vande guru paramparAM
Origin and Evolution:
Narayana Samaarambhaam Vyaasa Sankara Madhyamaam
Asmadaacharya Paryantaam
Vande Guru Paramparaam
My salutations to this great line of gurus that starts with Lord Narayana, and, having Vyasa and Sankara in the middle, extends upto my immediate guru.
This is how we acknowledge our indebtedness and gratitude to the great gurus for helping us to acquire knowledge.
The First Teacher:
Lord Narayana is the first teacher.
The Progenitors:
Having created the cosmos, He ensured its stability by first creating the progenitors like Marichi.
Pravritti Dharma:
He instructed them about the Vedic path of action and work Pravritti Dharma, which ensures Abhyudaya.
Then Lord Narayana created the sages:
Sanaka
Sanathana Sanandana and Ssanatkumara.
Nivritti Dharma:
He instructed them about the Vedic path of nivritti dharma which leads to liberation. Thus the vedic tradition with Guru Sishya Parampara started.
Sruti:
‘Sruti’ is the term used to refer to all the Vedas. They are believed to have been heard when revealed to the ancient Seers in states of deep meditation. They, in turn, passed them on orally to their disciples.
The Vision of a Vedic Rishi:
Swamy Vivekananda experienced the vision of one suchRishi, who, after bathing in the Sindhu river, was seen reciting the mantra that invokes Gayatri. Swamiji heard that mantra.
A huge collection of such recitations were preserved, first, under three heads: Rigveda, Yajurveda and Samaveda.
Karma Kanda:
Each Veda is divided into two parts:
- The first one is called Karma Kanda consisting of the Samhita and the Brahmana. The mantras in the Samhita are practice-oriented.
- The Brahmana section explains how the Samhita mantras are to be made applicable in the performance of homas, yagas, yagnas, and other rituals.
Gnana Kanda:
The second part, the Aranyaka, is largely contemplative in nature, driven by the quest for the Ultimate Reality. The Upanishads are included in this part of the Vedas.
The Mantras:
What is a manthra?
A manthra literally means “that which when reflected upon gives liberation.” It is a sacred verbal formula repeated in prayers, meditation and invocations. It is a specific combination of letters or words. When it is used in a particular manner, it brings about certain results. The potency of a manthra lies in its sound.
Characteristics of a manthra:
Each manthra has three characteristics:
- a particular rishi to whom it was revealed;
- a particular presiding deity; and
- a particular meter in which it is composed.
Let us take the example of the Gayathri manthra, which is the most sacred of all the manthras.
Sage Viswamitra is its Rishi.
Savita is its presiding deity. Gayathri is it metre.
How to chant a manthra?
A manthra must be chanted according to its specific metre and rhythm. While chanting the manthra, we should pay special attention to the accent. There are three types of accents:
Udatta: raised high pitch; Anudatta: not raised, low pitch; Svarita: falling pitch.
While chanting, observing the correct accentual pattern, we should meditate on the deity represented by the manthra. We should establish a mental connection with the Rishi of that manthra. Such repeated chantings release the Inherent power of the manthra and bring about the desired transformation of the consciousness in the person who recites.
Benefits:
The sacred sounds coming from the chanting of the manthras have great impact on different levels of existence:
- The senses,
- The mind, and
- The intellect.
They pierce through these levels to bring about purification and enlightenment.
Scientific Proof:
It has been scientifically established that Sanskrit sounds have the power to affect the mind, intellect and the auditory nerves of those that chant and hear them. Some experiments were conducted by the well-known scientist, Hans Jenny (1904 — 1972), the Father of Cymatics, the study of wave phenomena. It is established that the sacred sounds affect the Seven Chakras in the spinal column, and the three pranic channels: Sushumna, Ida and Pingala
The Vedangas:
Next to the Vedas, we have the Vedangas, which are auxiliary to the Vedas. They are six in number, as follows:
Siksha – the science of proper articulation and pronunciation.
Vyakarana — grammar
Chandas — the science of prosody
Nirukta — etymology
Kalpa — rules for rituals and ceremonies Jyothisha astronomy
The Smritis:
Then we have the Smritis, the ‘remembered ones,’ which are the manuals of codes of conduct, like Manu Smriti, Apasthamba Sutras, Yagnyavalka Smriti, etc.
Other Knowledge Systems:
Then come several knowledge systems:
Darshanas
Tantras
Puranas
Kavyas
Natya Sastra
Gandharva Vidya
Yoga Sutras
Kama Sutras
Ayurveda
Dhanurvidya
The Purusharthas:
The same world-view is reflected and articulated in all the knowledge systems including the Vedas and the Upanishads. This world-view identifies the goals of life as the Purusharthas of Dharma, Artha, Kama and Moksha. It promotes Abhyudaya in this life and helps to seek and find Liberation thereafter.
Guru-Sishya Parampara:
Both the goals of Abhyudaya and Mukti require the Guidance and Grace from the Guru. The Guru holds a central position in our culture. Before starting any activity or work, particularly before any spiritual study or practice or exercise, we do Guruvandana.
The Guru-Sishya Relationship:
The Guru-Sishya relationship is a fundamental component of Sanathana Dharma.
It is important to understand how the relationship evolved over the years from the time of Creation to the Modern Digital Electronic Age.
Upanishads:
Upanishads contain many dialogues between the Gurus and their Sishyas.The Sishya approaches his Guru with all reverence and seeks to know about several aspects of his spiritual quest that are helpful to gain Brahma Gnana. We find a long list of such Gurus in the Brihadaranyaka Upanisht.
Veda Vyasa:
Veda Vyasa is a central figure in our culture. Like a lifeline, he has enriched the entire civilization with his creativity and brilliant intellect. Veda Vyasa continues the tradition of engaging the Sishyas directly and personally. In addition, he opens up a new communication channel with his Purana literature. He classified the three-fold Veda into four segments called Rig, Sama, Adharvana and Yajur Vedas. He also crystallized the Vedas into a set of Sutras called Brahma Sutras, defining the Vedic concept of Supreme Reality.
The Lamp of Gnana:
Then he composed the epic, the Mahabharata, the longest poem ever written. He also played a very important role in it. It is an eternal story that remains relevant to people for ever. It is indeed the Fifth Veda. He first narrated it to Ganapati who wrote it down. Then he narrated it to his own disciple Vaisampayana. Using the Mahabharata as oil, Vyasa has lit the Lamp of Jnana for the benefit of everyone. He added one more dimension to the Guru-Sishya relationship. He engaged his disciples in discourses relating to his Puranas and Mahabharata at a place called Naimisharanya. We find a raised platform under a huge banyan tree in Naimisharanya, where Vyasa is believed to have held his meetings with Rushis whose names are familiar like Vaisampayana, Saunaka and Suta
Then comes Shankara:
Then comes Adi Shankara when the Vedic tradition had got into a state of confusion and disorganisation. He re-estalished the authority and the supremacy of the vedas
Shankaracharya:
With Shankara, the Guru-Sishya relationship acquires a new dimension. Till then the practice was for the Sishya to approach the Guru, seeking Gnana for attaining Mukti. But Shankara reversed the trend. After acquiring Knowledge from his Guru, Shankara felt impelled to reach out to the Sishyas.
Bhashyakara:
After completing his studies under the guidance of his Guru, Govinda Bhagavatpaada, after his Adhyayana, he started to play the role of a Guru by doing Adhyapana. First, he prepared commentaries on the Prasthana Traya, i.e., Upanishats, Brahma Sutra and Bhagavad Gita in a style that is characterized by clarity, precision and persuasion.
Paramahamsa Parivrajaka Acharya:
Shankara belongs to the highest order among the sanyasis, namely Paramahamsa. An Acharya is an Educator who sets example by putting his teachings into practice. A Parivrajaka is a wandering sanyasi. He started visiting various centres of learning and expounded his Non-Dual Advaita philosophy through discussion and debate. He succeeded in reestablishing the fundamentals of Sanatana Dharma.
A Unifying Force:
He helped people to reconnect with Sanathana Dharma. He showed them the path leading to Mukti. He asserted that Gnana is the means to attain Liberation through the practice of Gnana Yoga. With his excellent organizing skill, he established the four Mathas, and the Ten Orders of Monks to unify the scattered and divergent groups.
The Tradition Continues:
Like Vyasa, Shankara entrusted the work of continuing the tradition to four of his disciples after establishig four Mathas in the four directions
The Four Spiritual Centres:
East: Rigveda — Padmapada-Govardhana Peetha
South: Yajurveda — Sureswara — Srigeri Sharada Peetha
West: Samaveda- Hastamalakacharya —Dwaraka Peetha
North: Atharvanaveda — Totakacharya — Jyothimatha Peetha
Integrated Approach:
He travelled extensively all over the country from Kedarnath to Rameswaram and from Kashmir to Kanyakumari to propagate his teachings and educate people on the values of Sanatana Dharma.
Panchayatana Puja:
He authenticated and standardized several ritualistic practices. He introduced the Panchayatana Puja. It is a system of worshipping Five Deities set in a particular pattern: Shiva, Vishnu, Devi, Surya and Ganapati.
The devotee’s Ishtadevata is placed in the middle. It was an attempt to promote nondiscrimination among different forms of the same Saguna Brahma — and as a means to realise Nirguna Brahma.
He is also known to have introduced the concept of Shanmata or the worship of six deities: Shiva, Vishnu, Shakti, Ganapati, Surya and Skanda, the choice of deity being left to individual preference.
Shree Chakra:
Shankara, the philosopher-teacher, was well-versed in Mantra Shastra also. He is said to have installed the powerful energy-radiating Sree Chakra at several temples, including Tirumala.
Stotras:
A great devotee himself, he composed a variety of Stotras on different deities. Shankara’s Stotras are in a class by themselves. As a poet, he belongs to the tradition of Valmiki, Vyasa and Kalidasa. His Stotras are beautiful poems embedded with devotional fervour and mantric power. Each Stotra is, in fact, a lesson in devotion.
A Holistic Approach:
It is important that we make a holistic approach to understand Shankara as a Guru, without over-emphasising his intellectual vigour alone that is revealed in his teachings on Advaita philosophy. We should understand the emotional fervour expressed in his devotional writings; his compassion and gracefulness.
A Guru par excellence:
We should recognize his energy reserves in terms of mantric power which he infused into his poems. We should also appreciate his dynamism revealed in his spiritual expeditions.The above four dimensions of his personality can be categorized under: 1. Gnana Yoga 2. Bhakti Yoga 3. Dhyana Yoga ana 4. Karma Yoga. His life and works are a lesson in integrating one’s own personality. He is indeed a Guru par excellence.
The Lanka Family
Our ancestors migrated, a few generations back, from the Velanadu territory in the Godavari delta region in Andhra Pradesh and came to the present-day Lepakshi and settled down there. Our family, consisting of Velanadu Telugu Smartha Brahmins, owes allegiance to the Sringeri Sharada Peetham and hence adheres to the study of the Krishna Yajurveda, in particular.
The Gotra:
Our family traces its lineage to the sage Koundiya, in association with Vasistha and Mitravaruna.
Vedic Recitation:
Several of our ancestors got initiated to the chanting of the Krishna Yajurveda and estalished the tradition of devoutly practicing and propagating the Vedic recitation.
Recognition:
They were recognized by the society as learned people, well-versed in Vedas, Sastras, Puranas, and Kavyas. They were treated as Gurus. They were also good at Astrology. They functioned on the basis of certain principles and practices that accorded with sanathana dharma.
Our Faith and our Objective:
We firmly believe the Revelations in the Vedas, We believe in the Theory of Karma, and Our utmost aim or objective is to achieve abhyudaya, all round progress and fulfillment in this life, and strive for Liberation from the cycle of births and deaths.
Swadharma:
Learning and Teaching:
Adhyayana-Adhyapana
Making offerings and helping others to do so:
Yajana-Yaajana
Giving and receiving gifts or Daana Nitya karma – Anushtana
Para and Apara Vidya:
Mundaka Upanishat mentions two types of knowledge: Para and Apara Vidyaa:
spiritual knowledge and worldly knowledge — one for seeking Liberation and the other to ensure survival with comfort and happiness.
Parental Care:
The Guru-Sishya relationship operated within the framework of the family too. Parents played the role of teachers to the young ones in the family. The fathers concern is to educate children to become competent and responsible members, while the mother’s emphasis is on training the sensibilities of children to cultivate love, affection and devotion.
Alienation:
The Guru-Sishya relationship had functioned well in the traditional Gurukuka System of education until the Britishers replaced it by their Macaulay System of Education. Spiritual education became private and individual-centred. We started getting alienated from our own rich cultural past. Only those interested in spiritual progress approached the suitable Gurus in person.
Chayaramappa:
In recent times, my uncle Chayaramappa received the initiation from two great Vedic Scholars, Sri Channa Bhatlu and Sri Ramacharyulu, in Penukonda.
Sreenivasa Rao:
My uncle, in turn, gave initiation to my brother Srivasa Rao. With persistence and single-minded devotion, brother acquired the authority of tone and fluency in rendition, while chanting the mantras of Krishna Yajur Veda.
The Tradition Continues:
Like a true Guru, he passed on the legacy to some ardent Sishyas. First and foremost among them is Prof. S. Raghunatha Sharma.
Other Disciples:
The other pre-eminent ones are:
Sri Venkatarama lyer
Sri Shivasankara Sastry
Sri Narayana Bhatta
Sri P. Venkatachalam and
Sri L. Rama Murthy (his own son).
I too had the good fortune of being initiated to Taittiriya Upanishat and Ganapathi Upanishat. He continued the Guru-Sishya parampara by transmitting his knowledge to his Sishyas. In addition to reciting and initiating his Sishyas to Vedic chanting, he led a life of total devotion to his Ishta Deva, Sri Rama. His achievement in the field of Bhakti was his writing the name of Sri Rama one crore times. Then he started writing the sacred phrase 0m Sri Rama Jaya Rama Jaya Jaya Rama.One night, as he was half way through his writing of that phrase, he breathed his last.
Lanka Krishna Murti:
He described himself as
Kannada Samskrutaandhra Kavitaaraadhaka
“A Devotee of the Art of Creative Writing in Kannada, Sanskrit and Telugu.”
He promoted the Art of conducting Astavadhanams in Kannada. It is an amazing literary feat that tests the memory power and creativity in eight different aspects, which is very popular in Telugu literary circles. My brother Krishna Murti had great love for music and painting.
Sanatana Dharma:
Rooted in Sanatana Dharma, He propagated the principles and values of Sanatana Dharma, in partcular, Thyaga and Karuna. He reached out to a very large number of people through his works, speeches and actions. He founded the Sanatana Dharma Samakshana Samsthe and the Journal Dharma Prabha for this purpose. He is a Multifaceted Acharya that motivated and enhanced the awareness of the basic principles of Sanatana Dharma with his tireless prachara.
The Tradition Continues:
Continuing the tradition of Guru-Sishya relationship, I acquired some Aparaa Vidya, worldly knowledge, in the field of English Language and Literature. I gained some Paraa Vidya also.
- in the form of Mantra Upadesha from Father,
- initiation to the study of Upanishats from my brother Srinivasa Rao and Swami Paramarthananda of Ramakrishna Math; and
- Yogic practices:
- Sahaja Samadhi Yoga from Sadguru Mallikarjun,
- Shambhavi Maha Mudra from Sadguru Jaggi Vasudev,
- Isha Kriya from Sadguru Jaggi Vasudev.
A Big New Turn:
It is my responsibility now to pass on the Knowledge. I have tried several educational models among the following:
1 . One-to-one personal transmission;
- Group discussions, Seminars, Conferences, and Workshops;
- Writing of books and articles;
- Running of Journals and Periodicals;
- Making Pravachanams addressed to large gatherings, and
- Conducting Gnana Yaagnams.
Thanks to the advancements in Information Technology, a new Platform is available for the Teacher to use all the above guidance models. It is in the environment of virtual space through a Website. It is Lanka Krishna Murti Foundation Website at: www.krishnamurtifoundation.com
New Initiatives
Promotion of Study of Sanskrit:
Sanskrit is the preserver and propagator of Sanatana Dharmic Culture. The sacred sounds coming from the chanting of the manthras have great impact on different levels of existence: the senses, the mind, and the intellect. They pierce through these levels to bring about purification and enlightenment.
A Sloka A Day:
We proposed, through this initiative of A Sloka A Day, to help the seeker acquire the feel and power of Sanskrit sounds and enable the seeker to get spiritual uplift
Accordingly, we introduced the 107 Slokas, containing the thousand names of Vishnu (Vishnusahasranama), for repeating each name with its meaning and significance.
Subhashitas:
We explored another dimension of Sanskrit sounds. Under the initiative A Sloka A Day, we introduced some select Subhashitas. Subhashitas are known for giving moral advice, instructions in worldly wisdom and guidance for doing righteous deeds.
Gnana Yagna:
We enabled the Seekers to recite and study Srimad Bhaqavadqita, containing 700 slokas spread over 18 Chapters, through video- streaming under the caption ‘A Sloka A Day’. We have thus performed a Yagna, which Lord Krishna Himself calls Gnana Yagna.
Brahma Vidya:
Bhagavadgita is famously referred to as Brahma Vidya. We have acquired some Gnana through adhyayana or study. The purpose of acquiring this Gnana is to attain Siddhi, the Supreme State of Liberation. That is the Gneyam. This involves Saadhana or Upasana.
Yoga Shastra:
Bhagavadgita is also known as Yoga Shastra. Krishna specifies four different kinds of Yogic practices by way of Saadhana to attain Siddhi or Perfection. They are:
Gnana Yoga,
Karma Yoga,
Dhyana Yoga and
Bhakti Yoga.
It is desirable to make an integrative approach and start practicing all of them one by one
Upanishat:
Moreover, Bhagavadgita is an Upanishat, a sacred scriptural text in which the Acharya or Teacher engages with the Shishya in the form of giving Aadesha and Upadesa or instruction and advice.
In the Bhagavadgita, Krishna is the Gitacharya. He is also a loving and caring wellwisher of Arjuna. He advises Arjuna, and through him advises us, on several issues. At the end, the Gitacharya sums up the essence of his upadesha in the following lines:
The Upadesha:
Set your mind on Me; be My Devotee; offer your worship to Me; and prostrate yourself before Me. As you are very dear to Me,l promise that you will surely reach Me.
What is the Content of the WebSite?
A four-step Saadhana Marga with the following nomenclature:
Track One: Adhyayana (Study)
Track Two: Swadharma — Anushthana (Spiritual Observances)
Track Three: Dhyana (Meditation)
Track Four: Bhakti cultivating through Smaranam (Remembering with Understanding)
The Seekers are helped to progress on the Saadhana Maarga with the inputs given on a daily basis. It is a bilingual transmission in English and Kannada. The Kannada version is prepared by Sri L.Radhakrishna. Expert technical support from Sri L.Subramanya. Video-streaming at “Lanka Family” in WhatsApp.
The River of Tradition:
And we hopefully look forward to continuing and further enriching the River of this Great Tradition, the Guru-Sishya Parampara, by the younger generation in the years to come.
Vande Guru-Sishya Paramparaam
A Presentation by
Dr L. Adinarayana
ಗುರು ಶಿಷ್ಯ ಸಂಬಂಧಗಳು
1.ಲಂಕಾ ಕೃಷ್ಣಮೂರ್ತಿ ಪ್ರತಿಷ್ಠಾನ
“ಗುರು ಶಿಷ್ಯ ಸಂಬಂಧಗಳು: ಪ್ರಾರಂಭ ಮತ್ತು ವಿಕಸನ” ದ ಬಗ್ಗೆ ಒಂದು ಪ್ರಸ್ತುತಿ
ವಂದೇ ಗುರು ಪರಂಪರಾಂ
ನಾರಾಯಣ ಸಮಾರಂಭಾಂ
ವ್ಯಾಸ ಶಂಕರ ಮಧ್ಯಮಾಂ
ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಂ
ವಂದೇ ಗುರು ಪರಂಪರಾಂ
ಪ್ರಭು ನಾರಾಯಣನಿಂದ ಮೊದಲುಗೊಂಡು, ವ್ಯಾಸ ಶಂಕರರನ್ನು
ಮಧ್ಯಕ್ರಮಾಂಕದಲ್ಲಿ ಒಳಗೊಂಡು, ನನ್ನ ಇತ್ತೀಚಿನ ಗುರುಗಳ ಪರ್ಯಂತ
ವಿಸ್ತಾರಗೊಂಡಿರುವ ಮಹಾನ್ ಗುರುಪರಂಪರೆಗೆ ನನ್ನ ವಂದನೆಗಳು.
ಮೊದಲ ಗುರು
ಜ್ಞಾನವನ್ನು ಹೊಂದಲು ನಮಗೆ ಸಹಾಯ ಮಾಡಿದ ಮಹಾನ್ ಗುರುಗಳಿಗೆ, ನಮ್ಮ ಕೃತಜ್ಞತೆ ಮತ್ತು ಋಣವನ್ನು ಈ ರೀತಿ ನಾವು ಸಲ್ಲಿಸುತ್ತಿರುವೆವು.
ಪ್ರಭು ನಾರಾಯಣನು ನಮಗೆ ಪ್ರಥಮ ಗುರು.
ಮೂಲ ಪ್ರವರ್ತಕರು
ಬ್ರಹ್ಮಾಂಡವನ್ನು ಸೃಷ್ಟಿಸಿದ ಮೇಲೆ, ಭಗವಂತನು ಅದರ ಸ್ಥಿರತೆಯನ್ನು ಸಂರಕ್ಷಿಸಲು ಪ್ರಪ್ರಥಮವಾಗಿ “ಮರೀಚಿ”ಯಂತಹ ಮೂಲ ಪ್ರವರ್ತಕರನ್ನು ಸೃಜಿಸಿ ನಿಯಮಿಸಿದನು.
ಮರೀಚಿ
ಪ್ರವೃತ್ತಿ ಧರ್ಮ
ಅಭ್ಯುದಯವನ್ನುಂಟು ಮಾಡುವ ವೈದಿಕ ಪಥದ ಪ್ರವೃತ್ತಿ ಧರ್ಮದ ಬಗ್ಗೆ ಭಗವಂತನು ಅವರಿಗೆ ಬೋಧಿಸಿದನು.
ನಂತರ ಸ್ವಾಮಿ ನಾರಾಯಣನು ಋಷಿಮುನಿಗಳನ್ನು ಸೃಷ್ಟಿಸಿದನು.
ಸನಕ
ಸನಾತನ
ಸನಂದನ ಮತ್ತು ಸನತ್ಕುಮಾರ
ನಿವೃತ್ತಿ ಧರ್ಮ
ಮುಕ್ತಿಯೆಡೆಗೆ ದಾರಿ ತೋರುವ ನಿವೃತ್ತಿ ಧರ್ಮದ ವೈದಿಕ ಪಥದ ಬಗ್ಗೆ ಭಗವಂತನು ಅವರಿಗೆ ತಿಳಿಹೇಳಿದನು.
ಹೀಗೆ ವೈದಿಕ ಸಂಪ್ರದಾಯದ ಗುರು – ಶಿಷ್ಯ ಪರಂಪರೆಯು ಶುರುವಾಯಿತು.
2. ಶೃತಿ
ಸಮಸ್ತ ವೇದಗಳ ಬಗ್ಗೆ ಉಲ್ಲೇಖಿಸಲು ಬಳಸುವ ಸಂಜ್ಞೆಯೇ “ಶೃತಿ”.
ಪುರಾತನ ಋಷಿಮುನಿಗಳಿಗೆ, ಅವರು ಆಳವಾದ ಧ್ಯಾನಸ್ಥಿತಿಯಲ್ಲಿರುವಾಗ ಶೃತಿಗಳ ಸಾಕ್ಷಾತ್ಕಾರವಾಗಿ, ಅವರು ಅದನ್ನು ಕೇಳಿಸಿಕೊಂಡರು ಎಂಬುದಾಗಿ ನಂಬಲಾಗಿದೆ. ನಂತರ ಅವರು ಅದನ್ನು ತಮ್ಮ ಶಿಷ್ಯಂದಿರಿಗೆ ಮೌಖಿಕವಾಗಿ ಉಪದೇಶಿಸಿದರು.
ವೈದಿಕ ಋಷಿಯ ದರ್ಶನ
ಸ್ವಾಮಿ ವಿವೇಕಾನಂದರಿಗೆ ಅಂತಹ ಒಬ್ಬ ಋಷಿಯ ದರ್ಶನದ ಅನುಭವವಾಗಿತ್ತು. ಆ ಋಷಿಯು ಸಿಂಧು ನದಿಯಲ್ಲಿ ಸ್ನಾನಮಾಡಿದ ನಂತರ ಗಾಯತ್ರಿ ದೇವಿಯನ್ನು ಆವಾಹಿಸುವ ಮಂತ್ರ ಪಠಣ ಮಾಡುತ್ತಿರುವುದನ್ನು ಅವರು ನೋಡಿದ್ದಲ್ಲದೇ ಆ ಮಂತ್ರವನ್ನೂ ಸಹ ಕೇಳಿಸಿಕೊಂಡಿದ್ದರು.
ಪ್ರಥಮವಾಗಿ ಋಗ್ವೇದ, ಯಜುರ್ವೇದ ಮತ್ತು ಸಾಮವೇದ ಎಂಬ ಮೂರು ಶೀರ್ಷಿಕೆಗಳ ಅಡಿಯಲ್ಲಿ ಅಂತಹ ಅನುವಾಚನಗಳ ಮಹಾ ಸಂಗ್ರಹವನ್ನೇ ಕಲೆಹಾಕಿ ಸಂರಕ್ಷಿಸಲಾಗಿದೆ.
ಕರ್ಮಕಾಂಡ
ಪ್ರತಿಯೊಂದು ವೇದವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಸಂಹಿತೆ ಮತ್ತು ಬ್ರಾಹ್ಮಣ ಇವೆರಡನ್ನೂ ಒಳಗೊಂಡ ಮೊದಲನೆಯ ಭಾಗವನ್ನು ಕರ್ಮಕಾಂಡ ಎಂದು ಕರೆಯಲಾಗಿದೆ.
ಸಂಹಿತೆಯಲ್ಲಿನ ಮಂತ್ರಗಳು ಅಭ್ಯಾಸ ಕೇಂದ್ರೀಕೃತವಾಗಿವೆ. ಹೋಮಗಳು, ಯಾಗಗಳು,ಯಜ್ಞಗಳು ಮತ್ತು ಇತರ ಶಾಸ್ತ್ರ ವಿಧಿಗಳ ಆಚರಣೆಯಲ್ಲಿ ಸಂಹಿತೆಯ ಮಂತ್ರಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂಬುದನ್ನು ಬ್ರಾಹ್ಮಣ ವಿಭಾಗದಲ್ಲಿ ವಿವರಿಸಲಾಗಿದೆ.
ಜ್ಞಾನಕಾಂಡ
ಎರಡನೆಯ ಭಾಗವಾದ ಅರಣ್ಯಕವು ಪ್ರಮುಖವಾಗಿ ಚಿಂತನಾತ್ಮಕ ಧ್ಯಾನಪರತೆಯಿಂದ ಕೂಡಿದೆ. ಪರಮ ಸತ್ಯ ಸ್ಥಿತಿಯ ಅನ್ವೇಷಣೆಯನ್ನು ಮನಸ್ಸಿಗೆ ನಾಟುವಂತೆ ವಿವರಿಸಲಾಗಿದೆ. ವೇದಗಳ ಈ ವಿಭಾಗದಲ್ಲಿ ಉಪನಿಷತ್ತುಗಳೂ ಅಡಕವಾಗಿವೆ.
3. ಮಂತ್ರಗಳು
ಮಂತ್ರ ಎಂದರೇನು?
“ಯಾವುದನ್ನು ಸತತವಾಗಿ ಮನನ ಮಾಡಿದಾಗ ಮುಕ್ತಿಯನ್ನು ದಯಪಾಲಿಸುವುದೋ” ಅದು ವಾಸ್ತವವಾಗಿ ಮಂತ್ರ ಎಂದೆನಿಸಿಕೊಳ್ಳುತ್ತದೆ.
ಮಂತ್ರವು ಪ್ರಾರ್ಥನೆಗಳಲ್ಲಿ, ಧ್ಯಾನದಲ್ಲಿ ಮತ್ತು ಅರಿಕೆಗಳಲ್ಲಿ ಪುನರಾವರ್ತನೆಗೊಳ್ಳುವ ಪವಿತ್ರವಾದ ವಾಚಕ ಸೂತ್ರ ಅಕ್ಷರಗಳ ಮತ್ತು ಸ್ವರಗಳ ವಿಶಿಷ್ಟಪ್ರಕಾರದ ಸಂಯೋಜನೆಯೇ ಮಂತ್ರಗಳು.
ಒಂದು ನಿರ್ದಿಷ್ಟ ವಿಧಾನದಲ್ಲಿ ಅದನ್ನು ಪ್ರಯೋಗಿಸಿದಾಗ ಖಂಡಿತವಾಗಿಯೂ ಅದು ಖಚಿತವಾದ ಫಲಿತಾಂಶವನ್ನು ನೀಡುತ್ತದೆ.
ಮಂತ್ರದ ಗುಣ ಲಕ್ಷಣಗಳು
ಪ್ರತಿಯೊಂದು ಮಂತ್ರಕ್ಕೂ ಮೂರು ಗುಣ ಲಕ್ಷಣಗಳಿವೆ.
1. ಆ ಮಂತ್ರವನ್ನು ಸಾಕ್ಷಾತ್ಕರಿಸಿಕೊಂಡ ನಿರ್ದಿಷ್ಟವಾದ ಋಷಿ.
2. ಆ ಮಂತ್ರಕ್ಕೆ ನಿರ್ದಿಷ್ಟವಾದ ಪ್ರಾಣದೇವತೆ.
ಮತ್ತು 3. ಆ ಮಂತ್ರವನ್ನು ರಚಿಸಲು ಬಳಸಿದ ನಿರ್ದಿಷ್ಟವಾದ ಛಂದಸ್ಸು.
ನಾವು ಮಂತ್ರಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠವಾದ, ಪವಿತ್ರವಾದ ಗಾಯತ್ರಿ ಮಂತ್ರದ ಉದಾಹರಣೆಯನ್ನು ತೆಗೆದುಕೊಳ್ಳೋಣ.
ಮಹರ್ಷಿ ವಿಶ್ವಾಮಿತ್ರನು ಇದರ ಋಷಿ.
ಸವಿತ ಇದರ ಪ್ರಾಣದೇವತೆ.
ಗಾಯತ್ರಿಯು ಇದರ ಛಂದಸ್ಸು.
ಮಂತ್ರವನ್ನು ಹೇಗೆ ಪಠಿಸಬೇಕು?
ಮಂತ್ರವನ್ನು ಅದಕ್ಕೆ ನಿಗದಿಪಡಿಸಲಾದ ಲಯ ಮತ್ತು ಛಂದಸ್ಸಿಗೆ ಅನುಗುಣವಾಗಿ ಪಠಿಸಬೇಕು.
ಮಂತ್ರವನ್ನು ಪಠಿಸುವಾಗ ನಾವು ಅದರ ಸ್ವರ ಉಚ್ಛಾರಣೆಯ ಬಗ್ಗೆ ವಿಶೇಷ ಗಮನ ಹರಿಸಬೇಕು.
ಮೂರು ಬಗೆಯ ಸ್ವರ ಉಚ್ಛಾರಣೆಗಳಿವೆ.
ಉದಾತ್ತ: ಎತ್ತರಿಸಿದ ಉಚ್ಛ ಸ್ವರ.
ಅನುದಾತ್ತ: ಮಂದ್ರಸ್ಥಾಯಿಯ ಸ್ವರ.
ಸ್ವರಿತ: ಅವರೋಹಣ ಸ್ವರ.
ಮಂತ್ರ ಪಠಣವನ್ನು ಮಾಡುವಾಗ, ಸರಿಯಾದ ಉಚ್ಛಾರದೊಂದಿಗೆ, ನಾವು ಆ ಮಂತ್ರವನ್ನು ಪ್ರತಿನಿಧಿಸುವ ದೇವತೆಯನ್ನು ಧ್ಯಾನಿಸಬೇಕು.
ಹಾಗೆಯೇ ಆ ಮಂತ್ರದ ನಿರ್ದಿಷ್ಟ ಋಷಿಯೊಂದಿಗೆ ಮಾನಸಿಕ ಸಂಪರ್ಕವನ್ನೂ ಸಹ ನಾವು ಸಾಧಿಸಬೇಕು.
ಹೀಗೆ ಮಂತ್ರಪಠಣವನ್ನು ಪುನರಾವರ್ತಿಸುತ್ತಿದ್ದರೆ, ಆ ಮಂತ್ರದ ಅಂತರ್ಜಾತ ಶಕ್ತಿಯು ಬಿಡುಗಡೆ ಹೊಂದಿ, ಮಂತ್ರವನ್ನು ಪಠಿಸುತ್ತಿರುವ ವ್ಯಕ್ತಿಯ ಪ್ರಜ್ಞೆಯಲ್ಲಿ ಅಪೇಕ್ಷಿತ ಪರಿವರ್ತನೆಯನ್ನು ಸಾಧಿಸಲು ಸಾಧ್ಯವಾಗುತ್ತದೆ.
ಪ್ರಯೋಜನಗಳು
ಮಂತ್ರಪಠಣದಿಂದ ಹೊರಹೊಮ್ಮುವ ಪವಿತ್ರ ಶಬ್ದಗಳು, ಈ ಅಸ್ತಿತ್ವದ ವಿವಿಧ ಸ್ತರಗಳ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತವೆ.
ಇಂದ್ರಿಯಗಳು
ಮನಸ್ಸು
ಬುದ್ಧಿಶಕ್ತಿ
ಅವು ಈ ಎಲ್ಲ ಸ್ತರಗಳ ಮೂಲಕ ಹಾದುಹೋಗಿ ಪರಿಶುದ್ಧತೆಯನ್ನೂ ಮತ್ತು ಜ್ಞಾನೋದಯವನ್ನೂ ಉಂಟುಮಾಡುತ್ತವೆ.
ವೈಜ್ಞಾನಿಕ ಪುರಾವೆ
ಯಾರು ಮಂತ್ರಗಳನ್ನು ಪಠಿಸುತ್ತಾರೆಯೋ, ಕೇಳುತ್ತಾರೆಯೋ ಅವರ ಮನಸ್ಸು, ಬುದ್ಧಿ ಮತ್ತು ಶ್ರವಣೇಂದ್ರಿಯ ನರವ್ಯೂಹಗಳ ಮೇಲೆ ಮಂತ್ರದಲ್ಲಿನ ಸಂಸ್ಕೃತ ಶಬ್ದಗಳು ಪರಿಣಾಮ ಬೀರುತ್ತವೆಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ.
ತರಂಗಗಳ ಬಗೆಗಿನ ಅಧ್ಯಯನವಾದ ಸೈಮ್ಯಾಟಿಕ್ಸನ ಜನಕ ಪ್ರಖ್ಯಾತ ವಿಜ್ಞಾನಿ, ಹ್ಯಾನ್ಸ ಜೆನ್ನಿ(1904 – 1972) ಈ ವಿಚಾರದ ಬಗ್ಗೆ ಹಲವಾರು ಪ್ರಯೋಗಗಳನ್ನು ನಡೆಸಿದ್ದಾನೆ.
ಮಂತ್ರದ ಪವಿತ್ರ ಧ್ವನಿಗಳು ಬೆನ್ನೆಲುಬಿನಲ್ಲಿರುವ ಏಳು ಚಕ್ರಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಸಾಬೀತಾಗಿದೆ.
ಸುಷುಮ್ನಾ, ಇಡಾ ಮತ್ತು ಪಿಂಗಳ ಎಂಬ ಮೂರು ಪ್ರಾಣ ನಾಡಿಗಳು.
4. ವೇದಾಂಗಗಳು
ವೇದಗಳ ನಂತರ, ವೇದಗಳ ಶಾಖೆಗಳಾದ ವೇದಾಂಗಗಳು ಬರುತ್ತವೆ.
ಅವುಗಳ ಸಂಖ್ಯೆ ಆರು.
ಶಿಕ್ಷಾ – ಸ್ಪಷ್ಟವಾದ ಮತ್ತು ಸರಿಯಾದ ಉಚ್ಛಾರಣೆಯ ಜ್ಞಾನ
ವ್ಯಾಕರಣ
ಛಂದಸ್ಸು
ನಿರುಕ್ತ – ಶಬ್ದ ವ್ಯುತ್ಪತ್ತಿ.
ಕಲ್ಪ – ಶಾಸ್ತ್ರವಿಧಿ ಮತ್ತು ಆಚಾರವಿಧಿಯ ನಿಯಮಗಳು
ಜ್ಯೋತಿಷ್ಯ
ಸ್ಮೃತಿಗಳು
ನಂತರ ಸ್ಮೃತಿಗಳು ಅಂದರೆ “ನೆನಪಿನಲ್ಲಿಟ್ಟುಕೊಳ್ಳತಕ್ಕಂತಹವುಗಳು” ಬರುತ್ತವೆ. ಮನುಸ್ಮೃತಿ, ಆಪಸ್ತಂಬ ಸೂತ್ರಗಳು, ಯಾಜ್ಞ್ಯವಲ್ಕ ಸ್ಮೃತಿ ಇತ್ಯಾದಿ. ಧರ್ಮಶಾಸ್ತ್ರ ನಿಯಮಾವಳಿಗಳ ಕೈಪಿಡಿಗಳು.
ಇತರೆ ಜ್ಞಾನ ಪ್ರಕಾರಗಳು
ನಂತರ ಹಲವು ಜ್ಞಾನ ಪದ್ಧತಿಯ ರಚನೆಗಳು ಬರುತ್ತವೆ.
ದರ್ಶನಗಳು
ತಂತ್ರಗಳು
ಪುರಾಣಗಳು
ಕಾವ್ಯಗಳು
ನಾಟ್ಯಶಾಸ್ತ್ರ
ಗಂಧರ್ವ ವಿದ್ಯೆ
ಯೋಗಸೂತ್ರಗಳು
ಕಾಮಸೂತ್ರಗಳು
ಆಯುರ್ವೇದ
ಧನುರ್ವಿದ್ಯೆ
ಪುರುಷಾರ್ಥಗಳು
ವೇದಗಳು ಮತ್ತು ಉಪನಿಷತ್ತುಗಳು ಸೇರಿದಂತೆ ಸಕಲ ಜ್ಞಾನ ಪದ್ಧತಿಗಳಲ್ಲಿ ಒಂದೇ ಲೋಕಾವಲೋಕನವು
ಪ್ರತಿಫಲಿಸಲ್ಪಟ್ಟಿದೆ ಮತ್ತು ಉಚ್ಚರಿಸಲ್ಪಟ್ಟಿದೆ.
ಈ ಲೋಕಾವಲೋಕನವು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳನ್ನು ಜೀವನದ ಗುರಿ ಎಂಬುದಾಗಿ ಸಮೀಕರಿಸುತ್ತದೆ.
ಇವುಗಳು ಈ ಜನ್ಮದ ಅಭ್ಯುದಯವನ್ನು ಉತ್ತೇಜಿಸುತ್ತವೆ ಮತ್ತು ಮೋಕ್ಷವನ್ನು ಹೊಂದಲು ಸಹಕಾರಿಯಾಗುತ್ತವೆ.
5. ಗುರು ಶಿಷ್ಯ ಪರಂಪರೆ
ಅಭ್ಯುದಯ ಮತ್ತು ಮುಕ್ತಿ ಎಂಬ ಎರಡೂ ಗುರಿಗಳಿಗೆ ಗುರುವಿನ ಅನುಗ್ರಹ ಮತ್ತು ಮಾರ್ಗದರ್ಶನ ಬೇಕಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಗುರುವು ಕೇಂದ್ರಸ್ಥಾನದಲ್ಲಿ ನಿಲ್ಲುತ್ತಾನೆ.
ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ಮೊದಲು, ವಿಶೇಷವಾಗಿ ಯಾವುದೇ ಧಾರ್ಮಿಕ ಅಧ್ಯಯನ ಅಥವಾ ಆಚರಣೆಗೆ ಮೊದಲು ನಾವು ಗುರುವಂದನೆಯನ್ನು ಸಲ್ಲಿಸುತ್ತೇವೆ.
ಗುರು – ಶಿಷ್ಯರ ಬಾಂಧವ್ಯ
ಗುರು – ಶಿಷ್ಯರ ಸಂಬಂಧವು ಸನಾತನ ಧರ್ಮದ ಮೂಲಭೂತ ಅಂಗವಾಗಿದೆ.
ಜಗತ್ತಿನ ಹುಟ್ಟಿನ ಸಮಯದಿಂದ ಮೊದಲುಗೊಂಡು ಇಂದಿನ ಆಧುನಿಕ ಎಲೆಕ್ಟ್ರಾನಿಕ್ಸ ಯುಗದವರೆಗೂ ಗುರು – ಶಿಶ್ಯರ ಸಂಬಂಧದ ವಿಕಾಸವು ಹೇಗಾಯಿತೆಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ.
ಉಪನಿಷತ್ತುಗಳು
ಗುರುಗಳು ಮತ್ತು ಅವರ ಶಿಷ್ಯಂದಿರ ನಡುವೆ ನಡೆದ ಅನೇಕ ಸಂವಾದಗಳು ಉಪನಿಷತ್ತಿನಲ್ಲಿ ಅಡಕವಾಗಿವೆ.
ಬ್ರಹ್ಮ ಜ್ಞಾನವನ್ನು ಹೊಂದಲು ಸಹಾಯಕವಾಗುವ, ತನ್ನ ಆಧ್ಯಾತ್ಮಿಕ ಅನ್ವೇಷಣೆಗೆ ಬೇಕಾಗುವ ಹಲವಾರು ಅಂಶಗಳ ಬಗ್ಗೆ ಅರಿಯಲು ಶಿಷ್ಯನು ತನ್ನ ಗುರುವನ್ನು ಪೂಜ್ಯಭಾವನೆಯಿಂದ ಅರಸುತ್ತಾನೆ.
ಬೃಹಾದಾರಣ್ಯಕ ಉಪನಿಷತ್ತಿನಲ್ಲಿ ಅಂತಹ ಗುರುಗಳ ಸುದೀರ್ಘ ಪಟ್ಟಿಯನ್ನು ನಾವು ಕಾಣುತ್ತೇವೆ.
ವೇದವ್ಯಾಸ
ನಮ್ಮ ಸಂಸ್ಕೃತಿಯಲ್ಲಿ ವೇದವ್ಯಾಸರು ಕೇಂದ್ರೀಕೃತ ವ್ಯಕ್ತಿಯಾಗಿ ನಿಲ್ಲುತ್ತಾರೆ.
ಅವರ ಸೃಜನಾತ್ಮಕ ಮತ್ತು ಪ್ರತಿಭಾಪೂರ್ಣ ಬುದ್ಧಿಶಕ್ತಿಯಿಂದ ಸಮಸ್ತ ನಾಗರಿಕತೆಯ ಜೀವನಾಡಿಯಾಗಿ ಅದನ್ನು ಸಮೃದ್ಧಗೊಳಿಸಿದ್ದಾರೆ.
ಶಿಷ್ಯರನ್ನುನೇರವಾಗಿ ಮತ್ತು ವೈಯುಕ್ತಿಕವಾಗಿ ನಿಯುಕ್ತಿಗೊಳಿಸುವ ಸಂಪ್ರದಾಯವನ್ನು ವೇದವ್ಯಾಸರು ಮುಂದುವರಿಸಿದ್ದಾರೆ.
ಅದರ ಜತೆಗೆ ಅವರ ಪುರಾಣಗಳ ಸಾಹಿತ್ಯ ಸಂಪತ್ತಿನಿಂದ ಸಂವಹವನದ ಹೊನಲನ್ನೇ ಹರಿಸಿದ್ದಾರೆ.
ವೇದವ್ಯಾಸ
ಮೂರು ಸ್ತರಗಳಲ್ಲಿದ್ದ ವೇದವನ್ನು, ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ ಎಂಬುದಾಗಿ ನಾಲ್ಕು ಶಾಖೆಗಳನ್ನಾಗಿ ಅವರು ವಿಂಗಡಿಸಿದರು.
ಅದಲ್ಲದೆ ಅವರು ಪರಮ ಸತ್ಯಸ್ಥಿತಿ ಎಂಬ ವೈದಿಕ ಕಲ್ಪನೆಯನ್ನು “ಬ್ರಹ್ಮ ಸೂತ್ರಗಳು” ಎಂದು ಕರೆಯಲ್ಪಡುವ ಸೂತ್ರಗಳ ಗುಚ್ಛವನ್ನಾಗಿಸಿ ವೇದಗಳಿಗೆ ಸ್ಪಷ್ಟತೆಯನ್ನಿತ್ತರು.
ಜ್ಞಾನವೆಂಬ ದೀಪ
ನಂತರ ಅವರು ಕಾವ್ಯಗಳಲ್ಲೆಲ್ಲಾ ಅತಿ ದೀರ್ಘಕಾವ್ಯವಾದ “ಮಹಾಭಾರತ” ಎಂಬ ಮಹಾಕಾವ್ಯವನ್ನು ರಚಿಸಿದರು.
ಅದರಲ್ಲಿ ಅವರು ಅತಿ ಮುಖ್ಯ ಪಾತ್ರವನ್ನೂ ನಿರ್ವಹಿಸಿದರು.
ಎಂದೆಂದಿಗೂ ಜನತೆಯ ಪಾಲಿಗೆ ಸಮಂಜಸವಾಗಿ ಉಳಿಯುವ ನಿತ್ಯನೂತನ ಕಥೆ “ಮಹಾಭಾರತ”.
ನಿಸ್ಸಂಶಯವಾಗಿಯೂ ಇದು ಪಂಚಮ ವೇದವೇ ಸರಿ. ಮೊದಲಿಗೆ ಈ ಕಥೆಯನ್ನು ಬರೆದ ಗಣಪತಿಗೆ ಇದನ್ನು ವೇದವ್ಯಾಸರು ಪ್ರಸ್ತುತ ಪಡಿಸಿದರು.
ನಂತರ ತನ್ನ ಸ್ವಂತ ಶಿಷ್ಯ ವೈಶಂಪಾಯನನಿಗೆ ಇದನ್ನು ಹೇಳಿದರು.ಎಲ್ಲರ ಒಳಿತಿಗಾಗಿ, ಮಹಾಭಾರತವೆಂಬ ತೈಲವನ್ನು ಬಳಸಿ ವ್ಯಾಸರು ಜ್ಞಾನವೆಂಬ ಜ್ಯೋತಿಯನ್ನು ಬೆಳಗಿದರು.
ವೇದವ್ಯಾಸ
ಗುರು – ಶಿಷ್ಯ ಪರಂಪರೆಗೆ ಅವರು ಮತ್ತೊಂದು ಆಯಾಮವನ್ನು ಸೇರಿಸಿ ಕೊಟ್ಟರು.
ನೈಮಿಷಾರಣ್ಯ ಎಂಬ ಸ್ಥಳದಲ್ಲಿ ತಾನು ರಚಿಸಿದ ಪುರಾಣಗಳು ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಉಪನ್ಯಾಸಗಳಿಂದ ತನ್ನ – ಶಿಷ್ಯವೃಂದವನ್ನು ಉದ್ಧರಿಸಿದರು.
ನೈಮಿಷಾರಣ್ಯದಲ್ಲಿ ಅತಿ ದೊಡ್ಡ ಆಲದ ಮರದ ಕೆಳಗೆ ಎತ್ತರಿಸಿ ನಿರ್ಮಿಸಲಾದ ಜಗಲಿಯನ್ನು ನಾವು ಕಾಣುತ್ತೇವೆ. ಅಲ್ಲಿ ವೈಶಂಪಾಯನ, ಶೌನಕ, ಸೂತ ಇತ್ಯಾದಿ ಚಿರಪರಿಚಿತ ಹೆಸರುಗಳುಳ್ಳ ಋಷಿಗಳೊಂದಿಗೆ ವ್ಯಾಸರು ಸಭೆ ಮತ್ತು ಗೋಷ್ಠಿಗಳನ್ನು ನಡೆಸುತ್ತಿದ್ದರು ಎಂಬುದಾಗಿ ನಂಬಲಾಗುತ್ತದೆ.
6. ನಂತರ ಶಂಕರರು ಬರುತ್ತಾರೆ.
ವೈದಿಕ ಸಂಪ್ರದಾಯವು ಗೊಂದಲ ಮತ್ತು ಅವ್ಯವಸ್ಥೆಗಳ ಆಗರವಾಗಿದ್ದ ಕಾಲಘಟ್ಟದಲ್ಲಿ ಶಂಕರಾಚಾರ್ಯರ ಆಗಮನವಾಗುತ್ತದೆ.
ಅವರು ವೇದಗಳ ಪ್ರಾಧಾನ್ಯತೆ ಮತ್ತು ಪಾರಮ್ಯತೆಯನ್ನು ಪುನರ್ ಪ್ರತಿಷ್ಠಾಪಿಸಿದರು.
ಶಂಕರಾಚಾರ್ಯ
ಶಂಕರಾಚಾರ್ಯರ ಕಾಲಘಟ್ಟದಲ್ಲಿ, ಗುರು – ಶಿಷ್ಯ ಪರಂಪರೆಯು ಒಂದು ಹೊಸ ಆಯಾಮವನ್ನು ಪಡೆದುಕೊಳ್ಳುತ್ತದೆ.
ಅಲ್ಲಿಯವೆರೆಗೂ ಮುಕ್ತಿಯನ್ನು ಹೊಂದಲು ಬೇಕಾದ ಜ್ಞಾನವನ್ನು ಅರಸಿಕೊಂಡು ಶಿಷ್ಯರು ಗುರುವಿನ ಬಳಿಗೆ ಬರುವ ಸಂಪ್ರದಾಯ ವಾಡಿಕೆಯಲ್ಲಿತ್ತು.
ಆದರೆ ಶಂಕರರು ಆ ಸಂಪ್ರದಾಯವನ್ನು ವ್ಯತಿರಿಕ್ತವಾಗಿ ಬದಲಾಯಿಸಿದರು.
ತನ್ನ ಗುರುವಿನಿಂದ ಜ್ಞಾನಾರ್ಜನೆ ಪಡೆದ ನಂತರ ಶಂಕರಾಚಾರ್ಯರು ಶಿಷ್ಯರನ್ನರಸಿಕೊಂಡು ಹೋಗಲು ಪ್ರೇರೇಪಿತರಾಗಿ ಅವರೆಡೆಗೆ ತಾವೇ ಹೋದರು.
ಭಾಷ್ಯಕಾರ
ಅವರ ಗುರುಗಳಾದ ಗೋವಿಂದ ಭಗವತ್ಪಾದರ ಬಳಿ ಶಿಕ್ಷಣವನ್ನು ಪೂರೈಸಿದ ನಂತರ, ಅಧ್ಯಯನದ ನಂತರ, ಅವರು ಅಧ್ಯಾಪನವನ್ನು ಮಾಡುತ್ತಾ, ಗುರುವಿನ ಪಾತ್ರ ವಹಿಸಿದರು.
ಮೊದಲಿಗೆ ಪ್ರಸ್ಥಾನ ತ್ರಯಗಳಾದ ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ, ಇವುಗಳ ಮೇಲೆ ಸ್ಪಷ್ಟವಾದ, ಖಚಿತವಾದ ಮತ್ತು ಧೃಢವಾದ ಶೈಲಿಯಲ್ಲಿ ಭಾಷ್ಯವನ್ನು ರಚಿಸಿದರು.
ಪರಮಹಂಸ ಪರಿವ್ರಾಜಕ ಆಚಾರ್ಯ
ಸನ್ಯಾಸಿಗಳಲ್ಲೆಲ್ಲಾ ಅತ್ಯುನ್ನತ ವರ್ಗವಾದ ಪರಮಹಂಸ ಪದವಿಗೆ ಸೇರಿದವರು ಶಂಕರಾಚಾರ್ಯರು.
ತನ್ನ ಬೋಧನೆಗಳನ್ನು ಕಾರ್ಯರೂಪಕ್ಕೆ ಅಳವಡಿಸಿಕೊಂಡು ಮಾದರಿಯಾಗಿ ನಿಲ್ಲುವ ಬೋಧಕನೇ “ಆಚಾರ್ಯ”ನೆನಿಸಿಕೊಳ್ಳುತ್ತಾನೆ.
ಅಲೆಮಾರಿ ಸನ್ಯಾಸಿಯನ್ನು “ಪರಿವ್ರಾಜಕ” ನೆನ್ನುತ್ತಾರೆ.
ಶಂಕರಾಚಾರ್ಯರು ನಾನಾವಿಧದ ಕಲಿಕಾಕೇಂದ್ರಗಳಿಗೆ ಭೇಟಿಕೊಟ್ಟು ತನ್ನ ಅದ್ವೈತ ತತ್ವಜ್ಞಾನವನ್ನು ಅನೇಕ ಚರ್ಚೆಗಳ ಮತ್ತು ವಾದ ವಿವಾದಗಳ ಮೂಲಕ ವ್ಯಾಖ್ಯಾನಿಸಿ ವಿವರಿಸಲು ಶುರುಮಾಡಿದರು.
ಈ ರೀತಿ ಅವರು ಸನಾತನಧರ್ಮದ ಮೂಲಭೂತ ತತ್ವಗಳನ್ನು ಪುನರ್ಸ್ಥಾಪಿಸಲು ಸಫಲರಾದರು.
ಒಂದುಗೂಡಿಸುವ ಶಕ್ತಿ
ಅವರು ಸನಾತನ ಧರ್ಮದೊಂದಿಗೆ ಜನರು ಪುನಃ ಜೊತೆಗೂಡಲು ಸಹಾಯ ಮಾಡಿದರು.
ಅವರು ಜನರಿಗೆ ಮುಕ್ತಿಯ ಮಾರ್ಗದರ್ಶನ ಮಾಡಿಸಿದರು.
ಮುಕ್ತಿಯನ್ನು ಹೊಂದಲು ಜ್ಞಾನವೇ ಸಾಧನ ಎಂಬುದನ್ನು ಅವರು ಪ್ರತಿಪಾದಿಸಿದರು. ಇದಕ್ಕಾಗಿ ಜ್ಞಾನಯೋಗವನ್ನು ಅಭ್ಯಾಸ ಮಾಡಬೇಕೆಂದು ಹೇಳಿದರು.
ತಮ್ಮ ಅಮೋಘ ಸಂಘಟನಾ ಕೌಶಲ್ಯದಿಂದ, ಅವರು ನಾಲ್ಕು ಮಠಗಳನ್ನು ಸ್ಥಾಪಿಸಿದರು. ಚದುರಿಹೋಗಿದ್ದ ಮತ್ತು ಭಿನ್ನವಾಗಿದ್ದ ಸಮುದಾಯದವರನ್ನು ಒಂದುಮಾಡಲು ಸನ್ಯಾಸಿಗಳ ಹತ್ತು ವರ್ಗಗಳನ್ನು ಪ್ರತಿಷ್ಠಾಪಿಸಿದರು.
ಪರಂಪರೆಯು ಮುಂದುವರೆಯುತ್ತದೆ.
ವ್ಯಾಸರಂತೆಯೇ, ಶಂಕರರೂ ಸಹ ನಾಲ್ಕು ದಿಕ್ಕುಗಳಲ್ಲಿ, ನಾಲ್ಕು ಮಠಗಳನ್ನು ಸ್ಥಾಪಿಸಿದ ನಂತರ ಪರಂಪರೆಯ ಉತ್ಠಾನದ ಕಾರ್ಯವನ್ನು ತಮ್ಮ ನಾಲ್ಕು ಜನ ಶಿಷ್ಯಂದಿರಿಗೆ ವಹಿಸಿಕೊಡುತ್ತಾರೆ.
ನಾಲ್ಕು ಆಧ್ಯಾತ್ಮಿಕ ಕೇಂದ್ರಗಳು
ಪೂರ್ವ – ಋಗ್ವೇದ – ಪದ್ಮಪಾದ – ಗೋವರ್ಧನ ಪೀಠ
ದಕ್ಷಿಣ – ಯಜುರ್ವೇದ – ಸುರೇಶ್ವರ – ಶೃಂಗೇರಿ ಶಾರದಾ ಪೀಠ
ಪಶ್ಚಿಮ – ಸಾಮವೇದ – ಹಸ್ತಾಮಲಕಾಚಾರ್ಯ – ದ್ವಾರಕಾ ಪೀಠ
ಉತ್ತರ – ಅಥರ್ವಣ ವೇದ – ತೋಟಕಾಚಾರ್ಯ – ಜ್ಯೋತಿಮಠ ಪೀಠ
ಸಮಗ್ರಮಾರ್ಗ
ತಮ್ಮ ಬೋಧನೆಗಳನ್ನು ಪ್ರಚಾರಮಾಡಲು ಮತ್ತು ಸನಾತನ ಧರ್ಮದ ಮೌಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಂಕರಾಚಾರ್ಯರು
ವ್ಯಾಪಕವಾಗಿ ಕೇದಾರನಾಥದಿಂದ ರಾಮೇಶ್ವರಕ್ಕೆ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿಗೆ, ಹೀಗೆ ದೇಶದ ಉದ್ದಗಲಕ್ಕೂ ಸಂಚರಿಸಿದರು.
7. ಪಂಚಾಯತನ ಪೂಜೆ
ಅವರು ಹಲವು ಶಾಸ್ತ್ರ ವಿಧಿಗಳ ಕ್ರಿಯೆಯನ್ನು ಪ್ರಮಾಣೀಕರಿಸಿ ಅವುಗಳನ್ನು ಆಚರಣೆಗೆ ತಂದರು.
ಅವರು “ಪಂಚಾಯತನದ ಪೂಜೆ”ಯನ್ನು ಪರಿಚಯಿಸಿದರು.
ಒಂದು ನಿರ್ದಿಷ್ಟ ವಿಧಾನದಲ್ಲಿ ಐದು ದೇವತೆಗಳ ತಂಡವೊಂದನ್ನು ಪೂಜಿಸುವುದು,
ಆ ಪೂಜೆಯ ವಿಶೇಷ.
ಶಿವ, ವಿಷ್ಣು, ದೇವಿ, ಸೂರ್ಯ ಮತ್ತು ಗಣಪತಿ ಇವರೇ ಆ ಐದು ದೇವತೆಗಳ ತಂಡ.
ಭಕ್ತರ ಇಷ್ಟದೇವತೆಯನ್ನು ಮಧ್ಯಭಾಗದಲ್ಲಿ ಇರಿಸಲಾಗುತ್ತದೆ. ಇದು ನಿರ್ಗುಣ ಬ್ರಹ್ಮನನ್ನು ಅರಿತುಕೊಳ್ಳುವ ಒಂದು ಸಾಧನವಾಗಿದೆ ಮತ್ತು ಒಂದೇ ಸಗುಣ ಬ್ರಹ್ಮನ ವಿವಿಧ ರೂಪಗಳ ಮಧ್ಯೆ ತಾರತಮ್ಯ ಮಾಡದಿರುವುದನ್ನು ಉತ್ತೇಜಿಸಲು ಕೈಗೊಂಡ ಒಂದು ಪ್ರಯತ್ನ.
“ಷಣ್ಮತ” ಅಂದರೆ ಆರು ದೇವತೆಗಳನ್ನು ಪೂಜಿಸುವ ವಿಧಾನದ ಪರಿಕಲ್ಪನೆಯನ್ನೂ ಸಹ ಅವರು ಪರಿಚಯಿಸಿದ್ದಾರೆ.
ಶಿವ, ವಿಷ್ನು, ಶಕ್ತಿ, ಗಣಪತಿ, ಸೂರ್ಯ ಮತ್ತು ಸ್ಕಂದ. ಇವರೇ ಆರು ದೇವತೆಗಳು. ಅಷ್ಟೇ ಅಲ್ಲದೆ ದೇವತೆಗಳ ಆಯ್ಕೆಯನ್ನು ಅವರವರ ಇಷ್ಟಾನುಸಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಶ್ರೀ ಚಕ್ರ
ವೇದಾಂತಿಯೂ ಗುರುಗಳೂ ಆದಂತಹ ಶಂಕರಾಚಾರ್ಯರು “ಮಂತ್ರ ಶಾಸ್ತ್ರ”ದಲ್ಲಿಯೂ ಸಹ ಪ್ರಾವೀಣ್ಯತೆಯನ್ನು ಪಡೆದಿದ್ದರು. ತಿರುಮಲವೂ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಶಕ್ತಿಯನ್ನು ಪಸರಿಸುವ ಅತ್ಯಂತ ಪ್ರಭಾವೀ “ಶ್ರೀ ಚಕ್ರ”ವನ್ನು ಅವರು ಸ್ಥಾಪಿಸಿದ್ದರೆಂದು ಹೇಳಲಾಗುತ್ತದೆ.
ಸ್ತೋತ್ರಗಳು
ಸ್ವತಃ ಮಹಾನ್ ಉಪಾಸಕರಾದಂತಹ ಅವರು ವಿವಿಧ ದೇವತೆಗಳ ಮೇಲೆ ಬಗೆಬಗೆಯ ಸ್ತೋತ್ರಗಳನ್ನು ರಚಿಸಿದ್ದಾರೆ. ಶಂಕರರ ಸ್ತೋತ್ರಗಳು ಉನ್ನತ ಮಟ್ಟದ್ದಾಗಿದ್ದವು.
ಶಂಕರರು ಕವಿಯಾಗಿ ವ್ಯಾಸ, ವಾಲ್ಮೀಕಿ ಮತ್ತು ಕಾಳಿದಾಸರ ಪರಂಪರೆಗೆ ಸೇರುತ್ತಾರೆ.
ಭಕ್ತಿಯ ಪರಾಕಾಷ್ಠೆ ಮತ್ತು ಮಂತ್ರಶಕ್ತಿಯಿಂದ ತುಂಬಿರುವ ಮನೋಹರವಾದ ಸ್ತೋತ್ರಗಳು ಅವರದು.
ವಸ್ತುಶಃ ಪ್ರತಿಯೊಂದು ಸ್ತೋತ್ರವೂ ಭಕ್ತಿಯ ಪಾಠವೇ ಆಗಿದೆ.
ಸಮಗ್ರ ಮಾರ್ಗ
ಅದ್ವೈತ ಸಿದ್ಧಾಂತದ ಬೋಧನೆಗಳಲ್ಲಿ ಅವರು ಪ್ರಕಟಪಡಿಸಿದ, ಅವರ ಬೌದ್ಧಿಕ ಓಜಸ್ಸಿನ ಬಗೆಗೆ ಮಾತ್ರ ವಿಪರೀತವಾಗಿ ಒತ್ತುಕೊಟ್ಟು ಹೇಳದೇ, ಶಂಕರಾಚಾರ್ಯರನ್ನು ಗುರುವಿನ ರೂಪದಲ್ಲಿ ಅರ್ಥಮಾಡಿಕೊಳ್ಳಲು ನಾವು ಸಮಗ್ರ ಮಾರ್ಗವೊಂದನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ.
ಅವರ ಭಕ್ತಿ ಸಾಹಿತ್ಯಕೃತಿಗಳಲ್ಲಿ ವ್ಯಕ್ತವಾಗುವ ಭಾವೋದ್ರೇಕವನ್ನೂ, ಅವುಗಳಲ್ಲಿನ ಅನುಕಂಪ, ರಮ್ಯತೆ ಮತ್ತು ಆಕರ್ಷಕತೆಯನ್ನೂ ನಾವು ಅರ್ಥಮಾಡಿಕೊಳ್ಳಬೇಕು.
ಶ್ರೇಷ್ಠತೆಯೇ ಮೈವೆತ್ತ ಒಬ್ಬ ಗುರು
ತನ್ನ ಕೃತಿಗಳಲ್ಲಿ ಅವರು ಎರಕ ಹೊಯ್ದ ಮಂತ್ರಶಕ್ತಿಯ ವಿಚಾರದಲ್ಲಿ, ಅವರಿಗಿದ್ದ ಅಗಾಧ ಶಕ್ತಿಸಂಚಯವನ್ನು ನಾವು ಗುರುತಿಸಬೇಕು.
ತಮ್ಮ ಆಧ್ಯಾತ್ಮಿಕ ಯಾತ್ರೆಯಲ್ಲಿ ಅವರು ತೋರಿದ ಕ್ರಿಯಾಶೀಲತೆಯನ್ನೂ ಸಹ ನಾವೆಲ್ಲರೂ ಗೌರವಿಸಬೇಕು.
ಅವರ ವ್ಯಕ್ತಿತ್ವದ ನಾಲ್ಕು ಆಯಾಮಗಳನ್ನು ಕೆಳಕಂಡಂತೆ ವಿಭಾಗಿಸಬಹುದು.
1. ಜ್ಞಾನ ಯೋಗ 2. ಭಕ್ತಿ ಯೋಗ 3. ಧ್ಯಾನ ಯೋಗ 4. ಕರ್ಮ ಯೋಗ
ನಮ್ಮ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೆ ಅವರ ಬದುಕು ಮತ್ತು ಅವರ ಕಾರ್ಯಗಳು ಒಂದು ಶಿಕ್ಷಣ ಪಾಠವಾಗಿದೆ.
ಖಂಡಿತವಾಗಿಯೂ ಅವರು ಶ್ರೇಷ್ಠತೆಯೇ ಮೈದಳೆದ ಓರ್ವ ಗುರು.
ಲಂಕಾ ಕುಟುಂಬ
ನಮ್ಮ ಪೂರ್ವಜರು ಹಲವು ತಲೆಮಾರುಗಳ ಹಿಂದೆಯೇ ಆಂಧ್ರಪ್ರದೇಶದಲ್ಲಿರುವ ಗೋದಾವರಿ ಮುಖಜ ಭೂಮಿಯಲ್ಲಿನ ವೆಲನಾಡು ಪ್ರಾಂತ್ಯದಿಂದ ವಲಸೆ ಹೊರಟು, ಈಗಿನ ಲೇಪಾಕ್ಷಿ ಪ್ರದೇಶಕ್ಕೆ ಬಂದು ಅಲ್ಲಿ ನೆಲಸಿದರು.
ಲಂಕಾ ಕುಟುಂಬ
ವೆಲನಾಡು ಸ್ಮಾರ್ತ ಬ್ರಾಹ್ಮಣರಾದ ನಮ್ಮ ಕುಟುಂಬವು ಶೃಂಗೇರಿ ಶಾರದಾ ಪೀಠಕ್ಕೆ ನಿಷ್ಠರಾಗಿರುವುದರಿಂದ, ನಾವು ಯಜುರ್ವೇದ ಅದರಲ್ಲೂ ಕೃಷ್ಣ ಯಜುರ್ವೇದ ಅಧ್ಯಯನಕ್ಕೆ ಬದ್ಧರಾಗಿರುವೆವು.
ಗೋತ್ರ
ವಸಿಷ್ಠ ಮತ್ತು ಮಿತ್ರಾವರುಣರ ಸಮೇತ ಕೌಂಡಿನ್ಯ ಋಷಿಯ ಪೀಳಿಗೆಯ ಗೋತ್ರಕ್ಕೆ ನಾವು ಸೇರಿದವರಾಗಿದ್ದೇವೆ.
ವೇದ ಪಾರಾಯಣ
ನಮ್ಮ ಹಲವಾರು ಪೂರ್ವಜರು ಕೃಷ್ಣ ಯಜುರ್ವೇದದ ಪಾರಾಯಣ ಮಾಡುತ್ತಿದ್ದರು. ಅವರು ವೇದ ಪಾರಾಯಣವನ್ನು ಭಕ್ತಿಯಿಂದ ಆಚರಿಸುವುದಲ್ಲದೇ ಅದನ್ನು ಪ್ರಚಾರ ಮಾಡುವ ಸಂಪ್ರದಾಯವನ್ನೂ ಹುಟ್ಟು ಹಾಕಿದ್ದರು.
ಮಾನ್ಯತೆ
ಸಮಾಜದಲ್ಲಿ ನಮ್ಮ ಪೂರ್ವಿಕರು ವೇದ, ಶಾಸ್ತ್ರ, ಪುರಾಣ ಮತ್ತು ಕಾವ್ಯ ಇವುಗಳಲ್ಲಿ ಪರಿಣಿತರೂ ಮತ್ತು ಪಂಡಿತರೂ ಆಗಿದ್ದರು ಎಂಬ ಮಾನ್ಯತೆ ಇತ್ತು. ಅವರನ್ನು ಗುರುಗಳು ಎಂದು ಗುರುತಿಸಿ ಆದರಿಸುತ್ತಿದ್ದರು. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಸಹ ಅವರು ಅಪಾರ ಜ್ಞಾನವನ್ನು ಹೊಂದಿದ್ದರು. ಸನಾತನ ಧರ್ಮವು ಪ್ರತಿಪಾದಿಸುವ ಮೌಲ್ಯಗಳ ಮತ್ತು ಆಚರಣೆಗಳ ತಳಹದಿಯ ಮೇಲೆ ಅವರು ಕಾರ್ಯ ನಿರ್ವಹಿಸುತ್ತಿದ್ದರು.
ನಮ್ಮ ನಂಬಿಕೆ ಮತ್ತು ನಮ್ಮ ಧ್ಯೇಯ
ವೇದಗಳಲ್ಲಿನ ಅಪೌರುಷೇಯತ್ವವನ್ನು ನಾವು ಧೃಢವಾಗಿ ನಂಬುತ್ತೇವೆ. ಕರ್ಮ ಸಿದ್ಧಾಂತವನ್ನು ನಾವು ನಂಬುತ್ತೇವೆ, ಮತ್ತು ಅಭ್ಯುದಯ, ಸರ್ವತೋಮುಖ ಏಳಿಗೆ, ಈ ಜೀವನದಲ್ಲಿ ಸಫಲತೆಯನ್ನು ಸಾಧಿಸುವುದು ಮತ್ತು ಹುಟ್ಟು, ಸಾವಿನ ಈ ಚಕ್ರದಿಂದ ಮುಕ್ತಿಯನ್ನು ಹೊಂದುವ ಪ್ರಯತ್ನ, ಇವೇ ನಮ್ಮ ಜೀವನದ ಪರಮ ಗುರಿ ಅಥವಾ ಧ್ಯೇಯವಾಗಿದೆ.
ಸ್ವಧರ್ಮ
ಅಧ್ಯಯನ – ಅಧ್ಯಾಪನ
ಕಲಿಯುವಿಕೆ ಮತ್ತು ಕಲಿಸುವಿಕೆ
ಯಜನ – ಯಾಜನ
ಯಜ್ಞ ಮಾಡುವುದು ಮತ್ತು ಯಜ್ಞ ಮಾಡಿಸುವುದು.
ದಾನ ಅಥವಾ ಕೊಡುಗೆಗಳನ್ನು ಕೊಡುವುದು ಮತ್ತು ಸ್ವೀಕರಿಸುವುದು.
ನಿತ್ಯ ಕರ್ಮ – ಅನುಷ್ಠಾನ.
ಪರ ಮತ್ತು ಅಪರ ವಿದ್ಯೆ
ಸಂಸಾರದ ಚೌಕಟ್ಟಿನೊಳಗೆ ಗುರು – ಶಿಷ್ಯ ಸಂಬಂಧವನ್ನು ಚಾಲ್ತಿಯಲ್ಲಿಡುವುದು.
ಎರಡು ವಿಧದ ಜ್ಞಾನಗಳನ್ನು ಮುಂಡಕ ಉಪನಿಷತ್ತಿನಲ್ಲಿ ಪ್ರಸ್ತಾಪಿಸಲಾಗಿದೆ.
ಪರ ಮತ್ತು ಅಪರ ವಿದ್ಯೆ
ಆಧ್ಯಾತ್ಮಿಕ ಜ್ಞಾನ ಮತ್ತು ಲೌಕಿಕ ಜ್ಞಾನ
ಮುಕ್ತಿಯನ್ನು ಹೊಂದಲು ಬೇಕಾದ ಒಂದು ಜ್ಞಾನ – ಆಧ್ಯಾತ್ಮಿಕ ಜ್ಞಾನ.
ಸುಖ, ಸಂತೋಷ, ನೆಮ್ಮದಿಯಿಂದ ಕೂಡಿದ ಬದುಕಿಗಾಗಿ ಮತ್ತೊಂದು ಜ್ಞಾನ – ಲೌಕಿಕ ಜ್ಞಾನ.
ತಂದೆ, ತಾಯಿ ಅಥವಾ ಪೋಷಕರ ಪೋಷಣೆ
ನಮ್ಮ ಕುಟುಂಬದಲ್ಲಿ ತಂದೆ, ತಾಯಂದಿರು ಮತ್ತು ಪೋಷಕರು ಚಿಕ್ಕವರ ವಿಷಯದಲ್ಲಿ ಗುರುಗಳ ಪಾತ್ರ ವಹಿಸುತ್ತಿದ್ದರು.
ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಯೋಗ್ಯರು ಮತ್ತು ಜವಾಬ್ದಾರಿಯುತ ಸದಸ್ಯರನ್ನಾಗಿಸಲು ಕುಟುಂಬದ ಅಪ್ಪಂದಿರು ಶ್ರಮವಹಿಸುತ್ತಿದ್ದರು. ಮಕ್ಕಳಲ್ಲಿ ಪ್ರೀತಿ, ವಾತ್ಸಲ್ಯ ಮತ್ತು ಶ್ರದ್ಧೆಯನ್ನು ಬೆಳಸಲು ಕುಟುಂಬದ ತಾಯಂದಿರು ಪ್ರಾಧಾನ್ಯತೆ ನೀಡುತ್ತಿದ್ದರು.
ಪರಾಧೀನತೆ
ಬ್ರಿಟಿಷರು ಮೆಕಾಲೆ ಶಿಕ್ಷಣ ಪದ್ಧತಿಯನ್ನು ಹೇರಿ ನಮ್ಮ ಪಾರಂಪರಿಕ ಗುರುಕುಲ ಪದ್ಧತಿಯ ಶಿಕ್ಷಣವನ್ನು ಬದಲಾಯಿಸುವವರೆಗೂ ಗುರು – ಶಿಷ್ಯ ಪರಂಪರೆಯು ಬಹಳ ಚೆನ್ನಾಗಿ ಕಾರ್ಯನಿರ್ವಸುತ್ತಿತ್ತು.
ಅಲ್ಲಿಂದ ಆಧ್ಯಾತ್ಮಿಕ ಶಿಕ್ಷಣವು ಖಾಸಗಿಯಾಯಿತು ಮತ್ತು ಕೇಂದ್ರೀಕೃತ ವ್ಯಕ್ತಿಗತ ಶಿಕ್ಷಣವಾಗಿ ಮಾರ್ಪಾಟಾಯಿತು.
ನಾವು ನಮ್ಮ ಸ್ವಂತವಾದ ಶ್ರೀಮಂತ ಸಾಂಸ್ಕೃತಿಕ ಗತ ವೈಭವದಿಂದ ವಿಮುಖರಾಗತೊಡಗಿದೆವು.
ಯಾರಿಗೆ ಆಧ್ಯಾತ್ಮಿಕವಾಗಿ ಮುಂದುವರಿಯಬೇಕೆಂಬ ಹಂಬಲವಿತ್ತೋ ಅವರು ಮಾತ್ರ ತಮಗೆ ಒಪ್ಪುವ ಗುರುಗಳನ್ನು ವ್ಯಕ್ತಿಗತವಾಗಿ ಅನುಸಂಧಾನ ಮಾಡಿಕೊಂಡರು.
ಛಾಯಾರಾಮಪ್ಪ
ಇತ್ತೀಚಿನ ದಿನಗಳಲ್ಲಿ, ಪೆನುಗೊಂಡೆಯಲ್ಲಿದ್ದ ಮಹಾನ್ ವೇದಪಾರಂಗತರಾದ ಶ್ರೀ ಚನ್ನಭಟ್ಲು ಮತ್ತು ಶ್ರೀ ರಾಮಾಚಾರ್ಯಲು, ಇವರಿಬ್ಬರಿಂದ ನನ್ನ ಚಿಕ್ಕಪ್ಪನವರಾದ ಛಾಯಾರಾಮಪ್ಪನವರು ದೀಕ್ಷೆಯನ್ನು ಪಡೆದಿದ್ದರು.
ಶ್ರೀನಿವಾಸರಾವ್
ತದನಂತರ, ನನ್ನ ಚಿಕ್ಕಪ್ಪನವರು, ನನ್ನ ಅಣ್ಣನವರಾದ ಶ್ರೀನಿವಾಸರಾವ್ ಇವರಿಗೆ ದೀಕ್ಷೆ ಕೊಟ್ಟರು.
ಏಕಾಗ್ರಚಿತ್ತದಿಂದ ಮತ್ತು ಛಲದಿಂದ ನನ್ನ ಅಣ್ಣನವರು ವೇದಮಂತ್ರಗಳನ್ನು ಕಲಿತು, ಮಂತ್ರಪಠಣವನ್ನು ಮಾಡುವಾಗ ನಿರರ್ಗಳತೆ ಮತ್ತು ಸ್ವರದ ಮೇಲೆ ಹಿಡಿತ ಇವುಗಳನ್ನು ಸಾಧಿಸಿದ್ದರು.
ಮುಂದುವರಿದ ಪರಂಪರೆ
ಒಬ್ಬ ನಿಜವಾದ ಗುರುವಿನಂತೆ, ಅವರು ತಮ್ಮ ಪಾಂಡಿತ್ಯವೆಂಬ ಆಸ್ತಿಯನ್ನು ಕೆಲವು ಉತ್ಸಾಹಿ ಶಿಷ್ಯರಿಗೆ ಧಾರೆ ಎರೆದರು.
ಆ ಶಿಷ್ಯರ ಪೈಕಿ ಪ್ರಥಮರು ಮತ್ತು ಪ್ರಮುಖರೂ ಆದವರು ಪ್ರೊಫೆಸರ್. ಎಸ್. ರಘುನಾಥ ಶರ್ಮರವರು.
ಇತರ ಶಿಷ್ಯಂದಿರು
ಶ್ರೀ ವೆಂಕಟರಾಮ ಐಯ್ಯರ್
ಶ್ರೀ ಶಿವಶಂಕರ ಶಾಸ್ತ್ರಿ
ಶ್ರೀ ನಾರಾಯಣ ಭಟ್ಟ
ಶ್ರೀ ಪಿ. ವೆಂಕಟಾಚಲಂ
ಇತರ ಶಿಷ್ಯಂದಿರು
ಶ್ರೀ ಎಲ್. ರಾಮಮೂರ್ತಿ(ಅವರ ಸ್ವಂತ ಮಗ)
ತೈತ್ತಿರಿಯೋಪನಿಷತ್ ಮತ್ತು ಗಣಪತಿ ಉಪನಿಷತ್ ಗಳನ್ನು ಅವರಿಂದ ಕಲಿಯಲು ದೀಕ್ಷೆ ತೊಡುವ ಸೌಭಾಗ್ಯವು ನನಗೂ ದೊರಕಿತ್ತು.
ತನ್ನ ಅಪಾರವಾದ ಜ್ಞಾನವನ್ನು ತನ್ನ ಶಿಷ್ಯಂದಿರಿಗೆ ಧಾರೆ ಎರೆದು ಗುರು – ಶಿಷ್ಯ ಪರಂಪರೆಯನ್ನು ಅವರು ಮುಂದುವರಿಸಿಕೊಂಡು ಬಂದರು.
ಲಂಕಾ ಶ್ರೀನಿವಾಸರಾವ್
ವೇದ ಪಾರಾಯಣವನ್ನು ತನ್ನ ಶಿಷ್ಯರಿಗೆ ಹೇಳಿಕೊಟ್ಟು ಅವರನ್ನು ತಯಾರುಮಾಡುವುದರ ಜತೆಗೆ, ಅವರ ಇಷ್ಟ ದೈವವಾದ ಶ್ರೀರಾಮನನ್ನು ಸಂಪೂರ್ಣ ಭಕ್ತಿ ಶ್ರದ್ಧೆಯಿಂದ ಉಪಾಸಿಸಿ ತಮ್ಮ ಜೀವನವನ್ನು ಕಳೆದರು.
ಒಂದು ಕೋಟಿ ಬಾರಿ ಶ್ರೀ ರಾಮ ನಾಮವನ್ನು ಬರೆದುದು, ಭಕ್ತಿ ಕ್ಷೇತ್ರದಲ್ಲಿ ಅವರ ಮಹತ್ತರ ಸಾಧನೆಯಾಗಿದೆ. ನಂತರ ಅವರು “ಓಂ ಶ್ರೀರಾಮ ಜಯರಾಮ ಜಯಜಯ ರಾಮ” ಎಂದು ಪವಿತ್ರ ರಾಮ ನಾಮವನ್ನು ಮತ್ತೊಂದು ಸಲ ಬರೆಯಲು ಶುರು ಮಾಡಿದರು. ಒಂದು ರಾತ್ರಿ ಆ ಸಾಲುಗಳನ್ನು ಬರೆಯುತ್ತಿರುವಾಗಲೇ, ಮಧ್ಯದಲ್ಲಿಯೇ ತಮ್ಮ ಕೊನೆಯುಸಿರನ್ನೆಳೆದರು.
ಲಂಕಾ ಕೃಷ್ಣಮೂರ್ತಿ
ಅವರು ತಮ್ಮನ್ನು “ಕನ್ನಡ ಸಂಸ್ಕೃತಾಂಧ್ರ ಕವಿತಾರಾಧಕ” ಎಂಬುದಾಗಿ ಹೇಳಿಕೊಂಡಿದ್ದಾರೆ.
ಅವರು ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಸೃಜನಾತ್ಮಕವಾಗಿ ಬರೆಯುವ ವಿದ್ಯೆಯ ಆರಾಧಕರಾಗಿದ್ದರು.
ಕನ್ನಡದಲ್ಲಿ “ಅಷ್ಟಾವಧಾನ” ಕಲೆಯನ್ನು ಪ್ರವರ್ಧಮಾನಕ್ಕೆ ತರಲು ಹಲವಾರು ಅಷ್ಟಾವಧಾನ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ಅಷ್ಟಾವಧಾನ ಕಲೆಯು ಒಂದು ಅದ್ಭುತವಾದ ಸಾಹಿತ್ಯ ಪ್ರಕ್ರಿಯೆ. ಇಲ್ಲಿ ಎಂಟು ವಿವಿಧ ವಿಷಯಾಂಶಗಳ ಮೇಲೆ ಅವಧಾನಿಯ ಸ್ಮರಣಶಕ್ತಿ ಮತ್ತು ಸೃಜನಾತ್ಮಕತೆಯನ್ನು ಪರೀಕ್ಷಿಸುವ ಕಾರ್ಯ ಜರುಗುತ್ತದೆ.
ಈ ಕಲೆಯು ತೆಲುಗು ಸಾಹಿತ್ಯ ವರ್ತುಲದಲ್ಲಿ ಬಹಳ ಜನಪ್ರಿಯವಾಗಿದೆ. ಅವರು ಸಂಗೀತ ಮತ್ತು ಚಿತ್ರಕಲೆಯ ಬಗ್ಗೆ ಅಪಾರವಾದ ಒಲವನ್ನು ಹೊಂದಿದ್ದರು.
ಸನಾತನ ಧರ್ಮ
ಸನಾತನ ಧರ್ಮದ ಮೂಲತತ್ವಗಳನ್ನು ಮತ್ತು ಮೌಲ್ಯಗಳನ್ನು ಅದರಲ್ಲೂ ಸನಾತನ ಧರ್ಮದಲ್ಲಿ ಬೇರೂರಿರುವ ತ್ಯಾಗ ಮತ್ತು ಕರುಣೆಗಳ ಬಗ್ಗೆ ಅವರು ಪ್ರಚಾರ ಮಾಡಿದರು.
ತಮ್ಮ ಕಾರ್ಯಗಳಿಂದ, ಭಾಷಣಗಳಿಂದ ಮತ್ತು ಕೃತಿಗಳಿಂದ ಅವರು ಅನೇಕ ಮಂದಿಯನ್ನು ತಲುಪಿದ್ದರು.
ಈ ಉದ್ದೇಶಕ್ಕಾಗಿ ಅವರು ಸನಾತನ ಧರ್ಮ ಸಂರಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಆ ಸಂಸ್ಥೆಯ ಮುಖವಾಣಿಯಾದ ಧರ್ಮಪ್ರಭ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.
ಅವರು ಬಹುಮುಖ ಪ್ರತಿಭೆಯುಳ್ಳ ಆಚಾರ್ಯರಾಗಿದ್ದರು. ಸನಾತನ ಧರ್ಮದ ಮೂಲತತ್ವಗಳ ಅರಿವನ್ನು ಹೆಚ್ಚಿಸಲು ಮತ್ತು ಪ್ರೇರೇಪಿಸಲು, ತಮ್ಮ ದಣಿವರಿಯದ ಪ್ರಚಾರವನ್ನು ಕೈಗೊಳ್ಳಲು, ಅವರ ಬಹುಮುಖ ಪ್ರತಿಭೆ ಅವರಿಗೆ ಸಹಕಾರಿಯಾಯಿತು.
ಮುಂದುವರೆದ ಪರಂಪರೆ
ಗುರು – ಶಿಷ್ಯ ಸಂಬಂಧದ ಪರಂಪರೆಯ ಮುಂದುವರೆದ ಭಾಗವಾಗಿ, ಅಪರ ವಿದ್ಯೆಯನ್ನು ಅಂದರೆ ಲೌಕಿಕ ಜ್ಞಾನವನ್ನು ನಾನು ಆಂಗ್ಲ ಭಾಷೆ ಮತ್ತು ಸಾಹಿತ್ಯದ ಕ್ಷೇತ್ರದಲ್ಲಿ ನಾನು ಗಳಿಸಿದೆ.
ಸ್ವಲ್ಪ ಮಟ್ಟಿಗೆ ಪರಾ ವಿದ್ಯೆಯನ್ನೂ, ಸಹ ನಾನು ಈ ಕೆಳಕಂಡವರಿಂದ ಸಂಪಾದಿಸಿಕೊಂಡೆ.
ನನ್ನ ತಂದೆಯವರಿಂದ ಮಂತ್ರೋಪದೇಶದ ರೂಪದಲ್ಲಿ
ನನ್ನ ಅಣ್ಣನವರಾದ ಶ್ರೀನಿವಾಸರಾವ್ ಮತ್ತು ರಾಮಕೃಷ್ಣ ಮಠದ ಸ್ವಾಮಿ ಪರಮಾರ್ಥಾನಂದ ಇವರಿಂದ ಉಪನಿಷತ್ತುಗಳ ಅಧ್ಯಯನದ ದೀಕ್ಷೆ,
ಮತ್ತು ಯೋಗ ಅಭ್ಯಾಸಗಳು
1. ಸದ್ಗುರು ಮಲ್ಲಿಕಾರ್ಜುನರವರಿಂದ ಸಹಜ ಸಮಾಧಿಯೋಗ
2. ಸದ್ಗುರು ಜಗ್ಗಿ ವಾಸುದೇವ್ ಅವರಿಂದ ಶಾಂಭವಿ ಮಹಾ ಮುದ್ರೆ ಮತ್ತು
3. ಸದ್ಗುರು ಜಗ್ಗಿ ವಾಸುದೇವ್ ಅವರಿಂದ ಈಶಾ ಕ್ರಿಯೆ.
ಮಹತ್ತರವಾದ ಹೊಸ ತಿರುವು
ಜ್ಞಾನವನ್ನು ಹಸ್ತಾಂತರಿಸುವುದು ನನ್ನ ಜವಾಬ್ದಾರಿಯಾಗಿದೆ.
ಈ ಕೆಳಗೆ ನಮೂದಿಸಿದ ಹಲವು ಶೈಕ್ಷಣಿಕ ಮಾದರಿಗಳನ್ನು ಅಳವಡಿಸಲು ನಾನು ಪ್ರಯತ್ನಿಸಿದ್ದೇನೆ.
1. ಒಬ್ಬರಿಂದ ಮತ್ತೊಬ್ಬರಿಗೆ ವ್ಯಕ್ತಿಗತವಾಗಿ ಸಂವಹನ ಮಾಡುವುದು.
2. ಗುಂಪು ಚರ್ಚೆ, ಸಮ್ಮೇಳನಗಳು, ಸಮಾಲೋಚನೆಗಳು ಮತ್ತು ಕಾರ್ಯಾಗಾರಗಳು.
3. ಲೇಖನಗಳು ಮತ್ತು ಪುಸ್ತಕಗಳ ರಚನೆ.
4. ನಿಯತಕಾಲಿಕೆಗಳು ಮತ್ತು ಸಂಚಿಕೆಗಳನ್ನು ಹೊರತರುವುದು.
5. ಅಧಿಕಮಂದಿಯಿರುವ ಸಭೆಗಳಲ್ಲಿ ಪ್ರವಚನಗಳನ್ನು ಮಾಡುವುದು
6. ಜ್ಞಾನ ಯಜ್ಞಗಳನ್ನು ನಡೆಸುವುದು.
ಒಂದು ಮಹತ್ತರವಾದ ಹೊಸ ತಿರುವು
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾದ ಮಹತ್ತರ ಅಭಿವೃದ್ಧಿಗಳಿಗೆ ನಾವು ಧನ್ಯವಾದಗಳನ್ನು ಸಲ್ಲಿಸಲೇಬೇಕು. ನಾನು ಮೇಲೆ ತಿಳಿಸಿದ ಮಾರ್ಗದರ್ಶಿ ಮಾದರಿಗಳನ್ನೆಲ್ಲಾ ಉಪಯೋಗಿಸಿಕೊಳ್ಳಲು ಗುರುವಿಗೆ ಒಂದು ಹೊಸ ವೇದಿಕೆ ದೊರಕಿದೆ.
ಇದು ಜಾಲತಾಣಗಳ ಮೂಲಕ ವಾಸ್ತವಿಕ ಸ್ಥಳದ ಪರಿಸರದಲ್ಲಿದೆ.
ಇದು ಲಂಕಾ ಕೃಷ್ಣಮೂರ್ತಿ ಪ್ರತಿಷ್ಠಾನದ ಜಾಲತಾಣದ ವಿಳಾಸ.
www.krishnamurtifoundation.com
ಇದು ಲಂಕಾ ಕೃಷ್ಣಮೂರ್ತಿ ಪ್ರತಿಷ್ಠಾನದ ಯುಟ್ಯೂಬ್ ವಿಳಾಸ
(https://www.youtube.com/channel/UCptmyD6GditXlBWnaRNI11A)
ಇದು ಲಂಕಾ ಕೃಷ್ಣಮೂರ್ತಿ ಪ್ರತಿಷ್ಠಾನದ ಫೇಸ್ ಬುಕ್ ವಿಳಾಸ
(https://www.facebook.com/lankakrishnamurtifoundation/)
ಹೊಸ ಉಪಕ್ರಮಗಳು
ಸಂಸ್ಕೃತ ಅಧ್ಯಯನದ ಅಭಿವೃದ್ಧಿ
ಸಂಸ್ಕೃತ ಭಾಷೆಯು, ಸನಾತನ ಧರ್ಮ ಸಂಸ್ಕೃತಿಯ ಸಂರಕ್ಷಕ ಮತ್ತು ಪ್ರಚಾರಕ.
ಮಂತ್ರಗಳನ್ನು ಪಠಿಸುವಾಗ ಹೊರಹೊಮ್ಮುವ ಪವಿತ್ರ ಧ್ವನಿತರಂಗಗಳು ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ – ಇವುಗಳ ಮೇಲೆ ಗಣನೀಯವಾದ ಪರಿಣಾಮ ಬೀರುತ್ತವೆ.
ಅವುಗಳು ಈ ಸ್ತರಗಳ ಮೂಲಕ ಹಾದುಹೋಗಿ ನಿರ್ಮಲತ್ವ ಮತ್ತು ಜ್ಞಾನೋದಯವನ್ನು ಉಂಟುಮಾಡುತ್ತವೆ.
ದಿನಕ್ಕೊಂದು ಶ್ಲೋಕ
ದಿನಕ್ಕೊಂದು ಶ್ಲೋಕ ಎಂಬ ಮಾಲಿಕೆಯ ಉಪಕ್ರಮದ ಮೂಲಕ, ಸಂಸ್ಕೃತ ಶಬ್ದಗಳ ಅನುಭೂತಿ ಮತ್ತು ಶಕ್ತಿಯನ್ನೂ ಹಾಗೂ ಆಧ್ಯಾತ್ಮಿಕ ಏಳಿಗೆಯನ್ನೂ, ಅದನ್ನು ಬಯಸುವ ಅನ್ವೇಷಕರಿಗೆ ಒದಗಿಸಲು ನಾವು ಪ್ರಸ್ತಾಪನೆ ಮಾಡಿದೆವು.
ಅದರಂತೆಯೇ, ಸಾವಿರ ನಾಮಗಳುಳ್ಳ “ವಿಷ್ಣು ಸಹಸ್ರನಾಮ”ವನ್ನು, 107 ಶ್ಲೋಕಗಳ ಮೂಲಕ ನಾವು ಪರಿಚಯಿಸಿದೆವು. ಅಲ್ಲಿನ ಪ್ರತಿಯೊಂದು ನಾಮದ ಅರ್ಥ ಮತ್ತು ಮಹತ್ವವನ್ನು, ಅದರ ಪಾರಾಯಣದ ಮೂಲಕ ಎಲ್ಲರೂ ಅರಿತುಕೊಳ್ಳಲೆಂದು ಬಯಸಿದೆವು.
ಸುಭಾಷಿತಗಳು
ಸಂಸ್ಕೃತ ಶಬ್ದಗಳ ಮತ್ತೊಂದು ಆಯಾಮವನ್ನು ನಾವು ಪರಿಶೋಧಿಸಿದೆವು.
ದಿನಕ್ಕೊಂದು ಶ್ಲೋಕ ಎಂಬ ಉಪಕ್ರಮದ ಅಡಿಯಲ್ಲಿ ಹಲವು ಆಯ್ದ ಸುಭಾಷಿತಗಳನ್ನು ನಾವು ಪರಿಚಯಿಸಿದೆವು.
ನೈತಿಕ ಉಪದೇಶ, ಪ್ರಾಪಂಚಿಕ ಜ್ಞಾನ ಮತ್ತು ಪ್ರಾಮಾಣಿಕವಾದ ನ್ಯಾಯಬದ್ಧವಾದ ಕಾರ್ಯಗಳನ್ನು ಮಾಡಲು ಮಾರ್ಗದರ್ಶನ, ಇತ್ಯಾದಿಗಳಿಗೆ ಸುಭಾಷಿತಗಳು ಹೆಸರುವಾಸಿಯಾಗಿವೆ.
ಜ್ಞಾನ ಯಜ್ಞ
ಹದಿನೆಂಟು ಅಧ್ಯಾಯಗಳಲ್ಲಿ, 700 ಶ್ಲೋಕಗಳಿಂದ ಕೂಡಿದ ಶ್ರೀಮದ್ಭಗವದ್ಗೀತೆಯನ್ನು, “ದಿನಕ್ಕೊಂದು ಶ್ಲೋಕ” ಎಂಬ ಮಾಲಿಕೆಯಲ್ಲಿ ಅದನ್ನು ಪಠಿಸಿ, ಅಧ್ಯಯನ ಮಾಡಬೇಕೆಂದಿದ್ದವರಿಗೆ, ದೃಶ್ಯ ಮಾಧ್ಯಮದ ಮೂಲಕ ನಾವು ಪ್ರಸ್ತುತಪಡಿಸಿದೆವು. ಭಗವಾನ್ ಶ್ರೀ ಕೃಷ್ಣನು ಸ್ವಯಂ “ಜ್ಞಾನ ಯಜ್ಞ” ಎಂದು ಕರೆಯಲಾದ ಯಜ್ಞವನ್ನು ನಾವು ಈ ಪ್ರಕಾರ ಪೂರೈಸಿದೆವು.
ಬ್ರಹ್ಮವಿದ್ಯೆ
ಭಗವದ್ಗೀತೆಯು ಬ್ರಹ್ಮವಿದ್ಯೆ ಎಂಬುದಾಗಿ ಪ್ರಖ್ಯಾತಿ ಹೊಂದಿದೆ. ಅದರ ಅಧ್ಯಯನದ ಮುಖಾಂತರ ನಾವು ಸ್ವಲ್ಪ ಜ್ಞಾನವನ್ನು ಗಳಿಸಿದ್ದೇವೆ. ಈ ಜ್ಞಾನವನ್ನು ಗಳಿಸುವುದರ ಉದ್ದೇಶವೆಂದರೆ ಮುಕ್ತಿಯ ಪರಮಪದವಾದ ಸಿದ್ಧಿಯನ್ನು ಪಡೆಯುವುದು. ಅದುವೇ ಜ್ಞೇಯ. ಇದು ಸಾಧನೆ ಅಥವಾ ಉಪಾಸನೆಯನ್ನು ಒಳಗೊಂಡಿದೆ.
ಯೋಗಶಾಸ್ತ್ರ
ಭಗವದ್ಗೀತೆಯನ್ನು ಯೋಗಶಾಸ್ತ್ರವೆಂದೂ ಕರೆಯುತ್ತಾರೆ. ಸಾಧನೆಯ ಮಾರ್ಗದಿಂದ ಸಿದ್ಧಿಯನ್ನು ಹೊಂದಲು, ಕೃಷ್ಣನು ನಾಲ್ಕು ವಿವಿಧ ರೀತಿಯ ಯೋಗಾಭ್ಯಾಸಗಳನ್ನು ವಿವರಿಸುತ್ತಾನೆ.
ಜ್ಞಾನಯೋಗ
ಕರ್ಮಯೋಗ
ಧ್ಯಾನಯೋಗ ಮತ್ತು
ಭಕ್ತಿಯೋಗ
ಈ ಎಲ್ಲವನ್ನೂ ಒಂದೊಂದಾಗಿ ಅಭ್ಯಾಸ ಮಾಡಲು ಒಂದು ಸಮಗ್ರವಾದ ಅನುಸಂಧಾನವನ್ನು ಕಾರ್ಯ ರೂಪಕ್ಕೆ ತರುವುದು ಅಪೇಕ್ಷಣೀಯವಾಗಿದೆ.
ಉಪನಿಷತ್
ಮೇಲಾಗಿ ಭಗವದ್ಗೀತೆಯನ್ನು ಒಂದು ಉಪನಿಷತ್ ಎಂದೂ ಪರಿಗಣಿಸಬಹುದಾಗಿದೆ. ಆಚಾರ್ಯ ಅಥವಾ ಗುರುವು ತನ್ನ ಶಿಷ್ಯನಿಗೆ ಆದೇಶ ಮತ್ತು ಉಪದೇಶವನ್ನು ಕೊಡುವುದರ ಮೂಲಕ ಜ್ಞಾನವನ್ನು ನೀಡುತ್ತಾನೆ ಎಂಬುದು ಪವಿತ್ರ ಗ್ರಂಥವಾದ ಉಪನಿಷತ್ತಿನಲ್ಲಿದೆ.
ಭಗವದ್ಗೀತೆಯಲ್ಲಿ ಕೃಷ್ಣನು ಗೀತಾಚಾರ್ಯ. ಹಾಗೆಯೇ ಅರ್ಜುನನಿಗೆ ಪ್ರೀತಿಯ ಹಿತೈಷಿಯೂ ಸಹ. ಹಲವಾರು ಗಹನ ವಿಚಾರಗಳ ಬಗ್ಗೆ ಅರ್ಜುನನಿಗೆ ಉಪದೇಶ ಮಾಡುವ ಮೂಲಕ ನಮಗೆಲ್ಲರಿಗೂ ಬೋಧಿಸುತ್ತಾನೆ, ಕೃಷ್ಣ. ಕೊನೆಯಲ್ಲಿ ತನ್ನ ಉಪದೇಶದ ಸಾರವನ್ನು ಒಟ್ಟುಗೂಡಿಸಿ, ಗೀತಾಚಾರ್ಯನು ಈ ಕೆಳಗಿನ ಸಾಲುಗಳಲ್ಲಿ ಬರೆದಿರುವಂತೆ ಹೇಳುತ್ತಾನೆ.
ಉಪದೇಶ
ಗೀತಾಚಾರ್ಯನ ಉಪದೇಶ:
ನಿನ್ನ ಮನಸ್ಸನ್ನು ನನ್ನಲ್ಲಿಯೇ ನಿಲ್ಲಿಸು.
ನನ್ನ ಭಕ್ತನಾಗಿರು.
ನಿನ್ನ ಪೂಜೆಯನ್ನು ನನಗೆ ಅರ್ಪಿಸು ಮತ್ತು
ನನಗೆ ಸಾಷ್ಟಾಂಗ ಪ್ರಣಾಮವನ್ನು ಮಾಡು.
ನೀನು ನನಗೆ ಅತ್ಯಂತ ಪ್ರೀತಿ ಪಾತ್ರನು.
ನೀನು ಖಂಡಿತವಾಗಿಯೂ ನನ್ನನ್ನೇ ಸೇರುವೆ ಎಂದು ಭರವಸೆ ಕೊಡುತ್ತೇನೆ.
ಜಾಲತಾಣದ ಪರಿವಿಡಿ ಏನು?
ನಾಲ್ಕು ಹಂತದ ಸಾಧನ ಮಾರ್ಗ
ಈ ಕೆಳಗಿನ ಪರಿಭಾಷೆಯೊಂದಿಗೆ:
ಸಾಧನ ಮಾರ್ಗ: ಮಾರ್ಗ ಒಂದು : ಅಧ್ಯಯನ.
ಸಾಧನ ಮಾರ್ಗ: ಮಾರ್ಗ ಎರಡು: ಸ್ವಧರ್ಮ ಅನುಷ್ಠಾನ
ಸಾಧನ ಮಾರ್ಗ: ಮಾರ್ಗ ಮೂರು: ಧ್ಯಾನ.
ಸಾಧನ ಮಾರ್ಗ: ಮಾರ್ಗ ನಾಲ್ಕು : ಭಕ್ತಿ.
ಸ್ಮರಣದ ಮುಖಾಂತರ ಅಭಿವೃದ್ಧಿಪಡಿಸುವುದು.
ಸಾಧನ ಮಾರ್ಗ
ಶ್ರೀ ಎಲ್. ಆದಿನಾರಾಯಣ ಮತ್ತು ಶ್ರೀಮತಿ ಎಲ್. ರತ್ನ ಇವರು ಪ್ರತಿನಿತ್ಯವೂ ಕೊಡುವ ಮಾಹಿತಿಯ ಕೊಡುಗೆಯಿಂದ ಅನ್ವೇಷಕರಿಗೆ ಸಾಧನಮಾರ್ಗದಲ್ಲಿ ಪ್ರಗತಿ ಸಾಧಿಸಲು ಸಹಾಯಕವಾಗಿದೆ.
ಇದು ಇಂಗ್ಲೀಷ್ ಮತ್ತು ಕನ್ನಡ ಹೀಗೆ ಎರಡು ಭಾಷೆಗಳಲ್ಲಿ ಪ್ರಸಾರವಾಗಿದೆ.
ಕನ್ನಡ ಭಾಷಾಂತರವು ಶ್ರೀ ಎಲ್. ರಾಧಾಕೃಷ್ಣ ಇವರಿಂದ ಸಿದ್ಧಗೊಳಿಸಲ್ಪಟ್ಟಿದೆ.
ಶ್ರೀ ಎಲ್.ಸುಬ್ರಹ್ಮಣ್ಯ ಇವರು ತಾಂತ್ರಿಕ ನೈಪುಣ್ಯತೆಯ ಬೆನ್ನೆಲುಬಾಗಿದ್ದಾರೆ.
ವಾಟ್ಸ್ಯಾಪ್ ನಲ್ಲಿ ವಿಡಿಯೋ ಪ್ರಸಾರದಲ್ಲಿ ಲಭ್ಯವಿದೆ.
ಪರಂಪರೆಯ ಹೊನಲು
ಗುರು – ಶಿಷ್ಯ ಪರಂಪರೆ ಎಂಬ ಈ ಮಹಾನ್ ಪರಂಪರೆಯ ಹೊನಲು ಇಂದಿನ ಯುವ ಪೀಳಿಗೆಯವರಿಂದ ಮುಂದುವರೆದು ಮತ್ತಷ್ಟು ಸಮೃದ್ಧಿ ಹೊಂದಲಿ.
ವಂದೇ ಗುರು – ಶಿಷ್ಯ ಪರಂಪರಾಂ
ಪ್ರಸ್ತುತಿ:- ಡಾII ಎಲ್. ಆದಿನಾರಾಯಣ.