SRIMAD BHGAVAD GITA
CHAPTER 1
A Sloka A Day
Published by Lanka Krishna Murti Foundation (https://krishnamurtifoundation.com/lanka/)
INTRODUCTION
Who am I?
How am I constituted?
Why am I here?
How do I relate myself to the external world and its Creator?
What is the purpose of my life?
How do I achieve it?
Everyone, some time or the other, gets troubled by these nagging questions. All of them have been stated, discussed, debated on, and many different conclusions have been drawn by the great Seers or Rishis in our sacred texts like the Srutis, Smrutis, Darshanas, Sastras, Puranas, and Itihasas.
But how would you feel if the Creator Himself assumes a human form and comes down to you and speaks like a Friend, Philosopher and Guide and invites you to join Him?
Great! That is Bhagavan Sri Krishna!
He not only gives answers to all the above questions and enlightens you on Wisdom but also tells you how to realize and experience the Truth of that Wisdom through upasana. One is the adhyayana or study of Brahma Vidya and the other is the practice or upasana through Yoga. Both imply saadhana or steady attempt. In short, that is what Srimad Bhagavad Gita is all about.
It is a saadhana that should be joyously undertaken by everyone with the help of one’s own body, with all its faculties and functions, serving as an instrument. In this respect, Srimad Bhagavad Gita stands as an excellent User’s Manual to produce the best results.
We offer that User’s Manual, Srimad Bhagavad Gita, in the format of ‘A Sloka A Day’ with the hope that it will help your saadhana or upaasana progress steadily with singleness of mind and full devotion towards realizing your objective.
Finally, it is important to remember that the slokas in the text are mantras , as in an Upanishad, and you should recite, as mantra pathanam, each one of them so as to get the feel and benefit of their vibrational power in terms of purifying your inner instruments or antahkarana. OM TAT SAT
ಶ್ರೀಮದ್ ಭಗವದ್ಗಿತಾ
ದಿನಕ್ಕೊಂದು ಶ್ಲೋಕ
ಪೀಠಿಕೆ
ನಾನು ಯಾರು?
ನಾನು ಹೇಗೆ ರಚಿಸಲ್ಪಟ್ಟಿರುವೆ?
ನಾನೇಕೆ ಇಲ್ಲಿರುವೆ?
ಬಾಹ್ಯ ಪ್ರಪಂಚದೊಂದಿಗೆ ಹಾಗೂ ಅದರ ನಿರ್ಮಾತೃವಿನೊಂದಿಗೆ ನನ್ನ ಸಂಬಂಧವೇನು?
ನನ್ನ ಜೀವನದ ಧ್ಯೇಯೋದ್ದೇಶವೇನು?
ನಾನು ಅದನ್ನು ಹೇಗೆ ಸಾಧಿಸಬಲ್ಲೆ?
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಬಾರಿ ಈ ಮೇಲಿನ ಪ್ರಶ್ನೆಗಳು ಕಾಡುತ್ತಿರುತ್ತವೆ. ಈ ಪ್ರಶ್ನೆಗಳ ಉಲ್ಲೇಖ, ಇವುಗಳ ಚರ್ಚೆ, ವಾದ ವಿವಾದಗಳು ಹಾಗೂ ವಿವಿಧ ರೀತಿಯ ಉತ್ತರಗಳನ್ನೂ ಮತ್ತು ತೀರ್ಮಾನಗಳನ್ನೂ ನಮ್ಮ ಮಹಾನ್ ಋಷಿಮುನಿಗಳು, ಪವಿತ್ರ ಗ್ರಂಥಗಳಾದ ಶೃತಿಗಳು, ಸ್ಮೃತಿಗಳು, ದರ್ಶನಗಳು, ಶಾಸ್ತ್ರಗಳು, ಪುರಾಣ ಮತ್ತು ಇತಿಹಾಸಗಳಲ್ಲಿ ನಮಗೆ ಅರುಹಿದ್ದಾರೆ.
ಆದರೆ ಸೃಷ್ಟಿಕರ್ತನೇ ಸ್ವಯಂ ಮನುಷ್ಯ ರೂಪದಲ್ಲಿ ಬಂದು ನಿಮ್ಮೆದುರು ನಿಂತು, ನಿಮ್ಮ ಹಿತೈಶಿ, ಮಿತ್ರ ಮತ್ತು ಮಾರ್ಗದರ್ಶಿಯಂತೆ ಮಾತನಾಡಿ, ಅವನೊಡನೆ ಸಂವಾದಿಸುವಂತೆ ಕರೆದಾಗ ನಿಮಗೆ ಹೇಗನಿಸಬಹುದು?
ಅದ್ಬುತ! ಅವನೇ ಭಗವಾನ್ ಶ್ರೀ ಕೃಷ್ಣ!
ಭಗವಾನ್ ಶ್ರೀ ಕೃಷ್ಣನು ಮೇಲಿನ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿ ನಿಮ್ಮ ವಿವೇಕವನ್ನು ಜಾಗೃತಗೊಳಿಸುವುದಲ್ಲದೇ ಉಪಾಸನೆಯ ಮೂಲಕ, ನಮ್ಮ ಜ್ಞಾನದ ಅರಿವನ್ನು ಹೇಗೆ ಅನುಭವಿಸಿ ಸಾಕ್ಷಾತ್ಕಾರಿಸಿಕೊಳ್ಳಬೇಕೆಂಬುದನ್ನು ಸಹ ತಿಳಿಸಿಕೊಡುತ್ತಾನೆ. ಅಧ್ಯಯನ ಅಥವಾ ಬ್ರಹ್ಮವಿದ್ಯೆಯ ಕಲಿಕೆ ಒಂದಾದರೆ, ಯೋಗದ ಮುಖಾಂತರ ಉಪಾಸನೆಯ ಅಭ್ಯಾಸ ಮಾಡುವುದು ಮತ್ತೊಂದು. ಈ ಎರಡು ಬಗೆಯೂ ಸಾಧನೆ ಅಥವಾ ಸತತ ಪ್ರಯತ್ನವನ್ನು ಪ್ರತಿನಿಧಿಸುತ್ತದೆ. ಚುಟುಕಾಗಿ ಹೇಳಬೇಕೆಂದರೆ, ಶ್ರೀಮದ್ ಭಗವದ್ಗೀತೆಯೆಂದರೆ ಈ ಸಾಧನೆಯ ಪ್ರಯತ್ನವೇ!
ಸಾಮರ್ಥ್ಯ ಮತ್ತು ಕರ್ತವ್ಯವನ್ನು ಸಾಧನವನ್ನಾಗಿಸುವ ನಮ್ಮ ಶರೀರದ ಸಹಾಯದಿಂದ ಪ್ರತಿಯೊಬ್ಬರೂ ಸ್ವಸಂತೋಷದಿಂದ ಸಾಧನೆಯನ್ನು ಕೈಗೊಳ್ಳಬೇಕಾಗುತ್ತದೆ. ಈ ವಿಚಾರದಲ್ಲಿ ಸಾಧಕರ ಕೈಪಿಡಿಯಾಗಿ ಉತ್ತಮ ಫಲಿತಾಂಶವನ್ನು ನೀಡುವಲ್ಲಿ ಶ್ರೀಮದ್ ಭಗವದ್ಗೀತೆಯು ಮುಖ್ಯ ಪಾತ್ರ ವಹಿಸುತ್ತದೆ.
ನಿಮ್ಮ ಸಾಧನೆ ಅಥವ ಉಪಾಸನೆಯ ಹಾದಿಯಲ್ಲಿ ಸತತ ಪ್ರಗತಿ, ಹಾಗೂ ಮನಸ್ಸಿನ ಏಕಾಗ್ರತೆ ಮತ್ತು ನಿಮ್ಮ ಧ್ಯೇಯವನ್ನು ಮನಗಾಣುವಲ್ಲಿನ ಶ್ರದ್ಧೆಗೆ ಸಹಾಯಕವಾಗುವುದೆಂಬ ಆಶಯದೊಂದಿಗೆ ಸಾಧಕರ ಕೈಪಿಡಿಯಾದ ಶ್ರೀಮದ್ ಭಗವದ್ಗೀತೆಯನ್ನು ದಿನಕ್ಕೊಂದು ಶ್ಲೋಕದ ರೂಪದಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.
ಅಂತಿಮವಾಗಿ, ಉಪನಿಷತ್ ಗಳಲ್ಲಿ ಗ್ರಂಥಪಾಠದಲ್ಲಿನ ಶ್ಲೋಕಗಳನ್ನು, ಮಂತ್ರಗಳು ಎಂಬುದಾಗಿ ಮನನ ಮಾಡಿಕೊಂಡು, ನಿಮ್ಮ ಅಂತಃಕರಣದ ಶುದ್ಧಿಗಾಗಿ ಮಂತ್ರಪಠಣದ ಕಂಪನದ ಶಕ್ತಿಯನ್ನು ಸಂವೇದಿಸಲು ನೀವು ಪ್ರತಿಯೊಂದು ಶ್ಲೋಕವನ್ನೂ ಮಂತ್ರದಂತೆ ಪಠಿಸಬೇಕೆಂದು ಕೋರುತ್ತೇವೆ.
ಓಂ ತತ್ಸತ್
Chapter 1
Arjuna Vishada Yogah
ಅರ್ಜುನ ವಿಷಾದಯೋಗಃ
ॐ
पार्थाय प्रतिबोधितां भगवता नारायणेन स्वयं
व्यासेन ग्रथितांnपुराणमुनिना मध्ये महाभारतम् ।
अद्वैतामृतवर्षिणीं भगवतीम्- अष्टादशाध्यायिनीम्
अम्ब त्वामनुसन्दधामि भगवद्- गीते भवद्वेषिणीम् ॥ १॥
ಓಂ
ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣ ಮುನಿನಾ ಮಧ್ಯೇ ಮಹಾಭಾರತಂ
ಅದ್ವೈತಾಮೃತ ವರ್ಷಿಣೀಂmಭಗವತೀಮ್ ಅಷ್ಟಾ ದಶಾ ಧ್ಯಾಯಿನೀಂ
ಅಂಬತ್ವಾಮ್ ಅನುಸನ್ಧಧಾಮಿ ಭಗವದ್ ಗೀತೇ ಭವ ದ್ವೇಶಿಣೀಮ್
Ambaa, o divine mother, I meditaate on You, in the form of Bhagavadgita, which contains the instruction imparted to Partha or Arjuna, by Lord Narayana himself as Krishna in a span of Eighteen Chapters, which the ancient Sage Vyasa included in the middle of Mahabharata, through which O Devine Mother You shower the Nector of Non Dualism or Advaitamruta and which brings to an end the mortal cycle of Births and Deaths. O Devine Mother, I meditate on You in the form of Bhagavadgita.
ಅಂಬಾ, ಹೇ ಮಾತೇ! ಭಗವದ್ಗೀತೆ,
ಸ್ವಯಂಭಗವಂತನಾದ ಶ್ರೀಮನ್ನಾರಯಣ ಸ್ವರೂಪಿಯಾದ
ಶ್ರೀ ಕೃಷ್ಣನಿಂದ ಪಾರ್ಥ ಅಂದರೆ ಅರ್ಜುನನಿಗೆ ಉಪದೇಶಿಸಲ್ಪಟ್ಟ,
ಪ್ರಾಚೀನ ಸನಾತನ ಋಷಿಯಾದ ವೇದವ್ಯಾಸನಿಂದ ಮಹಾಭಾರತದ
ಮಧ್ಯದಲ್ಲಿ ಸೇರಿಸಲ್ಪಟ್ಟ, ಹದಿನೆಂಟು ಅಧ್ಯಾಯಗಳಿಂದ ಕೂಡಿರುವ, ಅದ್ವೈತಾಮೃತವೆಂಬ ವರ್ಷವನ್ನು ಸುರಿಸುತ್ತಿರುವ, ಭವಕರ್ಮವನ್ನು ಹೋಗಲಾಡಿಸುವ ಭಗವತಿಯಾದ ನಿನ್ನನ್ನು ನಾನು ಭಗವದ್ಗೀತೆಯ ರೂಪದಲ್ಲಿಧ್ಯಾನಿಸುತ್ತೇನೆ.
धृतराष्ट्र उवाच:
धर्मक्षेत्रे कुरुक्षेत्रे समवेता युयुत्सवः।
मामकाःपाण्डवाश्चैव किमकुर्वत सञ्जय?॥१.१॥
ಧೃತರಾಷ್ಟ್ರ ಉವಾಚ ।
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥ 1-1॥
Dhritarastra said:
Tell me, Sanjaya, what happened
When my sons and those of Pandu,
Both eager to engage in a fierce battle,
Met on the battlefield of Kuru
In this land of Dharma?
ಧೃತರಾಷ್ಟ್ರ ಹೇಳಿದನು
ಹೇ ಸಂಜಯ,
ನನ್ನ ಕುಮಾರರೂ ಮತ್ತು ಪಾಂಡವರೂ,
ಯುದ್ಧವನ್ನು ಮಾಡಬೇಕೆಂಬ, ಅಭಿಲಾಷೆಯುಳ್ಳವರಾಗಿ,
ಧರ್ಮಭೂಮಿಯಾದ ಕುರುಕ್ಷೇತ್ರದಲ್ಲಿ ಸೇರಿ,
ಏನು ಮಾಡಿದರೆಂದು ನನಗೆ ಹೇಳು?||1.1||
सञ्जय उवाच–
दृष्ट्वा तु पाण्डवानीकं व्यूढं दुर्योधनस्तदा।
आचार्यमुपसङ्गम्य राजा वचनमब्रवीत्॥१.२॥
ಸಂಜಯ ಉವಾಚ ।
ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ ।
ಆಚಾರ್ಯಮುಪಸಂಗಮ್ಯರಾಜಾ ವಚನಮಬ್ರವೀತ್ ॥ 1-2॥
Sanjaya said:
Finding the ranks of Pandu’s army
Kept well-marshalled,
King Duryodhana approached his Guru,
and addressed him thus:
ಸಂಜಯನು ಹೇಳಿದನು
ಯುದ್ಧಾರಂಭದ ಸಮಯದಲ್ಲಿ ರಾಜನಾದ ದುರ್ಯೋಧನನು
ವ್ಯೂಹಾಕಾರವಾಗಿರುವ ಪಾಂಡವರ ಸೈನ್ಯವನ್ನು ನೋಡಿ
ಗುರುವಾದ ದ್ರೋಣಾಚಾರ್ಯರ ಬಳಿಗೆ ಸಾರಿ ಹೀಗೆ ಹೇಳುತ್ತಾನೆ
पस्यैतां पाण्डुपुत्राणाम् आचार्य महतीं चमूम्।
व्यूढां द्रुपदपुत्रेण तव शिष्येण धीमता॥१.३॥
ಪಶ್ಯೈತಾಂ ಪಾಂಡುಪುತ್ರಾಣಾಮ್ ಆಚಾರ್ಯ ಮಹತೀಂ ಚಮೂಮ್ ।
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ॥ 1-3॥
Duryodhana said:
“Revered Acharya,
Look at that huge formation
Of Pandsvas’ army, very ably marshalled
By the son of Drupada
The intelligent Dhrushtadyumna,
Who happens to be your own disciple!
ದುರ್ಯೋಧನನು ಹೇಳಿದನು:-
ಹೇ ಗುರುವರ್ಯ! ನಿಮ್ಮ ಶಿಷ್ಯನೂ, ಬುದ್ಧಿವಂತನೂ, ದೃಪದಪುತ್ರನೂ ಆದ ದುಷ್ಟದ್ಯುಮ್ನನಿಂದ ವ್ಯೂಹಾಕಾರವಾಗಿ ರಚಿತವಾದ, ಪಾಂಡುಪುತ್ರರ ಈ ಮಹಾಸೈನ್ಯವನ್ನು ನೋಡಿರಿ.
अत्र शूरा महेष्वासा भीमार्जुनसमा युधि।
युयुधानो विराटश्च द्रुपदश्च महारथः॥१.४॥
ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ ।
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ ॥ 1-4॥
Duryodhana said to Drona:
“Behold, that massive army of Pandavas,
Comprising brave archers,
As highly skilled in warfare
As Bhima and Arjuna:
They are Satyaki and Virata
And Drupada too who is a Maharatha.
ದುರ್ಯೋಧನನು ದ್ರೋಣರಿಗೆ ಹೇಳಿದನು:-
ಹೋರಾಟದಲ್ಲಿ ಭೀಮಾರ್ಜುನರಿಗೆ ಸಮಾನರಾದ ಅನೇಕ ವೀರ ಬಿಲ್ಲುಗಾರರು ಈ ಸೈನ್ಯದಲ್ಲಿದ್ದಾರೆ.(ಸಾತ್ಯಕಿ),ವಿರಾಟ ಮತ್ತು ದೃಪದರಂತಹ ಮಹಾರಥಿಗಳಿದ್ದಾರೆ.
धृष्टकेतुश्चेकितानः काशिराजश्च वीर्यवान्।
पुरुजित् कुन्तिभोजश्च शैब्यश्च नरपुङ्गवः॥१.५॥
ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ ।
ಪುರುಜಿತ್ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ ॥ 1-5॥
युधामन्युश्च विक्रान्तः उत्तमौजाश्च वीर्यवान्।
सौभद्रो द्रौपदेयाश्च सर्व एव महारथाः॥१.६॥
ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ ।
ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ ॥ 1-6॥
Duryodhana further said to Drona:
“In addition, there are in that Pandavas’ army
Highly skilled Maharathas:
Like Dhrushtaketu, Chekitana,
The valiant King of Kashi,
Purujit, Kuntihoja and Shaibya,
The choicest among the humans,
Valiant Yudhamanyu,
Uttamouja of heroic temper,
Abhimanyu, the son of Subhadra,
As well as the five sons of Draupadi.
ದುರ್ಯೋಧನನು ಮುಂದುವರೆದು ದ್ರೋಣರಿಗೆ ಹೇಳಿದನು.
ಇವರ ಜೊತೆಗೆ ದೃಷ್ಟಕೇತು, ಚೇಕಿತಾನ, ಕಾಶೀರಾಜ,
ಪುರುಜಿತ್, ಕುಂತಿಭೋಜ ಮತ್ತು ಶೈಬ್ಯನಂತಹ ನರಪುಂಗವರು ಇದ್ದಾರೆ.
ಬಲಶಾಲಿ ಯುಧಾಮನ್ಯು, ಪರಾಕ್ರಮಿಯಾದ ಉತ್ತಮೌಜ,
ಸುಭದ್ರೆಯ ಮಗನಾದ ಅಭಿಮನ್ಯು ಹಾಗೂ ದ್ರೌಪದಿಯ ಐವರು ಪುತ್ರರೂ ಇದ್ದಾರೆ.
ಇವರೆಲ್ಲರೂ ಮಹಾರಥಿಗಳಾಗಿದ್ದಾರೆ.
अस्माकं तु विशिष्ठा ये तान्निबोध द्विजोत्तम।
नायका मम सैन्यस्य संज्ञार्थं तान् ब्रवीमि ते॥१.७॥
ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ ।
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ಬ್ರವೀಮಿ ತೇ ॥ 1-7॥
Added Duryodhana, addressing Dronacharya:
“O Preeminent Brahmana,
Know that distinguished warriors
Are there on our side too.
I may mention them for your reference –
Those army-chiefs of high caliber.”
ಮತ್ತೆ ದುರ್ಯೋಧನನು ದ್ರೋಣನಿಗೆ ಹೇಳುತ್ತಾನೆ
ಹೇ ಬ್ರಾಹ್ಮಣೋತ್ತಮರೇ!
ನಮ್ಮ ಪಕ್ಷದಲ್ಲಿಯೂ ಸಹ ಯಾವ ಪ್ರಧಾನರಾದ ಯೋಧರಿದ್ದಾರೆಯೋ ಅವರನ್ನು ನೀವು ತಿಳಿದುಕೊಲ್ಲಿರಿ.
ತಮ್ಮ ತಿಳುವಳಿಕೆಗಾಗಿ ನನ್ನ ಸೈನ್ಯವನ್ನು ನಡೆಸಬಲ್ಲ ವಿಶೇಷ ಅರ್ಹತೆಯುಳ್ಳ ನಾಯಕರ
भवान्भीष्मश्च कर्णश्च कृपश्च समितिञ्जयः।
अश्वत्थामा विकर्णश्च सौमदत्तिर्जद्रथः ॥१.८॥
ಭವಾನ್ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ ।
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿರ್ಜಯದ್ರಥಃ ॥ 1-8॥
Duryodhana said:
“Your Honoured Self, Dronacharya, to begin with,
And Bheeshma, the grandsire known for his great Vow,
And Karna, the son of Kunti by the sun,
Then Krupa, the great winner of battles,
And then your own son, Aswathama,
And Vikarna and Soumadatta too.
ದುರ್ಯೋಧನನು ಹೇಳುತ್ತಾನೆ.
ದ್ರೋಣಾಚಾರ್ಯರಾದ ನೀವು ಮತ್ತು ಪಿತಾಮಹರಾದ ಭೀಷ್ಮರು,
ಸೂರ್ಯನ ವರದಿಂದ ಕುಂತಿಯಲ್ಲಿ ಜನಿಸಿದ ಕರ್ಣನೂ, ರಣಧೀರನಾದ ಕೃಪಾಚಾರ್ಯರು
ಹಾಗೂ ತಮ್ಮ ಪುತ್ರ ಅಶ್ವತ್ಠಾಮನು, ಹಾಗೆಯೇ ನನ್ನ ತಮ್ಮನಾದ ವಿಕರ್ಣನೂ, ಸೋಮದತ್ತನ ಪುತ್ರನಾದ ಭೂರಿಶ್ರವನೂ
ಇವರೆಲ್ಲಾ ಯಾವಾಗಲೂ ಯುದ್ಧದಲ್ಲಿ ವಿಜಯಿಗಳಾಗುವವರು.
अन्ये च बहवः शूरा मदर्थे त्यक्तजीविताः।
नानाशस्त्रप्रहरणाः सर्वे युद्धविशारदाः॥१.९॥
ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ ।
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ॥ 1-9॥
Duryodhana said:
“More are there of great value,
Ready to give up
Even their lives for my cause,
Well-equipped with a variety of weapons
And well versed in warfare.
ದುರ್ಯೋಧನ ಹೇಳುತ್ತಾನೆ
ನನಗಾಗಿ ಪ್ರಾಣವನ್ನೇ ಕೊಡಲು ಬದ್ಧವಾಗಿರುವ ಇನ್ನೂ ಅನೇಕ ಮಂದಿ ವೀರರಿದ್ದಾರೆ.
ಅವರೆಲ್ಲಾ ವಿವಿಧ ಅಸ್ತ್ರಶಸ್ತ್ರಗಳನ್ನು ಹೊಂದಿರುವವರು.
ಎಲ್ಲರೂ ಯುದ್ಧ ವಿಶಾರದರು.
ವಿಷಯವನ್ನು ತಿಳಿಸುತ್ತೇನೆ.
अपर्याप्तं तदस्माकं बलं भीष्माभिरक्षितं।
पर्याप्तं त्विदमेतेषां बलं भीमाभिरक्षितम्॥१.१०॥
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ ।
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ॥ 1-10॥
Duryodhana told Drona:
“But limited and inadequate seems
The strength of our army
Under the care of Bheeshma the Great,
Whereas the one that is led
And defended by Bheema
Looks battle-fit.
ದುರ್ಯೋಧನ ಹೇಳುತ್ತಾನೆ.
ಭೀಮನಿಂದ ಸಮರ್ಥವಾಗಿ ರಕ್ಷಿಸಲ್ಪಟ್ಟಿರುವ ಪಾಂಡವರ ಸೇನಾಬಲದ ಮುಂದೆ
ತಾತ ಭೀಷ್ಮರ ಸುಪರ್ದಿಯಲ್ಲಿರುವ
ನಮ್ಮ ಸೈನ್ಯದ ಶಕ್ತಿ ಪರಿಮಿತಿಯುಳ್ಳದ್ದಾಗಿದ್ದು
ಕೊರತೆಯಿಂದಿದೆಯೇನೋ ಎಂಬಂತೆ ಗೋಚರಿಸುತ್ತಿದೆ.
अयनेषु च सर्वेषु यथाभागमवस्थिताः।
भीष्ममेवाभिरक्षन्तु भवन्तः सर्व एव हि॥१.११॥
ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ ।
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ॥ 1-11॥
Duryodhana concluded by saying:
“Therefore march and keep guard
At all the strategic points,
At your assigned positions,
And provide protection to Grandsire Bheeshma.”
ಕೊನೆಗೆ ದುರ್ಯೋಧನ ಹೀಗೆ ಹೇಳಿ ಮುಗಿಸುತ್ತಾನೆ.
ಆದ್ದರಿಂದ ಸೈನ್ಯವ್ಯೂಹವನ್ನು ಪ್ರವೇಶಿಸಲು ಇರುವ ಆಯಕಟ್ಟಿನ ಬಿಂದುಗಳಲ್ಲಿ,
ನಿಮ್ಮ ನಿಮ್ಮ ಸ್ಥಳಗಳಲ್ಲಿ ನಿಂತಿರುವ ನೀವು,
ಈಗ ನಿಶ್ಚಿತವಾಗಿ ಪಿತಾಮಹ ಭೀಷ್ಮರಿಗೆ ರಕ್ಷಣೆಯನ್ನು ನೀಡಿ.
तस्य सञ्जनयन्हर्षं कुरुवृद्धः पितामहः।
सिंहनादं निनाद्योच्चैः शङ्खं दध्मौ प्रतापवान्॥१.१२॥
ತಸ್ಯ ಸಂಜನಯನ್ಹರ್ಷಂ ಕುರುವೃದ್ಧಃ ಪಿತಾಮಹಃ ।
ಸಿಂಹನಾದಂ ನಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ॥ 1-12॥
Bheeshma the Eldest in the Kuru clan,
The great Grandsire, filled with valour,
Roared then like a lion and sounded his conch,
The loud sound of which filled with joy
The heart of Duryodhana.
ಹೀಗೆಂದು ಹೇಳಿದ ದುರ್ಯೋಧನನಿಗೆ ಉತ್ಸಾಹವನ್ನು ಉಂಟು ಮಾಡುವ ಉದ್ದೇಶದಿಂದ
ಕುರುಕುಲ ಪಿತಾಮಹರಾದ, ಅಸಮಾನ ಪ್ರತಾಪಶಾಲಿಯಾದ ಭೀಷ್ಮರು
ಉಚ್ಚ ಸ್ವರದಿಂದ ಸಿಂಹನಾದವನ್ನು ಮಾಡಿ ಶಂಖವನ್ನು ಊದಿದರು.
ಇದರಿಂದ ದುರ್ಯೋಧನನಿಗೆ ಹರ್ಷವಾಯಿತು.
ततः शङ्खाश्च भेर्यश्च पणवानकगोमुखाः।
सहसैवाभ्यहन्यन्त स शब्दस्तुमुलोऽभवत्॥१.१३॥
ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ ।
ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋಽಭವತ್ ॥ 1-13॥
A variety of instruments then
Such as conch shells, drums, bugles,
Trumpets and horns, all of a sudden,
Burst into frightening tumult.
ಅನಂತರ ಶಂಖಗಳೂ, ಭೇರಿಗಳೂ, ಡೋಲು, ತಮಟೆ, ಮೃದಂಗ,
ನಗಾರಿ,ರಣಭೇರಿ,ಕಹಳೆ, ಗೋಮುಖ ಮುಂತಾದ ವಾದ್ಯಗಳು
ಇದ್ದಕ್ಕಿದ್ದಂತೆ ಒಟ್ಟಿಗೆ ಮೊಳಗಿದವು.
ಆ ರಣಶಬ್ದವು ಭೀಷಣವಾಗಿತ್ತು.
ततः श्वेतैर्हयैर्युक्ते महति स्यन्दने स्थितौ।
माधवः पाण्डवश्चैव दिव्यौ शङ्खौ प्रदध्मतुः॥१.१४॥
ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ ।
ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ ॥ 1-14॥
Thereafter, Krishna as well as Arjuna,
Both seated on a great chariot,
Yoked by white horses,
Sounded their divine conches.
ತದನಂತರ ಬಿಳಿಯಕುದುರೆಗಳನ್ನು ಕಟ್ಟಿರುವ
ಮಹಾರಥದಲ್ಲಿ ಉಪಸ್ಥಿತರಾಗಿದ್ದ ಶ್ರೀಕೃಷ್ಣಾರ್ಜುನರು
ತಮ್ಮ ಅಲೌಕಿಕವಾದ ಶಂಖಗಳನ್ನು ಊದಿದರು.
पाञ्चजन्यं हृषीकेशो देवदत्तं धनञ्जयः।
पौण्ड्रं दध्मौ महशङ्खं भीमकर्मा वृकोदरः॥१.१५॥
ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ ।
ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ ॥ 1-15॥
Krishna sounded his conch called Panchajanya
And Arjuna his conch known as Devadatta.
Similarly Bheema, of daunting action,
Sounded his own conch Poundram.
ಸರ್ವೇಂದ್ರಿಯ ಪ್ರೇರಕನಾದ ಶ್ರೀಕೃಷ್ಣನು
ಪಾಂಚಜನ್ಯವೆಂಬ ಹೆಸರಿನ ಶಂಖವನ್ನೂ
ಅರ್ಜುನನು ದೇವದತ್ತನಾಮಾಂಕಿತ ಶಂಖವನ್ನೂ,
ಮತ್ತು ಅದ್ಭುತ ಸಾಹಸಗಳನ್ನು ಮಾಡಬಲ್ಲ ಭೀಮನು
ಪೌಂಡ್ರವೆಂಬ ಮಹಾಶಂಖವನ್ನೂ ಊದಿದರು.
अनन्तविजयं राजा कुन्तीपुत्रो युधिष्ठिरः।
नकुलः सहदेवश्च सुघोषमणिपुष्पकौ॥१.१६॥
ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ ।
ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ॥ 1-16॥
Then King Udhisthira, Kunti’s son,
Sounded the conch called Anantavijayam;
And the twosome Nakula and Sahadeva
Sounded Sughosha and Manipushpaka respectively.
ಅನಂತರ ಕುಂತೀಪುತ್ರನಾದ ಯುಧಿಷ್ಠಿರ ರಾಜನು ಅನಂತವಿಜಯವೆಂಬ ಶಂಖವನ್ನೂ
ನಕುಲ ಮತ್ತು ಸಹದೇವರು ಸುಘೋಷ ಮತ್ತು ಮಣಿಪುಷ್ಕಕಗಳೆಂಬ
ಶಂಖಗಳನ್ನು ಅನುಕ್ರಮವಾಗಿ ಊದಿದರು.
काश्यश्च परमेष्वासः शिखण्डी च महारथः।
धृष्टद्युम्नो विराटश्च सात्यकिश्चापराजितः॥१.१७॥
ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ ।
ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ॥ 1-17॥
द्रुपदो द्रौपदेयाश सर्वशः पृथिवीपते।
सौभद्रश्च महाबाहुः शङ्खान्दध्मुः पृथक्पृथक्॥१.१८॥
ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ ।
ಸೌಭದ್ರಶ್ಚ ಮಹಾಬಾಹುಃ ಶಂಖಾಂದಧ್ಮುಃ ಪೃಥಕ್ಪೃಥಕ್ ॥ 1-18॥
Sanjaya said:
“O King Dhrutarashtra,
Thereafter,
The King of Kashi, a great archer,
The two Maharathas: Shikhandi and Dhrustadyumna,
King Virata, the invincible Satyaki,
Drupada, and the five sons of Draupadi,
Abhimanyu, the mighty-armed as well –
All of them sounded their conches, severally,
From all directions.
ಎಲೈ ಧೃತರಾಷ್ಟ್ರ ರಾಜನೇ,
ಮಹಾ ಧನುರ್ಧಾರಿಯಾದ ಕಾಶೀರಾಜ, ಮಹಾರಥರಾದ ಶಿಖಂಡಿ,
ದೃಷ್ಟದ್ಯುಮ್ನ, ವಿರಾಟ, ಅಜೇಯನಾದ ಸಾತ್ಯಕಿ,
ದೃಪದರಾಜ, ದ್ರೌಪದಿಯ ಪಂಚಪುತ್ರರೂ, ಮಹಾಶೂರನಾದ ಅಭಿಮನ್ಯು,
–ಇವರೆಲ್ಲರೂ ಬೇರೆ ಬೇರೆಯಾಗಿ ತಮ್ಮ ಶಂಖಗಳನ್ನು ಊದಿದರು.
स घोषो धार्तराष्ट्राणां हृदयानि व्यदारयत्।
नभश्च पृथिवीं चैव तुमुलो व्यनुनादयन्॥१.१९॥
ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ ।
ನಭಶ್ಚ ಪೃಥಿವೀಂ ಚೈವ ತುಮುಲೋಽಭ್ಯನುನಾದಯನ್ ॥ 1-19॥
Sanjaya said:
“The deafening sound
Sent out by all those conches,
All around, reverberated
Over the sky and the earth,
Rending the hearts of Dhritarashtra’s sons.
ಆ ಭಯಂಕರಕಿವಿಗಡಚಿಕ್ಕುವ ಶಂಖ ಧ್ವನಿ
ಆಕಾಶದಲ್ಲಿಯೂ, ಭೂಮಿಯಲ್ಲಿಯೂ ಸಹ ಪ್ರತಿಧ್ವನಿ ಮಾಡುತ್ತಾ
ಧೃತರಾಷ್ಟ್ರನ ಮಕ್ಕಳ ಹೃದಯಗಳನ್ನು ಛೇದಿಸಿತು.
अथ व्यवस्थितान्दृष्ट्वा धार्तराष्ट्रान् कपिध्वजः।
प्रवृत्ते शस्त्रसम्पाते धनुरुद्यम्य पाण्डवः॥१.२०॥
ಅಥ ವ್ಯವಸ್ಥಿತಾಂದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ ।
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ ॥ 1-20॥
हृषीकेशं तदा वाक्यम् इदमाह महीपते।
ಹೃಷೀಕೇಶಂ ತದಾ ವಾಕ್ಯಮ್ ಇದಮಾಹ ಮಹೀಪತೇ ।
Sanjaya added:
“O Dhrutarashtra,
Then Arjuna, who has Hanuman
As insignia on his flag,
Saw the sons of Dhrutarashtra
Getting ready for the battle,
Setting their arrows ready to wield,
He too lifted up his bow
And addressed Krishna thus:
ಹೇ ಧೃತರಾಷ್ಟ್ರ, ಅನಂತರ ಕಪಿಧ್ವಜನಾದ ಅರ್ಜುನನು
ಯುದ್ಧಸನ್ನದ್ಧರಾದ ಕೌರವರನ್ನು ನೋಡಿ, ತಾನೂ ತನ್ನ ಧನುಸ್ಸನ್ನು
ಎತ್ತಿ ಹಿಡಿದು ಬಾಣಗಳನ್ನು ಬಿಡಲು ಸಿದ್ಧನಾಗಿ,
ಶ್ರೀ ಕೃಷ್ಣನನ್ನು ಕುರಿತು ಈ ಮಾತನ್ನು ಹೇಳಿದನು.
अर्जुन उवाच
ಅರ್ಜುನ ಉವಾಚ ।
सेनयोरुभयोर्मध्ये रथं स्थापय मेऽच्युत॥१.२१॥
ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಽಚ್ಯುತ ॥ 1-21॥
यावदेनान्निरीक्षेऽहं योद्धुकामानवस्थितान्।
कैर्मया सह योद्धव्यम् अस्मिनरणसमुद्यमे॥१.२२॥
ಯಾವದೇತಾನ್ನಿರೀಕ್ಷೇಽಹಂ ಯೋದ್ಧುಕಾಮಾನವಸ್ಥಿತಾನ್ ।
ಕೈರ್ಮಯಾ ಸಹ ಯೋದ್ಧವ್ಯಮ್ ಅಸ್ಮಿನ್ರಣಸಮುದ್ಯಮೇ ॥ 1-22॥
योत्स्यमानानवेक्ष्येऽहं त्य एतेऽत्र समागताः।
धार्तराष्ट्रस्य दुर्बुध्हॆ युद्धॆ प्रियचिकीर्षवः॥१.२३॥
ಯೋತ್ಸ್ಯಮಾನಾನವೇಕ್ಷೇಽಹಂ ತ್ಯ ಏತೇಽತ್ರ ಸಮಾಗತಾಃ ।
ಧಾರ್ತರಾಷ್ಟ್ರಸ್ಯ ದುರ್ಬುದ್ಧೇ ಯುದ್ಧೇ ಪ್ರಿಯಚಿಕೀರ್ಷವಃ ॥ 1-23॥
Arjuna said:
O Krishna, let my chariot be stationed
In between the two armies
So that I may know all those
Who have come determined to fight,
And whom I should engage with, –
All those that have come to favour
Duryodhana, the evil-minded son of Dhrutarashtra.
ಅರ್ಜುನ ಹೇಳಿದ-ಹೇ ಅಚ್ಯುತ,
ಯುದ್ಧ ಮಾಡಲು ಸನ್ನದ್ಧರಾಗಿರುವ ಇವರನ್ನು
ಮತ್ತು ಈ ಘೋರ ಶಸ್ತ್ರಸ್ಪರ್ಧೆಯಲ್ಲಿ ನಾನು ಯಾರೊಡನೆ ಹೋರಾಡಬೇಕೋ
ಮತ್ತು ದುರ್ಬುದ್ಧಿಯಾದ ದುರ್ಯೋಧನನಿಗೆ ಯುದ್ಧದಲ್ಲಿ ಪ್ರಿಯವುನ್ನುಂಟುಮಾಡಬೇಕೆಂದು ಯಾವ ವೀರರು ಈ ರಣರಂಗದಲ್ಲಿ ಸೇರಿರುವರೋ ಅಂತಹ ಯುದ್ಧಾಭಿಲಾಷಿಗಳನ್ನು
ನಾನು ನೋಡಲು ಸಾಧ್ಯವಾಗುವಂತೆ, ಈ ಎರಡು ಸೈನ್ಯಗಳ ಮಧ್ಯೆ ನನ್ನ ರಥವನ್ನು ನಿಲ್ಲಿಸು
सञ्जय उवाच–
एवमुक्तो हृषीकेशो गुडाकेशेन भारत!।
सेनयोरुभयोर्मद्ध्ये स्थापयित्वा रथोत्तमम्॥१.२४॥
ಸಂಜಯ ಉವಾಚ ।
ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ ।
ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ॥ 1-24॥
भीष्मद्रोणप्रमुखतः सर्वेषां च महीक्षिताम्।
उवाच “पार्थ! पस्यैतान् समवेतान्कुरू“निति॥१.२५॥
ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ ।
ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ಕುರೂನಿತಿ ॥ 1-25॥
Sanjaya said:
As asked by Arjuna,
Krishna positioned the chariot
In between the two armies,
Facing Bheeshma, Drona,
And all the kings supporting them.
Then Krishna said: “O Arjuna, behold
Those Kouravas gathered here
For the great Encounter.”
ಸಂಜಯನು ಹೇಳಿದನು
ಎಲೈ ಧೃತರಾಷ್ಟ್ರ, ಅರ್ಜುನನು ಈ ಪ್ರಕಾರ ಹೇಳಲು,
ಶ್ರೀ ಕೃಷ್ಣನು ಎರಡು ಸೇನೆಗಳ ನಡುವೆ, ಭೀಷ್ಮ, ದ್ರೋಣ
ಮತ್ತು ಇತರ ರಾಜರ ಮುಂದೆ, ತನ್ನ ಶ್ರೇಷ್ಠ ರಥವನ್ನು ನಿಲ್ಲಿಸಿ, “ಹೇ ಅರ್ಜುನಾ,
ಯುದ್ಧಕ್ಕಾಗಿ ಸೇರಿರುವ ಈ ಸಮಸ್ತ ಕೌರವರನ್ನು ನೋಡು” ಎಂದು ಹೇಳಿದನು
तत्रापस्यत्स्थितान्पार्थःपितॄनथ पितामहान्।
आचार्यान्मातुलान्भ्रातॄन् पुत्रान्पौत्रान्सखींस्तथा॥१.२६॥
ತತ್ರಾಪಶ್ಯತ್ಸ್ಥಿತಾನ್ಪಾರ್ಥಃ ಪಿತೄನಥ ಪಿತಾಮಹಾನ್ ।
ಆಚಾರ್ಯಾನ್ಮಾತುಲಾನ್ಭ್ರಾತೄನ್ ಪುತ್ರಾನ್ಪೌತ್ರಾನ್ಸಖೀಂಸ್ತಥಾ ॥ 1-26॥
श्वशुरान्सुहृदश्चैव सेनयोरुभयोरपि।
तान्समीक्ष्य स कौन्तेयःसर्वान्बन्धूनवस्थितान्॥१.२७॥
ಶ್ವಶುರಾನ್ಸುಹೃದಶ್ಚೈವ ಸೇನಯೋರುಭಯೋರಪಿ ।
ತಾನ್ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ಬಂಧೂನವಸ್ಥಿತಾನ್ ॥ 1-27॥
Then Arjuna saw, pitched on each side
And pitted against one another,
Uncles, grandfathers, Acharyas,
Moters’ brothers, brothers and cousins,
Sons, nephews, grandsons,
Grandnephews and friends.
Also, there were fathers-in-law,
Uncles and bosom friends in both the sides.
Having observed all those relatives,
Staying firm and ready to engage in fighting,
Arjuna was overpowered by a surge of compassion.
He felt very much distressed
When he saw all the kith and kin
Come to fight with one another.
He burst into a fit of despair.
ಅನಂತರ ಅರ್ಜುನನು ಎರಡು ಸೈನ್ಯಗಳಲ್ಲಿಯೂ ಇದ್ದ ತನ್ನ ಚಿಕ್ಕಪ್ಪ, ದೊಡ್ಡಪ್ಪಂದಿರನ್ನೂ,
ತಾತಂದಿರನ್ನೂ, ಗುರುಗಳನ್ನೂ, ಸೋದರ ಮಾವಂದಿರನ್ನೂ,
ಸೋದರರನ್ನೂ, ಮಕ್ಕಳನ್ನೂ, ಮೊಮ್ಮಕ್ಕಳನ್ನೂ
ಸಮವಯಸ್ಕರಾದ ಮಿತ್ರರನ್ನೂ, ಮಾವಂದಿರನ್ನೂ, ಹಿತೈಷಿಗಳನ್ನೂ ನೋಡಿದನು.
अर्जुन उवाच
दृष्ट्वेमं स्वजनं कृष्ण युयुत्सुं समुपस्थितम्॥१.२८॥
ಅರ್ಜುನ ಉವಾಚ ।
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ ॥ 1-28॥
सीदन्ति मम गात्राणि मुखं च परिशुष्यति।
वेपथुश्च शरीरे मे रोमहर्षश्च जायते॥१.२९॥
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ।
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ॥ 1-29॥
गाण्डीवं स्रंसतेहस्तात् त्वक्चैव परिदह्यते।
न च शक्नोम्यवस्थातुं भ्रमतीव च मे मनः॥१.३०॥
ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ಚೈವ ಪರಿದಹ್ಯತೇ ।
ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ ॥ 1-30॥
निमित्तानि च पस्यामि विपरीतानि केशव!।
न च श्रेयोऽनुपस्यामि हत्वा स्वजनमाहवे॥१.३१॥
ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ ।
ನ ಚ ಶ್ರೇಯೋಽನುಪಶ್ಯಾಮಿ ಹತ್ವಾ ಸ್ವಜನಮಾಹವೇ ॥ 1-31॥
Arjuna said:
“I feel affliction in my hands;
My mouth is getting parched;
I begin to shiver all over;
My hair bristles, fear-struck.
Gandiva my bow slips from my hand;
My skin is getting inflamed;
I cannot stand firm on my feet;
My mind begins to reel.
Adverse and inauspicious are the omens.
I don’t see any merit accruing
From causing death to my own people
In this war.
ಅರ್ಜುನನು ಹೇಳಿದನು- ಎಲೈ ಕೃಷ್ಣ, ಯುದ್ದಾಭಿಲಾಷೆಯಿಂದ ಇಲ್ಲಿ ಸಮಾವೇಶಗೊಂಡಿರುವ
ನನ್ನ ನೆಂಟರಿಷ್ಟರನ್ನು ನೋಡಿ ನನ್ನ ಅವಯವಗಳು ಕಂಪಿಸುತ್ತಿವೆ
ಮತ್ತು ಬಾಯಿಯು ಒಣಗುತ್ತಿದೆ. ಮುಖ ಬಾಡುತ್ತಿದೆ.
ನನ್ನ ಶರೀರದಲ್ಲಿ ಕಂಪನವೂ, ರೋಮಾಂಚನವೂ, ಉಂಟಾಗುತ್ತಿದೆ.
ಗಾಂಡೀವ ಧನುಸ್ಸು ಕೈಯಿಂದ ಜಾರುತ್ತಿದೆ
ಮತ್ತು ಚರ್ಮವೂ ಸಹ ಸುಡುತ್ತಿದೆ.
ಹೇ ಕೇಶವ, ನನಗೆ ನಿಲ್ಲುವುದಕ್ಕೂ ಆಗುತ್ತಿಲ್ಲ.
ನನ್ನನ್ನೇ ನಾನು ಮರೆಯುತ್ತಿದ್ದೇನೆ. ನನ್ನ ಮನಸ್ಸು ಸುತ್ತುತ್ತಿದೆ. ಅಶುಭ ಸೂಚಕ ಶಕುನಗಳೇ ಕಾಣುತ್ತಿವೆ.
ಹೇ ಕೃಷ್ಣ, ಯುದ್ಧದಲ್ಲಿ ನನ್ನ ಬಂಧುಗಳನ್ನೇ ಕೊಲ್ಲುವುದರಿಂದ ನನಗೆ ಯಾವ ಶ್ರೇಯಸ್ಸೂ ಆಗಲಾರದು.
न काङ्क्षे विजयं कृष्ण! न च राज्यं सुखानि च।
किं नो राज्येन गोविन्द! किं भोगैर्जीवितेन वा॥१.३२॥
ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ ।
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ॥ 1-32॥
Arjuna continued:
“Not for me the triumph in this war
Nor the coveted empire.
No, not even the pleasures consequent.
ಅನಂತರವೂ ನಾನು ಯಾವುದೇ ವಿಜಯವನ್ನಾಗಲೀ, ರಾಜ್ಯವನ್ನಾಗಲೀ, ಸುಖವನ್ನಾಗಲೀ ಬಯಸಲಾರೆ.
येषामर्थे काङ्क्षितं नो राज्यं भोगाः सुखानि च।
त इमेऽवस्थिता युद्धे प्राणांस्त्यक्त्वा धनानि च॥१.३३।
ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ ।
ತ ಇಮೇಽವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ ॥ 1-33॥
Arjunan said:
“Govinda, what should I crave?
Kingdom, pleasures and the very existence?
When those for whose sake I crave
Are themselves come to fight
And give up all their possessions,
Including lives?”
ಹೇ ಗೋವಿಂದಾ!
ಯಾರಿಗೋಸ್ಕರ ನಾವು ರಾಜ್ಯವನ್ನು, ಸುಖವನ್ನು ಮತ್ತು ಬದುಕನ್ನು ಸಹ ಬಯಸುತ್ತೇವೆಯೋ ಅವರೇ ಧನ ಮತ್ತು ಪ್ರಾಣದ ಆಸೆ ತ್ಯಜಿಸಿ ನಮ್ಮ ವಿರುದ್ಧವಾಗಿ
ಯುದ್ಧಕ್ಕೆ ಸನ್ನದ್ಧರಾಗಿರುವಾಗ ಅವುಗಳಿಂದ ಏನು ಪ್ರಯೋಜನ?
आचार्याः पितरः पुत्राः तथैव च पितामहाः।
मातुलाः श्वसुराः पौत्राः श्यालाः सम्बन्धिनस्तथा॥१.३४॥
ಆಚಾರ್ಯಾಃ ಪಿತರಃ ಪುತ್ರಾಃ ತಥೈವ ಚ ಪಿತಾಮಹಾಃ ।
ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಸ್ತಥಾ ॥ 1-34॥
. Arjuna further said:
“ Among them are our revered gurus,
Fathers, uncles, grandparents,
Sons and grandsons –
All are bound in close relationship.
ಗುರುಗಳು, ಪಿತರು, ಪುತ್ರರು,ಪಿತಾಮಹರು,
ಸೋದರಮಾವಂದಿರು, ಮಾವಂದಿರು, ಮೊಮ್ಮಕ್ಕಳು,
ಭಾವ ಮೈದುನರು ಮತ್ತು ಇತರ ಬಂಧುಗಳು
ಎಷ್ಟೋ ಜನರು ಇಲ್ಲಿ ಇದ್ದಾರೆ.
एतान्न हन्तुमिच्छामि घ्नतोऽपि मधुसूदन!।
अपि त्रैलोक्यराज्यस्य हेतोः किं नु महीकृते॥१.३५॥
ಏತಾನ್ನ ಹಂತುಮಿಚ್ಛಾಮಿ ಘ್ನತೋಽಪಿ ಮಧುಸೂದನ ।
ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ ॥ 1-35॥
Arjuna told Krishna:
“ I do not wish to draw their blood
Even if my life is at stake.
No, not even for gaining
The kingdom of all the three worlds,
Let alone the kingship of this world.
ಇವರು ನನ್ನನ್ನು ಕೊಂದರೂ ಸರಿ! ಹೇ ಮಧುಸೂದನಾ! ಮೂರು ಲೋಕದ ರಾಜ್ಯಾಧಿಪತ್ಯವು ಬಂದರೂ ನಾನು ಇವರನ್ನು ಕೊಲ್ಲಲಾರೆನು! ಇನ್ನು ಈ ಭೂಲೋಕದ ರಾಜ್ಯಕ್ಕಾಗಿ ಕೊಲ್ಲುವೆನೇ?
निहत्य धार्तराष्ट्रान्नः का प्रितिः स्याज्जनार्दन!।
पापमेवाश्रयेदस्मान् हत्वैतानाततायिनः॥१.३६॥
ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ ।
ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ ॥ 1-36॥
Arjuna continued:
“What pleasure shall accrue to us
By killing the sons of Dhrutarashtra?
Verily, sin alone will be gained
By killing those sinful murderers.
ಹೇ ಜನಾರ್ದನ!
ಈ ಕೌರವರನ್ನು ಕೊಲ್ಲುವುದರಿಂದ ನಾವು ಪಡೆಯುವ ಸಂತೋಷವೇನು?
ಈ ಪಾಪಾತ್ಮರನ್ನು ಕೊಂದರೆ ನಮಗೆ ಪಾಪವೇ ಉಂಟಾದೀತು.
तस्मान्नार्हा वयं हन्तुं धार्तराष्ट्रान्स्वबान्धवान्।
स्वजनं हि कथं हत्वा सुखिनः स्याम माधव!॥१.३७॥
ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ಸ್ವಬಾಂಧವಾನ್ ।
ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ ॥ 1-37॥
Arjuna said to Krishna:
“It is therefore unbecoming of me
To kill our own relatives –
Dhrutarashtra’s sons, our kith and kin.
How can killing them make us happy?
ಆದುದರಿಂದ ಸ್ವಬಾಂಧವರಾದ ದುರ್ಯೋಧನಾದಿಗಳನ್ನು ನಾವು ಕೊಲ್ಲುವುದು ಯೋಗ್ಯವಲ್ಲ. ಹೇ ಮಾಧವಾ! ನಮ್ಮ ಬಂಧು ಬಾಂಧವರನ್ನು ಕೊಂದು
ಹೇಗೆ ಸುಖಿಗಳಾಗುವೆವು?
यद्येते न पस्यन्ति लोभोपहतचेतसः।
कुलक्षयकृतं दोषं मित्रद्रोहे च पातकम्॥१.३८॥
ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸಃ ।
ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ॥ 1-38॥
Arjuna said:
“Their minds clouded by greed
May see no wrong in destroying
Friends and relatives.”
ಲೋಭದಿಂದ ಭ್ರಷ್ಟಚಿತ್ತರಾದ ಈ ಕೌರವರು ಕುಲಕ್ಷಯದಿಂದಾಗುವ ದೋಷವನ್ನೂ,
ಮಿತ್ರ ದ್ರೋಹದ ಪಾಪವನ್ನೂ ಗ್ರಹಿಸಲಾರದವರಾಗಿದ್ದಾರೆ.
कथं न ज्ञेयमस्माभिः पापादस्मान्निवर्तितुम्।
कुलक्षयकृतं दोषं प्रपस्यद्भिर्जनार्दन!॥१.३९॥
ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ ।
ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ॥ 1-39॥
Arjuna told Krishna:
“Why should we, who know
It is sin to kill relatives and friends,
Not turn away from this sin?”
ಹೋಗಲಿ ಕೃಷ್ಣಾ! ಕುಲನಾಶದಿಂದಾಗುವ ಪ್ರಮಾದವನ್ನು
ಸ್ಪಷ್ಟವಾಗಿ ಗಮನಿಸಬಲ್ಲ ನಾವು ಈ ಪಾಪದಿಂದ ಏಕೆ ಹಿಂತೆಗೆಯಬಾರದು?
कुलक्षये प्रणस्यन्ति कुलधर्माः सनातनाः।
धर्मे नष्टे कुलं कृत्स्नम् अधर्मोऽभिभवत्युत॥१.४०॥
ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ ।
ಧರ್ಮೇ ನಷ್ಟೇ ಕುಲಂ ಕೃತ್ಸ್ನಮ್ ಅಧರ್ಮೋಽಭಿಭವತ್ಯುತ ॥ 1-40॥
Arjuna continued:
“With the demise of the elders in the family,
All the traditions and Dharmic practices
Would come to a halt.
With the cessation of such Vedic practices,
Adharma would prevail.
ಕುಲವು ಕ್ಷಯವಾದರೆ ಶಾಶ್ವತವಾದ ಕುಲಧರ್ಮಗಳು ನಾಶವಾಗುತ್ತವೆ
ಮತ್ತು ಧರ್ಮವು ನಷ್ಟವಾದರೆ ಸಮಸ್ತ ಕುಲಗಳನ್ನೂ ಅಧರ್ಮವು ಅಧೀನ ಪಡಿಸಿಕೊಳ್ಳುತ್ತದೆ.
अधर्माभिभवात्कृष्ण! प्रदुष्यन्ति कुलस्त्रियः।
स्त्रीषु दुष्टासु वार्ष्णेय! जायते वर्णसङ्करः॥१.४१॥
ಅಧರ್ಮಾಭಿಭವಾತ್ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ ।
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ ॥ 1-41॥
Arjuna said:
“With the onset of adharma,
Women of good character become sinful.
O Krishna, when ladies lose their chastity,
Varna sankara takes place,
That is, mixing of distinct family traditions
And practices.
ಎಲೈ ಕೃಷ್ಣ
ಅಧರ್ಮವು ಹೆಚ್ಚಾಗುವುದರಿಂದ ಕುಲಸ್ತ್ರೀಯರು ಕೆಟ್ಟುಹೋಗುವರು.
ಎಲೈ ವಾರ್ಷ್ಣೇಯ, ಸ್ತ್ರೀಯರು ದುಷೃರಾದರೆ ವರ್ಣಸಂಕರರವು ಉಂಟಾಗುತ್ತದೆ.
सङ्करो नरकायैव कुलघ्नानां कुलस्य च।
पतन्ति पितरो ह्येषां लुप्तपिण्डोकक्रियाः॥१.४२॥
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ ।
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ ॥ 1-42॥
Arjuna informed Krisna:
“varna sankara or intermingling of varnas,
Is verily hell for those who commit the sin
And to the entire family.
Their ancestors, the pitrudevatas,
Will be deprived of their libations
In the form of food and water.
They will fall from their heavenly abode,
Called pitruloka, down to the earth.
ವರ್ಣ ಸಂಕರವು ಉಂಟಾದರೆ, ಕುಲಕ್ಕೆ ಮತ್ತು ಕುಲನಾಶಕರಿಗೆ ನರಕ ಪ್ರಾಪ್ತಿಯಾಗುತ್ತದೆ.
ಅವರ ಪಿತೃದೇವತೆಗಳು ಪಿಂಡೋದಕ ಶ್ರಾದ್ಧ ತರ್ಪಣ ಕ್ರಿಯೆಗಳಿಲ್ಲದೆ, ಪಿತೃಲೋಕದಿಂದ ಕೆಳಕ್ಕೆ ಬೀಳುವರು.
दोषैरेतैः कुलघ्नानां वर्णसङ्करकारकैः ।
उत्साद्यन्ते जातिधर्माः कुलधर्माश्च शाश्वताः॥१.४३॥
ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ ।
ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ॥ 1-43॥
Arjuna said
“The faults of those that commit varna sankara
Are such that they erode for ever
All the Dharmic practices of their own jati or kula.”
ಕುಲನಾಶಕರ ವರ್ಣಸಂಕರವನ್ನುಂಟುಮಾಡುವ ಈ ದೋಷಗಳಿಂದ ಶಾಶ್ವತವಾದ ಜಾತಿಧರ್ಮಗಳೂ ಕುಲಧರ್ಮಗಳೂ ನಾಶವಾಗುತ್ತವೆ.
उत्सन्नकुलधर्माणां मनुष्याणां जनार्दन!।
नरके नियतं वासो भवतीत्यनुशुश्रुम॥१.४४॥
ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ ।
ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ ॥ 1-44॥
Arjuna further said:
“ We constantly hear in the Vedic injunctions,
O Janardana, that hell is the place of permanent stay
For those who cause erosion
Of the prescribed traditions and practices.
ಎಲೈ ಜನಾರ್ಧನ
ಕುಲಧರ್ಮಗಳನ್ನು ನಾಶಮಾಡಿಕೊಂಡ ಮನುಷ್ಯರಿಗೆ, ನರಕವಾಸವುಂಟಾಗುತ್ತದೆ ಎಂದು ನಾವು ಕೇಳಿರುತ್ತೇವೆ.
अहो बत महत्पापं कर्तुं व्यवसिता वयम्।
यद्राज्यसुखलोभेन हन्तुं स्वजनमुद्यताः॥१.४५॥
ಅಹೋ ಬತ ಮಹತ್ಪಾಪಂ ಕರ್ತುಂ ವ್ಯವಸಿತಾ ವಯಮ್ ।
ಯದ್ರಾಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ ॥ 1-45॥
Arjuna told Krishna:
“ Alas! See what heinous sin
Have I thought of committing –
Killing of our own kith and kin
Prompted by the greed for kingly pleasures.
ರಾಜ್ಯದಿಂದಾಗುವ ಸುಖದ ಮೇಲಿನ ಆಸೆಯಿಂದ, ನೆಂಟರನ್ನು ಕೊಲ್ಲುವುದಕ್ಕೆ ಹೊರಟಿರುವ ನಾವು, ಆಹಾ! ಎಂಥ ದೊಡ್ಡ ಪಾಪವನ್ನು ಮಾಡುವುದಕ್ಕೆ
ಹೊರಟಿರುವೆವು?
यदि मामप्रतीकारम् अशस्त्रं शस्त्रपाणयः।
धार्तराष्ट्रा रणे हन्युः तन्मे क्षेमतरं भवेत्॥१.४६॥
ಯದಿ ಮಾಮಪ್ರತೀಕಾರಮ್ ಅಶಸ್ತ್ರಂ ಶಸ್ತ್ರಪಾಣಯಃ ।
ಧಾರ್ತರಾಷ್ಟ್ರಾ ರಣೇ ಹನ್ಯುಃ ತನ್ಮೇ ಕ್ಷೇಮತರಂ ಭವೇತ್ ॥ 1-46॥
Arjuna concluded:
“Me, unresisting, unarmed,
If they, the sons of Dhrutarashtra,
Fully armed, kill me in this battle,
I should deem it to be more propitious.”
ಒಂದು ವೇಳೆ ನಿರಾಯುಧನಾಗಿ, ಪ್ರತೀಕಾರ ಮಾಡದೆ ಇರುವ ನನ್ನನ್ನು, ಆಯುಧಧಾರಿಗಳಾದ ಕೌರವರು ಯುದ್ಧದಲ್ಲಿ ಕೊಂದರೂ, ಅದೇ ನನ್ನ ಪಾಲಿಗೆ
ಕ್ಷೇಮತರವಾಗಿರುತ್ತದೆ.
सजय उवाच
एवमुक्त्वार्जुनः सङ्ख्ये रथोपस्थ उपाविशत्।
विसृज्य सशरं चापं शोकसंविग्नमानसः॥१.४७॥
ಸಂಜಯ ಉವಾಚ ।
ಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಶತ್ ।
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ ॥ 1-47॥
Snjaya said:
So saying, Arjuna, with heart deeply anguished,
And agitated,
Dropping his bow with the arrows,
Sat on the ground
In front of the chariot.
ಸಂಜಯ ಹೇಳಿದನು:- ಯುದ್ಧರಂಗದಲ್ಲಿ ಶೋಕದಿಂದ
ವ್ಯಾಕುಲಚಿತ್ತನಾದ ಅರ್ಜುನನು ಹೀಗೆ ನುಡಿದು
ತನ್ನ ಬಿಲ್ಲು ಬಾಣಗಳನ್ನು ಬದಿಗಿಟ್ಟು
ರಥದ ಮುಂಭಾಗದ ನೆಲದ ಮೇಲೆ ಕುಳಿತುಬಿಟ್ಟನು.
ऒं तत्स्दिति
श्री महाभारतॆ
भीष्मपर्वणी
श्रीमद्भगवद्गितासूपनिषत्सु
ब्रह्म विद्यायां
यॊगशास्त्रॆ
श्रीकृष्णार्जुनसंवादॆ
अर्जुनविषादयॊगॊ नाम
प्रथमॊध्यायः॥ 1॥
ಓಂ ತತ್ಸದಿತಿ
ಶ್ರೀ ಮಹಾಭಾರತೇ
ಭೀಷ್ಮಪರ್ವಣೀ
ಶ್ರೀಮದ್ಭಗವದ್ಗೀತಾಸೂಪನಿಷತ್ಸು
ಬ್ರಹ್ಮವಿದ್ಯಾಯಾಂ
ಯೋಗಶಾಸ್ತ್ರೇ
ಶ್ರೀಕೃಷ್ಣಾರ್ಜುನಸಂವಾದೇ
ಅರ್ಜುನವಿಷಾದಯೋಗೋ ನಾಮ
ಪ್ರಥಮೋಽಧ್ಯಾಯಃ ॥ 1॥
This is the end of Chapter 1
Published by Lanka Krishna Murti Foundation (https://krishnamurtifoundation.com/lanka/)
To watch videos of Srimad Bhagavad Gita published by Lanka Krishna Murty Foundation press the following link
https://www.youtube.com/playlist…
To watch the videos of Vishnusahasranama published by Lanka Krishna Murti Foundation please press the following link
Vishnusahasranama A Sloka A Day: https://www.youtube.com/playlist…
To watch the videos of A Subhasita A Day published by Lanka Krishna Murti Foundation please press the following link
https://www.youtube.com/playlist…
To watch the website of Lanka Krishna Murti Foundation please press the following link
https://krishnamurtifoundation.com/lanka/
L.Subramanya