಿಯ ಪ್ರಾಣಿಗಳೆಲ್ಲವೂ ಎರಡು ವಿಧವಾಗಿ ಸೃಸ್ಟಿಸಲ್ಪಟ್ಟಿವೆ. ಒಂದು ದೈವೀ ಜಾತಿ ಮತ್ತೊಂದು ಅಸುರ ಜಾತಿ. ಅರ್ಜುನ, ದೈವೀ ಜಾತಿಯ ಗುಣಲಕ್ಷಣಗಳನ್ನು ಈಗಾಗಲೇ ವಿವರವಾಗಿ ಹೇಳಿದ್ದೇನೆ. ಇನ್ನು ಅಸುರೀ ಜಾತಿಯ ಗುಣಲಕ್ಷಣಗಳನ್ನು ಹೇಳುತ್ತೇನೆ. ಕೇಳು.
प्रवृत्तिं च निवृत्तिं च
जना न विदुरासुराः।
न शौचं नापि चाचारो
न सत्यं तेषु वर्तते॥१६.७॥
ಪ್ರವೃತ್ತಿಂ ಚ ನಿವೃತ್ತಿಂ ಚ
ಜನಾ ನ ವಿದುರಾಸುರಾಃ ।
ನ ಶೌಚಂ ನಾಪಿ ಚಾಚಾರೋ
ನ ಸತ್ಯಂ ತೇಷು ವಿದ್ಯತೇ ॥ 16-7॥
प्रवृत्तिं च निवृत्तिं च जना न विदुरासुराः।
न शौचं नापि चाचारो न सत्यं तेषु वर्तते॥१६.७॥
ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ ।
ನ ಶೌಚಂ ನಾಪಿ ಚಾಚಾರೋ ನ ಸತ್ಯಂ ತೇಷು ವಿದ್ಯತೇ ॥ 16-7
7. People of Asuric nature
do not know the difference between
action, which leads to the fulfillment
of human values,
and inaction that implies
turning away from Dharmic action.
They do not know what cleanliness means;
They have no right conduct and
They are without the quality of truthfulness.
ಅಸುರೀ ಸ್ವಭಾವದ ಮನುಷ್ಯರು, ಮಾನವೀಯ ಮೌಲ್ಯಗಳನ್ನು ಸಫಲಗೊಳಿಸುವ ಪ್ರವೃತ್ತಿಗೂ, ಧರ್ಮಾಚರಣೆಯಿಂದ ಹಿಂದೆ ಸರಿಯುವ ನಿವೃತ್ತಿಗೂ ಇರುವ ಭೇದ ಭಾವವನ್ನು ಅರಿಯರು. ಶುಚಿತ್ವವೆಂದರೇನೆಂಬುದು ಅವರಿಗೆ ತಿಳಿದಿಲ್ಲ. ಅವರಿಗೆ ಆಚಾರ, ಸನ್ನಡತೆ ಇರುವುದಿಲ್ಲ ಮತ್ತು ಸತ್ಯಶೀಲತೆಯಂತೂ ಇಲ್ಲವೇ ಇಲ್ಲ.
असत्यमप्रतिष्ठं ते
जगदाहुरनीश्वरम्।
अपरस्परसम्भूतं
किमन्यत्कामहैतुकम्॥१६.८॥
ಅಸತ್ಯಮಪ್ರತಿಷ್ಠಂ ತೇ
ಜಗದಾಹುರನೀಶ್ವರಮ್ ।
ಅಪರಸ್ಪರಸಂಭೂತಂ
ಕಿಮನ್ಯತ್ಕಾಮಹೈತುಕಮ್ ॥ 16-8॥
असत्यमप्रतिष्ठं ते जगदाहुरनीश्वरम्।
अपरस्परसम्भूतं किमन्यत्कामहैतुकम्॥१६.८॥
ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ ।
ಅಪರಸ್ಪರಸಂಭೂತಂ ಕಿಮನ್ಯತ್ಕಾಮಹೈತುಕಮ್ ॥ 16-8॥
8. People of Asuric temperament declare
that the world is untrue;
it has no foundation;
and it is godless;
it is not created by
any Supreme Power;
it is born only because
of sexual union between man and woman.
If it is not due to lust,
What else is it due to? –they argue.
ಅಸುರೀ ಪ್ರಕೃತಿಯುಳ್ಳ ಮನುಷ್ಯರು ಈ ಜಗತ್ತು ಅಸತ್ಯವಾದುದು, ಆಧಾರವಿಲ್ಲದಿರುವುದು, ಅದನ್ನು ನಿಯಂತ್ರಿಸುವ ದೇವರು ಎಂಬುದೇ ಇಲ್ಲ, ಇದು ಯಾವುದೇ ಪರಮ ಶಕ್ತಿಯಿಂದ ಸೃಷ್ಟಿಯಾಗಿಲ್ಲ; ಇದು ಕೇವಲ ಸ್ತ್ರೀ ಪುರುಷರ ಸಂಯೋಗದಿಂದ ಸೃಷ್ಟಿಯಾಗಿರುವುದು, ಇದರ ಹುಟ್ಟಿಗೆ ಕಾಮವಲ್ಲದೆ ಬೇರೇನೂ ಕಾರಣವಲ್ಲ ಎಂಬುದಾಗಿ ವಾದಿಸಿ ತಮ್ಮ ನಿಲುವನ್ನು ಘೋಷಿಸುತಾರೆ.
एतां दृष्टिमवष्टभ्य
नष्टात्मानोऽल्पबुद्धयः।
प्रभवन्त्युग्रकर्माणः
क्षयाय जगतोऽहिताः॥१६.९॥
ಏತಾಂ ದೃಷ್ಟಿಮವಷ್ಟಭ್ಯ
ನಷ್ಟಾತ್ಮಾನೋಽಲ್ಪಬುದ್ಧಯಃ ।
ಪ್ರಭವಂತ್ಯುಗ್ರಕರ್ಮಾಣಃ
ಕ್ಷಯಾಯ ಜಗತೋಽಹಿತಾಃ ॥ 16-9॥
एतां दृष्टिमवष्टभ्य नष्टात्मानोऽल्पबुद्धयः।
प्रभवन्त्युग्रकर्माणः क्षयाय जगतोऽहिताः॥१६.९॥
ಏತಾಂ ದೃಷ್ಟಿಮವಷ್ಟಭ್ಯ ನಷ್ಟಾತ್ಮಾನೋಽಲ್ಪಬುದ್ಧಯಃ ।
ಪ್ರಭವಂತ್ಯುಗ್ರಕರ್ಮಾಣಃ ಕ್ಷಯಾಯ ಜಗತೋಽಹಿತಾಃ ॥ 16-9॥
9. Relying on such atheistic philosophy,
as stated above,
the Asuric type of people
lose their souls and the capacity
to redeem themselves.
These enemies of the world
Come into being
Only to destroy the world
With their debased minds
And cruel acts.
ಮೇಲೆ ಹೇಳಿದ ಇಂತಹ ನಿರೀಶ್ವರವಾದದ ತತ್ವಜ್ಞಾನ ಸಿದ್ಧಾಂತವನ್ನು ಅನುಸರಿಸುವ ಅಸುರೀ ಪ್ರಕೃತಿಯ ವ್ಯಕ್ಟಿಗಳು, ನಷ್ಟಾತ್ಮರು ಹಾಗೂ ತಮ್ಮನ್ನು ಉದ್ಧಾರಮಾಡಿಕೊಳ್ಳುವ ಅವಕಾಶದಿಂದ ವಂಚಿತರು. ತಮ್ಮ ಅಲ್ಪಬುದ್ದಿಯಿಂದ ಮತ್ತು ಕ್ರೂರಕರ್ಮಗಳಿಂದ ಈ ಲೋಕ ಕಂಟಕರು ಜಗತ್ತಿನ ನಾಶಕ್ಕಾಗಿಯೇ ಜನ್ಮ ತಳೆದು ಬಂದಿದ್ದಾರೆ.
काममाश्रित्य दुष्पूरं
दम्बमानमदान्विताः।
मोहाद्गृहीत्वाऽसद्ग्राहान्
प्रवर्तन्तेऽशुचिव्रताः॥१६.१०॥
ಕಾಮಮಾಶ್ರಿತ್ಯ ದುಷ್ಪೂರಂ
ದಂಭಮಾನಮದಾನ್ವಿತಾಃ ।
ಮೋಹಾದ್ಗೃಹೀತ್ವಾಸದ್ಗ್ರಾಹಾನ್
ಪ್ರವರ್ತಂತೇಽಶುಚಿವ್ರತಾಃ ॥ 16-10॥
काममाश्रित्य दुष्पूरं दम्बमानमदान्विताः।
मोहाद्गृहीत्वाऽसद्ग्राहान् प्रवर्तन्तेऽशुचिव्रताः॥१६.१०॥
ಕಾಮಮಾಶ್ರಿತ್ಯ ದುಷ್ಪೂರಂ ದಂಭಮಾನಮದಾನ್ವಿತಾಃ ।
ಮೋಹಾದ್ಗೃಹೀತ್ವಾಸದ್ಗ್ರಾಹಾನ್ ಪ್ರವರ್ತಂತೇಽಶುಚಿವ್ರತಾಃ ॥ 16-10॥
10. Asuric people are hypocritical,
vain and arrogant.
They get deluded by taking recourse
to unquenchable lust.
They take unholy decisions
And indulge in unclean acts.
ಅಸುರೀ ಪ್ರಕೃತಿಯವರು ಕಪಟಿಗಳು, ಹುರುಳಿಲ್ಲದವರು ಮತ್ತು ಅಹಂಕಾರಿಗಳು. ಪೂರೈಸಲಾಗದ
ಕಾಮವನ್ನು ಆಶ್ರಯಿಸಿ, ಡಂಭ, ಮಾನ ಮೊದಲಾದ ಮದಗಳಿಂದ ಕೂಡಿ, ಮೋಹಪರವಶರಾಗಿ ಕೆಟ್ಟ ತೀರ್ಮಾನಗಳನ್ನು ಮಾಡುತ್ತಾ ಅಶುಚಿವ್ರತರಾಗಿ ಪ್ರವರ್ತಿಸುತ್ತಾರೆ.
चिन्तामपरिमेयां च
प्रळयान्तामुपाश्रिताः।
कामोपभोगपरमा :
एतावदिति निश्चिताः॥१६.११॥
ಚಿಂತಾಮಪರಿಮೇಯಾಂ ಚ
ಪ್ರಲಯಾಂತಾಮುಪಾಶ್ರಿತಾಃ ।
ಕಾಮೋಪಭೋಗಪರಮಾಃ
ಏತಾವದಿತಿ ನಿಶ್ಚಿತಾಃ ॥ 16-11॥
चिन्तामपरिमेयां च प्रळयान्तामुपाश्रिताः।
कामोपभोगपरमा : एतावदिति निश्चिताः॥१६.११॥
ಚಿಂತಾಮಪರಿಮೇಯಾಂ ಚ ಪ್ರಲಯಾಂತಾಮುಪಾಶ್ರಿತಾಃ ।
ಕಾಮೋಪಭೋಗಪರಮಾಃ ಏತಾವದಿತಿ ನಿಶ್ಚಿತಾಃ ॥ 16-11॥
11. Asuric people keep their thoughts
running endlessly
till the moment of their death.
They are bent on enjoying
the objects of their desires.
They decide for themselves and declare
That enjoyment is the Supreme Goal of life.
ಅಸುರೀ ಪ್ರಕೃತಿಯವರು ತಮ್ಮ ಸಾವಿನ ಕಡೆಯ ಗಳಿಗೆಯವರೆಗೆ, ತಮ್ಮ ಅಸಂಖ್ಯಾತ ಚಿಂತೆಗಳ ಆಲೋಚನಾ ಲಹರಿಯನ್ನು ಹರಿಯಬಿಡುತ್ತಾರೆ. ಅವರು ವಿಷಯ ಭೋಗಗಳನ್ನು ಭೋಗಿಸುವುದರಲ್ಲಿಯೇ ತತ್ಪರರಾದವರು. ಕಾಮೋಪಭೋಗಗಳೇ ಜೀವನದ ಪರಮಗುರಿ ಎಂಬುದಾಗಿ ತಮ್ಮೊಳಗೆ ನಿಶ್ಚಯಿಸಿಕೊಂಡು ಪ್ರಕಟಿಸುತ್ತಾರೆ.
आशापाशशतैर्बद्धाः
कामक्रोधपरायणाः।
ईहन्ते कामभोगार्थं
अन्यायेनार्थसञ्चयान्॥१६.१२॥
ಆಶಾಪಾಶಶತೈರ್ಬದ್ಧಾಃ
ಕಾಮಕ್ರೋಧಪರಾಯಣಾಃ ।
ಈಹಂತೇ ಕಾಮಭೋಗಾರ್ಥಂ
ಆನ್ಯಾಯೇನಾರ್ಥಸಂಚಯಾನ್ ॥ 16-12॥
आशापाशशतैर्बद्धाः कामक्रोधपरायणाः।
ईहन्ते कामभोगार्थं अन्यायेनार्थसञ्चयान्॥१६.१२॥
ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ ।
ಈಹಂತೇ ಕಾಮಭೋಗಾರ್ಥಂ ಆನ್ಯಾಯೇನಾರ್ಥಸಂಚಯಾನ್ ॥ 16-12॥
12. Tied and bound
by innumerable hopes and desires,
Asuric people freely indulge
in lust and wrath.
They unjustly amass heaps of wealth
In order to enjoy the objects of their desires.
ನೂರಾರು ಆಸೆಗಳ ಪಾಶಗಳಿಂದ ಬಂಧಿತರಾದ ಅಸುರೀ ವ್ಯಕ್ತಿಗಳು ಕ್ರೋಧ ಮತ್ತು ವಿಷಯಾಭಿಲಾಷೆಯಿಂದ ಮನಸೋ ಇಚ್ಛೆ ಪ್ರವರ್ತಿಸುತ್ತಾರೆ. ಅವರು ತಮ್ಮ ಕಾಮನೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ, ತಮ್ಮ ವಿಷಯ ಭೋಗಗಳಿಗಾಗಿ ಅನ್ಯಾಯದಿಂದ ಅಪರಿಮಿತ ಧನ ಸಂಚಯಮಾಡುತ್ತಾರೆ. दमद्य मया लब्धं
इमं प्राप्स्ये मनोरथम्।
इदमस्तीदमपि मे
भविष्यति पुनर्धनम्॥१६.१३॥
ಇದಮದ್ಯ ಮಯಾ ಲಬ್ಧಂ
ಇಮಂ ಪ್ರಾಪ್ಸ್ಯೇ ಮನೋರಥಮ್ ।
ಇದಮಸ್ತೀದಮಪಿ ಮೇ
ಭವಿಷ್ಯತಿ ಪುನರ್ಧನಮ್ ॥ 16-13॥
इदमद्य मया लब्धं इमं प्राप्स्ये मनोरथम्।
इदमस्तीदमपि मे भविष्यति पुनर्धनम्॥१६.१३॥
ಇದಮದ್ಯ ಮಯಾ ಲಬ್ಧಂ ಇಮಂ ಪ್ರಾಪ್ಸ್ಯೇ ಮನೋರಥಮ್ ।
ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್ ॥ 16-13॥
The person of Asuric temperament
boasts about his achievements
in the following way:
This I have won today;
I shall fulfill that hope soon;
This much of wealth I have,
So much of it will be mine again.
ಅಸುರೀ ಪ್ರವೃತ್ತಿಯುಳ್ಳ ವ್ಯಕ್ತಿಯು ತನ್ನ
ಸಾಧನೆಗಳ ಬಗ್ಗೆ ಕೆಳಕಂಡಂತೆ ಬಡಾಯಿ ಕೊಚ್ಚಿಕೊಳ್ಳುತ್ತಾನೆ. ಇದನ್ನು ಇಂದು ನಾನು ಗೆದ್ದು ವಶ ಮಾಡಿಕೊಂಡಿದ್ದೇನೆ. ಇನ್ನು ಆ ಕೋರಿಕೆಯನ್ನು ನಾನು ಶೀಘ್ರವಾಗಿ ನೆರವೇರಿಸಿಕೊಳ್ಳಬೇಕು. ಇಷ್ಟು ಸಂಪತ್ತನ್ನು ನಾನು ಹೊಂದಿದ್ದೇನೆ. ಅನಂತರ ಇನ್ನಷ್ಟು ಸಂಪತ್ತು ನನ್ನದಾಗುತ್ತದೆ.
असौ मया हतः शत्रु :
हनिष्ये चापरानपि।
ईश्वरोऽहमहं भोगी
सिद्धोऽहं बलवान्सुखी॥१६.१४॥
ಅಸೌ ಮಯಾ ಹತಃ ಶತ್ರುಃ
ಹನಿಷ್ಯೇ ಚಾಪರಾನಪಿ ।
ಈಶ್ವರೋಽಹಮಹಂ ಭೋಗೀ
ಸಿದ್ಧೋಽಹಂ ಬಲವಾನ್ಸುಖೀ ॥ 16-14॥
असौ मया हतः शत्रु : हनिष्ये चापरानपि।
ईश्वरोऽहमहं भोगी सिद्धोऽहं बलवान्सुखी॥१६.१४॥
ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚಾಪರಾನಪಿ ।
ಈಶ್ವರೋಽಹಮಹಂ ಭೋಗೀ ಸಿದ್ಧೋಽಹಂ ಬಲವಾನ್ಸುಖೀ ॥ 16-14॥
14. The person of Asuric nature
continues his boasting:
This enemy is killed by me;
I shall kill the remaining ones too;
I am the mighty Lord.
I am the Enjoyer.
I am fully accomplished.
I feel strong and happy.
ಅಸುರೀ ಪ್ರವೃತ್ತಿಯುಳ್ಳ ವ್ಯಕ್ತಿಯು ಬಡಾಯಿ ಕೊಚ್ಚಿಕೊಳ್ವುವುದನ್ನು ಮುಂದುವರಿಸುತ್ತಾ ಹೇಳುತ್ತಾನೆ.
ಈ ಶತ್ರುವು ನನ್ನಿಂದ ಕೊಲ್ಲಲ್ಪಟ್ಟನು.
ಉಳಿದ ಶತ್ರುಗಳನ್ನೆಲ್ಲಾ ಸಹ ನಾನು ಕೊಲ್ಲಬಲ್ಲೆನು.
ನಾನೇ ಶಕ್ತಿಶಾಲಿಯಾದ ಈಶ್ವರ. ನಾನೇ ಭೋಗಿಯು.
ನಾನು ಎಲ್ಲ ಸಿದ್ಧಿಗಳಿಂದ ಕೂಡಿದವನಾಗಿದ್ದೇನೆ. ನಾನೇ ಬಲಶಾಲಿ ಮತ್ತು ನಾನು ಸುಖಿಯಾಗಿದ್ದೇನೆ.
आढ्योऽभिजनवानस्मि
कोऽन्योऽस्ति सदृशो मया।
यक्ष्ये दास्यामि मोदिष्य
इत्यज्ञानविमोहिताः॥१६.१५॥
ಆಢ್ಯೋಽಭಿಜನವಾನಸ್ಮಿ
ಕೋಽನ್ಯೋಽಸ್ತಿ ಸದೃಶೋ ಮಯಾ ।
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ
ಇತ್ಯಜ್ಞಾನವಿಮೋಹಿತಾಃ ॥ 16-15॥
आढ्योऽभिजनवानस्मि कोऽन्योऽस्ति सदृशो मया।
यक्ष्ये दास्यामि मोदिष्य इत्यज्ञानविमोहिताः॥१६.१५॥
ಆಢ್ಯೋಽಭಿಜನವಾನಸ್ಮಿ ಕೋಽನ್ಯೋಽಸ್ತಿ ಸದೃಶೋ ಮಯಾ ।
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನವಿಮೋಹಿತಾಃ ॥ 16-15॥
15. The person of Asuric nature
continues bragging:
I am rich; I am high-born;
Is there anyone equal to me?
I shall perform yagnas;
I shall give gifts,
I shall make merry.
ಅಸುರೀ ಪ್ರವೃತ್ತಿಯುಳ್ಳ ವ್ಯಕ್ತಿಯು ಜಂಭ ಕೊಚ್ಚಿಕೊಳ್ಳುವುದನ್ನು ಮುಂದುವರಿಸಿ ಹೇಳುತ್ತಾನೆ.
ನಾನು ದೊಡ್ಡ ಶ್ರೀಮಂತ; ನಾನು ಕುಲೀನನು; ನನಗೆ ಸಮನಾದವರು ಬೇರೆ ಯಾರಿದ್ದಾರೆ? ನಾನು ಯಜ್ಞಗಳನ್ನು ಮಾಡುತ್ತೇನೆ. ನಾನು ದಾನ ಮಾಡುತ್ತೇನೆ. ನಾನು ಆಮೋದ- ಪ್ರಮೋದ ಪಡುತ್ತೇನೆ- ಹೀಗೆ ಅವರು ತಪ್ಪು ತಿಳುವಳಿಕೆಯಿಂದ ಅವಿವೇಕವನ್ನು ಹೊಂದಿರುತ್ತಾರೆ.
अनेकचित्तविभ्रान्ता
मोहजालसमावृताः।
प्रसक्ताः कामभोगेषु
पतन्ति नरकेऽशुचौ॥१६.१६॥
ಅನೇಕಚಿತ್ತವಿಭ್ರಾಂತಾ
ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು
ಪತಂತಿ ನರಕೇಽಶುಚೌ ॥ 16-16॥
अनेकचित्तविभ्रान्ता मोहजालसमावृताः।
प्रसक्ताः कामभोगेषु पतन्ति नरकेऽशुचौ॥१६.१६॥
ಅನೇಕಚಿತ್ತವಿಭ್ರಾಂತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇಽಶುಚೌ ॥ 16-16॥
16. Distracted by a variety of fancies,
caught in the net of delusion, and
indulging in sensual pleasures,
such people of Asuric nature
plunge into unclean Hell.
ಅಸುರೀ ಪ್ರವೃತ್ತಿಯುಳ್ಳ ವ್ಯಕ್ತಿಗಳು, ಮನಸ್ಸು ಕೆಡಿಸುವ ಲೆಕ್ಕವಿಲ್ಲದಷ್ಟು ಕೆಟ್ಟ ಯೋಚನೆಗಳುಳ್ಳವರಾಗಿ, ಮೋಹವೆಂಬ ಬಲೆಯಲ್ಲಿ ಸಿಲುಕಿಕೊಂಡು, ವಿಷಯ ಭೋಗಗಳಲ್ಲಿ ಮಿತಿ ಮೀರಿದ ಆಸಕ್ತಿಯುಳ್ಳವರಾಗಿ ಅಶುಚಿಯಾದ ನರಕದಲ್ಲಿ ಬೀಳುತ್ತಾರೆ.
आत्मसम्भाविताःस्तब्धा:
धनमानमदान्विताः।
यजन्ते नामयज्ञैस्ते
दम्भेनाविधिपूर्वकम्॥१६.१७॥
ಆತ್ಮಸಂಭಾವಿತಾಃ ಸ್ತಬ್ಧಾಃ
ಧನಮಾನಮದಾನ್ವಿತಾಃ ।
ಯಜಂತೇ ನಾಮಯಜ್ಞೈಸ್ತೇ
ದಂಭೇನಾವಿಧಿಪೂರ್ವಕಮ್ ॥ 16-17॥
आत्मसम्भाविताःस्तब्धा: धनमानमदान्विताः।
यजन्ते नामयज्ञैस्ते दम्भेनाविधिपूर्वकम्॥१६.१७॥
ಆತ್ಮಸಂಭಾವಿತಾಃ ಸ್ತಬ್ಧಾಃ ಧನಮಾನಮದಾನ್ವಿತಾಃ ।
ಯಜಂತೇ ನಾಮಯಜ್ಞೈಸ್ತೇ ದಂಭೇನಾವಿಧಿಪೂರ್ವಕಮ್ ॥ 16-17॥
17. Self-glorifying, stubborn, self-conceited,
and being arrogant with their wealth,
the Asuric people perform yagnas,
only nominally,
without observing the prescribed procedures.
ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವವರಾದ, ಅವಿಧೇಯರಾದ, ಅಹಂಕಾರಿಗಳಾದ, ಧನ, ಮಾನ, ಮದಗಳಿಂದ ಕೂಡಿದವರೂ ಆದ ಅಸುರೀ ಪ್ರವೃತ್ತಿಯ ವ್ಯಕ್ತಿಗಳು ವಿಧಿಯನ್ನು ಅನುಸರಿಸದೆ ಹೆಸರಿಗೆ ಮಾತ್ರ ಯಜ್ಞಗಳನ್ನು ಮಾಡುತ್ತಾರೆ.
अहङ्कारं बलं दर्पं
कामं क्रोधं च संश्रिताः।
मामात्मपरदेहेषु
प्रद्विषन्तोऽभ्यसूयकाः॥१६.१८॥
ಅಹಂಕಾರಂ ಬಲಂ ದರ್ಪಂ
ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮಾತ್ಮಪರದೇಹೇಷು
ಪ್ರದ್ವಿಷಂತೋಽಭ್ಯಸೂಯಕಾಃ ॥ 16-18॥
अहङ्कारं बलं दर्पं कामं क्रोधं च संश्रिताः।
मामात्मपरदेहेषु प्रद्विषन्तोऽभ्यसूयकाः॥१६.१८॥
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ ।
ಮಾಮಾತ್ಮಪರದೇಹೇಷು ಪ್ರದ್ವಿಷಂತೋಽಭ್ಯಸೂಯಕಾಃ ॥ 16-18॥
18. Depending on egoism, power,
pride, lust and anger,
people of Asuric temperament
detest and disregard Me.
They refuse to recognize Me
as the Witness in their own bodies
as well as in those of others.
They are malicious.
They defy My authority.
ಅಹಂಕಾರ, ಬಲ, ದರ್ಪ, ಕಾಮ ಮತ್ತು ಕ್ರೋಧವುಳ್ಳವರಾಗಿ, ಅಸೂಯಾಪರರಾಗಿ, ಅಸುರೀ ಪ್ರವೃತ್ತಿಯುಳ್ಳ ವ್ಯಕ್ತಿಗಳು ನನ್ನ ಬಗ್ಗೆ ಜಿಗುಪ್ಸೆ ಮತ್ತು ತಿರಸ್ಕಾರವನ್ನು ತೋರಿಸುತ್ತಾರೆ. ತಮ್ಮಲ್ಲಿಯೂ ಮತ್ತು ಇತರರಲ್ಲಿಯೂ ಇರುವ ನನ್ನನ್ನು ಗುರುತಿಸಲು ನಿರಾಕರಿಸುತ್ತಾರೆ. ಅವರು ಮತ್ಸರವುಳ್ಳವರು. ಅವರು ನನ್ನ ಪಾರಮ್ಯವನ್ನು ವಿರೋಧಿಸುತ್ತಾರೆ.
तानहं द्विषतः कॄरान्
संसारेषु नराधमान्।
क्षिपाम्यजस्रमशुभान्
आसुरीष्वेव योनिषु॥१६.१९॥
ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ ।
ಕ್ಷಿಪಾಮ್ಯಜಸ್ರಮಶುಭಾನ್ ಅಸುರೀಷ್ವೇವ ಯೋನಿಷು ॥ 16-19॥
तानहं द्विषतः कॄरान् संसारेषु नराधमान्।
क्षिपाम्यजस्रमशुभान् आसुरीष्वेव योनिषु॥१६.१९॥
ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ ।
ಕ್ಷಿಪಾಮ್ಯಜಸ್ರಮಶುಭಾನ್ ಅಸುರೀಷ್ವೇವ ಯೋನಿಷು ॥ 16-19॥
19. As these Asuric people hate Me;
as they are cruel
and vilest among people
in the trans-migratory life;
and as they are inauspicious,
I throw them into the wombs
Of Asuric people again and again.
ಈ ರೀತಿಯಾಗಿ ನನ್ನನ್ನು ದ್ವೇಶಿಸುವ ಆ ಕ್ರೂರರೂ, ಪಾಪಕರ್ಮಗಳನ್ನು ಮಾಡುವವರೂ ಆದ ನರಾಧಮರನ್ನು ನಾನು ನಿರಂತರವಾಗಿ ಸಂಸಾರಗಳಲ್ಲಿ, ಅದರಲ್ಲೂ ಅಸುರೀ ಯೋನಿಗಳಲ್ಲಿಯೇ ಜನಿಸುವಂತೆ ಪದೇ ಪದೇ ಹಾಕುತ್ತೇನೆ. ಏಕೆಂದರೆ ಅವರು ಅಮಂಗಳರು.
आसुरीं योनिमापन्ना:
मूढा जन्मनि जन्मनि।
मामप्राप्यैव कौन्तेय
ततो यान्त्यधमां गतिम्॥१६.२०॥
ಆಸುರೀಂ ಯೋನಿಮಾಪನ್ನಾಃ
ಮೂಢಾ ಜನ್ಮನಿ ಜನ್ಮನಿ ।
ಮಾಮಪ್ರಾಪ್ಯೈವ ಕೌಂತೇಯ
ತತೋ ಯಾಂತ್ಯಧಮಾಂ ಗತಿಮ್ ॥ 16-20॥
आसुरीं योनिमापन्ना: मूढा जन्मनि जन्मनि।
मामप्राप्यैव कौन्तेय ततो यान्त्यधमां गतिम्॥१६.२०॥
ಆಸುರೀಂ ಯೋನಿಮಾಪನ್ನಾಃ ಮೂಢಾ ಜನ್ಮನಿ ಜನ್ಮನಿ ।
ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ ॥ 16-20॥
20. Taking birth in demonic wombs,
people of Asuric nature
get deluded life after life
and fail to reach Me.
Arjuna, they further go down
To ignoble states.
ಎಲೈ ಅರ್ಜುನ! ಪ್ರತಿಜನ್ಮದಲ್ಲಿಯೂ ಅಸುರೀ ಯೋನಿಯನ್ನು ಹೊಂದಿದ ಈ ಮೂಢರು ಪ್ರತಿಯೊಂದು ಜನ್ಮದಲ್ಲಿಯೂ ನನ್ನನ್ನು ನೆನೆಯದೆ ಜನ್ಮಾಂತರಗಳಲ್ಲಿ ಮತ್ತಷ್ಟು ಕೀಳಾದ ಜನ್ಮವನ್ನು ಪಡೆಯುತ್ತಾರೆ ಮತ್ತು ನನ್ನನ್ನು ಸೇರಲು ವಿಫಲರಾಗುತ್ತಾರೆ.
त्रिविधं नरकस्येदं
द्वारं नाशनमात्मनः।
कामः क्रोधस्तथा लोभ:
तस्मादेतत्त्रयं त्यजेत्॥१६.२१॥
ತ್ರಿವಿಧಂ ನರಕಸ್ಯೇದಂ
ದ್ವಾರಂ ನಾಶನಮಾತ್ಮನಃ ।
ಕಾಮಃ ಕ್ರೋಧಸ್ತಥಾ ಲೋಭಃ
ತಸ್ಮಾದೇತತ್ತ್ರಯಂ ತ್ಯಜೇತ್ ॥ 16-21॥
त्रिविधं नरकस्येदं द्वारं नाशनमात्मनः।
कामः क्रोधस्तथा लोभ: तस्मादेतत्त्रयं त्यजेत्॥१६.२१॥
ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ ।
ಕಾಮಃ ಕ್ರೋಧಸ್ತಥಾ ಲೋಭಃ ತಸ್ಮಾದೇತತ್ತ್ರಯಂ ತ್ಯಜೇತ್ ॥ 16-21॥
21. Summing up all the demonic qualities,
The Lord says:
The Asuric nature is of three kinds:
Lust, Anger and Greed.
They constitute the three-fold Gate to Hell,
which is destructive of self.
Therefore, one should reject them completely.
ಎಲ್ಲ ಅಸುರೀ ಗುಣಗಳ ತಾತ್ಪರ್ಯವೆಂಬಂತೆ ಭಗವಂತನು ಹೀಗೆ ಹೇಳುತ್ತಾನೆ.
ಅಸುರೀ ಗುಣಗಳು ಮೂರು ಬಗೆಯದ್ದಾಗಿರುತ್ತವೆ.
ಕಾಮ, ಕ್ರೋಧ ಮತ್ತು ಲೋಭ. ಇವುಗಳು ಮೂರು ಪ್ರಕಾರದ ನರಕದ ದ್ವಾರಗಳಾಗಿವೆ. ಇವು ಮನುಷ್ಯನಿಗೆ ಸ್ವಯಂ ಹಾನಿಕರವಾಗಿವೆ ಅರ್ಥಾತ್ ಈ ದ್ವಾರಗಳು ಆತ್ಮನಾಶಕ್ಕೆ ಕಾರಣ. ಆದುದರಿಂದ ಪ್ರತಿಯೊಬ್ಬರೂ ಇವುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.
एतैर्विमुक्तः कौन्तेय
तमोद्वारैस्त्रिभिर्नरः।
आचरत्यात्मनः श्रेय:
ततो याति परां गतिम्॥१६.२२॥
ಏತೈರ್ವಿಮುಕ್ತಃ ಕೌಂತೇಯ
ತಮೋದ್ವಾರೈಸ್ತ್ರಿಭಿರ್ನರಃ ।
ಆಚರತ್ಯಾತ್ಮನಃ ಶ್ರೇಯಃ
ತತೋ ಯಾತಿ ಪರಾಂ ಗತಿಮ್ ॥ 16-22॥
एतैर्विमुक्तः कौन्तेय तमोद्वारैस्त्रिभिर्नरः।
आचरत्यात्मनः श्रेय: ततो याति परां गतिम्॥१६.२२॥
ಏತೈರ್ವಿಮುಕ್ತಃ ಕೌಂತೇಯ ತಮೋದ್ವಾರೈಸ್ತ್ರಿಭಿರ್ನರಃ ।
ಆಚರತ್ಯಾತ್ಮನಃ ಶ್ರೇಯಃ ತತೋ ಯಾತಿ ಪರಾಂ ಗತಿಮ್ ॥ 16-22॥
22. Arjuna,
Getting released
From the three Dark Gates of Hell,
a human being attends to what promotes his good
and thereby he is enabled to proceed
to reach the Supreme Goal.
ಅರ್ಜುನಾ! ನರಕದ ಈ ಮೂರು ತಮೋದ್ವಾರಗಳಿಂದ ತಪ್ಪಿಸಿಕೊಂಡು ಮುಕ್ತನಾದ ಪುರುಷನು ತನ್ನನ್ನು ತಾನು ರಕ್ಷಿಸಿಕೊಳ್ಳುವವನಾಗಿ, ತನ್ನ ಶ್ರೇಯಸ್ಸಿಗಾಗಿ ಆಚರಣೆಯನ್ನು ಮಾಡುತ್ತಾನೆ. ಅದರಿಂದ ಅವನು ಪರಮಗತಿಯಾದ ಮೋಕ್ಷವನ್ನು ಪಡೆಯುತ್ತಾನೆ.
यः शास्त्रविधिमुत्सृज्य
वर्तते कामकारतः।
न स सिद्धिमवाप्नोति
न सुखं न परां गतिम्॥१६.२३॥
ಯಃ ಶಾಸ್ತ್ರವಿಧಿಮುತ್ಸೃಜ್ಯ
ವರ್ತತೇ ಕಾಮಕಾರತಃ ।
ನ ಸ ಸಿದ್ಧಿಮವಾಪ್ನೋತಿ
ನ ಸುಖಂ ನ ಪರಾಂ ಗತಿಮ್ ॥ 16-23॥
यः शास्त्रविधिमुत्सृज्य वर्तते कामकारतः।
न स सिद्धिमवाप्नोति न सुखं न परां गतिम्॥१६.२३॥
ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ ।
ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ ॥ 16-23॥
23. Rejecting the prescriptions
given in the Shastras,
in terms of what ought or
what ought not to be done,
one who leads a life
driven by desire
achieves neither the fulfillment of the goal,
nor happiness, nor even the Supreme Good.
ಯಾರು ಶಾಸ್ತ್ರ ವಿಧಿಗಳನ್ನು ತ್ಯಜಿಸಿ ಸ್ವೇಚ್ಛೆಯಿಂದ ನಡೆಯುವನೋ ಅವನು, ಪುರುಷಾರ್ಥ ಯೋಗ್ಯತೆಯನ್ನು ಹೊಂದುವುದಿಲ್ಲ, ಸುಖವನ್ನೂ ಹೊಂದುವುದಿಲ್ಲ, ಪರಮಗತಿಯನ್ನೂ ಹೊಂದುವುದಿಲ್ಲ
तस्माच्छास्त्रं प्रमाणं ते
कार्याकार्यव्यवस्थितौ।
ज्ञात्वा शास्त्रविधानोक्तं
कर्म कर्तुमिहार्हसि॥१६.२४॥
ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ
ಕಾರ್ಯಾಕಾರ್ಯವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರವಿಧಾನೋಕ್ತಂ
ಕರ್ಮ ಕರ್ತುಮಿಹಾರ್ಹಸಿ ॥ 16-24॥
तस्माच्छास्त्रं प्रमाणं ते कार्याकार्यव्यवस्थितौ।
ज्ञात्वा शास्त्रविधानोक्तं कर्म कर्तुमिहार्हसि॥१६.२४॥
ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ ॥ 16-24॥
24. Therefore,
Shastra alone should be your guide
with regard to
what should be done
and what should not be done.
Perform your actions here
as prescribed by the Shastra —
so should be your actions.
ಆದುದರಿಂದ, ಇದನ್ನು ಮಾಡಬೇಕು, ಇದನ್ನು ಮಾಡಬಾರದು ಎಂಬ ಕಾರ್ಯಾಕಾರ್ಯಗಳ ನಿರ್ಣಯಕ್ಕೆ ಶಾಸ್ತ್ರವೇ ನಿನಗೆ ಪ್ರಮಾಣವಾಗಿದೆ. ಶಾಸ್ತ್ರವಿಧಿಯಲ್ಲಿ ಹೇಳಿರುವುದನ್ನು ಸರಿಯಾಗಿ ಗ್ರಹಿಸಿ ಇಲ್ಲಿ ಕರ್ಮ ಮಾಡಬೇಕು. ಇಂತಹ ನಿಯಮ ನಿಬಂಧನೆಗಳನ್ನು ತಿಳಿದುಕೊಂಡು ಮನುಷ್ಯನು, ತಾನು ಕ್ರಮೇಣ ಮೇಲಕ್ಕೇರುವುದು ಸಾಧ್ಯವಾಗುವಂತೆ ಕರ್ಮ ಮಾಡಬೇಕು.
ಓಂ ತತ್ ಸತ್ ಇತಿ
ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಶ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ದೈವಾಸುರ ಸಂಪದ್ವಿಭಾಗಯೋಗವೆಂಬ ಹೆಸರಿನ ಹದಿನಾರನೆಯ ಅಧ್ಯಾಯವು ಮುಗಿದುದು.
ऒम् तत्सदिति ಓಂ ತತ್ಸದಿತಿ
श्रीमद्भगवद्गीतासु ಶ್ರೀಮದ್ಭಗವದ್ಗೀತಾಸು
उपनिषत्सु ಉಪನಿಷತ್ಸು
ब्रह्मविद्यायां ಬ್ರಹ್ಮವಿದ್ಯಾಯಾಂ
यॊगशास्त्रे ಯೋಗಶಾಸ್ತ್ರೇ
श्री कृष्णार्जुन संवादॆ ಶ್ರೀಕೃಷ್ಣಾರ್ಜುನಸಂವಾದೇ
दैवासुरसम्पद्विभागयोगो नाम ದೈವಾಸುರಸಂಪದ್ವಿಭಾಗಯೋಗೋ ನಾಮ
षोडशोऽध्यायः ಷೋಡಶೋಽಧ್ಯಾಯಃ
ऒम् तत्सत् ಓಂ ತತ್ಸತ್
—————— The End of Chapter Sixteen —————